Dina Bhavishya: ನಂಬಿದವರಿಂದಲೇ ಮೋಸ; ಈ ರಾಶಿಯವರು ಎಚ್ಚರ ವಹಿಸಿ Vistara News

ಪ್ರಮುಖ ಸುದ್ದಿ

Dina Bhavishya: ನಂಬಿದವರಿಂದಲೇ ಮೋಸ; ಈ ರಾಶಿಯವರು ಎಚ್ಚರ ವಹಿಸಿ

Dina Bhavishya : ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷದ ತ್ರಯೋದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Dina Bhavishya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ತುಲಾ ರಾಶಿಯಿಂದ ಶನಿವಾರ ಮಧ್ಯಾಹ್ನ 01:39ಕ್ಕೆ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ವೃಶ್ಚಿಕ, ಸಿಂಹ, ತುಲಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ಹಾಗೂ ಕಟಕ ರಾಶಿಯವರು ಅತಿರೇಕದ ಮಾತುಗಳು ಜಗಳ ಉಂಟು ಮಾಡಬಹುದು, ಹೀಗಾಗಿ ಮಾತಿನಲ್ಲಿ ಹಿಡಿತವಿರಲಿ. ಕನ್ಯಾ ರಾಶಿಯವರು ಪಾಲುದಾರಿಕೆ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಉದ್ಯೋಗಿಗಳಿಗೆ ಕಿರಿಕಿರಿ ಇರಲಿದೆ. ನಂಬಿದ ವ್ಯಕ್ತಿಗಳಿಂದ ಮೋಸ ಹೋಗಬಹುದು. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (11-11-2023)

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ
ತಿಥಿ: ತ್ರಯೋದಶಿ 13:57 ವಾರ: ಶನಿವಾರ
ನಕ್ಷತ್ರ: ಚಿತ್ತಾ 25:45 ಯೋಗ: ಪ್ರೀತಿ 16:57
ಕರಣ: ವಣಿಜ 13:57 ಅಮೃತ ಕಾಲ: ಸಂಜೆ 6:57 ರಿಂದ 8:39ರವರೆಗೆ

ಸೂರ್ಯೋದಯ : 06:16  ಸೂರ್ಯಾಸ್ತ : 05:51

ರಾಹುಕಾಲ : ಬೆಳಗ್ಗೆ 9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ಅತಿರೇಕದ ಮಾತುಗಳು ಜಗಳ ಉಂಟುಮಾಡಬಹುದು, ಹೀಗಾಗಿ ಮಾತಿನಲ್ಲಿ ಹಿಡಿತವಿರಲಿ. ಯಾವುದಾದರೂ ಮೂಲದಿಂದ ಆರ್ಥಿಕ ಲಾಭ ಬರಲಿದೆ. ಆರೋಗ್ಯದಲ್ಲಿ ಕೊಂಚ ಮಟ್ಟಿಗೆ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಭಾವನಾತ್ಮಕ ವಿಷಯಗಳಿಂದ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಕುಟುಂಬದ ಆಪ್ತರಿಂದ ಆಮಂತ್ರಣ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿವಹಿಸಿ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ಒತ್ತಡ ಹೆಚ್ಚಾಗಲಿದೆ. ಭರವಸೆಯ ಹೊಸ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಮಧ್ಯಮವಾಗಿರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕಟಕ: ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಅತಿರೇಕದ ಮಾತುಗಳು ಅಪಾಯ ತರಬಹುದು. ಉದ್ಯೋಗಿಗಳಿಗೆ ಒತ್ತಡ ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಸಿಂಹ: ಕೋಪದಿಂದ ಕಾರ್ಯದಲ್ಲಿ ಹಾನಿಯಾಗಲಿದೆ. ಆರ್ಥಿಕ ಪ್ರಗತಿ ಇರಲಿದೆ. ಸಂಬಂಧಿಗಳೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ಹೇಳಿಕೆಯ ಮಾತುಗಳು ಕುಟುಂಬದ ವಾತಾವರಣ ಕೆಡಿಸುವುದು ಎಚ್ಚರಿಕೆ ಇರಲಿ. ಸಹದ್ಯೋಗಿಗಳಿಂದ ಕಿರಿಕಿರಿ ಉಂಟಾಗಲಿದೆ. ಆರೋಗ್ಯದ ಕಾಳಜಿ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ: ಮನರಂಜನೆಗಾಗಿ ಸಮಯ ಕಳೆಯುವ ಸಾಧ್ಯತೆ ಇದೆ. ಆಪ್ತರೊಂದಿಗೆ ಮಾತುಕತೆ ಇರಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಪಾಲುದಾರಿಕೆ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಉದ್ಯೋಗಿಗಳಿಗೆ ಕಿರಿಕಿರಿ ಇರಲಿದೆ. ನಂಬಿದ ವ್ಯಕ್ತಿಗಳಿಂದ ಮೋಸ ಹೋಗಬಹುದು. ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಸಕಾರಾತ್ಮಕ ಆಲೋಚನೆಗಳಿಂದ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಹಳೆಯ ವಿಚಾರ ಕೆದಕಿ ಮನಸ್ಸಿಗೆ ಘಾಸಿ ಮಾಡಿಕೊಳ್ಳುವುದು ಬೇಡ. ಆರೋಗ್ಯ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ: ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗಲಿದೆ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ.
ಅಮೂಲ್ಯ ವಸ್ತುಗಳು ಕೈಗೆ ಸಿಗುವುದರಿಂದ ಸಂತಸ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 3

Horoscope Today

ಧನಸ್ಸು: ಭೂಮಿ ಸಂಬಂಧಿ ವ್ಯವಹಾರ, ಹಣಕಾಸು ವ್ಯವಹಾರದಲ್ಲಿ ಲಾಭ ಇರಲಿದೆ. ಪ್ರಯಾಣ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಸಹದ್ಯೋಗಿಗಳಿಂದ ಸಹಕಾರ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣ ಬಲ ಕೂಡಿಬರಲಿದೆ. ಕುಟುಂಬದಲ್ಲಿ ಹೊಸ ಭರವಸೆ ಮೂಡಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಮಕರ: ಭರವಸೆಯ ಹೊಸ ಜೀವನ ಶುರುವಾಗಲಿದೆ. ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ ಆರ್ಥಿಕ ಪ್ರಗತಿ ಇರಲಿದೆ. ನೀವು ಮಾಡಿದ ಕೆಲಸ ಕಾರ್ಯಗಳ ಫಲಿತಾಂಶ ಬೇರೆಯವರ ಪಾಲಾಗಲಿದೆ. ಎಚ್ಚರಿಕೆ ಇರಲಿ. ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಕುಂಭ: ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಅವಶ್ಯಕ ವಸ್ತುಗಳ ಖರೀದಿ ಮಾಡುವಿರಿ. ಅಷ್ಟೇ ಆರ್ಥಿಕ ಲಾಭ ಸಿಗಲಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ಮಾತು ಬೆಳೆಸುವುದು ಬೇಡ. ಸಾಮಾಜಿಕ ಕಾರ್ಯದಲ್ಲಿ ತೊಡಗುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಮೀನ: ಹಳೆಯ ನೋವು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಆರೋಗ್ಯದ ಕಡೆಗೆ ಗಮನ ಇರಲಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು ಹೆಚ್ಚಾಗಲಿದೆ. ಸಂಬಂಧಿಗಳೊಂದಿಗೆ ಮಾತುಕತೆ ಇರಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಾಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | [email protected]

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

Raja Marga Column : 13 ವರ್ಷದ ನನ್ನ ಮಗಳು ಒಮ್ಮಿಂದೊಮ್ಮೆಗೆ ಮಂಕಾಗಿದ್ದು ಯಾಕೆ?

Raja Marga Column : ಚೆನ್ನಾಗಿಯೇ ಇದ್ದ ಮಗಳು ಒಮ್ಮಿಂದೊಮ್ಮೆಗೆ ಮೌನಕ್ಕೆ ಜಾರಿದಳು. ಚಿಗರೆಯಂತಿದ್ದವಳು ಜಿಗಿಯುವುದನ್ನೇ ಮರೆತಳು. 13 ವರ್ಷದ ಹುಡುಗಿಗೆ ಏನಾಯಿತು.? ನಾನು ಆಕೆಯನ್ನು ಈ ಸಂಕಟದಿಂದ ಹೊರತಂದಿದ್ದು ಹೇಗೆ?

VISTARANEWS.COM


on

Raja Marga Father and Daughter
Koo
RAJAMARGA Rajendra Bhat

ಮೊನ್ನೆ ಮೊನ್ನೆ ತನ್ನ 13ನೆಯ ಹುಟ್ಟುಹಬ್ಬವನ್ನು ಸೆಲೆಬ್ರೇಟ್ (13 year old daughter) ಮಾಡಿದ ನನ್ನ ಮಗಳು ಇಂದಿಗೂ ರಾತ್ರಿ ಮಲಗುವುದು ಅಪ್ಪನ ಕಾಲಿನ ಮೇಲೆಯೇ. ಅಪ್ಪನ ಬಾಯಿಂದ ಅದ್ಭುತವಾದ ಕಾಲ್ಪನಿಕ ಕಥೆಗಳನ್ನು ಕೇಳುತ್ತ, ಜೋಗುಳದ ಹಾಡುಗಳನ್ನು ಕೇಳುತ್ತ ಆಕೆ ದೊಡ್ಡವಳಾದವಳು. ಅವಳೀಗ ಪ್ರೈಮರಿ ಶಿಕ್ಷಣವನ್ನು (Primary Education) ಮುಗಿಸಿ ಹೊಸತೊಂದು ಖಾಸಗಿ ಹೈಸ್ಕೂಲಿಗೆ (Private High school) ಸೇರಿದವಳು. ನನ್ನ ಮಗಳು ಈಗ ಎಂಟನೇ ಕ್ಲಾಸ್ (Raja Marga Column).

ಅವಳೀಗ ಮೊದಲಿನ ಹಾಗೆ
ಮನಸ್ಸು ಬಿಚ್ಚಿ ಮಾತಾಡುವುದಿಲ್ಲ!

ರಾತ್ರಿ ಮಲಗುವ ಮೊದಲು ಅವಳು ಇಡೀ ದಿನ ನಡೆದ ಪ್ರತೀ ಒಂದು ಘಟನೆಯನ್ನೂ ಅಪ್ಪನಿಗೆ ಹೇಳುತ್ತಾಳೆ. ಆಗ ಅವಳಿಗೆ ಯಾವ ಫಿಲ್ಟರ್ ಅಡ್ಡ ಬರುವುದಿಲ್ಲ. ಇದನ್ನು ಹೇಳಬೇಕೋ ಬೇಡವೋ ಎಂಬ ಗೊಂದಲ ಇರುವುದಿಲ್ಲ. ಟೀಚರ್ ಹೊಗಳಿದ್ದು, ಕ್ಲಾಸ್‌ಮೇಟ್ ಗೀರಿದ್ದು, ಆಕೆಯ ಓರಗೆಯ ಹುಡುಗ ಕಣ್ಣು ಹೊಡೆದು ಲವ್ ಯು ಅಂದದ್ದು….ಎಲ್ಲವನ್ನೂ ಅವಳು ಹೇಳಿಯೇ ಹೇಳುತ್ತಾಳೆ.

ಆದರೆ ಇತ್ತೀಚೆಗೆ ಯಾವುದನ್ನೂ ಹೇಳದೆ ಆಕೆ ಮೌನವಾಗಿದ್ದಾಳೆ. ಆಕೆಯ ಕಣ್ಣುಗಳಲ್ಲಿ ಅಗಾಧವಾದ ಭಯ ಹೊರಗೆ ಇಣುಕುತ್ತದೆ. ಉತ್ಸಾಹದ ಚಿಲುಮೆ ಆಗಿದ್ದ ನನ್ನ ಪ್ರಿನ್ಸೆಸ್ ಈಗ ಮಂಕಾಗಿರುವುದು ನನಗೆ ಅಚ್ಚರಿ ತರುತ್ತದೆ. ಆರಂಭದಲ್ಲಿ ಹೊಸ ಶಾಲೆಗೆ ಸೇರಿದ್ದಾಳೆ, ಹೊಂದಾಣಿಕೆ ಕಷ್ಟ ಆಗಿರಬಹುದು ಎಂದು ನಾನು ಭಾವಿಸಿದ್ದೆ. ಅಥವಾ ಪ್ರಾಯಕ್ಕೆ ಬಂದಿದ್ದ ಕಾರಣ ಗೊಂದಲಗಳು ಇರಬಹುದು ಎಂದು ಯೋಚಿಸಿದ್ದೆ. ಆದರೆ ಅವಳ ನೋವಿಗೆ ಅದ್ಯಾವುದೂ ಕಾರಣ ಅಲ್ಲ ಎಂದು ಗೊತ್ತಾದಾಗ ನಾನು ಅವಳ ಬಾಯಿ ಬಿಡಿಸುವುದು ಅನಿವಾರ್ಯ ಆಯಿತು. ಒಮ್ಮೆಗೇ ಅವಳು ನನ್ನ ಕುತ್ತಿಗೆಯ ಸುತ್ತ ಬಳಸಿ ಹಿಡಿದು ಜೋರಾಗಿ ಅಳಲು ಆರಂಭ ಮಾಡಿದಳು! ಎಷ್ಟೋ ದಿನಗಳಿಂದ ಒತ್ತಿ ಹಿಡಿದ ಅಣೆಕಟ್ಟು ಪ್ರವಾಹವಾಗಿ ಹರಿಯಲು ಆರಂಭ ಆಯಿತು.

Raja Marga Father and Daughter

ಅಪ್ಪಾ, ನನಗೆ ಈ ಶಾಲೆ ಬೇಡ!

ನನ್ನ ಪ್ರಿನ್ಸೆಸ್ ಹಾಗೆಂದು ಹಠ ಹಿಡಿದು ಅಳುವಾಗ ನನಗೆ ಏನು ಹೇಳಬೇಕು ಎಂದು ಗೊತ್ತಾಗಲಿಲ್ಲ. ಅವಳು ಸೇರಿದ ಹೈಸ್ಕೂಲ್‌ ನಮ್ಮೂರಲ್ಲಿಯೆ ಪ್ರಸಿದ್ಧವಾದ ಶಾಲೆ. ಒಳ್ಳೆಯ ಅಧ್ಯಾಪಕರು ಇದ್ದಾರೆ. ಚಂದ ಪಾಠ ಮಾಡುವ ಶಾಲೆ ಅದು. ಪರೀಕ್ಷೆಯ ರಿಸಲ್ಟ್ ತುಂಬ ಚೆನ್ನಾಗಿದೆ. ಸೌಲಭ್ಯಗಳು ಚೆನ್ನಾಗಿವೆ. ಹಾಗಿರುವಾಗ ಅವಳು ಯಾಕೆ ಆ ಶಾಲೆ ಬೇಡ ಅಂತಾಳೆ? ನನಗೆ ಅರ್ಥ ಆಗಲಿಲ್ಲ.

ಆಗ ಅವಳ ಅಳು ನಿಯಂತ್ರಣಕ್ಕೆ ಬಂದಿತ್ತು. ನನ್ನ ಪ್ರಿನ್ಸೆಸ್ ಈಗ ಒಂದೊಂದಾಗಿ ಕಾರಣವನ್ನು ಹೇಳುತ್ತಾ ಹೋದಂತೆ ನಾನು ಬೆಚ್ಚಿ ಬಿದ್ದೆ.

ಓವರ್ ಟು ಮೈ ಪ್ರಿನ್ಸೆಸ್….

ಅಪ್ಪ, ನಾನು ಓದಿದ ಪ್ರೈಮರಿ ಶಾಲೆಯಲ್ಲಿ ನನಗೆ ಯಾವ ಒತ್ತಡವೂ ಇರಲಿಲ್ಲ. ತುಂಬಾ ಗೆಳೆಯರು, ನೂರಾರು ಚಟುವಟಿಕೆಗಳು, ಚಂದ ಚಂದ ಕನಸುಗಳು, ಆಟಗಳು, ನೃತ್ಯಗಳು, ಹಾಡುಗಳು ಎಲ್ಲವೂ ಇದ್ದವು. ಒಂದು ದಿನವೂ ನಮ್ಮ ಅಧ್ಯಾಪಕರು ಪರೀಕ್ಷೆಗಳ ಬಗ್ಗೆ ಮಾತಾಡಿರಲಿಲ್ಲ. ನಮ್ಮ ಓರಗೆಯ ಗೆಳೆಯರು ಒಬ್ಬರಿಗೆ ಒಬ್ಬರು ಸಪೋರ್ಟ್ ಮಾಡುತ್ತಿದ್ದರು. ಚಂದ ಕಲಿಯುವ ವಾತಾವರಣ ಇತ್ತು. ನಮ್ಮ ಮಧ್ಯೆ ಸ್ಪರ್ಧೆ ಇರಲೇ ಇಲ್ಲ. ಶಿಕ್ಷಕರು ತಾರತಮ್ಯ ಮಾಡಿದ್ದೇ ಇಲ್ಲ.

ಈಗ ಎಲ್ಲವನ್ನೂ ಬಾಯಿಪಾಠ ಮಾಡಿಸುತ್ತಾರೆ!

ಆದರೆ ಈಗ ನಮ್ಮ ಹೈಸ್ಕೂಲ್ ಅದಕ್ಕೆ ವಿರುದ್ಧವಾಗಿದೆ. ಅಧ್ಯಾಪಕರು ಚಂದ ಪಾಠ ಮಾಡುತ್ತಾರೆ. ಆದರೆ ಪ್ರತೀ ದಿನವೂ ಪರೀಕ್ಷೆ, ಪರೀಕ್ಷೆ ಎಂದು ಗೋಳು ಹೊಯ್ದುಕೊಳ್ಳುತ್ತಾರೆ. ಅನಾವಶ್ಯಕವಾಗಿ ಬಾಯಿಪಾಠ ಮಾಡಲು ಒತ್ತಾಯ ಮಾಡುತ್ತಾರೆ. ನಾನು ಪ್ರೈಮರಿ ಶಾಲೆಯಲ್ಲಿ ಎಂದಿಗೂ ಬಾಯಿಪಾಠ ಮಾಡಿದ್ದು ಇಲ್ಲ. ಎಲ್ಲವನ್ನೂ ನಮ್ಮ ಅಧ್ಯಾಪಕರು ಅರ್ಥ ಮಾಡಿ ಬಿಡುತ್ತಿದ್ದರು. ಬಾಯಿಪಾಠದ ಅಗತ್ಯವೇ ಬೀಳಲಿಲ್ಲ. ಆದರೆ ಈಗ ಇಲ್ಲಿನ ಅಧ್ಯಾಪಕರು ಬಲವಂತವಾಗಿ ಬಾಯಿಪಾಠ ಮಾಡಿಸುತ್ತಾರೆ. ನಮ್ಮದೇ ವಾಕ್ಯ ಮಾಡಿ ಉತ್ತರ ಬರೆದರೆ ಮಾರ್ಕ್ ಕೊಡುವುದೇ ಇಲ್ಲ! ಒಂದೊಂದು ಉತ್ತರವನ್ನು ಹತ್ತು ಸಲ ಬರೆಸುತ್ತಾರೆ. ಅದರಿಂದ ನಮಗೇನು ಲಾಭ? ನಾನು ಬಾಲ್ಯದಿಂದಲೂ ಕ್ರಿಯೇಟಿವ್ ಆಗಿ ಕಲಿತವಳು. ಯಾಂತ್ರಿಕವಾಗಿ ಕಲಿಯುವುದು ನನ್ನಿಂದ ಆಗೋದಿಲ್ಲ ಅಪ್ಪ. ಅವರು ಕೊಟ್ಟ ನೋಟ್ಸ್ ಬಾಯಿಪಾಠ ಮಾಡಿ ಉತ್ತರ ಬರೆಯುವುದು ಅದ್ಯಾವ ಬುದ್ಧಿವಂತಿಕೆ?

ನನಗೆ ಒಮ್ಮೆ ಹೇಳಿದರೆ ಎಲ್ಲವೂ ಅರ್ಥ ಆಗುತ್ತದೆ ಅಪ್ಪ. ಮತ್ತೆ ಅವರು ಯಾಕೆ ಒಂದೊಂದು ವಾಕ್ಯ ಮೂರು ಮೂರು ಬಾರಿ ಹೇಳುತ್ತಾರೆ?

Raja Marga Father and Daughter

ಶಿಕ್ಷಕರು ನಮಗೆ ಚುಚ್ಚಿ ನೋವು ಕೊಟ್ಟು ಮಾತಾಡ್ತಾರೆ

ನಮ್ಮ ಶಿಕ್ಷಕರು ತರಗತಿಯಲ್ಲಿ ಅನಾವಶ್ಯಕವಾಗಿ ಕಂಪೇರ್ ಮಾಡ್ತಾರೆ. ಅವಳನ್ನು ನೋಡಿ ಕಲಿ, ಇವನನ್ನು ನೋಡಿ ಕಲಿ ಎಂದೆಲ್ಲ ಹೇಳುತ್ತಾರೆ. ನನಗದು ಇಷ್ಟ ಆಗೋದಿಲ್ಲ ಅಪ್ಪ. ನಾನು ನಾನೇ ಆಗಿರೋದು ನನಗೆ ಇಷ್ಟ. ನಾನ್ಯಾಕೆ ಅವನ ಹಾಗೆ, ಅವಳ ಹಾಗೆ ಇರಬೇಕು? ಮಾತು ಮಾತಿಗೂ ಚುಚ್ಚಿ ಮಾತಾಡ್ತಾರೆ.

ಮೊನ್ನೆ ನಮ್ಮ ಗಣಿತ ಮ್ಯಾಮ್ ಬೋರ್ಡ್ ಮೇಲೆ ಒಂದು ಲೆಕ್ಕ ತಪ್ಪು ಮಾಡಿದರು. ನಾನು ಎದ್ದು ನಿಂತು ಅದು ತಪ್ಪು ಅಂತ ಹೇಳಿದ್ದೆ. ಆಗ ಆ ಮ್ಯಾಮ್ ಗಟ್ಟಿಯಾಗಿ ‘ಕೂತ್ಕೋ ಕೂತ್ಕೋ. ನೀನು ಗಣಿತ ಮೇಷ್ಟ್ರ ಮಗಳು ಎಂದು ಗೊತ್ತಿದೆ!’ ಎಂದರು. ನನಗೆ ಅಳು ಬಂತು ಅಪ್ಪ. ನಾನೇನು ತಪ್ಪು ಹೇಳಿದ್ದೇನೆ? ಅವರ್ಯಾಕೆ ನಿಮ್ಮ ಬಗ್ಗೆ ಹಗುರವಾಗಿ ಮಾತಾಡಬೇಕು? ನನಗದು ಇಷ್ಟ ಆಗೋದಿಲ್ಲ ಅಪ್ಪ.

ಶಿಕ್ಷಕರು ಇಲ್ಲಿ ತಾರತಮ್ಯ ಮಾಡ್ತಾರೆ ಅಪ್ಪ

ನಮ್ಮ ಶಾಲೆಯಲ್ಲಿ ಬಡವರ ಮಕ್ಕಳು, ಶ್ರೀಮಂತರ ಮಕ್ಕಳು ಎಂಬ ತಾರತಮ್ಯ ಇದೆ ಅಪ್ಪ. ಶ್ರೀಮಂತರ ಮಕ್ಕಳು ಶಾಲೆಗೆ ಹೆಚ್ಚು ಡೊನೇಶನ್ ಕೊಡುವ ಕಾರಣ ಅವರಿಗೆ ಹೆಚ್ಚು ಮಾರ್ಕ್, ಅವರಿಗೆ ಹೆಚ್ಚು ಬಹುಮಾನ, ಅವರಿಗೆ ಹೆಚ್ಚು ಹೊಗಳಿಕೆ. ನನಗದು ಇಷ್ಟ ಆಗೋದಿಲ್ಲ ಅಪ್ಪ.

ಮೊನ್ನೆ ಒಂದು ಸಣ್ಣ ಸ್ಪೆಲ್ಲಿಂಗ್ ತಪ್ಪು ಮಾಡಿದ್ದಕ್ಕೆ ಬೈದರು. ನೂರು ಸಲ ಬರೆಯಲು ಹೇಳಿದರು. ನಾನೇನಾದರೂ ಬೇಕೆಂದೇ ತಪ್ಪು ಮಾಡುತ್ತೇನಾ? ತಪ್ಪು ಮಾಡಲು ಅವಕಾಶ ಇಲ್ಲದ ಶಾಲೆ ನನಗೆ ಬೇಡ. ನನ್ನ ಕ್ರಿಯೇಟಿವ್ ಟ್ಯಾಲೆಂಟ್ ಅವರಿಗೆ ಬೇಡ ಅಂದರೆ ನನಗೆ ಶಾಲೆಯೇ ಬೇಡ!‌ ನಮ್ಮದು ಶಾಲೆ ಎಂಬ ಭಾವನೆ ಬರುವುದಿಲ್ಲ ಅಪ್ಪ.

Raja Marga Father and Daughter

ಅದು ರ‍್ಯಾಂಕ್ ಪಡೆಯುವ ಒಂದು ಕಾರ್ಖಾನೆ!

ಒಂದೇ ಒಂದು ಬದುಕಿನ ಪಾಠ ಇಲ್ಲ. ಎಲ್ಲರೂ ಮಾರ್ಕ್, ಮಾರ್ಕ್ ಎಂದು ಅರಚುತ್ತಾರೆ. ರ‍್ಯಾಂಕ್ ಪಡೆಯುವ ಮಕ್ಕಳಿಗೆ ಸಪರೇಟ್ ಕ್ಲಾಸಸ್ ಮಾಡ್ತಾರೆ. ಕಡಿಮೆ ಮಾರ್ಕ್ ತೆಗೆದುಕೊಳ್ಳುವ ಮಕ್ಕಳಿಗೆ ಬೇರೆ ಅಧ್ಯಾಪಕರು ಪಾಠ ಮಾಡ್ತಾರೆ. ಪರೀಕ್ಷೆಗೆ ಬರುವ ಪ್ರಶ್ನೆಗಳನ್ನು ಮಾತ್ರ ಹೇಳಿಕೊಡುತ್ತಾರೆ. ನಾವೇನಾದರೂ ಕುತೂಹಲಕ್ಕೆ ಪ್ರಶ್ನೆ ಕೇಳಿದರೆ ಅಧಿಕ ಪ್ರಸಂಗಿ ಎಂದು ಬೈತಾರೆ. ನನಗೆ ಈ ಶಾಲೆ ಬೇಡ ಅಪ್ಪ.

ಓರಗೆಯ ಗೆಳೆಯರಲ್ಲ ಅವರು‌, ಸ್ಪರ್ಧಿಗಳು!

ಇನ್ನು ನಮ್ಮ ಓರಗೆಯ ಇತರರು ನನಗೆ ಗೆಳೆಯರಾಗಿ ಕಾಣುತ್ತಿಲ್ಲ. ಅವರು ನನ್ನ ಜೊತೆಗೆ ರೇಸಿಗೆ ನಿಂತ ಹಾಗೆ ವರ್ತಿಸುತ್ತಾರೆ. ಅವರಿಗಿಂತ ನನಗೆ ಒಂದು ಮಾರ್ಕ್ ಹೆಚ್ಚು ಬಂದರೂ ಉರಿದು ಸಾಯುತ್ತಾರೆ. ಯಾವುದೇ ಸ್ಪರ್ಧೆಯಲ್ಲಿ ನನಗೆ ಬಹುಮಾನ ಬಂದರೆ ಪಾರ್ಶಿಯಾಲಿಟಿ ಎಂದು ಬೊಬ್ಬೆ ಹೊಡೆಯುತ್ತಾರೆ. ನನ್ನ ವಿರುದ್ಧ ಶಿಕ್ಷಕರ ಬಳಿ ಹೋಗಿ ಚಾಡಿ ಹೇಳುತ್ತಾರೆ. ನಾನು ಓದಬಾರದು ಎಂದು ನಾನು ಕಷ್ಟ ಪಟ್ಟು ಬರೆದ ನೋಟ್ಸ್ ಪುಟಗಳನ್ನು ಹರಿಯುತ್ತಾರೆ. ಹಿಂಸೆ ಕೊಡುತ್ತಾರೆ. ಶಿಕ್ಷಕರಿಗೆ ಗಿಫ್ಟ್ ತಂದುಕೊಟ್ಟು ಪ್ಲೀಸ್ ಮಾಡ್ತಾರೆ.

ಅಂತಹ ಮಕ್ಕಳನ್ನು ನಮ್ಮ ಟೀಚರ್ಸ್ ತಲೆಯ ಮೇಲೆ ಹೊತ್ತು ಪೂಜೆ ಮಾಡ್ತಾರೆ. ಸ್ಕೂಲ್ ಡೇನಲ್ಲಿಯೂ ಅಂತಹ ಮಕ್ಕಳಿಗೆ ಮಾತ್ರ ವೇದಿಕೆ. ಅವರಿಗೆ ಸಾಲು ಸಾಲು ಬಹುಮಾನಗಳು! ಉಳಿದವರಿಗೆ ಏನೂ ಇಲ್ಲ.

ನಮ್ಮ ಶಾಲೆಯಲ್ಲಿ ಮಾರ್ಕ್ ಪಡೆಯುವುದು ಮಾತ್ರ ಟ್ಯಾಲೆಂಟ್!

ಬೇರೆ ಯಾವ ಟ್ಯಾಲೆಂಟ್ ಕೂಡ ನಮ್ಮ ಶಿಕ್ಷಕರಿಗೆ ಬೇಡ. ಸ್ಪೋರ್ಟ್ಸ್, ಗೇಮ್ಸ್, ನಾಟಕ, ಸ್ಕಿಟ್, ಹಾಡು, ಡ್ಯಾನ್ಸ್ ಇದ್ಯಾವುದಕ್ಕೂ ನಮ್ಮ ಶಾಲೆಯಲ್ಲಿ ವೇದಿಕೆ ಇಲ್ಲ. ಗೇಮ್ಸ್ ಪೀರಿಯಡ್ ಇದ್ದಾಗಲೂ ಟೀಚರ್ಸ್ ಬಂದು ಗಣಿತ, ವಿಜ್ಞಾನ, ಇಂಗ್ಲಿಷ್ ಪಾಠ ಮಾಡ್ತಾರೆ. ನಮ್ಮ ಇಂಗ್ಲಿಷ್ ಟೀಚರ್ ಇವತ್ತಿಗೂ ಭಾಷಾಂತರ ವಿಧಾನದಲ್ಲಿ ಪಾಠ ಮಾಡ್ತಾರೆ. ನಮಗೆ ಇಂಗ್ಲೀಷ್ ಭಾಷೆಯಲ್ಲಿಯೇ ಮಾತಾಡಬೇಕು ಅನ್ನುತ್ತಾರೆ. ಅವರು ಸ್ಟಾಫ್ ರೂಂನಲ್ಲಿ ಇಂಗ್ಲಿಷ್‌ ಬಿಟ್ಟು ಬೇರೆಲ್ಲಾ ಭಾಷೆ ಮಾತಾಡುತ್ತಾರೆ! ನನಗೆ ಈ ಶಾಲೆ ಬೇಡವೇ ಬೇಡ ಅಪ್ಪ. ಪ್ಲೀಸ್ ಬೇರೆ ಕಡೆ ಸೇರಿಸಿ.

ಇದನ್ನೂ ಓದಿ : Raja Marga Column : ಗಂಡ, ಮಕ್ಕಳ ಕೊಂದವರ ಕ್ಷಮಿಸಿದ್ದೇನೆ ಎಂದು ಹೇಳಿದ್ದರು ಆಕೆ!

ಭರತವಾಕ್ಯ

ನನ್ನ ಮಗಳ ನಿರ್ಧಾರ ಸರಿ ಇತ್ತು. ನಾಳೆಯೇ ಅವಳನ್ನು ಬೇರೆ ಶಾಲೆಗೆ ಸೇರಿಸುವ ಭರವಸೆ ಕೊಟ್ಟೆ. ಅವಳು ಥ್ಯಾಂಕ್ಸ್ ಅಪ್ಪ ಎಂದು ನನ್ನ ಕೆನ್ನೆಗೆ ಮುತ್ತು ಕೊಟ್ಟು ನಿದ್ದೆಗೆ ಜಾರಿದಳು.

Continue Reading

ಆರೋಗ್ಯ

ವಿಸ್ತಾರ ಸಂಪಾದಕೀಯ: ನ್ಯುಮೋನಿಯಾ ಸೋಂಕಿನ ಬಗ್ಗೆ ಈಗಲೇ ಎಚ್ಚರ ವಹಿಸೋಣ

vistara editorial: ಇನ್‌ಫ್ಲುಯೆಂಜಾ ಮತ್ತು ಚಳಿಗಾಲದ ಋತುವಿನಿಂದಾಗಿ ಉಸಿರಾಟದ ಕಾಯಿಲೆಯ ಪ್ರಕರಣಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಭಾರತ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ. ಜನರೂ ಎಚ್ಚರ ವಹಿಸಬೇಕಿದೆ.

VISTARANEWS.COM


on

Vistara editorial, Let's take precautions for pneumonia infection
Koo

ಕೋವಿಡ್ ಬಳಿಕ ಚೀನಾದಲ್ಲಿ ಕೋಲಾಹಲ ಸೃಷ್ಟಿಸಿರುವ ನ್ಯುಮೋನಿಯಾ ರೀತಿಯ ಸೋಂಕು (Pneumonia Outbreak) ಇದೀಗ ಭಾರತಕ್ಕೂ ಹರಡಿರುವುದು ಖಚಿತವಾಗಿದೆ. ದೆಹಲಿಯ ಏಮ್ಸ್ (AIIMS Delhi) ಆಸ್ಪತ್ರೆಯಲ್ಲಿ ಇದರ 7 ಪ್ರಕರಣ ಪತ್ತೆಯಾಗಿದೆ. ದಿಲ್ಲಿಯಲ್ಲಿ ಕಾಣಿಸಿಕೊಂಡಿರುವುದು ಚೀನಾದಲ್ಲಿ ಕಾಣಿಸಿಕೊಂಡ ನ್ಯುಮೋನಿಯಾ ಬ್ಯಾಕ್ಟೀರಿಯಾ (Pneumonia Outbreak) ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಚೀನಾದಲ್ಲಿ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಅಲರ್ಟ್‌ ಘೋಷಿಸಿದ ಭಾರತ ತೀವ್ರ ಮುನ್ನೆಚ್ಚರಿಕೆ ವಹಿಸಿತ್ತು. ಒಟ್ಟು 67 ಮಾದರಿಗಳ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ 7 ಮಾದರಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ. 2023ರ ಎಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಕೆಲವೇ ದಿನಗಳ ಹಿಂದೆ ಈ ಬಗ್ಗೆ ಆಸ್ಪತ್ರೆಗಳ ಸನ್ನದ್ಧತೆ ಪರಿಶೀಲಿಸುವಂತೆ ಭಾರತದಲ್ಲಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿತ್ತು. ಈ ಬಗ್ಗೆ ಇನ್ನಷ್ಟು ಎಚ್ಚರ ವಹಿಸುವುದು ಸೂಕ್ತವಾಗಿದೆ(Vistara editorial).

ಚೀನಾದಲ್ಲಿ ಈ ಸೋಂಕು ತೀವ್ರಗತಿಯಲ್ಲಿ ಪಸರಿಸಿ ಆತಂಕ ಸೃಷ್ಟಿಸಿದೆ. ಮಕ್ಕಳಲ್ಲಿ ಕಾಣಿಸಿಕೊಂಡಿರುವ ಈ ಸೋಂಕಿನಿಂದ ಚೀನಾದ ಕೆಲ ಪ್ರಾಂತ್ಯಗಳ ಆಸ್ಪತ್ರೆಗಳು ಭರ್ತಿಯಾಗಿವೆ. ಆ ಮೂಲಕ ಕೋವಿಡ್‌ ನಂತರ ಜಾಗತಿಕ ಮಟ್ಟದಲ್ಲಿ ಮತ್ತೊಂದು ಸಾಂಕ್ರಾಮಿಕ ಪಸರಿಸಲಿದೆಯೇ ಎಂಬ ಆತಂಕ ಕಾಣಿಸಿಕೊಂಡಿತ್ತು. ಚೀನಾದಲ್ಲಿ ಆತಂಕ ಹುಟ್ಟಿಸಿದ ಈ ಸೋಂಕಿನಿಂದಾಗಿ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಕಡ್ಡಾಯ ಮತ್ತೆ ಜಾರಿ ಮಾಡಲಾಗಿದೆ. ಈ ಸೋಂಕು ಅಮೆರಿಕದ ಮಕ್ಕಳಲ್ಲೂ ಕಾಣಿಸಿಕೊಂಡಿದೆ. ಭಾರತಕ್ಕೂ ಮೊದಲು ಅಮೆರಿಕದ ಓಹಿಯೋ ಮತ್ತು ಮಸಾಚ್ಯುಸೆಟ್ಸ್ ರಾಜ್ಯದ 3-14ರ ವಯೋಮಾನದ ಮಕ್ಕಳಲ್ಲಿ ಏಕಾಏಕಿ ಭಾರಿ ಪ್ರಮಾಣದ ನ್ಯುಮೋನಿಯಾ ಸೋಂಕು ಕಾಣಿಸಿಕೊಂಡಿದೆ. ವೈದ್ಯಕೀಯ ಇಲಾಖೆ ಇದನ್ನು ಸೋಂಕು ಸ್ಫೋಟ ಎಂದು ಪರಿಗಣಿಸಿ ತುರ್ತು ಕ್ರಮಗಳನ್ನು ಕೈಗೊಂಡಿದೆ. ನಮ್ಮಲ್ಲಿ ಕರ್ನಾಟಕ ಸೇರಿ ಆರು ರಾಜ್ಯಗಳು ತಮ್ಮ ಆರೋಗ್ಯ ಮೂಲಸೌಕರ್ಯವನ್ನು ಅಲರ್ಟ್ ಮೋಡ್‌ನಲ್ಲಿ ಇಡಲು ಮುಂದಾಗಿವೆ. ಉಸಿರಾಟದ ಸಮಸ್ಯೆಗಳು ಕಂಡುಬಂದ ರೋಗಿಗಳನ್ನು ನಿಭಾಯಿಸಲು ಆಸ್ಪತ್ರೆಗಳು ಮತ್ತು ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಕೇಳಿಕೊಂಡಿವೆ.

ಭಾರತದಲ್ಲಿ ಪತ್ತೆಯಾದ ನ್ಯುಮೋನಿಯಾ ಬ್ಯಾಕ್ಟೀರಿಯಾವು (pneumonia bacteria) ಕೊರೋನಾವೈರಸ್‌ನಂತೆ (‌Corona Virus) ಪಸರಿಸುವ ಸಾಧ್ಯತೆ ಕಡಿಮೆ ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕೊರೊನಾ ವೈರಸ್‌ ಕಾಲಿಟ್ಟ ಆರಂಭ ಕಾಲದಲ್ಲೂ ತಜ್ಞರು ಹೀಗೇ ಹೇಳಿದ್ದರು ಎಂಬುದನ್ನು ನೆನಪಿಡಬೇಕು. ಮುಂದೆ ಅದು ಎಷ್ಟು ಅನಾಹುತ ಮಾಡಿತು ಎಂಬುದನ್ನು ಹೇಳಬೇಕಿಲ್ಲ. ಕೋವಿಡ್‌ ಬಂದಾಗ, ಉಸಿರಾಟದ ಸಮಸ್ಯೆಯು ಮಾರಣಾಂತಿಕವಾಗಬಹುದು ಎಂಬ ಅರಿವು ಯಾರಿಗೂ ಇರಲಿಲ್ಲ. ನ್ಯುಮೋನಿಯಾದ ಮುಂದುವರಿದ ಹಂತದಲ್ಲೂ ಉಸಿರಾಟದ ತೊಂದರೆಯು ಕಾಣಿಸಿಕೊಳ್ಳುತ್ತದೆ. ಸಾಮಾನ್ಯ ಜ್ವರ, ಶ್ವಾಸಕೋಶದಲ್ಲಿ ಅಲ್ಪ ಪ್ರಮಾಣದ ಉರಿ ಕಾಣಿಸಿಕೊಳ್ಳುವುದು ಸದ್ಯ ಈ ಸೋಂಕಿನ ಲಕ್ಷಣಗಳಾಗಿವೆ. ವೈದ್ಯರು ರೋಗಿಗಳಿಗೆ ಔಷಧ ನೀಡಿ ಮನೆಯಲ್ಲೆ ಆರೈಕೆ ಮಾಡಿಕೊಳ್ಳುವಂತೆ ಸೂಚಿಸುತ್ತಿದ್ದಾರೆ. ಆದರೆ ಮಕ್ಕಳಲ್ಲಿ ಈ ಜ್ವರ ಕಂಡುಬಂದರೆ ಹೆತ್ತವರ ಜಂಘಾಬಲ ಉಡುಗುವುದು ಸ್ವಾಭಾವಿಕ.

ಇನ್‌ಫ್ಲುಯೆಂಜಾ ಮತ್ತು ಚಳಿಗಾಲದ ಋತುವಿನಿಂದಾಗಿ ಉಸಿರಾಟದ ಕಾಯಿಲೆಯ ಪ್ರಕರಣಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಭಾರತ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ. ವರದಿಗಳ ಪ್ರಕಾರ, ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುವ ಈ ಸೋಂಕು ಪೀಡಿತ ವ್ಯಕ್ತಿಗಳಲ್ಲಿ ಶ್ವಾಸಕೋಶದ ಉರಿಯೂತ ಮತ್ತು ಹೆಚ್ಚಿನ ಜ್ವರ ಉಂಟುಮಾಡುತ್ತದೆ. ಆದರೆ ಕೆಮ್ಮಿನಂತಹ ಇತರ ಲಕ್ಷಣಗಳು ಕಾಣೆಯಾಗಿವೆ. ಉಸಿರಾಟದ ಕಾಯಿಲೆಗಳ ಪೀಕ್ ಸೀಸನ್‌ನಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಈ ʼನಿಗೂಢ ನ್ಯುಮೋನಿಯಾ’ ಪ್ರಕರಣಗಳ ಉಲ್ಬಣ ಉಂಟಾಗಿದೆ. ಇದು ಪ್ರತಿರೋಧಕ ಶಕ್ತಿಯ ಕೊರತೆಯಿಂದ ಕಾಣಿಸಕೊಂಡಿರಬಹುದು ಎಂಬುದು ತಜ್ಞರ ಅನುಮಾನ. ಇದು ಹೊಸ ವೈರಸ್‌ ಅಲ್ಲ, ಮೊದಲು ಅಸ್ತಿತ್ವದಲ್ಲಿರುವುದೇ ಎಂದು ಗೊತ್ತಾಗಿದೆ.

ಅದೇನೇ ಇರಲಿ, ನಮ್ಮ ಮುನ್ನೆಚ್ಚರಿಕೆ ನಾವು ವಹಿಸೋಣ. ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳುವುದು, ಸಾಬೂನು ಮತ್ತು ನೀರಿನಿಂದ ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು, ಕಣ್ಣು, ಮೂಗು ಅಥವಾ ಬಾಯಿಯನ್ನು ಅನಗತ್ಯವಾಗಿ ಸ್ಪರ್ಶಿಸುವುದನ್ನು ತಪ್ಪಿಸುವುದು, ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವುದು, ಅಂತಹ ಸ್ಥಳಗಳಿಗೆ ಭೇಟಿ ನೀಡಿದರೆ ಮಾಸ್ಕ್ ಬಳಸುವುದು, ಫ್ಲೂ ಪೀಡಿತ ವ್ಯಕ್ತಿಗಳಿಂದ ಕನಿಷ್ಠ ಅಂತರವನ್ನು ಕಾಪಾಡಿಕೊಳ್ಳುವುದು, ಸಾಕಷ್ಟು ನಿದ್ರೆ ಮಾಡುವುದು ಹಾಗೂ ದೈಹಿಕವಾಗಿ ಕ್ರಿಯಾಶೀಲರಾಗಿರುವುದು ಇದರ ಮುನ್ನೆಚ್ಚರಿಕೆಗಳಾಗಿವೆ. ಇವು ವೈಯಕ್ತಿಕ ಮುನ್ನೆಚ್ಚರಿಕೆಗಳಾದರೆ, ಸರ್ಕಾರವೂ ಸಾಕಷ್ಟು ಎಚ್ಚರ ತೆಗೆದುಕೊಂಡು ಆರೋಗ್ಯ ಸೇವೆಯನ್ನು ಸನ್ನದ್ಧತೆಯಲ್ಲಿಡಬೇಕಿದೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾಶ್ಮೀರಿ ಪಂಡಿತರ ಅಳಲು ಕೊನೆಯಾಗಲು ಹೊಸ ವಿಧೇಯಕ ನೆರವಾಗಲಿ

Continue Reading

ಪ್ರಮುಖ ಸುದ್ದಿ

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Dina Bhavishya : ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ಏಕಾದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ತುಲಾ ರಾಶಿಯಿಂದ ಶುಕ್ರವಾರ ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ತುಲಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರು ಕುಟುಂಬದಲ್ಲಿ ಕಲಹಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಿ. ಮಿಥುನ ರಾಶಿಯ ಇತರರ ವಿರುದ್ಧ ದ್ವೇಷ ಕಾರುತ್ತಾ ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚು ಮಾಡಿಕೊಳ್ಳುವುದು ಬೇಡ. ನಕರಾತ್ಮಕ ಆಲೋಚನೆಗಳು ನಿಮ್ಮನ್ನು ಘಾಸಿ ಮಾಡಬಹುದು. ಧನಸ್ಸು ರಾಶಿಯವರು ಅತಿಯಾದ ಚಿಂತೆ, ಒತ್ತಡ ನಿಮ್ಮ ಆರೋಗ್ಯದ ಮೇಲೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಪರಿಣಾಮವನ್ನು ಬೀರಬಹುದು. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (8-12-2023)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ.
ತಿಥಿ: ಏಕಾದಶಿ 30:30 ವಾರ: ಶುಕ್ರವಾರ
ನಕ್ಷತ್ರ: ಹಸ್ತ 08:52 ಯೋಗ: ಸೌಭಾಗ್ಯ 24:03
ಕರಣ: ಭವ 17:53 ಅಮೃತಕಾಲ: 3:50 ರಿಂದ 05: 33ರ ವರೆಗೆ

ಸೂರ್ಯೋದಯ : 06:53  ಸೂರ್ಯಾಸ್ತ : 05:39

ರಾಹುಕಾಲ : ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಆರೋಗ್ಯ ಮಧ್ಯಮವಾಗಿರಲಿದೆ. ಹಣಕಾಸು, ಬಾಕಿ ವ್ಯವಹಾರಗಳು ಪೂರ್ಣವಾಗಲಿದೆ. ಸಂಗಾತಿಯ ಆರೋಗ್ಯದ ಕಡೆಗೆ ಗಮನ ಇರಲಿ. ಆಮಂತ್ರಣ ಸಿಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಕಲಹಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವೃಷಭ: ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ. ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ವಾಹನ ಖರೀದಿ ಬಗ್ಗೆ ವಿಚಾರ ಮಾಡುವಿರಿ. ಈ ಹಿಂದೆ ನಡೆದ ಘಟನೆ ನೆನಪಿಸಿ ಕೊರಗುವುದು ಬೇಡ. ಸಹದ್ಯೋಗಿಗಳಿಂದ ಅಸಹಕಾರ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮಿಥುನ: ಇತರರ ವಿರುದ್ಧ ದ್ವೇಷ ಕಾರುತ್ತಾ ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚು ಮಾಡಿಕೊಳ್ಳುವುದು ಬೇಡ. ನಕರಾತ್ಮಕ ಆಲೋಚನೆಗಳು ನಿಮ್ಮನ್ನು ಘಾಸಿ ಮಾಡಬಹುದು. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭಫಲ. ಆರ್ಥಿಕ ಪ್ರಗತಿ ಸಾಧಾರಣ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 2

Horoscope Today

ಕಟಕ: ಅತಿಯಾದ ಉತ್ಸಾಹದಲ್ಲಿ ಅತಿರೇಕದ ಮಾತುಗಳು ಬೇಡ, ಭಾವನೆಗಳನ್ನು ನಿಯಂತ್ರಿಸಿ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಗೊತ್ತಿಲ್ಲದಂತೆ ಸಮಯ ವ್ಯರ್ಥವಾಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 6

Horoscope Today

ಸಿಂಹ: ಆರ್ಥಿಕ ಸಮಸ್ಯೆಯಿಂದಾಗಿ ಒತ್ತಡ ಹೆಚ್ಚಾಗಲಿದೆ. ಹಿರಿಯರ ಮಾರ್ಗದರ್ಶನ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಬೆಂಬಲ, ಸ್ನೇಹ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ವ್ಯಾಪಾರ-ವ್ಯವಹಾರದಲ್ಲಿ ಸಾಧಾರಣ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

Horoscope Today

ಕನ್ಯಾ: ಸಕಾರಾತ್ಮಕ ಆಲೋಚನೆಗಳಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಮನೆಯ ಸದಸ್ಯರ ವರ್ತನೆ ನಿಮ್ಮನ್ನು ಮಾನಸಿಕವಾಗಿ ತೊಂದರೆಗಳಾಗುವಂತೆ ಮಾಡುವ ಸಾಧ್ಯತೆ ಇದೆ. ದೂರದೂರಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳು ನಿಧಾನಗತಿ ಇರಲಿದೆ. ತಾಳ್ಮೆಯಿಂದ ವರ್ತಿಸಿ. ನೆರೆಹೊರೆಯವರೊಂದಿಗೆ ವಿನಾಕಾರಣ ಜಗಳ ಬೇಡ. ಉದ್ಯೋಗಿಗಳಿಗೆ ಶುಭಫಲ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವೃಶ್ಚಿಕ: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಲಾಭ ಇರಲಿದೆ. ಸಮಾರಂಭಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಜನಪ್ರಿಯತೆ ಹೆಚ್ಚಾಗಲಿದೆ. ಪ್ರವಾಸದ ಕುರಿತು ಚರ್ಚೆ ಮಾಡುವಿರಿ. ಕುಟುಂಬದವರ ಸಹಕಾರ ಸಿಗಲಿದೆ. ಕೊಂಚ ಆರೋಗ್ಯದ ಕಡೆಗೆ ಗಮನ ಇರಲಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 7

Horoscope Today

ಧನಸ್ಸು: ಅತಿಯಾದ ಚಿಂತೆ, ಒತ್ತಡ ನಿಮ್ಮ ಆರೋಗ್ಯದ ಮೇಲೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಪರಿಣಾಮವನ್ನು ಬೀರಬಹುದು. ಆದಷ್ಟು ವಿಶ್ರಾಂತಿ ಪಡೆಯಿರಿ, ತಾಳ್ಮೆ ಇರಲಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗಿಗಳಿಗೆ ಶುಭಫಲ. ಕುಟುಂಬದ ಆಪ್ತರಿಂದ ಸಮಾಧಾನದ ಮಾತುಗಳನ್ನು ಕೇಳುವಿರಿ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

Horoscope Today

ಮಕರ: ಅನಿವಾರ್ಯ ಪ್ರಸಂಗಗಳು ನಿಮ್ಮನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಬಹುದು. ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕವಾಗಿ ಪ್ರಗತಿ, ಹೂಡಿಕೆಯ ಕುರಿತು ಆಲೋಚನೆ ಮಾಡುವಿರಿ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಉದ್ಯೋಗದ ಕುರಿತು ಆಲೋಚನೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

Horoscope Today

ಕುಂಭ: ವಾಹನ ಚಾಲನೆ ಮಾಡುವಾಗ ಜಾಗರೂಕತೆಯಿಂದ ಚಾಲನೆ ಮಾಡಿ, ಅಪಘಾತ ಸಂಭವಿಸಲಿದೆ. ಅವಸರದಲ್ಲಿ ಕೆಲಸ ಮಾಡುವುದು ಬೇಡ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ದಿಢೀರ್ ಪ್ರಯಾಣ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಕನಿಷ್ಠ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಮೀನ: ದಿನದ ಮಟ್ಟಿಗೆ ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಆರೋಗ್ಯ ಮಧ್ಯಮವಾಗಿರಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಮಾತಿನ ಭರದಲ್ಲಿ ಅತಿರೇಕದ ಮಾತುಗಳು ಬೇಡ, ತಾಳ್ಮೆಯಿಂದ ವರ್ತಿಸಿ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | [email protected]

Continue Reading

ಕರ್ನಾಟಕ

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

VISTARANEWS.COM


on

Vistara News impact, Governmet to scrap 7 d rule of SCSP and TSP act
Koo

ಬೆಳಗಾವಿ: ಚಳಿಗಾಲದ ಅಧಿವೇಶನಕ್ಕಾಗಿ ಬೆಳಗಾವಿಯಲ್ಲಿ ಬೀಡು ಬಿಟ್ಟಿರುವ ಮುಖ್ಯಮಂತ್ರಿ ಹಾಗೂ ಅವರು ಮಂತ್ರಿ ಮಂಡಲ ಸದಸ್ಯರು ಗುರುವಾರ ಸಚಿವ ಸಂಪುಟ ನಡೆಸಿ(Cabinet Meeting), ಪ್ರಮುಖ ನಿರ್ಧಾರಗಳನ್ನು ಕೈಗೊಂಡರು. ಈ ಪೈಕಿ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಧಿನಿಯಮಕ್ಕೆ ತಿದ್ದುಪಡಿ (SCSP and TSP act) ತರಲು ರಾಜ್ಯ ಸಚಿವ ಸಂಪುಟವು ತನ್ನ ಒಪ್ಪಿಗೆಯನ್ನು ನೀಡಿದೆ. ಈ ಸಮುದಾಯಗಳಿಗೆ ಮೀಸಲಾದ ಹಣವನ್ನು ಸರ್ಕಾರವು ಅನ್ಯ ಕಾರ್ಯಗಳಿಗೆ ಬಳಸುತ್ತಿದೆ ಎಂದು ವಿಸ್ತಾರ ನ್ಯೂಸ್ (Vistara News) ವರದಿ ಮಾಡಿತ್ತು. ಅದರ ಬೆನ್ನಲ್ಲೇ, ಸಂಪುಟ ಸಭೆಯಲ್ಲಿ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ.

ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಧಿನಿಯಮಕ್ಕೆ ತಿದ್ದುಪಡಿ ತಂದು, ನಿಯಮ 7-ಡಿ ರದ್ದು ಮಾಡಲು ಒ್ಪಪಿಗೆ ನೀಡಿದೆ. ಈ ಸಮುದಾಯಗಳಿಗೆ ಮೀಸಲಿದ್ದ ಹಣವನ್ನು ರಾಜ್ಯ ಸರ್ಕಾರವು ರಸ್ತೆ, ಚರಂಡಿ, ಫ್ಲೈಓವರ್, ನೀರಾವರಿ ಯೋಜನೆಗಳಿಗೆ ಸರ್ಕಾರ ಬಳಿಕೊಳ್ಳುತ್ತಿತ್ತು. ಇದಕ್ಕೆ ನಿಯಮ 7-ಡಿನಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈಗ ಅದೇ ನಿಯಮನ್ನು ತಿದ್ದುಪಡಿ ಮಾಡಲಾಗುತ್ತಿದ್ದು, ಮೀಸಲಾದ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಎಸ್‌ಸಿ ಮತ್ತು ಎಸ್‌ಟಿ ಮೀಸಲಿಗೆ ಇದ್ದ ಸುಮಾರು 10 ಸಾವಿರ ಕೋಟಿ ರೂ. ಬಳಸಿತ್ತು. ಈ ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್, ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿ ಮತ್ತು ಎಸ್‌ಟಿ ಮೀಸಲು ಹಣ ಬಳಕೆ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಸಾರ ಮಾಡಿತ್ತು.

ಎಸ್‌ಸಿಎಸ್‌ಪಿಟಿ ಟಿಎಸ್‌ಪಿ ಎಂದರೆ ಏನು?

ಷೆಡ್ಯೂಲ್‌ ಕ್ಯಾಸ್ಟ್‌ ಸಬ್‌‌ ಪ್ಲಾನ್‌‌ (ಎಸ್‌‌ಸಿಎಸ್‌ಪಿ). ಟ್ರೈಬಲ್‌ ಸಬ್‌ ಪ್ಲಾನ್‌‌( ಟಿಎಸ್‌‌‌ಪಿ). ಎಸ್‌‌ಸಿಎಸ್‌‌ಟಿ ಸಮುದಾಯಕ್ಕೆ ನೇರವಾಗಿ ತಲುಪುವ ಯೋಜನೆ ರೂಪಿಸಬೇಕು. ಉದಾಹರಣೆಗೆ ಎಸ್‌‌ಸಿಎಸ್‌ಟಿ ಮಕ್ಕಳಿಗೆ ವಿದ್ಯಾರ್ಥಿವೇತನ, ಎಸ್‌ಸಿಎಸ್‌ಟಿಗಳಿಗೆ ಮನೆ ನಿರ್ಮಾಣ, ಬೋರ್‌ವೆಲ್‌‌, ಕಾಲನಿಗಳಲ್ಲಿ ಮೂಲಸೌಕರ್ಯ, ಇತ್ಯಾದಿ… ಎಲ್ಲ ಸಾರ್ವಜನಿಕರಿಗೂ ಉಪಯೋಗವಾಗುವ ಸಾರ್ವತ್ರಿಕ ಯೋಜನೆಗಳಿಗೆ ಈ ಹಣವನ್ನು ಬಳಸುವಂತಿಲ್ಲ. ಉದಾಹರಣೆಗೆ, ಊರಿನ ರಸ್ತೆ ನಿರ್ಮಿಸಿ ಇದರಲ್ಲಿ ಇಎಸ್‌ಸಿಎಸ್‌ಟಿಗಳೂ ಓಡಾಡುತ್ತಾರೆ ಎನ್ನುವುದು, ಉಚಿತ ಬಸ್‌‌ನಲ್ಲಿ ಎಸ್‌ಸಿಎಸ್‌‌ಟಿ ಮಹಿಳೆಯರೂ ಓಡಾಡುತ್ತಾರೆ ಎನ್ನುವುದು, ಇತ್ಯಾದಿ. ಕಾಯ್ದೆಯಲ್ಲಿ 7(ಡಿ) ಎಂಬ ಕಲಂ ಅನ್ವಯ, ಸಾರ್ವತ್ರಿಕ ಯೋಜನೆಗಳನ್ನೂ ಎಸ್‌ಸಿಎಸ್‌ಟಿಗಳು ಬಳಸುತ್ತಾರೆ ಎಂದು ಭಾವಿಸಿ (ಡೀಮ್ಡ್‌) ಒಂದಷ್ಟು ಎಸ್‌ಸಿಎಸ್‌ಟಿ ಮೀಸಲು ನಿಧಿಯಿಂದ ಪಡೆಯಲು ಅವಕಾಶವಿದೆ.

-ಕರ್ನಾಟಕದಲ್ಲಿ ಎಸ್‌‌ಸಿಎಸ್‌‌ಪಿ ಟಿಎಸ್‌‌ಪಿ ಅನುದಾನ ಒಟ್ಟು ಬಜೆಟ್‌‌‌ನ ಶೇ.24 ಇರುತ್ತದೆ. ಈ ವರ್ಷ ಬಜೆಟ್‌‌ನಲ್ಲಿ 31 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಎಸ್‌ಸಿಎಸ್‌ಟಿ ಹಣವನ್ನು ಗ್ಯಾರಂಟಿಗೆ ಬಳಸಬಾರದು ಎಂದು ಬಿಜೆಪಿ ಈ ಹಿಂದೆ ಆಕ್ಷೇಪಿಸಿತ್ತು.

2013ರ ಕಾಂಗ್ರೆಸ್ ಸರ್ಕಾರದಿಂದ ಜಾರಿ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಅಧಿನಿಯಮ ಜಾರಿ ಮಾಡಿತ್ತು. ಇದರ ಅನುಸಾರ ಜನಸಂಖ್ಯೆಗೆ ತಕ್ಕಂತೆ ಆ ಸಮುದಾಯಗಳಿಗೆ ಬಜೆಟ್‌ನಲ್ಲಿ ಹಣ ಮೀಸಲು ಮಾಡಲಾಯಿತು. ಅದು ಸುಮಾರು ಬಜೆಟ್‍‌ನ ಶೇಕಡಾ 23 ರಷ್ಟು ಆಗುತ್ತಿತ್ತು. ಮೀಸಲಾರಿಸಿದ ಹಣ ಆ ವರ್ಷದಲ್ಲಿ ಖರ್ಚು ಆಗದಿದ್ರೆ ಅದು ಮುಂದಿನ ವರ್ಷಕ್ಕೆ ಕ್ಯಾರಿ ಓವರ್ ಆಗುತ್ತಿತ್ತು. ಇದರಿಂದ ಸಿದ್ದರಾಮಯ್ಯ ಸರ್ಕಾರದ ಮೊದಲ ಅವಧಿಯ ನಾಲ್ಕು ವರ್ಷಗಳ ಕಾಲ ಹಣ ಖರ್ಚು ಆಗದೇ ಉಳಿಯಿತು. ಹೀಗಾಗಿ ಇದನ್ನ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲು ತೀರ್ಮಾನ ಮಾಡಿದ ಅಂದಿನ ಕ್ಯಾಬಿನೆಟ್ 7 ನಿಯಮಕ್ಕೆ ತಿದ್ದುಪಡಿ ತಂದು 7-ಡಿ ಸೇರಿಸಲಾಯಿತು. ಆ ಮೂಲಕ ವೆಚ್ಚವಾಗದೇ ಉಳಿದ ಹಣವನ್ನು ಸಾರ್ವಜನಿಕ ಹಿತಾಸಕ್ತಿ ಯೋಜನೆಗಳಿಗೆ ಈ ಹಣ ಬಳಸಬಹುದು ಅನ್ನೋ ತಿದ್ದುಪಡಿ ತರಲಾಯಿತು

ಬಳಿಕ ಬಂದ ಸಮ್ಮಿಶ್ರ ಸರ್ಕಾರ, ಯಡಿಯೂರಪ್ಪ, ಬೊಮ್ಮಯಿ ಸರ್ಕಾರದಲ್ಲಿ ಈ ಹಣವನ್ನ ನೀರಾವರಿ ಸೇರಿದಂತೆ ಫ್ಲವರ್ ಹಾಗೂ ಇಂದಿನ ಸರ್ಕಾರ ಗ್ಯಾರೆಂಟಿಗಳಿಗೆ ಬಳಸಲಾಯಿತು. ಹೀಗಾಗಿ ಇದು ದೊಡ್ಡ ಸುದ್ದಿಯಾದ ಬೆನ್ನಲ್ಲೇ ತಿದ್ದುಪಡಿ ತರಲು ಮುಂದಾಗಿದೆ. ಸರ್ಕಾರ ಇದು ಸಮುದಾಯಕ್ಕೆ ರೀಚ್ ಆಗಿ ಎಚ್ಚೇತ್ತುಕೊಂಡ್ರೆ ಲೋಕಸಭಾ ಚುನಾವಣೆಯಲ್ಲಿ ನಮ್ಮ ವಿರುದ್ಧ ನಿಲ್ಲಬಹುದು ಅನ್ನೋ ಲೆಕ್ಕಾಚಾರ ಹಾಕಿ ಈಗ ತಿದ್ದುಪಡಿ ಮಾಡುತ್ತಿದೆ.

ಡಿಕೆಶಿ ಮೇಲಿನ ಸಿಬಿಐ ಕೇಸ್ ವಾಪಸ್ ತೆಗೆದುಕೊಳ್ಳುವ ವಿಚಾರ.

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಮೇಲಿನ ಸಿಬಿಐ ಕೇಸ್ ವಾಪಸ್ ತೆಗೆದುಕೊಳ್ಳುವ ನಿರ್ಧಾರವನ್ನು ಇಂದಿನ ಸಚಿವ ಸಂಪುಟದ ಸಭೆಯಲ್ಲಿ ಕ್ರಮ ಬದ್ಧ ಮಾಡಲು ಒಪ್ಪಿಗೆ ನೀಡಲಾಯಿತು. ಕಳೆದ ಬಾರಿ ಸಂಪುಟ ಸಭೆಯಲ್ಲಿ ಸಿಬಿಐಗೆ ವಹಿಸಿದ್ದ ಕೇಸ್ ವಾಪಸ್ ಪಡೆಯಲು ನಿರ್ಧರಿಸಲಾಗಿತ್ತು.

ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್

ರೈತರು ನೀರಾವರಿ ಪಂಪ್ ಸೆಟ್‌ಗಳಿಗೆ ಸ್ವಂತ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಬೇಕು ಎಂಬ ಆದೇಶ ವಿಚಾರ ಮುಂದಿನ ಸಂಪುಟ ಸಭೆಯಲ್ಲಿ ತಗೆದುಕೊಳ್ಳಲು ನಿರ್ಧಾರ ಮಾಡಲಾಯಿತು.ಸ್ವಂತ ವೆಚ್ಚದಲ್ಲಿ ವಿದ್ಯುತ್ ಸಂಪರ್ಕದ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ನಿರ್ಣಯಕ್ಕೆ ಸ್ಚಪಕ್ಷ ಸೇರಿದಂತೆ ವಿಪಕ್ಷಗಳು ಮತ್ತು ರೈತ ಸಂಘಟನೆಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದವು. ಸದ್ಯಕ್ಕೆ ಈ ನಿರ್ಣಯವನ್ನ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ.

ಈ ಸುದ್ದಿಯನ್ನು ಓದಿ: Karnataka Drought: ಬರ ಪರಿಹಾರ ಭಿಕ್ಷೆಯಲ್ಲ, ಅದು ರಾಜ್ಯದ ತೆರಿಗೆ ಹಣ ಎಂದ ಸಿದ್ದರಾಮಯ್ಯ

Continue Reading
Advertisement
Raja Marga Father and Daughter
ಅಂಕಣ12 mins ago

Raja Marga Column : 13 ವರ್ಷದ ನನ್ನ ಮಗಳು ಒಮ್ಮಿಂದೊಮ್ಮೆಗೆ ಮಂಕಾಗಿದ್ದು ಯಾಕೆ?

Hair Care Tips
ಆರೋಗ್ಯ30 mins ago

Hair Care Tips: ಕೂದಲು ಚೆನ್ನಾಗಿರಬೇಕೆಂದರೆ ಯಾವ ಆಹಾರ ಸೇವಿಸಬೇಕು?

Heavy Rain warning In karnataka
ಉಡುಪಿ60 mins ago

Karnataka Weather : ಬಟ್ಟೆ ತೊಳೆಯೋಕೆ ವೀಕೆಂಡ್‌ವರೆಗೂ ಕಾಯ್ಬೇಡಿ; ಇನ್ನೊಂದು ವಾರ ಭಾರಿ ಮಳೆ!

Vistara editorial, Let's take precautions for pneumonia infection
ಆರೋಗ್ಯ1 hour ago

ವಿಸ್ತಾರ ಸಂಪಾದಕೀಯ: ನ್ಯುಮೋನಿಯಾ ಸೋಂಕಿನ ಬಗ್ಗೆ ಈಗಲೇ ಎಚ್ಚರ ವಹಿಸೋಣ

How To Remove Tea Stains From Clothes
ಲೈಫ್‌ಸ್ಟೈಲ್1 hour ago

How To Remove Tea Stains From Clothes: ಬಟ್ಟೆಯ ಮೇಲಿನ ಚಹಾ ಕಲೆಯನ್ನು ತೆಗೆಯುವ ಸುಲಭದ ಉಪಾಯ ಇದು!

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Vistara News impact, Governmet to scrap 7 d rule of SCSP and TSP act
ಕರ್ನಾಟಕ8 hours ago

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

WPL Auction 2024
ಕ್ರಿಕೆಟ್8 hours ago

WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 2 ದಿನ ಬಾಕಿ

Supreme Court will deliver judgment on Dece 11 about J and K Special Status scrap
ಕೋರ್ಟ್8 hours ago

ಆರ್ಟಿಕಲ್ 370 ರದ್ದು ಸಿಂಧುವೇ?; ಡಿ.11ಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು

Pro Kabaddi
ಕ್ರೀಡೆ9 hours ago

Pro Kabaddi: ಗುಜರಾತ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಪಾಟ್ನಾ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ13 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ14 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ19 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ1 day ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

ಟ್ರೆಂಡಿಂಗ್‌