Horoscope Today | ಇಂದು ಸಿಂಹ ರಾಶಿಯಲ್ಲಿ ಚಂದ್ರನ ಸಂಚಾರ; ನಿಮ್ಮ ರಾಶಿ ಭವಿಷ್ಯ ಹೀಗಿದೆ - Vistara News

ಪ್ರಮುಖ ಸುದ್ದಿ

Horoscope Today | ಇಂದು ಸಿಂಹ ರಾಶಿಯಲ್ಲಿ ಚಂದ್ರನ ಸಂಚಾರ; ನಿಮ್ಮ ರಾಶಿ ಭವಿಷ್ಯ ಹೀಗಿದೆ

ಶುಭಕೃತ ನಾಮ ಸಂವತ್ಸರ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ಅಷ್ಟಮಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

nava pancham yoga
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದಿನ ಪಂಚಾಂಗ (17-11-2022)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ.

ತಿಥಿ: ಅಷ್ಟಮಿ 07:56 ವಾರ: ಗುರುವಾರ
ನಕ್ಷತ್ರ: ಮಘಾ 21:19 ಯೋಗ: ಇಂದ್ರ 25:22
ಕರಣ: ಕೌಲವ 07:56
ಅಮೃತಕಾಲ: ಸಂಜೆ 06 ಗಂಟೆ 43 ನಿಮಿಷದಿಂದ 08 ಗಂಟೆ 28 ನಿಮಿಷದವರೆಗೆ.

ಸೂರ್ಯೋದಯ: 06: 19    ಸೂರ್ಯಾಸ್ತ: 05 : 50

ರಾಹುಕಾಲ : ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ  (Horoscope Today)

Horoscope Today

ಮೇಷ: ಭಾವನಾತ್ಮಕವಾಗಿ ನೀವಿಂದು ಸ್ಥಿರವಾಗಿರುವುದಿಲ್ಲ. ಆತುರದಲ್ಲಿ ನೀವು ಆಡಿದ ಮಾತು ಅಪಾಯ ತಂದೀತು, ಎಚ್ಚರಿಕೆ ಇರಲಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿಫಲ ಸಿಗುವುದರ ಜೊತೆಗೆ ಪುರಸ್ಕಾರ ಸಿಗುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಕುಟುಂಬದ ಸದಸ್ಯರಿಗೆ ಸಂಬಂಧಿಗಳಿಂದ ಶುಭ ಸುದ್ದಿ ಬರುವುದು. ಆರ್ಥಿಕ ಪ್ರಗತಿ ಸಾಧಾರಣ, ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಮನೆಯಲ್ಲಿ ಶುಭ ಕಾರ್ಯಗಳ ಕುರಿತು ಚರ್ಚೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಮಿಥುನ: ಸಕಾರಾತ್ಮಕ ಆಲೋಚನೆಗಳು ನಿಮಗೆ ಒಳಿತನ್ನು ಮಾಡುವವು. ಆತುರದ ತೀರ್ಮಾನ, ಮಾತುಗಳು ಅಪಾಯ ತಂದೀತು. ಆರೋಗ್ಯ ಕೊಂಚ ಮಟ್ಟಿಗೆ ಹದಗೆಡುವ ಸಾಧ್ಯತೆ.ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ. ಮನೆಯವರ ಧೈರ್ಯದ ಮಾತುಗಳು ಮನಸ್ಸಿಗೆ ಸಂತೋಷ-ನೆಮ್ಮದಿ ತರುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಕಟಕ: ಅತಿಯಾದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ. ಸೂಕ್ತ ವ್ಯಕ್ತಿಗಳ ಬೆಂಬಲದಿಂದ ಹೂಡಿಕೆ ವ್ಯವಹಾರದಲ್ಲಿ ತೊಡುಗುವ ಸಾಧ್ಯತೆ. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವಿರಿ. ಸಂಗಾತಿ ನಿಮ್ಮ ಮನಸ್ಸಿಗೆ ಮುದ ನೀಡುವಳು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಸಿಂಹ: ನಿಮ್ಮ ವರ್ತನೆಯಲ್ಲಿ ಬದಲಾವಣೆ, ಹಿರಿಯರ ಆಶೀರ್ವಾದದ ಬಲದಿಂದ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಸಾಧ್ಯತೆ. ದಿಢೀರ್‌ ಪ್ರಯಾಣ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಕನ್ಯಾ: ಒತ್ತಡದ ಕಾರ್ಯ ಆಯಾಸವನ್ನುಂಟು ಮಾಡುವುದು. ಕುಟುಂಬದ ಸದಸ್ಯರ ಅವಶ್ಯಕತೆಗಾಗಿ ಅನಗತ್ಯ ಖರ್ಚು. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ. ಇದರ ನಡುವೆ ಕುಟುಂಬದ ಸದಸ್ಯರು ನಿಮ್ಮ ಮುಂದೆ ಸಮಸ್ಯೆ ಹಂಚಿಕೊಳ್ಳುವ ಸಾಧ್ಯತೆ. ಇದು ನಿಮಗೆ ಚಿಂತೆ ತರಬಹುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ತುಲಾ: ಕೈಗೊಂಡ ಧಾರ್ಮಿಕ ಕಾರ್ಯಗಳು ಮನಸ್ಸಿಗೆ ಸಮಾಧಾನ ತರುವುದು. ಅಗತ್ಯಕ್ಕೆ ತಕ್ಕಂತೆ ಖರ್ಚು. ಕುಟುಂಬದ ಸದಸ್ಯರಿಂದ ಬರುವ ರಹಸ್ಯ ಸುದ್ದಿ ಅಚ್ಚರಿ ತರುವುದು. ಕೋಪದಲ್ಲಿ ಮಾತಿಗೆ ಇಳಿಯುವುದರಿಂದ ಕಠಿಣ ಪರಿಸ್ಥಿತಿ ನಿರ್ಮಾಣವಾಗುವುದು. ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ: ಕಠಿಣ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗುವಿರಿ. ಭಾವನಾತ್ಮಕ ನಿರ್ಧಾರ ಕೈಗೊಳ್ಳುವ ಭರದಲ್ಲಿ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುವುದು ಬೇಡ. ಅಜಾಗೃತ ಕಾರ್ಯ ನಿಮಗೆ ಆರ್ಥಿಕ ನಷ್ಟ ಉಂಟು ಮಾಡಬಹುದು. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಧನಸ್ಸು: ಉದ್ಯೋಗದ ಸ್ಥಳದಲ್ಲಿ ಹೊಸ ಭರವಸೆಗಳು ಮೂಡಲಿವೆ. ಕುಟುಂಬದ ಸದಸ್ಯರ ವರ್ತನೆಯಿಂದ ಕೋಪಗೊಳ್ಳುವ ಸಾಧ್ಯತೆ. ಸಂಬಂಧಿಕರಿಂದ ವ್ಯಾಜ್ಯ ಉಂಟಾಗುವ ಸಾಧ್ಯತೆ. ಆತುರದಲ್ಲಿ ಅತಿರೇಕದ ಮಾತುಗಳನ್ನಾಡುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಮಕರ: ಜೀವನದಲ್ಲಿ ಹೊಸ ಪಾಠ ಕಲಿಯುವಿರಿ. ಕೌಟುಂಬಿಕ ಒತ್ತಡ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಸಾಧ್ಯತೆ. ಕೋಪದಲ್ಲಿ ಆಡಿದ ಮಾತುಗಳು ನಿಮಗೇ ವಿಷಾಧ ಮೂಡಿಸುತ್ತವೆ. ಆರೋಗ್ಯದ ಕಡೆಗೆ ಗಮನ ಹರಿಸಿ. ವೈದ್ಯರ ಸಲಹೆ ಪಡೆಯುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕುಂಭ: ಆತ್ಮವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು, ಕೀರ್ತಿ ಸಿಗುವುದು. ದಿನದ ಮಟ್ಟಿಗೆ ಅನಗತ್ಯವಾಗಿ ಖರ್ಚು ಮಾಡುವ ಸಾಧ್ಯತೆ. ಗೌಪ್ಯ ವಿಷಯಗಳನ್ನು ಹಂಚಿಕೊಂಡು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಕುಟುಂಬದ ಕಲಹದಲ್ಲಿ ಧ್ವನಿ ಸೇರಿಸುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಮೀನ: ಒತ್ತಡದ ಜೀವನಕ್ಕೆ ಕೊಂಚ ಮಟ್ಟಿಗೆ ಸಮಾಧಾನದ ಮಾತುಗಳು ಸೂಕ್ತ ವ್ಯಕ್ತಿಗಳಿಂದ ಸಿಗಲಿವೆ. ನಿಮ್ಮ ವರ್ತನೆಯಿಂದ ಕುಟುಂಬದ ಸದಸ್ಯರು ಕೋಪಗೊಳ್ಳವ ಸಾಧ್ಯತೆ. ಹಣಕಾಸು ಪ್ರಗತಿ ಸಾಧಾರಣ. ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಅವಶ್ಯಕ. ಉದ್ಯೋಗದಲ್ಲಿ ಕಿರಿಕಿರಿ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ | ಗುರು ಗ್ರಹ ನೀಡುವ ಭಾವಫಲಗಳ ಬಗ್ಗೆ ಮಾಹಿತಿ ಇದೆಯೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Police Station: ಪೊಲೀಸ್‌ ಸ್ಟೇಷನ್‌ನಲ್ಲೇ ಪತಿ-ಪತ್ನಿ ಸಾವು; ಠಾಣೆಯನ್ನೇ ಸುಟ್ಟರು ಜನ

Police Station: ವ್ಯಕ್ತಿಯೊಬ್ಬರು ತಮ್ಮ ಹೆಂಡತಿ ತೀರಿಕೊಂಡ ಬಳಿಕ 14 ವರ್ಷದ ನಾದಿನಿಯನ್ನು ಮದುವೆಯಾಗಿದ್ದರು. ಹೆಂಡತಿ ತೀರಿಕೊಂಡ ಬಳಿಕ ನಾದಿನಿಯನ್ನು ವ್ಯಕ್ತಿಯು ಮನೆಗೇ ಕರೆದುಕೊಂಡು ಬಂದಿದ್ದ. ಈ ವಿಷಯ ತಿಳಿದ ಪೊಲೀಸರು ಮೇ 16ರಂದು ವ್ಯಕ್ತಿ ಹಾಗೂ 14 ವರ್ಷದ ಬಾಲಕಿಯನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದರು. ಠಾಣೆಯಲ್ಲಿಯೇ ಇಬ್ಬರು ಮೃತಪಟ್ಟಿದ್ದು, ಇದಾದ ಬಳಿಕ ಗ್ರಾಮಸ್ಥರು ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದ್ದಾರೆ.

VISTARANEWS.COM


on

Police Station
Koo

ಪಟನಾ: ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ (Araria District) ಪೊಲೀಸ್‌ ಕಸ್ಟಡಿಯಲ್ಲಿಯೇ ಗಂಡ ಹಾಗೂ ಹೆಂಡತಿ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸ್‌ ಠಾಣೆಗೇ (Police Station) ಬೆಂಕಿ ಹಚ್ಚಿದ್ದಾರೆ. ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ, ಕಲ್ಲುತೂರಾಟ (Stone Pelting) ನಡೆಸಿದ ಕಾರಣ ಪೊಲೀಸರು ಸ್ವಯಂ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಿಂದಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹೆಚ್ಚಿನ ಪೊಲೀಸರನ್ನೂ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?

ವ್ಯಕ್ತಿಯೊಬ್ಬರು ತಮ್ಮ ಹೆಂಡತಿ ತೀರಿಕೊಂಡ ಬಳಿಕ 14 ವರ್ಷದ ನಾದಿನಿಯನ್ನು ಮದುವೆಯಾಗಿದ್ದರು. ಹೆಂಡತಿ ತೀರಿಕೊಂಡ ಬಳಿಕ ನಾದಿನಿಯನ್ನು ವ್ಯಕ್ತಿಯು ಮನೆಗೇ ಕರೆದುಕೊಂಡು ಬಂದಿದ್ದ. ಈ ವಿಷಯ ತಿಳಿದ ಪೊಲೀಸರು ಮೇ 16ರಂದು ವ್ಯಕ್ತಿ ಹಾಗೂ 14 ವರ್ಷದ ಬಾಲಕಿಯನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದರು. ವ್ಯಕ್ತಿಯ ವಿರುದ್ಧ ಎಫ್‌ಐಆರ್‌ ಕೂಡ ದಾಖಲಿಸಿದ್ದರು. ವಿಚಾರಣೆಗಾಗಿ ಪೊಲೀಸರು ಇಬ್ಬರನ್ನೂ ಕರೆದೊಯ್ದಿದ್ದರು. ಆದರೆ, ಪೊಲೀಸ್‌ ಠಾಣೆಯಲ್ಲಿಯೇ ವ್ಯಕ್ತಿ ಹಾಗೂ ಬಾಲಕಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮಸ್ಥರ ಆರೋಪವೇನು?

ವ್ಯಕ್ತಿ ಹಾಗೂ ಬಾಲಕಿಯನ್ನು ಪೊಲೀಸರೇ ಕೊಂದಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಇಬ್ಬರನ್ನೂ ಪೊಲೀಸ್‌ ಠಾಣೆಗೆ ಕರೆದೊಯ್ದ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಆಕ್ರೋಶದಲ್ಲಿ ಅವರು ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಮಾಡಿದ್ದಾರೆ. ಉದ್ರಿಕ್ತ ಗ್ರಾಮಸ್ಥರ ದಾಳಿಯಲ್ಲಿ ಐದಾರು ಪೊಲೀಸರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಪೊಲೀಸ್‌ ಠಾಣೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ವ್ಯಕ್ತಿಯು ಲಾಕಪ್‌ ಬಾಗಿಲು ಹತ್ತಿ, ಬಟ್ಟೆಯಿಂದ ನೇಣು ಬಿಗಿದುಕೊಂಡಿದ್ದಾನೆ. ಪೊಲೀಸರು ಸ್ವಯಂ ರಕ್ಷಣೆಗಾಗಿ ಗುಂಡು ಹಾರಿಸಿದ ಕಾರಣ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಆದರೆ, ಹಿರಿಯ ಪೊಲೀಸ್‌ ಅಧಿಕಾರಿಗಳು ಘಟನೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: Theft Case : ಪೊಲೀಸ್‌ ಬಸ್ಸನ್ನೇ ಕದಿಯಲು ಬಂದ ಕುಡುಕ; ಪೇಡ ಕೇಳಿದವ 15 ಕೆಜಿ ತುಪ್ಪ ಎಗರಿಸಿದ

Continue Reading

ಪ್ರಮುಖ ಸುದ್ದಿ

Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

Powerful Bikes: 150 ಸಿಸಿಗಳಿಗಿಂತ ಹೆಚ್ಚಿನ ಬೈಕ್​ಗಳೇ ಅವರ ಆದ್ಯತೆಗಳಾಗಿರುತ್ತವೆ. ಹಿಂದೆಲ್ಲ ಭಾರತದ ಮಾರುಕಟ್ಟೆಯಲ್ಲಿ ಪವರ್​ಫುಲ್​ ಬೈಕ್​​ಗಳ ಸಂಖ್ಯೆ ಕಡಿಮೆಯಿದ್ದವು. ಆದರೆ, ಪರಿಸ್ಥಿತಿ ಹಿಂದಿನಂತಿಲ್ಲ. ಕಳೆದ ದಶಕದಲ್ಲಿ, ಪರ್ಫಾಮೆನ್ಸ್ ಬೈಕ್ ಗಳು ಹೆಚ್ಚು ಪ್ರವೇಶಿಸಿವೆ ಮತ್ತು ಕೈಗೆಟುಕುವ ಬೆಲೆಗೆ ದೊರೆಯುತ್ತಿವೆ.

VISTARANEWS.COM


on

Powerful Bike
Koo

ಬೆಂಗಳೂರು: ಪರ್ಫಾಮೆನ್ಸ್​ ಬೈಕ್​ಗಳ ಕಡೆಗಿನ ಕ್ರೇಜ್ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ. ಹೆಚ್ಚು ಸಿಸಿ ಹಾಗೂ ಅಧಿಕ ಪವರ್ ಬಿಡುಗಡೆ ಮಾಡುವ ಬೈಕ್​ಗಳನ್ನು ಹೊಸ ಪೀಳಿಗೆಯ ಜನರು ಇಷ್ಟ ಪಡುತ್ತಾರೆ. 150 ಸಿಸಿಗಳಿಗಿಂತ ಹೆಚ್ಚಿನ ಬೈಕ್​ಗಳೇ ಅವರ ಆದ್ಯತೆಗಳಾಗಿರುತ್ತವೆ. ಹಿಂದೆಲ್ಲ ಭಾರತದ ಮಾರುಕಟ್ಟೆಯಲ್ಲಿ ಪವರ್​ಫುಲ್​ ಬೈಕ್​​ಗಳ (Powerful Bikes) ಸಂಖ್ಯೆ ಕಡಿಮೆಯಿದ್ದವು. ಆದರೆ, ಪರಿಸ್ಥಿತಿ ಹಿಂದಿನಂತಿಲ್ಲ. ಕಳೆದ ದಶಕದಲ್ಲಿ, ಪರ್ಫಾಮೆನ್ಸ್ ಬೈಕ್ ಗಳು ಹೆಚ್ಚು ಪ್ರವೇಶಿಸಿವೆ ಮತ್ತು ಕೈಗೆಟುಕುವ ಬೆಲೆಗೆ ದೊರೆಯುತ್ತಿವೆ. ಜತೆಗೆ ಸ್ಪರ್ಧೆಯೂ ಹೆಚ್ಚಿದೆ. ಹೀಗೆ 2.5 ಲಕ್ಷ ರೂಪಾಯಿಗಿಂತ ಕಡಿಮೆ (ಎಕ್ಸ್​ಶೋರೂಮ್​) ಬೆಲೆಹೊಂದಿರುವ ಕೆಲವು ಬೈಕ್​ಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ. ನಿಮಗೆ ಇಷ್ಟವಾದದ್ದನ್ನು ಆಯ್ಕೆ ಮಾಡಿಕೊಳ್ಳಿ.

ಕೆಟಿಎಂ 250 ಡ್ಯೂಕ್ (31 ಬಿಹೆಚ್ ಪಿ)

ಕೆಟಿಎಂ ಡ್ಯೂಕ್ ಪವರ್​ಫುಲ್​ ಬೈಕ್​ ಮಾತ್ರವಲ್ಲದೆ ಅತ್ಯುತ್ತಮ ಹ್ಯಾಂಡ್ಲರ್ ಕೂಡ ಆಗಿದೆ. ಉತ್ತಮ ಗುಣಮಟ್ಟದ ಬಿಡಿಭಾಗಗಳು ಮತ್ತು ಫೀಚರ್​ಗಳನ್ನು ಹೊಂದಿರುವ 250 ಡ್ಯೂಕ್ ಮಾರುಕಟ್ಟೆಯಲ್ಲಿ ಛಾಪು ಮೂಡಿಸಿದೆ. ಈ ಬೈಕ್ 249 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 9,250 ಆರ್ ಪಿಎಂನಲ್ಲಿ 31 ಬಿಹೆಚ್ ಪಿ ಪವರ್ ಮತ್ತು 7,250 ಆರ್ ಪಿಎಂನಲ್ಲಿ 25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೆನ್-3 250 ಡ್ಯೂಕ್ ಬೈಕಿನಲ್ಲಿ ಪರಿಷ್ಕೃತ ಎರ್ಗೊನಾಮಿಕ್ಸ್, ಅಲ್ಯೂಮಿನಿಯಂ ಸ್ವಿಂಗ್ ಆರ್ಮ್ ಮತ್ತು ಕ್ವಿಕ್ ಶಿಫ್ಟರ್ ಹೊಂದಿದೆ. 250 ಡ್ಯೂಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.40 ಲಕ್ಷಗಳಾಗಿದೆ.

ಟಿವಿಎಸ್ ಅಪಾಚೆ ಆರ್ ಟಿಆರ್ 310 (35.6 ಬಿಹೆಚ್ ಪಿ)

ಅಪಾಚೆ ಆರ್ ಟಿಆರ್ 310 ಬೈಕ್ ಅಪಾಚೆ ಆರ್ ಆರ್ 310 ಬೈಕಿನ ನೇಕೆಡ್ ಆವೃತ್ತಿಯಾಗಿದೆ. ಆದರೆ ಎಂಜಿನ್ ಹೆಚ್ಚಿನ ಶಕ್ತಿ ಮತ್ತು ಟಾರ್ಕ್ ಬದಲಾವಣೆಯಿಲ್ಲ. ಆರ್ ಟಿಆರ್ 310 ಬೈಕ್ 312 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 9,700 ಆರ್ ಪಿಎಂನಲ್ಲಿ 35.6 ಬಿಹೆಚ್ ಪಿ ಪವರ್ ಮತ್ತು 6,650 ಆರ್ ಪಿಎಂನಲ್ಲಿ 28.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಅಪಾಚೆ ಆರ್ ಟಿಆರ್ 310 ಬೈಕ್ ಎಲೆಕ್ಟ್ರಾನಿಕ್ ವಿಜಾರ್ಡಿ ಮತ್ತು ಸೇಫ್ಟಿ ನೆಟ್​ನಂಥ ಸುರಕ್ಷತಾ ಫೀಚರ್​ಗಳಿಂ ಕೂಡಿದೆ. 2.43 ಲಕ್ಷ ರೂ.ಗಳಿಂದ 2.63 ಲಕ್ಷ ರೂ.ಗಳ ನಡುವಿನ ಬೆಲೆಯ ಮೂರು ವೇರಿಯೆಂಟ್​ಗಳು ದೊರೆಯುತ್ತವೆ.

ಬಜಾಜ್ ಡೊಮಿನಾರ್ 400 (40 ಎಚ್​ಪಿ)


ಡೊಮಿನಾರ್ 400 ಬೈಕ್ ಕೆಟಿಎಂ 390 ಡ್ಯೂಕ್ ಬೈಕಿನಿಂದ ಎರವಲು ಪಡೆದ ಎಂಜಿನ್ಹೊಂ ದಿದೆ. ಇದರ 373 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 8,800 ಆರ್ ಪಿಎಂನಲ್ಲಿ 40 ಬಿಹೆಚ್ ಪಿ ಪವರ್ ಮತ್ತು 6,500 ಆರ್ ಪಿಎಂನಲ್ಲಿ 35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೊಮಿನಾರ್ 400 ಬೈಕ್​​ನ ಪ್ಲಸ್​ ಮತ್ತು ಮೈನಸ್ ವಿಚಾರವೆಂದರೆ ಅದರ ತೂಕ. 192 ಕೆ.ಜಿ ತೂಕವನ್ನು ಹೊಂದಿರುವ ಇದು ಈ ಪಟ್ಟಿಯಲ್ಲಿ ಅತಿ ಭಾರವಾದ ಬೈಕ್ ಆಗಿದೆ. ಡೊಮಿನಾರ್ 400 ಬೈಕಿನ ಬೆಲೆಯು ರೂ.2.30 ಲಕ್ಷ ರೂಪಾಯಿ.

ಬಜಾಜ್ ಪಲ್ಸರ್ ಎನ್ಎಸ್400ಝಡ್ (40ಹೆಚ್​ಪಿ)

ಪಲ್ಸರ್ ಎನ್ ಎಸ್ 400 ಝಡ್ ಬಜಾಜ್ ನ ಪಲ್ಸರ್ ಸರಣಿಯ ಬೈಕುಗಳ ಪಟ್ಟಿಗೆ ಹೊಸ ಸೇರ್ಪಡೆ. ಇದು ಡೊಮಿನಾರ್ 400ರ ಎಂಜಿನ್ ಮತ್ತು ಫ್ರೇಮ್ ಅನ್ನು ಹಂಚಿಕೊಳ್ಳುತ್ತದೆ. ಆದರೆ 18 ಕೆಜಿ ಹಗುರ. 174 ಕೆ.ಜಿ ತೂಕ ಹೊಂದಿರುವ ಎನ್ ಎಸ್ 400 ಝಡ್ ಕಾರ್ಯಕ್ಷಮತೆಯ ವಿಷಯದಲ್ಲಿ ಸ್ಪಷ್ಟ ಪ್ರಯೋಜನ ಹೊಂದಿದೆ. ಎಬಿಎಸ್ ನೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸುವ ಟ್ರಾಕ್ಷನ್ ಕಂಟ್ರೋಲ್ ಮತ್ತು ರೈಡಿಂಗ್ ಮೋಡ್ ಗಳಂತಹ ಫೀಚರ್​ಗಳಿಎ. ಪಲ್ಸರ್ ಎನ್ ಎಸ್ 400 ಝಡ್ ಬೈಕಿನ ಬೆಲೆಯು ರೂ.1.85 ಲಕ್ಷಗಳಾಗಿದೆ.

ಇದನ್ನೂ ಓದಿ: Car Care Tips : ನಿಮ್ಮ ಕಾರಿನ ಈ ಬಿಡಿಭಾಗಗಳಿಗೂ ಇವೆ ಎಕ್ಸ್​ಪೈರಿ ಡೇಟ್​​; ಅವುಗಳು ಯಾವವು ಎಂಬುದು ತಿಳಿದಿರಲಿ

ಟ್ರಯಂಫ್ ಸ್ಪೀಡ್ 400 (40hp)

ಟ್ರಯಂಫ್ ಸ್ಪೀಡ್ 400 ಹಿಂದಿನ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ, 176 ಕೆಜಿ ತೂಕವನ್ನು ಹೊಂದಿರುವ ಇದು ಬಜಾಜ್ ಪಲ್ಸರ್ ಎನ್ ಎಸ್ 400 ಝಡ್ ಗಿಂತ ಕೇವಲ 2 ಕೆ.ಜಿ ಹೆಚ್ಚು ತೂಕ ಹೊಂದಿದೆ. ಟ್ರಯಂಫ್ ಬೈಕ್ 398 ಸಿಸಿ ಎಂಜಿನ್ ಸಹಾಯದಿಂದ 8,000 ಆರ್ ಪಿಎಂನಲ್ಲಿ 40 ಬಿಹೆಚ್ ಪಿ ಪವರ್ ಮತ್ತು 6,500 ಆರ್ ಪಿಎಂನಲ್ಲಿ 37.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 2.34 ಲಕ್ಷ ರೂ.ಗಳಲ್ಲಿ, ಟ್ರಯಂಫ್ ‘ವಾಲ್ಯೂ ಫಾರ್ ಮನಿ.

Continue Reading

ಶಿವಮೊಗ್ಗ

Kannada stone inscription: ಕಾಶಿಯಲ್ಲಿ ಕನ್ನಡದ ಶಿಲಾ ಶಾಸನ ಪತ್ತೆ; ಘಾಟ್ ನಲ್ಲಿ ಕಾಲು ಸಂಕವಾಗಿ ಬಳಕೆ!

Kannada stone inscription: ಕಾಶಿಯ ಕಪಿಲಾ ಘಾಟ್ ಬಳಿ ಶಾಸನ ಪತ್ತೆಯಾಗಿದೆ. ಕಾಶಿ ವಿಶ್ವನಾಥ ದೇವಸ್ಥಾನದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಜಾಗದಲ್ಲಿ ಶಾಸನ ಕಂಡುಬಂದಿದೆ. ಘಾಟ್‌ನಲ್ಲಿ ಪತ್ತೆಯಾದ ಈ ಶಾಸನಗಳಲ್ಲಿ ಕೆಲವು ಕಾಲು ಸಂಕವಾಗಿ ಬಳಕೆಯಾಗುತ್ತಿದೆ. ಮತ್ತೆ ಕೆಲವು ಬಟ್ಟೆ ತೊಳೆಯಲು ಬಳಕೆಯಾಗುತ್ತಿದೆ. ಈ ಮೂಲಕ ಅಪರೂಪದ ಶಿಲಾಶಾಸನವೊಂದು ಭಾರಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಗೊತ್ತಾಗಿದೆ.

VISTARANEWS.COM


on

Kannada stone inscription found in Kashi Use as a foot bridge at the ghat
Koo

ಶಿವಮೊಗ್ಗ: ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಾಶಿಯಲ್ಲಿ (Kashi Vishwanath Temple) ಕನ್ನಡದ ಶಿಲಾ ಶಾಸನ (Kannada stone inscription) ಪತ್ತೆಯಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ಕೆಳದಿ ಅರಸರ ಕಾಲದ ಶಾಸನ ಎಂದು ಗೊತ್ತಾಗಿದೆ.

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಅಸ್ತಿತ್ವಕ್ಕೆ ಬಂದಿದ್ದ ಕೆಳದಿ ಸಂಸ್ಥಾನವು ಬರೆದಿದ್ದ ಶಿಲಾ ಶಾಸನ ಇದಾಗಿದೆ. ವಿಜಯನಗರದ ಸಾಮ್ರಾಜ್ಯಕ್ಕೆ ಕೆಳದಿಯ ಅರಸರು ಸಾಮಂತರಾಗಿದ್ದರು.

ಕಪಿಲಾ ಘಾಟ್ ಬಳಿ ಶಾಸನ ಪತ್ತೆ

ಕಾಶಿಯ ಕಪಿಲಾ ಘಾಟ್ ಬಳಿ ಶಾಸನ ಪತ್ತೆಯಾಗಿದೆ. ಕಾಶಿ ವಿಶ್ವನಾಥ ದೇವಸ್ಥಾನದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಜಾಗದಲ್ಲಿ ಶಾಸನ ಕಂಡುಬಂದಿದೆ. ಘಾಟ್‌ನಲ್ಲಿ ಪತ್ತೆಯಾದ ಈ ಶಾಸನಗಳಲ್ಲಿ ಕೆಲವು ಕಾಲು ಸಂಕವಾಗಿ ಬಳಕೆಯಾಗುತ್ತಿದೆ. ಮತ್ತೆ ಕೆಲವು ಬಟ್ಟೆ ತೊಳೆಯಲು ಬಳಕೆಯಾಗುತ್ತಿದೆ. ಈ ಮೂಲಕ ಅಪರೂಪದ ಶಿಲಾಶಾಸನವೊಂದು ಭಾರಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಗೊತ್ತಾಗಿದೆ.

ಕನ್ನಡದಲ್ಲಿ ಕೆತ್ತಲಾಗಿರುವ ಶಾಸನ

ಶಾಸನದಲ್ಲಿ ಕೆಳದಿ ಅರಸ ಶಿವಪ್ಪ ನಾಯಕನ ಹೆಸರನ್ನು ಉಲ್ಲೇಖ ಮಾಡಲಾಗಿದೆ. ಇದು 16ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾಗುತ್ತಿದೆ. ಶಾಸನ ಕಾಲುಸಂಕವಾಗಿ ಬಳಕೆಯಾಗುತ್ತಿರುವುದಕ್ಕೆ ಶಾಸನ ಪ್ರಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸಾಗರದ ವಕೀಲ ಹಾಗೂ ಶಾಸನ ಪ್ರಿಯ ಪ್ರವೀಣ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ಶಾಸನ ರಕ್ಷಣೆ ಆಗಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರವು ಈ ಶಾಸನ ರಕ್ಷಣೆಗೆ ಮುಂದಾಗಬೇಕು. ಉತ್ತರ ಪ್ರದೇಶ ಸರ್ಕಾರವನ್ನು ಸಂಪರ್ಕಿಸಿ ಶಾಸನವನ್ನು ರಕ್ಷಿಸಬೇಕು. ಕೇಂದ್ರ ಪುರಾತತ್ವ ಇಲಾಖೆಯು ತಕ್ಷಣವೇ ಶಾಸನ ರಕ್ಷಣಾ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: HD Deve Gowda: ದೇವೇಗೌಡರಿಗೆ ಜನ್ಮದಿನ ಶುಭ ಕೋರಿದ ಮೋದಿ; ಮಾಜಿ ಪ್ರಧಾನಿಗೆ ಹಲಸಿನ ಹಣ್ಣು ಗಿಫ್ಟ್‌

ಇನ್ನು ಈ ಶಾಸನವು ಕನ್ನಡ ಹಾಗೂ ಪರ್ಶಿಯನ್ ಭಾಷೆಯಲ್ಲಿದ್ದು, ಎರಡೂ ಶಾಸನವನ್ನು ರಕ್ಷಿಸಬೇಕು, ಇದು ಶಿವಮೊಗ್ಗದ ಹೆಮ್ಮೆಯ ಪ್ರತೀಕವಾಗಿದೆ. ಹೀಗಾಗಿ ಇದರ ರಕ್ಷಣೆಯ ಅವಶ್ಯಕತೆ ಇದೆ ಎಂದು ಪ್ರವೀಣ್ ಕುಮಾರ್ ಒತ್ತಾಯಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Hyderabadi Biryani : ಎಸ್​ಆರ್​ಎಚ್​ ಅಭಿಮಾನಿಗಳೊಂದಿಗೆ ಹೈದ್ರಾಬಾದಿ ಬಿರಿಯಾನಿ ಸವಿದ ಹೇಡನ್ ಪುತ್ರಿ ಗ್ರೇಸ್​, ಇಲ್ಲಿದೆ ವಿಡಿಯೊ

Hyderabadi Biryani :: ಸ್ಟಾರ್ ಸ್ಪೋರ್ಟ್ಸ್​​ನ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. 21 ವರ್ಷದ ಅವರು ಪ್ರಸಿದ್ಧ ‘ಪ್ಯಾರಡೈಸ್ ಬಿರಿಯಾನಿ’ ಜಾಯಿಂಟ್​ಗೆ ಭೇಟಿ ನೀಡಿ ಮತ್ತು ಬಿರಿಯಾನಿ ಮತ್ತು ಖುಬಾನಿ-ಕಾ-ಮೀಠಾ (ಒಣಗಿದ ಏಪ್ರಿಕಾಟ್​​ಳನ್ನು ಬಳಸಿ ಮಾಡಿರುವ ಸಿಹಿತಿಂಡಿ) ತಿಂದರು. ಅವರು ಕೆಲವು ಎಸ್​ಆರ್​ಎಚ್ ತಂಡದ ​​ ಅಭಿಮಾನಿಗಳ ಜತೆಗೆ ಬಿರಿಯಾನಿ ಸವಿದರು. ಅವರೆಲ್ಲರೂ ವಹೈದರಾಬಾದ್​ನಲ್ಲಿ ತಿನ್ನಲೇಬೇಕಾದ ಭಕ್ಷ್ಯಗಳನ್ನು ಗ್ರೇಸ್​​ಗೆ ಪರಿಚಯಿಸಿದರು.

VISTARANEWS.COM


on

Hyderabadi Biryani
Koo

ಹೈದರಾಬಾದ್​​: ಆಸ್ಟ್ರೇಲಿಯಾ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಮ್ಯಾಥ್ಯೂ ಹೇಡನ್ ಅವರ ಮಗಳು ಗ್ರೇಸ್ ಹೈದರಾಬಾದ್​ನಲ್ಲಿ ಸ್ಥಳೀಯ ಭಕ್ಷ್ಯಗಳನ್ನು ಸವಿಯುತ್ತಾ ಮೋಜಿನ ದಿನವನ್ನು ಕಳೆಯುತ್ತಿದ್ದಾರೆ. ವೃತ್ತಿಯಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿರುವ ಗ್ರೇಸ್ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್​​ನ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. 21 ವರ್ಷದ ಅವರು ಪ್ರಸಿದ್ಧ ‘ಪ್ಯಾರಡೈಸ್ ಬಿರಿಯಾನಿ’ ಜಾಯಿಂಟ್​ಗೆ ಭೇಟಿ ನೀಡಿ ಮತ್ತು ಬಿರಿಯಾನಿ (Hyderabadi Biryani) ಮತ್ತು ಖುಬಾನಿ-ಕಾ-ಮೀಠಾ (ಒಣಗಿದ ಏಪ್ರಿಕಾಟ್​​ಳನ್ನು ಬಳಸಿ ಮಾಡಿರುವ ಸಿಹಿತಿಂಡಿ) ತಿಂದರು. ಅವರು ಕೆಲವು ಎಸ್​ಆರ್​ಎಚ್ ತಂಡದ ​​ ಅಭಿಮಾನಿಗಳ ಜತೆಗೆ ಬಿರಿಯಾನಿ ಸವಿದರು. ಅವರೆಲ್ಲರೂ ವಹೈದರಾಬಾದ್​ನಲ್ಲಿ ತಿನ್ನಲೇಬೇಕಾದ ಭಕ್ಷ್ಯಗಳನ್ನು ಗ್ರೇಸ್​​ಗೆ ಪರಿಚಯಿಸಿದರು.

“ಹೈದರಾಬಾದ್ನಲ್ಲಿ ಬಿರಿಯಾನಿ ಒಂದು ಭಾವನೆ! @SunRisers ಅಭಿಮಾನಿಗಳೊಂದಿಗೆ ಅಪ್ರತಿಮ ಹೈದರಾಬಾದಿ ಬಿರಿಯಾನಿ ತಿನ್ನುವಾಗ ಐತಿಹಾಸಿಕ ಹೈದರಾಬಾದ್​ ನಗರದ ಸಾರವನ್ನು #GraceHayden ಅನುಭವಿಸಿದ್ದಾರೆ” ಎಂದು ಸ್ಟಾರ್ ಸ್ಪೋರ್ಟ್ಸ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್​ಗಳಲ್ಲಿ ವೈರಲ್ ಆಗಿರುವ ವೀಡಿಯೊಗೆ ಶೀರ್ಷಿಕೆ ನೀಡಿದೆ.

ಕೆಲವು ವಾರಗಳ ಹಿಂದೆ, ಎಸ್ಆರ್​ಎಚ್​ ತಂಡದ ನಾಯಕ ಪ್ಯಾಟ್ ಕಮಿನ್ಸ್ ತಮ್ಮ ಕುಟುಂಬದೊಂದಿಗೆ ಹೈದರಾಬಾದ್ ಬಿರಿಯಾನಿ ಸವಿದಿದ್ದರು. ಕಮಿನ್ಸ್ ಮತ್ತು ಅವರ ಕುಟುಂಬ ಹೈದರಾಬಾದ್​​ನ ಬಂಜಾರಾ ಹಿಲ್ಸ್​ನಲ್ಲಿರುವ ಸದರ್ನ್ ಮಿರ್ಚಿ ರೆಸ್ಟೋರೆಂಟ್​ಗೆ ಭೇಟಿ ನೀಡಿದ್ದರು.

ಗುರುವಾರ, ಕಮಿನ್ಸ್ ನೇತೃತ್ವದ ಎಸ್ಆರ್​ಎಚ್ಗು ಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯವು ರದ್ದಾದ ನಂತರ ಐಪಿಎಲ್ 2024ರ ಪ್ಲೇಆಫ್​ನಲ್ಲಿ ಸ್ಥಾನ ಪಡೆದ ಮೂರನೇ ತಂಡ ಎನಿಸಿಕೊಂಡಿತು.

ಇದನ್ನೂ ಓದಿ: Virat kohli : ತಮ್ಮ ಜೀವನದ ಎರಡು ಆಘಾತಕಾರಿ ಸಂದರ್ಭಗಳನ್ನು ವಿವರಿಸಿದ ವಿರಾಟ್ ಕೊಹ್ಲಿ

ಎಸ್ಆರ್​ಎಚ್​​ ಈಗಾಗಲೇ ಅರ್ಹತೆ ಪಡೆದ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಜತೆ ಪ್ಲೇಆಫ್​ ಪಟ್ಟಿಯಲ್ಲಿ ಸೇರಿಕೊಂಡಿದೆ. ನಾಲ್ಕನೇ ಮತ್ತು ಅಂತಿಮ ಪ್ಲೇಆಫ್ ಸ್ಥಾನ ಶನಿವಾರ ಸಂಜೆ ನಿರ್ಧಾರಗೊಳ್ಳಲಿದೆ. ಸಿಎಸ್ಕೆ, ಆರ್​ಸಿಬಿ ತಂಡಗಳು ಪ್ರಸ್ತುತ ಸ್ಪರ್ಧೆಯಲ್ಲಿವೆ.

Continue Reading
Advertisement
Nuclear test at Pokhran
ವಿಜ್ಞಾನ59 seconds ago

Nuclear Test In Pokhran: ಭಾರತ ಮೊದಲ ಪರಮಾಣು ಪರೀಕ್ಷೆ ನಡೆಸಿ ಇಂದಿಗೆ 50 ವರ್ಷ; ಏನಿದು ಸ್ಮೈಲಿಂಗ್‌ ಬುದ್ಧ?

Namma Metro
ಬೆಂಗಳೂರು8 mins ago

Namma Metro: ಮೆಟ್ರೋಗೆ ಕನೆಕ್ಟ್‌ ಆಗಲಿದೆ ನಮ್ಮ ಯಾತ್ರಿ; ಇನ್ಮುಂದೆ ಆಟೋ ಹಿಡಿಯೋ ಟೆನ್ಷನ್‌ ಇಲ್ಲ

Police Station
ದೇಶ16 mins ago

Police Station: ಪೊಲೀಸ್‌ ಸ್ಟೇಷನ್‌ನಲ್ಲೇ ಪತಿ-ಪತ್ನಿ ಸಾವು; ಠಾಣೆಯನ್ನೇ ಸುಟ್ಟರು ಜನ

Milana Nagaraj Anarkali border gown worn
ಸ್ಯಾಂಡಲ್ ವುಡ್44 mins ago

Milana Nagaraj: ಗರ್ಭಿಣಿ ಮಿಲನಾ ನಾಗರಾಜ್‌ ಧರಿಸಿರುವ ಕ್ರಶ್ಡ್ ಅನಾರ್ಕಲಿ ಬಾರ್ಡರ್‌ ಗೌನ್‌ನ ವಿಶೇಷ ಏನು?

Boxer Parveen
ಕ್ರೀಡೆ46 mins ago

Boxer Parveen: ಒಲಿಂಪಿಕ್ಸ್‌ ಕೋಟಾ ಕಳೆದುಕೊಂಡ ಭಾರತದ ಬಾಕ್ಸರ್‌ ಪರ್ವೀನ್‌

Famous Food of bangalore
ಆಹಾರ/ಅಡುಗೆ1 hour ago

Famous Food of Bangalore: ಬೆಂಗಳೂರಿಗೆ ಬಂದಾಗ ಈ ಖಾದ್ಯಗಳ ರುಚಿ ನೋಡಲು ಮರೆಯಬೇಡಿ!

Prime Minister of India
ರಾಜಕೀಯ1 hour ago

Prime Minister Of India: ಸುದೀರ್ಘ ಕಾಲ ಪ್ರಧಾನಿಯಾಗಿದ್ದ ನೆಹರೂ, ಇಂದಿರಾ ದಾಖಲೆಯನ್ನು ಮೋದಿ ಮುರಿಯಲು ಸಾಧ್ಯವೆ?

RCB FANS BIKE RALLY
ಕ್ರೀಡೆ1 hour ago

RCB FANS BIKE RALLY: ಪಂದ್ಯಕ್ಕೂ ಮುನ್ನವೇ ಬೃಹತ್​ ಬೈಕ್​ ರ‍್ಯಾಲಿ ಮಾಡಿದ ಆರ್​ಸಿಬಿ ಅಭಿಮಾನಿಗಳು; ವಿಡಿಯೊ ವೈರಲ್​​

Pavithra Jayaram Chandrakant are just friends, daughter said
ಕಿರುತೆರೆ1 hour ago

Pavithra Jayaram: ಚಂದ್ರಕಾಂತ್‌ ಹಾಗೂ ನನ್ನ ಅಮ್ಮ ಜಸ್ಟ್‌ ಫ್ರೆಂಡ್ಸ್‌, ಪವಿತ್ರಾ ಮಗಳ ಸ್ಪಷ್ಟನೆ!

Powerful Bike
ಪ್ರಮುಖ ಸುದ್ದಿ1 hour ago

Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ19 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌