Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ! - Vistara News

ಪ್ರಮುಖ ಸುದ್ದಿ

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

Dina Bhavishya : ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ನವಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

read your daily horoscope predictions for december 6 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಕನ್ಯಾ ರಾಶಿಯಿಂದ ಬುಧವಾರ ತುಲಾ ರಾಶಿಯನ್ನು ಬೆಳಗ್ಗೆ 11:34 ಕ್ಕೆ ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ಕಟಕ, ಕನ್ಯಾ, ವೃಶ್ಚಿಕ, ಧನಸ್ಸು, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ. ವೃಶ್ಚಿಕ ರಾಶಿಯ ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ ಇದೆ. ಮೀನ ರಾಶಿಯವರು ಕುಟುಂಬದಲ್ಲಿ ಕಲಹಗಳಿಗೆ ಅವಕಾಶ ಮಾಡಿಕೊಡಬೇಡಿ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (6-12-2023)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ.
ತಿಥಿ: ನವಮಿ 27:03 ವಾರ: ಬುಧವಾರ
ನಕ್ಷತ್ರ: ಉತ್ತರ ಪಾಲ್ಗುಣಿ 30:27 ಯೋಗ: ಪ್ರೀತಿ 23:28
ಕರಣ:ತೈತುಲ 13:52 ಅಮೃತಕಾಲ: ರಾತ್ರಿ 10:25 ರಿಂದ 12:13ರ ವರೆಗೆ

ಸೂರ್ಯೋದಯ : 06:53  ಸೂರ್ಯಾಸ್ತ : 05:39

ರಾಹುಕಾಲ : ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ. ಆಪ್ತ ವ್ಯಕ್ತಿಗಳು ಸಹಾಯ ಕೇಳಬಹುದು. ಮನೆಯಲ್ಲಿ ಕಲಹಗಳಿಗೆ ಆಸ್ಪದ ಕೊಡಬೇಡಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಕಿರಿಕಿರಿಯುನ್ನುಂಟಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವೃಷಭ: ಅತಿರೇಕದಲ್ಲಿ ಮಾತನಾಡುವ ಮುನ್ನ ಯೋಚಿಸಿ. ತಿಳಿಯದೆ ನಿಮ್ಮ ಅಭಿಪ್ರಾಯಗಳು ಬೇರೊಬ್ಬರ ಭಾವನೆಗಳಿಗೆ ಧಕ್ಕೆಯುಂಟು ಮಾಡಬಹುದು. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕುಟಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 3

Horoscope Today

ಮಿಥುನ: ಆರೋಗ್ಯ ಪರಿಪೂರ್ಣವಾಗಿರಲಿದೆ. ಸ್ನೇಹಿತರಿಗೆ ಸಹಾಯ ಮಾಡುವಿರಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಸಕರಾತ್ಮಕ ಆಲೋಚನೆಗಳು ಪುಷ್ಠಿ ನೀಡುತ್ತದೆ. ಉದ್ಯೋಗಿಗಳಿಗೆ ಸ್ವಲ್ಪ ಕಿರಿಕಿರಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕಟಕ: ಕೆಲಸ ಕಾರ್ಯಗಳಲ್ಲಿ ಒತ್ತಡ ಉಂಟು ಮಾಡುವ ವಿಚಾರಗಳಿಂದ ದೂರ ಇರಿ. ತಾಳ್ಮೆ ಇರಲಿ. ಅಗತ್ಯಕ್ಕಾಗಿ ಯಾರದಾದರೂ ಹಣದ ಸಹಾಯ ಬೇಡುವ ಸಾಧ್ಯತೆ ಇದೆ ಆಲೋಚಿಸಿ ಮುಂದುವರಿಯಿರಿ. ಆರೋಗ್ಯದ ಬಗೆಗೆ ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಸಿಂಹ: ಇತರರು ನಿಮ್ಮ ಕಾರ್ಯಗಳಿಗೆ ಪ್ರಶಂಸೆ ವ್ಯಕ್ತಪಡಿಸುವವರು. ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗ, ಆರೋಗ್ಯ, ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ: ನಿಮ್ಮ ಒತ್ತಡವನ್ನು ಇತರರ ಮೇಲೆ ಹಾಕಿ ಕೋಪಗೊಳ್ಳುವುದು ಬೇಡ, ಬದಲಿಗೆ ಸಮಾಧಾನದಿಂದ ವರ್ತಿಸಿ. ಆರ್ಥಿಕವಾಗಿ ಸಾಧಾರಣವಾಗಿರಲಿದೆ. ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆಪ್ತರೊಂದಿಗೆ ಬಾಲ್ಯದ ನೆನಪು ಹಂಚಿಕೊಳ್ಳುವಿರಿ ಇದರಿಂದಾಗಿ ಮನಸ್ಸಿನ ಒತ್ತಡ ಈ ಮೂಲಕ ಹೊರಹಾಕುವಿರಿ. ಆರೋಗ್ಯ ಮಧ್ಯಮವಾಗಿರಲಿದೆ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಕಾರ್ಯದಲ್ಲಿ ನಿಧಾನಗತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಪ್ರತಿಫಲ ಸಿಗುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಧನಸ್ಸು: ಚುರುಕುತನದಿಂದ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ಹೂಡಿಕೆ ವ್ಯವಹಾರದಲ್ಲಿ ಲಾಭ ಸಿಗಲಿದೆ. ಹೊಸ ಸ್ನೇಹಿತರ ಪರಿಚಯ ಆಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಮಕರ: ಸಮಯ ವ್ಯರ್ಥಮಾಡಿ ಕೊರಗುವುದು ಬೇಡ. ಅನಗತ್ಯವಾಗಿ ಖರ್ಚು ಮಾಡುವ ಸಾಧ್ಯತೆ ಇದೆ. ಉತ್ತಮ ಆಲೋಚನೆಗಳು ಇರಲಿ. ಹಳೆಯ ನೆನಪುಗಳು ಮಾನಸಿಕ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ. ದೈಹಿಕ ಆರೋಗ್ಯ ಉತ್ತಮವಾಗಿರಲಿದೆ. ವಿನಾಕಾರಣ ಕುಟುಂಬದ ಸದಸ್ಯರೊಂದಿಗೆ ಕಲಹಗಳು ಸೃಷ್ಟಿ ಆಗುವ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಕುಂಭ: ಅಧಿಕ ಶ್ರಮದಿಂದ ಆರೋಗ್ಯ ಕೊಂಚ ಹದಗೆಡುವ ಸಾಧ್ಯತೆ ಇದೆ, ಕಾಳಜಿ ಇರಲಿ. ಸಾಂಕ್ರಮಿಕ ರೋಗದ ಬಾಧಿಸಬಹುದು, ಆದಷ್ಟು ಮುಂಜಾಗ್ರತೆ ವಹಿಸುವುದು ಒಳ್ಳೆಯದು. ಸ್ನೇಹಿತರ ಸಹಕಾರ ಸಿಗಲಿದೆ. ಸಂಗಾತಿಯೊಂದಿಗೆ ಮಾತು ಬೆಳೆಸುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಮೀನ: ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬದಲ್ಲಿ ಕಲಹಗಳಿಗೆ ಅವಕಾಶ ಮಾಡಿಕೊಡಬೇಡಿ. ಉದ್ಯೋಗದಲ್ಲಿ ಹೊಸ ಭರವಸೆ ಮೂಡಲಿದೆ. ಮನಸ್ಸಿನ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಸಾಧನೆಯಿಂದ ತಂದುಕೊಳ್ಳಿ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: ಜೂನ್‌ 21ರ ಯೋಗ ದಿನದಂದು ವಿಶೇಷ ಸ್ಥಳದಲ್ಲಿ ಮೋದಿ ಯೋಗ; ಯಾವುದದು?

Narendra Modi: ಶ್ರೀನಗರದಲ್ಲಿರುವ ದಾಲ್‌ ಸರೋವರದ ತೀರದಲ್ಲಿನ ಶೇರ್-ಐ-ಕಾಶ್ಮೀರ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್‌ ಸೆಂಟರ್‌ನಲ್ಲಿ ನರೇಂದ್ರ ಮೋದಿ ಅವರು ಯೋಗ ಮಾಡುವ ಮೂಲಕ ಯೋಗ ದಿನವನ್ನು ಆಚರಿಸಲಿದ್ದಾರೆ ಎಂದು ತಿಳಿದುಬಂದಿದೆ. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಶಾಂತಿ ನೆಲೆಸುತ್ತಿದ್ದು, ಜಿ-20 ಶೃಂಗಸಭೆಯನ್ನೂ ಆಯೋಜಿಸಲಾಗಿತ್ತು.

VISTARANEWS.COM


on

Narendra Modi
Koo

ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗದ ಮಹತ್ವವನ್ನು ಸಾರಿ, ಜೂನ್‌ 21ರಂದು ಜಾಗತಿಕವಾಗಿ ಯೋಗ ದಿನವನ್ನಾಗಿ ಆಚರಿಸುವಲ್ಲಿ ನರೇಂದ್ರ ಮೋದಿ ಅವರ ಯೋಗದಾನ ದೊಡ್ಡದು. ಅದರಂತೆ, ಈ ಬಾರಿಯ ಜೂನ್‌ 21ರಂದು ಜಗತ್ತಿನಾದ್ಯಂತ ಯೋಗ ದಿನ (International Yoga Day 2024) ಆಚರಿಸಲಾಗುತ್ತಿದೆ. ನರೇಂದ್ರ ಮೋದಿ (Narendra Modi) ಅವರು ಈ ಬಾರಿ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ (Srinagar) ಯೋಗ ದಿನವನ್ನು ಆಚರಿಸಲು ತೀರ್ಮಾನಿಸಿದ್ದಾರೆ. ಜೂನ್‌ 20ರಂದು ಶ್ರೀನಗರಕ್ಕೆ ತೆರಳಲಿರುವ ಮೋದಿ ಅವರು ಜೂನ್‌ 21ರಂದು ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಶ್ರೀನಗರದಲ್ಲಿರುವ ದಾಲ್‌ ಸರೋವರದ ತೀರದಲ್ಲಿನ ಶೇರ್-ಐ-ಕಾಶ್ಮೀರ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್‌ ಸೆಂಟರ್‌ನಲ್ಲಿ ನರೇಂದ್ರ ಮೋದಿ ಅವರು ಯೋಗ ಮಾಡುವ ಮೂಲಕ ಯೋಗ ದಿನವನ್ನು ಆಚರಿಸಲಿದ್ದಾರೆ ಎಂದು ತಿಳಿದುಬಂದಿದೆ. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಶಾಂತಿ ನೆಲೆಸುತ್ತಿದ್ದು, ಜಿ-20 ಶೃಂಗಸಭೆಯನ್ನೂ ಆಯೋಜಿಸಲಾಗಿತ್ತು. ಯೋಗ ದಿನವನ್ನು ಆಚರಿಸುವ ಮೂಲಕ ಮೋದಿ ಅವರು ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ಎಂಬ ಸಂದೇಶ ಸಾರಲಿದ್ದಾರೆ ಎಂದು ತಿಳಿದುಬಂದಿದೆ.

modi yoga

ಕಳೆದ ವರ್ಷ ಅಮೆರಿಕದಲ್ಲಿ ಯೋಗ

ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯೋಗ ಸೆಷನ್‌ ನಡೆದಿತ್ತು. ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯಲ್ಲಿ ಯೋಗ ದಿನವನ್ನು ಆಚರಿಸಿದ್ದರು. ವಿಶ್ವದ ಹಲವು ನಾಯಕರು ಕೂಡ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಅಮೆರಿಕ ನೆಲದಲ್ಲಿ ನಿಂತು ಮೋದಿ ಅವರು ಯೋಗದ ಮಹತ್ವವನ್ನು ಸಾರಿದ್ದರು.

ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ ಪ್ರಸ್ತಾಪವನ್ನು ಇಟ್ಟರು. ಯಾಕಾಗಿ ಇದನ್ನ ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕು ಎಂಬುದಕ್ಕೆ ಸಮರ್ಥ ವಿವರಣೆಯನ್ನೂ ಭಾರತ ಕೊಟ್ಟಿತ್ತು. ಅದನ್ನು ವಿಶ್ವ ಸಂಸ್ಥೆ ಒಪ್ಪಿಕೊಂಡು, ಸದಸ್ಯ ರಾಷ್ಟ್ರಗಳು 2015ರಲ್ಲಿ ಅನುಮೋದಿಸಿವೆ. ಆಗಿನಿಂದ ಇಲ್ಲಿಯವರೆಗೆ ಭಾರತ, ಯೋಗಕ್ಕೆ ಸಂಬಂಧಪಟ್ಟ ಹಲವು ಕಾರ್ಯಕ್ರಗಳನ್ನು ಆಯೋಜಿಸುತ್ತಿದೆ. ವಿದೇಶಗಳಲ್ಲೂ ಯೋಗದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅದರ ಮಹತ್ವವನ್ನು ಸಾರುತ್ತಿದೆ.

ಯೋಗದಲ್ಲಿರುವ ಬಗೆಗಳನ್ನು, ಇದು ಮನುಷ್ಯನ ಮನಸು, ದೇಹವನ್ನು ಆರೋಗ್ಯವನ್ನಾಗಿಸುವ ರೀತಿಯನ್ನು ಮನಮುಟ್ಟುವಂತೆ ಹೇಳುತ್ತಿದೆ. ಹೀಗಾಗಿ ಯೋಗದ ಪ್ರಸಿದ್ಧಿ ದಿನೇದಿನೇ ಪ್ರಖರಿಸುತ್ತಲೇ ಇದೆ. ಹೆಚ್ಚೆಚ್ಚು ರಾಷ್ಟ್ರಗಳು ಒಪ್ಪಿಕೊಳ್ಳುತ್ತಿವೆ. ಕೊವಿಡ್ 19 ಕಾಲದಲ್ಲೂ ಕೂಡ ಜಗತ್ತಿನಾದ್ಯಂತ ಯೋಗ ಅನೇಕರ ಕೈ ಹಿಡಿದಿದೆ. ಈ ವರ್ಷ ಜೂ.21ಕ್ಕೂ ಕೂಡ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ಅತ್ಯುತ್ಸಾಹದಿಂದ ಕಾಯುತ್ತಿವೆ.

ಇದನ್ನೂ ಓದಿ: Modi Ka Parivar : ಸೋಶಿಯಲ್​ ಮೀಡಿಯಾ ಹ್ಯಾಂಡಲ್​​ಗಳಿಂದ ‘ಮೋದಿ ಕಾ ಪರಿವಾರ್​’ ತೆಗೆಯಲು ಸೂಚನೆ

Continue Reading

ಪ್ರಮುಖ ಸುದ್ದಿ

Kuwait fire : ಕುವೈತ್ ನಲ್ಲಿ ಅಗ್ನಿ ಅವಘಡ: 5 ಭಾರತೀಯರು ಸೇರಿ 35 ಮಂದಿ ಸಾವು

Kuwait fire : ಕುವೈತ್ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಗಂಭೀರ ಸ್ಥಿತಿಯಲ್ಲಿರುವ ಕೆಲವರು ಸೇರಿದಂತೆ ಗಾಯಗೊಂಡ ಎಲ್ಲರನ್ನು ಅಗತ್ಯ ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಹಲವಾರು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಕಟ್ಟಡದ ಬೆಂಕಿಯಲ್ಲಿ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಆರೈಕೆ ಒದಗಿಸಲು ವೈದ್ಯಕೀಯ ತಂಡಗಳು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ ಎಂದು ಸಚಿವಾಲಯ ತಿಳಿಸಿದೆ.

VISTARANEWS.COM


on

Kuwait fire
Koo

ಕುವೈತ್: ದಕ್ಷಿಣ ಕುವೈತ್ ನ ಮಂಗಾಫ್ ನಗರದಲ್ಲಿ ಸಂಭವಿಸಿದ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ (Kuwait fire) ಕನಿಷ್ಠ 35 ಜನರು ಸಾವನ್ನಪ್ಪಿದ್ದಾರೆ ಎಂದು ಆ ದೇಶದ ಸರ್ಕಾರಿ ಮಾಧ್ಯಮ ಬುಧವಾರ ವರದಿ ಮಾಡಿದೆ. ವರದಿಗಳ ಪ್ರಕಾರ, ದುರಂತ ಘಟನೆಯಲ್ಲಿ ಕನಿಷ್ಠ ಐದು ಮಂದಿ ಭಾರತೀಯರು ಸಹ ಮೃತಪಟ್ಟಿದ್ದಾರೆ . ಈ ಕಟ್ಟಡವು ಹೆಚ್ಚಿನ ಸಂಖ್ಯೆಯಲ್ಲಿ ಕೇರಳಿಗರನ್ನು ಹೊಂದಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮೃತರಲ್ಲಿ ಇಬ್ಬರು ತಮಿಳುನಾಡು ಮತ್ತು ಉತ್ತರ ಭಾರತದವರು ಎನ್ನಲಾಗಿದೆ. ಆದಾಗ್ಯೂ, ಅಧಿಕಾರಿಗಳಿಂದ ಅಧಿಕೃತ ದೃಢೀಕರಣಕ್ಕಾಗಿ ಇನ್ನೂ ಪ್ರಕಟಗೊಂಡಿಲ್ಲ.

ಕುವೈತ್ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಗಂಭೀರ ಸ್ಥಿತಿಯಲ್ಲಿರುವ ಕೆಲವರು ಸೇರಿದಂತೆ ಗಾಯಗೊಂಡ ಎಲ್ಲರನ್ನು ಅಗತ್ಯ ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಹಲವಾರು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಕಟ್ಟಡದ ಬೆಂಕಿಯಲ್ಲಿ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಆರೈಕೆ ಒದಗಿಸಲು ವೈದ್ಯಕೀಯ ತಂಡಗಳು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ ಎಂದು ಸಚಿವಾಲಯ ತಿಳಿಸಿದೆ.

ವರದಿಯ ಪ್ರಕಾರ, ಬುಧವಾರ ಮುಂಜಾನೆ 4: 30 ಕ್ಕೆ ಕಾರ್ಮಿಕ ಶಿಬಿರದ ಅಡುಗೆಮನೆಯಲ್ಲಿ ಬೆಂಕಿ ಪ್ರಾರಂಭಗೊಂಡಿತ್ತು. ಬೆಂಕಿಯನ್ನು ನೋಡಿದ ನಂತರ ಕೆಲವರು ಅಪಾರ್ಟ್​ಮೆಂಟ್​ನಿಂದ ಜಿಗಿದು ಮೃತಪಟ್ಟಿದ್ದರೆ ಇತರರು ಸುಟ್ಟಗಾಯಗಳು ಮತ್ತು ಹೊಗೆ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.

ಭಾರತೀಯ ಉದ್ಯಮಿಯ ಒಡೆತನದ ಕಟ್ಟಡ: ವರದಿ
ಒನ್​ಮನೋರಮಾ ವರದಿಯ ಪ್ರಕಾರ, ಹತ್ತಿರದ ವಾಣಿಜ್ಯ ಪ್ರದೇಶದ ಸುಮಾರು 195 ಕಾರ್ಮಿಕರು ಮತ್ತು ಹಲವಾರು ಮಲಯಾಳಿಗಳನ್ನು ವಾಸಿಸುತ್ತಿದ್ದ ಈ ಈ ಕಟ್ಟಡವು ಎನ್​ಬಿಟಿಸಿ ಗ್ರೂಪ್ ಗೆ ಸೇರಿದ್ದು. ಕೇರಳದ ಉದ್ಯಮಿ ಕೆಜಿ ಅಬ್ರಹಾಂ ಅವರ ಒಡೆತನದಲ್ಲಿರುವ ಈ ಕಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಿಯಂತ್ರಿಸಲಾಗಿದ್ದರೂ, ಇನ್ನೂ ಹಲವಾರು ಮಂದಿ ಒಳಗೆ ಸಿಲುಕಿರುವ ವರದಿಗಳಿವೆ.

Continue Reading

ಕ್ರಿಕೆಟ್

IND vs USA: ಇಂದಿನ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ; ಯಾರಿಗೆ ಕೊಕ್​?

IND vs USA: ಕಳೆದೆರಡು ಪಂದ್ಯಗಳಲ್ಲಿ ಆರಂಭಿಕನಾಗಿ ಆಡಿದ ಕಿಂಗ್​ ಖ್ಯಾತಿಯ ವಿರಾಟ್​​ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ಮಂಕಾಗಿದ್ದರು. ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್​ ವೈಫಲ್ಯ ಎದುರಿಸಿದ್ದರು. ಇಂದಿನ ಪಂದ್ಯದಲ್ಲಿ ಜೈಸ್ವಾಲ್​ಗೆ ಅವಕಾಶ ನೀಡಿದ್ದೇ ಆದರೆ, ರೋಹಿತ್​ ಜತೆ ಜೈಸ್ವಾಲ್​ ಇನಿಂಗ್ಸ್​ ಆರಂಭಿಸಬಹುದು.

VISTARANEWS.COM


on

IND vs USA
Koo

ನ್ಯೂಯಾರ್ಕ್: ಅಮೆರಿಕ(IND vs USA) ವಿರುದ್ಧ ಇಂದು(ಬುಧವಾರ) ನಡೆಯುವ ಟಿ20 ವಿಶ್ವಕಪ್​ ಲೀಗ್(T20 World Cup 2024) ಪಂದ್ಯದಲ್ಲಿ ಟೀಮ್​ ಇಂಡಿಯಾ ತನ್ನ ಆಡುವ ಬಳಗಲ್ಲಿ 2 ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆಲ್​ರೌಂಡರ್​ಗಳಾದ ಶಿವಂ ದುಬೆ(Shivam Dube) ಮತ್ತು ರವೀಂದ್ರ ಜಡೇಜಾ(Ravindra Jadeja) ಅವರನ್ನು ಕೈಬಿಡಲಾಗುವುದು ಎಂಬ ಮಾತುಗಳು ಕೇಳಿಬಂದಿವೆ.

​ಶಿವಂ ದುಬೆ ಆಲ್​ರೌಂಡರ್​ ಕೋಟದಲ್ಲಿ ಕಳೆದ 2 ಪಂದ್ಯಗಳಲ್ಲಿ ಆಡಿದ್ದರೂ ಕೂಡ ಬೌಲಿಂಗ್​ ನಡೆಸಿರಲಿಲ್ಲ. ಅಲ್ಲದೆ ಪಾಕ್​ ವಿರುದ್ಧ ಬ್ಯಾಟಿಂಗ್​ ಅವಕಾಶ ಸಿಕ್ಕರೂ ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಕೇವಲ 3 ರನ್​ ಗಳಿಸಿದ್ದರು. ಜತೆಗೆ ಕಳಪೆ ಫೀಲ್ಡಿಂಗ್​ ಮೂಲಕ ಕ್ಯಾಚ್​ ಒಂದನ್ನು ಕೂಡ ಕೈಚೆಲ್ಲಿದ್ದರು. ಜಡೇಜಾ ಕೂಡ ಆಡಿದ 2 ಪಂದ್ಯಗಳಲ್ಲಿಯೂ ವಿಕೆಟ್​ ಲೆಸ್​ ಎನಿಸಿಕೊಂಡಿದ್ದಾರೆ. ಹೀಗಾಗಿ ಉಭಯ ಆಟಗಾರರನ್ನು ಕೈ ಬಿಟ್ಟು ಇವರ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್​ ಮತ್ತು ಕುಲ್​ದೀಪ್​ ಯಾದವ್​ ಅವರನ್ನು ಆಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಜೈಸ್ವಾಲ್​ ಓಪನಿಂಗ್​?


ಕಳೆದೆರಡು ಪಂದ್ಯಗಳಲ್ಲಿ ಆರಂಭಿಕನಾಗಿ ಆಡಿದ ಕಿಂಗ್​ ಖ್ಯಾತಿಯ ವಿರಾಟ್​​ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ಮಂಕಾಗಿದ್ದರು. ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್​ ವೈಫಲ್ಯ ಎದುರಿಸಿದ್ದರು. ಈಗಾಗಲೇ ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿದ್ದಕ್ಕೆ ಹಲವು ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ದ್ವಿತೀಯ ಕ್ರಮಾಂಕದಲ್ಲಿ ಆಡಿದರೇ ಸೂಕ್ತ ಎಂದಿದ್ದಾರೆ. ಇಂದಿನ ಪಂದ್ಯದಲ್ಲಿ ಜೈಸ್ವಾಲ್​ಗೆ ಅವಕಾಶ ನೀಡಿದ್ದೇ ಆದರೆ, ರೋಹಿತ್​ ಜತೆ ಜೈಸ್ವಾಲ್​ ಇನಿಂಗ್ಸ್​ ಆರಂಭಿಸಬಹುದು.

ಇದನ್ನೂ ಓದಿ AUS vs NAM: 17 ವರ್ಷಗಳ ಹಿಂದಿನ ಅನಗತ್ಯ ಟಿ20 ದಾಖಲೆ ಮುರಿದ ಗೆರ್ಹಾರ್ಡ್ ಎರಾಸ್ಮಸ್

ಅಮೆರಿಕ ತಂಡ ಕ್ರಿಕೆಟ್​ ಶಿಶು ಆಗಿದ್ದರೂ ಕೂಡ ತಂಡದಲ್ಲಿ ಆಡುವ ಆಟಗಾರರಿಗೆ ಕ್ರಿಕೆಟ್​ ಹೊಸದಲ್ಲ. ಎಲ್ಲರು ಅನುಭವಿ ಆಟಗಾರರು. ಈ ತಂಡದ ವಿಶೇಷವೆಂದರೆ ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್​, ಕೆನಡಾ ಸೇರಿ ಹಲವು ದೇಶಗಳ ಕ್ರಿಕೆಟಿಗರು ಈ ತಂಡದಲ್ಲಿ ಕಾಣಿಸಿಕೊಂಡಿರುವುದು. ಬಹುಪಾಲು ಭಾರತೀಯ ಆಟಗಾರರೇ ನೆಚ್ಚಿಕೊಂಡಿದ್ದಾರೆ. ಕನ್ನಡಿಗ ನಾಸ್ತುಷ್‌ ಕೆಂಜಿಗೆ, 2010ರಲ್ಲಿ ಭಾರತ ಪರ 19 ವಿಶ್ವಕಪ್​ ಆಡಿದ್ದ ಎಡಗೈ ವೇಗದ ಬೌಲರ್ ಸೌರಭ್ ನೇತ್ರವಲ್ಕರ್, ನಾಯಕ ಮೊನಾಂಕ್ ಪಟೇಲ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಹೀಗಾಗಿ ಭಾರತ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ.

ಸಂಭಾವ್ಯ ತಂಡ


ಭಾರತ:
 ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್​, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಕುಲ್​ದೀಪ್​ ಯಾದವ್​, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ಅಮೆರಿಕ: ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಜಸ್ದೀಪ್ ಸಿಂಗ್, ನಾಸ್ತುಷ್‌ ಕೆಂಜಿಗೆ, ಸೌರಭ್ ನೇತ್ರವಲ್ಕರ್, ಅಲಿ ಖಾನ್.

Continue Reading

ಪ್ರಮುಖ ಸುದ್ದಿ

Teachers Recruitment: ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರ ನೇಮಕಾತಿ: ಕೌನ್ಸೆಲಿಂಗ್‌ಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

Teachers Recruitment: ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್‌ ನಡೆಸಿ, ಸ್ಥಳ ನಿಯುಕ್ತಿಗೊಳಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.

VISTARANEWS.COM


on

Teachers Recruitment
Koo

ಬೆಂಗಳೂರು: 2023-24ನೇ ಸಾಲಿಗೆ ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ (Specified Post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡಲು (Teachers Recruitment) ಶಾಲಾ ಶಿಕ್ಷಣ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿತ್ತು. ಇದೀಗ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್‌ ನಡೆಸಿ, ಸ್ಥಳ ನಿಯುಕ್ತಿಗೊಳಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆಗಳ ಭರ್ತಿಗೆ ಲಿಖಿತ ಪರೀಕ್ಷೆ ನಡೆಸಲು ಇತ್ತೀಚೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಲೋಕಸಭಾ ಚುನಾವಣಾ ಮಾದರಿ ನೀತಿ ಸಹಿತೆ ಹಿನ್ನೆಲೆ ಕೌನ್ಸೆಲಿಂಗ್ ದಿನಾಂಕ ಪ್ರಕಟಿಸಿರಲಿಲ್ಲ. ಆದ್ದರಿಂದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್‌ ನಡೆಸಲು ಇದೀಗ ಪರಿಷ್ಕೃತ ವೇಳಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ನಡೆದ ಪರೀಕ್ಷೆಯ ಫಲಿತಾಂಶ ಪಟ್ಟಿ ಪ್ರಕಟಣೆ (ಪರೀಕ್ಷಾ ಅಂಕಗಳ ಜತೆಗೆ ಅಭ್ಯರ್ಥಿಗಳ ಸೇವಾ ಅನುಭವ ಹಾಗೂ ಹೆಚ್ಚಿನ ವಿದ್ಯಾರ್ಹತೆಗೆ ನಿಗದಿಪಡಿಸಿರುವ ಅಂಕಗಳ ಕ್ರೋಡೀಕರಣದೊಂದಿಗೆ) ಮಾಡಲು ಜೂನ್‌ 11 ನಿಗದಿ ಮಾಡಲಾಗಿದೆ. ಪ್ರಕಟಿತ ಫಲಿತಾಂಶ ಪಟ್ಟಿಗೆ ಸೇವಾನುಭವ ಹಾಗೂ ವಿದ್ಯಾರ್ಹತೆ ಸಂಬಂಧ ಅಂಕಗಳ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಜೂನ್‌ 11ರಿಂದ 14ರವರೆಗೆ ಅವಕಾಶ ನೀಡಲಾಗಿದೆ.

ಇನ್ನು ಆಕ್ಷೇಪಣೆಗಳನ್ನು ಪರಿಶೀಲಿಸಿ ತಂತ್ರಾಂಶದಲ್ಲಿ ಸರಿಪಡಿಸಿ ಸರಿಪಡಿಸಲು ಜೂನ್‌ 15ರಿಂದ 19ರವರೆಗೆ ಅವಕಾಶ ನೀಡಲಾಗಿದೆ. ಅದೇ ರೀತಿ ಜೂನ್‌ 24ರಂದು ಅಂತಿಮ ಅರ್ಹತಾ ಪಟ್ಟಿ ಪ್ರಕಟಿಸಲು ಸೂಚಿಸಲಾಗಿದೆ.

ಇದನ್ನೂ ಓದಿ | University Grants Commission : ಇನ್ನು ಮುಂದೆ ವಿಶ್ವವಿದ್ಯಾಲಯಗಳಲ್ಲಿ ವರ್ಷಕ್ಕೆ ಎರಡು ಬಾರಿ ಅಡ್ಮಿಷನ್​

Continue Reading
Advertisement
Narendra Modi
ದೇಶ15 mins ago

Narendra Modi: ಜೂನ್‌ 21ರ ಯೋಗ ದಿನದಂದು ವಿಶೇಷ ಸ್ಥಳದಲ್ಲಿ ಮೋದಿ ಯೋಗ; ಯಾವುದದು?

Kuwait fire
ಪ್ರಮುಖ ಸುದ್ದಿ22 mins ago

Kuwait fire : ಕುವೈತ್ ನಲ್ಲಿ ಅಗ್ನಿ ಅವಘಡ: 5 ಭಾರತೀಯರು ಸೇರಿ 35 ಮಂದಿ ಸಾವು

IND vs USA
ಕ್ರಿಕೆಟ್24 mins ago

IND vs USA: ಇಂದಿನ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ; ಯಾರಿಗೆ ಕೊಕ್​?

Kathua Terror Attack
ದೇಶ27 mins ago

Kathua Terror Attack: ಯೋಧನ ಹತ್ಯೆಗೆ ಪ್ರತಿಕಾರ; ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

Teachers Recruitment
ಪ್ರಮುಖ ಸುದ್ದಿ29 mins ago

Teachers Recruitment: ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರ ನೇಮಕಾತಿ: ಕೌನ್ಸೆಲಿಂಗ್‌ಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

Dolly Dhananjay mana manakke Kotee Movie release
ಸ್ಯಾಂಡಲ್ ವುಡ್37 mins ago

Dolly Dhananjay: ಬಿಡುಗಡೆಗೂ ಮುನ್ನ ‘ಕೋಟಿ’ ಪೇಯ್ಡ್ ಪ್ರೀಮಿಯರ್ ಶೋ: ಜೂನ್‌ 14ಕ್ಕೆ ತೆರೆಗೆ!

AUS vs NAM
ಕ್ರೀಡೆ56 mins ago

AUS vs NAM: 17 ವರ್ಷಗಳ ಹಿಂದಿನ ಅನಗತ್ಯ ಟಿ20 ದಾಖಲೆ ಮುರಿದ ಗೆರ್ಹಾರ್ಡ್ ಎರಾಸ್ಮಸ್

Actor Darshan Arrested
ಪ್ರಮುಖ ಸುದ್ದಿ1 hour ago

Actor Darshan Arrested: ರೇಣುಕಾಸ್ವಾಮಿಗೆ ದರ್ಶನ್‌ ಗ್ಯಾಂಗ್‌ನಿಂದ ಕ್ರೂರ ಹಿಂಸೆ; ಪೋಸ್ಟ್‌ಮಾರ್ಟಂ ವರದಿಯಲ್ಲಿದೆ ಭಯಾನಕ ಡಿಟೇಲ್ಸ್‌

Actor Darshan
ಕರ್ನಾಟಕ1 hour ago

Actor Darshan: ದರ್ಶನ್‌ ಹೀರೋ ಅಲ್ಲ ಖಳನಾಯಕ, ಆತನಿಗೆ ಶಿಕ್ಷೆ ಆಗಲೇಬೇಕು: ರೇಣುಕಾ ಸ್ವಾಮಿ ತಂದೆ ಕಿಡಿ

KKRDB Chairman Dr Ajay Singh pressmeet in Kalaburagi
ಕರ್ನಾಟಕ2 hours ago

Kalaburagi News: ಜೂ.14ರಂದು ಸಿಎಂ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ22 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ24 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 day ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ1 day ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ1 day ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌