ಪ್ರಮುಖ ಸುದ್ದಿ
Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಿರಿಕಿರಿ ತಪ್ಪಲ್ಲ!
ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷದ ತ್ರಯೋದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Dina Bhavishya) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಚಂದ್ರನು ಸೋಮವಾರದಂದು ಕಟಕ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ವೃಷಭ, ಕಟಕ, ಕನ್ಯಾ, ತುಲಾ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರಿಗೆ ಉದ್ಯೋಗದ ಸ್ಥಳದಲ್ಲಿ ಪಿತೂರಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆ ಇರಲಿ. ವೃಷಭ ರಾಶಿಯವರಿಗೂ ಸಹದ್ಯೋಗಿಗಳಿಂದ ಕಿರಿಕಿರಿ ಉಂಟಾಗಲಿದೆ. ತುಲಾ ರಾಶಿಯವರು ಆತುರದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಸಂಗಾತಿಯ ವರ್ತನೆ ಮುಜುಗರ ಉಂಟು ಮಾಡುವ ಸಾಧ್ಯತೆ. ಮಾತಿಗೆ ಮಾತು ಬೆಳೆಸುವುದು ಬೇಡ. ಉಳಿದ ರಾಶಿಗಳ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.
ಇಂದಿನ ಪಂಚಾಂಗ (kannada panchanga) (14-08-2023)
ಮೇಷ: ಅತಿಯಾದ ಒತ್ತಡ ಕಡಿಮೆ ಮಾಡಿಕೊಳ್ಳಲು ಆಧ್ಯಾತ್ಮಿಕ ಸಾಧನೆ ಅವಶ್ಯಕ. ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ. ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡುವುವರ ಬಗ್ಗೆ ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7
ವೃಷಭ: ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವ ಅವಕಾಶ ಸಿಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ. ಉತ್ತಮ ಆರೋಗ್ಯ. ಸಹದ್ಯೋಗಿಗಳಿಂದ ಕಿರಿಕಿರಿ, ತಾಳ್ಮೆಯಿಂದ ವರ್ತಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6
ಮಿಥುನ: ಬಂಧುಗಳು ಟೀಕೆಗಳನ್ನು ಮಾಡುವ ಸಾಧ್ಯತೆ. ದಿನದ ಮಟ್ಟಿಗೆ ಒತ್ತಡ ಮಾನಸಿಕ ನೆಮ್ಮದಿ ಹಾಳು ಮಾಡುವ ಸಾಧ್ಯತೆ. ಸಂಯಮದಿಂದ ವರ್ತಿಸಿ. ಆರ್ಥಿಕ ಪ್ರಗತಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4
ಕಟಕ: ಪ್ರಮುಖ ವ್ಯಕ್ತಿಗಳ ಸಹಕಾರ ಸಿಗಲಿದೆ. ಆತುರದ ತಿರ್ಮಾನ ತೆಗೆದುಕೊಳ್ಳುವುದು ಬೇಡ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಆರೋಗ್ಯ ಪರಿಪೂರ್ಣವಾಗಿರುತ್ತದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8
ಸಿಂಹ: ಮಿತಿ ಮೀರಿದ ಕೆಲಸದ ಒತ್ತಡದಿಂದಾಗಿ ದಣಿವು, ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ. ಆರೋಗ್ಯದ ಬಗೆಗೆ ಕಾಳಜಿ ವಹಿಸಿ. ಮಕ್ಕಳಿಂದ ಸಂತೋಷ ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6
ಕನ್ಯಾ: ನಿಮ್ಮ ವರ್ತನೆ ಕುಟುಂಬದ ಸದಸ್ಯರಿಗೆ ಕಿರಿಕಿರಿ ಉಂಟು ಮಾಡುವ ಸಾಧ್ಯತೆ. ಆರೋಗ್ಯದಲ್ಲಿ ವ್ಯತ್ಯಾಸ. ಹಣಕಾಸು ಪ್ರಗತಿ. ಬಂಧುಗಳ ಭೇಟಿ ಕೊಂಚ ಸಮಾಧಾನ ತರುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆತುರದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಸಂಗಾತಿಯ ವರ್ತನೆ ಮುಜುಗರ ಉಂಟು ಮಾಡುವ ಸಾಧ್ಯತೆ. ಮಾತಿಗೆ ಮಾತು ಬೆಳೆಸುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7
ವೃಶ್ಚಿಕ: ಕುಟುಂಬ ಸದಸ್ಯರ ಆರೋಗ್ಯ ಕಡೆ ಗಮನ ಇರಲಿ. ನಕಾರಾತ್ಮಕ ಆಲೋಚನೆಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುವಂತೆ ಮಾಡಬಹುದು. ದಿನದ ಮಟ್ಟಿಗೆ ಖರ್ಚು. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9
ಧನಸ್ಸು: ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಆಪ್ತ ಸ್ನೇಹಿತ- ಸಂಬಂಧಿಗಳ ಸಮಸ್ಯೆಗಳಿಗೆ ಸ್ಪಂದಿಸುವಿರಿ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6
ಯಾವ ರಾಶಿಯವರು ಯಾವ ಕೆಲಸ ಮಾಡಬೇಕು?
ಮಕರ: ಆರೋಗ್ಯ ಉತ್ತಮ. ಸ್ನೇಹಿತರ ಸಹಕಾರ ಸಿಗಲಿದೆ. ಆರ್ಥಿಕ ಪ್ರಗತಿ ಉತ್ತಮ. ಕೆಲಸದ ನಿಧಾನಗತಿ ಸ್ವಲ್ಪ ಒತ್ತಡ ತರುವುದು. ಅತಿರೇಖದಲ್ಲಿ ಮಾತನಾಡುವುದು ಬೇಡ. ಸಮಾಧಾನದಿಂದ ವರ್ತಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6
ಕುಂಭ: ಉದ್ಯೋಗದ ಸ್ಥಳದಲ್ಲಿ ಪ್ರಸಂಶೆ ಸಿಗಲಿದೆ. ಹಿರಿಯರ ಮಾರ್ಗದರ್ಶನ ಸಿಗುವುದು. ಉತ್ತಮ ಆರೋಗ್ಯ. ಅನಿರೀಕ್ಷಿತ ಖರ್ಚು. ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ.
ಅದೃಷ್ಟ ಸಂಖ್ಯೆ: 3
ಇದನ್ನೂ ಓದಿ : Prerane column : ನಿಮ್ಮ ನಿಮ್ಮ ಬದುಕಿಗೆ ನೀವೇ ಜವಾಬ್ದಾರಿ; ಅದನ್ನು ಬೇರೆಯವರ ಮೇಲೆ ಹೊರಿಸಿದರೆ ನೀವು Waste Body!
ಮೀನ: ಉದ್ಯೋಗದ ಸ್ಥಳದಲ್ಲಿ ಹೊಸ ಭರವಸೆಗಳು ಮೂಡಲಿವೆ. ಕಾರ್ಯಗಳಲ್ಲಿ ಯಶಸ್ಸು. ಪಾಲುದಾರಿಕೆ ವ್ಯವಹಾರವು ನಷ್ಟ ತರುವುದು. ನಿಮ್ಮ ಉದಾರ ವರ್ತನೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | [email protected]
ಕರ್ನಾಟಕ
Congress Politics : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಧಿಕೃತ ಎಂಟ್ರಿ; ಎಲ್ಲಾ 28 ಕ್ಷೇತ್ರಗಳಿಗೆ ವೀಕ್ಷಕರ ನೇಮಕ
Congress Politics : ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ರಣ ಕಣ ಪ್ರವೇಶ ಮಾಡಿದೆ. ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ತಟಸ್ಥ ವೀಕ್ಷರನ್ನು ನೇಮಿಸಿದೆ.
ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಗೆ (Assembly Elections 2023) ಚುರುಕಿನ ಸಿದ್ದತೆಯೊಂದಿಗೆ ಗಮನ ಸೆಳೆದು ಅಂತಿಮವಾಗಿ ಭರ್ಜರಿ ಬಹುಮತವನ್ನು ಗಳಿಸಿದ ಕಾಂಗ್ರೆಸ್ ಇದೀಗ 2024ರ ಲೋಕಸಭಾ ಚುನಾವಣೆಗೂ (Parliament Elections 2024) ಅದೇ ರೀತಿಯ ಕಾರ್ಯತಂತ್ರವನ್ನು (Congress Politics) ರೂಪಿಸುವಂತೆ ಕಂಡುಬರುತ್ತಿದೆ. ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೂ (Lokasabha Constituencies) ವೀಕ್ಷಕರನ್ನು ನೇಮಿಸುವ (Observers appointed) ಮೂಲಕ ಅದು ಮೊದಲ ಹೆಜ್ಜೆ ಇಟ್ಟು ಅಧಿಕೃತವಾಗಿ ಎಂಟ್ರಿ ಪಡೆದುಕೊಂಡಿದೆ.
ಇತ್ತ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು (BJP-JDS Alliance) ಅಧಿಕೃತವಾಗಿ ಮೈತ್ರಿ ಮಾಡಿಕೊಂಡು ಇನ್ನು ಸೀಟು ಹಂಚಿಕೆಯ ಸಿದ್ಧತೆಗೆ ತೊಡಗಲು ಅಣಿಯಾಗುತ್ತಿದ್ದಂತೆಯೇ ಕಾಂಗ್ರೆಸ್ ತನ್ನ ದಾಳ ಉರುಳಿಸಿದೆ. ಕಳೆದ ಬಾರಿ ಕೇವಲ ಒಂದೇ ಒಂದು ಸ್ಥಾನ ಗೆಲ್ಲುವಲ್ಲಿ ಸಫಲವಾಗಿದ್ದ (ಬೆಂಗಳೂರು ಗ್ರಾಮಾಂತರ) ಕಾಂಗ್ರೆಸ್ ಈ ಬಾರಿ ಟಾರ್ಗೆಟ್ 20ಯನ್ನು ಇಟ್ಟುಕೊಂಡಿದೆ. ಕಳೆದ ಬಾರಿ ಬಿಜೆಪಿ 25, ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಹಾಗೂ ಪಕ್ಷೇತರರಾಗಿ ಸುಮಲತಾ ಗೆದ್ದಿದ್ದರು. ಈ ಬಾರಿ ಸುಮಲತಾ ಅವರು ಬಿಜೆಪಿಯ ಸಹಸದಸ್ಯೆಯಾಗಿದ್ದಾರೆ. ಈ ಬಾರಿ ರಾಜ್ಯದ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲುವುದು ಬಿಜೆಪಿ ರಣತಂತ್ರ. ಎರಡೂ ಪಾಳಯಗಳು ಬಿಗಿಯಾದ ಹೋರಾಟಕ್ಕೆ ಅಣಿಯಾಗುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ ವೀಕ್ಷಕರ ನೇಮಕದ ಮೂಲಕ ಮೊದಲ ಬಾಣ ಬಿಟ್ಟಿದೆ.
ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರು ಈ ಸುತ್ತೋಲೆಯನ್ನು ಹೊರಡಿಸಿದ್ದು, ತಕ್ಷಣದಿಂದ ಕಾರ್ಯಾಚರಣೆ ಶುರು ಮಾಡುವಂತೆ ಸೂಚಿಸಿದ್ದಾರೆ.
ಯಾವ ಕ್ಷೇತ್ರಕ್ಕೆ ಯಾರು ವೀಕ್ಷಕರು?
1.ಬಾಗಲಕೋಟೆ: ಪ್ರಿಯಾಂಕ ಖರ್ಗೆ
2.ಬೆಂಗಳೂರು ಸೆಂಟ್ರಲ್: ಎನ್‌ಎಸ್ ಬೋಸರಾಜು
3.ಬೆಂಗಳೂರು ಉತ್ತರ: ಡಾ. ಜಿ. ಪರಮೇಶ್ವರ್
4.ಬೆಂಗಳೂರು ಗ್ರಾಮಾಂತರ: ಕೆ. ವೆಂಕಟೇಶ್
5.ಬೆಂಗಳೂರು ದಕ್ಷಿಣ : ಡಾ. ಶರಣ್ ಪ್ರಕಾಶ್ ಪಾಟೀಲ್
6. ಬೆಳಗಾವಿ: ಶಿವರಾಜ್ ಎಂ. ತಂಗಡಗಿ
7. ಗುಲ್ಬರ್ಗ: ಬಿ. ನಾಗೇಂದ್ರ
8. ಬೀದರ್: ಸಂತೋಷ್ ಎಸ್. ಲಾಡ್
9. ವಿಜಯಪುರ: ಸತೀಶ್ ಜಾರಕಿಹೊಳಿ
10. ಚಾಮರಾಜ ನಗರ: ದಿನೇಶ್ ಗುಂಡೂರಾವ್
11. ಚಿಕ್ಕಬಳ್ಳಾಪುರ: ಜಮೀರ್ ಅಹಮದ್ ಖಾನ್
12. ಚಿಕ್ಕೋಡಿ: ಡಿ. ಸುಧಾಕರ್
13. ಚಿತ್ರದುರ್ಗ: ಡಾ.ಎಚ್.ಸಿ. ಮಹದೇವಪ್ಪ
14. ದಕ್ಷಿಣ ಕನ್ನಡ: ಮಧು ಬಂಗಾರಪ್ಪ
15. ದಾವಣಗೆರೆ: ಈಶ್ವರ ಖಂಡ್ರೆ
16. ಧಾರವಾಡ: ಲಕ್ಷ್ಮೀ ಹೆಬ್ಬಾಳ್ಕರ್
17. ಬಳ್ಳಾರಿ: ಶಿವಾನಂದ ಪಾಟೀಲ್
18. ಹಾಸನ: ಎನ್. ಚೆಲುವರಾಯ ಸ್ವಾಮಿ
19. ಹಾವೇರಿ: ಎಸ್.ಎಸ್. ಮಲ್ಲಿಕಾರ್ಜುನ
20. ಕೋಲಾರ: ರಾಮಲಿಂಗಾ ರೆಡ್ಡಿ
21. ಕೊಪ್ಪಳ: ಆರ್.ಬಿ. ತಿಮ್ಮಾಪುರ
22. ಮಂಡ್ಯ: ಡಾ.ಎಂ.ಸಿ. ಸುಧಾಕರ್
23. ಮೈಸೂರು: ಭೈರತಿ ಸುರೇಶ್
24. ರಾಯಚೂರು: ಕೆ.ಎಚ್. ಮುನಿಯಪ್ಪ
25. ಶಿವಮೊಗ್ಗ: ಕೆ.ಎನ್. ರಾಜಣ್ಣ
26. ತುಮಕೂರು: ಕೃಷ್ಣ ಬೈರೇಗೌಡ
27. ಉಡುಪಿ-ಚಿಕ್ಕಮಗಳೂರು: ಮಂಕಾಳ ವೈದ್ಯ
28. ಉತ್ತರ ಕನ್ನಡ ಎಚ್.ಕೆ. ಪಾಟೀಲ್
ವೀಕ್ಷಕರಿಗೆ ವಹಿಸಿರುವ ಕೆಲಸಗಳೇನು?
- ಕ್ಷೇತ್ರ ಪ್ರವಾಸ ಮಾಡಿ ಎಲ್ಲ ಹಂತದ ಮುಖಂಡರ ಜತೆ ಚರ್ಚೆ ಮಾಡಬೇಕು. ಸಭೆಗಳನ್ನು ಆಯೋಜಿಸಿ ಅಭಿಪ್ರಾಯ ಕೇಳಬೇಕು.
- ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕು ಸಮಗ್ರ ವರದಿಯನು ನೀಡಬೇಕು.
- ಕ್ಷೇತ್ರದಲ್ಲಿ ಪಕ್ಷದ ಸ್ಥಿತಿಗತಿ ಹೇಗಿದೆ? ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಇರಬಹುದು?
- ಯಾರೆಲ್ಲ ಅಭ್ಯರ್ಥಿಗಳಾಗಲು ಸಿದ್ಧತೆ ನಡೆಸಿದ್ದಾರೆ? ಯಾರ ಬಲ ಎಷ್ಟು? ಯಾರ ದೌರ್ಬಲ್ಯ ಏನು?
- ಕ್ಷೇತ್ರದಲ್ಲಿ ಯುವ ಅಭ್ಯರ್ಥಿಗಳಿದ್ದಾರಾ? ಪಕ್ಷಕ್ಕಾಗಿ ದುಡಿದವರು ಇದ್ದಾರಾ? ಎಲೆಮರೆಯ ಕಾಯಿಯಂತಿರುವ ಸಾಧಕರು ಇದ್ದಾರಾ?
- ಎಲ್ಲ ವಿಚಾರಗಳನ್ನು ಒಳಗೊಂಡ ವರದಿಯನ್ನು ವೀಕ್ಷಕರು ನೀಡಬೇಕು.
ಡಿ.ಕೆ. ಶಿವಕುಮಾರ್ ಅವರು ಬಿಡುಗಡೆ ಮಾಡಿರುವ ವೀಕ್ಷಕರ ಪಟ್ಟಿಯಲ್ಲಿರುವ ವಿಶೇಷವೇನೆಂದರೆ ಯಾರಿಗೂ ಅವರ ಜಿಲ್ಲೆ ಯಾ ಕ್ಷೇತ್ರಕ್ಕೆ ಸಂಬಂಧಿಸಿ ಕ್ಷೇತ್ರವನ್ನು ನೀಡಿಲ್ಲ. ಉತ್ತರ ಕರ್ನಾಟಕದವರಿಗೆ ದಕ್ಷಿಣ ಕರ್ನಾಟಕ, ದಕ್ಷಿಣದವರಿಗೆ ಮಧ್ಯ, ಉತ್ತರ ಕರ್ನಾಟಕ.. ಹೀಗೆ ನಿಗದಿ ಮಾಡಲಾಗಿದೆ. ಯಾರೂ ಯಾವುದೇ ವಿಚಾರಗಳಿಂದಲೂ ಪ್ರಭಾವಿತರಾಗದೆ ಯಥಾಸ್ಥಿತಿ ವರದಿ ನೀಡಬೇಕು ಎನ್ನುವ ಆಶಯದಿಂದ ಈ ರೀತಿ ಮಾಡಲಾಗಿದೆ ಎನ್ನಲಾಗಿದೆ.
ಕ್ರೀಡೆ
Asian Games 2023: 19ನೇ ಏಷ್ಯನ್ ಗೇಮ್ಸ್‌ಗೆ ಅದ್ಧೂರಿ ಚಾಲನೆ; ನನಸಾಗಲಿ ಭಾರತದ ‘ಪದಕ ಶತಕ’ದ ಕನಸು…
19ನೇ ಏಷ್ಯನ್ ಗೇಮ್ಸ್‌ಗೆ(Asian Games 2023) ಇಂದು ಚೀನಾದ ಹ್ಯಾಂಗ್‌ಝೂನಲ್ಲಿ ಅದ್ಧೂರಿ ಚಾಲನೆ ದೊರೆತಿದೆ.
ಚೀನಾ: ಜಗತ್ತನ್ನೇ ಬೆಚ್ಚಿಬೀಳಿಸಿದ ಕೊರೊನಾ ಮಹಾ ಮಾರಿಯಿಂದಾಗಿ ಕಳೆದ ಬಾರಿ ರದ್ದುಗೊಂಡಿದ್ದ 19ನೇ ಏಷ್ಯನ್ ಗೇಮ್ಸ್‌ಗೆ(Asian Games 2023) ಇಂದು ಚೀನಾದ ಹ್ಯಾಂಗ್‌ಝೂನಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಭಾರತ ತಂಡವನ್ನು ಪಥ ಸಂಚಲನದಲ್ಲಿ ವಿಶ್ವ ಚಾಂಪಿಯನ್‌ಶಿಪ್ ಚಿನ್ನ, ಒಲಿಂಪಿಕ್ಸ್ ಕಂಚು ವಿಜೇತ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್(Lovlina Borgohain), ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್(Harmanpreet Singh) ಧ್ವಜಧಾರಿಗಳಾಗಿ ಮುನ್ನಡೆಸಿದರು.
ಒಲಿಂಪಿಕ್ಸ್ ಬಳಿಕ ಜಗತ್ತಿನ ಎರಡನೇ ಅತಿ ದೊಡ್ಡ ಕ್ರೀಡಾಕೂಟ ಎಂದು ಕರೆಯಲ್ಪಡುವ ಈ ಕೂಟದಲ್ಲಿ ಭಾರತ ಸೇರಿ ವಿಶ್ವದ 45 ದೇಶಗಳು ಕಣಕ್ಕಿಳಿಯಲಿವೆ. ಅಕ್ಟೋಬರ್ 8ರ ವರೆಗೆ ಬಹುಸ್ಪರ್ಧೆಗಳ ಕ್ರೀಡಾಕೂಟ ನಡೆಯಲಿದೆ. ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ದೃಷ್ಟಿಯಲ್ಲಿ ಇಲ್ಲಿ ಪಾಲ್ಗೊಳ್ಳಲಿರುವ ಕ್ರೀಡಾಪಟುಗಳಿಗೆ ಇದೊಂದು ಅಗ್ನಿಪರೀಕ್ಷೆಯಾಗಿದೆ. ಚೀನಾದ ಸಾಂಸ್ಕೃತಿಕ ಕಲಾ ವೈಭವದ ಅನಾವರಣದೊಂದಿಗೆ ಅತ್ಯಾಧುನಿಕ ಲೇಸರ್ ಶೋಗಳು, ರೋಬೋಟ್‌ಗಳ ಜತೆ ಚೀನಿ ತಾರೆಯರ ನೃತ್ಯ ಕಣ್ಮನ ಸೆಳೆಯಲಿದೆ.
ದಾಖಲೆಯ ಕ್ರೀಡಾಪಟುಗಳು
ಭಾರತ ಒಟ್ಟು 38 ವಿಭಾಗಗಳಲ್ಲಿ ಸ್ಪರ್ಧೆಗೆ ಇಳಿಯಲಿದೆ. ಈ 634 ಕ್ರೀಡಾಪಟುಗಳ(634 athletes) ಯಾದಿಯಲ್ಲಿ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ನ ಗರಿಷ್ಠ 65 ಆ್ಯತ್ಲೀಟ್‌ಗಳಿದ್ದಾರೆ. ಇವರಲ್ಲಿ 34 ಪುರುಷರು ಹಾಗೂ 31 ವನಿತೆಯರು. ಅನಂತರದ ಸ್ಥಾನ ಫುಟ್ಬಾಲ್ ಮತ್ತು ಹಾಕಿ ತಂಡಗಳಿಗೆ ಸಲ್ಲುತ್ತದೆ. ಎರಡೂ ಫುಟ್ಬಾಲ್ ತಂಡಗಳು ಸ್ಪರ್ಧಿಸಲಿದ್ದು, ಇಲ್ಲಿನ ಆಟಗಾರರ ಸಂಖ್ಯೆ 44. ಹಾಕಿಪಟುಗಳ ಒಟ್ಟು ಸಂಖ್ಯೆ 36. ಪುರುಷರ ಹಾಗೂ ವನಿತೆಯರ ಕ್ರಿಕೆಟ್ ತಂಡಗಳೂ ಪದಕ ಸ್ಪರ್ಧೆಗೆ ಇಳಿಯಲಿವೆ. ಒಂದೊಂದು ತಂಡದಲ್ಲಿ 15 ಸದಸ್ಯರಿದ್ದಾರೆ. ಸೈಲಿಂಗ್‌ನಲ್ಲಿ 33, ಶೂಟಿಂಗ್‌ನಲ್ಲಿ 30 ಸ್ಪರ್ಧಿಗಳಿದ್ದಾರೆ. ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಮಹಿಳೆಯರ ಮತ್ತು ಪುರುಷರ ತಂಡ ಇದೇ ಮೊದಲ ಬಾರಿಗೆ ಕಣಕ್ಕಿಳಿಯುತ್ತಿದೆ.
16 ದಿನಗಳ ಕ್ರೀಡಾಕೂಟ
16 ದಿನಗಳ ಕಾಲ ಈ ಕ್ರೀಡಾಕೂಟ ನಡೆಯಲಿದೆ. 2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡವು 70 ಪದಕಗಳನ್ನು (16 ಚಿನ್ನ, 23 ಬೆಳ್ಳಿ ಹಾಗೂ 31 ಕಂಚು) ಜಯಿಸಿತ್ತು. ಈ ಬಾರಿ ನೂರರ ಗಡಿ ದಾಟುವ ಆತ್ಮವಿಶ್ವಾಸದಲ್ಲಿ,. ಈ ಬಾರಿ ದಾಖಲೆಯ 650ಕ್ಕೂ ಹೆಚ್ಚು ಕ್ರೀಡಾಪಟುಗಳನ್ನು ಕಣಕ್ಕಿಳಿದಿದ್ದಾರೆ. ಹೀಗಾಗಿ ಪದಕ ಪಟ್ಟಿಯಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ.
ಭಾರತದ ಧ್ವಜಧಾರಿಗಳಾದ ಲವ್ಲೀನಾ ಬೊರ್ಗೊಹೈನ್ -ಹರ್ಮನ್‌ಪ್ರೀತ್ ಸಿಂಗ್
481 ಸ್ಪರ್ಧೆಗಳು
ಕ್ರೀಡಾಕೂಟದಲ್ಲಿ ಒಟ್ಟು 40 ಕ್ರೀಡೆಗಳ 481 ಸ್ಪರ್ಧೆಗಳು ನಡೆಯಲಿವೆ. ಒಟ್ಟು 44 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. 14 ಕ್ರೀಡಾಂಗಣಗಳನ್ನು ಹೊಸದಾಗಿ ನಿರ್ಮಿಸಲಾಗಿದೆ.
12000+ ಅಥ್ಲೀಟ್ಸ್!
ಒಟ್ಟು 12000ಕ್ಕೂ ಹೆಚ್ಚು ಕ್ರೀಡಾಳುಗಳು ಇಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಥಾಯ್ಲೆಂಡ್ ಅತಿಹೆಚ್ಚು 934 ಕ್ರೀಡಾಪಟುಗಳನ್ನು ಕಣಕ್ಕಿಳಿದರೆ, ಆತಿಥೇಯ ಚೀನಾ 887 ಕ್ರೀಡಾಪಟುಗಳು, ಜಪಾನ್‌ನ 773 ಕ್ರೀಡಾಪಟುಗಳು, ಭಾರತ 653 ಕ್ರೀಡಾಪಟುಗಳು ಪದಕಕ್ಕಾಗಿ ಸೆಣಸಾಡಲಿದ್ದಾರೆ.
India 🇮🇳 lead by Lovlina Borgohain and Harmanpreet at Opening ceremony of Asian Games Opening Ceremony.#AsianGames2022#Hangzhou #AsianGames2023 pic.twitter.com/Nh27OkOEXP
— ❤️ 🏸 (@ajoshijdpece) September 23, 2023
ಭಾರತದ ಸ್ಪರ್ಧೆ ನಡೆಯುವ ದಿನಾಂಕಗಳು
- ಬಿಲ್ಲುಗಾರಿಕೆ: ಅಕ್ಟೋಬರ್ 1-7: 10 ಸ್ಪರ್ಧೆಗಳು, 16 ಭಾರತೀಯ ಸ್ಪರ್ಧಿಗಳು
- ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್: ಸೆಪ್ಟೆಂಬರ್ 24-29: 14 ಸ್ಪರ್ಧೆಗಳು, ಭಾರತದ ಸ್ಪರ್ಧಿಗಳು ಇಲ್ಲ
- ಆರ್ಟಿಸ್ಟಿಕ್ ಈಜು: ಅಕ್ಟೋಬರ್ 6-8; 2 ಸ್ಪರ್ಧೆಗಳು, ಭಾರತದ ಸ್ಪರ್ಧಿಗಳು ಇಲ್ಲ
- ಅಥ್ಲೆಟಿಕ್ಸ್: ಸೆಪ್ಟೆಂಬರ್ 29:, ಅಕ್ಟೋಬರ್ 5, 48 ಸ್ಪರ್ಧೆಗಳು 68 ಭಾರತೀಯ ಸ್ಪರ್ಧಿಗಳು
- ಬ್ಯಾಡ್ಮಿಂಟನ್: ಸೆಪ್ಟೆಂಬರ್ 28ರಿಂದ ಅಕ್ಟೋಬರ್ 7, 7 ಸ್ಪರ್ಧೆಗಳು, 19 ಭಾರತೀಯ ಸ್ಪರ್ಧಿಗಳು
- ಬ್ಯಾಸ್ಕೆಟ್ ಬಾಲ್ (5×5): ಸೆಪ್ಟೆಂಬರ್ 26- ಅಕ್ಟೋಬರ್ 6 2 12 (1 ತಂಡ) ಭಾರತೀಯ ಸ್ಪರ್ಧಿಗಳು
- ಬ್ಯಾಸ್ಕೆಟ್ಬಾಲ್ (3×3): ಸೆಪ್ಟೆಂಬರ್ 25 – ಅಕ್ಟೋಬರ್ 1, 2 ಸ್ಪರ್ಧೆಗಳು, (2 ತಂಡಗಳು)
- ಬೇಸ್ ಬಾಲ್ : ಸೆಪ್ಟೆಂಬರ್ 26 – ಅಕ್ಟೋಬರ್ 7, 1 ಸ್ಪರ್ಧೆಗಳು, ಭಾರತೀಯ ಸ್ಪರ್ಧಿಗಳು ಇಲ್ಲ
- ಬಾಕ್ಸಿಂಗ್: ಸೆಪ್ಟೆಂಬರ್ 24 – ಅಕ್ಟೋಬರ್, 5 ಸ್ಪರ್ಧೆಗಳು, 13, 13 13 ಭಾರತೀಯ ಸ್ಪರ್ಧಿಗಳು
- ಬ್ರೇಕಿಂಗ್ : ಅಕ್ಟೋಬರ್ 6-7 2 ಭಾರತೀಯ ಸ್ಪರ್ಧಿಗಳು ಇಲ್ಲ
- ಬೀಚ್ ವಾಲಿಬಾಲ್ :ಸೆಪ್ಟೆಂಬರ್ 19-28 2 ಭಾರತೀಯ ಸ್ಪರ್ಧಿಗಳು ಇಲ್ಲ
- ಬ್ರಿಜ್: ಸೆಪ್ಟೆಂಬರ್ 27 – ಅಕ್ಟೋಬರ್ 6, 3 ಸ್ಪರ್ಧೆಗಳು, 18 ಭಾರತೀಯ ಸ್ಪರ್ಧಿಗಳು
- ಕ್ರಿಕೆಟ್: ಸೆಪ್ಟೆಂಬರ್ 19 – ಅಕ್ಟೋಬರ್ 7. 2 ಸ್ಪರ್ಧೆಗಳು 30 (2 ತಂಡಗಳು)
- ಚೆಸ್ :ಸೆಪ್ಟೆಂಬರ್ 24 – ಅಕ್ಟೋಬರ್ 7, 4 ಸ್ಪರ್ಧೆಗಳು, 10 ಭಾರತೀಯ ಸ್ಪರ್ಧಿಗಳು
- ಕ್ಯಾನೊ ಸ್ಲಾಲೋಮ್: ಅಕ್ಟೋಬರ್ 5-7, 4ಸ್ಪರ್ಧೆಗಳು, 4 ಭಾರತೀಯ ಸ್ಪರ್ಧಿಗಳು
- ಕ್ಯಾನೊ ಸ್ಪ್ರಿಂಟ್: ಸೆಪ್ಟೆಂಬರ್ 30 – ಅಕ್ಟೋಬರ್ 3, 12 ಸ್ಪರ್ಧೆಗಳು, 13 ಭಾರತೀಯ ಸ್ಪರ್ಧಿಗಳು
- ಸೈಕ್ಲಿಂಗ್ ಬಿಎಂಎಕ್ಸ್ ರೇಸಿಂಗ್: ಅಕ್ಟೋಬರ್ 1 2, ಸ್ಪರ್ಧೆಗಳು ಭಾರತೀಯ ಸ್ಪರ್ಧಿಗಳು ಇಲ್ಲ
- ಸೈಕ್ಲಿಂಗ್ : ಎಂಟಿಬಿ ಸೆಪ್ಟೆಂಬರ್ 25, 2ಸ್ಪರ್ಧೆಗಳು. ಭಾರತೀಯ ಸ್ಪರ್ಧಿಗಳು ಇಲ್ಲ
- ಸೈಕ್ಲಿಂಗ್ ರಸ್ತೆ :ಅಕ್ಟೋಬರ್ 3-5, 4ಸ್ಪರ್ಧೆಗಳು, ಭಾರತೀಯ ಸ್ಪರ್ಧಿಗಳು ಇಲ್ಲ
- ಸೈಕ್ಲಿಂಗ್ ಟ್ರ್ಯಾಕ್: ಸೆಪ್ಟೆಂಬರ್ 26-29, 12 ಸ್ಪರ್ಧೆಗಳು, 14 ಭಾರತೀಯ ಸ್ಪರ್ಧಿಗಳು
- ಡೈವಿಂಗ್: ಸೆಪ್ಟೆಂಬರ್ 30 – ಅಕ್ಟೋಬರ್ 4, 10ಸ್ಪರ್ಧೆಗಳು 2 ಭಾರತೀಯ ಸ್ಪರ್ಧಿಗಳು
- ಡ್ರ್ಯಾಗನ್ ಬೋಟ್: ಅಕ್ಟೋಬರ್ 4-6, 6ಸ್ಪರ್ಧೆಗಳು, ಭಾರತೀಯ ಸ್ಪರ್ಧಿಗಳು ಇಲ್ಲ
- ಈಕ್ವೆಸ್ಟ್ರಿಯನ್: ಸೆಪ್ಟೆಂಬರ್ 26 – ಅಕ್ಟೋಬರ್ 6, 6ಸ್ಪರ್ಧೆಗಳು, 10 ಭಾರತೀಯ ಸ್ಪರ್ಧಿಗಳು
- ಇಸ್ಪೋರ್ಟ್ಸ್: ಸೆಪ್ಟೆಂಬರ್ 24 – ಅಕ್ಟೋಬರ್ 2, 7 ಸ್ಪರ್ಧೆಗಳು, 15 ಭಾರತೀಯ ಸ್ಪರ್ಧಿಗಳು
- ಫುಟ್ಬಾಲ್: ಸೆಪ್ಟೆಂಬರ್ 19-27, 2 ಸ್ಪರ್ಧೆಗಳು 44 (2 ತಂಡಗಳು) ಭಾರತೀಯ ಸ್ಪರ್ಧಿಗಳು
- ಫೆನ್ಸಿಂಗ್: ಸೆಪ್ಟೆಂಬರ್ 24-29, 12 ಸ್ಪರ್ಧೆಗಳು, 9 ಭಾರತೀಯ ಸ್ಪರ್ಧಿಗಳು
- ಗಾಲ್ಫ್: ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 1, 4ಸ್ಪರ್ಧೆಗಳು, 7 ಭಾರತೀಯ ಸ್ಪರ್ಧಿಗಳು
- ಹಾಕಿ: ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 7, 2ಸ್ಪರ್ಧೆಗಳು, 36 (2 ತಂಡಗಳು)
- ಹ್ಯಾಂಡ್ಬಾಲ್: ಸೆಪ್ಟೆಂಬರ್ 24 – ಅಕ್ಟೋಬರ್ 5, 2ಸ್ಪರ್ಧೆಗಳು, 16 (1 ತಂಡ)
- ಜೂಡೋ :ಸೆಪ್ಟೆಂಬರ್ 24-27, 15ಸ್ಪರ್ಧೆಗಳು, 4 ಭಾರತೀಯ ಸ್ಪರ್ಧಿಗಳು
- ಜು-ಜಿಟ್ಸು: ಅಕ್ಟೋಬರ್ 5-7, 8ಸ್ಪರ್ಧೆಗಳು, 11 ಭಾರತೀಯ ಸ್ಪರ್ಧಿಗಳು
- ಕಬಡ್ಡಿ: ಅಕ್ಟೋಬರ್ 2-7, 2ಸ್ಪರ್ಧೆಗಳು, 24 (2 ತಂಡಗಳು)
- ಕರಾಟೆ: ಅಕ್ಟೋಬರ್ 5-8, 14ಸ್ಪರ್ಧೆಗಳು, ಭಾರತದ ಸ್ಪರ್ಧಿಗಳು ಇಲ್ಲ
- ಕುರಾಶ್: ಸೆಪ್ಟೆಂಬರ್ 30 – ಅಕ್ಟೋಬರ್ 2, 7ಸ್ಪರ್ಧೆಗಳು,, 6 ಭಾರತೀಯ ಸ್ಪರ್ಧಿಗಳು
- ಮ್ಯಾರಥಾನ್ ಈಜು; ಅಕ್ಟೋಬರ್ 6-7, 2 ಸ್ಪರ್ಧೆಗಳು, ಭಾರತದ ಸ್ಪರ್ಧಿಗಳು ಇಲ್ಲ
- ಮಾಡರ್ನ್ ಪೆಂಟಾಥ್ಲಾನ್; ಸೆಪ್ಟೆಂಬರ್ 20-24, 2 ಸ್ಪರ್ಧೆಗಳು, 1 ಭಾರತೀಯ ಸ್ಪರ್ಧಿಗಳು
- ರಿಥಮಿಕ್ ಜಿಮ್ನಾಸ್ಟಿಕ್ಸ್; ಅಕ್ಟೋಬರ್ 6-7, 2ಸ್ಪರ್ಧೆಗಳು, ಭಾರತದ ಸ್ಪರ್ಧಿಗಳು ಇಲ್ಲ
- ರಗ್ಬಿ ಸೆವೆನ್ಸ್: ಸೆಪ್ಟೆಂಬರ್ 24-26, 2ಸ್ಪರ್ಧೆಗಳು,, 12 (1 ತಂಡ)
- ರೋಯಿಂಗ್; ಸೆಪ್ಟೆಂಬರ್ 20-25, 14 ಸ್ಪರ್ಧೆಗಳು, 33 ಭಾರತೀಯ ಸ್ಪರ್ಧಿಗಳು
- ರೋಲರ್ ಸ್ಕೇಟಿಂಗ್: ಸೆಪ್ಟೆಂಬರ್ 30 – ಅಕ್ಟೋಬರ್ 7, 10 ಸ್ಪರ್ಧೆಗಳು,, 14
- ಸೇಯ್ಲಿಂಗ್: ಸೆಪ್ಟೆಂಬರ್ 21-27, 14 ಸ್ಪರ್ಧೆಗಳು,, 16 ಭಾರತೀಯ ಸ್ಪರ್ಧಿಗಳು
- ಸೆಪಕ್ಟಾಕ್ರಾ: ಸೆಪ್ಟೆಂಬರ್ 24 – ಅಕ್ಟೋಬರ್ 7, 6ಸ್ಪರ್ಧೆಗಳು, 16 ಭಾರತೀಯ ಸ್ಪರ್ಧಿಗಳು
- ಶೂಟಿಂಗ್; ಸೆಪ್ಟೆಂಬರ್ 24 – ಅಕ್ಟೋಬರ್ 1, 33ಸ್ಪರ್ಧೆಗಳು, 33 ಭಾರತೀಯ ಸ್ಪರ್ಧಿಗಳು
- ಸ್ಕೇಟ್ಬೋರ್ಡಿಂಗ್; ಸೆಪ್ಟೆಂಬರ್ 24-27, 4 ಸ್ಪರ್ಧೆಗಳು, ಭಾರತದ ಸ್ಪರ್ಧಿಗಳು ಇಲ್ಲ
- ಸ್ಕ್ವಾಷ್; ಸೆಪ್ಟೆಂಬರ್ 26 – ಅಕ್ಟೋಬರ್ 5, 5ಸ್ಪರ್ಧೆಗಳು, 8 ಭಾರತೀಯ ಸ್ಪರ್ಧಿಗಳು
- ಸಾಫ್ಟ್ ಟೆನಿಸ್; ಅಕ್ಟೋಬರ್ 3-7, 5 ಸ್ಪರ್ಧೆಗಳು, 10 ಭಾರತೀಯ ಸ್ಪರ್ಧಿಗಳು
- ಸಾಫ್ಟ್ಬಾಲ್; ಸೆಪ್ಟೆಂಬರ್ 26 – ಅಕ್ಟೋಬರ್ 2, 1 ಸ್ಪರ್ಧೆಗಳು, ಭಾರತದ ಸ್ಪರ್ಧಿಗಳು ಇಲ್ಲ
- ಈಜು; ಸೆಪ್ಟೆಂಬರ್ 24-29, 41 ಸ್ಪರ್ಧೆಗಳು, 21 ಭಾರತೀಯ ಸ್ಪರ್ಧಿಗಳು
- ಸ್ಪೋರ್ಟ್ ಕ್ಲೈಂಬಿಂಗ್; ಅಕ್ಟೋಬರ್ 3-7, 6ಸ್ಪರ್ಧೆಗಳು, 7 ಭಾರತೀಯ ಸ್ಪರ್ಧಿಗಳು
- ಟೇಕ್ವಾಂಡೋ; ಸೆಪ್ಟೆಂಬರ್ 24-28, 13 ಸ್ಪರ್ಧೆಗಳು, ಭಾರತದ ಸ್ಪರ್ಧಿಗಳು ಇಲ್ಲ
- ಟೆನಿಸ್: ಸೆಪ್ಟೆಂಬರ್ 24-30, 5 ಸ್ಪರ್ಧೆಗಳು, 9 ಭಾರತೀಯ ಸ್ಪರ್ಧಿಗಳು
- ಟೇಬಲ್ ಟೆನಿಸ್: ಪ್ಟೆಂಬರ್ 22 – ಅಕ್ಟೋಬರ್ 2, 7ಸ್ಪರ್ಧೆಗಳು, 10 ಭಾರತೀಯ ಸ್ಪರ್ಧಿಗಳು
- ಟ್ರ್ಯಾಂಪೊಲಿನ್ ಜಿಮ್ನಾಸ್ಟಿಕ್ಸ್ : ಅಕ್ಟೋಬರ್ 2-3, 2 ಸ್ಪರ್ಧೆಗಳು, ಭಾರತದ ಸ್ಪರ್ಧಿಗಳು ಇಲ್ಲ
- ಟ್ರಯಥ್ಲಾನ್ : ಸೆಪ್ಟೆಂಬರ್ 29 – ಅಕ್ಟೋಬರ್ 2, 3 ಸ್ಪರ್ಧೆಗಳು, ಭಾರತದ ಸ್ಪರ್ಧಿಗಳು ಇಲ್ಲ
- ವಾಲಿಬಾಲ್: ಸೆಪ್ಟೆಂಬರ್ 19 – ಅಕ್ಟೋಬರ್ 7, 2, 24 ಸ್ಪರ್ಧೆಗಳು, (2 ತಂಡಗಳು) ಭಾರತೀಯ ಸ್ಪರ್ಧಿಗಳು
- ವಾಟರ್ ಪೋಲೊ; ಸೆಪ್ಟೆಂಬರ್ 25 – ಅಕ್ಟೋಬರ್ 7, 2 ಸ್ಪರ್ಧೆಗಳು, ಭಾರತದ ಸ್ಪರ್ಧಿಗಳು ಇಲ್ಲ
- ವೇಟ್ ಲಿಫ್ಟಿಂಗ್; ಸೆಪ್ಟೆಂಬರ್ 30 – ಅಕ್ಟೋಬರ್ 7, 14ಸ್ಪರ್ಧೆಗಳು, 2 ಭಾರತೀಯ ಸ್ಪರ್ಧಿಗಳು
- ಕುಸ್ತಿ ; ಅಕ್ಟೋಬರ್ 4 – 7, 18 ಸ್ಪರ್ಧೆಗಳು, 18 ಭಾರತೀಯ ಸ್ಪರ್ಧಿಗಳು
- Weiqi (Go) ಸೆಪ್ಟೆಂಬರ್ 24 – ಅಕ್ಟೋಬರ್ 3, 3 ಸ್ಪರ್ಧೆಗಳು, ಭಾರತದ ಸ್ಪರ್ಧಿಗಳು ಇಲ್ಲ
- ವುಶು : ಸೆಪ್ಟೆಂಬರ್ 24-28, 15 ಸ್ಪರ್ಧೆಗಳು, 10 ಭಾರತೀಯ ಸ್ಪರ್ಧಿಗಳು
- ಕ್ಸಿಯಾಂಗ್ಕಿ; ಸೆಪ್ಟೆಂಬರ್ 28 – ಅಕ್ಟೋಬರ್ 7, 3ಸ್ಪರ್ಧೆಗಳು, ಭಾರತದ ಸ್ಪರ್ಧಿಗಳು ಇಲ್ಲ
ಕ್ರಿಕೆಟ್
India Canada Row : ಕೆನಡಾದಲ್ಲಿ ಹಿಂದೂಗಳಿಗೆ ಬೆದರಿಕೆ ಹಾಕಿದ್ದ ಖಲಿಸ್ತಾನಿ ಉಗ್ರನಿಗೆ ಎನ್ಐಎ ಟಕ್ಕರ್
ಕೆನಡಾದಲ್ಲಿ (India Canada Row) ಕುಳಿತು ಹಿಂದೂಗಳಿಗೆ ಬೆದರಿಕೆ ಹಾಕಿದ ಪನ್ನುನ್ ಯಾರು ಮತ್ತು ಎನ್ಐಎ ಆತನ ಮೇಲೆ ಏನು ಕ್ರಮ ಕೈಗೊಂಡಿದೆ ಎಂಬ ವಿವರ ಇಲ್ಲಿದೆ.
ನವದೆಹಲಿ: ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಳಿಕ ಭಾರತ ಹಾಗೂ ಕೆನಡಾದ ಸಂಬಂಧ (India Canada Row)) ಹದಗೆಟ್ಟಿವೆ. ಇದರ ಬೆನ್ನಲ್ಲೇ ಖಲಿಸ್ತಾನಿ ಉಗ್ರರ ನಿಜಬಣ್ಣ ಬಯಲಾಗುತ್ತಿದೆ. ಅವರು ಭಾರತಕ್ಕೆ ಅಪಾಯಕಾರಿ ಹಾಗೂ ಹಿಂದೂಗಳ ವಿರುದ್ಧ ಅಪಾರ ದ್ವೇಷ ಇಟ್ಟುಕೊಂಡಿದ್ದಾರೆ ಎಂಬುದು ಸಾಬೀತಾಗಿದೆ. ನಿಜ್ಜರ್ ನಿಕಟವರ್ತಿ ಹಾಗೂ ಯುಎಸ್ ಮೂಲದ ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜಿ) ಗುಂಪಿನ ಸ್ಥಾಪಕರಲ್ಲಿ ಒಬ್ಬ. ಕೆನಡಾದ ಟೊರೊಂಟೊದ ನಿವಾಸಿ ಗುರ್ಪತ್ವಂತ್ ಸಿಂಗ್ ಪನ್ನುನ್ ಕೆನಡಾದಲ್ಲಿರುವ ಹಿಂದೂಗಳಿಗೆ ಬೆದರಿಕೆ ಹಾಕಲು ಆರಂಭಿಸಿದ್ದಾರೆ. ಕುಕೃತ್ಯ ಬಯಲಿಗೆ ಬರುತ್ತಿದ್ದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಆತನಿಗೆ ಟಕ್ಕರ್ ಕೊಟ್ಟಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ), 1967 ರ ಸೆಕ್ಷನ್ 33 (5) ರ ಅಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರ್ಪತ್ವಂತ್ ಸಿಂಗ್ ಪನ್ನುನ್ಗೆ ಸೇರಿದ ಚಂಡೀಗಢದಲ್ಲಿನ ಮನೆ ಮತ್ತು ಅಮೃತಸರದ ಕೃಷಿ ಭೂಮಿಯನ್ನು ವಶಪಡಿಸಿಕೊಂಡಿದೆ. ಈ ಮೂಲಕ ಆತನಿಗೆ ಭಾರತದ ಬಾಗಿಲನ್ನು ಸಂಪೂರ್ಣ ಬಂದ್ ಮಾಡುವ ಜತೆಗೆ ಆತನಿಗೆ ಇಲ್ಲಿಂದ ಒಂದು ಪೈಸೆಯೂ ದೊರೆಯದಂತೆ ಮಾಡಿದೆ.
ನಿಜ್ಜರ್ ಹತ್ಯೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಮಾಡಿ ಬಿಟ್ಟಿದ್ದ ಪನ್ನುನ್ ಕೆನಡಾದಲ್ಲಿರುವ ಹಿಂದೂಗಳ ಮೇಲೆ ದಾಳಿ ಮಾಡುವ ಬೆದರಿಕೆ ಹಾಕಿದ್ದಾರೆ. ಆ ವಿಡಿಯೊಗೆ ಅಲ್ಲಿಯೂ ವಿರೋಧ ವ್ಯಕ್ತಗೊಂಡಿವೆ. ಆದರೆ ಆತ ನಿಧಾನಕ್ಕೆ ಬಾಲ ಬಿಚ್ಚುತ್ತಿದ್ದಂತೆ ಭಾರತದ ತನಿಖಾ ಸಂಸ್ಥೆಗಳು ಆತನ ಬಾಲ ಕಟ್ ಮಾಡಲು ಮುಂದಾಗಿದೆ.
ಗುರುಪತ್ವಂತ್ ಸಿಂಗ್ ಪನ್ನುನ್ ಯಾರು?
2020 ರಲ್ಲಿ ಭಾರತದಿಂದ ಭಯೋತ್ಪಾದಕ ಎಂದು ಕರೆಯಲಾದ ಪನ್ನುನ್, ಯುಎಸ್ ಮೂಲದ ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜಿ) ಗುಂಪಿನ ಸ್ಥಾಪಕರಲ್ಲಿ ಒಬ್ಬ. ಕೆನಡಾದ ಟೊರೊಂಟೊದಲ್ಲಿ ವಾಸಿಸುತ್ತಿದ್ದ ಆತ ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ್ದಾನೆ. ಹರ್ದೀಪ್ ಸಿಂಗ್ ನಿಜ್ಜರ್ ಜತೆ ನಿಕಟ ಸಂಬಂಧ ಹೊಂದಿದ್ದ ಎಂದು ವರದಿಯಾಗಿದೆ, ನಿಜ್ನರ್ ಹತ್ಯೆಯ ಹಿಂದೆ ಭಾರತ ಸರ್ಕಾರದವಿದೆ ಎಂದು ಕೆನಡಾ ಆರೋಪಿಸಿದ ಬಳಿಕ ಪನ್ನುನ್ ಭಾರತದ ಹಿಂದೂಗಳಿಗೆ ಬೆದರಿಕೆ ಹಾಕಿದ್ದರ. ಪನ್ನುನ್ ಮೇಲೆ ಭಯೋತ್ಪಾದನೆ ಮತ್ತು ದೇಶದ್ರೋಹದ ಆರೋಪಗಳು ಸೇರಿದಂತೆ 2017 ರಿಂದ ಪನ್ನುನ್ ವಿರುದ್ಧ 22 ಪ್ರಕರಣಗಳು ದಾಖಲಾಗಿವೆ.
ತನಿಖಾ ಸಂಸ್ಥೆ ದಾಖಲಿಸಿರುವ ಭಯೋತ್ಪಾದಕ ಪ್ರಕರಣಗಳಲ್ಲಿ ಭಾಗಿಯಾಗಿರುವ ವಾಂಟೆಡ್ ಗ್ಯಾಂಗ್ಸ್ಟರ್ಗಳ ಪಟ್ಟಿಯನ್ನು ಎನ್ಐಎ ಬುಧವಾರ ಬಿಡುಗಡೆ ಮಾಡಿದೆ. ಲಾರೆನ್ಸ್ ಬಿಷ್ಣೋಯ್, ಜಸ್ದೀಪ್ ಸಿಂಗ್, ಕಲಾ ಜತೇರಿ, ಅಲಿಯಾಸ್ ಸಂದೀಪ್, ವೀರೇಂದ್ರ ಪ್ರತಾಪ್, ಅಲಿಯಾಸ್ ಕಲಾ ರಾಣಾ, ಜೋಗಿಂದರ್ ಸಿಂಗ್, ರಾಜೇಶ್ ಕುಮಾರ್, ಅಲಿಯಾಸ್ ರಾಜು ಮೋಟಾ, ರಾಜ್ ಕುಮಾರ್, ಅಲಿಯಾಸ್ ರಾಜು ಬಸೋಡಿ, ಅನಿಲ್ ಚಿಪ್ಪಿ, ಮೊಹಮ್ಮದ್ ಶಹಬಾಜ್, ಗೋಲ್ಡಿ ಬ್ರಾರ್, ಅನ್ಸಾರಿ, ಸಚಿನ್ ಥಾಪನ್ ಬಿಷ್ಣೋಯ್, ಅನ್ಮೋಲ್ ಬಿಷ್ಣೋಯ್, ವಿಕ್ರಮ್ಜಿತ್ ಸಿಂಗ್, ಅಲಿಯಾಸ್ ವಿಕ್ರಮ್ ಬ್ರಾರ್, ದರ್ಮನ್ ಸಿಂಗ್, ಅಲಿಯಾಸ್ ದರ್ಮನ್ಜೋತ್ ಕಹ್ಲೋನ್, ಅರ್ಷ್ದೀಪ್ ಸಿಂಗ್, ಸುರೇಂದರ್ ಸಿಂಗ್ ಅಲಿಯಾಸ್ ಚಿಕು, ದಲೀಪ್ ಕುಮಾರ್ ಅಲಿಯಾಸ್ ಭೋಲಾ ಅವರ ಹೆಸರುಗಳು ಎನ್ಐಎ ಪಟ್ಟಿಯಲ್ಲಿವೆ.
ಇದನ್ನೂ ಓದಿ : India Canada Row: ಉಗ್ರ ನಿಜ್ಜರ್ ಪರ ನಿಂತ ಜಸ್ಟಿನ್ ಟ್ರುಡೋ ವಿರುದ್ಧ ಕೆನಡಾದಲ್ಲೇ ಆಕ್ರೋಶ; ಏನಾಗ್ತಿದೆ ನೋಡಿ
ಈ ಪಟ್ಟಿಯಲ್ಲಿ ಕೆನಡಾದ ಮ್ಯಾನಿಟೋಬಾ ಪ್ರಾಂತ್ಯದ ಅತಿದೊಡ್ಡ ನಗರವಾದ ವಿನ್ನಿಪೆಗ್ನ್ನಲ್ಲಿ ಪ್ರತಿಸ್ಪರ್ಧಿ ಗ್ಯಾಂಗ್ನಿಂದ ಹತ್ಯೆಗೊಳಗಾದ ಸುಖದೂಲ್ ಸಿಂಗ್ ಅಲಿಯಾಸ್ ಸುಖಾ ಡುನೆಕೆ ಕೂಡ ಸೇರಿದ್ದಾನೆ. ಪರ್ವೀನ್ ವಾಧ್ವಾ, ಅಲಿಯಾಸ್ ಪ್ರಿನ್ಸ್, ಯುಧ್ವೀರ್ ಸಿಂಗ್, ವಿಕಾಸ್ ಸಿಂಗ್, ಲಖ್ಬೀರ್ ಸಿಂಗ್, ಅಲಿಯಾಸ್ ಲಾಂಡಾ, ಗೌರವ್ ಪಟ್ಯಾಲ್, ಅಲಿಯಾಸ್ ಸೌರವ್ ಠಾಕೂರ್, ಸುಖ್ಪ್ರೀತ್ ಸಿಂಗ್, ಅಲಿಯಾಸ್ ಬುಡ್ಡಾ, ಅಮಿತ್ ದಾಗರ್, ಕೌಶಲ್ ಚೌಧರಿ, ಆಸಿಫ್ ಖಾನ್, ನವೀನ್ ದಬಾಸ್, ಅಲಿಯಾಸ್ ನವೀನ್ ಬಾಲಿ, ಛೋಟು ರಾಮ್, ಅಲಿಯಾಸ್ ಭಟ್, ಜಗ್ಸೀರ್ ಸಿಂಗ್, ಅಲಿಯಾಸ್ ಜಗ್ಗಾ, ಸುನಿಲ್ ಬಲ್ವಾನ್, ಅಲಿಯಾಸ್ ಟಿಲ್ಲು ತಾಜ್ಪುರಿಯಾ, ಭೂಪಿಂದರ್ ಸಿಂಗ್, ಭೂಪಿಂದರ್ ಸಿಂಗ್, ಅಲಿಯಾಸ್ ಭೂಪಿ ರಾಣಾ. ಸುಖ್ದೂಲ್ ಸಿಂಗ್, ಗುರ್ಪಿಂದರ್ ಸಿಂಗ್, ನೀರಾಯ್, ಅಲಿಯಾಸ್ ಪಾಂಡಿ, ದಲೇರ್ ಸಿಂಗ್, ದಿನೇಶ್ ಶರ್ಮಾ, ಮನ್ಪ್ರೀತ್ ಸಿಂಗ್ ಪೀಟಾ, ಹರಿಯೋಮ್, ಅಲಿಯಾಸ್ ಟಿಟು, ಹರ್ಪ್ರೀತ್, ಲಖ್ವೀರ್ ಸಿಂಗ್, ಇರ್ಫಾನ್ ಅಲಿಯಾಸ್ ಚೆನು ಪೆಹಲ್ವಾನ್ ಮತ್ತು ಸನ್ನಿ ದಾಗರ್ ಪಟ್ಟಿಯಲ್ಲಿದ್ದಾರೆ.
ಉಡುಪಿ
Chaitra Kundapura : ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಪರಪ್ಪನ ಅಗ್ರಹಾರಕ್ಕೆ; 14 ದಿನ ನ್ಯಾಯಾಂಗ ಬಂಧನ
Chaitra Kundapura: ಪ್ರಖರ ಭಾಷಣಕಾರ್ತಿ ಚೈತ್ರಾ ಕುಂದಾಪುರ ಮತ್ತು ಆರು ಮಂದಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೆಂಗಳೂರು: ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ (Bynduru BJP Ticket) ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲು ಕೋರ್ಟ್ ಆದೇಶಿಸಿದೆ.
ಸೆ. 12ರಂದು ಬಂಧಿತರಾಗಿದ್ದ ಆರೋಪಿಗಳ ಸಿಸಿಬಿ ಪೊಲೀಸರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ, ಪೊಲೀಸರು ಚೈತ್ರಾ ಸೇರಿ ಬಂಧಿತ ಏಳು ಆರೋಪಿಗಳನ್ನ ಶನಿವಾರ ಮೂರನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಿದ್ದರು. ಬಳಿಕ ವಿಚಾರಣೆ ನಡೆಸಿದ ನ್ಯಾಯಾಲಯ ಬಂಧಿತ ಏಳು ಆರೋಪಿಗಳನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಈ ಮೂಲಕ ವಂಚನೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದ ಚೈತ್ರಾ ಆಂಡ್ ಗ್ಯಾಂಗ್ ಈಗ ಪರಪ್ಪನ ಅಗ್ರಹಾರ ಜೈಲಿನ ಕಡೆ ಮುಖ ಮಾಡಿದ್ದಾರೆ. ಸೆಪ್ಟೆಂಬರ್ 26ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕಳೆದ ಸೆಪ್ಟೆಂಬರ್ 12ರಂದು ಚೈತ್ರಾ ಕುಂದಾಪುರಳನ್ನು (Chaitra Kundapura) ಉಡುಪಿಯ ಕೃಷ್ಣ ಮಠದ ಸಮೀಪದಿಂದ ಮತ್ತು ಉಳಿದವರನ್ನು ಅವರವರ ಊರುಗಳಿಂದ ಬಂಧಿಸಲಾಗಿತ್ತು. ಮರುದಿನ ಮುಂಜಾನೆಯೇ ಬೆಂಗಳೂರಿಗೆ ಕರೆದುಕೊಂಡು ಬಂದು ಸೆ. 13ರಂದು ಸಂಜೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆಗ ಕೋರ್ಟ್ ಚೈತ್ರಾ ಕುಂದಾಪುರ ಸೇರಿದಂತೆ ಆರು ಆರೋಪಿಗಳಿಗೆ 10 ದಿನಗಳ ಸಿಸಿಬಿ ಕಸ್ಟಡಿ (CCB Custody) ವಿಧಿಸಿತ್ತು. ಸಿಸಿಬಿ ಕಸ್ಟಡಿ ಅವಧಿ ಸೆ. 23ಕ್ಕೆ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.
ಪ್ರಕರಣದ ಪ್ರಧಾನ ಆರೋಪಿಯಾಗಿರುವ ಚೈತ್ರಾ ಕುಂದಾಪುರ, ಎರಡನೇ ಆರೋಪಿ ಗಗನ್ ಕಡೂರು, ನಾಲ್ಕನೇ ಆರೋಪಿ(ಆರೆಸ್ಸೆಸ್ ಪ್ರಚಾರಕನ ವೇಷಧಾರಿ) ರಮೇಶ್ ಕಡೂರು, ಐದನೇ ಆರೋಪಿ ಚನ್ನಾ ನಾಯ್ಕ್ (ಬೆಂಗಳೂರಿನ ಬಿಜೆಪಿ ರಾಷ್ಟ್ರೀಯ ನಾಯಕನೆಂದು ಪೋಸ್ ಕೊಟ್ಟವನು), ಆರನೇ ಆರೋಪಿ ಧನರಾಜ್ (ರಮೇಶ್ ಕಡೂರ್ ಮತ್ತು ಚನ್ನಾ ನಾಯ್ಕನನ್ನು ಸಂಪರ್ಕಿಸಿ ಕೊಟ್ಟವನು), ಏಳನೇ ಆರೋಪಿ, ಚೈತ್ರಾ ಕುಂದಾಪುರಳ ಆಪ್ತ ಗೆಳೆಯ ಶ್ರೀಕಾಂತ್ ನಾಯಕ್ ಹಾಗೂ ಎಂಟನೇ ಆರೋಪಿ ಪ್ರಸಾದ್ ಬೈಂದೂರು (ಗೋವಿಂದ ಪೂಜಾರಿ ಆಪ್ತ ಮತ್ತು ಚೈತ್ರಾ ಕುಂದಾಪುರಳನ್ನು ಪರಿಚಯ ಮಾಡಿಕೊಟ್ಟವನು) ಅವರು 10 ದಿನಗಳ ಸಿಸಿಬಿ ಕಸ್ಟಡಿ ಮುಗಿಸಿದ್ದಾರೆ. ಇದೀಗ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹಾಲಶ್ರೀಗೆ ವಿಚಾರಣೆಗೆ ಸೆ. 29ರವರೆಗೆ ಸಮಯವಿದೆ
ಈ ವಂಚನೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಹಿರೇಹಡಗಲಿಯ ಹಾಲ ಸ್ವಾಮಿ ಮಠದ ಶ್ರೀ ಅಭಿನವಂ ಹಾಲಶ್ರೀ ಸ್ವಾಮೀಜಿ (Halashri swameeji) ತಲೆಮರೆಸಿಕೊಂಡಿದ್ದರು. ಅವರನ್ನು ಸೆಪ್ಟೆಂಬರ್ 19ರಂದು ಒಡಿಶಾದ ಕಟಕ್‌ನಲ್ಲಿ ಬಂಧಿಸಲಾಗಿತ್ತು. ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ 10 ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿದ ಪರಿಣಾಮ ಸೆ. 29ರವರೆಗೆ ವಿಚಾರಣೆಗೆ ಅವಕಾಶವಿದೆ.
ವಿಚಾರಣೆಯ ವೇಳೆ ಏನೇನಾಗಿದೆ?
ಆರೋಪಿಗಳು ಕಳೆದ 10 ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿ ಇದ್ದಾರಾದರೂ ಪ್ರಧಾನ ಆರೋಪಿ ಚೈತ್ರಾ ಕುಂದಾಪುರ ಅನಾರೋಗ್ಯದ ನಾಟಕವಾಡಿ ಮೂರುವರೆ ದಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಲಗಿದ್ದಳು. ಉಳಿದ ಎಲ್ಲರೂ ಕಸ್ಟಡಿಯಲ್ಲಿದ್ದು ವಿಚಾರಣೆ ಎದುರಿಸಿದ್ದರು.
ಕಸ್ಟಡಿಯಲ್ಲಿದ್ದ ವೇಳೆ ಚೈತ್ರಾ ಎಂಡ್ ಗ್ಯಾಂಗ್ ತಾವು ಮಾಡಿರುವ ಮೋಸ ಮತ್ತು ವಂಚನೆಯನ್ನು ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ. ಸಿಸಿಬಿ ಅಧಿಕಾರಿಗಳು ಈ ಆರೋಪಿಗಳು ಹಣವನ್ನು ಎಲ್ಲೆಲ್ಲಿ ಇಟ್ಟಿದ್ದರು ಎಂಬ ಮಾಹಿತಿಯನ್ನು ಪಡೆದುಕೊಂಡು ಅಲ್ಲೆಲ್ಲ ಭೇಟಿ ನೀಡಿ ಸುಮಾರು 3.67 ಕೋಟಿ ರೂ. ಮೌಲ್ಯದ ನಗ ಮತ್ತು ನಗದನ್ನು ವಶಕ್ಕೆ ಪಡೆದಿದೆ.
ವಂಚನೆಯಲ್ಲಿ ಅತಿ ಹೆಚ್ಚು ಹಣ ಪಡೆದಿರುವುದು ಚೈತ್ರಾ ಕುಂದಾಪುರ ಎನ್ನುವುದು ಬೆಳಕಿಗೆ ಬಂದಿದೆ. 81 ಲಕ್ಷ ನಗದು, 23 ಲಕ್ಷ ಮೌಲ್ಯದ ಚಿನ್ನಾಭರಣ, 1.8 ಕೋಟಿ ಮೊತ್ತದ ನಿಶ್ಚಿತ ಠೇವಣಿ ಹೊಂದಿದ್ದ ಚೈತ್ರಾ 12 ಲಕ್ಷ ಮೌಲ್ಯದ ಕಿಯಾ ಕಾರು ಖರೀದಿಸಿದ್ದಾಳೆ.
ಸಿಸಿಬಿ ಪೊಲೀಸರು ಈ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಗಗನ್ ಕಡೂರ್‌ನನ್ನು ಚಿಕ್ಕಮಗಳೂರು, ಕಡೂರು ಮತ್ತು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ ನಕಲಿ ಆರೆಸ್ಸೆಸ್ ಪ್ರಚಾರಕನ ಭೇಟಿ, ಕಡೂರಿನ ಮನೆ, ಶಿವಮೊಗ್ಗದಲ್ಲಿ ಹಣ ಹಸ್ತಾಂತರ ಮಾಡಿದ ಜಾಗಗಳಲ್ಲೆಲ್ಲ ಮಹಜರು ಮಾಡಿಸಿದ್ದಾರೆ.
-
ಸುವಚನ14 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ20 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಉಡುಪಿ23 hours ago
Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್.ಎಸ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ
-
ದೇಶ23 hours ago
Chandrayaan 3: ನಿದ್ದೆಯಿಂದ ಎಚ್ಚರವಾಗಲು ಒಲ್ಲೆ ಎನ್ನುತ್ತಿರುವ ಲ್ಯಾಂಡರ್, ಪ್ರಜ್ಞಾನ್! ನಾಳೆ ಮತ್ತೆ ಇಸ್ರೋ ಪ್ರಯತ್ನ
-
ದೇಶ9 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ಅಂಕಣ12 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ದೇಶ19 hours ago
‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
-
ದೇಶ21 hours ago
Money Guide: ಅತ್ಯುತ್ತಮ ನಿವೃತ್ತ ಜೀವನಕ್ಕಾಗಿ ಟಾಪ್ 10 ಹಣ ಉಳಿತಾಯದ ಟಿಪ್ಸ್!