Dina Bhavishya : ಆಕಸ್ಮಿಕ ಧನಾಗಮನ; ಈ ರಾಶಿಗಳ ಮೇಲೆ ಲಕ್ಷ್ಮಿ ಕಟಾಕ್ಷ! Vistara News

ಪ್ರಮುಖ ಸುದ್ದಿ

Dina Bhavishya : ಆಕಸ್ಮಿಕ ಧನಾಗಮನ; ಈ ರಾಶಿಗಳ ಮೇಲೆ ಲಕ್ಷ್ಮಿ ಕಟಾಕ್ಷ!

Dina Bhavishya : ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷದ
ಏಕಾದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

dina bhavishya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಕಟಕ ರಾಶಿಯಿಂದ ಭಾನುವಾರ ಮಧ್ಯಾಹ್ನ 12:36ಕ್ಕೆ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ಮಿಥುನ, ಸಿಂಹ, ಕನ್ಯಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರಿಗೆ ಅನೇಕ ಒತ್ತಡಗಳು ಆವರಿಸುವ ಸಾಧ್ಯತೆ ಇದೆ. ಮಿಥುನ ರಾಶಿಯವರಿಗೆ ಅನೇಕ ವಿಚಾರಗಳು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವ ಸಾಧ್ಯತೆ ಇದೆ. ಮೀನ ರಾಶಿಯವರ ಸಂಗಾತಿಯ ವರ್ತನೆ ನಿಮ್ಮ ಖ್ಯಾತಿಯ ಮೇಲೆ ಪರಿಣಾಮ ಬೀರಬಹುದು. ಇತರೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (10-09-2023)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ.
ತಿಥಿ:
ಏಕಾದಶಿ 21:27 ವಾರ: ಭಾನುವಾರ
ನಕ್ಷತ್ರ: ಪುನರ್ವಸು 17:05 ಯೋಗ: ವರಿಯಾನ 23:17
ಕರಣ: ಭವ 08:20 ಅಮೃತಕಾಲ: 02:26 ಯಿಂದ 04:13 ವರೆಗೆ

ಸೂರ್ಯೋದಯ : 06: 15  ಸೂರ್ಯಾಸ್ತ : 06:46

ರಾಹುಕಾಲ: ಸಾಯಂಕಾಲ 4.30 ರಿಂದ 6.00
ಗುಳಿಕಕಾಲ: ಸಾಯಂಕಾಲ 3.00 ರಿಂದ 4.30
ಯಮಗಂಡಕಾಲ:
ಮಧ್ಯಾಹ್ನ 12.00 ರಿಂದ 1.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಅನೇಕ ಒತ್ತಡಗಳು ನಿಮ್ಮನ್ನು ಆವರಿಸುವ ಸಾಧ್ಯತೆ ಇದೆ. ಆರ್ಥಿಕವಾಗಿ ಸಾಧರಣ ಫಲವಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಕೊಂಚ ಮಟ್ಟಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ವೃಷಭ: ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸುವುದು ಅವಶ್ಯಕವಿದೆ. ವಿನಾ ಕಾರಣ ಎಲ್ಲದಕ್ಕೂ ತಲೆಹಾಕುವುದು ಬೇಡ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರಿಕೆ ವಹಿಸಿ. ಹೂಡಿಕೆಯ ಕುರಿತು ಆಲೋಚನೆ ಮಾಡುವಿರಿ. ಆಪ್ತರ ಆರೋಗ್ಯ ವಿಚಾರಿಸುವಿರಿ. ಉದ್ಯೋಗಿಗಳಿಗೆ ಮಿಶ್ರಫಲ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಇರಲಿದ್ದು, ಆರ್ಥಿಕ ಲಾಭ ಸಿಗಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 5

Horoscope Today

ಮಿಥುನ: ಕೆಲಸ ಕಾರ್ಯಗಳಲ್ಲಿ ನಿಧಾನಗತಿ ಇರಲಿದೆ. ಆರೋಗ್ಯ ಮಧ್ಯಮವಾಗಿರಲಿದೆ. ಅನೇಕ ವಿಚಾರಗಳು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವ ಸಾಧ್ಯತೆ ಇದೆ. ಆರ್ಥಿಕ ಲಾಭ ಸಾಧಾರಣವಾಗಿರಲಿದೆ. ವ್ಯಾಪಾರ-ವ್ಯವಹಾರದಲ್ಲಿ ಮಿಶ್ರಫಲವಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಾಗಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 3

Horoscope Today

ಕಟಕ: ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೀರ್ತಿ ಸಿಗಲಿದೆ. ಆರ್ಥಿಕವಾಗಿ ಲಾಭ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಹಳೆಯ ಸ್ನೇಹಿತರು, ಕುಟುಂಬದ ಆಪ್ತರೊಂದಿಗೆ ಸಮಯ ಕಳೆಯುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭಫಲ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಸಿಂಹ: ಆರೋಗ್ಯದ ಕುರಿತು ಕಾಳಜಿ ಇರಲಿ. ಒತ್ತಡದಿಂದ ಹೊರಬರಲು ವ್ಯಸನಗಳಿಗೆ ಬಲಿಯಾಗುವುದು ಬೇಡ. ಆರ್ಥಿಕವಾಗಿ ಕೊಂಚ ಲಾಭ ಇರಲಿದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 5

Horoscope Today

ಕನ್ಯಾ: ಶುಭ ಕಾರ್ಯಗಳಿಗಾಗಿ ಖರ್ಚು ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿ. ಉದ್ಯೋಗಿಗಳಿಗೆ ಕಾರಣಾಂತರಗಳಿಂದ ಒತ್ತಡ ಹೆಚ್ಚಾಗಲಿದೆ. ಜವಾಬ್ದಾರಿಗಳು ಹೆಚ್ಚಾಗಲಿದೆ, ಕೋಪದಿಂದ ವರ್ತಿಸುವ ಸಾಧ್ಯತೆ ಇದ್ದು, ಆತುರದ ಮಾತುಗಳು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬದ ಹಿರಿಯರಿಂದ ಒತ್ತಡ ಹೆಚ್ಚಾಗಲಿದೆ. ಹಣಕಾಸು, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಆರ್ಥಿಕ ಲಾಭ ಇರಲಿದೆ. ಹಿಂದೆ ನೀಡಿದ ಸಾಲ ಮರಳುವ ಸಾಧ್ಯತೆ ಇದೆ. ಆಪ್ತರಿಂದ ಸಲಹೆ ಸಹಕಾರ ಸಿಗಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 6

Horoscope Today

ವೃಶ್ಚಿಕ: ಸಂಗಾತಿಯ ಆರೋಗ್ಯದ ಸಲವಾಗಿ ಖರ್ಚು ಹೆಚ್ಚಾಗಲಿದೆ. ಆಲೋಚನೆಗಳಿಂದ ದೂರವಿರಿ. ಸಹೋದ್ಯೋಗಿಗಳಿಂದ ಕಿರಿಕಿರಿ ಇರಲಿದೆ. ವ್ಯಾಪಾರ ವ್ಯವಹಾರ ಸಾಧಾರಣವಾಗಿರಲಿದೆ. ಹೂಡಿಕೆಯ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಮಿಶ್ರಫಲ .
ಅದೃಷ್ಟ ಸಂಖ್ಯೆ: 7

Horoscope Today

ಧನಸ್ಸು: ಆಪ್ತರಿಂದ ಬೆಂಬಲ ಸಿಗಲಿದೆ. ಕೆಲಸಕಾರ್ಯಗಳಲ್ಲಿ ಪ್ರಗತಿ ಇರಲಿದೆ. ಆಪ್ತರಿಂದ ಹಣದ ಸಹಾಯದ ಕೋರುವಿರಿ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮಕರ: ಉತ್ಸಾಹಭರಿತ ಜೀವನ. ಆರ್ಥಿಕವಾಗಿ ಲಾಭ ಇರಲಿದೆ. ಹೂಡಿಕೆ ವ್ಯವಹಾರಗಳಲ್ಲಿ ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಯಾವುದಾದರೂ ಸಭೆ-ಸಮಾರಂಭಗಳಿಗೆ ಭಾಗವಹಿಸುವಿರಿ.ನಿರೀಕ್ಷೆಯ ಹೊಸ ಭರವಸೆಗಳು ಮೂಡಲಿವೆ.ಆಪ್ತರೊಂದಿಗೆ ಮಾತುಕತೆ. ಕುಟುಂಬದ ಸದಸ್ಯರಿಗೆ ಸಲಹೆ ಸಹಕಾರ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

Horoscope Today

ಕುಂಭ: ಇತರರನ್ನು ಟೀಕಿಸುತ್ತ ಸಮಯ ವ್ಯರ್ಥ ಮಾಡುವುದು ಬೇಡ. ಭೂಮಿಗೆ ಸಂಬಂಧಿಸಿದಂತೆ ವ್ಯಾಪಾರ ವ್ಯವಹಾರದಲ್ಲಿ ಲಾಭ ಸಿಗಲಿದೆ. ಪ್ರಯಾಣ ಸಾಧ್ಯತೆ ಇದೆ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?

Horoscope Today

ಮೀನ: ಆರೋಗ್ಯ ಪರಿಪೂರ್ಣ.ಉದ್ಯೋಗಕ್ಕೆ ಸಂಬಂಧಿಸಿದಂತೆ ಖರ್ಚು ಹೆಚ್ಚಾಗಲಿದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ನಿಮ್ಮ ನಿರೀಕ್ಷೆಗೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.ಕುಟುಂಬದ ಸದಸ್ಯರಿಂದ ಒತ್ತಡ ಇರಲಿದೆ. ಸಂಗಾತಿಯ ವರ್ತನೆ ನಿಮ್ಮ ಖ್ಯಾತಿಯ ಮೇಲೆ ಪರಿಣಾಮ ಬೀರಬಹುದು. ಆರೋಗ್ಯ ಪರಿಪೂರ್ಣ. ದಿಢೀರ್‌ ಧನ ಲಾಭ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | [email protected]

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

Dina Bhavishya : ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ಅಷ್ಟಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

dina bhavishya read your daily horoscope predictions for December 5 2023
Koo

ಚಂದ್ರನು ಕನ್ಯಾ ರಾಶಿ ಪ್ರವೇಶಿಸಿದ್ದು, ಬುಧವಾರದವರೆಗೆ ಅಲ್ಲಿಯೇ ನೆಲೆಸಲಿದ್ದಾನೆ. ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರಿಗೆ ದೈಹಿಕ ಶ್ರಮ ಹೆಚ್ಚಲಿದೆ. ಸಂಶಯ ಇದ್ದರೆ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಪ್ತರಿಂದ ಸಿಹಿ ಸುದ್ದಿ ಸಿಗಲಿದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಸಿಂಹ ರಾಶಿಯವರಿಗೆ ಕೆಲವು ಘಟನೆಗಳು ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಸಹೋದ್ಯೋಗಿಗಳಿಂದ ಬೆಂಬಲ ಸಿಗಲಿದೆ. ಕ್ಷೇತ್ರ ದರ್ಶನ ಮಾಡಲಿದ್ದು, ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಸಿಗಲಿದೆ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (5-12-2023)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ.
ತಿಥಿ: ಅಷ್ಟಮಿ 24:36 ವಾರ: ಮಂಗಳವಾರ
ನಕ್ಷತ್ರ: ಪೂರ್ವ ಪಾಲ್ಗುಣಿ 27:36 ಯೋಗ: ವಿಷ್ಕುಂಭ 22:40
ಕರಣ: ಬಾಲವ 11:18 ಅಮೃತಕಾಲ: ರಾತ್ರಿ 08:25 ರಿಂದ 10:13ರ ವರೆಗೆ
ದಿನದ ವಿಶೇಷ: ಕಾಲಾಷ್ಟಮಿ

ಸೂರ್ಯೋದಯ : 06:28  ಸೂರ್ಯಾಸ್ತ : 05:52

ರಾಹುಕಾಲ : ಮಧ್ಯಾಹ್ನ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ದೈಹಿಕ ಶ್ರಮ ಹೆಚ್ಚಲಿದೆ. ಸಂಶಯ ಇದ್ದರೆ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಪ್ತರಿಂದ ಸಿಹಿ ಸುದ್ದಿ ಸಿಗಲಿದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಸಂಗಾತಿಯ ಮಧುರ ಮಾತುಗಳು ಹಿತವೆನಿಸುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಷಭ: ಕುಟುಂಬದ ಆಪ್ತರಿಂದ ಆರ್ಥಿಕ ಸಹಾಯದ ಬೇಡಿಕೆ ಬರಲಿದೆ. ಮಾನಸಿಕ ಒತ್ತಡ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಮನೋಬಲ ಹೆಚ್ಚಿಸಿಕೊಳ್ಳುವುದು ಅವಶ್ಯಕ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುವುದು. ಆರೋಗ್ಯ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಉಂಟಾಗಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 3

Horoscope Today

ಮಿಥುನ: ಸದಾ ಕನಸುಗಳನ್ನು ಕಾಣುವುದು ವೃಥಾ ಕಾಲಹರಣ ಮಾಡಿದಂತೆ. ಇತರರಿಗೆ ಆರ್ಥಿಕವಾಗಿ ಸಹಾಯ ಮಾಡಿ ನೀವು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕುವುದು ಬೇಡ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಶುಭಫಲ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕಟಕ: ಕುಟುಂಬದ ಸದಸ್ಯರಿಂದ ಆರ್ಥಿಕ ಬೆಂಬಲ ಸಿಗಲಿದೆ. ಉದ್ಯೋಗಿಗಳಿಗೆ ಶುಭಫಲ ಇರಲಿದೆ. ಹಣದ ಹರಿವು ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಪ್ರಗತಿ ಕಾಣುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆಪ್ತ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಯಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

Horoscope Today

ಸಿಂಹ: ಕೆಲವು ಘಟನೆಗಳು ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಸಹೋದ್ಯೋಗಿಗಳಿಂದ ಬೆಂಬಲ ಸಿಗಲಿದೆ. ಕ್ಷೇತ್ರ ದರ್ಶನ ಮಾಡಲಿದ್ದು, ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಸಿಗಲಿದೆ. ಉದ್ಯೋಗಿಗಳಿಗೆ ಕಿರಿಕಿರಿಯಾಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ: ದೀರ್ಘಕಾಲದ ಕೆಲಸ ಕಾರ್ಯಗಳು ಇಂದು ಯಶಸ್ಸನ್ನು ತಂದು ಕೊಡಲಿದೆ. ಆದಾಯದ ಮೂಲ ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ, ಕುಟುಂಬದ ವಾತಾವರಣ ಹದಗೆಡುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಕಿರಿಕಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆತ್ಮವಿಶ್ವಾಸದಿಂದ ಕೆಲಸ – ಕಾರ್ಯಗಳಲ್ಲಿ ಪ್ರಗತಿ ಸಾಧಿಸುವಿರಿ. ಸ್ನೇಹಿತರೊಂದಿಗೆ ಸಮಯ ಹಂಚಿಕೊಳ್ಳುವಿರಿ. ಹಣಕಾಸು, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಪ್ರಗತಿ ಸಾಧಿಸುವಿರಿ. ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭ ಕಾಲ ಇದಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಆರೋಗ್ಯದ ಕುರಿತು ಕಾಳಜಿ ಇರಲಿ. ನ್ಯಾಯಾಲಯದಲ್ಲಿರುವ ವ್ಯಾಜ್ಯಗಳು ವಿಜಯವನ್ನು ತಂದುಕೊಡುವ ಸಾಧ್ಯತೆ ಇದೆ. ಹಣಕಾಸು, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಹಾದಿ ಅತ್ಯವಶ್ಯಕ. ಹಣಕಾಸು ವಿಷಯದಲ್ಲಿ ಪ್ರಗತಿ ಕಾಣುವಿರಿ. ಉದ್ಯೋಗಿಗಳಿಗೆ ಮಿಶ್ರಫಲ ಇರಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 2

Horoscope Today

ಮಕರ: ಬುದ್ಧಿವಂತಿಕೆಯಿಂದ ಕೆಲಸಕಾರ್ಯಗಳಲ್ಲಿ ಯಶಸ್ಸು ಕೀರ್ತಿ ಸಿಗುವುದು. ಶೀಘ್ರ ಕೋಪ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕ ಲಾಭ ಉಂಟಾಗಲಿದೆ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 2

Horoscope Today

ಕುಂಭ: ದುಂದು ವೆಚ್ಚವನ್ನು ತಪ್ಪಿಸಿ. ಬುದ್ಧಿವಂತಿಕೆಯಿಂದ ಕೆಲಸ ಮಾಡಿ. ವ್ಯರ್ಥ ಪ್ರಯತ್ನ ಮಾಡುವುದು ಬೇಡ. ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 9

Horoscope Today

ಮೀನ: ಮನರಂಜನೆಗಾಗಿ ಸಮಯ ಕಳೆಯುವ ಸಾಧ್ಯತೆ ಇದೆ. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕವಾಗಿ ಪ್ರಗತಿ ಕಾಣುವಿರಿ. ಸಂಗಾತಿ ಇಂದು ನಿಮ್ಮೊಂದಿಗೆ ಮುಖ್ಯ ವಿಷಯದ ಕುರಿತು ಚರ್ಚಿಸಬಹುದು. ಉದ್ಯೋಗಿಗಳಿಗೆ ಮಧ್ಯಮ ಫಲ ಸಿಗಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | [email protected]

Continue Reading

ಗ್ಯಾಜೆಟ್ಸ್

WhatsApp: ವಾಟ್ಸಾಪ್‍ನಲ್ಲಿ ಬಳಕೆದಾರರನ್ನು ಅವರ ಯೂಸರ್‌ನೇಮ್ ಮೂಲಕವೇ ಹುಡುಕಬಹುದು!

WhatsApp: ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಸಾಕಷ್ಟು ಫೀಚರ್‌ಗಳನ್ನು ಒದಗಿಸುವ ವಾಟ್ಸಾಪ್ ಈಗ ಮತ್ತೊಂದು ಹೊಸ ಅಪ್‌ಡೇಟ್ ನೀಡಲು ಸಜ್ಜಾಗಿದೆ.

VISTARANEWS.COM


on

WhatsApp new feature lets you search users by their username Says Report
Koo

ನವದೆಹಲಿ: ಬಳಕೆದಾರರ ಅನುಭವವನ್ನು ಹೆಚ್ಚಳ, ಬಳಕೆದಾರರ ಖಾಸಗಿತನ ರಕ್ಷಣೆ ಹಾಗೂ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಾಟ್ಸಾಪ್ (WhatsApp) ಮತ್ತೊಂದು ಫೀಚರ್ ಪರಿಚಯಿಸುತ್ತಿದೆ(WhatsApp New Feature). ಬಳಕೆದಾರರನ್ನು ಅವರ ಹೆಸರಿನ (Username) ಮೂಲಕವೇ ಹುಡುಕಾಟ ಮಾಡಲು ಸಾಧ್ಯವಾಗಿಸುವುದಕ್ಕಿ ವಾಟ್ಸಾಪ್ ಹೊಸ ಸರ್ಚ್ ಬಾರ್ ಅಳವಡಿಸಲಿದೆ(New Search Bar). ಈ ಹೊಸ ಫೀಚರ್ ಕುರಿತು WABetaInfo ಷೇರ್ ಮಾಡಿರುವ ಸ್ಕ್ರೀನ್‌ಶಾಟ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ವೈಯಕ್ತಿಕ ನಂಬರ್ ಅನ್ನು ಹಂಚಿಕೊಳ್ಳುವ ಅಗತ್ಯವನ್ನು ತೆಗೆದು ಹಾಕಿ, ಫ್ರೆಂಡ್ಸ್ ಮತ್ತು ಕಾಂಟಾಕ್ಟ್ಸ್ ಜತೆ ಕನೆಕ್ಟಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸಲಿದೆ.

ಮುಂಬರುವ ವೈಶಿಷ್ಟ್ಯವು ಬಳಕೆದಾರರಿಗೆ ಬಳಕೆದಾರ ಹೆಸರನ್ನು ಕಾನ್ಫಿಗರ್ ಮಾಡುವ ಆಯ್ಕೆಯನ್ನು ಒದಗಿಸುತ್ತದೆ, ಅವರ ಫೋನ್ ಸಂಖ್ಯೆಗಳನ್ನು ಬಹಿರಂಗಪಡಿಸದಿರಲು ಆದ್ಯತೆ ನೀಡುವವರಿಗೆ ಅವಕಾಶ ಕಲ್ಪಿಸುತ್ತದೆ. ಗೌಪ್ಯತೆಗೆ ಆದ್ಯತೆ ನೀಡುವ ಮತ್ತು ತಮ್ಮ ವೈಯಕ್ತಿಕ ಮಾಹಿತಿಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಲು ಬಯಸುವ ವ್ಯಕ್ತಿಗಳಿಗೆ ಈ ಕ್ರಮವು ವಿಶೇಷವಾಗಿ ಅನುಕೂಲಕರವಾಗಲಿದೆ. ವಿಶೇಷವಾಗಿ, ಬಳಕೆದಾರ ಹೆಸರಿನ ಸಂರಚನೆಯು ಸಂಪೂರ್ಣವಾಗಿ ಐಚ್ಛಿಕವಾಗಿರುತ್ತದೆ, ಬಳಕೆದಾರರು ಈ ಹೊಸ ಕಾರ್ಯಚಟುವಟಿಕೆಯ ಲಾಭವನ್ನು ಪಡೆಯಲು ಬಯಸುತ್ತಾರೆಯೇ ಎಂದು ನಿರ್ಧರಿಸಲು ಆಯ್ಕೆಯನ್ನು ಒದಗಿಸುತ್ತದೆ.

ಈ ಫೀಚರ್‌ ಮೇಲೆ ಬಳಕೆದಾರರ ಸಂಪೂರ್ಣ ನಿಯಂತ್ರಣವಿರುತ್ತದೆ. ಅಂದರೆ, ಯಾವುದೇ ಸಮಯದಲ್ಲಿ ಬಳಕೆದಾರರ ಹೆಸರನ್ನು ಸೇರಿಸುವ, ತೆಗೆದು ಹಾಕುವ ಇಲ್ಲವೇ ಬದಲಿಸುವ ಅವಕಾಶವು ಬಳಕೆದಾರರಿಗೇ ಇರುತ್ತದೆ. ಸರ್ಚ್ ಬಾರ್‌ನ ಬಳಕೆದಾರರ ಹೆಸರು ಶೋಧ ಸಾಮರ್ಥ್ಯವು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಮುಂದಿನ ವಾಟ್ಸಾಪ್‌ ಅಪ್ಲಿಕೇಷನ್ ಹೊಸ ಅಪ್‌ಡೇಟ್ ಮೂಲಕ ಈ ಫೀಚರ್ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ, ಈ ಫೀಚರ್ ಆಂಡ್ರಾಯ್ಡ್ ಮತ್ತು ಐಒಎಸ್‌ ಎರಡೂ ಸಾಧನಗಳಿಗೆ ದೊರೆಯಲಿದೆಯೇ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.

ವಾಟ್ಸಾಪ್‌ ಖಾತೆಗೆ ನಿಮ್ಮ ಇ ಮೇಲ್ ಅಡ್ರೆಸ್ ಲಿಂಕ್ ಮಾಡಬಹುದು! ಆದರೆ…?

ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗೆ ಮತ್ತೊಂದು ಫೀಚರ್ (New Feature) ಅಪ್‌ಡೇಟ್ ಮಾಡುತ್ತಿದೆ. ಐಒಎಸ್‌ ಸಾಧನಗಳಲ್ಲಿ (iOS Devices) ಬಳಕೆದಾರರು ತಮ್ಮ ಇ ಮೇಲ್ ವಿಳಾಸವನ್ನು (e-mail) ವಾಟ್ಸಾಪ್‌ ಖಾತೆಗೆ ಲಿಂಕ್ ಮಾಡಲು ಅನುಮತಿಸುವ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಮೆಸೇಜಿಂಗ್ ಅಪ್ಲಿಕೇಶನ್ ಪ್ರಸ್ತುತ ಬಳಕೆದಾರರು ತಮ್ಮ ನೋಂದಾಯಿತ ಫೋನ್ ಸಂಖ್ಯೆಯನ್ನು ಬಳಸಿಕೊಂಡು, ತಮ್ಮ ಖಾತೆಗೆ ಲಾಗ್ ಇನ್ ಮಾಡಲು ಅನುಮತಿಸುತ್ತದೆ. ಇಮೇಲ್ ವಿಳಾಸವನ್ನು ಸೇರಿಸುವುದರಿಂದ ವಾಟ್ಸಾಪ್‌ಗೆ ಪ್ರವೇಶದ ಹೆಚ್ಚುವರಿ ಮಾರ್ಗವನ್ನು ಸೃಷ್ಟಿಸಿದಂತಾಗಲಿದೆ. ವಿಶೇಷ ಎಂದರೆ, ಇಮೇಲ್ ವಿಳಾಸಗಳು ಕಾಂಟಾಕ್ಟ್ಸ್‌ನಲ್ಲಿ ಗೋಚರಿಸುವುದಿಲ್ಲ. ಲಾಗ್‌ಇನ್ ಮಾಡಲು ಎಸ್ಸೆಮ್ಮೆಸ್ ಪಡೆದುಕೊಳ್ಳು ಸಾಧ್ಯವಾಗದೇ ಇದ್ದಾಗ ಈ ಫೀಚರ್ ಬಳಕೆದಾರರಿಗೆ ಹೆಚ್ಚು ಉಪಯುಕ್ತ ಕೂಡ ಆಗಲಿದೆ. ಆದರೆ, ಈ ಫೀಚರ್ ಸದ್ಯಕ್ಕೆ ಐಒಎಸ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದ್ದು, ಆಂಡ್ರಾಯ್ಡ್ ಬಳಕೆದಾರರಿಗೆ (Android Users) ಯಾವಾಗ ದೊರೆಯಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

WABetaInfo ಪ್ರಕಾರ, ಐಒಎಸ್‌ 2.23.24.70 ಅಪ್‌ಡೇಟ್‌ನಲ್ಲಿ ಈ ಹೊಸ ಫೀಚರ್‌ ಕಂಡು ಬಂದಿದೆ. ಈ ಅಪ್‌ಡೇಟ್ ಬಳಕೆದಾರರಿಗೆ ವಾಟ್ಸಾಪ್‌ ಖಾತೆಗೆ ತಮ್ಮ ಇಮೇಲ್ ವಿಳಾಸವನ್ನು ಸೇರಿಸಲು ಬಗ್ಗೆ ಕೇಳುತ್ತಿದೆ. ಅಪ್ಲಿಕೇಶನ್‌ನಲ್ಲಿರುವ ಸಂದೇಶವು “ನಿಮ್ಮ ಖಾತೆಯನ್ನು ಪ್ರವೇಶಿಸಲು ಇಮೇಲ್ ಸಹಾಯ ಮಾಡುತ್ತದೆ. ಇದು ಇತರರಿಗೆ ಗೋಚರಿಸುವುದಿಲ್ಲ” ಎಂದು ಹೇಳುತ್ತದೆ. ಒಮ್ಮೆ ನೀವು ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿದರೆ, ದೃಢೀಕರಣಕ್ಕಾಗಿ ಕಳುಹಿಸಲಾದ ಪರಿಶೀಲನಾ ಕೋಡ್ ಅನ್ನು ನೀವು ನಮೂದಿಸಬೇಕಾಗುತ್ತದೆ.

ನಿಮ್ಮ ವಾಟ್ಸಾಪ್ ಖಾತೆಗೆ ಇ ಮೇಲ್ ವಿಳಾಸ ಸೇರಿಸಲು ನಿಮ್ಮ ವಾಟ್ಸಾಪ್‌ ಅಪ್‌ಡೇಟ್‌ ಆಗಿರಬೇಕು. ಒಂದೊಮ್ಮೆ ಆಗಿಲ್ಲ ಎಂದಾದರೆ, ನಿಮ್ಮ ಐಫೋನ್‌ನಲ್ಲಿರುವ ಆ್ಯಪ್‌ ಸ್ಟೋರ್‌ ಮೂಲಕ ವಾಟ್ಸಾಪ್ ಅಪ್‌ಡೇಟ್ ಮಾಡಿಕೊಳ್ಳಬೇಕು. ಇಷ್ಟಾದ ಮೇಲೆ, ವಾಟ್ಸಾಪ್‌ ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿ ಅಕೌಂಟ್ ಮೇಲೆ ಟ್ಯಾಪ್ ಮಾಡಿ ಮತ್ತು ಇಮೇಲ್ ವಿಳಾಸದ ಜಾಗದಲ್ಲಿ ನಿಮ್ಮ ಇ ಮೇಲ್ ವಿಳಾಸವನ್ನು ನಮೂದಿಸಿ.

ನಿಮ್ಮ ಖಾತೆಗೆ ಇಮೇಲ್ ವಿಳಾಸವನ್ನು ಲಿಂಕ್ ಮಾಡಿದ ನಂತರ, ನೀವು ನೆಟ್‌ವರ್ಕ್ ಸಮಸ್ಯೆಗಳು ಅಥವಾ ಇತರ ತಾಂತ್ರಿಕ ತೊಂದರೆಗಳಿಂದ ಎಸ್ಸೆಮ್ಮೆಸ್‌ ಕೋಡ್‌ಗಳನ್ನು ಸ್ವೀಕರಿಸಲು ಸಾಧ್ಯವಾಗದಿದ್ದರೆ ನಿಮ್ಮ ಇಮೇಲ್ ವಿಳಾಸದ ಮೂಲಕ ಪರಿಶೀಲನೆ ಕೋಡ್‌ಗಳನ್ನು ಸ್ವೀಕರಿಸಲು ನಿಮಗೆ ಸಾಧ್ಯವಾಗುತ್ತದೆ. ಆದಾಗ್ಯೂ, ವಾಟ್ಸಾಪ್ ನಿಮ್ಮ ಫೋನ್ ಸಂಖ್ಯೆಯನ್ನು ಅಪ್ಲಿಕೇಶನ್‌ನಲ್ಲಿ ನಿಮ್ಮ ಪ್ರಾಥಮಿಕ ಗುರುತಿಸುವಿಕೆಯಾಗಿ ಬಳಸುವುದನ್ನು ಮುಂದುವರಿಸುತ್ತದೆ ಮತ್ತು ಇಮೇಲ್ ವಿಳಾಸವು ಸೇವೆಗೆ ದೃಢೀಕರಣ ಕೋಡ್‌ಗಳನ್ನು ಕಳುಹಿಸಲು ಖಾಸಗಿ ಮಾರ್ಗವಾಗಿ ಉಳಿಯುತ್ತದೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: WhatsApp: ವಾಟ್ಸಾಪ್‌ ಡೆಸ್ಕ್‌ಟಾಪ್ ಬಳಕೆದಾರರಿಗೆ ‘ಒಮ್ಮೆ ವೀಕ್ಷಣೆ’ ಫೀಚರ್ ವಾಪಸ್ ಬಂತು

ಸದ್ಯಕ್ಕೆ ಐಒಎಸ್‌ ಬಳಕೆದಾರರಿಗ ಮಾತ್ರವೇ ಲಭ್ಯವಾಗಲಿರುವ ಈ ಫೀಚರ್, ಸ್ಥಿರ ಚಾನೆಲ್‌ನಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಯಾವಾಗ ದೊರೆಯಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಆಂಡ್ರಾಯ್ಡ್‌ ಬೀಟಾ ಪರೀಕ್ಷಕರಿಗೆ ಸದ್ಯಕ್ಕೆ ಇದು ದೊರೆಯುತ್ತಿದೆ ಎಂಬುದು ಖಚತಿವಾಗಿದೆ. ಜಾಹೀರಾತಿಗಾಗಿ ಇಮೇಲ್ ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್‌ನಲ್ಲಿನ ಬಳಕೆದಾರರಿಗೆ ಇಮೇಲ್ ವಿಳಾಸವನ್ನು ಲಿಂಕ್ ಮಾಡುವ ವೈಶಿಷ್ಟ್ಯವನ್ನು ಮೆಟಾ-ಮಾಲೀಕತ್ವದ ಸಂದೇಶ ಸೇವೆಯು ಹೊರತರಲಿದೆ ಎಂದು ಬಳಕೆದಾರರು ನಿರೀಕ್ಷಿಸಬಹುದು.

Continue Reading

ಕರ್ನಾಟಕ

VISTARA TOP 10 NEWS : ಮೋದಿ ಗೆಲ್ಲಿಸಿದ ಮಹಿಳೆಯರು, ಭವಾನಿ ದರ್ಪಕ್ಕೆ ಎಲ್ಲೆಡೆ ಆಕ್ರೋಶ ಮತ್ತಿತರ ದಿನದ ಪ್ರಮುಖ ಸುದ್ದಿಗಳು

ದೇಶ, ವಿದೇಶಗಳ ಸುದ್ದಿಗಳು, ದಿನವಿಡೀ ನಡೆದ ಪ್ರಮುಖ ಬೆಳವಣಿಗೆಗಳ ಸುತ್ತುನೋಟವೇ Vistara Top10 News

VISTARANEWS.COM


on

Top 10 news
Koo

1. ಚುನಾವಣೆಯಲ್ಲಿ ಹೆಣ್ಣುಮಕ್ಕಳ ಮತಗಳನ್ನು ಸೆಳೆದ ಬಿಜೆಪಿ; ‘ಕ್ವೀನ್ಸ್’‌ ಕಿಂಗ್‌ಮೇಕರ್ಸ್‌ ಆಗಿದ್ದು ಹೇಗೆ?
ನವದೆಹಲಿ: ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ (Assembly Election Results 2023) ಪ್ರಕಟವಾಗಿದ್ದು, ತೆಲಂಗಾಣ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಭರಪೂರ ಉಚಿತ ಕೊಡುಗೆಗಳ ‘ಗ್ಯಾರಂಟಿ’ ನೀಡಿದ್ದರೂ ಜನ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಬಿಜೆಪಿ ಮೂರೂ ರಾಜ್ಯಗಳಲ್ಲಿ ಗೆಲುವು ಸಾಧಿಸಲು ನಾನಾ ಕಾರಣಗಳಿದ್ದರೂ, ಹೆಣ್ಣುಮಕ್ಕಳ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿರುವುದು ಪ್ರಮುಖ ಕಾರಣವಾಗಿದೆ. ವಿಶೇಷವಾಗಿ ಗೃಹಿಣಿಯರು ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ಮತ ನೀಡಿದ್ದು ಚುನಾವಣೆಯಲ್ಲಿ ಟರ್ನಿಂಗ್‌ ಪಾಯಿಂಟ್‌ ಆಗಿದೆ ಎಂದು ವಿಶ್ಲೇಷಿಸಲಾಗಿದೆ. ಹಾಗಾದರೆ, ಮೂರೂ ರಾಜ್ಯಗಳಲ್ಲಿ ಬಿಜೆಪಿಯು ಹೆಣ್ಣುಮಕ್ಕಳನ್ನು ಸೆಳೆದಿದ್ದು ಹೇಗೆ? ಯಾವ ಯೋಜನೆಗಳು ಸ್ತ್ರೀಯರ ಮತಗಳನ್ನು ವಾಲಿಸಿದವು ಎಂಬುದರ ಕಿರು ಮಾಹಿತಿ ಇಲ್ಲಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಇಂದಿರಾ ಗಾಂಧಿಗೆ ಭದ್ರತಾ ಅಧಿಕಾರಿಯಾಗಿದ್ದ ಲಾಲದುಹೋಮಾ ಈಗ ಮಿಜೋರಾಂ ಸಿಎಂ!
ಇದನ್ನೂ ಓದಿ : Mizoram Election Results: ಎಂಎನ್‌ಎಫ್‌ಗೆ ಭಾರೀ ಸೋಲು, ಮಿಜೋರಾಂನಲ್ಲಿ ಇನ್ನು ಜೆಡ್‌ಪಿಎಂ ಆಡಳಿತ
ಇದನ್ನೂ ಓದಿ : ಕಾಂಗ್ರೆಸ್‌ಗೆ ಸೋಲು; ಇಂಡಿಯಾ ಕೂಟದಲ್ಲಿ ತಳಮಳ! ನಾಯಕತ್ವಕ್ಕೆ ಹಲವರ ಗಾಳ!

2. ಬಿಜೆಪಿ ಜಯಭೇರಿ ಬೆನ್ನಲ್ಲೇ ನಿಫ್ಟಿ, ಸೆನ್ಸೆಕ್ಸ್‌ ನೆಗೆತ, ಸುಧಾರಿಸಿದ ರೂಪಾಯಿ ಮೌಲ್ಯ!
ಮುಂಬೈ: ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಗೆಲುವು ಸಾಧಿಸಿದ (Assembly Election Results 2023) ಬೆನ್ನಲ್ಲೇ ದೇಶದ ಷೇರುಪೇಟೆಯಲ್ಲಿ (Stock Market) ಹೊಸ ಉತ್ಸಾಹ ಮೂಡಿದೆ. ಸೋಮವಾರ ನಿಫ್ಟಿ, ಸೆನ್ಸೆಕ್ಸ್‌ ದಾಖಲೆಯ ಏರಿಕೆ ಕಂಡಿದ್ದು, ಚುನಾವಣೆ ಫಲಿತಾಂಶವೇ ಇದಕ್ಕೆ ಕಾರಣ ಎಂದು ಷೇರುಪೇಟೆ ತಜ್ಞರು ತಿಳಿಸಿದ್ದಾರೆ. ಮತ್ತೊಂದೆಡೆ ಡಾಲರ್‌ ಎದುರು ರೂಪಾಯಿ ಮೌಲ್ಯವೂ ಸುಧಾರಿಸಿಕೊಂಡಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

3. ಭ್ರೂಣ ಹತ್ಯೆ ಕೇಸ್‌; ಕೋರ್ಟ್‌ನಲ್ಲಿ ಕೇಸ್‌ ದಾಖಲಿಸಲು ಸದನದಲ್ಲಿ ಒತ್ತಾಯ
ಬೆಳಗಾವಿ: ರಾಜ್ಯದಲ್ಲಿ ಈಗಲೂ ಭ್ರೂಣ ಲಿಂಗ ಪತ್ತೆ (Gender Detection) ಮತ್ತು ಭ್ರೂಣ ಹತ್ಯೆಯ (Foeticide Case) ಬೃಹತ್ ಜಾಲ ಇರುವುದರ ಬಗ್ಗೆ ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ (Belagavi Winter Session) ಕಳವಳವನ್ನು ವ್ಯಕ್ತಪಡಿಸಲಾಗಿದೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಭ್ರೂಣಗಳನ್ನು ಹತ್ಯೆ ಮಾಡಿರುವ ಘೋರ ಕೃತ್ಯದ ಬಗ್ಗೆ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂಬ ಆಗ್ರಹಗಳು ಕೇಳಿಬಂದಿವೆ. ಅಲ್ಲದೆ, ಈ ಪ್ರಕರಣಗಳ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ, ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಿ ಎಂಬ ಸಲಹೆಗಳೂ ಕೇಳಿಬಂದಿವೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Foeticide Case : ಮೈಸೂರಿನ ಮತ್ತೊಂದು ಆಸ್ಪತ್ರೆಯಲ್ಲೂ ಭ್ರೂಣ ಹತ್ಯೆ; ಹೆಡ್‌ ನರ್ಸ್‌ ಉಷಾರಾಣಿ ಬಂಧನ

4. ಸಾಯೋಕೆ ನನ್ನ 1.5 ಕೋಟಿ ಕಾರೇ ಬೇಕಾ?; ಭವಾನಿ ರೇವಣ್ಣ ದರ್ಪಕ್ಕೆ ಎಲ್ಲೆಡೆ ಆಕ್ರೋಶ
ಮೈಸೂರು: ಸಾಯಂಗಿದ್ರೆ ಬಸ್ಸಿಗೆ ಸಿಕ್ಕಿ ಸಾಯಬೇಕಿತ್ತು. ಸಾಯೋಕೆ ನನ್ ಕಾರೇ ಬೇಕಿತ್ತಾ? ಅವನು ಸತ್ತೋಗ್ತಾನೆ ಅಂತ ಅವನ ಬಗ್ಗೆ ಯಾಕೆ ಯೋಚನೆ ಮಾಡ್ತೀಯಾ? ಒಂದೂವರೆ ಕೋಟಿ ರೂಪಾಯಿ ಕಾರು ಬಗ್ಗೆ ಯೋಚನೆ ಮಾಡು: ಬೈಕೊಂದು ತಮ್ಮ ಕಾರಿಗೆ ಡಿಕ್ಕಿ ಹೊಡೆದ (Bike hits Car) ಸಂದರ್ಭದಲ್ಲಿ ಹಿರಿಯ ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ (Bhavani Revanna) ಅವರು ಆಡಿದ ಮಾತುಗಳಿವು. ದೇವೇಗೌಡರ ಮನೆ ಸೊಸೆಯಾಗಿ (Daughter in law of HD Devegowda), ಸದಾ ಜನರೇ ನನ್ನ ದೇವರು ಎನ್ನುವ ಎಚ್‌.ಡಿ ರೇವಣ್ಣ (HD Revanna) ಅವರ ಪತ್ನಿಯಾಗಿ ಜನರ ಬಗ್ಗೆ ಕರುಣೆ ಹೊಂದಿರಬೇಕಾದ ಹೆಣ್ಮಗಳು ನಡು ರಸ್ತೆಯಲ್ಲಿ ಈ ರೀತಿ ದರ್ಪದ ಮಾತು ಆಡಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜತೆಗೆ ಆಕ್ರೋಶವೂ ವ್ಯಕ್ತವಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಇದನ್ನೂ ಓದಿ : Bhavani Revanna : ಅದು ನಮ್ಮ ಕಾರಲ್ಲ ಫ್ರೆಂಡ್‌ದು ಎಂದ ರೇವಣ್ಣ; ಭವಾನಿ ತಪ್ಪಿಗೂ ಕ್ಷಮೆ ಕೇಳಿದ್ರು!
ಇದನ್ನೂ ಓದಿ : Bhavani Revanna : ಭವಾನಿ ರೇವಣ್ಣರ 1.5 ಕೋಟಿಯ ಕಾರು ಯಾವುದು? ಅದರ ವಿಶೇಷತೆಯೇನು?

5. 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಸಾವು; ಒಂಟಿ ಸಲಗ ದಾಳಿಯಿಂದ ದುರ್ಘಟನೆ
ಹಾಸನ: ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ (Dasara Elephant Arjuna) ಮೃತಪಟ್ಟಿದೆ. ಸಕಲೇಶಪುರ ತಾಲೂಕಿನ‌ ಯಸಳೂರು ವಲಯದ ಬಾಳೆಕೆರೆ ಅರಣ್ಯದಲ್ಲಿ ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ಒಂಟಿ ಸಲಗ ದಾಳಿ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡು ಅರ್ಜುನ (Dasara Elephant Arjuna) ಕೊನೆಯುಸಿರೆಳೆದಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

6. ಮಿಚುಂಗ್ ಚಂಡಮಾರುತ ಎಫೆಕ್ಟ್‌; ನಾಳೆ ಭಾರಿ ಮಳೆ ಸಾಧ್ಯತೆ
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮಿಚುಂಗ್ ಚಂಡಮಾರುತದ ಪರಿಣಾಮದಿಂದಾಗಿ ತಮಿಳುನಾಡಿಗೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಭಾಗದ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದ ಹಲವು ಕಡೆ ಮಂಗಳವಾರ (ಡಿ. 5) ಭಾರಿ ಮಳೆಯಾಗುವ (Rain News) ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ (karnataka Weather Forecast) ನೀಡಿದೆ. ಅಲ್ಲದೆ, ಗಾಳಿಯ ವೇಗವೂ ಹೆಚ್ಚಳಗೊಳ್ಳಲಿದ್ದು, ಪ್ರತಿ ಗಂಟೆಗೆ 30 ಕಿ.ಮೀ. ವೇಗದಲ್ಲಿ ಬೀಸಲಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

7. ಪಿಎಸ್‌ಐ ಪರೀಕ್ಷೆ ಮುಂದೂಡಿಕೆ, ಜ. 23ಕ್ಕೆ ಫಿಕ್ಸ್‌: ಗೃಹ ಸಚಿವರ ಘೋಷಣೆ
ಬೆಂಗಳೂರು: ಪಿಎಸ್‌ಐ ಪರೀಕ್ಷೆ (PSI Exam) ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ (Congress Government) ಗುಡ್ ನ್ಯೂಸ್ ಕೊಟ್ಟಿದೆ. ಈ ವಿಷಯ ಸದನದಲ್ಲಿ ಪ್ರಸ್ತಾಪವಾಗಿದ್ದು, ಒಂದು ತಿಂಗಳು ಪರೀಕ್ಷೆ ದಿನಾಂಕವನ್ನು ಮುಂದೂಡಿಕೆ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (Home Minister Dr G Parameshwara) ಘೋಷಿಸಿದ್ದಾರೆ. ಇದರನ್ವಯ ಜನವರಿ 23ಕ್ಕೆ ಮುಂದೂಡಿಕೆಯಾದಂತೆ ಆಗಿದೆ ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

8. ತೆಲಂಗಾಣದಲ್ಲಿ ವಾಯುಪಡೆ ವಿಮಾನ ಪತನ, ಇಬ್ಬರು ಪೈಲಟ್‌ಗಳ ಸಾವು
ಹೈದರಾಬಾದ್:‌ ತೆಲಂಗಾಣದ ಮೇಡಕ್‌ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ (IAF) ತರಬೇತಿ ವಿಮಾನವೊಂದು ಪತನಗೊಂಡಿದ್ದು (Aircraft Crash), ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಟೂಪ್ರಾನ್‌ ಪಟ್ಟಣದ ರಾವೆಳ್ಳಿ ಗ್ರಾಮದ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಸೋಮವಾರ (ಡಿಸೆಂಬರ್‌ 4) ವಿಮಾನ ಪತನಗೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದು ಇಬ್ಬರು ಪೈಲಟ್‌ಗಳು (Two Pilots Dead) ಮೃತಪಟ್ಟಿದ್ದಾರೆ ಎಂದು ವಾಯುಪಡೆ ಮಾಹಿತಿ ನೀಡಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

9. ಬಿಗ್‌ಬಾಸ್‌ನಲ್ಲಿ ಬಾಲಿವುಡ್‌ನವರನ್ನು ಮೀರಿಸಿದ ಕಿಚ್ಚ ಸುದೀಪ್‌ ಡ್ರೆಸ್‌! ಏನಿದರ ಸ್ಪೆಷಲ್‌?
ಬೆಂಗಳೂರು: ಪ್ರತಿವಾರ ಬಿಗ್‌ಬಾಸ್‌ನಲ್ಲಿ ಕಿಚ್ಚ ಸುದೀಪ್‌ ಯಾವ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಕೇವಲ ಅವರ ಅಭಿಮಾನಿಗಳಿಗಷ್ಟೇ ಅಲ್ಲ, ಫ್ಯಾಷನ್‌ ಪ್ರಿಯರಿಗೂ ಕುತೂಹಲವಿರುತ್ತದೆ. ಹೌದು. ಸುದೀಪ್‌ರವರು ಪ್ರತಿ ವೀಕೆಂಡ್‌ನಲ್ಲಿ ಧರಿಸುವ ಒಂದೊಂದು ಡಿಫರೆಂಟ್‌ ಔಟ್‌ಫಿಟ್‌ಗಳು ನೋಡುಗರ ಕಣ್ಣರಳಿಸುತ್ತವೆ. ಕೆಲವೊಮ್ಮೆ ಬಾಲಿವುಡ್‌ಗರನ್ನು ಮೀರಿಸುವಂತಹ ಹುಬ್ಬೇರಿಸುವಂತಹ ಫ್ಯೂಶನ್‌ ಡಿಸೈನರ್‌ವೇರ್‌ಗಳನ್ನು ಕಾಣಬಹುದು. ಈ ಡಿಸೈನರ್‌ವೇರ್‌ಗಳ ಹಿಂದಿರುವ ಡಿಸೈನರ್‌ಗಳ್ಯಾರು? ಡಿಸೈನ್‌ ಆಯ್ಕೆ ಹೇಗೆ? ಅಷ್ಟ್ಯಾಕೆ ದುಬಾರಿ ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ವಿವರ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

10. ಪ್ರೀತಿಯಿಂದ ಸಾಕಿದ ಬೆಕ್ಕು ಕಚ್ಚಿ ತಂದೆ, ಮಗನ ದಾರುಣ ಸಾವು!
ಕಾನ್ಪುರ್: ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ (Kanpur City) ಸಾಕು ಬೆಕ್ಕು (Pet Cat) ಕಚ್ಚಿದ ಕಾರಣಕ್ಕೆ (Cat Bite) ತಂದೆ ಮತ್ತು ಮಗ ಇಬ್ಬರು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ(Father and Son). ಮೃತರಿಗೆ ಕಚ್ಚಿದ ಬೆಕ್ಕಿಗೆ, ಬೀದಿ ನಾಯಿಯೊಂದು ಕಚ್ಚಿತ್ತು. ಅದೇ ಬೆಕ್ಕು ತಂದೆ ಮತ್ತು ಮಗ ಇಬ್ಬರಿಗೂ ಕಚ್ಚಿದ್ದರಿಂದ ಅವರಿಗೆ ಮಾರಣಾಂತಿಕ ರೇಬೀಸ್ ಸೋಂಕು (rabies virus) ತಗುಲಿ, ಅಂತಿಮವಾಗಿ ಮೃತಪಟ್ಟರು. ಇವರಿಬ್ಬರೂ ಒಂದು ವಾರದ ಅಂತರದಲ್ಲಿ ಸಾವನ್ನಪ್ಪಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

Continue Reading

ಕರ್ನಾಟಕ

Dasara Elephant Arjuna: ಅರ್ಜುನನ ನಿಧನಕ್ಕೆ ಸಿಎಂ, ಡಿಸಿಎಂ, ನಟ ದರ್ಶನ್ ಸೇರಿ ಗಣ್ಯರ ಸಂತಾಪ

Dasara Elephant Arjuna: ಕಾರ್ಯಾಚರಣೆ ವೇಳೆ ಕಾಡಾನೆ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡಿದ ದಸರಾ ಆನೆ ಅರ್ಜುನ ಸಾವಿಗೆ ರಾಜಕೀಯ ನಾಯಕರು, ಚಿತ್ರರಂಗದ ಕಲಾವಿದರು ಸೇರಿ ಗಣ್ಯರು ಕಂಬನಿ ಮಿಡಿದಿದ್ದಾರೆ.

VISTARANEWS.COM


on

Dasara Elephant Arjuna
Koo

ಬೆಂಗಳೂರು: ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ಒಂಟಿ ಸಲಗದ ವಿರುದ್ಧ ಹೋರಾಡಿ ಮೃತಪಟ್ಟ ದಸರಾ ಆನೆ ಅರ್ಜುನನ (Dasara Elephant Arjuna) ನಿಧನಕ್ಕೆ ರಾಜಕೀಯ ನಾಯಕರು, ಚಿತ್ರರಂಗದ ಕಲಾವಿದರು ಸೇರಿ ಗಣ್ಯರು ಕಂಬನಿ ಮಿಡಿದಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂಗಳಾದ ಎಚ್‌.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ನಟ ದರ್ಶನ್‌ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ (Dasara Elephant Arjuna) ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ಸಕಲೇಶಪುರ ತಾಲೂಕಿನ‌ ಯಸಳೂರು ವಲಯದ ಬಾಳೆಕೆರೆ ಅರಣ್ಯದಲ್ಲಿ ಮೃತಪಟ್ಟಿದೆ. ಒಂಟಿ ಸಲಗ ದಾಳಿ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡು ಅರ್ಜುನ (Dasara Elephant Arjuna) ಕೊನೆಯುಸಿರೆಳೆದಿದೆ. ಹೀಗಾಗಿ ಜನರ ಪ್ರೀತಿಪಾತ್ರವಾಗಿದ್ದ ದಸರಾ ಆನೆಯ ಸೇವೆಯನ್ನು ಗಣ್ಯರು ಸ್ಮರಿಸಿದ್ದಾರೆ.

‘ಅರ್ಜುನ’ ಇನ್ನಿಲ್ಲ ಎಂಬ ಸುದ್ದಿ ಕೇಳಿ ನೋವಾಯಿತು ಎಂದ ಸಿಎಂ

ಐತಿಹಾಸಿಕ ಮೈಸೂರು ದಸರಾದ ಕೇಂದ್ರ ಬಿಂದುವಾದ ಜಂಬೂಸವಾರಿಯನ್ನು ಎಂಟು ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟು ಜನರ ಪ್ರೀತಿಪಾತ್ರವಾಗಿದ್ದ ಆನೆ ‘ಅರ್ಜುನ’ ಇನ್ನಿಲ್ಲ ಎಂಬ ಸುದ್ದಿ ಕೇಳಿ ನೋವಾಯಿತು. ಬರೋಬ್ಬರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು, ಅತ್ಯಂತ ಸಂಯಮದಿಂದ ಮೆರವಣಿಗೆಯಲ್ಲಿ ಸಾಗುವ ಮೂಲಕ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ ಅರ್ಜುನ ಕಾಡಾನೆ ಜೊತೆಗಿನ ಕಾದಾಟದಲ್ಲಿ ಮೃತಪಟ್ಟಿದೆ. ಲಕ್ಷಾಂತರ ಜನರ ನಡುವೆ ಗಾಂಭೀರ್ಯದಿಂದ ಸಾಗುತ್ತಿದ್ದ ಅರ್ಜುನನ ನಡಿಗೆ ನನ್ನಂತಹ ಕೋಟ್ಯಂತರ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಇರಲಿದೆ.‌

ಇದನ್ನೂ ಓದಿ | Dasara Elephant Arjuna: 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಸಾವು; ಒಂಟಿ ಸಲಗ ದಾಳಿಯಿಂದ ದುರ್ಘಟನೆ

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸಂತಾಪ

ದಸರಾ ಆನೆ ಅರ್ಜುನ ಸಾವಿಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾಡಾನೆಗಳ ಸೆರೆಗೆ ನಡೆಸಿದ ಕಾರ್ಯಾಚರಣೆ ವೇಳೆ ಒಂಟಿ ಸಲಗದ ದಾಳಿಗೆ ತುತ್ತಾಗಿ ಸಾಕಾನೆ ಅರ್ಜುನ ವೀರಮರಣ ಹೊಂದಿದ ಘಟನೆ ತಿಳಿದು ಬಹಳ ನೋವುಂಟಾಯಿತು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ದಸರಾ ಅಂಬಾರಿಯನ್ನು ಹೊತ್ತು ಸಾಗಿದ್ದ ಅರ್ಜುನ ಇನ್ನು ನೆನಪಷ್ಟೇ. ಸ್ಥಳಾಂತರ ಕಾರ್ಯಾಚರಣೆ ವೇಳೆ ಸಾಕಾನೆಗಳು-ಕಾಡಾನೆಗಳ ನಡುವಿನ ಭೀಕರ ಕಾಳಗದ ವೇಳೆ ಇತರೆ ಸಾಕಾನೆಗಳು ಪಲಾಯನ ಮಾಡಿದರೆ, ಅರ್ಜುನ ಮಾತ್ರ ಒಂಟಿ ಸಲಗದ ಜತೆ ವಿರೋಚಿತವಾಗಿ ಸೆಣಸಾಡಿತ್ತು. ಇಂಥ ವಿರೋಚಿತ ಆನೆ ಸಾವನ್ನಪ್ಪಿರುವುದು ಅತ್ಯಂತ ದುಃಖದ ಸಂಗತಿ ಎಂದು ಹೇಳಿದ್ದಾರೆ.

ಅರ್ಜುನ ಮರಣದ ಸುದ್ದಿ ತೀವ್ರ ನೋವುಂಟು ಮಾಡಿದೆ: ಬೊಮ್ಮಾಯಿ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಮೈಸೂರು ದಸರಾದಲ್ಲಿ ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಗಜರಾಜ ಅರ್ಜುನ, ಆನೆಗಳ ಕಾರ್ಯಾಚರಣೆ ವೇಳೆ ವೀರ ಮರಣರಾಗಿರುವ ಸುದ್ದಿ ತೀವ್ರ ನೋವುಂಟು ಮಾಡಿದೆ. ತಾಯಿ ಶ್ರೀ ಚಾಮುಂಡೇಶ್ವರಿಯು ಅರ್ಜುನನ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ

ಮರೆಯಲಾರದ ನೆನಪುಗಳನ್ನು ಬಿಟ್ಟುಹೋದ: ಡಿಕೆಶಿ

ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿ, ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ‌ ಹೊತ್ತಿದ್ದ ಅರ್ಜುನ ಆನೆ, ಸಕಲೇಶಪುರ ತಾಲೂಕಿನ ಯಸಳೂರು ವಲಯದ ಬಾಳೆಕೆರೆ ಫಾರೆಸ್ಟ್‌ನಲ್ಲಿ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವಿಗೀಡಾದ ಸಂಗತಿ ತಿಳಿದು ದುಃಖವಾಗಿದೆ. ಒಂದು ಕಾಲದಲ್ಲಿ ಮೈಸೂರು ದಸರಾದ ಕೇಂದ್ರಬಿಂದುವಾಗಿದ್ದ ಅರ್ಜುನ ನಮ್ಮೆಲ್ಲರ ಹೃದಯದಲ್ಲಿ ಮರೆಯಲಾರದ ನೆನಪುಗಳನ್ನು ಬಿಟ್ಟುಹೋಗಿದ್ದಾನೆ ಎಂದು ತಿಳಿಸಿದ್ದಾರೆ.

ಅರ್ಜುನನ ಗಜಗಾಂಭೀರ್ಯಕ್ಕೆ ಅವನೇ ಸಾಟಿ ಎಂದ ದರ್ಶನ್

‌ನಟ ದರ್ಶನ್‌ ಪ್ರತಿಕ್ರಿಯಿಸಿ, 8 ಬಾರಿ ದಸರಾ ಅಂಬಾರಿ ಹೊತ್ತು ನಾಡಿನ ಜನಮನ ಗೆದ್ದಿದ್ದ 64 ವರ್ಷದ ‘ಅರ್ಜುನ’ ಇಂದು ಕಾಡಾನೆಗಳ ಕಾಳಗದಲ್ಲಿ ಸಾವನ್ನಪ್ಪಿರುವುದು ವಿಷಾದದ ಸಂಗತಿ. ಅರ್ಜುನನ ಗಜಗಾಂಭೀರ್ಯಕ್ಕೆ ಅವನೇ ಸಾಟಿ! ಓಂ ಶಾಂತಿ!

ಇದನ್ನೂ ಓದಿ | ಕಾರ್ಯಾಚರಣೆಗೆ ಅರ್ಜುನ ಬಳಕೆ ಕಾನೂನುಬಾಹಿರ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ದಿನೇಶ್‌ ಗೂಳಿಗೌಡ ಆಗ್ರಹ

ಜನರ ನೆನಪಲ್ಲಿ ಬಹುಕಾಲ ಉಳಿಯಲಿದ್ದಾನೆ: ಬಿ.ವೈ. ವಿಜಯೇಂದ್ರ

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಂದಿಸಿ, ವಿಶ್ವ ವಿಖ್ಯಾತ ನಾಡಹಬ್ಬ ದಸರೆಯ ಮುಖ್ಯ ಆಕರ್ಷಣೆ ಜಂಬೂಸವಾರಿಯಲ್ಲಿ ಸತತ ಎಂಟು ಬಾರಿ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ಮೂರ್ತಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗುತ್ತಿದ್ದ ಗಜರಾಜ ಅರ್ಜುನ ಸಾವನ್ನಪ್ಪಿರುವ ಸಂಗತಿ ಬೇಸರ ತರಿಸಿದೆ.
ಅರ್ಜುನ ನಾಡಿನ ಜನರ ನೆನಪಲ್ಲಿ ಬಹುಕಾಲ ಉಳಿಯಲಿದ್ದಾನೆ ಎಂದು ತಿಳಿಸಿದ್ದಾರೆ.

ಅತ್ಯಂತ ದುರಾದೃಷ್ಟಕರ ಘಟನೆ: ಈಶ್ವರ್‌ ಖಂಡ್ರೆ

ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಪ್ರತಿಕ್ರಿಯಿಸಿ, ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಹಲವು ಬಾರಿ ಅಂಬಾರಿ ಹೊತ್ತಿದ್ದ 64 ವರ್ಷದ ಅರ್ಜುನ ಆನೆಯ ಸಾವಿನ ಸುದ್ದಿ ತಿಳಿದು ಬಹಳ ದುಃಖವಾಗಿದೆ. ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆಯ ವೇಳೆ ದುರ್ಘಟನೆ ಸಂಭವಿಸಿದ್ದು, ಮದಗಜವೊಂದು, ಅರ್ಜುನನ ಮೇಲೆ ದಾಳಿ ಮಾಡಿ, ತನ್ನ ದಂತದಿಂದ ಚುಚ್ಚಿ ಘಾಸಿಗೊಳಿಸಿ, ಸಾವಿಗೆ ಕಾರಣವಾಗಿರುವುದು ಅತ್ಯಂತ ದುರಾದೃಷ್ಟಕರ. ಕಾರ್ಯಾಚರಣೆಯಲ್ಲಿ ಪುಂಡಾನೆ ರೌದ್ರಾವತಾರ ತಾಳಿ, ಅರ್ಜುನನ ಮೇಲೆ ದಾಳಿ ಮಾಡಿದೆ. ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದರೂ ಜಗ್ಗದೆ ದಾಳಿ ಮಾಡಿದೆ. ಮಾವುತ ಮತ್ತು ಪಶುವೈದ್ಯರು ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದ ಮೂರು ಆನೆಗಳು ಹಿಮ್ಮೆಟ್ಟಿವೆ. ಆದರೆ ಅರ್ಜುನ ಪುಂಡಾನೆಯೊಂದಿಗೆ ಏಕಾಂಗಿಯಾಗಿ ಹೋರಾಡುವಾಗ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರ್ಜುನ ಆನೆ ಈ ಹಿಂದೆ ಹಲವು ಆನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಅನುಭವ ಹೊಂದಿತ್ತು ಮತ್ತು ತರಬೇತಿ ಕೂಡಾ ಪಡೆದಿತ್ತು. ತಾಯಿ ಶ್ರೀ ಚಾಮುಂಡೇಶ್ವರಿಯು ಅರ್ಜುನನ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
dina bhavishya read your daily horoscope predictions for December 5 2023
ಪ್ರಮುಖ ಸುದ್ದಿ41 mins ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

Shirshendu Mukhopadhyay
ಕರ್ನಾಟಕ5 hours ago

Shirshendu Mukhopadhyay: ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಶೀರ್ಷೇಂಧು ಮುಖ್ಯೋಪಧ್ಯಾಯ ಆಯ್ಕೆ

Bangalore Bulls
ಕ್ರೀಡೆ6 hours ago

Pro Kabaddi : ಬೆಂಗಳೂರು ತಂಡಕ್ಕೆ ಸತತ ಎರಡನೇ ಸೋಲು

Siddaramaiah
ಕರ್ನಾಟಕ6 hours ago

CM Siddaramaiah: ಹಜರತ್ ಬಾದ್ ಶಾ ಪೀರಾನ್ ದರ್ಗಾ ಅಭಿವೃದ್ಧಿಗೆ ಅಗತ್ಯ ಅನುದಾನ: ಸಿದ್ದರಾಮಯ್ಯ

WhatsApp new feature lets you search users by their username Says Report
ಗ್ಯಾಜೆಟ್ಸ್6 hours ago

WhatsApp: ವಾಟ್ಸಾಪ್‍ನಲ್ಲಿ ಬಳಕೆದಾರರನ್ನು ಅವರ ಯೂಸರ್‌ನೇಮ್ ಮೂಲಕವೇ ಹುಡುಕಬಹುದು!

Top 10 news
ಕರ್ನಾಟಕ7 hours ago

VISTARA TOP 10 NEWS : ಮೋದಿ ಗೆಲ್ಲಿಸಿದ ಮಹಿಳೆಯರು, ಭವಾನಿ ದರ್ಪಕ್ಕೆ ಎಲ್ಲೆಡೆ ಆಕ್ರೋಶ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Dasara Elephant Arjuna
ಕರ್ನಾಟಕ8 hours ago

Dasara Elephant Arjuna: ಅರ್ಜುನನ ನಿಧನಕ್ಕೆ ಸಿಎಂ, ಡಿಸಿಎಂ, ನಟ ದರ್ಶನ್ ಸೇರಿ ಗಣ್ಯರ ಸಂತಾಪ

]cashless medical treatment for accident victims by central Government
ದೇಶ8 hours ago

ರಸ್ತೆ ಅಪಘಾತದ ಗಾಯಾಳುಗಳಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ! ಕೇಂದ್ರದಿಂದ ರಾಷ್ಟ್ರಾದ್ಯಂತ ಜಾರಿ

Cricket news
ಕ್ರಿಕೆಟ್8 hours ago

ind vs aus : ಆಸ್ಟ್ರೇಲಿಯಾ- ಭಾರತ ಟಿ20 ಪಂದ್ಯದ ಅಂಪೈರ್​ ಮೇಲೆ ಮೋಸದ ಅರೋಪ!

Hori festival in maavali at soraba taluk
ಶಿವಮೊಗ್ಗ8 hours ago

Shivamogga News: ಮಾವಲಿ ಗ್ರಾಮದಲ್ಲಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ41 mins ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ1 day ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ4 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ5 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ5 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

ಟ್ರೆಂಡಿಂಗ್‌