horoscope today read your daily horoscope predictions for june‌ 30 2023Horoscope Today : ಲಕ್ಷ್ಮೀ ಪೂಜೆಯ ಈ ದಿನ ಈ ರಾಶಿಯವರಿಗೆ ಖರ್ಚು ಹೆಚ್ಚು! Vistara News

ಪ್ರಮುಖ ಸುದ್ದಿ

Horoscope Today : ಲಕ್ಷ್ಮೀ ಪೂಜೆಯ ಈ ದಿನ ಈ ರಾಶಿಯವರಿಗೆ ಖರ್ಚು ಹೆಚ್ಚು!

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ ದ್ವಾದಶಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

lakshmi horoscope
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದಿನ ಪಂಚಾಂಗ (30-06-2023)

ಶ್ರೀ ಶಕೇ 1945, ಶೋಭಕೃತ್‌ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ

ತಿಥಿ: ದ್ವಾದಶಿ 25:16 ವಾರ: ಶುಕ್ರವಾರ
ನಕ್ಷತ್ರ: ವಿಶಾಖ 16:09 ಯೋಗ: ಸಾಧ್ಯ 25:30
ಕರಣ: ಬಾಲವ 25:16 ಇಂದಿನ ವಿಶೇಷ: ಶಯನ ದ್ವಾದಶಿ, ಶಾಕವ್ರತಾರಂಭ, ಆಷಾಢ ಶುಕ್ರವಾರ
ಅಮೃತಕಾಲ: ಭಾನುವಾರ ಬೆಳಗ್ಗೆ 05 ಗಂಟೆ 09 ನಿಮಿಷದಿಂದ ಬೆಳಗ್ಗೆ 06 ಗಂಟೆ 40 ನಿಮಿಷದವರೆಗೆ.

ಸೂರ್ಯೋದಯ : 05:57 ಸೂರ್ಯಾಸ್ತ : 06:50

ರಾಹುಕಾಲ : ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Horoscope Today)

Horoscope Today

ಮೇಷ: ಬಣ್ಣದ ಮಾತುಗಳನ್ನು ನಂಬಿ ಇಂದು ಯಾವುದೇ ಹೂಡಿಕೆ ವ್ಯವಹಾರಗಳಲ್ಲಿ ತೊಡಗುವುದು ಬೇಡ. ಒತ್ತಡದ ದಿನದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರುತ್ತದೆ. ನಿಮ್ಮ ಆಪ್ತರಿಗೆ ನಿಮ್ಮ ಮಾತುಗಳು ಬೇಸರ ತರಿಸಬಹುದು. ಅನಾವಶ್ಯಕ ವಾದದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ, ಎಚ್ಚರಿಕೆ ಇರಲಿ. ದಿಢೀರ್ ಪ್ರಯಾಣ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವೃಷಭ: ಹಾಸ್ಯಪ್ರಜ್ಞೆಯ ನಡವಳಿಕೆಯಿಂದಾಗಿ ಇತರರನ್ನು ಚುಂಬಕದಂತೆ ಆಕರ್ಷಿಸಿ, ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಿಕೊಳ್ಳುವಿರಿ. ಭೂ ಹಾಗೂ ಹೂಡಿಕೆ ವ್ಯವಹಾರಗಳಲ್ಲಿ ದಿನದ ಮಟ್ಟಿಗೆ ತೊಡುಗುವುದು ಬೇಡ, ಇದರಿಂದ ಆರ್ಥಿಕವಾಗಿ ಬಳಲುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಮಿಶ್ರ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮಿಥುನ: ನಿಮಗಿಂದು ಉತ್ಸಾಹ ತುಂಬಿದ ವಾತಾವರಣ. ಇಂದು ನೀವು ಚೈತನ್ಯಯುಕ್ತವಾಗಿರುತ್ತೀರಿ. ಅನಾವಶ್ಯಕ ಖರ್ಚು ಮಾಡಿ ಆಮೇಲೆ ಬೇಸರ ಮಾಡಿಕೊಳ್ಳುವುದು ಬೇಡ. ಕುಟುಂಬದ ಯಜಮಾನನ ಬೆಂಬಲ ಸಿಗಲಿದೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಒತ್ತಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಕಟಕ: ನಿವು ಇತರರನ್ನು ಶ್ಲಾಘಿಸುವ ಮೂಲಕ ಯಶಸ್ಸನ್ನು ಆನಂದಿಸುವ ಸಾಧ್ಯತೆ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ. ಗೌಪ್ಯ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಮುನ್ನ ಎಚ್ಚರವಿರಲಿ. ಆರ್ಥಿಕವಾಗಿ ಪ್ರಗತಿ. ಪ್ರೇಮಿಗಳಿಗೆ ಶುಭ ಸುದ್ದಿ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಸಿಂಹ: ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಆಪ್ತರೊಂದಿಗೆ ವಾದಕ್ಕಿಳಿಯುವ ಸಾಧ್ಯತೆ, ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ವಿದ್ಯಾರ್ಥಿಗಳು ಉಜ್ವಲ ಭವಿಷ್ಯಕ್ಕಾಗಿ ಮನರಂಜನೆಗೆ ಕಡಿವಾಣ ಹಾಕುವುದು ಉತ್ತಮ. ಆರೋಗ್ಯ ಪರಿಪೂರ್ಣ. ಅನಿವಾರ್ಯ ಕಾರಣಗಳಿಂದ ಖರ್ಚು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಕನ್ಯಾ: ಸಕಾರಾತ್ಮಕ ಆಲೋಚನೆಗಳು ನಿಮಗೆ ಇಂದು ಹೆಚ್ಚಿನ ಶಕ್ತಿ ನೀಡಲಿವೆ. ಸೃಜನಶೀಲ ಕ್ಷೇತ್ರಗಳಲ್ಲಿರುವವರು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರಸಿದ್ಧಿ ಮತ್ತು ಗುರುತಿಸುವಿಕೆಯನ್ನು ಪಡೆಯುವ ಒಂದು ಯಶಸ್ವಿ ದಿನ. ವಿವಾಹ ಅಪೇಕ್ಷಿತರಿಗೆ ಶುಭ ಸೂಚನೆ ಸಿಗಲಿದೆ. ಆರೋಗ್ಯ ಪರಿಪೂರ್ಣ. ಆರ್ಥಿಕವಾಗಿ ಸದೃಢ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಅತಿಯಾದ ಒತ್ತಡದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುವ ಸಾಧ್ಯತೆ. ಜೀವನದ ಪ್ರಮುಖ ನಿರ್ಧಾರಗಳ ಕುರಿತು ನೀವು ಕುಟುಂಬದೊಂದಿಗೆ ಚರ್ಚಿಸುವ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವೃಶ್ಚಿಕ: ಹಳೆಯ ಸ್ನೇಹಿತರೊಂದಿಗೆ ಆತ್ಮೀಯ ಮಾತುಕತೆ ಆಡುವಿರಿ. ಭವಿಷ್ಯದ ಜೀವನಕ್ಕಾಗಿ ಹೂಡಿಕೆ ಕುರಿತು ಆಲೋಚನೆ ಮಾಡುವಿರಿ. ಸಂಗಾತಿಯಿಂದ ಸಲಹೆ ಪಡೆಯುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಆರ್ಥಿಕವಾಗಿ ಸಾಧಾರಣ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಧನಸ್ಸು: ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೋರ್ಟ್ ಕಚೇರಿ ವ್ಯಾಜ್ಯಗಳು ವಿಜಯವನ್ನು ತಂದು ಕೊಡಲಿವೆ. ದಿನದ ಕೊನೆಯಲ್ಲಿ ಯಾವುದಾದರೂ ಕಾರಣದಿಂದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ. ಆರೋಗ್ಯ ಪರಿಪೂರ್ಣ, ಆರ್ಥಿಕವಾಗಿ ಪ್ರಗತಿ. ಉದ್ಯೋಗಿಗಳಿಗೆ ಮಿಶ್ರ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ನಿಮ್ಮ ಜಾತಕದಲ್ಲಿ ಹೀಗೆ ಇದೆಯಾ? ಈ ವಿಡಿಯೋ ನೋಡಿ.
Horoscope Today

ಮಕರ: ಆರೋಗ್ಯ ಪರಿಪೂರ್ಣವಾಗಿರುತ್ತದೆ. ಯಾವುದೋ ಮೂಲದಿಂದ ಆರ್ಥಿಕವಾಗಿ ಬಲಗೊಳ್ಳಲಿದ್ದೀರಿ. ಕುಟುಂಬದ ಸದಸ್ಯರ ಅಪಸ್ವರದಿಂದಾಗಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆ. ಮಾತಿಗೆ ವಿರಾಮ ನೀಡಿ. ಉದ್ಯೋಗಿಗಳಿಗೆ ಪ್ರೋತ್ಸಾಹ ಸಿಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಕುಂಭ: ನಿಮ್ಮ ಕೋಪದ ಮನಸ್ಥಿತಿ ಇತರರ ಮೇಲೆ ಪ್ರಭಾವ ಬೀರಬಹುದು. ಅನಿವಾರ್ಯ ಕಾರಣಗಳಿಂದ ಸ್ನೇಹಿತರ ಸಹಾಯ ಬೇಡುವ ಸಾಧ್ಯತೆ. ನಿಮ್ಮ ಕೆಲಸದ ಮೇಲೆ ಗಮನ ಹರಿಸಿದಲ್ಲಿ ಯಶಸ್ಸು ಮತ್ತು ಮನ್ನಣೆ ನಿಮ್ಮದಾಗುತ್ತದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಪ್ರಗತಿ ಹೊಂದಲಿದ್ದೀರಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ಇದನ್ನೂ ಓದಿ : Mars Transit 2023 : ಜು.1ಕ್ಕೆ ಸಿಂಹ ರಾಶಿಗೆ ಮಂಗಳನ ಸಂಚಾರ; ಈ ಐದು ರಾಶಿಯವರಿಗೆ ಅದೃಷ್ಟವೋ ಅದೃಷ್ಟ!

Horoscope Today

ಮೀನ: ಅನಿವಾರ್ಯ ಕಾರಣಗಳಿಂದ ಕುಟುಂಬದ ಸದಸ್ಯರೊಂದಿಗೆ ಮನಸ್ತಾಪ, ಆದಾಗ್ಯೂ ನೀವು ನಿಮ್ಮ ಶಾಂತ ಸ್ವಭಾವದಿಂದ ಎಲ್ಲವನ್ನು ಸರಿಗೊಳಿಸಬಹುದು. ಆರೋಗ್ಯ ಪರಿಪೂರ್ಣ. ಆರ್ಥಿಕ ಪ್ರಗತಿ ಸಾಧಾರಣ. ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | [email protected]

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

Prerane Column : ವಿದ್ಯಾಭ್ಯಾಸ ಎಂದರೆ ದುಡ್ಡು ಮಾಡುವ ದಂಧೆಯ ಅಡಿಪಾಯವೇ?

Prerane Column : ವಿದ್ಯೆ ಎಂದರೆ ನಾಳೆ ದುಡ್ಡು ಮಾಡಲು ಇರುವ ದಾರಿ ಎಂದು ಕೆಲವರು ತಿಳಿದುಕೊಂಡಿದ್ದಾರೆ. ಆದರೆ, ನಿಜವಾದ ವಿದ್ಯೆಯ ಉದ್ದೇಶ ಅದಲ್ಲವೇ ಅಲ್ಲ.

VISTARANEWS.COM


on

sadghuru with students
Koo
Sadhuru Jaggi Vasudev

ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್‌
(Sadguru Jaggi Vasudev, Isha Foundation)

ಇಂದಿನ ವಿದ್ಯಾಭ್ಯಾಸದ ಉದ್ದೇಶ (Education System), ಇಲ್ಲಿರುವುದೆಲ್ಲವನ್ನೂ ನಮಗೆ ಉಪಯೋಗವಾಗುವಂತೆ ಬಳಸಿಕೊಳ್ಳುವುದು ಹೇಗೆ ಎಂಬುದಾಗಿದೆ. ಒಂದು ಎಲೆಯನ್ನೂ ತಮ್ಮ ಲಾಭಕ್ಕಾಗಿ ಉಪಯೋಗಿಸುವ ಸ್ವಾರ್ಥದ ಮನೋಭಾವನೆ (Selfish mind) ಮನುಷ್ಯರಿಗೆ ಬಂದುಬಿಟ್ಟಿದೆ. ಮರ, ಗಾಳಿ, ಭೂಮಿಯ ತಳದಲ್ಲಿ ಹುದುಗಿಸುವ ಪ್ರಕೃತಿ ಸಂಪತ್ತು, ಕಡೆಗೆ ಕಣ್ಣಿಗೆ ಕಾಣದ ಸೂಕ್ಷ್ಮವಾದ ವೈರಸ್‌ನಲ್ಲೂ ತಮಗೆ ಏನು ಆದಾಯ ದೊರೆಯಬಹುದೆಂಬುದೇ ಅವರ ಯೋಚನೆ (Prerane Column).

ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ತನ್ನದೇ ಆದ ಒಂದು ಪ್ರಪಂಚವಿದೆ. ಪ್ರಕೃತಿಗೆ ಸಂಬಂಧಿಸಿದಂತೆ ಮನುಷ್ಯರೂ ಬೇರೆ ಜೀವಿಗಳಂತೆಯೇ ಒಂದು ಜೀವಿ, ಎಲ್ಲವನ್ನೂ ಒಳಗೂಡಿಸಿಕೊಳ್ಳುವುದೇ ನಿಜವಾದ ವಿದ್ಯೆ..
ಆದರೆ, ಮನುಷ್ಯರು ಮಾತ್ರ ತಮ್ಮ ಬಗೆಗೆ ಏನನ್ನು ಯೋಚಿಸುತ್ತಾರೆಂದು ನಿಮಗೆ ಗೊತ್ತೇ?

ಕಾಗೆ, ಜೇನ್ನೊಣ ಮತ್ತು ಮನುಷ್ಯ ಸ್ವರ್ಗಕ್ಕೆ ಹೋದಾಗ..

ಒಂದು ಕಾಗೆ, ಒಂದು ಜೇನ್ನೊಣ, ಒಬ್ಬ ಮನುಷ್ಯ ಒಂದೇ ಸಮಯದಲ್ಲಿ ಮರಣವನ್ನಪ್ಪಿದರು. ದೇವಲೋಕಕ್ಕೆ ಅವರನ್ನು ಕರೆದುಕೊಂಡು ಹೋಗಿ ವಿಚಾರಣೆಗೆ ನಿಲ್ಲಿಸಿದರು. ಅಲ್ಲಿ ಅವರಿಗೆ ಎಲ್ಲಿ ಜಾಗ ಬೇಕೆಂದು ದೇವರು ಕೇಳಿದರು.
1. ಜೇನ್ನೊಣವು, ಭೂಮಿಯ ಮೇಲಿದ್ದಾಗ ಹಲವು ಬಗೆಯ ಮಕರಂದವನ್ನು ಶೇಖರಿಸಿದೆ. ನನಗೆ ಸ್ವರ್ಗ ದೊರೆತರೆ ಸಂತೋಷವಾಗುತ್ತದೆ ಎಂದಿತು.

2.ಕಾಗೆ, ಹಲವಾರು ಬಗೆಯ ಬೀಜಗಳನ್ನು ನಾನು ಬೇರೆ ಬೇರೆ ಸ್ಥಳಗಳಲ್ಲಿ ಉಗುಳಿದ ಕಾರಣ ಅರಣ್ಯ ಅಭಿವೃದ್ಧಿಯಾಯಿತು. ಪ್ರಕೃತಿಗೆ ಸಹಾಯಮಾಡಿದ ನನಗೂ ಸ್ವರ್ಗದಲ್ಲಿ ಸ್ಥಳ ಬೇಕು ಎಂದಿತು.

3.ಆದರೆ ಮನುಷ್ಯ, “ಏ ಹಲೋ? ನೀನು ಕುಳಿತಿರುವುದು ನನ್ನ ಕುರ್ಚಿ, ಎದ್ದೇಳು” ಎಂದನು.

ದೇವರು ತನ್ನ ಆಕಾರದಂತೆಯೇ ಇರುವುದಾಗಿ ಮನುಷ್ಯರ ಕಲ್ಪನೆಯಿರುವುದರಿಂದ ನಮಗೆ ಮಿತಿಮೀರಿದ ಅಹಂಭಾವ. ಬೇರೆ ಜೀವರಾಶಿಗಳಿಗಿಂತ ಹೆಚ್ಚಿನ ಬುದ್ಧಿವಂತಿಕೆಯಿದೆ ಎಂದುಕೊಂಡಿರುವುದರಿಂದ ತಮ್ಮನ್ನು ದೇವರನ್ನಾಗಿಯೇ ಭಾವಿಸಿ, ತಮ್ಮ ಸುಖವನ್ನು ಮಾತ್ರ ಸದಾಕಾಲ ಯೋಚಿಸುತ್ತಾ ತಮಗೆ ಹೊಂದಿಕೆಯಾಗದ ಎಲ್ಲವನ್ನೂ ಈ ಪ್ರಪಂಚದಿಂದಲೇ ಅಳಿಸಿಹಾಕಲು ಮುಂದಾಗಿದ್ದಾರೆ ಜನರು.

ಈ ಮನೋಭಾವಕ್ಕೆ ಜತೆಗೂಡುವಂತೆ ರಚಿತವಾಗಿವುದೇ ಇಂದಿನ ವಿದ್ಯಾಭ್ಯಾಸದ ದೊಡ್ಡ ಕೊರತೆ. ಒಬ್ಬ ವಿಜ್ಞಾನಿ ತನ್ನ ಸಂಶೋಧನಾ ಲೇಖನಗಳನ್ನು ಜೋಡಿಸಿಕೊಳ್ಳಲು ಒಂದು ಜೆಮ್ ಕ್ಲಿಪ್ಪನ್ನು ಹುಡುಕಾಡಿದಾಗ ಒಂದು ಬಾಗಿದ ಕ್ಲಿಪ್ ದೊರಕಿತು. ಅದನ್ನು ಸರಿಪಡಿಸಲು ಒಂದು ಉಪಕರಣವನ್ನು ಹುಡುಕುತ್ತಿದ್ದಾಗ ಜೆಮ್ ಕ್ಲಿಪ್‌ಗಳ ಪೆಟ್ಟಿಗೆಯೇ ಸಿಕ್ಕಿತು. ವಿಜ್ಞಾನಿಯು, ಸರಿಯಾಗಿದ್ದ ಹೊಸ ಕ್ಲಿಪ್ಪಿನಿಂದ ಬಾಗಿದ್ದ ಕ್ಲಿಪ್ಪನ್ನು ಸರಿಮಾಡಲು ಪ್ರಾರಂಭಿಸಿದ. ಇದರಿಂದ ಆಶ್ಚರ್ಯಗೊಂಡ ಸಹಾಯಕನನ್ನು ನೋಡಿದ ವಿಜ್ಞಾನಿಗೆ ತನ್ನ ತಪ್ಪಿನ ಅರಿವಾಯಿತು.

ನಿಜವಾದ ವಿದ್ಯಾಭ್ಯಾಸ ಅಂದರೆ ಏನು?

ನಿಜವಾದ ವಿದ್ಯಾಭ್ಯಾಸವೆಂದರೆ ಗಂಡು, ಹೆಣ್ಣು ಎಂಬ ಭೇದ ಭಾವ ಕೂಡದು. ಇಬ್ಬರಿಗೂ ಶ್ರೇಯಸ್ಸು ಒದಗಿಸುವಂತೆ ಅದು ಸಾಮಾನ್ಯವಾಗಿರಬೇಕು. ಬೇರೆಯವರ ಕಣ್ಣಿಗೆ ಮಿಂಚುವಂತೆ ಕಾಣಬೇಕೆಂಬ ಕಾರಣಕ್ಕಾಗಿ ಅದು ರೂಪಿತವಾದರೆ ಕುಟುಂಬಗಳು ಮಾತ್ರವಲ್ಲ ಸಂಬಂಧಗಳು ಹಾಗೂ ಸಮುದಾಯಗಳಲ್ಲಿಯೂ ತೊಂದರೆಗಳು ಕಂಡುಬರುತ್ತವೆ.

sadghuru with students

ಹಿಂದೆ ನಮ್ಮ ದೇಶದಲ್ಲಿದ್ದ ಶಿಕ್ಷಣವು ಕೇವಲ ಒಬ್ಬ ವ್ಯಕ್ತಿಯನ್ನು ರೂಪಿಸುವಲ್ಲಿ ಮಾತ್ರ ನಿಲ್ಲದೆ, ಅವರೊಂದಿಗೆ ಸೇರಿದವರೆಲ್ಲರನ್ನೂ ಸೇರಿಸಿಕೊಂಡು ಮುನ್ನಡೆಯುವ ಸಲುವಾಗಿ ರೂಪುಗೊಂಡಿತ್ತು. ಇತರರನ್ನೂ ತನ್ನಂತೆಯೇ ಭಾವಿಸುವಂತೆ ಅದು ರೂಪುಗೊಂಡಿತ್ತು.

ಆದರೆ, ಇಂಗ್ಲಿಷ್ ಆಳ್ವಿಕೆಯಡಿಯಲ್ಲಿ ರೂಢಿಗೆ ಬಂದ ವಿದ್ಯಾಭ್ಯಾಸ, ನಾವು ಎಂದು ಹೇಳುವುದರ ಬದಲಾಗಿ ನಾನು ಎಂದು ಪರಿಗಣಿಸುವಂತೆ ಮಾಡಿತು. ನಾನು, ನನ್ನದು ಎಂಬುದನ್ನು ಮಾತ್ರ ಗಮನದಲ್ಲಿರಿಸಿಕೊಂಡಿರುವ ವಿದ್ಯಾಭ್ಯಾಸವು, ಸಮಾಜಕ್ಕೆ, ಕುಟುಂಬಕ್ಕೆ ಎಂದಿಗೂ ಉಪಯೋಗವಾಗುವಂತಹುದಲ್ಲ.

ನಾವು ಜೀವಿಸುವ ಮನೆಯನ್ನು ಇಲ್ಲವೆ ದೇಶವನ್ನು ಕಡೆಗಣಿಸಿ ನಮ್ಮದೇ ಆದ ದೇಶದಲ್ಲಿ ಅನ್ಯದೇಶದವರಂತೆ ಭಾವನೆಯನ್ನು ಉಂಟುಮಾಡುವ ವಿದ್ಯಾಭ್ಯಾಸ ಸರಿಯಾದುದಲ್ಲ. ಬದುಕಲು ಮರ‍್ಗವನ್ನು ಮಾತ್ರ ತೋರಿಸಿ ಅಲ್ಲಿಗೆ ನಿಂತುಬಿಡದೆ, ವಿದ್ಯಾವಂತರು ತಮ್ಮ ದೃಷ್ಟಿಯನ್ನು ಬೇರೆ ಕೋನಗಳಿಂದ ನೋಡಲು ಅವಕಾಶ ನೀಡುವಂತಹ ಸಮಗ್ರ ವಿದ್ಯಾಭ್ಯಾಸದ ಅಗತ್ಯವಿದೆ.

ನಮ್ಮ ಗ್ರಾಮಗಳಲ್ಲಿ ಲಕ್ಷಗಟ್ಟಲೆ ಜನರು ಹಲವು ತಲೆಮಾರುಗಳಿಂದ ಅದೇ ರೀತಿಯಲ್ಲಿ ದೀನರಾಗಿ ಜೀವನವನ್ನು ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಸಮೃದ್ಧಿಯಾಗಿ, ಸುರಕ್ಷತೆಯಿಂದ ಅತ್ಯಂತ ಶಕ್ತಿಶಾಲಿಗಳಾಗಿದ್ದ ಸಮಾಜದ ಪ್ರಜೆಗಳು ಇಂದು ಆಧಾರ ಕಳೆದುಕೊಂಡಂತೆ ಕಂಡುಬರುತ್ತಿದ್ದಾರೆ. ಸಾರ್ವತ್ರಿಕ ಅಭಿವೃದ್ಧಿಯಲ್ಲಾಗಲಿ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಾಗಲಿ, ಭೂಮಿಯನ್ನು ಬಳಸಿಕೊಳ್ಳುವುದರಲ್ಲಾಗಲಿ ಅವರ ಜೀವನ-ವಿಧಾನ ಸ್ವಲ್ಪವೂ ಮುನ್ನಡೆ ಸಾಧಿಸುತ್ತಿಲ್ಲ. ಅವರ ಮುತ್ತಾತಂದಿರು, ತಾತಂದಿರು, ತಂದೆತಾಯಿಯರು ಸಿಕ್ಕಿಹಾಕಿಕೊಂಡಿದ್ದ ಕೆಸರಿನಿಂದ ಇಂದಿನ ಹೊಸ ತಲೆಮಾರು ಹೊರಗೆ ಬರಲು ಸಾಧ್ಯವಾಗಬೇಕಾದರೆ ಅದಕ್ಕೆ ಮುಖ್ಯ ಮೆಟ್ಟಲಾದ ವಿದ್ಯಾಕ್ಷೇತ್ರದ ಅಭಿವೃದ್ಧಿಯಾಗಬೇಕು. ಆದರೆ ಇಂದಿನ ವಿದ್ಯಾಭ್ಯಾಸ ಅದರಿಂದ ಬಿಡುಗಡೆ ಮಾಡುವುದಕ್ಕೆ ಬದಲಾಗಿ ಮತ್ತಷ್ಟು ಗೊಂದಲಕ್ಕೆ ಕೆಡವಿ ಅವರ ಜೀವನವನ್ನೊಂದು ಹೋರಾಟವನ್ನಾಗಿ ಮಾಡಿದೆ.

ಮೂರು ಶತಕಗಳ ಹಿಂದೆ ಇಲ್ಲಿನ ಪ್ರಜೆಗಳೆಲ್ಲರೂ ಓದಲು ಬರೆಯಲು ಕಲಿತವರಾಗಿದ್ದರು. ವಿದ್ಯಾಭ್ಯಾಸ ಮತ್ತು ಸಂಸ್ಕೃತಿಗಳು ಭಾರತದ ಎರಡು ಅಡಿಗಲ್ಲುಗಳಾಗಿ, ಶಕ್ತಿಯುತವಾಗಿ ಮುಂದುವರಿಯುತ್ತಿರುವವರೆಗೂ, ಅವರನ್ನು ಸ್ವಾಧೀನಪಡಿಸಿಕೊಳ್ಳಲು ಇರುವ ಅಡೆತಡೆಗಳನ್ನು, ಮೆಕಾಲೆಯು ಬ್ರಿಟಿಷ್ ಸರಕಾರಕ್ಕೆ ವಿವರಿಸಿದನು. ಈ ಮಹಾನ್ ಶಕ್ತಿಗಳನ್ನು ಬಗ್ಗುಬಡಿಯಲು ಬೇಕಾದ ಯೋಜನೆಗಳನ್ನು ಅವರು ರೂಪಿಸತೊಡಗಿದರು. ಅದರಲ್ಲಿ ಮುಖ್ಯವಾಗಿ ನಡೆದಿದ್ದು, ಇನ್ನೂರು ವರ್ಷಗಳ ಅವಧಿಯಲ್ಲಿ, ಭಾರತದ ಪ್ರಜೆಗಳಲ್ಲಿ ಸುಮಾರು ಶೇಕಡಾ ಎಪ್ಪತ್ತರಷ್ಟು ಜನರು ಅನಕ್ಷರಸ್ಥರಾಗಿದ್ದು!

ಯೋಜನೆಯನ್ನು ರೂಪಿಸಿಕೊಂಡು ಏನನ್ನಾದರೂ ನಾಶ ಮಾಡಲು ನಮಗೆ ಸಾಧ್ಯವಿರುವಾಗ ಹಾಗೆಯೇ ನಿರ್ಮಿಸಲು ಏಕೆ ಸಾಧ್ಯವಾಗುವುದಿಲ್ಲ? ಇದನ್ನು ಅರ್ಥ ಮಾಡಿಕೊಳ್ಳದೆ ಇಂದಿನ ಸನ್ನಿವೇಶವನ್ನು ದೂರುತ್ತಾ, ಬದುಕನ್ನು ನೂಕುತ್ತಾ ಇದ್ದರೆ ಏನನ್ನೂ ಬದಲಾಯಿಸಲಾಗುವುದಿಲ್ಲ.

ವ್ಯವಸ್ಥಿತವಾದ ವಿದ್ಯಾಭ್ಯಾಸ, ಒಗ್ಗಟ್ಟು, ಆರೋಗ್ಯ, ಒಂದು ಮುನ್ನೋಟ ಅಥವಾ ಉದ್ದೇಶ, ಇಂತಹ ಯಾವುದೂ ಇಲ್ಲದೆ ಕೋಟಿಗಟ್ಟಲೆ ಜನರು ಬಳಲಿ ಬೆಂಡಾಗುತ್ತಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಯಾವ ದೇಶವೂ ಮುನ್ನಡೆಯಲು ಸಾಧ್ಯವಾಗುವುದಿಲ್ಲ.

ಅದೇ ಕೋಟಿಗಟ್ಟಲೆ ಜನರು ಕಲಿತವರಾಗಿದ್ದು, ಒಳ್ಳೆಯ ನೀತಿವಂತರಾಗಿದ್ದು, ಉತ್ತಮ ಆರೋಗ್ಯಶಾಲಿಗಳಾಗಿದ್ದುಕೊಂಡು, ರ‍್ಪಣಾ ಮನೋಭಾವವನ್ನು ಹೊಂದಿದ್ದು, ಸಮರ್ಥವಾಗಿ ಕೆಲಸಗಳನ್ನು ನಿರ್ವಹಿಹಿಸಿದರೆ, ಎಂಥೆಂಥ ಅದ್ಭುತಗಳನ್ನು ಸಾಧಿಸಬಹುದೆಂಬುದನ್ನು ಯೋಚಿಸಿ.

ವಿದ್ಯೆ ಎಂಬುದು ಒಂದು ಶಕ್ತಿಯುತವಾದ ಆಯುಧ. ಬೇರೆ ಜೀವರಾಶಿಗಳೊಂದಿಗೆ ಅನ್ಯೋನ್ಯವಾಗಿರುವಂತಹವರಿಗೆ ಮಾತ್ರ ಅದನ್ನು ನೀಡಬೇಕು. ಉನ್ನತಮಟ್ಟದ ವಿದ್ಯಾಭ್ಯಾಸ ನೀಡುವುದರ ಮೂಲಕ ವಿಶ್ವದ ಯಾವುದೇ ಒಂದು ಸಣ್ಣ ಬಿಂದುವಿನಿಂದಲೂ ಅವರು ತಮ್ಮ ಜೀವನವನ್ನು ಬುದ್ಧಿವಂತಿಕೆಯಿಂದ ಅಳವಡಿಸಿಕೊಳ್ಳಲು ಅವರು ಸಿದ್ಧರಾಗಿರಬೇಕೆಂಬುದೇ ನನ್ನ ಅಭಿಲಾಷೆ.

ಈಜು ತರಬೇತಿಯಲ್ಲಿ ಸಾಲಿನ ಕೊನೆಗೆ ನಿಲ್ಲುತ್ತಿದ್ದ ಶಿಷ್ಯ

ಒಂದು ಗುರುಕುಲದಲ್ಲಿ ಬೆಳೆದ ಶಿಷ್ಯರು ಈಜುವ ತರಬೇತಿಗಾಗಿ ಹೊರಟರು. ಪ್ರತಿಯೊಬ್ಬರೂ ನದಿಯಲ್ಲಿ ಕುಪ್ಪಳಿಸುತ್ತಾ ಈಜಿಕೊಂಡು ಬಂದು ದಡವನ್ನು ಸೇರಬೇಕೆಂಬುದು ನಿಯಮ. ಅವರಲ್ಲಿ ಒಬ್ಬನು ಮಾತ್ರ ಯಾವಾಗಲೂ ಸಾಲಿನಲ್ಲಿ ಕೊನೆಗೆ ನಿಲ್ಲುತ್ತಿದ್ದುದನ್ನು ಅವರ ಗುರುಗಳು ಹಲವಾರು ಬಾರಿ ಗಮನಿಸಿದರು.
ಒಂದು ದಿನ ಅವನನ್ನು ಕರೆದು, ಈವತ್ತಿನಿಂದ ನೀನೇ ಮೊದಲನೆಯದಾಗಿ ಗೆದ್ದು ಬರಬೇಕು ಎಂದರು. ನಡುಗುತ್ತಾ ನಿಂತಿದ್ದ ಅವನನ್ನು ನೀರಿನೊಳಕ್ಕೆ ನೂಕಿದರು. ಏನಾಶ್ಚರ್ಯ! ಶಿಷ್ಯನು ಅನಾಯಾಸದಿಂದ ಈಜಿದನು. ಅವನಿಗೆ ಇದ್ದಕ್ಕಿದ್ದಂತೆ ಭಯವೆಲ್ಲವೂ ತೊಲಗಿಹೋಗಿ ಧೈರ್ಯ ತುಂಬಿಕೊಂಡಿತು.

ಗುರುಗಳು ಶಿಷ್ಯನಿಗೆ ಹೇಳಿದರು, ತುರ್ತಾಗಿ ಜವಾಬ್ದಾರಿ ವಹಿಸಿ, ಕೂಡಲೇ ಗಮನ ಹರಿಸಿ ಮಾಡಬೇಕಾದ ಕೆಲಸಗಳಿರುತ್ತವೆ. ಅಂತಹ ಸಂರ‍್ಭದಲ್ಲಿ ತಡಮಾಡಿದರೆ ಕೆಲಸ ಹಾಳಾಗುತ್ತದೆ. ಗಾಬರಿಯನ್ನು ದೂರವಿರಿಸಿ ಕೂಡಲೇ ಕರ‍್ಯಗತವಾಗಲು ಬೇಕಾದ ತರಬೇತಿ ಇಂದು ನಿನಗೆ ದೊರೆಯಿತು ಎಂದರು.

ನಮ್ಮಿಂದ ಆಗದ ಕೆಲಸ ಮಾಡದಿದ್ದರೆ ತಪ್ಪಾಗುವುದಿಲ್ಲ. ನಮ್ಮಿಂದ ಆಗುವ ಕೆಲಸವನ್ನು ಮಾಡದಿರುವುದು ಬಹು ದೊಡ್ಡ ಅಪರಾಧ. ನಾವು ತಡಮಾಡದೆ ನಿರ್ವಹಿಸಬೇಕಾದ ಕರ್ತವ್ಯ ಇದು.

ಗ್ರಾಮ ಪ್ರದೇಶಗಳಲ್ಲಿ ಪ್ರಾಥಮಿಕ ಪಾಠಶಾಲೆಗಳಾಗಿ ಈಶ ವಿದ್ಯಾ ನಡೆಸುತ್ತಿರುವ ಶಾಲೆಗಳ ವಾರ್ಷಿಕ ಸಮಾರಂಭಗಳು ನಡೆದಾಗ, ನಾವು ಕೆಲವು ಶಾಲೆಗಳನ್ನು ಪ್ರಾರಂಭಿಸಿರುವುದನ್ನು ತಿಳಿದ ಜನರು ಚಪ್ಪಾಳೆ ತಟ್ಟುತ್ತಾರೆ. ಒಂದು ಲಕ್ಷ ಮರಗಳನ್ನು ನೆಟ್ಟಿರುವುದನ್ನು, ಸಾವಿರಕ್ಕೆ ಮೇಲ್ಪಟ್ಟ ಹಳ್ಳಿಗಳಿಗೆ ವೈದ್ಯಕೀಯ ನೆರವನ್ನು ಕಲ್ಪಿಸಿದುದನ್ನು ತಿಳಿದು ಜನರು ಆಶ್ಚರ್ಯಪಡುತ್ತಾರೆ.

ಇಂತಹ ಸಣ್ಣ ಪುಟ್ಟ ಕಾರ್ಯಗಳಿಗಾಗಿ ಜನರು ತೃಪ್ತಿಗೊಂಡು ಚಪ್ಪಾಳೆ ಹಾಕಿದಾಗಲೆಲ್ಲಾ ನನಗೆ ಮನಸ್ಸಿನಲ್ಲಿ ನೋವುಂಟಾಗುತ್ತದೆ. ಕೆಲವು ಪಾಠಶಾಲೆಗಳು ನಮಗೆ ಏತೇತಕ್ಕೂ ಸಾಕಾಗುವುದಿಲ್ಲ. ಸಾವಿರಗಟ್ಟಲೆ ಶಾಲೆಗಳು ಪ್ರಾರಂಭವಾಗಬೇಕು, ಲಕ್ಷ ಮರಗಳೂ ಸಾಕಾಗುವುದಿಲ್ಲ; ಕೋಟಿಗಟ್ಟಲೆ ಮರಗಳನ್ನು ನೆಡಬೇಕು, ಬೆಳಸಬೇಕು. ತಮ್ಮ ದೇಹದ ಬಗೆಗೆ ಸ್ವಲ್ಪವೂ ತಿಳುವಳಿಕೆಯಿಲ್ಲದ, ಹಳ್ಳಿಯ ಜನರಿಗೆ ಆರೋಗ್ಯದ ಬಗೆಗೆ ತಿಳುವಳಿಕೆ ಬರುವಂತಾಗಬೇಕು. ಅವರಿಗೆ ಮೂಲಭೂತ ವೈದ್ಯಕೀಯ ಸೌಲಭ್ಯಗಳು ದೊರೆಯವಂತಾಗಬೇಕು.

ಜವಾಬ್ದಾರಿಯಿಲ್ಲದ ತಿಳುವಳಿಕೆಯೇ ಪ್ರಪಂಚದಲ್ಲಿ ಇಂದು ಅನೇಕ ವಿನಾಶಗಳಿಗೆ ಮೂಲ ಕಾರಣವಾಗಿದೆ. ನಮ್ಮ ಹೊಣೆಗಾರಿಕೆಯ ಬಗೆಗೆ ತೀವ್ರವಾದ ಆಸಕ್ತಿ, ಇತರರ ಬಗೆಗೆ ಅನುಕಂಪ, ಎಲ್ಲರ ಬಗೆಗೂ ಪ್ರೀತಿ ಇವುಗಳನ್ನು ನಮ್ಮಲ್ಲಿ ಬೆಳೆಸದ ಯಾವುದೇ ವಿದ್ಯಾಭ್ಯಾಸ ಅಪಾಯಕಾರಿ.

ಇದನ್ನೂ ಓದಿ: Prerane Column : ನೀವು ಆಹಾರವನ್ನು ಅನುಭವಿಸುತ್ತಾ ತಿಂತೀರಾ? ಇಲ್ಲ ಸುಮ್ನೆ ನುಂಗ್ತೀರಾ?

ಮಾನವ ಇತಿಹಾಸದಲ್ಲಿ ಇದಕ್ಕೆ ಮುಂಚೆ ಇಂತಹ ಸಾಧಕವಾದ, ಅನುಕೂಲಕರವಾದ ಪರಿಸ್ಥಿತಿ ಎಂದೂ ಒದಗಿ ಬಂದಿರಲಿಲ್ಲ. ಅಗತ್ಯವಿರುವ ಮೂಲ ವಸ್ತು, ಔದ್ಯೋಗಿಕ ಕೌಶಲ್ಯ, ಕಾರ್ಯ ನಿರ್ವಹಣಾ ಸಾಮರ್ಥ್ಯ ಇದಾವುದಕ್ಕೂ ಈಗ ಕೊರತೆಯಿಲ್ಲ. ಬೇಕಾಗಿರುವುದು ಮನೋನಿಶ್ಚಯ, ಮುನ್ನಡೆ ಇವುಗಳು ಮಾತ್ರ. ಸಮರ್ಪಣಾ ಮನೋಭಾವದಿಂದ ಮುನ್ನಡೆದರೆ ಮುಂದಿನ ಇಪ್ಪತ್ತು ವರ್ಷಗಳಲ್ಲಿ ನಾವು ಕನಸಿನಲ್ಲಿ ಕಾಣುವ ಅದ್ಭುತವಾದ ಸನ್ನಿವೇಶವನ್ನು ಇಲ್ಲಿ ಕಾಣಲು ಸಾಧ್ಯವಾಗುತ್ತದೆ.


ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn
ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – [email protected]

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ ಮೂಲಕ ತಿಳಿಸಿ

Continue Reading

ಕರ್ನಾಟಕ

CM Siddaramaiah: ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 50 ಲಕ್ಷ ರೂ. ಪರಿಹಾರ

ಕರ್ನಾಟಕದ ಹುತಾತ್ಮ ಯೋಧ ಪ್ರಾಂಜಲ್‌ (Captain Pranjal) ಅವರ ಕುಟುಂಬಕ್ಕೆ ರೂ. 50,00,000 (ಐವತ್ತು ಲಕ್ಷ) ಪರಿಹಾರಧನವನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಮಂಜೂರು ಮಾಡಿದ್ದಾರೆ.

VISTARANEWS.COM


on

cm siddaramaih respect captain pranjal
Koo

ಬೆಂಗಳೂರು: ಜಮ್ಮು ಕಾಶ್ಮೀರದ ರಜೌರಿಯಲ್ಲಿ ಪಾಕ್‌ ಮೂಲದ ಭಯೋತ್ಪಾದಕರ ಜತೆಗೆ ಗುಂಡಿನ ಕಾಳಗದಲ್ಲಿ (Rajouri Encounter) ಮಡಿದ ಕರ್ನಾಟಕದ ವೀರ ಯೋಧ ಪ್ರಾಂಜಲ್‌ (Captain Pranjal) ಅವರ ಕುಟುಂಬಕ್ಕೆ ರೂ. 50,00,000 (ಐವತ್ತು ಲಕ್ಷ) ಪರಿಹಾರಧನವನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಮಂಜೂರು ಮಾಡಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್‌ (ಟ್ವಿಟರ್)‌ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. “ಜಮ್ಮು – ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದ ವೇಳೆ ಹುತಾತ್ಮರಾದ ನಾಡಿನ ಹೆಮ್ಮೆಯ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ರೂ. 50,00,000 ( ಐವತ್ತು ಲಕ್ಷ ) ಪರಿಹಾರಧನವನ್ನು ನಮ್ಮ ಸರ್ಕಾರದಿಂದ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ದೇಶ ರಕ್ಷಣೆಗಾಗಿ ಪ್ರಾಣ ಪಣಕ್ಕಿಟ್ಟು ಶ್ರಮಿಸುವ ಪ್ರತಿಯೊಬ್ಬ ಯೋಧನ ಬಗ್ಗೆ ನಮಗೆ ಅಪಾರ ಗೌರವವಿದೆ. ಹುತಾತ್ಮ ಯೋಧ ಪ್ರಾಂಜಲ್ ಅವರ ತ್ಯಾಗ, ಬಲಿದಾನಕ್ಕೆ ಬೆಲೆಕಟ್ಟಲಾಗದು, ಆದರೆ ದೇಶದ ಕೋಟ್ಯಂತರ ಜನರ ಪರವಾಗಿ ಈ ಹೊತ್ತಿನಲ್ಲಿ ಅವರ ಕುಟುಂಬದ ಜೊತೆ ನಿಲ್ಲಬೇಕಾದುದ್ದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ. ಪರಿಹಾರಧನದ ಚೆಕ್ ಅನ್ನು ಸಿದ್ಧಪಡಿಸಲಾಗಿದ್ದು ನಾಳೆ ಮೃತ ಯೋಧನ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. ಮತ್ತೊಮ್ಮೆ ಕ್ಯಾಪ್ಟನ್ ಪ್ರಾಂಜಲ್ ಅವರ ಅನನ್ಯ ದೇಶಸೇವೆ, ಸಮರ್ಪಣಾಭಾವವನ್ನು ಗೌರವದಿಂದ ಸ್ಮರಿಸುತ್ತಾ, ಗೌರವ ನಮನ ಸಲ್ಲಿಸುತ್ತೇನೆʼʼ ಎಂದು ಬರೆದಿದ್ದಾರೆ.

ಜಮ್ಮು ಕಾಶ್ಮೀರದ ರಜೌರಿಯಲ್ಲಿ ಪಾಕ್‌ ಮೂಲದ ಭಯೋತ್ಪಾದಕರ ಜತೆಗೆ ಗುಂಡಿನ ಕಾಳಗದಲ್ಲಿ (Rajouri Encounter) ಕರ್ನಾಟಕದ ವೀರ ಯೋಧ ಪ್ರಾಂಜಲ್‌ (Captain Pranjal) ಮೃತಪಟ್ಟಿದ್ದರು. ಇವರ ಮನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ನಿಸರ್ಗ ಬಡಾವಣೆಯಲ್ಲಿದೆ. ಯೋಧನ ಮನೆಯ ಆವರಣದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಸಂಸ್ಕಾರ ನಡೆದಿತ್ತು. ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವಾರು ಗಣ್ಯರು ಅಲ್ಲಿಗೆ ಭೇಟಿ ನೀಡಿ, ಹುತಾತ್ಮ ಯೋಧನ ಅಂತಿಮ ದರ್ಶನ ಪಡೆದಿದ್ದರು. ಸಂಬಂಧಿಕರು ಹಾಗೂ ಸಹಸ್ರಾರು ಸಾರ್ವಜನಿಕರ ಉಪಸ್ಥಿತಿಯಲ್ಲಿ ಅಂತ್ಯಸಂಸ್ಕಾರ ನಡೆದಿತ್ತು.

ಉಗ್ರರ ಜತೆಗಿನ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಬಡಿದಾಡಿ ಪ್ರಾಣ ತ್ಯಾಗ ಮಾಡಿದ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ ಅವರು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ (MRPL) ನಿವೃತ್ತ ಆಡಳಿತ ನಿರ್ದೇಶಕ ವೆಂಕಟೇಶ್ ಅವರ ಏಕೈಕ ಪುತ್ರ. (MRPL) ನ ಮಾಜಿ ನಿರ್ದೇಶಕ ಎಂ.ವೆಂಕಟೇಶ್ ಅವರ ಪುತ್ರ. ಎಂಆರ್‌ಪಿಎಲ್‌ನ ಬಳಿಯೇ ಇರುವ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲೇ ಪ್ರಾಂಜಲ್‌ ವಿದ್ಯಾಭ್ಯಾಸ ಮಾಡಿದ್ದರು. ಕರಾವಳಿಯವರೇ ಆದ ವೆಂಕಟೇಶ್ ಅವರು ಮೇ 31ರಂದು ಸೇವಾ ನಿವೃತ್ತರಾಗಿದ್ದರು. ಕೆಲಕಾಲ ಮೈಸೂರಲ್ಲೂ ಇದ್ದರು. ತಂದೆಯ ನಿವೃತ್ತ ಸಮಾರಂಭಕ್ಕೆ ಪ್ರಾಂಜಲ್ ಆಗಮಿಸಿದ್ದರು. ನಿವೃತ್ತಿ ಬಳಿಕ ವೆಂಕಟೇಶ್ ಅವರು ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Continue Reading

ಅಂಕಣ

Raja Marga Column: ಹಿಡಿಯಕ್ಕಿ ಸಂಗ್ರಹಿಸಿ ಕೆನರಾ ಬ್ಯಾಂಕ್ ಕಟ್ಟಿದ ಅಮ್ಮೆಂಬಳ ಸುಬ್ಬರಾವ್ ಪೈ

Raja Marga Column : ಅಮ್ಮೆಂಬಳ ಸುಬ್ಬ ರಾವ್‌ ಪೈ ಅವರು ಕೆನರಾ ಬ್ಯಾಂಕ್‌ ಮತ್ತು ಕೆನರಾ ವಿದ್ಯಾ ಸಂಸ್ಥೆಗಳ ಸ್ಥಾಪಕರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಅವರು ಅದನ್ನು ಹೇಗೆ ಕಟ್ಟಿದರು ಅನ್ನುವುದು ತುಂಬಾ ಇಂಟ್ರೆಸ್ಟಿಂಗ್‌.

VISTARANEWS.COM


on

Canara Bank Ammembala Subbarao Pai
Koo
RAJAMARGA

ಅಮ್ಮೆಂಬಳ ಸುಬ್ಬರಾವ್ ಪೈ (Ammembala Subbarao Pai) ಅವರು ಬ್ಯಾಂಕಿಂಗ್ ವ್ಯವಸ್ಥೆಗೆ (Banking System) ಭಾರೀ ಸ್ಫೂರ್ತಿಯನ್ನು ನೀಡಿದ ಕೆನರಾ ಬ್ಯಾಂಕನ್ನು (Canara Bank) ದೇಶಕ್ಕೆ ಕೊಡುಗೆಯಾಗಿ ನೀಡಿದವರು. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ಇಂದು ಭಾರೀ ಕೀರ್ತಿಯನ್ನು ಪಡೆದಿರುವ ಮಂಗಳೂರಿನ ಕೆನರಾ ವಿದ್ಯಾಸಂಸ್ಥೆಗಳನ್ನು (Canara Education Institutes) ಸಮರ್ಪಣೆ ಮಾಡಿದವರು (Raja Marga Column).

ಅಮ್ಮೆಂಬಳ ಸುಬ್ಬರಾವ್ ಪೈ ಅವರು 1852ರ ಇಸವಿಯ ನವೆಂಬರ್ 19ರಂದು ಮಂಗಳೂರಿನ ಹತ್ತಿರ ಇರುವ ಮೂಲ್ಕಿಯಲ್ಲಿ ಜನಿಸಿದರು. ಅವರ ತಂದೆ ಉಪೇಂದ್ರ ಪೈ ಅವರು ಮುನ್ಸಿಫರ ಕೋರ್ಟನಲ್ಲಿ ಜನಪ್ರಿಯ ವಕೀಲರಾಗಿದ್ದರು.

ಮಂಗಳೂರಿನ ಕನ್ನಡ ಶಾಲೆಯಲ್ಲಿ ಓದಿ ಎಫ್.ಎ ಪರೀಕ್ಷೆ ಮುಗಿಸಿದ ನಂತರ ಸುಬ್ಬರಾವ್ ಪೈ ಅವರು ಮದ್ರಾಸಿಗೆ ತೆರಳಿ ಪದವಿ ಮತ್ತು ಕಾನೂನು ಪದವಿಗಳನ್ನು ಪಡೆದರು. ಅಲ್ಲಿ ಅವರಿಗೆ ದೊರೆತ ಜಸ್ಟೀಸ್ ಹಾಲೋವೇ ಎಂಬ ಶಿಕ್ಷಕರ ವ್ಯಕ್ತಿತ್ವವು ಅವರ ಮೇಲೆ ಭಾರೀ ಪ್ರಭಾವ ಬೀರಿತು. ‘ಸ್ವಂತಕ್ಕಿಂತ ಸಮಾಜಕ್ಕೆ ಹೆಚ್ಚು’ ಎಂಬ ಕಲ್ಪನೆ ಕೊಟ್ಟದ್ದೇ ಅವರು.

1876ರಲ್ಲಿ ತಮ್ಮ ತಂದೆಯವರು ನಿಧನ ಆದ ಕಾರಣದಿಂದ ಮಂಗಳೂರಿಗೆ ಹಿಂದಿರುಗಿದ ಸುಬ್ಬರಾವ್ ಪೈಯವರು ಉತ್ತಮವಾಗಿ ವಕೀಲಿ ವೃತ್ತಿ ನಡೆಸುತ್ತಿದ್ದರು. ತಮಗೆ ದುಡ್ಡು ಬಾರದಿದ್ದರೂ ಚಿಂತೆಯಿಲ್ಲ ಎಂಬ ಧೋರಣೆ ಅವರದ್ದು. ಅದಕ್ಕಾಗಿ ಆದಷ್ಟೂ ಕೋರ್ಟಿನ ಹೊರಗೇ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಅವರ ಪ್ರಯತ್ನ ಜಾರಿಯಲ್ಲಿ ಇತ್ತು. ಅವರಿಗೆ ದುಡ್ಡು ಆದ್ಯತೆ ಆಗಿರಲಿಲ್ಲ.

ಕೆನರಾ ವಿದ್ಯಾಸಂಸ್ಥೆಗಳ ಸ್ಥಾಪನೆ

1891ರ ಹೊತ್ತಿಗೆ ಶಿಕ್ಷಕರಾಗಿದ್ದ ಅವರ ಕೆಲವು ಸ್ನೇಹಿತರು ಮಂಗಳೂರಿನಲ್ಲಿ ಉತ್ತಮ ಶಾಲೆಗಳ ಕೊರತೆಯನ್ನು ಪ್ರಸ್ತಾಪಿಸಿದರು. ಆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಅವರು ತುಂಬಾ ಕಾಳಜಿಯನ್ನು ವಹಿಸಿ ಕೆನರಾ ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸಿದರು. ಮಂಗಳೂರಿನ ಕೇಂದ್ರ ಭಾಗದಲ್ಲಿ ಅವರ ತಂದೆ ಉಪೇಂದ್ರ ಪೈ ಅವರು ಉಚಿತವಾಗಿ ಕೊಟ್ಟ 22 ಎಕರೆ ಜಾಗದಲ್ಲಿ ಇಂದು ಕೆನರಾ ವಿದ್ಯಾಸಂಸ್ಥೆಗಳು ತಲೆ ಎತ್ತಿ ನಿಂತಿರುವುದನ್ನು ನೋಡುವುದೇ ಚಂದ. ಆ ವಿದ್ಯಾಸಂಸ್ಥೆಯಲ್ಲಿ ಇಂದು ಸಾವಿರಾರು ವಿದ್ಯಾರ್ಥಿಗಳು ಕ್ವಾಲಿಟಿ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಯಾವಾಗಲೂ ಹೇಳುತ್ತಿದ್ದ ಮುಖ್ಯವಾದ ಮಾತು – ನಿಮ್ಮ ಗುರಿಗಳ ಮೇಲೆ ಫೋಕಸ್ ಮಾಡಿ. ಆಗ ಲಾಭವು ನಿಮ್ಮನ್ನು ಅನುಸರಿಸಿಕೊಂಡು ಬರುತ್ತದೆ.

ಅದಾದ ನಂತರ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವಂತೆ 1894ರಲ್ಲಿ ಕೆನರಾ ಹೆಣ್ಣು ಮಕ್ಕಳ ಹೈಸ್ಕೂಲನ್ನು ಕೂಡ ಅವರು ತೆರೆದರು. ಅಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಬಗೆಗೆ ಸಮಾಜದಲ್ಲಿ ಪ್ರೋತ್ಸಾಹದ ವಾತಾವರಣ ಇರಲಿಲ್ಲ. ಆದ್ದರಿಂದ ಕೆನರಾ ವಿದ್ಯಾಸಂಸ್ಥೆಯ ಸ್ಥಾಪನೆಯು ಕ್ರಾಂತಿಕಾರಕ ಹೆಜ್ಜೆಯೇ ಆಗಿತ್ತು.

ಮುಂದೆ ಕೆನರಾ ವಿದ್ಯಾಸಂಸ್ಥೆಗಳು ಭಾರೀ ದೊಡ್ಡ ಹೆಮ್ಮರ ಆಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡುತ್ತಾ ಮುಂದೆ ಸಾಗಿವೆ. ಶತಮಾನೋತ್ಸವ ಕಂಡಿವೆ.

ಹೆಣ್ಣುಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಅಂದಿನ ದಿನಗಳಲ್ಲಿ ನಿರುತ್ಸಾಹದ ವಾತಾವರಣವನ್ನು ಕಂಡಾಗ ಅಮ್ಮೆಂಬಳ ಸುಬ್ಬರಾವ್ ಪೈ ಅವರು ಕಂಡುಹಿಡಿದ ಪರಿಹಾರವು ಅದ್ಭುತವಾಗಿಯೇ ಇತ್ತು. ಅದು ಉಳಿತಾಯ ಪ್ರಜ್ಞೆ.

ಹಿಡಿಯಕ್ಕಿಯಿಂದ ಆರಂಭ ಆಯಿತು ಕೆನರಾ ಬ್ಯಾಂಕ್!

ತಮ್ಮ ಹೆಣ್ಣು ಮಕ್ಕಳಿಗೆ ಓದು ಬರಹ ಬೇಕು ಎಂದು ಆಸೆ ಪಡುವ ತಾಯಿಯರು ಪ್ರತೀದಿನ ‘ಹಿಡಿ ಅಕ್ಕಿ ಉಳಿಸಿ’ ಎಂಬ ಅಭಿಯಾನದ ಮೂಲಕ ಅಮ್ಮೆಂಬಳ ಪೈಯವರು ಜನರಲ್ಲಿ ಜಾಗೃತಿಯನ್ನು ಮೂಡಿಸಿದರು. ಇದೇ ಉಳಿತಾಯದ ಶ್ರೇಷ್ಠ ಚಿಂತನೆಯು ಮುಂದೆ ಯಶಸ್ವಿಯಾಗಿ ಅವರಿಂದ ಹುಟ್ಟಿದ್ದು ‘ಹಿಂದೂ ಪರ್ಮನೆಂಟ್ ಫಂಡ್ʼ ಎಂಬ ಹಣಕಾಸು ಸಂಸ್ಥೆ. ಇದೇ ಮುಂದೆ ಕೆನರಾ ಬ್ಯಾಂಕ್ ಆಯಿತು.

‘ಉತ್ತಮ ಬ್ಯಾಂಕ್ ಎನ್ನುವುದು ಸಮಾಜದ ಆರ್ಥಿಕ ಶಕ್ತಿಯ ಕೇಂದ್ರ ಮಾತ್ರವಲ್ಲ, ಅದು ಸಾಮಾನ್ಯ ಜನರ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಪಡಿಸುವ ಜವಾಬ್ಧಾರಿಯನ್ನು ತನ್ನ ಮೇಲಿರಿಸಿಕೊಂಡಿದೆ’ ಎಂಬುದು ಅಮ್ಮೆಂಬಳ ಸುಬ್ಬರಾವ್ ಪೈ ಅವರು ಬಲವಾಗಿ ನಂಬಿದ ಧ್ಯೇಯ ಆಗಿತ್ತು. ಲಾಭದ ಗಳಿಕೆಗಿಂತ ಜನಸಾಮಾನ್ಯರ ಆರ್ಥಿಕ ಸಬಲೀಕರಣವು ಅವರ ಉದ್ದೇಶವಾಗಿತ್ತು.

ಬ್ರಿಟಿಷ್ ಬ್ಯಾಂಕುಗಳ ತಾರತಮ್ಯದ ವಿರುದ್ಧ ಸಿಡಿದು ನಿಂತ ಕೆನರಾ ಬ್ಯಾಂಕ್

1906ರಲ್ಲಿ ಕೆನರಾ ಬ್ಯಾಂಕ್ ಸ್ಥಾಪನೆಯು ಆಗಿನ ಕಾಲದಲ್ಲಿ ಭಾರೀ ಸಂಚಲನವನ್ನು ಮೂಡಿಸಿದ್ದು ಹೇಗೆ?

ಅದು ಶತಮಾನದ ಆರಂಭದ ದಶಕ. ಭಾರತದಲ್ಲಿ ಆಗ ಬ್ರಿಟನ್‌ ರಾಣಿಯ ಆಡಳಿತ. ಮಂಗಳೂರಿನಲ್ಲಿ ಆಗ ಇದ್ದದ್ದು ಬ್ರಿಟಿಷರಿಗೆ ಸೇರಿದ ಮದ್ರಾಸ್‌ ಬ್ಯಾಂಕಿನ ಶಾಖೆಯೊಂದೇ! ಸಂಪೂರ್ಣವಾಗಿ ಬ್ರಿಟಿಷ್‌ ಅಧಿಕಾರಿಗಳೇ ತುಂಬಿದ್ದ ಈ ಬ್ಯಾಂಕ್‌ನಲ್ಲಿ ಭಾರತೀಯರು ಕಾರಕೂನರ ಮತ್ತು ಜವಾನನ ಕೆಲಸಕ್ಕೆ ಮಾತ್ರ ನೇಮಕ ಆಗುತ್ತಿದ್ದರು. ಆ ಬ್ಯಾಂಕ್‌ ಕೇವಲ ಶ್ರೀಮಂತರತ್ತ ಮಾತ್ರ ಮುಖವನ್ನು ಮಾಡಿತ್ತು. ಆದರೆ ಅದು ವಿಧಿಸುತ್ತಿದ್ದ ಬಡ್ಡಿ ಮಾತ್ರ ವಿಪರೀತ ಪ್ರಮಾಣದ್ದಾಗಿತ್ತು. ಬಡವರು ಬ್ಯಾಂಕಿನ ಒಳಗೆ ಬರಲು ಸಾಧ್ಯವೇ ಇರಲಿಲ್ಲ!

Ammembala Subbarao pai Canara Bank

ಜನ ಸಾಮಾನ್ಯರು ತಮ್ಮ ಕಠಿಣ ದುಡಿಮೆಯ ಹಣವನ್ನು ಸುರಕ್ಷಿತವಾಗಿಡಲು ಪಡುತ್ತಿದ್ದ ಕಷ್ಟಗಳು, ಸಂಕಷ್ಟದ ವೇಳೆ ಸಾಲಕ್ಕಾಗಿ ಅಲೆದಾಡುತ್ತಿದ್ದ ಕಷ್ಟವನ್ನು ನೋಡಿ ಸುಬ್ಬರಾವ್ ಪೈ ಅವರು ಭಾರೀ ಚಿಂತನೆಗೆ ತೊಡಗಿದರು. ಬಡವರ ಕಷ್ಟಗಳಿಗೆ ಅವರ ಮನಸ್ಸು ಕರಗಿತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಣದಿಂದಲೇ ನಿಧಿ ಸ್ಥಾಪಿಸಿ, ಉಳಿತಾಯದ ಅವಕಾಶ ಮತ್ತು ಸಾಲವನ್ನು ನೀಡುವುದು ಅವರ ಉದೇಶ ಆಗಿತ್ತು.

ವಿಶೇಷವಾಗಿ ಶಿಕ್ಷಣದ ಸಾಲ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಕೆನರಾ ಬ್ಯಾಂಕಿನ ಆದ್ಯತೆ ಆಗುವಂತೆ ಅವರು ಮಾಡಿದರು. ಹೆಣ್ಣುಮಕ್ಕಳ ಶೈಕ್ಷಣಿಕ ಸಾಲವನ್ನು ಆದ್ಯತೆಯ ಸಾಲವಾಗಿ ಅವರು ಘೋಷಣೆ ಮಾಡಿದರು.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ‘ಆದ್ಯತೆಯ ಸಾಲ’ ನೀಡಿದ ದೇಶದ ಮೊದಲ ಬ್ಯಾಂಕು ಎಂಬ ಕೀರ್ತಿಯು ಕೂಡ ಕೆನರಾ ಬ್ಯಾಂಕಿಗೆ ದೊರೆಯಿತು! ಇದೆಲ್ಲವೂ ಅಮ್ಮೆಂಬಳ ಸುಬ್ಬರಾವ್ ಪೈ ಅವರ ದೂರದೃಷ್ಟಿಯ ಸಂಕೇತವೇ ಆಗಿದೆ.

ಕೆನರಾ ಬ್ಯಾಂಕಿನ ನಿಧಿಯನ್ನು ಸಂಗ್ರಹಿಸಲು ಸುಬ್ಬರಾವ್ ಪೈ ಅವರು ಹಾಕಿದ ಶ್ರಮವು ಅಷ್ಟಿಷ್ಟಲ್ಲ. ಅವರು ಎತ್ತಿನ ಗಾಡಿಯಲ್ಲಿ ಊರೂರು ಸುತ್ತಿ ತಲಾ 50 ರೂ. ಬೆಲೆಯ ಎರಡು ಸಾವಿರ ಷೇರು ಪತ್ರಗಳನ್ನು ಮಾರಿ ನಿಧಿಯನ್ನು ಸಂಗ್ರಹಿಸಿದರು! ಹೀಗೆ ಸುಬ್ಬರಾವ್ ಪೈಯವರ ಘನ ಅಧ್ಯಕ್ಷತೆಯಲ್ಲಿ 1906ರಲ್ಲಿ ಆರಂಭ ಆದ ಬ್ಯಾಂಕು ಇಂದು ದೇಶ, ವಿದೇಶಗಳಲ್ಲಿ ಅವರು ಮಾಡಿರುವ ಶ್ರೇಷ್ಠವಾದ ಕಾಯಕವನ್ನು ಸಾರುತ್ತಿದೆ. ಆ ಬ್ಯಾಂಕ್ ಸ್ಥಾಪನೆಯಿಂದ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಹೆಸರು ಶಾಶ್ವತ ಸ್ಥಾನ ಪಡೆಯಿತು. ಇಂದು ಕೆನರಾ ಬ್ಯಾಂಕ್ ಭಾರತದ ಅತೀ ಶ್ರೇಷ್ಠವಾದ ಬ್ಯಾಂಕುಗಳ ಸಾಲಿನಲ್ಲಿ ಸ್ಥಾನ ಪಡೆದಿದೆ.

ಅಮ್ಮೆಂಬಳ ಪೈ ಅವರು 1909ರ ಜುಲೈ 25ರಂದು ಕೇವಲ ತಮ್ಮ 57ನೆಯ ವಯಸ್ಸಿನಲ್ಲಿ ನಿಧನರಾದರು. ಆದರೆ ಅವರು ಸ್ಥಾಪನೆ ಮಾಡಿದ ಸಂಸ್ಥೆಗಳು ಮತ್ತು ಶಾಲೆಗಳು ಮುಖ್ಯವಾದ ಸಾಮಾಜಿಕ ಕೊಡುಗೆಯಾಗಿ ಉಳಿದವು. ಹಗಲಿರುಳು ಬಡಜನತೆಗಾಗಿ ಮಾಡಿದ ಕಾರ್ಯಗಳು ಅವರನ್ನು ಚಿರಂಜೀವಿ ಆಗಿ ಮಾಡಿದವು.

ಇದನ್ನೂ ಓದಿ: Raja Marga Column : ಅನ್ನಕ್ಕಾಗಿ ಕಲ್ಲು ಒಡೆಯೋ ಕೆಲಸ ಮಾಡ್ತಿದ್ದ ಆಕೆ ಈಗ ಅಮೆರಿಕನ್‌ ಕಂಪನಿ ಸಿಇಓ!

ಮೌಢ್ಯಗಳ ವಿರುದ್ಧ ಹೋರಾಟ

ಅಮ್ಮೆಂಬಳ ಸುಬ್ಬರಾವ್ ಪೈ ಅವರು ಆಗಿನ ಕಾಲಕ್ಕೆ ತುಂಬಾ ಅಡ್ವಾನ್ಸ್ ಆಗಿದ್ದರು. ತನ್ನದೇ ಸಮಾಜದ ಒಬ್ಬ ಮಹಿಳೆಯು ಅಂತರ್ಜಾತೀಯ ಮದುವೆಯ ಕಾರಣಕ್ಕೆ ಸಾಮಾಜಿಕವಾದ ಬಹಿಷ್ಕಾರಕ್ಕೆ ಒಳಗಾದಾಗ ತುಂಬಾ ನೊಂದರು. ಮುಂದೆ ಅದೇ ಮಹಿಳೆ ನಿಧನರಾದಾಗ ಅವರ ಕೊನೆಯ ಇಚ್ಛೆಯಂತೆ ಪೈಯವರೇ ಮುಂದೆ ನಿಂತು ತನ್ನ ಗೆಳೆಯರ ಸಹಕಾರ ಪಡೆದು ಹಿಂದೂ ಸಂಪ್ರದಾಯದ ಪ್ರಕಾರ ಅವರ ಅಂತಿಮ ವಿಧಿಗಳನ್ನು ಪೂರ್ತಿ ಮಾಡಿದರು. ಈ ಕಾರಣಕ್ಕೆ ಅವರು ಒಂದು ಪ್ರಬಲ ವರ್ಗದ ಜನರ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಆದರೆ ಪೈಯವರು ಅವುಗಳಿಗೆ ಕ್ಯಾರೇ ಅನ್ನಲಿಲ್ಲ!

ಮಂಗಳೂರಿನಲ್ಲಿ ತನ್ನದೇ ಗೆಳೆಯರ ಬಳಗ ಕಟ್ಟಿಕೊಂಡು ಅಮ್ಮೆಂಬಳ ಪೈಯವರು ಮೌಢ್ಯಗಳ ವಿರುದ್ಧ ಭಾರೀ ಹೋರಾಟಗಳನ್ನು ನಡೆಸಿದರು. ಅವರೇ ಸ್ಥಾಪನೆ ಮಾಡಿದ ಕೆನರಾ ಬ್ಯಾಂಕಿನ ಉದ್ದೇಶಗಳಲ್ಲಿ ಮೌಢ್ಯಗಳ ವಿರುದ್ಧ ಹೋರಾಟ ಕೂಡ ಒಂದಾಗಿದೆ. ಶಿಕ್ಷಣ ಸಾಲಕ್ಕಾಗಿ ಬ್ಯಾಂಕ್ ಒಳಗೆ ಕಾಲಿಟ್ಟ ಯಾವುದೇ ಹುಡುಗಿಗೆ ಒಂದು ಕ್ಷಣ ಕೂಡ ಕಾಯಿಸದೆ ಸಾಲ ಕೊಡಬೇಕು ಎನ್ನುವುದು ಅವರು ಬ್ಯಾಂಕ್ ಅಧಿಕಾರಿಗಳಿಗೆ ಕೊಟ್ಟ ನಿರ್ದೇಶನ ಆಗಿತ್ತು. ಅದನ್ನು ಬ್ಯಾಂಕ್ ಇಂದು ಕೂಡ ಪಾಲಿಸುತ್ತಿದೆ.

ಅವರು ಸ್ಥಾಪನೆ ಮಾಡಿದ ಕೆನರಾ ಬ್ಯಾಂಕ್ ಮತ್ತು ಕೆನರಾ ವಿದ್ಯಾಸಂಸ್ಥೆಗಳು ಇರುವ ತನಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಹೆಸರು ಶಾಶ್ವತ ಆಗಿರುವುದು ಖಂಡಿತ.

Continue Reading

ದೇಶ

ಸಿಬಿಎಸ್‌ಇ ಬೋರ್ಡ್‌ ಎಕ್ಸಾಂಗೆ ಘೋಷಿಸಿದ ಪ್ರಮುಖ ಬದಲಾವಣೆಗಳೇನು?

CBSE Board Exam 2024: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಹಾಗೂ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಅನೇಕ ಬದಲಾವಣೆಗಳನ್ನು ಘೋಷಣೆ ಮಾಡಿದೆ.

VISTARANEWS.COM


on

CBSE Board Exam 2024 and many more changes proposed implemented in this year
Koo

ನವದೆಹಲಿ: ಸಂಬಂಧಿಸಿದ ಹಲವರ ಸಲಹೆಗಳ ಮೇರೆಗೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (CBSE) ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅನೇಕ ಬದಲಾವಣೆಗಳನ್ನು ಘೋಷಣೆ ಮಾಡಿದೆ(CBSE Board Exam 2024). ಮಕ್ಕಳನ್ನು, ಪೋಷಕರನ್ನು ಮತ್ತು ಒಟ್ಟಾರೆ ಅವರ ವ್ಯಕ್ತಿತ್ವ, ಶೈಕ್ಷಣಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ಹೊಸ ಹೊಸ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಡಿವಿಷನ್, ಡಿಸ್ಟಿಂಕ್ಷನ್ ಘೋಷಣೆ ಮಾಡದಿರುವುದು ಸೇರಿದಂತೆ ಅನೇಕ ಬದಲಾವಣೆಗಳನ್ನು ತರಲು ಉದ್ದೇಶಿಸಲಾಗಿದೆ. ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಕೈಗೊಂಡಿರುವ ಹೊಸ ಬದಲಾವಣೆಗಳು ವಿದ್ಯಾರ್ಥಿಗಳ (Students) ಮೇಲಿನ ಮಾನಸಿಕ ಒತ್ತಡವನ್ನು (Mental Stress) ಕಡಿಮೆ ಮಾಡಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಕೌಂಟೆನ್ಸಿಗೆ ಆನ್ಸರ್ ಬುಕ್ ಇಲ್ಲ

ಅಕೌಂಟೆನ್ಸಿ ವಿಷಯದಲ್ಲಿ ನೀಡಲಾಗುತ್ತಿದ್ದ ಉತ್ತರ ಪುಸ್ತಕಗಳನ್ನು ರದ್ದುಪಡಿಸಲು ಮಂಡಳಿ ನಿರ್ಧರಿಸಿದೆ. ಆನ್ಸರ್ ಬುಕ್‌ ಬದಲಿಗೆ ಟೇಬಲ್ಸ್ ಒದಗಿಸಲಾಗುತ್ತದೆ. 2024 ರಿಂದ 12 ನೇ ತರಗತಿಯಲ್ಲಿ ಇತರ ವಿಷಯಗಳಲ್ಲಿ ಒದಗಿಸಲಾದ ಸಾಮಾನ್ಯ ಸಾಲುಗಳ ಉತ್ತರ ಪುಸ್ತಕಗಳನ್ನು ಅಕೌಂಟೆನ್ಸಿ ವಿಷಯದಲ್ಲೂ ಒದಗಿಸಲಾಗುವುದು ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಡಿವಿಷನ್, ಡಿಸ್ಟಿಂಕ್ಷನ್ ಅಥವಾ ಅಗ್ರೇಗೆಟ್ ಇಲ್ಲ

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ 10 ಮತ್ತು 12ನೇ ತರಗಿತ ಪರೀಕ್ಷೆಗಳಿಗೆ ಇನ್ನು ಮುಂದೆ ಡಿವಿಷನ್, ಡಿಸ್ಟಿಂಕ್ಷ್ ಅಥವಾ ಅಗ್ರೇಗೆಟ್ ಘೋಷಣೆ ಮಾಡುವುದಿಲ್ಲ ಎಂದು ಹೇಳಿದೆ. ವಿದ್ಯಾರ್ಥಿಗಳ ಶೇಕಡಾವಾರು ಲೆಕ್ಕಾಚಾರದ ಮಾನದಂಡವನ್ನು ತಿಳಿಸಲು ಬಹು ಅಭ್ಯರ್ಥಿಗಳಿಂದ ಮನವಿಗಳನ್ನು ಸ್ವೀಕರಿಸಿದ ನಂತರ ಮಂಡಳಿಯು ಇದನ್ನು ಘೋಷಿಸಿತು. ಹಾಗಾಗಿ, ಇನ್ನು ಮುಂದೆ ಮಂಡಳಿಯು ವಿದ್ಯಾರ್ಥಿಗಳು ಪಡೆಯುವ ಶೇಕಡವಾರು ಅಂಕಗಳನ್ನು ಲೆಕ್ಕ ಹಾಕುವುದಾಗಲೀ, ಘೋಷಣೆ ಮಾಡುವುದಾಗಲೀ ಅಥವಾ ಮಾಹಿತಿ ನೀಡುವುದಾಗಲಿ ಮಾಡುವುದಿಲ್ಲ ಎಂದು ಹೇಳಿದೆ.

ಕ್ರೀಡೆ, ಒಲಂಪಿಯಾಡ್ ವಿದ್ಯಾರ್ಥಿಗಳಿಗೆ ವಿಶೇಷ ವ್ಯವಸ್ಥೆ

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ 10 ನೇ ತರಗತಿ ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ಮತ್ತು ಅಂತರರಾಷ್ಟ್ರೀಯ ಒಲಂಪಿಯಾಡ್‌ಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಮಂಡಳಿಯು ನಂತರದ ದಿನಾಂಕದಲ್ಲಿ ವಿಶೇಷ ಪರೀಕ್ಷೆಗಳನ್ನು ನಡೆಸುತ್ತದೆ ಎಂದು ಮಂಡಳಿ ಹೇಳಿದೆ. ಆದಾಗ್ಯೂ, ವಿಭಾಗ ಮತ್ತು ಪ್ರಾಯೋಗಿಕ ಪರೀಕ್ಷೆಗಳಿಗೆ ಯಾವುದೇ ಪ್ರತ್ಯೇಕ ಅಥವಾ ವಿಶೇಷ ಪರೀಕ್ಷಾಅವಕಾಶಗಳಿರುವುದಿಲ್ಲ.

ಸ್ಯಾಂಪಲ್ ಪ್ರಶ್ನೆ ಪತ್ರಿಕೆ ಮಾರ್ಕಿಂಗ್ ಸ್ಕೀಂ

10ನೇ ತರಗತಿಗೆ ಮತ್ತು 77ನೇ ತರಗತಿಗೆ 12ನೇ ತರಗತಿಗೆ ಒಟ್ಟು 60 ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ cbseacademic.nic.inನಲ್ಲಿ ಪರಿಶೀಲಿಸಬಹುದು. ಪ್ರತಿ ಉತ್ತರಕ್ಕೆ ಅಂಕಗಳೊಂದಿಗೆ ಉತ್ತರಗಳು ಅಂಕ ಯೋಜನೆಯಲ್ಲಿ ಕಾಣ ಸಿಗುತ್ತವೆ.

ವರ್ಷಕ್ಕೆ ಎರಡು ಬಾರಿ ಬೋರ್ಡ್ ಎಕ್ಸಾಂ

ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಹೊಸ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್) ಸಿದ್ಧವಾಗಿದೆ. 2024 ರ ಶೈಕ್ಷಣಿಕ ಅಧಿವೇಶನಕ್ಕಾಗಿ ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ಹಿಂದೆ ಘೋಷಿಸಿದರು. ಎನ್‌ಸಿಎಫ್ ಪ್ರಕಾರ, ಬೋರ್ಡ್ ಪರೀಕ್ಷೆಗಳನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುವುದು. ಎರಡು ಪರೀಕ್ಷೆಗಳ ಪೈಕಿ ಉತ್ತಮ ಅಂಕಗಳ ರಿಸಲ್ಟ್ ಅನ್ನು ಉಳಿಸಿಕೊಳ್ಳಬಹುದಾಗಿದೆ. ತಾನು ಪರೀಕ್ಷೆ ಬರೆಯಲು ಸಜ್ಜಾಗಿದ್ದೇನೆ ಎಂಬ ವಿಷಯಕ್ಕೆ ಮಾತ್ರವೇ ಎಕ್ಸಾಂ ಕೂಡ ಬರೆಯಬಹುದು.

ಈ ಸುದ್ದಿಯನ್ನೂ ಓದಿ: ಸಿಬಿಎಸ್‌ಇ 10, 12 ತರಗತಿ ಪರೀಕ್ಷೆಗೆ ಡಿವಿಷನ್, ಡಿಸ್ಟಿಂಕ್ಷನ್ ಘೋಷಣೆ ಇಲ್ಲ!

Continue Reading
Advertisement
David Warner
ಕ್ರಿಕೆಟ್1 min ago

David Warner: ಮೋಸಗಾರನಿಗೆ ವಿದಾಯ ಪಂದ್ಯದ ಅಗತ್ಯವಿಲ್ಲ; ಮಿಚೆಲ್​ ಜಾನ್ಸನ್

sadghuru with students
ಅಂಕಣ45 mins ago

Prerane Column : ವಿದ್ಯಾಭ್ಯಾಸ ಎಂದರೆ ದುಡ್ಡು ಮಾಡುವ ದಂಧೆಯ ಅಡಿಪಾಯವೇ?

ಕರ್ನಾಟಕ59 mins ago

ವಿಜಯಪುರ ಗೋದಾಮು ದುರಂತ: ಮೃತರ ಸಂಖ್ಯೆ 7ಕ್ಕೆ, ಇನ್ನೂ ನಾಲ್ಕು ಶವ ಸಿಕ್ಕಿಲ್ಲ

cm siddaramaih respect captain pranjal
ಕರ್ನಾಟಕ2 hours ago

CM Siddaramaiah: ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 50 ಲಕ್ಷ ರೂ. ಪರಿಹಾರ

Canara Bank Ammembala Subbarao Pai
ಅಂಕಣ2 hours ago

Raja Marga Column: ಹಿಡಿಯಕ್ಕಿ ಸಂಗ್ರಹಿಸಿ ಕೆನರಾ ಬ್ಯಾಂಕ್ ಕಟ್ಟಿದ ಅಮ್ಮೆಂಬಳ ಸುಬ್ಬರಾವ್ ಪೈ

CBSE Board Exam 2024 and many more changes proposed implemented in this year
ದೇಶ2 hours ago

ಸಿಬಿಎಸ್‌ಇ ಬೋರ್ಡ್‌ ಎಕ್ಸಾಂಗೆ ಘೋಷಿಸಿದ ಪ್ರಮುಖ ಬದಲಾವಣೆಗಳೇನು?

Saurav Gangly
ಕ್ರಿಕೆಟ್2 hours ago

Virat Kohli : ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಿದ್ದಕ್ಕೆ ಕಾರಣ ತಿಳಿಸಿದ ಸೌರವ್​ ಗಂಗೂಲಿ

Physical Education Teacher
ಉದ್ಯೋಗ2 hours ago

Teachers Recruitment : ಪ್ರಾಥಮಿಕ ಶಾಲೆಯಲ್ಲಿ 2120 ದೈಹಿಕ ಶಿಕ್ಷಕರ ಹುದ್ದೆ ಭರ್ತಿಗೆ ತೀರ್ಮಾನ

sufi
ಅಂಕಣ2 hours ago

ನನ್ನ ದೇಶ ನನ್ನ ದನಿ ಅಂಕಣ: ಸಯ್ಯಿದ್ ರಿಜ್ವಿ ಸ್ವತಃ ಹೇಳಿದ ಸೂಫಿಗಳ ನಿಜ ಕಥನ

Rain in Karnataka woman listening to music with an umbrella
ಕರ್ನಾಟಕ2 hours ago

Karnataka Weather : ಇಂದು – ನಾಳೆ ಬೆಂಗಳೂರು ಸೇರಿ ದಕ್ಷಿಣ ಒಳನಾಡಲ್ಲಿ ಭಾರಿ ಮಳೆ; ಇದು ಮಿಚುಂಗ್ ಎಫೆಕ್ಟ್‌

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ4 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ1 day ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ4 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ5 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ5 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

ಟ್ರೆಂಡಿಂಗ್‌