Costliest Handbags: ಪ್ರತಿಷ್ಠಿತ ಬ್ರಾಂಡ್‌ಗಳ ಹ್ಯಾಂಡ್‌ ಬ್ಯಾಗ್‌ ಬೆಲೆ ಕೇಳಿದರೆ ಹೌಹಾರುವುದು ಗ್ಯಾರಂಟಿ! - Vistara News

ಫ್ಯಾಷನ್

Costliest Handbags: ಪ್ರತಿಷ್ಠಿತ ಬ್ರಾಂಡ್‌ಗಳ ಹ್ಯಾಂಡ್‌ ಬ್ಯಾಗ್‌ ಬೆಲೆ ಕೇಳಿದರೆ ಹೌಹಾರುವುದು ಗ್ಯಾರಂಟಿ!

ನೂರಿನ್ನೂರು ಬೆಲೆಗೆ ಹ್ಯಾಂಡ್‌ ಬ್ಯಾಗ್‌ಗಳನ್ನು (Costliest Handbags) ಖರೀದಿಸುವ ಹುಡುಗಿಯರು, ಪ್ರತಿಷ್ಠಿತ ಬ್ರಾಂಡ್‌ ಲೂಯಿಸ್‌ ವ್ಯುಟಾನ್‌ ಸೇರಿದಂತೆ ಕೆಲವು ಬ್ರಾಂಡ್‌ನ ಟ್ರೆಂಡಿ ಹ್ಯಾಂಡ್‌ ಬ್ಯಾಗ್‌ಗಳ ಬೆಲೆ ಕೇಳಿದಲ್ಲಿ ಹೌಹಾರುವುದು ಗ್ಯಾರಂಟಿ! ಲಕ್ಷ ರೂ. ದಾಟುವ ಬೆಲೆಬಾಳುವ ಒಂದಿಷ್ಟು ವ್ಯಾನಿಟಿ ಬ್ಯಾಗ್‌ಗಳ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ.

VISTARANEWS.COM


on

Costliest Handbags
ಚಿತ್ರಗಳು : ಪ್ರತಿಷ್ಠಿತ ಬ್ರಾಂಡ್‌ಗಳ ಹ್ಯಾಂಡ್‌ಬ್ಯಾಗ್‌ಗಳು, Pic courtesy : louisvaitton, demnagram, Balenciaga
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿಷ್ಠಿತ ಬ್ರಾಂಡೆಡ್‌ ಟ್ರೆಂಡಿ ಹ್ಯಾಂಡ್‌ಬ್ಯಾಗ್‌ಗಳ (Costliest Handbags) ಬೆಲೆ ಲಕ್ಷ ರೂ. ಗಳಿಗಿಂತ ಹೆಚ್ಚು ಎಂದರೇ ನಂಬುತ್ತೀರಾ! ಖಂಡಿತಾ. ಹೌದು. ಹಾಲಿವುಡ್‌ ಸೆಲೆಬ್ರೆಟಿಗಳ ಹಾಗೂ ಶ್ರೀಮಂತರ ಕೈಗಳನ್ನು ಸೇರುವ ಈ ವ್ಯಾನಿಟಿ ಬ್ಯಾಗ್‌ಗಳು, ಸಾಮಾನ್ಯ ಡಿಸೈನ್‌ ಹೊಂದಿದ್ದರೂ ಕೂಡ ದುಬಾರಿ ಬೆಲೆಯ ಟ್ಯಾಗ್‌ಗಳನ್ನು ತಗುಲಿಹಾಕಿಕೊಂಡಿವೆ.
ನಮ್ಮಲ್ಲಿ ಕಾಲೇಜು ಹುಡುಗಿಯರಿದಿಂದಿಡು ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರ ನೆಚ್ಚಿನ ಲಿಸ್ಟ್‌ಗೆ ಸೇರುವ ಹ್ಯಾಂಡ್‌ಬ್ಯಾಗ್‌ಗಳು ಕಡಿಮೆಯೆಂದರೂ ಐನೂರು ರೂ.ಗಳಿರುತ್ತವೆ. ಹೆಚ್ಚೆಂದರೇ, ಸ್ಥಳೀಯ ಬ್ರಾಂಡ್‌ಗಳವು ಮೂರ್ನಾಲ್ಕು ಅಥವಾ ಒಂದೈದು ಸಾವಿರ ರೂ.ಗಳವರೆಗೆ ಇರುತ್ತವೆ. ಇನ್ನು ಏರ್‌ಪೋರ್ಟ್ ಹಾಗೂ ಮಾಲ್‌ಗಳಲ್ಲಿ ದೊರೆಯುವ ಬ್ರಾಂಡೆಡ್‌ ಹ್ಯಾಂಡ್‌ ಬ್ಯಾಗ್‌ಗಳು ಹೆಚ್ಚೆಂದರೇ ಒಂದಿಪ್ಪತ್ತು ಸಾವಿರ ದಾಟಬಹುದು. ಆದರೆ, ಲಕ್ಷಗಟ್ಟಲೇ ಬೆಲೆ ಬಾಳುವ ಹ್ಯಾಂಡ್‌ ಬ್ಯಾಗ್‌ಗಳು ಆನ್‌ಲೈನ್‌ ಮಾರುಕಟ್ಟೆಯಲ್ಲಿ ಬಿಕರಿಗೊಳ್ಳುತ್ತಿವೆ ಎಂದರೇ ಅಚ್ಚರಿಯಾಗುತ್ತದಲ್ಲವಾ! ಆದರೆ, ಇದು ನಿಜ. ಆನ್‌ಲೈನ್‌ ಮಾರುಕಟ್ಟೆಗಳಲ್ಲಿ ಆಯಾ ಬ್ರಾಂಡ್‌ಗಳ ಲಕ್ಷರೂ. ಬೆಲೆ ಬಾಳುವ ಬ್ಯಾಗ್‌ಗಳು ಸುಲಭವಾಗಿ ಲಭ್ಯ. ಶ್ರೀಮಂತ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡ ಇಂಟರ್‌ನ್ಯಾಷನಲ್‌ ಬ್ಯಾಂಡ್‌ಗಳು ಆಗಾಗ್ಗೆ ಇಲ್ಲಿ ಬಿಡುಗಡೆಗೊಳಿಸುತ್ತಿರುತ್ತವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಇನ್ನು, ಇದಕ್ಕೆ ಸಾಕ್ಷಿ ಎಂಬಂತೆ ಲೂಯಿಸ್‌ ವ್ಯುಟಾನ್‌ ಬ್ರಾಂಡ್‌ನ ಹ್ಯಾಂಡ್‌ಬ್ಯಾಗ್‌ಗಳನ್ನು ಉದಾಹರಣೆಯಾಗಿ ನೀಡಬಹುದು. ಇದೇ ರೀತಿ ಸದ್ಯಕ್ಕೆ ಯಾವ್ಯಾವ ಡಿಸೈನ್‌ನವು ಈ ದುಬಾರಿ ಲಿಸ್ಟ್‌ನಲ್ಲಿವೆ ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷೀಪ್ತ ವಿವರ.

Sandwich bag

ಸ್ಯಾಂಡ್‌ವಿಚ್‌ ಬ್ಯಾಗ್‌

ಸ್ಯಾಂಡ್‌ವಿಚ್‌ ಆರ್ಡರ್‌ ಮಾಡಿದಾಗ ಡಿಲಿವರಿ ಮಾಡುವ ಪೇಪರ್‌ ಬ್ಯಾಗ್‌ನಂತೆ ಹೋಲುವ ಬ್ಯಾಗ್‌ ವಿನ್ಯಾಸವನ್ನೇ ಹೋಲುವಂತಹ ಲೆದರ್‌ ಬ್ಯಾಗ್‌ ಇದು. ಲೂಯಿಸ್‌ ವ್ಯುಟಾನ್‌ ಬ್ರಾಂಡ್‌ ಇದೀಗ ಈ ಕಾನ್ಸೆಪ್ಟ್‌ನ ಬ್ಯಾಗ್‌ ಬಿಡುಗಡೆ ಮಾಡಿದ್ದು ಇದರ ಬೆಲೆ ಭಾರತೀಯ ಬೆಲೆಯಲ್ಲಿ ಸರಿಸುಮಾರು 2.8 ಲಕ್ಷ ರೂ. ಬೆಲೆಯಂತೆ.

ವಿಮಾನ ಆಕಾರದ ಹ್ಯಾಂಡ್‌ ಬ್ಯಾಗ್‌

2021ರಲ್ಲಿ ಬಿಡುಗಡೆಗೊಂಡ ಏರೋಪ್ಲೇನ್‌ ಶೇಪ್‌ನ ಈ ಬ್ರಾಂಡ್‌ನ ಬ್ಯಾಗ್‌ ಬೆಲೆ ಕೂಡ 39,000 ಡಾಲರ್‌ ಇತ್ತು. ಇನ್ನು ಭಾರತೀಯ ರೂಪಾಯಿಗಳಲ್ಲಿ 28 ಲಕ್ಷ ರೂ.ಗಳೆನ್ನಬಹುದು. ಇದು ಕೂಡ ಹಾಲಿವುಡ್‌ನ ಬೆರಳೆಣಿಕೆ ನಟಿಯರ ಕೈಗಳಲ್ಲಿ ಕಾಣಿಸಿಕೊಂಡಿತ್ತು.

Chips Pack Replica Handbag

ಚಿಪ್ಸ್‌ ಪ್ಯಾಕ್‌ ರಿಪ್ಲೀಕಾ ಹ್ಯಾಂಡ್‌ ಬ್ಯಾಗ್‌

ಲೆಯಿಸ್‌ ಚಿಪ್ಸ್ ಪ್ಯಾಕೆಟ್‌ ಹೋಲುವ ಬ್ಯಾಲೆನ್ಸಿಯಾಗ ಬ್ರಾಂಡ್‌ನ ಹ್ಯಾಂಡ್‌ ಬ್ಯಾಗ್‌ ಕೂಡ ಒಂದಿಷ್ಟು ಸಮಯ ವಿದೇಶದಲ್ಲಿ ಟ್ರೆಂಡ್‌ ಹುಟ್ಟು ಹಾಕಿತ್ತು. ಅಷ್ಟು ಮಾತ್ರವಲ್ಲದೇ, ಕೆಲವು ರಾಷ್ಟ್ರಗಳಲ್ಲಿ ನಗೆಪಾಟಲಿಗೀಡಾಗಿತ್ತು. ಯಾಕೆಂದರೇ, ಅದಕ್ಕೆ ಲಕ್ಷಗಟ್ಟಲೆ ರೂ. ಕೊಟ್ಟು ಈ ಬ್ಯಾಗ್‌ ಕೊಳ್ಳಬೇಕಾ! ಎಂದು ಸಾಕಷ್ಟು ಫ್ಯಾಷನ್‌ ಪ್ರೇಮಿಗಳು ತಮ್ಮ ಬ್ಲಾಗ್‌ಗಳಲ್ಲಿ ಬರೆದುಕೊಂಡಿದ್ದರು.ಭಾರತೀಯ ರೂಪಾಯಿಯಲ್ಲಿ ಇದರ ಬೆಲೆ ಹೇಳುವುದಾದಲ್ಲಿ 1.24 ಲಕ್ಷ ರೂ.ಗಳೆನ್ನಲಾಗಿದೆ.

Tote handbag

ಟೋಟೆ ಹ್ಯಾಂಡ್‌ಬ್ಯಾಗ್‌

2017ರಲ್ಲಿ ಬಿಡುಗಡೆಗೊಂಡ ಟೋಟೆ ಬ್ಯಾಗ್‌ನಂತೆ ಕಾಣುವ ಹ್ಯಾಂಡ್‌ಬ್ಯಾಗ್‌ ಬೆಲೆ ಎಷ್ಟು ಎಂದು ಕೊಂಡಿದ್ದೀರಾ! 2000 ಡಾಲರ್‌, ಅಂದರೇ, ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 1.65 ಲಕ್ಷ ರೂ. ಬೆಲೆ ಎನ್ನಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Jhumka Neck Chain Fashion: ಯುವತಿಯರ ಕುತ್ತಿಗೆ ಅಲಂಕರಿಸಲು ಬಂತು ಜುಮ್ಕಾ ಸರಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Father’s Day Fashion: ಅಪ್ಪಂದಿರ ದಿನಕ್ಕೂ ಉಂಟು ಫ್ಯಾಷನ್‌ ಸ್ಟೇಟ್‌ಮೆಂಟ್ಸ್!

ಜೂನ್‌ 16, ಭಾನುವಾರ ಅಪ್ಪಂದಿರ ದಿನ. ಆ ದಿನಕ್ಕೂ ಉಂಟು, ಫ್ಯಾಷನ್‌ ಸ್ಟೇಟ್‌ಮೆಂಟ್ಸ್ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಈ ದಿನಕ್ಕೆ (father’s day 2024) ಹೊಂದುವಂತೆ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳನ್ನು ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ. ಫಾದರ್ಸ್ ಡೇಯಂದು ಕೂಡ ಅಪ್ಪ-ಮಕ್ಕಳು ಫ್ಯಾಷೆನಬಲ್‌ ಆಗಿ ಕಾಣಿಸಿಕೊಳ್ಳಬಹುದು. ಅದು ಹೇಗೆ? ಇದಕ್ಕಾಗಿ ಏನೆಲ್ಲಾ ಪಾಲಿಸಬೇಕು? ಸ್ಟೈಲಿಂಗ್‌ ಟಿಪ್ಸ್ ಏನು? ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. ಇದಕ್ಕೆ ತಕ್ಕಂತೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.

VISTARANEWS.COM


on

Father's Day Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫಾದರ್ಸ್ ಡೇ ಫ್ಯಾಷನ್‌ಗೆ (Father’s day Fashion) ಸಿದ್ಧರಾಗಿದ್ದೀರಾ? ಜೂನ್‌ 16 ರಂದು ಭಾನುವಾರ ಅಪ್ಪಂದಿರ ದಿನ. ಆ ದಿನದಂದು (father’s day 2024) ತಮ್ಮ ಮಕ್ಕಳೊಂದಿಗೆ ಸಂಭ್ರಮಿಸುವ ಅಪ್ಪಂದಿರಿಗೆ ಅಥವಾ ತಂದೆಯೊಂದಿಗೆ ಸೆಲೆಬ್ರೆಟ್‌ ಮಾಡುವ ಮಕ್ಕಳಿಗೆ ಪೂರಕವಾಗುವಂತೆ ಫಾದರ್ಸ್ ಡೇ ಫ್ಯಾಷನ್‌ ಸ್ಟೇಟ್‌ಮೆಂಟ್ಸ್ ಕಾಲಿಟ್ಟಿವೆ. ಹೌದು. ಫಾದರ್ಸ್ ಡೇ ಯಂದು ಕೂಡ ಅಪ್ಪ-ಮಕ್ಕಳು ಫ್ಯಾಷೆನಬಲ್‌ ಆಗಿ ಕಾಣಿಸಿಕೊಳ್ಳಬಹುದು. ಅದು ಹೇಗೆ? ಇದಕ್ಕಾಗಿ ಏನೆಲ್ಲಾ ಪಾಲಿಸಬೇಕು? ಸ್ಟೈಲಿಂಗ್‌ ಟಿಪ್ಸ್ ಏನು? ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. ಇದಕ್ಕೆ ತಕ್ಕಂತೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.

Father's Day Fashion

ಕ್ಯಾಶುವಲ್ಸ್ ಔಟ್‌ಫಿಟ್ಸ್

ಪ್ರತಿದಿನ ಸೀರಿಯಸ್‌ ಆಗಿ ಫಾರ್ಮಲ್‌ ಧರಿಸುವ ಅಪ್ಪ, ನೀವಾದಲ್ಲಿ ಆದಷ್ಟೂ ಈ ವಿಶೇಷ ದಿನದಂದು ಕೂಲಾಗಿ ಕಾಣಿಸುವ ಕ್ಯಾಶುವಲ್‌ ಔಟ್‌ಫಿಟ್ಸ್‌ಗೆ ಸೈ ಹೇಳಿ. ಇನ್ನು ಮಕ್ಕಳಿಗೆ ಇಷ್ಟವಾಗುವಂತಹ ಕಲರ್ಸ್ ಹಾಗೂ ಔಟ್‌ಫಿಟ್‌ಗಳನ್ನು ಧರಿಸಿ. ಇನ್ನು ದೊಡ್ಡ ಮಕ್ಕಳೊಂದಿಗೆ ಸೆಲೆಬ್ರೆಟ್‌ ಮಾಡುವುದಾದಲ್ಲಿ ಆ ಮಕ್ಕಳ ಚಾಯ್ಸ್‌ಗೆ ತಕ್ಕಂತೆ ಧರಿಸಿ, ಮಕ್ಕಳ ಜೊತೆ ಮಕ್ಕಳಾಗಿ ಆಚರಿಸಿ.

Father's Day Fashion

ಅಪ್ಪನೊಂದಿಗೆ ಟ್ವಿನ್ನಿಂಗ್‌

ಮಕ್ಕಳು ಅಪ್ಪನೊಂದಿಗೆ ಟ್ವಿನ್ನಿಂಗ್‌ ಮಾಡಬಹುದು. ಅದು ಹೇಗೆ? ಅಂತಿರಾ! ತೀರಾ ಸಿಂಪಲ್‌. ಶಾಪಿಂಗ್‌ ಮಾಡಿ ಖರೀದಿಸುವುದಾದಲ್ಲಿ ಆದಷ್ಟೂ ಒಂದೇ ಬಗೆಯ ಔಟ್‌ಫಿಟ್ಸ್ ಖರೀದಿಸಿ, ಧರಿಸಿ. ಇಲ್ಲವಾದಲ್ಲಿ ವಾರ್ಡ್ರೋಬ್‌ನಲ್ಲಿರುವ ಸೇಮ್‌ ಟು ಸೇಮ್‌ ಔಟ್‌ಫಿಟ್‌ಗಳನ್ನು ಧರಿಸಿ. ಧರಿಸುವ ಎಲ್ಲಾ ಉಡುಗೆ ಹಾಗೂ ಆಕ್ಸೆಸರೀಸ್‌ ಒಂದೇ ಬಗೆಯದ್ದಾಗಿರಬೇಕು.

Father's Day Fashion

ಹೆಣ್ಣುಮಕ್ಕಳ ತಂದೆಯಾದಲ್ಲಿ…

ಗಂಡು ಮಕ್ಕಳೊಂದಿಗೆ ಟ್ವಿನ್ನಿಂಗ್‌ ಮಾಡುವುದು ಸುಲಭ. ಹೆಣ್ಣುಮಕ್ಕಳೊಂದಿಗೆ ಟ್ವಿನ್ನಿಂಗ್‌ ಮಾಡುವುದು ತುಸು ಅಸಾಧ್ಯ ಎಂದು ಯೋಚಿಸುತ್ತಾರೆ. ಆದರೆ, ಇದು ಕೂಡ ಸುಲಭ ಎಂದು ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ! ಇದಕ್ಕೆ ಮಾಡಬೇಕಾಗಿದ್ದಿಷ್ಟೇ! ಮಕ್ಕಳ ಔಟ್‌ಫಿಟ್‌ ಶೇಡ್ಸ್‌ನ ಕಾಪಿ ಮಾಡಿದರಾಯಿತು ಅಷ್ಟೇ! ಟ್ವಿನ್ನಿಂಗ್‌ಗೆ ಡ್ರೆಸ್‌ಗಳು ಥೇಟ್‌ ಒಂದೇ ಬಗೆಯದ್ದಾಗಿರಬೇಕೆಂಬ ರೂಲ್ಸ್ ಎಲ್ಲೂ ಇಲ್ಲ! ಒಟ್ಟಿನಲ್ಲಿ ಧರಿಸುವ ಉಡುಗೆ ಒಂದೇ ಕಲರ್‌ ಇದ್ದರೂ ಸಾಕು! ಎನ್ನುತ್ತಾರೆ ಸ್ಟೈಲಿಸ್ಟ್ಸ್.

Father's Day Fashion

ಮನೋಲ್ಲಾಸ ನೀಡುವಂತಹ ಉಡುಗೆಗಳ ಆಯ್ಕೆ

ಈ ದಿನದಂದು ಮನಸ್ಸಿಗೆ ಖುಷಿ ನೀಡುವಂತಹ ಬಣ್ಣಗಳ ಆಯ್ಕೆಯ ಔಟ್‌ಫಿಟ್ಟನ್ನು ಅಪ್ಪ-ಮಕ್ಕಳು ಧರಿಸಿದಲ್ಲಿ, ಸಂಭ್ರಮ ಹೆಚ್ಚುವುದು. ಟ್ವಿನ್ನಿಂಗ್‌ ಮಾಡಲು ಇಷ್ಟವಿಲ್ಲದಿದ್ದಲ್ಲಿ, ಒಬ್ಬರಿಗೊಬ್ಬರು ಇಷ್ಟಪಡುವಂತಹ ಔಟ್‌ಫಿಟ್ಸ್ ಧರಿಸಿ, ಸಂಭ್ರಮಿಸಿ ಆಚರಿಸಿದರಾಯಿತು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Celebrity Ethnic Fashion: ನಟ ಧನುಷ್‌ ಗೌಡರ ಗ್ರ್ಯಾಂಡ್‌ ಎಥ್ನಿಕ್‌ ಜಾಕೆಟ್‌ ವಿಶೇಷತೆ ಏನು?

Continue Reading

ಫ್ಯಾಷನ್

New Fashion: ಬ್ಲ್ಯಾಕ್‌ ಡೆನಿಮ್‌ ಕೋ ಆರ್ಡ್ ಸೆಟ್‌ನಲ್ಲಿ ಟ್ರೆಂಡಿಯಾದ ಜಿಪ್ಪರ್‌ ಸ್ಟೈಲ್‌

ಇದೀಗ ಬ್ಲ್ಯೂ ಡೆನಿಮ್‌ ಔಟ್‌ಫಿಟ್‌ಗಳ ಜಾಗವನ್ನು ಬ್ಲ್ಯಾಕ್‌ ಡೆನಿಮ್‌ ಕೋ ಆರ್ಡ್ ಸೆಟ್‌ಗಳು (New Fashion) ಆಕ್ರಮಿಸಿಕೊಳ್ಳತೊಡಗಿವೆ. ಜಿಪ್ಪರ್‌ ಸ್ಟೈಲ್‌ನವು ಟ್ರೆಂಡಿಯಾಗಿವೆ. ಇದ್ಯಾವ ವಿನ್ಯಾಸದ ಔಟ್‌ಫಿಟ್‌? ಮೇಕೋವರ್‌ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಸಿಂಪಲ್ಲಾಗಿ ವಿವರಿಸಿದ್ದಾರೆ.

VISTARANEWS.COM


on

New Fashion
ಚಿತ್ರಗಳು: ಪಾರುಲ್‌ ಗುಲಾಟಿ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬ್ಲ್ಯಾಕ್‌ ಡೆನಿಮ್‌ ಕೋ ಆರ್ಡ್ ಸೆಟ್‌ಗಳು ಇದೀಗ ಜಿಪ್ಪರ್‌ ಸ್ಟೈಲ್‌ನಲ್ಲಿ ಡಿಫರೆಂಟ್‌ ಕ್ರಾಪ್‌ ಟಾಪ್‌ (New Fashion) ಡಿಸೈನ್‌ಗಳಲ್ಲಿ ಟ್ರೆಂಡಿಯಾಗಿವೆ. ಹೌದು, ಇದೀಗ ಬ್ಲ್ಯೂ ಡೆನಿಮ್‌ ಔಟ್‌ಫಿಟ್‌ಗಳ ಜಾಗವನ್ನು ಬ್ಲ್ಯಾಕ್‌ ಡೆನಿಮ್‌ ಕೋ ಆರ್ಡ್ ಸೆಟ್‌ಗಳು ಆಕ್ರಮಿಸಿಕೊಳ್ಳತೊಡಗಿದ್ದು, ಅದರಲ್ಲೂ ಹಾಲ್ಟರ್‌ ನೆಕ್‌ ಕ್ರಾಪ್‌ ಟಾಪ್‌, ಟ್ಯಾಂಕ್‌ ಟಾಪ್‌, ಟ್ಯೂಬ್‌ ಟಾಪ್‌ನಂತಹ ಕೋ ಆರ್ಡ್ ಪ್ಯಾಂಟ್‌ ಸೆಟ್‌ಗಳು ಪ್ರಚಲಿತದಲ್ಲಿವೆ.

New Fashion

ಚಿತ್ರ-ವಿಚಿತ್ರ ಬ್ಲ್ಯಾಕ್‌ ಕೋ ಆರ್ಡ್ ಸೆಟ್‌

“ಡೆನಿಮ್‌ನಲ್ಲಿ ಇದೀಗ ಕೇವಲ ಪ್ಯಾಂಟ್‌, ಟಾಪ್‌ ಅಥವಾ ಜಾಕೆಟ್‌ಗಳು ಮಾತ್ರ ಚಾಲ್ತಿಯಲ್ಲಿಲ್ಲ. ಈ ಸೀಸನ್‌ಗೆ ಹೊಂದುವಂತಹ ವೆರೈಟಿ ಕೋ ಆರ್ಡ್ ಸೆಟ್‌ಗಳು ಕಾಲಿಟ್ಟಿದ್ದು, ಅವುಗಳಲ್ಲೂ ಡಿಫರೆಂಟ್‌ ವಿನ್ಯಾಸದವು ಹಾಗೂ ಚಿತ್ರ-ವಿಚಿತ್ರ ಡಿಸೈನ್‌ನವು ಬಂದಿವೆ. ಜೆನ್‌ ಜಿ ಹುಡುಗಿಯರಿಗೆ ಇಷ್ಟವಾಗುವಂತಹ ರಾಕಿಂಗ್‌ ಜಿಪ್ಪರ್‌ ಸ್ಟೈಲ್‌ನವು ಫ್ಯಾಷನ್‌ನಲ್ಲಿ ಲಗ್ಗೆ ಇಟ್ಟಿವೆ. ಅಷ್ಟೇಕೆ? ಇವುಗಳಲ್ಲಿ ಇದೀಗ ಕೋ ಆರ್ಡ್ ಸೆಟ್‌ಗಳು ಬ್ಲ್ಯಾಕ್‌ ಶೇಡ್‌ನಲ್ಲಿ ಬರುತ್ತಿರುವುದು ಡೆನಿಮ್‌ ಪ್ರೇಮಿಗಳಿಗೆ ಡಿಫರೆಂಟ್‌ ಇಮೇಜ್‌ ನೀಡುತ್ತಿವೆ. ಇದೇ ಕಾರಣದಿಂದಾಗಿ ಹೊಸ ಲುಕ್‌ ಬಯಸುವ ರಾಕಿಂಗ್‌ ಹುಡುಗಿಯರು ಇವುಗಳನ್ನು ಆಯ್ಕೆ ಮಾಡತೊಡಗಿದ್ದಾರೆ.

New Fashion

ಟ್ರೆಂಡಿಯಾಗಿರುವ ಬ್ಲ್ಯಾಕ್‌ ಡೆನಿಮ್‌ ಕೋ ಆರ್ಡ್ ಸೆಟ್‌ ಡಿಸೈನ್ಸ್

ಬ್ಲ್ಯಾಕ್‌ ಡೆನಿಮ್‌ ಫ್ಯಾಬ್ರಿಕ್‌ನ ಕೋ ಆರ್ಡ್ ಸೆಟ್‌ಗಳು ಸಾಮಾನ್ಯ ಡಿಸೈನ್‌ನಲ್ಲಿ ಅಲ್ಲ, ಕಂಪ್ಲೀಟ್‌ ವಿಭಿನ್ನ ವಿನ್ಯಾಸದಲ್ಲಿ ದೊರೆಯುತ್ತಿವೆ. ಉದಾಹರಣೆಗೆ, ಜಿಪ್ಪರ್‌ ಲೈನ್‌ ಇರುವಂತಹ ಕೋ ಆರ್ಡ್ ಸೆಟ್‌ಗಳು, ಜಿಪ್ಪರ್‌ ಲೈನ್‌ ಇರುವಂತಹ ನೆಕ್‌ಲೈನ್‌ ಇರುವಂತಹ ಹಾಲ್ಟರ್‌ನೆಕ್‌ನಂತವು, ಗೋಥಿಕ್‌ ಸ್ಟೈಲ್‌ನವು, ಟ್ಯೂಬ್‌ ವಿನ್ಯಾಸದಂತೆ ಕಾಣುವ ಜಿಪ್ಪರ್‌ ಟಾಪ್‌ಗಳನ್ನು ಹೊಂದಿರುವಂತವು, ಟ್ಯಾಂಕ್‌ ಟಾಪ್‌ನಂತೆ ಕಂಡರೂ ಅದರ ಮೇಲೊಂದು ಲೇಯರ್‌ ಲುಕ್‌ನಂತೆ ಕಾಣುವಂತಹ ಡಿಸೈನ್‌ ಇರುವಂತವು ಪ್ಯಾಂಟ್‌ಗೆ ಹೊಂದಿಕೊಂಡಂತಹ ಕೋ ಆರ್ಡ್ ಫ್ಯಾಷನ್‌ನಲ್ಲಿ ಬಂದಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

New Fashion

ಬ್ಲ್ಯಾಕ್‌ ಡೆನಿಮ್‌ ಜಿಪ್ಪರ್‌ ಕೋ ಆರ್ಡ್ ಸೆಟ್‌ ಸ್ಟೈಲಿಂಗ್‌ ಹೀಗೆ

  • ಇದು ಅಲ್ಟ್ರಾ ಮಾಡರ್ನ್‌ ಹುಡುಗಿಯರಿಗೆ ಪರ್ಫೆಕ್ಟ್ ಔಟ್‌ಫಿಟ್‌.
  • ಹೆಚ್ಚು ಆಕ್ಸೆಸರೀಸ್‌ ಧರಿಸುವ ಅಗತ್ಯವಿಲ್ಲ!
  • ಹೈ ಪೋನಿಟೈಲ್‌ ಅಥವಾ ಫ್ರೀ ಹೇರ್‌ಸ್ಟೈಲ್‌ ಈ ಔಟ್‌ಫಿಟ್‌ಗೆ ಸಖತ್‌ ಮ್ಯಾಚ್‌ ಆಗುತ್ತದೆ.
  • ಕತ್ತಿಗೆ ಸಿಂಪಲ್‌ ನೆಕ್‌ಚೈನ್‌ ಧರಿಸಿದರೇ ಸಾಕು.
  • ಮೇಕಪ್‌ ಸಿಂಪಲ್‌ ಆಗಿರುವುದು ಅಗತ್ಯ.
  • ಫಿಟ್ಟಿಂಗ್‌ ಇರುವಂತವು ಆಕರ್ಷಕವಾಗಿ ಕಾಣಿಸುತ್ತವೆ.
  • ಫ್ಯಾಬ್ರಿಕ್‌ ಲೈಟ್‌ವೈಟ್‌ ಇರುವಂತವನ್ನು ಖರೀದಿಸಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Star Saree Fashion: ರೇಷ್ಮೆ ಸೀರೆಯಲ್ಲಿ ನಟಿ ಕೀರ್ತಿ ಸುರೇಶ್‌ರಂತೆ ಗ್ಲಾಮರಸ್‌ ಆಗಿ ಕಾಣಿಸಬೇಕೆ? 5 ಟಿಪ್ಸ್ ಫಾಲೋ ಮಾಡಿ!

Continue Reading

ಫ್ಯಾಷನ್

Star Saree Fashion: ರೇಷ್ಮೆ ಸೀರೆಯಲ್ಲಿ ನಟಿ ಕೀರ್ತಿ ಸುರೇಶ್‌ರಂತೆ ಗ್ಲಾಮರಸ್‌ ಆಗಿ ಕಾಣಿಸಬೇಕೆ? 5 ಟಿಪ್ಸ್ ಫಾಲೋ ಮಾಡಿ!

ತಮ್ಮ ಸೋದರ ಸಂಬಂಧಿಯ ಮದುವೆಯಲ್ಲಿ ರೇಷ್ಮೆಯ ಸೀರೆಯುಟ್ಟು ಗ್ಲಾಮರಸ್‌ ಆಗಿ ಕಾಣಿಸಿಕೊಂಡ (Star Saree Fashion) ಮಹಾ ನಟಿ ಕೀರ್ತಿ ಸುರೇಶ್‌ರಂತೆ ಅಂದವಾಗಿ ಕಾಣಿಸಿಕೊಳ್ಳಲು ಯಾರಿಗೆ ಇಷ್ಟವಿಲ್ಲ ಹೇಳಿ! ಇವರಂತೆ ಆಕರ್ಷಕವಾಗಿ ಕಾಣಿಸಲು ಇಲ್ಲಿದೆ 5 ಸಿಂಪಲ್‌ ಟಿಪ್ಸ್. ಟ್ರೈ ಮಾಡಿ ನೋಡಿ ಎನ್ನುತ್ತಾರೆ ಬ್ಯೂಟಿ ಎಕ್ಸ್ಪರ್ಟ್ಸ್.

VISTARANEWS.COM


on

Star Saree Fashion
ಚಿತ್ರಗಳು: ಕೀರ್ತಿ ಸುರೇಶ್, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ʼಮಹಾ ನಟಿʼ ಕೀರ್ತಿ ಸುರೇಶ್‌ರಂತೆ ರೇಷ್ಮೆ ಸೀರೆಯಲ್ಲೂ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳಲು ಯಾರಿಗೆ ಇಷ್ಟವಿಲ್ಲ, ಹೇಳಿ ನೋಡೋಣ! ಪ್ರತಿ ಮಹಿಳೆಗೂ ತಾನು ಕೂಡ ತಾನು ರೇಷ್ಮೆ ಸೀರೆಯಲ್ಲೂ ಅಂದವಾಗಿ, ಅದರಲ್ಲೂ ಗ್ಲಾಮರಸ್‌ ಆಗಿ, ಸೆಲೆಬ್ರೆಟಿ ಲುಕ್‌ನಲ್ಲಿ ಕಾಣಿಸಬೇಕೆಂಬ ಬಯಕೆ ಇದ್ದೇ ಇರುತ್ತದೆ. ಇದಕ್ಕಾಗಿ ಹೆಚ್ಚೆನೂ ಮಾಡಬೇಕಾಗಿಲ್ಲ! ಸೆಲೆಬ್ರೆಟಿಗಳು ಪಾಲಿಸುವ ಸೀರೆ ಸೆಲೆಕ್ಷನ್‌ನ ಐಡಿಯಾ, ಸ್ಟೈಲಿಂಗ್‌ ಟಿಪ್ಸ್ ಹಾಗೂ ಡ್ರೇಪಿಂಗ್‌ ಟಿಪ್ಸ್ ಫಾಲೋ ಮಾಡಿದರೇ ಸಾಕು, ಅವರಂತೆಯೇ ನೀವೂ ಕೂಡ ಗ್ಲಾಮರಸ್‌ ಆಗಿ ಕಾಣಿಸಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್‌ ಮಂಗಲಾ. ಈ ಕುರಿತಂತೆ ಒಂದೈದು ಸಿಂಪಲ್‌ (Star Saree Fashion) ಐಡಿಯಾಗಳನ್ನು ನೀಡಿದ್ದಾರೆ.

Star Saree Fashion

ವೆಡ್ಡಿಂಗ್‌ಗೆ ರೇಷ್ಮೆ ಸೀರೆಯ ಆಯ್ಕೆ ಹೀಗಿರಲಿ

ರೇಷ್ಮೆ ಸೀರೆಗಳಲ್ಲಿ ಕೆಲವು ಸಾಫ್ಟ್ ಫ್ಯಾಬ್ರಿಕ್‌ನವು ದೊರೆಯುತ್ತವೆ. ಇವನ್ನು ಉಟ್ಟಾಗ ದೇಹ ಪ್ಲಂಪಿಯಾಗಿ ಕಾಣಿಸುವುದಿಲ್ಲ. ಅಂತಹ ಫ್ಯಾಬ್ರಿಕ್‌ನ ಸೀರೆಗಳನ್ನೇ ಆಯ್ಕೆ ಮಾಡಿ, ಉಡಿ.

ಪಾಸ್ಟೆಲ್‌ ಶೇಡ್‌ ಹಾಗೂ ಪ್ರಿಂಟ್ಸ್ ಸೀರೆ ಆಯ್ಕೆ

ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಪೀಚ್‌, ಪಿಂಕ್‌, ಪಿಸ್ತಾದಂತಹ ಪಾಸ್ಟೆಲ್‌ ಶೇಡ್‌ ಇರುವಂತಹ ಅಥವಾ ಲೈಟ್‌ ಪ್ರಿಂಟ್ಸ್ ಇರುವಂತಹ ರೇಷ್ಮೆ ಸೀರೆಗಳನ್ನು ಉಡಿ. ಇದು ಟ್ರೆಂಡಿಯಾಗಿ ಕಾಣಿಸುವುರೊಂದಿಗೆ ಯಂಗ್‌ ಲುಕ್‌ ನೀಡುತ್ತದೆ.

Star Saree Fashion

ಗ್ಲಾಮರಸ್‌ ಲುಕ್‌ಗಾಗಿ ಡಿಸೈನರ್‌ ಬ್ಲೌಸ್

ರೇಷ್ಮೆ ಸೀರೆಗೂ ಗ್ಲಾಮರಸ್‌ ಲುಕ್‌ ಬೇಕಾದಲ್ಲಿ, ಹಾಲ್ಟರ್‌ ನೆಕ್‌, ಸ್ಲೀವ್‌ಲೆಸ್‌ ಅಥವಾ ಮೆಗಾ ಸ್ಲೀವ್‌, ಬಿಕಿನಿ ಬ್ಲೌಸ್‌ ಡಿಸೈನ್‌ನವನ್ನು ಆಯ್ಕೆ ಮಾಡಬಹುದು. ಆಗ ರೇಷ್ಮೆ ಸೀರೆಗೂ ಗ್ಲಾಮರಸ್‌ ಟಚ್‌ ಸಿಗುತ್ತದೆ.

ಸೀರೆ ಡ್ರೇಪಿಂಗ್‌ ಹೀಗಿರಲಿ

ಮದುವೆಯಲ್ಲಿ ಉಡುವ ರೇಷ್ಮೆ ಸೀರೆಯ ಡ್ರೇಪಿಂಗ್‌ ಪರ್ಫೆಕ್ಟ್ ಆಗಿರಬೇಕು. ಇದಕ್ಕಾಗಿ ಮೊದಲೇ ಸೀರೆಯ ನೆರಿಗೆ ಹಾಗೂ ಸೆರಗನ್ನು ರೆಡಿ ಮಾಡಿಟ್ಟುಕೊಳ್ಳಬಹುದು. ಫಿಟ್‌ ಆಗಿ ಕೂರುವಂತೆ ಸೀರೆಯನ್ನು ಉಡುವುದು ಒಂದು ಕಲೆ. ಸರಿಯಾದ ಡ್ರೇಪಿಂಗ್‌ ಕೂಡ ನೋಡಲು ಆಕರ್ಷಕವಾಗಿ ಬಿಂಬಿಸುತ್ತದೆ.

Star Saree Fashion

ಸೆಲೆಬ್ರೆಟಿ ಮೇಕೋವರ್‌

ಸೆಲೆಬ್ರೆಟಿ ಲುಕ್‌ಗಾಗಿ ಆದಷ್ಟೂ ಟ್ರೆಂಡಿಯಾಗಿರುವ ಸ್ಟೇಟ್‌ಮೆಂಟ್‌ ಜ್ಯುವೆಲರಿಗಳನ್ನು ಧರಿಸಿ. ಹೇರ್‌ಸ್ಟೈಲ್‌ ಮೇಕಪ್‌ಗೆ ಮ್ಯಾಚ್‌ ಆಗುವಂತಿರಲಿ. ತುಟಿಗಳ ವರ್ಣ ತಿಳಿಯಾಗಿರಲಿ. ಮ್ಯಾಚಿಂಗ್‌ ಫುಟ್‌ವೇರ್‌ ಹಾಗೂ ಆಕ್ಸೆಸರೀಸ್‌ ಕೂಡ ಅಂದ ಹೆಚ್ಚಿಸಬಲ್ಲವು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Celebrity Fashion: ಬ್ಲೇಜರ್‌ನಲ್ಲಿ ನಟ ಸುದೀಪ್‌ ಪುತ್ರಿ ಸಾನ್ವಿ ಕ್ಲಾಸಿ ಲುಕ್‌!

Continue Reading

ಫ್ಯಾಷನ್

Celebrity Ethnic Fashion: ನಟ ಧನುಷ್‌ ಗೌಡರ ಗ್ರ್ಯಾಂಡ್‌ ಎಥ್ನಿಕ್‌ ಜಾಕೆಟ್‌ ವಿಶೇಷತೆ ಏನು?

ನಟ ಧನುಷ್‌ ಗೌಡ ಅವರು ಧರಿಸಿದ್ದ ಮಲ್ಟಿ ಎಂಬ್ರಾಯ್ಡರಿ ಎಥ್ನಿಕ್‌ ಜಾಕೆಟ್‌ (Celebrity Ethnic Fashion) ನೋಡುಗರನ್ನು ಸೆಳೆದಿದೆ. ನಟ ಧನುಷ್‌ ಗೌಡ ಅವರು ಧರಿಸಿರುವ ಈ ಎಥ್ನಿಕ್‌ ಜಾಕೆಟ್‌ ನೆಹ್ರೂ ಜಾಕೆಟ್‌ ಡಿಸೈನ್‌ ಹೊಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಗ್ರ್ಯಾಂಡ್‌ ಡಿಸೈನ್‌ ಒಳಗೊಂಡಿದೆ. ಮಲ್ಟಿ ಕಲರ್‌ ಸಿಲ್ಕ್‌ ಮಾತ್ರವಲ್ಲದೇ ನಾನಾ ಬಗೆಯ ಎಂಬ್ರಾಯ್ಡರಿ ಥ್ರೆಡ್‌ನಲ್ಲಿ ವಿನ್ಯಾಸಗೊಂಡಿದೆ. ವೆಡ್ಡಿಂಗ್‌ ಗ್ರ್ಯಾಂಡ್‌ ಔಟ್‌ಫಿಟ್‌ ಲಿಸ್ಟ್‌ಗೆ ಸೇರಿರುವ ಈ ಜಾಕೆಟ್‌ ಇತರ ವಿಶೇಷತೆ ಏನೇನು? ಇದರ ಸ್ಟೈಲಿಂಗ್‌ ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Celebrity Ethnic Fashion
ಚಿತ್ರಗಳು: ಧನುಷ್‌ ಗೌಡ, ಕಿರುತೆರೆ ನಟ, ಫೋಟೋಗ್ರಾಫಿ : ಸುಜಯ್‌ ನಾಯ್ಡು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟ ಧನುಷ್‌ ಗೌಡ ಧರಿಸಿದ್ದ ಗ್ರ್ಯಾಂಡ್‌ ಎಂಬ್ರಾಯ್ಡರಿ ಜಾಕೆಟ್‌ (Celebrity Ethnic Fashion) ನೋಡುಗರನ್ನು ಸೆಳೆದಿದೆ. ಧನುಷ್‌ ಗೌಡ ಅವರ ವೆಡ್ಡಿಂಗ್‌ ಗ್ರ್ಯಾಂಡ್‌ ಔಟ್‌ಫಿಟ್‌ ಲಿಸ್ಟ್‌ನಲ್ಲಿದ್ದ ಈ ಗ್ರ್ಯಾಂಡ್‌ ಎಥ್ನಿಕ್‌ ವೇಸ್ಟ್ಕೋಟ್‌ ಅಥವಾ ನೆಹ್ರೂ ಜಾಕೆಟ್‌ ಫ್ಯಾಷನ್‌ ಪ್ರಿಯ ಯುವಕರನ್ನು ಆಕರ್ಷಿಸಿದೆ.

Celebrity Ethnic Fashion

ಧನುಷ್‌ ಗೌಡ ಫ್ಯಾಷನ್‌ ಅಭಿರುಚಿ

“ನಟ ಧನುಷ್‌ ಗೌಡ ಆಗಾಗ ಒಂದಲ್ಲ ಒಂದು ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡು ತಮ್ಮ ಫಾಲೋವರ್ಸ್‌ಗಳನ್ನು ಸೆಳೆಯುತ್ತಲೇ ಇರುತ್ತಾರೆ. ಅದು ವೆಸ್ಟರ್ನ್ ಆಗಬಹುದು ಅಥವಾ ಇಂಡಿಯನ್‌ ಲುಕ್‌ ಆಗಬಹುದು. ಇನ್ನು ಅವರ ವೆಡ್ಡಿಂಗ್‌ ಔಟ್‌ಫಿಟ್‌ಗಳಲ್ಲಂತೂ ಆಕರ್ಷಕವಾಗಿಯೇ ಕಾಣಿಸಿಕೊಂಡಿದ್ದರು. ಪ್ರತಿಯೊಂದು ಔಟ್‌ಫಿಟ್‌ ಆಯ್ಕೆಯಲ್ಲಿ ಅವರ ಫ್ಯಾಷನ್‌ ಸೆನ್ಸ್ ಎದ್ದು ಕಾಣಿಸುತ್ತಿತ್ತು. ಇದು ಅವರ ಅಭಿರುಚಿಯನ್ನು ತೋರ್ಪಡಿಸಿದೆ” ಎಂದು ಹೇಳುವ ಫ್ಯಾಷನ್‌ ವಿಮರ್ಶಕರ ಪ್ರಕಾರ, ನಟನಾದವನು ತಾನು ಧರಿಸುವ ಔಟ್‌ಫಿಟ್‌ಗಳಿಂದಲೇ ತಂತಮ್ಮ ಅಭಿರುಚಿಯನ್ನು ವ್ಯಕ್ತಪಡಿಸಬಹುದಂತೆ.

Celebrity Ethnic Fashion

ಸೆಲೆಬ್ರೆಟಿ ಡಿಸೈನರ್‌ ಚಂದನ್‌ ಗೌಡ ಜಾದೂ

ನಟ ಧನುಷ್‌ ಗೌಡ ಅವರು ಧರಿಸಿರುವ ಈ ಎಥ್ನಿಕ್‌ ಜಾಕೆಟ್‌ ನೆಹ್ರೂ ಜಾಕೆಟ್‌ ಡಿಸೈನ್‌ ಹೊಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಗ್ರ್ಯಾಂಡ್‌ ಡಿಸೈನ್‌ ಒಳಗೊಂಡಿದೆ. ಮಲ್ಟಿ ಕಲರ್‌ ಸಿಲ್ಕ್‌ ಮಾತ್ರವಲ್ಲದೇ ನಾನಾ ಬಗೆಯ ಎಂಬ್ರಾಯ್ಡರಿ ಥ್ರೆಡ್‌ನಲ್ಲಿ ವಿನ್ಯಾಸಗೊಂಡಿದೆ. ಒಂದೇ ಜಾಕೆಟ್‌ನಲ್ಲಿ ಸಾಕಷ್ಟು ಹ್ಯಾಂಡ್‌ವರ್ಕ್ ಎಂಬ್ರಾಯ್ಡರಿ ಬಳಸಿರುವುದರಿಂದ ಅತ್ಯಾಕರ್ಷಕವಾಗಿ ಕಾಣಿಸುತ್ತಿದೆ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್‌ ಚಂದನ್‌ ಗೌಡ. ಅವರು ಹೇಳುವಂತೆ, ಇದು ವೆಡ್ಡಿಂಗ್‌ಗೆ ಹೇಳಿಮಾಡಿಸಿದ ಔಟ್‌ಫಿಟ್‌ಗಳಲ್ಲೊಂದು ಎನ್ನುತ್ತಾರೆ.

Celebrity Ethnic Fashion

ಗ್ರ್ಯಾಂಡ್‌ ಜಾಕೆಟ್ ಸ್ಟೈಲಿಂಗ್‌ ಹೇಗೆ?

ಯುವಕರು ಗ್ರ್ಯಾಂಡ್‌ ಜಾಕೆಟ್‌ನಲ್ಲಿ ನಟ ಧನುಷ್‌ಗೌಡರಂತೆ ಕಾಣಿಸಲು ಒಂದಿಷ್ಟು ಫ್ಯಾಷನ್‌ ರೂಲ್ಸ್ ಫಾಲೋ ಮಾಡಿದರೇ ಸಾಕು. ಆಗ, ತಂತಾನೆ ಪರ್ಫೆಕ್ಟ್ ಎಥ್ನಿಕ್‌ ಲುಕ್‌ ನಿಮ್ಮದಾಗುವುದು. ಇದಕ್ಕಾಗಿ ಆದಷ್ಟೂ ಗ್ರ್ಯಾಂಡ್‌ ಎಂಬ್ರಾಯ್ಡರಿ ಇರುವಂತಹ ಜಾಕೆಟ್‌ಗಳನ್ನೇ ಚೂಸ್‌ ಮಾಡಬೇಕು. ಇವಕ್ಕೆ ಸಾದಾ ಸಿಲ್ಕ್‌ ಅಥವಾ ಕಾಟನ್‌ ಮಿಕ್ಸ್ ಸಿಲ್ಕ್‌ ಕುರ್ತಾ ಮ್ಯಾಚ್‌ ಆಗುತ್ತವೆ. ವೈಬ್ರೆಂಟ್‌ ಶೇಡ್‌ನವು ಕೂಡ ನಿಮ್ಮನ್ನು ಹೈಲೈಟ್‌ ಮಾಡಬಲ್ಲವು ಎನ್ನುತ್ತಾರೆ ಡಿಸೈನರ್‌ ಹಾಗೂ ಸ್ಟೈಲಿಸ್ಟ್ ಚಂದನ್‌ ಗೌಡ.

ಇದನ್ನೂ ಓದಿ: Celebrity Fashion: ಬ್ಲೇಜರ್‌ನಲ್ಲಿ ನಟ ಸುದೀಪ್‌ ಪುತ್ರಿ ಸಾನ್ವಿ ಕ್ಲಾಸಿ ಲುಕ್‌!

ಯುವಕರ ಆಯ್ಕೆ ಹೀಗಿರಲಿ

  • ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಎಥ್ನಿಕ್‌ ಜಾಕೆಟ್‌ಗಳ ಆಯ್ಕೆ ಮಾಡಿ.
  • ಸ್ಕಿನ್‌ಟೋನ್‌ಗೆ ತಕ್ಕಂತೆ ಕಲರ್‌ ಶೇಡ್‌ ಸೆಲೆಕ್ಟ್ ಮಾಡಿ.
  • ಟ್ರೆಂಡ್‌ನಲ್ಲಿರುವ ಡಿಸೈನ್‌ನವನ್ನು ಚೂಸ್‌ ಮಾಡುವುದು ಉತ್ತಮ.
  • ವೆಡ್ಡಿಂಗ್‌ ಆದಲ್ಲಿ ಆದಷ್ಟೂಸಂಗಾತಿಯ ಔಟ್‌ಫಿಟ್‌ಗೆ ಮ್ಯಾಚ್‌ ಆಗುವುದೇ ಎಂಬುದನ್ನು ಗಮನಿಸಿ.
  • ಯಾವ ಸಂದರ್ಭಕ್ಕೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಂಡು ಡಿಸೈನ್‌ ಆಯ್ಕೆ ಮಾಡಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Celebrity Fashion: ಬ್ಲೇಜರ್‌ನಲ್ಲಿ ನಟ ಸುದೀಪ್‌ ಪುತ್ರಿ ಸಾನ್ವಿ ಕ್ಲಾಸಿ ಲುಕ್‌!

Continue Reading
Advertisement
Petrol Diesel Price
ಕರ್ನಾಟಕ57 seconds ago

Petrol Diesel Price: ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ ಎಂದ ಸಿಎಂ

Amit Shah
ದೇಶ2 mins ago

Amit Shah: ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು; ಖಡಕ್‌ ಆದೇಶ ಕೊಟ್ಟ ಅಮಿತ್‌ ಶಾ

Karnataka Weather Forecast
ಮಳೆ41 mins ago

Karnataka weather : ಭಾನುವಾರ ರಾಯಚೂರಿನಲ್ಲಿ ಅಬ್ಬರಿಸಿದ ವರುಣ; ನಾಳೆಗೂ ಇದೆ ಮಳೆ ಅಲರ್ಟ್‌

Actor Darshan
ಪ್ರಮುಖ ಸುದ್ದಿ42 mins ago

Actor Darshan: ರೇಣುಕಾಸ್ವಾಮಿ ಕುಟುಂಬಕ್ಕಷ್ಟೇ ಅಲ್ಲ, ಚಿತ್ರರಂಗಕ್ಕೂ ನ್ಯಾಯ ಸಿಗಬೇಕು: ಕಿಚ್ಚ ಸುದೀಪ್‌

Lok Sabha Speaker
ದೇಶ56 mins ago

Lok Sabha Speaker: ಸ್ಪೀಕರ್‌ ಆಯ್ಕೆ ವಿಚಾರದಲ್ಲಿ ಟಿಡಿಪಿಗೆ ಬೆಂಬಲ ಎಂದ ಇಂಡಿಯಾ ಒಕ್ಕೂಟ; ಯಾರಾಗ್ತಾರೆ ಸ್ಪೀಕರ್?

Renukaswamy murder case The location of the accused is complete
ಸಿನಿಮಾ1 hour ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Petrol Diesel Price
ಕರ್ನಾಟಕ2 hours ago

Petrol Diesel Price: ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ತೈಲ ದರ ಏರಿಸಿದ ಕಾಂಗ್ರೆಸ್ ಸರ್ಕಾರ: ಆರ್‌. ಅಶೋಕ್‌ ಕಿಡಿ

Renuka swamy murder
ಚಿತ್ರದುರ್ಗ2 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Road Accident
ಕರ್ನಾಟಕ2 hours ago

Road Accident: ಸುಂಟಿಕೊಪ್ಪ‌ ಬಳಿ ಖಾಸಗಿ ಬಸ್- ಸ್ಕೂಟರ್ ಡಿಕ್ಕಿಯಾಗಿ ಸವಾರ ಸಾವು

Kannada New Movie Chowkidar pruthvi ambaar
ಸಿನಿಮಾ3 hours ago

Kannada New Movie: ಪೃಥ್ವಿ ಅಂಬಾರ್ ಈಗ ‘ಚೌಕಿದಾರ್’: ರಥಾವರ ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಹೊಸ ಹೆಜ್ಜೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renukaswamy murder case The location of the accused is complete
ಸಿನಿಮಾ1 hour ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ7 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 day ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ಟ್ರೆಂಡಿಂಗ್‌