Dina Bhavishya : ಈ ರಾಶಿಯವರಿಗೆ ಇಂದು ಅನಾರೋಗ್ಯ ಭಯ! ಸ್ವಲ್ಪ ಹುಷಾರು - Vistara News

ಪ್ರಮುಖ ಸುದ್ದಿ

Dina Bhavishya : ಈ ರಾಶಿಯವರಿಗೆ ಇಂದು ಅನಾರೋಗ್ಯ ಭಯ! ಸ್ವಲ್ಪ ಹುಷಾರು

Dina Bhavishya : ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ,ಶರದ್ ಋತು,ಶುಕ್ಲ ಪಕ್ಷದ ಪಾಡ್ಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

dina bhavishya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಬೆಳಗ್ಗೆ 07:04 ಕ್ಕೆ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ತುಲಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರಿಗೆ ಕಾರ್ಯ ಸ್ಥಳದಲ್ಲಿ ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ದಿನದ ಕೊನೆಯಲ್ಲಿ ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ಮಿಥುನ ರಾಶಿಯ ವಿವಾಹಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ತುಲಾ ರಾಶಿಯವರಿಗೆ ಉದ್ಯೋಗದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಹೆಚ್ಚಿನ ಒತ್ತಡ ಇರಲಿದೆ. ಜತೆಗೆ ಮನೆಯಲ್ಲಿನ ಭಿನ್ನಾಭಿಪ್ರಾಯಗಳು ನಿಮ್ಮ ಏಕಾಗ್ರತೆಗೆ ದಕ್ಕೆ ತರುವ ಸಾಧ್ಯತೆ ಇದೆ. ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (15-10-2023)

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಶುಕ್ಲ ಪಕ್ಷ.
ತಿಥಿ:
ಪಾಡ್ಯ 24:32 ವಾರ: ಭಾನುವಾರ
ನಕ್ಷತ್ರ: ಚಿತ್ತಾ 18:11 ಯೋಗ: ವೈಧೃತಿ 10:22
ಕರಣ: ಕಿಂಸ್ತುಘ್ನ 12:01 ಅಮೃತ ಕಾಲ: ಬೆಳಗ್ಗೆ 11:20 ರಿಂದ 01:03 ರವರೆಗೆ
ದಿನದ ವಿಶೇಷ: ನವರಾತ್ರಿ ಪ್ರಥಮ ದಿವಸ ಪೂಜೆ ಶೈಲಪುತ್ರಿ ಅವತಾರ, ಜಯಲಕ್ಷ್ಮೀ ವ್ರತ, ಮೈಸೂರು ದಸರಾಗೆ ಚಾಲನೆ , ಘಟ ಸ್ಥಾಪನೆ

ಸೂರ್ಯೋದಯ : 06:24  ಸೂರ್ಯಾಸ್ತ : 07:00

ರಾಹುಕಾಲ: ಮಧ್ಯಾಹ್ನ 04:32 ರಿಂದ 06:01
ಗುಳಿಕಕಾಲ: ಮಧ್ಯಾಹ್ನ 03:03 ರಿಂದ 04:32
ಯಮಗಂಡಕಾಲ: ಮಧ್ಯಾಹ್ನ 12:05 ರಿಂದ 01:34

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಮಾನಸಿಕವಾಗಿ ನೆಮ್ಮದಿ ಇರಲಿದೆ. ಅಗತ್ಯ ವಸ್ತುಗಳ ಖರೀದಿಗಾಗಿ ಖರ್ಚು ಹೆಚ್ಚಾಗಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಕಾರ್ಯ ಸ್ಥಳದಲ್ಲಿ ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ದಿನದ ಕೊನೆಯಲ್ಲಿ ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ಆರೋಗ್ಯ ಮಧ್ಯಮವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಷಭ: ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿ ವಹಿಸುವುದು ಸೂಕ್ತ. ನಿಮ್ಮ ನಡವಳಿಕೆಯಿಂದಾಗಿ ಕುಟುಂಬದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ಕುಟುಂಬದ ಆಪ್ತರೊಂದಿಗೆ ಮಾತುಕತೆ ಇರಲಿದೆ. ಆರೋಗ್ಯ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಮಿಥುನ: ಹೂಡಿಕೆ ವ್ಯವಹಾರದಲ್ಲಿ ತೊಡಗುವ ಸಾಧ್ಯತೆ ಇದೆ. ಬಿಡುವಿರದ ಕೆಲಸದ ಮಧ್ಯೆಯು ಆರೋಗ್ಯ ಪರಿಪೂರ್ಣವಾಗಿರಲಿದೆ. ಆಪ್ತರೊಂದಿಗೆ ಮಾತುಕತೆ ಇರಲಿದೆ. ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ ಇದೆ. ವಿವಾಹಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಕಟಕ: ಪ್ರಯಾಣವನ್ನು ಬೆಳೆಸುವ ಸಾಧ್ಯತೆ ಇದ್ದು, ಇದರಿಂದ ನೀವು ದೈಹಿಕವಾಗಿ ಬಳಲುವ ಸಾಧ್ಯತೆ ಇದೆ. ಹೂಡಿಕೆ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಈ ಹಿಂದೆ ನೀಡಿದ ಹಣ ಮರಳುವ ಸಾಧ್ಯತೆ ಇದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಸಿಂಹ: ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ಅನಾವಶ್ಯಕ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವಿರಿ. ಆರೋಗ್ಯ ಪರಿಪೂರ್ಣವಾಗಿರಿ.ಉದ್ಯೋಗಿಗಳಿಗೆ ಉತ್ಸಾಹದ ದಿನವಿದು. ವ್ಯಾಪಾರ ವ್ಯವಹಾರದಲ್ಲಿ ಸಾಧಾರಣ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 2

Horoscope Today

ಕನ್ಯಾ: ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಗತ್ಯ ಖರ್ಚುಗಳ ಮೇಲೆ ನಿಯಂತ್ರಣ ಸಾಧಿಸುವಿರಿ. ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ, ಕಿರಿಕಿರಿ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಉದ್ಯೋಗದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಹೆಚ್ಚಿನ ಒತ್ತಡ, ಮನೆಯಲ್ಲಿನ ಭಿನ್ನಾಭಿಪ್ರಾಯಗಳು ನಿಮ್ಮ ಏಕಾಗ್ರತೆಗೆ ದಕ್ಕೆ ತರುವ ಸಾಧ್ಯತೆ ಇದೆ. ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ದೈಹಿಕ ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಆತುರದಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವುದು ಬೇಡ. ದಿನದ ಮಟ್ಟಿಗೆ ಯಾವುದೇ ಹೂಡಿಕೆ ವ್ಯವಹಾರದಲ್ಲಿ ತೊಡಗುವುದರಿಂದ ನಷ್ಟವಾಗುವ ಸಾಧ್ಯತೆ ಇದೆ. ಕೆಲವು ರಹಸ್ಯ ಸುದ್ದಿಗಳಿಂದ ನಿಮಗೆ ಅಚ್ಚರಿ ಉಂಟಾಗಬಹುದು. ನಿಮ್ಮ ಅಚ್ಚು ಕಟ್ಟು ಕೆಲಸದಿಂದ ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ಆರ್ಥಿಕ ಪ್ರಗತಿ ಸಾಧಾರಣವಾಗಿರುವುದರಿಂದ ಒತ್ತಡ ಹೆಚ್ಚಾಗಲಿದೆ. ಪ್ರಮುಖ ಕೆಲಸ ಕಾರ್ಯಗಳು ನಿಧಾನವಾಗಿ ಸಾಗಲಿದೆ. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಚರ್ಚಿಸುವಿರಿ . ಉದ್ಯೋಗಿಗಳಿಗೆ ಶುಭ ಫಲ ಇರಲಿದೆ. ದೈಹಿಕ ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 1

ಪಿತೃಪಕ್ಷದಲ್ಲಿ ಈ ಕಾರ್ಯವನ್ನು ಮಾಡಲೇಬೇಕು

Horoscope Today

ಮಕರ: ಅನೇಕ ಕಾರಣಾಂತರಗಳಿಂದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಪ್ರಗತಿ ಕಂಡರು, ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆಪ್ತರೊಂದಿಗೆ ಮಾತುಕತೆಯಲ್ಲಿ ತೊಡಗುವಿರಿ. ವ್ಯಾಪಾರದ ಉದ್ದೇಶದಿಂದಾಗಿ ಕೈಕೊಂಡ ಪ್ರವಾಸದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯ ಕೊಂಚಮಟ್ಟಿಗೆ ಹದಗೆಡುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕುಂಭ: ಮನರಂಜನೆಗಾಗಿ ಸಮಯವನ್ನು ಕಳೆಯುವಿರಿ. ಸೃಜನಶೀಲ ಕಾರ್ಯಗಳಿಂದಾಗಿ ವ್ಯಕ್ತಿತ್ವ ಪ್ರಕಾಶಿಸುವ ಸಾಧ್ಯತೆ ಇದೆ. ನಿಮ್ಮ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳುವಿರಿ.ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಪಡೆಯುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?

Horoscope Today

ಮೀನ: ಆಹಾರದ ವ್ಯತ್ಯಾಸದ ಕ್ರಮದಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರು, ಕಾಳಜಿ ವಹಿಸುವುದು ಸೂಕ್ತ.ಹೂಡಿಕೆ ಕುರಿತಾಗಿ ಆಲೋಚನೆ ಮಾಡುವಿರಿ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 6

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

RBI Fine: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಆರ್‌ಬಿಐ 1.31 ಕೋಟಿ ರೂ. ದಂಡ; ಕಾರಣ ಹೀಗಿದೆ

RBI Fine: ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿ ಎರಡು ರಾಜ್ಯಗಳಲ್ಲಿರುವ ರಾಜ್ಯ ಸರ್ಕಾರಿ ಒಡೆತನದ ನಿಗಮಗಳಿಗೆ ಸಾಲ ನೀಡಿರುವುದು ಸೇರಿ ಹಲವು ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಪಿಎನ್‌ಬಿಗೆ ಆರ್‌ಬಿಐ ನೋಟಿಸ್‌ ಜಾರಿಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಬಳಿಕ ಆರ್‌ಬಿಐ ದಂಡ ವಿಧಿಸಿದೆ ಎಂದು ತಿಳಿದುಬಂದಿದೆ.

VISTARANEWS.COM


on

RBI Fine
Koo

ಮುಂಬೈ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (Punjab National Bank) ಭಾರತೀಯ ರಿಸರ್ವ್‌ ಬ್ಯಾಂಕ್‌ 1.31 ಕೋಟಿ ರೂಪಾಯಿ ದಂಡ ವಿಧಿಸಿದೆ. ಆರ್‌ಬಿಐ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಕೇಂದ್ರೀಯ ಬ್ಯಾಂಕ್‌ ಪಿಎನ್‌ಬಿಗೆ (PNB) ದಂಡ ವಿಧಿಸಿದೆ. ಕೆವೈಸಿ (Know Your Customer), ಸಾಲಗಳು ಹಾಗೂ ಅಡ್ವಾನ್ಸಸ್‌ ಕುರಿತು ನಿಯಮಗಳನ್ನು ಪಾಲಿಸಲು ಪಿಎನ್‌ಬಿ ವಿಫಲವಾದ ಕಾರಣ ಆರ್‌ಬಿಐ ದಂಡದ (RBI Fine) ಬರೆ ಎಳೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿ ಎರಡು ರಾಜ್ಯಗಳಲ್ಲಿರುವ ರಾಜ್ಯ ಸರ್ಕಾರಿ ಒಡೆತನದ ನಿಗಮಗಳಿಗೆ ಸಾಲ ನೀಡಿರುವುದು ಸೇರಿ ಹಲವು ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಪಿಎನ್‌ಬಿಗೆ ಆರ್‌ಬಿಐ ನೋಟಿಸ್‌ ಜಾರಿಗೊಳಿಸಿತ್ತು. ನೋಟಿಸ್‌ಗೆ ಪಿಎನ್‌ಬಿ ನೀಡಿದ ಪ್ರತಿಕ್ರಿಯೆಯ ಆಧಾರದ ಮೇಲೆ ಆರ್‌ಬಿಐ ದಂಡ ವಿಧಿಸಿದೆ ಎಂದು ತಿಳಿದುಬಂದಿದೆ.

RBI Balance Sheet

ಬ್ಯಾಂಕ್‌ ಆಫ್‌ ಇಂಡಿಯಾಗೆ ಕಳೆದ ತಿಂಗಳು ದಂಡ

ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಕಳೆದ ಜೂನ್‌ ತಿಂಗಳಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ 1.45 ಕೋಟಿ ರೂ. ದಂಡ ವಿಧಿಸಿತ್ತು. ಸಾಲಗಳು ಹಾಗೂ ಮುಂಗಡಗಳು, ಗ್ರಾಹಕರ ರಕ್ಷಣೆಯ ಕುರಿತು ಆರ್‌ಬಿಐ ಜಾರಿಗೆ ತಂದಿರುವ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಮುಂಬೈ ಮೂಲದ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ದಂಡ ವಿಧಿಸಲಾಗಿತ್ತು.

ಅನುತ್ಪಾದಕ ಆಸ್ತಿ (NPA) ಬಿಕ್ಕಟ್ಟು ನಿವಾರಣೆ, ಬ್ಯಾಂಕ್‌ಗಳ ದಿವಾಳಿತನ ತಡೆಗಾಗಿ ಹಲವು ನಿಯಮಗಳನ್ನು ಆರ್‌ಬಿಐ ಜಾರಿಗೆ ತಂದಿದೆ. ಹಾಗಾಗಿ, ಎಲ್ಲ ಬ್ಯಾಂಕ್‌ಗಳು ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಿಯಮಗಳನ್ನು ಪಾಲಿಸುವಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಆರ್‌ಬಿಐ ದಂಡ ವಿಧಿಸುತ್ತದೆ. ಆರ್‌ಬಿಐ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿಯೇ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ವಹಿವಾಟನ್ನು ಸ್ಥಗಿತಗೊಳಿಸಲಾಗಿದೆ.

ಕೆಲ ತಿಂಗಳ ಹಿಂದೆಯೂ ಮೂರು ಬ್ಯಾಂಕ್‌ಗಳಿಗೆ ಆರ್‌ಬಿಐ ದಂಡ ವಿಧಿಸಿತ್ತು. ಎಸ್‌ಬಿಐಗೆ 2 ಕೋಟಿ ರೂ. ದಂಡ ವಿಧಿಸಲಾಗಿತ್ತು. ಠೇವಣಿದಾರರ ಶೈಕ್ಷಣಿಕ ಜಾಗೃತಿ ಫಂಡ್‌ ಯೋಜನೆ (2014) ಅಡಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ದಂಡ ವಿಧಿಸಿತ್ತು. ಆದಾಯ ಗುರುತಿಸುವ ಮಾನದಂಡಗಳು, ಅನುತ್ಪಾದಕ ಆಸ್ತಿ ಪತ್ತೆಹಚ್ಚುವಲ್ಲಿ ಚ್ಯುತಿ ಸೇರಿ ಹಲವು ಕಾರಣಗಳಿಂದಾಗಿ ಸಿಟಿ ಯುನಿಯನ್‌ ಬ್ಯಾಂಕ್‌ಗೆ 66 ಲಕ್ಷ ರೂ. ದಂಡ ವಿಧಿಸಿತ್ತು. ಮತ್ತೊಂದೆಡೆ, ಆರ್‌ಬಿಐ ನಿರ್ದೇಶನಗಳನ್ನು ಪಾಲಿಸುವಲ್ಲಿ ವಿಫಲವಾದ ಕೆನರಾ ಬ್ಯಾಂಕ್‌ಗೆ 32.30 ಲಕ್ಷ ರೂ. ದಂಡ ವಿಧಿಸಿತ್ತು.

ಇದನ್ನೂ ಓದಿ: RBI Dividend: ಆರ್‌ಬಿಐನಿಂದ ಕೇಂದ್ರಕ್ಕೆ 2.11 ಲಕ್ಷ ಕೋಟಿ ರೂ.‌ ಡಿವಿಡೆಂಡ್! ಮುಂದಿನ ಸರ್ಕಾರಕ್ಕೆ ವರ!

Continue Reading

ಕರ್ನಾಟಕ

Namma Metro: ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ನಾಳೆಯಿಂದ ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇವೆ

Namma Metro: ಬೆಂಗಳೂರಿನ ಮೆಟ್ರೋ ನೇರಳೆ ಮಾರ್ಗದಲ್ಲಿ ಪ್ರಸ್ತುತ 9 ರೈಲುಗಳಷ್ಟೇ ಕಾರ್ಯಾಚರಣೆ ಮಾಡುತ್ತಿದ್ದವು. ಜುಲೈ 6ರಿಂದ ಹೆಚ್ಚುವರಿಯಾಗಿ 15 ರೈಲುಗಳು ಕಾರ್ಯಾಚರಣೆ ನಡೆಸಲಿವೆ.

VISTARANEWS.COM


on

Namma Metro
Koo

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ (Namma Metro) ಬಿಎಂಆರ್‌ಸಿಎಲ್‌ ಗುಡ್ ನ್ಯೂಸ್ ನೀಡಿದೆ. ನಾಳೆಯಿಂದ (ಜುಲೈ 6) ನೇರಳೆ ಮಾರ್ಗದಲ್ಲಿ ಹೆಚ್ಚುವರಿ ಮೆಟ್ರೋ ರೈಲುಗಳು ಸಂಚರಿಸಲಿದ್ದು, ಪ್ರಯಾಣಿಕರ ಒತ್ತಾಯದ ಮೇರೆಗೆ ಹೆಚ್ಚುವರಿ ಮೆಟ್ರೋ ಕಾರ್ಯಾಚರಣೆ ನಡೆಸಲು ವ್ಯವಸ್ಥೆ ಮಾಡಲಾಗಿದೆ.

ನೇರಳೆ ಮಾರ್ಗದಲ್ಲಿ ಪ್ರಸ್ತುತ 9 ರೈಲುಗಳಷ್ಟೇ ಕಾರ್ಯಾಚರಣೆ ಮಾಡುತ್ತಿದ್ದವು. ಜುಲೈ 6ರಿಂದ ಹೆಚ್ಚುವರಿಯಾಗಿ 15 ರೈಲುಗಳು ಕಾರ್ಯಾಚರಣೆ ನಡೆಸಲಿವೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಎಲ್ಲಾ ಹೆಚ್ಚುವರಿ ಮೆಟ್ರೋ ಸೇವೆ ಆರಂಭವಾಗಲಿದೆ. ಈ ಮೂಲಕ ನೇರಳೆ ಮಾರ್ಗದಲ್ಲಿ ಪ್ರತೀ 3.5 ನಿಮಿಷಕ್ಕೊಂದು ರೈಲು ಸೇವೆ ಇರಲಿದೆ, ಇನ್ನುಳಿದಂತೆ ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಇದನ್ನೂ ಓದಿ | Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಬಿ.ಎಂ.ಆ‌ರ್.ಸಿ.ಎಲ್, ಜುಲೈ 6ರಿಂದ ಜಾರಿಗೆ ಬರುವಂತೆ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದು, ನಾಡಪ್ರಭು ಕೆಂಪೇಗೌಡ ನಿಲ್ದಾಣ – ಮೆಜೆಸ್ಟಿಕ್‌ನಿಂದ ಹೆಚ್ಚುವರಿ ರೈಲು ಸೇವೆಗಳನ್ನು ಒದಗಿಸಲಾಗುತ್ತಿದೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್‌ನಿಂದ ಪ್ರಸ್ತುತ 9 ರೈಲುಗಳ ಬದಲಾಗಿ ಹೆಚ್ಚುವರಿಯಾಗಿ 15 ರೈಲುಗಳನ್ನು ಪ್ರಯಾಣಿಕರ ಸೇವೆಗೆ ಒದಗಿಸಲಾಗುವುದು. ಈ 15 ರೈಲುಗಳಲ್ಲಿ ಹತ್ತು ರೈಲುಗಳು ಪಟ್ಟಂದೂರು ಅಗ್ರಹಾರದ (ಐಟಿಪಿಎಲ್) ವರೆಗೆ, ನಾಲ್ಕು ರೈಲು ವೈಟ್‌ ಫೀಲ್ಡ್ ಮತ್ತು ಒಂದು ರೈಲು ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಚಲಿಸುತ್ತವೆ.

ಅದರಂತೆ, ಬೆಳಗಿನ ಸಮಯದಲ್ಲಿ ರೈಲುಗಳು ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ 8:48, 8:58, 9:08, 9:18, 9:29, 9:39, 9:50, 10:00, 10:11, 10:21, 10:39, 10:50, 11:00, 11:22 ಪೂರ್ವಕ್ಕೆ ಹೊರಡುತ್ತವೆ. ಇದಲ್ಲದೆ, ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್‌ನಲ್ಲಿ 3.3 ನಿಮಿಷಗಳ ಆವರ್ತನದಲ್ಲಿ ಬೆಳಗ್ಗೆ 10.25 ಗಂಟೆಯವರೆಗೆ ನಿಯಮಿತವಾಗಿ ಹಾದುಹೋಗುವ ರೈಲುಗಳು ಸಹ ಲಭ್ಯವಿರುತ್ತವೆ ಎಂದು ತಿಳಿಸಿದೆ.

ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು, ಪ್ರಸ್ತುತ ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಕೊನೆಗೊಳ್ಳುವ 14 ರೈಲುಗಳಲ್ಲಿ, 6 ರೈಲುಗಳನ್ನು ಪಟ್ಟಂದೂರು ಅಗ್ರಹಾರ (ಐಟಿಪಿಎಲ್)/ ವೈಟ್‌ ಫೀಲ್ಡ್ ವರೆಗೆ ವಿಸ್ತರಿಸಲಾಗಿದೆ. ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರಿಗೆ ಪಟ್ಟಂದೂರು ಅಗ್ರಹಾರ (ಐಟಿಪಿಎಲ್) ಕಡೆಗೆ ಪ್ರಯಾಣಿಸಲು ಮುಂದಿನ ರೈಲು 3.5 ನಿಮಿಷಗಳ ಆವರ್ತನದಲ್ಲಿ ಲಭ್ಯವಿರುತ್ತದೆ.

ಇದನ್ನೂ ಓದಿ | Stampede Tips and Tricks: ಕಾಲ್ತುಳಿತ ಸಂದರ್ಭದಲ್ಲಿ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ? ಈ ವಿಡಿಯೋ ನೋಡಿ

ಪ್ರಯಾಣಿಕರ ಅನುಕೂಲಕ್ಕಾಗಿ 5 ನಿಮಿಷಗಳ ಆವರ್ತನದಲ್ಲಿ ಬೈಯಪ್ಪನಹಳ್ಳಿಯಿಂದ ಸಂಜೆ 4:40 ರ ಬದಲಿಗೆ 4:20ಕ್ಕೆ ಮೈಸೂರು ರಸ್ತೆ ನಿಲ್ದಾಣದ ಕಡೆಗೆ ಪ್ರಾರಂಭವಾಗಲಿದೆ. ಹಸಿರು ಮಾರ್ಗದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸಾರ್ವಜನಿಕರು ತಮ್ಮ ಅನುಕೂಲಕರ ಪ್ರಯಾಣಕ್ಕಾಗಿ ಮೇಲಿನ ಬದಲಾವಣೆಯನ್ನು ಗಮನಿಸಿ ಪ್ರಯಾಣಿಸಬೇಕು ಎಂದು ಬಿಎಂಆರ್‌ಸಿಎಲ್‌ ಕೋರಿದೆ.

Continue Reading

ದೇಶ

Bridge Collapse: 17 ದಿನದಲ್ಲಿ 10 ಸೇತುವೆ ಕುಸಿತ; ಬಿಹಾರದಲ್ಲಿ 15 ಎಂಜಿನಿಯರ್‌ಗಳ ಅಮಾನತು!

Bridge Collapse: ಸೇತುವೆಗಳು ಧರೆಗುರುಳುವ ಪ್ರಕರಣಗಳು ಜಾಸ್ತಿಯಾಗಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಜನ ಬಿಹಾರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ, ಬಿಹಾರ ಸರ್ಕಾರವ 15 ಎಂಜಿನಿಯರ್‌ಗಳನ್ನು ಅಮಾನತು ಮಾಡಿದೆ.

VISTARANEWS.COM


on

Bridge Collapse
Koo

ಪಟನಾ: ಬಿಹಾರದಲ್ಲಿ ಕಳೆದ 17 ದಿನಗಳಲ್ಲಿ 10 ಸೇತುವೆಗಳು ಕುಸಿದಿರುವುದು (Bridge Collapse) ದೇಶಾದ್ಯಂತ ಸುದ್ದಿಯಾಗಿದೆ. ಸಣ್ಣ ಮಳೆಯಾದರೂ ಸೇತುವೆಗಳು ಕುಸಿಯುವುದು, ನಿರ್ಮಾಣ ಹಂತದಲ್ಲಿರುವಾಗಲೇ ಸೇತುವೆಗಳು ಧರೆಗುರುಳುವ ಪ್ರಕರಣಗಳು ಜಾಸ್ತಿಯಾಗಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಜನ ಬಿಹಾರ ಸರ್ಕಾರದ (Bihar Government) ವಿರುದ್ಧ ಮುಗಿಬಿದ್ದಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ, ಬಿಹಾರ ಸರ್ಕಾರವ 15 ಎಂಜಿನಿಯರ್‌ಗಳನ್ನು ಅಮಾನತು ಮಾಡಿದೆ.

ಬಿಹಾರದಲ್ಲಿ ಸೇತುವೆಗಳ ನಿರ್ಮಾಣದ ವೇಳೆ ಕರ್ತವ್ಯ ಲೋಪ ಎಸಗಿದ ಕಾರಣ ಸೇತುವೆಗಳು ಕುಸಿದಿವೆ. ಇದೇ ಕಾರಣಕ್ಕಾಗಿ ರಾಜ್ಯ ಸರ್ಕಾರವು 15 ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದೆ. ಜಲ ಸಂಪನ್ಮೂಲ ಇಲಾಖೆಯ 11 ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯ ನಾಲ್ವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ. ಇನ್ನು, ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಎಂಜಿನಿಯರ್‌ಗಳಿಂದ ವಿವರಣೆ ಕೇಳಲಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ತನಿಖೆಗೆ ಆದೇಶಿಸಲಾಗಿದ್ದು, ಇನ್ನಷ್ಟು ಅಧಿಕಾರಿಗಳನ್ನು ಮನೆಗೆ ಕಳುಹಿಸಲಾಗುತ್ತದೆ ಎಂದು ತಿಳಿದುಬಂದಿದೆ.

Bridge Collapse

ಬಿಹಾರದಲ್ಲಿ ಕಳೆದ ಕೆಲ ದಿನಗಳಿಂದ ಸೇತುವೆ ಕುಸಿತದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಜುಲೈ 3ರಂದು ಸಿವಾನ್‌ ಜಿಲ್ಲೆಯಲ್ಲಿ 2 ಸೇತುವೆ ಬಿದ್ದಿದ್ದವು. ಇನ್ನು, ಜುಲೈ 4ರಂದು ಸರಣ್‌ ಜಿಲ್ಲೆಯಲ್ಲಿ ಒಂದು ಸೇತುವೆ ಕುಸಿದಿತ್ತು. ಜೂನ್‌ 28ರಂದು ಮಧುಬನಿ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದಿತ್ತು. ಇದಕ್ಕೂ ಒಂದು ದಿನ ಮೊದಲೇ ಅಂದರೆ ಜೂನ್‌ 27ರಂದು ಕಿಶನ್‌ಗಂಜ್‌ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದಿತ್ತು. ಜೂನ್‌ 23ರಂದು ಪೂರ್ವ ಚಂಪಾರಣ್‌ ಜಿಲ್ಲೆಯಲ್ಲಿ ಸಣ್ಣ ಸೇತುವೆ ಕುಸಿದು ಅಧಿಕಾರಿಗಳು ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಜೂನ್‌ 22ರಂದು ಕೂಡ ಸಿವಾನ್‌ ಜಿಲ್ಲೆಯಲ್ಲಿ ಸೇತುವೆ ಕುಸಿದಿತ್ತು. ಜೂನ್‌ 19ರಂದೂ ಅರಾತಿಯಾ ಪ್ರದೇಶದಲ್ಲಿ ನಿರ್ಮಾಣ ಹಂತದ ಸೇತುವೆ ಧರೆಗುರುಳಿತ್ತು.  

ಬಿಹಾರ ರಾಜ್ಯದಲ್ಲಿ ಒಂದರ ಹಿಂದೆ ಒಂದರಂತೆ ಸೇತುವೆಗಳು ಕುಸಿಯುತ್ತಿರುವುದಕ್ಕೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಹಾರದಲ್ಲಿ ಸೇತುವೆ ಕುಸಿತದ ಪ್ರಕರಣಗಳು ಸುದ್ದಿಯಾಗುತ್ತಲೇ ಇವೆ. ಕಳೆದ 9 ದಿನಗಳಲ್ಲಿಯೇ ಇಂತಹ 5 ಪ್ರಕರಣಗಳು ಬೆಳಕಿಗೆ ಬಂದಿವೆ. ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರವು ಸೇತುವೆ ನಿರ್ಮಾಣದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಹಾಗೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಜನರ ದುಡ್ಡು ಹೀಗೆ ನೀರು ಪಾಲಾಗುತ್ತಿದ್ದರೂ ಮುಖ್ಯಮಂತ್ರಿಯು ಗಾಢ ನಿದ್ದೆಯಲ್ಲಿದ್ದಾರೆ” ಎಂಬುದಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: Bridge Collapse: ಬಿಹಾರದಲ್ಲಿ ಮತ್ತೆರಡು ಸೇತುವೆ ಕುಸಿತ; 15 ದಿನಗಳಲ್ಲಿ ಇದು 7ನೇ ಪ್ರಕರಣ!

Continue Reading

Latest

Viral Video: ಮೆಟ್ರೋದಲ್ಲಿ ಕೋತಿ ಚೇಷ್ಟೆಗೆ ಕೊನೆಯೇ ಇಲ್ಲ! ಈ ಮಂಗ್ಯಾನ ಡ್ಯಾನ್ಸ್‌ ನೋಡಿ!

Viral Video: ಬ್ಲೂ ಲೈನ್ ದೆಹಲಿ ಮೆಟ್ರೋದಲ್ಲಿ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅವರು ನಟಿಸಿದ ʼRRR’ಚಿತ್ರದ ಜನಪ್ರಿಯ ಹಾಡಾದ “ನಾಚೋ ನಾಚೋ”ಗೆ ಯುವಕನೊಬ್ಬ ಹುಚ್ಚೆದ್ದು ಡ್ಯಾನ್ಸ್‌ ಮಾಡಿದ್ದಾನೆ. ಅವನ ಈ ಡ್ಯಾನ್ಸ್ ಕೆಲವು ಪ್ರಯಾಣಿಕರಿಗೆ ಮನೋರಂಜನೆ ನೀಡಿದರೆ, ಇನ್ನು ಕೆಲವರಿಗೆ ಇದರಿಂದ ಕಿರಿಕಿರಿಯಾಗಿದೆ. ಈ ವಿಡಿಯೊ ಇರುವ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

VISTARANEWS.COM


on

Viral Video
Koo

ನವದೆಹಲಿ: ಕೆಲವರಿಗೆ ಡ್ಯಾನ್ಸ್‌ ಎಂದರೆ ವಿಪರೀತ ಮೋಹವಿರುತ್ತದೆ. ಹಾಡು ಕಿವಿಗೆ ಬಿದ್ದಾಕ್ಷಣ ಕಾಲು ಕೂಡ ನಿಲ್ಲಲ್ಲ. ಈಗಂತೂ ಸಾರ್ವಜನಿಕ ಸ್ಥಳವೆಂದೂ ನೋಡದೇ ಕುಣಿಯುವುದಕ್ಕೆ ಶುರು ಮಾಡುತ್ತಾರೆ. ಇಲ್ಲೊಬ್ಬ ವ್ಯಕ್ತಿ ಹಾಡೊಂದಕ್ಕೆ ಸಾರ್ವಜನಿಕ ಸ್ಥಳದಲ್ಲಿ ಹುಚ್ಚೆದ್ದು ಕುಣಿದಿದ್ದು, ಅವರ ಡ್ಯಾನ್ಸ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಸಚಿನ್ ಎಂಬ ವ್ಯಕ್ತಿ ಬ್ಲೂ ಲೈನ್ ದೆಹಲಿ ಮೆಟ್ರೋದಲ್ಲಿ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್‌ ಅವರು ನಟಿಸಿದ ‘ಆರ್‌ಆರ್‌ಆರ್’ ಚಿತ್ರದ ಜನಪ್ರಿಯ ಹಾಡಾದ “ನಾಚೋ ನಾಚೋ” ಗೆ ಉತ್ಸಾಹದಿಂದ ಡ್ಯಾನ್ಸ್ ಮಾಡಿದ್ದಾನೆ.

ಅವನ ಈ ಡ್ಯಾನ್ಸ್ ಕೆಲವು ಪ್ರಯಾಣಿಕರಿಗೆ ಮನೋರಂಜನೆ ನೀಡಿದರೆ ಕೆಲವರಿಗೆ ಇದರಿಂದ ಅಡ್ಡಿಯಾಗಿದೆ ಎನ್ನಲಾಗಿದೆ. ಆದರೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದ್ದು, ವೈರಲ್ ಆಗಿದೆ. ಈ ವೈರಲ್ ವಿಡಿಯೊದಲ್ಲಿ ಸಚಿನ್ ಮೆಟ್ರೋ ರೈಲಿನಲ್ಲಿ ಮಧ್ಯದಲ್ಲಿ ನಿಂತು ಹಾಡಿಗೆ ಉತ್ಸಾಹದಿಂದ ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಿರುವುದನ್ನು ಮೊದಲು ಕಾಣಿಸುತ್ತದೆ. ನಂತರ ಇಂದ್ರಪ್ರಸ್ಥ ನಿಲ್ದಾಣದಲ್ಲಿ ಮೆಟ್ರೋ ನಿಂತು ಬಾಗಿಲು ತೆರೆಯುತ್ತಿದ್ದಂತೆ, ಅವನು ಪ್ಲಾಟ್‍ಫಾರ್ಮ್ ನಿಂದ ಹೊರಗೆ ಓಡಿ ಕುಳಿದು ಮತ್ತೆ ಬೋಗಿಗೆ ಪ್ರವೇಶಿಸಿ ಡ್ಯಾನ್ಸ್ ಮಾಡುತ್ತಾನೆ. ನಂತರ ಅವನು ಜಿಗಿದು ತನ್ನ ಡ್ಯಾನ್ಸ್ ಅನ್ನು ಹಂತ ಹಂತವಾಗಿ ಮುಂದುವರಿಸುತ್ತಾನೆ, ಇದು ಅವನ ಸ್ನೇಹಿತರು ಮತ್ತು ಸಹ ಪ್ರಯಾಣಿಕರಿಗೆ ಆಶ್ಚರ್ಯ ಮತ್ತು ಮನರಂಜನೆಯನ್ನು ನೀಡುತ್ತದೆ. ಕೆಲವರು ಈ ಡ್ಯಾನ್ಸ್ ನೋಡಿ ಸುಮ್ಮನಿದ್ದರೆ ಕೆಲವರ ಮುಖದಲ್ಲಿ ನಗು ಮೂಡಿದೆ ಎನ್ನಲಾಗಿದೆ.

ಈ ಪೋಸ್ಟ್ ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿದ್ದು, ಇದಕ್ಕೆ 13.8 ಮಿಲಿಯನ್ ವೀವ್ಸ್ ಹಾಗೂ ಒಂದು ಮಿಲಿಯನ್ ಲೈಕ್ಸ್ ಬಂದಿದೆ. ಸಚಿನ್ ಡ್ಯಾನ್ಸ್‌ಗೆ ಹಲವು ನೆಟ್ಟಿಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿನ್ ಅವರ ಈ ಕೃತ್ಯಕ್ಕೆ ಜನರು ನಿರಾಶೆಗೊಂಡಿದ್ದಾರೆ.

ಈ ಹಿಂದೆ ಇಂಡಿಗೋ ವಿಮಾನದಲ್ಲಿ ಮಹಿಳೆಯೊಬ್ಬಳು ಡ್ಯಾನ್ಸ್ ಮಾಡಿದ್ದು, ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಆಗಿದೆ. ವಿಡಿಯೋದಲ್ಲಿ ಆಕೆ ಕಪ್ಪು ಸೀರೆಯಲ್ಲಿ ಕಾಣಿಸಿಕೊಂಡಿದ್ದಳು.

ಇದನ್ನೂ ಓದಿ: ಬುಲೆಟ್‌ ಮೇಲೆ ಬಂದ ಹುಡುಗಿ ಆಟೊ ಚಾಲಕನ ಬುರುಡೆ ಒಡೆದಳು!

Viral Video

ಅವಳು ವಿಮಾನದ ಮಧ್ಯದಲ್ಲಿ ನಿಂತು ಡ್ಯಾನ್ಸ್‌ ಮಾಡಿದ್ದಳು. ಈಕೆಯ ಡ್ಯಾನ್ಸ್‌ ನೋಡಿ ಇತರ ಪ್ರಯಾಣಿಕರು ಕಿರಿಕಿರಿ ಅನುಭವಿಸಿದ್ದರು.

Continue Reading
Advertisement
RBI Fine
ದೇಶ9 mins ago

RBI Fine: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಆರ್‌ಬಿಐ 1.31 ಕೋಟಿ ರೂ. ದಂಡ; ಕಾರಣ ಹೀಗಿದೆ

Namma Metro
ಕರ್ನಾಟಕ14 mins ago

Namma Metro: ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ನಾಳೆಯಿಂದ ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇವೆ

Viral Video
ವೈರಲ್ ನ್ಯೂಸ್16 mins ago

Viral Video: ಆಧಾರ್ ಕಾರ್ಡ್ ಫೋಟೋಗೆ ಸುಂದರ ಪೋಸ್ ಕೊಟ್ಟು ಮನ ಗೆದ್ದ ಪುಟಾಣಿ! ನಿಮಗೇನು ಅನಿಸಿತು?

Brain Eating Amoeba
ಆರೋಗ್ಯ20 mins ago

Brain Eating Amoeba: ಏನಿದು ಮೆದುಳು ತಿನ್ನುವ ಅಮೀಬಾ? ಇದರಿಂದ ನಮಗೂ ಅಪಾಯ ಇದೆಯೆ?

Kerala govt
ದೇಶ48 mins ago

Kerala Govt: ಕೇರಳ ಸರ್ಕಾರಿ ನೌಕರರ ಪೈಕಿ ಮೂರರಲ್ಲಿ ಒಬ್ಬ ಮುಸ್ಲಿಂ ಅಥವಾ ಕ್ರಿಶ್ಚಿಯನ್

Teach for India
ಬೆಂಗಳೂರು52 mins ago

Teach For India : ಟೀಚ್ ಫಾರ್ ಇಂಡಿಯಾದಿಂದ 2025ರ ಫೆಲೋಶಿಪ್ ಕಾರ್ಯಕ್ರಮಕ್ಕೆ ಅರ್ಜಿಗಳ ಆಹ್ವಾನ

Bridge Collapse
ದೇಶ54 mins ago

Bridge Collapse: 17 ದಿನದಲ್ಲಿ 10 ಸೇತುವೆ ಕುಸಿತ; ಬಿಹಾರದಲ್ಲಿ 15 ಎಂಜಿನಿಯರ್‌ಗಳ ಅಮಾನತು!

Shivamogga News Give top priority to cleanliness says Raju Hiriyawali
ಶಿವಮೊಗ್ಗ59 mins ago

Shivamogga News: ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ: ರಾಜು ಹಿರಿಯಾವಲಿ

Stampede Tips and Tricks
ದೇಶ1 hour ago

Stampede Tips and Tricks: ಕಾಲ್ತುಳಿತ ಸಂದರ್ಭದಲ್ಲಿ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ? ಈ ವಿಡಿಯೋ ನೋಡಿ

ಕರ್ನಾಟಕ1 hour ago

MUDA site scandal: ಸಿಎಂ ಸಿದ್ದರಾಮಯ್ಯ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲಿ: ಲೆಹರ್‌ ಸಿಂಗ್‌ ಆಗ್ರಹ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ3 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ5 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ5 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ7 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ9 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು10 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು10 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ15 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ1 day ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

ಟ್ರೆಂಡಿಂಗ್‌