Dina Bhavishya : ಈ ರಾಶಿಯ ಪ್ರೇಮಿಗಳಿಗೆ ಇದ್ದ ಅಡ್ಡಿ ಆತಂಕಗಳು ಇಂದು ದೂರ - Vistara News

ಪ್ರಮುಖ ಸುದ್ದಿ

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಇದ್ದ ಅಡ್ಡಿ ಆತಂಕಗಳು ಇಂದು ದೂರ

Dina Bhavishya : ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶೀರ್ಷ ಮಾಸ, ಕೃಷ್ಣ ಪಕ್ಷದ ಪಂಚಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Dina Bhavishya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಸೋಮವಾರವೂ ಕನ್ಯಾ ರಾಶಿಯಲ್ಲೇ ನೆಲಸಲಿದ್ದಾನೆ. ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ. ತಿಂಗಳ ಆರಂಭದ ದಿನವೇ ಉದ್ಯೋಗದ ಸ್ಥಳದಲ್ಲಿ ನೀವು ಕಿರಿಕಿರಿ ಅನುಭವಿಸುವ ಸಾಧ್ಯತೆ ಇರುವುದರಿಂದ ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ಮಿಥುನ ರಾಶಿಯ ಪ್ರೇಮಿಗಳಿಗೆ ಶುಭ ಸೂಚನೆ ಸಿಗಲಿದೆ. ಸಿಂಹ ರಾಶಿಯವರು ಅತಿಯಾದ ದ್ವೇಷ ಭಾವನೆಯಿಂದ ನಿಮ್ಮ ಮನಸ್ಸುನ್ನು ಹಾಳು ಮಾಡಿಕೊಳ್ಳುವುದು ಬೇಡ. ಧನಸ್ಸು ರಾಶಿಯವರು ಚಿಕ್ಕ ಪುಟ್ಟ ವಿಷಯಗಳಿಗೆ ತಲೆಕೆಡಿಸಿಕೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುವುದು ಬೇಡ. ನೀವು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡಿದಲ್ಲಿ ಇಂದು ಆರ್ಥಿಕ ನಷ್ಟದ ಸಾಧ್ಯತೆಯಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (1-1-2024)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶೀರ್ಷ ಮಾಸ, ಕೃಷ್ಣ ಪಕ್ಷ.
ತಿಥಿ: ಪಂಚಮಿ 14:27 ವಾರ: ಸೋಮವಾರ
ನಕ್ಷತ್ರ: ಮಘಾ 08:35 ಯೋಗ: ಆಯುಷ್ಮಾನ್ 28:34
ಕರಣ: ತೈತುಲ 14:27 ಅಮೃತಕಾಲ: ಬೆಳಗ್ಗೆ 04:28 ರಿಂದ 06:17ರವರೆಗೆ
ದಿನದ ವಿಶೇಷ : ಹೊಸ ವರ್ಷ

ಸೂರ್ಯೋದಯ : 06:42  ಸೂರ್ಯಾಸ್ತ : 06:04

ರಾಹುಕಾಲ : ಬೆಳಗ್ಗೆ 08:07 ರಿಂದ 09:32
ಗುಳಿಕಕಾಲ: ಮಧ್ಯಾಹ್ನ 01:48 ರಿಂದ 03:14
ಯಮಗಂಡಕಾಲ: ಬೆಳಗ್ಗೆ 10:58 ರಿಂದ 12:23

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ. ನಿಮ್ಮ ಸಂಗಾತಿಯ ಒರಟು ವರ್ತನೆ ನಿಮ್ಮ ಮೇಲೆ ಒತ್ತಡ ಹಾಕಬಹುದು. ವ್ಯಾಪಾರ-ವ್ಯವಹಾರದಲ್ಲಿ ಲಾಭ ತರಲಿದೆ. ಆರ್ಥಿಕವಾಗಿ ಲಾಭ ಇರಲಿದೆ. ತಿಂಗಳ ಆರಂಭದ ದಿನವೇ ಉದ್ಯೋಗದ ಸ್ಥಳದಲ್ಲಿ ನೀವು ಕಿರಿಕಿರಿ ಅನುಭವಿಸುವ ಸಾಧ್ಯತೆ ಇರುವುದರಿಂದ ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವೃಷಭ: ಚೈತನ್ಯ ಮತ್ತು ಉತ್ಸಾಹ ನಿಮ್ಮನ್ನು ಆವರಿಸುತ್ತದೆ ಮತ್ತು ನೀವು ಯಾವುದೇ ಅವಕಾಶವನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳುವಿರಿ. ಕೆಲವರಿಗೆ ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ. ಆದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತವೆ. ನಿಮ್ಮ ಆಕರ್ಷಕ ಹಾಗೂ ವ್ಯಕ್ತಿತ್ವ ನೀವು ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ವಿಶೇಷ ಅನುಕೂಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಮಿಥುನ: ಜೀವನ ಸಂಗಾತಿಯೊಂದಿಗೆ ಸೇರಿ ಇಂದು ನೀವು ಭವಿಷ್ಯಕ್ಕೆ ಯಾವುದೇ ಆರ್ಥಿಕ ಯೋಜನೆಯನ್ನು ಮಾಡಬಹುದು ಮತ್ತು ಈ ಯೋಜನೆ ಯಶಸ್ವಿಯಾಗಲಿದೆ.
ಹತಾಶೆಯ ಭಾವನೆ ನಿಮ್ಮನ್ನು ಆವರಿಸಲು ಬಿಡಬೇಡಿ. ಆರೋಗ್ಯ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಪ್ರೇಮಿಗಳಿಗೆ ಶುಭ ಸೂಚನೆ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಕಟಕ: ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಅನಿರೀಕ್ಷಿತ ಲಾಭದ ಮೂಲಕ ಆರ್ಥಿಕ ಬಲಗಳು ಸುಧಾರಿಸುತ್ತವೆ. ನಿಮ್ಮ ಸಹೋದ್ಯೋಗಿಗಳು ಎಂದಿಗಿಂತಲೂ ಉತ್ತಮವಾಗಿ ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಸಿಂಹ: ಧರ್ಮ ಕಾರ್ಯಗಳು, ಹವನಗಳು, ಮಂಗಳಕರ ಸಮಾರಂಭಗಳನ್ನು ಮನೆಯಲ್ಲಿ ಕೈಗೊಳ್ಳವ ಸಾಧ್ಯತೆ ಇದೆ. ಅತಿಯಾದ ದ್ವೇಷ ಭಾವನೆಯಿಂದ ನಿಮ್ಮ ಮನಸ್ಸುನ್ನು ಹಾಳು ಮಾಡಿಕೊಳ್ಳುವುದು ಬೇಡ. ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಲಾಭ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಅನುಭವಿಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಕನ್ಯಾ: ಕೆಲವು ಅನಿವಾರ್ಯ ಸಂದರ್ಭಗಳು ನಿಮಗೆ ಅಹಿತಕರವೆನಿಸಬಹುದು. ಆತುರದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಇದು ನಿಮ್ಮ ಮನಸ್ಥಿತಿಯನ್ನು ಬದಲಾಯಿಸುವುದಷ್ಟೇ ಅಲ್ಲದೇ ನಿಮ್ಮ ತಪ್ಪು ತಿಳುವಳಿಕೆಗಳನ್ನೂ ಹೋಗಲಾಡಿಸುತ್ತದೆ. ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ. ದಿನದ ಮಟ್ಟಿಗೆ ಆದಾಯಕ್ಕಿಂತ ಹೆಚ್ಚಿನ ಖರ್ಚು ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಸ್ನೇಹಿತರ ಜತೆಗಿನ ನಿಮ್ಮ ಅಪಾರ್ಥ ಕೆಲವು ಅಹಿತಕರ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸಂಯಮದಿಂದ ವರ್ತಿಸಿ. ನಿಮ್ಮ ವೈಯಕ್ತಿಕ ರಂಗದಲ್ಲಿ ಮುಖ್ಯ ಬೆಳವಣಿಗೆಯಾಗುತ್ತಿದ್ದು, ಇದು ನೀವು ಮತ್ತು ನಿಮ್ಮ ಇಡೀ ಕುಟುಂಬಕ್ಕೆ ಸಂತೋಷ ತರಲಿದೆ. ಆರ್ಥಿವಾಗಿ ಉತ್ತಮ ಫಲ ಇರಲಿದೆ. ಆರೋಗ್ಯದ ಬಗ್ಗೆ ಜಾಗೃತಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವೃಶ್ಚಿಕ: ಅತಿಥಿಗಳ ಆಗಮನದಿಂದಾಗಿ ಕೊಂಚಮಟ್ಟಿಗೆ ಪ್ರಮುಖ ಕೆಲಸಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಅನೇಕ ಒತ್ತಡದಿಂದ ಹೊರಬರವಿರಿ. ಹಣಕಾಸಿನಲ್ಲಿ ಸುಧಾರಣೆ, ದೀರ್ಘಕಾಲದ ಬಾಕಿ ಮರುಪಾವತಿ ಆಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕುಟುಂಬದಲ್ಲಿ ದಿನದ ಕೊನೆಯಲ್ಲಿ ಮನಸ್ತಾಪ ಉಂಟಾಗಲಿದೆ. ಆದಷ್ಟು ಮಾತಿಗೆ ವಿರಾಮವಿರಲಿ.
ಅದೃಷ್ಟ ಸಂಖ್ಯೆ: 9

Horoscope Today

ಧನಸ್ಸು: ಚಿಕ್ಕ ಪುಟ್ಟ ವಿಷಯಗಳಿಗೆ ತಲೆಕೆಡಿಸಿಕೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುವುದು ಬೇಡ. ನೀವು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡಿದಲ್ಲಿ ಇಂದು ಆರ್ಥಿಕ ನಷ್ಟದ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಉದ್ಯೋಗಿಗಳಿಗೆ ಆಲಸ್ಯದಿಂದಾಗಿ ಕಿರಿಕಿರಿ ಅನುಭವಿಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಮಕರ: ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೆಲಸ ಕಾರ್ಯಗಳು ಯಶಸ್ಸನ್ನು ತಂದುಕೊಡಲಿದೆ. ವಿದೇಶ ಪ್ರವಾಸಕ್ಕೆ ಕಾಯುತ್ತಿರುವವರಿಗೆ ಶುಭ ಸೂಚನೆ ಸಿಗಲಿದೆ. ಸೃಜನಶೀಲ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ.
ಅದೃಷ್ಟ ಸಂಖ್ಯೆ: 6

Horoscope Today

ಕುಂಭ: ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ನ್ಯಾಯಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಇಂದು ನೀವು ಅದರಲ್ಲಿ ವಿಜಯವನ್ನು ಪಡೆಯಬಹುದು. ನೀವು ಹಣದ ಲಾಭವನ್ನು ಪಡೆಯಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಭರವಸೆ ಇಮ್ಮಡಿ ಆಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮೀನ: ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ಕೆಲವು ಊಹೆಗಳು ಲಾಭ ತರುತ್ತವೆ. ಪ್ರಮುಖ ವ್ಯಕ್ತಿಗಳೊಂದಿಗೆ ಮಾತನಾಡುವಾಗ ಜಾಗೃತೆ ಇರಲಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಆರ್ಥಿಕವಾಗಿ ಲಾಭ ಸಿಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಭವಿಷ್ಯ

Dina Bhavishya : ಮಾನಸಿಕ ಒತ್ತಡದಿಂದ ಮುಕ್ತರಾಗುವಿರಿ; ಹೂಡಿಕೆ ವ್ಯವಹಾರವು ಹೆಚ್ಚು ಲಾಭ ತರುವುದು

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷದ ದ್ವಾದಶಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ತುಲಾ ರಾಶಿಯಿಂದ ಸೋಮವಾರ ಸಂಜೆ 06:34ಕ್ಕೆ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ತುಲಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಮೇಷ ರಾಶಿಯವರು ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮಾನಸಿಕ ಒತ್ತಡದಿಂದ ಮುಕ್ತರಾಗಿ, ದೊಡ್ಡ ಯೋಜನೆಯತ್ತ ಗಮನ ಹರಿಸುವಿರಿ. ಬಹಳ ದಿನಗಳ ನಂತರ ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ವೃಷಭ ರಾಶಿಯವರು ಕುಟುಂಬ ಸದಸ್ಯರ ವರ್ತನೆ ನಿಮಗೆ ಹಿಡಿಸದಿರಬಹುದು, ಆದರೆ ವಿನಾ ಕಾರಣ ಮಾತಿಗಿಳಿದು ಮನಸ್ಸು ಕೆಡಿಸಿಕೊಳ್ಳುವುದು ಬೇಡ. ನಂಬಿದ ವ್ಯಕ್ತಿಗಳು ನಿಮ್ಮನ್ನು ನಿರಾಸೆ ಮಾಡಬಹುದು. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (20-05-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ
ತಿಥಿ: ದ್ವಾದಶಿ 15:58 ವಾರ:ಸೋಮವಾರ
ನಕ್ಷತ್ರ: ಚಿತ್ತಾ 29:45 ಯೋಗ:ಸಿದ್ಧಿ 12:08
ಕರಣ: ಕೌಲವ 28:52 ಅಮೃತ ಕಾಲ: ರಾತ್ರಿ 10:42ರಿಂದ 12:28ರವರಗೆ
ದಿನದ ವಿಶೇಷ: ಶ್ರೀರಂಗಪಟ್ಟಣ ರಥ, ತೊರವಿ ನರಸಿಂಹ ರಥ, ಕೊಳ್ಳೇಗಾಲದ ವಿಶ್ವೇಶ್ವರ ರಥ

ಸೂರ್ಯೋದಯ : 05:53   ಸೂರ್ಯಾಸ್ತ : 06:39

ರಾಹುಕಾಲ : ಬೆಳಗ್ಗೆ 7.30 ರಿಂದ 9.00
ಗುಳಿಕಕಾಲ: ಮಧ್ಯಾಹ್ನ 1.30 ರಿಂದ 3.00
ಯಮಗಂಡಕಾಲ: ಬೆಳಗ್ಗೆ 10.30 ರಿಂದ 12.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮಾನಸಿಕ ಒತ್ತಡದಿಂದ ಮುಕ್ತರಾಗಿ, ದೊಡ್ಡ ಯೋಜನೆಯತ್ತ ಗಮನ ಹರಿಸುವಿರಿ. ಬಹಳ ದಿನಗಳ ನಂತರ ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ಪ್ರಗತಿ ಸಾಮಾನ್ಯವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ವೃಷಭ:ಕುಟುಂಬ ಸದಸ್ಯರ ವರ್ತನೆ ನಿಮಗೆ ಹಿಡಿಸದಿರಬಹುದು, ಆದರೆ ವಿನಾ ಕಾರಣ ಮಾತಿಗಿಳಿದು ಮನಸ್ಸು ಕೆಡಿಸಿಕೊಳ್ಳುವುದು ಬೇಡ. ನಂಬಿದ ವ್ಯಕ್ತಿಗಳು ನಿಮ್ಮನ್ನು ನಿರಾಸೆ ಮಾಡಬಹುದು. ಉದ್ಯೋಗದ ಸ್ಥಳದಲ್ಲಿ ನಿಮ್ಮ ಕಾರ್ಯದ ಯಶಸ್ಸು ಬೇರೆಯವರ ಪಾಲಾಗದಂತೆ ಎಚ್ಚರಿಕೆ ವಹಿಸಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ಪ್ರಗತಿ ಮಧ್ಯಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವುದು ಉತ್ತಮ. ಅದರಲ್ಲೂ ಗರ್ಭಿಣಿಯರು ಹೆಚ್ಚು ಕಾಳಜಿ ವಹಿಸಿ. ಹೊಸ ಒಪ್ಪಂದ ಮಾಡುವುದು ಇಂದಿನ ಮಟ್ಟಿಗೆ ಬೇಡ. ಆತುರದಲ್ಲಿ ಯಾವ ತೀರ್ಮಾನಗಳನ್ನು ಮಾಡಬೇಡಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕಟಕ: ಬಿಡುವಿಲ್ಲದ ಕಾರ್ಯ ಯೋಜನೆ, ಅಪಾರ ಯಶಸ್ಸನ್ನು ಹಾಗೂ ಕೀರ್ತಿಯನ್ನು ತಂದು ಕೊಡುವುದು. ಪ್ರಯಾಣದ ಕುರಿತಾಗಿ ಯೋಜನೆ ಮಾಡುವಿರಿ. ಹೂಡಿಕೆ ವ್ಯವಹಾರವು ಹೆಚ್ಚು ಲಾಭ ತರುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ಸಿಂಹ: ದಿನದ ಮಟ್ಟಿಗೆ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ವಿಶ್ವಾಸದಿಂದ ಕಾರ್ಯ ಸಿದ್ಧಿ. ಲಾಭದ ಹೂಡಿಕೆ ಕುರಿತಾಗಿ ಆಲೋಚನೆ ಮಾಡುವಿರಿ. ಕುಟುಂಬದ ಜತೆಗೆ ಕಾಲ ಕಳೆಯಲು ಹೆಚ್ಚು ಸಮಯ ವಿನಿಯೋಗಿಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕನ್ಯಾ: ಪ್ರಯತ್ನದಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ವ್ಯವಹಾರದಲ್ಲಿ ಲಾಭ ಇರಲಿದೆ. ಆತುರದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆ ಇದೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಭರವಸೆಯ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸೌಂದರ್ಯದ ಕುರಿತು ಕಾಳಜಿ ವಹಿಸುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ವ್ಯವಹಾರದಲ್ಲಿ ಲಾಭ ಇರಲಿದೆ. ಕುಟುಂಬದ ಸದಸ್ಯರಿಂದ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ: ಮಾನಸಿಕ ಒತ್ತಡದಿಂದ ದೂರವಾಗಲು ಧ್ಯಾನ ಮಾಡಿ. ಚಿಂತೆ ನಿಮ್ಮನ್ನು ಮತ್ತಷ್ಟು ಖಿನ್ನತೆಗೆ ಒಳಪಡಿಸಲಿದೆ, ಆದರಿಂದ ಸಕಾರಾತ್ಮಕ ಆಲೋಚನೆಗಳನ್ನು ಮಾಡಿ. ಕೌಟುಂಬಿಕ ಕಲಹದಲ್ಲಿ ಧ್ವನಿ ಸೇರಿಸುವುದು ಬೇಡ, ಮನೆಯ ವಾತಾವರಣ ಹದಗೆಡಬಹುದು. ಮೌನದಿಂದ ಕಾರ್ಯ ಸಿದ್ಧಿಸಿಕೊಳ್ಳಿ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 3

Horoscope Today

ಧನಸ್ಸು: ಪ್ರಭಾವಿ ವ್ಯಕ್ತಿಗಳ ವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಅನಿರೀಕ್ಷಿತ ಖರ್ಚು ಹೊರಾತಾಗಿಯೂ ಲಾಭ ಪಡೆಯುವಿರಿ. ಮಾತಿನ ಮೇಲೆ ಹಿಡಿತವಿರಲಿ. ಸಮಯ ವ್ಯರ್ಥ ಮಾಡದೆ ಕಾರ್ಯದಲ್ಲಿ ಮುನ್ನುಗ್ಗಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಮಕರ: ಘಟಿಸಿದ ಘಟನೆಗಳನ್ನು ಮೆಲುಕು ಹಾಕುತ್ತಾ ಕಾಲಹರಣ ಮಾಡುವ ಬದಲು ಕಾರ್ಯದಲ್ಲಿ ಮುನ್ನುಗ್ಗಿ. ಮಾನಸಿಕ ಒತ್ತಡ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಉಂಟು ಆಗುವ ಸಾಧ್ಯತೆ ಇದೆ. ಅತಿರೇಕವಾಗಿ ಕೋಪದಿಂದ ಮಾತನಾಡುವುದು ಬೇಡ. ಆರ್ಥಿಕ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕುಂಭ: ನಿಮ್ಮ ಸಹಾಯ ಮಾಡುವ ಗುಣವು ಇತರರಿಂದ ಪ್ರಶಂಸೆ ಸಿಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಮೀನ: ಉದ್ಯೋಗದಲ್ಲಿ ಹೊಸ ಭರವಸೆ ಮೂಡಲಿದೆ. ಅರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕುಟುಂಬದ ಸದಸ್ಯರ ವರ್ತನೆ ಮುಜುಗರ ಉಂಟು ಮಾಡುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ವಿದೇಶ

Ebrahim Raisi: ಪತನದ ಬಳಿಕ ಹೆಲಿಕಾಪ್ಟರ್‌ ನಾಪತ್ತೆ; ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು?

Ebrahim Raisi: ಅಜರ್‌ಬೈಜಾನ್‌ನಲ್ಲಿ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್‌ ಪತನಗೊಂಡಿದೆ ಎಂಬುದಾಗಿ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇರಾನ್‌ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ, ಹೆಲಿಕಾಪ್ಟರ್ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿರುವ ಕಾರಣ ಹುಡುಕಾಟ ನಡೆಯುತ್ತಲೇ ಇದೆ. ಇದುವರೆಗೆ ಹೆಲಿಕಾಪ್ಟರ್‌ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

VISTARANEWS.COM


on

Ebrahim Raisi
Koo

ಬಾಕು: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ (Helicopter Crash) ಅಜರ್‌ಬೈಜಾನ್‌ನಲ್ಲಿ (Azerbaijan) ಪತನಗೊಂಡಿದ್ದು, ಹಲವು ಗಂಟೆಗಳ ಕಾರ್ಯಾಚರಣೆ ಬಳಿಕವೂ ಹೆಲಿಕಾಪ್ಟರ್‌ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್‌ ಪತ್ತೆಗಾಗಿ ಸುಮಾರು 40 ತಂಡಗಳು ಶೋಧ ಕಾರ್ಯ ನಡೆಸುತ್ತಲೇ ಇವೆ. ಇಷ್ಟಾದರೂ ಹೆಲಿಕಾಪ್ಟರ್‌ ಪತ್ತೆಯಾಗಿರುವ ಕಾರಣ ಇಬ್ರಾಹಿಂ ರೈಸಿ ಸೇರಿ ಹಲವರ ಪ್ರಾಣಕ್ಕೆ ಕುತ್ತುಂಟಾಗಿರುವ ಸಾಧ್ಯತೆ ಇದೆ ಎಂದು ಇರಾನ್‌ ಅಧಿಕಾರಿಗಳು ತಿಳಿಸಿದ್ದಾರೆ.

ಅಜರ್‌ಬೈಜಾನ್‌ ಸಮೀಪದ ಜೋಲ್ಫಾ ಎಂಬ ಪ್ರದೇಶ ಬೆಟ್ಟಗಳ ಮಧ್ಯೆ ಹೆಲಿಕಾಪ್ಟರ್‌ ಪತನಗೊಂಡಿರುವ ಕಾರಣ ಶೋಧ ಕಾರ್ಯ ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್‌ ಪತ್ತೆಗಾಗಿ ಹಲವು ಸಿಬ್ಬಂದಿ ಇರುವ ಸುಮಾರು 40 ತಂಡಗಳನ್ನು ಇರಾನ್‌ ರಚಿಸಿದೆ. ಬೆಟ್ಟಗಳಲ್ಲಿ ಭದ್ರತಾ ಸಿಬ್ಬಂದಿಯು ಎಡೆಬಿಡದೆ ಶೋಧ ಕಾರ್ಯ ಕೈಗೊಂಡರೂ ಮುನ್ನಡೆ ಸಿಗುತ್ತಿಲ್ಲ. ಹೆಲಿಕಾಪ್ಟರ್‌ ಪತನದ ಬಳಿಕ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದ್ದು, ಬದುಕುಳಿಯುವ ಸಾಧ್ಯತೆ ತೀರಾ ಕ್ಷೀಣ ಎಂದು ಹೇಳಲಾಗುತ್ತಿದೆ.

ಹೆಲಿಕಾಪ್ಟರ್‌ನಲ್ಲಿ ಯಾರಿದ್ದರು?

ಹೆಲಿಕಾಪ್ಟರ್‌ನಲ್ಲಿ ಇಬ್ರಾಹಿಂ ರೈಸಿ ಜತೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಹುಸೇನ್‌ ಅಮೀರಬ್ದೊಲ್ಲೈ, ಪೂರ್ವ ಅಜರ್‌ಬೈಜಾನ್‌ ಗವರ್ನರ್‌ ಮಲೇಕ್‌ ರಹಮತಿ ಹಾಗೂ ಪೂರ್ವ ಅಜರ್‌ಬೈಜಾನ್‌ನಲ್ಲಿರುವ ಇರಾನ್‌ ಸುಪ್ರೀಂ ಲೀಡರ್‌ನ ಪ್ರತಿನಿಧಿ ಅಯೊತೊಲ್ಲಾ ಮೊಹಮ್ಮದ್‌ ಅಲಿ ಅಲೆ-ಹಶೇಮ್‌ ಅವರು ಕೂಡ ಇದ್ದರು. ಇದುವರೆಗೆ ಹೆಲಿಕಾಪ್ಟರ್‌ ಎಲ್ಲಿದೆ ಎಂಬುದರ ಸುಳಿವೇ ಸಿಗದ ಕಾರಣ ಇವರೆಲ್ಲರ ಪ್ರಾಣಕ್ಕೆ ಕುತ್ತು ಎದುರಾಗಿರಬಹುದು ಎಂದು ಹೇಳಲಾಗುತ್ತಿದೆ.

ಇಬ್ರಾಹಿಂ ರೈಸಿಗಾಗಿ ಮೋದಿ ಪ್ರಾರ್ಥನೆ

ಇರಾನ್‌ ಅಧ್ಯಕ್ಷರಿದ್ದ ಹೆಲಿಕಾಪ್ಟರ್‌ ಪತನಗೊಂಡಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ. “ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್‌ ಪತನದ ಸುದ್ದಿ ತಿಳಿದು ಆತಂಕವಾಗಿದೆ. ಇರಾನ್‌ ಜನರ ಭಾವನೆಗಳ ಜತೆ ನಾವಿದ್ದೇವೆ. ಇಬ್ರಾಹಿಂ ರೈಸಿ ಹಾಗೂ ಅವರ ಜತೆಗಿದ್ದ ಎಲ್ಲರೂ ಸುರಕ್ಷಿತವಾಗಿರಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಮೋದಿ ಪೋಸ್ಟ್‌ ಮಾಡಿದ್ದಾರೆ.

ಅರಸ್‌ ನದಿಗೆ ಇರಾನ್‌ ಹಾಗೂ ಅಜರ್‌ಬೈಜಾನ್‌ ಸೇರಿ ಅಣೆಕಟ್ಟು ಕಟ್ಟಿದ್ದು, ಅದನ್ನು ಉದ್ಘಾಟಿಸಲು ಇಬ್ರಾಹಿಂ ರೈಸಿ ಅವರು ಅಜರ್‌ಬೈಜಾನ್‌ಗೆ ತೆರಳಿದ್ದರು. ಇದೇ ವೇಳೆ ಹೆಲಿಕಾಪ್ಟರ್‌ ಪತನಗೊಂಡಿದೆ ಎಂದು ತಿಳಿದುಬಂದಿದೆ. ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ ಪತನಗೊಂಡಿರಬಹುದು ಎಂದು ಇರಾನ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹವಾಮಾನ ವೈಪರೀತ್ಯವು ಶೋಧ ಕಾರ್ಯಾಚರಣೆಗೂ ಅಡ್ಡಿಯಾಗಿದೆ ಎಂದು ತಿಳಿದುಬಂದಿದೆ. 2021ರಿಂದಲೂ ಇಬ್ರಾಹಿಂ ರೈಸಿ ಅವರು ಇರಾನ್‌ ಅಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ: Helicopter Crash: ಶಿವಸೇನೆ ನಾಯಕಿ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ ಪತನ;ವಿಡಿಯೋ ವೈರಲ್‌

Continue Reading

ಕ್ರೀಡೆ

RR vs KKR: ಮಳೆಯಿಂದ​ ಪಂದ್ಯ ರದ್ದು; ಎಲಿಮಿನೇಟರ್‌ ಪಂದ್ಯದಲ್ಲಿ​ ಆರ್​ಸಿಬಿಗೆ ರಾಜಸ್ಥಾನ್​ ಎದುರಾಳಿ

RR vs KKR: ಕೆಕೆಆರ್​ ಮಣಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿ ಕ್ವಾಲಿಫೈಯರ್​ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದ ರಾಜಸ್ಥಾನ್​ಗೆ(Rajasthan Royals)​ ಮಳೆ ತಣ್ಣೀರೆರಚಿತು. ಸನ್​ರೈಸರ್ಸ್​ ಹೈದರಾಬಾದ್​ 2ನೇ ತಂಡವಾಗಿ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಿತು.

VISTARANEWS.COM


on

RR vs KKR
Koo

ಗುವಾಹಟಿ: 17ನೇ ಆವೃತ್ತಿಯ ಐಪಿಎಲ್​ನ(IPL 2024) ಕೊನೆಯ ಲೀಗ್​ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ರಾಜಸ್ಥಾನ್​ ರಾಯಲ್ಸ್​(RR vs KKR) ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಬೇಕಿತ್ತು. ಆದರೆ ಮಳೆಯಿಂದ ಒಂದೂ ಎಸೆತ ಕಾಣದೆ ಈ ಪಂದ್ಯ ರದ್ದಾದ ಕಾರಣ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು.

10 ಗಂಟೆ ಸುಮಾರಿಗೆ ಮಳೆ ನಿಂತಿತು. ಮಳೆ ನಿಂತ ಕಾರಣ ಪಂದ್ಯವನ್ನು ಡಕ್​ವರ್ತ್​ ನಿಯಮದ ಪ್ರಕಾರ 7 ಓವರ್​ಗೆ ಸೀಮಿತಗೊಳಿಸಿ ಟಾಸ್​ ಕೂಡ ಹಾರಿಸಲಾಯಿತು. ಟಾಸ್​ ಗೆದ್ದು ಕೆಕೆಆರ್​ ಫೀಲ್ಡಿಂಗ್​ ಆಯ್ದುಕೊಂಡಿತು. ಇನ್ನೇನು ಆಟಗಾರರು ಮೈದಾನಕ್ಕೆ ಇಳಿಯಬೇಕು ಎನ್ನುವಷ್ಟರಲ್ಲಿ ಮಳೆ ಮತ್ತೆ ಆರಂಭಗೊಂಡಿತು. ಹೀಗಾಗಿ ಅಂಪೈರ್​ಗಳು ಕೊನೆಗೆ ಪಂದ್ಯವನ್ನು ರದ್ದು ಎಂದು ಘೋಷಣೆ ಮಾಡಿದರು.

ಕೆಕೆಆರ್​ ಮಣಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿ ಕ್ವಾಲಿಫೈಯರ್​ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದ ರಾಜಸ್ಥಾನ್​ಗೆ(Rajasthan Royals)​ ಮಳೆ ತಣ್ಣೀರೆರಚಿತು. ಸನ್​ರೈಸರ್ಸ್​ ಹೈದರಾಬಾದ್​ 2ನೇ ತಂಡವಾಗಿ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಿತು. ರಾಜಸ್ಥಾನ್​ ಮತ್ತು ಹೈದರಾಬಾದ್ ಸಮಾನ 17 ಅಂಕ ಹೊಂದಿದರೂ ರನ್​ ರೇಟ್​ನಲ್ಲಿ ಮುಂದಿದ್ದ ಕಾರಣ ಈ ಲಾಭ ಕಮಿನ್ಸ್​ ಪಡೆಗೆ ಲಭಿಸಿತು. ಮಂಗಳವಾರ(ಮೇ 21) ನಡೆಯುವ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಹೈದರಾಬಾದ್​ ಕಣಕ್ಕಿಳಿಯಲಿದೆ. ಈ ಪಂದ್ಯ ಅಹಮದಾಬಾದ್​ನಲ್ಲಿ ನಡೆಯಲಿದೆ.

ಆರ್​ಸಿಬಿ-ರಾಜಸ್ಥಾನ್​ ಮಧ್ಯೆ ಎಲಿಮಿನೇಟರ್​ ಪಂದ್ಯ


ಬುಧವಾರ ನಡೆಯುವ ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ತಂಡ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಆಡಲಿದೆ. ಈ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಸತತವಾಗಿ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್​ ಆಫ್​ಗೆ ಲಗ್ಗೆಯಿಟ್ಟ ಆರ್​ಸಿಬಿಗೆ ಎಲಿಮಿನೇಟರ್​ ಪಂದ್ಯದಲ್ಲೂ ಲಕ್​ ಹೈ ಹಿಡಿಯುವುದೇ ಎಂದು ಕಾದು ನೋಡಬೇಕಿದೆ.

ಪಂಜಾಬ್​ ವಿರುದ್ಧ ಗೆದ್ದ ಹೈದರಾಬಾದ್​


ದಿನದ ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡ ಪಂಜಾಬ್​ ಕಿಂಗ್ಸ್​ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ 17 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಬ್ಯಾಟಿಂಗ್​ ಸ್ನೇಹಿಯಾದ ಉಪ್ಪಳದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಪಂಜಾಬ್​ ಕಿಂಗ್ಸ್​ 5 ವಿಕೆಟ್​ಗೆ 214 ರನ್​ ಬಾರಿಸಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಆದರೆ ಈ ಮೊತ್ತ ಹೈದರಾಬಾದ್​ ತಂಡವನ್ನು ಕಟ್ಟಿ ಹಾಕಲು ಸಾಕಾಗಲಿಲ್ಲ. ಗುರಿ ಬೆನ್ನಟ್ಟಿದ ಸನ್​ರೈಸರ್ಸ್​ ಹೈದರಾಬಾದ್ 19.1​ ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 215 ಬಾರಿಸಿ ತವರಿನಲ್ಲಿ ವಿಜಯ ಪತಾಕೆ ಹಾರಿಸಿತು. ಉಭಯ ತಂಡಗಳ ಜಿದ್ದಾಜಿದ್ದಿನ ಬ್ಯಾಟಿಂಗ್​ ಪರಾಕ್ರಮದಿಂದಾಗಿ ಈ ಪಂದ್ಯದಲ್ಲಿ ಒಟ್ಟು 429 ರನ್​ ದಾಖಲಾಯಿತು.

Continue Reading

ದೇಶ

Parliament Security: ನಾಳೆಯಿಂದ ಸಂಸತ್‌ಗೆ ಸಿಆರ್‌ಪಿಎಫ್‌ ಬದಲು ಸಿಐಎಸ್‌ಎಫ್‌ ಭದ್ರತೆ; ಏಕಿಂಥ ನಿರ್ಧಾರ?

Parliament Security: ಸಿಐಎಸ್‌ಎಫ್‌ನ ಸುಮಾರು 3,300 ಸಿಬ್ಬಂದಿಯು ಸಂಸತ್‌ಅನ್ನು ಹಗಲು-ರಾತ್ರಿ ಎನ್ನದೆ ರಕ್ಷಣೆ ಮಾಡಲಿದ್ದಾರೆ. ಕಳೆದ ಹಲವು ವರ್ಷಗಳಿಂದ ದೇಶದ ಸಂಸತ್‌ಅನ್ನು ಕಾಯುತ್ತಿದ್ದ ಸಿಆರ್‌ಪಿಎಫ್‌ನ 1,400 ಸಿಬ್ಬಂದಿಯು ಸಂಸತ್‌ ಭದ್ರತೆಯಿಂದ ವಿಮುಖರಾಗಲಿದ್ದಾರೆ. ಕಳೆದ ವರ್ಷ ಲೋಕಸಭೆಯಲ್ಲಿ ಭದ್ರತಾ ವೈಫಲ್ಯ ಉಂಟಾದ ಕಾರಣ ಕೇಂದ್ರ ಸರ್ಕಾರವು ಭದ್ರತಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ.

VISTARANEWS.COM


on

Parliament Security
Koo

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ನೂತನ ಸಂಸತ್‌ ಭವನದ ರಕ್ಷಣೆಯ ಹೊಣೆಯನ್ನು ಸೋಮವಾರದಿಂದ (ಮೇ 20) ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (CRPF) ಬದಲು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) ಸಿಬ್ಬಂದಿಯು ವಹಿಸಿಕೊಳ್ಳಲಿದೆ. ಕಳೆದ ವರ್ಷ ಸಂಸತ್‌ನಲ್ಲಿ ಭದ್ರತಾ ಲೋಪ ಉಂಟಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು (Central Government) ಸಿಐಎಸ್‌ಎಫ್‌ ಸಿಬ್ಬಂದಿಯ ಭದ್ರತೆಗೆ ವಹಿಸಿದೆ. ಅದರಂತೆ, ಸೋಮವಾರದಿಂದ ಸಿಐಎಸ್‌ಎಫ್‌ ಸಿಬ್ಬಂದಿಯೇ ಸಂಸತ್‌ನ ಸಂಪೂರ್ಣ ರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಿಸಲಿದೆ.

ಸಿಐಎಸ್‌ಎಫ್‌ನ ಸುಮಾರು 3,300 ಸಿಬ್ಬಂದಿಯು ಸಂಸತ್‌ಅನ್ನು ಹಗಲು-ರಾತ್ರಿ ಎನ್ನದೆ ರಕ್ಷಣೆ ಮಾಡಲಿದ್ದಾರೆ. ಕಳೆದ ಹಲವು ವರ್ಷಗಳಿಂದ ದೇಶದ ಸಂಸತ್‌ಅನ್ನು ಕಾಯುತ್ತಿದ್ದ ಸಿಆರ್‌ಪಿಎಫ್‌ನ 1,400 ಸಿಬ್ಬಂದಿಯು ಸಂಸತ್‌ ಭದ್ರತೆಯಿಂದ ವಿಮುಖರಾಗಲಿದ್ದಾರೆ. 2013ರಿಂದಲೂ ಸಿಆರ್‌ಪಿಎಫ್‌ ಪಡೆಗಳು ಸಂಸತ್‌ಗೆ ಭದ್ರತೆ ಒದಗಿಸಿದ್ದವು. ಸಿಆರ್‌ಪಿಎಫ್‌ನ ಪಿಡಿಜಿ (ಪಾರ್ಲಿಮೆಂಟ್‌ ಡ್ಯೂಟಿ ಗ್ರೂಪ್‌) ವಾಹನಗಳು, ಶಸ್ತ್ರಾಸ್ತ್ರ, ಸಿಬ್ಬಂದಿಯನ್ನು ಸೋಮವಾರ ತೆರವುಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸಿಐಎಸ್‌ಎಫ್‌ ಪಡೆಗಳು ಸಂಸತ್‌ ಭದ್ರತೆಗೆ ನಿಯೋಜನೆಗೊಂಡಿವೆ ಎಂದು ಹೇಳಲಾಗುತ್ತಿದೆ.

ಭದ್ರತಾ ವೈಫಲ್ಯ ಹೇಗಾಗಿತ್ತು?

2023ರ ಡಿಸೆಂಬರ್‌ 13ರಂದು ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪ ಕಂಡುಬಂದಿತ್ತು. ಪ್ರೇಕ್ಷಕರ ಗ್ಯಾಲರಿಯಿಂದ ಕಾಲಾಪದ ಮಧ್ಯೆ ಜಿಗಿದ ಇಬ್ಬರು ದುಷ್ಕರ್ಮಿಗಳು ಹೊಗೆ ಬಾಂಬ್‌ (ಬಣ್ಣದ ಹೊಗೆ ಬರುವ ವಸ್ತುಗಳ ಸ್ಫೋಟ) ಸ್ಫೋಟಿಸಿದ್ದರು. ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಹೊಗೆ ಬಾಂಬ್‌ ಸ್ಫೋಟಿಸಿದ ಹಿನ್ನೆಲೆಯಲ್ಲಿ ಮೈಸೂರು ನಿವಾಸಿ ಸೇರಿ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು. ಸಂಸದ ಪ್ರತಾಪ್‌ ಸಿಂಹ ಅವರು ಮೈಸೂರಿನ ವ್ಯಕ್ತಿಗೆ ಪಾಸ್‌ ನೀಡಿದ್ದು ಕೂಡ ರಾಜಕೀಯ ಮೇಲಾಟಕ್ಕೆ ಕಾರಣವಾಗಿತ್ತು.

ಲೋಕಸಭೆಯಲ್ಲಿ ಸ್ಮೋಕ್‌ ಬಾಂಬ್‌ ಸ್ಫೋಟದ ಅವಾಂತರ.

ಸಂಸತ್‌ನಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಎಫ್‌ ಮಹಾ ನಿರ್ದೇಶಕ ಅನೀಶ್‌ ದಯಾಳ್‌ ಸಿಂಗ್‌ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಸಿಆರ್‌ಪಿಎಫ್‌ ಹಾಗೂ ಹಲವು ಭದ್ರತಾ ತಜ್ಞರು, ಸಂಸತ್‌ ಭದ್ರತಾ ವ್ಯವಸ್ಥೆಯನ್ನು ಬದಲಿಸಬೇಕು ಎಂಬುದಾಗಿ ಶಿಫಾರಸು ಮಾಡಿದ್ದರು. ಸಿಆರ್‌ಪಿಎಫ್‌ ಬದಲು ಸಿಐಎಸ್‌ಎಫ್‌ ಪಡೆಗಳನ್ನು ಸಂಸತ್‌ ಭದ್ರತೆಗೆ ನಿಯೋಜಿಸುವುದು ಉತ್ತಮ ಎಂಬ ಶಿಫಾರಸು ವ್ಯಕ್ತವಾಗಿತ್ತು. ಹಾಗಾಗಿ, ಕೇಂದ್ರ ಸರ್ಕಾರವು ಸಂಸತ್‌ ಭದ್ರತೆಗೆ ಸಿಐಎಸ್‌ಎಫ್‌ ಸಿಬ್ಬಂದಿಯನ್ನು ನಿಯೋಜಿಸುತ್ತಿದೆ.

ಇದನ್ನೂ ಓದಿ: T20 World Cup 2024: ಪಾಕ್​ ಉಗ್ರರ ಭೀತಿ; ಬಿಗಿ ಭದ್ರತೆ ಕೈಗೊಂಡ ವಿಂಡೀಸ್​ ಕ್ರಿಕೆಟ್​ ಮಂಡಳಿ

Continue Reading
Advertisement
Dina Bhavishya
ಭವಿಷ್ಯ17 mins ago

Dina Bhavishya : ಮಾನಸಿಕ ಒತ್ತಡದಿಂದ ಮುಕ್ತರಾಗುವಿರಿ; ಹೂಡಿಕೆ ವ್ಯವಹಾರವು ಹೆಚ್ಚು ಲಾಭ ತರುವುದು

Pralhad Joshi
ಕರ್ನಾಟಕ5 hours ago

Pralhad Joshi: ರಾಜ್ಯದಲ್ಲಿ ಹತ್ಯೆ, ಆತ್ಮಹತ್ಯೆಗಳೇ ಅಧಿಕ, ಅಭಿವೃದ್ಧಿ ಸಮಾಧಿ: ಪ್ರಲ್ಹಾದ್‌ ಜೋಶಿ ಟೀಕೆ

Ebrahim Raisi
ವಿದೇಶ5 hours ago

Ebrahim Raisi: ಪತನದ ಬಳಿಕ ಹೆಲಿಕಾಪ್ಟರ್‌ ನಾಪತ್ತೆ; ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು?

Mrs India Karnataka
ದಕ್ಷಿಣ ಕನ್ನಡ5 hours ago

Mrs India Karnataka: ಮಿಸಸ್ ಕರ್ನಾಟಕ ಮಂಗಳೂರು ಗ್ರ್ಯಾಂಡ್ ಫಿನಾಲೆ; ಸಾಂಪ್ರದಾಯಿಕ, ಮಾಡರ್ನ್ ಉಡುಗೆಯಲ್ಲಿ ಮಿಂಚಿದ ನಾರಿಯರು

IPL 2024 Eliminato
ಕ್ರೀಡೆ6 hours ago

IPL 2024 Eliminator: ಎಲಿಮಿನೇಟರ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಆಘಾತ; ಇಬ್ಬರು ಸ್ಟಾರ್​ ಆಟಗಾರರು ಅಲಭ್ಯ!

Tourist boat capsizes
ಕರ್ನಾಟಕ6 hours ago

Tourist Boat Capsizes: ತದಡಿ ಬಳಿ ಮಗುಚಿದ ಪ್ರವಾಸಿಗರ ಬೋಟ್; 40 ಪ್ರವಾಸಿಗರ ರಕ್ಷಣೆ

RR vs KKR
ಕ್ರೀಡೆ6 hours ago

RR vs KKR: ಮಳೆಯಿಂದ​ ಪಂದ್ಯ ರದ್ದು; ಎಲಿಮಿನೇಟರ್‌ ಪಂದ್ಯದಲ್ಲಿ​ ಆರ್​ಸಿಬಿಗೆ ರಾಜಸ್ಥಾನ್​ ಎದುರಾಳಿ

Parliament Security
ದೇಶ7 hours ago

Parliament Security: ನಾಳೆಯಿಂದ ಸಂಸತ್‌ಗೆ ಸಿಆರ್‌ಪಿಎಫ್‌ ಬದಲು ಸಿಐಎಸ್‌ಎಫ್‌ ಭದ್ರತೆ; ಏಕಿಂಥ ನಿರ್ಧಾರ?

Dangerous Bike Stunt
ಕರ್ನಾಟಕ7 hours ago

Dangerous Bike Stunt: ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಬೈಕ್‌ ಓಡಿಸಿದ ಯುವಕ ಅರೆಸ್ಟ್‌

Narendra Modi
ದೇಶ7 hours ago

Narendra Modi: ಮುಸ್ಲಿಮರ ವೋಟಿಗಾಗಿ ಮಮತಾ ಬ್ಯಾನರ್ಜಿ ಹಿಂದು ಸಂಘಟನೆಗಳ ವಿರುದ್ಧ ಆರೋಪ; ಮೋದಿ ಟೀಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ13 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ14 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ15 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ5 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌