Dina Bhavishya : ಈ ರಾಶಿಯವರು ದಿನದ ಮಟ್ಟಿಗೆ ಹೂಡಿಕೆ ವ್ಯವಹಾರ ಮಾಡ್ಬೇಡಿ; ನಷ್ಟ ಗ್ಯಾರೆಂಟಿ - Vistara News

ಪ್ರಮುಖ ಸುದ್ದಿ

Dina Bhavishya : ಈ ರಾಶಿಯವರು ದಿನದ ಮಟ್ಟಿಗೆ ಹೂಡಿಕೆ ವ್ಯವಹಾರ ಮಾಡ್ಬೇಡಿ; ನಷ್ಟ ಗ್ಯಾರೆಂಟಿ

Dina Bhavishya : ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶೀರ್ಷ ಮಾಸ, ಶುಕ್ಲ ಪಕ್ಷದ ಹುಣ್ಣಿಮೆ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

daily horoscope predictions for december 26 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಮಿಥುನ ರಾಶಿಯಿಂದ ಮಂಗಳವಾರ ಬೆಳಗ್ಗೆ 10:15ಕ್ಕೆ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ಮಿಥುನ, ಸಿಂಹ, ಕನ್ಯಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರ ಆಪ್ತರ ವರ್ತನೆಯು ನಿಮ್ಮ ಮನಸ್ಸಿಗೆ ನೋವು ತರುವ ಸಾಧ್ಯತೆ ಇದೆ. ಹೀಗಾಗಿ ತಾಳ್ಮೆಯಿಂದ ಇರಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ತಲೆದೋರಬಹುದು. ಮಾತಿನಲ್ಲಿ ಹಿಡಿತವಿರಲಿ. ದಿನದ ಮಟ್ಟಿಗೆ ಹಣಕಾಸಿನ ಹೂಡಿಕೆ ವ್ಯವಹಾರ ಮಾಡುವುದು ಬೇಡ. ಕಟಕ ರಾಶಿಯವರು ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರಿಕೆ. ಕೆಲವು ಆಘಾತಗಳನ್ನು ಎದುರಿಸುವುದರಿಂದ ಧೈರ್ಯದಿಂದ ಇರಿ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (26-12-2023)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶೀರ್ಷ ಮಾಸ, ಶುಕ್ಲ ಪಕ್ಷ.
ತಿಥಿ: ಹುಣ್ಣಿಮೆ 30:02 ವಾರ: ಮಂಗಳವಾರ
ನಕ್ಷತ್ರ:ಮೃಗಶಿರಾ 22:20 ಯೋಗ: ಶುಕ್ಲ 27:19
ಕರಣ: ವಿಷ್ಟಿ(ಭದ್ರ) 17:50 ಅಮೃತಕಾಲ: ಮಧ್ಯಾಹ್ನ 1:08 ರಿಂದ 2:56 ರವರೆಗೆ
ದಿನದ ವಿಶೇಷ: ದತ್ತ ಜಯಂತಿ, ಹೊಸ್ತಿಲ ಹುಣ್ಣಿಮೆ, ಕಾರ್ಕಳ ಬಸದಿ ದೀಪೋತ್ಸವ, ಗಾಣಗಾಪುರ ರಥ

ಸೂರ್ಯೋದಯ : 06:39  ಸೂರ್ಯಾಸ್ತ : 06:01

ರಾಹುಕಾಲ : ಮಧ್ಯಾಹ್ನ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಆಪ್ತರ ವರ್ತನೆಯು ನಿಮ್ಮ ಮನಸ್ಸಿಗೆ ನೋವು ತರುವ ಸಾಧ್ಯತೆ ಇದೆ. ಹೀಗಾಗಿ ತಾಳ್ಮೆಯಿಂದ ಇರಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ತಲೆದೋರಬಹುದು. ಮಾತಿನಲ್ಲಿ ಹಿಡಿತವಿರಲಿ. ದಿನದ ಮಟ್ಟಿಗೆ ಹಣಕಾಸಿನ ಹೂಡಿಕೆ ವ್ಯವಹಾರ ಮಾಡುವುದು ಬೇಡ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಇರಲಿ. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವೃಷಭ: ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ ಪ್ರಗತಿಯೊಂದಿಗೆ ಲಾಭ ಪಡೆಯುವಿರಿ. ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿದೆ. ಆಹಾರ ಕ್ರಮದ ವ್ಯತ್ಯಾಸದಿಂದಾಗಿ ಅನಾರೋಗ್ಯ ಸಮಸ್ಯೆ ಕಾಡಬಹುದು. ಹಿರಿಯರಿಂದ ಮಾರ್ಗದರ್ಶನ ಪಡೆಯಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮಿಥುನ: ಯಾರಾದರೂ ನಿಮ್ಮ ಸಹಾಯ ಬೇಡಿ ಬರಹುದು, ವಿಮರ್ಶಿಸಿ ಸಹಾಯ ಮಾಡಿ. ಆರ್ಥಿಕ ಪ್ರಗತಿ ದಿನದ ಮಟ್ಟಿಗೆ ಸಾಧಾರಣವಾಗಿರಲಿದೆ. ಯಾರಾದರೂ ನಿಮ್ಮ ಭಾವನೆಗಳನ್ನು ನಿರಾಸೆ ಮಾಡುವ ಸಾಧ್ಯತೆ ಇದೆ. ಅವರ ಮಾತನ್ನು ಗಂಭೀರವಾಗಿ ಪರಿಗಣಿಸದೇ ಕಾರ್ಯದಲ್ಲಿ ಮುನ್ನುಗ್ಗಿ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಹೊಸ ಭರವಸೆಯ ಆಶಾಭಾವನೆ ಮೂಡಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 2

Horoscope Today

ಕಟಕ: ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರಿಕೆ. ಕೆಲವು ಆಘಾತಗಳನ್ನು ಎದುರಿಸುವುದರಿಂದ ಧೈರ್ಯದಿಂದ ಇರಿ. ನಿಮ್ಮ ಆಸೆ-ಆಕಾಂಕ್ಷೆಗಳು ಯಶಸ್ಸನ್ನು ತಂದುಕೊಡಲಿವೆ. ಪ್ರಯಾಣ ಮಾಡುವ ಮತ್ತು ಹಣ ಖರ್ಚು ಮಾಡುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಸಿಂಹ: ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಹುಡುಕಲು ಸಾಧ್ಯವಾಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕವಾಗಿ ಲಾಭ ಕಡಿಮೆ ಇದೆ. ಹೊಸ ಆಲೋಚನೆಗಳು ನಿಮ್ಮನ್ನು ಸೃಜನಾತ್ಮಕವಾಗಿ ಏನಾದರೂ ಮಾಡಲು ಪ್ರಯತ್ನಿಸುವಂತೆ ಪ್ರೇರೇಪಿಸುತ್ತದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ: ಕುಟುಂಬದ ಆಪ್ತರೊಂದಿಗೆ ಸಂತಸವನ್ನು ಹಂಚಿಕೊಳ್ಳವಿರಿ. ಹಣಕಾಸು ಪರಿಸ್ಥಿತಿ ಸಾಧಾರಣವಾಗಿರಲಿದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ದುಬಾರಿ ವಸ್ತುಗಳನ್ನು ಖರೀದಿಸುವ ಮುನ್ನ ನಿಮ್ಮ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಹಾಸಿಗೆ ಇದ್ದಷ್ಟು ಕಾಲು ಚಾಚಿ. ಆರೋಗ್ಯ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಪ್ರಭಾವಿ ಜನರ ಬೆಂಬಲ ಸಿಗಲಿದೆ.ಇದರಿಂದ ನೈತಿಕ ಸ್ಥೈರ್ಯ ಹೆಚ್ಚಾಗಲಿದೆ. ಒಡಹುಟ್ಟಿದವರ ಸಹಕಾರ ಸಿಗಲಿದೆ. ಆತುರದಲ್ಲಿ ಯಾರೊಂದಿಗೂ ಅತಿರೇಕದ ಮಾತುಗಳನ್ನಾಡಿ ಅಪಾಯ ತಂದುಕೊಳ್ಳುವುದು ಬೇಡ. ದಿನದ ಮಟ್ಟಿಗೆ ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವೃಶ್ಚಿಕ: ಸಕಾರಾತ್ಮಕ ಆಲೋಚನೆಗಳು ಪುಷ್ಟಿ ನೀಡಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಇಂದು ಹಣಕಾಸಿನ ಹೂಡಿಕೆ ವ್ಯವಹಾರ ಮಾಡುವುದು ಬೇಡ. ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಪ್ರಯಾಣದಿಂದ ಲಾಭ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಧನಸ್ಸು: ಭಾವನಾ ಜೀವಿಗಳಾದ ನೀವು ನಕಾರಾತ್ಮಕ ಆಲೋಚನೆಗಳಿಂದ ದೂರ ಇರಿ. ಅಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ, ಕ್ಷೇತ್ರ ದರ್ಶನ ಪಡೆದು ಮಾನಸಿಕ ನೆಮ್ಮದಿ ತಂದುಕೊಳ್ಳುವುದು ಅವಶ್ಯಕ. ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಿ. ಹಣಕಾಸು, ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಮಕರ: ಭರವಸೆಯ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸ್ನೇಹಿತರೊಂದಿಗೆ ಸಮಯ ಕಳೆಯುವ ಸಾಧ್ಯತೆ ಇದೆ. ನಿಮ್ಮ ಶಕ್ತಿ ಸಾಮರ್ಥ್ಯವನ್ನು ಕೆಲಸ ಕಾರ್ಯಗಳಲ್ಲಿ ಬಳಸಿಕೊಂಡರೆ ಇನ್ನೂ ಹೆಚ್ಚು ಆಕರ್ಷಕ ವ್ಯಕ್ತಿತ್ವ ವಿಕಸನ ಆಗುತ್ತದೆ. ಆರೋಗ್ಯ ಉತ್ತಮವಾಗಿರಲಿದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಕುಂಭ: ಅತಿಥಿಗಳ ಆಗಮನ ಸಂತಸ ತರುವುದು. ಆತ್ಮವಿಶ್ವಾಸದ ಹೊಸ ಭರವಸೆ ಮೂಡಲಿದೆ. ಹೂಡಿಕೆಯ ಲಾಭ ಇಂದು ಉಪಯೋಗಕ್ಕೆ ಬರುವುದು. ದೀರ್ಘಕಾಲದ ಪ್ರಯತ್ನ ಇಂದು ಯಶಸ್ಸು ತಂದು ಕೊಡಲಿದೆ. ಆರೋಗ್ಯ, ಉದ್ಯೋಗದಲ್ಲಿ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮೀನ: ಅತಿರೇಕದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಕೋಪಗೊಳ್ಳುವಂತೆ ಉದ್ರೇಕವಾಗುವ ವಿಷಯಗಳಿಂದ ದೂರ ಇರಿ. ತಾಳ್ಮೆಯಿಂದ ವರ್ತಿಸಿ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Maruti Swift : ಹೊಸ ಮಾರುತಿ ಸ್ವಿಫ್ಟ್​ ಕಾರಿನಲ್ಲಿದೆ 50ಕ್ಕೂ ಹೆಚ್ಚು ಫೀಚರ್​ಗಳು

Maruti Swift: ಕಾರಿನಲ್ಲಿ ವೈ-ಫೈ ಮೊಬೈಲ್‌ ಚಾರ್ಜರ್‌, ಹಿಂಭಾಗದಲ್ಲಿ ಏಸಿ ವೆಂಟ್‌, ಟೆಲಿಮ್ಯಾಟಿಕ್ಸ್‌ ಮತ್ತಿತರ ಹೊಸ ಫೀಚರ್​ಗಳನ್ನು ನೀಡಲಾಗಿದೆ. ಈ ನಾಲ್ಕನೆ ತಲೆಮಾರಿನ ಸ್ವಿಫ್ಟ್‌, ʼಬಿʼ ವಿಭಾಗದ ವಾಹನಗಳಲ್ಲಿ ಸಾಮಾನ್ಯವಾಗಿರುವ ಎಲ್‌ಇಡಿ ಪ್ರೊಜೆಕ್ಟರ್​, ಹೆಡ್‌ಲೈಟ್ಸ್‌ ಮತ್ತು ಟೇಲ್‌ಲೈಟ್ಸ್‌ಗಳನ್ನು ಸಹ ಒಳಗೊಂಡಿದೆ ಎಂದು ಮಾರುತಿ ಸುಜುಕಿ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

VISTARANEWS.COM


on

Maruti Swift
Koo

ಬೆಂಗಳೂರು: ಐಷಾರಾಮಿ, ಆರಾಮದಾಯಕ ಮತ್ತು ಇಂಧನ ದಕ್ಷತೆಯ ಕಾರುಗಳ ವಿಭಾಗದಲ್ಲಿ (ಪ್ರೀಮಿಯಂ ಹ್ಯಾಚ್‌ಬ್ಯಾಕ್​ ) ಮಾರುತಿ ಸುಜುಕಿ ಕಂಪನಿಯು ದೇಶಿ ಮಾರುಕಟ್ಟೆಗೆ ಹೊಸದಾಗಿ ಪರಿಚಯಿಸಲಿರುವ ʼಎಪಿಕ್‌ ನ್ಯೂ ಸ್ವಿಫ್ಟ್‌ʼ ಕಾರ್‌ (Maruti Swift) 50ಕ್ಕೂ ಹೆಚ್ಚು ವೈಶಿಷ್ಟತೆಗಳನ್ನು ಒಳಗೊಂಡಿದೆ. ಇದು ನಾಲ್ಕನೇ ಪೀಳಿಗೆಯ ಸ್ವಿಫ್ಟ್ ಕಾರಾಗಿದ್ದು ಇದು 26 ಕಿಲೋಮೀಟರ್​ ಮೈಲೇಜ್ ಕೊಡುವುದಾಗಿ ಕಂಪನಿ ಹೇಳಿಕೊಂಡಿದೆ.

ಕಾರಿನಲ್ಲಿ ವೈ-ಫೈ ಮೊಬೈಲ್‌ ಚಾರ್ಜರ್‌, ಹಿಂಭಾಗದಲ್ಲಿ ಏಸಿ ವೆಂಟ್‌, ಟೆಲಿಮ್ಯಾಟಿಕ್ಸ್‌ ಮತ್ತಿತರ ಹೊಸ ಫೀಚರ್​ಗಳನ್ನು ನೀಡಲಾಗಿದೆ. ಈ ನಾಲ್ಕನೆ ತಲೆಮಾರಿನ ಸ್ವಿಫ್ಟ್‌, ʼಬಿʼ ವಿಭಾಗದ ವಾಹನಗಳಲ್ಲಿ ಸಾಮಾನ್ಯವಾಗಿರುವ ಎಲ್‌ಇಡಿ ಪ್ರೊಜೆಕ್ಟರ್​, ಹೆಡ್‌ಲೈಟ್ಸ್‌ ಮತ್ತು ಟೇಲ್‌ಲೈಟ್ಸ್‌ಗಳನ್ನು ಸಹ ಒಳಗೊಂಡಿದೆ ಎಂದು ಮಾರುತಿ ಸುಜುಕಿ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ʼಎಪಿಕ್ ನ್ಯೂ ಸ್ವಿಫ್ಟ್ʼ ನ ಇತರ ವೈಶಿಷ್ಟತೆಗಳು

ʼಎಪಿಕ್ ನ್ಯೂ ಸ್ವಿಫ್ಟ್ʼ ಉತ್ತಮ ಇಂಧನ ದಕ್ಷತೆ ಹೊಂದಿದೆ. ಸ್ವಯಂಚಾಲಿತ ಮಾದರಿಯಲ್ಲಿ ಇಂಧನ ದಕ್ಷತೆಯು ಶೇ 14ರಷ್ಟು ಸುಧಾರಿಸಿದೆ. ಮ್ಯಾನ್ಯುವಲ್‌ನಲ್ಲಿ ಇಂಧನ ದಕ್ಷತೆಯು ಶೇ 10 ರಷ್ಟು ಸುಧಾರಿಸಿದೆ. ಮೈಲೇಜ್‌ಗೆ ಸಂಬಂಧಿಸಿದಂತೆ, ಸ್ವಯಂಚಾಲಿತ ಮಾದರಿಯಲ್ಲಿ ಮೈಲೇಜ್ 25.7 ಕಿಮೀ/ಲೀಟರ್‌ ಮತ್ತು ಮ್ಯಾನ್ಯುವಲ್‌ನಲ್ಲಿ ಇದು 24.85 ಕಿಮೀ/ಲೀಟರ್‌ ನೀಡುತ್ತದೆ.. ಇವೆರಡೂ ಈ ವಿಭಾಗದಲ್ಲಿ ಗರಿಷ್ಠ ಮೈಲೇಜ್ ಅಗಿದೆ.

ಇದನ್ನೂ ಓದಿ: Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

ಸ್ವಿಫ್ಟ್‌ನಲ್ಲಿ ಬಳಸಲಾದ ಹೊಸ ಎಂಜಿನ್ ಕಾರ್ಬನ್‌ ಡೈಆಕ್ಸೈಡ್‌ (ಸಿಒ2) ಹೊರಸೂಸುವಿಕೆಯನ್ನು ಶೇ 12ವರೆಗೆ ಕಡಿಮೆ ಮಾಡುತ್ತದೆ. ಕಾರಿನ ಎಲ್ಲ ಮಾದರಿಗಳಲ್ಲಿ ಆರು ಏರ್‌ಬ್ಯಾಗ್‌ಗಳು ಇರಲಿವೆ. ಇದು ಸ್ಟ್ಯಾಂಡರ್ಡ್ ಫೀಚರ್ ಆಗಿದೆ.

ಪ್ರೀಮಿಯಂ ಹ್ಯಾಚ್ ವಿಭಾಗವು ಮುಂಬರುವ ದಿನಗಳಲ್ಲಿ ಗಮನಾರ್ಹವಾಗಿ ಬೆಳೆಯುವುದನ್ನು ನಾವು ಎದುರು ನೋಡುತ್ತಿದ್ದೇವೆ. ಸದ್ಯಕ್ಕೆ ವಾರ್ಷಿಕ 7 ಲಕ್ಷದಂತೆ ಮಾರಾಟವಾಗುತ್ತಿರುವ ಈ ವಿಭಾಗದ ಕಾರುಗಳ ಮಾರಾಟವು 2030ರ ವೇಳೆಗೆ, 10 ಲಕ್ಷಕ್ಕೆ ಏರಿಕೆಯಾಗಲಿದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ. ಇದು ಗಮನಾರ್ಹವಾಗಿ ಬೆಳೆಯುತ್ತಿರುವ ವಿಭಾಗವಾಗಿದೆ. ಪ್ರೀಮಿಯಂ ಹ್ಯಾಚ್ ವಿಭಾಗಕ್ಕೆ ಸ್ವಿಫ್ಟ್ ಪುನಶ್ಚೇತನ ನೀಡಲಿದೆ ಎಂಬುದು ನಮ್ಮ ದೃಢ ನಂಬಿಕೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಣ್ಣಗಳ ಆಯ್ಕೆ

ಎರಡು ಆ್ಯಕ್ಸೆಸರಿ ಪ್ಯಾಕೇಜ್‌ಗಳಾದ ರೇಸಿಂಗ್ ರೋಡ್‌ಸ್ಟಾರ್ ಮತ್ತು ಥ್ರಿಲ್ ಚೇಸರ್ ನೀಡುತ್ತದೆ. ಎಪಿಕ್ ನ್ಯೂ ಸ್ವಿಫ್ಟ್ – ಎರಡು ಹೊಸ ಬಣ್ಣಗಳಾದ ಲಸ್ಟರ್ ಬ್ಲೂ ಮತ್ತು ನೋವೆಲ್ ಆರೆಂಜ್‌ನಲ್ಲಿ ಲಭ್ಯ ಇರಲಿದೆ. ಜೊತೆಗೆ ಸಿಜ್ಲಿಂಗ್ ರೆಡ್, ಪರ್ಲ್ ಆರ್ಕ್ಟಿಕ್ ವ್ಹೈಟ್, ಮ್ಯಾಗ್ಮಾ ಗ್ರೇ ಒಳಗೊಂಡಿರುವ ವ್ಯಾಪಕ ಶ್ರೇಣಿಯ ಬಣ್ಣಗಳಲ್ಲಿಯೂ ದೊರೆಯಲಿದೆ. ಮೂರು ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಾದ – ಲಸ್ಟರ್ ಬ್ಲೂ ಜೊತೆಗೆ ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌, ಸಿಜ್ಲಿಂಗ್ ರೆಡ್ ಜೊತೆಗೆ ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌, ಪರ್ಲ್ ಆರ್ಕ್ಟಿಕ್ ವೈಟ್ ಜೊತೆಗೆ ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌ ನಲ್ಲಿಯೂ ಸಹ ಲಭ್ಯ ಇವೆ

ಸ್ವಿಫ್ಟ್​ ಭಾರತದಲ್ಲಿ ಸುಮಾರು 3 ದಶಲಕ್ಷ ಗ್ರಾಹಕರನ್ನು ಹೊಂದಿದೆ

ಸ್ವಿಫ್ಟ್ ಕಾರನ್ನು ಭಾರತದಿಂದ 39 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಹಣಕಾಸು ವರ್ಷ 2023-24 ರಲ್ಲಿ, 33,000 ಕ್ಕೂ ಹೆಚ್ಚು ಸ್ವಿಫ್ಟ್‌ಗಳನ್ನು ರಫ್ತು ಮಾಡಲಾಗಿದೆ. ಮಾರುತಿ ಸುಜುಕಿಯ ಮುಂಚೂಣಿ 3 ರಫ್ತು ಮಾದರಿಗಳಲ್ಲಿ ಸ್ವಿಫ್ಟ್ ಕೂಡ ಸೇರಿದೆ.

ಕರ್ನಾಟಕದ ಮಾರುಕಟ್ಟೆ ಹೇಗಿದೆ?

ಕರ್ನಾಟಕ ಮಾರುಕಟ್ಟೆಯಲ್ಲಿ, ಮಾರುತಿ ಸುಜುಕಿ 1,15,000 ವಾಹನಗಳನ್ನು ಮಾರಾಟ ಮಾಡಿದ್ದು, ಇದು ಶೇ 19ರಷ್ಟು ಬೆಳವಣಿಗೆಯಾಗಿದೆ. ಬೆಂಗಳೂರಿನಲ್ಲಿ 70,000 ಕಾರ್‌ಗಳನ್ನು ಮಾರಾಟ ಮಾಡಲಾಗಿದ್ದು, ರಾಜ್ಯದಲ್ಲಿನ ಒಟ್ಟಾರೆ ಮಾರಾಟದ ಶೇ 60ರಷ್ಟು ಪಾಲು ಹೊಂದಿದೆ. ಬೆಂಗಳೂರಿನಲ್ಲಿನ ಮಾರಾಟವು ಶೇ 15ರಷ್ಟು ಏರಿಕೆಯಾಗಿದೆ. ಕರ್ನಾಟಕದಲ್ಲಿ ಮಾರುತಿ ಸುಜುಕಿಯು 186 ಮಾರಾಟ ಕೇಂದ್ರಗಳು ಮತ್ತು 244 ಸರ್ವೀಸ್‌ ಕೇಂದ್ರಗಳನ್ನು ಹೊಂದಿದೆ.

Continue Reading

ದೇಶ

Police Station: ಪೊಲೀಸ್‌ ಸ್ಟೇಷನ್‌ನಲ್ಲೇ ಪತಿ-ಪತ್ನಿ ಸಾವು; ಠಾಣೆಯನ್ನೇ ಸುಟ್ಟರು ಜನ

Police Station: ವ್ಯಕ್ತಿಯೊಬ್ಬರು ತಮ್ಮ ಹೆಂಡತಿ ತೀರಿಕೊಂಡ ಬಳಿಕ 14 ವರ್ಷದ ನಾದಿನಿಯನ್ನು ಮದುವೆಯಾಗಿದ್ದರು. ಹೆಂಡತಿ ತೀರಿಕೊಂಡ ಬಳಿಕ ನಾದಿನಿಯನ್ನು ವ್ಯಕ್ತಿಯು ಮನೆಗೇ ಕರೆದುಕೊಂಡು ಬಂದಿದ್ದ. ಈ ವಿಷಯ ತಿಳಿದ ಪೊಲೀಸರು ಮೇ 16ರಂದು ವ್ಯಕ್ತಿ ಹಾಗೂ 14 ವರ್ಷದ ಬಾಲಕಿಯನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದರು. ಠಾಣೆಯಲ್ಲಿಯೇ ಇಬ್ಬರು ಮೃತಪಟ್ಟಿದ್ದು, ಇದಾದ ಬಳಿಕ ಗ್ರಾಮಸ್ಥರು ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದ್ದಾರೆ.

VISTARANEWS.COM


on

Police Station
Koo

ಪಟನಾ: ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ (Araria District) ಪೊಲೀಸ್‌ ಕಸ್ಟಡಿಯಲ್ಲಿಯೇ ಗಂಡ ಹಾಗೂ ಹೆಂಡತಿ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸ್‌ ಠಾಣೆಗೇ (Police Station) ಬೆಂಕಿ ಹಚ್ಚಿದ್ದಾರೆ. ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ, ಕಲ್ಲುತೂರಾಟ (Stone Pelting) ನಡೆಸಿದ ಕಾರಣ ಪೊಲೀಸರು ಸ್ವಯಂ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಿಂದಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹೆಚ್ಚಿನ ಪೊಲೀಸರನ್ನೂ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?

ವ್ಯಕ್ತಿಯೊಬ್ಬರು ತಮ್ಮ ಹೆಂಡತಿ ತೀರಿಕೊಂಡ ಬಳಿಕ 14 ವರ್ಷದ ನಾದಿನಿಯನ್ನು ಮದುವೆಯಾಗಿದ್ದರು. ಹೆಂಡತಿ ತೀರಿಕೊಂಡ ಬಳಿಕ ನಾದಿನಿಯನ್ನು ವ್ಯಕ್ತಿಯು ಮನೆಗೇ ಕರೆದುಕೊಂಡು ಬಂದಿದ್ದ. ಈ ವಿಷಯ ತಿಳಿದ ಪೊಲೀಸರು ಮೇ 16ರಂದು ವ್ಯಕ್ತಿ ಹಾಗೂ 14 ವರ್ಷದ ಬಾಲಕಿಯನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದರು. ವ್ಯಕ್ತಿಯ ವಿರುದ್ಧ ಎಫ್‌ಐಆರ್‌ ಕೂಡ ದಾಖಲಿಸಿದ್ದರು. ವಿಚಾರಣೆಗಾಗಿ ಪೊಲೀಸರು ಇಬ್ಬರನ್ನೂ ಕರೆದೊಯ್ದಿದ್ದರು. ಆದರೆ, ಪೊಲೀಸ್‌ ಠಾಣೆಯಲ್ಲಿಯೇ ವ್ಯಕ್ತಿ ಹಾಗೂ ಬಾಲಕಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮಸ್ಥರ ಆರೋಪವೇನು?

ವ್ಯಕ್ತಿ ಹಾಗೂ ಬಾಲಕಿಯನ್ನು ಪೊಲೀಸರೇ ಕೊಂದಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಇಬ್ಬರನ್ನೂ ಪೊಲೀಸ್‌ ಠಾಣೆಗೆ ಕರೆದೊಯ್ದ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಆಕ್ರೋಶದಲ್ಲಿ ಅವರು ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಮಾಡಿದ್ದಾರೆ. ಉದ್ರಿಕ್ತ ಗ್ರಾಮಸ್ಥರ ದಾಳಿಯಲ್ಲಿ ಐದಾರು ಪೊಲೀಸರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಪೊಲೀಸ್‌ ಠಾಣೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ವ್ಯಕ್ತಿಯು ಲಾಕಪ್‌ ಬಾಗಿಲು ಹತ್ತಿ, ಬಟ್ಟೆಯಿಂದ ನೇಣು ಬಿಗಿದುಕೊಂಡಿದ್ದಾನೆ. ಪೊಲೀಸರು ಸ್ವಯಂ ರಕ್ಷಣೆಗಾಗಿ ಗುಂಡು ಹಾರಿಸಿದ ಕಾರಣ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಆದರೆ, ಹಿರಿಯ ಪೊಲೀಸ್‌ ಅಧಿಕಾರಿಗಳು ಘಟನೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: Theft Case : ಪೊಲೀಸ್‌ ಬಸ್ಸನ್ನೇ ಕದಿಯಲು ಬಂದ ಕುಡುಕ; ಪೇಡ ಕೇಳಿದವ 15 ಕೆಜಿ ತುಪ್ಪ ಎಗರಿಸಿದ

Continue Reading

ಪ್ರಮುಖ ಸುದ್ದಿ

Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

Powerful Bikes: 150 ಸಿಸಿಗಳಿಗಿಂತ ಹೆಚ್ಚಿನ ಬೈಕ್​ಗಳೇ ಅವರ ಆದ್ಯತೆಗಳಾಗಿರುತ್ತವೆ. ಹಿಂದೆಲ್ಲ ಭಾರತದ ಮಾರುಕಟ್ಟೆಯಲ್ಲಿ ಪವರ್​ಫುಲ್​ ಬೈಕ್​​ಗಳ ಸಂಖ್ಯೆ ಕಡಿಮೆಯಿದ್ದವು. ಆದರೆ, ಪರಿಸ್ಥಿತಿ ಹಿಂದಿನಂತಿಲ್ಲ. ಕಳೆದ ದಶಕದಲ್ಲಿ, ಪರ್ಫಾಮೆನ್ಸ್ ಬೈಕ್ ಗಳು ಹೆಚ್ಚು ಪ್ರವೇಶಿಸಿವೆ ಮತ್ತು ಕೈಗೆಟುಕುವ ಬೆಲೆಗೆ ದೊರೆಯುತ್ತಿವೆ.

VISTARANEWS.COM


on

Powerful Bike
Koo

ಬೆಂಗಳೂರು: ಪರ್ಫಾಮೆನ್ಸ್​ ಬೈಕ್​ಗಳ ಕಡೆಗಿನ ಕ್ರೇಜ್ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ. ಹೆಚ್ಚು ಸಿಸಿ ಹಾಗೂ ಅಧಿಕ ಪವರ್ ಬಿಡುಗಡೆ ಮಾಡುವ ಬೈಕ್​ಗಳನ್ನು ಹೊಸ ಪೀಳಿಗೆಯ ಜನರು ಇಷ್ಟ ಪಡುತ್ತಾರೆ. 150 ಸಿಸಿಗಳಿಗಿಂತ ಹೆಚ್ಚಿನ ಬೈಕ್​ಗಳೇ ಅವರ ಆದ್ಯತೆಗಳಾಗಿರುತ್ತವೆ. ಹಿಂದೆಲ್ಲ ಭಾರತದ ಮಾರುಕಟ್ಟೆಯಲ್ಲಿ ಪವರ್​ಫುಲ್​ ಬೈಕ್​​ಗಳ (Powerful Bikes) ಸಂಖ್ಯೆ ಕಡಿಮೆಯಿದ್ದವು. ಆದರೆ, ಪರಿಸ್ಥಿತಿ ಹಿಂದಿನಂತಿಲ್ಲ. ಕಳೆದ ದಶಕದಲ್ಲಿ, ಪರ್ಫಾಮೆನ್ಸ್ ಬೈಕ್ ಗಳು ಹೆಚ್ಚು ಪ್ರವೇಶಿಸಿವೆ ಮತ್ತು ಕೈಗೆಟುಕುವ ಬೆಲೆಗೆ ದೊರೆಯುತ್ತಿವೆ. ಜತೆಗೆ ಸ್ಪರ್ಧೆಯೂ ಹೆಚ್ಚಿದೆ. ಹೀಗೆ 2.5 ಲಕ್ಷ ರೂಪಾಯಿಗಿಂತ ಕಡಿಮೆ (ಎಕ್ಸ್​ಶೋರೂಮ್​) ಬೆಲೆಹೊಂದಿರುವ ಕೆಲವು ಬೈಕ್​ಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ. ನಿಮಗೆ ಇಷ್ಟವಾದದ್ದನ್ನು ಆಯ್ಕೆ ಮಾಡಿಕೊಳ್ಳಿ.

ಕೆಟಿಎಂ 250 ಡ್ಯೂಕ್ (31 ಬಿಹೆಚ್ ಪಿ)

ಕೆಟಿಎಂ ಡ್ಯೂಕ್ ಪವರ್​ಫುಲ್​ ಬೈಕ್​ ಮಾತ್ರವಲ್ಲದೆ ಅತ್ಯುತ್ತಮ ಹ್ಯಾಂಡ್ಲರ್ ಕೂಡ ಆಗಿದೆ. ಉತ್ತಮ ಗುಣಮಟ್ಟದ ಬಿಡಿಭಾಗಗಳು ಮತ್ತು ಫೀಚರ್​ಗಳನ್ನು ಹೊಂದಿರುವ 250 ಡ್ಯೂಕ್ ಮಾರುಕಟ್ಟೆಯಲ್ಲಿ ಛಾಪು ಮೂಡಿಸಿದೆ. ಈ ಬೈಕ್ 249 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 9,250 ಆರ್ ಪಿಎಂನಲ್ಲಿ 31 ಬಿಹೆಚ್ ಪಿ ಪವರ್ ಮತ್ತು 7,250 ಆರ್ ಪಿಎಂನಲ್ಲಿ 25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೆನ್-3 250 ಡ್ಯೂಕ್ ಬೈಕಿನಲ್ಲಿ ಪರಿಷ್ಕೃತ ಎರ್ಗೊನಾಮಿಕ್ಸ್, ಅಲ್ಯೂಮಿನಿಯಂ ಸ್ವಿಂಗ್ ಆರ್ಮ್ ಮತ್ತು ಕ್ವಿಕ್ ಶಿಫ್ಟರ್ ಹೊಂದಿದೆ. 250 ಡ್ಯೂಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.40 ಲಕ್ಷಗಳಾಗಿದೆ.

ಟಿವಿಎಸ್ ಅಪಾಚೆ ಆರ್ ಟಿಆರ್ 310 (35.6 ಬಿಹೆಚ್ ಪಿ)

ಅಪಾಚೆ ಆರ್ ಟಿಆರ್ 310 ಬೈಕ್ ಅಪಾಚೆ ಆರ್ ಆರ್ 310 ಬೈಕಿನ ನೇಕೆಡ್ ಆವೃತ್ತಿಯಾಗಿದೆ. ಆದರೆ ಎಂಜಿನ್ ಹೆಚ್ಚಿನ ಶಕ್ತಿ ಮತ್ತು ಟಾರ್ಕ್ ಬದಲಾವಣೆಯಿಲ್ಲ. ಆರ್ ಟಿಆರ್ 310 ಬೈಕ್ 312 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 9,700 ಆರ್ ಪಿಎಂನಲ್ಲಿ 35.6 ಬಿಹೆಚ್ ಪಿ ಪವರ್ ಮತ್ತು 6,650 ಆರ್ ಪಿಎಂನಲ್ಲಿ 28.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಅಪಾಚೆ ಆರ್ ಟಿಆರ್ 310 ಬೈಕ್ ಎಲೆಕ್ಟ್ರಾನಿಕ್ ವಿಜಾರ್ಡಿ ಮತ್ತು ಸೇಫ್ಟಿ ನೆಟ್​ನಂಥ ಸುರಕ್ಷತಾ ಫೀಚರ್​ಗಳಿಂ ಕೂಡಿದೆ. 2.43 ಲಕ್ಷ ರೂ.ಗಳಿಂದ 2.63 ಲಕ್ಷ ರೂ.ಗಳ ನಡುವಿನ ಬೆಲೆಯ ಮೂರು ವೇರಿಯೆಂಟ್​ಗಳು ದೊರೆಯುತ್ತವೆ.

ಬಜಾಜ್ ಡೊಮಿನಾರ್ 400 (40 ಎಚ್​ಪಿ)


ಡೊಮಿನಾರ್ 400 ಬೈಕ್ ಕೆಟಿಎಂ 390 ಡ್ಯೂಕ್ ಬೈಕಿನಿಂದ ಎರವಲು ಪಡೆದ ಎಂಜಿನ್ಹೊಂ ದಿದೆ. ಇದರ 373 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 8,800 ಆರ್ ಪಿಎಂನಲ್ಲಿ 40 ಬಿಹೆಚ್ ಪಿ ಪವರ್ ಮತ್ತು 6,500 ಆರ್ ಪಿಎಂನಲ್ಲಿ 35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೊಮಿನಾರ್ 400 ಬೈಕ್​​ನ ಪ್ಲಸ್​ ಮತ್ತು ಮೈನಸ್ ವಿಚಾರವೆಂದರೆ ಅದರ ತೂಕ. 192 ಕೆ.ಜಿ ತೂಕವನ್ನು ಹೊಂದಿರುವ ಇದು ಈ ಪಟ್ಟಿಯಲ್ಲಿ ಅತಿ ಭಾರವಾದ ಬೈಕ್ ಆಗಿದೆ. ಡೊಮಿನಾರ್ 400 ಬೈಕಿನ ಬೆಲೆಯು ರೂ.2.30 ಲಕ್ಷ ರೂಪಾಯಿ.

ಬಜಾಜ್ ಪಲ್ಸರ್ ಎನ್ಎಸ್400ಝಡ್ (40ಹೆಚ್​ಪಿ)

ಪಲ್ಸರ್ ಎನ್ ಎಸ್ 400 ಝಡ್ ಬಜಾಜ್ ನ ಪಲ್ಸರ್ ಸರಣಿಯ ಬೈಕುಗಳ ಪಟ್ಟಿಗೆ ಹೊಸ ಸೇರ್ಪಡೆ. ಇದು ಡೊಮಿನಾರ್ 400ರ ಎಂಜಿನ್ ಮತ್ತು ಫ್ರೇಮ್ ಅನ್ನು ಹಂಚಿಕೊಳ್ಳುತ್ತದೆ. ಆದರೆ 18 ಕೆಜಿ ಹಗುರ. 174 ಕೆ.ಜಿ ತೂಕ ಹೊಂದಿರುವ ಎನ್ ಎಸ್ 400 ಝಡ್ ಕಾರ್ಯಕ್ಷಮತೆಯ ವಿಷಯದಲ್ಲಿ ಸ್ಪಷ್ಟ ಪ್ರಯೋಜನ ಹೊಂದಿದೆ. ಎಬಿಎಸ್ ನೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸುವ ಟ್ರಾಕ್ಷನ್ ಕಂಟ್ರೋಲ್ ಮತ್ತು ರೈಡಿಂಗ್ ಮೋಡ್ ಗಳಂತಹ ಫೀಚರ್​ಗಳಿಎ. ಪಲ್ಸರ್ ಎನ್ ಎಸ್ 400 ಝಡ್ ಬೈಕಿನ ಬೆಲೆಯು ರೂ.1.85 ಲಕ್ಷಗಳಾಗಿದೆ.

ಇದನ್ನೂ ಓದಿ: Car Care Tips : ನಿಮ್ಮ ಕಾರಿನ ಈ ಬಿಡಿಭಾಗಗಳಿಗೂ ಇವೆ ಎಕ್ಸ್​ಪೈರಿ ಡೇಟ್​​; ಅವುಗಳು ಯಾವವು ಎಂಬುದು ತಿಳಿದಿರಲಿ

ಟ್ರಯಂಫ್ ಸ್ಪೀಡ್ 400 (40hp)

ಟ್ರಯಂಫ್ ಸ್ಪೀಡ್ 400 ಹಿಂದಿನ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ, 176 ಕೆಜಿ ತೂಕವನ್ನು ಹೊಂದಿರುವ ಇದು ಬಜಾಜ್ ಪಲ್ಸರ್ ಎನ್ ಎಸ್ 400 ಝಡ್ ಗಿಂತ ಕೇವಲ 2 ಕೆ.ಜಿ ಹೆಚ್ಚು ತೂಕ ಹೊಂದಿದೆ. ಟ್ರಯಂಫ್ ಬೈಕ್ 398 ಸಿಸಿ ಎಂಜಿನ್ ಸಹಾಯದಿಂದ 8,000 ಆರ್ ಪಿಎಂನಲ್ಲಿ 40 ಬಿಹೆಚ್ ಪಿ ಪವರ್ ಮತ್ತು 6,500 ಆರ್ ಪಿಎಂನಲ್ಲಿ 37.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 2.34 ಲಕ್ಷ ರೂ.ಗಳಲ್ಲಿ, ಟ್ರಯಂಫ್ ‘ವಾಲ್ಯೂ ಫಾರ್ ಮನಿ.

Continue Reading

ಶಿವಮೊಗ್ಗ

Kannada stone inscription: ಕಾಶಿಯಲ್ಲಿ ಕನ್ನಡದ ಶಿಲಾ ಶಾಸನ ಪತ್ತೆ; ಘಾಟ್ ನಲ್ಲಿ ಕಾಲು ಸಂಕವಾಗಿ ಬಳಕೆ!

Kannada stone inscription: ಕಾಶಿಯ ಕಪಿಲಾ ಘಾಟ್ ಬಳಿ ಶಾಸನ ಪತ್ತೆಯಾಗಿದೆ. ಕಾಶಿ ವಿಶ್ವನಾಥ ದೇವಸ್ಥಾನದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಜಾಗದಲ್ಲಿ ಶಾಸನ ಕಂಡುಬಂದಿದೆ. ಘಾಟ್‌ನಲ್ಲಿ ಪತ್ತೆಯಾದ ಈ ಶಾಸನಗಳಲ್ಲಿ ಕೆಲವು ಕಾಲು ಸಂಕವಾಗಿ ಬಳಕೆಯಾಗುತ್ತಿದೆ. ಮತ್ತೆ ಕೆಲವು ಬಟ್ಟೆ ತೊಳೆಯಲು ಬಳಕೆಯಾಗುತ್ತಿದೆ. ಈ ಮೂಲಕ ಅಪರೂಪದ ಶಿಲಾಶಾಸನವೊಂದು ಭಾರಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಗೊತ್ತಾಗಿದೆ.

VISTARANEWS.COM


on

Kannada stone inscription found in Kashi Use as a foot bridge at the ghat
Koo

ಶಿವಮೊಗ್ಗ: ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಾಶಿಯಲ್ಲಿ (Kashi Vishwanath Temple) ಕನ್ನಡದ ಶಿಲಾ ಶಾಸನ (Kannada stone inscription) ಪತ್ತೆಯಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ಕೆಳದಿ ಅರಸರ ಕಾಲದ ಶಾಸನ ಎಂದು ಗೊತ್ತಾಗಿದೆ.

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಅಸ್ತಿತ್ವಕ್ಕೆ ಬಂದಿದ್ದ ಕೆಳದಿ ಸಂಸ್ಥಾನವು ಬರೆದಿದ್ದ ಶಿಲಾ ಶಾಸನ ಇದಾಗಿದೆ. ವಿಜಯನಗರದ ಸಾಮ್ರಾಜ್ಯಕ್ಕೆ ಕೆಳದಿಯ ಅರಸರು ಸಾಮಂತರಾಗಿದ್ದರು.

ಕಪಿಲಾ ಘಾಟ್ ಬಳಿ ಶಾಸನ ಪತ್ತೆ

ಕಾಶಿಯ ಕಪಿಲಾ ಘಾಟ್ ಬಳಿ ಶಾಸನ ಪತ್ತೆಯಾಗಿದೆ. ಕಾಶಿ ವಿಶ್ವನಾಥ ದೇವಸ್ಥಾನದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಜಾಗದಲ್ಲಿ ಶಾಸನ ಕಂಡುಬಂದಿದೆ. ಘಾಟ್‌ನಲ್ಲಿ ಪತ್ತೆಯಾದ ಈ ಶಾಸನಗಳಲ್ಲಿ ಕೆಲವು ಕಾಲು ಸಂಕವಾಗಿ ಬಳಕೆಯಾಗುತ್ತಿದೆ. ಮತ್ತೆ ಕೆಲವು ಬಟ್ಟೆ ತೊಳೆಯಲು ಬಳಕೆಯಾಗುತ್ತಿದೆ. ಈ ಮೂಲಕ ಅಪರೂಪದ ಶಿಲಾಶಾಸನವೊಂದು ಭಾರಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಗೊತ್ತಾಗಿದೆ.

ಕನ್ನಡದಲ್ಲಿ ಕೆತ್ತಲಾಗಿರುವ ಶಾಸನ

ಶಾಸನದಲ್ಲಿ ಕೆಳದಿ ಅರಸ ಶಿವಪ್ಪ ನಾಯಕನ ಹೆಸರನ್ನು ಉಲ್ಲೇಖ ಮಾಡಲಾಗಿದೆ. ಇದು 16ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾಗುತ್ತಿದೆ. ಶಾಸನ ಕಾಲುಸಂಕವಾಗಿ ಬಳಕೆಯಾಗುತ್ತಿರುವುದಕ್ಕೆ ಶಾಸನ ಪ್ರಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸಾಗರದ ವಕೀಲ ಹಾಗೂ ಶಾಸನ ಪ್ರಿಯ ಪ್ರವೀಣ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ಶಾಸನ ರಕ್ಷಣೆ ಆಗಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರವು ಈ ಶಾಸನ ರಕ್ಷಣೆಗೆ ಮುಂದಾಗಬೇಕು. ಉತ್ತರ ಪ್ರದೇಶ ಸರ್ಕಾರವನ್ನು ಸಂಪರ್ಕಿಸಿ ಶಾಸನವನ್ನು ರಕ್ಷಿಸಬೇಕು. ಕೇಂದ್ರ ಪುರಾತತ್ವ ಇಲಾಖೆಯು ತಕ್ಷಣವೇ ಶಾಸನ ರಕ್ಷಣಾ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: HD Deve Gowda: ದೇವೇಗೌಡರಿಗೆ ಜನ್ಮದಿನ ಶುಭ ಕೋರಿದ ಮೋದಿ; ಮಾಜಿ ಪ್ರಧಾನಿಗೆ ಹಲಸಿನ ಹಣ್ಣು ಗಿಫ್ಟ್‌

ಇನ್ನು ಈ ಶಾಸನವು ಕನ್ನಡ ಹಾಗೂ ಪರ್ಶಿಯನ್ ಭಾಷೆಯಲ್ಲಿದ್ದು, ಎರಡೂ ಶಾಸನವನ್ನು ರಕ್ಷಿಸಬೇಕು, ಇದು ಶಿವಮೊಗ್ಗದ ಹೆಮ್ಮೆಯ ಪ್ರತೀಕವಾಗಿದೆ. ಹೀಗಾಗಿ ಇದರ ರಕ್ಷಣೆಯ ಅವಶ್ಯಕತೆ ಇದೆ ಎಂದು ಪ್ರವೀಣ್ ಕುಮಾರ್ ಒತ್ತಾಯಿಸಿದ್ದಾರೆ.

Continue Reading
Advertisement
Aishwarya Rai stopping blue gown at Cannes 2024
ಬಾಲಿವುಡ್8 mins ago

Aishwarya Rai : ಐಶ್ವರ್ಯಾ ರೈ ಸ್ಟೈಲಿಶ್‌ರನ್ನು ವಜಾ ಮಾಡಿ ಎಂದ ನೆಟ್ಟಿಗರು! ಯಾಕಿಷ್ಟು ಆಕ್ರೋಶ?

Maruti Swift
ಪ್ರಮುಖ ಸುದ್ದಿ10 mins ago

Maruti Swift : ಹೊಸ ಮಾರುತಿ ಸ್ವಿಫ್ಟ್​ ಕಾರಿನಲ್ಲಿದೆ 50ಕ್ಕೂ ಹೆಚ್ಚು ಫೀಚರ್​ಗಳು

RCB vs CSK
ಕ್ರೀಡೆ11 mins ago

RCB vs CSK: 11 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸಿದರೆ ಆರ್​ಸಿಬಿಗೆ ಇಂದು ಗೆಲುವು ಖಚಿತ

Nuclear test at Pokhran
ವಿಜ್ಞಾನ13 mins ago

Nuclear Test In Pokhran: ಭಾರತ ಮೊದಲ ಪರಮಾಣು ಪರೀಕ್ಷೆ ನಡೆಸಿ ಇಂದಿಗೆ 50 ವರ್ಷ; ಏನಿದು ಸ್ಮೈಲಿಂಗ್‌ ಬುದ್ಧ?

Namma Metro
ಬೆಂಗಳೂರು20 mins ago

Namma Metro: ಮೆಟ್ರೋಗೆ ಕನೆಕ್ಟ್‌ ಆಗಲಿದೆ ನಮ್ಮ ಯಾತ್ರಿ; ಇನ್ಮುಂದೆ ಆಟೋ ಹಿಡಿಯೋ ಟೆನ್ಷನ್‌ ಇಲ್ಲ

Police Station
ದೇಶ28 mins ago

Police Station: ಪೊಲೀಸ್‌ ಸ್ಟೇಷನ್‌ನಲ್ಲೇ ಪತಿ-ಪತ್ನಿ ಸಾವು; ಠಾಣೆಯನ್ನೇ ಸುಟ್ಟರು ಜನ

Milana Nagaraj Anarkali border gown worn
ಸ್ಯಾಂಡಲ್ ವುಡ್56 mins ago

Milana Nagaraj: ಗರ್ಭಿಣಿ ಮಿಲನಾ ನಾಗರಾಜ್‌ ಧರಿಸಿರುವ ಕ್ರಶ್ಡ್ ಅನಾರ್ಕಲಿ ಬಾರ್ಡರ್‌ ಗೌನ್‌ನ ವಿಶೇಷ ಏನು?

Boxer Parveen
ಕ್ರೀಡೆ58 mins ago

Boxer Parveen: ಒಲಿಂಪಿಕ್ಸ್‌ ಕೋಟಾ ಕಳೆದುಕೊಂಡ ಭಾರತದ ಬಾಕ್ಸರ್‌ ಪರ್ವೀನ್‌

Famous Food of bangalore
ಆಹಾರ/ಅಡುಗೆ1 hour ago

Famous Food of Bangalore: ಬೆಂಗಳೂರಿಗೆ ಬಂದಾಗ ಈ ಖಾದ್ಯಗಳ ರುಚಿ ನೋಡಲು ಮರೆಯಬೇಡಿ!

Prime Minister of India
ರಾಜಕೀಯ1 hour ago

Prime Minister Of India: ಸುದೀರ್ಘ ಕಾಲ ಪ್ರಧಾನಿಯಾಗಿದ್ದ ನೆಹರೂ, ಇಂದಿರಾ ದಾಖಲೆಯನ್ನು ಮೋದಿ ಮುರಿಯಲು ಸಾಧ್ಯವೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ20 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌