horoscope today read your daily horoscope predictions for april 20, 2023 - Vistara News

ಪ್ರಮುಖ ಸುದ್ದಿ

Horoscope Today : ಅಕ್ಷಯ ಅಮಾವಾಸ್ಯೆಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Horoscope Today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದಿನ ಪಂಚಾಂಗ (20-04-2023)

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ.

ತಿಥಿ: ಅಮಾವಾಸ್ಯೆ 09:41 ವಾರ: ಗುರುವಾರ
ನಕ್ಷತ್ರ: ಅಶ್ವಿನಿ 23:09 ಯೋಗ: ವಿಷ್ಕಂಭ 12:59
ಕರಣ: ನಾಗವಾನ್‌ 09:41 ಇಂದಿನ ವಿಶೇಷ: ಅಕ್ಷಯ ಅಮಾವಾಸ್ಯೆ
ಅಮೃತಕಾಲ: ಸಂಜೆ 04 ಗಂಟೆ 11 ನಿಮಿಷದಿಂದ 05 ಗಂಟೆ 44 ನಿಮಿಷದವರೆಗೆ.

ಸೂರ್ಯೋದಯ : 06:05 ಸೂರ್ಯಾಸ್ತ : 06:33

ರಾಹುಕಾಲ : ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ ಕಾಲ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ (Horoscope Today)

Horoscope Today

ಮೇಷ: ನಿಮ್ಮ ಹಾಸ್ಯದ ಮನೋಭಾವ ಇತರರನ್ನು ಆಕರ್ಷಿಸುವುದು. ಹಣಕಾಸು ಪ್ರಗತಿ ಉತ್ತಮ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ. ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವಿರಿ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

Horoscope Today

ವೃಷಭ: ವ್ಯವಹಾರದಲ್ಲಿ ಸಂಗಾತಿಯ ಹಸ್ತಕ್ಷೇಪ ನಿಮಗೆ ಕೋಪ ತರಿಸಬಹುದು, ತಾಳ್ಮೆಯಿಂದ ವರ್ತಿಸಿ. ಈ ಹಿಂದೆ ಕಾಡಿದ ವ್ಯಾಧಿ ಮರುಕಳಿಸುವ ಸಾಧ್ಯತೆ. ದಿನದ ಮಟ್ಟಿಗೆ ಖರ್ಚು ಹೆಚ್ಚು. ಅತಿಥಿಗಳ ಆಗಮನ ಹರ್ಷ ತರುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಮಿಥುನ: ನಡೆದು ಹೋದ ಘಟನೆಗಳನ್ನು ಮೆಲುಕು ಹಾಕುತ್ತಾ ಕಾಲಹರಣ ಮಾಡುವ ಬದಲು, ಮುಂದೆ ಆಗಬೇಕಾಗಿರುವ ಕೆಲಸಗಳ ಬಗ್ಗೆ ಗಮನ ನೀಡಿ. ದಿನದ ಮಟ್ಟಿಗೆ ಅನಿವಾರ್ಯ ಕಾರಣಗಳಿಂದ ಖರ್ಚು. ಅನೇಕ ವಿಚಾರಗಳಿಂದ ಒತ್ತಡಕ್ಕೆ ಒಳಾಗಾಗುವ ಸಾಧ್ಯತೆ. ಕೋಪದಿಂದ ಏನನ್ನು ಸಾಧಿಸಲಾಗದು ಎಂಬುದನ್ನು ನೆನಪಿಡಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಕಟಕ: ಹಣದ ಹರಿವು ಹೆಚ್ಚಾಗಲಿದೆ. ಇಂದು ನಿಮಗೆ ಮಾನಸಿಕ ನೆಮ್ಮದಿ ಸಿಗುವುದು. ಹೊಸ ಭರವಸೆಯ ಅವಕಾಶಗಳು ಹುಡುಕಿಕೊಂಡು ಬರುವವು. ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಫಲ ಸಿಗಲಿದೆ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಸಿಂಹ: ಕುಟುಂಬದ ಆಪ್ತರ ಹಾಗೂ ಸ್ನೇಹಿತರಿಂದ ಸೂಕ್ತ ಸಲಹೆ-ಸಹಕಾರ ಸಿಗುವುದು. ಒತ್ತಡದ ಜೀವನಕ್ಕೆ ಕೊಂಚ ಮಟ್ಟಿಗೆ ವಿಶ್ರಾಂತಿ ಸಿಗಲಿದೆ. ಹಣಕಾಸು ಪ್ರಗತಿ ಉತ್ತಮ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ, ಅಗತ್ಯವಿದ್ದಷ್ಟೆ ಮಾತನಾಡಿ, ಸಮಾಧಾನದಿಂದ ವರ್ತಿಸಿ. ಕೌಟುಂಬಿಕವಾಗಿ ಇಂದು ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಕನ್ಯಾ: ಅನೇಕ ವಿಷಯಗಳು ನಿಮಗೆ ಒತ್ತಡ ಉಂಟುಮಾಡುವ ಸಾಧ್ಯತೆ. ಖರ್ಚು ಹೆಚ್ಚಾಗುವ ಸಾಧ್ಯತೆ. ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದ ಅಸಹಕಾರದಿಂದ ಕಿರಿಕಿರಿ. ಹೀಗಾಗಿ ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆಪ್ತ ಸಂಬಂಧಿಕರಿಂದ ಸಹಾಯ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ಹಣಕಾಸು ವ್ಯವಹಾರಗಳಲ್ಲಿಯೂ ಪ್ರಗತಿ. ಹಳೆಯ ವಿಚಾರಗಳು ನಿಮ್ಮ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆ, ಎಚ್ಚರಿಕೆ ಇರಲಿ. ಉತ್ತಮ ಆರೋಗ್ಯ, ಉದ್ಯೋಗದಲ್ಲಿ ಸಾಧಾರಣ ಫಲ. ಕುಟುಂಬದ ಸಹಕಾರ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

Horoscope Today

ವೃಶ್ಚಿಕ: ವಾಹನ ಚಾಲನೆ ಮಾಡುವಾಗ ಆದಷ್ಟು ಎಚ್ಚರಿಕೆ ವಹಿಸಿ. ಆಪ್ತರ ಸಲಹೆಗಳನ್ನು ತಿರಸ್ಕಾರ ಭಾವದಿಂದ ನೋಡಬೇಡಿ. ವ್ಯತಿರಿಕ್ತ ಪರಿಣಾಮದಿಂದಾಗಿ ಸ್ನೇಹದಲ್ಲಿ ಬಿರುಕು ಮೂಡುವ ಸಾಧ್ಯತೆ. ಅನಗತ್ಯ ಖರ್ಚು ಹೆಚ್ಚು. ಆರೋಗ್ಯ ಸಾಧಾರಣ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಧನಸ್ಸು: ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಆತುರದಲ್ಲಿ ಅತಿರೇಕದ ಮಾತುಗಳು ಜಗಳ ತರಬಹುದು, ಸಮಾಧಾನದಿಂದ ವರ್ತಿಸಿ. ಅಮೂಲ್ಯ ವಸ್ತುಗಳು ಕೈತಪ್ಪುವ ಸಾಧ್ಯತೆ, ಎಚ್ಚರಿಕೆ ಇರಲಿ. ಕುಟುಂಬದ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರಿಕೆ ವಹಿಸಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಮಕರ: ಇಂದು ಆರೋಗ್ಯ ಉತ್ತಮ. ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳವಾಗುವ ಭರವಸೆ. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುಲು ಪ್ರಯತ್ನಿಸುವಿರಿ. ಸಮಾರಂಭದ ಆಮಂತ್ರಣ ಬರುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಕುಂಭ: ಆಹಾರದ ಕ್ರಮ ಆರೋಗ್ಯದಲ್ಲಿ ವ್ಯತ್ಯಾಸ ಮೂಡಿಸಬಹುದು. ಅಮೂಲ್ಯ ವಸ್ತುಗಳ ಬಗೆಗೆ ಕಾಳಜಿ ವಹಿಸಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಉದ್ಯೋಗದಲ್ಲಿ ಪ್ರಗತಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮೀನ: ಹಾಸ್ಯ ಪ್ರಜ್ಞೆಯಿಂದ ಕಾರ್ಯವನ್ನು ಸಾಧಿಸುವುದರಲ್ಲಿ ಯಶಸ್ಸು ಪಡೆಯುವಿರಿ. ಸಂಗಾತಿಯ ಹಸ್ತಕ್ಷೇಪ ನಿಮಗೆ ಮುಜುಗರ ಉಂಟು ಮಾಡುವ ಸಾಧ್ಯತೆ. ಉದ್ಯೋಗದಲ್ಲಿ ಭರವಸೆ ಮೂಡಲಿದೆ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಇದನ್ನೂ ಓದಿ : Prerane : ಲಕ್ಷಣಜ್ಞಾನ ಎಂದರೇನು? ಇದರ ಮಹತ್ವವೇನು ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ಬುಡಕಟ್ಟು ಮಹಿಳೆಯರಿಗೆ ಲೈಂಗಿಕ ಕಿರುಕುಳ; ಶಹಜಹಾನ್‌ನ 12 ಕೋಟಿ ರೂ. ಆಸ್ತಿ ಜಪ್ತಿ

ಶಹಜಹಾನ್‌ ಶೇಖ್‌ನನ್ನು ಸಿಬಿಐಗೆ ವಹಿಸಬೇಕು. ಪೊಲೀಸರು ಎಲ್ಲ ದಾಖಲೆಗಳನ್ನೂ ಸಿಬಿಐಗೆ ಕೊಡಬೇಕು ಎಂದು ಕೋಲ್ಕೊತಾ ಹೈಕೋರ್ಟ್‌ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

VISTARANEWS.COM


on

Mamata Banerjee And Shahjahan Sheikh
Koo

ಕೋಲ್ಕೊತಾ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ (Sandeshkhali Case) ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಭೂಮಿಯ ಅತಿಕ್ರಮಣ ಸೇರಿ ಹಲವು ಪ್ರಕರಣಗಲ್ಲಿ ಬಂಧಿತನಾಗಿರುವ ಟಿಎಂಸಿಯ ಉಚ್ಚಾಟಿತ ನಾಯಕ ಶಹಜಹಾನ್‌ ಶೇಖ್‌ನನ್ನು (Shahjahan Sheikh) ಸಿಬಿಐಗೆ ವಹಿಸಲು ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರವು ನಿರಾಕರಿಸಿದೆ. ಅಷ್ಟೇ ಅಲ್ಲ, ಕೋಲ್ಕೊತಾ ಹೈಕೋರ್ಟ್‌ (Calcutta High Court) ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಏತನ್ಮಧ್ಯೆಯೇ, ಶಹಜಹಾನ್‌ ಶೇಖ್‌ನ 12 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಶಹಜಹಾನ್‌ ಶೇಖ್‌ನನ್ನು ಮಂಗಳವಾರ (ಮಾರ್ಚ್‌ 5) ಸಂಜೆ 4.30ರೊಳಗೆ ಸಿಬಿಐ ಕಸ್ಟಡಿಗೆ ನೀಡಬೇಕು ಎಂದು ಪಶ್ಚಿಮ ಬಂಗಾಳ ಪೊಲೀಸ್‌ ಇಲಾಖೆಯ ಕ್ರಿಮಿನಲ್‌ ಇನ್ವೆಸ್ಟಿಗೇಷನ್‌ ಡಿಪಾರ್ಟ್‌ಮೆಂಟ್‌ಗೆ (CID) ಕೋಲ್ಕೊತಾ ಹೈಕೋರ್ಟ್‌ ಆದೇಶಿಸಿತ್ತು. ಹಾಗಾಗಿ, ಸಿಬಿಐ ಅಧಿಕಾರಿಗಳು ಬುಧವಾರ ಸಂಜೆ ಬಂಗಾಳ ಪೊಲೀಸ್‌ ಕೇಂದ್ರ ಕಚೇರಿಗೆ ತೆರಳಿದ್ದರು. ಆದರೆ, ಸಂಜೆ 7.30 ಆದರೂ ಶಹಜಹಾನ್‌ ಶೇಖ್‌ನನ್ನು ತಮ್ಮ ವಶಕ್ಕೆ ನೀಡದ ಕಾರಣ ಸಿಬಿಐ ಅಧಿಕಾರಿಗಳು ವಾಪಸಾದರು. ಸುಪ್ರೀಂ ಕೋರ್ಟ್‌ ಆದೇಶದವರೆಗೆ ಶಹಜಹಾನ್‌ನನ್ನು ಸಿಬಿಐ ವಶಕ್ಕೆ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.

12 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಶಹಜಹಾನ್‌ ಶೇಖ್‌ಗೆ ಸಂಬಂಧಿಸಿದ 12.78 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸಂದೇಶ್‌ಖಾಲಿಯಲ್ಲಿರುವ ಕೃಷಿ ಭೂಮಿ, ಕೋಲ್ಕೊತಾದಲ್ಲಿರುವ ಅಪಾರ್ಟ್‌ಮೆಂಟ್‌, ಬ್ಯಾಂಕ್‌ ಠೇವಣಿ ಸೇರಿ ಹಲವು ಆಸ್ತಿಗಳನ್ನು ಇ.ಡಿ ಜಪ್ತಿ ಮಾಡಿದೆ. ಇದರಿಂದಾಗಿ ಶಹಜಹಾನ್‌ ಶೇಖ್‌ಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.

ಸಂದೇಶ್‌ಖಾಲಿಯಲ್ಲಿ ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅವರ ಜಾಗ ಅತಿಕ್ರಮಣ, ಹಿಂಸಾಚಾರ ಸೇರಿ ಹಲವು ಪ್ರಕರಣಗಳು ಬೆಳಕಿಗೆ ಬಂದು, ಶಹಜಹಾನ್‌ ಶೇಖ್‌ ಪರಾರಿಯಾಗುತ್ತಲೇ ಕೋಲ್ಕೊತಾ ಹೈಕೋರ್ಟ್‌ ಸುಮೋಟೊ ಕೇಸ್‌ ದಾಖಲಿಸಿಕೊಂಡಿದೆ. ಇದಾದ ಬಳಿಕ, ಶಹಜಹಾನ್‌ ಶೇಖನನ್ನು ಬಂಧಿಸಲೇಬೇಕು ಎಂದು ಕೋರ್ಟ್‌ ಆದೇಶ ನೀಡಿದ ಬಳಿಕ ಆತನನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಶಹಜಹಾನ್‌ ಶೇಖ್‌ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯವು, “ಟಿಎಂಸಿ ನಾಯಕನಿಗೆ ಯಾವುದೇ ಕರುಣೆ, ದಯೆ ತೋರುವುದಿಲ್ಲ” ಎಂದು ಖಡಕ್‌ ಆಗಿ ಹೇಳಿತ್ತು. ಇ.ಡಿ ಅಧಿಕಾರಿಗಳ ದಾಳಿ ಸೇರಿ ಎಲ್ಲ ಪ್ರಕರಣಗಳು, ಅವುಗಳ ದಾಖಲೆಯನ್ನು ಸಿಬಿಐಗೆ ನೀಡಬೇಕು ಎಂದು ಹೈಕೋರ್ಟ್‌ ಆದೇಶಿಸಿತ್ತು.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ; ಟಿಎಂಸಿಯ ಶಹಜಹಾನ್‌ನನ್ನು ಸಿಬಿಐಗೆ ವಹಿಸಿ ಎಂದು ಕೋರ್ಟ್‌ ಆದೇಶ

ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯು ಫೆಬ್ರವರಿ 14ರಿಂದಲೂ ಹಿಂಸಾಚಾರದಲ್ಲಿ ಮುಳುಗಿದೆ. ತೃಣಮೂಲ ನಾಯಕ ಶಹಜಹಾನ್‌ನ ಇಬ್ಬರು ನಿಕಟ ಸಹಚರರು ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಪೊಲೀಸರಿಗೆ ಬೇಕಾಗಿದ್ದಾರೆ. ಇದೇ ಪ್ರದೇಶದಲ್ಲಿರುವ ಶಹಜಹಾನ್ ಮನೆಗೆ ಜನವರಿ 5ರಂದು ಇ.ಡಿ ಅಧಿಕಾರಿಗಳು ಭೇಟಿ ನೀಡಿದ್ದರು. ಆಗ, ಇ.ಡಿ ಅಧಿಕಾರಿಗಳ ಮೇಲೂ ಶಹಜಹಾನ್‌ ಕಡೆಯವರು ದಾಳಿ ನಡೆಸಿದ್ದರು. ಕಲ್ಲುತೂರಾಟ ಕೂಡ ನಡೆಸಿದ್ದರು. ಇದಾದ ಬಳಿಕ ಶಹಜಹಾನ್‌ ಶೇಖ್‌ ನಾಪತ್ರೆಯಾಗಿದ್ದ. ಫೆಬ್ರವರಿ 29ರಂದು ಆತನನ್ನು ಬಂಧಿಸಿದ್ದಾರೆ. ಸಂದೇಶ್‌ಖಾಲಿಯಲ್ಲಿ ಶಹಜಹಾನ್‌ ಶೇಖ್‌ ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅವರ ಭೂಮಿಯ ಅತಿಕ್ರಮಣ, ಹಿಂಸೆಗೆ ಪ್ರಚೋದನೆ, ಇ.ಡಿ. ಅಧಿಕಾರಿಗಳ ಮೇಲೆ ದಾಳಿ ಸೇರಿ ಹಲವು ಪ್ರಕರಣ ಎದುರಿಸುತ್ತಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದಕ್ಷಿಣ ಕನ್ನಡ

NIA Raid : ಸುಳ್ಯದಲ್ಲೂ ಎನ್‌ಐಎ ದಾಳಿ; 2 ದಿನದ ಹಿಂದೆ ಕೇರಳದಿಂದ ಬಂದಿದ್ದವ ವಶಕ್ಕೆ

NIA Raid : ಅವನು ಕೇವಲ ಎರಡು ದಿನಗಳ ಹಿಂದಷ್ಟೇ ಸುಳ್ಯದ ಆ ಜಾಗಕ್ಕೆ ಬಂದಿದ್ದ. ಬಾಡಿಗೆ ಮನೆ ಹಿಡಿದ ಎರಡನೇ ದಿನವೇ ಆತನನ್ನು ಎನ್‌ಐಎ ಅಧಿಕಾರಿಗಳು ಬೆನ್ನಟ್ಟಿ ವಿಚಾರಣೆ ನಡೆಸಿದ್ದಾರೆ.

VISTARANEWS.COM


on

NIA Rait Enmuru
Koo

ಮಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್‌ ಸ್ಫೋಟ (Blast in Bengaluru) ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (National Investigation agency) ವಹಿಸಿಕೊಂಡಿದೆ. ಈ ಪ್ರಕರಣವೂ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಎನ್‌ಐಎ (NIA Raid) ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ದೇಶದಲ ಏಳು ರಾಜ್ಯಗಳಲ್ಲಿ ಮಂಗಳವಾರ ದಾಳಿ ನಡೆಸಿದೆ. ಇದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada news) ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಎಣ್ಮೂರಿನಲ್ಲೂ ದಾಳಿ ನಡೆದಿದೆ.

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್‌ಐಎ ತುಂಬಾ ಸಕ್ರಿಯವಾಗಿದ್ದು ಎಲ್ಲ ಕಡೆ ಮಾಹಿತಿ ದಾರರನ್ನು ಇಟ್ಟು ಚಟುವಟಿಕೆಗಳನ್ನು ಹದ್ದುಗಣ್ಣಿನಿಂದ ಕಾಯುತ್ತಿದೆ. ಅದರಿಂದ ಪಡೆದ ಮಾಹಿತಿಯನ್ನೂ ಆಧರಿಸಿಯೇ ಅದು ಇಲ್ಲಿಗೆ ಲಗ್ಗೆ ಇಟ್ಟಿದೆ ಎನ್ನಲಾಗಿದೆ. ಕೇವಲ ಎರಡು ದಿನಗಳ ಹಿಂದಷ್ಟೇ ಎಣ್ಮೂರಿಗೆ ಬಂದು ಬಾಡಿಗೆ ಮನೆಯೊಂದನ್ನು ಹಿಡಿದಿದ್ದ ವ್ಯಕ್ತಿಯೊಬ್ಬನನ್ನು ಅದು ವಿಚಾರಿಸಿದ್ದು ಸ್ವತಃ ಊರಿನ ಜನರಿಗೇ ಅಚ್ಚರಿ ಮೂಡಿಸಿದೆ.

ಎನ್.ಐ.ಎ ಅಧಿಕಾರಿಗಳ ತಂಡ ಪ್ರಕರಣವೊಂದರ ಸಂಬಂಧ ಮಾ.5ರಂದು ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಣ್ಣೂರಿನ ಕುಲಾಯಿತೋಡು ಎಂಬಲ್ಲಿನ ಬಾಡಿಗೆ ಮನೆ ಮೇಲೆ ಬೆಳಗ್ಗೆ ಎನ್ ಐ ಎ ಅಧಿಕಾರಿಗಳು ದಾಳಿ ಮಾಡಿ ಮನೆಯಲ್ಲಿ ನಡೆಸಿದರು. ಅಲ್ಲಿ ವಾಸವಾಗಿದ್ದ ಕೇರಳ ಮೂಲದ ಬಿಜು ಎಂಬಾತನಿಗೆ ಸಮನ್ಸ್ ನೀಡಿ ಮೊಬೈಲ್ ಫೋನ್ ವಶಕ್ಕೆ ಪಡೆದು ತೆರಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಿಂತಿಕಲ್ಲು ಬಳಿಯ ಕಲ್ಮಡ್ಕ ನಿವಾಸಿ ಚಿದಾನಂದ ಎಂಬವರ ಬಾಡಿಗೆ ಮನೆ ಮೇಲೆ ಬೆಂಗಳೂರು ಬ್ರಾಂಚ್ ನ ಎನ್.ಐ.ಎ ಅಧಿಕಾರಿಗಳಾದ ಡಿವೈಎಸ್ಪಿ ರಾಜನ್ ಪಿ.ವಿ, ಸಬ್ ಇನ್ಸೆಕ್ಟರ್ ಮಂಜಪ್ಪ,
ಕಾನ್ಸ್ಟೇಬಲ್ ಸುರೇಶ್.ಸಿ ನೇತೃತ್ವದ ಮೂರು ಜನರ ತಂಡ ದಾಳಿ ಮಾಡಿ ಮನೆಯನ್ನು ಪರಿಶೀಲನೆ ನಡೆಸಿದೆ.

ಇದನ್ನೂ ಓದಿ: Blast in Bengaluru : ರಾಮೇಶ್ವರಂ ಕೆಫೆ ಸ್ಫೋಟ; ಚೆನ್ನೈಯಲ್ಲಿ NIA ದಾಳಿ, ಐವರು ಕ್ರಿಮಿಗಳ ಸೆರೆ

ಯಾರಿವನು ಬಿಜು‌, ಯಾವ ಪ್ರಕರಣ?

25-10-2023 & RC- 28/2023/NIA/DLI ಯಲ್ಲಿ 120B,121,121A&122 ಜೊತೆಗೆ 3,25 ಆರ್ಮ್ 13,18 ಮತ್ತು UA(P) ಅಡಿಯಲ್ಲಿ ದಾಖಲಾದ ಪ್ರಕರಣ ಸಂಬಂಧಿಸಿದಂತೆ ಬೆಳ್ಳಾರೆಯ ಚಿದಾನಂದ ಎಂಬವರ ಬಾಡಿಗೆ ಮನೆಯಲ್ಲಿ ಎರಡು ದಿನದ ಹಿಂದೆ ಬಂದ ಕೇರಳ ರಾಜ್ಯದ ಇಡುಕ್ಕಿಯ ಬಿಜು ಅಬ್ರಾಹಂ @ ಬಿಜು ಎಮ್.ಎ (45) ಎಂಬಾತನ ವಾಸವಾಗಿದ್ದ. ಈ ಮನೆಗೆ ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ ನಂತರ ಬಿಜುಗೆ ಸಮನ್ಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

Continue Reading

ಚಾಮರಾಜನಗರ

Veerappan Case : ಪೊಲೀಸರ ಹತ್ಯೆ; ವೀರಪ್ಪನ್‌ ಗ್ಯಾಂಗ್‌ನಲ್ಲಿದ್ದ ಸ್ಟೆಲ್ಲಾ ಮೇರಿಗೆ ಖುಲಾಸೆ

veerappan Case : ಕುಖ್ಯಾತ ಕಾಡುಗಳ್ಳ ವೀರಪ್ಪನ್‌ ರಾಮಾಪುರಂ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿ ಪೊಲೀಸರನ್ನು ಕೊಂದು ಹಾಕಿದ ವೇಳೆ ತಂಡದಲ್ಲಿದ್ದಳು ಎನ್ನಲಾದ ಅಂದಿನ ಬಾಲಕಿಯನ್ನು ಈಗ ದೋಷಮುಕ್ತಗೊಳಿಸಲಾಗಿದೆ. ಯಾರು ಈ ಸ್ಟೆಲ್ಲಾ ಮೇರಿ?

VISTARANEWS.COM


on

Veerappan Case Stella Mary
Koo

ಚಾಮರಾಜನಗರ: ಕುಖ್ಯಾತ ಕಾಡುಗಳ್ಳ ನರಹಂತಕ ವೀರಪ್ಪನ್‌ ಗ್ಯಾಂಗ್‌ (Veerappan Case) 1992ರ ಮೇ ತಿಂಗಳಲ್ಲಿ ತಮಿಳುನಾಡಿನ ರಾಮಾಪುರಂ ಪೊಲೀಸ್‌ ಠಾಣೆಯ ಮೇಲೆ ದಾಳಿ (Ramapuram Police station attack) ಮಾಡಿ ಐವರು ಸಿಬ್ಬಂದಿಯನ್ನು ಕೊಲೆ ಮಾಡಿ ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದ ಅಂದು ಅಪ್ರಾಪ್ತ ಬಾಲಕಿಯಾಗಿದ್ದ ಮಹಿಳೆಯೊಬ್ಬರಿಗೆ ಕ್ಲೀನ್‌ ಚಿಟ್‌ (Clean chit to Stella Mary) ಸಿಕ್ಕಿದೆ. ಹೀಗೆ ಪೊಲೀಸ್‌ ಠಾಣೆ ದಾಳಿ ಪ್ರಕರಣದಲ್ಲಿ ದೋಷಮುಕ್ತರಾದವರು ಕೊಳ್ಳೇಗಾಲ ತಾಲೂಕಿನ ಜಾಗೇರಿ ನಿವಾಸಿಯಾಗಿರುವ ಸ್ಟೆಲ್ಲಾ ಮೇರಿ (Stella Mary)!

ರಾಮಾಪುರ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಸ್ಟೆಲ್ಲಾ ಮೇರಿ ಅವರನ್ನು ಚಾಮರಾಜನಗರದ ಬಾಲ ನ್ಯಾಯ ಮಂಡಳಿ ಖುಲಾಸೆಗೊಳಿಸಿದೆ. ಪಾಲಾರ್ ಬಾಂಬ್ ಸ್ಫೋಟದ ಆರೋಪಿಯೂ ಆಗಿದ್ದ ಸ್ಟೆಲ್ಲಾ ಮೇರಿಯನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಬಾಲ ನ್ಯಾಯಮಂಡಳಿ ಆದೇಶ ಹೊರಡಿಸಿದೆ.

Veerappan Case Ramapuram Police station

ಏನಿದು ಪ್ರಕರಣ, ಯಾರು ಈ ಸ್ಟೆಲ್ಲಾ ಮೇರಿ?

ವೀರಪ್ಪನ್‌ ತನ್ನ ಕ್ರೌರ್ಯದ ಉತ್ತುಂಗದಲ್ಲಿ ಹಲವಾರು ಪೊಲೀಸ್‌ ಠಾಣೆಗಳ ಮೇಲೆ ದಾಳಿ ಮಾಡಿದ್ದ. 1992ರ ಆಸುಪಾಸಿನಲ್ಲಿ ನಡೆದ ಕೃತ್ಯಗಳಲ್ಲಿ ಸ್ಟೆಲ್ಲಾ ಮೇರಿ ಕೂಡಾ ಭಾಗಿಯಾದ ಆರೋಪ ಎದುರಾಗಿತ್ತು. ಆದರೆ, ಸ್ಟೆಲ್ಲಾ ಮೇರಿಯ ಬಂಧನವಾಗಿದ್ದು 2020ರ ಫೆಬ್ರವರಿಯಲ್ಲಿ. ಅಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿದ್ದರೂ ಅಂದು ಆಕೆಯ ಬಂಧನ ನಡೆದಿರಲಿಲ್ಲ. ಆಕೆಯನ್ನು ಪೊಲೀಸ್‌ ಇಲಾಖೆ ಮರೆತೇ ಬಿಟ್ಟಂತಿತ್ತು. ಹಳೆ ಕೇಸುಗಳ ಪರಿಶೀಲನೆ ಸಂದರ್ಭದಲ್ಲಿ ಅದು ಮರಳಿ ಮೇಲೆ ಬಂದಿತ್ತು.

2020ರಲ್ಲಿ ಬಂಧನಕ್ಕೆ ಒಳಗಾದ ಬಳಿಕ ಆಕೆಯ ಮೇಲೆ ಟಾಡಾ, ಶಸ್ತ್ರಾಸ್ತ್ರ ಕಾಯ್ದೆ, ಸ್ಫೋಟಕ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಾಗಿತ್ತು. ಸ್ಟೆಲ್ಲಾ ಮೇರಿ ಬಂಧನ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮೇರಿ ಪರವಾಗಿ ಮಾನವ ಹಕ್ಕುಗಳ ಸಂಘಟನೆಗಳು ನಿಂತಿದ್ದವು.

1992ರಲ್ಲಿ ರಾಮಾಪುರ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿದಾಗ ಸ್ಟೆಲ್ಲಾ ಮೇರಿ ಇನ್ನೂ 13 ವರ್ಷದ ಹುಡುಗಿಯಾಗಿದ್ದಳು. ಅಪ್ರಾಪ್ತ ಬಾಲಕಿಯಾಗಿದ್ದಳು. ಹೀಗಾಗಿ ಆಕೆಯ ವಿಚಾರಣೆಯನ್ನು ಬಾಲ ನ್ಯಾಯಮಂಡಳಿಯಲ್ಲಿ ನಡೆಸಬೇಕು ಎಂದು ಕೇಳಿಕೊಳ್ಳಲಾಗಿತ್ತು. ಇದರಂತೆ ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣವನ್ನು ಬಾಲ ನ್ಯಾಯಮಂಡಳಿಗೆ ವಹಿಸಿತ್ತು.

ಆರೋಪ ಮುಕ್ತಗೊಳಿಸಲು ಕಾರಣವಾದ ಅಂಶ ಯಾವುದು?

ಸ್ಟೆಲ್ಲಾ ಮೇರಿ ವೀರಪ್ಪನ್‌ ಗ್ಯಾಂಗ್‌ನಲ್ಲಿ ಇದ್ದಿದ್ದು ನಿಜ. ಆಕೆ ರಾಮಾಪುರ ಪೊಲೀಸ್‌ ಠಾಣೆ ದಾಳಿಯಲ್ಲಿ ಭಾಗಿಯಾಗಿರಲಿಲ್ಲ. ಸ್ಟೆಲ್ಲಾ ಮೇರಿಯನ್ನು ಆಗ ಅಪಹರಣ ಮಾಡಿ ಗ್ಯಾಂಗ್‌ ಗೆ ಸೇರಿಸಲಾಗಿತ್ತು. ಆಗ ಅವಳು ಸಣ್ಣ ಬಾಲಕಿ. ಸ್ಟೆಲ್ಲಾ ಮೇರಿಯನ್ನು ವೀರಪ್ಪನ್ ಸಹಚರ ಸುಂಡವಲಿಯಾರ್ ಅಪಹರಿಸಿ ಮದುವೆಯಾಗಿದ್ದ. (ಆತ ಬಳಿಕ ಪೊಲೀಸ್ ಎನ್​ಕೌಂಟರ್‌ನಲ್ಲಿ ಬಲಿಯಾಗಿದ್ದ). ಹೀಗಾಗಿ ಈ ಪ್ರಕರಣದಲ್ಲಿ ಸ್ಟೆಲ್ಲಾ ಮೇರಿಯ ಪಾತ್ರವಿಲ್ಲ, ಆಕೆ ಅಪರಾಧಿಯಲ್ಲ ಎಂದು ಸ್ಟೆಲ್ಲಾ ಪರವಾಗಿ ವಾದ ಮಾಡಲಾಗಿದೆ. ಇದನ್ನು ಒಪ್ಪಿದ ಕೋರ್ಟ್‌ ಆಕೆಯನ್ನು ದೋಷಮುಕ್ತಗೊಳಿಸಿದೆ.

ಈ ಕುರಿತು ಕಕ್ಷಿದಾರರ ಪರವಾಗಿ ವಾದಿಸಿದ ವಕೀಲ ಪಿ.ಪಿ.ಬಾಬುರಾಜ್‌ ಪ್ರತಿಕ್ರಿಯಿಸಿ, ವೀರಪ್ಪನ್ ಗ್ಯಾಂಗ್ ನಿಂದ ಅಪಹರಣಕ್ಕೊಳಗಾಗಿ ಬಳಿಕ ಪೊಲೀಸರ ಕಣ್ತಪ್ಪಿನಿಂದ ಪ್ರಕರಣಗಳಲ್ಲಿ ಈಕೆಯ ಹೆಸರು ಸೇರಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದ ಹಾಗೂ ಘಟನೆಗಳು ನಡೆದ ವೇಳೆ ಅಪ್ರಾಪ್ತೆಯಾಗಿದ್ದರಿಂದ ಬಾಲನ್ಯಾಯಮಂಡಲಿಯು ಎಲ್ಲಾ ಪ್ರಕರಣಗಳಿಂದ ಸ್ಟೆಲ್ಲಾ ಮೇರಿಯನ್ನು ಖುಲಾಸೆಗೊಳಿಸಿದೆ ಎಂದು ತಿಳಿಸಿದರು.

ಸ್ಟೆಲ್ಲಾ ಮೇರಿ ಪರವಾಗಿ ವಾದಿಸಿದ ವಕೀಲ ಪಿ ಪಿ ಬಾಬುರಾಜ್‌ ಅವರು, “ವೀರಪ್ಪನ್ ಗ್ಯಾಂಗ್ ನಿಂದ ಅಪಹರಣಕ್ಕೊಳಗಾಗಿ ಬಳಿಕ ಪೊಲೀಸರ ಕಣ್ತಪ್ಪಿನಿಂದ ಪ್ರಕರಣಗಳಲ್ಲಿ ಈಕೆಯ ಹೆಸರು ಸೇರಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದ ಹಾಗೂ ಘಟನೆಗಳು ನಡೆದ ವೇಳೆ ಅಪ್ರಾಪ್ತೆಯಾಗಿದ್ದರಿಂದ ಬಾಲ ನ್ಯಾಯ ಮಂಡಳಿಯು ಎಲ್ಲ ಪ್ರಕರಣಗಳಿಂದ ಸ್ಟೆಲ್ಲಾ ಮೇರಿಯನ್ನು ಖುಲಾಸೆಗೊಳಿಸಿದೆ” ಎಂದು ಹೇಳಿದ್ದಾರೆ.

ಐವರು ಪೊಲೀಸರ ಹತ್ಯೆ ನಡೆದ ರಾಮಾಪುರಂ ಪೊಲೀಸ್‌ ಠಾಣೆ ಈಗ ಹೇಗಿದೆ?

Continue Reading

ಉತ್ತರ ಕನ್ನಡ

CM Siddaramaiah: ಶಿವರಾಂ ಹೆಬ್ಬಾರ್, ಎಸ್‌.ಟಿ. ಸೋಮಶೇಖರ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ: ಸಿದ್ದರಾಮಯ್ಯ

CM Siddaramaiah: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಪಟ್ಟಿಯನ್ನು ಆದಷ್ಟು ಬೇಗ ಪ್ರಕಟಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

VISTARANEWS.COM


on

Shivaram Hebbar and ST Somashekar welcome if they agree with party ideology CM Siddaramaiah
Koo

ಶಿರಸಿ: ಶಾಸಕರಾದ ಎಸ್.ಟಿ. ಸೋಮಶೇಖರ್ (ST Somashekhar) ಹಾಗೂ ಶಿವರಾಂ ಹೆಬ್ಬಾರ್ (Shivaram Hebbar) ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು (Congress party ideology) ಒಪ್ಪಿ ಬಂದರೆ ಅವರನ್ನು ಸ್ವಾಗತಿಸಲಾಗುವುದು. ಹಿಂದೆ ಕಾಂಗ್ರೆಸ್ ನಲ್ಲಿದ್ದವರಿಗೆ ಬಿಜೆಪಿಯಿಂದ ಬೇಸರವಾಗಿದೆಯೆಂದು ತಿಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಎಸ್.ಟಿ. ಸೋಮಶೇಖರ್‌ ಹಾಗೂ ಗೈರಾದ ಶಿವರಾಂ ಹೆಬ್ಬಾರ್‌ ಅವರ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಹೀಗೆ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: Water Crisis: ಬೆಂಗಳೂರಲ್ಲಿ ಹಾಲಿನ ಟ್ಯಾಂಕರ್ ಮೂಲಕ ನೀರು ಪೂರೈಕೆ; ಬರದ ವಾಸ್ತವ ಬಿಚ್ಚಿಟ್ಟ ಎಚ್.ಡಿ. ದೇವೇಗೌಡ!

ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಯುತ್ತಿದೆ

ತಮಗೆ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನನಗೆ ಯಾವುದೇ ಬೆದರಿಕೆ ಬಂದಿಲ್ಲ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ. ಇದರ ಬಗ್ಗೆ ಪೊಲೀಸರು, ಸಿಸಿಬಿ ಹಾಗೂ ಎನ್‌ಐಎ ಅಧಿಕಾರಿಗಳು ಸೂಕ್ತ ತನಿಖೆಯನ್ನು ನಡೆಸುತ್ತಿದ್ದಾರೆ. ಸ್ಫೋಟದ ಬಗ್ಗೆ ಕೆಲವು ಸುಳಿವುಗಳು ಸಿಕ್ಕಿದ್ದು, ಎನ್‌ಐಎ ಅಧಿಕಾರಿಗಳು ಐವರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ ಎಂದು ತಿಳಿಸಿದರು.

ದೇಶದ್ರೋಹಿಗಳು ಯಾರು?

ಪಾಕ್ ಪರ ಘೋಷಣೆ ಪ್ರಕರಣದ ಎಫ್‌ಎಸ್ಎಲ್ ವರದಿಯನ್ನು ಕಾಂಗ್ರೆಸ್ ಸರ್ಕಾರ ತಿಳಿಸುತ್ತಿಲ್ಲ ಎಂಬ ಬಿಜೆಪಿಯವರ ಟೀಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಾಕ್ ಪರ ಘೋಷಣೆಗಳನ್ನು ಕೂಗಿದ್ದರು. ಆಗ ಆ ಸರ್ಕಾರ ಪ್ರಕರಣವನ್ನೇ ವಜಾಗೊಳಿಸಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದವರನ್ನು ಬಂಧಿಸಲಾಗಿದೆ. ಇದರಿಂದ ಯಾರು ದೇಶದ್ರೋಹಿಗಳು ಎಂಬುದು ತಿಳಿಯುತ್ತದೆ ಎಂದು ಹೇಳಿದರು.

ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಶೀಘ್ರ

ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಘೋಷಣೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಪಟ್ಟಿಯನ್ನು ಆದಷ್ಟು ಬೇಗ ಪ್ರಕಟಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: HD Devegowda: 692 ರೈತರು ಆತ್ಮಹತ್ಯೆಯೇ ಸಿದ್ದರಾಮಯ್ಯ ಸಾಧನೆಯ ಕಿರುನೋಟ: ಎಚ್‌.ಡಿ. ದೇವೇಗೌಡ ವ್ಯಂಗ್ಯ

ಜಿಲ್ಲೆಗೆ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆಯಿದ್ದು, ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲದಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

Continue Reading
Advertisement
Mamata Banerjee And Shahjahan Sheikh
ದೇಶ2 mins ago

ಬುಡಕಟ್ಟು ಮಹಿಳೆಯರಿಗೆ ಲೈಂಗಿಕ ಕಿರುಕುಳ; ಶಹಜಹಾನ್‌ನ 12 ಕೋಟಿ ರೂ. ಆಸ್ತಿ ಜಪ್ತಿ

NIA Rait Enmuru
ದಕ್ಷಿಣ ಕನ್ನಡ7 mins ago

NIA Raid : ಸುಳ್ಯದಲ್ಲೂ ಎನ್‌ಐಎ ದಾಳಿ; 2 ದಿನದ ಹಿಂದೆ ಕೇರಳದಿಂದ ಬಂದಿದ್ದವ ವಶಕ್ಕೆ

Uma Chetry
ಕ್ರೀಡೆ21 mins ago

WPL 2024: ಕನ್ನಡತಿ ವೃಂದಾ ದಿನೇಶ್ ಸ್ಥಾನಕ್ಕೆ ಬದಲಿ ಆಟಗಾರ್ತಿಯಾಗಿ ಉಮಾ ಚೆಟ್ರಿ ಆಯ್ಕೆ

Two days special casual leave for state government employees
ಕರ್ನಾಟಕ26 mins ago

Special Casual leave: ರಾಜ್ಯ ಸರ್ಕಾರಿ ನೌಕರರಿಗೆ ಎರಡು ದಿನ ವಿಶೇಷ ಸಾಂದರ್ಭಿಕ ರಜೆ

Veerappan Case Stella Mary
ಚಾಮರಾಜನಗರ27 mins ago

Veerappan Case : ಪೊಲೀಸರ ಹತ್ಯೆ; ವೀರಪ್ಪನ್‌ ಗ್ಯಾಂಗ್‌ನಲ್ಲಿದ್ದ ಸ್ಟೆಲ್ಲಾ ಮೇರಿಗೆ ಖುಲಾಸೆ

BJP MLA Shivaram Hebbar welcomes CM, Deputy CM by putting up flexes
ಕರ್ನಾಟಕ51 mins ago

Banavasi Kadambotsava: ಫ್ಲೆಕ್ಸ್‌ ಹಾಕಿ ಸಿಎಂ, ಡಿಸಿಎಂಗೆ ಭರ್ಜರಿ ಸ್ವಾಗತ ಕೋರಿದ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್‌!

Shivaram Hebbar and ST Somashekar welcome if they agree with party ideology CM Siddaramaiah
ಉತ್ತರ ಕನ್ನಡ1 hour ago

CM Siddaramaiah: ಶಿವರಾಂ ಹೆಬ್ಬಾರ್, ಎಸ್‌.ಟಿ. ಸೋಮಶೇಖರ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ: ಸಿದ್ದರಾಮಯ್ಯ

Abhishek Sharma
ಕ್ರಿಕೆಟ್1 hour ago

Abhishek Sharma: ಮಾಡೆಲ್ ಆತ್ಮಹತ್ಯೆ; ಪೊಲೀಸ್‌ ವಿಚಾರಣೆಗೆ ಹಾಜರಾದ ಕ್ರಿಕೆಟಿಗ ಅಭಿಷೇಕ್ ಶರ್ಮಾ

vande bharat train
ಕರ್ನಾಟಕ1 hour ago

Vande Bharat: ಮದುರೈನಿಂದ ಬೆಂಗಳೂರಿಗೆ ಶೀಘ್ರವೇ ವಂದೇ ಭಾರತ್‌ ರೈಲು; ಬೆಲೆ ಎಷ್ಟು?

Text book Revision Karnataka
ಬೆಂಗಳೂರು1 hour ago

Text Book Revision : ಸದ್ದಿಲ್ಲದೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ ಸರ್ಕಾರ, ಏನೇನು ಬದಲಾವಣೆ?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ1 day ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ1 day ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ3 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌