Dina Bhavishya: ಮುಟ್ಟಿದ್ದೆಲ್ಲ ಚಿನ್ನ.. ಈ ರಾಶಿಯವರಿಗೆ ರಾಜಯೋಗ ಶುರು - Vistara News

ಪ್ರಮುಖ ಸುದ್ದಿ

Dina Bhavishya: ಮುಟ್ಟಿದ್ದೆಲ್ಲ ಚಿನ್ನ.. ಈ ರಾಶಿಯವರಿಗೆ ರಾಜಯೋಗ ಶುರು

Dina Bhavishya : ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷದ ತ್ರಯೋದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Dina Bhavishya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಶನಿವಾರವೂ ವೃಷಭ ರಾಶಿಯಲ್ಲೇ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ಮಿಥುನ, ಕಟಕ, ತುಲಾ, ವೃಶ್ಚಿಕ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮಿಥುನ ರಾಶಿಯವರು ಯಾವುದೇ ಆತುರದ ಮಾತುಗಳನ್ನಾಡಬೇಡಿ. ಕಟಕ ರಾಶಿಯವರಿಗೆ ನ್ಯಾಯಲಯದಲ್ಲಿರುವ ವ್ಯಾಜ್ಯ ಪ್ರಕರಣಗಳು ನಿಮಗೆ ವಿಜಯವನ್ನು ತಂದುಕೊಡಲಿದೆ. ತುಲಾ ರಾಶಿಯವರು ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದಲ್ಲಿ ಅನೇಕ ಬದಲಾವಣೆಗಳನ್ನು ಕಾಣುವ ಸಾಧ್ಯತೆ ಇದೆ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (25-11-2023)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ
ತಿಥಿ: ತ್ರಯೋದಶಿ 17:21 ವಾರ: ಶನಿವಾರ
ನಕ್ಷತ್ರ: ಅಶ್ವಿನಿ 14:54 ಯೋಗ: ವರಿಯಾನ 27:51
ಕರಣ: ತೈತುಲ 17:21 ಅಮೃತ ಕಾಲ: ಬೆಳಗ್ಗೆ 08:03 ರಿಂದ 09:35ರವರೆಗೆ
ದಿನದ ವಿಶೇಷ: ಮಂಗಳ ತ್ರಯೋದಶಿ, ಮಂಗಳೂರು ಕಾಳಿಕಾಂಬಾ ದೀಪೋತ್ಸವ

ಸೂರ್ಯೋದಯ : 06:29  ಸೂರ್ಯಾಸ್ತ : 05:55

ರಾಹುಕಾಲ : ಬೆಳಗ್ಗೆ 09.00 ರಿಂದ 10.30
ಗುಳಿಕಕಾಲ: ಬೆಳಗ್ಗೆ 06.00 ರಿಂದ 07.30
ಯಮಗಂಡಕಾಲ: ಮಧ್ಯಾಹ್ನ 01.30 ರಿಂದ 03.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಆಶಾ ಭಂಗ ಮಾಡುವ ಸಾಧ್ಯತೆ ಇದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಪ್ರಯಾಣ ಮಾಡುವ ಸಾಧ್ಯತೆ ಇದೆ. ಬಹಳ ದಿನಗಳ ಕನಸು ನನಸಾಗುವ ಕಾಲ ಕೂಡಿ ಬರಲಿದೆ. ಉದ್ಯೋಗಿಗಳಿಗೆ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವೃಷಭ: ಹಣದ ಹೂಡಿಕೆ ಕುರಿತು ಆಲೋಚನೆ ಮಾಡುವಿರಿ. ನಿಮ್ಮ ಹಾಸ್ಯದ ಮನೋವೃತ್ತಿ ಇತರರನ್ನು ಆಕರ್ಷಿಸುತ್ತದೆ. ಸ್ನೇಹಿತರೊಂದಿಗೆ ಸಮಯ ಹಂಚಿಕೊಳ್ಳುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ಆರೋಗ್ಯದ ಕುರಿತಾಗಿ ಕಾಳಜಿ ವಹಿಸಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಸ್ನೇಹಿತರು, ಆಪ್ತ ಸಂಬಂಧಿಕರಿಂದ ಮಾರ್ಗದರ್ಶನ, ಉಡುಗೊರೆ ಸಿಗುವ ಸಾಧ್ಯತೆ ಇದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸೌಜನ್ಯದಿಂದ ವರ್ತಿಸಿ. ಯಾವುದೇ ಆತುರದ ಮಾತುಗಳನ್ನಾಡ ಬೇಡಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕಟಕ: ನ್ಯಾಯಲಯದಲ್ಲಿರುವ ವ್ಯಾಜ್ಯ ಪ್ರಕರಣಗಳು ನಿಮಗೆ ವಿಜಯವನ್ನು ತಂದುಕೊಡಲಿದೆ. ಒತ್ತಡದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರಲಿದೆ. ಸಂಗಾತಿ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಸಿಂಹ:ಮಾನಸಿಕ ಒತ್ತಡದಿಂದ ಹೊರಬರಲು ವ್ಯಸನಗಳ ಮೊರೆ ಹೋಗುವುದು ಬೇಡ, ಬದಲಾಗಿ ಕ್ಷೇತ್ರ ದರ್ಶನ, ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವುದು ಸೂಕ್ತ. ಆರೋಗ್ಯ ಮಧ್ಯಮವಾಗಿರಲಿದೆ. ವ್ಯಾಪಾರ ವ್ಯವಹಾರ ಹಾಗೂ ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಬಿಡುವಿಲ್ಲದ ಕಾರ್ಯ ಚಟುವಟಿಕೆಯ ಮಧ್ಯೆಯೂ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ: ಭೂ ಸಂಬಂಧಿ, ಹಣಕಾಸು ಹೂಡಿಕೆ ವ್ಯವಹಾರದಲ್ಲಿ ಲಾಭ ಸಿಗಲಿದೆ. ಸಂಗಾತಿಯೊಂದಿಗೆ ಮುಖ್ಯ ವಿಷಯಗಳ ಕುರಿತು ಚರ್ಚೆ ಮಾಡುವಿರಿ. ಉದ್ಯೋಗಿಗಳಿಗೆ ಶುಭ ಫಲ. ಆರೋಗ್ಯ ಪರಿಪೂರ್ಣವಾಗಿರಲಿದೆ. ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಹಿರಿಯರ ಮಾರ್ಗದರ್ಶನ ಸಿಗಲಿದೆ. ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದಲ್ಲಿ ಅನೇಕ ಬದಲಾವಣೆಗಳನ್ನು ಕಾಣುವ ಸಾಧ್ಯತೆ ಇದೆ. ಕುಟುಂಬದ ಆಪ್ತರೊಂದಿಗೆ ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ನಿಮ್ಮದಲ್ಲದ ಕುರಿತು ಅನಗತ್ಯವಾಗಿ ಚರ್ಚೆ ಮಾಡಿ, ಕುಟುಂಬದ ಸ್ವಾಸ್ಥ್ಯ ಕೆಡಿಸಿಕೊಳ್ಳುವುದು ಬೇಡ. ಆರೋಗ್ಯ ಮಧ್ಯಮವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವೃಶ್ಚಿಕ: ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಘಾಸಿ ಮಾಡುವ ಸಾಧ್ಯತೆ ಇದೆ. ಆಲಸ್ಯತನದಿಂದ ಕಾರ್ಯ ಮುಂದುಡುವುದು ಬೇಡ. ಅಮೂಲ್ಯ ವಸ್ತುಗಳ ಕುರಿತಾಗಿ ಜಾಗೃತೆ ಇರಲಿ. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ವಹಿಸುವುದು ಅಗತ್ಯ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅತಿಯಾದ ಒತ್ತಡ ಉಂಟುಮಾಡುವ ವಿಚಾರಗಳಿಂದ ದೂರ ಇರಿ. ಕುಟುಂಬದ ಆಪ್ತರಿಂದ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರ ವರ್ತನೆ ಮುಜುಗರ ಉಂಟು ಮಾಡುವ ಸಾಧ್ಯತೆ ಇದೆ. ಆರೋಗ್ಯದ ವ್ಯತ್ಯಾಸದಿಂದ ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಕರ: ಹಾಸ್ಯ ಪ್ರವೃತ್ತಿಯಿಂದ ಬರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕುಟುಂಬದವರು ನಿಮ್ಮ ಬಗೆಗೆ ಹೆಚ್ಚು ಕಾಳಜಿ ವಹಿಸಲಿದ್ದಾರೆ. ಆರೋಗ್ಯ‌ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕುಂಭ: ನಿಮ್ಮ ಕೋಪದಿಂದ ಅಪಾಯ ತಂದುಕೊಳ್ಳುವುದು ಬೇಡ. ಉತ್ಸಾಹದ ಭರದಲ್ಲಿ ಅತಿರೇಕದ ಮಾತುಗಳನ್ನಾಡಬೇಡಿ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಮೀನ: ಆಹಾರ ಕ್ರಮದ ವ್ಯತ್ಯಾಸದಿಂದ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಸಂಗಾತಿಯ ಮಾತುಗಳು ಹಿತವೇನಿಸಿದರೂ ಅವರ ಮಾತುಗಳಿಗೆ ಮನ್ನಣೆ ಸಿಗುವುದಿಲ್ಲ. ಆರೋಗ್ಯ ಹಾಗೂ ಹಣಕಾಸಿನ ವಿಷಯದಲ್ಲಿ ಸಾಮಾನ್ಯವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

ಕನ್ನಡ ನಾಮಫಲಕ ಅಳವಡಿಕೆಗೆ ಇಂದೇ ಕೊನೆಯ ದಿನ, ಇಲ್ಲದಿದ್ದರೆ ಬೀಗ ಖಚಿತ

ಕನ್ನಡ ನಾಮಫಲಕ: ಇಂದಿನಿಂದ ಕನ್ನಡ ಕಡ್ಡಾಯದ (kannada mandatory) ಅಸ್ತ್ರವನ್ನು ಬಿಬಿಎಂಪಿ ಬಳಸಲಿದ್ದು, ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಇಲ್ಲದ ಉದ್ದಿಮೆಗಳಿಗೆ ಬೀಗ ಹಾಕಲಿದೆ.

VISTARANEWS.COM


on

kannada sign boards
Koo

ಬೆಂಗಳೂರು: ಅಂಗಡಿ ಮಳಿಗೆಗಳು ಹಾಗೂ ಉದ್ಯಮಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ (60% kannada sign boards) ಅಳವಡಿಸಲು ಇಂದು ಕೊನೆಯ ದಿನವಾಗಿದ್ದು, ಕನ್ನಡ ನಾಮಫಲಕ ಜಾರಿ ಮಾಡಲು ವಿಫಲರಾದ ಮಳಿಗೆಗಳ ಮೇಲೆ ಬಿಬಿಎಂಪಿ (BBMP) ಕಠಿಣ ಕ್ರಮ ಕೈಗೊಳ್ಳಲಿದೆ.

ಇಂದಿನಿಂದ ಕನ್ನಡ ಕಡ್ಡಾಯದ (kannada mandatory) ಅಸ್ತ್ರವನ್ನು ಬಿಬಿಎಂಪಿ ಬಳಸಲಿದ್ದು, ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಇಲ್ಲದ ಉದ್ದಿಮೆಗಳಿಗೆ ಬೀಗ ಹಾಕಲಿದೆ. ಅಂಥ ಅಂಗಡಿ, ಉದ್ದಿಮೆಗಳ ಟ್ರೇಡ್ ಲೈಸನ್ಸ್ (trade license) ಕೂಡ ರದ್ದು ಮಾಡಲು ನಿರ್ದೇಶನ ನೀಡಲಾಗಿದ್ದು, ತಪಾಸಣೆಗಾಗಿ ಬಿಬಿಎಂಪಿಯ ಎಲ್ಲಾ ಅಧಿಕಾರಿಗಳಿಗೂ ಬಿಬಿಎಂಪಿ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ.

ಅನುಷ್ಠಾನದ ಅಂಕಿ ಅಂಶ

ಕನ್ನಡ ಅನುಷ್ಠಾನ ಮಾಡದ ಸುಮಾರು 3 ಸಾವಿರ ಅಂಗಡಿ ಮಾಲೀಕರಿಗೆ ಈ ಮೂಲಕ ಬಿಬಿಎಂಪಿ ಬಿಸಿ ಮುಟ್ಟಿಸಲಿದೆ. ಕನ್ನಡ ನಾಮಫಲಕ ಅನುಷ್ಠಾನದ ಬಗ್ಗೆ ಬಿಬಿಎಂಪಿ ಮಾಹಿತಿ ನೀಡಿದೆ. ನಗರದಲ್ಲಿ ಒಟ್ಟು ನಾಮಫಲಕ ಉಲ್ಲಂಘನೆಗಳನ್ನು ಮಾಡಿದ ಉದ್ದಿಮೆಗಳ ಸಂಖ್ಯೆ 55,178 ಆಗಿದ್ದು, ಶೇ.60ರಷ್ಟು ಕನ್ನಡ ಅನುಷ್ಠಾನ ಮಾಡಿರುವ ಉದ್ದಿಮೆಗಳ ಸಂಖ್ಯೆ 52,134. ಸ್ವಲ್ಪವೂ ಅನುಷ್ಠಾನ ಮಾಡದೆ ಬಾಕಿ ಇರುವ ಉದ್ದಿಮೆಗಳು 3,044. ಬಿಬಿಎಂಪಿ ಆದೇಶವನ್ನು ಪೂರ್ಣವಾಗಿ ಉಲ್ಲಂಘನೆ ಮಾಡಿದ 3 ಸಾವಿರ ಉದ್ದಿಮೆಗಳ ಲೈಸನ್ಸ್ ರದ್ದು ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ಎಲ್ಲೆಲ್ಲಿ ಕನ್ನಡ ?

ಈ ಬಗ್ಗೆ ಹಿಂದೆ ಬಿಬಿಎಂಪಿ ಮುಖ್ಯ ಆಯುಕ್ತರ ನಿರ್ದೇಶನದಂತೆ ವಿಶೇಷ ಆಯುಕ್ತರು (ಆರೋಗ್ಯ) ಸುತ್ತೋಲೆ ಹೊರಡಿಸಿದ್ದರು. ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್‌ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ ಮುಂತಾದವುಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಇರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಫೆ.2 ಮತ್ತು 12ರಂದು ನಡೆದ ಸಭೆಯಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿರುವ ಎಲ್ಲಾ ವಾಣಿಜ್ಯ ಉದ್ದಿಮೆಗಳ ಮೇಲೆ ಫೆ.28ರೊಳಗೆ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ. 60ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸುವಂತೆ ಎಲ್ಲಾ ವಾಣಿಜ್ಯದಾರರಿಗೆ ಸೂಚಿಸಲಾಗಿತ್ತು. ನಂತರ ಇದನ್ನು ಒಂದು ದಿನ ವಿಸ್ತರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಫೆ.29ರಿಂದ ಅನ್ವಯವಾಗುವಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸದೇ ಇರುವ ವಾಣಿಜ್ಯ ಉದ್ದಿಮೆಗಳಿಗೆ ಇಲಾಖಾ ವತಿಯಿಂದ ನೀಡಿರುವ ಉದ್ದಿಮೆ ಪರವಾನಗಿಯನ್ನು ಅಮಾನತು ಮಾಡಲು ಹಾಗೂ ಅಂತಹ ವಾಣಿಜ್ಯ ಉದ್ದಿಮೆಗಳಿಗೆ ಬೀಗಮುದ್ರೆ (Sealdown) ಮಾಡಲು ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ನಾಮಫಲಕ ಅಳವಡಿಕೆಗೆ ಮತ್ತಷ್ಟು ಗಡುವು ನೀಡುವಂತೆ ಕೆಲವು ಅಂತಾರಾಷ್ಟ್ರೀಯ ಕಂಪನಿಗಳು, ಎಸ್‌ಬಿಐ, ಕೆನರಾ ಬ್ಯಾಂಕ್ ಮನವಿ ಮಾಡಿವೆ. ಈ ಬಗ್ಗೆ ಇಂದು ಸಂಜೆ ತೀರ್ಮಾನ ಮಾಡುತ್ತೇವೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ: ಕನ್ನಡ ನಾಮಫಲಕ ಅಳವಡಿಸದ ಅಂಗಡಿಗಳಿಗೆ ಬೀಗ, ಲೈಸೆನ್ಸ್‌ ಅಮಾನತು: ಬಿಬಿಎಂಪಿ ಆದೇಶದಲ್ಲಿ ಏನೇನಿದೆ?

Continue Reading

ಉದ್ಯೋಗ

KAS Recruitment 2024: 384 ಕೆಎಎಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾರ್ಚ್‌ 4ರಿಂದಲೇ ಅರ್ಜಿ ಸಲ್ಲಿಸಿ

KAS Recruitment 2024: 2024ರ ಮಾರ್ಚ್‌ 4ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಏಪ್ರಿಲ್‌ 3 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಸದ್ಯ ಪೂರ್ವಭಾವಿ ಪರೀಕ್ಷಾ ದಿನಾಂಕವನ್ನು (ತಾತ್ಕಾಲಿಕ) ಪ್ರಕಟ ಮಾಡಲಾಗಿದ್ದು, 2024ರ ಮೇ 5ರಂದು ಪರೀಕ್ಷೆ ನಡೆಯಲಿದೆ.

VISTARANEWS.COM


on

KAS Recruitment 2024 invited for 384 KAS posts Apply from March 4
Koo

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) (kpsc recruitment 2024) ಗೆಜೆಟೆಡ್‌ ಪ್ರೊಬೆಷನರಿಯ (ಕೆಎಎಸ್) (KAS Recruitment 2024) ಗ್ರೂಪ್‌ “ಎ” ಮತ್ತು ಗ್ರೂಪ್‌ “ಬಿ” ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹೈದರಾಬಾದ್‌ ಕರ್ನಾಟಕ ಹಾಗೂ ಉಳಿಕೆ ವೃಂದಗಳಲ್ಲಿ ಅರ್ಜಿ ಆಹ್ವಾನ ಮಾಡಲಾಗಿದ್ದು, ಒಟ್ಟು 384 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸುಮಾರು ಆರು ವರ್ಷಗಳ ನಂತರ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.

2024ರ ಮಾರ್ಚ್‌ 4ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಏಪ್ರಿಲ್‌ 3 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಸದ್ಯ ಪೂರ್ವಭಾವಿ ಪರೀಕ್ಷಾ ದಿನಾಂಕವನ್ನು (ತಾತ್ಕಾಲಿಕ) ಪ್ರಕಟ ಮಾಡಲಾಗಿದ್ದು, 2024ರ ಮೇ 5ರಂದು ಪರೀಕ್ಷೆ ನಡೆಯಲಿದೆ. ಈ ಬಾರಿ ಮಾತ್ರ ವಯೋಮಿತಿಯಲ್ಲಿ ಮೂರು ವರ್ಷ ಹೆಚ್ಚಳ ಮಾಡಲಾಗಿದೆ. ಕನಿಷ್ಠ 21 ವರ್ಷವಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 38 (ಮೂರು ವರ್ಷ ಹೆಚ್ಚಳ), ಪ್ರವರ್ಗ 2ಎ, 2ಬಿ, 3ಎ, 3 ಬಿ ಅಭ್ಯರ್ಥಿಗಳಿಗೆ 41 ವರ್ಷ, ಎಸ್‌ಸಿ, ಎಸ್‌ಟಿ ಪ್ರವರ್ಗ 1ಕ್ಕೆ 43 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.

ಗ್ರೂಪ್‌ ಎ ಹುದ್ದೆ ವಿವರ

KAS Recruitment 2024 Good news for KAS aspirants Applications invited for 384 vacancies and kpsc recruitment 2024

ಸಂದರ್ಶನ ನಡೆಯಲಿದೆ

ಪೂರ್ವಭಾವಿ ಪರೀಕ್ಷೆ ಬಳಿಕ ಮುಖ್ಯ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವವರು ಸಂದರ್ಶನಕ್ಕೆ ಹಾಜರಾಗಬೇಕಿರುತ್ತದೆ.

ಗ್ರೂಪ್‌ ಬಿ ಹುದ್ದೆಗಳ ವಿವರ

KAS Recruitment 2024 Good news for KAS aspirants Applications invited for 384 vacancies and kpsc recruitment 2024

ಸಮಸ್ಯೆಯಾದರೆ ಈ ಸಹಾಯವಾಣಿಗೆ ಕರೆ ಮಾಡಿ

ಅರ್ಜಿ ಸಲ್ಲಿಸಲು ಸಮಸ್ಯೆಗಳು ಎದುರಾದಲ್ಲಿ ಹೆಲ್ಪ್‌ಲೈನ್‌ ನಂಬರ್‌ ನೀಡಲಾಗಿದ್ದು, 080-30574957 / 30574901 ಗೆ ಕರೆ ಮಾಡಲು ಸೂಚಿಸಲಾಗಿದೆ.

ತಪ್ಪು ಸರಿಪಡಿಸಲು ಕೊನೇ ಅವಕಾಶ

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಿಳಾಸ, ಪ್ರವರ್ಗ, ತಂದೆ-ತಾಯಿ ಹೆಸರು, ವಿದ್ಯಾರ್ಹತೆ ಮುಂತಾದ ವಿಷಯಗಳನ್ನು ತಪ್ಪಾಗಿ ನಮೂದಿಸಿರುವುದಾಗಿ 302 ಸದರಿ ಮಾಹಿತಿಗಳನ್ನು ಬದಲಾವಣೆ ಮಾಡುವಂತೆ ಮನವಿ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಯೋಗಕ್ಕೆ ಒಂದು ಬಾರಿ ತಂತ್ರಾಂಶದ ಮುಖಾಂತರ ಅರ್ಜಿ ಸಲ್ಲಿಸಿದ ನಂತರ ಸದರಿ ಅರ್ಜಿಯಲ್ಲಿನ ಮಾಹಿತಿಗಳನ್ನು ಆಯೋಗದ ಅಧಿಕಾರಿ/ಸಿಬ್ಬಂದಿಗೆ ತಂತ್ರಾಂಶದಲ್ಲಿ ಬದಲಾವಣೆ ಮಾಡಲು ಸಾಧ್ಯವಿರದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳೇ ನೇರವಾಗಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಮಾಹಿತಿಗಳನ್ನು ಸರಿಪಡಿಸಿ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಈ ಸಂಬಂಧ ತದನಂತರ ಸಲ್ಲಿಸಲಾಗುವ ಯಾವುದೇ ಕೋರಿಕೆ/ಮನವಿಗಳನ್ನು ಆಯೋಗದಿಂದ ಪುರಸ್ಕರಿಸಲಾಗುವುದಿಲ್ಲ.

ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಿ

ಅರ್ಜಿಗಳನ್ನು ಆನ್‌ಲೈನ್‌ (Online) ಮೂಲಕವೇ ಭರ್ತಿ ಮಾಡಿ ಭಾವಚಿತ್ರ/ಸಹಿ /ವಯೋಮಿತಿ/ ವಿದ್ಯಾರ್ಹತೆ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ನಂತರ ಶುಲ್ಕವನ್ನು ನೆಟ್ ಬ್ಯಾಂಕಿಂಗ್ / ಡೆಬಿಟ್‌ ಕಾರ್ಡ್/ ಕ್ರೆಡಿಟ್‌ ಕಾರ್ಡ್‌/ ಯುಪಿಐ ಮೂಲಕ ಸಂದಾಯ ಮಾಡಬಹುದಾಗಿರುತ್ತದೆ. ಶುಲ್ಕವನ್ನು ಪಾವತಿಸದ ಹಾಗೂ ದಾಖಲೆಗಳನ್ನು/ ಭಾವಚಿತ್ರ/ ಸಹಿಯನ್ನು ಅಪ್ಲೋಡ್ ಮಾಡದೇ ಇರುವ/ಅಸ್ಪಷ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಕೆಪಿಎಸ್‌ಸಿ ತಿಳಿಸಿದೆ.

ಕೆಪಿಎಸ್‌ಸಿ ಹೊರಡಿಸಿರುವ ಅಧಿಸೂಚನೆಯ ಪಿಡಿಎಫ್‌ ಪ್ರತಿಯನ್ನು ಈ ಕೆಳಗೆ ಲಗತ್ತಿಸಲಾಗಿದೆ. ಆಸಕ್ತರು ಡೌನ್ಲೋಡ್‌ ಆಯ್ಕೆ ಮೇಲೆ ಕ್ಲಿಕ್‌ ಮಾಡಿ ಓದಬಹುದು.

ಇದನ್ನೂ ಓದಿ: Job Alert: ಗುಡ್‌ನ್ಯೂಸ್; 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಮಾರ್ಚ್‌ 4ರಿಂದ ಅರ್ಜಿ ಸಲ್ಲಿಸಿ

ಜಾಗ್ರತೆಯಿಂದ ಅರ್ಜಿ ಸಲ್ಲಿಸಿ

ಸದರಿ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಯೊಂದಿಗೆ ಸಲ್ಲಿಸುವ ಲಗತ್ತುಗಳನ್ನು ಅವಶ್ಯಕ ಸಂದರ್ಭಗಳಲ್ಲಿ ಆಯೋಗವು ಪರಿಶೀಲನೆಗೆ ಒಳಪಡಿಸಬಹುದಾಗಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಜಾಗರೂಕತೆಯಿಂದ ತಮಗೆ ಅನ್ವಯಿಸುವ ಎಲ್ಲ ದಾಖಲೆಗಳನ್ನು ಸ್ಪಷ್ಟವಾಗಿ ಗೋಚರಿಸುವ ರೀತಿಯಲ್ಲಿ ಅಪ್‌ಲೋಡ್ ಮಾಡತಕ್ಕದ್ದು. ಮೂಲ ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ಈಗಾಗಲೇ ಆನ್‌ಲೈನ್ ಅರ್ಜಿಯೊಂದಿಗೆ ಅಪ್‌ಲೋಡ್ ಮಾಡಿರುವ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ತಪ್ಪದೇ ಹಾಜರುಪಡಿಸತಕ್ಕದ್ದು ಎಂದು ಕೆಪಿಎಸ್‌ಸಿ ಹೇಳಿದೆ.

Continue Reading

ಪ್ರಮುಖ ಸುದ್ದಿ

ದಶಮುಖ ಅಂಕಣ: ಮಸಣದಲ್ಲಿ ಕೆಲವು ಕ್ಷಣ

ದಶಮುಖ ಅಂಕಣ: ಸ್ಮಶಾನದ ವರ್ಣನೆಗಳನ್ನು ನೋಡಿದಾಗ, ಅದರ ಕಲ್ಪನೆ ಭೀಕರವೋ, ಅದು ತನ್ನೊಳಗೆ ಹುದುಗಿಸಿಕೊಳ್ಳುವ ಸಾವು ಭೀಕರವೋ ಎಂಬುದೇ ತಿಳಿಯದೆ ಗೊಂದಲಕ್ಕೆ ಬಿದ್ದರೆ ಅಚ್ಚರಿಯಿಲ್ಲ.

VISTARANEWS.COM


on

graveyard
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ಒಂದಿಷ್ಟು ಮಕ್ಕಳು ಕಥೆ ಕೇಳುತ್ತಿದ್ದರು. ಕಥೆಯೊಂದರ ನಡುವೆ ಸ್ಮಶಾನದ ಪ್ರಸ್ತಾಪ ಬಂತು. ಮಕ್ಕಳೆಲ್ಲರೂ ಮುಂದೇನಾಗುವುದೆಂದು ಗೊತ್ತಿರುವವರಂತೆ, ʻಯಬ್ಬಾ…!ʼ ಎಂದು ಕಣ್ಣು-ಬಾಯಿ ಬಿಡುತ್ತಾ ಹುಬ್ಬೇರಿಸಿದರು. ಅಲ್ಲೊಂದು ಭೂತ ಬರುತ್ತದೆಂದು ಅವರಾಗಲೇ ನಿರ್ಧರಿಸಿಬಿಟ್ಟಿದ್ದರು. ಹಾಗಾಗಿ ಉಸಿರು ಹಿಡಿದು, ಪಕ್ಕದಲ್ಲಿ ಕೂತವರ ಕೈಯೂ ಹಿಡಿದು, ಭೂತಚೇಷ್ಟೆಗೆ ತಯಾರಾಗಿಯೇ ಕಥೆಯಲ್ಲಿರುವ ಸ್ಮಶಾನ ಹೊಕ್ಕಿದ್ದರು. ಕಥೆಯಲ್ಲಿ ಭೂತ ಬಂತಾ, ಬಂದೇನು ಮಾಡಿತು ಇತ್ಯಾದಿಗಳು ನಮಗಿಲ್ಲಿ ಬೇಡದಿದ್ದರೂ, ಅವರ ವರ್ತನೆಗಳು ಒಂದಿಷ್ಟು ಚಿಂತನೆಗೆ ಹಚ್ಚಿದ್ದು ಹೌದು. ಸ್ಮಶಾನವೆಂದರೆ ನಾವಷ್ಟು ಇರಿಸುಮುರುಸು ಮಾಡಿಕೊಳ್ಳುತ್ತೇವಲ್ಲ, ಯಾಕೆ? ಆ ಮಕ್ಕಳ ಹಾಗೆ, ಸ್ಮಶಾನದೊಂದಿಗೆ ನಮ್ಮ ಭಾವಕೋಶದಲ್ಲಿ ಅಡಗಿ ಹೆದರಿಸುವ ಭೂತಕ್ಕೋ ಅಥವಾ ವ್ಯಕ್ತಿಗಳೇ ಸತ್ತು ಭೂತಕಾಲ ಸೇರುತ್ತಾರೆಂಬ ಸತ್ಯಕ್ಕೋ? ಯಾವುದು ನಮಗೆ ಹೆಚ್ಚು ಅಹಿತವಾಗುವ ವಿಷಯ ಮತ್ತು ಯಾಕೆ?

ಬದುಕು ಎಷ್ಟು ನಶ್ವರ ಎಂಬುದನ್ನು ಇಲ್ಲಿ ಹೇಳುತ್ತಿಲ್ಲ; ಸಾವಿನ ಬಗ್ಗೆ ಚರ್ಚಿಸುವುದಕ್ಕೆ ಇಲ್ಲಿ ಖಂಡಿತಕ್ಕೂ ಕುಳಿತಿಲ್ಲ; ಈ ಬಗ್ಗೆ ಮಾತಾಡಲಿ ಬಿಡಲಿ, ಅದೊಂದು ನಿತ್ಯ ಸತ್ಯ ಎಂಬುದು ಎಲ್ಲರಿಗೂ ತಿಳಿದಿದ್ದೇ. ಸ್ಮಶಾನದ ಬಗ್ಗೆ, ಅಲ್ಲಿದೆಯೆಂದು ಭಾವಿಸಲಾದ ಸಾವಿನಾಚೆಯ ಬದುಕುಗಳ ಬಗ್ಗೆ ಹೇಳಿ ಬೆದರಿಸುವ ಉದ್ದೇಶವಂತೂ ಮೊದಲೇ ಇಲ್ಲ. ಹಾಗಾದರೆ ಸ್ಮಶಾನದ ಬಗೆಗಿನ ಪ್ರಸ್ತಾಪ ಬಂದಿದ್ದೇಕೆ? ನಮಗೆಷ್ಟೇ ಅಹಿತವಾದ ವಿಷಯಗಳೂ ಬದುಕಿನಲ್ಲಿ ನಮಗರಿವಿಲ್ಲದಂತೆಯೇ ಹಾಸುಹೊಕ್ಕಾಗಿ ಬರುತ್ತವಲ್ಲ ಎಂಬ ಸೋಜಿಗವೊಂದು ನಿಶ್ಚಿತವಾಗಿ ಇದರ ಹಿಂದಿದೆ. ನಮಗಿಷ್ಟವಾಗದ ವಿಷಯವನ್ನೇ ಮಣಮಣಿಸುತ್ತಿದ್ದರೆ ಆ ಕುರಿತ ನಮ್ಮ ಸಹಿಷ್ಣುತೆ ಹೆಚ್ಚಾದೀತೇ ಎಂಬ ಜಿಜ್ಞಾಸೆಯೂ ಈ ಲಹರಿಗೆ ಕಾರಣವಾಗಿರಬಹುದು.

ಹದಿನೆಂಟನೇ ಶತಮಾನದ ಕೆಲವು ಇಂಗ್ಲಿಷ್‌ ಕವಿಗಳು ನೆನಪಾಗುತ್ತಿದ್ದಾರೆ. ಸ್ಮಶಾನ ಕವಿಗಳು ಅಥವಾ ಗ್ರೇವ್‌ಯಾರ್ಡ್‌ ಪೊಯೆಟ್ಸ್‌ ಎಂದೆಲ್ಲಾ ಕರೆಯಲಾಗುತ್ತಿತ್ತು ಇವರನ್ನು. ಬದುಕಿನ ನಶ್ವರತೆಯನ್ನು ಬಿಂಬಿಸುತ್ತಾ ಅಧ್ಯಾತ್ಮದೆಡೆಗಿನ ತುಡಿತವನ್ನು ಹೇಳುವಂಥ ಕವಿತೆಗಳು ಈ ಸಾಹಿತ್ಯ ಪ್ರಕಾರದಲ್ಲಿದ್ದವು. ಮುಖ್ಯವಾಗಿ ನೋವು, ದುಃಖ, ವಿಯೋಗದಂಥ ಭಾವತೀವ್ರತೆಯ ವಿಷಯಗಳ ಬಗ್ಗೆ ಹೇಳುವುದಕ್ಕೆ ಸ್ಮಶಾನ, ಗೋರಿ, ಶವಪೆಟ್ಟಿಗೆ ಇತ್ಯಾದಿಗಳನ್ನು ರೂಪಕಗಳಂತೆ ಈ ಕವಿಗಳು ಬಳಸಿಕೊಂಡಿದ್ದರು. ರಾಬರ್ಟ್‌ ಬ್ಲೇರ್‌, ಥಾಮಸ್‌ ಗ್ರೇ, ಎಡ್ವರ್ಡ್‌ ಯಂಗ್ ಮುಂತಾದ ಹೆಸರಾಂತ ಕವಿಗಳು ಸ್ಮಶಾನ ಮತ್ತು ಸಾವನ್ನು ತಮ್ಮ ಅಭಿವ್ಯಕ್ತಿ ರೂಪಕವಾಗಿ ಬಳಸಿದ್ದಾರೆ.

ಇಂಗ್ಲಿಷ್‌ ಕವಿಗಳು ಮಾತ್ರವೇ ಅಲ್ಲ, ನಮ್ಮದೇ ನೆಲದ ಕವಿಗಳು ಸಹ ಸ್ಮಶಾನದ ಉಲ್ಲೇಖಗಳನ್ನು ಬಳಸಿದ್ದಾರೆ. ಈ ನಿಟ್ಟಿನಲ್ಲಿ ಫಕ್ಕನೆ ನೆನಪಾಗುವುದು ರಾಘವಾಂಕ ಕವಿಯ ʻಹರಿಶ್ಚಂದ್ರ ಕಾವ್ಯʼ. ಮಡಿದ ಮಗನಿಗಾಗಿ ವಿಲಪಿಸುತ್ತಾ, ಆತನನ್ನು ಸ್ಮಶಾನಕ್ಕೆ ಹೊತ್ತು ತರುತ್ತಾಳೆ ಆತನ ತಾಯಿ, ಹರಿಶ್ಚಂದ್ರನ ಮಡದಿ ಚಂದ್ರಮತಿ. ರಾತ್ರಿಯ ಆ ಹೊತ್ತು ಸ್ಮಶಾನ ಹೇಗಿತ್ತು ಎಂಬುದನ್ನು ರಾಘವಾಂಕ ಹೀಗೆ ವರ್ಣಿಸುತ್ತಾನೆ-

“ಹಸಿಯ ತೊಗಲುಡಿಗೆ ಹಿಂಡಿಲುಗರುಳ ಚಲ್ಲಣದ/ ಕುಸುರಿಗಂಡದ ತೊಂಡಲಸ್ಥಿಗಳ ತೊಡಿಗೆ ದ/ ಟ್ಟಿಸುವ ರಕ್ತದ ಭಾರಿಗಣ್ಣಾಲಿಗಳ ಸೊಡರು ಕಾಳಿಜದ ಚರುಗುಗಡುಬು|| ಸಸಿದು ಕೊಬ್ಬಿದ ಮಿದುಳ ರಾಸಿಗೂಳೆಸೆಯೆ ಮಾ/ ಮಸಕದಿಂ ಚಾಮುಂಡಿ ಕಮಲಾಕ್ಷಿಯರ ನಡುವೆ/ ಹೊಸತನಿಕ್ಕುವ ಭೂತವೇತಾಳರಾಡಿದರು ಮಾನಿನಿಯ ಮನ ಬೆದರಲು||”

(ಸ್ಥೂಲಾರ್ಥದಲ್ಲಿ ಹೇಳುವುದಾದರೆ- ಹಸಿ ಚರ್ಮದ ಉಡಿಗೆ, ಕರುಳುಗೊಂಚಲಿನ ಕುಸುರಿಯ ಆಭರಣ, ಅಸ್ಥಿ ಕಿರೀಟದ ತೊಡಿಗೆ, ರಕ್ತಗೆಂಪು ಬಣ್ಣದ ಸೊಡರಿನಂಥ ಕಣ್ಣು, ಪಿತ್ತಜನಕಾಂಗದ ಬಲಿ ಪಡೆದ, ಕೊಬ್ಬಿದ ಮಿದುಳಿನ ರಾಶಿಗಳನ್ನೇ ಊಟವಾಗಿಸಿಕೊಂಡಿರುವ ಕಡುಕೋಪದ ಚಾಮುಂಡಿ ಕಮಲಾಕ್ಷಿಯರ ನಡುವೆ ಹೊಸದಾಗಿ ಸೇರಿದ್ದ ಭೂತಬೇತಾಳಗಳು ಮಾನಿನಿಯನ್ನು ಬೆದರಿಸುವಂತೆ ವರ್ತಿಸುತ್ತಿದ್ದವು)

ಇಲ್ಲೀಗ ಹೆದರಿಸುವಂಥ ವರ್ಣನೆಗಳು ಮಾತ್ರವೇ ಅಲ್ಲ, ಭಯಾನಕ, ಭೀಕರ, ಭೀಭತ್ಸ ಎನಿಸುವಂಥ ಬಣ್ಣನೆಗಳು ಕಾಣುತ್ತವೆ. ಖಂಡಿತಕ್ಕೂ ಇಂಥವನ್ನು ಕವಿ ಖುದ್ದಾಗಿ ಕಂಡಿರಲಾರ. ಆದರೆ ಈ ವರ್ಣನೆಗಳನ್ನು ನೋಡಿದಾಗ, ಸ್ಮಶಾನವೆಂಬ ಕಲ್ಪನೆ ಭೀಕರವೋ, ಅದು ತನ್ನೊಳಗೆ ಹುದುಗಿಸಿಕೊಳ್ಳುವ ಸಾವು ಭೀಕರವೋ ಎಂಬುದೇ ತಿಳಿಯದೆ ಗೊಂದಲಕ್ಕೆ ಬಿದ್ದರೆ ಅಚ್ಚರಿಯಿಲ್ಲ.

ಕುವೆಂಪು ಅವರ ʻಶ್ಮಶಾನ ಕುರುಕ್ಷೇತ್ರʼ ನಾಟಕವನ್ನೂ ಇಲ್ಲಿ ಉಲ್ಲೇಖಿಸಬಹುದು. ಮೊದಲ ಮಹಾಯುದ್ಧದ ನಂತರ ಬರೆದಂಥ ಈ ನಾಟಕವು, ಯುದ್ಧಗಳು ಹೇಗೆ ವಿಶಾಲವಾದ ಸ್ಮಶಾನಗಳನ್ನು ಹುಟ್ಟು ಹಾಕುತ್ತವೆ ಎಂಬುದನ್ನು ವಿಸ್ತರಿಸುತ್ತದೆ. ವಿನಾಶದ ಪರಿಕಲ್ಪನೆಗೆ ಪರ್ಯಾಯವಾಗಿ ಸ್ಮಶಾನವೆಂಬ ಪ್ರತಿಮೆ ಇಲ್ಲಿ ರೂಪುಗೊಂಡಿದೆ. ಆದರೆ ಇದಕ್ಕೆ ರೂಪಕವಾಗಿ ನಾಟಕದಲ್ಲಿ ಮೂಡಿಬಂದಿರುವುದು ಮಹಾಭಾರತದ ಕುರುಕ್ಷೇತ್ರ. ಯುದ್ಧಭೂಮಿಗಳ ಭೀಕರತೆಯನ್ನು ವಿವರಿಸುವುದಕ್ಕೆ ಭೂತಬೇತಾಳಗಳ ಕಲ್ಪನೆಯನ್ನು ಪಂಪನಾದಿಯಾಗಿ ಹಲವಾರು ಕವಿಗಳು ಬಳಸಿದ್ದಾರೆ.

ಥೋ! ಇದೆಂಥಾ ಸುಡುಗಾಡು ವರ್ಣನೆಗಳು, ಮಾಡೋಕೆ ಬೇರೆ ಕೆಲಸ ಇಲ್ವೇ ಎಂದು ಬೈಯ್ದುಕೊಂಡರೆ… ವಿಷಯ ಸುಡುಗಾಡಿನದ್ದೇ ಅಲ್ಲವೆ! ಈ ಕಠೋರ ವರ್ಣನೆಗಳನ್ನು ಬಿಟ್ಟು ಜನಮಾನಸದಲ್ಲಿ ಸ್ಮಶಾನದ ಬಗೆಗಿನ ಕಲ್ಪನೆಗಳನ್ನು ಗಮನಿಸೋಣ. ಜನಪದರಲ್ಲಿ ಬೈಗುಳಕ್ಕೆ ಅತಿ ಪ್ರಿಯವಾದ ವಿಷಯವೆಂದರೆ ಸ್ಮಶಾನ ಮತ್ತು ಹೆಣ! ಯಾವುದಕ್ಕೂ ಸಲ್ಲದವನನ್ನು ʻಮನೆಗೆ ಮನುಷ್ಯನಲ್ಲ, ಮಸಣಕ್ಕೆ ಹೆಣವಲ್ಲʼ ಎಂದು ಮೂದಲಿಸುವುದಿದೆ. ಪ್ರಾಂತ್ಯಾವಾರು ಮಟ್ಟದಲ್ಲಿ ಬೈಗುಳಗಳನ್ನು ವಿಂಗಡಿಸಿದರೆ, ಹಳೆ ಮೈಸೂರಿನ ಜನ ಈ ವಿಷಯದಲ್ಲಿ ಗಟ್ಟಿಗರು. (ಉತ್ತರ ಕರ್ನಾಟಕದ ಬೈಗುಳದ ರೀತಿಗಳೇ ಬೇರೆ. ಅದಿಲ್ಲಿ ಬೇಡ ಬಿಡಿ) ʻಅವ್ನ ಹೆಣ ಎತ್ತʼ ಎನ್ನುವುದರಿಂದ ಶುರು ಮಾಡಿದರೆ, ʻಮುಖಾ ಮುಚ್ಚ, ಹೆಜ್ಜೆ ಅಳಸ, ಹೊಗೆ ಹಾಕ, ಹೊತ್ಗಂಡ್ಹೋಗ, ಬಾಯಿಗ್‌ ಮಣ್ಹಾಕ, ಕರಿನಾಗ ಕಚ್ಚ, ಮನೆ ಮಶಾಣಾಗ, ಎಕ್ಕುಟ್ಹೋಗ (ಎಕ್ಕ-ಹುಟ್ಟಿ-ಹೋಗ, ಅಂದರೆ ನಾಶವಾಗು), ಸೀಮೆ ಸುಡುಗಾಡಾಗ…ʼ ಎಂದು ಸಹಸ್ರನಾಮಾವಳಿಯಂತೆ ಸಾವಿನ ಶಾಪಾವಳಿಯನ್ನೇ ಕರೆಯಬಲ್ಲರು. ಅದರಲ್ಲೂ ಕೆಲವು ಹಳೆಯ ತಲೆಮಾರಿನವರು ರಾಗವಾಗಿ ಬೈಗುಳ ಪ್ರಾರಂಭಿಸಿದರೆಂದರೆ ತಾಸುಗಟ್ಟಲೆ ತಡೆ ರಹಿತವಾಗಿ ಬೈಯಬಲ್ಲರು. ಈ ಬೈಗುಳಗಳು ಹಾರೈಸುವುದು ಸಾವು, ನಾಶವನ್ನೇ ಹೊರತು ಮತ್ತೇನಲ್ಲ.

ಯಾವುದೇ ಜನಪದ ಕಲ್ಪನೆಗಳಲ್ಲಿ, ಮಕ್ಕಳ ಕಥೆಗಳಲ್ಲಿ ಸ್ಮಶಾನಕ್ಕೂ, ಹುಣಸೇಮರಕ್ಕೂ, ಭೂತಕ್ಕೂ, ಒಂಥರಾ ನಂಟು. ಊರಾಚೆಗೊಂದು ಸ್ಮಶಾನ, ಅಲ್ಲೊಂದು ಭೂತದಂಥ ಒಂಟಿ ಹುಣಸೆಮರ, ಅದರಲ್ಲೊಂದು ನೇತಾಡುವ ದೆವ್ವ… ಇಂಥ ಕಲ್ಪನೆಯ ಕಥೆಗಳನ್ನು ಬಾಲ್ಯದಲ್ಲಿ ಲೆಕ್ಕವಿಲ್ಲದಷ್ಟು ಕೇಳಿದ್ದಿದೆ. ʻಒಂದಾನೊಂದು ಊರಿನ ಹೊರಗೆ ಭಾರೀ ಹುಣಸೆಮರ/ ಅದರಲ್ಲಿತ್ತು ಒಂದಾನೊಂದು ದೆವ್ವ ಹುಚ್ಚಿ ಥರʼ ಎಂಬ ಎಚ್‌.ಎಸ್‌. ವೆಂಕಟೇಶಮೂರ್ತಿಗಳ ಕವನ ಮಕ್ಕಳಿಗೆ ಕಚುಗುಳಿ ಇಡುವಂತಿದೆ.

ಈ ಹೊತ್ತಿನಲ್ಲಿ ಸುಡುಗಾಡು ಸಿದ್ಧರು ನೆನಪಾಗುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಜಾದೂಗಾರರಂತೆ ಕಂಡು ಬರುತ್ತಿದ್ದ ಅಲೆಮಾರಿ ಜನಾಂಗವಿದು. ಈಗ ಇವರ ಮುಂದಿನ ತಲೆಮಾರುಗಳು ವಿದ್ಯಾಭ್ಯಾಸದೆಡೆಗೆ ಹೊರಳಿರುವುದರಿಂದ ಇವರ ಜೀವನಕ್ರಮ ಬದಲಾಗುತ್ತಿದೆ. ಹಣೆಗೆ ಬೂದಿ ಬಳಿದುಕೊಂಡು, ಕೊರಳಿಗೆ ರುದ್ರಾಕ್ಷಿ ಧರಿಸಿ, ಶುಭಾಶುಭಗಳ ಭವಿಷ್ಯ ಹೇಳುತ್ತಾ, ಇಂದ್ರಜಾಲಿಕರಂತೆ ಏನೇನೋ ಜಾದೂ ಮಾಡುವ ಇವರು, ಸುಡುಗಾಡುಗಳಲ್ಲಿದ್ದು ಸಿದ್ಧಿಗಳನ್ನು ಕರಗತ ಮಾಡಿಕೊಳ್ಳುತ್ತಾರೆಂಬ ಪ್ರತೀತಿಯಿದೆ. ಸುಡುಗಾಡುಗಳೆಂದರೆ ಬರೀ ಇಂಥ ಭಾವಗಳೇ ಬರಬೇಕಿಲ್ಲ ಎಂಬಂತೆ, ಶಿರಸಿಯ ʻನೆಮ್ಮದಿ ಕುಟೀರʼ ಕೆಲಸ ಮಾಡಬಹುದು; ʻಸ್ಮಶಾನವೇ ನಮ್ಮ ನಿತ್ಯ ಭೇಟಿಯ ತಾಣʼ ಎನ್ನುವ ಗೆಳೆಯರ ಬಳಗವೂ ಇರಬಹುದು.

ಇದನ್ನೂ ಓದಿ: ದಶಮುಖ ಅಂಕಣ: …. ನೋಡಲಿಕ್ಕೆ ಹೋಗೋಣು ಬಾರೆ!

ಭಾಷೆಯ ಜಾಯಮಾನದಲ್ಲೂ ಇದರ ಬಗ್ಗೆ ಸಾಕಷ್ಟು ವಿಚಾರಗಳು ಚಾಲ್ತಿಯಲ್ಲಿವೆ. ಭಯಾನಕ ನಿಶ್ಶಬ್ದವನ್ನು ʻಸ್ಮಶಾನ ಮೌನʼ, ಸತ್ತಾಗ ಹುಟ್ಟುವ ವೈರಾಗ್ಯವನ್ನು ʻಸ್ಮಶಾನ ವೈರಾಗ್ಯʼ, ಭೀಕರವಾದ ಅವಸ್ಥೆಯನ್ನು ʻಸ್ಮಶಾನ ಸದೃಶ್ಯʼ, ಯಾರಿಗೂ ಬೇಡದ್ದನ್ನು ʻಮಸಣದ ಹೂವುʼ, ಕಡೆಯ ಯಾತ್ರೆಯನ್ನು ʻಸ್ಮಶಾನ ಯಾತ್ರೆʼ… ನೋಡಿ, ನಮಗೆ ಅಹಿತವಾಗುವ ವಿಷಯವನ್ನೇ ಎಷ್ಟೆಲ್ಲ ರೀತಿಯಲ್ಲಿ ಬಳಸಿಕೊಳ್ಳುತ್ತೇವೆ ನಾವು.

ಇಷ್ಟು ಹೇಳಿದ ಮೇಲೆ ಸ್ಮಶಾನವಾಸಿಯ ಬಗ್ಗೆ ಹೇಳದಿದ್ದರೆ ವಿಷಯವೇ ಅಪೂರ್ಣ. ಮೊದಲೆಲ್ಲ ಊರಿನ ದಕ್ಷಿಣ ದಿಕ್ಕಿನಲ್ಲಿ ಸ್ಮಶಾನಗಳು ಇರುತ್ತಿದ್ದುದರಿಂದ ಈ ದಿಕ್ಕೇ ಅಶುಭ ಎನ್ನುವ ಕಲ್ಪನೆ ಜನಮಾನಸದಲ್ಲಿದೆ. ಹಾಗೆಂದು ʻಆತʼ ದಕ್ಷಿಣ ದಿಕ್ಕಿನ ಒಡೆಯ. ಹೆಸರು ರುದ್ರ, ಇರುವುದು ರುದ್ರಭೂಮಿಯಲ್ಲಿ. ರುಂಡಮಾಲಿ, ಕಪಾಲಿ, ಭೂತಗಣಗಳ ನಾಥ, ಬೂದಿಬಡುಕ… ಇಂಥ ಹಲವು ಹೆಸರುಗಳು ಆತನಿಗೆ. ಜಗತ್ತಿನಲ್ಲಿ ಸೃಷ್ಟಿ ಮತ್ತು ಸ್ಥಿತಿಯನ್ನು ಕಾಪಾಡುವ ಹೊಣೆ ಬ್ರಹ್ಮ ಮತ್ತು ವಿಷ್ಣುವಿಗಿದ್ದರೆ ಈತನಿಗೆ ಲಯದ ಕೆಲಸ. ಹೌದು, ಲಯಕರ್ತನಾದ ಶಿವನ ಬಗೆಗಿನ ಮಾತಿದು. ಇನ್ನೇನು ಬರಲಿರುವ ಶಿವರಾತ್ರಿಯ ಹಿನ್ನೆಲೆಯಲ್ಲಿ ʻಲಯʼ ಎನ್ನುವುದಕ್ಕಿರುವ ಘನತೆಯನ್ನು ಗಮನಿಸಬೇಕಿದೆ ನಾವು. ಜಗತ್ತಿನ ಮುಂದುವರಿಕೆಗೆ ಇದು ಅಗತ್ಯ. ಹಾಗೆಂದೇ ʻಇಲ್ಲʼ ಎನ್ನುವುದಕ್ಕೆ ನಮ್ಮ ಭಾವಕೋಶದಲ್ಲಿ ಯಾವುದೇ ಅರ್ಥವಿದ್ದರೂ, ಅದಕ್ಕೊಂದು ದೈವತ್ವವನ್ನು ಕಲ್ಪಿಸಿದ್ದೇವೆ; ಅದಕ್ಕೊಂದು ಅಧ್ಯಾತ್ಮವನ್ನೂ ಸೃಷ್ಟಿಸಿದ್ದೇವೆ. ʻಮದುವೆಗೋ ಮಸಣಕೋ ಹೋಗೆಂದ ಕಡೆ ಹೋಗು/ ಪದ ಕುಸಿಯೆ ನೆಲವಿಹುದು ಮಂಕುತಿಮ್ಮʼ ಎಂಬುದರ ಅರ್ಥವನ್ನು ಈ ಹಿನ್ನೆಲೆಯಲ್ಲೂ ಗ್ರಹಿಸಬಹುದೇ.

ಇದನ್ನೂ ಓದಿ: ದಶಮುಖ ಅಂಕಣ: ಬಾಗಿಲನು ತೆರೆದು…

Continue Reading

ಸ್ಫೂರ್ತಿ ಕತೆ

Raja Marga Column : ಅಪವಾದ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ; ಗೆಲ್ಲೋದು ಹೇಗೆ?

Raja Marga Column : ಅಪವಾದ ಮತ್ತು ಅಪಮಾನಗಳಿಲ್ಲದ ವ್ಯಕ್ತಿಗಳಿಲ್ಲ. ಯಾರು ಅದನ್ನು ಮೆಟ್ಟಿ ನಿಂತು ಮುನ್ನುಗ್ಗುತ್ತಾರೋ ಅವರು ಗೆಲ್ಲುತ್ತಾರೆ. ಹಾಗಿದ್ದರೆ ಇದನ್ನು ಮೆಟ್ಟಿ ನಿಲ್ಲುವುದು ಹೇಗೆ? ಇಲ್ಲಿದೆ ಆಪ್ತ ಸಲಹೆ

VISTARANEWS.COM


on

Raja Marga Column depressed
Koo
RAJAMARGA

Raja Marga Column : ನನ್ನ ಸ್ನೇಹಿತರೊಬ್ಬರು ತುಂಬಾನೆ ಡಿಪ್ರೆಸ್ (Friend in Depression) ಆಗಿದ್ದರು. ಅವರು ಹೇಳುವ ಪ್ರಕಾರ ಅವರಿಗೆ ಸಾಯುವಷ್ಟು ಅಪಮಾನ (Faced Insult) ಆಗಿತ್ತು. ಅವರು ತುಂಬಾ ನಂಬಿದ್ದ ವ್ಯಕ್ತಿಗಳು ಒಟ್ಟಾಗಿ ಅವರ ಮೇಲೆ ಬಹಳ ದೊಡ್ಡ ಆರೋಪ ಹೊರಿಸಿ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದರು. ಅವರ ಇಡೀ ಜೀವನದಲ್ಲಿ ಪೊಲೀಸ್ ಸ್ಟೇಷನ್ (Police station) ಮೆಟ್ಟಿಲು ಏರದಿದ್ದ ಅವರು ಈಗ ಅಲ್ಲಿಗೆ ಹೋಗಿ ವಿಚಾರಣೆ ಎದುರಿಸಬೇಕಾಗಿತ್ತು. ನನ್ನ ಯಾವ ತಪ್ಪೂ ಇಲ್ಲ ಎಂದವರು ಹೇಳಿದರು.

ಅವರ ನೋವು ಏನೆಂದರೆ ಅವರು ಯಾರನ್ನು ತುಂಬಾ ನಂಬಿದ್ದರೋ, ಯಾರು ಅವರಿಂದ ಹೆಚ್ಚು ಪ್ರಯೋಜನ ಪಡೆದಿದ್ದರೋ ಅವರು ಬೆನ್ನ ಹಿಂದೆ ಚೂರಿ ಹಾಕಿದ್ದಾರೆ. ನಂಬಿಕೆ ದ್ರೋಹ ಮಾಡಿದ್ದಾರೆ ಅನ್ನೋದು ಅವರ ಅಳಲು. ಅವರು ನನ್ನ ಮುಂದೆ ಕೂತು ಕಣ್ಣೀರು ಸುರಿಸಿ ಅವರ ಮನಸನ್ನು ಹಗುರ ಮಾಡಿಕೊಂಡರು. ನಾನು ಅವರನ್ನು ತಡೆಯಲಿಲ್ಲ. ಹಲವು ಬಾರಿ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಯೋಚನೆ ಕೂಡ ಬಂದಿತ್ತು ಎಂದರು. ಅವರ ಮಾತು ಪೂರ್ತಿ ಮುಗಿಯುವತನಕ ನಾನು ಮಾತಾಡಲಿಲ್ಲ.

Raja Marga Column : ಅಪವಾದಗಳು ಎಂಬ ಅಗ್ನಿ ದಿವ್ಯಗಳು

ಇದು ಪ್ರತಿಯೊಬ್ಬರ ಬದುಕಿನಲ್ಲಿಯೂ ಬರುವ ಒಂದು ಮಾನಸಿಕ ಸ್ಥಿತಿ. ಅವರ ದುಃಖಕ್ಕೆ ಪ್ರಮುಖ ಕಾರಣ ಅಂದರೆ…

facing accusations

1. ಅವರು ತಪ್ಪು ವ್ಯಕ್ತಿಗಳನ್ನು ನಂಬಿದ್ದು ಮತ್ತು ಅವರನ್ನು ಭಾರಿ ಬೆಳೆಸಿದ್ದು.
2. ಪ್ರಾಕ್ಟಿಕಲ್ ಆಗಿ ಯೋಚನೆ ಮಾಡದೆ ಭಾವನಾತ್ಮಕ ಆಗಿ ಯೋಚನೆ ಮಾಡಿದ್ದು.
3. ತನ್ನ ಬಗ್ಗೆ ಒಳ್ಳೆಯ ಭಾವನೆ ಹೊಂದಿರುವ ವ್ಯಕ್ತಿಗಳನ್ನು ನಿರ್ಲಕ್ಷ್ಯ ಮಾಡಿದ್ದು.
4. ಇಂತಹ ಸೂಕ್ಷ್ಮ ವಿಷಯಗಳನ್ನು ತನ್ನ ಕುಟುಂಬದ ಜೊತೆಗೆ ಗುಟ್ಟು ಮಾಡಿದ್ದು. ಅವರ ನಿಜವಾದ ಸಮಸ್ಯೆಗಳು ಅವರ ಹೆಂಡತಿಗೂ ಗೊತ್ತಿರಲಿಲ್ಲ.
5. ತಾನು ತುಂಬಾ ಕ್ಲೀನ್ ಇಮೇಜ್ ವ್ಯಕ್ತಿ ಎಂದು ಗಾಢವಾಗಿ ನಂಬುತ್ತ ಬಂದದ್ದು. (ಅದು ತಪ್ಪಲ್ಲ)

depression

6. ತನ್ನದೇ ಬಲೆಯಲ್ಲಿ ತಾನೇ ಸಿಲುಕಿ ಒದ್ದಾಡುವ ಜೇಡದ ಹಾಗೆ ಉಸಿರುಗಟ್ಟಿ ಹೋದದ್ದು.
7. ಸಮಸ್ಯೆಗಳಿಂದ ಹೊರಬರಲು ಒಂದಿಷ್ಟೂ ಪ್ರಯತ್ನ ಮಾಡದೆ ಆ ಸಮಸ್ಯೆಯೇ ದೊಡ್ಡದು ಎಂದು ಭಾವಿಸಿದ್ದು.
8. ಯಾವುದಾದರೂ ಒಬ್ಬ ಒಳ್ಳೆಯ ನ್ಯಾಯವಾದಿಯನ್ನು ಸಂಪರ್ಕ ಮಾಡಿ ಕಾನೂನು ರಕ್ಷಣೆ ಪಡೆಯದೆ ಹೋದದ್ದು.
9. ನನಗೆ ಹೇಳಿದ ಹಾಗೆ ಹತ್ತಾರು ಮಂದಿಗೆ ಅವರ ಸ್ಟೋರಿ ಹೇಳಿ ಕಣ್ಣೀರು ಹಾಕಿ ಸಿಂಪಥಿ ಪಡೆಯಲು ಪ್ರಯತ್ನ ಮಾಡಿದ್ದು.
10. ಪೊಲೀಸ್ ಸ್ಟೇಷನ್‌ಗೆ ಹೋಗುವುದು ಮತ್ತು ವಿಚಾರಣೆ ಎದುರಿಸುವುದು ಅಪಮಾನ ಎಂದು ತಪ್ಪು ಯೋಚನೆಯನ್ನು ಮಾಡಿದ್ದು.

ಕೆಲವರು ಇರೋದೇ ಹೀಗೆ!

ಅವರು ಸಮಸ್ಯೆಯ ಒಳಗೇ ಕೂತು ಪರಿಹಾರ ಹುಡುಕುತ್ತಾರೆ. ಯಾವುದೇ ಸಮಸ್ಯೆಗೆ ಪರಿಹಾರ ದೊರೆಯಬೇಕು ಅಂತಾದರೆ ಆ ಸಮಸ್ಯೆಯಿಂದ ಹೊರಗೆ ನಿಂತು ಪರಿಹಾರ ಹುಡುಕಬೇಕು. ತನ್ನ ಮೇಲೆ ನಂಬಿಕೆ ಇಟ್ಟು ಯಾರು ನಮ್ಮ ಜೊತೆಗೆ ನಿಲ್ಲುತ್ತಾರೋ ಅವರ ಬೆಂಬಲ ಪಡೆಯಬೇಕು. ತನಗೆ ನೈತಿಕ ಬೆಂಬಲ ಕೊಡುವ ವ್ಯಕ್ತಿಗಳ ಪಟ್ಟಿ ಮಾಡಿ ಅವರ ಜೊತೆಗೆ ಹೆಚ್ಚು ಮನಸು ಬಿಚ್ಚಿ ಮಾತಾಡಬೇಕು. ಮುಖ್ಯವಾಗಿ ತನ್ನ ಕುಟುಂಬದ ವಿಶ್ವಾಸವನ್ನು ಹೆಚ್ಚು ಉಪಯೋಗ ಮಾಡಬೇಕು. ಹೆಂಡತಿಯ ಜೊತೆಗೆ ಇಂತಹ ಸಂಗತಿ ಗುಟ್ಟು ಮಾಡಬಾರದು.

ಯಾವುದೇ ಸಮಸ್ಯೆಯ ಪರಿಹಾರಕ್ಕೆ ಹಲವು ಮಾರ್ಗಗಳು ಇರುತ್ತವೆ. ಅವುಗಳನ್ನು ಪಟ್ಟಿ ಮಾಡಿ ಅವುಗಳಲ್ಲಿ ಕಡಿಮೆ ರಿಸ್ಕ್ ಇರುವ ಮಾರ್ಗವನ್ನು ಮತ್ತು ಕ್ಷಿಪ್ರವಾಗಿ ಪರಿಹಾರವನ್ನು ಕೊಡುವ ಮಾರ್ಗವನ್ನು ಆರಿಸಿಕೊಂಡರೆ ಇಂತಹ ಸಾವಿರ ಸಮಸ್ಯೆ ಬಂದರೂ ಗೆಲ್ಲುವುದು ಖಚಿತ.

ಇದನ್ನೂ ಓದಿ : Raja Marga Column : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಇಲ್ಲಿದೆ 10 ಸೂತ್ರ

Raja Marga Column accusations

ನಾನು ಅವರಿಗೆ ಹೇಳಿದ ಸಾಂತ್ವನದ ಮಾತುಗಳು

1. ಅಪವಾದಗಳು ರಾಮಾಯಣದಲ್ಲಿ ಶ್ರೀರಾಮನನ್ನು ಕೂಡ ಬಿಡಲಿಲ್ಲ. ಹರಿಶ್ಚಂದ್ರ ಕೂಡ ಅದಕ್ಕೆ ಹೊರತಲ್ಲ. ಈಶ್ವರ ದೇವರ ಕೈಗೆ ಬ್ರಹ್ಮ ಕಪಾಲ ಅಂಟಿಕೊಂಡು ಭಿಕ್ಷೆ ಬೇಡುವುದು ತಪ್ಪಲಿಲ್ಲ.
2. ಈ ಅಪವಾದಗಳು ನಮ್ಮನ್ನು ಟೆಸ್ಟ್ ಮಾಡಲು ಬರುತ್ತವೆ. ನಿಮ್ಮನ್ನು ಮುಳುಗಿಸಲು ಅಲ್ಲ. ವಿಲ್ ಪವರ್ ಸ್ಟ್ರಾಂಗ್ ಮಾಡಿಕೊಂಡರೆ ಗೆಲ್ಲುವುದು ಖಚಿತ.
3. ಖ್ಯಾತ ಹಾಸ್ಯ ಸಾಹಿತಿ ಬೀಚಿ ಹೇಳಿದ ಹಾಗೆ ಸಮಸ್ಯೆಗಳು ಅಂದರೆ ಸಿಟಿ ಬಸ್ಸುಗಳು ಹಾಗೆ. ಬಂದರೆ ಹಿಂದೆ ಹಿಂದೆ ಬರ್ತಾ ಇರುತ್ತವೆ. ಇಲ್ಲಾಂದರೆ ಬರೋದೇ ಇಲ್ಲ!
4. ಅಪವಾದಗಳು ತಾತ್ಕಾಲಿಕ. ಮೋಡ ಮುಸುಕಿದ ಸೂರ್ಯನ ಹಾಗೆ. ಆ ಮೋಡಗಳು ಕರಗಿ ಹೋಗಿ ಹೊರಬಂದ ಸೂರ್ಯ ಇನ್ನಷ್ಟು ಬೆಳಗುತ್ತಾನೆ.
5. ಜೀವನದ ಯಾವುದೇ ಘಟ್ಟದಲ್ಲಿಯೂ ನಮ್ಮನ್ನು ಪ್ರೀತಿಸುವವರ ಸಂಖ್ಯೆಯು ನಮ್ಮನ್ನು ದ್ವೇಷ ಮಾಡುವವರ ಸಂಖ್ಯೆಗಿಂತ ಹೆಚ್ಚಾಗಿರುತ್ತದೆ.

pains are like clouds

6. ಅಪವಾದಗಳನ್ನು ಗೆದ್ದುಬಂದ ನಂತರ ನಾವು ಮೊದಲಿಗಿಂತ ಹೆಚ್ಚು ಸ್ಟ್ರಾಂಗ್ ಆಗಿರುತ್ತೇವೆ.
7. ನಿಮ್ಮ ಆತ್ಮವಿಶ್ವಾಸ ಮತ್ತು ತಾಳ್ಮೆ ನಿಮ್ಮನ್ನು ಸದಾ ಗೆಲ್ಲಿಸುತ್ತದೆ. ದುಡುಕು ನಿರ್ಧಾರ ತೆಗೆದುಕೊಳ್ಳುವ ಮುನ್ನ ನೂರು ಬಾರಿ ಯೋಚಿಸಿ.
8. ಯಾರನ್ನು ನಂಬಬೇಕು, ಯಾರನ್ನು ಎಷ್ಟು ನಂಬಬೇಕು, ಯಾರನ್ನು ನಿಮ್ಮ ಭಾವನಾ ವಲಯದ ಒಳಗೆ ತೆಗೆದುಕೊಳ್ಳಬೇಕು ಎಂದು ನಿರ್ಧರಿಸುವವರು ನೀವೇ! ತಪ್ಪು ವ್ಯಕ್ತಿಗಳು ನಮಗೆ ಜೀವನ ಪಾಠ ಕಲಿಸುತ್ತಾರೆ.

9. ಕಾನೂನು ಯಾವಾಗಲೂ ಸಂತ್ರಸ್ತರಿಗೆ ರಕ್ಷಣೆ ಕೊಡುತ್ತದೆ ಮತ್ತು ಸತ್ಯದ ಪರವಾಗಿ ಇರುತ್ತದೆ. ಮಳೆ ಬಂದಾಗ ಮಳೆ ಬಂತಲ್ಲ ಎಂದು ದುಃಖ ಪಡುವುದಲ್ಲ. ಕೊಡೆ ಬಿಡಿಸಿ ಮುನ್ನಡೆಯಬೇಕು.

10. ಜಗತ್ತಿನ ಯಾವ ಪುರಾಣಗಳಲ್ಲಿಯೂ ಕೊನೆಗೆ ಗೆದ್ದದ್ದು ಒಳ್ಳೆಯತನ. ರಾಮಾಯಣದಲ್ಲಿ ಗೆದ್ದವನು ರಾಮ. ರಾವಣ ಅಲ್ಲ. ಮಹಾಭಾರತದಲ್ಲಿ ಗೆದ್ದವರು ಪಾಂಡವರು.ಕೌರವರು ಅಲ್ಲ.

pains and hugs

ಭರತ ವಾಕ್ಯ

ನೀವು ನಾನು ಹೇಳಿದ ಅಂಶಗಳನ್ನು ಅಪ್ಲೈ ಮಾಡಿ ಗೆದ್ದು ಬನ್ನಿ ಎಂದು ಅವರನ್ನು ಬೀಳ್ಕೊಟ್ಟೆ. ಎರಡು ದಿನಗಳ ನಂತರ ಇವತ್ತು ಬೆಳಿಗ್ಗೆ ಅವರದೇ ಕಾಲ್ ಬಂತು. ಅವರ ಧ್ವನಿಯಲ್ಲಿ ಗೆದ್ದ ಖುಷಿ ಇತ್ತು. ನಾನು ಆ ಕೇಸನ್ನು ಗೆದ್ದೆ ಸರ್ ಎಂದರು. ಅವರಿಗೆ ಅಭಿನಂದನೆ ಹೇಳಿ ಫೋನ್ ಇಟ್ಟೆ.

Continue Reading
Advertisement
Doctor listens to the human lungs
ಆರೋಗ್ಯ5 mins ago

Health Tips For Lungs: ಈ ಆಹಾರ ತಿನ್ನಿ, ನಿಮ್ಮ ಶ್ವಾಸಕೋಶದ ಆರೋಗ್ಯ ಹೆಚ್ಚಿಸಿಕೊಳ್ಳಿ

kannada sign boards
ಪ್ರಮುಖ ಸುದ್ದಿ27 mins ago

ಕನ್ನಡ ನಾಮಫಲಕ ಅಳವಡಿಕೆಗೆ ಇಂದೇ ಕೊನೆಯ ದಿನ, ಇಲ್ಲದಿದ್ದರೆ ಬೀಗ ಖಚಿತ

graveyard
ಪ್ರಮುಖ ಸುದ್ದಿ35 mins ago

ದಶಮುಖ ಅಂಕಣ: ಮಸಣದಲ್ಲಿ ಕೆಲವು ಕ್ಷಣ

KAS Recruitment 2024 invited for 384 KAS posts Apply from March 4
ಉದ್ಯೋಗ35 mins ago

KAS Recruitment 2024: 384 ಕೆಎಎಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾರ್ಚ್‌ 4ರಿಂದಲೇ ಅರ್ಜಿ ಸಲ್ಲಿಸಿ

Raja Marga Column depressed
ಸ್ಫೂರ್ತಿ ಕತೆ44 mins ago

Raja Marga Column : ಅಪವಾದ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ; ಗೆಲ್ಲೋದು ಹೇಗೆ?

slim woman good health digestion
ಆರೋಗ್ಯ1 hour ago

Health Tips For Digestion: ಹೊಟ್ಟೆಬಿರಿಯುವಂತೆ ಉಂಡ ಬಳಿಕ ಜೀರ್ಣಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸರಳೋಪಾಯ!

Karnataka Weather Rain for first week of March
ಕರ್ನಾಟಕ2 hours ago

Karnataka Weather : ಕರ್ನಾಟಕದಲ್ಲಿ ಹೆಚ್ಚುತ್ತಿದೆ ಸೆಕೆ; ಮಾರ್ಚ್‌ ಮೊದಲ ವಾರಕ್ಕೆ ಮಳೆ?

Electricity Bil
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ವಿದ್ಯುತ್‌ ದರ ಇಳಿಕೆ ಶ್ಲಾಘನೀಯ ಕ್ರಮ

dina bhavishya read your daily horoscope predictions for February 28 2024
ಭವಿಷ್ಯ3 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Jain (Deemed-to-be University)
ಬೆಂಗಳೂರು8 hours ago

ಜೈನ್ ‘ಸ್ಕೂಲ್ ಆಫ್ ಸೈನ್ಸಸ್‌’ನಲ್ಲಿ ಯಶಸ್ವಿಯಾಗಿ ನೆರವೇರಿದ SciCon-2024; 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ3 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ2 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ2 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ3 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌