Horoscope Today |‌ ಸಂಕಷ್ಟ ಚತುರ್ಥಿಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ - Vistara News

ಪ್ರಮುಖ ಸುದ್ದಿ

Horoscope Today |‌ ಸಂಕಷ್ಟ ಚತುರ್ಥಿಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ

ಶುಭಕೃತ ನಾಮ ಸಂವತ್ಸರ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷದ ತದಿಗೆಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

rashi bhavishya today in kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದಿನ ಪಂಚಾಂಗ (10-೦೧-202೩)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ.

ತಿಥಿ: ತದಿಗೆ 12:08 ವಾರ: ಮಂಗಳವಾರ
ನಕ್ಷತ್ರ: ಆಶ್ಲೇಷ 09:00 ಯೋಗ: ಪ್ರೀತಿ11:18
ಕರಣ: ವಿಷ್ಟಿ (ಭದ್ರ)12:08 ಇಂದಿನ ವಿಶೇಷ: ಸಂಕಷ್ಟ ಚತುರ್ಥಿ.
ಅಮೃತಕಾಲ: ಬೆಳಗ್ಗೆ 07 ಗಂಟೆ 13 ನಿಮಿಷದಿಂದ 09 ಗಂಟೆ 01 ನಿಮಿಷದವರೆಗೆ.

ಸೂರ್ಯೋದಯ: 06 : 45    ಸೂರ್ಯಾಸ್ತ: 0೬ : 10

ರಾಹುಕಾಲ : ಸಾಯಂಕಾಲ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ  (Horoscope Today)

Horoscope Today

ಮೇಷ: ಅನೇಕ ಒತ್ತಡಗಳು ಆವರಿಸುವ ಸಾಧ್ಯತೆ. ಇತರರ ಮೇಲೆ ವಿನಾ ಕಾರಣ ಹಗೆ ಸಾಧಿಸಿ ಮಾನಸಿಕ ಆರೋಗ್ಯ ಹಾಳು ಮಾಡಿಕೊಳ್ಳುವುದು ಬೇಡ. ಆರ್ಥಿಕವಾಗಿ ಸಮಸ್ಯೆ ಎದುರಿಸಬೇಕಾಗಿ ಬರಬಹುದು. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಕೊಂಚ ಮಟ್ಟಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

Horoscope Today

ವೃಷಭ: ಆರೋಗ್ಯದ ಕುರಿತು ವಿಶೇಷ ಕಾಳಜಿ ಅವಶ್ಯಕ. ವಿನಾ ಕಾರಣ ಎಲ್ಲದಕ್ಕೂ ಮೂಗು ತೂರಿಸುವುದು ಬೇಡ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರಿಕೆ ಇರಲಿ. ಹೂಡಿಕೆಯ ಕುರಿತು ಆಲೋಚನೆ. ಆಪ್ತರ ಆರೋಗ್ಯ ವಿಚಾರಣೆ. ಉದ್ಯೋಗಿಗಳಿಗೆ ಮಿಶ್ರ ಫಲ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ, ಆರ್ಥಿಕ ಲಾಭ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಮಿಥುನ: ಕೆಲಸ ಕಾರ್ಯಗಳಲ್ಲಿ ನಿಧಾನಗತಿ. ಆರೋಗ್ಯ ಮಧ್ಯಮ. ಅನೇಕ ವಿಚಾರಗಳು ಮಾನಸಿಕ ನೆಮ್ಮದಿ ಹಾಳು ಮಾಡುವ ಸಾಧ್ಯತೆ. ಆರ್ಥಿಕ ಲಾಭ ಸಾಧಾರಣ. ವ್ಯಾಪಾರ-ವ್ಯವಹಾರದಲ್ಲಿ ಮಿಶ್ರ ಫಲ. ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಕಟಕ: ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೀರ್ತಿ ಸಿಗಲಿದೆ. ಆರ್ಥಿಕವಾಗಿ ಲಾಭ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಹಳೆಯ ಸ್ನೇಹಿತರು, ಕುಟುಂಬದ ಆಪ್ತರೊಂದಿಗೆ ಸಮಯ ಕಳೆಯುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

Horoscope Today

ಸಿಂಹ: ಆರೋಗ್ಯದ ಕುರಿತು ಕಾಳಜಿ ಅವಶ್ಯಕ. ಒತ್ತಡದಿಂದ ಹೊರಬರಲು ವ್ಯಸನಗಳಿಗೆ ಬಲಿಯಾಗುವುದು ಬೇಡ. ನಿಮ್ಮದೇ ಆದ ದಾರಿಯನ್ನು ಕಂಡುಕೊಳ್ಳಿ. ಆರ್ಥಿಕವಾಗಿ ಕೊಂಚ ಲಾಭವಿದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಹೊಸ ಭರವಸೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

Horoscope Today

ಕನ್ಯಾ: ಶುಭ ಕಾರ್ಯಗಳಿಗಾಗಿ ಖರ್ಚು ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಕಾರಣಾಂತರಗಳಿಂದ ಒತ್ತಡ. ಜವಾಬ್ದಾರಿಗಳು ಹೆಚ್ಚಾಗಲಿದೆ. ಇಂದು ನೀವು ಸಣ್ಣಪುಟ್ಟ ಕಾರಣಗಳಿಗೂ ಕೋಪದಿಂದ ವರ್ತಿಸುವ ಸಾಧ್ಯತೆ. ಆತುರದಲ್ಲಿ ಮಾತುಗಳನ್ನಾಡುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

Horoscope Today

ತುಲಾ: ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬದ ಹಿರಿಯರಿಂದ ಒತ್ತಡ. ಹಣಕಾಸು,ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ಆರ್ಥಿಕವಾಗಿ ಲಾಭಗಳಿಸುವಿರಿ. ಹಿಂದೆ ನೀಡಿದ ಸಾಲ ಮರಳುವ ಸಾಧ್ಯತೆ. ಆಪ್ತರಿಂದ ಸಲಹೆ ಸಹಕಾರ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ವೃಶ್ಚಿಕ: ಸಂಗಾತಿಯ ಆರೋಗ್ಯದ ಸಲವಾಗಿ ಖರ್ಚು. ವೃತಾ ಕಾಲಹರಣ ಮಾಡುವ ಆಲೋಚನೆಗಳಿಂದ ದೂರವಿರಿ. ಸಹೋದ್ಯೋಗಿಗಳಿಂದ ಕಿರಿಕಿರಿ. ವ್ಯಾಪಾರ ವ್ಯವಹಾರ ಸಾಧಾರಣ. ಹೂಡಿಕೆಯ ವ್ಯವಹಾರಗಳಲ್ಲಿ ಪ್ರಗತಿ. ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 7

Horoscope Today

ಧನಸ್ಸು: ಆಪ್ತರಿಂದ ಬೆಂಬಲ. ಕೆಲಸ ಕಾರ್ಯಗಳಲ್ಲಿ ಪ್ರಗತಿ. ಆಪ್ತರಿಂದ ಹಣದ ಸಹಾಯದ ಕೋರಿಕೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮಕರ: ಉತ್ಸಾಹಭರಿತ ಜೀವನ. ಆರ್ಥಿಕವಾಗಿ ಲಾಭ. ಹೂಡಿಕೆ ವ್ಯವಹಾರಗಳಲ್ಲಿ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ. ಯಾವುದಾದರೂ ಸಭೆ-ಸಮಾರಂಭಗಳಿಗೆ ಭಾಗವಹಿಸಲು ಆಮಂತ್ರಣ. ನಿರೀಕ್ಷೆಯ ಹೊಸ ಭರವಸೆಗಳು ಮೂಡಲಿವೆ. ಆಪ್ತರೊಂದಿಗೆ ಮಾತುಕತೆ. ಕುಟುಂಬದ ಸದಸ್ಯರಿಗೆ ಸಲಹೆ ಸಹಕಾರ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಕುಂಭ: ಇತರರನ್ನು ಟೀಕಿಸುತ್ತಾ ಸಮಯ ವ್ಯರ್ಥ ಮಾಡುವುದು ಬೇಡ. ಭೂಮಿಗೆ ಸಂಬಂಧಿಸಿದಂತೆ ವ್ಯಾಪಾರ ವ್ಯವಹಾರದಲ್ಲಿ ಲಾಭ. ಪ್ರಯಾಣ ಮಾಡುವ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಮೀನ: ಆರೋಗ್ಯ ಪರಿಪೂರ್ಣ. ಉದ್ಯೋಗಕ್ಕೆ ಸಂಬಂಧಿಸಿದಂತೆ ಖರ್ಚು. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ನಿಮ್ಮ ನಿರೀಕ್ಷೆಗೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ. ಕುಟುಂಬದ ಸದಸ್ಯರಿಂದ ಒತ್ತಡ. ಸಂಗಾತಿಯ ವರ್ತನೆ ನಿಮ್ಮ ಖ್ಯಾತಿಯ ಮೇಲೆ ಪರಿಣಾಮ ಬೀರಬಹುದು. ಆರೋಗ್ಯ ಪರಿಪೂರ್ಣ. ದಿಢೀರ್‌ ಧನಲಾಭ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ | Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Prajwal Revanna Case: ಪ್ರಜ್ವಲ್‌ ಪ್ರತ್ಯಕ್ಷವಾದ ಬೆನ್ನಲ್ಲೇ ನಿರೀಕ್ಷಣಾ ಜಾಮೀನಿಗೆ ಭವಾನಿ ರೇವಣ್ಣ ಅರ್ಜಿ

Prajwal Revanna Case: ಲೈಂಗಿಕ ದೌರ್ಜನ್ಯ ಸಂತ್ರಸ್ತೆ ಕಿಡ್ನ್ಯಾಪ್‌ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ಗೆ ಭವಾನಿ ರೇವಣ್ಣ ಅವರು ಅರ್ಜಿ ಸಲ್ಲಿಸಿದ್ದಾರೆ. ಸಂತ್ರಸ್ತೆ ಅಪಹರಣಕ್ಕೆ ಕುಮ್ಮಕ್ಕು ನೀಡಿದ ಆರೋಪ ಇವರ ಮೇಲಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್‌ ರೇವಣ್ಣ, ವಿಚಾರಣೆಗೆ ಹಾಜರಾಗುವೆ ಎಂದು ವಿಡಿಯೊ ಮಾಡಿ ಹರಿಬಿಟ್ಟ ಬೆನ್ನಲ್ಲೇ ಅವರ ತಾಯಿ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಲೈಂಗಿಕ ದೌರ್ಜನ್ಯ ಸಂತ್ರಸ್ತೆ ಕಿಡ್ನ್ಯಾಪ್‌ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ಗೆ ಅವರು ಅರ್ಜಿ ಸಲ್ಲಿಸಿದ್ದಾರೆ.

ಕೆ.ಆರ್‌.ನಗರದ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನಲ್ಲಿ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಹಾಗೂ ಭವಾನಿ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ಲೈಂಗಿಕ ದೌರ್ಜನ್ಯ ಮತ್ತು ಕಿಡ್ನ್ಯಾಪ್‌ ಕೇಸ್‌ನಲ್ಲಿ ಈಗಾಗಲೇ ಮಾಜಿ ಸಚಿವ ರೇವಣ್ಣ ಅವರಿಗೆ ಬೇಲ್‌ ಸಿಕ್ಕಿದೆ. ಈ ನಡುವೆ ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಪ್ರಜ್ವಲ್‌ ರೇವಣ್ಣ ಅವರು ವಿದೇಶದಿಂದ ಮೇ 31ರಂದು ಬೆಂಗಳೂರಿಗೆ ಆಗಮಿಸುವುದಾಗಿ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ತಾಯಿ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ಇತ್ತೀಚೆಗೆ ಚಾಮರಾಜನಗರದ ಸಂತ್ರಸ್ತೆಯ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿ ರೇವಣ್ಣ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು. ಆರು ದಿನಗಳ ನಿರಂತರ ಕಾನೂನು ಸಮರದ ಬಳಿಕ ಅವರಿಗೆ ಮೇ 13ರಂದು ಜಾಮೀನು ದೊರೆತಿತ್ತು. ನಂತರ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ (physical abuse) ಪ್ರಕರಣದಲ್ಲೂ ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna case) ಅವರಿಗೆ ಮೇ 20ರಂದು ಜಾಮೀನು (Bail) ಮಂಜೂರಾಗಿತ್ತು. ಈ ನಡುವೆ ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣ ಅವರಿಗೂ ನೋಟಿಸ್‌ ನೀಡಲಾಗಿತ್ತು.

ಇದನ್ನೂ ಓದಿ | Prajwal Revanna Case: ವಿಚಾರಣೆಗೆ ಬರುವ ಪ್ರಜ್ವಲ್‌ ನಿರ್ಧಾರ ಸ್ವಾಗತಿಸುವೆ ಎಂದ ಸಚಿವ ಪರಮೇಶ್ವರ್‌

ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ಆರ್.‌ ನಗರದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಕುಮ್ಮಕ್ಕು ಕೊಟ್ಟ ಆರೋಪವನ್ನು ಭವಾನಿ ರೇವಣ್ಣ ಹೊತ್ತಿದ್ದಾರೆ. ಮೊದಲ ನೋಟಿಸ್‌ಗೆ ಉತ್ತರಿಸದ ಹಿನ್ನೆಲೆಯಲ್ಲಿ ಇತ್ತೀಚೆಗೆ ಎರಡನೇ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಭವಾನಿ ಅವರು ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದರು. ಇದೀಗ ಮಗ ಪ್ರಜ್ವಲ್‌ ಪ್ರಜ್ವಲ್‌ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಭವಾನಿ ರೇವಣ್ಣ ಅರ್ಜಿ ಸಲ್ಲಿಸಿದ್ದಾರೆ.

ಮೇ 31ಕ್ಕೆ ಪ್ರಜ್ವಲ್‌ ರೇವಣ್ಣ ಎಸ್‌ಐಟಿ ವಿಚಾರಣೆ ಆಗಮನ

Prajwal revanna Case

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್‌ ರೇವಣ್ಣ (Prajwal Revanna Video) ಭಾರತಕ್ಕೆ ಬರುವುದಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತು ಪ್ರಜ್ವಲ್‌ ರೇವಣ್ಣ ಅವರು ಹೊಸ ವಿಡಿಯೊ ಬಿಡುಗಡೆ ಮಾಡಿದ್ದು, “ಮೇ 31ರಂದು ಭಾರತಕ್ಕೆ ಬಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

“ನಾನು ಎಲ್ಲಿದ್ದೇನೆ ಎಂಬ ಮಾಹಿತಿ ನೀಡಲು ಬಂದಿದ್ದೇನೆ. ನಾನು ಎಲ್ಲಿಯೂ ಓಡಿ ಹೋಗಿಲ್ಲ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ಷಡ್ಯಂತ್ರ ರೂಪಿಸಲಾಗಿದೆ. ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ಕೆಲವು ಶಕ್ತಿಗಳು ಒಟ್ಟಾಗಿ ನನ್ನ ವಿರುದ್ಧ ಪಿತೂರಿ ನಡೆಸಿವೆ. ಇಷ್ಟಾದರೂ ನಾನು ನನ್ನ ತಾತ, ಜೆಡಿಎಸ್‌ ಕಾರ್ಯಕರ್ತರಿಗೆ ಕ್ಷಮೆಯಾಚಿಸುತ್ತೇನೆ. ನಾನು ಮೇ 31ರಂದು ಬೆಳಗ್ಗೆ 10 ಗಂಟೆಗೆ ಭಾರತಕ್ಕೆ ಬಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುತ್ತೇನೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ಆದರೂ, ನಾನು ಭಾರತಕ್ಕೆ ಬಂದು ವಿಚಾರಣೆ ಎದುರಿಸುತ್ತೇನೆ” ಎಂಬುದಾಗಿ ಪ್ರಜ್ವಲ್‌ ರೇವಣ್ಣ ವಿಡಿಯೊದಲ್ಲಿ ತಿಳಿಸಿದ್ದಾರೆ.

“ನಾನು ಇದೇ ಶುಕ್ರವಾರ ಕರ್ನಾಟಕಕ್ಕೆ ಆಗಮಿಸಿ, ಎಸ್‌ಐಟಿ ತನಿಖೆಗೆ ಸಹಕಾರ ನೀಡುತ್ತೇನೆ. ನನಗೆ ಕಾನೂನಿನ ಮೇಲೆ ಅಪಾರ ಗೌರವವಿದೆ. ನನ್ನ ವಿರುದ್ಧ ಮಾಡಿದ ಆರೋಪಗಳನ್ನು ಕೇಳಿ ನನಗೆ ಶಾಕ್‌ ಆಯಿತು. ಇದೇ ಕಾರಣಕ್ಕಾಗಿ ನಾನು ಕೆಲ ದಿನಗಳಿಂದ ಐಸೋಲೇಷನ್‌ನಲ್ಲಿ ಇದ್ದೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ನಾನು ವಿದೇಶಕ್ಕೆ ಬಂದ ಬಳಿಕ ಪ್ರಕರಣ ತಿಳಿಯಿತು. ನನ್ನ ವಿರುದ್ಧ ರಾಹುಲ್‌ ಗಾಂಧಿ ಸೇರಿ ಎಲ್ಲರೂ ವೇದಿಕೆ ಮೇಲೆಯೇ ಹೇಳಿಕೆಗಳನ್ನು ಕೊಟ್ಟರು. ಆ ಮೂಲಕ ರಾಜಕೀಯ ಪಿತೂರಿ ನಡೆಸಿದರು. ಆದರೂ, ನಾನು ರಾಜ್ಯಕ್ಕೆ ಆಗಮಿಸಿ ತನಿಖೆಗೆ ಸಹಕಾರ ನೀಡುತ್ತೇನೆ. ನಾನು ಈ ಪ್ರಕರಣದಿಂದ ಆರೋಪಮುಕ್ತನಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ” ಎಂಬುದಾಗಿ ಹೇಳಿದ್ದಾರೆ.

ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಅವರ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ಅನ್ನು ರದ್ದುಗೊಳಿಸಬೇಕು ಎಂದು ಸಿದ್ದರಾಮಯ್ಯ ಅವರು ಎರಡು ಬಾರಿ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಿದೆ. ಇನ್ನು, ಇದರ ಭಾಗವಾಗಿಯೇ ಕೇಂದ್ರ ಸರ್ಕಾರವು ಪ್ರತಿಕ್ರಿಯೆ ಕೋರಿ ಪ್ರಜ್ವಲ್‌ ರೇವಣ್ಣಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ. ಶೋಕಾಸ್‌ ನೋಟಿಸ್‌ಗೂ ಉತ್ತರ ನೀಡದಿದ್ದರೆ, ಕೇಂದ್ರ ಸರ್ಕಾರವು ಪಾಸ್‌ಪೋರ್ಟ್‌ ರದ್ದುಗೊಳಿಸಲಿದೆ ಎಂದು ಹೇಳಲಾಗುತ್ತಿತ್ತು. ಇದರ ಬೆನ್ನಲ್ಲೇ ಪ್ರಜ್ವಲ್‌ ರೇವಣ್ಣ ಅವರು ವಿಡಿಯೊ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಅಜ್ಞಾತವಾಸಕ್ಕೆ ಒಂದು ತಿಂಗಳು, ಎಲ್ಲಿದ್ದೀಯಪ್ಪಾ ಪ್ರಜ್ವಲ್?

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ಅಪಹರಣ ಸೇರಿ ಹಲವು ಪ್ರಕರಣಗಳಲ್ಲಿ ಪ್ರಜ್ವಲ್‌ ರೇವಣ್ಣ ಪ್ರಮುಖ ಆರೋಪಿಯಾಗಿದ್ದಾರೆ. ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಅವರ ತಂದೆ ಎಚ್‌.ಡಿ.ರೇವಣ್ಣ ಅವರು ಕೂಡ ಜೈಲುವಾಸ ಅನುಭವಿಸಿ, ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇಷ್ಟಾದರೂ, ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರದ ಕಾರಣ ಅವರ ತಾತ ಎಚ್‌.ಡಿ.ದೇವೇಗೌಡ ಅವರು ಬಹಿರಂಗ ಪತ್ರ ಬರೆದಿದ್ದರು. ನನ್ನ ಮೇಲೆ ಗೌರವ ಇದ್ದರೆ ವಾಪಸ್‌ ಬಾ ಎಂದಿದ್ದರು.

Continue Reading

ದೇಶ

Hemchand Manjhi: ಕಳೆದ ತಿಂಗಳು ಪಡೆದಿದ್ದ ಪದ್ಮಶ್ರೀ ಪ್ರಶಸ್ತಿ ವಾಪಸ್‌ ನೀಡಿದ ಹೇಮಚಂದ್‌ ಮಾಂಝಿ; ಏಕೆ?

Hemchand Manjhi: ನಾರಾಯಣಪುರ ಜಿಲ್ಲೆಯ ಛೋಟೆಡೊಂಗರ್‌ ಗ್ರಾಮದವರಾದ ಹೇಮಚಂದ್‌ ಮಾಂಝಿ ಅವರು ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಔಷಧ ಪದ್ಧತಿ (ಆಯುರ್ವೇದ, ಸಿದ್ಧ, ಹೋಮಿಯೋಪತಿ, ಯುನಾನಿ) ಮೂಲಕ ಜನರ ರೋಗಗಳನ್ನು ನಿವಾರಣೆ ಮಾಡಿದ್ದಾರೆ. ಇವರ ಸಮಾಜ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು.

VISTARANEWS.COM


on

Hemchand Manjhi
Koo

ರಾಯ್‌ಪುರ:‌ ದೇಶದಲ್ಲಿ ಮತ್ತೆ ಪ್ರಶಸ್ತಿ ವಾಪ್ಸಿ ಅಭಿಯಾನ ಆರಂಭವಾಗಿದೆ. ಛತ್ತೀಸ್‌ಗಢದ ಪ್ರಮುಖ ಆಯುರ್ವೇದ ವೈದ್ಯ ಹೇಮಚಂದ್‌ ಮಾಂಝಿ (Hemchand Manjhi) ಅವರು ಕಳೆದ ತಿಂಗಳಷ್ಟೇ ಸ್ವೀಕರಿಸಿದ್ದ ಪದ್ಮಶ್ರೀ ಪ್ರಶಸ್ತಿಯನ್ನು (Padma Shri Award) ಕೇಂದ್ರ ಸರ್ಕಾರಕ್ಕೆ ಹಿಂತಿರುಗಿಸಲು ತೀರ್ಮಾನಿಸಿದ್ದಾರೆ. ಛತ್ತೀಸ್‌ಗಢದ ನಾರಾಯಣಪುರದಲ್ಲಿ ಮಾವೋವಾದಿಗಳು (Naxalites) ಅವರಿಗೆ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸಲು ಅವರು ತೀರ್ಮಾನಿಸಿದ್ದಾರೆ.

ನಾರಾಯಣಪುರ ಜಿಲ್ಲೆಯ ಛೋಟೆಡೊಂಗರ್‌ ಗ್ರಾಮದವರಾದ ಹೇಮಚಂದ್‌ ಮಾಂಝಿ ಅವರು ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಔಷಧ ಪದ್ಧತಿ (ಆಯುರ್ವೇದ, ಸಿದ್ಧ, ಹೋಮಿಯೋಪತಿ, ಯುನಾನಿ) ಮೂಲಕ ಜನರ ರೋಗಗಳನ್ನು ನಿವಾರಣೆ ಮಾಡಿದ್ದಾರೆ. ಇವರ ಸಮಾಜ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು. ಕಳೆದ ಏಪ್ರಿಲ್‌ನಲ್ಲಿಯೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಮಚಂದ್‌ ಮಾಂಝಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು. ಆದರೀಗ, ಒಂದೇ ತಿಂಗಳಲ್ಲಿ ಹೇಮಚಂದ್‌ ಮಾಂಝಿ ಅವರು ಪ್ರಶಸ್ತಿ ಹಿಂತಿರುಗಿಸುವುದಾಗಿ ಘೋಷಿಸಿದ್ದಾರೆ.

ಪ್ರಶಸ್ತಿ ವಾಪಸ್‌ಗೆ ಕಾರಣವೇನು?

ನಾರಾಯಣಪುರ ಜಿಲ್ಲೆಯ ಹಲವೆಡೆ ಮಾವೋವಾದಿಗಳ ಉಪಟಳ ಜಾಸ್ತಿಯಾಗಿದೆ. ಇತ್ತೀಚೆಗೆ ಚಮೇಲಿ ಹಾಗೂ ಗೌರ್‌ದಂಡ್‌ ಗ್ರಾಮಗಳಲ್ಲಿ ಎರಡು ಮೊಬೈಲ್‌ ಟವರ್‌ಗಳಿಗೆ ಮಾವೋವಾದಿಗಳು ಬೆಂಕಿ ಹಚ್ಚಿದ್ದಾರೆ. ಅಷ್ಟೇ ಅಲ್ಲ, ಹೇಮಚಂದ್‌ ಮಾಂಝಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುತ್ತಿರುವ ಬ್ಯಾನರ್‌ಗಳನ್ನು ನಕ್ಸಲರು ಎಲ್ಲೆಡೆ ಅಳವಡಿಸಿದ್ದಾರೆ. ಹೇಮಚಂದ್‌ ಮಾಂಝಿ ಅವರ ವಿರುದ್ಧ ಘೋಷಣೆ ಇರುವ ಬ್ಯಾನರ್‌ಗಳನ್ನು ಕೂಡ ಹಾಕಿದ್ದಾರೆ. ಇದರಿಂದಾಗಿ ಮನನೊಂದು ಹೇಮಚಂದ್‌ ಮಾಂಝಿ ಅವರು ಪ್ರಶಸ್ತಿ ವಾಪಸ್‌ ನೀಡುವ ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹೇಮಚಂದ್‌ ಮಾಂಝಿಗೆ ಜೀವ ಬೆದರಿಕೆ

ಮಾವೋವಾದಿಗಳು ಹೇಮಚಂದ್‌ ಮಾಂಝಿ ಅವರಿಗೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ. “ನನಗೆ ಹೇಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿತು ಎಂಬುದು ನಕ್ಸಲರ ಪ್ರಶ್ನೆಯಾಗಿದೆ. ನಾನು ಕಳೆದ ಹಲವು ದಶಕಗಳಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಗಳನ್ನು ಜನರಿಗೆ ನೀಡುವ ಮೂಲಕ ಅವರ ಸೇವೆ ಮಾಡಿದ್ದೇನೆ. ಕ್ಯಾನ್ಸರ್‌ಗೂ ಔಷಧ ನೀಡಿದ್ದೇನೆ. ಇದನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆಯೇ ಹೊರತು, ನಾನಾಗೇ ಕೇಳಿ ಪಡೆದಿಲ್ಲ. ಇದಕ್ಕೂ ಮೊದಲು ನಕ್ಸಲರು ನನ್ನ ಸಂಬಂಧಿಯನ್ನು ಹತ್ಯೆ ಮಾಡಿದ್ದರು. ಈಗ ಇಡೀ ಕುಟುಂಬವು ಭಯದಲ್ಲಿಯೇ ಕಾಲ ಕಳೆಯುತ್ತಿದೆ. ಹಾಗಾಗಿ, ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸಲು ತೀರ್ಮಾನಿಸಿದ್ದೇನೆ” ಎಂದು ಹೇಮಚಂದ್ ಮಾಂಝಿ ತಿಳಿಸಿದ್ದಾರೆ.

ಇದನ್ನೂ ಓದಿ: ಖೇಲ್‌ರತ್ನ, ಅರ್ಜುನ ಪ್ರಶಸ್ತಿ ವಾಪಸ್​ ಮಾಡುವ ನಿರ್ಧಾರ ಘೋಷಿಸಿ ಮೋದಿಗೆ ಪತ್ರ ಬರೆದ ವಿನೇಶ್‌ ಫೋಗಟ್

Continue Reading

ದೇಶ

Rahul Gandhi: ರಾಹುಲ್‌ ಗಾಂಧಿ ಜಿಂದಾಬಾದ್‌ ಎನ್ನುತ್ತಲೇ ಕುಸಿದ ವೇದಿಕೆ; ತಬ್ಬಿಬ್ಬಾದ ಕಾಂಗ್ರೆಸ್‌ ನಾಯಕ, ವಿಡಿಯೊ ಇಲ್ಲಿದೆ

Rahul Gandhi: ನಾಯಕರು ವೇದಿಕೆ ಮೇಲೆ ನಿಂತು, ಜನರತ್ತ ಕೈಬೀಸಿ ಬಲ ಪ್ರದರ್ಶನ ಮಾಡುವಾಗಲೇ ವೇದಿಕೆ ಕುಸಿದಿದೆ. ಕೆಲ ಸೆಕೆಂಡ್‌ಗಳವರೆಗೆ ಗಾಬರಿಯಾದ ರಾಹುಲ್‌ ಗಾಂಧಿ ಅವರು ಕೂಡಲೇ ಮೀಸಾ ಭಾರ್ತಿ ಅವರು ಸರಿಯಾಗಿ ನಿಲ್ಲಲು ನೆರವು ನೀಡಿದರು. ಕೆಲವೇ ಕ್ಷಣಗಳಲ್ಲಿ ವೇದಿಕೆಯು ಎರಡು ಬಾರಿ ಕುಸಿದ ಕಾರಣ ಜನರಲ್ಲೂ ಕೆಲ ಕಾಲ ಆತಂಕ ಮೂಡಿತ್ತು.

VISTARANEWS.COM


on

Rahul Gandhi
Koo

ಪಟನಾ: ಲೋಕಸಭೆ ಚುನಾವಣೆಯ (Lok Sabha Election 2024) ಆರು ಹಂತಗಳ ಮತದಾನ ಮುಕ್ತಾಯಗೊಂಡಿದ್ದು, ಜೂನ್‌ 1ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಹಾಗಾಗಿ, ಕೊನೆಯ ಹಂತದ ಚುನಾವಣೆಗಾಗಿ ರಾಜಕೀಯ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇದೇ ರೀತಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಬಿಹಾರದಲ್ಲಿ (Bihar) ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ. ಇನ್ನು ರಾಹುಲ್‌ ಗಾಂಧಿ ಅವರು ಸಮಾವೇಶದಲ್ಲಿ ಪಾಲ್ಗೊಳ್ಳುವ ವೇಳೆ ಅವರಿದ್ದ ವೇದಿಕೆ ಕುಸಿದಿದ್ದು, ಸ್ವಲ್ಪರದರಲ್ಲಿಯೇ ಕಾಂಗ್ರೆಸ್‌ ನಾಯಕ ಪಾರಾಗಿದ್ದಾರೆ.

ಪಟನಾ ಹೊರವಲಯದಲ್ಲಿರುವ ಪಾಲಿಗಂಜ್‌ನಲ್ಲಿ ಚುನಾವಣೆ ಸಮಾವೇಶ ಆಯೋಜಿಸಲಾಗಿತ್ತು. ಬೃಹತ್‌ ಸಮಾವೇಶದ ಹಿನ್ನೆಲೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ಇಂಡಿಯಾ ಒಕ್ಕೂಟದ ಮಿತ್ರಪಕ್ಷ, ಆರ್‌ಜೆಡಿ ಅಭ್ಯರ್ಥಿ ಮೀಸಾ ಭಾರ್ತಿ ಪರವಾಗಿ ಮತಯಾಚಿಸಲು ರಾಹುಲ್‌ ಗಾಂಧಿ ಆಗಮಿಸಿದ್ದರು. ಇದೇ ವೇಳೆ, ರಾಹುಲ್‌ ಗಾಂಧಿ ಹಾಗೂ ಮೀಸಾ ಭಾರ್ತಿ ಸೇರಿ ಹಲವು ನಾಯಕರು ವೇದಿಕೆ ಮೇಲೆ ನಿಂತಿದ್ದರು. ಆಗ, ವೇದಿಕೆಯು ಕುಸಿದಿದೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವೇದಿಕೆ ಕುಸಿದ ವಿಡಿಯೊ ಇಲ್ಲಿದೆ

ನಾಯಕರು ವೇದಿಕೆ ಮೇಲೆ ನಿಂತು, ಜನರತ್ತ ಕೈಬೀಸಿ ಬಲ ಪ್ರದರ್ಶನ ಮಾಡುವಾಗಲೇ ವೇದಿಕೆ ಕುಸಿದಿದೆ. ಕೆಲ ಸೆಕೆಂಡ್‌ಗಳವರೆಗೆ ಗಾಬರಿಯಾದ ರಾಹುಲ್‌ ಗಾಂಧಿ ಅವರು ಕೂಡಲೇ ಮೀಸಾ ಭಾರ್ತಿ ಅವರು ಸರಿಯಾಗಿ ನಿಲ್ಲಲು ನೆರವು ನೀಡಿದರು. ಇನ್ನೇನು ಸ್ಟೇಜ್‌ನಿಂದ ಹೊರಡಬೇಕು ಎನ್ನುವರಷ್ಟರಲ್ಲಿ ವೇದಿಕೆಯು ಮತ್ತಷ್ಟು ಕುಸಿಯಿತು. ಆಗ ರಾಹುಲ್‌ ಗಾಂಧಿ ಅವರು ನಗುತ್ತಲೇ ಜನರತ್ತ ಕೈಬೀಸಿದರು. ವೇದಿಕೆಯು ತುಂಬ ಎತ್ತರದಲ್ಲಿ ಇರದ ಕಾರಣ ಯಾರಿಗೂ ಗಾಯಗಳಾಗಿಲ್ಲ ಎಂಬುದಾಗಿ ತಿಳಿದುಬಂದಿದೆ.

ಬಿಹಾರದಲ್ಲಿ ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳು ಒಗ್ಗೂಡಿ ಚುನಾವಣೆ ಕಣಕ್ಕಿಳಿದಿವೆ. ಆರ್‌ಜೆಡಿಯು 26 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್‌ 9, ಸಿಪಿಐ (ಎಂಎಲ್) ಹಾಗೂ ಸಿಪಿಎಂ ಪಕ್ಷಗಳು ತಲಾ ಒಂದು ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿವೆ. ನಾಲ್ಕೂ ಪಕ್ಷಗಳು ಒಗ್ಗೂಡಿ ಎನ್‌ಡಿಎ ಮೈತ್ರಿಕೂಟಕ್ಕೆ ಸೆಡ್ಡು ಹೊಡೆಯಲು ತೀರ್ಮಾನಿಸಿವೆ. ಹಾಗಾಗಿ, ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರು ಬಿಹಾರದಲ್ಲಿ ಮೀಸಾ ಭಾರ್ತಿ ಅವರ ಪರವಾಗಿ ಪ್ರಚಾರ ಕೈಗೊಂಡಿದ್ದಾರೆ. ಜೂನ್‌ 1ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

Lok Sabha Election: Stage Collapses At Rahul Gandhi’s Bihar Poll Rally With Misa Bharti

Continue Reading

ಕರ್ನಾಟಕ

Prajwal Revanna Video: ಪ್ರಜ್ವಲ್‌ ಪ್ರತ್ಯಕ್ಷನಾಗಿದ್ದಕ್ಕೆ ಸಮಾಧಾನ ಆಯ್ತು ಎಂದ ಎಚ್‌ಡಿಕೆ; ಫಸ್ಟ್‌ ರಿಯಾಕ್ಷನ್‌ ಹೀಗಿದೆ

Prajwal Revanna Video: ವಿದೇಶದಲ್ಲಿದ್ದುಕೊಂಡೇ ಪ್ರಜ್ವಲ್‌ ರೇವಣ್ಣ ವಿಡಿಯೊ ಬಿಡುಗಡೆ ಮಾಡಿದ್ದಾರೆ. “ರಾಜಕೀಯ ಬೆಳವಣಿಗೆ ಸಹಿಸಲಾಗದೆ ಷಡ್ಯಂತ್ರ ರೂಪಿಸಲಾಗಿದೆ. ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ಕೆಲವು ಶಕ್ತಿಗಳು ಒಟ್ಟಾಗಿ ನನ್ನ ವಿರುದ್ಧ ಪಿತೂರಿ ನಡೆಸಿವೆ. ಇಷ್ಟಾದರೂ ನಾನು ನನ್ನ ತಾತ, ಜೆಡಿಎಸ್‌ ಕಾರ್ಯಕರ್ತರಿಗೆ ಕ್ಷಮೆಯಾಚಿಸುತ್ತೇನೆ. ನಾನು ಮೇ 31ರಂದು ಬೆಳಗ್ಗೆ 10 ಗಂಟೆಗೆ ಭಾರತಕ್ಕೆ ಬಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುತ್ತೇನೆ” ಎಂದಿದ್ದಾರೆ. ಇದಕ್ಕೆ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

VISTARANEWS.COM


on

Prajwal Revanna Video
Koo

ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾಗುತ್ತಲೇ ವಿದೇಶಕ್ಕೆ ತೆರಳಿ, ಕಳೆದ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ ಅವರು ವಿಡಿಯೊ (Prajwal Revanna Video) ಮೂಲಕ ಪ್ರತ್ಯಕ್ಷರಾಗಿದ್ದಾರೆ. ವಿದೇಶದಿಂದಲೇ ವಿಡಿಯೊ ಬಿಡುಗಡೆ ಮಾಡಿರುವ ಪ್ರಜ್ವಲ್‌ ರೇವಣ್ಣ, “ನಾನು ಎಲ್ಲೂ ತಲೆಮರೆಸಿಕೊಂಡಿಲ್ಲ. ಮೇ 31ರಂದು ಬೆಳಗ್ಗೆ ಬಂದು ಎಸ್‌ಐಟಿ ವಿಚಾರಣೆಗೆ ಹಾಜರಾಗುತ್ತೇನೆ. ನೆಲದ ಕಾನೂನು ಗೌರವಿಸಿ, ದೋಷಮುಕ್ತನಾಗಿ ಹೊರಬರುವ ವಿಶ್ವಾಸವಿದೆ” ಎಂದು ಅವರು ಹೇಳಿದ್ದಾರೆ. ಇದರ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರು ಪ್ರತಿಕ್ರಿಯಿಸಿದ್ದು, “ಪ್ರಜ್ವಲ್‌ ರೇವಣ್ಣನನ್ನು ನೋಡಿ ಸಮಾಧಾನ ಅಗಿದೆ” ಎಂದು ತಿಳಿಸಿದ್ದಾರೆ.

“ಪ್ರಕರಣದ ಕುರಿತು ಎಸ್‌ಟಿ ತನಿಖೆ ನಡೆಸುತ್ತಿದೆ, ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡೋಣ. ಪ್ರಜ್ವಲ್‌ ರೇವಣ್ಣನನ್ನು ನೋಡಿ ನನಗೆ ಈಗ ಸಮಾಧಾನ ಆಗಿದೆ. ಪ್ರಕರಣದ ಬಗ್ಗೆ ಎಚ್.ಡಿ.ದೇವೇಗೌಡರು ಮಾತನಾಡಿದ್ದಾರೆ. ದೇವೇಗೌಡರು ಪ್ರಜ್ವಲ್ ರೇವಣ್ಣಗೆ ಮನವಿ ಹಾಗೂ ಎಚ್ಚರಿಕೆ ಕೊಟ್ಟಿದ್ದರು. ಅದರಂತೆ ಈಗ ಭಾರತಕ್ಕೆ ವಾಪಸ್‌ ಆಗುವುದಾಗಿ ಪ್ರಜ್ವಲ್‌ ರೇವಣ್ಣ ಹೇಳಿದ್ದಾನೆ. ಎಸ್‌ಐಟಿ ವಿಚಾರಣೆ ಬಳಿಕ ಏನಾಗುತ್ತದೆ ಎಂಬುದನ್ನು ನೋಡೋಣ” ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ವಿಡಿಯೊದಲ್ಲಿ ಏನಿದೆ?

“ನಾನು ಎಲ್ಲಿದ್ದೇನೆ ಎಂಬ ಮಾಹಿತಿ ನೀಡಲು ಬಂದಿದ್ದೇನೆ. ನಾನು ಎಲ್ಲಿಯೂ ಓಡಿ ಹೋಗಿಲ್ಲ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ಷಡ್ಯಂತ್ರ ರೂಪಿಸಲಾಗಿದೆ. ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ಕೆಲವು ಶಕ್ತಿಗಳು ಒಟ್ಟಾಗಿ ನನ್ನ ವಿರುದ್ಧ ಪಿತೂರಿ ನಡೆಸಿವೆ. ಇಷ್ಟಾದರೂ ನಾನು ನನ್ನ ತಾತ, ಜೆಡಿಎಸ್‌ ಕಾರ್ಯಕರ್ತರಿಗೆ ಕ್ಷಮೆಯಾಚಿಸುತ್ತೇನೆ. ನಾನು ಮೇ 31ರಂದು ಬೆಳಗ್ಗೆ 10 ಗಂಟೆಗೆ ಭಾರತಕ್ಕೆ ಬಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುತ್ತೇನೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ಆದರೂ, ನಾನು ಭಾರತಕ್ಕೆ ಬಂದು ವಿಚಾರಣೆ ಎದುರಿಸುತ್ತೇನೆ” ಎಂಬುದಾಗಿ ಪ್ರಜ್ವಲ್‌ ರೇವಣ್ಣ ವಿಡಿಯೊದಲ್ಲಿ ತಿಳಿಸಿದ್ದಾರೆ.

“ನಾನು ಇದೇ ಶುಕ್ರವಾರ ಕರ್ನಾಟಕಕ್ಕೆ ಆಗಮಿಸಿ, ಎಸ್‌ಐಟಿ ತನಿಖೆಗೆ ಸಹಕಾರ ನೀಡುತ್ತೇನೆ. ನನಗೆ ಕಾನೂನಿನ ಮೇಲೆ ಅಪಾರ ಗೌರವವಿದೆ. ನನ್ನ ವಿರುದ್ಧ ಮಾಡಿದ ಆರೋಪಗಳನ್ನು ಕೇಳಿ ನನಗೆ ಶಾಕ್‌ ಆಯಿತು. ಇದೇ ಕಾರಣಕ್ಕಾಗಿ ನಾನು ಕೆಲ ದಿನಗಳಿಂದ ಐಸೋಲೇಷನ್‌ನಲ್ಲಿ ಇದ್ದೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ನಾನು ವಿದೇಶಕ್ಕೆ ಬಂದ ಬಳಿಕ ಪ್ರಕರಣ ತಿಳಿಯಿತು. ನನ್ನ ವಿರುದ್ಧ ರಾಹುಲ್‌ ಗಾಂಧಿ ಸೇರಿ ಎಲ್ಲರೂ ವೇದಿಕೆ ಮೇಲೆಯೇ ಹೇಳಿಕೆಗಳನ್ನು ಕೊಟ್ಟರು. ಆ ಮೂಲಕ ರಾಜಕೀಯ ಪಿತೂರಿ ನಡೆಸಿದರು. ಆದರೂ, ನಾನು ರಾಜ್ಯಕ್ಕೆ ಆಗಮಿಸಿ ತನಿಖೆಗೆ ಸಹಕಾರ ನೀಡುತ್ತೇನೆ. ನಾನು ಈ ಪ್ರಕರಣದಿಂದ ಆರೋಪಮುಕ್ತನಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ” ಎಂಬುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Prajwal Revanna Video: ನಾನು ‘ಅಮಾಯಕ’ ಎನ್ನುವ ಪ್ರಜ್ವಲ್‌ಗೆ ‘ವಿಸ್ತಾರ ನ್ಯೂಸ್‌’ 10 ಪ್ರಶ್ನೆಗಳು

Continue Reading
Advertisement
Prajwal Revanna Case
ಪ್ರಮುಖ ಸುದ್ದಿ16 mins ago

Prajwal Revanna Case: ಪ್ರಜ್ವಲ್‌ ಪ್ರತ್ಯಕ್ಷವಾದ ಬೆನ್ನಲ್ಲೇ ನಿರೀಕ್ಷಣಾ ಜಾಮೀನಿಗೆ ಭವಾನಿ ರೇವಣ್ಣ ಅರ್ಜಿ

Hemchand Manjhi
ದೇಶ33 mins ago

Hemchand Manjhi: ಕಳೆದ ತಿಂಗಳು ಪಡೆದಿದ್ದ ಪದ್ಮಶ್ರೀ ಪ್ರಶಸ್ತಿ ವಾಪಸ್‌ ನೀಡಿದ ಹೇಮಚಂದ್‌ ಮಾಂಝಿ; ಏಕೆ?

Prajwal Revanna Case
ಕರ್ನಾಟಕ1 hour ago

Prajwal Revanna Case: ವಿಚಾರಣೆಗೆ ಬರುವ ಪ್ರಜ್ವಲ್‌ ನಿರ್ಧಾರ ಸ್ವಾಗತಿಸುವೆ ಎಂದ ಸಚಿವ ಪರಮೇಶ್ವರ್‌

Rahul Gandhi
ದೇಶ1 hour ago

Rahul Gandhi: ರಾಹುಲ್‌ ಗಾಂಧಿ ಜಿಂದಾಬಾದ್‌ ಎನ್ನುತ್ತಲೇ ಕುಸಿದ ವೇದಿಕೆ; ತಬ್ಬಿಬ್ಬಾದ ಕಾಂಗ್ರೆಸ್‌ ನಾಯಕ, ವಿಡಿಯೊ ಇಲ್ಲಿದೆ

Karnataka Weather Forecast
ಮಳೆ1 hour ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

HairStyle Craze
ಫ್ಯಾಷನ್2 hours ago

Hairstyle Craze: ಸೋಷಿಯಲ್‌ ಮೀಡಿಯಾದಲ್ಲಿ ರಂಗೇರಿದ ಹೇರ್‌ ಸ್ಟೈಲ್ಸ್

Lok Sabha Election 2024
ಕರ್ನಾಟಕ2 hours ago

Lok Sabha Election 2024: ಲೋಕಸಭೆ ಚುನಾವಣೆ ಮತ ಎಣಿಕೆ; ಜೂ. 4ರಂದು ಬೆಂಗಳೂರಿನಲ್ಲಿ ನಿಷೇಧಾಜ್ಞೆ

Prajwal Revanna Video
ಕರ್ನಾಟಕ2 hours ago

Prajwal Revanna Video: ಪ್ರಜ್ವಲ್‌ ಪ್ರತ್ಯಕ್ಷನಾಗಿದ್ದಕ್ಕೆ ಸಮಾಧಾನ ಆಯ್ತು ಎಂದ ಎಚ್‌ಡಿಕೆ; ಫಸ್ಟ್‌ ರಿಯಾಕ್ಷನ್‌ ಹೀಗಿದೆ

Mouthwashes
ಆರೋಗ್ಯ2 hours ago

Mouthwashes: ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ? ಇದರ ಇತಿಮಿತಿ ಬಗ್ಗೆಯೂ ತಿಳಿದಿರಲಿ

Surya Prakash Maayi director dies
ಕಾಲಿವುಡ್2 hours ago

Surya Prakash: ʻಮಾಯಿʼ ಸಿನಿಮಾ ಖ್ಯಾತಿಯ ತಮಿಳು ನಿರ್ದೇಶಕ ಸೂರ್ಯ ಪ್ರಕಾಶ್ ಇನ್ನಿಲ್ಲ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ1 hour ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 day ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 day ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌