Horoscope Today : ಇಂದು ನಾಲ್ಕು ರಾಶಿಯವರಿಗೆ ಶುಭ ದಿನ; ನಿಮ್ಮ ಭವಿಷ್ಯ ಹೇಗಿದೆ? - Vistara News

ಪ್ರಮುಖ ಸುದ್ದಿ

Horoscope Today : ಇಂದು ನಾಲ್ಕು ರಾಶಿಯವರಿಗೆ ಶುಭ ದಿನ; ನಿಮ್ಮ ಭವಿಷ್ಯ ಹೇಗಿದೆ?

ಶ್ರೀ ಶಕೇ 1944, ಶುಭಕೃತ ನಾಮ ಸವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷದ ಅಷ್ಟಮಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Horoscope Today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದಿನ ಪಂಚಾಂಗ (15-03-2023)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ.

ತಿಥಿ: ಅಷ್ಟಮಿ 18:45 ವಾರ: ಬುಧವಾರ
ನಕ್ಷತ್ರ: ಜೇಷ್ಠ 07:32/ಮೂಲಾ 30:23 ಯೋಗ: ಸಿದ್ಧಿ 12:51
ಕರಣ: ಬಾಲವ 07:37 ಇಂದಿನ ವಿಶೇಷ: ವಿಶ್ವ ಗ್ರಾಹಕರ ಹಕ್ಕು ದಿನ
ಅಮೃತಕಾಲ: ಮಧ್ಯರಾತ್ರಿ 12 ಗಂಟೆ 19 ನಿಮಿಷದಿಂದ ಮಧ್ಯರಾತ್ರಿ 01 ಗಂಟೆ 50 ನಿಮಿಷದವರೆಗೆ.

ಸೂರ್ಯೋದಯ : 06:27 ಸೂರ್ಯಾಸ್ತ : 06:30

ರಾಹುಕಾಲ : ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Horoscope Today)

Horoscope Today

ಮೇಷ: ಮಾನಸಿಕವಾಗಿ ನೆಮ್ಮದಿ. ಅಗತ್ಯ ವಸ್ತುಗಳ ಖರೀದಿಗಾಗಿ ಖರ್ಚು, ಆರ್ಥಿಕ ಪ್ರಗತಿ ಸಾಧಾರಣ. ಕಾರ್ಯಸ್ಥಳದಲ್ಲಿ ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ. ದಿನದ ಕೊನೆಯಲ್ಲಿ ಸಂಗಾತಿಯೊಂದಿಗೆ ಮನಸ್ತಾಪ. ಹಿರಿಯರಿಂದ ಮಾರ್ಗದರ್ಶನ ಪಡೆಯುವಿರಿ. ಆರೋಗ್ಯ ಮಧ್ಯಮ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಷಭ: ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿ ವಹಿಸುವುದು ಸೂಕ್ತ. ನಿಮ್ಮ ನಡವಳಿಕೆಯಿಂದಾಗಿ ಕುಟುಂಬದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ. ಕುಟುಂಬದ ಆಪ್ತರೊಂದಿಗೆ ಮಾತುಕತೆ. ಆರೋಗ್ಯ ಮಧ್ಯಮ. ಉದ್ಯೋಗಿಗಳಿಗೆ ಶುಭ ಫಲ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಆರ್ಥಿಕವಾಗಿ ಪ್ರಗತಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಮಿಥುನ: ಹೂಡಿಕೆ ವ್ಯವಹಾರದಲ್ಲಿ ತೊಡಗುವ ಸಾಧ್ಯತೆ. ಬಿಡುವಿರದ ಕೆಲಸದ ಮಧ್ಯೆಯು ಆರೋಗ್ಯ ಪರಿಪೂರ್ಣ. ಆಪ್ತರೊಂದಿಗೆ ಮಾತುಕತೆ. ಆರ್ಥಿಕ ಪ್ರಗತಿ ಉತ್ತಮ. ಉದ್ಯೋಗಿಗಳಿಗೆ ಶುಭ ಫಲ. ವಿವಾಹಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ಉದ್ಯೋಗದಲ್ಲಿ ಅಲ್ಪ ಯಶಸ್ಸು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಕಟಕ: ಪ್ರಯಾಣವನ್ನು ಬೆಳೆಸುವ ಸಾಧ್ಯತೆ, ಇದರಿಂದ ನೀವು ದೈಹಿಕವಾಗಿ ಬಳಲಲಿದ್ದೀರಿ. ಹೂಡಿಕೆ ವ್ಯವಹಾರಗಳಲ್ಲಿ ಪ್ರಗತಿ. ಈ ಹಿಂದೆ ನೀಡಿದ ಹಣ ಮರಳುವ ಸಾಧ್ಯತೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಸಿಂಹ: ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ಅನಾವಶ್ಯಕ ಕಾರಣಗಳಿಂದ ಖರ್ಚು. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವಿರಿ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಉತ್ಸಾಹದ ದಿನ. ವ್ಯಾಪಾರ ವ್ಯವಹಾರದಲ್ಲಿ ಸಾಧಾರಣ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಕನ್ಯಾ: ಆರೋಗ್ಯ ಪರಿಪೂರ್ಣ. ಅನಗತ್ಯ ಖರ್ಚುಗಳ ಮೇಲೆ ನಿಯಂತ್ರಣ ಸಾಧಿಸುವಿರಿ. ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ. ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ, ಕಿರಿಕಿರಿ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಉದ್ಯೋಗದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಹೆಚ್ಚಿನ ಒತ್ತಡ. ಮನೆಯಲ್ಲಿನ ಭಿನ್ನಾಭಿಪ್ರಾಯಗಳು ನಿಮ್ಮ ಏಕಾಗ್ರತೆಗೆ ದಕ್ಕೆ ತರುವ ಸಾಧ್ಯತೆ, ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ಹಿರಿಯರಿಂದ ಮಾರ್ಗದರ್ಶನ. ದೈಹಿಕ ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಆತುರದಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವುದು ಬೇಡ, ದಿನದ ಮಟ್ಟಿಗೆ ಯಾವುದೇ ಹೂಡಿಕೆ ವ್ಯವಹಾರದಲ್ಲಿ ತೊಡಗುವುದರಿಂದ ನಷ್ಟವಾಗುವ ಸಾಧ್ಯತೆ. ಕೆಲವು ರಹಸ್ಯ ಸುದ್ದಿಗಳಿಂದ ನಿಮಗೆ ಅಚ್ಚರಿ. ನಿಮ್ಮ ಅಚ್ಚು ಕಟ್ಟು ಕೆಲಸದಿಂದ ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಆರ್ಥಿಕ ಪ್ರಗತಿ ಉತ್ತಮ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ಆರ್ಥಿಕ ಪ್ರಗತಿ ಸಾಧಾರಣವಾಗಿರುವುದರಿಂದ ಹೆಚ್ಚಿದ ಒತ್ತಡ. ಪ್ರಮುಖ ಕೆಲಸ ಕಾರ್ಯಗಳು ನಿಧಾನವಾಗಿ ಸಾಗುವವು. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ. ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆ. ಉದ್ಯೋಗಿಗಳಿಗೆ ಶುಭ ಫಲ. ದೈಹಿಕ ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಕರ: ಕಾರಣಾಂತರಗಳಿಂದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ. ಆರ್ಥಿಕವಾಗಿ ಪ್ರಗತಿ ಕಂಡರೂ ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ. ಆಪ್ತರೊಂದಿಗೆ ಮಾತುಕತೆ. ವ್ಯಾಪಾರದ ಉದ್ದೇಶದಿಂದಾಗಿ ಕೈಕೊಂಡ ಪ್ರವಾಸದಲ್ಲಿ ಯಶಸ್ಸು. ಆರೋಗ್ಯ ಕೊಂಚಮಟ್ಟಿಗೆ ಹದಗೆಡುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕುಂಭ: ಮನರಂಜನೆಗಾಗಿ ಸಮಯವನ್ನು ವಿನಿಯೋಗಿಸುವ ಸಾಧ್ಯತೆ. ಸೃಜನಶೀಲ ಕಾರ್ಯಗಳಿಂದಾಗಿ ವ್ಯಕ್ತಿತ್ವ ಪ್ರಕಾಶಿಸುವ ಸಾಧ್ಯತೆ. ನಿಮ್ಮ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳುವಿರಿ. ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಪಡೆಯುವ ಸಾಧ್ಯತೆ. ಆರ್ಥಿಕ ಪ್ರಗತಿ ಉತ್ತಮ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಮೀನ: ಆಹಾರ ಕ್ರಮದಲ್ಲಿನ ವ್ಯತ್ಯಾಸದಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರು, ಕಾಳಜಿ ವಹಿಸುವುದು ಸೂಕ್ತ. ಹೂಡಿಕೆ ಕುರಿತಾಗಿ ಆಲೋಚನೆ. ಅನಿವಾರ್ಯ ಕಾರಣಗಳಿಂದ ಖರ್ಚು. ಆಪ್ತರೊಂದಿಗೆ ಮಾತುಕತೆ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Indian Navy: ನೌಕಾಪಡೆ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ

Indian Navy: ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧ ತಜ್ಞರಾದ ತ್ರಿಪಾಠಿ ಅವರು ನೌಕಾಪಡೆಯ ಮುಂಚೂಣಿ ಯುದ್ಧನೌಕೆಗಳಲ್ಲಿ ಸಿಗ್ನಲ್ ಸಂವಹನ ಅಧಿಕಾರಿ ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ನಿರ್ದೇಶಿತ ಕ್ಷಿಪಣಿ ವಿಧ್ವಂಸಕ INS ಮುಂಬೈನ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪ್ರಧಾನ ಯುದ್ಧ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.

VISTARANEWS.COM


on

indian navy chief of naval staff dinesh tripathi
Koo

ಹೊಸದಿಲ್ಲಿ: ವೈಸ್ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ (Vice Admiral Dinesh Tripathi) ಅವರನ್ನು ನೌಕಾಪಡೆ (Indian Navy) ಮುಂದಿನ ಮುಖ್ಯಸ್ಥರನ್ನಾಗಿ (Chief of Naval Staff) ಕೇಂದ್ರ ಸರಕಾರ ನೇಮಿಸಿದೆ. ಪ್ರಸ್ತುತ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ (Admiral R. Harikumar) ಅವರು ಸೇವೆಯಿಂದ ನಿವೃತ್ತರಾದ ನಂತರ ಅವರು ಏಪ್ರಿಲ್ 30ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಮೇ 15, 1964ರಂದು ಜನಿಸಿದ ತ್ರಿಪಾಠಿ, ಖಡಕ್‌ವಾಸ್ಲಾದ ಸೈನಿಕ್ ಸ್ಕೂಲ್ ರೇವಾ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ. ಅವರನ್ನು 1985ರಲ್ಲಿ ಭಾರತೀಯ ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನಿಯೋಜಿಸಲಾಯಿತು.

ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧ ತಜ್ಞರಾದ ತ್ರಿಪಾಠಿ ಅವರು ನೌಕಾಪಡೆಯ ಮುಂಚೂಣಿ ಯುದ್ಧನೌಕೆಗಳಲ್ಲಿ ಸಿಗ್ನಲ್ ಸಂವಹನ ಅಧಿಕಾರಿ ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ನಿರ್ದೇಶಿತ ಕ್ಷಿಪಣಿ ವಿಧ್ವಂಸಕ INS ಮುಂಬೈನ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪ್ರಧಾನ ಯುದ್ಧ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.

ವೈಸ್ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರ ಸಮುದ್ರ ಕಮಾಂಡ್‌ಗಳಲ್ಲಿ ಐಎನ್‌ಎಸ್ ವಿನಾಶ್, ಕಿರ್ಚ್ ಮತ್ತು ತ್ರಿಶೂಲ್ ಸೇರಿವೆ. ಸುಮಾರು 39 ವರ್ಷಗಳ ಕಾಲ ಅವರ ಸುದೀರ್ಘ ಮತ್ತು ವಿಶಿಷ್ಟ ಸೇವೆಯಲ್ಲಿ, ಅವರು ಮುಂಬೈನಲ್ಲಿ ವೆಸ್ಟರ್ನ್ ಫ್ಲೀಟ್‌ನ ಫ್ಲೀಟ್ ಆಪರೇಷನ್ ಆಫೀಸರ್, ನೌಕಾ ಕಾರ್ಯಾಚರಣೆಗಳ ನಿರ್ದೇಶಕರು, ಪ್ರಧಾನ ನಿರ್ದೇಶಕ ನೆಟ್‌ವರ್ಕ್ ಸೆಂಟ್ರಿಕ್ ಕಾರ್ಯಾಚರಣೆಗಳು ಮತ್ತು ಪ್ರಧಾನ ನಿರ್ದೇಶಕ ನೌಕಾ ಯೋಜನೆಗಳನ್ನು ಒಳಗೊಂಡಂತೆ ವಿವಿಧ ಪ್ರಮುಖ ಕಾರ್ಯಾಚರಣೆ ಮತ್ತು ಸಿಬ್ಬಂದಿ ನೇಮಕಾತಿಗಳನ್ನು ಸಹ ನಡೆಸಿದ್ದಾರೆ.

ಹಿಂದಿನ ಅಡ್ಮಿರಲ್ ಹುದ್ದೆಗೆ ಬಡ್ತಿ ಪಡೆದ ನಂತರ, ಅವರು NHQ ನಲ್ಲಿ ನೌಕಾ ಸಿಬ್ಬಂದಿಯ ಸಹಾಯಕ ಮುಖ್ಯಸ್ಥರಾಗಿ (ನೀತಿ ಮತ್ತು ಯೋಜನೆಗಳು) ಸೇವೆ ಸಲ್ಲಿಸಿದರು ಮತ್ತು ಪೂರ್ವ ನೌಕಾಪಡೆಗೆ ಕಮಾಂಡ್ ಮಾಡುವ ಧ್ವಜ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.

ಕೇರಳದ ಎಝಿಮಲದಲ್ಲಿರುವ ಪ್ರತಿಷ್ಠಿತ ಇಂಡಿಯನ್ ನೇವಲ್ ಅಕಾಡೆಮಿಯ ಕಮಾಂಡೆಂಟ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಜುಲೈ 2020 ರಿಂದ ಮೇ 2021 ರವರೆಗೆ ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿದ್ದರು.

ತ್ರಿಪಾಠಿ ಅವರು ಕೊಚ್ಚಿಯ ಸಿಗ್ನಲ್ ಸ್ಕೂಲ್, ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್, ವೆಲ್ಲಿಂಗ್ಟನ್, ನೇವಲ್ ಹೈಯರ್ ಕಮಾಂಡ್ ಕೋರ್ಸ್, ಕಾರಂಜಾ ಮತ್ತು ಯುನೈಟೆಡ್ ಸ್ಟೇಟ್ಸ್ ನೇವಲ್ ವಾರ್ ಕಾಲೇಜಿನಲ್ಲಿ ನೇವಲ್ ಕಮಾಂಡ್ ಕಾಲೇಜಿನಲ್ಲಿ ಕೋರ್ಸ್‌ಗಳನ್ನು ಪಡೆದಿದ್ದಾರೆ.

ಅವರು ಪರಮ ವಿಶಿಷ್ಟ ಸೇವಾ ಪದಕ (PVSM), ಅತಿ ವಿಶಿಷ್ಟ ಸೇವಾ ಪದಕ (AVSM) ಮತ್ತು ನವೋ ಸೇನಾ ಪದಕ (NSM) ಗಳನ್ನೂ ಸಹ ಪಡೆದಿದ್ದಾರೆ.

ಇದನ್ನೂ ಓದಿ: Job Alert: ಭಾರತೀಯ ನೌಕಾಪಡೆಯಲ್ಲಿದೆ ಭರ್ಜರಿ ಉದ್ಯೋಗಾವಕಾಶ; ಏಪ್ರಿಲ್‌ 30ರೊಳಗೆ ಅರ್ಜಿ ಸಲ್ಲಿಸಿ

Continue Reading

Lok Sabha Election 2024

Modi in Karnataka: ನಾಳೆ ರಾಜ್ಯಕ್ಕೆ ಮೋದಿ; ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಬೃಹತ್‌ ಸಮಾವೇಶ

Modi in Karnataka: ನಾಳೆ (ಏಪ್ರಿಲ್‌ 20) ಮೊದಲಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜತೆಗೆ ಪಕ್ಕದ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಪರವೂ ಮತಯಾಚನೆ ಮಾಡಲಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರವೂ ಸೇರುವುದರಿಂದ ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ನಿರೀಕ್ಷೆ ಇದೆ.

VISTARANEWS.COM


on

Modi in Karnataka on April 20 Massive rallies in Chikkaballapura and Bengaluru
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಚುನಾವಣೆ ಘೋಷಣೆಯಾಗಿ ಈಗಾಗಲೇ ರಾಜ್ಯಕ್ಕೆ ಎರಡು ಬಾರಿ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮೂರನೇ ಬಾರಿಗೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಏಪ್ರಿಲ್ 20ರಂದು ಮೋದಿ ರಾಜ್ಯಕ್ಕೆ (Modi in Karnataka) ಆಗಮಿಸುತ್ತಿದ್ದು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಸುತ್ತಮುತ್ತಲಿನ ಲೋಕಸಭಾ ಕ್ಷೇತ್ರಗಳಲ್ಲಿ ಮೋಡಿ ಮಾಡಲಿದ್ದಾರೆ.

ಮೈಸೂರಿನ ಬೃಹತ್‌ ಸಮಾವೇಶ ಹಾಗೂ ಮಂಗಳೂರಿನ ರೋಡ್‌ ಶೋ ಯಶಸ್ಸಿನ ನಂತರ ಪುನಃ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮೋದಿ ಹವಾ!

ಏಪ್ರಿಲ್‌ 20ರಂದು ಮೊದಲಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜತೆಗೆ ಪಕ್ಕದ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಪರವೂ ಮತಯಾಚನೆ ಮಾಡಲಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರವೂ ಸೇರುವುದರಿಂದ ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ನಿರೀಕ್ಷೆ ಇದೆ.

ಬೆಂಗಳೂರಲ್ಲಿ ಬೃಹತ್‌ ರ‍್ಯಾಲಿ

ಶನಿವಾರ ಸಂಜೆ 5.30ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಪ್ರಚಾರ ರ‍್ಯಾಲಿಯನ್ನು ಆಯೋಜನೆ ಮಾಡಲಾಗಿದೆ. ಇಲ್ಲಿ ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳು ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನೊಳಗೊಂಡಂತೆ ನರೇಂದ್ರ ಮೋದಿ ಮಾತನಾಡಲಿದ್ದಾರೆ.

ಬೆಂಗಳೂರು ಗ್ರಾಮಾಂತರಕ್ಕೆ ಸಿಗುವುದೇ ಮೋದಿ ಬೂಸ್ಟ್‌!

ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನಾಗಿ ಡಾ. ಸಿ.ಎನ್.‌ ಮಂಜುನಾಥ್‌ ಅವರನ್ನು ಕಣಕ್ಕಿಳಿಸಲಾಗಿದೆ. ಇದರಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಎನ್‌ಡಿಎ ಅಭ್ಯರ್ಥಿಗಳ ನಡುವೆ ಟಫ್‌ ಫೈಟ್‌ ಏರ್ಪಟ್ಟಿದೆ. ಕಾರಣ ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮತಗಳು ಕ್ರೋಡೀಕರಣಗೊಂಡರೆ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್‌ ಅವರ ಗೆಲುವಿನ ಹಾದಿ ಅಷ್ಟು ಸುಲಭವಿಲ್ಲ. ಈ ಹಿನ್ನೆಲೆಯಲ್ಲಿ ಡಿಕೆ ಬ್ರದರ್ಸ್‌ ರಾತ್ರಿ – ಹಗಲು ಎನ್ನುವಂತೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅಲ್ಲದೆ, ಕ್ಷೇತ್ರದ ಗೆಲುವಿಗೆ ನಾನಾ ಕಸರತ್ತುಗಳನ್ನು, ರಣತಂತ್ರಗಳನ್ನು ಹೆಣೆಯುತ್ತಾ ಬರುತ್ತಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಸಹ ಬರಲಿದ್ದು, ಅವರು ಪಕ್ಷದ ಅಭ್ಯರ್ಥಿಯಾದ ಡಾ. ಸಿ.ಎನ್.‌ ಮಂಜುನಾಥ್‌ ಪರ ಏನು ಹೇಳಲಿದ್ದಾರೆ? ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸಂಸದ ಡಿ.ಕೆ. ಸುರೇಶ್‌ ವಿರುದ್ಧ ಯಾವ ಬಾಂಬ್‌ ಎಸೆಯಲಿದ್ದಾರೆ? ಇದು ಮತದಾರರ ಮೇಲೆ ಬೀರುವ ಪರಿಣಾಮ ಏನು ಎಂಬಿತ್ಯಾದಿ ಲೆಕ್ಕಾಚಾರಗಳನ್ನು ಹಾಕಲಾಗುತ್ತಿದೆ.

ಇದನ್ನೂ ಓದಿ: Lok Sabha Election 2024: ಎಚ್‌.ಡಿ. ದೇವೇಗೌಡರ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಕಿರಿಕ್‌; ಚುನಾವಣಾ ಆಯೋಗಕ್ಕೆ ದೂರು

ಮೈಸೂರು ಸಮಾವೇಶದಲ್ಲಿ ಗುಡುಗಿದ್ದ ಮೋದಿ!

ಮೈಸೂರಿನಲ್ಲಿ ನಡೆದಿದ್ದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಪಕ್ಷದ ಭ್ರಷ್ಟಾಚಾರದ ಬಗ್ಗೆ ಉಲ್ಲೇಖಿಸಿದ್ದರು. ಅಲ್ಲದೆ, ಹಿಂದುತ್ವದ ವಿರುದ್ಧ ಆ ಪಕ್ಷ ಹಾಗೂ ಮಿತ್ರ ಪಕ್ಷಗಳು ಕೆಲಸ ಮಾಡುತ್ತಿವೆ ಎಂದು ದೂರಿದ್ದರು. ಇನ್ನು ದೇಶದ ಎಲ್ಲ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಇಲ್ಲಿನ ಕಾಂಗ್ರೆಸ್‌ ಸರ್ಕಾರವು ಎಟಿಎಂ ಆಗಿದ್ದು, ನೂರಾರು ಕೋಟಿ ರೂಪಾಯಿ ಸಂದಾಯವಾಗಿದೆ ಎಂದು ಗಂಭೀರ ಆರೋಪವನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏಪ್ರಿಲ್‌ 20 ರಂದು ನಡೆಯಲಿರುವ ಎರಡು ಸಮಾವೇಶಗಳಲ್ಲಿ ಮೋದಿ ಏನು ಮಾತನಾಡಲಿದ್ದಾರೆ? ಯಾವೆಲ್ಲ ಹೊಸ ವಿಷಯಗಳನ್ನು ಪ್ರಸ್ತಾಪ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Continue Reading

ಪ್ರಮುಖ ಸುದ್ದಿ

Lok Sabha Election 2024: ಮೊದಲ ಹಂತದ ಮತದಾನ ಆರಂಭ; 102 ಲೋಕಸಭಾ ಕ್ಷೇತ್ರಗಳ ಭವಿಷ್ಯ ಇಂದು ನಿರ್ಣಯ

Lok Sabha Election 2024: ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 1ರಂದು ಕೊನೆಗೊಳ್ಳಲಿದೆ. ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಜೂನ್ 4ರಂದು ನಡೆಯಲಿದೆ. ಇಂದು ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

VISTARANEWS.COM


on

voting
Koo

ಹೊಸದಿಲ್ಲಿ: ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ (Democracy) ದೇಶವಾದ ಭಾರತದಲ್ಲಿ ಇಂದು ಲೋಕಸಭೆ ಚುನಾವಣೆ (Lok Sabha Election 2024) ಮೊದಲ ಹಂತದ ಮತದಾನ (voting) ಆರಂಭವಾಗಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯಲಿದೆ. ಮುಂಜಾನೆ 7 ಗಂಟೆಗೇ ಆರಂಭವಾದ ವೋಟಿಂಗ್‌ಗೆ ಎಲ್ಲೆಡೆ ಉತ್ಸಾಹದ ಪ್ರತಿಕ್ರಿಯೆ ಕಂಡುಬಂತು.

ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 1ರಂದು ಕೊನೆಗೊಳ್ಳಲಿದೆ. ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಜೂನ್ 4ರಂದು ನಡೆಯಲಿದೆ. ಇಂದು ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಇಂದು ಮತದಾನ ಮಾಡಲಿರುವ ರಾಜ್ಯಗಳು

ತಮಿಳುನಾಡಿನ 39 ಕ್ಷೇತ್ರಗಳು
ರಾಜಸ್ಥಾನದ 12 ಕ್ಷೇತ್ರಗಳು
ಉತ್ತರ ಪ್ರದೇಶದ 8 ಕ್ಷೇತ್ರಗಳು
ಮಧ್ಯ ಪ್ರದೇಶದ 6 ಕ್ಷೇತ್ರಗಳು
ಉತ್ತರಾಖಂಡದ 5 ಕ್ಷೇತ್ರಗಳು
ಮಹಾರಾಷ್ಟ್ರದ 5 ಕ್ಷೇತ್ರಗಳು
ಅಸ್ಸಾಂನ 5 ಕ್ಷೇತ್ರಗಳು
ಬಿಹಾರದ 4 ಕ್ಷೇತ್ರಗಳು
ಪಶ್ಚಿಮ ಬಂಗಾಳದ 3 ಕ್ಷೇತ್ರಗಳು
ಮಣಿಪುರದ 2 ಕ್ಷೇತ್ರಗಳು
ಅರುಣಾಚಲ ಪ್ರದೇಶದ 2 ಕ್ಷೇತ್ರಗಳು
ಮೇಘಾಲಯ 2 ಕ್ಷೇತ್ರಗಳು
ಪುದುಚೆರಿ, ಅರುಣಾಚಲ ಪ್ರದೇಶ, ಛತ್ತೀಸ್‌ಘಡ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

21 ರಾಜ್ಯಗಳ 102 ಕ್ಷೇತ್ರಗಳಲ್ಲಿ 11 ಎಸ್ಟಿ, 18 ಎಸ್ಸಿ, 73 ಸಾಮಾನ್ಯ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. 18 ಲಕ್ಷ ಮತಗಟ್ಟೆ ಸಿಬ್ಬಂದಿ ನಿಯೋಜಿಸಲಾಗಿದೆ. 1.87 ಲಕ್ಷ ಮತಗಟ್ಟೆಗಳ ನಿರ್ಮಾಣವಾಗಿದ್ದು, 16.63 ಕೋಟಿ ಮತದಾರರಿಂದ ಮತದಾನ ನಡೆಯಲಿದೆ. ಇವರಲ್ಲಿ 8.4 ಕೋಟಿ ಪುರುಷ, 8.23 ಕೋಟಿ ಮಹಿಳಾ ಮತ್ತು 11,371 ತೃತೀಯ ಲಿಂಗಿ ಮತದಾರರು ಇದ್ದಾರೆ. 35.67 ಲಕ್ಷ ಯುವ ಸಮೂಹದಿಂದ ಮೊದಲ ಸಲ ಓಟಿಂಗ್ ನಡೆಯುತ್ತಿದೆ. 3.51 ಕೋಟಿ ಯುವ ಮತದಾರರು ಹಾಗೂ 14.14 ಲಕ್ಷ 85+ ವಯಸ್ಸಿನ ಮತದಾರರು ಇದ್ದಾರೆ.

ಕಣದಲ್ಲಿ 1625 ಅಭ್ಯರ್ಥಿಗಳು, 1491 ಪುರುಷ, 134 ಮಹಿಳಾ ಅಭ್ಯರ್ಥಿಗಳು ಇದ್ದಾರೆ. 41 ಹೆಲಿಕಾಪ್ಟರ್, 84 ವಿಶೇಷ ರೈಲು ಹಾಗೂ 1 ಲಕ್ಷ ವಾಹನಗಳು ಚುನಾವಣಾ ಕಾರ್ಯಕ್ಕೆ ಬಳಕೆಯಾಗುತ್ತಿದೆ. 127 ಸಾಮಾನ್ಯ, 67 ಪೊಲೀಸ್, 167 ಇತರೆ ಸೇರಿ ಒಟ್ಟು 361 ಮಂದಿ ಚುನಾವಣಾ ಮೇಲ್ವಿಚಾರಕರ ನೇಮಕವಾಗಿದೆ.

ಇದನ್ನೂ ಓದಿ: Lok Sabha Election : ಕಾಂಗ್ರೆಸ್​​ಗೆ ಹಿನ್ನಡೆಯಾದರೆ ಸಿದ್ದರಾಮಯ್ಯ ಸ್ಥಾನಕ್ಕೆ ಕಂಟಕ​​​; ಚರ್ಚೆ ಹುಟ್ಟು ಹಾಕಿದ ಬೈರತಿ ಸುರೇಶ್​ ಹೇಳಿಕೆ

ಮೊದಲ ಹಂತದ ಚುನಾವಣೆಯಲ್ಲಿನ ಹೈ ವೋಲ್ಟೇಜ್ ಕ್ಷೇತ್ರಗಳು

ಬಿಕಾನೆರ್: (ರಾಜಸ್ಥಾನ )
ಅರ್ಜುನ್ ರಾಮ್ ಮೇಘವಾಲ್ (ಬಿಜೆಪಿ)
ಗೋವಿಂದ್ ರಾಮ್ ಮೇಘವಾಲ್ (ಕಾಂಗ್ರೆಸ್)

ಅಲ್ವಾರ್ : (ರಾಜಸ್ಥಾನ )
ಭೂಪೇಂದರ್ ಯಾದವ್ (ಬಿಜೆಪಿ)
ಲಲಿತ್ ಯಾದವ್ (ಕಾಂಗ್ರೆಸ್)

ಛಿಂದ್ವಾರಾ : (ಮಧ್ಯ ಪ್ರದೇಶ )
ವಿವೇಕ್ ಬಂಟಿ ಸಾಹು (ಬಿಜೆಪಿ)
ನಕುಲ್ ಕಮಲ್ ನಾಥ್ (ಕಾಂಗ್ರೆಸ್)

ನಾಗ್ಪುರ :
ನಿತಿನ್ ಜೈರಾಮ್ ಗಡ್ಕರಿ (ಬಿಜೆಪಿ)
ವಿಕಾಸ್ ಪಾಂಡುರಂಗ ಠಾಕ್ರೆ (ಕಾಂಗ್ರೆಸ್)

ಅರುಣಾಚಲ ಪಶ್ಚಿಮ
ಕಿರಣ್ ರಿಜಿಜು (ಬಿಜೆಪಿ)
ನಬಮ್ ತುಕಿ (ಕಾಂಗ್ರೆಸ್)

ಕೊಯಮತ್ತೂರು:
ಗಣಪತಿ ರಾಜ್ ಕುಮಾರ್ (ಡಿಎಂಕೆ)
ಸಿಂಗೈ ಜಿ ರಾಮಚಂದ್ರನ್ (ಎಐಎಡಿಎಂಕೆ)
ಕೆ ಅಣ್ಣಾಮಲೈ (ಬಿಜೆಪಿ)
ಪಿ.ಆರ್ ನಟರಾಜನ್ (ಸಿಪಿಎಂ)

ಚೆನ್ನೈ ದಕ್ಷಿಣ :
ತಮಿಳಚ್ಚಿ ತಂಗಪಾಂಡಿಯನ್ (ಡಿಎಂಕೆ)
ಜೆ ಜಯವರ್ಧನ್ (ಎಐಎಡಿಎಂಕೆ)
ತಮಿಳಿಸಾಯಿ ಸೌಂದರ್ಯರಾಜನ್ (ಬಿಜೆಪಿ)

ನೀಲಗಿರಿ :
ಎ ರಾಜಾ (ಡಿಎಂಕೆ)
ಡಿ ಲೋಕೇಶ್ ತಮಿಳ್ಸೆಲ್ವನ್ (ಎಐಎಡಿಎಂಕೆ)
ಎಲ್ ಮುರುಗನ್ (ಬಿಜೆಪಿ)

ಶಿವಗಂಗಾ:
ಕಾರ್ತಿ ಪಿ ಚಿದಂಬರಂ (ಕಾಂಗ್ರೆಸ್)
ಕ್ಸೇವಿಯರ್‌ದಾಸ್ (ಎಐಎಡಿಎಂಕೆ)
ಡಿ ದೇವನಾಥನ್ ಯಾದವ್ (ಬಿಜೆಪಿ)

ಚೆನ್ನೈ ಸೆಂಟ್ರಲ್:
ದಯಾನಿಧಿ ಮಾರನ್ (ಡಿಎಂಕೆ)
ಬಿ ಪಾರ್ಥಸಾರಥಿ (ಡಿಎಂಡಿಕೆ)
ವಿನೋಜ್ ಪಿ ಸೆಲ್ವಂ (ಬಿಜೆಪಿ)

ತಿರುವಳ್ಳೂರ್:
ಸಸಿಕಾಂತ್ ಸೆಂಥಿಲ್ (ಕಾಂಗ್ರೆಸ್)
ಕೆ ನಲ್ಲ ತಂಬಿ (DMDK)
ಪೊನ್ ವಿ ಬಾಲಗಣಪತಿ (ಬಿಜೆಪಿ)

ಪಿಲಿಭಿತ್ : (ಉತ್ತರ ಪ್ರದೇಶ )
ಜಿತಿನ್ ಪ್ರಸಾದ (ಬಿಜೆಪಿ)
ಭಗವತ್ ಶರಣ್ ಗಂಗ್ವಾರ್ (ಎಸ್‌ಪಿ)
ಅನಿಸ್ ಅಹ್ಮದ್ ಖಾನ್ (ಬಿಎಸ್ಪಿ)

ಗಯಾ: (ಬಿಹಾರ್ )
ಜಿತನ್ ರಾಮ್ ಮಾಂಝಿ (HAM-S) (ಹಿಂದುಸ್ಥಾನಿ ಅವಾಮ್ ಮೋರ್ಚಾ )
ಕುಮಾರ್ ಸರ್ವಜೀತ್ (ಆರ್ಜೆಡಿ)
ವಿಜಯ್ ಮಾಂಝಿ (ಜೆಡಿಯು)

ಜೋರ್ಹತ್ : (ಅಸ್ಸಾಂ )
ತೊಪೋನ್ ಕುಮಾರ್ ಗೊಗೊಯ್ (ಬಿಜೆಪಿ)
ಗೌರವ್ ಗೊಗೊಯ್ (ಕಾಂಗ್ರೆಸ್)

ಉತ್ತರಾಖಂಡ

ಹರಿದ್ವಾರ:
ವೀರೇಂದ್ರ ರಾವತ್ (ಕಾಂಗ್ರೆಸ್)
ತ್ರಿವೇಂದ್ರ ಸಿಂಗ್ ರಾವತ್ (ಬಿಜೆಪಿ )
[7:00 am, 19/04/2024] harish kera: ಲೋಕಸಭಾ ಚುನಾವಣೆಯ ಮೊದಲ ಹಂತದ ರಾಜ್ಯ ಹಾಗೂ ಕ್ಷೇತ್ರಗಳು

ತಮಿಳುನಾಡು

  1. ಕಾಂಚೀಪುರಂ:
    ಜಿ ಸೆಲ್ವಂ (ಡಿಎಂಕೆ)
    ರಾಜಶೇಖರ್ (ಎಐಎಡಿಎಂಕೆ)
    ವೆಂಕಟೇಶನ್ (ಪಿಎಂಕೆ)
  2. ಅರಕ್ಕೋಣಂ:
    ಎಸ್ ಜಗತ್ರಕ್ಷಕನ್ (ಡಿಎಂಕೆ)
    ಎಎಲ್ ವಿಜಯನ್ (ಎಐಎಡಿಎಂಕೆ)
    ಕೆ ಬಾಲು (ಪಿಎಂಕೆ)
  3. ತಿರುವಳ್ಳೂರ್:
    ಸಸಿಕಾಂತ್ ಸೆಂಥಿಲ್ (ಕಾಂಗ್ರೆಸ್)
    ಕೆ ನಲ್ಲ ತಂಬಿ (DMDK)
    ಪೊನ್ ವಿ ಬಾಲಗಣಪತಿ (ಬಿಜೆಪಿ)
  4. ಚೆನ್ನೈ ಉತ್ತರ :
    ಕಲಾನಿಧಿ ವೀರಸ್ವಾಮಿ (ಡಿಎಂಕೆ)
    ರಾಯಪುರಂ ಆರ್ ಮನೋ (ಎಐಎಡಿಎಂಕೆ)
    ಆರ್ ಸಿ ಪಾಲ್ ಕನಕರಾಜ್ (ಬಿಜೆಪಿ)
  5. ಚೆನ್ನೈ ದಕ್ಷಿಣ :
    ತಮಿಳಚ್ಚಿ ತಂಗಪಾಂಡಿಯನ್ (ಡಿಎಂಕೆ)
    ಜೆ ಜಯವರ್ಧನ್ (ಎಐಎಡಿಎಂಕೆ)
    ತಮಿಳಿಸಾಯಿ ಸೌಂದರ್ಯರಾಜನ್ (ಬಿಜೆಪಿ)
  6. ಚೆನ್ನೈ ಸೆಂಟ್ರಲ್:
    ದಯಾನಿಧಿ ಮಾರನ್ (ಡಿಎಂಕೆ)
    ಬಿ ಪಾರ್ಥಸಾರಥಿ (ಡಿಎಂಡಿಕೆ)
    ವಿನೋಜ್ ಪಿ ಸೆಲ್ವಂ (ಬಿಜೆಪಿ)
  7. ವೆಲ್ಲೂರು:
    ಡಿಎಂ ಕತೀರ್ ಆನಂದ್ (ಡಿಎಂಕೆ)
    ಎಸ್ ಪಶುಪತಿ (ಎಐಎಡಿಎಂಕೆ)
    ಎಸಿ ಷಣ್ಮುಗಂ (ಬಿಜೆಪಿ)
  8. ತಿರುವಣ್ಣಾಮಲೈ:
    ಸಿಎನ್ ಅಣ್ಣಾದೊರೈ (ಡಿಎಂಕೆ)
    ಎಂ ಕಲಿಯಪೆರುಮಾಳ್ (ಎಐಎಡಿಎಂಕೆ)
    ಬಿ ಅಶ್ವಥಾಮನ್ (ಬಿಜೆಪಿ)
  9. ಧರ್ಮಪುರಿ:
    ಎ ಮಣಿ (ಡಿಎಂಕೆ)
    ಆರ್ ಅಶೋಕನ್ (ಎಐಎಡಿಎಂಕೆ)
    ಸೌಮ್ಯಾ ಅಂಬುಮಣಿ (ಪಿಎಂಕೆ)
  10. ಕೃಷ್ಣಗಿರಿ :
    ಕೆ ಗೋಪಿನಾಥ್ (ಕಾಂಗ್ರೆಸ್)
    ವಿ ಜಯಪ್ರಕಾಶ್ (ಎಐಎಡಿಎಂಕೆ)
    ಸಿ ನರಸಿಂಹನ್ (ಬಿಜೆಪಿ)
  11. ಶ್ರೀಪೆರಂಬದೂರ್ :
    ಟಿ ಆರ್ ಬಾಲು (ಡಿಎಂಕೆ)
    ಜಿ ಪ್ರೇಮಕುಮಾರ್ (ಎಐಎಡಿಎಂಕೆ)
  12. ವಿಲುಪ್ಪುರಂ:
    ಡಿ ರವಿಕುಮಾರ್ (ಡಿಎಂಕೆ)
    ಜೆ ಬಕ್ಕಿಯರಾಜ್ (ಎಐಎಡಿಎಂಕೆ)
    ಮುರಳಿ ಶಂಕರ್ (ಪಿಎಂಕೆ)
  13. ಕೊಯಮತ್ತೂರು:
    ಗಣಪತಿ ರಾಜ್ ಕುಮಾರ್ (ಡಿಎಂಕೆ)
    ಸಿಂಗೈ ಜಿ ರಾಮಚಂದ್ರನ್ (ಎಐಎಡಿಎಂಕೆ)
    ಕೆ ಅಣ್ಣಾಮಲೈ (ಬಿಜೆಪಿ)
    ಪಿ.ಆರ್ ನಟರಾಜನ್ (ಸಿಪಿಎಂ)
  14. ನೀಲಗಿರಿ :
    ಎ ರಾಜಾ (ಡಿಎಂಕೆ)
    ಡಿ ಲೋಕೇಶ್ ತಮಿಳ್ಸೆಲ್ವನ್ (ಎಐಎಡಿಎಂಕೆ)
    ಎಲ್ ಮುರುಗನ್ (ಬಿಜೆಪಿ)
  15. ಈರೋಡ್:
    ಕೆ.ಇ.ಪ್ರಕಾಶ್ (ಡಿಎಂಕೆ)
    ಆತ್ರಾಳ್ ಅಶೋಕ್ ಕುಮಾರ್ (ಎಐಎಡಿಎಂಕೆ)
    ಪಿ ವಿಜಯಕುಮಾರ್ (ಟಿಎಂಸಿ-ಎಂ)
  16. ತಿರುಪ್ಪೂರ್:
    ಕೆ ಸುಬ್ಬರಾಯ (ಸಿಪಿಐ)
    ಪಿ ಅರುಣಾಚಲಂ (ಎಐಎಡಿಎಂಕೆ)
    ಎಪಿ ಮುರುಗಾನಂದಂ (ಬಿಜೆಪಿ)
  17. ನಾಮಕ್ಕಲ್:
    ವಿ ಎಸ್ ಮಾಥೇಶ್ವರನ್ (ಡಿಎಂಕೆ)
    ಎಸ್ ತಮಿಳು ಮಣಿ (ಎಐಎಡಿಎಂಕೆ)
    ಕೆಪಿ ರಾಮಲಿಂಗಂ (ಬಿಜೆಪಿ)
  18. ಸೇಲಂ :
    ಟಿಎಂ ಸೆಲ್ವಗಣಪತಿ (ಡಿಎಂಕೆ)
    ಪಿ ವಿಘ್ನೇಶ್ (ಎಐಎಡಿಎಂಕೆ)
    ಎನ್ ಅಣ್ಣಾದೊರೈ (ಪಿಎಂಕೆ)
  19. ಅರಣಿ:
    ಎಂಎಸ್ ತರಣಿವೇಂದನ್ (ಡಿಎಂಕೆ)
    ಜಿವಿ ಗಜೇಂದ್ರನ್ (ಎಐಎಡಿಎಂಕೆ)
    ಎ ಗಣೇಶಕುಮಾರ್ (ಪಿಎಂಕೆ)
  20. ಕಲ್ಲಕುರಿಚಿ:
    ಡಿ ಮಲೈಯರಸನ್ (ಡಿಎಂಕೆ)
    ಆರ್ ಕುಮಾರಗುರು (ಎಐಎಡಿಎಂಕೆ)
    ದೇವದಾಸ್ ಒಡೆಯರ್ (ಪಿಎಂಕೆ)
  21. ಕನ್ಯಾಕುಮಾರಿ:
    ವಿಜಯ ವಸಂತ್ (ಕಾಂಗ್ರೆಸ್)
    ನಜೆರತ್ ಪಸಿಲಿಯನ್ (AIADMK)
    ಪೊನ್ ರಾಧಾಕೃಷ್ಣನ್ (ಬಿಜೆಪಿ)
  22. ತೂತುಕ್ಕುಡಿ:
    ಕನಿಮೊಳಿ ಕರುಣಾನಿಧಿ (ಡಿಎಂಕೆ)
    ಆರ್ ಶಿವಸಾಮಿ ವೇಲುಮಣಿ (ಎಐಎಡಿಎಂಕೆ)
    ವಿಜಯಶೀಲನ್ (TMC-M)
  23. ವಿರುದುನಗರ:
    ಮಾಣಿಕಂ ಟ್ಯಾಗೋರ್ (ಕಾಂಗ್ರೆಸ್)
    ವಿ ವಿಜಯ ಪ್ರಭಾಕರನ್ (DMDK)
    ರಾಧಿಕಾ ಶರತ್‌ಕುಮಾರ್ (ಬಿಜೆಪಿ)
  24. ತೆಂಕಶಿ :
    ಡಾ ರಾಣಿ ಶ್ರೀಕುಮಾರ್ (ಡಿಎಂಕೆ)
    ಕೆ ಕೃಷ್ಣಸಾಮಿ (ಎಐಎಡಿಎಂಕೆ)
    ಜಾನ್ ಪಾಂಡಿಯನ್ (ಬಿಜೆಪಿ)
  25. ರಾಮನಾಥಪುರ:
    ಕಣಿ ಕೆ ನವಾಸ್: IUML
    ಪಿ ಜಯಪೆರುಮಾಳ್: ಎಐಎಡಿಎಂಕೆ
    ಓ ಪನ್ನೀರಸೆಲ್ವಂ: ಪಕ್ಷೇತರ

26.ಥೇನಿ:
ತಂಗ ತಮಿಳ್ ಸೆಲ್ವನ್ (ಡಿಎಂಕೆ)
ವಿಟಿ ನಾರಾಯಣಸ್ವಾಮಿ (ಎಐಎಡಿಎಂಕೆ)
ಟಿಟಿವಿ ದಿನಕರನ್ (ಎಎಂಎಂಕೆ)

  1. ತಂಜಾವೂರು :
    ಎಸ್ ಮುರಸೊಲಿ (ಡಿಎಂಕೆ)
    ಪಿ ಶಿವನೇಶನ್ (DMDK)
    ಎಂ ಮುರುಗಾನಂದಂ (ಬಿಜೆಪಿ)
  2. ಶಿವಗಂಗಾ:
    ಕಾರ್ತಿ ಪಿ ಚಿದಂಬರಂ (ಕಾಂಗ್ರೆಸ್)
    ಕ್ಸೇವಿಯರ್‌ದಾಸ್ (ಎಐಎಡಿಎಂಕೆ)
    ಡಿ ದೇವನಾಥನ್ ಯಾದವ್ (ಬಿಜೆಪಿ)
  3. ಮಧುರೈ :
    ಎಸ್ ವೆಂಕಟೇಶನ್ (ಸಿಪಿಎಂ)
    ಪಿ ಸರವಣನ್ (ಎಐಎಡಿಎಂಕೆ)
    ರಾಮ ಶ್ರೀನಿವಾಸನ್ (ಬಿಜೆಪಿ)
  4. ತಿರುನೆಲ್ವೇಲಿ:
    ಸಿ ರಾಬರ್ಟ್ ಬ್ರೂಸ್ (ಕಾಂಗ್ರೆಸ್)
    ಎಂ ಜಾನ್ಸಿ ರಾಣಿ (ಎಐಎಡಿಎಂಕೆ)
    ನೈನಾರ್ ನಾಗೇಂದ್ರನ್ (ಬಿಜೆಪಿ)
  5. ಪೊಲ್ಲಾಚಿ:
    ಕೆ ಈಶ್ವರಸ್ವಾಮಿ (ಡಿಎಂಕೆ)
    ಕಾರ್ತಿಕೇಯನ್ (ಎಐಎಡಿಎಂಕೆ)
    ಕೆ ವಸಂತರಾಜನ್ (ಬಿಜೆಪಿ)
  6. ಕರೂರ್ :
    ಜೋತಿಮಣಿ ಸೆನ್ನಿಮಲೈ (ಕಾಂಗ್ರೆಸ್)
    ಕೆಆರ್‌ಎಲ್ ತಂಗವೇಲ್ (ಎಐಎಡಿಎಂಕೆ)
    ವಿವಿ ಸೆಂಥಿಲನಾಥನ್ (ಬಿಜೆಪಿ)
  7. ದಿಂಡಿಗಲ್:
    ಆರ್ ಸಚ್ಚಿದಾನಂದಂ (ಸಿಪಿಎಂ)
    ವಿಎಂಎಸ್ ಮೊಹಮ್ಮದ್ ಮುಬಾರಕ್ (ಎಐಎಡಿಎಂಕೆ)
    ಎಂ ತಿಲಗಬಾಮ (ಪಿಎಂಕೆ)
  8. ಪೆರಂಬಲೂರು :
    ಅರುಣ್ ನೆಹರು (ಡಿಎಂಕೆ)
    ಎನ್‌ಡಿ ಚಂದ್ರಮೋಹನ್ (ಎಐಎಡಿಎಂಕೆ)
    ಟಿಆರ್ ಪಾರಿವೇಂದರ್ (ಬಿಜೆಪಿ)
  9. ಕುಡಲೋರು:
    ಎಂಕೆ ವಿಷ್ಣು ಪ್ರಸಾದ್ (ಕಾಂಗ್ರೆಸ್)
    ಪಿ ಶಿವಕೊಜಂದು (ಡಿಎಂಡಿಕೆ)
    ತಂಗರ್ ಬಚನ್ (ಪಿಎಂಕೆ)
  10. ತಿರುಚಿರಾಪಳ್ಳಿ:
    ದುರೈ ವೈಕೋ (MDMK)
    ಪಿ ಕರುಪ್ಪಯ್ಯ (ಎಐಎಡಿಎಂಕೆ)
    ಪಿ ಸೆಂಥಿಲ್ನಾಥನ್ (AMMK)
  11. ಚಿದಂಬರಂ:
    ತೊಲ್ ತಿರುಮಾವಳವನ್ (ವಿಸಿಕೆ)
    ಎಂ ಚಂದ್ರಹಾಸನ್ (ಎಐಎಡಿಎಂಕೆ)
    ಪಿ ಕಾರ್ತಿಯಾಯಿನಿ (ಬಿಜೆಪಿ)
  12. ನಾಗಪಟ್ಟಿಣಂ:
    ವಿ ಸೆಲ್ವರಾಜ್ (ಸಿಪಿಐ)
    ಡಾ ಜಿ ಸುರ್ಜಿತ್ ಶಂಕರ್ (ಎಐಎಡಿಎಂಕೆ)
    ಎಸ್‌ಜಿಎಂ ರಮೇಶ್ (ಬಿಜೆಪಿ)
  13. ಮೈಲಾಡುತುರೈ:
    ಆರ್ ಸುಧಾ (ಕಾಂಗ್ರೆಸ್)
    ಪಿ ಬಾಬು (ಎಐಎಡಿಎಂಕೆ)
    ಮಾ ಕಾ ಸ್ಟಾಲಿನ್ (ಪಿಎಂಕೆ)

ರಾಜಸ್ಥಾನ

  1. ಸಿಕರ್:
    ಸುಮೇಧಾನಂದ ಸರಸ್ವತಿ (ಬಿಜೆಪಿ)
    ಅಮ್ರ ರಾಮ್ ಪರಸ್ವಾಲ್ (ಸಿಪಿಎಂ)
  2. ಚುರು :
    ದೇವೇಂದ್ರ ಜಜಾರಿಯಾ (ಬಿಜೆಪಿ)
    ರಾಹುಲ್ ಕಸ್ವಾನ್ (ಕಾಂಗ್ರೆಸ್)
  3. ಜುಂಜುನು :
    ಸುಭಕರನ್ ಚೌಧರಿ (ಬಿಜೆಪಿ)
    ಬ್ರಿಜೇಂದ್ರ ಸಿಂಗ್ ಓಲಾ (ಕಾಂಗ್ರೆಸ್)
  4. ಬಿಕಾನೆರ್:
    ಅರ್ಜುನ್ ರಾಮ್ ಮೇಘವಾಲ್ (ಬಿಜೆಪಿ)
    ಗೋವಿಂದ್ ರಾಮ್ ಮೇಘವಾಲ್ (ಕಾಂಗ್ರೆಸ್)
  5. ಗಂಗಾನಗರ :
    ಪ್ರಿಯಾಂಕಾ ಬಾಲನ್ ಮೇಘವಾಲ್ (ಬಿಜೆಪಿ)
    ಕುಲದೀಪ್ ಇಂದೋರಾ (ಕಾಂಗ್ರೆಸ್
  6. ಜೈಪುರ :
    ಮಂಜು ಶರ್ಮಾ (ಬಿಜೆಪಿ)
    ಪ್ರತಾಪ್ ಸಿಂಗ್ ಖಚರಿಯಾವಾಸ್ (ಕಾಂಗ್ರೆಸ್)
  7. ಜೈಪುರ ಗ್ರಾಮಾಂತರ:
    ರಾವ್ ರಾಜೇಂದ್ರ ಸಿಂಗ್ (ಬಿಜೆಪಿ)
    ಅನಿಲ್ ಚೋಪ್ರಾ (ಕಾಂಗ್ರೆಸ್)

47.ಅಲ್ವಾರ್ :
ಭೂಪೇಂದರ್ ಯಾದವ್ (ಬಿಜೆಪಿ)
ಲಲಿತ್ ಯಾದವ್ (ಕಾಂಗ್ರೆಸ್)

  1. ದೌಸಾ :
    ಕನ್ಹಯ್ಯಾ ಲಾಲ್ ಮೀನಾ (ಬಿಜೆಪಿ)
    ಮುರಾರಿ ಲಾಲ್ ಮೀನಾ (ಕಾಂಗ್ರೆಸ್)
  2. ನಾಗೌರ್:
    ಜ್ಯೋತಿ ಮಿರ್ಧಾ (ಬಿಜೆಪಿ)
    ಹನುಮಾನ್ ಬೇನಿವಾಲ್ (RLP) ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ
  3. ಕರೌಲಿ-ಧೋಲ್ಪುರ್:
    ಇಂದು ದೇವಿ ಜಾತವ್ (ಬಿಜೆಪಿ)
    ಭಜನ್ ಲಾಲ್ ಜಾತವ್ (ಕಾಂಗ್ರೆಸ್)
  4. ಭರತಪುರ:
    ರಾಮಸ್ವರೂಪ್ ಕೋಲಿ (ಬಿಜೆಪಿ)
    ಸಂಜನಾ ಜಾತವ್ (ಕಾಂಗ್ರೆಸ್)

ಉತ್ತರಪ್ರದೇಶ

  1. ಸಹರಾನ್ಪುರ್:
    ರಾಘವ್ ಲಖನ್‌ಪಾಲ್ (ಬಿಜೆಪಿ)
    ಇಮ್ರಾನ್ ಮಸೂದ್ (ಕಾಂಗ್ರೆಸ್)
    ಮಜೀದ್ ಅಲಿ (BSP)
  2. ಕೈರಾನಾ:
    ಪ್ರದೀಪ್ ಕುಮಾರ್ ಚೌಧರಿ (ಬಿಜೆಪಿ)
    ಇಕ್ರಾ ಹಸನ್ ಚೌಧರಿ (ಎಸ್‌ಪಿ)
    ಶ್ರೀಪಾಲ್ (ಬಿಎಸ್ಪಿ)
  3. ಮುಜಾಫರ್‌ನಗರ
    ಸಂಜೀವ್ ಕುಮಾರ್ ಬಲ್ಯಾನ್ (ಬಿಜೆಪಿ)
    ಹರೇಂದ್ರ ಸಿಂಗ್ ಮಲಿಕ್ (ಎಸ್‌ಪಿ)
    ದಾರಾ ಸಿಂಗ್ ಪ್ರಜಾಪತಿ (BSP)
  4. ಬಿಜ್ನೋರ್
    ಚಂದನ್ ಚೌಹಾಣ್ (RLD)
    ದೀಪಕ್ ಸೈನಿ (SP)
    ಚೌಧರಿ ವಿಜೇಂದರ್ ಸಿಂಗ್ (ಬಿಎಸ್ಪಿ)
  5. ನಾಗಿನಾ :
    ಓಂ ಕುಮಾರ್ (ಬಿಜೆಪಿ)
    ಮನೋಜ್ ಕುಮಾರ್ (ಎಸ್ಪಿ)
    ಸುರೇಂದ್ರ ಪಾಲ್ ಸಿಂಗ್ (ಬಿಎಸ್ಪಿ)
  6. ಮೊರಾದಾಬಾದ್ :
    ಕುನ್ವರ್ ಸರ್ವೇಶ್ ಕುಮಾರ್ ಸಿಂಗ್ (ಬಿಜೆಪಿ)
    ರುಚಿ ವೀರ್ (ಎಸ್‌ಪಿ)
    ಮೊಹಮ್ಮದ್ ಇರ್ಫಾನ್ ಸೈಫಿ (ಬಿಎಸ್ಪಿ)
  7. ರಾಂಪುರ:
    ಘನಶ್ಯಾಮ್ ಸಿಂಗ್ ಲೋಧಿ (ಬಿಜೆಪಿ)
    ಮೊಹಿಬುಲ್ಲಾ ನದ್ವಿ (ಎಸ್‌ಪಿ)
    ಜೀಶನ್ ಖಾನ್ (BSP)
  8. ಪಿಲಿಭಿತ್ :
    ಜಿತಿನ್ ಪ್ರಸಾದ (ಬಿಜೆಪಿ)
    ಭಗವತ್ ಶರಣ್ ಗಂಗ್ವಾರ್ (ಎಸ್‌ಪಿ)
    ಅನಿಸ್ ಅಹ್ಮದ್ ಖಾನ್ (ಬಿಎಸ್ಪಿ)

ಮಧ್ಯಪ್ರದೇಶ

  1. ಸಿದ್ಧಿ :
    ಡಾ ರಾಜೇಶ್ ಮಿಶ್ರಾ (ಬಿಜೆಪಿ)
    ಕಮಲೇಶ್ವರ್ ಕುಮಾರ್ ಪಟೇಲ್ (ಕಾಂಗ್ರೆಸ್)
  2. ಶಹದೋಲ್:
    ಹಿಮಾದ್ರಿ ಸಿಂಗ್ (ಬಿಜೆಪಿ)
    ಫುಂಡೇಲಾಲ್ ಸಿಂಗ್ ಮಾರ್ಕೊ (ಕಾಂಗ್ರೆಸ್)
  3. ಜಬಲ್ಪುರ್ :
    ಆಶಿಶ್ ದುಬೆ (ಬಿಜೆಪಿ)
    ದಿನೇಶ್ ಯಾದವ್ (ಕಾಂಗ್ರೆಸ್)
  4. ಮಂಡಲ :
    ಫಗ್ಗನ್ ಸಿಂಗ್ ಕುಲಸ್ತೆ (ಬಿಜೆಪಿ)
    ಓಂಕಾರ್ ಸಿಂಗ್ ಮಾರ್ಕಮ್ (ಕಾಂಗ್ರೆಸ್)
  5. ಬಾಲಘಾಟ್ :
    ಭಾರತಿ ಪಾರ್ಧಿ (ಬಿಜೆಪಿ)
    ಸಾಮ್ರಾಟ್ ಸಾರಸ್ವತ್ (ಕಾಂಗ್ರೆಸ್)
  6. ಛಿಂದ್ವಾರಾ :
    ವಿವೇಕ್ ಬಂಟಿ ಸಾಹು (ಬಿಜೆಪಿ)
    ನಕುಲ್ ಕಮಲ್ ನಾಥ್ (ಕಾಂಗ್ರೆಸ್)

ಉತ್ತರಾಖಂಡ

  1. ತೆಹ್ರಿ ಗರ್ವಾಲ್:
    ಮಾಲಾ ರಾಜ ಲಕ್ಷ್ಮಿ ಶಾ (ಬಿಜೆಪಿ)
    ಜೋತ್ ಸಿಂಗ್ ಗುನ್ಸೋಲಾ (ಕಾಂಗ್ರೆಸ್)
  2. ಅಲ್ಮೋರಾ:
    ಅಜಯ್ ತಮ್ತಾ (ಬಿಜೆಪಿ)
    ಪ್ರದೀಪ್ ತಮ್ತಾ (ಕಾಂಗ್ರೆಸ್)
  3. ಗರ್ವಾಲ್ :
    ಅನಿಲ್ ಬಲುನಿ (ಬಿಜೆಪಿ)
    ಗಣೇಶ್ ಗೋಡಿಯಾಲ್ (ಕಾಂಗ್ರೆಸ್)
  4. ನೈನಿತಾಲ್-ಉದಮ್ಸಿಂಗ್ ನಗರ:
    ಅಜಯ್ ತಮ್ಮಟಾ (ಬಿಜೆಪಿ)
    ಪ್ರಕಾಶ್ ಜೋಶಿ (ಕಾಂಗ್ರೆಸ್)
  5. ಹರಿದ್ವಾರ:
    ತ್ರಿವೇಂದ್ರ ಸಿಂಗ್ ರಾವತ್ (ಬಿಜೆಪಿ)
    ವೀರೇಂದ್ರ ರಾವತ್ (ಕಾಂಗ್ರೆಸ್)

ಮಹಾರಾಷ್ಟ್ರ

  1. ರಾಮ್ಟೆಕ್:
    ರಾಜು ದೇವನಾಥ ಪರ್ವೆ (ಶಿವಸೇನೆ)
    ಶ್ಯಾಮಕುಮಾರ್ ದೌಲತ್ ಬರ್ವೆ (ಕಾಂಗ್ರೆಸ್)
  2. ನಾಗ್ಪುರ :
    ನಿತಿನ್ ಜೈರಾಮ್ ಗಡ್ಕರಿ (ಬಿಜೆಪಿ)
    ವಿಕಾಸ್ ಪಾಂಡುರಂಗ ಠಾಕ್ರೆ (ಕಾಂಗ್ರೆಸ್)
  3. ಭಂಡಾರ-ಗೊಂಡಿಯಾ
    ಸುನಿಲ್ ಬಾಬುರಾವ್ ಮೆಂಡೆ (ಬಿಜೆಪಿ)
    ಡಾ ಪ್ರಶಾಂತ್ ಯಾದವರಾವ್ ಪಡೋಲೆ (ಕಾಂಗ್ರೆಸ್)
  4. ಗಡ್ಚಿರೋಲಿ-ಚಿಮೂರ್:
    ಅಶೋಕ್ ಮಹದೇವರಾವ್ ನೇತೆ (ಬಿಜೆಪಿ)
    ಡಾ ನಾಮದೇವ ದಾಸರಾಂ ಕಿರ್ಸನ್ (ಕಾಂಗ್ರೆಸ್)
  5. ಚಂದ್ರಾಪುರ:
    ಸುಧೀರ್ ಮುಂಗಂತಿವಾರ್ (ಬಿಜೆಪಿ)
    ಪ್ರತಿಭಾ ಸುರೇಶ್ ಧನೋರ್ಕರ್ (ಕಾಂಗ್ರೆಸ್)

ಅಸ್ಸಾಂ

  1. ಸೋನಿತ್ಪುರ್ :
    ರಂಜಿತ್ ದತ್ತಾ (ಬಿಜೆಪಿ)
    ಪ್ರೇಮಲಾಲ್ ಗಂಜು (ಕಾಂಗ್ರೆಸ್)
    ರಾಜು ದೇರಿ (BPF)
  2. ಕಾಜಿರಂಗ :
    ಕಾಮಾಖ್ಯ ಪ್ರಸಾದ್ ತಾಸಾ (ಬಿಜೆಪಿ)
    ರೋಸೆಲಿನಾ ಟಿರ್ಕಿ (ಕಾಂಗ್ರೆಸ್)
  3. ದಿಬ್ರುಗಢ :
    ಸರ್ಬಾನಂದ ಸೋನೋವಾಲ್ (ಬಿಜೆಪಿ)
    ಲುರಿಂಜ್ಯೋತಿ ಗೊಗೋಯ್ (ಎಜೆಪಿ)
  4. ಲಖಿಂಪುರ:
    ಪ್ರದಾನ್ ಬರುವಾ (ಬಿಜೆಪಿ)
    ಉದಯಶಂಕರ್ ಹಜಾರಿಕಾ (ಕಾಂಗ್ರೆಸ್)
  5. ಜೋರ್ಹತ್ :
    ತೊಪೋನ್ ಕುಮಾರ್ ಗೊಗೊಯ್ (ಬಿಜೆಪಿ)
    ಗೌರವ್ ಗೊಗೊಯ್ (ಕಾಂಗ್ರೆಸ್)

ಬಿಹಾರ್

  1. ಔರಂಗಾಬಾದ್:
    ಬಿಹಾರ ಸುಶೀಲ್ ಕುಮಾರ್ ಸಿಂಗ್ (ಬಿಜೆಪಿ)
    ಅಭಯ್ ಕುಮಾರ್ ಸಿನ್ಹಾ (ಆರ್‌ಜೆಡಿ)
  2. ಗಯಾ:
    ಜಿತನ್ ರಾಮ್ ಮಾಂಝಿ (HAM-S) (ಹಿಂದುಸ್ಥಾನಿ ಅವಾಮ್ ಮೋರ್ಚಾ )
    ಕುಮಾರ್ ಸರ್ವಜೀತ್ (ಆರ್ಜೆಡಿ)
    ವಿಜಯ್ ಮಾಂಝಿ (ಜೆಡಿಯು)
  3. ನಾವಡ:
    ವಿವೇಕ್ ಠಾಕೂರ್ (ಬಿಜೆಪಿ)
    ಶ್ರವಣ್ ಕುಮಾರ್ ಕುಶ್ವಾಹ (ಆರ್‌ಜೆಡಿ)
    ಚಂದನ್ ಸಿಂಗ್ (ಎಲ್‌ಜೆಪಿ)
  4. ಜಮುಯಿ:
    ಅರುಣ್ ಭಾರತಿ (LJP-RV)
    ಅರ್ಚನಾ ಕುಮಾರಿ (ಆರ್‌ಜೆಡಿ)
    ಚಿರಾಗ್ ಪಾಸ್ವಾನ್ (LJP)

ಪಶ್ಚಿಮ ಬಂಗಾಳ

  1. ಕೂಚ್ ಬೆಹಾರ್ :
    ನಿಸಿತ್ ಪ್ರಮಾಣಿಕ್ (ಬಿಜೆಪಿ)
    ಜಗದೀಶ್ ಚಂದ್ರ ಬರ್ಮಾ ಬಸುನಿಯಾ (ಟಿಎಂಸಿ)
    ನಿತೀಶ್ ಚಂದ್ರ ರಾಯ್ (AIFB)
    ಪಿಯಾ ರಾಯ್ ಚೌಧರಿ (ಕಾಂಗ್ರೆಸ್)
  2. ಜಲ್ಪೈಗುರಿ:
    ಜಯಂತ ಕುಮಾರ್ ರಾಯ್ (ಬಿಜೆಪಿ)
    ನಿರ್ಮಲ್ ಚಂದ್ರ ರಾಯ್ (ಟಿಎಂಸಿ)
    ದೇಬ್ರಾಜ್ ಬರ್ಮನ್ (ಸಿಪಿಎಂ)
  3. ಅಲಿಪುರ್ದುವಾಸ್:
    ಮನೋಜ್ ತಿಗ್ಗಾ (ಬಿಜೆಪಿ)
    ಪ್ರಕಾಶ್ ಚಿಕ್ ಬರೈಕ್ (ಟಿಎಂಸಿ)
    ಮಿಲಿ ಓರಾನ್ (RSP)

ಅರುಣಾಚಾಲ ಪ್ರದೇಶ

  1. ಅರುಣಾಚಲ ಪಶ್ಚಿಮ
    ಕಿರಣ್ ರಿಜಿಜು (ಬಿಜೆಪಿ)
    ನಬಮ್ ತುಕಿ (ಕಾಂಗ್ರೆಸ್)
  2. ಅರುಣಾಚಲ ಪೂರ್ವ
    ತಾಪಿರ್ ಗಾವೊ (ಬಿಜೆಪಿ)
    ಬೋಸಿರಾಮ್ ಸಿರಾಮ್ (ಕಾಂಗ್ರೆಸ್)

ಮೇಘಾಲಯ

  1. ತುರಾ:
    ಅಗಾಥಾ ಕೆ ಸಂಗ್ಮಾ (NPP)
    ಸಲೇಂಗ್ ಎ ಸಂಗ್ಮಾ (ಕಾಂಗ್ರೆಸ್)
    ಜೆನಿತ್ ಎಂ ಸಂಗ್ಮಾ (ಟಿಎಂಸಿ)
  2. ಶಿಲ್ಲಾಂಗ್:
    ಡಾ ಮಜೆಲ್ ಅಂಪಾರೀನ್ ಲಿಂಗ್ಡೋಹ್ (NPP)
    ವಿನ್ಸೆಂಟ್ ಎಚ್ ಪಾಲಾ (ಕಾಂಗ್ರೆಸ್)
    ರಾಬರ್ಟ್ ಜೂನ್ ಖರ್ಜಹ್ರಿನ್ (ಯುಡಿಪಿ)

ಮಣಿಪುರ

  1. ಔಟರ್ ಮಣಿಪುರ :
    ಕಚುಯಿ ತಿಮೋತಿ ಝಿಮಿಕ್ (NPF)
    ಆಲ್ಫ್ರೆಡ್ ಕಂಗಮ್ ಎಸ್ ಆರ್ಥರ್ (ಕಾಂಗ್ರೆಸ್)
  2. ಇನ್ನರ್ ಮಣಿಪುರ:
    ತೌನೊಜಂ ಬಸಂತ ಕುಮಾರ್ ಸಿಂಗ್ (ಬಿಜೆಪಿ)
    ಅಂಗೋಮ್ಚಾ ಬಿಮೋಲ್ ಅಕೋಯಿಜಮ್ (ಕಾಂಗ್ರೆಸ್)

94.ಪಶ್ಚಿಮ ತ್ರಿಪುರಾ
ಬಿಪ್ಲಬ್ ಕುಮಾರ್ ದೇಬ್ (ಬಿಜೆಪಿ)
ಆಶಿಶ್ ಕುಮಾರ್ ಸಹಾ (ಕಾಂಗ್ರೆಸ್)

ಛತ್ತೀಸ್‌ಗಢ

  1. ಬಸ್ತಾರ್:
    ಮಹೇಶ್ ಕಶ್ಯಪ್ (ಬಿಜೆಪಿ)
    ಕವಾಸಿ ಲಖ್ಮಾ (ಕಾಂಗ್ರೆಸ್)
  2. ಪುದುಚೇರಿ
    ನಮಸ್ಶಿವಾಯಂ (ಬಿಜೆಪಿ)
    ವಿ ವೈತಿಲಿಂಗಂ (ಕಾಂಗ್ರೆಸ್)
  3. ಅಂಡಮಾನ್ ಮತ್ತು ನಿಕೋಬಾರ್
    ಬಿಷ್ಣು ಪದಾ ರೇ (ಬಿಜೆಪಿ)
    ಕುಲದೀಪ್ ರಾಯ್ ಶರ್ಮಾ (ಕಾಂಗ್ರೆಸ್)
  4. ಲಕ್ಷದ್ವೀಪ:
    ಮೊಹಮ್ಮದ್ ಫೈಜಲ್ ಪಡಿಪ್ಪುರ (ಎನ್‌ಸಿಪಿ-ಶರದ್ ಪವಾರ್)
    ಮುಹಮ್ಮದ್ ಹಮ್ದುಲ್ಲಾ ಸಯೀದ್ (ಕಾಂಗ್ರೆಸ್)
    ಟಿಪಿ ಯೂಸುಫ್ (ಎನ್‌ಸಿಪಿ)
  5. ಮಿಜೋರಾಂ
    ರಿಚರ್ಡ್ ವನ್ಲಾಲ್ಮಂಗೈಹ (ZPM)
    ಕೆ ವನಲಲ್ವೆನಾ (MNF)
    ಲಾಲ್ಬಿಯಾಕ್ಜಮಾ (ಕಾಂಗ್ರೆಸ್)
    ವನ್‌ಲಾಲ್‌ಮುವಾಕಾ (ಬಿಜೆಪಿ)
  6. ನಾಗಾಲ್ಯಾಂಡ್
    ಡಾ ಚುಂಬೆನ್ ಮರ್ರಿ (NDPP)
    ಎಸ್ ಸುಪೊಂಗ್ಮೆರೆನ್ ಜಮೀರ್ (ಕಾಂಗ್ರೆಸ್)

ಜಮ್ಮು & ಕಾಶ್ಮೀರ

  1. ಉಧಂಪುರ :
    ಡಾ ಜಿತೇಂದ್ರ ಸಿಂಗ್ (ಬಿಜೆಪಿ)
    ಚೌಧರಿ ಲಾಲ್ ಸಿಂಗ್ (ಕಾಂಗ್ರೆಸ್)
  2. ಸಿಕ್ಕಿಂ :
    ಇಂದ್ರ ಹ್ಯಾಂಗ್ ಸುಬ್ಬ (SKM)
    ಪ್ರೇಮ್ ದಾಸ್ ರೈ (SDF)
    ದಿನೇಶ್ ಚಂದ್ರ ನೇಪಾಳ (ಬಿಜೆಪಿ)
    ಗೋಪಾಲ್ ಚೆಟ್ರಿ (ಕಾಂಗ್ರೆಸ್)
Continue Reading

ಅಂಕಣ

ರಾಜಮಾರ್ಗ ಅಂಕಣ: ಭಾರತದ ಹೆಣ್ಣು ಮಕ್ಕಳಿಗೆ ಆಕಾಶದ ಎತ್ತರವೂ ಕಡಿಮೆ ಎಂದು ಸಾಬೀತು ಪಡಿಸಿದ ಕಲ್ಪನಾ ಚಾವ್ಲಾ!

ರಾಜಮಾರ್ಗ ಅಂಕಣ: ಭಾರತೀಯ ಮೂಲದ ಓರ್ವ ಹೆಣ್ಣು ಮಗಳು ಸಂಶೋಧನೆ ಮಾಡಲು ಬಹಳ ದೊಡ್ಡ ಕನಸು ಕಟ್ಟಿಕೊಂಡು ನಾಸಾಕ್ಕೆ ಹೋದದ್ದು, ಭಾರತದ ಮೊತ್ತ ಮೊದಲ ವ್ಯೋಮಯಾನಿ ಆದದ್ದು, ಮುಂದೆ ಅದೇ ರೀತಿಯ ಎರಡನೇ ಯಾನಕ್ಕೆ ಪ್ರಯತ್ನವನ್ನು ಮಾಡಿ ಆಕಾಶದ ಹೊಳೆಯುವ ನಕ್ಷತ್ರಗಳ ನಡುವೆ ಒಂದು ಮಿನುಗು ನಕ್ಷತ್ರವಾದದ್ದು ನಮಗೆಲ್ಲರಿಗೂ ಒಂದು ಸ್ಫೂರ್ತಿದಾಯಕ ಹಾಗೂ ಒಂದು ದುಃಖದಾಯಕ ಘಟನೆ

VISTARANEWS.COM


on

kalpana chawla rajamarga column
Koo

ಕನಸುಗಳಿಗೆ ರೆಕ್ಕೆ ಕಟ್ಟಿದ ಆ ಹುಡುಗಿಯ ಸಾಧನೆ ನಿಜಕ್ಕೂ ಪ್ರೇರಣಾದಾಯಿ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: 1962ರ ಮಾರ್ಚ್ 17ರಂದು ಹರಿಯಾಣಾದ ಕರ್ನಾಲನಲ್ಲಿ ಬನಾರಸಿ ಲಾಲ್ ಚಾವ್ಲಾ ಮತ್ತು ಸಂಜ್ಯೋತಿಯವರ ಹಿರಿಯ ಮಗಳಾಗಿ ಜನಿಸಿದ ಆಕೆಗೆ (Kalpana Chawla) ಬಾಲ್ಯದಿಂದಲೂ ಆಕಾಶದಲ್ಲಿ ಹಾರಾಡುವ ಕನಸು. ಎತ್ತರದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡುತ್ತಾ ತಾನೂ ರೆಕ್ಕೆಗಳನ್ನು ಕಟ್ಟಿ ಹಾರಬೇಕು ಎಂದು ತನ್ನ ಅಪ್ಪನ ಜೊತೆ ಹೇಳುತ್ತಾ ಬೆಳೆದವರು ಆಕೆ!

ಬಾಲ್ಯದಿಂದಲೂ ಕಲ್ಪನಾಗೆ ಅಪ್ಪನೇ ಐಕಾನ್, ಲೆಜೆಂಡ್ ಎಲ್ಲವೂ! ಮೂರನೇ ವಯಸ್ಸಿಗೇ ಅಪ್ಪನಿಗೆ ಆಕಾಶದಲ್ಲಿ ವಿಮಾನ ತೋರಿಸಿ ತಾನೂ ಹಾರಬೇಕು ಎಂದು ದುಂಬಾಲು ಬಿದ್ದವಳು ಕಲ್ಪನಾ! ಅಪ್ಪನೂ ಆಕೆಯ ಪ್ರತೀಯೊಂದು ಕನಸಿನ ಈಡೇರಿಕೆಗೆ ಊರುಗೋಲಾಗಿ ನಿಂತಿದ್ದರು.

ತನ್ನ ಕನಸಿನ ಭಾಗವಾಗಿ ನಾಸಾ ಸೇರಿದರು ಕಲ್ಪನಾ

ಹರ್ಯಾಣದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪೂರ್ತಿ ಮಾಡಿದ ಕಲ್ಪನಾ ತನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಮೇರಿಕಾಕ್ಕೆ ತೆರಳಿದರು. ಅಲ್ಲಿ ಶ್ರೇಷ್ಟವಾದ ಕೊಲರೆಡೋ ವಿವಿಯಿಂದ ಬಾಹ್ಯಾಕಾಶ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಆಕೆ ಪಡೆದರು.

ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ (NASA) ಸೇರಬೇಕು ಎಂದು ಆಕೆಯದು ಭಾರೀ ದೊಡ್ಡ ಕನಸು. ಅದಕ್ಕಾಗಿ ಹತ್ತಾರು ಪರೀಕ್ಷೆ, ಸಂದರ್ಶನಗಳನ್ನು ಎದುರಿಸಿ 1988ರಲ್ಲಿ ಆಕೆ ತನ್ನ ಡೆಸ್ಟಿನಿಯಾದ ನಾಸಾಕ್ಕೆ ಆಯ್ಕೆ ಆಗುತ್ತಾರೆ. ಮುಂದೆ ಅತ್ಯಂತ ಕಠಿಣವಾದ ತರಬೇತು ಆಕೆ ಪಡೆಯುತ್ತಾರೆ.

ದೇಹ ಮತ್ತು ಮನಸ್ಸನ್ನು ಹುರಿಗೊಳಿಸಲು ಯೋಗ ಮತ್ತು ಪ್ರಾಣಾಯಾಮಗಳ ಮೊರೆ ಹೊಕ್ಕವರು ಅವರು. ಮುಂದೆ ಯಾವ ಸವಾಲು ಕೂಡ ಎದುರಿಸಲು ಮಾನಸಿಕವಾಗಿ ಆಕೆ ಸಿದ್ಧರಾಗಲು ಕನಿಷ್ಠ ಎಂಟು ವರ್ಷ ಬೇಕಾಯಿತು. ಪ್ರತೀ ನಿತ್ಯವೂ ಅಪ್ಪನ ಜೊತೆ ಮಾತಾಡುತ್ತ ತನ್ನ ಕನಸುಗಳನ್ನು ಜೀವಂತವಾಗಿ ಇರಿಸಿದವರು ಕಲ್ಪನಾ.

1997 ನವೆಂಬರ್ 19, ಆ ದಿನ ಬಂದೇ ಬಿಟ್ಟಿತು!

ಪ್ರತಿಯೊಬ್ಬ ಸಾಧಕರು ಒಂದು ದೊಡ್ಡ ಅವಕಾಶಕ್ಕಾಗಿ ಕಾಯುತ್ತಾ ಇರುತ್ತಾರೆ. ಹಾಗೆ ಕಲ್ಪನಾ ಬದುಕಿನಲ್ಲಿ ಆ ಒಂದು ದೊಡ್ಡ ಅವಕಾಶವು ಬಂದೇ ಬಿಟ್ಟಿತು.

ನಾಸಾದ STS 87 ಕೊಲಂಬಿಯಾ ವ್ಯೋಮ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹಾರುವ ಅವಕಾಶವು ಆಕೆಗೆ ದೊರೆಯಿತು. ಓರ್ವ ಭಾರತೀಯ ಮೂಲದವರಾಗಿ ಅದೊಂದು ನಿಜವಾಗಿ ಐತಿಹಾಸಿಕ ಸಾಧನೆ! ಕಲ್ಪನಾ ಆ ಕೊಲಂಬಿಯಾ ನೌಕೆಯಲ್ಲಿ ಕುಳಿತು ಬಾಹ್ಯಾಕಾಶಕ್ಕೆ ಹಾರಿದರು. ಎರಡು ವಾರಗಳ ಕಾಲ ಬಾಹ್ಯಾಕಾಶದಲ್ಲಿಯೇ ಕಳೆದರು! ಹತ್ತಾರು ಸಂಶೋಧನೆ ಮಾಡಿದರು. ಅವರನ್ನು ಹೊತ್ತ ಕೊಲಂಬಿಯಾ ನೌಕೆಯು 65 ಲಕ್ಷ ಕಿಲೋಮೀಟರ್ ಹಾರಿತು! 252 ಬಾರಿ ತನಗೆ ನಿಗದಿ ಪಡಿಸಿದ ಕಕ್ಷೆಯನ್ನು ಸುತ್ತಿ ಮುಗಿಸಿ ಮತ್ತೆ ಭೂಮಿಗೆ ಮರಳಿ ಬಂದಾಗ ಕಲ್ಪನಾ ಚಾವ್ಲಾ ಭಾರತೀಯರ ಪಾಲಿಕೆ ದೇವಕನ್ಯೆಯೇ ಆಗಿ ಬಿಟ್ಟಿದ್ದರು!

ಜಗತ್ತಿನ ಕಣ್ಮಣಿ ಆದರು ಕಲ್ಪನಾ ಚಾವ್ಲಾ

ಜಗತ್ತಿನ ಎಲ್ಲ ಪತ್ರಿಕೆಗಳೂ ಆಕೆಯ ಬಗ್ಗೆ ಕಾಲಂ ಬರೆದವು. ಜಾಗತಿಕ ಮಟ್ಟದ ಟಿವಿ ಚಾನೆಲಗಳು ಆಕೆಯ ಸಂದರ್ಶನಕ್ಕೆ ತುದಿಗಾಲಲ್ಲಿ ನಿಂತವು. ಭಾರತದಿಂದ ನಾಸಾ ಸೇರಿದ ಓರ್ವ ಮಧ್ಯಮವರ್ಗದ ಹೆಣ್ಣು ಮಗಳು ಭಾರತದ ಮಹತ್ವಾಕಾಂಕ್ಷಿ ಮಹಿಳೆಯರಿಗೆ ಆಕಾಶದ ಎತ್ತರವೂ ಕಡಿಮೆಯೇ ಎಂದು ಸಾಬೀತು ಮಾಡಿ ತೋರಿಸಿದ್ದರು!

ಎರಡನೇ ಬಾರಿ ಬಾಹ್ಯಾಕಾಶ ಯಾನಕ್ಕೆ ಕಲ್ಪನಾ ಆಯ್ಕೆ ಆದರು!

ಮೊದಲ ಬಾಹ್ಯಾಕಾಶ ಯಾನವು (Space tour) ಯಶಸ್ವಿಯಾದ ನಂತರ ಆಕೆ ನಾಸಾದಲ್ಲಿ ಎಲ್ಲರ ಕಣ್ಮಣಿ ಆಗಿದ್ದರು. ಆಕೆಯು ತನ್ನ 21ನೆಯ ವರ್ಷದಲ್ಲಿ ತನ್ನ ಸಹಪಾಠಿ ಜೀನ್ ಹ್ಯಾರಿಸನ್ ಅವರನ್ನು ಪ್ರೀತಿ ಮಾಡಿ ಮದುವೆಯಾದರು. ಆತನು ಕಲ್ಪನಾ ಅವರ ಪ್ರತಿಯೊಂದು ಕನಸುಗಳಿಗೆ ಬೆಂಬಲವಾಗಿ ನಿಂತದ್ದು ಕೂಡ ಉಲ್ಲೇಖನೀಯ.

ಸುಮಾರು ಐದು ವರ್ಷಗಳ ದೊಡ್ಡ ಗ್ಯಾಪ್ ನಂತರ ನಾಸಾ ತನ್ನ ಮುಂದಿನ ವ್ಯೋಮ ಯಾತ್ರೆಯನ್ನು ಯೋಜನೆಯನ್ನು ರೂಪಿಸಿತು. ಅದು STS -107 ಕೊಲಂಬಿಯಾ ಹೆಸರಿನ ಮಿಷನ್! ಈ ಬಾರಿ ಒಟ್ಟು ಏಳು ಮಂದಿ ಆಕಾಶಯಾನಿಗಳು ಆಯ್ಕೆ ಆಗಿದ್ದು ಆ ತಂಡದಲ್ಲಿ ಕಲ್ಪನಾ ಚಾವ್ಲಾ ಸೀನಿಯರ್ ಆಗಿದ್ದರು. 2003ರ ಜನವರಿ ತಿಂಗಳಲ್ಲಿ ಈ ಯಾತ್ರೆಯು ಆರಂಭವಾಯಿತು. ಎಲ್ಲ ಭಾರತೀಯರು ಕಣ್ಣು ತೆರೆದು ಈ ಯಾತ್ರೆಯನ್ನು ಗಮನಿಸುತ್ತಿದ್ದರು.

ಆ ದುರಂತ ಸಂಭವಿಸಿಯೇ ಬಿಟ್ಟಿತು!

ಸಾಕಷ್ಟು ಸಂಶೋಧನೆಯನ್ನು ಮಾಡಿದ ಈ ತಂಡವು ಹಿಂದೆ ಬರುತ್ತಿರುವ ಸಂದರ್ಭದಲ್ಲಿ 2003 ಫೆಬ್ರುವರಿ 1ರಂದು ಭಾರೀ ದುರಂತವು ನಡೆದೇ ಹೋಯಿತು! ಬಾಹ್ಯಾಕಾಶದ ಕ್ಷೇತ್ರದಲ್ಲಿ ಅದೊಂದು ಅತ್ಯಂತ ದೊಡ್ಡ ದುರಂತವಾಗಿತ್ತು! ಏಳು ಜನ ಆಕಾಶಯಾತ್ರಿಗಳನ್ನು ಹೊತ್ತು ಹಾರುತ್ತಿದ್ದ STS 107 ಆಕಾಶನೌಕೆಯು ಭೂಮಿಯ ವಾಯುಮಂಡಲವನ್ನು ಪ್ರವೇಶಿಸುವ ಸಂದರ್ಭ ಆಕಾಶದಲ್ಲಿಯೇ ಸ್ಫೋಟವಾಗಿ ಎಲ್ಲ ಏಳು ಮಂದಿ ಬೂದಿಯಾಗಿ ಹೋದರು. ಅದರಲ್ಲಿ ಕಲ್ಪನಾ ಚಾವ್ಲಾ ಕೂಡ ಒಬ್ಬರು. ಆಗ ಆಕೆಗೆ ಕೇವಲ 41 ವರ್ಷ ವಯಸ್ಸು ಆಗಿತ್ತು!

ಇದನ್ನೂ ಓದಿ: ರಾಜಮಾರ್ಗ ಅಂಕಣ: RCB- ʼಹೊಸ ಅಧ್ಯಾಯʼ ಆರಂಭ ಆಗೋದು ಯಾವಾಗ?

ಆಕೆಗಾಗಿ ಮಿಡಿಯಿತು ಇಡೀ ಜಗತ್ತು!

ಏಳು ಜನ ಸಂಶೋಧಕ ಆಕಾಶಯಾನಿಗಳನ್ನು ಆಪೋಶನ ತೆಗೆದುಕೊಂಡ ಆ ದುರಂತದ ಬಗ್ಗೆ ಇಡೀ ಜಗತ್ತು ಕಂಬನಿ ಮಿಡಿಯಿತು. ಕಲ್ಪನಾ ಬಗ್ಗೆ ಭಾರತದ ಮೂಲೆ ಮೂಲೆಗಳಲ್ಲಿ ಶ್ರದ್ಧಾಂಜಲಿ ಸಭೆಗಳು ನಡೆದವು. ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಆಕೆಯನ್ನು ಭಾರತದ ಪುತ್ರಿ ಎಂದು ಕರೆದು ಶೃದ್ಧಾಂಜಲಿ ನೀಡಿದರು. ಮುಂದೆ ಭಾರತವು ಹಾರಿಸಿದ ಒಂದು ಕೃತಕ ಉಪಗ್ರಹಕ್ಕೆ ಕಲ್ಪನಾ ಹೆಸರು ಇಡಲಾಯಿತು. ನಾಸಾ ಆಕೆಯನ್ನು ಭಾವಪೂರ್ಣವಾಗಿ ಸ್ಮರಿಸಿತು. ಕರ್ನಾಟಕ ಸರಕಾರವು ಆಕೆಯ ಹೆಸರಿನಲ್ಲಿ ಓರ್ವ ಯುವ ವಿಜ್ಞಾನಿಯನ್ನು ಪ್ರತೀ ವರ್ಷ ಗೌರವಿಸುವ ಒಂದು ಪ್ರಶಸ್ತಿಯನ್ನು ಸ್ಥಾಪನೆ ಮಾಡಿತು. ತಮಿಳುನಾಡಿನ ಒಂದು ಪ್ರಮುಖವಾದ ರಸ್ತೆಗೆ ಕಲ್ಪನಾ ಚಾವ್ಲಾ ಹೆಸರನ್ನು ಇಡಲಾಯಿತು.

ಭರತ ವಾಕ್ಯ

ಭಾರತೀಯ ಮೂಲದ ಓರ್ವ ಹೆಣ್ಣು ಮಗಳು ಸಂಶೋಧನೆ ಮಾಡಲು ಬಹಳ ದೊಡ್ಡ ಕನಸು ಕಟ್ಟಿಕೊಂಡು ನಾಸಾಕ್ಕೆ ಹೋದದ್ದು, ಭಾರತದ ಮೊತ್ತ ಮೊದಲ ವ್ಯೋಮಯಾನಿ ಆದದ್ದು, ಮುಂದೆ ಅದೇ ರೀತಿಯ ಎರಡನೇ ಯಾನಕ್ಕೆ ಪ್ರಯತ್ನವನ್ನು ಮಾಡಿ ಆಕಾಶದ ಹೊಳೆಯುವ ನಕ್ಷತ್ರಗಳ ನಡುವೆ ಒಂದು ಮಿನುಗು ನಕ್ಷತ್ರವಾದದ್ದು ನಮಗೆಲ್ಲರಿಗೂ ಒಂದು ಸ್ಫೂರ್ತಿದಾಯಕ ಹಾಗೂ ಒಂದು ದುಃಖದಾಯಕ ಘಟನೆ!

ಭಾರತದ ಮಹಾನ್ ಪುತ್ರಿಗೆ ನಮ್ಮ ಶ್ರದ್ಧಾಂಜಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಬೇಂದ್ರೆ ಎಂಬ ಶಬ್ದ ಗಾರುಡಿಗ

Continue Reading
Advertisement
Viral Video
ವೈರಲ್ ನ್ಯೂಸ್2 mins ago

Viral Video: ಲ್ಯಾಂಬೋರ್ಗಿನಿ ಕಾರಿನ ಮೇಲೆ ಕುಣಿದು ಕುಪ್ಪಳಿಸಿದ ಮಹಿಳೆ; ಕಾರಿನ ಸ್ಥಿತಿ ನೋಡಿ ಮರುಗಿದ ನೆಟ್ಟಿಗರು!

Harshika Poonacha Bhuvan! for speak Kannada
ಸ್ಯಾಂಡಲ್ ವುಡ್21 mins ago

Harshika Poonacha: ಹರ್ಷಿಕಾ ಪೂಣಚ್ಚ-ಭುವನ್‌ ಮೇಲೆ ಅಟ್ಯಾಕ್! ಕನ್ನಡ ಮಾತನಾಡಿದ್ದೇ ತಪ್ಪಾಯ್ತಾ?

murali sreeshankar
ಕ್ರೀಡೆ26 mins ago

Murali Sreeshankar: ಒಲಿಂಪಿಕ್ಸ್‌ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ; ಟೂರ್ನಿಯಿಂದ ಹೊರಬಿದ್ದ ಪದಕ ಭರವಸೆಯ ಕ್ರೀಡಾಪಟು

virat kohli
ಕ್ರೀಡೆ1 hour ago

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ ನೋಡಲು ಮುಗಿಬಿದ್ದ ಅಭಿಮಾನಿಗಳು

Pruthvi Ambaar new movie direction by Rathaavara Director
ಸಿನಿಮಾ1 hour ago

Pruthvi Ambaar: ʻದಿಯಾʼ ಹೀರೊಗೆ `ರಥಾವರʼ ಡೈರೆಕ್ಟರ್ ಆ್ಯಕ್ಷನ್ ಕಟ್!

Kantara Movie Rishab Shetty And Pragathi Shetty Met Mohanlal
ಸಿನಿಮಾ1 hour ago

Kantara Movie: ‘ಕಾಂತಾರ 2’ ಸಿನಿಮಾದಲ್ಲಿ ಇರಲಿದ್ದಾರಾ ಮೋಹನ್​ಲಾಲ್?

Solution For Pimple
ಆರೋಗ್ಯ1 hour ago

Solution For Pimples: ಈ ಆಹಾರಗಳ ಸಹವಾಸ ಬಿಡಿ; ಮೊಡವೆಯನ್ನು ದೂರವಿಡಿ!

indian navy chief of naval staff dinesh tripathi
ಪ್ರಮುಖ ಸುದ್ದಿ2 hours ago

Indian Navy: ನೌಕಾಪಡೆ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ

IPL 2024
ಕ್ರೀಡೆ2 hours ago

IPL 2024: ಕೆಕೆಆರ್​ ವಿರುದ್ಧ ಹಸಿರು ಜೆರ್ಸಿಯಲ್ಲಿ ಆಡಲಿದೆ ಆರ್​ಸಿಬಿ; ಈ ಬಾರಿಯ ಉದ್ದೇಶವೇನು?

Masaba Gupta, Satyadeep Misra expecting 1st child
ಸಿನಿಮಾ2 hours ago

Masaba Gupta: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನೀನಾ ಗುಪ್ತಾ ಮಗಳು ಮಸಾಬಾ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ5 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ7 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 week ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

ಟ್ರೆಂಡಿಂಗ್‌