Horoscope Today | ಸಂಕಷ್ಟ ಚತುರ್ಥಿಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ - Vistara News

ಪ್ರಮುಖ ಸುದ್ದಿ

Horoscope Today | ಸಂಕಷ್ಟ ಚತುರ್ಥಿಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ

ಶುಭಕೃತ ನಾಮ ಸಂವತ್ಸರ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ತದಿಗೆಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದಿನ ಪಂಚಾಂಗ (11-11-2022)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ.

ತಿಥಿ: ತದಿಗೆ 20:16 ವಾರ: ಶುಕ್ರವಾರ
ನಕ್ಷತ್ರ: ಮೃಗಶಿರಾ 31:31 ಯೋಗ: ಶಿವ 21:27
ಕರಣ: ವಣಿಜ 07:21 ಇಂದಿನ ವಿಶೇಷ: ಕನಕದಾಸರ ಜಯಂತಿ, ಸಂಕಷ್ಟ ಚತುರ್ಥಿ.
ಅಮೃತಕಾಲ: ರಾತ್ರಿ 09 ಗಂಟೆ 52 ನಿಮಿಷದಿಂದ 11 ಗಂಟೆ 37 ನಿಮಿಷದವರೆಗೆ.

ಸೂರ್ಯೋದಯ: 06: 17    ಸೂರ್ಯಾಸ್ತ: 05 : 51

ರಾಹುಕಾಲ : ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ  (Horoscope Today)

Horoscope Today

ಮೇಷ: ಅತಿರೇಕದ ಮಾತುಗಳು ಜಗಳ ಉಂಟುಮಾಡಬಹುದು. ಯಾವುದಾದರೂ ಮೂಲದಿಂದ ಆರ್ಥಿಕ ಲಾಭ. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳವಾಗುವ ಸಾಧ್ಯತೆ. ಆರೋಗ್ಯದಲ್ಲಿ ಕೊಂಚ ಮಟ್ಟಿಗೆ ಏರುಪೇರು ಉಂಟಾಗುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಭಾವನಾತ್ಮಕ ವಿಷಯಗಳಿಂದ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ. ದಿನದ ಮಟ್ಟಿಗೆ ಖರ್ಚು. ಕುಟುಂಬದ ಆಪ್ತರಿಂದ ಶುಭ ಕಾರ್ಯಗಳಿಗೆ ಆಮಂತ್ರಣ. ಆರೋಗ್ಯದ ಕುರಿತು ವಿಶೇಷ ಕಾಳಜಿ ಅವಶ್ಯ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿಯೂ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ವ್ಯಾಮೋಹದಿಂದ ಒತ್ತಡ ಸಾಧ್ಯತೆ, ವಸ್ತುಗಳ ಮೇಲಿನ ವ್ಯಾಮೋಹ ಕಡಿಮೆ ಮಾಡಿಕೊಳ್ಳಿ. ಆಹ್ಲಾದಕರ ಮನಸ್ಥಿತಿಯಲ್ಲಿರುತ್ತೀರಿ. ಭರವಸೆಯ ಹೊಸ ಅವಕಾಶಗಳು ಒದಗಿ ಬರುವ ಸಾಧ್ಯತೆ. ಆರ್ಥಿಕ ಪ್ರಗತಿ ಮಧ್ಯಮ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕಟಕ: ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಆರ್ಥಿಕ ಪ್ರಗತಿ ಸಾಧಾರಣ. ವ್ಯಾಪರ ವ್ಯವಹಾರದಲ್ಲಿ ಪ್ರಗತಿ. ಅತಿರೇಕದ ಮಾತುಗಳು ಅಪಾಯ ತರಬಹುದು. ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಸಿಂಹ: ಶೀಘ್ರ ಕೋಪದಿಂದ ಕಾರ್ಯದಲ್ಲಿ ಹಾನಿ. ಆರ್ಥಿಕ ಪ್ರಗತಿ. ಸಂಬಂಧಿಗಳೊಂದಿಗೆ ಕಾಲ ಕಳೆಯುವ ಸಾಧ್ಯತೆ. ಸುಮ್ಮನೆ ಆಡಿದ ಮಾತುಗಳು ಕುಟುಂಬದ ವಾತಾವರಣ ಕೆಡಿಸಬಹದು. ಈ ಬಗ್ಗೆ ಎಚ್ಚರಿಕೆ ಇರಲಿ. ಸಹದ್ಯೋಗಿಗಳಿಂದ ಕಿರಿಕಿರಿ. ಆರೋಗ್ಯದ ಕಾಳಜಿ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ: ಮನರಂಜನೆಗಾಗಿ ಸಮಯ ಕಳೆಯುವ ಸಾಧ್ಯತೆ. ಆಪ್ತರೊಂದಿಗೆ ಮಾತುಕತೆ. ಆರ್ಥಿಕ ಪ್ರಗತಿ ಸಾಧಾರಣ. ಪಾಲುದಾರಿಕೆ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಉದ್ಯೋಗಿಗಳಿಗೆ ಕಿರಿಕಿರಿ. ನಂಬಿದ ವ್ಯಕ್ತಿಗಳು ನಿಮ್ಮನ್ನು ಮೋಸಗೊಳಿಸಬಹುದು. ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

Horoscope Today

ತುಲಾ: ಸಕಾರಾತ್ಮಕ ಆಲೋಚನೆಗಳಿಂದ ಕಾರ್ಯದಲ್ಲಿ ಯಶಸ್ಸು. ಆರ್ಥಿಕ ಪ್ರಗತಿ ಸಾಧಾರಣ. ಹಳೆಯ ವಿಚಾರ ಕೆದಕಿ ಮನಸ್ಸಿಗೆ ಘಾಸಿ ಮಾಡಿಕೊಳ್ಳುವುದು ಬೇಡ. ಆರೋಗ್ಯ ಮಧ್ಯಮ. ಉದ್ಯೋಗಿಗಳಿಗೆ ಮಿಶ್ರ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ: ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ದೊರೆಯಲಿದೆ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕ ಪ್ರಗತಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಅಮೂಲ್ಯ ವಸ್ತುಗಳು ಕೈಗೆ ಸಿಗುವುದರಿಂದ ಸಂತಸ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಧನಸ್ಸು: ಭೂಮಿ ಸಂಬಂಧಿ ವ್ಯವಹಾರ, ಹಣಕಾಸು ವ್ಯವಹಾರದಲ್ಲಿ ಲಾಭ. ಪ್ರಯಾಣ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಸಹದ್ಯೋಗಿಗಳಿಂದ ಸಹಕಾರ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣ ಬಲ. ಕುಟುಂಬದಲ್ಲಿ ಹೊಸ ಭರವಸೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಮಕರ: ಭರವಸೆಯ ಹೊಸ ಜೀವನ ಶುರುವಾಗಲಿದೆ. ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ, ಆರ್ಥಿಕ ಪ್ರಗತಿ. ನೀವು ಮಾಡಿದ ಕೆಲಸ ಕಾರ್ಯಗಳ ಫಲವನ್ನು ಬೇರೆಯವರು ತೆಗೆದುಕೊಂಡು ಪ್ರಶಂಸೆ ಪಡೆದುಕೊಳ್ಳುವ ಸಾಧ್ಯತೆ, ಎಚ್ಚರಿಕೆ ಇರಲಿ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಕುಂಭ: ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣವಾಗುವವು. ಅವಶ್ಯಕ ವಸ್ತುಗಳ ಖರೀದಿ. ಅಷ್ಟೇ ಆರ್ಥಿಕ ಲಾಭ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಮಾತು ಬೆಳೆಸುವುದು ಬೇಡ. ಸಾಮಜಿಕ ಕಾರ್ಯದಲ್ಲಿ ತೊಡಗುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಮೀನ: ಹಳೆಯ ನೋವು ಉಲ್ಭಣಗೊಳ್ಳುವ ಸಾಧ್ಯತೆ, ಆರೋಗ್ಯದ ಕಡೆಗೆ ಗಮನ ಇರಲಿ. ಆರ್ಥಿಕ ಪ್ರಗತಿ ಸಾಧಾರಣ. ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು. ಸಂಬಂಧಿಗಳೊಂದಿಗೆ ಮಾತುಕತೆ. ಉದ್ಯೋಗಿಗಳಿಗೆ ಒತ್ತಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ | Saturn In Astrology | ಜಾತಕದಲ್ಲಿ ಶನಿ ಲಗ್ನದಲ್ಲಿದ್ದರೆ ರಾಜನಂತೆ ಮೆರೆಯಬಹುದು! ಉಳಿದ ಮನೆಗಳಲ್ಲಿದ್ದರೆ ಏನು ಫಲ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಭಾರತದ ಬ್ಯಾಟರ್​ಗಳಿವರು

T20 World Cup 2024: ರೋಹಿತ್ ಶರ್ಮ ಟಿ20 ವಿಶ್ವ ಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದಾರೆ. ಇದುವರೆಗೆ 35 ಸಿಕ್ಸರ್​ ಬಾರಿಸಿದ್ದಾರೆ

VISTARANEWS.COM


on

T20 World Cup 2024
Koo

ಬೆಂಗಳೂರು: 2007ರಲ್ಲಿ ಆರಂಭಗೊಂಡ ಟಿ20 ವಿಶ್ವ ಕಪ್ (T20 World Cup 2024) ​ನಿಂದ 2022ರ ವಿಶ್ವ ಕಪ್​ವರೆಗೆ ನಡೆದ ಟಿ20 ವಿಶ್ವ ಕಪ್​ನಲ್ಲಿ ಭಾರತ ಕ್ರಿಕೆಟ್​ ತಂಡದ ಆಟಗಾರರು ಎಷ್ಟು ಸಿಕ್ಸರ್​ ಸಾಧನೆ ಮಾಡಿದ್ದಾರೆ ಎನ್ನುವ ಸ್ವಾರಸ್ಯಕರ ಸಂಗತಿ ಇಂತಿದೆ.

ರೋಹಿತ್​ ಶರ್ಮ


ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ಟಿ20 ವಿಶ್ವ ಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಉದ್ಘಾಟನ ಆವೃತ್ತಿಯ ವಿಶ್ವಕಪ್​ನಿಂದ ಆಡಿ ಇದುವರೆಗೆ 35 ಸಿಕ್ಸರ್​ ಬಾರಿಸಿದ್ದಾರೆ. ಇದೀಗ 2024 ರ ವಿಶ್ವ ಕಪ್​ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್​ ತಮ್ಮ ಸಿಕ್ಸರ್​ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿದ್ದಾರೆ. 2007-2022ರ ವಿಶ್ವಕಪ್​ ಆವೃತ್ತಿಯಲ್ಲಿ ರೋಹಿತ್​ ಒಟ್ಟು 39 ಪಂದ್ಯಗಳನ್ನು ಆಡಿದ್ದಾರೆ.


ಯುವರಾಜ್ ಸಿಂಗ್


ಭಾರತ ಕ್ರಿಕೆಟ್​ ಕಂಡ ಅತ್ಯಂತ ಶ್ರೇಷ್ಠ ಆಲ್​ರೌಂಡರ್, ಮಾಜಿ ಆಟಗಾರ, 2007 ವಿಶ್ವಕಪ್​ ಟೂರ್ನಿಯಲ್ಲಿ ಸ್ಟುವರ್ಟ್​ ಬ್ರಾಡ್​ ಓವರ್​ಗೆ ಸತತವಾಗಿ 6 ಸಿಕ್ಸರ್​ ಬಾರಿಸಿದ ಯುವರಾಜ್​ ಸಿಂಗ್ ಈ ಸಾಲಿನಲ್ಲಿ ಸದ್ಯ ದ್ವಿತೀಯ ಸ್ಥಾನದಲ್ಲಿದ್ದಾರೆ. ಯುವಿ ಒಟ್ಟು 31 ವಿಶ್ವ ಕಪ್​ ಪಂದ್ಯಗಳನ್ನು ಆಡಿದ್ದು 33 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಭಾರತ 2007 ಮತ್ತು 2011 ರ ವಿಶ್ವ ಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರ ಎನ್ನುವ ಕೀರ್ತಿಯೂ ಇವರದ್ದಾಗಿದೆ.


ವಿರಾಟ್​ ಕೊಹ್ಲಿ


ಕಳೆದ 2 ವರ್ಷಗಳ ಬಳಿಕ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿರುವ, ಈ ಆವೃತ್ತಿ ಐಪಿಎಲ್​ನಲ್ಲಿ ಗರಿಷ್ಠ ಮೊತ್ತ ದಾಖಲಿಸಿದ ಕಿಂಗ್ ಖ್ಯಾತಿಯ​ ವಿರಾಟ್​ ಕೊಹ್ಲಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. 2012ರಿಂದ ಟಿ20 ವಿಶ್ವಕಪ್​ ಆಡುತ್ತಿರುವ ಕೊಹ್ಲಿ ಇದುವರೆಗೆ 27 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 28 ಸಿಕ್ಸರ್​ ಬಾರಿಸಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಕೇವಲ 4 ಸಿಕ್ಸರ್​ ಬಾರಿಸಿದರೆ ಯುವರಾಜ್​ ಸಿಂಗ್​ ದಾಖಲೆ ಮುರಿಯಲಿದ್ದಾರೆ.

ಇದನ್ನೂ ಓದಿ T20 World Cup 2024: ಮಿನಿ ವಿಶ್ವಕಪ್​ ಸಮರದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್‌ ಗಳಿಸಿದ ದಾಂಡಿಗರಿವರು!


ಎಂ.ಎಸ್​ ಧೋನಿ


ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಈ ಯಾದಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಧೋನಿ 2007ರಿಂದ 2016ರ ತನಕ 33 ಪಂದ್ಯಗಳನ್ನಾಡಿ ಒಟ್ಟು 16 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಆದರೆ ಧೋನಿ ಚೊಚ್ಚಲ ಟಿ20 ವಿಶ್ವಕಪ್​ನಲ್ಲಿಯೇ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ ಖ್ಯಾತಿ ಹೊಂದಿದ್ದಾರೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಇತಿಹಾಸದಲ್ಲಿ ಎಂದೂ ಮರೆಯದ ಸ್ಮರಣೀಯ ಸನ್ನಿವೇಶಗಳಿವು


ಕೆ.ಎಲ್​ ರಾಹುಲ್​


ಕನ್ನಡಿಗ ಕೆ.ಎಲ್​ ರಾಹುಲ್​ ಅವರು ಇದುವರೆಗೆ 11 ಟಿ20 ವಿಶ್ವಕಪ್​ ಆಡಿದ್ದು 15 ಸಿಕ್ಸರ್​ ಬಾರಿಸಿದ್ದಾರೆ. ಟಿ20 ವಿಶ್ವ ಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಅವರಿಗೆ 5ನೇ ಸ್ಥಾನ. ವಿಪರ್ಯಾಸವೆಂದರೆ ಈ ಬಾರಿ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ.

Continue Reading

ಪ್ರಮುಖ ಸುದ್ದಿ

ವಾಲ್ಮೀಕಿ ನಿಗಮ ಅಧೀಕ್ಷಕ ಆತ್ಮಹತ್ಯೆ ಪ್ರಕರಣ: ಮೂವರ ಮೇಲೆ ಎಫ್‌ಐಆರ್; ಡೆತ್‌ ನೋಟ್‌ನಲ್ಲಿರುವ ಸಚಿವ ಯಾರು?

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್‌ ಅವರು ಆರು ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದರು. ನಿಯಮಬಾಹಿರವಾಗಿ 85 ಕೋಟಿ ಹಣವನ್ನು ವರ್ಗಾವಣೆ ಮಾಡಲಾಗಿದೆ, ಅದನ್ನು ಪ್ರಶ್ನಿಸಿದ್ದಕ್ಕೆ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅದರಲ್ಲಿ ಆರೋಪಿಸಿದ್ದರು. ಡೆತ್ ನೋಟ್‌ನಲ್ಲಿ, ʼಸಚಿವರ ಮೌಖಿಕ ಆದೇಶ ಮೇಲೆ ಹಣ ವರ್ಗಾವಣೆʼ ವಿಚಾರ ಪ್ರಸ್ತಾಪವಿದೆ.

VISTARANEWS.COM


on

self harming chandrashekar ವಾಲ್ಮೀಕಿ
Koo

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Development Corporation) ಅಧೀಕ್ಷಕ ಚಂದ್ರಶೇಖರ್‌ ಆತ್ಮಹತ್ಯೆ (Self Harming) ಪ್ರಕರಣದಲ್ಲಿ ಮೂರು ಜನ ಅಧಿಕಾರಿಗಳ (Officers) ವಿರುದ್ಧ ಪ್ರಕರಣ (FIR) ದಾಖಲಿಸಲಾಗಿದೆ. ಚಂದ್ರಶೇಖರ್‌ ಬರೆದಿಟ್ಟಿರುವ ಡೆತ್‌ ನೋಟ್‌ನಲ್ಲಿ (Death note) ಒಬ್ಬರು ಸಚಿವರ (minister) ಉಲ್ಲೇಖ ಕಂಡುಬಂದಿದೆ.

ಶಿವಮೊಗ್ಗ (Shivamogga news) ನಗರದ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಇದಕ್ಕೆ ಸಂಬಂಧಿಸಿ ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್, ಬ್ಯಾಂಕ್ ಅಧಿಕಾರಿ ಸುಚಿಸ್ಥನಾ ಎಂಬವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ನಿಗಮದಲ್ಲಿ ನಿಯಮಬಾಹಿರವಾಗಿ 85 ಕೋಟಿ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವನ್ನು ಡೆತ್ ನೋಟ್‌ನಲ್ಲಿ ನೌಕರ ಮಾಡಿದ್ದಾರೆ.

ಚಂದ್ರಶೇಖರ್‌ ಅವರು ಆರು ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದರು. ನಿಯಮಬಾಹಿರವಾಗಿ 85 ಕೋಟಿ ಹಣವನ್ನು ವರ್ಗಾವಣೆ ಮಾಡಲಾಗಿದೆ, ಅದನ್ನು ಪ್ರಶ್ನಿಸಿದ್ದಕ್ಕೆ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅದರಲ್ಲಿ ಆರೋಪಿಸಿದ್ದರು. ಡೆತ್ ನೋಟ್‌ನಲ್ಲಿ, ʼಸಚಿವರ ಮೌಖಿಕ ಆದೇಶ ಮೇಲೆ ಹಣ ವರ್ಗಾವಣೆʼ ವಿಚಾರ ಪ್ರಸ್ತಾಪವಿದೆ. ಸಚಿವರ ಹೆಸರು ಬರೆಯದೇ ಮೌಖಿಕ ಆದೇಶ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದು, ಈ ಸಚಿವರು ಯಾರು ಎಂಬ ಪ್ರಶ್ನೆ ಹಾಗೇ ಉಳಿದಿದೆ.

85 ಕೋಟಿ ರೂ. ಹಣ ವರ್ಗಾವಣೆ ವಿಚಾರದಲ್ಲಿ ಚಂದ್ರಶೇಖರ್‌ ಭಯಗೊಂಡಿದ್ದರು ಎಂದು ಗೊತ್ತಾಗಿದೆ. ಹಣ ಯಾರ ಅಕೌಂಟ್‌ಗೆ ಕಳಿಸಿದ್ದಾರೆ ಎಂದು ತಿಳಿಯದೇ ಆತಂಕಗೊಂಡಿದ್ದರು. ಬ್ಯಾಂಕ್ ಅಧಿಕಾರಿಗೆ ಈ ಬಗ್ಗೆ ಮಾಹಿತಿ ಕೇಳಿದರೂ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿರಲಿಲ್ಲ. 85 ಕೋಟಿ ವರ್ಗಾವಣೆ ಆಗಿದ್ದು ಎಲ್ಲಿಗೆ ಎಂಬುದನ್ನು ಬ್ಯಾಂಕ್‌ ಅಧಿಕಾರಿ ತಿಳಿಸಬೇಕಿದೆ. ಮೌಖಿಕ ಆದೇಶ ನೀಡಿದ ಸಚಿವರು ಯಾರು ಎಂಬುದನ್ನು ಚಂದ್ರಶೇಖರ್‌ ಅವರ ಮೇಲಧಿಕಾರಿಗಳು ತಿಳಿಸಬೇಕಿದೆ.

ಕಣ್ಣೀರಿಟ್ಟ ಚಂದ್ರಶೇಖರ್ ಪತ್ನಿ

“ನನ್ನ ಗಂಡನ ಸಾವಿಗೆ ಸೂಕ್ತ ನ್ಯಾಯ ಒದಗಿಸಬೇಕು. ನಾನು ಎರಡು ಮಕ್ಕಳನ್ನು ಇಟ್ಟುಕೊಂಡು ಹೇಗೆ ಬದುಕೋದು ಸರ್” ಎಂದು ಗಂಡನನ್ನು ನೆನೆದು ಚಂದ್ರಶೇಖರ್ ಪತ್ನಿ ಕವಿತಾ ಕಣ್ಣೀರಿಟ್ಟಿದ್ದಾರೆ. ʼʼನನ್ನ ಗಂಡನ ಸಾವಿಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಆಗಬೇಕು. ಮೂವರು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅವರು ಒಂದು ರೂಪಾಯಿ ಲಂಚ ಪಡೆದಿಲ್ಲ. ನಾನು ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡ್ತಾ ಇದ್ದೀನಿ” ಎಂದು ಶಿವಮೊಗ್ಗದಲ್ಲಿ ಚಂದ್ರಶೇಖರ್ ಪತ್ನಿ ಕವಿತಾ ಹೇಳಿಕೆ ನೀಡಿದ್ದಾರೆ.

“ಸಚಿವರನ್ನು ವಜಾ ಮಾಡಿ”

“ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕರು ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ. ನಾನು ಹೇಡಿಯಲ್ಲ ಎಂದು ಸಹ ಅವರು ಬರೆದಿದ್ದಾರೆ. ಸೂಪರಿಂಟೆಂಡೆಂಟ್ ಪರಿಸ್ಥಿತಿ ಹೀಗಾದರೆ ಸಾಮಾನ್ಯ ಅಧಿಕಾರಿಗಳ ಪರಿಸ್ಥಿತಿ ಏನು? ಕೋಟ್ಯಾಂತರ ರೂಪಾಯಿ ಹಣ ಸಚಿವರ ಮೌಖಿಕ ಆದೇಶದ ಮೂಲಕ ಹಣ ವರ್ಗಾವಣೆ ಆಗಿದೆ. ಸರ್ಕಾರದ ಅಧಿಕಾರಿಗಳಿಗೆ ಈ ಪರಿಸ್ಥಿತಿ ಬರುತ್ತೆ ಅಂದರೆ ನಾವು ಯಾವ ವಾತಾವರಣದಲ್ಲಿದ್ದೇವೆ? ಇಡೀ ಪ್ರಕರಣ ನೋಡಿದರೆ ಏನೂ ನಡೆದೇ ಇಲ್ಲ ಎಂಬಂತೆ ಸರ್ಕಾರ ಇದೆ. ಕುಟುಂಬಗಳು ಅನಾಥವಾಗುತ್ತಿವೆ” ಎಂದು ಶಿವಮೊಗ್ಗದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಟೀಕಿಸಿದ್ದಾರೆ.

ಸಿಎಂ ಕೂಡಲೇ ತಮ್ಮ ವಾಲ್ಮೀಕಿ ನಿಗಮದ ಮಂತ್ರಿಯನ್ನು ವಜಾಗೊಳಿಸಬೇಕು. ಈ ಘಟನೆಗಳನ್ನು ರಾಜ್ಯದ ಜನ ಗಮನಿಸುತ್ತಾರೆ. ಕೂಡಲೇ ಸಂಬಂಧ ಪಟ್ಟ ಮಂತ್ರಿಯ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮದ ಉಸ್ತುವಾರಿ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಸರ್ಕಾರಿ ನೌಕರನ ಸಾವಿಗೆ ಕಾರಣರಾದವರ ಹೆಸರನ್ನು ಸಹ ಎಫ್ಐಆರ್‌ನಲ್ಲಿ ಸೇರಿಸಬೇಕು. ಅಧಿಕಾರಿಗಳು ಹೆದರಿಕೊಂಡು ಕೆಲಸ ಮಾಡುವ ಪರಿಸ್ಥಿತಿ ಬಂದಿದೆ. ಆತ್ಮಹತ್ಯೆ ಆಗಿ ಎರಡು ದಿನ ಆದರೂ ಸರ್ಕಾರ ಸುಮ್ಮನಿರುವುದನ್ನು ನೋಡಿ ಅನುಮಾನ ಬರುತ್ತಿದೆ” ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: Self Harming: ಮೇಲಧಿಕಾರಿಗಳ ಕಿರುಕುಳ, ಹಗರಣದ ಕರಿನೆರಳು: ವಾಲ್ಮೀಕಿ ಅಭಿವೃದ್ಧಿ ನಿಗಮದ ಸೂಪರಿಂಟೆಂಡೆಂಟ್ ಆತ್ಮಹತ್ಯೆ

Continue Reading

ಬೆಂಗಳೂರು

Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!

Traffic Violation : ಟ್ರಾಫಿಕ್‌ ಇರುವ ಪ್ರಮುಖ ರಸ್ತೆಗಳಲ್ಲಿ ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ಏನಾದರೂ ವಾಹನ ನಿಂತುಬಿಟ್ಟರೆ ಬೆಂಗಳೂರು ಸಂಚಾರಿ ಪೊಲೀಸರು ಚಾಲಕನ ಮೇಲೆ ಕೇಸ್ ದಾಖಲಿಸಲಿದ್ದಾರೆ. ಜತೆಗೆ ಮಕ್ಕಳ ಅಪಾಯಕಾರಿ ವ್ಹೀಲಿಂಗ್‌ ಶೋಕಿಗೆ ಪೋಷಕರ ತಲೆದಂಡವಾಗಲಿದೆ.

VISTARANEWS.COM


on

By

Traffic Violation Case filed against driver if petrol runs out and vehicle stops on road
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಬೆಂಗಳೂರಲ್ಲಿ ಟ್ರಾಫಿಕ್‌ ಸಮಸ್ಯೆಯನ್ನು ತಪ್ಪಿಸಲು ಸಂಚಾರಿ ಪೊಲೀಸರ (Traffic Violation) ಸರ್ಕಸ್ ಮುಂದುವರಿದಿದೆ. ಸದ್ಯ ಗಾಡಿ ಓಡಿಸುವಾಗ ಪೆಟ್ರೋಲ್‌ ಇಲ್ಲದೆ ರಸ್ತೆ ಮಧ್ಯೆ ಏನಾದರೂ ನಿಂತರೆ ಕೇಸ್‌ ಬೀಳುವುದು ಗ್ಯಾರಂಟಿ.. ಹೌದು ಅತಿ ಹೆಚ್ಚು ಟ್ರಾಫಿಕ್‌ ಇರುವ ರಸ್ತೆಗಳಲ್ಲಿ ಏನಾದರೂ ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ, ಚಾಲಕನ ಮೇಲೆ ಕೇಸ್ ಹಾಕಲಾಗುತ್ತದೆ.

ಸೆಕ್ಷನ್ 283ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲು ಬೆಂಗಳೂರು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಪೆಟ್ರೋಲ್‌ ಖಾಲಿಯಾಗಿ ಗಾಡಿಗಳು ನಿಂತು ಹೋದರೆ, ಇದರಿಂದ ಇನ್ನಷ್ಟು ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ಹೀಗಾಗಿ ಟ್ರಾಫಿಕ್‌ ಸಮಸ್ಯೆಯನ್ನು ಸೃಷ್ಟಿಸಿದ ಗಾಡಿ ಚಾಲಕನ ಮೇಲೆ ಕೇಸ್ ದಾಖಲು ಮಾಡಲು ಮುಂದಾಗಿದ್ದಾರೆ.

ಪ್ರಮುಖವಾಗಿ ಹೆಬ್ಬಾಳ, ಏರ್‌ಪೋಟ್‌ ರೋಡ್, ಗೋರಗುಂಟೆ ಪಾಳ್ಯ ರೋಡ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪೇಟ್ರೋಲ್ ಇಲ್ಲದೆ ನಿಂತು ಹೋದಲ್ಲಿ ಪ್ರಕರಣ ದಾಖಲಿಸಿವುದಾಗಿ, ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: School Reopen: ನಾಳೆಯಿಂದ ಶಾಲೆ ಮರು ಆರಂಭ; ಮೊದಲ ದಿನವೇ ಮಕ್ಕಳಿಗೆ ಸಿಹಿ ಸುದ್ದಿ

ಮಕ್ಕಳ ವ್ಹೀಲಿಂಗ್‌ ಶೋಕಿಗೆ ಪೋಷಕರಿಗೆ ದಂಡ

ವ್ಹೀಲಿಂಗ್‌ ಶೋಕಿಗೆ (Bike Wheeling) ಪೋಷಕರು ಶಿಕ್ಷೆ ಅನುಭವಿಸಬೇಕಾಗುತ್ತದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹೊರವಲಯದಲ್ಲಿ ಬೈಕ್ ವ್ಹೀಲಿಂಗ್ (Wheeling Stunt) ಮಿತಿ ಮೀರಿದೆ. ಮೀಸೆ ಚಿಗುರದ ಯುವಕರ ಹುಚ್ಚಾಟಕ್ಕೆ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದು ಮಾತ್ರವಲ್ಲ, ಅದೆಷ್ಟೋ ಅಮಾಯಕರು ಪ್ರಾಣಬಿಟ್ಟಿದ್ದಾರೆ.

ನಗರದಲ್ಲಿ ಪುಂಡರ ವ್ಹೀಲಿಂಗ್ ಶೋಕಿ ಇನ್ನೂ ನಿಲ್ಲುತ್ತಲೇ ಇಲ್ಲ. ಮುಖ್ಯ ರಸ್ತೆಯಲ್ಲೇ ಯುವಕರು ವ್ಹೀಲಿಂಗ್ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುವುದು ಹೆಚ್ಚಾಗಿದೆ. ವ್ಹೀಲಿಂಗ್‌ ಮಾಡುವ ಸವಾರರ ವಿರುದ್ಧ ಪೊಲೀಸರು ಅದೆಷ್ಟೇ ಕಾರ್ಯಾಚರಣೆ ನಡೆಸಿದರೂ, ಪುಂಡರು ಡೋಂಟ್‌ ಕೇರ್‌ ಅಂತಿದ್ದರು.

ಬೈಕ್ ಜತೆ ಸರ್ಕಸ್ ಮಾಡುತ್ತಾ, ಜನಸಂದಣಿಯಿರುವ ರಸ್ತೆಯಲ್ಲೇ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಟಾರ್ಚರ್ ಕೊಡುತ್ತಿದ್ದರು. ವ್ಹೀಲಿಂಗ್ ಮಾಡುತ್ತಿರುವ ಪುಂಡರ ಹಾವಳಿಗೆ ಸಾರ್ವಜನಿಕರು ಭಯಭೀತರಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ವ್ಹೀಲಿಂಗ್‌ ಪುಂಡಾಟ ಮಾಡುತ್ತಿದ್ದವರಿಗೆ ಸಂಚಾರಿ ಪೊಲೀಸರು ಶಾಕ್ ಕೊಟ್ಟಿದ್ದಾರೆ.

ವ್ಹೀಲಿಂಗ್‌ಗೆ ಬ್ರೇಕ್‌ ಹಾಕಲು ಹೊಸ ಮಾರ್ಗವನ್ನು ಕಂಡು ಕೊಂಡಿರುವ ಸಂಚಾರಿ ಪೊಲೀಸರು, ವ್ಹೀಲಿಂಗ್‌ ಕೇಸ್‌ನಲ್ಲಿ ಅಪ್ರಾಪ್ತರು ಕಂಡು ಬಂದರೆ ಪೋಷಕರ ಮೇಲೆ ಕೇಸ್ ದಾಖಲಾಗುತ್ತದೆ. ಜೆಜೆ ಆಕ್ಟ್ ಅಡಿಯಲ್ಲಿ ಪೋಷಕರ ಮೇಲೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಬೆಂಗಳೂರು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕೃಷಿ

Success Story: ಎರಡೇ ತಿಂಗಳಲ್ಲಿ ಆನ್ ಲೈನ್ ಮೂಲಕ 1,800 ಕೆ.ಜಿ. ಮಾವು ಮಾರಿದ ರಾಯಚೂರಿನ ರೈತ!

ರಾಯಚೂರಿನ ಗುಡಿಪಾಡು ಆಂಜನೇಯ (Success Story) ಅವರು ಆನ್‌ಲೈನ್‌ನಲ್ಲಿ ಎರಡು ತಿಂಗಳಲ್ಲಿ 1,800 ಕೆ.ಜಿ. ಮಾವು ಮಾರಾಟ ಮಾಡಿ ಸುದ್ದಿಯಲ್ಲಿದ್ದಾರೆ. ಡಿಪ್ಲೊಮಾ ಪೂರ್ಣಗೊಳಿಸಿರುವ ಆಂಜನೇಯ ಅವರು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿ ಈಗ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಮಾವು ಮಾರಾಟದ ಇವರ ಸಕ್ಸೆಸ್ ಸ್ಟೋರಿ ಇಲ್ಲಿದೆ.

VISTARANEWS.COM


on

By

Success Story
Koo

ಕೃಷಿ ಕೆಲಸಗಳಲ್ಲಿ ಕೇವಲ ಕಷ್ಟ ಪಟ್ಟು ದುಡಿದರೆ ಸಾಲದು, ಬುದ್ದಿವಂತಿಕೆಯೂ ಬೇಕು. ಆಗ ಮಾತ್ರ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ರೈತನೊಬ್ಬ (Success Story) ಸಾಬೀತು ಮಾಡಿದ್ದಾನೆ. ಈ ರೈತ ಬೇರೆಯಾರೂ ಅಲ್ಲ ನಮ್ಮ ಕರ್ನಾಟಕದವರೇ (karnataka) ಆಗಿದ್ದಾರೆ. ಮಾವಿನ ಕೃಷಿ (Mango Cultivation) ಮಾಡಿ ರಾಯಚೂರಿನ (Raichur) ಗುಡಿಪಾಡು ಆಂಜನೇಯ (Gudipadu Anjaneya) ಅವರು ಈಗ ಎಲ್ಲೆಡೆ ಸುದ್ದಿ ಮಾಡುತ್ತಿದ್ದಾರೆ. ಗುಡಿಪಾಡು ಆಂಜನೇಯ ಅವರು ಆನ್‌ಲೈನ್‌ನಲ್ಲಿ ಎರಡು ತಿಂಗಳಲ್ಲಿ 1,800 ಕೆ.ಜಿ. ಮಾವು ಮಾರಾಟ ಮಾಡಿ ಸುದ್ದಿಯಾಗುತ್ತಿದ್ದಾರೆ. ಡಿಪ್ಲೊಮಾ ಪೂರ್ಣಗೊಳಿಸಿರುವ ಆಂಜನೇಯ ಅವರು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿದ್ದರು. ಬಳಿಕ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡರು.

Success Story

ತೋಟಗಾರಿಕೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಹಣ್ಣು, ತರಕಾರಿ, ಹೂವು, ಅಲಂಕಾರಿಕ ಸಸ್ಯಗಳನ್ನು ಬೆಳೆಯುವ ವಿಜ್ಞಾನ ಮತ್ತು ಕಲೆಯನ್ನು ಕಲಿತು ಆನ್‌ಲೈನ್ ಪೋರ್ಟಲ್ ಮೂಲಕ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆಂಜನೇಯ ಅವರು ಆನ್‌ಲೈನ್ ನಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ಮಾವಿನ ತಳಿಗಳಲ್ಲಿ ಪ್ರಮುಖವಾದವು ಬನಗನಪಲ್ಲಿ, ಮಲ್ಲಿಕಾ ಮತ್ತು ಕೇಸರಿ ಮಾವುಗಳು. ಇವರು ತಮ್ಮ ಮಾವಿನ ಹಣ್ಣುಗಳ ಮಾರಾಟ ಜಾಲವನ್ನು ರಾಯಚೂರಿನ ಹೊರಗೂ ವಿಸ್ತರಿಸಿದ್ದಾರೆ. ಬೆಂಗಳೂರಿನ ಜಯನಗರ, ವೈಟ್‌ಫೀಲ್ಡ್ ಮತ್ತು ಲಾಲ್ ಬಾಗ್‌ನ ಎಂಇಎಸ್ ಮೈದಾನದಲ್ಲಿ ಮಾವು ಮೇಳದಲ್ಲಿ ಪಾಲ್ಗೊಂಡಿರುವ ಇವರು, ಆನ್ ಲೈನ್ ಮೂಲಕ ರಾಜ್ಯದ ಮೂಲೆಮೂಲೆ ಮಾತ್ರವಲ್ಲ ಹೊರರಾಜ್ಯ, ವಿದೇಶಗಳಿಗೂ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ವಿದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ರೂಪಿಸುವ ಗುರಿ ಹೊಂದಿರುವ ಅವರು ಇತರ ಕೃಷಿಕರಿಗೂ ಪ್ರೇರಣೆಯಾಗಿದ್ದಾರೆ.

ಸಾಕಷ್ಟು ಶ್ರಮ

ಆಂಜನೇಯ ತಮ್ಮ ವ್ಯವಹಾರದ ಆರಂಭದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಕಷ್ಟು ಶ್ರಮಿಸಿದ್ದಾರೆ. ಅವರು ಗ್ರಾಹಕರ ವಿಳಾಸವನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಿ, ಪ್ರತಿಯೊಂದು ಹಂತವನ್ನು ಅನುಸರಿಸಿ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಅದನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಮಾರ್ಗಗಳನ್ನು ಹುಡುಕುತ್ತಿದ್ದರು. ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಮೊದಲು, ಆಂಜನೇಯ ಅವರು ಮೋಸಂಬಿ ಮತ್ತು ನಿಂಬೆಯನ್ನು ಮಾರುಕಟ್ಟೆ ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದರು.

Mango Breeds

ಆನ್ ಲೈನ್ ಪೋರ್ಟಲ್ ಪ್ರಾರಂಭ

ಬಳಿಕ ಆಂಜನೇಯ ಅವರು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ (KSMDMCL) ಅಂಚೆ ಇಲಾಖೆಯ ಸಹಯೋಗದೊಂದಿಗೆ ತಮ್ಮ ಪೋರ್ಟಲ್ ಅನ್ನು ಪ್ರಾರಂಭಿಸಿದರು. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ ಪ್ರಾರಂಭಿಸಿರುವ ಕರ್ ಸಿರಿ ಮ್ಯಾಂಗೋಸ್ (https://www.karsirimangoes.karnataka.gov.in) ವೆಬ್‌ಸೈಟ್ 2022ರಲ್ಲಿ ವಿವಿಧ ಬಗೆಯ ಹಣ್ಣುಗಳಿಗಾಗಿ ಆರ್ಡರ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿತು. ಈ‌ ವೆಬ್ ಸೈಟ್ ಮೂಲಕವೇ ಈ ರೈತ ಮಾವು ಮಾರಿ ಲಾಭ ಗಳಿಸುತ್ತಿದ್ದಾರೆ.

ಇದನ್ನೂ ಓದಿ: Mysore News: ಮೈಸೂರಿನಲ್ಲಿ ಪಾಲಿಕೆಯಿಂದ ನಿಷೇಧಿತ ಪ್ಲಾಸ್ಟಿಕ್‌ ವಶ; 1.61 ಲಕ್ಷ ರೂ. ದಂಡ

ಇದು ಗ್ರಾಹಕರ ಮನೆ ಬಾಗಿಲಿಗೆ ಹಣ್ಣುಗಳನ್ನು ತಲುಪಿಸುತ್ತದೆ. ಹಣ್ಣುಗಳ ಚಿತ್ರಗಳು ಮತ್ತು ಹೆಸರುಗಳ ಜೊತೆಗೆ ವೆಬ್‌ಸೈಟ್ ಮಾವಿನ ಸರಬರಾಜಿಗೆ ಕಾರಣರಾದ ರೈತರ ಹೆಸರು ಮತ್ತು ಸಂಖ್ಯೆಗಳನ್ನು ಸಹ ಪ್ರದರ್ಶಿಸುತ್ತದೆ. ಮಾವು ಬೆಳೆಗಾರರಿಗೆ ಈ ವೆಬ್‌ಸೈಟ್ ಆಶಾದಾಯಕವಾಗಿದೆ. ಇದನ್ನು ಬಳಸಿಕೊಂಡೇ ಆಂಜನೇಯ ಅವರು ಎರಡು ತಿಂಗಳಲ್ಲಿ 1,800 ಕೆ.ಜಿ. ಮಾವು ಮಾರಾಟ ಮಾಡಿದ್ದಾರೆ.

Continue Reading
Advertisement
Viral Video
ವೈರಲ್ ನ್ಯೂಸ್1 min ago

Viral Video: ದಿಗಂಬರ ಜೈನ ಮುನಿಗಳಿಗೆ ಈ ಪಾಪಿ ಮಾಡಿದ್ದೇನು ಗೊತ್ತಾ? ಶಾಕಿಂಗ್‌ ವಿಡಿಯೋ ವೈರಲ್‌

Prajwal Revanna Case
ಕರ್ನಾಟಕ3 mins ago

Prajwal Revanna Case: ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

assault case
ದಕ್ಷಿಣ ಕನ್ನಡ13 mins ago

Assault Case : ರೊಚ್ಚಿಗೆದ್ದ ಸ್ಥಳೀಯರು; ಬೋರ್‌ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಕಲ್ಲು ತೂರಾಟ

T20 World Cup 2024
ಕ್ರೀಡೆ26 mins ago

T20 World Cup 2024: 2ನೇ ಬ್ಯಾಚ್​ನಲ್ಲಿ ನ್ಯೂಯಾರ್ಕ್​ಗೆ ತೆರಳಿದ ಭಾರತದ ಮೂವರು ಆಟಗಾರರು

namaz in road mangalore
ದಕ್ಷಿಣ ಕನ್ನಡ29 mins ago

Namaz: ಸಾರ್ವಜನಿಕ ನಮಾಜ್‌ ನಿಲ್ಲಿಸದಿದ್ದರೆ ಹನುಮಾನ್‌ ಚಾಲೀಸಾ ಪಠನ: ವಿಹಿಂಪ ಎಚ್ಚರಿಕೆ

Veer Savarkar
ದೇಶ36 mins ago

Veer Savarkar: ಸ್ವಾತಂತ್ರ್ಯ ಯೋಧ ವೀರ್ ಸಾವರ್ಕರ್ ಜೀವನದ ಕುತೂಹಲಕರ ಸಂಗತಿಗಳಿವು

Drain pipe collapse
ದೇಶ38 mins ago

Drain Pipe collapse: 700 ಮೀಟರ್‌ ಉದ್ದದ ಕಬ್ಬಿಣದ ಪೈಪ್ ಕುಸಿತ; ವಾಹನಗಳು ಸಂಪೂರ್ಣ ಜಖಂ; ವಿಡಿಯೋ ವೈರಲ್‌

Umar Khalid
ದೇಶ42 mins ago

Umar Khalid: ದೆಹಲಿ ಗಲಭೆಯ ‘ಮಾಸ್ಟರ್‌ ಮೈಂಡ್‌ʼ ಉಮರ್ ಖಾಲಿದ್ ಜಾಮೀನು ಅರ್ಜಿ ವಜಾ

Physical Abuse
ಚಿಕ್ಕಬಳ್ಳಾಪುರ44 mins ago

Physical Abuse: 7ನೇ ಕ್ಲಾಸ್‌ ಹುಡುಗಿ 3 ತಿಂಗಳ ಗರ್ಭಿಣಿ! ಅತ್ಯಾಚಾರವೆಸಗಿದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಅರೆಸ್ಟ್‌

Veer Savarkar flyover
ಕರ್ನಾಟಕ1 hour ago

Veer Savarkar flyover: ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಮಸಿ; ಎನ್‌ಎಸ್‌ಯುಐ ಕಾರ್ಯಕರ್ತರು ವಶಕ್ಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ22 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 week ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌