Horoscope Today : ತುಲಾ ರಾಶಿಯ ಉದ್ಯೋಗಿಗಳಿಗೆ ಶುಭ ಫಲ; ನಿಮ್ಮ ಭವಿಷ್ಯ ಹೀಗಿದೆ - Vistara News

ಪ್ರಮುಖ ಸುದ್ದಿ

Horoscope Today : ತುಲಾ ರಾಶಿಯ ಉದ್ಯೋಗಿಗಳಿಗೆ ಶುಭ ಫಲ; ನಿಮ್ಮ ಭವಿಷ್ಯ ಹೀಗಿದೆ

ಶ್ರೀ ಶಕೇ 1944, ಶುಭಕೃತ ನಾಮ ಸವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷದ ಪಾಡ್ಯದ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ( Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

rashi bhavishya today in kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದಿನ ಪಂಚಾಂಗ (08-03-2023)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ.

ತಿಥಿ: ಪಾಡ್ಯ 19:42 ವಾರ: ಬುಧವಾರ
ನಕ್ಷತ್ರ: ಉತ್ತರಾ 28:18 ಯೋಗ: ಶೂಲ 21:17
ಕರಣ: ಬಾಲವ 06:58 ಇಂದಿನ ವಿಶೇಷ: ಮಹಿಳಾ ದಿನಾಚರಣೆ, ಹೋಳಿಯ ಕರಿದಿನ
ಅಮೃತಕಾಲ: ರಾತ್ರಿ 08 ಗಂಟೆ 33 ನಿಮಿಷದಿಂದ ರಾತ್ರಿ 10 ಗಂಟೆ 17 ನಿಮಿಷದವರೆಗೆ.

ಸೂರ್ಯೋದಯ : 06:32 ಸೂರ್ಯಾಸ್ತ : 06:29

ರಾಹುಕಾಲ : ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Horoscope Today)

Horoscope Today

ಮೇಷ: ಆರೋಗ್ಯ ಮಧ್ಯಮ. ಹಣಕಾಸಿಗೆ ಸಂಬಂಧಿಸಿದ ಬಾಕಿ ವ್ಯವಹಾರಗಳು ಪೂರ್ಣವಾಗುವವು. ಸಂಗಾತಿಯ ಆರೋಗ್ಯದ ಕಡೆಗೆ ಗಮನ ಇರಲಿ. ಶುಭ ಕಾರ್ಯಕ್ರಮಕ್ಕೆ ಆಮಂತ್ರಣ ಸಿಗುವ ಸಾಧ್ಯತೆ. ಕುಟುಂಬದಲ್ಲಿ ಕಲಹಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಸಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವೃಷಭ: ಆರ್ಥಿಕವಾಗಿ ಪರದಾಟಗಳನ್ನು ಎದುರಿಸಬೇಕಾಗಿ ಬರುವ ಸಾಧ್ಯತೆ. ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ವಾಹನ ಖರೀದಿ ವಿಚಾರ ಮಾಡಬಹುದು. ಹಿಂದೆ ನಡೆದ ಘಟನೆಗಳನ್ನು ನೆನಪಿಸಿಕೊಂಡು ಕೊರಗುವುದು ಬೇಡ. ಸಹದ್ಯೋಗಿಗಳಿಂದ ಅಸಹಕಾರ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮಿಥುನ: ಇತರರ ವಿರುದ್ಧ ದ್ವೇಷ ಕಾರುತ್ತಾ ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚು ಮಾಡಿಕೊಳ್ಳುವುದು ಬೇಡ. ನಕರಾತ್ಮಕ ಆಲೋಚನೆಗಳು ನಿಮಗೇ ಘಾಸಿಮಾಡಬಹುದು. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಆರ್ಥಿಕ ಪ್ರಗತಿ ಸಾಧಾರಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಕಟಕ: ಅತಿಯಾದ ಉತ್ಸಾಹದಲ್ಲಿ ಅತಿರೇಕದ ಮಾತುಗಳನ್ನು ಆಡುವುದು ಬೇಡ, ನಿಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಿ. ಹಣಕಾಸು ಪ್ರಗತಿ ಸಾಧಾರಣ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಇಂದು ಗೊತ್ತಿಲ್ಲದಂತೆ ಸಮಯ ವ್ಯರ್ಥವಾಗುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಸಿಂಹ: ಆರ್ಥಿಕ ಸಮಸ್ಯೆಯಿಂದಾಗಿ ಒತ್ತಡ ಹೆಚ್ಚಾಗಲಿದೆ. ಹಿರಿಯರ ಮಾರ್ಗದರ್ಶನ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಬೆಂಬಲ, ಸ್ನೇಹ ಸಂಪಾದಿಸಬಹುದು. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರುವುದು. ವ್ಯಾಪಾರ-ವ್ಯವಹಾರದಲ್ಲಿ ಸಾಧಾರಣ ಪ್ರಗತಿ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಕನ್ಯಾ: ಸಕಾರಾತ್ಮಕ ಆಲೋಚನೆಗಳಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಮನೆಯ ಸದಸ್ಯರ ವರ್ತನೆ ನಿಮ್ಮ ಮನಸ್ಸಿಗೆ ನೋವುಂಟುಮಾಡುವ ಸಾಧ್ಯತೆ. ಪ್ರಯಾಣ ಮಾಡುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆರ್ಥಿಕವಾಗಿ ತೊಂದರೆಗಳನ್ನು ಎದುರಿಸುವ ಸಾಧ್ಯತೆ. ಕೆಲಸ ಕಾರ್ಯಗಳು ನಿಧಾನ. ಇಂದು ತಾಳ್ಮೆಯಿಂದ ವರ್ತಿಸಿ. ನೆರೆಹೊರೆಯವರೊಂದಿಗೆ ವಿನಾಕಾರಣ ಜಗಳ ಬೇಡ. ಉದ್ಯೋಗಿಗಳಿಗೆ ಶುಭ ಫಲ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವೃಶ್ಚಿಕ: ನಿಮ್ಮ ಪ್ರಯತ್ನದಲ್ಲಿ ನಂಬಿಕೆ ಇಟ್ಟು, ಕಾರ್ಯದಲ್ಲಿ ಮುನ್ನುಗ್ಗಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಲಾಭ. ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ. ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ. ಪ್ರವಾಸದ ಕುರಿತು ಚರ್ಚೆ. ಕುಟುಂಬದವರ ಸಹಕಾರ ಸಿಗಲಿದೆ. ಕೊಂಚ ಆರೋಗ್ಯದ ಕಡೆಗೆ ಗಮನ ಇರಲಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಧನಸ್ಸು: ಅತಿಯಾದ ಚಿಂತೆ, ಮಾನಸಿಕ ಒತ್ತಡಕ್ಕೊಳಗಾಗಬೇಡಿ. ಇದು ನಿಮ್ಮ ಆರೋಗ್ಯದ ಮೇಲೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಪರಿಣಾಮವನ್ನು ಬೀರಬಹುದು. ಆದಷ್ಟು ವಿಶ್ರಾಂತಿ ಪಡೆಯಿರಿ, ತಾಳ್ಮೆ ಇರಲಿ. ಆರ್ಥಿಕ ಪ್ರಗತಿ ಸಾಧಾರಣ. ಉದ್ಯೋಗಿಗಳಿಗೆ ಶುಭ ಫಲ. ಕುಟುಂಬದ ಆಪ್ತರಿಂದ ಸಮಾಧಾನದ ಮಾತುಗಳು ಕೇಳಿ ಬರುತ್ತವೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮಕರ: ಅನಿವಾರ್ಯ ಪ್ರಸಂಗಗಳು ನಿಮ್ಮನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಬಹುದು. ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಆರ್ಥಿಕವಾಗಿ ಪ್ರಗತಿ, ಹೂಡಿಕೆಯ ಕುರಿತು ಆಲೋಚನೆ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಹೊಸ ಉದ್ಯೋಗ ಮಾಡುವ ಕುರಿತು ಆಲೋಚನೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಕುಂಭ: ವಾಹನ ಚಾಲನೆ ಮಾಡುವಾಗ ಜಾಗರೂಕತೆಯಿಂದ ಚಾಲನೆ ಮಾಡಿ. ಅವಸರದಲ್ಲಿ ಕೆಲಸ ಮಾಡುವುದು ಬೇಡ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ದಿಢೀರ್‌ ಪ್ರಯಾಣ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಕನಿಷ್ಠ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಮೀನ: ದಿನದ ಮಟ್ಟಿಗೆ ಅನಿವಾರ್ಯ ಕಾರಣಗಳಿಂದ ಖರ್ಚು. ಆರೋಗ್ಯ ಮಧ್ಯಮ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ. ಮಾತಿನ ಭರದಲ್ಲಿ ಅತಿರೇಕದ ಮಾತುಗಳನ್ನು ಆಡುವುದು ಬೇಡ, ತಾಳ್ಮೆಯಿಂದ ವರ್ತಿಸಿ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಇದನ್ನೂ ಓದಿ: Astrology Answers : ನಾನು ಎಂದಾದರೂ ವಿದೇಶದಲ್ಲಿ ಉದ್ಯೋಗ ಮಾಡುತ್ತೇನೆಯೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ರಾಜಕೀಯ

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

HD Revanna Bail: ಎಚ್.ಡಿ. ರೇವಣ್ಣ ಅವರ ಬಂಧನ ರಾಜಕೀಯ ಪ್ರೇರಿತವಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬಕ್ಕೆ ಕಳಂಕ ತರಲು ಈ ರೀತಿ ಮಾಡಿದ್ದಾರೆ. ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರನ್ನು ಈಗ ಕೇಸ್ ಹಾಕಿ ಬಂಧನ ಮಾಡಿದ್ದು ಏಕೆ? ಒಂದು ತಿಂಗಳಿನಿಂದ ಏನೇನೆಲ್ಲ ಬೆಳವಣಿಗೆ ಆಯಿತು? ದೊಡ್ಡ ತಿಮಿಂಗಲದ ಆಡಿಯೊ ಬಿಟ್ಟರು ಎಂದು ದೇವರಾಜೇಗೌಡ ಅವರ ಬಂಧನ ಮಾಡಿದ್ದಾರಾ? ಸಂತ್ರಸ್ತೆಯರಿಗೆ ನ್ಯಾಯ ಸಿಗುವಂತೆ ಆಗಬೇಕು.

VISTARANEWS.COM


on

HD Revanna Bail I am not happy that Revanna has been released says HD Kumaraswamy
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ಆರ್.‌ ನಗರದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದಡಿ ಜೈಲಿನಲ್ಲಿದ್ದ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ (HD Revanna Bail) ಅವರಿಗೆ ಜಾಮೀನು ಸಿಕ್ಕಿದೆ ನಿಜ. ಆದರೆ, ಇದಕ್ಕೆ ನಾನು ಸಂತೋಷ ಪಡಲಾರೆ. ಪಟಾಕಿ ಸಿಡಿಸಿ ಸಂಭ್ರಮಿಸುವ ಸಮಯವೂ ಇದಲ್ಲ ಎಂದು ಕಾರ್ಯಕರ್ತರಿಗೆ ಹೇಳಬಯಸುತ್ತೇನೆ. ತಪ್ಪಿತಸ್ಥರಿಗೆ ಶಿಕ್ಷೆ ಆದಾಗ ಸಂಭ್ರಮ ಪಡಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ, ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ವಿಡಿಯೊ ಲೀಕ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಸರಿಯಾದ ತನಿಖೆಯನ್ನು ನಡೆಸುತ್ತಿಲ್ಲ. ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ ಅವರು ಕೂಡ ಎಸ್‌ಐಟಿಯಿಂದ ಆರೋಪ ಎದುರಿಸಬೇಕಾಯಿತು. ಅವರಿಗೆ ನಿನ್ನೆ (ಸೋಮವಾರ – ಮೇ 13) ಜಾಮೀನು ಸಿಕ್ಕಿದೆ. ಅದಕ್ಕೆ ನಾನು ಸಂತೋಷವನ್ನು ಪಡುವುದಿಲ್ಲ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆದಾಗ ಸಂಭ್ರಮವನ್ನು ಪಡೋಣ. ಈಗ ನಡೆದಿರುವುದು ರಾಜ್ಯವೇ ತಲೆ ತಗ್ಗಿಸುವ ವಿಚಾರವಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಎಸ್‌ಐಟಿ ಅಧಿಕಾರಿಗಳ ಕಾರ್ಯವೈಖರಿ ಹೇಗಿದೆ? ಎಸ್‌ಐಟಿ ಅಧಿಕಾರಿಗಳೇ ನಿಮಗೂ ಅಕ್ಕ – ತಂಗಿ, ತಂದೆ – ತಾಯಿ ಇರುತ್ತಾರೆ. ಚುನಾವಣೆ ಹಿನ್ನೆಲೆಯಲ್ಲಿ ಯಾರು ಪೆನ್ ಡ್ರೈವ್ ಹಂಚಿದರೋ ಅವರನ್ನು ಇದುವರೆಗೂ ಮುಟ್ಟಿಲ್ಲ. ಹಾಸನ ಜಿಲ್ಲಾದ್ಯಂತ ಪೆನ್‌ ಡ್ರೈವ್‌ ಅನ್ನು ರಿಲೀಸ್‌ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ನ ನವೀನ್‌ ಗೌಡ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕುತ್ತಾನೆ. ಆದರೆ, ಇಲ್ಲಿಯವರೆಗೆ ಆತನನ್ನು ಮುಟ್ಟಿಲ್ಲ. ಈ ಘಟನೆಗೆ ಕಾರಣವಾದ ವ್ಯಕ್ತಿಯನ್ನೂ ಹಿಡಿಯಲಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದರು.

ಸರ್ಕಾರದ ಜವಾಬ್ದಾರಿ ಅದು

ಬಿಜೆಪಿಯ ಮಾಜಿ ಶಾಸಕರೊಬ್ಬರ ಎಡಬಲಗಳನ್ನು ಹಿಡಿಯಲಾಗಿದೆ. ಇನ್ನೊಂದು ವಾರದಲ್ಲಿ ಮುಖ್ಯ ವಾದವರನ್ನು ಹಿಡಿಯಲಾಗುತ್ತೆ ಅಂದಿದ್ದಾರೆ. ಹಾಗಾದರೆ ಎಸ್ಐಟಿ ತನಿಖೆ ಹೇಗೆ ಸೋರಿಕೆ ಆಗ್ತಾ ಇದೆ? ಎಫ್‌ಐಆರ್ ಆಗಿರುವ ಒಬ್ಬ ವ್ಯಕ್ತಿಯನ್ನೂ ಹಿಡಿಯಲಿಲ್ಲ. ಖಾಸಗಿ ಚಾನಲ್‌ನಲ್ಲಿ ಒಂದೂವರೆ ಗಂಟೆಗಳ ಕಾಲ ಸಂದರ್ಶನ ಕೊಡುತ್ತಾರೆ. ನವೀನ್ ಗೌಡ ನಮ್ಮ ಪಕ್ಷದ ಶಾಸಕರಿಗೆ ಪೆನ್ ಡ್ರೈವ್ ಕೊಟ್ಟಿದ್ದೇನೆ ಎಂದು ಹೇಳುತ್ತಾನೆ. ಕೆಲವೇ ಕ್ಷಣಗಳಲ್ಲಿ ಪೆನ್ ಡ್ರೈವ್ ಬರುತ್ತದೆ ಅಂತಾ ಪೋಸ್ಟ್ ಮಾಡುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದ ಆತನನ್ನು ಹಿಡಿದಿರಾ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ವಿಡಿಯೊದಲ್ಲಿ ಬಂದಂತಹ ಮಹಿಳೆಯರ ಕುಟುಂಬಗಳ ಬಗ್ಗೆ ಸರ್ಕಾರಕ್ಕೆ ಅನುಕಂಪ‌ ಇದೆಯಾ? ಇದರಲ್ಲಿ ಯಾವುದನ್ನೂ ವಹಿಸಿಕೊಳ್ಳುವ ಪ್ರಶ್ನೆ ಇಲ್ಲ. ಈಗಿನ ಮಾಹಿತಿ ತಂತ್ರಜ್ಞಾನದಲ್ಲಿ ಅಪರಾಧಿ, ನಿರಪರಾಧಿ ಆಗುತ್ತಾನೆ, ನಿರಪರಾಧಿ ಅಪರಾಧಿ ಆಗುತ್ತಾನೆ. ಸರ್ಕಾರಕ್ಕೆ ಬದ್ಧತೆ ಇದ್ದರೆ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಲಿ. ನನ್ನ ಮೇಲೂ ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಎಚ್.ಡಿ. ರೇವಣ್ಣ ಅವರ ಕುಟುಂಬವನ್ನು ಮುಗಿಸಲು ನಾನು ಪ್ರಯತ್ನ ಪಡುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ.

ನಾನು ನ್ಯಾಯದ ಪರ, ಮಹಿಳೆಯರ ಪರ ಇದ್ದೇನೆ. ಈ ವಿಡಿಯೊದಲ್ಲಿ ಆ ವ್ಯಕ್ತಿಯ ಯಾವುದೇ ಚಿತ್ರಣ ಇಲ್ಲ ಅಂತ ಪತ್ರಿಕೆಯೊಂದು ಬರೆದಿದೆ. ಅಲ್ಲಿಗೆ ಈ ಪ್ರಕರಣ ಎಲ್ಲಿಗೆ ಹೋಗುತ್ತದೆ? ಎಂದು ಎಚ್.ಡಿ. ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಹೆದರಿಸಿ ದೂರು ಪಡೆಯಲು ಯತ್ನ

ಎಚ್.ಡಿ. ರೇವಣ್ಣ ಅವರ ಬಂಧನ ರಾಜಕೀಯ ಪ್ರೇರಿತವಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬಕ್ಕೆ ಕಳಂಕ ತರಲು ಈ ರೀತಿ ಮಾಡಿದ್ದಾರೆ. ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರನ್ನು ಈಗ ಕೇಸ್ ಹಾಕಿ ಬಂಧನ ಮಾಡಿದ್ದು ಏಕೆ? ಒಂದು ತಿಂಗಳಿನಿಂದ ಏನೇನೆಲ್ಲ ಬೆಳವಣಿಗೆ ಆಯಿತು? ದೊಡ್ಡ ತಿಮಿಂಗಲದ ಆಡಿಯೊ ಬಿಟ್ಟರು ಎಂದು ದೇವರಾಜೇಗೌಡ ಅವರ ಬಂಧನ ಮಾಡಿದ್ದಾರಾ? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಪರೋಕ್ಷವಾಗಿ ಆಕ್ರೋಶವನ್ನು ಹೊರಹಾಕಿದರು. ಅಲ್ಲದೆ, ದೊಡ್ಡ ತಿಮಿಂಗಿಲವು ಸರ್ಕಾರದಲ್ಲಿದೆ. ಆ ದೊಡ್ಡ ತಿಮಿಂಗಲವನ್ನು ಹಿಡಿಯಲಾಗದೇ ಇದ್ದರೆ ಸಣ್ಣ ತಿಮಿಂಗಲಗಳನ್ನು ಹಿಡಿಯಲಾಗುತ್ತದೆಯೇ? ಈ ಸರ್ಕಾರದಲ್ಲಿ ಹಲವಾರು ತಪ್ಪುಗಳು ನಡೆದಿವೆ. ಎಚ್.ಡಿ. ರೇವಣ್ಣ ಪ್ರಕರಣದಲ್ಲಿ ನಮ್ಮ ಕುಟುಂಬವನ್ನು ಟಾರ್ಗೆಟ್‌ ಮಾಡಲಾಗಿದೆ ಎಂದು ಕಿಡಿಕಾರಿದರು.

ಸಂತ್ರಸ್ತೆಯರಿಗೆ ನ್ಯಾಯ ಸಿಗುವಂತೆ ಆಗಬೇಕು. ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಒಂದು ಮಹಿಳೆ ದೂರು ಕೊಟ್ಟಿದ್ದು, ಆ ಹೆಣ್ಣುಮಕ್ಕಳಿಗೆ ಹೆದರಿಸಿ‌ ದೂರು ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದೆಲ್ಲ ಕೆಲವೇ ದಿನಗಳಲ್ಲಿ ಹೊರಗೆ ಬರಲಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಗೃಹ ಸಚಿವರಿಗೆ ನೇರ ಪ್ರಶ್ನೆ

ಈ ಪ್ರಕರಣದ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ಕೊಟ್ಟರೆ ಅಂಥವರನ್ನು ವಿಚಾರಣೆಗೆ ಕರೆಸಬೇಕಾಗುತ್ತದೆ ಎಂಬ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ಗೆ ತಿರುಗೇಟು ನೀಡಿರುವ ಎಚ್.ಡಿ. ಕುಮಾರಸ್ವಾಮಿ, ಈ ಪ್ರಕರಣದ ಬಗ್ಗೆ, ವಿಡಿಯೊ ಬಗ್ಗೆ ಹೇಳಿಕೆ ನೀಡಿದ್ದ ನವೀನ್‌ ಗೌಡ ಸೇರಿ ಉಳಿದವರ ಮೇಲೆ ಯಾವ ಕ್ರಮವನ್ನು ತೆಗೆದುಕೊಂಡಿದ್ದೀರಿ? ವಿದೇಶಕ್ಕೆ ಹೋಗಿರುವ ಪ್ರಜ್ವಲ್ ಅವರನ್ನು ಏಕೆ ಕರೆಸಿಲ್ಲ? ಎಂದು ಪ್ರಶ್ನೆ ಮಾಡಿದರು.

ಪ್ರಜ್ವಲ್‌ ರೇವಣ್ಣ ನನಗೆ ಅಣ್ಣನ ಮಗನೇ ಇರಬಹುದು. ಆದರೆ, ಅವನು ಹೋಗುವಾಗ ನನ್ನನ್ನು ಕೇಳಿ ಹೋಗುತ್ತಿದ್ದನಾ? ಬೆಳೆದ ಮಕ್ಕಳು ನಮ್ಮನ್ನು ಕೇಳಿ ಹೋಗ್ತಾರಾ.? ಎಂದು ಎಚ್.ಡಿ. ಕುಮಾರಸ್ವಾಮಿ ಕೇಳಿದರು.

ಇದನ್ನೂ ಓದಿ: HD Revanna Bail: ರೇವಣ್ಣಗೆ ಜಾಮೀನು; ನಾಳೆ 11 ದಿನದ ವನವಾಸದಿಂದ ಮುಕ್ತಿ; ಬೇಲ್‌ ಸಿಗಲು ಕಾರಣವೇನು?

ಇನ್ನೆರಡು ದಿನದಲ್ಲಿ ಪರಿಷತ್‌ ಅಭ್ಯರ್ಥಿ ಆಯ್ಕೆ

ಪರಿಷತ್ ಚುನಾವಣೆಗೆ ಸಂಬಂಧಪಟ್ಟಂತೆ ಮೈತ್ರಿ ಒಪ್ಪಂದದ ಪ್ರಕಾರ ಜೆಡಿಎಸ್‌ಗೆ ಇನ್ನೊಂದು ಸೀಟ್‌ ಅನ್ನು ಬಿಟ್ಟುಕೊಡಲಾಗಿದೆ. ಅದಕ್ಕೆ ಸೂಕ್ತ ಅಭ್ಯರ್ಥಿಯ ಆಯ್ಕೆ ಆಗಬೇಕಿದೆ. ಇನ್ನೆರಡು ದಿನಗಳಲ್ಲಿ ಸಭೆ ಕರೆದು ಈ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

Continue Reading

ಪ್ರಮುಖ ಸುದ್ದಿ

PM Narendra Modi: ವಾರಾಣಸಿಯಲ್ಲಿ ನರೇಂದ್ರ ಮೋದಿ ನಾಮಪತ್ರ ಅನುಮೋದಿಸುವ ನಾಲ್ವರು ಯಾರು?

PM Narendra Modi: ಪ್ರಧಾನಿ ಮೋದಿಯವರು ವಾರಣಾಸಿಯಿಂದ ನಾಮಪತ್ರ ಸಲ್ಲಿಸುವಾಗ ಅವರಿಗೆ ನಾಲ್ಕು ಪ್ರತಿಪಾದಕರು (proposers) ಬೇಕು. ಆ ನಾಲ್ವರು ಯಾರು? ಅವರು ಹೆಸರುಗಳು ಇಲ್ಲಿವೆ. ಈ ನಾಲ್ವರೂ ಆರೆಸ್ಸೆಸ್‌ ದಿನಗಳಿಂದಲೂ ಮೋದಿಯವರಿಗೆ ಆಪ್ತರಾದವರು ಎನ್ನಲಾಗಿದೆ.

VISTARANEWS.COM


on

pm narendra modi nomination varanasi
Koo

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ವಾರಣಾಸಿಯಿಂದ ಲೋಕಸಭೆ ಚುನಾವಣೆಗೆ (Lok Sabha Election 2024) ನಾಮಪತ್ರ ಸಲ್ಲಿಸುತ್ತಿದ್ದಾರೆ. ರಾಜನಾಥ್ ಸಿಂಗ್, ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರು, 12 ರಾಜ್ಯಗಳ ಸಿಎಂಗಳು ಮತ್ತು ಎನ್‌ಡಿಎ ಮೈತ್ರಿಕೂಟದ ನಾಯಕರು ಅವರೊಂದಿಗೆ ಭಾಗವಹಿಸುತ್ತಿದ್ದಾರೆ.

ಪ್ರಧಾನಿ ಮೋದಿಯವರು ವಾರಣಾಸಿಯಿಂದ ನಾಮಪತ್ರ ಸಲ್ಲಿಸುವಾಗ ಅವರಿಗೆ ನಾಲ್ಕು ಪ್ರತಿಪಾದಕರು (proposers) ಬೇಕು. ಆ ನಾಲ್ವರು ಯಾರು? ಅವರು ಹೆಸರುಗಳು ಇಲ್ಲಿವೆ. ಈ ನಾಲ್ವರೂ ಆರೆಸ್ಸೆಸ್‌ ದಿನಗಳಿಂದಲೂ ಮೋದಿಯವರಿಗೆ ಆಪ್ತರಾದವರು ಎನ್ನಲಾಗಿದೆ.

ಪಂಡಿತ್ ಗಣೇಶ್ವರ ಶಾಸ್ತ್ರಿ: ಬ್ರಾಹ್ಮಣ ಸಮುದಾಯದ ಸದಸ್ಯ. ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಗೆ ಮಂಗಳಕರ ಸಮಯವನ್ನು ನಿರ್ಧರಿಸಿದವರು.

ಬೈಜನಾಥ್ ಪಟೇಲ್: ಹಿರಿಯ RSS ಸ್ವಯಂಸೇವಕ, OBC ಸಮುದಾಯಕ್ಕೆ ಸೇರಿದವರು.

ಲಾಲ್‌ಚಂದ್ ಕುಶ್ವಾಹಾ: ಲಾಲ್‌ಚಂದ್ ಕುಶ್ವಾಹಾ ಕೂಡ ಒಬಿಸಿ ಸಮುದಾಯದವರು.

ಸಂಜಯ್ ಸೋಂಕರ್: ಇವರು ದಲಿತ ಸಮುದಾಯದಿಂದ ಬಂದ ಹಿರಿಯ ನಾಯಕ.

ನಾಮಪತ್ರ ಸಲ್ಲಿಕೆಯ ಸಮಯ ನಿಗದಿ ಹೇಗೆ?

ಪ್ರಧಾನಿ ಮೋದಿ ನಾಮಪತ್ರವನ್ನು ಬೆಳಗ್ಗೆ 11:40 ರಿಂದ ಮಧ್ಯಾಹ್ನ 12:00 ರ ಅವಧಿಯಲ್ಲಿ ಸಲ್ಲಿಸುತ್ತಿದ್ದಾರೆ. ಈ ಸಮಯವು ಮಂಗಳಕರವಾದ ಪುಷ್ಯ ನಕ್ಷತ್ರ ಮತ್ತು ಗಂಗಾ ಸಪ್ತಮಿಯೊಂದಿಗೆ ಹೊಂದಿಕೆಯಾಗುತ್ತದೆ. ಜ್ಯೋತಿಷಿ ಪಂ. ರಿಷಿ ದ್ವಿವೇದಿ ಅವರ ಪ್ರಕಾರ, ಈ ತಾರಾ ಜೋಡಣೆಯು ಶುಭ ಮತ್ತು ಇಷ್ಟಾರ್ಥಗಳ ನೆರವೇರಿಕೆಯನ್ನು ಸೂಚಿಸುತ್ತದೆ. ಪುಷ್ಯ ನಕ್ಷತ್ರದ ಸಮಯದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳುವುದು ಅವುಗಳ ಯಶಸ್ವಿ ಪೂರ್ಣಗೊಳಿಸುವಿಕೆಯನ್ನು ಖಚಿತಪಡಿಸುತ್ತದೆ ಎಂದು ನಂಬಲಾಗಿದೆ.

ನಾಮಪತ್ರ ಸಲ್ಲಿಕೆಗೂ ಮುನ್ನ ವಾರಾಣಸಿಯಲ್ಲಿರುವ ದಶಾಶ್ವಮೇಧ ಘಾಟ್‌ಗೆ ಭೇಟಿ ಕೊಟ್ಟ ಮೋದಿ ಗಂಗಾ ನದಿಗೆ ಪೂಜೆ ಸಲ್ಲಿಸಿದರು. ಐದು ಅರ್ಚಕರ ನೇತೃತ್ವದಲ್ಲಿ ಪೂಜೆ ನಡೆದಿದ್ದು, ಗಂಗಾ ನದಿ(Ganga River)ಗೆ ಪ್ರಧಾನಿ ಆರತಿ ಬೆಳಗಿದರು.

ಇನ್ನು ಇದಕ್ಕೂ ಮುನ್ನ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಪ್ರಧಾನಿ ಗಂಗಾ ನದಿಯ ಜೊತೆಗಿನ 10 ವರ್ಷಗಳ ನಂಟಿಗೆ ಸಂಬಂಧಿಸಿದ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಅಲ್ಲದೇ ಗಂಗಾ ಮಾತೆ ನನ್ನನ್ನು ದತ್ತು ಪಡೆದಿದ್ದಾಳೆ. ಈ ಹತ್ತು ವರ್ಷಗಲ್ಲಿ ನನ್ನ ಮತ್ತು ಗಂಗಾಮಾತೆಯ ಜೊತೆಗಿನ ನಂಟು ಮತ್ತಷ್ಟು ಬಲಿಷ್ಠವಾಗಿದೆ ಎಂದು ಬರೆದಿಕೊಂಡಿದ್ದಾರೆ. ದಶಾಶ್ವಮೇಧ ಘಾಟ್‌ ಭೇಟಿ ಬಳಿಕ ಪ್ರಧಾನಿ ವಾರಾಣಸಿಯಲ್ಲಿರುವ ಕಾಲಭೈರವೇಶ್ವರ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ದಿನ ಅಂದರೆ ಸೋಮವಾರ ಇಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ದ್ವಾರದಿಂದ ಅದ್ಧೂರಿ ರೋಡ್‌ ಶೋ ನಡೆಸಿದರು. ಸರಿಸುಮಾರು 5 ಕಿಮೀ ವರೆಗೆ ರೋಡ್ ಶೋನಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದ 1 ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಕಾಶಿ ನಿವಾಸಿಗಳು, ಕ್ರೀಡಾಪಟುಗಳು, ಕಲಾವಿದರು ಮತ್ತು ಸ್ಥಳೀಯರಲ್ಲದೇ ಇತರ ಪ್ರಮುಖರು ಭಾಗವಹಿಸಲಿದ್ದರು. ಮರಾಠಿ, ಗುಜರಾತಿ, ಬೆಂಗಾಲಿ, ಮಾಹೇಶ್ವರಿ, ಮಾರ್ವಾಡಿ, ತಮಿಳು ಮತ್ತು ಪಂಜಾಬಿ ಸಮುದಾಯಗಳ ಗುಂಪು ಪ್ರಧಾನಿ ಮೋದಿಯನ್ನು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸದರು. 5,000 ಕ್ಕೂ ಹೆಚ್ಚು ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತರು ಭಾಗಿಯಾಗಿದ್ದು, 100 ಪಾಯಿಂಟ್‌ಗಳಲ್ಲಿ ಪುಷ್ಪವೃಷ್ಟಿ ಮಾಡಲಾಯಿತು. ಮುಸ್ಲಿಂ ಸಮುದಾಯದವರೂ ಮೋದಿಗೆ ವಿಶೇಷ ಸ್ವಾಗತ ಕೋರಿದ್ದರು. ರೋಡ್‌ ಶೋ ಬಳಿಕ ಮೋದಿ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಅಜಯ್ ರೈ ಕಣದಲ್ಲಿದ್ದಾರೆ. ಅಜಯ್ ರೈ ಉತ್ತರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದು, ಕಳೆದ ಎರಡು ಬಾರಿಯೂ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಪ್ರಧಾನಿ ಮೋದಿಯವರ ಗೆಲುವಿನ ಅಂತರವನ್ನು 7 ಲಕ್ಷಕ್ಕೂ ಮೀರಿ ಹೆಚ್ಚಿಸುವ ಗುರಿಯನ್ನು ಬಿಜೆಪಿ ಹೊಂದಿದೆ. 2019ರಲ್ಲಿ 64% ಮತ ಹಂಚಿಕೆಯೊಂದಿಗೆ ಮೋದಿಯವರು 4.8 ಲಕ್ಷ ಅಂತದಲ್ಲಿ ಗೆಲುವು ಸಾಧಿಸಿದ್ದರು. 2014ರಲ್ಲಿ ಅವರು 3.7 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.

ಇದನ್ನೂ ಓದಿ: Narendra Modi: ನಾಮಪತ್ರ ಸಲ್ಲಿಕೆಗೂ ಮುನ್ನ ಗಂಗಾರತಿ ಮಾಡಿದ ಮೋದಿ-ಇಲ್ಲಿದೆ ಲೈವ್‌

Continue Reading

ಉದ್ಯೋಗ

Job Alert: ಎಚ್ಎ‌ಎಲ್‌ನಿಂದ 200 ಅಪ್ರೆಂಟಿಸ್‌ಗಳ ನೇಮಕ; ಐಟಿಐ ಪಾಸಾದವರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ

Job Alert: ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನಲ್ಲಿ ಖಾಲಿ ಇರುವ 200 ತರಬೇತುದಾರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ವಿಭಾಗಗಳಲ್ಲಿ ಐಟಿಐ ತೇರ್ಗಡೆ ಹೊಂದಿದವರು ಮೇ 20ರಿಂದ 22ರ ತನಕ ಆಯೋಜಿಸಿರುವ ನೇರ ಸಂದರ್ಶದಲ್ಲಿ ಪಾಲ್ಗೊಳ್ಳಬಹುದು. ಸಂದರ್ಶನ ಹೈದರಾಬಾದ್‌ನಲ್ಲಿ ನಡೆಯಲಿದೆ. ವೇಳಾಪಟ್ಟಿ ಸೇರಿದಂತೆ ವಿವಿಧ ಮಾಹಿತಿ ಇಲ್ಲಿದೆ.

VISTARANEWS.COM


on

Job Alert
Koo

ಬೆಂಗಳೂರು: ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್‌ನ್ಯೂಸ್‌. ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (Hindustan Aeronautics Limited)ನಲ್ಲಿ ಖಾಲಿ ಇರುವ 200 ತರಬೇತುದಾರ ಹುದ್ದೆಗಳ (Apprentice posts) ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ (HAL Recruitment 2024). ವಿವಿಧ ವಿಭಾಗಗಳಲ್ಲಿ ಐಟಿಐ ತೇರ್ಗಡೆ ಹೊಂದಿದವರು ಮೇ 20ರಿಂದ 22ರ ತನಕ ಆಯೋಜಿಸಿರುವ ನೇರ ಸಂದರ್ಶದಲ್ಲಿ ಪಾಲ್ಗೊಳ್ಳಬಹುದು (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಎಲೆಕ್ಟ್ರಾನಿಕ್ ಮೆಕ್ಯಾನಿಕ್ – 55, ಫಿಟ್ಟರ್ – 35, ಎಲೆಕ್ಟ್ರಿಷಿಯನ್ – 25, ಮೆಷಿನಿಸ್ಟ್‌ – 8, ಟರ್ನರ್ – 6, ವೆಲ್ಡರ್ – 3, ರೆಫ್ರಿಜರೇಟರ್ & ಎಸಿ – 2, ಕೋಪಾ – 55, ಪ್ಲಂಬರ್ – 2, ಪೈಂಟರ್‌ – 5, ಡೀಸೆಲ್ ಮೆಕ್ಯಾನಿಕ್ – 1, ಮೋಟಾರು ವಾಹನ – 1, ಡ್ರಾಫ್ಟ್‌ಮ್ಯಾನ್‌ – ಸಿವಿಲ್ – 1, ಡ್ರಾಫ್ಟ್‌ಮ್ಯಾನ್‌ – ಮೆಕ್ಯಾನಿಕಲ್ – 1 ಹುದ್ದೆಗಳಿವೆ. ಅಂಗೀಕೃತ ಬೋರ್ಡ್‌ನಿಂದ ಹತ್ತನೇ ತರಗತಿ ತೇರ್ಡೆಯಾದ ಮತ್ತು ಸಂಬಂದಿಸಿದ ಟ್ರೇಟ್‌ನಲ್ಲಿ ಐಟಿಐ ಮುಗಿಸಿರುವ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ವಯೋಮಿತಿ ಮತ್ತು ಅರ್ಜಿ ಶುಲ್ಕ

ಅಭ್ಯರ್ಥಿಗಳಿಗೆ ಕನಿಷ್ಠ 16 ವರ್ಷ ತುಂಬಿರಬೇಕು ಮತ್ತು ಗರಿಷ್ಠ ವಯಸ್ಸು 23 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ 3 ವರ್ಷ, ವಿಶೇಷ ಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ನೇರ ಸಂದರ್ಶನ ಎಲ್ಲಿ ಯಾವಾಗ?

ಮೇ 20ರಂದು ಬೆಳಗ್ಗೆ 9 ಗಂಟೆಗೆ ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಡೀಸೆಲ್ ಮೆಕ್ಯಾನಿಕ್ ಮತ್ತು ಮಧ್ಯಾಹ್ನ 1 ಗಂಟೆಗೆ ಫಿಟ್ಟರ್‌, ಪ್ಲಂಬರ್‌, ಪೈಂಟರ್‌ ಹುದ್ದೆಗಳ ಆಕಾಂಕ್ಷಿಗಳು ಹಾಜರಾಗಬೇಕು. ಮೇ 21ರ ಬೆಳಗ್ಗೆ 9 ಗಂಟೆಗೆ ಕೋಪಾ, ಮೋಟಾರು ವಾಹನ ಮೆಕ್ಯಾನಿಕ್‌ ಮತ್ತು ಮಧ್ಯಾಹ್ನ 1 ಗಂಟೆಗೆ ಎಲೆಕ್ಟ್ರೀಷಿಯನ್‌, ಡ್ರಾಫ್ಟ್‌ಮ್ಯಾನ್‌-ಮೆಕ್ಯಾನಿಕಲ್‌ ಹುದ್ದೆಗಳ ಸಂದರ್ಶನ ನಡೆಯಲಿದೆ. ಮೇ 22ರಂದು ಬೆಳಗ್ಗೆ 9 ಗಂಟೆಗೆ ಮೆಷಿನಿಸ್ಟ್‌, ರೆಫ್ರಿಜರೇಷನ್‌ & ಎಸಿ, ಟರ್ನರ್‌ ಹುದ್ದೆಗೆ ಮತ್ತು ಮಧ್ಯಾಹ್ನ 1 ಗಂಟೆಗೆ ಡ್ರಾಫ್ಟ್‌ಮ್ಯಾನ್‌ -ಸಿವಿಲ್‌, ವೆಲ್ಡರ್‌ಗಳ ಸಂದರ್ಶನ ಆಯೋಜಿಸಲಾಗಿದೆ. ಆಯ್ಕೆಯಾದವರಿಗೆ 1 ವರ್ಷಗಳ ತರಬೇತಿ ನೀಡಲಾಗುತ್ತದೆ.

ಸಂದರ್ಶನ ನಡೆಯುವ ಸ್ಥಳ:

Auditorium, Behaind Department of Trainning & Development,
Hindustan Aeronautics Limited, Avionics Division, Balanagar, Hyderabad-500042.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಸಂದರ್ಶನಕ್ಕೆ ಹಾಜರಾಗುವ ವೇಳೆ ಬೇಕಾದ ದಾಖಲೆಗಳು

  • ಆಧಾರ್‌ ಕಾರ್ಡ್‌.
  • ಎಸ್ಸೆಸ್ಸೆಲ್ಸಿ ಮತ್ತು ಐಟಿಐಯ ಎಲ್ಲ ಸೆಮಿಸ್ಟರ್‌ನ ಸರ್ಟಿಫಿಕೆಟ್‌.
  • ಮೀಸಲಾತಿಯ ಸರ್ಟಿಫಿಕೆಟ್‌.
  • ಹೆಸರು ನೋಂದಣಿಯ ಮಾಡಿಕೊಂಡಿರುವ ಅಪ್ಲಿಕೇಷನ್‌ ಫಾರಂ.
  • ಎರಡು ಪಾಸ್‌ಪೋರ್ಟ್‌ ಅಳತೆಯ ಫೋಟೊ.

ಹೆಸರು ನೋಂದಾಯಿಸಲು ಇಲ್ಲಿ ಕ್ಲಿಕ್‌ ಮಾಡಿ.

ಹೆಚ್ಚಿನ ಮಾಹಿತಿಗೆ ಎಚ್‌ಎಎಲ್‌ನ ಅಧಿಕೃತ ವೆಬ್‌ಸೈಟ್‌ ವಿಳಾಸ https://www.hal-india.co.in/ಗೆ ಭೇಟಿ ನೀಡಿ.

ಇದನ್ನೂ ಓದಿ: Job Alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Continue Reading

ಪ್ರಮುಖ ಸುದ್ದಿ

‌Prajwal Revanna Case: ಜೀವನದಲ್ಲಿ ಮೊದಲ ಬಾರಿಗೆ ಗಡ್ಡ ಬಿಟ್ಟ ದೇವೇಗೌಡರು; ವೈರಿನಾಶಕ್ಕೆ ಶಪಥ!

‌Prajwal Revanna Case: ದೇವೇಗೌಡರ ಐವತ್ತು ವರ್ಷಗಳ ಕಾಲದ ಘನತೆಯ ರಾಜಕೀಯ ಜೀವನಕ್ಕೆ ಪೆನ್‌ ಡ್ರೈವ್‌ ಪ್ರಕರಣದಿಂದ ಭಾರಿ ಪೆಟ್ಟು ಬಿದ್ದಿದೆ. ಕುಟುಂಬಕ್ಕೆ ಮುಜುಗರ ಸೃಷ್ಟಿಯಾಗಿದೆ. ಅವಮಾನಿತರಾದ ದೇವೇಗೌಡರು ರೇವಣ್ಣ ಜೈಲಿಗೆ ಹೋದ ಬಳಿಕ, ಎಂದೂ ಗಡ್ಡ ಬಿಡದವರು ಮೊದಲ ಬಾರಿಗೆ ದಾಡಿ ಬಿಟ್ಟಿದ್ದರು. ಡಿಕೆಶಿ ಹಾಗೂ ಸಿದ್ದರಾಮಯ್ಯ ತಮಗೆ ಸೃಷ್ಟಿಸಿರುವ ಅವಮಾನಕ್ಕೆ ಪ್ರತೀಕಾರ ಮಾಡಲು ಎಚ್‌ಡಿಡಿ ಕುಟುಂಬ ಕುದಿಯುತ್ತಿದೆ.

VISTARANEWS.COM


on

HD Deve gowda prajwal revanna case
Koo

ಬೆಂಗಳೂರು: ಮಾಜಿ ಸಚಿವ ಎಚ್‌.ಡಿ ರೇವಣ್ಣ (HD Revanna Jailed) ಅವರು ಇಂದು ಜಾಮೀನಿನಲ್ಲಿ ಬಿಡುಗಡೆ ಆಗುತ್ತಿದ್ದು, ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ (Prajwal Revanna Case) ಕುಟುಂಬಕ್ಕೆ ಆಗಿರುವ ಅವಮಾನದ ಸೇಡು ತೀರಿಸಿಕೊಳ್ಳಲು ರಾಜಕೀಯ ಭೀಷ್ಮ, ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು (HD Deve Gowda) ಸಜ್ಜಾಗಿದ್ದಾರೆ. ಸದಾ ನೀಟ್‌ ಶೇವ್‌ ಮಾಡಿಕೊಳ್ಳುವ ದೇವೇಗೌಡರು ಮಗ ಜೈಲುಪಾಲಾದ ಬಳಿಕ ಮೊದಲ ಬಾರಿಗೆ ಗಡ್ಡ ಬಿಟ್ಟಿದ್ದು, ಇದೀಗ ಎದುರಾಳಿಗಳನ್ನು ಎದುರಿಸಲು ಎದ್ದು ಕೂತಿದ್ದಾರೆ.

ಇಂದು ರೇವಣ್ಣ ಮನೆಗೆ

ಹನ್ನೊಂದು ದಿನಗಳ ಹಿಂದೆ ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲೇ ಆರೆಸ್ಟ್ ಆಗಿದ್ದ ಎಚ್‌.ಡಿ ರೇವಣ್ಣ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಜೈಲರ್‌ಗೆ ಬಿಡುಗಡೆ ಆದೇಶ ಪ್ರತಿ ಸಿಗುವವರೆಗೂ ಬಿಡುಗಡೆ ದೊರೆಯುವುದಿಲ್ಲ. ಬೆಳಿಗ್ಗೆ ಹತ್ತುವರೆಗೆ ಕೋರ್ಟ್ ಕಲಾಪ ಆರಂಭವಾಗಲಿದ್ದು, ಹತ್ತುವರೆಗೆ ಪರಪ್ಪನ ಅಗ್ರಹಾರ ಜೈಲಿಗೆ ಜೈಲರ್‌ ಬರಲಿದ್ದಾರೆ. ರೇವಣ್ಣ ಪರ ವಕೀಲರಿಂದ ಜೈಲರ್‌ಗೆ ಬಿಡುಗಡೆ ಆದೇಶ ಪ್ರತಿ ನೀಡಿ ಹನ್ನೊಂದು ಗಂಟೆ ಬಳಿಕ ಬಿಡುಗಡೆ ಸಾಧ್ಯತೆ ಇದೆ. ಬಹುತೇಕ ಅಭಿಜಿನ್ ಮುಹೂರ್ತ 11.40ರ ಸಮಯದಲ್ಲಿ ಬಿಡುಗಡೆ ಸಾಧ್ಯತೆ ಇದೆ.

ರೇವಣ್ಣ ಬಿಡುಗಡೆ ಬಳಿಕ ನೇರವಾಗಿ ಪದ್ಮನಾಭ ನಗರಕ್ಕೆ ಆಗಮಿಸುವ ಸಾಧ್ಯತೆ ಇದೆ. ರೇವಣ್ಣ ಬಿಡುಗಡೆಯಿಂದ ಗೌಡರ ಕುಟುಂಬದಲ್ಲಿ ಸಂತೋಷ ಮೂಡಿದ್ದು, ಬಿಡುಗಡೆ ‌ಬಳಿಕ ತಂದೆ ದೇವೇಗೌಡರು, ಹೆಚ್‌ಡಿಕೆ ಸೇರಿ ಕುಟುಂಬ ಸದಸ್ಯರ ಜೊತೆಗೆ ರೇವಣ್ಣ ಚರ್ಚೆ ನಡೆಸುವ ಸಾಧ್ಯತೆ ಇದೆ. ಮಾಜಿ ಪಿಎಂ ಎಚ್.ಡಿ ದೇವೇಗೌಡರ ಆಶೀರ್ವಾದ ಪಡೆದು ಬಳಿಕ ಮುಂದಿನ ಕೆಲಸಗಳಿಗಾಗಿ ಹಾಸನ ಕಡೆ ಹೊರಡಲಿದ್ದಾರೆ.

ಹನ್ನೊಂದು ದಿನಗಳ ಸಂಕಷ್ಟದ ಮೂಡ್‌ನಿಂದ ಇಂದು ಹೊರಬಂದಿರುವ ದೇವೇಗೌಡರು, ನಿನ್ನೆ ರಾತ್ರಿ ಒಂದು ಗಂಟೆವರೆಗೂ ತಮ್ಮ ಮಕ್ಕಳೊಂದಿಗೆ ಹಲವು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಮಾಜಿ ಸಿಎಂ ಎಚ್‌ಡಿಕೆ ಸೇರಿದಂತೆ ದೇವೇಗೌಡರ ಪುತ್ರಿಯರು ಸಹ ಇದರಲ್ಲಿ ಭಾಗಿಯಾಗಿದ್ದರು. ಇಂದು ಮನೆಯಲ್ಲಿ ಹಬ್ಬದ ವಾತಾವರಣವಿದ್ದು, ನಿನ್ನೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.

“ಪೆನ್ ಡ್ರೈವ್ ಪ್ರಕರಣದಿಂದ ಈಗಾಗಲೇ ನಮ್ಮ ಕುಟುಂಬದ ಮಾನ ಬೀದಿಗೆ ಬಂದಿದೆ. ಲೋಕಸಭೆ ‌ಚುನಾವಣೆ ಹೊತ್ತಿನಲ್ಲಿ ಇಕ್ಕಟ್ಟಿಗೆ ಸಿಲುಕಿದ್ದೇವೆ. ಈ ಹೊತ್ತಲ್ಲಿ ರಾಜಕೀಯ ಹೇಳಿಕೆ ಸೇರಿದಂತೆ ಯಾವುದಕ್ಕೂ ಹೇಳಿಕೆ ನೀಡಬೇಡಿ. ಹೆಚ್ಚು ಮಾತನಾಡಬೇಡಿ” ಎಂದು ದೇವೇಗೌಡರು ಮಕ್ಕಳಿಗೆ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಎಚ್ಚರಿಸಿದ್ದಾರೆ.

ಸರ್ಕಾರದ ವಿರುದ್ಧ ಯಾವ ಅಸ್ತ್ರ?

ದೇವೇಗೌಡರ ಐವತ್ತು ವರ್ಷಗಳ ಕಾಲದ ಘನತೆಯ ರಾಜಕೀಯ ಜೀವನಕ್ಕೆ ಪೆನ್‌ ಡ್ರೈವ್‌ ಪ್ರಕರಣದಿಂದ ಭಾರಿ ಪೆಟ್ಟು ಬಿದ್ದಿದೆ. ಕುಟುಂಬಕ್ಕೆ ಮುಜುಗರ ಸೃಷ್ಟಿಯಾಗಿದೆ. ಅವಮಾನಿತರಾದ ದೇವೇಗೌಡರು ರೇವಣ್ಣ ಜೈಲಿಗೆ ಹೋದ ಬಳಿಕ, ಎಂದೂ ಗಡ್ಡ ಬಿಡದವರು ಮೊದಲ ಬಾರಿಗೆ ದಾಡಿ ಬಿಟ್ಟಿದ್ದರು. ಡಿಕೆಶಿ ಹಾಗೂ ಸಿದ್ದರಾಮಯ್ಯ ತಮಗೆ ಸೃಷ್ಟಿಸಿರುವ ಅವಮಾನಕ್ಕೆ ಪ್ರತೀಕಾರ ಮಾಡಲು ಎಚ್‌ಡಿಡಿ ಕುಟುಂಬ ಕುದಿಯುತ್ತಿದೆ.

ಈ ನಿಟ್ಟಿನಲ್ಲಿ ತಂತ್ರ ರೆಡಿಯಾಗುತ್ತಿದ್ದು, ರಾಜಕೀಯ, ಸಾಮಾಜಿಕ ಎಲ್ಲ ನೆಲೆಗಳಲ್ಲೂ ಎದುರಾಳಿಗಳಿಗೆ ಕೌಂಟರ್‌ ಕೊಡಲು ಸಜ್ಜಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೂರು ಅಸ್ತ್ರಗಳು ತಯಾರಾಗುತ್ತಿವೆ ಎನ್ನಲಾಗಿದೆ.

ಅಸ್ತ್ರ – 1: ಡಿಕೆಶಿ ಸಿದ್ದರಾಮಯ್ಯ ವಿರುದ್ಧ ಪ್ರಯೋಗ

ಒಕ್ಕಲಿಗ ಸಮುದಾಯದ ಮುಂದೆ ಡಿಕೆಶಿಯನ್ನು ವಿಲನ್ ಮಾಡುವುದು, ದೇವೇಗೌಡರ ಫ್ಯಾಮಿಲಿಯನ್ನು ಜೈಲಿಗೆ ಕಳುಹಿಸಿದ್ದೇ ಡಿಕೆಶಿ ಹಾಗೂ ಸಿದ್ದರಾಮಯ್ಯ ಅಂತ ಬಿಂಬಿಸುವುದು ಈ ಅಸ್ತ್ರ. ಡಿಕೆಶಿಗೆ ದೇವೇಗೌಡರ ಕುಟುಂಬ ನೋಡಿದರೆ ಆಗಲ್ಲ. ಹೀಗಾಗಿ ಪೆನ್ ಡ್ರೈವ್ ಕೇಸ್‌ನಲ್ಲಿ ನಮ್ಮನ್ನು ಸಿಕ್ಕಿ ಹಾಕಿಸಿದ್ದಾರೆ. ಸಿದ್ದರಾಮಯ್ಯಗೆ ಒಕ್ಕಲಿಗ ಸಮುದಾಯ ಕಂಡರೆ ಆಗಲ್ಲ ಅಂತ ಬಿಂಬಿಸುವುದು, ರಾಜ್ಯಾದ್ಯಂತ ಸರ್ಕಾರದ ನಡೆ ವಿರುದ್ಧ ಮೈತ್ರಿ ಪಕ್ಷದ ಜತೆ ಜನಾಭಿಪ್ರಾಯ ಸಂಗ್ರಹಿಸುವುದು, ಇವರ ತಪ್ಪು ಮರೆ ಮಾಚಲು ಪೆನ್ ಡ್ರೈವ್ ಪ್ರಕರಣ ತಂದರು ಅಂತ ಪ್ರಚಾರ ಮಾಡುವುದು ಇತ್ಯಾದಿಗಳ ಮೂಲಕ ಮುಗಿಬೀಳುವುದು.

ಅಸ್ತ್ರ – 2: ಭ್ರಷ್ಟಾಚಾರದ ಪ್ರಸ್ತಾಪ

ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿಚಾರಗಳನ್ನು ಪ್ರಸ್ತಾಪ ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು, ಈ ಹಿಂದೆ ಸರ್ಕಾರದ ಸಚಿವರ ವರ್ಗಾವಣೆ ದಂಧೆ ಸಂಬಂಧ ಇದೆ ಎನ್ನಲಾದ ಪೆನ್ ಡ್ರೈವ್ ಅಸ್ತ್ರ ಪ್ರಯೋಗ ಮಾಡುವುದು ಪ್ಲಾನ್‌ನಲ್ಲಿದೆ.

ಅಸ್ತ್ರ – 3: ಕಾನೂನು ಅಸ್ತ್ರಗಳು

ಡಿಕೆಶಿ ವಿರುದ್ಧ ಇರುವ, ಕೇಂದ್ರ ತನಿಖಾ ಏಜೆನ್ಸಿಗಳ ಮುಂದೆ ದಾಖಲಾಗಿರುವ ಪ್ರಕರಣಗಳಿಗೆ ಮರುಜೀವ ಕೊಡಿಸುವುದು, ಡಿಕೆಶಿಗೆ ಐಟಿ, ಇಡಿ, ಸಿಬಿಐ ಸಂಕಷ್ಟ ಎದುರಾಗುವಂತೆ ನೋಡಿಕೊಳ್ಳುವುದು, ಈ ಬಗ್ಗೆ ಕೇಂದ್ರದ ಮುಂದೆ ಇನ್ನಷ್ಟು ದಾಖಲೆ ನೀಡಿ ಮೈತ್ರಿ ಪಕ್ಷದ ಬೆಂಬಲ ಪಡೆಯುವುದು ಈ ಪ್ಲಾನ್‌ನಲ್ಲಿದೆ.

ಇದನ್ನೂ ಓದಿ: HD Revanna Bail: ನಿನ್ನೆ ಜಾಮೀನು ಸಿಕ್ಕರೂ ಇಂದು ಸಂಜೆಯವರೆಗೆ ರೇವಣ್ಣ ಜೈಲಿನಲ್ಲಿರಬೇಕು!

Continue Reading
Advertisement
Viral Video
Latest43 seconds ago

Viral Video: ಇಲ್ಲಿ ಸಿಗೋದು ಡಿಸೇಲ್ ಪರಾಠಾ!

Love Failure
ಬೆಂಗಳೂರು ಗ್ರಾಮಾಂತರ3 mins ago

Love Failure : ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

HD Revanna Bail I am not happy that Revanna has been released says HD Kumaraswamy
ರಾಜಕೀಯ23 mins ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

Bomb threat
ದೇಶ24 mins ago

Bomb Threat: ದಿಲ್ಲಿಯ ನಾಲ್ಕು ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ಮೂಲಕ ಸಂದೇಶ ರವಾನೆ

T20 World Cup 2024
ಕ್ರಿಕೆಟ್29 mins ago

T20 World Cup 2024: ನೆದರ್ಲೆಂಡ್ಸ್‌ ಟಿ20 ವಿಶ್ವಕಪ್ ತಂಡದಲ್ಲಿ ಮೂವರು ಭಾರತೀಯ ಆಟಗಾರರಿಗೆ ಸ್ಥಾನ

Davanagere News Marriage at an early age
ದಾವಣಗೆರೆ29 mins ago

Davanagere News : ಇಳಿ ವಯಸ್ಸಿನಲ್ಲಿ ಕೂಡಿ ಬಂದ ಕಂಕಣ ಭಾಗ್ಯ; ದೂರಾಯಿತು ಒಂಟಿತನ

Ramayana Movie
ಸಿನಿಮಾ30 mins ago

Ramayana Movie: ದೇಶದ ಅತ್ಯಂತ ದುಬಾರಿ ಚಿತ್ರ ಎನಿಸಿಕೊಳ್ಳಲಿದೆ ʼರಾಮಾಯಣʼ; ಬಜೆಟ್‌ ನಿಮ್ಮ ಊಹೆಗೂ ನಿಲುಕದ್ದು

gold rate today
ಚಿನ್ನದ ದರ39 mins ago

Gold Rate Today: ಬಂಗಾರದ ಬೆಲೆ ಇನ್ನೂ ಇಳಿಕೆ; ಇಂದಿನ ಮಾರುಕಟ್ಟೆ ದರಗಳನ್ನು ಇಲ್ಲಿ ಗಮನಿಸಿಕೊಳ್ಳಿ

pm narendra modi nomination varanasi
ಪ್ರಮುಖ ಸುದ್ದಿ1 hour ago

PM Narendra Modi: ವಾರಾಣಸಿಯಲ್ಲಿ ನರೇಂದ್ರ ಮೋದಿ ನಾಮಪತ್ರ ಅನುಮೋದಿಸುವ ನಾಲ್ವರು ಯಾರು?

karnataka Rain Effected
ಬೆಂಗಳೂರು1 hour ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

HD Revanna Bail I am not happy that Revanna has been released says HD Kumaraswamy
ರಾಜಕೀಯ23 mins ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 hour ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ8 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ18 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ18 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ19 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ19 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ20 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ1 day ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌