Dina Bhavishya: ಜತೆಗಿದ್ದು ನಿಮ್ಮ ವಿರುದ್ಧವೇ ಪಿತೂರಿ ಮಾಡ್ತಾರೆ! ಹುಷಾರ್‌ - Vistara News

ಪ್ರಮುಖ ಸುದ್ದಿ

Dina Bhavishya: ಜತೆಗಿದ್ದು ನಿಮ್ಮ ವಿರುದ್ಧವೇ ಪಿತೂರಿ ಮಾಡ್ತಾರೆ! ಹುಷಾರ್‌

Dina Bhavishya : ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷದ ದಶಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Dina Bhavishya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಮೀನ ರಾಶಿಯಿಂದ ಬುಧವಾರ ಮಧ್ಯಾಹ್ನ 12:19ಕ್ಕೆ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ಕನ್ಯಾ, ಧನಸ್ಸು, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರು ವೈವಾಹಿಕ ಜೀವನದಲ್ಲಿ ವಿರಸ ಉಂಟಾಗುವ ಸಾಧ್ಯತೆ ಇದೆ, ಹೀಗಾಗಿ ಮಾತಿನಲ್ಲಿ ಹಿಡಿತವಿರಲಿ. ಮಿಥುನ ರಾಶಿಯವರ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಹೀಗಾಗಿ ಆತುರದಲ್ಲಿ ಮಾತನಾಡಿ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (22-11-2023)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ
ತಿಥಿ: ದಶಮಿ 23:03 ವಾರ: ಬುಧವಾರ
ನಕ್ಷತ್ರ: ಪೂರ್ವಾ ಭಾದ್ರಪದ 18:36 ಯೋಗ: ಹರ್ಷಣ 14:44
ಕರಣ: ತೈತುಲ 12:06 ಅಮೃತ ಕಾಲ: ಬೆಳಗ್ಗೆ 11:05 ರಿಂದ ಮಧ್ಯಾಹ್ನ 12:35 ರವರೆಗೆ

ಸೂರ್ಯೋದಯ : 06:29  ಸೂರ್ಯಾಸ್ತ : 05:55

ರಾಹುಕಾಲ : ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಖರ್ಚು ಹೆಚ್ಚಾಗಲಿದೆ. ಹಿರಿಯರ ಮಾರ್ಗದರ್ಶನ ಸಿಗಲಿದೆ. ಅತಿಥಿಗಳ ಆಗಮನ ನಿಮ್ಮ ಯೋಚಿತ ಕಾರ್ಯ ವಿಳಂಬವಾಗುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ವಿರಸ ಉಂಟಾಗುವ ಸಾಧ್ಯತೆ ಇದೆ. ಮಾತಿನಲ್ಲಿ ಹಿಡಿತವಿರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವೃಷಭ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ಪ್ರಶಂಸೆ ಸಿಗುವುದು. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಸಂಬಂಧವಿರದ ವಿಷಯಗಳಿಗೆ ಕಿವಿಗೊಡವುದು ಬೇಡ. ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಹಳೆಯ ವಿಚಾರಗಳನ್ನು ಕೆದಕಿ ಗಾಯ ಮಾಡಿಕೊಳ್ಳುವುದು ಬೇಡ. ಆರೋಗ್ಯ ಮಧ್ಯಮ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಮಿಥುನ: ನಿಮ್ಮ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಹೀಗಾಗಿ ಆತುರದಲ್ಲಿ ಮಾತನಾಡಿ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಅನಿರೀಕ್ಷಿತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಉತ್ತಮ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕಟಕ: ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಖರ್ಚು ಹೆಚ್ಚಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಅತಿಥಿಗಳ ಆಗಮನ ಹರ್ಷ ತರಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಕಿರಿಕಿರಿಯುನ್ನಂಟಾಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಸಿಂಹ: ನಿಮ್ಮ ಮಾತುಗಳು ಇತರರನ್ನು ಆಕರ್ಷಸಲಿದೆ. ನಾಲಿಗೆ ರುಚಿಗೆ ಮಾರು ಹೋಗಿ ಆರೋಗ್ಯ ಹಾಳು ಮಾಡಿಕೊಳ್ಳುವುದು ಬೇಡ, ಮಿತಿಯಿರಲಿ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಸಂಗಾತಿಯ ಮಾತುಗಳು ಮಧುರವೇನಿಸಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ: ನಿಮ್ಮ ತ್ಯಾಗದ ಮನೋಭಾವ ನಿಮಗೆ ಸಂತಸ ತರಲಿದೆ. ಯಾರೊಂದಿಗೂ ದಿನದ ಮಟ್ಟಿಗೆ ಹಣಕಾಸಿನ ವ್ಯವಹಾರ ಮಾಡಬೇಡಿ, ವಿನಾಕಾರಣ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಕುಟುಂಬದಲ್ಲಿ ಅನಾವಶ್ಯಕ ಮಾತುಗಳಿಂದ ಜಗಳವಾಗಬಹುದು, ಮೌನದಿಂದ ವರ್ತಿಸಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಇತರರು ನಿಮ್ಮ ಕಾರ್ಯಗಳನ್ನು ಪ್ರಶಂಸೆ ಮಾಡುವರು. ಹಣಕಾಸಿನ ಹರಿವು ಹೆಚ್ಚಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಸಹದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ ಇದೆ ಎಚ್ಚರಿಕೆ ಇರಲಿ. ವಿನಾಕಾರಣ ಜಗಳ ಮಾಡಿ ಮನಸ್ಸು ಕೆಡಿಸಿಕೊಳ್ಳುವುದು ಬೇಡ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವೃಶ್ಚಿಕ: ಇತರರನ್ನು ಟೀಕಿಸಲು ನಿಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡುವುದು ಬೇಡ. ಅನಾವಶ್ಯಕ ವಿಚಾರಕ್ಕೆ ಆರೋಗ್ಯ ಹಾಳು ಮಾಡಿಕೊಳ್ಳುವುದು ಬೇಡ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಶುಭ.ಕುಟುಂಬದಲ್ಲಿ ಹಳೆಯ ವಿಚಾರಗಳು ಕಲಹ ಸೃಷ್ಟಿಸಬಹುದು, ಮಾತು ಮಿತವಾಗಿರಲಿ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಕುಟುಂಬದ ಸದಸ್ಯರೊಂದಿಗೆ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಅಮೂಲ್ಯ ವಸ್ತುಗಳ ಮೇಲೆ ಗಮನವಿರಲಿ. ದಿನದ ಮಟ್ಟಿಗೆ ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ವಿನಾಕಾರಣ ನಿಮ್ಮ ಸಿಟ್ಟು ಸಂಗಾತಿಯ ಮೇಲೆ ಹಾಕಿ, ಕುಟುಂಬದ ವಾತಾವರಣ ಕೆಡಿಸುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 2

Horoscope Today

ಮಕರ: ನಿಮ್ಮ ಕೋಪದ ಸ್ವಭಾವದಿಂದ ಇತರರೊಂದಿಗೆ ವಾದಕ್ಕೆಳಿಯಬೇಡಿ. ಆತುರದಲ್ಲಿ ಅತಿರೇಕದ ಮಾತುಗಳು ಜಗಳ ತಂದಿತು. ಆರೋಗ್ಯದ ಕಡೆಗೆ ಗಮನವಿರಲಿ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಆತ್ಮೀಯರೊಂದಿಗೆ ಪ್ರಯಾಣಿಸುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಕುಂಭ: ಕೆಲಸಕ್ಕೆ ಹಾಕಿದ ಶ್ರಮ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಿ.ಆತುರದಲ್ಲಿ ಅತಿರೇಕದ ಮಾತುಗಳನ್ನಾಡಬೇಡಿ, ತಾಳ್ಮೆಯಿಂದ ಮಾತನಾಡಿ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಮೀನ: ರಹಸ್ಯ ಕಾರ್ಯಗಳು ಯಶಸ್ಸು ತಂದು ಕೊಡಲಿವೆ. ಕುಟುಂಬಕ್ಕೆ ಸಮಯವನ್ನು ನೀಡುವಿರಿ. ವಿನಾಕಾರಣ ಕೋಪಗೊಂಡು ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಖರ್ಚು ಹೆಚ್ಚಾಗಲಿದೆ. ಸಂಗಾತಿ ನಿಮ್ಮ ಮನಸ್ಸಿನ ಭಾವನೆಗಳಿಗೆ ಸ್ಪಂದಿಸುವಳು. ಮಧುರ ಪ್ರೇಮ ಅಂಕುರವಾಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಸಿನಿಮಾ

Deepak Aras: ನಟಿ ಅಮೂಲ್ಯ ಸಹೋದರ ಚಲನಚಿತ್ರ ನಿರ್ದೇಶಕ ದೀಪಕ್ ಅರಸ್ ಅನಾರೋಗ್ಯದಿಂದ ನಿಧನ

Deepak Aras: ನಟಿ ಅಮೂಲ್ಯ ಸಹೋದರ ಚಲನಚಿತ್ರ ನಿರ್ದೇಶಕ ದೀಪಕ್ ಅರಸ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

VISTARANEWS.COM


on

By

Actress Amulyas brother film director Deepak aras passes away
Koo

ಬೆಂಗಳೂರು: ನಟಿ ಅಮೂಲ್ಯ ಸಹೋದರ, ಚಲನಚಿತ್ರ ನಿರ್ದೇಶಕ ದೀಪಕ್ ಅರಸ್ (46) ಬದುಕಿನ ಪಯಣ ಮುಗಿಸಿದ್ದಾರೆ. ದೀರ್ಘ ಅನಾರೋಗ್ಯದಿಂದ ಬಳಲುತ್ತಿದ್ದ ದೀಪಕ್ (Deepak Aras) ಶುಕ್ರವಾರ ಬೆಳಗ್ಗೆ 6 ಗಂಟೆಗೆ ನಿಧನರಾಗಿದ್ದಾರೆ. ಮನಸಾಲಜಿ, ಶುಗರ್ ಫ್ಯಾಕ್ಟರಿ ಸಿನಿಮಾಗಳನ್ನು ದೀಪಕ್ ಅರಸ್ ನಿರ್ದೇಶಿಸಿದ್ದರು. 3 ದಿನಗಳಿಂದ ಕೋಮದಲಿದ್ದ ದೀಪಕ್ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಮಲ್ಲೇಶ್ವರಂ ಪೈಪ್ ಲೈನ್ ರಸ್ತೆಯಲ್ಲಿರುವ ಮನೆ ಬಳಿ ದೀಪಕ್ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಶುಕ್ರವಾರ ಮಧ್ಯಾಹ್ನ 4 ಗಂಟೆಗೆ ಸುಮ್ಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ದೀಪಕ್ ಸಹೋದರ ಪವನ್ ಮಾಹಿತಿ ನೀಡಿದ್ದಾರೆ. ಅಣ್ಣ ದೀಪಕ್ ಕುರಿತು ನಟಿ ಅಮೂಲ್ಯ ಪೋಸ್ಟ್ ಹಾಕಿದ್ದಾರೆ. ದೀಪಣ್ಣ ಇಂದು ಬೆಳಗ್ಗೆ 6ಗಂಟೆಗೆ ನಮೆಲ್ಲರನ್ನು ಅಗಲಿದ್ದಾರೆ.

ಮದುವೆ ಆಗಿ ಎರಡು ಮಕ್ಕಳಿರುವ ದೀಪಕ್‌ಗೆ ಕಿಡ್ನಿ ಫೆಲ್ಯುರ್‌ ಆಗಿತ್ತು, ಡಯಾಲಿಸಿಸ್ ಮಾಡಿಸುತ್ತಿದ್ದರು. ಆರ್ ಆರ್ ನಗರದಲ್ಲಿರುವ ಬಿಜಿಎಸ್ ಆಸ್ಪತ್ರೆಯಲ್ಲಿ ದೀಪಕ್ ಅರಸ್ ಕೊನೆಯುಸಿರೆಳೆದಿದ್ದಾರೆ.

Continue Reading

ಬೆಂಗಳೂರು

Fraud Case : ಲೋಕಸಭೆ ಚುನಾವಣೆಗೆ ಟಿಕೆಟ್‌ ಕೊಡಿಸುವುದಾಗಿ ಕೋಟಿ ರೂ. ಲೂಟಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹೋದರನ ವಿರುದ್ಧ ಎಫ್‌ಐಆರ್‌ ದಾಖಲು

Fraud Case : ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಮಾಜಿ ಶಾಸಕನಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಸಹೋದರ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಕೊಟ್ಟ ಹಣ ಕೇಳಿದರೆ ಹಲ್ಲೆ ಮಾಡಿ, ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ.

VISTARANEWS.COM


on

By

Fraud case Union Minister Pralhad Joshis brother duped of ticket for Lok Sabha polls
ಮಾಜಿ ಶಾಸಕ ದೇವಾನಂದ್ ಚೌಹಾಣ್ ಹಾಗೂ ಗೋಪಾಲ್‌ ಜೋಶಿ
Koo

ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಸಹೋದರನ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಪ್ರಲ್ಹಾದ ಜೋಶಿ ಸಹೋದರ ಗೋಪಾಲ್‌ ಜೋಶಿ ಎಂಬುವವರು ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಬರೋಬ್ಬರಿ 2 ಕೋಟಿ ರೂ. ವಂಚಿಸಿರುವುದಾಗಿ (Fraud Case) ಎಫ್‌ಐಆರ್‌ ದಾಖಲಾಗಿದೆ. ಗೋಪಾಲ್ ಜೋಶಿ ಸೇರಿದಂತೆ ಸಹೋದರಿ ವಿಜಯಲಕ್ಷ್ಮಿ ಜೋಶಿ, ಪುತ್ರ ಅಜಯ್ ಜೋಶಿ ವಿರುದ್ಧವೂ ಕೇಸ್ ದಾಖಲಾಗಿದೆ.

ಮಾಜಿ ಶಾಸಕ ದೇವಾನಂದ್ ಚೌಹಾಣ್ ಅವರ ಪತ್ನಿ ಸುನೀತಾ ಚೌಹಾಣ್ ಎಂಬುವರಿಂದ ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. 2018ರಲ್ಲಿ ನಾಗಠಾಣಾ ಕ್ಷೇತ್ರದಿಂದ ಜೆಡಿಎಸ್‌ (JDS)ದೇವಾನಂದ್ ಚೌಹಾಣ್ ಶಾಸಕರಾಗಿದ್ದರು. 2023ರ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ದೇವಾನಂದ್ ಚೌಹಾಣ್ ಸೋತಿದ್ದರು. ಬಳಿಕ ಪರಿಚಯಸ್ಥ ಶೇಖರ್ ನಾಯಕ್ ಮೂಲಕ ಗೋಪಾಲ್ ಜೋಶಿ ಪರಿಚಯವಾಗಿದ್ದರು. ಮಾರ್ಚ್ ಮೊದಲ ವಾರ ಹುಬ್ಬಳ್ಳಿಯಲ್ಲಿ ಗೋಪಾಲ್ ಜೋಶಿ ಚೌಹಾಣ್ ದಂಪತಿಯನ್ನು ಭೇಟಿ ಮಾಡಿದ್ದರು. ಈ ವೇಳೆ 2024ರ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿದ್ದರು. ನನ್ನ ತಮ್ಮನಿಗೆ ಕೇಂದ್ರ ಸರ್ಕಾರದಲ್ಲಿ ವರ್ಚಸ್ಸು ಚೆನ್ನಾಗಿದೆ. ಪ್ರಹ್ಲಾದ್ ಜೋಶಿ ಹೇಳಿದಂತೆ ಮೋದಿ, ಅಮಿತ್ ಶಾ ಕೇಳುತ್ತಾರೆ. ಹೀಗಾಗಿ ಬಿಜಾಪುರ ಕ್ಷೇತ್ರದಿಂದ ನಿಮಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿದ್ದರು.

ಗೋಪಾಲ್ ಜೋಶಿ ಟಿಕೆಟ್‌ಗೆ ಬರೋಬ್ಬರಿ 5 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಚೇರಿಯಲ್ಲಿಯೇ ಡೀಲ್ ನಡೆದಿತ್ತು. ಆದರೆ 5 ಕೋಟಿ ರೂ.‌ಸಾಧ್ಯವಿಲ್ಲ ಎಂದು ಚೌಹಣ್ ದಂಪತಿ ಹೊರಟು ಹೋಗಿದ್ದರು ಎನ್ನಲಾಗಿದೆ. ಬಳಿಕ ಗೋಪಾಲ್ ಜೋಶಿ ಮತ್ತು ಶೇಖರ್ ಇಬ್ಬರು ಚೌಹಣ್ ದಂಪತಿ ಮನವೊಲಿಸಿದ್ದರು. ಸದ್ಯಕ್ಕೆ 25 ಲಕ್ಷ ರೂ. ಕೊಟ್ಟು ಉಳಿದ ಹಣಕ್ಕೆ ಚೆಕ್ ಕೊಡಿ ಎಂದಿದ್ದರಂತೆ. ಹೀಗಾಗಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಗೋಪಾಲ್ ಜೋಶಿ ಸಹೋದರಿ ವಿಜಯಲಕ್ಷ್ಮಿ ಮನೆಗೆ 25 ಲಕ್ಷ ರೂ. ಹಣವನ್ನು ತಂದು ಸುನೀತಾ ಚೌಹಣ್ ನೀಡಿದ್ದರು. ಆದರೆ ದೇವನಾಂದ್‌ಗೆ ಗೋಪಾಲ್ ಜೋಶಿ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸಲಿಲ್ಲ.

ಸುನೀತಾ ಚೌಹಾಣ್ ತಮ್ಮ 25 ಲಕ್ಷ ರೂ.‌ ಹಣ ನೀಡುವಂತೆ ಕೇಳಿದ್ದಾರೆ. ಹಣ ಕೇಳಿದರೆ 200 ಕೋಟಿ ರೂ. ಪ್ರಾಜೆಕ್ಟ್ ಹಣ ಬರಬೇಕು ಕೊಡುವುದಾಗಿ ಸಬೂಬು ನೀಡಿದ್ದಾರೆ. ಅಷ್ಟಲ್ಲದೇ ಗೋಪಾಲ್ ಜೋಶಿ, ಸುನೀತಾ ಬಳಿ ಮತ್ತೆ 1.75 ಕೋಟಿ ರೂ. ಹಣ ಕೇಳಿದ್ದರು. ಮುಂದಿನ ಚುನಾವಣೆಗೆ ಸಹಾಯ ಮಾಡುವುದಾಗಿ ಹಣ ಕೇಳಿದ್ದರು. ಈ ಮಾತನ್ನು ನಂಬಿ ಮತ್ತೆ 1.75 ಕೋಟಿ ಹಣವನ್ನು ವಿಜಯಲಕ್ಷ್ಮಿಗೆ ಸುನೀತಾ ಚೌಹಣ್ ನೀಡಿದ್ದರು. ಆದರೆ ಹಣ ಕೇಳಿದಾಗ ಸಬೂಬು ಗೋಪಾಲ್, ವಿಜಯಲಕ್ಷ್ಮಿ ಹೇಳುತ್ತಿದ್ದರು.

ಈ ವೇಳೆ ಗೋಪಾಲ್ ಜೋಶಿ ಪುತ್ರ ಅಜಯ್ ಜೋಶಿ ಹಣ ನಾನು ವಾಪಸ್ ಕೊಡುವುದಾಗಿ ಹೇಳಿದ್ದರು. ಆದರೆ ಯಾರು ಕೂಡ ಸುನೀತಾಗೆ ಹಣ ವಾಪಸ್ ನೀಡಿರಲಿಲ್ಲ. ಕಳೆದ ಆ. 1ರಂದು ವಿಜಯಲಕ್ಷ್ಮಿ ಮನೆ ಬಳಿ ಬಂದಿದ್ದ ಸುನೀತಾ, ಹಣ ಕೇಳಿದಾಗ, ಹಲ್ಲೆ ಮಾಡಿ, ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಪೊಲೀಸರ ಮೊರೆ ಹೋಗಿರುವ ಸುನೀತಾ ಚೌಹಣ್ ಬಸವೇಶ್ವರ ನಗರ ಠಾಣೆಯಲ್ಲಿ ವಂಚನೆ, ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

Continue Reading

ಭವಿಷ್ಯ

Dina Bhavishya : ಅತಿಯಾದ ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಪಿತೂರಿ ಮಾಡುವ ಜನರ ಬಗ್ಗೆ ಇರಲಿ ಎಚ್ಚರ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಿನ ಮಾಸ, ಕೃಷ್ಣ ಪಕ್ಷದ ಪಾಡ್ಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina bhavishya
Koo

ಚಂದ್ರನು ಶುಕ್ರವಾರವೂ ವೃಷಭ ರಾಶಿಯಲ್ಲೇ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ಮಿಥುನ, ಕಟಕ, ತುಲಾ, ವೃಶ್ಚಿಕ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಕಟಕ ರಾಶಿಯವರು ಬಿಡುವಿಲ್ಲದ ಕೆಲಸದಿಂದ ಆಯಾಸ ಇರಲಿದೆ. ಕುಟುಂಬದ ಸಂತಸ ಹೆಚ್ಚಿಸಲು ಪ್ರಯತ್ನ ಮಾಡುವಿರಿ. ಸಭೆ-ಸಮಾರಂಭಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಸ್ವಲ್ಪ ಖರ್ಚಿನ ದಿನವಿದು. ಬಹುದಿನಗಳ ಕನಸು ನನಸಾಗುವ ಸಮಯವಿದು. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (18-10-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಿನ ಮಾಸ, ಕೃಷ್ಣ ಪಕ್ಷ.
ತಿಥಿ: ಪಾಡ್ಯ 13:14 ವಾರ: ಶುಕ್ರವಾರ
ನಕ್ಷತ್ರ: ಅಶ್ವಿನಿ 13:25 ಯೋಗ: ವಜ್ರ 21:33
ಕರಣ: ಕೌಲವ 13:14 ಅಮೃತಕಾಲ: ಬೆಳಗ್ಗೆ 07:06 ರಿಂದ 08:31
ದಿನದ ವಿಶೇಷ: ಸಿಂಧಗೀ ಭೀಮಾಶಂಕರ ಆರಾಧನೆ

ಸೂರ್ಯೋದಯ : 06:10   ಸೂರ್ಯಾಸ್ತ : 05:59

ರಾಹುಕಾಲ: ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ
7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಹಣಕಾಸು ಪ್ರಗತಿಯಲ್ಲಿ ಸಾಧಾರಣವಾಗಿರಲಿದೆ. ಹೊಸದೊಂದು ವಸ್ತು ಖರೀದಿಯಿಂದ ಸಂತೋಷ ಇರಲಿದೆ. ಆರೋಗ್ಯದಲ್ಲಿ ಉತ್ತಮವಾಗಿರಲಿದೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಷಭ: ಶಾಂತ ಮನಸ್ಥಿತಿ ಉತ್ಸಾಹ ತುಂಬಿ ಕಾರ್ಯದಲ್ಲಿ ಯಶಸ್ಸು ಸಿಗುವುದು. ದಿನದ ಮಟ್ಟಿಗೆ ಖರ್ಚು ಹೆಚ್ಚು. ಪ್ರೀತಿ- ಪಾತ್ರರಿಂದ ಕಿರಿಕಿರಿ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣಲಿದೆ. ದಿನದ ಕೊನೆಯಲ್ಲಿ ಯಾವುದಾದರೂ ಸುದ್ದಿ ದುಃಖ ತರುವುದು. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 2

Horoscope Today

ಮಿಥುನ: ಜೀವನದಲ್ಲಿ ಅಭದ್ರತೆ ಮಾನಸಿಕ ಒತ್ತಡ ಉಂಟು ಮಾಡುವ ಸಾಧ್ಯತೆ ಇದೆ. ಹೂಡಿಕೆಗೆ ಸಂಬಂಧಿಸಿದ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕಛೇರಿ ಕೆಲಸಗಳು ನಿಧಾನವಾಗಿ ಸಾಗುವುದು. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕಟಕ: ಬಿಡುವಿಲ್ಲದ ಕೆಲಸದಿಂದ ಆಯಾಸ ಇರಲಿದೆ. ಕುಟುಂಬದ ಸಂತಸ ಹೆಚ್ಚಿಸಲು ಪ್ರಯತ್ನ ಮಾಡುವಿರಿ. ಸಭೆ-ಸಮಾರಂಭಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಸ್ವಲ್ಪ ಖರ್ಚಿನ ದಿನವಿದು. ಬಹುದಿನಗಳ ಕನಸು ನನಸಾಗುವ ಸಮಯವಿದು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಸಿಂಹ: ಆಪ್ತರು ನಿಮ್ಮ ತಾಳ್ಮೆ ಪರೀಕ್ಷಿಸುವವರು. ಯಾವುದೇ ವಿಷಯಗಳಲ್ಲಿ ದೃಢ ನಿರ್ಧಾರ, ರಾಜಿಯಾಗದ ಗುಣ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ದಿನದ ಮಧ್ಯಭಾಗದಲ್ಲಿ ಸ್ವಲ್ಪ ಮನೋ ಒತ್ತಡ ಇರಲಿದೆ. ಉದ್ಯೋಗ ಹಾಗೂ ಆರೋಗ್ಯದಲ್ಲಿ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ಕನ್ಯಾ: ಆಪ್ತರೊಂದಿಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುವಿರಿ. ಅತಿಯಾದ ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆರೋಗ್ಯ ಉತ್ತಮವಾಗಿರಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು ಸಾಧ್ಯತೆ ಇದೆ. ಕುಟುಂಬ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ನಿಮ್ಮ ಹಿಂದೆ ಪಿತೂರಿ ಮಾಡುವ ಜನರ ಬಗ್ಗೆ ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಆಹಾರದ ವ್ಯತ್ಯಾಸದಿಂದ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಆಪ್ತರೊಂದಿಗಿನ ಮಾತುಕತೆಯಲ್ಲಿ ವ್ಯತಿರಿಕ್ತವಾದ ಪರಿಣಾಮದಿಂದಾಗಿ ಜಗಳವಾಗುವ ಸಾಧ್ಯತೆ, ಆದಷ್ಟು ಮಾತು ನಿಯಂತ್ರಣದಲ್ಲಿರಲಿ. ಇದರ ಮಧ್ಯೆ ಉದ್ಯೋಗದ ಸ್ಥಳದಲ್ಲಿ ಕೌಶಲ್ಯದ ಕೆಲಸ ನಿಮಗೆ ಯಶಸ್ಸು ತಂದು ಕೊಡುವುದು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಅತಿಯಾದ ಒತ್ತಡದ ಕಾರ್ಯ ನಿಮ್ಮ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆ ಇದೆ. ಆಪ್ತರೊಂದಿಗೆ ಪ್ರಯಾಣ ಮಾಡುವ ವಿಚಾರವಾಗಿ ಚರ್ಚಿಸುವಿರಿ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ಮಕರ: ನಿಸ್ಪೃಹ ಮನೋಭಾವದ ಕಾರ್ಯ ಸಿದ್ಧಿ ಮಾಡುವುದು. ಈ ಹಿಂದೆ ಮಾಡಿದ ಹೂಡಿಕೆ ವ್ಯವಹಾರವು ಇಮ್ಮಡಿ ಲಾಭ ತರುವ ಸಾಧ್ಯತೆಗಳು ಹೆಚ್ಚು. ಅನಗತ್ಯವಾಗಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಕುಂಭ: ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಅಗತ್ಯ. ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಇರುವವರು ಹೆಚ್ಚು ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು. ವ್ಯಾಪಾರದಲ್ಲಿ ಪ್ರಗತಿ ಇರಲಿದೆ. ಹೊಸದಾಗಿ ಕಾರ್ಯ ಪ್ರಾರಂಭಿಸುವುದು ದಿನದ ಮಟ್ಟಿಗೆ ಬೇಡ. ಜೀವನದ ಭವಿಷ್ಯದ ಬಗೆಗೆ ಅತಿಯಾಗಿ ಚಿಂತಿಸಿ ಮನಸ್ಥಿತಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 9

Horoscope Today

ಮೀನ: ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯದಿಂದ ಮಾನಸಿಕ ಅಸಮತೋಲನ. ನಡೆದು ಹೋದ ಘಟನೆಗಳ ಬಗ್ಗೆ ಚಿಂತಿಸಿ ಫಲವಿಲ್ಲ.ಅತಿಥಿಗಳ ಆಗಮನ ಹರ್ಷ ತರುವುದು. ಉದ್ಯೋಗದ ಬಗ್ಗೆ ಸಾಧಾರಣವಾಗಿರಲಿದೆ . ಕೌಟುಂಬಿಕ ವ್ಯಾಜ್ಯಗಳು ಹುಟ್ಟುವ ಸಾಧ್ಯತೆ ಇದೆ. ಕೌಟಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 6

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಗದಗ

Lakshmeshwara Town: ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್; ಅ.19ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್‌ಗೆ ಶ್ರೀರಾಮಸೇನೆ ಕರೆ

Lakshmeshwara Town : ನ್ಯಾಯ ಕೇಳಲು ಹೋದ ಗೋಸಾವಿ ಸಮುದಾಯದ ಜನರಿಗೆ ಲಕ್ಷ್ಮೇಶ್ವರ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಲಕ್ಷ್ಮೇಶ್ವರ ಪಿಎಸ್ಐ ಈರಣ್ಣ ರಿತ್ತಿ ಅವರು ಏಕಪಕ್ಷಿಯಗಾಗಿ ನಡೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಲಾಠಿ ಚಾರ್ಜ್ ಪ್ರಕರಣ ಖಂಡಿಸಿ, ಶ್ರೀರಾಮಸೇನೆ ಲಕ್ಷ್ಮೇಶ್ವರ ಬಂದ್‌ಗೆ ಕರೆ ನೀಡಿದ್ದು, ಅಕ್ಟೋಬರ್ 19 ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಮತ್ತಷ್ಟು ಬಿಸಿ‌ ಮುಟ್ಟಿಸಲು ಸಜ್ಜಾಗಿದೆ.

VISTARANEWS.COM


on

By

Gosavi samaj lathicharged Sri Ram Sene calls for bandh in Lakshmeshwara town on October 19
Koo

ಗದಗ: ಲಕ್ಷ್ಮೇಶ್ವರ ಪಟ್ಟಣವನ್ನು (Lakshmeshwara Town) ಬಂದ್‌ ಮಾಡುವುದು ಖಚಿತ ಎಂದು ಶ್ರೀರಾಮ ಸೇನೆ ಪಣ ತೊಟ್ಟಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್ ಪ್ರಕರಣ ಖಂಡಿಸಿ, ಶ್ರೀರಾಮಸೇನೆ ಲಕ್ಷ್ಮೇಶ್ವರ ಬಂದ್‌ಗೆ ಕರೆ ನೀಡಿದ್ದು, ಅಕ್ಟೋಬರ್ 19 ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಮತ್ತಷ್ಟು ಬಿಸಿ‌ ಮುಟ್ಟಿಸಲು ಸಜ್ಜಾಗಿದೆ.

ಗುರುವಾರ ಗದಗನ ಪತ್ರಿಕಾ ಭವನದಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಶ್ರೀರಾಮಸೇನೆ ರಾಜ್ಯ‌ ಕಾರ್ಯದರ್ಶಿ ರಾಜು ಖಾನಪ್ಪನವರ, ದಸರಾ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರಿಂದ ಗೋಸಾವಿ ಸಮಾಜದ ಯುವಕರ ಮೇಲೆ ಹಲ್ಲೆಯಾಗಿದೆ. ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್ ಆಗಿದೆ. ಇದೆಲ್ಲದಕ್ಕೂ‌ ಕಾರಣ, ಠಾಣೆಯ ಪಿಎಸ್ಐ ಈರಣ್ಣ ರಿತ್ತಿ ಆಗಿದ್ದು, ಅವರನ್ನು ಕೂಡಲೇ‌ ಅಮಾನತು ಮಾಡುವಂತೆ ಒತ್ತಾಯಿಸಿದರು.

ಇನ್ನು ಈ ಬಂದ್ ಕರೆ ವಿರೋಧಿಸಿ ಮುಸ್ಲಿಂ ಹಾಗೂ ಹಿಂದೂ ಸಮಾಜದ ಮುಖಂಡರು ಸುದ್ದಿಗೋಷ್ಠಿ ನಡೆಸಿ ವಿರೋಧ ಮಾಡಿದ್ದಾರೆ. ಆದರೆ ಅ.19 ರಂದು ಲಕ್ಷ್ಮೇಶ್ವರ ಬಂದ್ ಮಾಡೋದಕ್ಕೆ ಸ್ಥಳಿಯರೇ ನಮಗೆಲ್ಲ ಬೆಂಬಲ ನೀಡುತ್ತಿದ್ದಾರೆ. ಬಂದ್‌ಗೆ ವಿರೋಧಿಸುತ್ತಿರುವವರು ಯಾರೂ ಸಹ ಸ್ಥಳೀಯ ನಾಯಕರಲ್ಲ. ಅವರೆಲ್ಲ ಗ್ಯಾಂಬ್ಲರ್ ಗಳು. ಇವರು ಮಾಡುವ ದಂಧೆಗೆಲ್ಲ ಪಿಎಸ್ಐ ಈರಣ್ಣ ರಿತ್ತಿ ಬೆಂಬಲ ಇದೆ.‌ ಹೀಗಾಗಿ ಪಿಎಸ್‌ಐ ಪರವಾಗಿ ಇವರೆಲ್ಲ ನಿಂತಿದ್ದಾರೆ.‌ ಅದೇನೆ ಇರಲಿ,‌ ನಾವು ಮಾತ್ರ ಬಂದ್ ಮಾಡುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಹೇಳಿದ್ದರು.

ಏನಿದು ಘಟನೆ?

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ದಸರಾ ಅಂಗವಾಗಿ ದುರ್ಗಾದೇವಿ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯುತ್ತಿತ್ತು. ಗೋಸಾವಿ ಸಮುದಾಯ ಸಂಭ್ರಮ ಸಡಗರದಿಂದ ಭಾಗಿಯಾಗಿದ್ದರು. ಈ ವೇಳೆ ಲಕ್ಷ್ಮೇಶ್ವರ ಪಟ್ಟಣದ ಮಾರ್ಕೆಟ್ ಪ್ರದೇಶದಲ್ಲಿ ಮೆರವಣಿಗೆ ಸಾಗುವ ವೇಳೆ,‌ ಅನ್ಯಕೋಮಿನ ಯುವಕರು ಬಂದು ಮೆರವಣಿಗೆಯಲ್ಲಿ ಭಾಗಿಯಾದ ಗೋಸಾವಿ ಯುವಕರ ನಡುವೆ ಗಲಾಟೆಯಾಗಿದೆ. ಆಗ ಗೋಸಾವಿ ಯುವಕರು ಕೇಸರಿ ಶಾಲನ್ನು ಹಿಡಿದು ಹಲ್ಲೆ ಮಾಡಿದ್ದಾರಂತೆ.

ಹೀಗಾಗಿ ಶನಿವಾರ ತಡವಾಗಿದ್ದಕ್ಕೆ ಮರುದಿನ ರವಿವಾರ, ಹಲ್ಲೆಗೊಳಗಾದ ಯುವಕರು ಹಾಗೂ ಗೋಸಾವಿ ಸಮುದಾಯದ ಜನರು ಲಕ್ಷ್ಮೇಶ್ವರ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಆಗ ಲಕ್ಷ್ಮೇಶ್ವರ ಪೊಲೀಸರು ದೂರು ದಾಖಲು ಮಾಡಿಕೊಳ್ಳದೆ,‌ ಗೋಸಾವಿ ಸಮುದಾಯದ ಮೇಲೆ ಲಾಠಿ ಚಾರ್ಜ್ ಮಾಡಿದ್ದರಂತೆ. ಹೀಗಾಗಿ ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್ ಬಳಿ, ಗೋಸಾವಿ ಸಮುದಾಯದವರು ಲಕ್ಷ್ಮೇಶ್ವರ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಲಕ್ಷ್ಮೇಶ್ವರ ಪೊಲೀಸರಿಂದ ನಮಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಒತ್ತಾಯ ಮಾಡಿದ್ದರು. ಇನ್ನು ನ್ಯಾಯ ಕೇಳಲು ಹೋದ ಗೋಸಾವಿ ಸಮುದಾಯದ ಜನರಿಗೆ ಲಕ್ಷ್ಮೇಶ್ವರ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಲಕ್ಷ್ಮೇಶ್ವರ ಪಿಎಸ್ಐ ಈರಣ್ಣ ರಿತ್ತಿ ಅವರು ಏಕಪಕ್ಷಿಯಗಾಗಿ ನಡೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಲಕ್ಷ್ಮೇಶ್ವರ ಪೊಲೀಸರಿಂದ ನಮಗೆ ಅನ್ಯಾಯವಾಗಿದೆ ಎಂದು ಗದಗ ಎಸ್ಪಿ ಕಚೇರಿಗೆ ಗೋಸಾವಿ ಸಮುದಾಯದ, ಯುವಕರು, ಮಹಿಳೆಯರು, ಹಿರಿಯರು ಆಗಮಿಸಿದ್ದರು.

ನಾವು ಬಡ ಜನರು, ಉದ್ಯೋಗ ಮಾಡಿಕೊಂಡು ಜೀವನ ನಡೆಸುತ್ತೇವೆ. ನಾವು ಹಿಂದೂಗಳು ಹೀಗಾಗಿ ಎಲ್ಲ ಹಬ್ಬಗಳನ್ನು ಆಚರಣೆ ಮಾಡುತ್ತೇವೆ. ಆದರೆ, ಅನ್ಯಕೋಮಿನ ಯುವಕರು ನಮ್ಮ ಯುವಕರು ಹಾಕಿದ ಕೇಸರಿ ಶಾಲ್ ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ. ಆದರೆ ಹಲ್ಲೆ‌ಗೊಳಗಾದವರು ನ್ಯಾಯ ಕೇಳಲು ಹೋದರೆ ಅವರ ಮೇಲೆಯೇ ಲಾಠಿ ಚಾರ್ಜ್ ಮಾಡಿದ್ದಾರೆ. ಯುವಕರು, ಮಹಿಳೆಯರಿಗೆ ಏಟು ಬಿದ್ದಿವೆ. ನಮಗೆ ನ್ಯಾಯ ಕೊಡಿಸಿ ಎಂದು ಗದಗ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯ ಮಾಡಿದ್ದರು.

ಆದರೆ ಪೊಲೀಸರ ಹೇಳಿಕೆ‌ ಪ್ರಕಾರ, ಠಾಣೆ ಎದುರು ಗುಂಪು ಚದುರಿಸುವ ಸಲುವಾಗಿ, ಲಾಠಿ ಚಾರ್ಜ್ ಮಾಡಲಾಗಿದೆ ಎಂದು ವಾದಿಸಿದ್ದಾರೆ. ಸದ್ಯ ಎರಡು ಕಡೆ ದೂರು- ಪ್ರತಿದೂರು ದಾಖಲಿಸಿಕೊಂಡು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ ಮುಂದುವರೆದ ಭಾಗವಾಗಿ, ಅ.19 ರಂದು ಶ್ರೀರಾಮಸೇನೆ ಸಂಘಟನೆ, ಲಕ್ಷ್ಮೇಶ್ವರ ಪಟ್ಟಣ ಬಂದ್‌ಗೆ ಕರೆ ನೀಡಿದೆ.

Continue Reading
Advertisement
Actress Amulyas brother film director Deepak aras passes away
ಸಿನಿಮಾ38 ನಿಮಿಷಗಳು ago

Deepak Aras: ನಟಿ ಅಮೂಲ್ಯ ಸಹೋದರ ಚಲನಚಿತ್ರ ನಿರ್ದೇಶಕ ದೀಪಕ್ ಅರಸ್ ಅನಾರೋಗ್ಯದಿಂದ ನಿಧನ

Fraud case Union Minister Pralhad Joshis brother duped of ticket for Lok Sabha polls
ಬೆಂಗಳೂರು1 ಗಂಟೆ ago

Fraud Case : ಲೋಕಸಭೆ ಚುನಾವಣೆಗೆ ಟಿಕೆಟ್‌ ಕೊಡಿಸುವುದಾಗಿ ಕೋಟಿ ರೂ. ಲೂಟಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹೋದರನ ವಿರುದ್ಧ ಎಫ್‌ಐಆರ್‌ ದಾಖಲು

Dina bhavishya
ಭವಿಷ್ಯ8 ಗಂಟೆಗಳು ago

Dina Bhavishya : ಅತಿಯಾದ ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಪಿತೂರಿ ಮಾಡುವ ಜನರ ಬಗ್ಗೆ ಇರಲಿ ಎಚ್ಚರ

Gosavi samaj lathicharged Sri Ram Sene calls for bandh in Lakshmeshwara town on October 19
ಗದಗ22 ಗಂಟೆಗಳು ago

Lakshmeshwara Town: ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್; ಅ.19ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್‌ಗೆ ಶ್ರೀರಾಮಸೇನೆ ಕರೆ

A man killed his wife and her lover then committed suicide
ಬೆಂಗಳೂರು1 ದಿನ ago

Murder Case: ಪ್ರಿಯಕರ ಜತೆ ಏಕಾಂತದಲ್ಲಿ ಇರುವಾಗಲೆ ಪತ್ನಿ ಲಾಕ್‌; ಇಬ್ಬರನ್ನು ಕೊಂದು ಪತಿ ಸೂಸೈಡ್‌

Parvati Nair to play dual role in suspense thriller un Paravail Tamil film
ಸಿನಿಮಾ1 ದಿನ ago

Parvati Nair : ಸಸ್ಪೆನ್ಸ್ ಥ್ರಿಲ್ಲರ್‌ ʻಊಣ್‌ ಪರವೈಲ್‌ʼ ತಮಿಳು ಚಿತ್ರದಲ್ಲಿ ಪಾರ್ವತಿ ನಾಯರ್‌ ದ್ವಿಪಾತ್ರದಲ್ಲಿ ಮಿಂಚಿಂಗ್‌

ಬೆಂಗಳೂರು1 ದಿನ ago

Bengaluru Airport : ಬೆಂಗಳೂರು ಏರ್‌ಪೋರ್ಟ್‌ನ 17.7 ಎಕರೆಗಳಲ್ಲಿ ತಲೆ ಎತ್ತಲಿದೆ ಬಿಸಿನೆಸ್‌ ಪಾರ್ಕ್‌

Jio Cloud PC to turn home TV into computer
ಹೊಸ ಸುದ್ದಿ1 ದಿನ ago

Jio Cloud PC : ಮನೆಯ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಲಿದೆ ‘ಜಿಯೋ ಕ್ಲೌಡ್ ಪಿಸಿ’

Dina Bhavishya
ಭವಿಷ್ಯ1 ದಿನ ago

Dina Bhavishya : ಕುಟುಂಬದ ಸದಸ್ಯರಿಂದ ರಹಸ್ಯ ಸುದ್ದಿಯೊಂದು ಈ ರಾಶಿಯವರಿಗೆ ಅಚ್ಚರಿ ತರಲಿದೆ

dina bhavishya
ಭವಿಷ್ಯ2 ದಿನಗಳು ago

Dina Bhavishya : ಬಹುದಿನಗಳ ಕನಸು ನನಸಾಗುವ ಸಮಯವಿದು; ಹೊಸ ಅವಕಾಶಗಳು ಗರಿಗೆದರಲಿವೆ

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ವಾರಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌