Horoscope Today : ಆರು ರಾಶಿಯವರಿಗೆ ಇಂದು ಶುಭ ದಿನ; ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ - Vistara News

ಪ್ರಮುಖ ಸುದ್ದಿ

Horoscope Today : ಆರು ರಾಶಿಯವರಿಗೆ ಇಂದು ಶುಭ ದಿನ; ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

ಶ್ರೀ ಶಕೇ 1944, ಶುಭಕೃತ ನಾಮ ಸವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷದ ಪಾಡ್ಯದ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Horoscope Today daily horoscope
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದಿನ ಪಂಚಾಂಗ (21-02-2023)

ಶ್ರೀ ಶಕೇ 1944, ಶುಭಕೃತ ನಾಮ ಸವತ್ಸರ, ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ

ತಿಥಿ: ಪಾಡ್ಯ 09:04 ವಾರ: ಮಂಗಳವಾರ
ನಕ್ಷತ್ರ: ಶತತಾರ 08:59/ಪೂರ್ವಾ ಭಾದ್ರಪದ 30:37
ಯೋಗ: ಸಿದ್ದಿ 27:06 ಕರಣ: ಭವ 09:04
ಇಂದಿನ ವಿಶೇಷ: ಅಂತಾರಾಷ್ಟ್ರೀಯ ಮಾತೃಭಾಷಾ ದಿನ
ಅಮೃತಕಾಲ: ರಾತ್ರಿ 11 ಗಂಟೆ 25 ನಿಮಿಷದಿಂದ 12 ಗಂಟೆ 52 ನಿಮಿಷದವರೆಗೆ.

ಸೂರ್ಯೋದಯ : 06:56 ಸೂರ್ಯಾಸ್ತ : 06:24

ರಾಹುಕಾಲ : ಮಧ್ಯಾಹ್ನ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Horoscope Today)

Horoscope Today

ಮೇಷ : ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮಾನಸಿಕ ಒತ್ತಡದಿಂದ ಮುಕ್ತರಾಗಿ, ದೊಡ್ಡ ಯೋಜನೆಗಳತ್ತ ಗಮನ ಹರಿಸುವಿರಿ. ಬಹಳ ದಿನಗಳ ನಂತರ ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಹಣಕಾಸು ಪ್ರಗತಿ ಸಾಮಾನ್ಯ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಕುಟುಂಬದ ಸದಸ್ಯರ ವರ್ತನೆ ನಿಮಗೆ ಹಿಡಿಸದಿರಬಹುದು, ಆದರೆ ವಿನಾ ಕಾರಣ ಮಾತಿಗಿಳಿದು ಮನಸ್ಸು ಕೆಡಿಸಿಕೊಳ್ಳುವುದು ಬೇಡ. ನಂಬಿದ ವ್ಯಕ್ತಿಗಳು ನಿಮ್ಮನ್ನು ನಿರಾಸೆ ಮಾಡಬಹುದು. ಉದ್ಯೋಗದ ಸ್ಥಳದಲ್ಲಿ ನಿಮ್ಮ ಕಾರ್ಯದ ಯಶಸ್ಸು ಬೇರೆಯವರ ಪಾಲಾಗದಂತೆ ಎಚ್ಚರಿಕೆ ಇರಲಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ಪ್ರಗತಿ ಮಾಧ್ಯಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವುದು ಉತ್ತಮ. ಅದರಲ್ಲೂ ಗರ್ಭಿಣಿಯರು ಹೆಚ್ಚು ಕಾಳಜಿ ವಹಿಸಿ. ಹೊಸ ಒಪ್ಪಂದ ಮಾಡುವುದು ಇಂದಿನ ಮಟ್ಟಿಗೆ ಬೇಡ. ಆತುರದಲ್ಲಿ ಯಾವ ತಿರ್ಮಾನಗಳನ್ನೂ ತೆಗೆದುಕೊಳ್ಳುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕಟಕ: ಬಿಡುವಿಲ್ಲದ ಕಾರ್ಯ ಯೋಜನೆ, ಅಪಾರ ಯಶಸ್ಸನ್ನು ಹಾಗೂ ಕೀರ್ತಿಯನ್ನು ತಂದು ಕೊಡುವುದು. ಪ್ರಯಾಣದ ಕುರಿತಾಗಿ ಯೋಜನೆ ಮಾಡುವಿರಿ. ಹೂಡಿಕೆ ವ್ಯವಹಾರ ಇಂದು ಹೆಚ್ಚು ಲಾಭ ತರುವುದು. ಪರಿಪೂರ್ಣ ಆರೋಗ್ಯ ನಿಮ್ಮದಾಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಸಿಂಹ: ದಿನದ ಮಟ್ಟಿಗೆ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ, ಎಚ್ಚರಿಕೆ ಇರಲಿ. ವಿಶ್ವಾಸದಿಂದ ಕಾರ್ಯ ಸಿದ್ಧಿ. ಲಾಭದ ಹೂಡಿಕೆ ಕುರಿತಾಗಿ ಆಲೋಚನೆ ಮಾಡುವಿರಿ. ಕುಟುಂಬದ ಜೊತೆಗೆ ಕಾಲ ಕಳೆಯಲು ಹೆಚ್ಚು ಸಮಯ ವಿನಿಯೋಗಿಸುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಕನ್ಯಾ: ಪ್ರಯತ್ನದಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ವ್ಯವಹಾರದಲ್ಲಿ ಲಾಭ. ಆತುರದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ. ಉದ್ಯೋಗದಲ್ಲಿ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಭರವಸೆಯ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸೌಂದರ್ಯದ ಕುರಿತು ಕಾಳಜಿ ವಹಿಸಿ. ಆರೋಗ್ಯ ಪರಿಪೂರ್ಣ. ಹಣಕಾಸು ವ್ಯವಹಾರದಲ್ಲಿ ಲಾಭ. ಕುಟುಂಬದ ಸದಸ್ಯರಿಂದ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ: ಮಾನಸಿಕ ಒತ್ತಡದಿಂದ ದೂರವಾಗಲು ಧ್ಯಾನ ಮಾಡಿ. ವೃತಾ ಚಿಂತೆ ನಿಮ್ಮನ್ನು ಮತ್ತಷ್ಟು ಖಿನ್ನತೆಗೆ ಒಳಪಡಿಸುವುದು. ಆದ್ದರಿಂದ ಸಕಾರಾತ್ಮಕ ಆಲೋಚನೆಗಳನ್ನು ಮಾಡಿ. ಕೌಟುಂಬಿಕ ಕಲಹದಲ್ಲಿ ಧ್ವನಿ ಸೇರಿಸುವುದು ಬೇಡ, ಮನೆಯ ವಾತಾವರಣ ಹದಗೆಡಬಹುದು. ಮೌನದಿಂದ ಕಾರ್ಯ ಸಿದ್ಧಿಸಿಕೊಳ್ಳಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಧನಸ್ಸು: ಪ್ರಭಾವಿ ವ್ಯಕ್ತಿಗಳ ವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಅನಿರೀಕ್ಷಿತ ಖರ್ಚು, ಇದರ ಹೊರಾತಾಗಿಯೂ ಲಾಭ ಪಡೆಯುವಿರಿ. ಮಾತಿನ ಮೇಲೆ ಹಿಡಿತವಿರಲಿ. ಸಮಯ ವ್ಯರ್ಥ ಮಾಡದೆ ಕಾರ್ಯದಲ್ಲಿ ಮುನ್ನುಗ್ಗಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಮಕರ: ಘಟಿಸಿದ ಘಟನೆಗಳನ್ನು ಮೆಲುಕು ಹಾಕುತ್ತಾ ಕಾಲಹರಣ ಮಾಡುವ ಬದಲು ಕಾರ್ಯದಲ್ಲಿ ಮುನ್ನುಗ್ಗಿ. ಮಾನಸಿಕ ಒತ್ತಡ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಸೃಷ್ಟಿ ಆಗುವ ಸಾಧ್ಯತೆ. ಅತಿರೇಕವಾಗಿ ಕೋಪದಿಂದ ಮಾತನಾಡುವುದು ಬೇಡ. ಆರ್ಥಿಕ ಪ್ರಗತಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಕುಂಭ: ನಿಮ್ಮ ಸಹಾಯ ಮಾಡುವ ಗುಣ,ಇತರರಿಂದ ಪ್ರಶಂಸೆಗೆ ಪಾತ್ರವಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಉದ್ಯೋಗದಲ್ಲಿ ಯಶಸ್ಸು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಮೀನ: ಉದ್ಯೋಗದಲ್ಲಿ ಹೊಸ ಭರವಸೆ ಮೂಡಲಿದೆ. ಅರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಕುಟುಂಬದ ಸದಸ್ಯರ ವರ್ತನೆ ಮುಜುಗರ ಉಂಟು ಮಾಡುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Udupi Pocso case: ಉಡುಪಿಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯ ಕೇಸ್‌; 8-9 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ!

Udupi Pocso case: ವಿದ್ಯಾರ್ಥಿನಿಯರ ಮೇಲೆ ಯುವ ಉದ್ಯಮಿ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೊ ಮಾಡಿಕೊಳ್ಳುತ್ತಿದ್ದ. ಈ ಬಗ್ಗೆ ಪೋಕ್ಸೊ ಪ್ರಕರಣ ದಾಖಲಾಗುತ್ತಲೇ ಆರೋಪಿ ಪರಾರಿಯಾಗಿದ್ದಾನೆ.

VISTARANEWS.COM


on

Udupi Pocso case
Koo

ಉಡುಪಿ: ಜಿಲ್ಲೆಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯ ಪ್ರಕರಣವೊಂದು (Physical Abuse) ಬೆಳಕಿಗೆ ಬಂದಿದೆ. ಯುವ ಉದ್ಯಮಿಯೊಬ್ಬ ತನ್ನ ಪ್ರಭಾವ ಬಳಸಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಲೈಂಗಿಕ ದೌರ್ಜನ್ಯದ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ. ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಪೋಕ್ಸೊ ಪ್ರಕರಣ (Udupi Pocso case) ದಾಖಲಾಗುತ್ತಲೇ ಆರೋಪಿ ಪರಾರಿಯಾಗಿದ್ದಾನೆ.

ಉದ್ಯಮಿ ಶ್ರೇಯಸ್ ನಾಯ್ಕ (25) ಆರೋಪಿ. ಬಾಲಕಿಯೊಬ್ಬಳ ಮೇಲೆ ಒಂದು ವರ್ಷದಿಂದ ಆರೋಪಿ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದ. ಹಾಲಾಡಿ ರಸ್ತೆ ಹೆಗ್ಗೋಡ್ಲುವಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಆ ದೃಶ್ಯಗಳನ್ನು ಸೆರೆಹಿಡಿದುಕೊಂಡಿದ್ದಾನೆ. ಬಾಲಕಿ ಗರ್ಭಿಣಿ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮೇ 18 ರಂದು ಪೋಕ್ಸೊ ಪ್ರಕರಣ ದಾಖಲಾಗಿದ್ದು, ಸದ್ಯ ತಲೆಮರೆಸಿಕೊಂಡಿರುವ ಶ್ರೇಯಸ್‌ಗಾಗಿ ಬಂಧನಕ್ಕಾಗಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.

ಶಾಲೆ, ಕಾಲೇಜು ವಿದ್ಯಾರ್ಥಿನಿಯರೇ ಈತನ ಟಾರ್ಗೆಟ್

ಶಾಲೆ, ಕಾಲೇಜು ವಿದ್ಯಾರ್ಥಿನಿಯರೇ ಆರೋಪಿ ಶ್ರೇಯಸ್‌ ಟಾರ್ಗೆಟ್ ಆಗಿದ್ದು, 8-9 ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಮಾಡಿರಬಹುದು ಎಂಬ ಶಂಕೆ ವ್ಯಕ್ಯವಾಗಿದೆ. ಸುಮಾರು 50ಕ್ಕೂ ಅಧಿಕ ಅಶ್ಲೀಲ ವಿಡಿಯೊಗಳನ್ನು ಆರೋಪಿ ಸೆರೆಹಿಡಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿನಿಯರು, ಯುವತಿಯರ ಜತೆಗಿನ ವಿಡಿಯೊಗಳನ್ನು ಸೆರೆಹಿಡಿದು ತನ್ನ ಲ್ಯಾಪ್‌ಟಾಪ್‌ನಲ್ಲಿ ಆಸಾಮಿ ಇರಿಸಿಕೊಳ್ಳುತ್ತಿದ್ದ.

ಶಾಲೆ, ಕಾಲೇಜು ವಿದ್ಯಾರ್ಥಿನಿಯನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಥೇಟ್ ಪ್ರಜ್ವಲ್ ರೇವಣ್ಣ ಮಾದರಿಯಲ್ಲೇ ಈ ವಿಕೃತ ಕಾಮಿ ವಿಡಿಯೊ ಮಾಡಿಕೊಳ್ಳುತ್ತಿದ್ದ. ನಂತರ ಯುವತಿಯರನ್ನು ಬ್ಲ್ಯಾಕ್‌ಮೇಲ್‌ ಮಾಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ.

ಇದನ್ನೂ ಓದಿ | Drowned in Water : ನೀರಿನಲ್ಲಿ ಮುಳುಗಿ ಮುಂಬೈ ಮೂಲದ ಇಬ್ಬರು ಬಾಲಕಿಯರು ಸಾವು

ಆರೋಪಿಯ ಲ್ಯಾಪ್‌ಟಾಪ್‌ ವಶಕ್ಕೆ ಪಡೆದ ಸೈಬರ್ ಪೊಲೀಸ್

ಆರೋಪಿ ಶ್ರೇಯಸ್‌ ಲ್ಯಾಪ್‌ಟಾಪ್‌ ಅನ್ನು ಸೈಬರ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲ್ಯಾಪ್‌ಟಾಪ್‌ಗೆ ಆರೋಪಿ ಪಾಸ್ ವರ್ಡ್ ಇಟ್ಟಿದ್ದು, ಸುಮಾರು 50ಕ್ಕೂ ಅಧಿಕ ವಿಡಿಯೊಗಳು ಇರುವ ಶಂಕೆ ವ್ಯಕ್ತವಾಗಿದೆ. ಸಂತ್ರಸ್ತೆ ಹೇಳಿಕೆ ಆಧರಿಸಿ ಆರೋಪಿ ಮನೆಯಿಂದ ಲ್ಯಾಪ್‌ಟಾಪ್‌ ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ಶಾಲಾ, ಕಾಲೇಜಿನ 8-9 ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಶಂಕೆ ವ್ಯಕ್ತವಾಗಿದ್ದು, ಯಾರಾದರೂ ಸಂತ್ರಸ್ತೆಯರಿದ್ದಲ್ಲಿ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Continue Reading

ಕ್ರಿಕೆಟ್

Aaron Jones: 17 ವರ್ಷಗಳ ಹಿಂದಿನ ಟಿ20 ವಿಶ್ವಕಪ್​ ದಾಖಲೆ ಸರಿಗಟ್ಟಿದ ಯುಎಸ್​ಎ ಬ್ಯಾಟರ್​ ಆರೋನ್ ಜೋನ್ಸ್

Aaron Jones: 4ನೇ ಕ್ರಮಾಂಕದಲ್ಲಿ ಆಡಲಿಳಿದ ಆರೋನ್ ಜೋನ್ಸ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ನಡೆಸಿ ಕೆನಡಾ ಬೌಲರ್​ಗಳ ಬೆವರಿಳಿಸಿದರು. ಸಿಕ್ಸರ್​ ಮತ್ತು ಬೌಂಡರಿಗಳ ಮೂಲಕ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಡಿದಟ್ಟಿ ನೆರದಿದ್ದ ಸ್ಥಳೀಯ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು.

VISTARANEWS.COM


on

Aaron Jones
Koo

ನ್ಯೂಯಾರ್ಕ್​: ಕೆನಡಾ(CAN vs USA) ವಿರುದ್ಧ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ಸಿಕ್ಸರ್​ಗಳ ಸುರಿಮಳೆ ಸುರಿಸಿದ ಅಮೆರಿಕ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಆರೋನ್ ಜೋನ್ಸ್(Aaron Jones) ಟಿ20 ವಿಶ್ವಕಪ್(T20 World Cup)​ ಟೂರ್ನಿಯಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಟಿ20 ವಿಶ್ವಕಪ್​ ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ 2ನೇ ಬ್ಯಾಟರ್​ ಎನಿಸಿಕೊಂಡಿದ್ದಾರೆ.

ಡಲ್ಲಾಸ್​ನಲ್ಲಿ ನಡೆದ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಆಡಲಿಳಿದ ಆರೋನ್ ಜೋನ್ಸ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ನಡೆಸಿ ಕೆನಡಾ ಬೌಲರ್​ಗಳ ಬೆವರಿಳಿಸಿದರು. ಸಿಕ್ಸರ್​ ಮತ್ತು ಬೌಂಡರಿಗಳ ಮೂಲಕ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಡಿದಟ್ಟಿ ನೆರದಿದ್ದ ಸ್ಥಳೀಯ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು.

ಒಟ್ಟು 40 ಎಸೆತ ಎದುರಿಸಿದ ಆರೋನ್ ಜೋನ್ಸ್ ಅಜೇಯ 94 ರನ್​ ಬಾರಿಸಿದರು. ಇದರಲ್ಲಿ 60 ರನ್​ ಕೇವಲ ಸಿಕ್ಸರ್​ ಮೂಲಕವೇ ದಾಖಲಾಯಿತು. ಒಟ್ಟು 10 ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿದರು. 10 ಸಿಕ್ಸರ್​ ಬಾರಿಸುವ ಮೂಲಕ ವೆಸ್ಟ್​ ಇಂಡೀಸ್​ನ ಮಾಜಿ ಬ್ಯಾಟರ್​ ಕ್ರಿಸ್​ ಗೇಲ್​ ದಾಖಲೆಯನ್ನು ಸರಿಗಟ್ಟಿದರು. ಕ್ರಿಸ್​ ಗೇಲ್​ 2007ರಲ್ಲಿ ಉದ್ಘಾಟನ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ​ ವಿರುದ್ಧ 10 ಸಿಕ್ಸರ್​ ಬಾರಿಸಿದ್ದರು. ಈ ದಾಖಲೆಯನ್ನು 17ವರ್ಷಗಳ ಬಳಿಕ ಜೋನ್ಸ್ ಸರಿಗಟ್ಟಿದ್ದಾರೆ. ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸರ್​ ದಾಖಲೆ ಇನ್ನೂ ಕೂಡ ಕ್ರಿಸ್​ ಗೇಲ್​ ಹೆಸರಿನಲ್ಲಿದೆ. 2016ರಲ್ಲಿ ಭಾರತದಲ್ಲಿ ನಡೆದಿದ್ದ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಗೇಲ್​ 11 ಸಿಕ್ಸರ್​ ಬಾರಿಸಿದ್ದರು.

ಇದನ್ನೂ ಓದಿ CAN vs USA: ಕೆನಡಾ ಪರ ಟಿ20 ವಿಶ್ವಕಪ್​ ಪಂದ್ಯವಾಡಿದ ದಾವಣಗೆರೆಯ ಶ್ರೇಯಸ್

ಟಿ20 ವಿಶ್ವಕಪ್​ ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರರು

ಆಟಗಾರಸಿಕ್ಸರ್​ವಿರುದ್ಧವರ್ಷ
ಕ್ರಿಸ್​ ಗೇಲ್​11ಇಂಗ್ಲೆಂಡ್​2016
ಕ್ರಿಸ್​ ಗೇಲ್​10ದಕ್ಷಿಣ ಆಫ್ರಿಕಾ2007
ಆರೋನ್ ಜೋನ್ಸ್10ಕೆನಡಾ2024
ರೀಲಿ ರೊಸೊ8ಬಾಂಗ್ಲಾದೇಶ2022

ಭರ್ಜರಿ ಗೆಲುವು ಸಾಧಿಸಿದ ಅಮೆರಿಕ


ಇಲ್ಲಿನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ, ಡಲ್ಲಾಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಕೆನಡಾ ತಂಡ ನವನೀತ್ ಧಲಿವಾಲ್(61) ಮತ್ತು ನಿಕೋಲಸ್ ಕಿರ್ಟನ್(51) ಅರ್ಧಶತಕದ ಬ್ಯಾಟಿಂಗ್​ ನೆರವಿನಿಂದ 5 ವಿಕೆಟ್​ಗೆ 194 ರನ್​ ಬಾರಿಸಿತು. ಜವಾಬಿತ್ತ ಅಮೆರಿಕ ಈ ಬೃಹತ್​ ಮೊತ್ತವನ್ನು 17.4 ಓವರ್​ಗಳಲ್ಲಿ ಕೇವಲ 3 ವಿಕೆಟ್​ ಕಳೆದುಕೊಂಡು 197 ರನ್​ ಬಾರಿಸಿ ಅಮೋಘ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಯುಎಸ್​ಎ ಗರಿಷ್ಠ ಮೊತ್ತ ಚೇಸ್​ ಮಾಡಿದ ದಾಖಲೆ ಬರೆಯಿತು. ಇದಕ್ಕೂ ಮುನ್ನ 168 ರನ್​ಗಳನ್ನು ಚೇಸ್ ಮಾಡಿದ್ದು ತಂಡದ ಅತ್ಯುತ್ತಮ ಸಾಧನೆಯಾಗಿತ್ತು. ಇದೀಗ ಟಿ20 ವಿಶ್ವಕಪ್​ನ ಚೊಚ್ಚಲ ಪಂದ್ಯದಲ್ಲೇ ಐತಿಹಾಸಿಕ ಗೆಲುವು ದಾಖಲಿಸಿದೆ.

Continue Reading

ಬೆಂಗಳೂರು

Education News : ನೀಟ್ ಪರೀಕ್ಷೆ ಬಳಿಕ ಎಂಜಿನಿಯರ್ ಸೀಟು ಹಂಚಿಕೆ; 1.24 ಲಕ್ಷ ಸೀಟುಗಳು ಲಭ್ಯ, ಆನ್ ಲೈನ್ ಪ್ರಕ್ರಿಯೆ

Education News : ರಾಜ್ಯದಲ್ಲಿ 1.24 ಲಕ್ಷ ಎಂಜಿನಿಯರಿಂಗ್‌ ಸೀಟುಗಳು ಲಭ್ಯವಿದ್ದು, ರ‍್ಯಾಂಕ್‌ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಆದರೆ ನೀಟ್ ಪರೀಕ್ಷೆ ಬಳಿಕವೇ ಎಂಜಿನಿಯರ್ ಸೀಟು ಹಂಚಿಕೆ ಮಾಡಲಾಗುವುದು ಎಂದು ಕೆಇಎ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

VISTARANEWS.COM


on

By

education News
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ನೀಟ್‌ ಪರೀಕ್ಷೆ ಬಳಿಕವೇ ಎಂಜಿನಿಯರ್‌ ಸೀಟು ಹಂಚಿಕೆ ಮಾಡಲಾಗುವುದು ಎಂದು ಕೆಇಎ ಕಾರ್ಯ ನಿವಾರ್ಹಕ ನಿರ್ದೇಶಕ ಪ್ರಸನ್ನ (Education News) ತಿಳಿಸಿದ್ದಾರೆ. ನೀಟ್ ಫಲಿತಾಂಶಕ್ಕೂ ಮುನ್ನವೇ ಎಂಜಿನಿಯರಿಂಗ್ ಸೀಟ್ ಹಂಚಿಕೆ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ ಮೊದಲು ಮೆಡಿಕಲ್ ಸೀಟ್ ಹಂಚಿಕೆ ಮಾಡಿ ನಂತರ ಎಂಜಿನಿಯರಿಂಗ್ ಸೀಟ್ ಹಂಚಿಕೆ ಮಾಡಲಾಗುವುದು ಎಂದರು.

ಬೇರೆ ಬೇರೆ ಕಾಲೇಜಿನಲ್ಲಿ ಈಗಾಗಲೇ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ ಎಂಬ ದೂರಿನ ಕುರಿತು ಪ್ರತಿಕ್ರಿಯಿಸಿದ ಅವರು, ಸಿಇಟಿ ಪರೀಕ್ಷೆಯಲ್ಲಿ ಒಳ್ಳೆಯ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸೀಟ್ ಸಿಗುತ್ತದೆ. ಸೀಟ್ ಸಿಗುವುದಿಲ್ಲ ಎಂಬ ಆತಂಕದಲ್ಲಿ ಡೋನೇಷನ್ ಕೊಟ್ಟು ಅಡ್ಮಿಶನ್ ಮಾಡಿಸಬೇಡಿ. ಒಳ್ಳೆಯ ರ‍್ಯಾಂಕ್‌ ಪಡೆದವರಿಗೆ ಒಳ್ಳೆಯ ಕಾಲೇಜು ಸಿಗುತ್ತದೆ ಎಂದರು.

ಇದನ್ನೂ ಓದಿ: KCET Result 2024: ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್‌ ನೋಡಲು ಲಿಂಕ್‌ ಇಲ್ಲಿದೆ

1.24 ಲಕ್ಷ ಎಂಜಿನಿಯರಿಂಗ್‌ ಸೀಟುಗಳು ಲಭ್ಯ

ಇನ್ನೂ ರಾಜ್ಯದಲ್ಲಿ 1.24 ಲಕ್ಷ ಎಂಜಿನಿಯರಿಂಗ್‌ ಸೀಟುಗಳು ಲಭ್ಯವಿದೆ. ರ‍್ಯಾಂಕ್‌ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಇನ್ನೂ ಕಾಲೇಜು ಶುಲ್ಕವನ್ನು ನಿಗದಿ ಮಾಡಿಲ್ಲ. ಕಳೆದ ವರ್ಷ 40,110 ರೂಪಾಯಿ ಶುಲ್ಕ ಸರ್ಕಾರಿ ಕಾಲೇಜುಗಳಿಗೆ ಇತ್ತು. ಈ ಬಾರಿ ಎಷ್ಟೆಂದು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಆನ್‌ಲೈನ್‌ನಲ್ಲೇ ವೆರಿಫಿಕೇಶನ್‌

ಎಲ್ಲ ಪ್ರಕ್ರಿಯೆಗಳು ಆನ್ ಲೈನ್‌ನಲ್ಲೆ ನಡೆಯಲಿದೆ. ಶೇ.100 ರಷ್ಟು ಡಾಕ್ಯುಮೆಂಟ್ ಪರಿಶೀಲನೆ ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಕೆಇಎ ಮುಂದೆ ಬಂದು ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ. ಎಲ್ಲಾ ದಾಖಲಾತಿಗಳನ್ನು ಆನ್‌ಲೈನ್‌ನಲ್ಲೇ ಪರಿಶೀಲನೆ ನಡೆಯಲಿದೆ ಎಂದರು. ನಿನ್ನೆ ಶನಿವಾರ (ಜೂ.1) ಸಂಜೆ ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಹಠಾತ್ ಪ್ರಕಟಿಸಿದ ಬೆನ್ನಲ್ಲೇ ಭಾನುವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನ ಸುದ್ದಿಗೋಷ್ಠಿ ನಡೆಸಿ ಎಲ್ಲ ಮಾಹಿತಿಯನ್ನು ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೀಡೆ

CAN vs USA: ಕೆನಡಾ ಪರ ಟಿ20 ವಿಶ್ವಕಪ್​ ಪಂದ್ಯವಾಡಿದ ದಾವಣಗೆರೆಯ ಶ್ರೇಯಸ್

CAN vs USA: ಇಂದು ನಡೆದ ಅಮೆರಿಕ ವಿರುದ್ಧದ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿದ ಶ್ರೇಯಸ್ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ 16 ಎಸೆತಗಳಿಂದ ಅಜೇಯ 32 ರನ್​ ಬಾರಿಸಿದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್​ ಸಿಡಿಯಿತು. 20 ರನ್​ಗಳು ಬೌಂಡರಿ ಮತ್ತು ಸಿಕ್ಸರ್​ ಮೂಲಕವೇ ದಾಖಲಾಯಿತು.

VISTARANEWS.COM


on

CAN vs USA
Koo

ನ್ಯೂಯಾರ್ಕ್​: 9ನೇ ಆವೃತ್ತಿಯ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಇಂದು(ಭಾನುವಾರ) ನಡೆದ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಅಮೆರಿಕ(CAN vs USA) ತಂಡ ಕೆನಡಾ ವಿರುದ್ಧ ಭರ್ಜರಿ 7 ವಿಕೆಟ್​ಗಳ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಕೆನಡಾ ಪರ ಕರ್ನಾಟಕದ, ದಾವಣಗೆರೆ ಮೂಲದ ಆಟಗಾರ ಶ್ರೇಯಸ್ ಮೋವಾ(Shreyas Movva) ಕೂಡ ಕಣಕ್ಕಿಳಿದು ಚೊಚ್ಚಲ ಟಿ20 ವಿಶ್ವಕಪ್​ ಪಂದ್ಯವನ್ನಾಡಿದ ಹಿರಿಮೆಗೆ ಪಾತ್ರರಾದರು.

ಕರ್ನಾಟಕ ಪರವೂ ಆಡಿದ್ದರು


ಹೌದು, 30 ವರ್ಷದ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ಆಗಿರುವ ಶ್ರೇಯಸ್ ಮೋವಾ ದಾವಣಗೆರೆಯವರಾಗಿದ್ದಾರೆ. ಬಾಲ್ಯದ ದಿನದಲ್ಲಿ ಅಂದರೆ, 2006ರಲ್ಲಿ ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದು, ಬಳಿಕ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ ಅಂತಾರಾಜ್ಯ ವಯೋಮಿತಿ ಒಳಗೊಂಡ 19 ವರ್ಷದೊಳಗಿನ, 16 ವರ್ಷದೊಳಗಿನ ಪಂದ್ಯಾವಳಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.

ಕೆನಡಾ ಪೌರತ್ವ


ದಾವಣಗೆರೆಯ ಬಾಪೂಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಶ್ರೇಯಸ್, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೆನಡಾಕ್ಕೆ ತರೆಳಿದರು. ಇಲ್ಲಿಯೂ ಕೂಡ ಕ್ರಿಕೆಟ್​ ನಂಟು ಬಿಡದ ಇವರು ಅಲ್ಲಿನ ಸ್ಥಳೀಯ ಕ್ರಿಕೆಟ್​ ಟೂರ್ನಿಗಳಲ್ಲಿ ಆಡುವ ಮೂಲಕ ಗಮನಸೆಳೆದಿದ್ದರು. ಬಳಿಕ ಕೆನಡಾ ದೇಶದ ಪೌರತ್ವ ಪಡೆದು ಇದೀಗ ಕೆನಡಾ ರಾಷ್ಟ್ರೀಯ ತಂಡದ ಪರ ಆಡುತ್ತಿದ್ದಾರೆ. ಇದುವರೆಗೆ 6 ಟಿ20 ಮತ್ತು 7 ಏಕದಿನ ಪಂದ್ಯಗಳನ್ನಾಡಿ ಒಟ್ಟು 171 ರನ್​ ಬಾರಿಸಿದ್ದಾರೆ. ವಿಕೆಟ್​ ಕೀಪರ್​ ಆಗಿರುವ ಇವರು ಇದೇ ವರ್ಷ ನಡೆದಿದ್ದ ನೇಪಾಳ ವಿರುದ್ಧದ ಏಕದಿನ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

ಇದನ್ನೂ ಓದಿ USA vs CAN: ಆರನ್ ಜೋನ್ಸ್ ಪ್ರಚಂಡ ಬ್ಯಾಟಿಂಗ್​; ಗೆಲುವಿನ ಶುಭಾರಂಭ ಕಂಡ ಅಮೆರಿಕ

ಇಂದು ನಡೆದ ಅಮೆರಿಕ ವಿರುದ್ಧದ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿದ ಶ್ರೇಯಸ್ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ 16 ಎಸೆತಗಳಿಂದ ಅಜೇಯ 32 ರನ್​ ಬಾರಿಸಿದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್​ ಸಿಡಿಯಿತು. 20 ರನ್​ಗಳು ಬೌಂಡರಿ ಮತ್ತು ಸಿಕ್ಸರ್​ ಮೂಲಕವೇ ದಾಖಲಾಯಿತು. ಆದರೆ ಪಂದ್ಯ ಸೋತ ಕಾರಣ ಇವರ ಈ ಬ್ಯಾಟಿಂಗ್​ ಪ್ರದರ್ಶನ ವ್ಯರ್ಥವಾಯಿತು.

ಪಂದ್ಯ ಸೋತ ಕೆನಡಾ


ಇಲ್ಲಿನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ, ಡಲ್ಲಾಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಕೆನಡಾ ತಂಡ ನವನೀತ್ ಧಲಿವಾಲ್(61) ಮತ್ತು ನಿಕೋಲಸ್ ಕಿರ್ಟನ್(51) ಅರ್ಧಶತಕದ ಬ್ಯಾಟಿಂಗ್​ ನೆರವಿನಿಂದ 5 ವಿಕೆಟ್​ಗೆ 194 ರನ್​ ಬಾರಿಸಿತು. ಜವಾಬಿತ್ತ ಅಮೆರಿಕ ಈ ಬೃಹತ್​ ಮೊತ್ತವನ್ನು 17.4 ಓವರ್​ಗಳಲ್ಲಿ ಕೇವಲ 3 ವಿಕೆಟ್​ ಕಳೆದುಕೊಂಡು 197 ರನ್​ ಬಾರಿಸಿ ಅಮೋಘ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಯುಎಸ್​ಎ ಗರಿಷ್ಠ ಮೊತ್ತ ಚೇಸ್​ ಮಾಡಿದ ದಾಖಲೆ ಬರೆಯಿತು. ಇದಕ್ಕೂ ಮುನ್ನ 168 ರನ್​ಗಳನ್ನು ಚೇಸ್ ಮಾಡಿದ್ದು ತಂಡದ ಅತ್ಯುತ್ತಮ ಸಾಧನೆಯಾಗಿತ್ತು. ಇದೀಗ ಟಿ20 ವಿಶ್ವಕಪ್​ನ ಚೊಚ್ಚಲ ಪಂದ್ಯದಲ್ಲೇ ಐತಿಹಾಸಿಕ ಗೆಲುವು ದಾಖಲಿಸಿದೆ.

Continue Reading
Advertisement
Electric shock Electronic City
ಬೆಂಗಳೂರು ಗ್ರಾಮಾಂತರ9 mins ago

Electric Shock: ಪಲ್ಲಕ್ಕಿ ಹೊತ್ತಿದ್ದ ಟ್ರ್ಯಾಕ್ಟರ್‌ಗೆ ಪ್ರವಹಿಸಿದ ವಿದ್ಯುತ್‌; ಕ್ಷಣಾರ್ಧದಲ್ಲೇ ಇಬ್ಬರು ಸುಟ್ಟು ಕರಕಲು

Udupi Pocso case
ಪ್ರಮುಖ ಸುದ್ದಿ10 mins ago

Udupi Pocso case: ಉಡುಪಿಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯ ಕೇಸ್‌; 8-9 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ!

Aaron Jones
ಕ್ರಿಕೆಟ್26 mins ago

Aaron Jones: 17 ವರ್ಷಗಳ ಹಿಂದಿನ ಟಿ20 ವಿಶ್ವಕಪ್​ ದಾಖಲೆ ಸರಿಗಟ್ಟಿದ ಯುಎಸ್​ಎ ಬ್ಯಾಟರ್​ ಆರೋನ್ ಜೋನ್ಸ್

Indian 2 Audio Launch Kamal Haasan Simbu Kajal Aggarwal
ಕಾಲಿವುಡ್31 mins ago

Indian 2 Audio Launch: ಅದ್ಧೂರಿಯಾಗಿ ನೆರವೇರಿತು ʼಇಂಡಿಯನ್‌ 2ʼ ಸಿನಿಮಾದ ಆಡಿಯೊ ಲಾಂಚ್‌!

Traffic Advisory
Lok Sabha Election 202439 mins ago

Traffic Advisory : ಲೋಕಸಭೆ ಎಲೆಕ್ಷನ್‌ ಕೌಂಟಿಂಗ್‌; ಬೆಂಗಳೂರಲ್ಲಿ ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?

education News
ಬೆಂಗಳೂರು51 mins ago

Education News : ನೀಟ್ ಪರೀಕ್ಷೆ ಬಳಿಕ ಎಂಜಿನಿಯರ್ ಸೀಟು ಹಂಚಿಕೆ; 1.24 ಲಕ್ಷ ಸೀಟುಗಳು ಲಭ್ಯ, ಆನ್ ಲೈನ್ ಪ್ರಕ್ರಿಯೆ

Sushant Singh Rajput's sister cries as she visits Kedarnath
ಬಾಲಿವುಡ್55 mins ago

Sushant Singh: ಕೇದಾರನಾಥಕ್ಕೆ ಭೇಟಿ ಕೊಟ್ಟಾಗ ಸುಶಾಂತ್ ಸಿಂಗ್ ನೆನೆದು ಕಣ್ಣೀರಿಟ್ಟ ಸಹೋದರಿ!

PM Narendra Modi
ದೇಶ60 mins ago

PM Narendra Modi: ಎಕ್ಸಿಟ್‌ ಪೋಲ್‌ ರಿಸಲ್ಟ್‌ ಬೆನ್ನಲ್ಲೇ ಪ್ರಧಾನಿ ಮೋದಿ ಬ್ಯಾಕ್‌ ಟು ಬ್ಯಾಕ್‌ ಮೀಟಿಂಗ್‌

Muthyala Maduvu Waterfalls
ಪ್ರವಾಸ1 hour ago

Muthyala Maduvu Waterfalls: ಜಲರಾಶಿಯಿಂದ ತುಂಬಿಕೊಂಡು ಕಣ್ಮನ ಸೆಳೆಯುತ್ತಿರುವ ಮುತ್ಯಾಲಮಡುವು ಜಲಪಾತ

CAN vs USA
ಕ್ರೀಡೆ1 hour ago

CAN vs USA: ಕೆನಡಾ ಪರ ಟಿ20 ವಿಶ್ವಕಪ್​ ಪಂದ್ಯವಾಡಿದ ದಾವಣಗೆರೆಯ ಶ್ರೇಯಸ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು21 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ7 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು7 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌