Monsoon Nail Art: ನೇಲ್‌ ಆರ್ಟ್‌ಗೂ ಲಗ್ಗೆ ಇಟ್ಟ ಮಾನ್ಸೂನ್‌ ಚಿತ್ತಾರ! - Vistara News

ಫ್ಯಾಷನ್

Monsoon Nail Art: ನೇಲ್‌ ಆರ್ಟ್‌ಗೂ ಲಗ್ಗೆ ಇಟ್ಟ ಮಾನ್ಸೂನ್‌ ಚಿತ್ತಾರ!

ಮಾನ್ಸೂನ್‌ ಸೀಸನ್‌ಗೆ ತಕ್ಕಂತೆ ಇದೀಗ ನೇಲ್‌ ಆರ್ಟ್‌ನಲ್ಲೂ (Monsoon Nail Art) ಮಳೆಗಾಲದ ಚಿತ್ರಣ ಮೂಡಿದೆ. ಮೋಡ, ಕೊಡೆ, ಮಳೆಹನಿ ಸೇರಿದಂತೆ ನಾನಾ ಬಗೆಯ ಚಿತ್ತಾರಗಳು ಟ್ರೆಂಡಿಯಾಗಿವೆ. ಈ ಬಗ್ಗೆ ನೇಲ್‌ ಆರ್ಟ್ ಡಿಸೈನರ್ಸ್‌ ಒಂದಿಷ್ಟು ಮಾಹಿತಿ ನೀಡಿದ್ದಾರೆ.

VISTARANEWS.COM


on

Monsoon Nail art
ಚಿತ್ರಕೃಪೆ : ಇನ್‌ಸ್ಟಾಗ್ರಾಂ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಇದೀಗ ನೇಲ್‌ ಆರ್ಟ್‌ಗೂ ಮಾನ್ಸೂನ್‌ ಚಿತ್ತಾರ ಲಗ್ಗೆ ಇಟ್ಟಿದೆ. ಮಳೆಗಾಲವನ್ನು ಬಿಂಬಿಸುವಂತಹ ನಾನಾ ಬಗೆಯ ಚಿತ್ತಾರಗಳು (Monsoon Nail Art) ಹುಡುಗಿಯರ ಉಗುರುಗಳ ಮೇಲೆ ರಾರಾಜಿಸುತ್ತಿವೆ. ಮಳೆ ಹನಿ, ಮೋಡದ ಹನಿ, ಬಗೆಬಗೆಯ ಛತ್ರಿಗಳ ಚಿತ್ರಗಳು ಸೇರಿದಂತೆ ನಾನಾ ಶೈಲಿಯ ಮಳೆ ಕಾನ್ಸೆಪ್ಟ್‌ವನ್ನೊಳಗೊಂಡ ಮಾನ್ಸೂನ್‌ ನೇಲ್‌ ಆರ್ಟ್ ಡಿಸೈನ್ಸ್‌ ಇದೀಗ ಫ್ಯಾಷನ್‌ ಪ್ರಿಯರನ್ನು ಸೆಳೆದಿವೆ.

Monsoon Nail art 2023

ಮಾನ್ಸೂನ್‌ ಚಿತ್ತಾರದ ಟ್ರೆಂಡ್‌

ಪ್ರತಿವರ್ಷವೂ ಮಾನ್ಸೂನ್‌ ಚಿತ್ತಾರವನ್ನೊಳಗೊಂಡ ಥೀಮ್‌ ಅಥವಾ ಕಾನ್ಸೆಪ್ಟ್‌ ನೇಲ್‌ ಆರ್ಟ್‌ನಲ್ಲಿ ಸೇರುತ್ತದೆ. ಕೆಲವೊಮ್ಮೆ ಕಸ್ಟಮೈಸ್ಡ್‌ ನೇಲ್‌ ಆರ್ಟ್ ಕೂಡ ಮಾಡಲಾಗುತ್ತದೆ. ಅದರಲ್ಲೂ ಕಾಲೇಜು ಹುಡುಗಿಯರು ಅತಿ ಹೆಚ್ಚಾಗಿ ಥೀಮ್‌ ಹಾಗೂ ಸೀಸನ್‌ವೈಸ್‌ ನೇಲ್‌ ಆರ್ಟ್ ಬಯಸುತ್ತಾರೆ. ಅವರ ಆಯ್ಕೆಗೆ ತಕ್ಕಂತೆ ಡಿಸೈನ್‌ ಮಾಡಲಾಗುತ್ತದೆ ಎನ್ನುತ್ತಾರೆ ನೇಲ್‌ ಆರ್ಟ್ ಡಿಸೈನರ್‌ ಜಿನತ್‌. ಅವರ ಪ್ರಕಾರ, ಮಾನ್ಸೂನ್‌ ನೇಲ್‌ ಆರ್ಟ್ ಎಂದಾಕ್ಷಣಾ ಒಂದೇ ಬಗೆಯದ್ದಾಗಿರುವುದಿಲ್ಲ! ಮಳೆಗಾಲದ ಸಿಂಬಲ್‌ ಹೊಂದಿರುವಂತದ್ದು ಯಾವುದಾದರೂ ಆಗಿರಬಹುದು. ಉದಾಹರಣೆಗೆ., ಸಿಂಪಲ್‌ ಆಗಿ ಪೋಲ್ಕಾ ಡಾಟ್ಸ್‌ನಂತೆ ಕಾಣುವ ಮಳೆಹನಿಗಳ ನೇಲ್‌ ಆರ್ಟ್ ಅಥವಾ ಮೋಡದಿಂದ ಸುರಿಯುತ್ತಿರುವ ಹನಿಗಳು. ಹೀಗೆ ಅವರವರ ಕ್ರಿಯೇಟಿವಿಟಿಗೆ ತಕ್ಕಂತೆ ಇವು ಬದಲಾಗುತ್ತವೆ ಎನ್ನುತ್ತಾರೆ.

Monsoon Nail art design

ಮನೆಯಲ್ಲೂ ಮಾನ್ಸೂನ್‌ ನೇಲ್‌ ಆರ್ಟ್ ಮಾಡಿ, ನೋಡಿ

ಹೆಚ್ಚು ಖರ್ಚಿಲ್ಲದೆ ಮನೆಯಲ್ಲೂ ನೀವೇ ನೇಲ್‌ ಆರ್ಟ್ ಮಾಡಿಕೊಳ್ಳಬಹುದು. ಆದರೆ ನಿಮಗೆ ಆದಲ್ಲಿ, ಒಂದು ಕೈಗಳ ಉಗುರುಗಳಿಗೆ ಚಿತ್ರಿಸಬಹುದು. ಮತ್ತೊಂದನ್ನು ಇತರರು ಚಿತ್ರಿಸಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಬಳಿ ನೇಲ್‌ ಆರ್ಟ್ ಕಿಟ್‌ ಇರುವುದು ಅಗತ್ಯ. ಇದಕ್ಕಾಗಿ ನಿಮ್ಮ ಬಳಿ ಕನಿಷ್ಠ ಪಕ್ಷ ಅಗತ್ಯವಿರುವ ಬಣ್ಣದ ನೇಲ್‌ ಪಾಲಿಶ್‌ಗಳು, ಕೋಟ್‌ ಪಾಲಿಶ್‌, ನಿಬ್‌ನಂತಿರುವ ಬ್ರಶ್ ಇರಬೇಕಾಗುತ್ತದೆ ಎನ್ನುತ್ತಾರೆ ನೇಲ್‌ ಡಿಸೈನರ್‌ ರಾಶಿ. ಈ ಬಗ್ಗೆ ಅವರು ಒಂದಿಷ್ಟು ಟಿಪ್ಸ್‌ ಕೂಡ ನೀಡಿದ್ದಾರೆ.

Monsoon Nail art new design
 • ಮೆನಿಕ್ಯೂರ್‌ ನಂತರ ನೇಲ್‌ ಆರ್ಟ್ ಮಾಡುವುದು ಉತ್ತಮ.
 • ಮಾನ್ಸೂನ್‌ ಚಿತ್ರಣಕ್ಕೆ ಹೊಂದುವಂತಹ ನೇಲ್‌ ಕಲರ್‌ ಸೆಲೆಕ್ಟ್‌ ಮಾಡಿ.
 • ಒಂದು ಕೋಟ್‌ ಹಾಕಿದ ನಂತರ ಮತ್ತೊಂದು ಡಿಸೈನ್‌ ಮಾಡುವ ಮೊದಲು ಕಲರ್‌ ಒಣಗಲು ಬಿಡಿ.
 • ಮೂರ್ನಾಲ್ಕು ಕೋಟ್‌ ಹಾಕುವುದಾದಲ್ಲಿ ಆದಷ್ಟೂ ತೆಳುವಾದ ಲೇಯರ್‌ಗಳನ್ನು ಹಚ್ಚಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Monsoon Fashion: ಮಾನ್ಸೂನ್‌ನಲ್ಲಿ ಟ್ರೆಂಡಿಯಾಗಿರುವ ಡೆನಿಮ್‌ ಪ್ಯಾಂಟ್‌ ಸೂಟ್‌ ಲೇಯರ್ಡ್ ಲುಕ್‌ ಟ್ರೈ ಮಾಡಿ ನೋಡಿ !

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

High Street Fashion Spider Earrings: ಯುವತಿಯರ ಹೈ ಸ್ಟ್ರೀಟ್‌ ಫ್ಯಾಷನ್‌ಗೆ ಸೇರಿದ ಸ್ಪೈಡರ್‌ ಇಯರಿಂಗ್ಸ್!

ಇದೀಗ ಹೈ ಸ್ಟ್ರೀಟ್‌ ಫ್ಯಾಷನ್‌ನಲ್ಲಿ, ಸ್ಪೈಡರ್‌ ಇಯರಿಂಗ್ಸ್ (High Street Fashion Spider Earrings) ಕಾಲಿಟ್ಟಿವೆ. ನೋಡಲು ವೈಲ್ಡ್ ಲುಕ್‌ ನೀಡುವ ಇವು ವೆಸ್ಟರ್ನ್ ಲುಕ್‌ಗೆ ಸಾಥ್‌ ನೀಡುತ್ತಿವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಧರಿಸುವುದು ಹೇಗೆ ಎಂಬುದರ ಬಗ್ಗೆ ಜ್ಯುವೆಲ್‌ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

High Street Fashion Spider Earrings
ಚಿತ್ರಗಳು: ಕೀರ್ತಿ ಕುಲ್ಹಾರಿ, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಿತ್ರ-ವಿಚಿತ್ರ ವಿನ್ಯಾಸದ ಸ್ಪೈಡರ್‌ ಇಯರಿಂಗ್ಸ್ (High Street Fashion Spider Earrings), ಸ್ಟಡ್ಸ್, ಹ್ಯಾಂಗಿಂಗ್ಸ್ ಹೈ ಫ್ಯಾಷನ್‌ಗೆ ಕಾಲಿಟ್ಟಿವೆ. ಹೌದು. ಇದೀಗ ಹೈ ಫ್ಯಾಷನ್‌ನ ಸ್ಟ್ರೀಟ್‌ ಫಂಕಿ ಸ್ಟೈಲ್‌ನಲ್ಲಿ ನಾನಾ ಬಗೆಯ ಸ್ಪೈಡರ್‌ ಜಂಕ್‌ ಫಂಕಿ ಇಯರಿಂಗ್ಸ್ ಎಂಟ್ರಿ ನೀಡಿವೆ. ನೋಡಲು ವೈಲ್ಡ್ ಲುಕ್‌ ನೀಡುವ ಇವು ವೆಸ್ಟರ್ನ್ ಲುಕ್‌ಗೆ ಸಾಥ್‌ ನೀಡುತ್ತಿವೆ.

A different image

ಡಿಫರೆಂಟ್‌ ಇಮೇಜ್‌

ನಾನಾ ಜಾತಿಯ ಜೇಡಗಳ ಚಿತ್ತಾರದಂತಿರುವ ಅಥವಾ ಆಕೃತಿಯಂತಿರುವ ವಿವಿಧ ಬಗೆಯ ಸ್ಪೈಡರ್‌ ಇಯರಿಂಗ್‌ಗಳು, ಈಗಾಗಲೇ ಆನ್‌ಲೈನ್‌ ಆಫ್‌ಲೈನ್‌ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಹೈ ಫ್ಯಾಷನ್‌ ಪ್ರಿಯ ಹೆಣ್ಣುಮಕ್ಕಳು, ಅದರಲ್ಲೂ ಜೆನ್‌ ಜಿ ಹುಡುಗಿಯರು, ಕಾಲೇಜು ಯುವತಿಯರು ಇವುಗಳನ್ನು ಆಯ್ಕೆ ಮಾಡತೊಡಗಿದ್ದಾರೆ. ಅಲ್ಟ್ರಾ ಮಾಡರ್ನ್ ಲುಕ್‌ಗಾಗಿ ಇವನ್ನು ಬಳಸತೊಡಗಿದ್ದಾರೆ. ಇನ್ನು, ಡಿಫರೆಂಟ್‌ ಲುಕ್‌ಗಾಗಿಯೂ ಸಾಕಷ್ಟು ಹುಡುಗಿಯರು ಧರಿಸತೊಡಗಿದ್ದಾರೆ. ತಮಗೆ ವಿಭಿನ್ನ ಲುಕ್‌ ಬೇಕು ಎನ್ನುವವರು ಕೂಡ ಇವನ್ನು ಧರಿಸತೊಡಗಿದ್ದಾರೆ. ವೆಸ್ಟರ್ನ್ ವೇರ್‌ನಲ್ಲಿ ಸದಾ ಕಾಣಿಸುವವರು ಇವನ್ನು ಹೆಚ್ಚಾಗಿ ಧರಿಸತೊಡಗಿದ್ದಾರೆ. ವಿಚಿತ್ರ ವಾಗಿ ಕಾಣುವ ಈ ಇಯರಿಂಗ್‌ಗಳು ಡಿಫರೆಂಟ್‌ ಇಮೇಜ್‌ ಬಯಸುವವರಿಗಾಗಿ ಮಾತ್ರ ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್‌ಗಳಾದ ರೀನಾ ಹಾಗೂ ಜೀನತ್‌. ಅವರ ಪ್ರಕಾರ, ಇದು ಎಥ್ನಿಕ್‌ ಲುಕ್‌ಗೆ ಮಾತ್ರ ನಾಟ್‌ ಓಕೆ ಎನ್ನುತ್ತಾರೆ.

Trendy spider earrings

ಟ್ರೆಂಡಿಯಾಗಿರುವ ಸ್ಪೈಡರ್‌ ಇಯರಿಂಗ್ಸ್

ಹಾಲೋ ಸ್ಪೈಡರ್‌ ಸ್ಟಡ್ಸ್, ಸ್ಪೈಡರ್‌ ಹ್ಯಾಂಗಿಂಗ್ಸ್, ಸ್ಪೈಡರ್‌ ಬಿಗ್‌ ಇಯರಿಂಗ್ಸ್, ಸ್ಟೇಟ್‌ಮೆಂಟ್‌ ಸ್ಪೈಡರ್‌ ಸ್ಟಡ್ಸ್, ಜೈಂಟ್‌ ಸ್ಪೈಡರ್‌ ಇಯರಿಂಗ್ಸ್, ಮಿನಿ ಕೂಲ್‌ ಸ್ಪೈಡರ್‌ ಒಲೆಗಳು, ಸಫೈರ್‌ ಸ್ಪೈಡರ್‌ ಇಯರಿಂಗ್ಸ್, ಸ್ಪೈಡರ್‌ ರಿಂಗ್ಸ್, ಬ್ಲ್ಯಾಕ್‌ ವಿಡೋ ಸ್ಪೈಡರ್‌ ಹ್ಯಾಂಗಿಂಗ್ಸ್, ಪಂಕ್‌ ಬ್ಲ್ಯಾಕ್‌ ಸ್ಪೈಡರ್‌ ಸೇರಿದಂತೆ ನಾನಾ ಡಿಸೈನ್‌ನವು ಆನ್‌ಲೈನ್‌ ಶಾಪ್‌ಗಳಲ್ಲಿ ಲಗ್ಗೆ ಇಟ್ಟಿವೆ.

ವಿಭಿನ್ನ ಲುಕ್‌ಗಾಗಿ ಸ್ಪೈಡರ್‌ ಬಿಗ್‌ ಇಯರಿಂಗ್ಸ್

“ಸ್ಪೈಡರ್‌ ಬಿಗ್‌ ಇಯರಿಂಗ್ಸ್ ವೆಸ್ಟರ್ನ್ ಉಡುಪಿಗೆ ಧರಿಸಿದಾಗ ವೈಲ್ಡ್ ಲುಕ್‌ ನೀಡುತ್ತವೆ. ಇವು ಮಾಡೆಲ್‌ ಲುಕ್‌ಗೆ ಸಾಥ್‌ ನೀಡುತ್ತವೆ. ನೋಡುಗರ ಗಮನ ಸೆಳೆಯುತ್ತವೆ. ವಿಭಿನ್ನವಾಗಿ ನಮ್ಮನ್ನು ಬಿಂಬಿಸುತ್ತವೆ” ಎನ್ನುತ್ತಾರೆ ಮಾಡೆಲ್‌ ಹಾಗೂ ನಟಿ ಕೀರ್ತಿ ಕುಲ್ಹಾರಿ.

4 tips for spider earrings lovers

ಸ್ಪೈಡರ್‌ ಇಯರಿಂಗ್ಸ್ ಪ್ರಿಯರಿಗೆ 4 ಟಿಪ್ಸ್

 • ಆನ್‌ಲೈನ್‌ನಲ್ಲಿ ಲೆಕ್ಕವಿಲ್ಲದಷ್ಟು ಡಿಸೈನ್‌ನವು ದೊರೆಯುತ್ತವೆ.
 • ಫಂಕಿ ಲುಕ್‌ಗೆ ಹೇಳಿ ಮಾಡಿಸಿದ ಕಿವಿಯೊಲೆಗಳಿವು.
 • ಯಾವುದೇ ಕಾರಣಕ್ಕೆ ಎಥ್ನಿಕ್‌ ಲುಕ್‌ಗೆ ಧರಿಸಬೇಡಿ.
 • ಮಾಡೆಲ್‌ ಫೋಟೋಶೂಟ್‌ಗೆ ಬೆಸ್ಟ್ ಇಯರಿಂಗ್ಸ್ ಎನ್ನಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Mysore Fashion Week 2024: ಮೈಸೂರು ಫ್ಯಾಷನ್‌ ವೀಕ್‌ನಲ್ಲಿ ಜಯಂತಿ ಬಲ್ಲಾಳ್‌ ಎಥ್ನಿಕ್‌ ಡಿಸೈನರ್‌ವೇರ್ಸ್ ಅನಾವರಣ

ಈ ವರ್ಷದ ಮೊದಲ ಮೈಸೂರ್ ಫ್ಯಾಷನ್‌ ವೀಕ್‌ನಲ್ಲಿ (Mysore Fashion Week 2024) ನಾನಾ ಡಿಸೈನರ್‌ಗಳು ಭಾಗವಹಿಸಿದ್ದರು. ಇವರಲ್ಲಿ ಒಬ್ಬರಾದ ಸೆಲೆಬ್ರೆಟಿ ಡಿಸೈನರ್‌ ಜಯಂತಿ ಬಲ್ಲಾಳ್‌ ಅವರ ಎಕ್ಸ್‌ಕ್ಲ್ಯೂಸಿವ್‌ ಎಥ್ನಿಕ್‌ವೇರ್‌ ಹಾಗೂ ಸೀರೆಗಳ ಅನಾವರಣವಾಯಿತು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Mysore Fashion Week 2024
ಚಿತ್ರಗಳು: ರ‍್ಯಾಂಪ್‌ನಲ್ಲಿ ಸೆಲೆಬ್ರೆಟಿ ಡಿಸೈನರ್‌ ಜಯಂತಿ ಬಲ್ಲಾಳ್‌ ಡಿಸೈನರ್‌ವೇರ್ಸ್‌ ಅನಾವರಣದ ಚಿತ್ರಗಳು
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೌತ್‌ ಇಂಡಿಯಾದ ಅತಿ ದೊಡ್ಡ ಫ್ಯಾಷನ್‌ ವೀಕ್‌ ಎಂದೇ ಹೆಸರಾದ ಮೈಸೂರು ಫ್ಯಾಷನ್‌ ವೀಕ್ 2024 (Mysore Fashion Week 2024) ಯಶಸ್ವಿಯಾಗಿ ಜರುಗಿತು. ಸುಮಾರು 17ಕ್ಕೂ ಹೆಚ್ಚು ಡಿಸೈನರ್‌ಗಳು ಭಾಗವಹಿಸಿ, ತಂತಮ್ಮ ಎಕ್ಸ್‌ಕ್ಲೂಸೀವ್‌ ಡಿಸೈನರ್‌ವೇರ್‌ಗಳನ್ನು ಪ್ರದರ್ಶಿಸಿದರು. ಈ ಮಧ್ಯೆ, ಪ್ರತಿ ವರ್ಷದಂತೆ ಈ ವರ್ಷವೂ ಸೆಲೆಬ್ರೆಟಿ ಡಿಸೈನರ್‌ ಜಯಂತಿ ಬಲ್ಲಾಳ್‌, ತಮ್ಮ ಲೆಬೆಲ್‌ನಲ್ಲಿ ಸಿದ್ಧಗೊಂಡ ನಾನಾ ಎಥ್ನಿಕ್‌ ಡಿಸೈನರ್‌ವೇರ್‌ಗಳು, ಸೀರೆ ಹಾಗೂ ಬ್ಲೌಸ್‌ಗಳನ್ನು ರ‍್ಯಾಂಪ್‌ ಮೇಲೆ ಅನಾವರಣಗೊಳಿಸಿದರು.

Jayanthi Ballal Ramp Show

ಜಯಂತಿ ಬಲ್ಲಾಳ್‌ ರ‍್ಯಾಂಪ್‌ ಶೋ

ರೇಷ್ಮೆ ಫ್ಯಾಬ್ರಿಕ್‌ನಲ್ಲಿ ಸಿದ್ಧಗೊಂಡ ಡಿಸೈನರ್‌ವೇರ್‌ಗಳು, ಮೆನ್ಸ್ ಡಿಸೈನರ್‌ವೇರ್ಸ್ ಹಾಗೂ ಡಿಸೈನರ್‌ ಬ್ಲೌಸ್‌- ಸೀರೆಗಳನ್ನು ಧರಿಸಿದ ಸರಿ ಸುಮಾರು 54 ಮಾಡೆಲ್‌ಗಳು ರ‍್ಯಾಂಪ್‌ ಮೇಲೆ ಯಶಸ್ವಿಯಾಗಿ ಹೆಜ್ಜೆ ಹಾಕಿದರು.

Celebrity show stopper Nimrit Kaur

ಸೆಲೆಬ್ರೆಟಿ ಶೋ ಸ್ಟಾಪರ್‌ ನಿಮ್ರಿತ್‌ ಕೌರ್‌

ಏರ್‌ಲಿಫ್ಟ್ ಸಿನಿಮಾ ಖ್ಯಾತಿಯ ಬಾಲಿವುಡ್‌ ತಾರೆ ನಿಮ್ರಿತ್‌ ಕೌರ್ ಮೈಸೂರ್‌ ಫ್ಯಾಷನ್‌ ವೀಕ್‌ನಲ್ಲಿ ಜಯಂತಿ ಬಲ್ಲಾಳ್‌ ಅವರ ಡಿಸೈನ್‌ನ ಡಿಸೈನರ್‌ ಬ್ಲೌಸ್‌ ಹಾಗೂ ಸೀರೆ ಉಟ್ಟು ಸೆಲೆಬ್ರೆಟಿ ಶೋ ಸ್ಟಾಪರ್‌ ವಾಕ್‌ ಮಾಡಿದರು. ಆಕರ್ಷಕ ಬ್ರೈಟ್‌ ಶೇಡ್‌ನ ಬಾರ್ಡರ್‌ ರೇಷ್ಮೆ ಸೀರೆಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡ ನಿಮ್ರಿತ್‌ ನೆರೆದಿದ್ದ ಫ್ಯಾಷನ್‌ ಪ್ರಿಯರ ಗಮನಸೆಳೆದರು. ಮೈಸೂರು ಫ್ಯಾಷನ್‌ ವೀಕ್‌ನಲ್ಲಿ ನಾನು ರ‍್ಯಾಂಪ್‌ ವಾಕ್‌ ಮಾಡಿದ್ದು, ಸಂತಸ ತಂದಿದೆ. ಅದರಲ್ಲೂ ಸೆಲೆಬ್ರೆಟಿ ಡಿಸೈನರ್‌ ಜಯಂತಿ ಬಲ್ಲಾಳ್‌ ಅವರ ಡಿಸೈನ್‌ನ ಬ್ಲೌಸ್‌ ಹಾಗೂ ಸೀರೆ ಧರಿಸಿ ಹೆಜ್ಜೆ ಹಾಕಿದ್ದು, ಫ್ಯಾಷನ್‌ ದಿಗ್ಗಜರ ಗಮನ ಸೆಳೆದಿದೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Jayanthi Ballal is the talk of fashion

ಜಯಂತಿ ಬಲ್ಲಾಳ್‌ ಫ್ಯಾಷನ್‌ ಮಾತು

ಮೈಸೂರು ಫ್ಯಾಷನ್‌ ವೀಕ್‌ನಲ್ಲಿ ಡಿಸೈನರ್‌ವೇರ್‌ಗಳ ಅನಾವರಣ ಮಾಡುವುದಷ್ಟೇ ಅಲ್ಲ, ರ‍್ಯಾಂಪ್‌ನಲ್ಲಿ ಟೀಮ್‌ನೊಂದಿಗೆ ಹೆಜ್ಜೆ ಹಾಕುವುದು ಖುಷಿಯೆನಿಸುತ್ತದೆ. ಪ್ರತಿಬಾರಿಯೂ ಹೊಸತನ್ನು ಪ್ರದರ್ಶಿಸುವ ಉದ್ದೇಶವನ್ನಿರಿಸಿಕೊಂಡು ಬರುತ್ತೇವೆ. ನಾನಾ ಡಿಸೈನರ್‌ಗಳನ್ನು ಹಾಗೂ ಮಾಡೆಲ್‌ಗಳನ್ನು ಭೇಟಿ ಮಾಡುತ್ತೇವೆ. ಇದು ಸಂತಸ ತರುತ್ತದೆ” ಎಂದು ಜಯಂತಿ ಬಲ್ಲಾಳ್‌ ಸಂತಸ ವ್ಯಕ್ತಪಡಿಸಿದರು. ನಾನಾ ಕಡೆಯಿಂದ ಆಗಮಿಸಿದ್ದ ಸುಮಾರು 17 ಡಿಸೈನರ್‌ಗಳು ಹಾಗೂ 54 ಮಾಡೆಲ್‌ಗಳು ಅತ್ಯುತ್ಸಾಹದಿಂದ ಭಾಗವಹಿಸಿದರು. ಸ್ಯಾಂಡಲ್‌ವುಡ್‌ ನಟ ದಿಗಂತ್‌ ಹಾಗೂ ಬಾಲಿವುಡ್‌ ನಟಿ ಮಾಧುರಿ ಕೂಡ ಇತರೇ ಡಿಸೈನರ್‌ಗಳ ಶೋ ಸ್ಟಾಪರ್‌ ಆಗಿ ಭಾಗವಹಿಸಿದ್ದರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Pageant News: ಮಿಸ್‌, ಮಿಸೆಸ್‌ ಇಂಡಿಯಾ ರೋಲ್‌ ಮಾಡೆಲ್‌ 2024 ಬ್ಯೂಟಿ ಪೇಜೆಂಟ್‌ ವಿಜೇತರಿವರು!

Continue Reading

ಫ್ಯಾಷನ್

Hair Bow Fashion: ಮುದ್ದಾದ ಮಕ್ಕಳಿಗೆ ಕ್ಯೂಟಾದ ಹೇರ್‌ ಬೋ ಸಿಂಗಾರ

ಮುದ್ದಾದ ಮಕ್ಕಳನ್ನು ಕ್ಯೂಟಾಗಿ ಬಿಂಬಿಸುವ ಅತ್ಯಾಕರ್ಷಕ ಹೇರ್‌ ಬೋಗಳು (Hair Bow Fashion) ಇದೀಗ ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಒಂದಕ್ಕಿಂತ ಒಂದು ನೋಡಲು ಆಕರ್ಷಕವಾಗಿರುವ ಇವುಗಳ ಆಯ್ಕೆ ಹೇಗೆ? ಯಾವ್ಯಾವ ಡಿಸೈನ್‌ನವು ದೊರೆಯುತ್ತಿವೆ ಎಂಬುದರ ಬಗ್ಗೆ ಕಿಡ್ಸ್ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Hair Bow Fashion
ಚಿತ್ರಕೃಪೆ : ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಕ್ಕಳನ್ನು ಕ್ಯೂಟ್‌ ಆಗಿ ಬಿಂಬಿಸಬಲ್ಲ ನಾನಾ ಡಿಸೈನ್‌ನ ಅತ್ಯಾಕರ್ಷಕ ಹೇರ್‌ ಬೋಗಳು ಟ್ರೆಂಡಿಯಾಗಿವೆ. ಮುದ್ದು ಕಂದಮ್ಮನಿಂದಿಡಿದು ಕ್ಯೂಟ್‌ ಆಗಿರುವ ತರ್ಲೆ ಕಿಡ್‌ನವರೆಗೂ ಧರಿಸಬಹುದಾದ ಇವು ಆಕರ್ಷಕ ಡಿಸೈನ್‌ ಹಾಗೂ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿವೆ.

A hair bow for a cute look

ಚಿಣ್ಣರ ಕ್ಯೂಟ್‌ ಲುಕ್‌ಗೆ ಹೇರ್‌ ಬೋ

“ಅಂದಹಾಗೆ, ಮುದ್ದಾದ ಚಿಣ್ಣರನ್ನು ಅತ್ಯಾಕರ್ಷಕವಾಗಿಸುವ ಕಿಡ್ಸ್ ಹೇರ್‌ ಬೋಗಳು ಇದೀಗ ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದು, ಒಂದಕ್ಕಿಂತ ಒಂದು ನೋಡಲು ಆಕರ್ಷಕವಾಗಿರುವ ವಿನ್ಯಾಸದಲ್ಲಿ ಕಾಣಿಸಿಕೊಂಡಿವೆ. ಲೆಕ್ಕವಿಲ್ಲದಷ್ಟು ಬಗೆಯವು ದೊರೆಯುತ್ತಿವೆ. ಹಸುಗೂಸಿನಿಂದಿಡಿದು ಶಾಲೆಗೆ ಹೋಗುವ ಪುಟ್ಟ ಮಕ್ಕಳ ತಲೆಗೂದಲನ್ನು ಸಿಂಗರಿಸುತ್ತಿವೆ. ಎಲ್ಲರನ್ನೂ ಕ್ಯೂಟಾಗಿ ಬಿಂಬಿಸುತ್ತಿವೆ” ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ ರೀಟಾ. ಅವರ ಪ್ರಕಾರ, ಮುದ್ದು ಮಕ್ಕಳ ಮ್ಯಾಚಿಂಗ್‌ ಉಡುಪಿಗೆ ತಕ್ಕಂತೆ ಇವು ದೊರೆಯುತ್ತಿವೆ ಎನ್ನುತ್ತಾರೆ.

Trendy hairstyles

ಟ್ರೆಂಡಿಯಾಗಿರುವ ಹೇರ್‌ ಬೋಗಳಿವು

ಬಟನ್‌ ಬೋ, ಫ್ಯಾಬ್ರಿಕ್‌ ಬೋ, ಮ್ಯಾಚಿಂಗ್‌ ಬೋ, ಕ್ಲಿಪ್‌ ಸ್ಟೈಲ್‌ ಹೇರ್‌ ಬೋ, ರಿಬ್ಬನ್‌ ಫ್ಲವರ್‌ ಬೋ, ಪೋಮ್‌ ಪೋಮ್‌ ಬೋ, ಲೇಸ್‌, ಅರ್ಗಾನ್ಜಾ ಬೋ, ಸ್ಯಾಟೀನ್, ವೆಲ್ವೆಟ್‌, ನಿಟ್ಟೆಡ್‌ ಹೇರ್‌ ಬೋ, ಫ್ಲವರ್‌ ಬೋ, ಸಿಕ್ವೀನ್‌ ಹೇರ್‌ ಬೋ ಸೇರಿದಂತೆ ಸಾಕಷ್ಟು ಬಗೆಯವು ಮಾರುಕಟ್ಟೆಯಲ್ಲಿ ಕಾಲಿಟ್ಟಿದ್ದು, ನಾನಾ ಬ್ರಾಂಡ್‌ಗಳಲ್ಲೂ ಲಭ್ಯ. ಇನ್ನು ಲೋಕಲ್‌ ಬ್ರಾಂಡ್‌ನವು ಕೊಂಚ ಕಡಿಮೆ ದರಕ್ಕೆ ದೊರಕುತ್ತವೆ. ಆದರೆ, ಪುಟ್ಟ ಮಕ್ಕಳಿಗೆ ಕೊಳ್ಳುವಾಗ ಆದಷ್ಟೂ ಉತ್ತಮ ಗುಣಮಟ್ಟದ ಹೇರ್‌ ಬೋ ಕೊಳ್ಳುವುದು ಮುಖ್ಯ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್. ಅವರ ಪ್ರಕಾರ, ಮಕ್ಕಳಿಗೆ ಆದಷ್ಟೂ ಡಾರ್ಕ್ಗಿಂತ ಲೈಟ್‌ ಶೇಡ್‌ನವನ್ನು ಆಯ್ಕೆ ಮಾಡಿ ಎನ್ನುತ್ತಾರೆ.

7 Tips for Choosing a Gold Hair Bow

ಚಿಣ್ಣರ ಹೇರ್‌ ಬೋ ಆಯ್ಕೆಗೆ 7 ಸಲಹೆಗಳು

 1. ಉತ್ತಮ ಗುಣಮಟ್ಟದ್ದನ್ನುಆಯ್ಕೆ ಮಾಡಿ.
 2. ಫ್ಯಾಬ್ರಿಕ್‌ ಸಾಫ್ಟ್ ಆಗಿರುವುದು ಮುಖ್ಯ.
 3. ಮಕ್ಕಳ ತಲೆಕೂದಲಿಗೆ ಚುಚ್ಚದ ಹೇರ್‌ ಬೋ ಚೂಸ್‌ ಮಾಡಿ.
 4. ಟ್ರೆಂಡಿಯಾಗಿರುವುದನ್ನು ಆಯ್ಕೆ ಮಾಡಿ.
 5. ಮಕ್ಕಳಿಗೆ ಇಷ್ಟವಾಗುವಂತಹ ಬ್ರೈಟ್‌ ಹಾಗೂ ಆಕರ್ಷಕ ಡಿಸೈನ್‌ನವನ್ನು ಕೊಳ್ಳಿ.
 6. ಆನ್‌ಲೈನ್‌ನಲ್ಲಿ ಸಾಕಷ್ಟು ಡಿಸೈನ್‌ನವು ದೊರೆಯುತ್ತವೆ.
 7. ಚಿಣ್ಣರ ಉಡುಪಿಗೆ ತಕ್ಕಂತೆ ಮ್ಯಾಚ್‌ ಮಾಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Deepika Padukone Shimmer Saree Fashion: ಶಿಮ್ಮರ್‌ ಸೀರೆಯಲ್ಲಿ ನಟಿ ದೀಪಿಕಾ ಪಡುಕೋಣೆಯಂತೆ ಮಿನುಗಬೇಕೆ?! ಹಾಗಾದಲ್ಲಿ ಹೀಗೆ ಸ್ಟೈಲಿಂಗ್‌ ಮಾಡಿ!

Continue Reading

ಫ್ಯಾಷನ್

Fashion Pageant News: ಮಿಸ್‌, ಮಿಸೆಸ್‌ ಇಂಡಿಯಾ ರೋಲ್‌ ಮಾಡೆಲ್‌ 2024 ಬ್ಯೂಟಿ ಪೇಜೆಂಟ್‌ ವಿಜೇತರಿವರು!

ಉದ್ಯಾನನಗರಿಯಲ್ಲಿ ನಡೆದ ಮಿಸ್‌ ಹಾಗೂ ಮಿಸೆಸ್‌ ಇಂಡಿಯಾ ರೋಲ್‌ ಮಾಡೆಲ್‌ 2024 ಬ್ಯೂಟಿ ಪೇಜೆಂಟ್‌ನಲ್ಲಿ (Fashion Pageant News), ಸುಮಾರು 60ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಇಲ್ಲಿ ವಿಜೇತರಾದವರ ಪಟ್ಟಿ ಹಾಗೂ ರ‍್ಯಾಂಪ್‌ ವಾಕ್‌ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Fashion Pageant News
ಚಿತ್ರಗಳು: ಮಿಸ್‌, ಮಿಸೆಸ್‌ ಇಂಡಿಯಾ ರೋಲ್‌ ಮಾಡೆಲ್‌ 2024 ಬ್ಯೂಟಿ ಪೇಜೆಂಟ್‌ ಚಿತ್ರಗಳು
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ರ‍್ಯಾಂಪ್‌ ಮೇಲೆ (Fashion Pageant News) ಒಬ್ಬರಿಗಿಂತ ಒಬ್ಬರು ವಾಕ್‌ ಮಾಡುತ್ತಿದ್ದರೇ, ಅವರಲ್ಲಿನ ಆತ್ಮವಿಶ್ವಾಸ ಎದ್ದುಕಾಣುತ್ತಿತ್ತು. ಒಬ್ಬೊಬ್ಬರು ತಾವು ಧರಿಸಿದ ಡಿಸೈನರ್‌ವೇರ್‌ಗಳಲ್ಲಿ ತಮ್ಮದೇ ಆದ ಸ್ಟೈಲ್‌ ಸ್ಟೇಟ್‌ಮೆಂಟ್‌ ಫಾಲೋ ಮಾಡುತ್ತಾ ಕ್ಯಾಟ್‌ವಾಕ್‌ ಮಾಡಿದ್ದು,ನೋಡುಗರನ್ನು ಸೆಳೆಯಿತು.

60 contestants in the pageant

ಪೇಜೆಂಟ್‌ನಲ್ಲಿ 60 ಸ್ಪರ್ಧಾಳುಗಳು

ಅಂದಹಾಗೆ, ಇದು ನಡೆದದ್ದು, ಉದ್ಯಾನನಗರಿಯಲ್ಲಿ. ಪೇಜೆಂಟ್‌ ಡೈರೆಕ್ಟರ್‌ ನಂದಿನಿ ನಾಗರಾಜ್‌ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ, ಮಿಸ್‌ ಹಾಗೂ ಮಿಸೆಸ್‌ ಇಂಡಿಯಾ ರೋಲ್‌ ಮಾಡೆಲ್‌ 2024 ಬ್ಯೂಟಿ ಪೇಜೆಂಟ್‌ನಲ್ಲಿ, ಸುಮಾರು 60ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಮಿಸ್‌ ಹಾಗೂ ಮಿಸೆಸ್‌ ಕೆಟಗರಿಯನ್ನು ಪ್ರತ್ಯೇಕವಾಗಿ ಆಯೋಜಿಸಲಾಗಿತ್ತು. ಟ್ರೆಡಿಷನಲ್‌ ಹಾಗೂ ವೆಸ್ಟರ್ನ್ ರೌಂಡ್‌ಗಳಲ್ಲಿ ಭಾಗವಹಿಸಿದ್ದ ಯುವತಿಯರು ಹಾಗೂ ಮಹಿಳೆಯರು ಅತ್ಯುತ್ಸಾಹದಿಂದ ಎಲ್ಲಾ ರೌಂಡ್‌ಗಳಲ್ಲೂ ಪಾಲ್ಗೊಂಡರು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಭಿನ್ನ-ವಿಭಿನ್ನವಾಗಿ ಸಿಂಗರಿಸಿಕೊಂಡಿದ್ದರು. ಜ್ಯೂರಿ ಪ್ಯಾನೆಲ್‌ನ ಪ್ರತಿ ಪ್ರಶ್ನೆಗೂ ತಮ್ಮದೇ ಆದ ರೀತಿಯಲ್ಲಿ ಉತ್ತರ ನೀಡಿದರು.

Pageant led by Nandini Nagaraj

ನಂದಿನಿ ನಾಗರಾಜ್‌ ನೇತೃತ್ವದ ಪೇಜೆಂಟ್‌

ಪ್ರತಿ ವರ್ಷದಂತೆ ಈ ವರ್ಷವೂ ನಡೆದ ಮಿಸ್‌ ಹಾಗೂ ಮಿಸೆಸ್ ಇಂಡಿಯಾ ರೋಲ್‌ ಮಾಡೆಲ್‌ ಹೆಸರಿನ ಬ್ಯೂಟಿ ಪೇಜೆಂಟ್‌, ಯುವತಿಯರು ಹಾಗೂ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬಿತಲ್ಲದೇ, ಅವರ ಸಬಲೀಕರಣಕ್ಕೆ ಆದ್ಯತೆ ನೀಡಿತು. ಜೊತೆಗೆ ಅವರ ಟ್ಯಾಲೆಂಟ್‌ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿತು ಎಂದು ನಂದಿನಿ ನಾಗರಾಜ್‌ ಹೇಳಿದರು.

ಪೇಜೆಂಟ್‌ ವಿಜೇತರ ಪಟ್ಟಿ

ಮಿಸೆಸ್‌ ಇಂಡಿಯಾ ಕೆಟಗರಿಯಲ್ಲಿ ಶೆರ್ಲಿ, ಶೀಲಾ, ಜೀಲು, ಅಪೇಕ್ಷಾ ಹಾಗೂ ಶೋಭ ಕ್ರಮವಾಗಿ ವಿಜೇತರ ಪಟ್ಟಿ ಸೇರಿದರು. ಇನ್ನು ಕರ್ವಿ ಕೆಟಗರಿಯಲ್ಲಿ ಗೀತಾಂಜಲಿ, ತೇಜಾ ಮತ್ತು ಸುಮತಿ ಟೈಟಲ್‌ ವಿಜೇತರಾದರು.

ಮಿಸ್‌ ಕೆಟಗರಿ ವಿಜೇತರು

ಮಿಸ್‌ ಕೆಟಗರಿಯಲ್ಲಿ ತೇಜಸ್ವಿನಿ, ಎಂಜೆಲಿನ್ ಡಿಸೋಜಾ ಹಾಗೂ ವಿಭಾ ವಿಜೇತರಾಗಿದರು.

Pageant Jury Team

ಪೇಜೆಂಟ್‌ ಜ್ಯೂರಿ ಟೀಮ್‌

ಮಿಸೆಸ್‌ ಗ್ಲೋಬಲ್‌ ಯೂನಿವರ್ಸ್ ಸಪ್ನಾ ಸಾವಂತ್‌, ಮಿಸೆಸ್‌ ವಲ್ರ್ಡ್ ವೈಡ್‌ ಅಂಬಾಸಡರ್‌ ಜನನಿ ರಂಜನ್‌, ಮಿಸೆಸ್‌ ಇಂಡಿಯಾ ರೋಲ್‌ ಮಾಡೆಲ್‌ ಜನನಿ, ಮಿಸೆಸ್‌ ಇಂಡಿಯಾ ಅಂಬಾಸಡರ್‌ ಸುಚಿತ್ರಾ ವೇಣುಗೋಪಾಲ್‌, ಮಿಸೆಸ್‌ ಇಂಡಿಯಾ ವಲ್ರ್ಡ್ ವೈಡ್‌ ಶ್ವೇತಾ ಮಯೂರ ಪೇಜೆಂಟ್‌ನ ಜ್ಯೂರಿ ಟೀಮ್‌ನಲ್ಲಿದ್ದರು. ಸ್ಪರ್ಧಾಳುಗಳಿಗೆ ಸೆಲೆಬ್ರೆಟಿ ಡಿಸೈನರ್‌ ಚಂದನ್‌ಗೌಡ ಡಿಸೈನರ್‌ವೇರ್‌ಗಳನ್ನು ಡಿಸೈನ್‌ ಮಾಡಿದ್ದರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Eshani Fashion Interview: ಬಿಗ್ ಬಾಸ್ ಸ್ಪರ್ಧಿ, ಕನ್ನಡ ರ‍್ಯಾಪರ್ ಇಶಾನಿಯ ಫ್ಯಾಷನ್‌ ಟಿಪ್ಸ್ ಹೀಗಿದೆ…

Continue Reading
Advertisement
INDIA Alliance partners Congress and AAP Seal seat deal for Goa, Haryana, Gujarat
ದೇಶ9 mins ago

INDIA Alliance: ದಿಲ್ಲಿ ಬಳಿಕ ಗೋವಾ, ಹರ್ಯಾಣ, ಗುಜರಾತ್‌ನಲ್ಲೂ ಕಾಂಗ್ರೆಸ್-ಆಪ್ ಸೀಟು ಹಂಚಿಕೆ ಫೈನಲ್!

Aryaman Ashok Shankar
ಚಾಮರಾಜನಗರ11 mins ago

Social Sevice : ಶ್ರವಣದೋಷವುಳ್ಳ ಮಕ್ಕಳ ಕೇಂದ್ರಕ್ಕೆ ಕ್ರೀಡಾಪರಿಕರಗಳ ವಿತರಣೆ

ರಾಜಕೀಯ16 mins ago

Karnataka Budget Session 2024: ಈ ಸರ್ಕಾರದಿಂದ ಹಿಂದೂಗಳಿಗೆ ದ್ರೋಹ: ಆರ್‌. ಅಶೋಕ್‌

Mudda Hanumegowda joins Congress
ತುಮಕೂರು16 mins ago

Mudda hanumegowda : ಕೆಲವರ ಅತೃಪ್ತಿ ನಡುವೆ ಮತ್ತೆ ಕೈ ಸೇರಿದ ಮುದ್ದಹನುಮೇಗೌಡ

D. hiremath foundation
ಉತ್ತರ ಕನ್ನಡ36 mins ago

Arun Yogiraj : ರಾಮಲಲ್ಲಾ ವಿಗ್ರಹ ಕೆತ್ತಿದ ಅರುಣ್​ ಯೋಗಿರಾಜ್​ಗೆ ‘ಅಭಿನವ ಅಮರ ಶಿಲ್ಪಿ’ ಪುರಸ್ಕಾರ

For Registration Movie Telugu Dubbing Rights sold for huge amount
ಸಿನಿಮಾ42 mins ago

For Registration Movie: ರಿಲೀಸ್‌ಗೂ ಮೊದ್ಲೇ ’ಫಾರ್ ರಿಜಿಸ್ಟ್ರೇಷನ್’ಗೆ ಡಿಮ್ಯಾಂಡ್! ತೆಲುಗಿಗೂ ಹೊರಟ ಪೃಥ್ವಿ-ಮಿಲನಾ

Uttara Kannada ZP CEO eshwar Kandu visited Dayanilaya specially abled School in Kumta
ಉತ್ತರ ಕನ್ನಡ51 mins ago

Uttara Kannada News: ಸಾಧಿಸುವ ಛಲವಿದ್ದರೆ ಸಾಧನೆಯ ಹಾದಿ ಕಷ್ಟವಲ್ಲ: ಜಿ.ಪಂ ಸಿಇಒ ಈಶ್ವರ ಕಾಂದೂ

Chakravarthi sulibele spoke in Namo Bharat programme at Kudligi
ವಿಜಯನಗರ53 mins ago

Vijayanagara News: ಸರ್ವ ಶ್ರೇಷ್ಠ ಭಾರತಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು: ಚಕ್ರವರ್ತಿ ಸೂಲಿಬೆಲೆ

DY Chandrachud
ಪ್ರಮುಖ ಸುದ್ದಿ1 hour ago

C J Chandrachud : ಯೋಗ, ಸಸ್ಯಾಹಾರ; ಒತ್ತಡ ನಿವಾರಣೆ ತಂತ್ರ ವಿವರಿಸಿದ ಸುಪ್ರಿಂ ಕೋರ್ಟ್​​ ಮುಖ್ಯ​ ನ್ಯಾಯಮೂರ್ತಿ

Belagavi Airport recorded the lowest minimum temperature and Dry weather likely to prevail
ಮಳೆ1 hour ago

Karnataka Weather : ಬೆಂಗಳೂರಲ್ಲಿ ಸೂರ್ಯ ಮರೆಯಾದರೂ ಏರಲಿದೆ ತಾಪಮಾನ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Catton Candy contain cancer Will there be a ban in Karnataka
ಬೆಂಗಳೂರು3 hours ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ6 hours ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ3 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ4 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ5 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ5 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

read your daily horoscope predictions for february 17 2024
ಭವಿಷ್ಯ6 days ago

Dina Bhavishya : ಈ ರಾಶಿಯವರು ಸೀಕ್ರೆಟ್‌ ವಿಷ್ಯವನ್ನು ರಿವೀಲ್‌ ಮಾಡಿದ್ರೆ ಅಪಾಯ ಗ್ಯಾರಂಟಿ!

Karnataka Budget Session 2024 siddaramaiah use cinema Lines
ಸಿನಿಮಾ6 days ago

Karnataka Budget Session 2024: ಡಾಲಿ ಧನಂಜಯ್‌ ಬರೆದ ಸಾಲುಗಳು ಬಜೆಟ್‌ನಲ್ಲಿ ಹೈಲೈಟ್‌!

ಟ್ರೆಂಡಿಂಗ್‌