Dina Bhavishya : ಈ ರಾಶಿಯವರಿಗೆ ಮಾತು ಮನೆ ಕೆಡಿಸಲಿದೆ! - Vistara News

ಪ್ರಮುಖ ಸುದ್ದಿ

Dina Bhavishya : ಈ ರಾಶಿಯವರಿಗೆ ಮಾತು ಮನೆ ಕೆಡಿಸಲಿದೆ!

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷದ ಚೌತಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (dina bhavishya) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Dina Bhavishya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನ್ಯಾಯ ದೇವರು ಎಂದೇ ಕರೆಯಲ್ಪಡುವ ಶನಿಯನ್ನು ಶನಿವಾರದಂದು ಪೂಜಿಸಿದರೆ ಶನಿ ಫಲಗಳು ದೊರೆಯುತ್ತವೆ. ಶುಕ್ರನ ವಕ್ರ ಸಂಚಾರ ಆರಂಭವಾಗಲಿದ್ದು, ಶನಿವಾರದಂದು ಚಂದ್ರನು ಕನ್ಯಾರಾಶಿಯಲ್ಲೇ ನೆಲೆಸಿದ್ದಾನೆ. ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ, ಮಿಥುನ, ಸಿಂಹ ರಾಶಿಯವರು ಇಂದು ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವುದು ಉತ್ತಮ. ಧನಸ್ಸು ರಾಶಿಯವರು ದಿನದ ಮಟ್ಟಿಗೆ ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಮೀನ ರಾಶಿಯವರಿಗೆ ರಹಸ್ಯ ಕಾರ್ಯಗಳು ಯಶಸ್ಸು ತಂದು ಕೊಡಲಿವೆ. ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ, ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (22-07-2023)

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ.
ತಿಥಿ: ಚೌತಿ 09:25 ವಾರ: ಶನಿವಾರ
ನಕ್ಷತ್ರ: ಪೂರ್ವಾ 16:57 ಯೋಗ: ವರಿಯಾನ 13:22
ಕರಣ: ವಿಷ್ಟಿ (ಭದ್ರ) 09:25
ಅಮೃತ ಕಾಲ: ಬೆಳಗ್ಗೆ 09:46ರಿಂದ 11:34ರ ವರೆಗೆ  

ಸೂರ್ಯೋದಯ : 06:03 ಸೂರ್ಯಾಸ್ತ : 06:49

ರಾಹುಕಾಲ : ಬೆಳಗ್ಗೆ 9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ಪ್ರಯಾಣ ಸಾಧ್ಯತೆ. ಆರೋಗ್ಯದ ಸ್ವಲ್ಪ ಮಟ್ಟಿನ ವ್ಯತ್ಯಾಸದಿಂದ ಖರ್ಚು.ಹಿರಿಯರ ಮಾರ್ಗದರ್ಶನ ಸಿಗಲಿದೆ. ಅತಿಥಿಗಳ ಆಗಮನ ನಿಮ್ಮ ಯೋಚಿತ ಕಾರ್ಯ ವಿಳಂಬವಾಗುವ ಸಾಧ್ಯತೆ. ವೈವಾಹಿಕ ಜೀವನದಲ್ಲಿ ವಿರಸ ಉಂಟಾಗುವ ಸಾಧ್ಯತೆ, ಮಾತಿನಲ್ಲಿ ಹಿಡಿತವಿರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವೃಷಭ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ಪ್ರಶಂಸೆ ಸಿಗುವುದು. ದಿನದ ಮಟ್ಟಿಗೆ ಖರ್ಚು. ಸಂಬಂಧವಿರದ ವಿಷಯಗಳಿಗೆ ಕಿವಿಗೊಡವುದು ಬೇಡ. ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಹಳೆಯ ವಿಚಾರಗಳನ್ನು ಕೆರಳಿಸಿ ಗಾಯ ಮಾಡಿಕೊಳ್ಳುವುದು ಬೇಡ. ಆರೋಗ್ಯ ಮಧ್ಯಮ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಮಿಥುನ: ನಿಮ್ಮ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಇದರಿಂದ ಆತುರದಲ್ಲಿ ಮಾತನಾಡಿ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಅನಿರೀಕ್ಷಿತ ಖರ್ಚು.ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಉತ್ತಮ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕಟಕ: ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಗೃಹಬಳಕೆ ಸಾಧನಗಳ ಖರೀದಿ ಸಾಧ್ಯತೆಯಿಂದ ಖರ್ಚು. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಅತಿಥಿಗಳ ಆಗಮನ ಹರ್ಷ ತರಲಿದೆ.ಆರೋಗ್ಯ ಉತ್ತಮ.ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಸಿಂಹ: ನಿಮ್ಮ ಆಕರ್ಷಕ ಮಾತುಗಳು ಇತರರನ್ನು ಆಕರ್ಷಸಲಿದೆ. ನಾಲಿಗೆಯ ರುಚಿಗೆ ಮಾರು ಹೋಗಿ ಆರೋಗ್ಯ ಹಾಳು ಮಾಡಿಕೊಳ್ಳುವುದು ಬೇಡ,ಮಿತಿಯಿರಲಿ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಸಂಗಾತಿಯ ಮಾತುಗಳು ಮಧುರವೇನಿಸುವವು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ: ನಿಮ್ಮ ತ್ಯಾಗದ ಮನೋಭಾವ ನಿಮಗೆ ಸಂತಸ ತರುವುದು.ಯಾರೊಂದಿಗೂ ದಿನದ ಮಟ್ಟಿಗೆ ಹಣಕಾಸಿನ ವ್ಯವಹಾರ ಮಾಡಬೇಡಿ, ವಿನಾಕಾರಣ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ.ಕುಟುಂಬದಲ್ಲಿ ಅನಾವಶ್ಯಕ ಮಾತುಗಳಿಂದ ಜಗಳವಾಗಬಹುದು, ಮೌನದಿಂದ ವರ್ತಿಸಿ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಇತರರು ನಿಮ್ಮ ಕಾರ್ಯಗಳನ್ನು ಪ್ರಶಂಸೆ ಮಾಡುವರು. ಹಣಕಾಸಿನ ಹರಿವು ಹೆಚ್ಚಾಗಲಿದೆ. ವ್ಯಾಪರ ವ್ಯವಹಾರದಲ್ಲಿ ಪ್ರಗತಿ.ಸಹದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ, ಎಚ್ಚರಿಕೆ ಇರಲಿ. ವಿನಾಕಾರಣ ಜಗಳ ಮಾಡಿ ಮನಸ್ಸು ಕೆಡಿಸಿಕೊಳ್ಳುವುದು ಬೇಡ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವೃಶ್ಚಿಕ: ಇತರರನ್ನು ಟೀಕಿಸಲು ನಿಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡುವುದು ಬೇಡ. ಅನಾವಶ್ಯಕ ವಿಚಾರ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳುವುದು ಬೇಡ. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಶುಭ.ಕುಟುಂಬದಲ್ಲಿ ಹಳೆಯ ವಿಚಾರಗಳು ಕಲಹ ಸೃಷ್ಟಿಸಬಹುದು,ಮಾತು ಮಿತವಾಗಿರಲಿ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಕುಟುಂಬದ ಸದಸ್ಯರೊಂದಿಗೆ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ. ಅಮೂಲ್ಯ ವಸ್ತುಗಳ ಮೇಲೆ ಗಮನವಿರಲಿ. ದಿನದ ಮಟ್ಟಿಗೆ ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಹಣಕಾಸು ಪ್ರಗತಿ ಸಾಧಾರಣ.ವಿನಾಕಾರಣ ನಿಮ್ಮ ಸಿಟ್ಟು ಸಂಗಾತಿಯ ಮೇಲೆ ಹಾಕಿ, ಕುಟುಂಬದ ವಾತಾವರಣ ಕೆಡಿಸುವುದು ಬೇಡ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಮಕರ: ನಿಮ್ಮ ಕೋಪದ ಸ್ವಭಾವದಿಂದ ಇತರರೊಂದಿಗೆ ವಾದಕ್ಕೆಳಿಯಬೇಡಿ.ಆತುರದಲ್ಲಿ ಅತಿರೇಕದ ಮಾತುಗಳು ಜಗಳ ತಂದಿತು.ಆರೋಗ್ಯದ ಕಡೆಗೆ ಗಮನವಿರಲಿ.ದಿನದ ಮಟ್ಟಿಗೆ ಖರ್ಚು.ಆತ್ಮೀರೊಂದಿಗೆ ಪ್ರಯಾಣಿಸುವ ಸಾಧ್ಯತೆ.ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಕುಂಭ: ಕೆಲಸಕ್ಕೆ ಹಾಕಿದ ಶ್ರಮ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಿ.ಆತುರದಲ್ಲಿ ಅತಿರೇಕದ ಮಾತುಗಳನ್ನು ಆಡುವುದು ಸರಿಯಲ್ಲ, ತಾಳ್ಮೆಯಿಂದ ಮಾತನಾಡಿ.ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ.ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಇದನ್ನೂ ಓದಿ : Adhika Masa 2023 : ಅಧಿಕಮಾಸದಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ!

Horoscope Today

ಮೀನ: ರಹಸ್ಯ ಕಾರ್ಯಗಳು ಯಶಸ್ಸು ತಂದು ಕೊಡಲಿವೆ.ಕುಟುಂಬಕ್ಕೆ ಸಮಯವನ್ನು ನೀಡುವಿರಿ.ವಿನಾಕಾರಣ ಕೋಪಗೊಂಡು ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ.ಖರ್ಚು ಹೆಚ್ಚಾಗಲಿದೆ.ಸಂಗಾತಿ ನಿಮ್ಮ ಮನಸ್ಸಿನ ಭಾವನೆಗಳಿಗೆ ಸ್ಪಂದಿಸುವಳು.ಮಧುರ ಪ್ರೇಮ ಅಂಕುರವಾಗಲಿದೆ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Sonakshi Sinha: ಸೋನಾಕ್ಷಿ ಸಿನ್ಹಾ-ಜಹೀರ್‌ ಇಕ್ಬಾಲ್‌ ಮದುವೆ; ಮೆಹಂದಿ ಶಾಸ್ತ್ರದ ವೇಳೆ ಪತಿ ಜತೆ ನಟಿ ಮಿಂಚಿಂಗ್!

Sonakshi Sinha: ಸೋನಾಕ್ಷಿ ಸಿನ್ಹಾ ಅವರು ಮನೆಯವರ ಒಪ್ಪಿಗೆ ಪಡೆಯುವುದು ಬಿಡಿ, ಕನಿಷ್ಠ ಮಾಹಿತಿಯನ್ನೂ ನೀಡದೆ ಮದುವೆ ದಿನಾಂಕ ಫಿಕ್ಸ್‌ ಮಾಡಿರುವುದು ಆಕೆಯ ತಂದೆ ಶತ್ರುಘ್ನ ಸಿನ್ಹಾ ಮಾತ್ರವಲ್ಲ, ತಾಯಿ ಹಾಗೂ ಸಹೋದರನಿಗೂ ಬೇಸರ ತಂದಿತ್ತು. ಇದರಿಂದಾಗಿ ಶತ್ರುಘ್ನ ಸಿನ್ಹಾ ಮಾತ್ರವಲ್ಲದೆ ತಾಯಿ, ಸಹೋದರನೂ ಸೋನಾಕ್ಷಿ ಮದುವೆಗೆ ಹೋಗುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಶತ್ರುಘ್ನ ಮುನಿಸು ಕೂಡ ಶಮನವಾಗಿದೆ. ಇದರ ಮಧ್ಯೆಯೇ, ಸೋನಾಕ್ಷಿ ಸಿನ್ಹಾಗೆ ಮೆಹಂದಿ ಹಾಕುವ ಶಾಸ್ತ್ರವು ಅದ್ಧೂರಿಯಾಗಿ ನೆರವೇರಿದೆ.

VISTARANEWS.COM


on

Sonakshi Sinha
Koo

ಮುಂಬೈ: ಬಾಲಿವುಡ್ ನಟಿ (Bollywood Actress) ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಮುಸ್ಲಿಂ ಯುವಕ ಜಹೀರ್‌ ಇಕ್ಬಾಲ್‌ (Zaheer Iqbal) ಅವರ ಜತೆ ಮದುವೆಯಾಗುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಮುಂಬೈನಲ್ಲಿ ಸೋನಾಕ್ಷಿ ಸಿನ್ಹಾ ಅವರು ಜೂನ್‌ 23ರಂದು ಮದುವೆಯಾಗಲಿದ್ದು, ಶುಕ್ರವಾರ (ಜೂನ್‌ 21) ಮೆಹಂದಿ ಶಾಸ್ತ್ರವೂ ಅದ್ಧೂರಿಯಾಗಿ ನೆರವೇರಿದೆ. ಮೆಹಂದಿ ಶಾಸ್ತ್ರದ ಮೊದಲ ಫೋಟೊ ಕೂಡ ಲಭ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮುಂಬೈನಲ್ಲಿ ನಡೆದ ಮೆಹಂದಿ ಶಾಸ್ತ್ರದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಭಾಗವಹಿಸಿದ್ದಾರೆ. ಸೋನಾಕ್ಷಿ ಸಿನ್ಹಾ ಅವರು ಜಹೀರ್‌ ಇಕ್ಬಾಲ್‌ ಹಾಗೂ ಗೆಳೆಯರೊಂದಿಗೆ ನಿಂತಿರುವ ಫೋಟೊ ಲಭ್ಯವಾಗಿದೆ. ಜಹೀರ್‌ ಇಕ್ಬಾಲ್‌ ಅವರ ಸಹೋದರಿ ಸನಮ್‌ ರತಾನ್ಸಿ ಅವರು ಇನ್‌ಸ್ಟಾಗ್ರಾಂನಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಜಹೀರ್‌ ಇಕ್ಬಾಲ್‌ ಕೂಡ ಕುರ್ತಾ ಧರಿಸಿ ಭಾವಿ ಪತ್ನಿಯೊಂದಿಗೆ ಮಿಂಚಿದ್ದಾರೆ. ಸೋನಾಕ್ಷಿ ಸಿನ್ಹಾ ಅವರ ಫೋಟೊ ವೈರಲ್‌ ಆಗುತ್ತಲೇ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಮದುವೆಗೆ ಹಾಜರ್‌ ಎಂದ ಶತ್ರುಘ್ನ ಸಿನ್ಹಾ

ಮುಸ್ಲಿಂ ಯುವಕನ ಜತೆ ಮದುವೆಯಾಗುತ್ತಿರುವುದಕ್ಕೆ, ಅದರಲ್ಲೂ ಮದುವೆ ದಿನಾಂಕವನ್ನೂ ಹೇಳದಿರುವುದಕ್ಕೆ ಮೊದಲು ನಟ, ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾ ಅವರು ಇದಕ್ಕೂ ಮೊದಲು ಅಸಮಾಧಾನ ವ್ಯಕ್ತಪಡಿಸಿದ್ದರು. ಶತ್ರುಘ್ನ ಸಿನ್ಹಾ, ನಟಿಯ ತಾಯಿ ಹಾಗೂ ಸಹೋದರ ಕೂಡ ಭಾಗಿಯಾಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ವದಂತಿಗಳಿಗೆಲ್ಲ ಶತ್ರುಘ್ನ ಸಿನ್ಹಾ ಅವರು ತೆರೆ ಎಳೆದಿದ್ದಾರೆ. “ಮೊದಲು ಸಣ್ಣಪುಟ್ಟ ಗೊಂದಲಗಳು ಸೃಷ್ಟಿಯಾಗಿದ್ದವು. ಈಗ ಎಲ್ಲವೂ ಬಗೆಹರಿದಿದೆ. ಜೂನ್‌ 23ರಂದು ನಾವೆಲ್ಲ ಮದುವೆಗೆ ಹೋಗಲಿದ್ದೇವೆ” ಎಂದು ತಿಳಿಸಿದ್ದಾರೆ.

ಕಳೆದ ವಾರವಷ್ಟೇ ಸೋನಾಕ್ಷಿ ಅವರು ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ವರಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು, ಬಳಿಕ ಇದನ್ನು ಮದುವೆಯ ಆಮಂತ್ರಣವು ದೃಢಪಡಿಸಿತು. ಸೋನಾಕ್ಷಿ ಏಳು ವರ್ಷಗಳಿಂದ ಜಹೀರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಮದುವೆಯ ವದಂತಿಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ ಶತ್ರುಘ್ನ ಅವರು ಮದುವೆಯ ಬಗ್ಗೆ ತಿಳಿದಿರಲಿಲ್ಲ ಎಂದು ಒಪ್ಪಿಕೊಂಡರು. ಮಾತ್ರವಲ್ಲದೇ ಅವರು ಇದರಿಂದ ಅಸಮಾಧಾನಗೊಂಡಿರುವುದು ಅವರ ಹೇಳಿಕೆಯಿಂದ ತಿಳಿದು ಬಂದಿತ್ತು. ನಂತರ ಎಲ್ಲವೂ ಸರಿಹೋಗಿದೆ.

ಇದನ್ನೂ ಓದಿ: Sonakshi Sinha: ಮುಸ್ಲಿಂ ಯುವಕನ ಜತೆ ಸೋನಾಕ್ಷಿ ಸಿನ್ಹಾ ವಿವಾಹ; ತಾಯಿ, ಸಹೋದರನೂ ಮದುವೆಗೆ ಹೋಗಲ್ಲ?

Continue Reading

ಪ್ರಮುಖ ಸುದ್ದಿ

T20 World Cup 2024 : ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ 7 ರನ್ ಜಯ

T20 World Cup 2024 : ಮೊದಲು ಬ್ಯಾಟ್ ಮಾಡಿದ ಹರಿಣಗಳ ಪಡೆ ನಿಗದಿತ 20 ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ಗೆ 163 ರನ್ ಪೇರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ ನಷ್ಟಕ್ಕೆ 156 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

VISTARANEWS.COM


on

T20 World Cup 2024
Koo

ಸೇಂಟ್​ ಲೂಸಿಯಾ: ಟಿ20 ವಿಶ್ವ ಕಪ್​ನ 2024ನೇ (T20 World Cup 2024) ಅವೃತ್ತಿಯ ಸೂಪರ್​ 8 ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ವಿರುದ್ಧ 7 ವಿಕೆಟ್​ ವಿಜಯ ದಾಖಲಿಸಿದೆ. ಇದು ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಹಂತದಲ್ಲಿ ಲಭಿಸಿರುವ ಎರಡನೇ ಗೆಲುವಾಗಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ (Point Table) ಅಗ್ರ ಸ್ಥಾನ ಪಡೆದುಕೊಂಡಿದ್ದು ಸೆಮಿಫೈನಲ್ ಹಂತಕ್ಕೇರುವುದು ಬಹುತೇಕ ನಿಶ್ಚಿತವಾಗಿದೆ. ಅತ್ತ ಇಂಗ್ಲೆಂಡ್​ ತಂಡ ಒಂದು ಗೆಲುವಿನೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಮುಂದಿನ ಪಂದ್ಯಗಳ ಫಲಿತಾಂಶಗಳ ಬಳಿಕ ಸೆಮಿಫೈನಲ್​ ಪ್ರವೇಶವನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ಸೇಂಟ್​ಲೂಸಿಯಾದ ಡ್ಯಾರೆನ್​ ಸಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಶುಕ್ರವಾರ (ಜೂನ್​ 22ರಂದು) ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಇಂಗ್ಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಹರಿಣಗಳ ಪಡೆ ನಿಗದಿತ 20 ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ಗೆ 163 ರನ್ ಪೇರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ ನಷ್ಟಕ್ಕೆ 156 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಬ್ರೂಕ್ ಹೋರಾಟ ವಿಫಲ

ವೆಸ್ಟ್​ ಇಂಡೀಸ್​ನ ಪಿಚ್​ನಲ್ಲಿ ಚೇಸ್​ ಮಾಡಲು ಕಷ್ಟಕರವಾಗಿರುವ ಸ್ಕೋರ್​ ಬೆನ್ನಟ್ಟಲು ಹೊರಟ ಇಂಗ್ಲೆಂಡ್ ತಂಡ ಆರಂಭದಲ್ಲಿಯೇ ವಿಕೆಟ್​ಗಳನ್ನು ಕಳೆದಕೊಂಡಿತು. ಆರಂಭಿಕರಾದ ಫಿಲ್​ ಸಾಲ್ಟ್​ (11 ರನ್​), ಜೋಸ್​ ಬಟ್ಲರ್​ (17 ರನ್​) ಬೇಗನೆ ವಿಕೆಟ್​ ಒಪ್ಪಿಸಿದರು. ಜಾನಿ ಬೈರ್​ಸ್ಟೋವ್​ 16 ರನ್​ಗೆ ಔಟಾದರೆ ಮೊಯೀನ್ ಅಲಿ 9 ರನ್ ಬಾರಿಸಿ ನಿರ್ಗಮಿಸಿದರು. 10.2 ಓವರ್​ಗಳಲ್ಲಿ 61 ರನ್​ಗೆ 4 ವಿಕೆಟ್​ ಕಳೆದುಕೊಂಡ ಇಂಗ್ಲೆಂಡ್ ಸಂಕಷ್ಟಕ್ಕೆ ಬಿತ್ತು. ಈ ವೇಳೆ ಬ್ಯಾಟ್ ಮಾಡಿದ ಹ್ಯಾರಿ ಬ್ರೂಕ್​ 37 ಎಸೆತಕ್ಕೆ 53 ರನ್ ಬಾರಿಸಿದರೆ ಲಿಯಾಮ್ ಲಿವಿಂಗ್​ಸ್ಟನ್​ 17 ಎಸೆತಕ್ಕೆ 33 ರನ್ ಬಾರಿಸಿದರು. ಈ ಜೋಡಿ ಐದನೇ ವಿಕೆಟ್​ಗೆ 78 ರನ್ ಬಾರಿಸಿ ತಂಡಕ್ಕೆ ಗೆಲುವಿನ ಆಸೆ ಹುಟ್ಟಿಸಿದರು. ಆದರೆ ಕೊನೇ ಹಂತದಲ್ಲಿ ಬೌಲಿಂಗ್ ಬಿಗುಗೊಳಿಸಿದ ದಕ್ಷಿಣ ಆಫ್ರಿಕಾ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: Suryakumar Yadav : ವಿಶ್ವದ ಬೆಸ್ಟ್​ ಟಿ20 ಆಟಗಾರ ಸೂರ್ಯಕುಮಾರ್​ ಯಾದವ್​ ಎಂದ ಅಂಬಾಟಿ ರಾಯುಡು

ಕ್ವಿಂಟನ್​ ಅಬ್ಬರದ ಆಟ

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು 38 ಎಸೆತಕ್ಕೆ 65 ರನ್ ಬಾರಿಸಿ ಅದ್ಭುತ ಆರಂಭಕೊಟ್ಟರು. ರೀಜಾ ಹೆಂಡ್ರಿಕ್ಸ್​ 19 ರನ್ ಬಾರಿಸಿದರು. ಅವರಿಬ್ಬರು ಮೊದಲ ವಿಕೆಟ್​ಗೆ 86 ರನ್ ಬಾರಿಸಿದಾಗ ದೊಡ್ಡ ಮೊತ್ತ ಪೇರಿಸುವ ಸೂಚನೆ ಸಿಕ್ಕಿತು. ಆದರೆ ಹೆನ್ರಿಚ್ ಕ್ಲಾಸೆನ್​ (8 ರನ್​) ಅದ್ಭುತ ರನ್​ಔಟ್​ಗೆ ಬಲಿಯಾದರು. ಆದರೆ, ಡೇವಿಡ್​ ಮಿಲ್ಲರ್​ 43 ರನ್ ಬಾರಿಸಿ ಮತ್ತೆ ಚೈತನ್ಯ ತಂದರು. ಕೊನೆ ಹಂತದಲ್ಲಿ ದಕ್ಷಿಣ ಆಫ್ರಿಕಾ ಸತತವಾಗಿ ವಿಕೆಟ್​ ಕಳೆದುಕೊಂಡಿತು. ಮಾರ್ಕ್ರಮ್​ 1 ರನ್ ಬಾರಿಸಿದರೆ ಟ್ರಿಸ್ಟಾನ್​ ಸ್ಟಬ್ಸ್​ 12 ರನ್​ಗೆ ಸೀಮಿತಗೊಂಡರು.

Continue Reading

ಪ್ರಮುಖ ಸುದ್ದಿ

Suryakumar Yadav : ವಿಶ್ವದ ಬೆಸ್ಟ್​ ಟಿ20 ಆಟಗಾರ ಸೂರ್ಯಕುಮಾರ್​ ಯಾದವ್​ ಎಂದ ಅಂಬಾಟಿ ರಾಯುಡು

Suryakumar Yadav : ಸ್ಪಿನ್ನರ್​ಗಳ ವಿರುದ್ಧ ಸೂರ್ಯ ರಚಿಸಿದ ಯೋಜನೆಗಳು ತುಂಬಾ ಉತ್ತಮವಾಗಿವೆ. ರಾಯುಡು ಪ್ರಕಾರ ಅಂತಹ ಪರಿಸ್ಥಿತಿಗಳಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಕಲಿಯಲು ಯುವಕರಿಗೆ ಸೂರ್ಯಕುಮಾರ್​ ಉತ್ತಮ ಉದಾಹರಣೆಯಾಗಿದ್ದಾರೆ. ಹೀಗಾಗಿ ಬಲಗೈ ಬ್ಯಾಟರ್​ ವಿಶ್ವದ ಅತ್ಯುತ್ತಮ ಟಿ 20 ಬ್ಯಾಟ್ಸ್ಮನ್ ಆಗಿದ್ಆರೆ ಎಂದು ಸುರ್ಯಕುಮಾರ್ ಹೇಳಿದ್ದಾರೆ.

VISTARANEWS.COM


on

Suryakumar Yadav
Koo

ನವದೆಹಲಿ: ಟಿ 20 ವಿಶ್ವಕಪ್ 2024 (T20 World Cup 2024) ಸೂಪರ್ 8 ನಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಸಿದ್ದತೆ ನಡೆಸುತ್ತಿದೆ. ಈ ನಡುವೆ ತಂಡದ ಕುರಿತು ಮಾತನಾಡಿದ ಮಾಜಿ ಬ್ಯಾಟರ್ ಅಂಬಾಟಿ ರಾಯುಡು ಸೂರ್ಯಕುಮಾರ್ ಯಾದವ್ (Suryakumar Yadav ) ವಿಶ್ವದ ಅತ್ಯುತ್ತಮ ಟಿ 20 ಬ್ಯಾಟರ್​ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ನಂತರ ಅಂಬಾಟಿ ರಾಯುಡು ಈ ಹೇಳಿಕೆ ನೀಡಿದ್ದಾರೆ. ಭಾರತ ತಂಡದ ಕೊನೆಯ ಲೀಗ್​ ಪಂದ್ಯದಲ್ಲಿ ಸೂರ್ಯಕುಮಾರ್ 49 ಎಸೆತಗಳಲ್ಲಿ 50 ರನ್ ಗಳಿಸಿದ್ದರು. ಶಿವಂ ದುಬೆ ಅವರೊಂದಿಗೆ 72 ರನ್​ಗಳ ಜೊತೆಯಾಟವಾಡಿದ ಅವರು ಸಹ-ಆತಿಥೇಯ ಯುಎಸ್ಎ ವಿರುದ್ಧ 111 ರನ್​ಗಳ ಚೇಸ್​ಗೆ ನೆರವಾಗಿದ್ದರು.

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಟಿ 20 ವಿಶ್ವಕಪ್ನಲ್ಲಿ ಸತತ ಎರಡನೇ ಅರ್ಧಶತಕದೊಂದಿಗೆ ಮಿಂಚಿದರು. ಸೂರ್ಯ ಸರಿಯಾದ ಸಮಯದಲ್ಲಿ ಮತ್ತು ಈ ಆವೃತ್ತಿಯ ಕೆಲವು ಪ್ರಮುಖ ಪಂದ್ಯಗಳಿಗೆ ಮುಂಚಿತವಾಗಿ ಫಾರ್ಮ್ ಕಂಡುಕೊಂಡರು. ಭಾರತ ಫೈನಲ್ ತಲುಪಿದರೆ ಅವರು ಆಸ್ಟ್ರೇಲಿಯಾ ವಿರುದ್ಧ, ಸೆಮಿಫೈನಲ್ ಮತ್ತು ಫೈನಲ್​​ನಲ್ಲಿ ಅವರು ಇದೇ ರೀತಿಯ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಅಂಬಾಟಿ ರಾಯುಡು ಶ್ಲಾಘನೆ

ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಅಂಬಾಟಿ ರಾಯುಡು, ಅಫ್ಘಾನಿಸ್ತಾನ ವಿರುದ್ಧ ಸೂರ್ಯಕುಮಾರ್ ಯಾದವ್ ತೋರಿದ ಪ್ರದರ್ಶನವನ್ನು ಶ್ಲಾಘಿಸಿದರು. ಹಲವಾರು ಕಾರಣಗಳಿಗಾಗಿ ಸೂರ್ಯಕುಮಾರ್ ಅಫ್ಘಾನಿಸ್ತಾನದ ವಿರುದ್ಧ ಸಂಪೂರ್ಣವಾಗಿ ಮೇಲುಗೈ ಸಾಧಿಸಿದ್ದರು ಎಂದು ಹೇಳಿದ್ದಾರೆ. ಅವರು ಸ್ಪಿನ್ ಬೌಲರ್​ಗಳ ವಿರುದ್ಧ ಉತ್ತಮ ಪಾದದ ಚಲನೆ ತೋರಿಸಿದ್ದರು. ಕ್ರೀಸ್ ಅನ್ನು ಬುದ್ಧಿವಂತಿಕೆಯಿಂದ ಬಳಸಿದ್ದರು. ಅಂಬಾಟಿ ರಾಯುಡು ಅವರು ಸೂರ್ಯಕುಮಾರ್ ಯಾದವ್ ಅವರ ಕ್ರೀಸ್ ಬಳಕೆಯನ್ನು ಬೊಟ್ಟು ಮಾಡಿದರು. ಏಕೆಂದರೆ ಅವರು ಆಗಾಗ್ಗೆ 2 ಮೀಟರ್ ಮುಂದೆ ಹೋಗಿ ಆಡಿದ್ದರು.

ಸ್ಪಿನ್ನರ್​ಗಳ ವಿರುದ್ಧ ಸೂರ್ಯ ರಚಿಸಿದ ಯೋಜನೆಗಳು ತುಂಬಾ ಉತ್ತಮವಾಗಿವೆ. ರಾಯುಡು ಪ್ರಕಾರ ಅಂತಹ ಪರಿಸ್ಥಿತಿಗಳಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಕಲಿಯಲು ಯುವಕರಿಗೆ ಸೂರ್ಯಕುಮಾರ್​ ಉತ್ತಮ ಉದಾಹರಣೆಯಾಗಿದ್ದಾರೆ. ಹೀಗಾಗಿ ಬಲಗೈ ಬ್ಯಾಟರ್​ ವಿಶ್ವದ ಅತ್ಯುತ್ತಮ ಟಿ 20 ಬ್ಯಾಟ್ಸ್ಮನ್ ಆಗಿದ್ಆರೆ ಎಂದು ಸುರ್ಯಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: Gautam Gambhir : ಕೋಚ್​ ಹುದ್ದೆ ಅಂತಿಮವಾಗಿಲ್ಲ; ವರದಿಗಳಿಗೆ ವ್ಯತಿರಿಕ್ತ ಹೇಳಿಕೆ ನೀಡಿದ ಗಂಭೀರ್​!

28 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್​ಗಳೊಂದಿಗೆ ಸುಮಾರು 190 ಸ್ಟ್ರೈಕ್ ರೇಟ್​​ನಲ್ಲಿ 53 ರನ್ ಗಳಿಸುವ ಮೂಲಕ ಭಾರತಕ್ಕೆ 181 ರನ್ ಗಳಿಸಲು ಸೂರ್ಯ ನೆರವಾಗಿದ್ದರು.

ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ದೇವರು ನೀಡಿದ ಉಡುಗೊರೆ


ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಕೇವಲ 7 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಎಲ್ಲಾ ರೀತಿಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಬುಮ್ರಾ ಅವರ ವಿಶೇಷ ಸಾಮರ್ಥ್ಯವನ್ನು ರಾಯುಡು ಎತ್ತಿ ತೋರಿಸಿದರು. ಅವರನ್ನು ನೋಡುವ ಅವಕಾಶವನ್ನು ಹೊಂದಿರುವ ಎಲ್ಲಾ ಭಾರತೀಯರು ಅದೃಷ್ಟವಂತರು ಎಂದು ಹೇಳಿದರು.

ಜಸ್ಪ್ರೀತ್ ಬುಮ್ರಾ ಅವರಿಗೆ ನೀಡಲಾದ ಪ್ರತಿಯೊಂದು ಪರಿಸ್ಥಿತಿಗೆ ಅವರು ಹೊಂದಿಕೊಳ್ಳುವ ಸಾಮರ್ಥ್ಯವಿದೆ. ಅವರು ಅದ್ಭುತ ಬೌಲರ್ ಮತ್ತು ಅವರು ಈ ಭಾರತೀಯ ತಂಡಕ್ಕೆ ದೇವರು ನೀಡಿದ ಉಡುಗೊರೆ” ಎಂದು ಅಂಬಾಟಿ ರಾಯುಡು ಹೇಳಿದರು.

Continue Reading

ವಿದೇಶ

Hinduja Family: ಮನೆಗೆಲಸದವರ ಮೇಲೆ ದೌರ್ಜನ್ಯ; ಹಿಂದುಜಾ ಕುಟುಂಬದ ನಾಲ್ವರಿಗೆ 4.5 ವರ್ಷ ಜೈಲು!

Hinduja Family: ಪ್ರಕಾಶ್‌ ಹಿಂದುಜಾ ಹಾಗೂ ಅವರ ಕುಟುಂಬಸ್ಥರು ಮನೆಗೆಲಸದ ಮಹಿಳೆಗೆ ಕಡಿಮೆ ಸಂಬಳ ನೀಡುವುದು, ದಿನಕ್ಕೆ 18 ಗಂಟೆ ಕೆಲಸ ಮಾಡಿಸುವುದು ಸೇರಿ ಹಲವು ರೀತಿಯ ದೌರ್ಜನ್ಯ ಎಸಗಿದ್ದಾರೆ ಎಂಬುದಾಗಿ ಸ್ಟಿಟ್ಜರ್‌ಲ್ಯಾಂಡ್‌ ಕೋರ್ಟ್‌ನಲ್ಲಿ ಸಾಬೀತಾಗಿದೆ. ಹಾಗಾಗಿ, ನ್ಯಾಯಾಲಯವು ಪ್ರಕಾಶ್‌ ಹಿಂದುಜಾ ಸೇರಿ ನಾಲ್ವರಿಗೆ ಜೈಲು ಶಿಕ್ಷೆ ವಿಧಿಸಿದೆ.

VISTARANEWS.COM


on

Hinduja Family
Koo

ಜಿನೀವಾ:‌ ವಿಶ್ವದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ, ಭಾರತ ಮೂಲದ ಉದ್ಯಮಿ ಪ್ರಕಾಶ್‌ ಹಿಂದುಜಾ (Prakash Hinduja) ಸೇರಿ ಅವರ ಕುಟುಂಬದ (Hinduja Family) ನಾಲ್ವರಿಗೆ ಸ್ವಿಟ್ಜರ್‌ಲ್ಯಾಂಡ್‌ ನ್ಯಾಯಾಲಯವು (Swiss Court) ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮನೆಯಲ್ಲಿ ಸಾಕಿದ ನಾಯಿಗೆ ವ್ಯಯಿಸುವ ಹಣಕ್ಕಿಂತ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕಡಿಮೆ ಸಂಬಳ ನೀಡುವುದು, ಅಗತ್ಯಕ್ಕಿಂತ ಹೆಚ್ಚು ದುಡಿಸುವುದು ಸೇರಿ ಹಲವು ರೀತಿಯಲ್ಲಿ ದೌರ್ಜನ್ಯ ಎಸಗಿದ ಕಾರಣ ನಾಲ್ವರಿಗೂ ನ್ಯಾಯಾಲಯವು ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಹಿಂದುಜಾ ಕುಟುಂಬದ ಉದ್ಯಮಿ ಪ್ರಕಾಶ್‌ ಹಿಂದುಜಾ, ಅವರ ಪತ್ನಿ ಕಮಲ್, ಮಗ ಅಜಯ್ ಹಾಗೂ ಸೊಸೆ ನಮ್ರತಾ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಐದನೇ ಆರೋಪಿಯಾಗಿದ್ದ, ಹಿಂದುಜಾ ಕುಟುಂಬದ ಮ್ಯಾನೇಜರ್‌ ನಜೀಬ್‌ ಜಿಯಾಜಿಗೆ 18 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಸ್ವಿಟ್ಜರ್‌ಲ್ಯಾಂಡ್‌ನ ಕಾರ್ಮಿಕ ಕಾನೂನು ಉಲ್ಲಂಘನೆ, ಮಾನವ ಕಳ್ಳಸಾಗಣೆ, ಮನೆಗೆಲಸದವರ ಮೇಲೆ ದೌರ್ಜನ್ಯ ಸೇರಿ ಹಲವು ಪ್ರಕರಣಗಳಲ್ಲಿ ನಾಲ್ವರನ್ನೂ ದೋಷಿಗಳು ಎಂದು ಕೋರ್ಟ್‌ ತೀರ್ಪು ನೀಡಿ, ಶಿಕ್ಷೆ ವಿಧಿಸಿದೆ.

ಹಿಂದುಜಾ ಕುಟುಂಬವು ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿರುವ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮಹಿಳೆಯೊಬ್ಬಳಿಗೆ ಕಡಿಮೆ ಸಂಬಳ ನೀಡಿದ್ದಾರೆ. ಆಕೆಯನ್ನು ವಾರದಲ್ಲಿ ಏಳು ದಿನಗಳ ಕಾಲ ಹಾಗೂ ಪ್ರತಿದಿನ 18 ಗಂಟೆಕಾಲ ಕೆಲಸ ಮಾಡಿದ್ದಕ್ಕೆ ಕೇವಲ ಏಳು ಸ್ವಿಸ್, ಅಂದರೆ ದಿನಕ್ಕೆ 650 ರೂ. ಸಂಬಳ ನೀಡಿದ್ದಾರೆ. ಆದರೆ ಅವರು ಮನೆಯಲ್ಲಿ ಸಾಕಿದ ನಾಯಿಗೆ ಮಾತ್ರ ವಾರ್ಷಿಕವಾಗಿ 8,584 ಸ್ವಿಸ್ (ಸುಮಾರು 8 ಲಕ್ಷ ರೂ.) ಖರ್ಚು ಮಾಡುತ್ತಾರೆ. ಹಾಗಾಗಿ ಹಿಂದುಜಾ ಕುಟುಂಬದವರು ತಮ್ಮ ಸೇವಕರಿಗಿಂತ ಸಾಕು ನಾಯಿಗಳಿಗೆ ಹೆಚ್ಚು ಖರ್ಚು ಮಾಡುತ್ತಾರೆ ಎಂದು ಮಹಿಳೆಯು ಕೋರ್ಟ್‌ ಮೊರೆ ಹೋಗಿದ್ದರು. ಅವರ ಪರವಾಗಿ ಸ್ವಿಟ್ಜರ್‌ಲ್ಯಾಂಡ್ ನ್ಯಾಯಾಲಯದ ಸರ್ಕಾರಿ ವಕೀಲ ಯವೆಸ್ ಬರ್ಟೋಸಾ ವಾದ ಮಂಡಿಸಿದ್ದರು.

ಅಷ್ಟೇ ಅಲ್ಲದೇ ಹಿಂದುಜಾ ಕುಟುಂಬದವರು ಮನೆ ಕೆಲಸದ ಮಹಿಳೆಯ ಪಾಸ್‌ಪೋರ್ಟ್ ಕಿತ್ತುಕೊಂಡು ಅನುಮತಿಯಿಲ್ಲದೇ ಮನೆಯಿಂದ ಹೊರಬರದಂತೆ ನಿರ್ಬಂಧ ಹೇರಿದೆ. ಕೆಲಸದವರಿಗೆ ರಜೆ ಕೂಡ ನೀಡುತ್ತಿರಲಿಲ್ಲ. ಅಲ್ಲದೇ ಕರೆನ್ಸಿಯಲ್ಲಿ ಸಂಬಳ ನೀಡುತ್ತಿದ್ದ ಕಾರಣ ಅವರಿಗೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಖರ್ಚು ಮಾಡಲು ಹಣವಿರುತ್ತಿರಲಿಲ್ಲ ಎಂದು ವಕೀಲರು ವಾದ ಮಂಡಿಸಿದ್ದರು. ಈಗ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.

ಬ್ರಿಟನ್‌ನಲ್ಲಿ ಹಿಂದುಜಾ ಕುಟುಂಬವೇ ಶ್ರೀಮಂತ ಕುಟುಂಬ

ಕೆಲ ತಿಂಗಳ ಹಿಂದಷ್ಟೇ, ಭಾರತ ಮೂಲದ ಗೋಪಿಚಂದ್‌ ಹಿಂದುಜಾ ಹಾಗೂ ಅವರ ಕುಟುಂಬವು ಬ್ರಿಟನ್‌ನ ಶ್ರೀಮಂತ ಕುಟುಂಬ ಅಥವಾ ಉದ್ಯಮಿ ಎಂಬ ಖ್ಯಾತಿಗೆ ಭಾಜನವಾಗಿದೆ. ಅಷ್ಟೇ ಅಲ್ಲ, ಸತತ ಮೂರನೇ ವರ್ಷವೂ ಹಿಂದುಜಾ ಕುಟುಂಬವೇ ಅತ್ಯಂತ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರವಾಗಿದೆ.

‘ಸಂಡೇ ಟೈಮ್ಸ್‌ ರಿಚ್‌ ಲಿಸ್ಟ್‌’ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಗೋಪಿಚಂದ್‌ ಹಿಂದುಜಾ ಅವರೇ ಬ್ರಿಟನ್‌ನ ಶ್ರೀಮಂತ ಉದ್ಯಮಿ ಎನಿಸಿದ್ದಾರೆ. ಇವರ ಆಸ್ತಿಯ ಒಟ್ಟು ಮೌಲ್ಯವು 37 ಶತಕೋಟಿ ಪೌಂಡ್ಸ್‌ (ಸುಮಾರು 3.9 ಲಕ್ಷ ಕೋಟಿ ರೂ.) ಇದೆ. ಬ್ರಿಟನ್‌ನವರೇ ಆದ ಸರ್‌ ಲೆನಾರ್ಡ್‌ ಬ್ಲಾವಾಟ್ನಿಕ್‌ (29 ಶತಕೋಟಿ ಪೌಂಡ್ಸ್)‌, ಡೇವಿಡ್‌, ಸೈಮನ್‌ ರುಬೇನ್‌ ಮತ್ತು ಕುಟುಂಬ (24.98 ಶತಕೋಟಿ ಪೌಂಡ್ಸ್)‌, ಸರ್‌ ಜಿಮ್‌ ರ‍್ಯಾಟ್‌ಕ್ಲಿಫ್‌ (23 ಶತಕೋಟಿ ಪೌಂಡ್ಸ್)‌ ಆಸ್ತಿಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Gopi Hinduja: ನಮ್ಮನ್ನಾಳಿದ ಬ್ರಿಟನ್‌ನಲ್ಲಿ ಭಾರತದ ಉದ್ಯಮಿಯೇ ಅತ್ಯಂತ ಸಿರಿವಂತ; ಯಾರಿವರು?

Continue Reading
Advertisement
Kalki 2898 AD Final Trailer Released
ಕರ್ನಾಟಕ1 hour ago

Kalki 2898 AD: ‘ಕಲ್ಕಿ 2898 AD’ ಚಿತ್ರದ ಫೈನಲ್‌ ಟ್ರೇಲರ್‌ ಹೀಗಿದೆ ನೋಡಿ! ಜೂ.27ರಂದು ಚಿತ್ರ ರಿಲೀಸ್

Sonakshi Sinha
ಬಾಲಿವುಡ್2 hours ago

Sonakshi Sinha: ಸೋನಾಕ್ಷಿ ಸಿನ್ಹಾ-ಜಹೀರ್‌ ಇಕ್ಬಾಲ್‌ ಮದುವೆ; ಮೆಹಂದಿ ಶಾಸ್ತ್ರದ ವೇಳೆ ಪತಿ ಜತೆ ನಟಿ ಮಿಂಚಿಂಗ್!

T20 World Cup 2024
ಪ್ರಮುಖ ಸುದ್ದಿ2 hours ago

T20 World Cup 2024 : ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ 7 ರನ್ ಜಯ

Suryakumar Yadav
ಪ್ರಮುಖ ಸುದ್ದಿ2 hours ago

Suryakumar Yadav : ವಿಶ್ವದ ಬೆಸ್ಟ್​ ಟಿ20 ಆಟಗಾರ ಸೂರ್ಯಕುಮಾರ್​ ಯಾದವ್​ ಎಂದ ಅಂಬಾಟಿ ರಾಯುಡು

Central Government monitoring wheat price stability: Union Minister Pralhad Joshi
ಕರ್ನಾಟಕ2 hours ago

Pralhad Joshi: ಗೋಧಿ ಬೆಲೆ ಸ್ಥಿರತೆಗೆ ಕೇಂದ್ರ ಸರ್ಕಾರದ ಕ್ರಮ; ಪ್ರಲ್ಹಾದ್‌ ಜೋಶಿ

regional Laboratory sanctioned to Kims Hubballi
ಕರ್ನಾಟಕ2 hours ago

Pralhad Joshi: ಕಿಮ್ಸ್‌ಗೆ ಅತ್ಯಾಧುನಿಕ “ವೈರಾಣು ಸಂಶೋಧನೆ, ರೋಗ ನಿರ್ಣಯ ಪ್ರಯೋಗಾಲಯ” ಮಂಜೂರು

Hinduja Family
ವಿದೇಶ3 hours ago

Hinduja Family: ಮನೆಗೆಲಸದವರ ಮೇಲೆ ದೌರ್ಜನ್ಯ; ಹಿಂದುಜಾ ಕುಟುಂಬದ ನಾಲ್ವರಿಗೆ 4.5 ವರ್ಷ ಜೈಲು!

Gautam Gambhir
ಪ್ರಮುಖ ಸುದ್ದಿ3 hours ago

Gautam Gambhir : ಕೋಚ್​ ಹುದ್ದೆ ಅಂತಿಮವಾಗಿಲ್ಲ; ವರದಿಗಳಿಗೆ ವ್ಯತಿರಿಕ್ತ ಹೇಳಿಕೆ ನೀಡಿದ ಗಂಭೀರ್​!

Rishabh Pant
ಪ್ರಮುಖ ಸುದ್ದಿ4 hours ago

Rishabh Pant : ವಿಶ್ವ ಕಪ್​ನಲ್ಲಿ ವಿನೂತನ ವಿಕೆಟ್​ಕೀಪಿಂಗ್​​ ದಾಖಲೆ ಬರೆದ ರಿಷಭ್​ ಪಂತ್​

Parking Complex
ಬೆಂಗಳೂರು4 hours ago

Parking Complex: ಬೆಂಗಳೂರಿನಲ್ಲಿ ಸುಸಜ್ಜಿತ ಪಾರ್ಕಿಂಗ್‌ ಕಾಂಪ್ಲೆಕ್ಸ್;‌ ಶುಲ್ಕದ ಕುರಿತ ಮಾಹಿತಿ ಇಲ್ಲಿದೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ7 hours ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ13 hours ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 day ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು5 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು5 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ5 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ5 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ6 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ6 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌