Ambani Wedding Fashion: ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಪ್ರಿ ವೆಡ್ಡಿಂಗ್‌ನಲ್ಲಿ ಸೆಲೆಬ್ರೆಟಿಗಳ ಹೈ ಫ್ಯಾಷನ್‌ ಹೀಗಿತ್ತು! - Vistara News

ಫ್ಯಾಷನ್

Ambani Wedding Fashion: ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಪ್ರಿ ವೆಡ್ಡಿಂಗ್‌ನಲ್ಲಿ ಸೆಲೆಬ್ರೆಟಿಗಳ ಹೈ ಫ್ಯಾಷನ್‌ ಹೀಗಿತ್ತು!

ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಪ್ರಿ ವೆಡ್ಡಿಂಗ್‌ನ (Ambani Wedding Fashion) ಇವನಿಂಗ್‌ ಇನ್‌ ಎವರ್‌ಲ್ಯಾಂಡ್‌ ಸಂಜೆ ಪಾರ್ಟಿಯಲ್ಲಿ ಸೆಲೆಬ್ರೆಟಿಗಳೆಲ್ಲರೂ ಕಾಕ್‌ಟೈಲ್‌ ಹೈ ಫ್ಯಾಷನ್‌ನಲ್ಲಿ ಕಂಗೊಳಿಸಿದರು. ಭಾಗವಹಿಸಿದ್ದವರ ಫ್ಯಾಷನ್‌ ಹೇಗಿತ್ತು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷೀಪ್ತ ವರದಿ.

VISTARANEWS.COM


on

Ambani Wedding Fashion
ಚಿತ್ರಗಳು : ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮದಲ್ಲಿ ಸೆಲೆಬ್ರೆಟಿಗಳ ಫ್ಯಾಷನ್‌ ಕಲರವ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಾಲಿವುಡ್‌ ಸಿನಿಮಾಗಳಲ್ಲಿ ಕಂಡು ಬರುವ ರಾಯಲ್‌ ಕಾಕ್‌ಟೇಲ್‌ ಹೈ ಫ್ಯಾಷನ್‌ ಪಾರ್ಟಿಯ (Ambani Wedding Fashion) ಸನ್ನಿವೇಶದಂತಿತ್ತು. ಭಾಗವಹಿಸಿದ್ದ, ಪ್ರತಿಯೊಬ್ಬರ ಫ್ಯಾಷನ್‌ ಕ್ಲಾಸಿಕ್‌-ರಾಯಲ್‌ ಲುಕ್‌ ನೀಡುವಂತಿದ್ದವು. ಸಿನಿಮಾ, ರಾಜಕೀಯ, ಸ್ಪೋಟ್ರ್ಸ್, ಉದ್ಯಮ ಸೇರಿದಂತೆ ನಾನಾ ಕ್ಷೇತ್ರಗಳ ಸೆಲೆಬ್ರೆಟಿಗಳೆಲ್ಲರೂ ಸಂಜೆ ಪಾರ್ಟಿಗೆ ಮ್ಯಾಚ್‌ ಆಗುವಂತಹ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಂಡರೇ, ತಾರೆಯರಂತೂ ಮನಮೋಹಕ ಉಡುಪು ಹಾಗೂ ಶೈನಿಂಗ್‌ ಸೀರೆಗಳಲ್ಲಿ ಮಿನುಗಿದರು. ಇನ್ನು ಅಂಬಾನಿ ಫ್ಯಾಮಿಲಿಯ ಬಗ್ಗೆ ಹೇಳಬೇಕೆ! ಪ್ರತಿಯೊಬ್ಬರು ಟ್ರೆಂಡಿ ಕಾಕ್‌ಟೇಲ್‌ ಸ್ಪೆಷಲ್‌ ಪಾರ್ಟಿವೇರ್‌ಗಳಲ್ಲಿ ನಕ್ಷತ್ರಗಳಂತೆ ಮಿನುಗಿದರು. ಒಟ್ಟಾರೆ, ಜಾಮ್‌ನಗರ್‌ನಲ್ಲಿ ಸ್ವರ್ಗವೇ ಧರೆಗಳಿದು ಬಂದಂತಾಗಿತ್ತು. ಅಂದ ಹಾಗೆ, ಈ ಸುಂದರ ಚಿತ್ರಣ ನಿರ್ಮಾಣವಾಗಿದ್ದು ಎಲ್ಲಿ ಎಂದುಕೊಂಡಿರಾ! ನಿಮಗೆ ಗೊತ್ತಿರುವಂತೆ, ಅಂಬಾನಿ ಫ್ಯಾಮಿಲಿಯ ಅನಂತ್‌-ರಾಧಿಕಾ ಮರ್ಚೆಂಟ್‌ ಪ್ರಿ ವೆಡ್ಡಿಂಗ್‌ “ಇವನಿಂಗ್‌ ಇನ್‌ ಎವರ್‌ಲ್ಯಾಂಡ್‌” ಕಾಕ್‌ಟೈಲ್‌ ಪಾರ್ಟಿಯಲ್ಲಿ. ಈ ಹೈ ಫ್ಯಾಷನ್‌ ಪಾರ್ಟಿಯಲ್ಲಿ ವಾವ್ಹ್.. ಎನ್ನಿಸುವಷ್ಟರ ಮಟ್ಟಿಗೆ ಸೆಲೆಬ್ರೆಟಿಗಳೆಲ್ಲರೂ ಅತ್ಯಾಕರ್ಷಕವಾಗಿ ಕಾಣಿಸುತ್ತಿದ್ದರು.

Ananth Ambani-Radhika Merchant Pre Wedding

ಅಂಬಾನಿ ಫ್ಯಾಮಿಲಿಯ ರಾಯಲ್‌ ಫ್ಯಾಷನ್‌

ಅಂಬಾನಿ ಕುಟುಂಬದವರೆಲ್ಲರೂ ರಾಯಲ್‌ ಲುಕ್‌ ನೀಡುವ ಕ್ಲಾಸಿಕ್‌ ಹೈ ಫ್ಯಾಷನ್‌ಗೆ ಸೈ ಎಂದಿದ್ದರು. ನೀತಾ ಅಂಬಾನಿಯವರು, ಸ್ಯಾಟಿನ್‌ ಫ್ಯಾಬ್ರಿಕ್‌ನ ಡಾರ್ಕ್ ವೈನ್‌ ಕಲರ್‌ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡರೇ, ಮದುಮಗ ಅನಂತ್‌ ಡಾರ್ಕ್ ಬ್ಲ್ಯೂ ಸೂಟ್‌ಗೆ ಇನ್ನರ್‌ ವೈಟ್‌ ಕ್ರಿಸ್ಪ್‌ ಶರ್ಟ್ ಧರಿಸಿದ್ದರು. ರಾಧಿಕಾ ಮರ್ಚೆಂಟ್‌, ವರ್ಸೆಸ್ ಬ್ರಾಂಡ್‌ನ ಗ್ರ್ಯಾಂಡ್‌ ಲೇಸ್‌ ಡಿಸೈನ್‌ನ ಶಿಮ್ಮರ್‌ ಲುಕ್‌ ನೀಡುವ ಆಫ್‌ ಶೋಲ್ಡರ್‌ ಗೌನ್‌ನಲ್ಲಿ ಮಿಂಚಿದರು. ಇನ್ನು ಆಕಾಶ್‌ ಮತ್ತು ಶ್ಲೋಕಾ ರೆಡ್‌ ಶೇಡ್‌ ಕಾಂಬಿನೇಷನ್‌ನಲ್ಲಿ ಕಾಣಿಸಿಕೊಂಡರು.

Nita Ambani

ಸೆಲೆಬ್ರೆಟಿಗಳ ಹೈ ಫ್ಯಾಷನ್‌ ಸ್ಟೇಟ್‌ಮೆಂಟ್ಸ್

ಕಿಂಗ್‌ ಖಾನ್‌ ಬ್ಲ್ಯಾಕ್‌ ಸೂಟ್‌ನಲ್ಲಿ ಕಾಣಿಸಿಕೊಂಡರೇ, ಪತ್ನಿ ಗೌರಿ ಖಾನ್‌ ಶಿಮ್ಮರ್‌ ಡಿಸೈನರ್‌ವೇರ್‌ನಲ್ಲಿದ್ದರು. ಅಕ್ಷಯ್‌ ಕುಮಾರ್‌ ಕೂಡ ಬ್ಲಾಕ್‌ ಟುಕ್ಸೆಡ್‌ನಲ್ಲಿದ್ದರು. ನಟ ಅಜಯ್‌ದೇವಗನ್‌ ಶಿಮ್ಮರ್‌ ಶೆರ್ವಾನಿಯಲ್ಲಿದ್ದರು. ನಟಿ ದೀಪಿಕಾ ಪಡುಕೋಣೆ, ಬ್ಲ್ಯಾಕ್‌ ಸ್ಟ್ರಾಪ್‌ ಫ್ರಾಕ್‌ ಶೈಲಿಯ ಗೌನ್‌ನಲ್ಲಿ ಪತಿ ಹಾಗೂ ನಟ ರಣಬೀರ್‌ ಸಿಂಗ್‌ ವೈಟ್‌ ಸೂಟ್‌ನಲ್ಲಿ, ಸೈಫ್‌ ಅಲಿ ಖಾನ್‌ ಪಿನ್‌ಸ್ಟ್ರೈಪ್ಡ್ ಸೂಟ್‌-ಪರ್ಪಲ್‌ ಶೀರ್‌ ಸೀರೆಯಲ್ಲಿ ಕರೀನಾ, ಕ್ಲಾಸಿಯಾಗಿ ಜೊತೆ ಜೊತೆಯಾಗಿ ಕಾಣಿಸಿಕೊಂಡರು. ಎಂದಿನಂತೆ, ಡೀಪ್‌ ವೀ ನೆಕ್‌ ಬ್ಲ್ಯೂ ಗೌನ್‌ನಲ್ಲಿ ಅಲಿಯಾಭಟ್‌, ಹಾರ್ಟ್ ಶೇಪ್‌ನ ಸಿಲ್ವರ್‌ ಗೌನ್‌ನಂತಹ ವಿಚಿತ್ರ ಡಿಸೈನರ್‌ವೇರ್‌ನಲ್ಲಿ ನತಾಷಾ ಪೂನಾವಾಲ ವಾಕ್‌ ಮಾಡಿದರು. ನಟಿ ಜೆನಿಲಿಯಾ ಬ್ಲ್ಯಾಕ್‌ ಆಫ್‌ ಶೋಲ್ಡರ್ ಬ್ಲ್ಯಾಕ್‌ ಮ್ಯಾಕ್ಸಿಯಲ್ಲಿ, ಕಿಯಾರಾ ಫಿಶ್‌ಟೇಲ್‌ ಬ್ಲ್ಯಾಕ್‌ ಗೌನ್‌ನಲ್ಲಿ ಪೋಸ್‌ ನೀಡಿದರು. ನಟಿ ವಿದ್ಯಾ ಬಾಲನ್‌, ಬ್ರೌನ್‌ ಶೀರ್‌ ಸೀರೆಯಲ್ಲಿ ಕಾಣಿಸಿಕೊಂಡರು.

ಸ್ಪೋಟ್ರ್ಸ್ ತಾರೆಯರ ಡ್ರೆಸ್‌ಕೋಡ್‌

ಕ್ರಿಕೆಟ್‌ ತಾರೆ ಸಚಿನ್‌ ಬ್ಲ್ಯಾಕ್‌ ಸೂಟ್‌ನಲ್ಲಿದರೇ, ಪತ್ನಿ ಸೀರೆಯಲ್ಲಿದ್ದರು. ಎಂ.ಎಸ್‌ ಧೋನಿ ಬ್ಲ್ಯಾಕ್‌ ಟುಕ್ಸೆಡ್‌, ಪತ್ನಿ ಸಾಕ್ಷಿ ಶೀರ್‌ ಪಾರ್ಟಿವೇರ್‌ ಸೀರೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡರು. ಇನ್ನು, ಫೇಸ್‌ಬುಕ್ ಸಂಸ್ಥಾಪಕರಾದ ಮಾಕ್ರ್ಸ್ ಹಾಗೂ ಪತ್ನಿ ಪ್ರಿಸಿಲ್ಲಾ ಬ್ಲ್ಯಾಕ್‌ ಶೇಡ್‌ ಮೇಲೆ ಗೋಲ್ಡನ್‌ ಡಿಸೈನ್‌ ಎಂಬಾಲಿಶ್‌ ಇರುವ ಡಿಸೈನರ್‌ವೇರ್‌ನಲ್ಲಿ ಮಾಧ್ಯಮದವರಿಗೆ ಪೋಸ್‌ ನೀಡಿದರು. ಇವರಷ್ಟೇ ಅಲ್ಲ, ಅಂತರಾಷ್ಟ್ರೀಯ ಮಟ್ಟದ ಸೆಲೆಬ್ರೆಟಿಗಳು, ತಮ್ಮದೇ ಆದ ರಾಯಲ್‌ ಲುಕ್‌ನಲ್ಲಿ ಕಾಣಿಸಿಕೊಂಡರು. ಫ್ಯಾಷನ್‌ ವಿಮರ್ಶಕರು ಹೇಳುವಂತೆ, ಒಟ್ಟಾರೆ, ಇದೊಂದು ಹೈ ಫ್ಯಾಷನ್‌ನ ಪಾರ್ಟಿಯಾಗಿತ್ತು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Summer Hairstyles: ಸೆಕೆಗಾಲದಲ್ಲಿ ಟ್ರೆಂಡಿಯಾದ 3 ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್ಸ್!

ಈ ಬಾರಿಯ ಸಮ್ಮರ್‌ ಸೀಸನ್‌ನಲ್ಲಿ ಸೆಕೆಯಾಗದ 3 ಸಮ್ಮರ್‌ ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್‌ಗಳು (Summer Hairstyles) ಟ್ರೆಂಡಿಯಾಗಿವೆ. ನೋಡಲು ಹಳೆಯ ಹೇರ್‌ಸ್ಟೈಲ್‌ ಎಂದೆನಿಸಿದರೂ ಒಂದರ ಒಳಗೆ ಇನ್ನೊಂದು ಬಗೆಯ ವಿನ್ಯಾಸ ಸೇರಿಕೊಂಡಿವೆ. ಅವು ಯಾವ್ಯುವು? ಇವನ್ನು ಹೇಗೆಲ್ಲಾ ಫಾಲೋ ಮಾಡಬಹುದು? ಎಂಬುದರ ಕುರಿತಂತೆ ಹೇರ್‌ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ. ‌

VISTARANEWS.COM


on

Summer Hairstyles
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಸಮ್ಮರ್‌ ಸೀಸನ್‌ನಲ್ಲಿ ಸೆಕೆಯಾಗದ 3 ಬಗೆಯ ಸಮ್ಮರ್‌ ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್‌ಗಳು (Summer Hairstyles) ಟ್ರೆಂಡಿಯಾಗಿವೆ. ತಕ್ಷಣಕ್ಕೆ ನೋಡಲು ಹಳೆಯ ಹೇರ್‌ಸ್ಟೈಲ್‌ ಎಂದೆನಿಸಿದರೂ ಅವುಗಳ ಜೊತೆಗೆ ನಾನಾ ಬಗೆಯ ವಿನ್ಯಾಸಗಳು ಸೇರಿಕೊಂಡಿವೆ.

Summer Hairstyles

ಸೈಡಿಗೆ ಸರಿದ ಫ್ರೀ ಹೇರ್‌ಸ್ಟೈಲ್‌ಗಳು

“ಈ ಸಮ್ಮರ್‌ನಲ್ಲಿ ಫ್ರೀ ಹೇರ್‌ಸ್ಟೈಲ್‌ಗಳು ಸೈಡಿಗೆ ಸರಿದಿವೆ. ಕೇವಲ ಹೇರ್‌ ಕಂಡೀಷನ್‌ ಕೋಣೆಗಳಲ್ಲಿ ಹಾಗೂ ಇನ್‌ಡೋರ್‌ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮಾತ್ರ ಈ ಹೇರ್‌ ಸ್ಟೈಲ್‌ಗಳಲ್ಲಿ ಹೆಣ್ಣುಮಕ್ಕಳು ಕಾಣಸಿಗುತ್ತಿದ್ದಾರೆ. ಇನ್ನು ಹೊರಾಂಗಣದಲ್ಲಿ ಸೆಕೆಯಾಗದ ಹಾಗೂ ಆರಾಮ ಎಂದೆನಿಸುವ ಕಂಫರ್ಟಬಲ್‌ ಕೂದಲ ವಿನ್ಯಾಸಗಳು ಚಾಲ್ತಿಯಲ್ಲಿವೆ. ಇದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ! ಟೀನೇಜ್‌ ಹಾಗೂ ಯುವತಿಯರಲ್ಲೂ ಕಾಮನ್‌ ಆಗಿವೆ” ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ ನಮಿತಾ. ಅವರ ಪ್ರಕಾರ, ಶಾರ್ಟ್‌ ಹೇರ್‌ಸ್ಟೈಲ್‌ಗಳು ಈ ಸೀಸನ್‌ನಲ್ಲಿ ತೀರಾ ಕಾಮನ್‌ ಆಗಿವೆ ಎನ್ನುತ್ತಾರೆ.

ಹೈ ಬನ್‌ ಹೇರ್‌ಸ್ಟೈಲ್‌

ನೆತ್ತಿಯ ಮೇಲೆ ಹಾಕುವಂತಹ ಹೈ ಬನ್‌ ಹೇರ್‌ಸ್ಟೈಲ್‌ಗಳು ಇದೀಗ ಬಿಸಿಲಿನ ಝಳದಲ್ಲಿ ಹೈಲೈಟ್‌ ಆಗುತ್ತಿವೆ. ಕೆಳಗಿನಿಂದ ಮೇಲಿನವರೆಗೂ ಕೂದಲನ್ನು ಕಟ್ಟಿ ಹಾಕುವಂತಹ ವಿನ್ಯಾಸದಲ್ಲಿ ಹಾಗೂ ನೆತ್ತಿಯ ಮೇಲೆ ಸುತ್ತಿ ಅಥವಾ ಹರಡಿದಂತೆ ಕಾಣುವ ರೀತಿಯಲ್ಲಿ ಹಾಕುವ ಹೇರ್‌ಬನ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಇವು ನೋಡಲು ಕೂಡ ಆಕರ್ಷಕವಾಗಿ ಕಾಣಿಸುತ್ತವೆ. ಜೊತೆಗೆ ಸೆಕೆಯಾಗುವುದಿಲ್ಲ!

Summer Hairstyles

ಪೋನಿಟೈಲ್‌ ವಿತ್‌ ಫ್ರಿಂಝ್‌ ಹೇರ್‌ಸ್ಟೈಲ್‌

ಮುಂಭಾಗದಲ್ಲಿ ಹುಡುಗಿಯರ ಹಣೆಯನ್ನು ಕವರ್‌ ಮಾಡುವ ಫ್ರಿಂಝ್‌ ಹೇರ್‌ಸ್ಟೈಲ್‌ ಹಿಂದೆ ಸಿಂಪಲ್‌ ಪೋನಿಟೈಲ್‌ ಕೂಡ ಈ ಸೀಸನ್‌ನಲ್ಲಿ ಮರಳಿದೆ. ನೋಡಲು ಸಿಂಪಲ್ಲಾಗಿ ಕಾಣಿಸುವ ಈ ಹೇರ್‌ಸ್ಟೈಲ್‌ ನೋಡಿದಾಗ ಖಾಲಿ ಎಂದೆನಿಸುವುದಿಲ್ಲ. ಬದಲಿಗೆ ಎರಡು ಹೇರ್‌ಸ್ಟೈಲ್‌ ಕಾಂಬಿನೇಷನ್‌ ಇದಾಗಿರುತ್ತದೆ.

ಹನ್‌ ಹೇರ್‌ಸ್ಟೈಲ್‌

ಅರ್ಧ ಫ್ರೀ ಹೇರ್‌ಸ್ಟೈಲ್‌ ಹಾಗೂ ಅರ್ಧ ಕಟ್ಟಿದ ಬನ್‌ ಹೇರ್‌ಸ್ಟೈಲ್‌ ಕಾಂಬೀನೇಷನ್‌ ಈ ಸೀಸನ್‌ನ ಹನ್‌ ಹೇರ್‌ಸ್ಟೈಲ್‌ನಲ್ಲಿ ಸೇರಿದೆ. ಇವೆರಡರೊಳಗೆ ಹಣೆ ಮುಂಭಾಗದ ಫಿಂಝ್‌ ಹೇರ್‌ಸ್ಟೈಲ್‌ ಮಿಕ್ಸ್‌ ಆಗಿದೆ. ಇವೆಲ್ಲದರ ಸಮಾಗಮ ಫ್ರಿಂಝ್‌ ಹನ್‌ ಹೇರ್‌ಸ್ಟೈಲ್‌. ಇದು ಈ ಸೀಸನ್‌ನಲ್ಲಿ ಇದು ಹುಡುಗಿಯರ ಫೇವರೇಟ್‌ ಲಿಸ್ಟ್‌ನಲ್ಲಿದೆ.

Summer Hairstyles

ಬೇಸಿಗೆ ಹೇರ್‌ಸ್ಟೈಲ್‌ ಫಾಲೋ ಮಾಡಲು ಹೀಗೆ ಮಾಡಿ

 • ಹೊರಗಡೆ ಹೋಗುವಾಗ ಮೇಲಿನ ಹೇರ್‌ಸ್ಟೈಲ್‌ಗಳನ್ನು ಮಾಡಿ.
 • ಮುಖದ ಆಕಾರಕ್ಕೆ ತಕ್ಕಂತೆ ಇವನ್ನು ಆಯ್ಕೆ ಮಾಡಿ.
 • ಫ್ರಿಂಝ್‌ ಮಾಡದಿದ್ದವರೂ ಸೈಡ್‌ಲಾಕ್ಸ್‌ ಕೂದಲ ವಿನ್ಯಾಸ ಮಾಡಬಹುದು.
 • ತೀರಾ ಟೈಟಾಗಿ ಕಟ್ಟಬೇಡಿ. ತಲೆ ನೋವಾಗಬಹುದು.
 • ಮೇಲಿನ ಹೇರ್‌ಸ್ಟೈಲ್ಸ್‌ ನಿಮಗೆ ಸ್ಲಿಮ್‌ ಲುಕ್‌ ನೀಡಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Earrings Fashion: ಬಳೆಗಿಂತ ದೊಡ್ಡದಾಯ್ತು ಕಿವಿಯ ಹೂಪ್‌ ರಿಂಗ್‌!

Continue Reading

ಫ್ಯಾಷನ್

Earrings Fashion: ಬಳೆಗಿಂತ ದೊಡ್ಡದಾಯ್ತು ಕಿವಿಯ ಹೂಪ್‌ ರಿಂಗ್‌!

ಕೈಗಳಿಗೆ ಧರಿಸುವ ಬಳೆಗಿಂತಲೂ (Earrings Fashion) ದೊಡ್ಡದಾಯ್ತು ಕಿವಿಯ ಹೂಪ್‌ ರಿಂಗ್‌ ಫ್ಯಾಷನ್‌. ಇವನ್ನು ಧರಿಸುವ ಫ್ಯಾಷನ್‌ ಇದೀಗ ಈ ಸೀಸನ್‌ನ ಫಂಕಿ ಜ್ಯುವೆಲರಿ ಸ್ಟೈಲಿಂಗ್‌ಗೆ ಸೇರಿದೆ. ಏನಿದು ಬಿಗ್‌ ಹೂಪ್‌ ಇಯರಿಂಗ್‌ ಫ್ಯಾಷನ್‌? ಹುಡುಗಿಯರು ಹೇಗೆಲ್ಲಾ ಧರಿಸುತ್ತಿದ್ದಾರೆ? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Earrings Fashion
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಳೆಗಿಂತ ದೊಡ್ಡದಾದ ಬಿಗ್‌ ಹೂಪ್‌ ಇಯರಿಂಗ್‌ಗಳು (Earrings Fashion) ಇದೀಗ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.
ಹೌದು. ಕೈಗಳಿಗೆ ಧರಿಸುವ ಬಳೆಗಿಂತಲೂ ಈ ಕಿವಿಯ ಹೂಪ್‌ ರಿಂಗ್ಸ್ ದೊಡ್ಡದಾಗಿವೆ, ಮಾತ್ರವಲ್ಲ, ಇವನ್ನು ಧರಿಸುವ ಫ್ಯಾಷನ್‌ ಈ ಸೀಸನ್‌ನ ಫಂಕಿ ಜ್ಯುವೆಲರಿ ಸ್ಟೈಲಿಂಗ್‌ಗೆ ಸೇರಿದೆ.

Earrings Fashion

ಏನಿದು ಬಿಗ್‌ ಹೂಪ್‌ ಇಯರಿಂಗ್ಸ್‌

ಈ ಮೊದಲು ಕೈ ಬಳೆಗಳಷ್ಟು ಆಕಾರದ ಹೂಪ್‌ ಅಂದರೆ, ಸರ್ಕುಲಾರ್‌ ಇರುವಂತಹ ಕಿವಿಯ ರಿಂಗ್‌ಗಳನ್ನು ಧರಿಸುವ ಫ್ಯಾಷನ್‌ ಇತ್ತು. ಇದೀಗ ಈ ಫ್ಯಾಷನ್‌ ಒಂದು ಹೆಜ್ಜೆ ಮುಂದೆ ಹೋಗಿದೆ. ಕೈಗಳಿಗೆ ನಾವು ಹಾಕುವ ಬಳೆಗಳಿಗಿಂತ ದೊಡ್ಡದಾದವು ಕಿವಿಯೊಲೆಗಳಾಗಿ ಬಂದಿವೆ. ಕೆಲವಂತೂ ಭುಜವನ್ನು ತಾಗುವ ಮಟ್ಟಿಗೆ ದೊಡ್ಡ ಸೈಝಿನಲ್ಲಿ ಆಗಮಿಸಿವೆ. ಇವು ಈ ಸೀಸನ್‌ನ ಫಂಕಿ ಜಂಕ್‌ ಜ್ಯುವೆಲ್‌ ಲಿಸ್ಟ್‌ನಲ್ಲಿವೆ.

Earrings Fashion

ವೈವಿಧ್ಯಮಯ ಬಿಗ್‌ ಹೂಪ್‌ ಇಯರಿಂಗ್ಸ್‌

ಬ್ಲ್ಯಾಕ್‌ ಮೆಟಲ್‌, ವೈಟ್‌ ಮೆಟಲ್‌, ಪ್ಲಾಸ್ಟಿಕ್‌, ಫೈಬರ್‌, ಸಿಲಿಕಾನ್‌, ಪ್ಲಾಟಿನಂ ಕೋಟೆಡ್‌, ಸಿಲ್ವರ್‌ , ಆಕ್ಸಿಡೈಸ್ಡ್‌ ಹೀಗೆ ನಾನಾ ಮೆಟಿರಿಯಲ್‌ನ ಬಿಗ್‌ ಹೂಪ್‌ ರಿಂಗ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಅವುಗಳಲ್ಲಿ, ಲೈಟ್‌ವೈಟ್‌ನವು ಹೆಚ್ಚು ಟ್ರೆಂಡಿಯಾಗಿವೆ. ಇನ್ನು ಕಲರ್‌ಫುಲ್‌ ಬಿಗ್‌ ಹೂಪ್‌ ಇಯರಿಂಗ್‌ಗಳು ಮ್ಯಾಚಿಂಗ್‌ ಕಾನ್ಸೆಪ್ಟ್‌ಗೆ ತಕ್ಕಂತೆ ಬಿಡುಗಡೆಗೊಂಡಿವೆ. ತಂತಿಯಂತೆ ಕಾಣುವ ಕೆಲವು ಟ್ರೆಂಡ್‌ನಲ್ಲಿವೆ. ಹಾಫ್‌ ಹೂಪ್‌ ಬಿಗ್‌ ರಿಂಗ್‌ಗಳು ಪಾರ್ಟಿ ಪ್ರಿಯ ಹುಡುಗಿಯರನ್ನು ಸೆಳೆದಿವೆ. ವೆಸ್ಟರ್ನ್‌ ಲುಕ್‌ಗೆ ಹೊಂದುವಂತಹ ಮೆಟಲ್‌ನ ಸ್ಲಿಮ್‌ ಬಿಗ್‌ ಹೂಪ್‌ ಇಯರಿಂಗ್‌ಗಳು ಅಲ್ಟ್ರಾ ಮಾಡರ್ನ್‌ ಲುಕ್‌ಗೆ ಹೊಂದುವಂತಹ ಡಿಸೈನ್‌ನಲ್ಲಿ ಬಂದಿವೆ.
“ಹೂಪ್‌ ಕಿವಿಯ ರಿಂಗ್‌ಗಳು ಇದೀಗ ಮತ್ತಷ್ಟು ದೊಡ್ಡದಾಗಿರುವುದು ಪಾರ್ಟಿ ಪ್ರಿಯ ಹುಡುಗಿಯರಿಗೆ ಖುಷಿ ತಂದಿದೆ. ಅದರಲ್ಲೂ ಕ್ಯಾಶುವಲ್‌ ಹಾಗೂ ವೆಸ್ಟರ್ನ್‌ ಡ್ರೆಸ್‌ ಧರಿಸುವ ಹುಡುಗಿಯರ ಆಕ್ಸೆಸರೀಸ್‌ ಲಿಸ್ಟ್ಗೆ ಸೇರಿವೆ. ಇವು ಈ ಬೇಸಿಗೆಯಲ್ಲಿ ಟ್ರೆಂಡಿಯಾಗಿರುವ ಕಿವಿಯೊಲೆಗಳ ಸಾಲಿಗೆ ಸೇರಿವೆ” ಎನ್ನುತ್ತಾರೆ ಆಕ್ಸೆಸರೀಸ್‌ ಸ್ಟೈಲಿಸ್ಟ್‌ ರಿಚಾ.

ಹೇರ್‌ಸ್ಟೈಲ್‌ಗೆ ಮ್ಯಾಚಿಂಗ್‌

ಅಂದಹಾಗೆ, ಈ ಬಿಗ್‌ ಹೂಪ್‌ ಇಯರಿಂಗ್‌ಗಳು ಎಲ್ಲಾ ಬಗೆಯ ಹೇರ್‌ಸ್ಟೈಲ್‌ಗೆ ಮ್ಯಾಚ್‌ ಆಗುವುದಿಲ್ಲ ಎಂಬುದು ನೆನಪಿರಲಿ. ಇವನ್ನು ಧರಿಸಿದಾಗ ಬಹಳ ಕೇರ್‌ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ಕೂದಲಿಗೆ ಸಿಕ್ಕಿಹಾಕಿಕೊಳ್ಳಬಹುದು. ಹಾಗಾಗಿ ಈ ಇಯರಿಂಗ್ಸ್‌ ಧರಿಸುವಾಗ ಮೊದಲೇ ಯಾವ ಹೇರ್‌ಸ್ಟೈಲ್‌ ಎಂಬುದು ಡಿಸೈಡ್‌ ಮಾಡಿ, ಹೇರ್‌ಸ್ಟೈಲ್‌ ಕೂಡ ಮಾಡಿಕೊಂಡ ನಂತರ ಈ ಬಿಗ್‌ ಹೂಪ್‌ ರಿಂಗ್‌ಗಳನ್ನು ಧರಿಸಿ ಎನ್ನುತ್ತಾರೆ ಹೇರ್‌ ಸ್ಟೈಲಿಸ್ಟ್‌ಗಳು.

Earrings Fashion

ಬಿಗ್‌ ಹೂಪ್‌ ಕಿವಿಯ ರಿಂಗ್‌ ಧರಿಸಿದಾಗ ಗಮದಲ್ಲಿರಬೇಕಾದ ಅಂಶಗಳು

 • ಥ್ರೆಡ್‌ ಅಥವಾ ಶೋಲ್ಡರ್‌ ಸೈಡ್‌ನಲ್ಲಿ ಹ್ಯಾಂಡ್‌ವರ್ಕ್‌ ಇರುವಂತಹ ಡ್ರೆಸ್‌ ಧರಿಸುವುದನ್ನು ಆವಾಯ್ಡ್‌ ಮಾಡಿ.
 • ಫಿನಿಶಿಂಗ್‌ ಇರುವಂತಹ ಗುಣಮಟ್ಟದ ಬಿಗ್‌ ಹೂಪ್‌ ರಿಂಗ್‌ಗಳನ್ನು ಖರೀದಿಸಿ.
 • ಸಿಕ್ಕಿ ಹಾಕಿಕೊಳ್ಳುವಂತಹ ಹೇರ್‌ಸ್ಟೈಲ್‌ ಜೊತೆ ಧರಿಸಬೇಡಿ.
 • ಲೈಟ್‌ವೈಟ್‌ನದ್ದನ್ನು ಚೂಸ್‌ ಮಾಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Apricot Benefits: ನಿಮಗೆ ಇಂತಹ ಸಮಸ್ಯೆಗಳಿವೆಯೇ?: ಹಾಗಾದರೆ ನಿತ್ಯವೂ ಆಪ್ರಿಕಾಟ್‌ ತಿನ್ನಿ!

Continue Reading

ಫ್ಯಾಷನ್

Stars Saree Fashion: ನಟಿ ಅಶಿಕಾ ರಂಗನಾಥ್‌ ಇಂಡೋ-ವೆಸ್ಟರ್ನ್‌ ಲುಕ್‌ ಸೀರೆಗೆ ಅಭಿಮಾನಿಗಳು ಫಿದಾ!

ನಟಿ ಅಶಿಕಾ ರಂಗನಾಥ್‌ರ ಇಂಡೋ- ವೆಸ್ಟರ್ನ್‌ ಸೀರೆ ಲುಕ್‌ಗೆ (Stars Saree Fashion) ಅಭಿಮಾನಿಗಳು ಫಿದಾ ಆಗಿದ್ದಾರೆ. ನೋಡಲು ಮನಮೋಹಕವಾಗಿ ಕಾಣುವ ಇವರ ಈ ಲುಕ್‌ ಸಮ್ಮರ್‌ ಸೀಸನ್‌ಗೆ ಹೇಳಿ ಮಾಡಿಸಿದಂತಿದೆ. ಅವರ ಈ ಸ್ಟೈಲಿಂಗ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಹೇಳಿರುವುದೇನು? ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Stars Saree Fashion
ಚಿತ್ರಗಳು: ಅಶಿಕಾ ರಂಗನಾಥ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಅಶಿಕಾ ರಂಗನಾಥ್‌ ಇಂಡೋ- ವೆಸ್ಟರ್ನ್‌ ಸೀರೆ ಲುಕ್‌ಗೆ (Stars Saree Fashion) ಅಭಿಮಾನಿಗಳು ಫಿದಾ ಆಗಿದ್ದಾರೆ. ನೋಡಲು ಮನಮೋಹಕವಾಗಿ ಕಾಣುವ ಇವರ ಈ ಲುಕ್‌ ಸಮ್ಮರ್‌ ಸೀಸನ್‌ಗೆ ಹೇಳಿ ಮಾಡಿಸಿದಂತಿದೆ.
ಹೌದು, ಅವರ ಸೀರೆಯಲ್ಲಿನ ಕಂಪ್ಲೀಟ್‌ ಲುಕ್‌ಗೆ ಕೇವಲ ಅಭಿಮಾನಿಗಳು ಮಾತ್ರವಲ್ಲ, ಸೀರೆ ಪ್ರಿಯರು ಹಾಗೂ ಫ್ಯಾಷನ್‌ ವಿಮರ್ಶಕರು ಬೋಲ್ಡ್‌ ಔಟ್‌ ಆಗಿದ್ದಾರೆ. ಆ ಮಟ್ಟಿಗೆ ಆಕರ್ಷಕವಾಗಿ ಕಾಣಿಸುತ್ತಿದ್ದಾರೆ.

Stars Saree Fashion

ನಟಿಯ ಸಮ್ಮರ್‌ ಸೀರೆ ಲುಕ್‌

ನಟಿ ಅಶಿಕಾ ಅವರ ಸಮ್ಮರ್‌ ಸೀರೆ ಲುಕ್‌ ಹೇಳಿ ಮಾಡಿಸಿದಂತಿದೆ. ಅಲ್ಲದೇ ಅವರ ಈ ಸಿಂಪಲ್‌ ಔಟ್‌ಲುಕ್‌ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯೂ ಆಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕಿ ವಿದ್ಯಾ. ಅವರ ಪ್ರಕಾರ, ಆಯಾ ಸೀಸನ್‌ನ ಔಟ್‌ಲುಕ್‌ ಟ್ರೆಂಡಿಯಾಗಿಸುವಲ್ಲಿ ನಟಿಯರ ಪಾತ್ರ ಪ್ರಮುಖವಾದದ್ದು ಎನ್ನುತ್ತಾರೆ.

Stars Saree Fashion

ಅಶಿಕಾ ಇಂಡೋ-ವೆಸ್ಟರ್ನ್‌ ಸೀರೆ ಡಿಟೇಲ್ಸ್‌

ಈ ಬೇಸಿಗೆ ಸೀಸನ್‌ಗೆ ಹೊಂದುವಂತಹ ಹಾಲ್ಟರ್‌ ನೆಕ್‌ಲೈನ್‌ನಂತೆ ಕಾಣುವ ಶೋಲ್ಡರ್‌ ಲೆಸ್‌ ಅಥವಾ ಸ್ಲೀವ್‌ಲೆಸ್‌ ಲುಕ್‌ ನೀಡುವ ವೆಸ್ಟರ್ನ್‌ ಶೈಲಿಯ ಬ್ಯಾಕ್‌ಲೆಸ್‌ ಟೈಯಿಂಗ್‌ ಪಿಂಕ್‌ ಬ್ಲೌಸ್‌ಗೆ ರಾಣಿ ಪಿಂಕ್‌ ಬಾರ್ಡರ್‌ನ ಬ್ಲ್ಯಾಕ್‌ ಕಾಟನ್‌ ಸೀರೆಯುಟ್ಟಿರುವ ನಟಿ ಅಶಿಕಾ ರಂಗನಾಥ್‌ ವಾವ್ಹ್‌… ಎನ್ನುವಷ್ಟರ ಮಟ್ಟಿಗೆ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಕಾಟನ್‌ ಸೀರೆ ಇಂಡಿಯನ್‌ ಲುಕ್‌ಗೆ ಸಾಥ್‌ ನೀಡಿದೆಯಾದರೂ, ಹಾಲ್ಟರ್‌ ನೆಕ್‌ಲೈನ್‌ನ ಕ್ರಾಪ್‌ಟಾಪ್‌ನಂತೆ ಕಾಣುವ ಸೀರೆಯ ಬ್ಲೌಸ್‌ ಕಂಪ್ಲೀಟ್‌ ವೆಸ್ಟರ್ನ್‌ ಕಾನ್ಸೆಪ್ಟ್‌ನದ್ದು. ಇನ್ನು, ಇವೆಲ್ಲಕ್ಕೂ ಮ್ಯಾಚ್‌ ಆಗುವಂತಹ ಆಕ್ಸಿಡೈಸ್ಡ್‌ ಬಿಗ್‌ ಮಿರರ್‌ ಜುಮಕಾಗಳು, ಫಿಂಗರ್‌ರಿಂಗ್‌, ಸಿಂಗಲ್‌ ಕಡದಂತಹ ಬ್ಯಾಂಗಲ್‌ ಇವರ ಈ ಲುಕ್‌ಗೆ ಜೊತೆಯಾಗಿದೆ. ಹಣೆಯ ಮೇಲಿನ ಚಿಕ್ಕದೊಂದು ಬಿಂದಿ ಸಿಂಪಲ್‌ ಮೇಕಪ್‌ ಹೈಲೈಟ್‌ ಮಾಡಿದೆ. ಎಲ್ಲದಕ್ಕಿಂತ ಸಮ್ಮರ್‌ನ ಹೈ ಪೋನಿಟೈಲ್‌ ಹೇರ್‌ಸ್ಟೈಲ್‌ ಇವರ ಬ್ಯೂಟಿಯನ್ನು ಇಮ್ಮಡಿಸಿದೆ. ಒಟ್ಟಿನಲ್ಲಿ, ಅಶಿಕಾ ರಂಗನಾಥ್‌ರ ಈ ಸೀರೆ ಲುಕ್‌ ಎಲ್ಲರನ್ನು ಸಮ್ಮೋಹನಗೊಳಿಸಿದೆ. ಸಿಂಪಲ್ಲಾಗಿಯೇ ಎಲ್ಲರ ಗಮನ ಸೆಳೆದಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.
ಅಂದಹಾಗೆ, ನಟಿ ಅಶಿಕಾ ಈ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ತಮ್ಮ ಸಿನಿಮಾವೊಂದರ ಪ್ರಮೋಷನ್‌ನಲ್ಲಿ. ಇತ್ತೀಚೆಗೆ ನಟಿಯರೆಲ್ಲರೂ ವೆಸ್ಟರ್ನ್‌ ಲುಕ್‌ನತ್ತ ವಾಲಿದ್ದರೇ, ಇವರು ಮಾತ್ರ, ಸೀರೆಯುಟ್ಟು ಅಭಿಮಾನಿಗಳನ್ನು ಸೆಳೆದಿದ್ದಾರೆ. ಇದು ಶ್ಲಾಘನೀಯ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Stars Saree Fashion

ಬೇಸಿಗೆಗೆ ಗ್ಲಾಮರಸ್‌ ಬ್ಲೌಸ್‌ ಕಾಂಬಿನೇಷನ್‌

ಕಾಟನ್‌ ಸೀರೆಗೆ ಈ ರೀತಿಯ ಗ್ಲಾಮರಸ್‌ ಲುಕ್‌ ನೀಡುವ ಹಾಲ್ಟರ್‌ ನೆಕ್‌ಲೈನ್‌ ಇರುವಂತಹ ಡೀಪ್‌ ವೀ ನೆಕ್‌ನ ಬ್ಯಾಕ್‌ಲೆಸ್‌ ಟೈಯಿಂಗ್‌ ಸೀರೆ ಬ್ಲೌಸ್‌ ಡಿಫರೆಂಟ್‌ ಲುಕ್‌ ನೀಡುತ್ತವೆ ಮಾತ್ರವಲ್ಲ, ಇಡೀ ಕಾಟನ್‌ ಸೀರೆಯನ್ನು ಹೈ ಲೈಟ್‌ ಮಾಡಿ ಇಂಡೋ-ವೆಸ್ಟರ್ನ್‌ ಟಚ್‌ ನೀಡುತ್ತವೆ. ಹಾಗಾಗಿ ಸೆಲೆಬ್ರೆಟಿಗಳ ಫೇವರೇಟ್‌ ಸೀರೆ ಸ್ಟೈಲಿಂಗ್‌ನಲ್ಲಿ ಈ ಶೈಲಿಯ ಬ್ಲೌಸ್‌ಗಳು ಸೇರಿಹೋಗಿವೆ. ಅದರಲ್ಲೂ ಸದ್ಯ ಬಾಲಿವುಡ್‌ ಸೆಲೆಬ್ರೆಟಿಗಳ ಫೇವರೇಟ್‌ ಲಿಸ್ಟ್‌ನಲ್ಲಿವೆ. ಇನ್ನು, ಇವನ್ನು ಡಿಸೈನರ್‌ ಸೀರೆಗಳಿಗೆ ಮಾತ್ರವಲ್ಲ, ಕಾಟನ್‌ ಸೀರೆಗಳಿಗೂ ಈ ಡಿಸೈನ್‌ನ ಬ್ಲೌಸ್‌ ಅನ್ನು ಧರಿಸಬಹುದು ಎಂಬುದನ್ನು ಇದೀಗ ನಟಿ ಅಶಿಕಾ ರಂಗನಾಥ್‌ ಪ್ರೂವ್‌ ಮಾಡಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಫರ್ಟ್ಸ್.‌

Stars Saree Fashion

ನೀವೂ ಅಶಿಕಾರಂತೆ ಗ್ಲಾಮರಸ್‌ ಆಗಿ ಕಾಣಿಸಲು ಹೀಗೆ ಸ್ಟೈಲಿಂಗ್‌ ಮಾಡಿ

 • ಗ್ಲಾಮರಸ್‌ ಬ್ಲೌಸ್‌ ಆಯ್ಕೆ ಮಾಡಿ.
 • ಮಿನಿಮಲ್‌ ಆಕ್ಸೆಸರೀಸ್‌ ಧರಿಸಿ.
 • ಸೀಸನ್‌ಗೆ ತಕ್ಕ ಸೀರೆ ಉಡಿ.
 • ಹೇರ್‌ಸ್ಟೈಲ್‌ ಮ್ಯಾಚ್‌ ಆಗುವಂತಿರಲಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂಂ ಓದಿ: Coriander Benefits: ಚರ್ಮದ ಯಾವುದೇ ಸಮಸ್ಯೆಗಳಿಗೂ ಕೊತ್ತಂಬರಿ ಸೊಪ್ಪು ಮದ್ದು

Continue Reading

ಫ್ಯಾಷನ್

Wedding Celebrity Look: ಮದುವೆಯಲ್ಲಿ ಮದುಮಗಳ ಸೆಲೆಬ್ರೆಟಿ ಲುಕ್‌ಗೆ ಸಾಥ್‌ ನೀಡುವ 5 ಪ್ರಮುಖ ಅಂಶಗಳಿವು

ಮದುವೆಯಲ್ಲಿ ಮದುಮಗಳು ಸೆಲೆಬ್ರೆಟಿ ಲುಕ್‌ (Wedding celebrity look) ಪಡೆಯಲು 5 ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್ಸ್‌. ಅವು ಯಾವುವು? ಟ್ರೆಂಡ್‌ಗೆ ತಕ್ಕಂತೆ ಹೇಗೆಲ್ಲಾ ಬದಲಿಸಿಕೊಳ್ಳಬೇಕು? ಎಂಬುದರ ಬಗ್ಗೆ ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Wedding Celebrity Look
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ ಸೆಲೆಬ್ರೆಟಿ ಲುಕ್‌ (Wedding celebrity look) ಟ್ರೆಂಡಿಯಾಗಿದೆ. ಈ ಲುಕ್‌ಗಾಗಿ ಸಾಕಷ್ಟು ಹೆಣ್ಣುಮಕ್ಕಳು ನಾನಾ ಕಸರತ್ತು ಮಾಡುತ್ತಾರೆ. ಇದಕ್ಕೆ ಕಾರಣ, ಈ ಲುಕ್‌ ಇಡೀ ಬಳಗವನ್ನೇ ಸೆಳೆಯುತ್ತದೆ. ಅಷ್ಟು ಮಾತ್ರವಲ್ಲ, ಜೀವನದ ಬ್ಯೂಟಿಫುಲ್‌ ನೆನಪಿನಂಗಳದಲ್ಲಿ ಉಳಿಯುತ್ತದೆ. ವಿಡಿಯೋ, ಫೋಟೋ ಹೀಗೆ ಎಲ್ಲವಲ್ಲೂ ಹೈಲೈಟಾಗುತ್ತದೆ. ನೋಡಿದಾಗ ಮದುಮಗಳ ಸುಂದರ ವಧನ ಹಾಗೂ ಅಲಂಕಾರ ಎಲ್ಲರನ್ನು ಸಮ್ಮೋಹನಗೊಳಿಸುತ್ತದೆ. ಪರಿಣಾಮ, ಸಾಮಾನ್ಯ ಹೆಣ್ಣುಮಕ್ಕಳು ಕೂಡ ಇತ್ತೀಚೆಗೆ ಈ ಅಲಂಕಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದಕ್ಕಾಗಿ ಮಾಡಬೇಕಾಗಿದ್ದು ಇಷ್ಟೇ! ಮದುಮಗಳ ಸೌಂದರ್ಯ ಹೆಚ್ಚಿಸುವ ಈ ಲುಕ್‌ಗಾಗಿ 5 ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್ಸ್‌.‌ ಅವರ ಪ್ರಕಾರ, ಮದುಮಗಳಿಗೆ ಸಿಂಗಾರ ಮಾಡಿದಾಗ ದೇವತೆಯಂತೆ ಕಾಣಿಸಬೇಕು. ನೋಡಿದಾಗ ಎಲ್ಲರ ಕಣ್ಮನ ಸೆಳೆಯಬೇಕು. ಆಗಷ್ಟೇ ಇಡೀ ಮದುವೆ ಮನೆಯ ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗಲು ಸಾಧ್ಯ ಎನ್ನುತ್ತಾರೆ.

Wedding Celebrity Look

ವೆಡ್ಡಿಂಗ್‌ಗೆ ಗ್ರ್ಯಾಂಡ್‌ ಮೇಕಪ್‌ ಆಯ್ಕೆ ಮಾಡಿ

ಮದುವೆಗಳಲ್ಲಿ ಮದುಮಗಳಿಗೆ ಆದಷ್ಟೂ ಗ್ರ್ಯಾಂಡ್‌ ಲುಕ್‌ ನೀಡುವ ವೆಡ್ಡಿಂಗ್‌ ಮೇಕಪ್‌ ಆಯ್ಕೆ ಮಾಡಿ. ಯಾಕೆಂದರೇ, ಸಿಂಪಲ್‌ ಲುಕ್‌ ಫೋಟೋಗ್ರಾಫಿ ಹಾಗೂ ವಿಡಿಯೋಗ್ರಾಫಿಯಲ್ಲಿ ಹೈಲೈಟ್‌ ಆಗುವುದಿಲ್ಲ. ವೆಡ್ಡಿಂಗ್‌ಗೆಂದು ಮಾಡಲಾಗುವ ನಾನಾ ಮೇಕಪ್‌ಗಳು ಮಾತ್ರ ಈ ಕೆಲಸ ಮಾಡಬಲ್ಲವು. ಉದಾಹರಣೆಗೆ., ಸೆಲೆಬ್ರೆಟಿ ಮೇಕಪ್‌, ಮಿನರಲ್‌ ಮೇಕಪ್‌, ಟ್ರೆಡಿಷನಲ್‌ ಮೇಕಪ್‌ನಲ್ಲಿ ಬರುವಂತಹ ಮೇಕಪ್‌ಗಳನ್ನು ಆರಿಸಿಕೊಳ್ಳಬೇಕು. ಹಣೆಗೆ ಬಿಂದಿ ಇಡುವುದನ್ನು ಮರೆಯಬಾರದು, ಕಣ್ಣಿಗೆ ಕಾಡಿಗೆ ಮಸ್ಟ್‌ ಮೇಕಪ್‌ ಲಿಸ್ಟ್‌ನಲ್ಲಿರಬೇಕು.

Wedding Celebrity Look

ಟ್ರೆಂಡಿ ಗ್ರ್ಯಾಂಡ್‌ ರೇಷ್ಮೆ ಸೀರೆಯ ಆಯ್ಕೆ

ಮದುವೆಗೆ ರೇಷ್ಮೆ ಸೀರೆಯನ್ನು ಉಡುವುದು ಪ್ರಮುಖ ಸಂಗತಿಗಳಲ್ಲೊಂದು. ಅದರಲ್ಲೂ ಗ್ರ್ಯಾಂಡ್‌ ಲುಕ್‌ ನೀಡುವ ಟ್ರೆಂಡಿ ಗೋಲ್ಡನ್‌ ಹಾಗೂ ಸಿಲ್ವರ್‌ ಶೇಡ್‌ನ ಬಾರ್ಡರ್‌ ರೇಷ್ಮೆ ಸೀರೆಗಳನ್ನು ಉಟ್ಟಾಗ ಎದ್ದು ಕಾಣುವುದು. ಪಾಸ್ಟೆಲ್‌ ಶೇಡ್‌ಗಳು ಚಾಲ್ತಿಯಲ್ಲಿವೆ.

Wedding Celebrity Look

ಟ್ರೆಡಿಷನಲ್‌ ಹೇರ್‌ಸ್ಟೈಲ್‌

ಇದೀಗ ಲಾಂಗ್‌ ಮೆಸ್ಸಿ ಜಡೆ ಹಾಗೂ ಉದ್ದುದ್ದದ ಕುಚ್ಚು ಹಾಕಿರುವಂತಹ ಇನ್‌ಸ್ಟಂಟ್‌ ಜಡೆಗಳು ಟ್ರೆಂಡಿಯಾಗಿವೆ. ಇವುಗಳಿಗೆ ಹೇರ್‌ ಎಕ್ಸ್‌ಟೆನ್‌ಷನ್‌ ಹಾಕಿ ವೈವಿಧ್ಯಮಯವಾಗಿ ಸಿಂಗರಿಸಲಾಗುತ್ತದೆ. ಹೂವುಗಳ ಸಿಂಗಾರ ಕೂಡ ಟ್ರೆಡಿಷನಲ್‌ ಲುಕ್‌ ಜೊತೆಗೆ ಮದುಮಗಳನ್ನು ಗ್ರ್ಯಾಂಡ್‌ ಆಗಿ ಬಿಂಬಿಸುತ್ತದೆ.

Wedding Celebrity Look

ಆಂಟಿಕ್‌ ಆಭರಣಗಳನ್ನು ಧರಿಸಿ

ಆಂಟಿಕ್‌ ಜ್ಯುವೆಲರಿಗಳು ಇಡೀ ಲುಕ್ಕನ್ನು ಹೈಲೈಟ್‌ ಮಾಡುತ್ತದೆ. ಆಯಾ ರೇಷ್ಮೆ ಸೀರೆ ಮ್ಯಾಚ್‌ ಆಗುವಂತಹ ಜ್ಯುವೆಲರಿ ಸೆಟ್‌ ಧರಿಸಿದಾಗ ದೇವತೆಯ ಲುಕ್‌ ಪಡೆಯಬಹುದು. ಜುಮಕಿ, ಕಿವಿಯ ಸರಪಳಿ, ನೆಕ್ಲೇಸ್‌, ಹಾರ, ಕಡಗ, ಕೈ ಉಂಗುರಗಳು ಹೀಗೆ ಎಲ್ಲವನ್ನೂ ಧರಿಸಬೇಕು. ಟೆಂಪಲ್‌ ಜ್ಯುವೆಲರಿ, ಕಾಸಿನ, ಅಡಕೆ ಡಿಸೈನ್‌ನ ನೆಕ್ಲೇಸ್‌ಗಳು ಟ್ರೆಡಿಷನಲ್‌ ಲುಕ್‌ ನೀಡಬಲ್ಲವು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಬದಲಾಯ್ತು ಜೆನ್‌ ಜಿ ಹುಡುಗರ ಸಮ್ಮರ್‌ ಫ್ಯಾಷನ್‌ ಸ್ಟೇಟ್‌ಮೆಂಟ್ಸ್‌

Continue Reading
Advertisement
Virat kohli
ಪ್ರಮುಖ ಸುದ್ದಿ11 mins ago

Virat Kohli : ವಿರಾಟ್ ಕೊಹ್ಲಿಯ 50ನೇ ಏಕದಿನ ಕ್ರಿಕೆಟ್​ ಶತಕಕ್ಕೆ ಅಂತಾರಾಷ್ಟ್ರೀಯ ಗೌರವ

Job Alert
ಉದ್ಯೋಗ13 mins ago

Job Alert: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಮೇ 4ರೊಳಗೆ ಅಪ್ಲೈ ಮಾಡಿ

Murder case In Bengaluur
ಬೆಂಗಳೂರು14 mins ago

Murder Case : ಕೊಲೆಯಾದ ಮಹಿಳೆಗೆ 20 ಹುಡುಗರ ಸಹವಾಸ! ಅವರಿಗೆ ಆಕೆ ಇಟ್ಟಿದ್ದ ಹೆಸರು ಆರೆಂಜ್, ಆ್ಯಪಲ್, ಬನಾನಾ ಇತ್ಯಾದಿ!

Summer Hairstyles
ಫ್ಯಾಷನ್14 mins ago

Summer Hairstyles: ಸೆಕೆಗಾಲದಲ್ಲಿ ಟ್ರೆಂಡಿಯಾದ 3 ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್ಸ್!

hardik pandya
ಕ್ರೀಡೆ14 mins ago

IPL 2024: ಹಾರ್ದಿಕ್​ ಪಾಂಡ್ಯ ನಿಜವಾಗಿಯೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರಾ?; ವಿಚಿತ್ರ ವರ್ತನೆಯ ವಿಡಿಯೊ ವೈರಲ್​

Yuzvendra Chahal
ಪ್ರಮುಖ ಸುದ್ದಿ43 mins ago

Yuzvendra Chahal : ​ ಚಾಹಲ್ ಕೈಬಿಟ್ಟಿರುವುದರ ಹಿಂದಿನ ಕಾರಣ ಬಹಿಂಗ ಮಾಡಿದ ಆರ್​ಸಿಬಿ ಮಾಜಿ ಡೈರೆಕ್ಟರ್​

Three boys drown
ಕರ್ನಾಟಕ49 mins ago

Yadgir News: ಕೆರೆಯಲ್ಲಿ ಈಜಾಡಲು ಹೋಗಿ ಮೂವರು ಬಾಲಕರ ದುರ್ಮರಣ

Fraud case
ಬೆಂಗಳೂರು53 mins ago

Fraud Case : ಗುಜರಿ ಅಂಗಡಿ ಮಾಲೀಕನಿಗೆ ಬೆದರಿಸಿ ಹಣ ಪೀಕಿದ ಪೊಲೀಸ್‌ ಹಾಗೂ ಇನ್ಫಾರ್ಮರ್

Uttarakaanda Movie
ಸಿನಿಮಾ54 mins ago

Uttarakaanda Movie: ʼಉತ್ತರಕಾಂಡʼ ಚಿತ್ರಕ್ಕೆ ನಾಯಕಿ ಎಂಟ್ರಿ; ಮೋಹಕ ತಾರೆ ರಮ್ಯಾ ಜಾಗಕ್ಕೆ ಕಾಲಿವುಡ್‌ ನಟಿ

Lok Sabha Election 2024 BJP released Pick pocket Congress poster
Lok Sabha Election 20241 hour ago

LoK Sabha Election 2024: ಚೊಂಬು ಆರೋಪಕ್ಕೆ ಚಿಪ್ಪು ಕೊಟ್ಟ ಬಿಜೆಪಿ! ಪಿಕ್‌ ಪಾಕೆಟ್‌ ಕಾಂಗ್ರೆಸ್‌ ಪೋಸ್ಟರ್‌ ಬಿಡುಗಡೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ12 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು24 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌