ಪ್ರಮುಖ ಸುದ್ದಿ
Astrology Answers | ನಾನು ನೀಟ್ ಪರೀಕ್ಷೆಯಲ್ಲಿ ಒಳ್ಳೆಯ ರ‍್ಯಾಂಕ್ ಪಡೆಯುತ್ತೇನೆಯೇ ಗುರೂಜಿ?
ಇದು ಜ್ಯೋತಿಷ್ಯದ ಹೊಸ ಅಂಕಣ (Astrology Answers). ಇಲ್ಲಿ ನಮ್ಮ ಓದುಗರು ಕೇಳುವ ಪ್ರಶ್ನೆಗಳಿಗೆ ರಾಜಗುರು ಬಿ. ಎಸ್. ದ್ವಾರಕನಾಥ್ ಅವರು ಉತ್ತರಿಸಲಿದ್ದಾರೆ, ಪರಿಹಾರ ಸೂಚಿಸಲಿದ್ದಾರೆ. ಇಲ್ಲಿ ನೀವೂ ಪ್ರಶ್ನೆ ಕೇಳಬಹುದು.
ಪ್ರಶ್ನೆ: ನಾನು ಪಿಯುಸಿ ಸೈನ್ಸ್ ಓದುತ್ತಿದ್ದೇನೆ. ವಿಷಯಗಳು ಸರಿಯಾಗಿ ಅರ್ಥವಾಗುತ್ತಿಲ್ಲ. ನೀಟ್ ಪರೀಕ್ಷೆ ಬರೆಯ ಬೇಕೆಂದುಕೊಂಡಿದ್ದೇನೆ. ನಾನು ಈ ಪರೀಕ್ಷೆಯಲ್ಲಿ ಚೆನ್ನಾಗಿ ರ‍್ಯಾಂಕ್ ಪಡೆಯುತ್ತೇನೆಯೇ?. ಮೆಡಿಕಲ್ ಸೀಟು ಪಡೆಯಲು ನನ್ನಿಂದ ಸಾಧ್ಯವಾಗುತ್ತದೆಯೇ? ದಯವಿಟ್ಟು ತಿಳಿಸಿ ಗುರೂಜಿ.
ಜನ್ಮದಿನಾಂಕ : 16-7-2004 ನಕ್ಷತ್ರ: ಆರಿದ್ರಾ
ಪರಿಹಾರ: ಆರಿದ್ರಾ ನಕ್ಷತ್ರ ಮಿಥುನ ರಾಶಿಯವರಿಗೆ ಈಗ ತಾತ್ಕಾಲಿಕವಾಗಿ ಎಂಟರಲ್ಲಿ ಶನಿ, ಹತ್ತರಲ್ಲಿ ಗುರು ಇದ್ದಾನೆ. ಸಮಯ ಅಷ್ಟು ಅನುಕೂಲಕರವಾಗಿಲ್ಲ. ಶನಿಯು ಮೇಷ ರಾಶಿಗೆ ಬಂದಾಗ ಅಂದರೆ ಹನ್ನೊಂದನೇ ಮನೆಗೆ ಬಂದಾಗ ನಿಮಗೆ ಒಳ್ಳೆಯ ಕಾಲ ಬರಲಿದೆ. ಯುಗಾದಿಯ ನಂತರ ನೀವು ಅಂದುಕೊಂಡಿದ್ದೆಲ್ಲಾ ಸಾಧ್ಯವಾಗುತ್ತದೆ. ಇದಕ್ಕಾಗಿ ನೀವು ನಿತ್ಯ ಗಣಪತಿಗೆ ಗರಿಕೆ ಇಷ್ಟು, ಪೂಜೆ ಮಾಡಿ. ಗಣಪತಿ ಅಷ್ಟೋತ್ತರ ಪಠಿಸಿ. ಕ್ಷಿಪ್ರ ಫಲಕ್ಕಾಗಿ ಪಾರ್ವತಿ ಅಥವಾ ದುರ್ಗೆಗೆ ಪೂಜೆ ಮಾಡಿ, ದುರ್ಗಾ ಅಷ್ಟೋತ್ತರ ಪಠಿಸಿ, ಒಳ್ಳೆಯದಾಗುತ್ತದೆ. ಈ ಎಲ್ಲ ಪೂಜೆಯ ಜತೆ ಜತೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಓದುವುದನ್ನು ಮರೆಯಬೇಡಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: [email protected]
ಇದನ್ನೂ ಓದಿ | Finance Horoscope 2023 | ಜನವರಿಯಲ್ಲಿ ಯಾವೆಲ್ಲಾ ರಾಶಿಯವರಿಗೆ ಆರ್ಥಿಕವಾಗಿ ಶುಭ ಫಲಗಳಿವೆ?
ತಂತ್ರಜ್ಞಾನ
Digital Payments: ಡಿಜಿಟಲ್ ಪಾವತಿ, ಇಂಡಿಯಾದ್ದೇ ಕೀರ್ತಿ! ಎಲ್ಲ ದೇಶಗಳನ್ನು ಹಿಂದಿಕ್ಕಿ ನಂ.1 ಆದ ಭಾರತ
Digital Payments:ಭಾರತದ ಡಿಜಿಟಲ್ ವ್ಯವಸ್ಥೆಯು ಮತ್ತೊಂದು ಸಾಹಸವನ್ನು ಮಾಡಿದೆ. 2022ರ ಅಂಕಿ ಸಂಖ್ಯೆಗಳ ಪ್ರಕಾರ ಜಗತ್ತಿನಲ್ಲೇ ಡಿಜಿಟಲ್ ಪೇಮೆಂಟ್ಸ್‌ನಲ್ಲಿ ಭಾರತವು ಅಗ್ರಗಣ್ಯ ರಾಷ್ಟ್ರವಾಗಿದೆ.
ನವದೆಹಲಿ: ಭಾರತದಲ್ಲಿ ಡಿಜಿಟಲ್ ಕ್ರಾಂತಿಯಾಗುತ್ತಿದೆ(digital revolution in india). ಇದಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ. 2022ರ ಅಂಕಿ ಅಂಶಗಳ ಪ್ರಕಾರ, ಡಿಜಿಟಲ್ ಪೇಮೆಂಟ್ಸ್‌ನಲ್ಲಿ (Digital Payments) ಭಾರತವು (India) ನಾಲ್ಕು ರಾಷ್ಟ್ರಗಳನ್ನು ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದೆ. 2022ರಲ್ಲಿ 8.95 ಕೋಟಿ ಡಿಜಿಟಲ್ ಪಾವತಿಗಳಾಗಿವೆ ಎಂದು ಮೈಗೌವ್‌ಇಂಡಿಯಾ (MyGovIndia) ಅಂಕಿ ಅಂಶಗಳಿಂದ ಗೊತ್ತಾಗಿದೆ. ಅಂದರೆ, ಜಾಗತಿಕವಾಗಿ (World) ನಡೆಯುವ ರಿಯಲ್‌ಟೈಮ್ ಡಿಜಿಟಲ್ ಪೇಮೆಂಟ್‌ಗಳಿಗೆ ಭಾರತದ ಕೊಡುಗೆಯೇ ಶೇ.46ರಷ್ಟಾಗುತ್ತದೆ!
ಡಿಜಿಟಿಲ್ ಪಾವತಿಯಲ್ಲಿ ಭಾರತದ ನಂತರದ ಸ್ಥಾನದಲ್ಲಿ 2.92 ಕೋಟಿ ಪಾವತಿಗಳೊಂದಿಗೆ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಬ್ರೆಜಿಲ್ ನಂತರದ ಸ್ಥಾನದಲ್ಲಿ ಸೌತ್ ಕೋರಿಯಾ 80 ಲಕ್ಷ ಪಾವತಿಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಎಂದು ಮೈಗೌವ್‌ಇಂಡಿಯಾ ಮಾಹಿತಿ ನೀಡಿದೆ.
ಮೈಗೌಇಂಡಿಯಾ (MyGovIndia) ಎಂಬುದು ಭಾರತೀಯ ಸರ್ಕಾರದ ವೇದಿಕೆಯಾಗಿದ್ದು ಅದು ನಾಗರಿಕರು ತಳಮಟ್ಟದಲ್ಲಿ ಡಿಜಿಟಲ್ ಆಗಿ ತೊಡಗಿಸಿಕೊಳ್ಳಲು ಮತ್ತು ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಡಿಜಿಟಲ್ ಪಾವತಿಗಳಲ್ಲಿ ಭಾರತದ ನಾಯಕತ್ವ ಮತ್ತು ದೇಶದ ಗ್ರಾಮೀಣ ಆರ್ಥಿಕತೆಯ ಮೇಲೆ ಪರಿವರ್ತಕ ಪರಿಣಾಮವನ್ನು ಒತ್ತಿ ಹೇಳಿದ್ದರು.
ಇದನ್ನೂ ಓದಿ: Har Payment Digital: ಹರ್ ಪೇಮೆಂಟ್ ಡಿಜಿಟಲ್ ಮಿಷನ್‌ಗೆ ಚಾಲನೆ ನೀಡಿದ ಆರ್‌ಬಿಐ, ವಾರ ಪೂರ್ತಿ ಜಾಗೃತಿ
ಭಾರತೀಯ ರಿಸರ್ವ್ ಬ್ಯಾಂಕಿನ ತಜ್ಞರ ಪ್ರಕಾರ, ಭಾರತದ ಡಿಜಿಟಲ್ ಪಾವತಿ ವಲಯವು ಮೌಲ್ಯ ಮತ್ತು ಪರಿಮಾಣ ಎರಡರಲ್ಲೂ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ. ಇದು ದೇಶದ ಪಾವತಿ ಪರಿಸರ ವ್ಯವಸ್ಥೆಯ ಶಕ್ತಿ ಮತ್ತು ವ್ಯಾಪಕವಾದ ಸ್ವೀಕಾರವನ್ನು ಎತ್ತಿ ತೋರಿಸುತ್ತದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅದರ ಪರಿಣಾಮವೇ ಈಗ ಈ ಸಾಧನೆ ಮಾಡಲು ಸಾಧ್ಯವಾಗಿದೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶ
ಔರಂಗಜೇಬ್ ದಾಳಿಕೋರ, ಗೋಡ್ಸೆ ಭಾರತ ಮಾತೆಯ ಸುಪುತ್ರ; ಓವೈಸಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಟಾಂಗ್
ಮಹಾರಾಷ್ಟ್ರದಲ್ಲಿ ಭುಗಿಲೆದ್ದ ಟಿಪ್ಪು ಸುಲ್ತಾನ, ಔರಂಗಜೇಬ್ ಪ್ರಕರಣವೀಗ ಬಿಜೆಪಿ ಹಾಗೂ ಪ್ರತಿಪಕ್ಷ ನಾಯಕರ ನಡುವೆ ವಾಕ್ಸಮರ ಶುರುವಾಗಿದೆ. ಗೋಡ್ಸೆ ಕುರಿತು ಓವೈಸಿ ಹೇಳಿಕೆಗೆ ಬಿಜೆಪಿಯ ಗಿರಿರಾಜ್ ಸಿಂಗ್ ತಿರುಗೇಟು ನೀಡಿದ್ದಾರೆ.
ನವದೆಹಲಿ: ಮಹಾರಾಷ್ಟ್ರದಲ್ಲಿ ಮೈಸೂರು ಅರಸ ಟಿಪ್ಪು ಸುಲ್ತಾನ್ ಹಾಗೂ ಮೊಘಲ್ ಅರಸ ಔರಂಗಜೇಬ್ ಅವರನ್ನು ವೈಭವೀಕರಿಸಿ ಪೋಸ್ಟ್ ಮಾಡಿದ್ದು ಭಾರಿ ವಿವಾದ ಸೃಷ್ಟಿಯಾದ ಬೆನ್ನಲ್ಲೇ, ಔರಂಗಜೇಬ್ ಹಾಗೂ ನಾಥುರಾಮ್ ಗೋಡ್ಸೆ ಬಗ್ಗೆ ಬಿಜೆಪಿ ನಾಯಕರು ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಧ್ಯೆ ವಾಗ್ಯುದ್ಧವೇ ಆರಂಭವಾಗಿದೆ. ಗೋಡ್ಸೆ ಕುರಿತು ಅಸಾದುದ್ದೀನ್ ಓವೈಸಿ ನೀಡಿದ ಹೇಳಿಕೆಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತಿರುಗೇಟು ನೀಡಿದ್ದಾರೆ. “ಔರಂಗಜೇಬ್ ಆಕ್ರಮಣಕಾರಿಯಾಗಿದ್ದು, ನಾಥುರಾಮ್ ಗೋಡ್ಸೆ ಭಾರತ ಮಾತೆಯ ಸುಪುತ್ರ” ಎಂದು ಹೇಳಿದ್ದಾರೆ.
“ನಾಥುರಾಮ್ ಗೋಡ್ಸೆ ಗಾಂಧೀಜಿಯವರ ಹತ್ಯೆಕೋರ ಹೇಗೋ, ಆತ ಭಾರತಮಾತೆಯ ಸುಪುತ್ರನೂ ಹೌದು. ಗೋಡ್ಸೆ ಹುಟ್ಟಿದ್ದು ಭಾರತದಲ್ಲಿ, ಆತ ಔರಂಗಜೇಬ ಹಾಗೂ ಬಾಬರನ ರೀತಿ ಭಾರತದ ಮೇಲೆ ಆಕ್ರಮಣ ಮಾಡಿಲ್ಲ. ಯಾರು ಬಾಬರನ ಪುತ್ರ ಎಂದು ಖುಷಿಪಡುತ್ತಾರೋ, ಅವರು ಭಾರತ ಮಾತೆಯ ಸುಪುತ್ರರಾಗಲು ಸಾಧ್ಯವಿಲ್ಲ” ಎಂದು ಗಿರಿರಾಜ್ ಸಿಂಗ್ ಛತ್ತೀಸ್‌ಗಢದಲ್ಲಿ ತಿರುಗೇಟು ನೀಡಿದ್ದಾರೆ.
ಗಿರಿರಾಜ್ ಸಿಂಗ್ ಟಾಂಗ್
#WATCH | Chhattisgarh: If Godse is Gandhi's killer, he is also the nation's son. He was born in India, and he was not an invader like Aurangzeb & Babar. Whosoever feels happy to be called the son of Babar, that person can't be the son of Bharat Mata: Union Minister Giriraj Singh pic.twitter.com/7GIS3z7noM
— ANI MP/CG/Rajasthan (@ANI_MP_CG_RJ) June 9, 2023
ಓವೈಸಿ ಹೇಳಿದ್ದೇನು?
ದೇವೇಂದ್ರ ಫಡ್ನವಿಸ್ ಅವರು ಅಸಾದುದ್ದೀನ್ ಓವೈಸಿ ಅವರನ್ನು ಔರಂಗಜೇಬನ ಸಂತತಿ ಎಂದು ಹೇಳಿದ್ದರು. ಇದಕ್ಕೆ ಅಸಾದುದ್ದೀನ್ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದರು. “ನಾನು ದೇವೇಂದ್ರ ಫಡ್ನವಿಸ್ ಅವರಂತೆ ದೊಡ್ಡ ತಜ್ಞ ಅಲ್ಲ. ಅವರು ಯಾರ ಸಂತತಿಯನ್ನು ಹೇಗೆ ಪತ್ತೆಹಚ್ಚುತ್ತಾರೋ, ಹಾಗೆಯೇ, ನಾಥುರಾಮ್ ಗೋಡ್ಸೆ ಅವರ ಸಂತತಿಯನ್ನು ಕೂಡ ಪತ್ತೆಹಚ್ಚಲಿ” ಎಂದು ಟೀಕಿಸಿದ್ದರು. ಇದಕ್ಕೆ ಗಿರಿರಾಜ್ ಸಿಂಗ್ ಅವರೀಗ ಟಾಂಗ್ ಕೊಟ್ಟಿದ್ದಾರೆ.
#WATCH | Hyderabad, Telangana | "Maharashtra's Home Minister Devendra Fadnavis said “Aurangzeb ke aulaad”. Do you know everything? I didn't know you (Devendra Fadnavis) were such an expert. Then call out Godse's & Apte’s offspring, who are they?", says AIMIM chief Asaduddin… pic.twitter.com/vrnCH7g4eq
— ANI (@ANI) June 9, 2023
ಫಡ್ನವಿಸ್ ನೀಡಿದ ಹೇಳಿಕೆ ಏನು?
ಮಹಾರಾಷ್ಟ್ರದ ಒಂದಷ್ಟು ಜಿಲ್ಲೆಗಳಲ್ಲಿ ದಿಢೀರನೆ ಔರಂಗಜೇಬನ ಮಕ್ಕಳು ಜನಿಸಿದ್ದಾರೆ. ಅವರು ತಮ್ಮ ಪೋಸ್ಟರ್‌ಗಳಲ್ಲಿ ಔರಂಗಜೇಬನ ಫೋಟೊ ಹಾಕಿದ್ದಾರೆ. ಇದರಿಂದಾಗಿಯೇ ಗಲಾಟೆ ಆರಂಭವಾಗಿದೆ. ಅಸಾದುದ್ದೀನ್ ಓವೈಸಿ ಕೂಡ ಔರಂಗಜೇಬನ ಸಂತತಿಯ. ಅಷ್ಟಕ್ಕೂ ಔರಂಗಜೇಬನ ಈ ಮಕ್ಕಳು ಎಲ್ಲಿಂದ ಬಂದರು? ಇವರ ಹಿಂದೆ ಯಾರಿದ್ದಾರೆ ಎಂಬುದನ್ನು ಶೀಘ್ರದಲ್ಲೇ ಪತ್ತೆಹಚ್ಚುತ್ತೇವೆ” ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದರು.
ಇದನ್ನೂ ಓದಿ: NCERT Textbooks: ಪಠ್ಯದಿಂದ ಗಾಂಧೀಜಿ, ಗೋಡ್ಸೆ, ಆರೆಸ್ಸೆಸ್ ವಿಷಯ ಕೈಬಿಟ್ಟ ಎನ್‌ಸಿಇಆರ್‌ಟಿ, ಭಾರಿ ವಿರೋಧ
ಟಿಪ್ಪು ಸುಲ್ತಾನ ಹಾಗೂ ಔರಂಗಜೇಬ್ ಅವರನ್ನು ವೈಭವೀಕರಿಸಿ, ಹೊಗಳಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಹಲವೆಡೆ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕೆಲ ದಿನಗಳ ಹಿಂದಷ್ಟೇ, ಕೊಲ್ಹಾಪುರದಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಕಲ್ಲುತೂರಾಟ ಕೂಡ ನಡೆದಿತ್ತು.
ಕರ್ನಾಟಕ
Free Bus Service: ನನ್ ಒಂದೇ ಓಟಲ್ಲ ಸ್ವಾಮಿ, ನಮ್ ಫ್ಯಾಮಿಲಿದೆಲ್ಲ ಇದೆ ಹುಷಾರ್: ಸಿದ್ದರಾಮಯ್ಯಗೆ ಆಟೋ ಡ್ರೈವರ್ ವಾರ್ನಿಂಗ್
ಜೂನ್ 11ರಂದು ರಾಜ್ಯಾದ್ಯಂತ ಶಕ್ತಿ ಯೋಜನೆಗೆ ಚಾಲನೆ ಸಿಗಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಯೋಜನೆಗೆ ಚಾಲನೆ ನೀಡಲಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರ ಜಾರಿ ಮಾಡಲು ಹೊರಟಿರುವ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಜೂನ್ 11ರ ಭಾನುವಾರದಿಂದ ಜಾರಿಗೆ ಬರಲಿದೆ. ಆದರೆ ಬೆಂಗಳೂರಿನಲ್ಲಿ ಈ ಯೋಜನೆಗೆ ಆಟೊ ಚಾಲಕರಿಂದ ವಿರೋಧ ವ್ಯಕ್ತವಾಗಿದೆ.
ಈ ಕುರಿತು ವಿಸ್ತಾರ ನ್ಯೂಸ್ ಜತೆಗೆ ಅನೇಕ ಆಟೊ ಚಾಲಕರು ಪ್ರತಿಕ್ರಿಯಿಸಿದ್ದಾರೆ. ಪ್ರತಿ ಸರ್ಕಾರಕ್ಕೆ ನಮ್ಮ ಬೆಂಬಲ ಇರುತ್ತದೆ. ಬಿಜೆಪಿ ಸರ್ಕಾರ ನಮಗೆ ಏನೂ ಮಾಡಲಿಲ್ಲ. ಅವರಿಗೆ ಏನಾಗಿದೆ ಎಲ್ಲರಿಗೂ ಗೊತ್ತಾಗಿದೆ. ನೀವು ಏನು ಮಾಡಿದರೂ ಚಾಲಕರ ಪರವಾಗಿರಿ. ಚಾಲಕರದ್ದು ಒಂದು ಓಟು ಮಾತ್ರ ಅಲ್ಲ. ನಮ್ಮ ಹೆಂಡತಿ ಮಕ್ಕಳು, ತಂದೆ ತಾಯಿಯೂ ಇದ್ದಾರೆ ಎಂದಿದ್ದಾರೆ.
ಕೆಎಸ್‌ಆರ್‌ಟಿಸಿ ಚಾಲಕರಿಗೂ ಸೌಲಭ್ಯ ಕೊಡಿ. ಫ್ರೀ ಕೊಡ್ತೀವಿ ಎಂದು ಹೇಳುತ್ತಿದ್ದೀರ, ಜನರ ದುಡ್ಡು ಕೊಡುತ್ತೀರ, ಕೊಡಿ. 75% ಮಹಿಳೆಯರು ಆಟೊದಲ್ಲಿ ಓಡಾಡುತ್ತಾರೆ. ಈಗ ಅವರೆಲ್ಲರೂ ಬಸ್‌ನಲ್ಲಿ ಓಡಾಡಿದರೆ ಆಟೊದವರಿಗೆ 75% ನಷ್ಟ ಆಗುತ್ತದೆ. ಉಚಿತ ಬಸ್ ಸೇವೆಯಿಂದ ಬಡವರಿಗೆ ಅನುಕೂಲ ಆಗುತ್ತದೆ, ಅದರಲ್ಲಿ ನನ್ನ ಹೆಂಡತಿ, ತಾಯಿಗೂ ಅನುಕೂಲ ಆಗುತ್ತದೆ. ಆದರೆ ಆಟೊ ಚಾಲಕರಿಗೆ ಹೊಡೆತ ಬೀಳುವುದು ಖಚಿತ. ಇದಕ್ಕೆ ಪರಿಹಾರ ಏನು ಗೊತ್ತಾಗುತ್ತಿಲ್ಲ. ಸರ್ಕಾರವೇ ಇದರ ಬಗ್ಗೆ ಯೋಚನೆ ಮಾಡಿ. ಈ ಯೋಜನೆ ಘೋಷಣೆ ಆದಾಗಿನಿಂದಲೇ ನಮಗೆ ಬಾಡಿಗೆ ಕಡಿಮೆ ಆಗಿದೆ ಎಂದಿದ್ದಾರೆ. ಆಟೊ ಚಾಲಕರ ಪ್ರತಿಕ್ರಿಯೆಗಳ ವಿಡಿಯೋ ಈ ಕೆಳಗಿದೆ…
ಜೂನ್ 11ರಂದು ರಾಜ್ಯಾದ್ಯಂತ ಶಕ್ತಿ ಯೋಜನೆಗೆ ಚಾಲನೆ ಸಿಗಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಯೋಜನೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ವಿಧಾನಸೌಧದ ಬಳಿ ಯೋಜನೆಗೆ ಚಾಲನೆ ನೀಡಿ ಸಿದ್ದರಾಮಯ್ಯ ಮಾತನಾಡಲಿದ್ದಾರೆ.
ಆದರೆ ಅದಕ್ಕೂ ಮುನ್ನ ಕೆಂಪೇಗೌಡ ಬಸ್ ನಿಲ್ದಾಣದಿಂದ(ಮೆಜೆಸ್ಟಿಕ್) ವಿಧಾನಸೌಧದವರೆಗೆ ಮಾರ್ಗ ಸಂಖ್ಯೆ 43ರಲ್ಲಿ ಸಿದ್ದರಾಮಯ್ಯ ಬಸ್‌ನಲ್ಲೇ ಚಲಿಸಲಿದ್ದಾರೆ. ಈ ವೇಳೆ ಉಚಿತ ಟಿಕೆಟ್‌ಗಳನ್ನು ಮಹಿಳೆಯರಿಗೆ ಸಿದ್ದರಾಮಯ್ಯ ನೀಡಲಿದ್ದಾರೆ. ಈ ರೀತಿ ವಿಧಾನಸೌಧದವರೆಗೂ ಕಂಡಕ್ಟರ್ ಆಗಿ ಕೆಲಸ ಮಾಡಲಿದ್ದಾರೆ.
ಇದನ್ನೂ ಓದಿ: Congress Guarantee: ಪಾರ್ಟ್ ಟೈಂ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದರಾಮಯ್ಯ!
ಕರ್ನಾಟಕ
Bangalore Mysore Expressway: ಈ ಹೆದ್ದಾರಿ ಅಪಘಾತಕ್ಕೆ ರಹದಾರಿ! 5 ತಿಂಗಳಲ್ಲಿ 570 ಅಪಘಾತ, 55 ಸಾವು
Road Accident: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಈಗ ಅಪಘಾತ ವಲಯವಾಗಿ ಮಾರ್ಪಡುತ್ತಿದೆಯೇ ಎಂಬ ಆತಂಕ ಶುರುವಾಗಿದೆ. ಇಲ್ಲಿ ಸಮಯ ಉಳಿತಾಯದ ಹೆಸರಿನಲ್ಲಿ ಅತಿಯಾದ ವೇಗದಿಂದ ವಾಹನಗಳನ್ನು ಚಲಾಯಿಸಲಾಗುತ್ತಿದೆ. ಇದು ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಬರೀ ಐದು ತಿಂಗಳಲ್ಲಿ 500ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿರುವ ವರದಿಯಾಗಿದೆ.
ಬೆಂಗಳೂರು: ಅಭಿವೃದ್ಧಿ, ಸಂಪರ್ಕ ಸೇರಿದಂತೆ ಆರ್ಥಿಕ ಚಟುವಟಿಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸುಮಾರು 9 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bangalore Mysore Expressway) ಈಗ ಅಪಘಾತಕ್ಕೆ (Highway Accident) ರಹದಾರಿಯಾಗುತ್ತಿದೆ. ಇಲ್ಲಿ ಅವಘಡಗಳ ಸರಮಾಲೆಯೇ ನಡೆಯುತ್ತಿದೆ. ಸಂಚಾರದಲ್ಲಿ ಸಮಯ ಉಳಿಕೆಗೆ ಹೆಸರಾಗಿರುವ ಈ ಹೆದ್ದಾರಿಯು ಜೀವಗಳಿಗೆ ಮಾರಕವಾಗುತ್ತಿವೆ. ಕೇವಲ ಐದು ತಿಂಗಳಲ್ಲಿ 570 ಅಪಘಾತಗಳು ಸಂಭವಿಸಿದ್ದು, 55 ಮಂದಿ ಮೃತಪಟ್ಟಿದ್ದಾರೆ!
ಈ 570 ಅಪಘಾತದಲ್ಲಿ 52 ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ, 184 ಮಂದಿ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ. ಇನ್ನು 279 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅತಿಯಾದ ವೇಗ, ಚಾಲಕರ ನಿರ್ಲಕ್ಷ್ಯ ಮತ್ತು ರಸ್ತೆಯ ಅವೈಜ್ಞಾನಿಕ ನಿರ್ಮಾಣವು ಈ ಪ್ರಮಾಣದ ಅಪಘಾತಗಳಿಗೆ ಮುಖ್ಯ ಕಾರಣಗಳಾಗಿವೆ ಎಂದು ಹೇಳಲಾಗಿದೆ.
ಇಲ್ಲಿ ಒನ್ ವೇ ಇರುವುದು, ಎಕ್ಸ್‌ಪ್ರೆಸ್ ವೇ ಆಗಿರುವ ಕಾರಣಕ್ಕೆ ಹೆಚ್ಚಿನ ವಾಹನಗಳು ತಮ್ಮ ವೇಗದ ಮಿತಿಯನ್ನು ಹೆಚ್ಚಳ ಮಾಡುತ್ತವೆ. ಗಂಟೆಗೆ 160 ಕಿ.ಮೀ ವೇಗದಲ್ಲಿ ಹೋಗುವ ಬಗ್ಗೆ ವರದಿಯಾಗಿದೆ. ಇದು ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಈ ವೇಗದಲ್ಲಿದ್ದಾಗ ಮುಂದಿನ ವಾಹನಗಳು ನಿಧಾನ ಮಾಡಿದರೆ, ಸ್ವಲ್ಪ ನಿರ್ಲಕ್ಷ್ಯ ವಹಿಸಿದರೆ, ನಿದ್ದೆ ಮಂಪರು ಬಂದರೆ, ಇಲ್ಲವೇ ಹೆದ್ದಾರಿಯಲ್ಲಿನ ಅನೇಕ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಿಂದ ವಾಹನಗಳು ಬಂದರೆ ಅಪಘಾತಗಳು ಸಂಭವಿಸುತ್ತವೆ.
ಅಪಘಾತ ತಪ್ಪಿಸಲು ಏನು ಮಾಡಬೇಕು?
ಇಲ್ಲಿ ಅಪಘಾತಗಳನ್ನು ತಪ್ಪಿಸಲು ಒಂದೋ ಜನರೇ ಸ್ವಯಂ ಪ್ರೇರಿತರಾಗಿ ವೇಗದ ಮಿತಿಯನ್ನು ಕಡಿಮೆ ಮಾಡಬೇಕು. ವೇಗದ ಮಿತಿ 80 ಕಿ.ಮೀ ಆಗಿರಬೇಕು. ಸರ್ಕಾರವೇ ವೇಗದ ಮಿತಿಯನ್ನು ಅಳವಡಿಸಬೇಕು. ಜತೆಗೆ ಅಪಾಯ ಇದ್ದ ಕಡೆ ಅಪಘಾತ ವಲಯಗಳನ್ನು ಗುರುತಿಸಿ ಫಲಕಗಳನ್ನು ಹಾಕಬೇಕು. ಅಲ್ಲಲ್ಲಿ ಎಐ ಕ್ಯಾಮೆರಾಗಳನ್ನು ಅಳವಡಿಸಬೇಕು. ಇನ್ನು ಸರ್ವಿಸ್ ರಸ್ತೆಗಳ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಬೇಕು. ಇನ್ನು ಹೆದ್ದಾರಿಗಳ ಮಧ್ಯೆ ಇರುವ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲೂ ಸೂಕ್ತ ಫಲಗಳನ್ನು ಅಳವಡಿಸಿ ಜಾಗೃತಿ ಮೂಡಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Loksabha 2024: ಹೇ ಕೂತ್ಕೊಳಪ್ಪ, ಮೋದಿ ಸೋತಾಗ ಗೊಬ್ಬರದ ರೇಟ್ ಕಡಿಮೆ ಮಾಡ್ತೀವಿ: ಅಭಿಮಾನಿಗೆ ರೇಗಿದ ಸಿಎಂ ಸಿದ್ದರಾಮಯ್ಯ
119 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್‌ವೇ
119 ಕಿ.ಮೀ ಉದ್ದದ ಆರು ಪಥದ ಎಕ್ಸ್‌ಪ್ರೆಸ್ ವೇ ಆಗಿದ್ದು, 8,480 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿದೆ. ಬೆಂಗಳೂರಿನ ನಂತರ ಮೈಸೂರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಉಪ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅದರ ಭಾಗವಾಗಿ ಎರಡೂ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು 8,480 ಕೋಟಿ ರೂ.ಗಳ ವೆಚ್ಚದಲ್ಲಿ ಈ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ. ಜನರೂ ಸಹ ಇಲ್ಲಿ ಖುಷಿಯಿಂದಲೇ ಸಂಚಾರ ಮಾಡುತ್ತಿದ್ದಾರಾದರೂ ವೇಗದಲ್ಲಿ ಹೋಗಿ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ.
-
ಸುವಚನ13 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ13 hours ago
Horoscope Today: ಈ ರಾಶಿಯವರು ಸಾಲ ಕೊಟ್ಟಿದ್ದರೆ ಇಂದು ಹಣ ಹಿಂದಿರುಗುತ್ತದೆ!
-
ಪ್ರಮುಖ ಸುದ್ದಿ19 hours ago
ವಿಸ್ತಾರ ಸಂಪಾದಕೀಯ: ಪಠ್ಯ ಪುಸ್ತಕ ಪರಿಷ್ಕರಣೆ ಆಟ, ವಿದ್ಯಾರ್ಥಿಗಳಿಗೆ ಸಂಕಟ
-
ಅಂಕಣ12 hours ago
ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?
-
ಕರ್ನಾಟಕ20 hours ago
Bellary News: ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಸಾವು
-
ದೇಶ21 hours ago
ಒಡಿಶಾ ರೈಲು ದುರಂತದ ಶವಗಳನ್ನು ಇರಿಸಿದ್ದ ಶಾಲೆಗೆ ಬರಲು ಹೆದರಿದ ಮಕ್ಕಳು; ಕಟ್ಟಡ ನೆಲಸಮ
-
ಕ್ರಿಕೆಟ್9 hours ago
Viral News: ಲಬುಶೇನ್ರನ್ನು ನಿದ್ರೆಯಿಂದ ಬಡಿದೆಬ್ಬಿಸಿದ ಸಿರಾಜ್; ಸಖತ್ ಮಜವಾಗಿದೆ ವಿಡಿಯೊ
-
ಕರ್ನಾಟಕ20 hours ago
300ರಿಂದ 1800 ರೂ.ಗೆ ಜಂಪ್; ಕರೆಂಟ್ ಬಿಲ್ ಕಟ್ಟೋದಿಲ್ಲ, ಏನಾದ್ರೂ ಆಗ್ಲಿ ಎಂದ ಮಹಿಳೆಯರು!