Horoscope Today | ಇಂದು ನಾಲ್ಕು ರಾಶಿಯವರಿಗೆ ಉತ್ತಮ ಆರೋಗ್ಯ; ನಿಮ್ಮ ಭವಿಷ್ಯ ಹೇಗಿದೆ? - Vistara News

ಪ್ರಮುಖ ಸುದ್ದಿ

Horoscope Today | ಇಂದು ನಾಲ್ಕು ರಾಶಿಯವರಿಗೆ ಉತ್ತಮ ಆರೋಗ್ಯ; ನಿಮ್ಮ ಭವಿಷ್ಯ ಹೇಗಿದೆ?

ಶುಭಕೃತ ನಾಮ ಸಂವತ್ಸರ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷದ ಪಂಚಮಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದಿನ ಪಂಚಾಂಗ (14-10-2022)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ.

ತಿಥಿ: ಪಂಚಮಿ 28:52 ವಾರ: ಶುಕ್ರವಾರ
ನಕ್ಷತ್ರ: ರೋಹಿಣಿ 20:46 ಯೋಗ: ವ್ಯತಿಪಾತ 13:55
ಕರಣ: ಕೌಲವ 15:56 ದಿನ ವಿಶೇಷ: ಚಾಮುಂಡೇಶ್ವರೀ ಮುಡಿ ಉತ್ಸವ.
ಅಮೃತಕಾಲ: ಸಂಜೆ 05 ಗಂಟೆ 18 ನಿಮಿಷದಿಂದ 07 ಗಂಟೆ 03 ನಿಮಿಷದವರೆಗೆ.

ಸೂರ್ಯೋದಯ: 06: 10     ಸೂರ್ಯಾಸ್ತ: 06: 01

ರಾಹುಕಾಲ : ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Horoscope Today)

Horoscope Today

ಮೇಷ: ಅತಿಯಾದ ಒತ್ತಡ ಕಡಿಮೆ ಮಾಡಿಕೊಳ್ಳಲು ಆಧ್ಯಾತ್ಮಿಕ ಸಾಧನೆ ಅವಶ್ಯಕ. ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ. ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡುವವರ ಬಗ್ಗೆ ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವೃಷಭ: ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವ ಅವಕಾಶ ದೊರೆಯಲಿದೆ. ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ. ಉತ್ತಮ ಆರೋಗ್ಯ. ಸಹೋದ್ಯೋಗಿಗಳಿಂದ ಕಿರಿಕಿರಿ, ತಾಳ್ಮೆಯಿಂದ ವರ್ತಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಮಿಥುನ: ಬಂಧುಗಳು ನಿಮ್ಮನ್ನು ಟೀಕೆ ಮಾಡುವ ಸಾಧ್ಯತೆ. ದಿನದ ಮಟ್ಟಿಗೆ ಒತ್ತಡ, ಇದರಿಂದ ಮಾನಸಿಕ ನೆಮ್ಮದಿ ಹಾಳಾಗುವ ಸಾಧ್ಯತೆ. ಸಂಯಮದಿಂದ ವರ್ತಿಸಿ. ಆರ್ಥಿಕ ಪ್ರಗತಿ. ಆರೋಗ್ಯದಲ್ಲಿ ಮಿಶ್ರ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಕಟಕ: ಪ್ರಮುಖ ವ್ಯಕ್ತಿಗಳ ಸಹಕಾರ ದೊರೆಯಲಿದೆ. ಆತುರದ ತಿರ್ಮಾನ ತೆಗೆದುಕೊಳ್ಳುವುದು ಬೇಡ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಆರೋಗ್ಯ ಪರಿಪೂರ್ಣವಾಗಿರುತ್ತದೆ. ಉದ್ಯೋಗದಲ್ಲಿ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಸಿಂಹ: ಮಿತಿ ಮೀರಿದ ಕೆಲಸದ ಒತ್ತಡದಿಂದಾಗಿ ದಣಿವು, ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ. ಆರೋಗ್ಯದ ಬಗೆಗೆ ಕಾಳಜಿ ವಹಿಸಿ. ಮಕ್ಕಳಿಂದ ಸಂತೋಷ ಸಿಗಲಿದೆ. ಉದ್ಯೋಗದಲ್ಲಿ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಕನ್ಯಾ: ನಿಮ್ಮ ವರ್ತನೆ ಕುಟುಂಬದ ಸದಸ್ಯರಿಗೆ ಕಿರಿಕಿರಿ ಉಂಟು ಮಾಡುವ ಸಾಧ್ಯತೆ. ಆರೋಗ್ಯದಲ್ಲಿ ವ್ಯತ್ಯಾಸ. ಹಣಕಾಸು ಪ್ರಗತಿ. ಉದ್ಯೋಗದಲ್ಲಿ ಯಶಸ್ಸು ಪಡೆಯುವಿರಿ. ಬಂಧುಗಳ ಭೇಟಿ ಕೊಂಚ ಸಮಾಧಾನ ತರುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ತುಲಾ: ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಆತುರದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಸಂಗಾತಿಯ ವರ್ತನೆ ಮುಜುಗರ ಉಂಟು ಮಾಡುವ ಸಾಧ್ಯತೆ. ಮಾತಿಗೆ ಮಾತು ಬೆಳೆಸುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವೃಶ್ಚಿಕ: ಕುಟುಂಬದ ಸದಸ್ಯರ ಆರೋಗ್ಯ ಕಡೆ ಗಮನ ಇರಲಿ. ನಕಾರಾತ್ಮಕ ಆಲೋಚನೆಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುವಂತೆ ಮಾಡಬಹುದು. ದಿನದ ಮಟ್ಟಿಗೆ ಖರ್ಚು. ಉದ್ಯೋಗದಲ್ಲಿ ಮಿಶ್ರ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಧನಸ್ಸು: ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಆಪ್ತ ಸ್ನೇಹಿತ- ಸಂಬಂಧಿಗಳ ಸಮಸ್ಯೆಗಳಿಗೆ ಸ್ಪಂದಿಸುವಿರಿ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ. ಉತ್ತಮ ಆರೋಗ್ಯ ಹೊಂದುವಿರಿ. ಉದ್ಯೋಗದಲ್ಲಿ ಹೆಚ್ಚು ಶ್ರಮ ಪಡಬೇಕಾಗಿಲ್ಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಮಕರ: ಇಂದು ಆರೋಗ್ಯ ಉತ್ತಮವಾಗಿರಲಿದೆ. ಸ್ನೇಹಿತರ ಸಹಕಾರ ದೊರೆಯಲಿದೆ. ಆರ್ಥಿಕ ಪ್ರಗತಿ ಉತ್ತಮ. ಕೆಲಸದಲ್ಲಿನ ನಿಧಾನಗತಿ ಸ್ವಲ್ಪ ಒತ್ತಡ ತರುವುದು. ಅತಿರೇಕದಲ್ಲಿ ಮಾತನಾಡುವುದು ಬೇಡ. ಸಮಾಧಾನದಿಂದ ವರ್ತಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಕುಂಭ: ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ದೊರೆಯಲಿದೆ. ಹಿರಿಯರ ಮಾರ್ಗದರ್ಶನ ಸಿಗುವುದು. ಉತ್ತಮ ಆರೋಗ್ಯ ಇಂದು ನಿಮ್ಮದಾಗಲಿದೆ. ಅನಿರೀಕ್ಷಿತ ಖರ್ಚು. ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಉದ್ಯೋಗದಲ್ಲಿ ನೀವಿಂದು ಯಶಸ್ಸು ಪಡೆಯುವಿರಿ.
ಅದೃಷ್ಟ ಸಂಖ್ಯೆ: 3

Horoscope Today

ಮೀನ: ಉದ್ಯೋಗದ ಸ್ಥಳದಲ್ಲಿ ಹೊಸ ಭರವಸೆಗಳು ಮೂಡಲಿವೆ. ಕಾರ್ಯಗಳಲ್ಲಿ ಯಶಸ್ಸು. ಪಾಲುದಾರಿಕೆ ವ್ಯವಹಾರವು ನಷ್ಟ ತರುವುದು. ನಿಮ್ಮ ಆತ್ಮೀಯರೇ ನಿಮ್ಮ ಉದಾರ ವರ್ತನೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ | ಭಾವಾಶ್ರಿತ ಗ್ರಹಫಲ | ಸೂರ್ಯನು ದಶಮ ಭಾವದಲ್ಲಿದ್ದರೆ ಬಲಿಷ್ಠ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Lok Sabha Election: ನಾಳೆ ಮೊದಲ ಹಂತದ ಮತದಾನ; ಬೆಂಗಳೂರಿನಲ್ಲಿ ಏನಿರತ್ತೆ? ಏನಿರಲ್ಲ?

Lok Sabha Election: ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆಯಲಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಚುನಾವಣೆ ಆಯೋಗವು ಸಿದ್ಧತೆ ಮಾಡಿಕೊಂಡಿದೆ. ಮತದಾನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೆಲ ಸೇವೆಗಳಲ್ಲಿ ವ್ಯತ್ಯಯವಾಗಲಿದೆ.

VISTARANEWS.COM


on

Lok Sabha Election
Koo

ಬೆಂಗಳೂರು: ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಲ್ಲಿ ಶುಕ್ರವಾರ (ಏಪ್ರಿಲ್‌ 26) ಮತದಾನ ನಡೆಯಲಿದೆ. ಆ ಮೂಲಕ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ (Lok Sabha Election 2024) ಅಬ್ಬರವು ಮತ್ತೊಂದು ಹಂತ ತಲುಪಲಿದೆ. ಶುಕ್ರವಾರ ಬೆಳಗ್ಗೆಯಿಂದಲೇ ಮತದಾನ ಆರಂಭವಾಗಲಿದ್ದು, ಚುನಾವಣೆ ಆಯೋಗವು ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಇನ್ನು, ಮತದಾನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ (Bengaluru) ಕೆಲ ಸೇವೆಗಳಲ್ಲಿ ವ್ಯತ್ಯಯವಾಗಲಿದೆ.

ಶಾಲೆ-ಕಾಲೇಜುಗಳಿಗೆ ರಜೆ

ಮತದಾನದ ಹಿನ್ನೆಲೆಯಲ್ಲಿ ಶುಕ್ರವಾರ ಶಾಲೆ-ಕಾಲೇಜುಗಳು ಸೇರಿ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಅನಿವಾರ್ಯವಲ್ಲದ ಸರ್ಕಾರಿ ಸೇವೆಗಳಿಗೂ ರಜೆ ಘೋಷಿಸಲಾಗಿದೆ. ಇನ್ನು ಕಾರ್ಪೊರೇಟ್‌ ಕಚೇರಿಗಳು ಕೂಡ ಉದ್ಯೋಗಿಗಳಿಗೆ ಕಡ್ಡಾಯವಾಗಿ ರಜೆ ಘೋಷಿಸಬೇಕು ಎಂದು ಸೂಚಿಸಲಾಗಿದೆ. ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಜನ ಭಾಗವಹಿಸಲು ಉತ್ತೇಜನ ನೀಡುವ ದಿಸೆಯಲ್ಲಿ ರಜೆ ಘೋಷಿಸಲು ಸೂಚಿಸಲಾಗಿದೆ. ಕರ್ನಾಟಕ ಹೈಕೋರ್ಟ್‌ ಕೂಡ ರಜೆ ಘೋಷಣೆ ಮಾಡಿದೆ.

Voters' Pledge

ಮತದಾನದ ಹಿನ್ನೆಲೆಯಲ್ಲಿ ಬುಧವಾರ (ಏಪ್ರಿಲ್‌ 24) ಸಂಜೆಯಿಂದಲೇ ಮದ್ಯ ಮಾರಾಟ ನಿಷೇಧಗೊಳಿಸಲಾಗಿದೆ. ಏಪ್ರಿಲ್‌ 26ರ ಮದ್ಯರಾತ್ರಿವರೆಗೆ ಮದ್ಯ ಸಿಗುವುದಿಲ್ಲ. ಹಾಗೆಯೇ, ಸಿಆರ್‌ಪಿಎಸಿ ಸೆಕ್ಷನ್‌ 144 ಜಾರಿಯಲ್ಲಿರುವ ಕಾರಣ ಐದಕ್ಕೂ ಅಧಿಕ ಜನ ಸೇರುವಂತಿಲ್ಲ. ರಾಜಕೀಯ ಘೋಷಣೆ ಕೂಗುವಂತಿಲ್ಲ ಹಾಗೂ ಪ್ರಚೋದನಕಾರಿ ಭಾಷಣಗಳನ್ನು ಮಾಡುವಂತಿಲ್ಲ.

ಕರ್ನಾಟಕದಲ್ಲಿ ಎಲ್ಲೆಲ್ಲಿ ಮತದಾನ?

ಕೋಲಾರ, ಮಂಡ್ಯ, ಉಡುಪಿ-ಚಿಕ್ಕಮಗಳೂರು, ಹಾಸನ, ಮೈಸೂರು, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರ ಕೇಂದ್ರ, ಬೆಂಗಳೂರು ಉತ್ತರ, ದಕ್ಷಿಣ ಕನ್ನಡ, ಚಾಮರಾಜನಗರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮತಗಟ್ಟೆಗಳಲ್ಲಿ ಹೆಚ್ಚಿನ ಜನರ ಸರತಿ ಸಾಲು ಇದ್ದರೆ ಮತದಾನದ ಸಮಯವನ್ನು ಒಂದು ಗಂಟೆವರೆಗೆ ವಿಸ್ತರಣೆ ಮಾಡಲಾಗುತ್ತದೆ.

ಯಾವ ರಾಜ್ಯದ ಎಷ್ಟು ಕ್ಷೇತ್ರಗಳಲ್ಲಿ ಮತದಾನ?

ಕೇರಳದ ಎಲ್ಲ 20, ಕರ್ನಾಟಕ 14, ರಾಜಸ್ಥಾನ 13, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದ ತಲಾ 8, ಮಧ್ಯಪ್ರದೇಶ 6, ಬಿಹಾರ ಹಾಗೂ ಅಸ್ಸಾಂನ ತಲಾ 5, ಛತ್ತೀಸ್‌ಗಢ ಹಾಗೂ ಪಶ್ಚಿಮ ಬಂಗಾಳದ ತಲಾ 3, ತ್ರಿಪುರ, ಜಮ್ಮು-ಕಾಶ್ಮೀರ ಹಾಗೂ ಮಣಿಪುರದ ತಲಾ 1 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 7 ಹಂತಗಳಲ್ಲಿ ನಡೆಯುವ ಚುನಾವಣೆಯು ಜೂನ್‌ 1ರಂದು ಮುಕ್ತಾಯವಾಗಲಿದೆ. ಜೂನ್‌ 4ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ; ಮೋದಿ, ರಾಹುಲ್‌ ಗಾಂಧಿ ಪ್ರತಿಕ್ರಿಯೆ ಕೇಳಿದ ಚುನಾವಣೆ ಆಯೋಗ!

Continue Reading

ಕ್ರೀಡೆ

IPL 2024 : ಸಾಯಿ ಕಿಶೋರ್ ನಿಂದನೆ; ರಸಿಕ್ ಸಲಾಂಗೆ ಪಾಠ ಕಲಿಸಿದ ಜಯ್​ ಶಾ

IPL 2024: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕ್ಯಾಪಿಟಲ್ಸ್ ನಾಲ್ಕು ರನ್ ಗಳ ಜಯ ಸಾಧಿಸುವಲ್ಲಿ ರಸಿಕ್ ಸಲಾಮ್ ದಾರ್ ನಿರ್ಣಾಯಕ ಪಾತ್ರ ವಹಿಸಿದ್ದರು. ಬಲಗೈ ವೇಗಿ ನಾಲ್ಕು ಓವರ್ ಗಳಲ್ಲಿ 44 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಸಾಯಿ ಸುದರ್ಶನ್, ಶಾರುಖ್ ಖಾನ್ ಮತ್ತು ಆರ್ ಸಾಯಿ ಕಿಶೋರ್ ಅವರನ್ನು ಅವರು ಬೌಲಿಂಗ್​ ಸ್ಪೆಲ್​ ಅವಧಿಯಲ್ಲಿ ಔಟ್ ಮಾಡಿದರು.

VISTARANEWS.COM


on

IPL 2024
Koo

ನವದೆಹಲಿ: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಬೌಲರ್ ರಸಿಕ್ ಸಲಾಮ್ ದಾರ್ ಗೆ ದಂಡ ವಿಧಿಸಲಾಗಿದೆ. ಇತ್ತೀಚೆಗೆ ನಡೆದ ಐಪಿಎಲ್ 2024 ಪಂದ್ಯದಲ್ಲಿ ವಿಕೆಟ್ ಪಡೆದ ನಂತರ ಆಕ್ರಮಣಕಾರಿ ಸಂಭ್ರಮಾಚರಣೆಗಾಗಿ ರಸಿಕ್ ಸಲಾಮ್ ದಾರ್ ಅವರಿಗೆ ದಂಡ ವಿಧಿಸಲಾಗಿದೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ (ಏಪ್ರಿಲ್ 24) ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕ್ಯಾಪಿಟಲ್ಸ್ ನಾಲ್ಕು ರನ್ ಗಳ ಜಯ ಸಾಧಿಸುವಲ್ಲಿ ರಸಿಕ್ ಸಲಾಮ್ ದಾರ್ ನಿರ್ಣಾಯಕ ಪಾತ್ರ ವಹಿಸಿದ್ದರು. ಬಲಗೈ ವೇಗಿ ನಾಲ್ಕು ಓವರ್ ಗಳಲ್ಲಿ 44 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಸಾಯಿ ಸುದರ್ಶನ್, ಶಾರುಖ್ ಖಾನ್ ಮತ್ತು ಆರ್ ಸಾಯಿ ಕಿಶೋರ್ ಅವರನ್ನು ಅವರು ಬೌಲಿಂಗ್​ ಸ್ಪೆಲ್​ ಅವಧಿಯಲ್ಲಿ ಔಟ್ ಮಾಡಿದರು.

ರಸಿಕ್ ಸಲಾಮ್ ದಾರ್ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ಲೆವೆಲ್ 1 ಅಪರಾಧ ಮಾಡಿದ್ದಾರೆ. 24 ವರ್ಷದ ಆಟಗಾರ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ಶಿಕ್ಷೆ ಒಪ್ಪಿಕೊಂಡಿದ್ದಾರೆ. “ಐಪಿಎಲ್​ನ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ದಾರ್ ಲೆವೆಲ್ 1 ಅಪರಾಧ ಮಾಡಿದ್ದಾರೆ. ಅವರು ಅಪರಾಧ ಒಪ್ಪಿಕೊಂಡಿದ್ದಾರೆ ಮ್ಯಾಚ್ ರೆಫರಿಯ ಅನುಮತಿ ಸ್ವೀಕರಿಸಿದ್ದಾರೆ. ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ, ಮ್ಯಾಚ್ ರೆಫರಿ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ” ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.

ಐಪಿಎಲ್​​ನ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಪ್ರಕಾರ ಇನ್ನೊಬ್ಬ ಆಟಗಾರನಿಂದ ಆಕ್ರಮಣಕಾರಿ ಪ್ರತಿಕ್ರಿಯೆ ಪ್ರಚೋದಿಸುವ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದಾಗಿದೆ.

ಇದನ್ನೂ ಓದಿ: Virat kohli : ಅಂಪೈರ್​ಗಳ ಕೈ ಕುಲುಕಲೂ ನಿರಾಕರಿಸಿದ್ದ ವಿರಾಟ್​ ಕೊಹ್ಲಿ; ವಿಡಿಯೊ ಇದೆ

ನಿರ್ಣಾಯಕ ಬೌಲಿಂಗ್​

ಗುಜರಾತ್ ಟೈಟಾನ್ಸ್ ಗೆಲುವಿಗೆ 12 ಎಸೆತಗಳಲ್ಲಿ 37 ರನ್​ಗಳ ಅಗತ್ಯವಿದ್ದಾಗ ಜಮ್ಮು ಮತ್ತು ಕಾಶ್ಮೀರ ಮೂಲದ ಕ್ರಿಕೆಟಿಗನಿಗೆ 19 ನೇ ಓವರ್ ಎಸೆಯುವ ನಿರ್ಣಾಯಕ ಜವಾಬ್ದಾರಿ ನೀಡಲಾಗಿತ್ತು. ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಸಾಯಿ ಕಿಶೋರ್ ಅವರನ್ನು ತಮ್ಮ ಯಾರ್ಕರ್​ ಬೌಲಿಂಗ್​ ಮೂಲಕ ಔಟ್ ಮಾಡಿದ್ದರು. ಅದಕ್ಕಿಂತ ಮೊದಲು ಯುವ ವೇಗಿ ಎರಡು ಸಿಕ್ಸರ್​ಗಳನ್ನು ಬಿಟ್ಟುಕೊಟ್ಟರು.

ಡೆಲ್ಲಿ ಪರ ಕುಲ್ದೀಪ್ ಯಾದವ್ 29 ರನ್ ನೀಡಿ 2 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಡಿಸಿ ತಂಡ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿತು. ಏತನ್ಮಧ್ಯೆ, ಶುಭ್​ಮನ್​ ಗಿಲ್ ನೇತೃತ್ವದ ತಂಡವು ಕಡಿಮೆ ನೆಟ್ ರನ್ ರೇಟ್ ( ನೊಂದಿಗೆ ಏಳನೇ ಸ್ಥಾನದಲ್ಲಿದೆ.

ನೋರ್ಜೆಗೆ ಕಠಿಣ ಸಮಯ: ರಿಷಭ್ ಪಂತ್

ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ನಿರ್ಣಾಯಕ 19 ನೇ ಓವರ್​​ಗೆ ಅನ್ನು ನೋರ್ಜೆ ಬದಲಿಗೆ ರಸಿಕ್​ಗೆ ಬೌಲಿಂಗ್ ನೀಡುವ ನಿರ್ಧಾರವನ್ನು ಬಹಿರಂಗಪಡಿಸಿದ್ದರು. ಫಾರ್ಮ್ ನಲ್ಲಿರುವ ಬೌಲರ್ ಅನ್ನು ಅವಲಂಬಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.

ನೋರ್ಜೆ ಕಠಿಣ ಸಮಯ ಎದುರಿಸುತ್ತಿದ್ದರು. ಟಿ20 ಒಂದು ತಮಾಷೆಯ ಆಟ, 14-15 ಓವರ್​ಗಳ ನಂತರ ಚೆಂಡು ಚೆನ್ನಾಗಿ ಬ್ಯಾಟರ್​ಗಳಿಗೆ ಸಿಗುತ್ತದೆ. ಆದ್ದರಿಂದ ನಾವು ರಸಿಕ್ ಅವರನ್ನು ನಂಬಲು ಬಯಸಿದೆವು. ಆಟದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿರುವ ಯಾರನ್ನಾದರೂ ಯಾವಾಗಲೂ ನಂಬಲೇಬೇಕು. ಇದು ನಾಯಕ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಅದು ಕೆಲವೊಮ್ಮೆ ಫಲಿತಾಂಶ ಕೊಡುತ್ತದೆ,”ಎಂದು ರಿಷಭ್ ಪಂತ್ ಹೇಳಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಕ್ಯಾಪಿಟಲ್ಸ್ ಪವರ್ ಪ್ಲೇನಲ್ಲಿ 44 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ರಿಷಭ್ ಪಂತ್ ಹಾಗೂ ಅಕ್ಷರ್ ಪಟೇಲ್ ನಾಲ್ಕನೇ ವಿಕೆಟ್​ಗೆ 113 ರನ್​ಗಳ ಜೊತೆಯಾಟ ನೀಡಿದರು. ಅಕ್ಷರ್ 43 ಎಸೆತಗಳಲ್ಲಿ 66 ರನ್ ಗಳಿಸಿದರೆ, ಪಂತ್ 43 ಎಸೆತಗಳಲ್ಲಿ 88 ರನ್ ಗಳಿಸಿದರು. ಅಂತಿಮವಾಗಿ ಭಾರತ 20 ಓವರ್​ಗೆ 4 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತು.

ರಿಷಭ್ ಪಂತ್ ನೇತೃತ್ವದ ಭಾರತ ತಂಡ ಏಪ್ರಿಲ್ 27 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ (ಎಂಐ) ತಂಡವನ್ನು ಎದುರಿಸಲಿದೆ.

Continue Reading

ವಿದೇಶ

Lashkar-e-Islam: ಮತ್ತೊಬ್ಬ ಭಾರತ ವಿರೋಧಿ ಉಗ್ರ ಪಾಕಿಸ್ತಾನದಲ್ಲಿ ಅಪರಿಚಿತರ ಗುಂಡಿಗೆ ಖತಂ

Lashkar-e-Islam: ಕೆಲವು ದಿನಗಳಿಂದ ಪಾಕಿಸ್ತಾನದಲ್ಲಿ ತಮ್ಮ ಅಡಗು ತಾಣ ಮಾಡಿಕೊಂಡಿರುವ ಉಗ್ರರು ಅಪರಿಚಿತ ವ್ಯಕ್ತಿಗಳ ಗುಂಡಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಮತ್ತೊಂದು ಸೇರ್ಪಡೆ ಹಾಜಿ ಅಕ್ಬರ್ ಅಫ್ರಿದಿಯ ಹತ್ಯೆ. ಕುಖ್ಯಾತ ಲಷ್ಕರ್-ಇ-ಇಸ್ಲಾಂ (Lashkar-e-Islam) ಗುಂಪಿನ ಕಮಾಂಡರ್ ಎಂದು ಗುರುತಿಸ್ಪಡುತ್ತಿದ್ದ ಹಾಜಿ ಅಕ್ಬರ್ ಅಫ್ರಿದಿಯನ್ನು ಪಾಕಿಸ್ತಾನದ ಖೈಬರ್ ಜಿಲ್ಲೆಯ ಬಾರಾದಲ್ಲಿ ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Haji Akbar Afridi
Koo

ಇಸ್ಲಾಮಾಬಾದ್‌: ಕೆಲವು ದಿನಗಳಿಂದ ಭಾರತ ವಿರೋಧಿ ಭಯೋತ್ಪಾದಕರು ಪಾಕಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಗಳ ಗುಂಡಿಗೆ ಬಲಿಯಾಗುತ್ತಿದ್ದಾರೆ. ಈ ಪಟ್ಟಿಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ. ಕುಖ್ಯಾತ ಲಷ್ಕರ್-ಇ-ಇಸ್ಲಾಂ (Lashkar-e-Islam) ಗುಂಪಿನ ಕಮಾಂಡರ್ ಎಂದು ಗುರುತಿಸ್ಪಡುತ್ತಿದ್ದ ಹಾಜಿ ಅಕ್ಬರ್ ಅಫ್ರಿದಿ (Haji Akbar Afridi)ಯನ್ನು ಪಾಕಿಸ್ತಾನದ ಖೈಬರ್ ಜಿಲ್ಲೆಯ ಬಾರಾದಲ್ಲಿ ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಗ್ರಗಾಮಿ ಚಟುವಟಿಕೆಗಳು ಮತ್ತು ಉಗ್ರಗಾಮಿ ಸಿದ್ಧಾಂತಕ್ಕೆ ಹೆಸರುವಾಸಿಯಾದ ಲಷ್ಕರ್-ಇ-ಇಸ್ಲಾಂ ಸಂಘಟನೆ ಕರಾಳ ಇತಿಹಾಸವನ್ನು ಹೊಂದಿದೆ. ಈ ಹಿಂದೆ ಈ ಗುಂಪು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು, ಕಾಶ್ಮೀರದಿಂದ ಪಲಾಯನ ಮಾಡುವಂತೆ ಎಚ್ಚರಿಕೆ ನೀಡಿತ್ತು. ಇಲ್ಲದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸುವಂತೆ ಬೆದರಿಕೆ ಹಾಕಿತ್ತು. ಇದಲ್ಲದೆ 2014ರಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನೊಂದಿಗೆ ಅಕ್ಬರ್ ಸಂಪರ್ಕ ಹೊಂದಿದ್ದ ಎಂದು ವರದಿ ತಿಳಿಸಿದೆ.

ಕಾಶ್ಮೀರಿ ಪಂಡಿತರಿಗೆ ಬೆದರಿಕೆ

ಕಾಶ್ಮೀರಿ ಪಂಡಿತರು ವಾಸಿಸುತ್ತಿರುವ ಕಾಶ್ಮೀರದ ಬಾರಾಮುಲ್ಲಾದ ವೀರ್ವಾನ್‌ ಕಾಲೋನಿಗೆ ಉಗ್ರ ಸಂಘಟನೆ ಲಷ್ಕರ್-ಇ-ಇಸ್ಲಾಂ 2022ರಲ್ಲಿ ಬೆದರಿಕೆ ಪತ್ರ ರವಾನಿಸಿತ್ತು. ʼʼಪಂಡಿತರು ಮತ್ತು ಮುಸ್ಲಿಮರಲ್ಲದವರು (ಕಾಫಿರರು) ಇಸ್ಲಾಂಗೆ ಮತಾಂತರ ಆಗಬೇಕು. ಇಲ್ಲವೇ ಕಾಶ್ಮೀರ ಕಣಿವೆ ಬಿಡಬೇಕು. ಇಲ್ಲದೇ ಹೋದರೆ ಸಾವಿಗೆ ಸಿದ್ಧರಾಗಬೇಕು. ಕಾಶ್ಮೀರ ಇರುವುದು ಕೇವಲ ಅಲ್ಲಾನ ಅನುಯಾಯಿಗಳಿಗೆ ಮಾತ್ರ’ʼ ಎಂಬ ಬೆದರಿಕೆ ಒಡ್ಡಲಾಗಿತ್ತು.

ರಕ್ಷಣಾ ಪಡೆಗಳಿಗೆ ಈ ಪತ್ರ ಮೊದಲು ಪೋಸ್ಟ್‌ ಮೂಲಕ ಬಂದಿದ್ದು, ಅದನ್ನು ಅವರು ವೀರ್ವಾನ್‌ನಲ್ಲಿರುವ ಪಂಡಿತರ ಕಾಲೋನಿಯ ಅಧ್ಯಕ್ಷರಿಗೆ ನೀಡಿದ್ದರು. ಬಳಿಕ ಈ ಕುರಿತಾಗಿ ಬಾರಾಮುಲ್ಲಾದ ಎಸ್‌ಎಸ್‌ಪಿ ಅವರಿಗೆ ದೂರು ನೀಡಲಾಗಿತ್ತು. ಈ ಪಂಡಿತರ ಕಾಲೋನಿಯಲ್ಲಿ ಸುಮಾರು 350 ಪಂಡಿತರು ವಾಸವಾಗಿದ್ದಾರೆ. ಲಷ್ಕರ್‌-ಇ-ಇಸ್ಲಾಂ ಸಂಘಟನೆಯನ್ನು 2015ರಲ್ಲೇ ನಿರ್ನಾಮ ಮಾಡಲಾಗಿದೆ.

ಪಾಕ್‌ ಜೈಲಿನಲ್ಲಿ ಸರಬ್ಜಿತ್ ಸಿಂಗ್ ಹತ್ಯೆ ಮಾಡಿದ್ದ ವ್ಯಕ್ತಿ ಅಪರಿಚಿತರಿಂದ ಖತಂ!

ಬೇಹುಗಾರಿಕೆ ಆರೋಪ ಹೊತ್ತು ಪಾಕಿಸ್ತಾನದ ಜೈಲಿನಲ್ಲಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ (Sarabjit Singh) ಅವರನ್ನು ಹತ್ಯೆ ಮಾಡಿದ್ದ ಅಮೀರ್ ಸರ್ಫರಾಜ್ (Amir Sarfaraz) ಅಲಿಯಾಸ್ ತಾಂಬಾ (Tamba) ಎಂಬಾತನನ್ನು ಕೆಲವು ದಿನಗಳ ಹಿಂದೆ ಲಾಹೋರ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು. ಏಪ್ರಿಲ್‌ 14ರಂದು ಘಟನೆ ನಡೆದಿತ್ತು.

ಇದನ್ನೂ ಓದಿ: Amir Sarfaraz: ಪಾಕ್ ಜೈಲಿನಲ್ಲಿದ್ದ ಸರಬ್ಜಿತ್ ಸಿಂಗ್ ಕೊಂದವನ ಹತ್ಯೆ; ಇದು ಯಾರ ಕೈವಾಡ?

ಲಾಹೋರ್‌ನ ಇಸ್ಲಾಂಪುರ ಪ್ರದೇಶದಲ್ಲಿ ಈ ದಾಳಿ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅಮೀರ್ ಸರ್ಫರಾಜ್ ನನ್ನು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ತ್ವರಿತವಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದ. ಗುಪ್ತಚರ ಆರೋಪದ ಮೇಲೆ ಬಂಧಿಯಾಗಿದ್ದ ಸರಬ್ಜಿತ್ ಸಿಂಗ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಈ ಹಿಂದೆ ಭಾರತ ಧ್ವನಿ ಎತ್ತಿದ್ದರೂ ಪಾಕಿಸ್ತಾನ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಇದೀಗ ಸುಮಾರು 11 ವರ್ಷಗಳ ಬಳಿಕ ಅಂಡರ್‌ವರ್ಲ್ಡ್ ಡಾನ್ ಅಮೀರ್ ಸರ್ಫರಾಜ್‌ನನ್ನು ಅಪರಿಚಿತ ವ್ಯಕ್ತಿಯೊಬ್ಬ ಹತ್ಯೆ ಮಾಡಿರುವುದು ಕುತೂಹಲ ಮೂಡಿಸಿದೆ. ಸದ್ಯ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಂದು ಅಮೀರ್ ಸರ್ಫರಾಜ್ ಐಎಸ್‌ಐ ಸೂಚನೆಯ ಮೇರೆಗೆ ಸರಬ್ಜಿತ್ ಸಿಂಗ್ ಅವರನ್ನು ಕೊಲೆ ಮಾಡಿದ್ದ ಎನ್ನಲಾಗಿದೆ.

Continue Reading

ದೇಶ

ICICI Bank: ಐಸಿಐಸಿಐ ಬ್ಯಾಂಕ್‌ ಗ್ರಾಹಕರೇ ಎಚ್ಚರ; 17 ಸಾವಿರ ಜನರ ಕಾರ್ಡ್‌ ಮಾಹಿತಿ ಸೋರಿಕೆ!

ICICI Bank: ಐಸಿಐಸಿಐ ಬ್ಯಾಂಕ್‌ನ ಸುಮಾರು 17 ಸಾವಿರ ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿಯು ಬ್ಯಾಂಕ್‌ನ ಐ ಮೊಬೈಲ್‌ ಪೇ ಎಂಬ ಅಪ್ಲಿಕೇಷನ್‌ನಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಕ್ರೆಡಿಟ್‌ ಕಾರ್ಡ್‌ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಸಾವಿರಾರು ಗ್ರಾಹಕರು ಆತಂಕ ವ್ಯಕ್ತಪಡಿಸಿದ್ದಾರೆ.

VISTARANEWS.COM


on

ICICI Bank
Koo

ಮುಂಬೈ: ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್‌ನ (ICICI Bank) ಮೊಬೈಲ್‌ ಬ್ಯಾಂಕಿಂಗ್‌ ಅಪ್ಲಿಕೇಷನ್‌ನಲ್ಲಿ (Mobile Banking Application) ತಾಂತ್ರಿಕ ತೊಂದರೆ ಎದುರಾಗಿದೆ. ಅಷ್ಟೇ ಅಲ್ಲ, ಸುಮಾರು 17 ಸಾವಿರ ಗ್ರಾಹಕರ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮಾಹಿತಿ ಬಹಿರಂಗವಾಗಿದೆ ಎಂಬ ಕುರಿತು ದೂರುಗಳು ವ್ಯಕ್ತವಾಗಿವೆ. ಇದರಿಂದಾಗಿ ಐಸಿಐಸಿಐ ಬ್ಯಾಂಕ್‌ನ ಲಕ್ಷಾಂತರ ಗ್ರಾಹಕರು (ICICI Bank Custormers) ಆತಂಕಕ್ಕೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಐಸಿಐಸಿಐ ಬ್ಯಾಂಕ್‌ನ ಐ ಮೊಬೈಲ್‌ ಪೇ ಎಂಬ ಅಪ್ಲಿಕೇಶನ್‌ನಲ್ಲಿ (App) ಭಾರಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದಾಗಿ ಸಾವಿರಾರು ಗ್ರಾಹಕರ ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ. ಟೆಕ್ನೊಫಿನೋ ಸಂಸ್ಥೆಯ ಸಂಸ್ಥಾಪಕ ಸುಮಂತಾ ಮಂಡಲ್‌ ಅವರು ತಾಂತ್ರಿಕ ದೋಷ ಹಾಗೂ ಮಾಹಿತಿ ಸೋರಿಕೆ ಕುರಿತು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಿದ್ದು, ಆರ್‌ಬಿಐ ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.

“ಐಸಿಐಸಿಐ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಹೊಂದಿರುವ ಸಾವಿರಾರು ಗ್ರಾಹಕರಿಗೆ ತೊಂದರೆಯಾಗಿದೆ. ಅದರಲ್ಲೂ, ಐ ಮೊಬೈಲ್‌ ಪೇ ಅಪ್ಲಿಕೇಷನ್‌ನಲ್ಲಿ ಭಾರಿ ದೋಷ ಕಾಣಿಸಿಕೊಂಡಿದೆ. ಕ್ರೆಡಿಟ್‌ ಕಾರ್ಡ್‌ ನಂಬರ್‌, ಎಕ್ಸ್‌ಪೈರಿ ಡೇಟ್‌, ಸಿವಿವಿ ಸೇರಿ ಎಲ್ಲ ಮಾಹಿತಿಯು ಅಪ್ಲಿಕೇಷನ್‌ನಲ್ಲಿ ಬಹಿರಂಗವಾಗಿ ಕಾಣಿಸುತ್ತಿದೆ. ಅಂತಾರಾಷ್ಟ್ರೀಯ ಟ್ರಾನ್ಸ್ಯಾಕ್ಷನ್‌ ಸೆಟಿಂಗ್ಸ್‌ ಕೂಡ ಬದಲಾಯಿಸಬಹುದಾಗಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಟ್ರಾನ್ಸ್ಯಾಕ್ಷನ್‌ ಮಾಡಲು ಬೇರೆಯವರ ಕ್ರೆಡಿಟ್‌ ಕಾರ್ಡ್‌ ಮಾಹಿತಿಯನ್ನು ದುರುಪಯೋಗ ಮಾಡಿಕೊಳ್ಳಬಹುದಾಗಿದೆ” ಎಂದು ಅವರು ದೂರಿದ್ದಾರೆ.

ಐಸಿಐಸಿಐ ಬ್ಯಾಂಕ್‌ ಹೇಳುವುದೇನು?

ತಾಂತ್ರಿಕ ದೋಷವಾಗಿದೆಯೋ, ಯಾರಾದರೂ ಹ್ಯಾಕ್‌ ಮಾಡಿದ್ದಾರೋ ಎಂಬ ಕುರಿತು ಅನುಮಾನ ವ್ಯಕ್ತವಾಗುತ್ತಲೇ ಈ ಕುರಿತು ಐಸಿಐಸಿಐ ಬ್ಯಾಂಕ್‌ ಸ್ಪಷ್ಟನೆ ನೀಡಿದೆ. “ಹೊಸದಾಗಿ ನೀಡಲಾದ 17 ಸಾವಿರ ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿಯು ಬಹಿರಂಗವಾಗಿದೆ. ಇದು ತಾಂತ್ರಿಕ ದೋಷದಿಂದ ಉಂಟಾಗಿರುವ ಸಾಧ್ಯತೆ ಇದೆ. ಐಸಿಐಸಿಐ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರ ಪೈಕಿ ಶೇ.0.1ರಷ್ಟು ಗ್ರಾಹಕರಿಗೆ ತೊಂದರೆಯಾಗಿದೆ. ಆದರೆ, ಗ್ರಾಹಕರ ಹಿತದೃಷ್ಟಿಯಿಂದಾಗಿ ಕೂಡಲೇ ಎಲ್ಲ ಕಾರ್ಡ್‌ಗಳನ್ನು ಬ್ಲಾಕ್‌ ಮಾಡಿದ್ದೇವೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಶೀಘ್ರವೇ ಬಗೆಹರಿಸಲಾಗತ್ತದೆ. ಯಾರದರೂ ಹಣ ಕಳೆದುಕೊಂಡಿದ್ದರೆ ಕಸ್ಟಮರ್‌ ಕೇರ್‌ಗೆ ಕರೆ ಮಾಡಿ” ಎಂಬುದಾಗಿ ಬ್ಯಾಂಕ್‌ ಮನವಿ ಮಾಡಿದೆ.

ಇದನ್ನೂ ಓದಿ: Kotak Bank: ಆರ್‌ಬಿಐ ನಿರ್ಬಂಧದ ಬೆನ್ನಲ್ಲೇ ಕೊಟಕ್‌ ಬ್ಯಾಂಕ್‌ ಷೇರು ಭಾರಿ ಕುಸಿತ; ಹೂಡಿಕೆದಾರರಿಗೆ ನಷ್ಟ!

Continue Reading
Advertisement
Modi in Karnataka Pm Modi to visit Karnataka on April 28 and 29 Raichur conference maybe cancelled
Lok Sabha Election 20245 seconds ago

Modi in Karnataka: ಏಪ್ರಿಲ್‌ 28 – 29ರಂದು ರಾಜ್ಯಕ್ಕೆ ಮೋದಿ; ರಾಯಚೂರು ಸಮಾವೇಶ ರದ್ದು?

Lok Sabha Election
ಕರ್ನಾಟಕ3 mins ago

Lok Sabha Election: ನಾಳೆ ಮೊದಲ ಹಂತದ ಮತದಾನ; ಬೆಂಗಳೂರಿನಲ್ಲಿ ಏನಿರತ್ತೆ? ಏನಿರಲ್ಲ?

KKR vs PBKS
ಕ್ರೀಡೆ13 mins ago

KKR vs PBKS: ಪಂಜಾಬ್​ಗೆ ಮಸ್ಟ್​ ವಿನ್​ ಗೇಮ್; ಕೆಕೆಆರ್​ ಎದುರಾಳಿ

IPL 2024
ಕ್ರೀಡೆ16 mins ago

IPL 2024 : ಸಾಯಿ ಕಿಶೋರ್ ನಿಂದನೆ; ರಸಿಕ್ ಸಲಾಂಗೆ ಪಾಠ ಕಲಿಸಿದ ಜಯ್​ ಶಾ

Haji Akbar Afridi
ವಿದೇಶ18 mins ago

Lashkar-e-Islam: ಮತ್ತೊಬ್ಬ ಭಾರತ ವಿರೋಧಿ ಉಗ್ರ ಪಾಕಿಸ್ತಾನದಲ್ಲಿ ಅಪರಿಚಿತರ ಗುಂಡಿಗೆ ಖತಂ

Tata Motors gets approval for 333 patents
ದೇಶ24 mins ago

Tata Motors: ಟಾಟಾ ಮೋಟಾರ್ಸ್‌ನಿಂದ ಹೊಸ ಮೈಲುಗಲ್ಲು; 333 ಪೇಟೆಂಟ್‌ಗಳಿಗೆ ಅನುಮೋದನೆ

Neha Murder Case in hubblli
ಹುಬ್ಬಳ್ಳಿ36 mins ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ43 mins ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

ICICI Bank
ದೇಶ43 mins ago

ICICI Bank: ಐಸಿಐಸಿಐ ಬ್ಯಾಂಕ್‌ ಗ್ರಾಹಕರೇ ಎಚ್ಚರ; 17 ಸಾವಿರ ಜನರ ಕಾರ್ಡ್‌ ಮಾಹಿತಿ ಸೋರಿಕೆ!

Kannada Serials TRP Lakshmi Nivasa In Top Amruthadhaare in Top 5
ಕಿರುತೆರೆ51 mins ago

Kannada Serials TRP: ಈ ವಾರ ಟಿಆರ್‌ಪಿಯಲ್ಲಿ ʻಲಕ್ಷ್ಮೀ ನಿವಾಸʼಕ್ಕೆ ಎರಡನೇ ಸ್ಥಾನ: ಟಾಪ್‌ 5ನಲ್ಲಿ ʻಅಮೃತಧಾರೆʼ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case in hubblli
ಹುಬ್ಬಳ್ಳಿ36 mins ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ43 mins ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ4 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20246 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

ಟ್ರೆಂಡಿಂಗ್‌