read your daily horoscope predictions for march 25-2023 Horoscope Today : ಕಟಕ ರಾಶಿಯವರ ಅದೃಷ್ಟ ಸಂಖ್ಯೆ 3; ನಿಮ್ಮ ಅದೃಷ್ಟ ಸಂಖ್ಯೆ ಎಷ್ಟು? - Vistara News

ಪ್ರಮುಖ ಸುದ್ದಿ

Horoscope Today : ಕಟಕ ರಾಶಿಯವರ ಅದೃಷ್ಟ ಸಂಖ್ಯೆ 3; ನಿಮ್ಮ ಅದೃಷ್ಟ ಸಂಖ್ಯೆ ಎಷ್ಟು?

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ ಚೌತಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದಿನ ಪಂಚಾಂಗ (25-03-2023)

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ.

ತಿಥಿ: ಚೌತಿ 16:22 ವಾರ: ಶನಿವಾರ
ನಕ್ಷತ್ರ: ಭರಣಿ 13:17 ಯೋಗ: ವಿಷ್ಕುಂಭ 24:17
ಕರಣ: ವಿಷ್ಟಿ (ಭದ್ರ) 16:22 ಇಂದಿನ ವಿಶೇಷ : ವಿನಾಯಕೀ ಚತುರ್ಥಿ
ಅಮೃತಕಾಲ: ಬೆಳಗ್ಗೆ 08 ಗಂಟೆ 32 ನಿಮಿಷದಿಂದ 10 ಗಂಟೆ 07 ನಿಮಿಷದವರೆಗೆ.

ಸೂರ್ಯೋದಯ : 06:21 ಸೂರ್ಯಾಸ್ತ : 06:31

ರಾಹುಕಾಲ : ಬೆಳಗ್ಗೆ 9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ದ್ವಾದಶ ರಾಶಿ ಭವಿಷ್ಯ (Horoscope Today)

Horoscope Today

ಮೇಷ: ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಆಶಾ ಭಂಗ ಮಾಡುವ ಸಾಧ್ಯತೆ. ಮಕ್ಕಳ ಆರೋಗ್ಯದ ಬಗೆಗೆ ಕಾಳಜಿ ವಹಿಸಿ. ದಿನದ ಮಟ್ಟಿಗೆ ಖರ್ಚು. ಪ್ರಯಾಣ ಮಾಡುವ ಸಾಧ್ಯತೆ. ಬಹಳ ದಿನಗಳ ಕನಸು ನನಸಾಗುವ ಕಾಲ ಕೂಡಿ ಬರಲಿದೆ. ಉದ್ಯೋಗಿಗಳಿಗೆ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವೃಷಭ: ಹಣದ ಹೂಡಿಕೆ ಕುರಿತು ಆಲೋಚನೆ ಮಾಡುವಿರಿ. ನಿಮ್ಮ ಹಾಸ್ಯದ ಮನೋವೃತ್ತಿ ಇತರರನ್ನು ಆಕರ್ಷಿಸುತ್ತದೆ. ಸ್ನೇಹಿತರೊಂದಿಗೆ ಸಮಯ ಹಂಚಿಕೊಳ್ಳುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ಆರೋಗ್ಯದ ಕುರಿತಾಗಿ ಕಾಳಜಿ ವಹಿಸಿ. ಆರ್ಥಿಕ ಪ್ರಗತಿ ಸಾಧಾರಣ. ಸ್ನೇಹಿತರು, ಆಪ್ತ ಸಂಬಂಧಿಕರಿಂದ ಮಾರ್ಗದರ್ಶನ, ಉಡುಗೊರೆ ಸಿಗುವ ಸಾಧ್ಯತೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸೌಜನ್ಯದಿಂದ ವರ್ತಿಸಿ. ಯಾವುದೇ ಆತುರದ ಮಾತುಗಳನ್ನು ಆಡುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕಟಕ: ನ್ಯಾಯಾಲಯದಲ್ಲಿರುವ ವ್ಯಾಜ್ಯ ಪ್ರಕರಣಗಳು ನಿಮಗೆ ವಿಜಯವನ್ನು ತಂದುಕೊಡಲಿವೆ. ಒತ್ತಡದ ಹೊರತಾಗಿಯೂ ಆರೋಗ್ಯ ಪರಿಪೂರ್ಣ. ಸಂಗಾತಿಯ ಮನಸ್ಸಿನ ಭಾವನೆಗಳನ್ನ ಅರ್ಥ ಮಾಡಿಕೊಳ್ಳವಿರಿ. ಉದ್ಯೋಗದಲ್ಲಿ ಅಲ್ಪ ಯಶಸ್ಸು ನಿಮ್ಮದಾಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಸಿಂಹ: ಮಾನಸಿಕ ಒತ್ತಡದಿಂದ ಹೊರಬರಲು ವ್ಯಸನಗಳ ಮೊರೆ ಹೋಗುವುದು ಬೇಡ, ಬದಲಾಗಿ ಕ್ಷೇತ್ರ ದರ್ಶನ, ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವುದು ಸೂಕ್ತ. ಆರೋಗ್ಯ ಮಧ್ಯಮ. ವ್ಯಾಪಾರ ವ್ಯವಹಾರ ಹಾಗೂ ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಬಿಡುವಿಲ್ಲದ ಕಾರ್ಯ ಚಟುವಟಿಕೆಯ ಮಧ್ಯೆಯೂ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ: ಭೂ ಸಂಬಂಧಿ ಹಣಕಾಸು ಹೂಡಿಕೆ ವ್ಯವಹಾರದಲ್ಲಿ ಪ್ರಗತಿ, ಲಾಭವಾಗಲಿದೆ. ಸಂಗಾತಿಯೊಂದಿಗೆ ಮುಖ್ಯ ವಿಷಯಗಳ ಕುರಿತು ಚರ್ಚೆ ಮಾಡುವಿರಿ. ಉದ್ಯೋಗಿಗಳಿಗೆ ಶುಭ ಫಲ. ಆರೋಗ್ಯ ಪರಿಪೂರ್ಣ. ಪ್ರಯಾಣ ಮಾಡುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಹಿರಿಯರ ಮಾರ್ಗದರ್ಶನ ಸಿಗಲಿದೆ, ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದಲ್ಲಿ ಅನೇಕ ಬದಲಾವಣೆಗಳನ್ನು ಕಾಣುವ ಸಾಧ್ಯತೆ. ಕುಟುಂಬದ ಆಪ್ತರೊಂದಿಗೆ ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ನಿಮಗೆ ಸಂಬಂಧಪಡದವರ ಕುರಿತು ಅನಗತ್ಯವಾಗಿ ಚರ್ಚೆ ಮಾಡಿ, ಕುಟುಂಬದ ಸ್ವಾಸ್ಥ್ಯ ಕೆಡಿಸಿಕೊಳ್ಳುವುದು ಬೇಡ. ಆರೋಗ್ಯ ಮಧ್ಯಮ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವೃಶ್ಚಿಕ: ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಘಾಸಿ ಮಾಡುವ ಸಾಧ್ಯತೆ. ಆಲಸ್ಯದಿಂದ ಯಾವುದೇ ಕಾರ್ಯ ಮುಂದೂಡುವುದು ಬೇಡ. ಅಮೂಲ್ಯ ವಸ್ತುಗಳ ಕುರಿತಾಗಿ ಜಾಗ್ರತೆ ಇರಲಿ. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ವಹಿಸುವುದು ಅಗತ್ಯ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ನಿರೀಕ್ಷೆ. ಅತಿಯಾದ ಒತ್ತಡ ಉಂಟುಮಾಡುವ ವಿಚಾರಗಳಿಂದ ದೂರ ಇರಿ. ಕುಟುಂಬದ ಆಪ್ತರಿಂದ ಶುಭ ಸುದ್ದಿ ಸಿಗುವ ಸಾಧ್ಯತೆ. ಕುಟುಂಬದ ಸದಸ್ಯರ ವರ್ತನೆ ಮುಜುಗರ ಉಂಟು ಮಾಡುವ ಸಾಧ್ಯತೆ. ಆರೋಗ್ಯದ ವ್ಯತ್ಯಾಸದಿಂದ ದಿನದ ಮಟ್ಟಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಕರ: ಹಾಸ್ಯ ಪ್ರವೃತ್ತಿಯಿಂದ ನೀವು ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಕುಟುಂಬದವರು ನಿಮ್ಮ ಬಗೆಗೆ ಹೆಚ್ಚು ಕಾಳಜಿ ವಹಹಿಸುವರು. ಆರೋಗ್ಯ‌ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕುಂಭ: ಕೋಪದಿಂದ ಅಪಾಯ ತಂದುಕೊಳ್ಳುವುದು ಬೇಡ. ಹಾಗೆಯೇ ಅತಿಯಾದ ಉತ್ಸಾಹದಲ್ಲಿ ಅತಿರೇಕದ ಮಾತುಗಳನ್ನು ಆಡುವುದು ಸರಿಯಲ್ಲ, ಇದು ಕೂಡ ಅಪಾಯ ತಂದೀತು. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿಗಳು ಸೃಷ್ಟಿಯಾಗುವ ಸಾಧ್ಯತೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗುವ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಮೀನ: ಆಹಾರ ಕ್ರಮದ ವ್ಯತ್ಯಾಸದಿಂದ ಆರೋಗ್ಯ ಹದಗೆಡುವ ಸಾಧ್ಯತೆ. ಸಂಗಾತಿಯ ಮಾತುಗಳು ಹಿತವೆನಿಸಿದರೂ ಅವರ ಮಾತುಗಳಿಗೆ ನೀವು ಮನ್ನಣೆ ನೀಡುವುದಿಲ್ಲ. ಆರೋಗ್ಯ ಹಾಗೂ ಹಣಕಾಸಿನ ವಿಷಯದಲ್ಲಿ ಸಾಮಾನ್ಯ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಇದನ್ನೂ ಓದಿ: Ugadi Horoscope 2023 : ಯುಗಾದಿ ಭವಿಷ್ಯ; ಹೊಸ ಸಂವತ್ಸರದಲ್ಲಿ ಯಾವೆಲ್ಲಾ ರಾಶಿಗಳಿಗೆ ಶುಭಾಶುಭ ಫಲಗಳಿವೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Modi in Karnataka: ಪ್ರಧಾನಿ ಮೋದಿ ತೆರಳುವಾಗ ಚೆಂಬು ಪ್ರದರ್ಶನ; ನಲಪಾಡ್‌ ಸೇರಿ ಹಲವರು ವಶಕ್ಕೆ

Modi in Karnataka: ಬೆಂಗಳೂರಿನ ಅರಮನೆ ಮೈದಾನದಿಂದ ಎಚ್‌ಕ್ಯುಟಿಸಿ ಹೆಲಿಪ್ಯಾಡ್‌ಗೆ ತೆರಳಲು ಮೋದಿ ಅವರು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ರಾಜ್ಯ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್‌ ಮೊಹಮ್ಮದ್‌ ನಲಪಾಡ್‌ ಹಾಗೂ ಹಲವು ಕಾಂಗ್ರೆಸ್‌ ಕಾರ್ಯಕರ್ತರು ರಸ್ತೆಗೆ ನುಗ್ಗಿ ಚೆಂಬು ಪ್ರದರ್ಶನ ಮಾಡಿದ್ದಾರೆ. ಹೀಗಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

VISTARANEWS.COM


on

Modi in Karnataka
Koo

ಬೆಂಗಳೂರು: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು (Modi in Karnataka) ಬಿಜೆಪಿ ವಿಜಯ ಸಂಕಲ್ಪ ಸಮಾವೇಶ ಮುಗಿಸಿ ತೆರಳುವಾಗ ಭದ್ರತಾ ಲೋಪ ಉಂಟಾಗಿದೆ. ಅರಮನೆ ಮೈದಾನದಿಂದ ಎಚ್‌ಕ್ಯುಟಿಸಿ ಹೆಲಿಪ್ಯಾಡ್‌ಗೆ ತೆರಳುವಾಗ ಮೇಕ್ರಿ ಸರ್ಕಲ್‌ನಲ್ಲಿ ರಾಜ್ಯ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಹಾಗೂ ಬೆಂಬಲಿಗರು ರಸ್ತೆಗೆ ನುಗ್ಗಿ ಪ್ರಧಾನಿ ಮೋದಿ ಅವರಿಗೆ ಚೆಂಬು ಪ್ರದರ್ಶಿಸಿದ್ದಾರೆ. ಹೀಗಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶನಿವಾರ ಸಂಜೆ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡ ನಂತರ ಎಚ್‌ಕ್ಯುಟಿಸಿ ಹೆಲಿಪ್ಯಾಡ್‌ಗೆ ತೆರಳಲು ಮೋದಿ ಅವರು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ರಾಜ್ಯ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್‌ ಮೊಹಮ್ಮದ್‌ ನಲಪಾಡ್‌ ಹಾಗೂ ಹಲವು ಕಾಂಗ್ರೆಸ್‌ ಕಾರ್ಯಕರ್ತರು ರಸ್ತೆಗೆ ನುಗ್ಗಿ ಚೆಂಬು ಪ್ರದರ್ಶನ ಮಾಡಿದ್ದಾರೆ. ತಕ್ಷಣ ಅವರನ್ನು ಪೊಲೀಸರು ವಶಕ್ಕೆ ಪಡೆದು ಕಾರಿನಲ್ಲಿ ಕರೆದೊಯ್ದರು.

ಇದನ್ನೂ ಓದಿ | Trust Of The Nation 2024 : ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವುದು ಖಚಿತ; ಡೈಲಿಹಂಟ್ ಸಮೀಕ್ಷೆ

ಎಚ್‌ಕ್ಯುಟಿಸಿ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮುಖಾಂತರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ ಮೋದಿ ಅವರು, ಅಲ್ಲಿಂದ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.

ಟ್ಯಾಕ್ಸ್ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿ ಮಾಡಿದ ಸರ್ಕಾರ, ಹೆಣ್ಣು ಮಕ್ಕಳ ಮೇಲೂ ಹಲ್ಲೆ: ಮೋದಿ ವಾಗ್ದಾಳಿ

Modi in Karnataka Govt turns tax city Bengaluru into tanker city and attacks girls too PM Narendra Modi

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Karnataka Congress Government) ಅಧಿಕಾರಕ್ಕೆ ಬಂದು ಕೆಲವೇ ತಿಂಗಳಲ್ಲಿ ಬೆಂಗಳೂರಿನ ಪರಿಸ್ಥಿತಿಯನ್ನು ಹಾಳು ಮಾಡಿದೆ. ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಆಕ್ರೋಶವನ್ನು ಹೊರಹಾಕಿದರು. ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡ ಮೋದಿ (Modi in Karnataka) ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲ ಕಡೆ ಬಜೆಟ್ ಕಡಿತ ಮಾಡಲಾಗುತ್ತಿದೆ. ಅಭಿವೃದ್ಧಿ ಗೌಣವಾಗಿದೆ. ಎಲ್ಲೆಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಜನರ ಸಮಸ್ಯೆ ಬಗ್ಗೆ ಈ ಸರ್ಕಾರ ಗಮನ ಕೊಡುತ್ತಿಲ್ಲ. ಕರ್ನಾಟಕದಲ್ಲಿ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಆಗುತ್ತಿದೆ. ಭಜನೆ ಮಾಡಿದರೂ ಹಲ್ಲೆ ಮಾಡಲಾಗುತ್ತಿದೆ. ಬೀದಿಗಳಲ್ಲಿ ಬಾಂಬ್‌ ಸ್ಫೋಟಗೊಳ್ಳುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ನಾವು ಅಧಿಕಾರಕ್ಕೆ ಬರುವಾಗ ಭಾರತವು ಆರ್ಥಿಕವಾಗಿ ಭಾರಿ ಹಿಂದಿತ್ತು. ಈಗ ಜಾಗತಿಕವಾಗಿ ಆರ್ಥಿಕ ಪ್ರಗತಿಯಲ್ಲಿ 5ನೇ ಸ್ಥಾನದಲ್ಲಿದ್ದೇವೆ. ಇದಕ್ಕೆ ಕಾರಣವಾಗಿದ್ದು, ನಿಮ್ಮ ಮತ. ಕಳೆದ 10 ವರ್ಷದಲ್ಲಿ ಭಾರತವು ಸಾಕಷ್ಟು ಸುಧಾರಣೆಯನ್ನು ಕಂಡಿದ್ದಲ್ಲದೆ, ಆರ್ಥಿಕ ಕ್ರಾಂತಿಯಾಗಿದೆ. ಈಗ ಭಾರತವು ಹಿಂಬಾಲಿಸುವ ದೇಶವಾಗಿ ಉಳಿದಿಲ್ಲ. 2014 ಹಾಗೂ 2019ರಲ್ಲಿ ಪೂರ್ಣ ಬಹುಮತಗಳೊಂದಿಗೆ ಭರ್ಜರಿ ಗೆಲುವನ್ನು ನಮಗೆ ಕೊಟ್ಟಿದ್ದೀರಿ. ಈ ಬಾರಿಯೂ ಅಂಥದ್ದೇ ಗೆಲುವನ್ನು ನೀವು ಕೊಡುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನೀವೀಗ ಎನ್‌ಡಿಎ ಹಾಗೂ ಇಂಡಿಯಾ ಅಲೆಯನ್ಸ್‌ ಪ್ರಚಾರಗಳನ್ನು ನೋಡಿದ್ದೀರಿ. ಆದರೆ, ಇಂಡಿ ಅಲೆಯನ್ಸ್‌ನವರು ಸುಳ್ಳು ಆರೋಪವನ್ನು ಮಾಡುತ್ತಲೇ ಬರುತ್ತಿದ್ದಾರೆ. ಆದರೆ, ನಿಮ್ಮ ಮೋದಿ ಉದ್ದೇಶ ಏನು? ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದೇ ನನ್ನ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಡಿಮೆ ವೆಚ್ಚದಲ್ಲಿ ಸಿಗುತ್ತಿದೆ 1 GB ಡೇಟಾ

ನಾವು ನಮ್ಮ ಕೆಲಸ ಹಾಗೂ ಟ್ರ್ಯಾಕ್‌ ರೆಕಾರ್ಡ್‌ ಇಟ್ಟುಕೊಂಡು ಮತ ಕೇಳುತ್ತಿದ್ದೇವೆ. ನಮ್ಮ ಸರ್ಕಾರ ರೇರಾ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಇದರಿಂದ ಸಾಮಾನ್ಯರಿಗೆ ಆಗುತ್ತಿದ್ದ ಅನ್ಯಾಯವನ್ನು ತಡೆದಿದ್ದೇವೆ. 2014ಕ್ಕಿಂತ ಮೊದಲು ನಿಮಗೆ 2.5 ಲಕ್ಷ ರೂಪಾಯಿ ಇದ್ದರೂ ನೀವು ತೆರಿಗೆ ಕಟ್ಟಬೇಕಿತ್ತು. ಆದರೆ, ಇಂದು ನೀವು 7 ಲಕ್ಷದ ವರೆಗೆ ಆದಾಯ ಹೊಂದಿದರೂ ಒಂದು ರೂಪಾಯಿ ಟ್ಯಾಕ್ಸ್‌ ಕಟ್ಟುತ್ತಿಲ್ಲ. ಇನ್ನು ಜಿಎಸ್‌ಟಿ ಜಾರಿಯಿಂದ ಪರೋಕ್ಷ ತೆರಿಗೆ ಕಟ್ಟುವುದು ತಪ್ಪಿದೆ. ಇದೆಲ್ಲವೂ ಸಾಧ್ಯವಾಗಿದ್ದು ನಮ್ಮ ಸರ್ಕಾರದಿಂದ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

Continue Reading

ಕರ್ನಾಟಕ

Modi in Karnataka: ಟ್ಯಾಕ್ಸ್ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿ ಮಾಡಿದ ಸರ್ಕಾರ, ಹೆಣ್ಣು ಮಕ್ಕಳ ಮೇಲೂ ಹಲ್ಲೆ: ಮೋದಿ ವಾಗ್ದಾಳಿ

Modi in Karnataka: ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲ ಕಡೆ ಬಜೆಟ್ ಕಡಿತ ಮಾಡಲಾಗುತ್ತಿದೆ. ಅಭಿವೃದ್ಧಿ ಗೌಣವಾಗಿದೆ. ಎಲ್ಲೆಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಜನರ ಸಮಸ್ಯೆ ಬಗ್ಗೆ ಈ ಸರ್ಕಾರ ಗಮನ ಕೊಡುತ್ತಿಲ್ಲ. ಕರ್ನಾಟಕದಲ್ಲಿ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಆಗುತ್ತಿದೆ. ಭಜನೆ ಮಾಡಿದರೂ ಹಲ್ಲೆ ಮಾಡಲಾಗುತ್ತಿದೆ. ಬೀದಿಗಳಲ್ಲಿ ಬಾಂಬ್‌ ಸ್ಫೋಟಗೊಳ್ಳುತ್ತಿದೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.

VISTARANEWS.COM


on

Modi in Karnataka Govt turns tax city Bengaluru into tanker city and attacks girls too PM Narendra Modi
Koo

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Karnataka Congress Government) ಅಧಿಕಾರಕ್ಕೆ ಬಂದು ಕೆಲವೇ ತಿಂಗಳಲ್ಲಿ ಬೆಂಗಳೂರಿನ ಪರಿಸ್ಥಿತಿಯನ್ನು ಹಾಳು ಮಾಡಿದೆ. ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಆಕ್ರೋಶವನ್ನು ಹೊರಹಾಕಿದರು. ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡ ಮೋದಿ (Modi in Karnataka) ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲ ಕಡೆ ಬಜೆಟ್ ಕಡಿತ ಮಾಡಲಾಗುತ್ತಿದೆ. ಅಭಿವೃದ್ಧಿ ಗೌಣವಾಗಿದೆ. ಎಲ್ಲೆಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಜನರ ಸಮಸ್ಯೆ ಬಗ್ಗೆ ಈ ಸರ್ಕಾರ ಗಮನ ಕೊಡುತ್ತಿಲ್ಲ. ಕರ್ನಾಟಕದಲ್ಲಿ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಆಗುತ್ತಿದೆ. ಭಜನೆ ಮಾಡಿದರೂ ಹಲ್ಲೆ ಮಾಡಲಾಗುತ್ತಿದೆ. ಬೀದಿಗಳಲ್ಲಿ ಬಾಂಬ್‌ ಸ್ಫೋಟಗೊಳ್ಳುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ನಾವು ಅಧಿಕಾರಕ್ಕೆ ಬರುವಾಗ ಭಾರತವು ಆರ್ಥಿಕವಾಗಿ ಭಾರಿ ಹಿಂದಿತ್ತು. ಈಗ ಜಾಗತಿಕವಾಗಿ ಆರ್ಥಿಕ ಪ್ರಗತಿಯಲ್ಲಿ 5ನೇ ಸ್ಥಾನದಲ್ಲಿದ್ದೇವೆ. ಇದಕ್ಕೆ ಕಾರಣವಾಗಿದ್ದು, ನಿಮ್ಮ ಮತ. ಕಳೆದ 10 ವರ್ಷದಲ್ಲಿ ಭಾರತವು ಸಾಕಷ್ಟು ಸುಧಾರಣೆಯನ್ನು ಕಂಡಿದ್ದಲ್ಲದೆ, ಆರ್ಥಿಕ ಕ್ರಾಂತಿಯಾಗಿದೆ. ಈಗ ಭಾರತವು ಹಿಂಬಾಲಿಸುವ ದೇಶವಾಗಿ ಉಳಿದಿಲ್ಲ. 2014 ಹಾಗೂ 2019ರಲ್ಲಿ ಪೂರ್ಣ ಬಹುಮತಗಳೊಂದಿಗೆ ಭರ್ಜರಿ ಗೆಲುವನ್ನು ನಮಗೆ ಕೊಟ್ಟಿದ್ದೀರಿ. ಈ ಬಾರಿಯೂ ಅಂಥದ್ದೇ ಗೆಲುವನ್ನು ನೀವು ಕೊಡುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನೀವೀಗ ಎನ್‌ಡಿಎ ಹಾಗೂ ಇಂಡಿಯಾ ಅಲೆಯನ್ಸ್‌ ಪ್ರಚಾರಗಳನ್ನು ನೋಡಿದ್ದೀರಿ. ಆದರೆ, ಇಂಡಿ ಅಲೆಯನ್ಸ್‌ನವರು ಸುಳ್ಳು ಆರೋಪವನ್ನು ಮಾಡುತ್ತಲೇ ಬರುತ್ತಿದ್ದಾರೆ. ಆದರೆ, ನಿಮ್ಮ ಮೋದಿ ಉದ್ದೇಶ ಏನು? ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದೇ ನನ್ನ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಡಿಮೆ ವೆಚ್ಚದಲ್ಲಿ ಸಿಗುತ್ತಿದೆ 1 GB ಡೇಟಾ

ನಾವು ನಮ್ಮ ಕೆಲಸ ಹಾಗೂ ಟ್ರ್ಯಾಕ್‌ ರೆಕಾರ್ಡ್‌ ಇಟ್ಟುಕೊಂಡು ಮತ ಕೇಳುತ್ತಿದ್ದೇವೆ. ನಮ್ಮ ಸರ್ಕಾರ ರೇರಾ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಇದರಿಂದ ಸಾಮಾನ್ಯರಿಗೆ ಆಗುತ್ತಿದ್ದ ಅನ್ಯಾಯವನ್ನು ತಡೆದಿದ್ದೇವೆ. 2014ಕ್ಕಿಂತ ಮೊದಲು ನಿಮಗೆ 2.5 ಲಕ್ಷ ರೂಪಾಯಿ ಇದ್ದರೂ ನೀವು ತೆರಿಗೆ ಕಟ್ಟಬೇಕಿತ್ತು. ಆದರೆ, ಇಂದು ನೀವು 7 ಲಕ್ಷದ ವರೆಗೆ ಆದಾಯ ಹೊಂದಿದರೂ ಒಂದು ರೂಪಾಯಿ ಟ್ಯಾಕ್ಸ್‌ ಕಟ್ಟುತ್ತಿಲ್ಲ. ಇನ್ನು ಜಿಎಸ್‌ಟಿ ಜಾರಿಯಿಂದ ಪರೋಕ್ಷ ತೆರಿಗೆ ಕಟ್ಟುವುದು ತಪ್ಪಿದೆ. ಇದೆಲ್ಲವೂ ಸಾಧ್ಯವಾಗಿದ್ದು ನಮ್ಮ ಸರ್ಕಾರದಿಂದ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಎಲ್‌ಇಡಿ ಬಲ್ಬ್‌ ಅಂದು 400 ರೂಪಾಯಿ ಇತ್ತು. ಆದರೆ, ಇಂದು ನಾವದನ್ನು 40 ರೂಪಾಯಿವರೆಗೆ ಇಳಿಸಿದ್ದೇವೆ. ಇಂದು ಈ ಬಲ್ಬ್‌ಗಳು ಅದೆಷ್ಟೋ ಮಧ್ಯಮ ವರ್ಗದ ಮನೆಯಲ್ಲಿ ಉರಿಯುತ್ತಿದೆ. ಅವರಿಗೆ ಪ್ರಕಾಶಮಾನವಾದ ಬೆಳಕಿನ ಜತೆಗೆ ವಿದ್ಯುತ್‌ ಬಿಲ್‌ನಲ್ಲಿಯೂ ಉಳಿತಾಯ ಆಗುತ್ತಿದೆ. 20 ಸಾವಿರ ಕೋಟಿ ರೂಪಾಯಿ ಪ್ರತಿ ವರ್ಷ ಉಳಿತಾಯವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಡಿಮೆ ವೆಚ್ಚದಲ್ಲಿ ಸಿಗುತ್ತಿದೆ ಡೇಟಾ

ಎನ್‌ಡಿಎ ಸರ್ಕಾರ ಸಾಮಾಜಿಕ, ಆರ್ಥಿಕ ಹಾಗೂ ಡಿಜಿಟಲ್‌ಗೆ ದಾಖಲೆ ರೂಪದಲ್ಲಿ ಹಣವನ್ನು ಹೂಡಿಕೆ ಮಾಡಿದೆ. ಎಲೆಕ್ಟ್ರಿಕ್ ವೆಹಿಕಲ್ ಬರುವುದಕ್ಕೆ ನಾವು ಕಾರಣ. ಭಾರತದಲ್ಲಿ ಆಗಿರುವ ಡಿಜಿಟಲ್‌ ಕ್ರಾಂತಿಯಲ್ಲಿ ಬೆಂಗಳೂರಿಗರ ಕೊಡುಗೆ ಇದೆ. ಬೆಂಗಳೂರು ಡಿಜಿಟಲ್‌ ಹಬ್‌ ಆಗಿದೆ. ಈ ಮೊದಲು 1 GB ಡೇಟಾ 250 ರೂಪಾಯಿ ಆಸುಪಾಸಿನಲ್ಲಿತ್ತು. ಇಂದು ಅದೇ 1 GB ಡೇಟಾಗೆ 10 ರೂಪಾಯಿ ಆಸುಪಾಸು ಆಗಿದೆ. ನಾವು ನಿಮಗೆ ಕಡಿಮೆ ವೆಚ್ಚದಲ್ಲಿ ಡೇಟಾ ಕೊಡುತ್ತಿದೆ. ಮೊಬೈಲ್ ಬಿಲ್ ಈಗ 500 ರೂಪಾಯಿಗಿಂತ ಕಡಿಮೆ ಬರುತ್ತಿದೆ. ಇದರಿಂದ ಮಾಸಿಕವಾಗಿ ಐದಾರು ಸಾವಿರ ರೂಪಾಯಿ ಉಳಿತಾಯ ಆಗುತ್ತಿದೆ. ನಮ್ಮ ಸರ್ಕಾರವು ಡೇಟಾ ಸುರಕ್ಷತೆಗೆ ಬಲವಾದ ಕಾನೂನು ತಂದಿದೆ. ಎಂದು ನರೇಂದ್ರ ಮೋದಿ ಹೇಳಿದರು.

70 ವರ್ಷ ಮೇಲ್ಪಟ್ಟವರಿಗೂ ಆಯುಷ್ಮಾನ್‌ ಭಾರತ್‌

ಮಧ್ಯಮ ಮತ್ತು ಬಡತನ ರೇಖೆ ಕೆಳಗೆ ಇರುವವರಿಗೆ ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ 5 ಲಕ್ಷ ರೂಪಾಯಿವರೆಗೂ ಉಚಿತ ಚಿಕಿತ್ಸೆ ನೀಡಿದ್ದೇವೆ. ಇದನ್ನು 70 ವರ್ಷ ಮೇಲ್ಪಟ್ಟವರಿಗೂ ವಿಸ್ತರಣೆ ಮಾಡಲು ಮುಂದಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಬುಲೆಟ್ ಟೈನ್ ತಂದು ಸಮಯ ಉಳಿಸಿದ್ದೇವೆ

ಈ ಮೊದಲು ಕಾಂಗ್ರೆಸ್ ಮಾಫಿಯಾ ಮಾಡೋದರಲ್ಲಿ ಲೀನವಾಗಿತ್ತು. ಭ್ರಷ್ಟಾಚಾರ ಮಾಡುವುದರಲ್ಲಿ ತಲ್ಲೀನವಾಗಿದೆ. ಆದರೆ, ನಾವು 70 ಕಿ.ಮೀ. ವರೆಗೆ ನಮ್ಮ ಮೇಟ್ರೋ ಯೋಜನೆಗೆ ಚಾಲನೆ ನೀಡಿದ್ದೇವೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ವಿದೇಶಗಳಲ್ಲೂ ಚರ್ಚೆ ಆಗುತ್ತಿದೆ. ಬುಲೆಟ್ ಟೈನ್ ಅನ್ನು ತಂದು ನಿಮ್ಮ ಸಮಯವನ್ನು ಉಳಿಸಿದ್ದೇವೆ. ಇದರಿಂದ ಬೆಂಗಳೂರಿಗೆ ಬಂದು ಕೆಲಸ ಮಾಡುವವರಿಗೆ ಅನುಕೂಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ಸರ್ಕಾರದ ಸಾಧನೆಗಳ ಮಾಹಿತಿ ನೀಡಿದರು.

ದೊಡ್ಡ ದೊಡ್ಡ ಪ್ರಾಜೆಕ್ಟ್‌ ಪಡೆಯುತ್ತಿರುವ ಎಚ್‌ಎಎಲ್‌

ಕಾಂಗ್ರೆಸ್ ಎಚ್‌ಎಎಲ್ ವಿಚಾರದಲ್ಲಿ ಏನೆಲ್ಲ ಆರೋಪ ಮಾಡಿತ್ತು? ಮೋದಿ ಹೆಸರು ಕೆಡಿಸಲು ಕಾಂಗ್ರೆಸ್ ಮುಂದಾಗಿತ್ತು. ಅದೇ ಎಚ್‌ಎ‌ಎಲ್ ಈಗ ಅನೇಕ ಸಾಧನೆ ಮಾಡಿದೆ. ರಾಜ್ಯದಲ್ಲಿ ದೊಡ್ಡ ಹೆಲಿಕಾಪ್ಟರ್ ನಿರ್ಮಾಣ ಕೈಗಾರಿಕೆಯನ್ನು ಎಚ್ಎಎಲ್ ಸ್ಥಾಪಿಸಿದೆ. ಎಚ್‌ಎಎಲ್‌ ಇಂದು ಹೆಚ್ಚು ಹೆಚ್ಚು ಪ್ರಾಜೆಕ್ಟ್‌ಗಳನ್ನು ಪಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಿ

ಮೆಟ್ರೋ, ಕೋಚ್‌, ರೈಲು ಬೋಗಿಗಳನ್ನು ರಫ್ತು ಮಾಡುತ್ತಿದ್ದೇವೆ. ಮೊದಲ ಹಂತದ ಮಿಸೈಲ್‌ ಅನ್ನು ಫಿಲಿಪ್ಪೀನ್ಸ್‌ಗೆ ಕಳಿಸಿದ್ದೇವೆ. ಅಮೆರಿಕದ ಬಳಿಕ ಬೋಯಿಂಗ್‌ ಕರ್ನಾಟಕದಲ್ಲಿ ನಿರ್ಮಾಣ ಆಗುತ್ತಿದೆ. ಕಾಂಗ್ರೆಸ್‌ ಡಿಜಿಟಲ್‌ ಇಂಡಿಯಾವನ್ನು ವಿರೋಧ ಮಾಡಿತ್ತು. ಕೊರೊನಾ ವ್ಯಾಕ್ಸಿನ್‌ ಬಗ್ಗೆ ವ್ಯಂಗ್ಯ ಮಾಡಿತ್ತು. ಇಂದು ನಿಮ್ಮ ನರೇಂದ್ರ ಮೋದಿ ದೇಶದಲ್ಲಿ 6 G ತರಲು ಪ್ರಯತ್ನ ಮಾಡುತ್ತಿದ್ದರೆ, ಕಾಂಗ್ರೆಸ್‌ ಮೋದಿಯನ್ನು ಇಳಿಸುತ್ತೇನೆ ಎಂದು ಹೊರಟಿದೆ. ಇದಕ್ಕೆ ನೀವು ತಕ್ಕ ಉತ್ತರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಇದನ್ನೂ ಓದಿ: Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

ನಾನು ನನ್ನ ಭಾಷಣವನ್ನು ಕನ್ನಡದಲ್ಲಿ ಅನುವಾದಿಸಿ ಟ್ವಿಟರ್‌ನಲ್ಲಿ ಅಪ್ಲೋಡ್‌ ಮಾಡುತ್ತಿದ್ದೇನೆ. ಇದಕ್ಕೆ ಕಾರಣವಾಗಿದ್ದು, AI ತಂತ್ರಜ್ಞಾನವಾಗಿದೆ ಎಂದು ಮೋದಿ ತಿಳಿಸಿದರು. ನನ್ನ ಒಂದು ವೈಯಕ್ತಿಕ ಕೆಲಸವನ್ನು ಮಾಡಿಕೊಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಎಲ್ಲರ ಮನೆಗೆ ಹೋಗಿ ಮೋದಿ ನಿಮಗೆ ಪ್ರಣಾಮವನ್ನು ಸಲ್ಲಿಸಲು ಹೇಳಿದ್ದಾರೆ ಎಂಬುದನ್ನು ಹೇಳಿ ಎಂದು ಕೇಳಿಕೊಂಡರು.

Continue Reading

ದೇಶ

Lok Sabha Election: ನಿನ್ನೆ ಈ ಗ್ರಾಮದ ಒಬ್ಬರೂ ಮತ ಹಾಕಲಿಲ್ಲ; ಇದ್ದಿದ್ದು ಯಾರ ಭಯ?

Lok Sabha Election: ಛತ್ತೀಸ್‌ಗಢದ ಪುವರ್ತಿ ಗ್ರಾಮದಲ್ಲಿ 352 ಮತದಾರರಿದ್ದಾರೆ. ಗ್ರಾಮಕ್ಕೆ ತೆರಳಿದ ಚುನಾವಣೆ ಅಧಿಕಾರಿಗಳು ಮತದಾನಕ್ಕಾಗಿ ಎಲ್ಲ ವ್ಯವಸ್ಥೆ ಮಾಡಿದ್ದರು. ಮತಗಟ್ಟೆ ಬಳಿ ಭದ್ರತಾ ಸಿಬ್ಬಂದಿಯು ಸಕಲ ರೀತಿಯಲ್ಲಿ ಭದ್ರತೆ ಒದಗಿಸಿದ್ದರು. ಇಷ್ಟಾದರೂ ಗ್ರಾಮದ ಒಬ್ಬನೇ ಒಬ್ಬ ಮತದಾರ ಹಕ್ಕು ಚಲಾಯಿಸಿಲ್ಲ ಎಂದು ಚುನಾವಣೆ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಮಾವೋವಾದಿ ನಾಯಕನ ಭಯದಿಂದಾಗಿ ಜನ ಮತದಾನ ಮಾಡಿಲ್ಲ ಎಂದು ತಿಳಿದುಬಂದಿದೆ.

VISTARANEWS.COM


on

Lok Sabha Election
Koo

ರಾಯ್‌ಪುರ: ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನ ಶುಕ್ರವಾರ (ಏಪ್ರಿಲ್‌ 19) ಮುಕ್ತಾಯಗೊಂಡಿದೆ. 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ಮತದಾನ ಮುಗಿದಿದ್ದು, ಶೇ.60ರಷ್ಟು ಮತದಾನ ದಾಖಲಾಗಿದೆ. ಕೆಲವು ಪ್ರದೇಶಗಳು ಹೊರತುಪಡಿಸಿ ಎಲ್ಲೆಡೆ ಶಾಂತಿಯುತವಾಗಿಯೇ ಮತದಾನ ನಡೆದಿದೆ. ಆದರೆ, ಛತ್ತೀಸ್‌ಗಢದ ಬಸ್ತಾರ್‌ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಪುವರ್ತಿ ಎಂಬ ಗ್ರಾಮದಲ್ಲಿ (Puvarti Village) ಮಾತ್ರ ಶುಕ್ರವಾರ ಒಬ್ಬರೇ ಒಬ್ಬರು ಮತದಾನ ಮಾಡಿಲ್ಲ. ಇದು ಮಾವೋವಾದಿಯೊಬ್ಬನ ಊರಾಗಿದ್ದು, ಆತನ ಭಯದಿಂದಾಗಿಒಬ್ಬರೂ ಮತದಾನ ಮಾಡಲ್ಲ ಎಂದು ತಿಳಿದುಬಂದಿದೆ.

ಹೌದು, ಪುವರ್ತಿ ಗ್ರಾಮವು ನಕ್ಸಲ್‌ ನಾಯಕ ಹಿದ್ಮಾ ಎಂಬಾತನ ಹುಟ್ಟೂರಾಗಿದೆ. ಇಡೀ ಬಸ್ತಾರ್‌ ವ್ಯಾಪ್ತಿಯಲ್ಲಿ ಹಿದ್ಮಾನ ಪ್ರಭಾವ ಇದೆ. ಈತನ ಭಯವು ಜನರಲ್ಲಿ ಹೆಚ್ಚು ಕಾಡುತ್ತಿದೆ.‌ ಬಸ್ತಾರ್‌ ಪ್ರದೇಶದಲ್ಲಿಯೇ ಎಲ್ಲಿಯೇ ಮಾವೋವಾದಿಗಳ ದಾಳಿಯಾಗಲಿ, ಭದ್ರತಾ ಸಿಬ್ಬಂದಿ ಸೇರಿ ಸಾರ್ವಜನಿಕರ ಹತ್ಯೆಯಾಗಲಿ, ಆಗೆಲ್ಲ ಹಿದ್ಮಾನ ಹೆಸರೇ ಮುನ್ನೆಲೆಗೆ ಬರುತ್ತದೆ. ಈತನೇ ದಾಳಿಯ ರೂವಾರಿ ಎಂಬುದು ಜನರ ದೃಢ ನಂಬಿಕೆಯಾಗಿರುತ್ತದೆ. ಇದೇ ಕಾರಣಕ್ಕಾಗಿ, ಪುವರ್ತಿ ಗ್ರಾಮದಲ್ಲಿ ಶುಕ್ರವಾರ ಮತದಾನಕ್ಕೆ ಸಕಲ ವ್ಯವಸ್ಥೆ ಮಾಡಿದರೂ, ಭದ್ರತಾ ಸಿಬ್ಬಂದಿಯು ಹೆಚ್ಚು ಭದ್ರತೆ ಒದಗಿಸಿದರೂ ಯಾರೊಬ್ಬರೂ ಮತದಾನ ಮಾಡದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ಅಣಕವಾಗಿದೆ.

ಕೆಲವೆಡೆ ಇವಿಎಂ ದೋಷ

ತಮಿಳುನಾಡು, ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಅಸ್ಸಾಂನ ಕೆಲವು ಬೂತ್ ಗಳಲ್ಲಿ ಸಣ್ಣ ಪ್ರಮಾಣದ ಇವಿಎಂ ದೋಷಗಳು ವರದಿಯಾಗಿವೆ. ಪಶ್ಚಿಮ ಬಂಗಾಳದಲ್ಲಿ ಸಂಜೆ 5 ಗಂಟೆಯವರೆಗೆ ಶೇಕಡಾ 77.57, ಅಸ್ಸಾಂನಲ್ಲಿ ಶೇಕಡಾ 70.77 ಮತ್ತು ಮೇಘಾಲಯದಲ್ಲಿ ಶೇಕಡಾ 69.91 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

Lok sabha election-2024

ಪಶ್ಚಿಮ ಬಂಗಾಳದಲ್ಲಿ ಹಿಂಸಾಸಾರ

ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಕ್ಷೇತ್ರದಲ್ಲಿ ಹಿಂಸಾಚಾರ ನಡೆದಿದೆ. ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘರ್ಷಣೆ ನಡೆಸಿದ್ದು, ಮತದಾನ ಹಿಂಸಾಚಾರ, ಮತದಾರರ ಬೆದರಿಕೆ ಮತ್ತು ಚುನಾವಣಾ ಏಜೆಂಟರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಕ್ರಮವಾಗಿ 80 ಮತ್ತು 39 ದೂರುಗಳನ್ನು ದಾಖಲಾಗಿವೆ. ಸಂಘರ್ಷ ಪೀಡಿತ ಮಣಿಪುರದಲ್ಲಿ ಸಂಜೆ 5 ಗಂಟೆಯವರೆಗೆ ಶೇ.67.46ರಷ್ಟು ಮತದಾನವಾಗಿದೆ.

ಇನ್ನರ್ ಮಣಿಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಥೊಂಗ್ಜು ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯರು ಮತ್ತು ಅಪರಿಚಿತ ವ್ಯಕ್ತಿಗಳ ನಡುವೆ ವಾಗ್ವಾದ ನಡೆದಿದೆ. ಛತ್ತೀಸ್​ಗಢದ ನಕ್ಸಲ್ ಪೀಡಿತ ಬಸ್ತಾರ್ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 63.41 ರಷ್ಟು ಮತದಾರರು ಮತ ಚಲಾಯಿಸಿದ್ದಾರೆ. ಅಲ್ಲಿ ಗ್ರೆನೇಡ್ ಆಕಸ್ಮಿಕವಾಗಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಸಿಆರ್​ಪಿಎಫ್​ ಜವಾನ ಗಾಯಗೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಐಇಡಿ ಸ್ಫೋಟ ಸಂಭವಿಸಿದೆ.

ಇದನ್ನೂ ಓದಿ: Narendra Modi : ಮತದಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ ಮೋದಿ; ಎನ್​ಡಿಎಗೆ ಮತ ನೀಡಿದ್ದಾರೆ ಎಂದ ಪ್ರಧಾನಿ

Continue Reading

ಪ್ರಮುಖ ಸುದ್ದಿ

Trust Of The Nation 2024 : ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವುದು ಖಚಿತ; ಡೈಲಿಹಂಟ್ ಸಮೀಕ್ಷೆ

Trust Of The Nation 2024: ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ 61% ಜನರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ತುಂಬಾ ಸಂತೋಷವಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಅಭಿಪ್ರಾಯಗಳನ್ನು ಭಾರತದಾದ್ಯಂತ ವಿವಿಧ ಜನ ಸಮುದಾಯ ಮತ್ತು ವೃತ್ತಿಪರ ಗುಂಪುಗಳಿಂದ ಸಂಗ್ರಹಿಸಲಾಗಿದೆ. ಹೀಗಾಗಿ ಅಭಿಪ್ರಾಯಗಳು ಬಹುತೇಕ ಜನರ ಇಂಗಿತದ ಪ್ರತಿಫಲನವಾಗಿದೆ.

VISTARANEWS.COM


on

Trust Of The Nation 2024
Koo

ನವದೆಹಲಿ: 2024 ರ ಲೋಕಸಭಾ ಚುನಾವಣೆಯ (Lok Sabha Election) ಮೊದಲ ಹಂತ ಏಪ್ರಿಲ್​ 19ರಂದು ನಡೆದಿದೆ. ಇನ್ನೂ ಆರು ಹಂತಗಳ ಮತದಾನ ಪ್ರಕ್ರಿಯೆ ಬಾಕಿ ಉಳಿದಿದೆ. ಮತದಾನ ಜಾತ್ರೆಯ ಹಿನ್ನೆಲೆಯಲ್ಲಿ ಸ್ಥಳೀಯ ಭಾಷೆಗಳ ಕಂಟೆಂಟ್​ ಡಿಸ್ಕವರಿ ಫ್ಲ್ಯಾಟ್​ಫಾರ್ಮ್​ “ಡೈಲಿಹಂಟ್’ (Trust Of The Nation 2024) ನಡೆಸಿದ “ಟ್ರಸ್ಟ್ ಆಫ್ ದಿ ನೇಷನ್” ಸಮೀಕ್ಷೆಯು ಭಾರತದ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬುದನ್ನು ಬಹಿರಂಗ ಮಾಡಿದೆ. 77 ಲಕ್ಷಕ್ಕೂ ಹೆಚ್ಚು ಮತದಾರರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದು ಭಾರತದ ಉತ್ತಮ ನಾಯಕತ್ವ, ಸಮರ್ಥ ಆರ್ಥಿಕ ನಿರ್ವಹಣೆ ಮತ್ತು ಪ್ರಸ್ತುತ ಸರ್ಕಾರದ ಒಟ್ಟಾರೆ ಕಾರ್ಯಕ್ಷಮತೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳ ಇಲ್ಲ ವ್ಯಕ್ತಗೊಂಡಿವೆ. ಈ ಸಮೀಕ್ಷೆಯ ಸಮಗ್ರ ವಿವರ ಈ ಕೆಳಗೆ ನೀಡಲಾಗಿದೆ.

ಸರ್ಕಾರ ಮತ್ತು ಪ್ರಧಾನಿ ಮೋದಿ ನಾಯಕತ್ವಕ್ಕೆ ಜನರ ಮೆಚ್ಚುಗೆ

ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ 61% ಜನರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ತುಂಬ ಸಂತೋಷವಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಅಭಿಪ್ರಾಯಗಳನ್ನು ಭಾರತದಾದ್ಯಂತ ವಿವಿಧ ಜನ ಸಮುದಾಯ ಮತ್ತು ವೃತ್ತಿಪರ ಗುಂಪುಗಳಿಂದ ಸಂಗ್ರಹಿಸಲಾಗಿದೆ. ಹೀಗಾಗಿ ಅಭಿಪ್ರಾಯಗಳು ಬಹುತೇಕ ಜನರ ಇಂಗಿತದ ಪ್ರತಿಫಲನವಾಗಿದೆ. ಕೆಲವು ಪ್ರದೇಶಗಳಲ್ಲಿ ಗೃಹಿಣಿಯರು ಮತ್ತು ಉದ್ಯಮಿಗಳ ನಡುವೆ ಭಿನ್ನಾಭಿಪ್ರಾಯಗಳು ವ್ಯಕ್ತಗೊಂಡಿವೆ.

ಈ ಬಾರಿಯ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ?

ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ.63ರಷ್ಟು ಮಂದಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ವಿವರವಾದ ಅಂಕಿ ಅಂಶಗಳು ಪಿಎಂ ಮೋದಿಯವರನ್ನು ಭಾರತದ ಬಹುತೇಕ ರಾಜ್ಯಗಳ ಜನರು ತಮ್ಮ ನೆಚ್ಚಿನ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಈ ವಿಚಾರದಲ್ಲಿ ತಮಿಳುನಾಡು ಮತ್ತು ಕೇರಳದಲ್ಲಿ ವ್ಯತಿರಿಕ್ತ ಅಭಿಪ್ರಾಯಗಳು ಮೂಡಿ ಬಂದಿವೆ.

ಪ್ರಧಾನಿ ಮೋದಿಯ ಆರ್ಥಿಕ ಪ್ರಗತಿ ಯೋಜನೆಗೆ ಜನರ ಮೆಚ್ಚುಗೆ

ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಸರ್ಕಾರವು ಆರ್ಥಿಕತೆಯನ್ನು ನಿರ್ವಹಿಸಿದ ರೀತಿಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ, 60% ರಷ್ಟು ಜನರು ದೇಶದ ಆರ್ಥಿಕ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಯು ನಡೆದ ಬಹುತೇಕ ಸ್ಥಳಗಳಲ್ಲಿ ಈ ಅಭಿಪ್ರಾಯವೇ ದೊರಕಿದೆ. ಆದರೂ ದಕ್ಷಿಣದ ಕೆಲವು ರಾಜ್ಯಗಳು ಅದೇ ಉತ್ಸಾಹವನ್ನು ತೋರಿಸಿಲ್ಲ. ಇದು ಪ್ರಾದೇಶಿಕ ಆರ್ಥಿಕ ಅಸಮಾನತೆಯ ಕೂಗು ವ್ಯಕ್ತಗೊಂಡಿದೆ.

‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’: ಮತ್ತೆ ಬೇಕು ಮೋದಿ

ಶೇ.64ರಷ್ಟು ಮಂದಿ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಮುಂದುವರಿಯಬೇಕು ಎಂದು ಬಯಸಿದ್ದಾರೆ. ಯುವ ಮತದಾರರಿಂದ ಹಿಡಿದು ನಿವೃತ್ತರ ತನಕ ಪ್ರಧಾನಿ ಮೋದಿಯವರ ವಿಶಾಲ ಆಕರ್ಷಣೆಯನ್ನು ಪ್ರದರ್ಶಿಸಿದೆ. ಇದು ರಾಷ್ಟ್ರೀಯ ನಾಯಕರಾಗಿ ಅವರ ಶಕ್ತಿಯನ್ನು ಹೇಳಿದೆ.

ವಿದೇಶಾಂಗ ನೀತಿ ನಿರ್ಧಾರಗಳಿಗೆ ರಾಷ್ಟ್ರದ ಒಮ್ಮತ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪಾಲಿಸುತ್ತಿರುವ ವಿದೇಶಾಂಗ ನೀತಿಗೆ ಸಮೀಕ್ಷೆಯಲ್ಲಿ ಗಣನೀಯ ಬೆಂಬಲ ದೊರೆತಿದೆ. ಅಂತಾರಾಷ್ಟ್ರೀಯ ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಸರ್ಕಾರದ ಕಾರ್ಯಕ್ಷಮತೆ ಉತ್ತಮವಾಗಿದೆ ಎಂದು 64% ಜನರು ರೇಟಿಂಗ್ ನೀಡಿದ್ದಾರೆ. ಇದು ಸರ್ಕಾರದ ರಾಜತಾಂತ್ರಿಕ ಕಾರ್ಯತಂತ್ರಗಳು ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಿಗೆ ವ್ಯಾಪಕ ಬೆಂಬಲ ದೊರಕಿದೆ

ರಾಷ್ಟ್ರೀಯ ಬಿಕ್ಕಟ್ಟುಗಳ ಸ್ಪಂದನೆಗೂ ಶಹಬ್ಬಾಸ್​

ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಪ್ರಧಾನಿ ಮೋದಿಯವರ ನಾಯಕತ್ವವನ್ನು ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಹೆಚ್ಚಿನವರು ಶ್ಲಾಘಿಸಿದ್ದಾರೆ. 63.6% ಜನರು ತುಂಬಾ ಸಂತೋಷವಾಗಿದ್ದಾರೆ. ಪ್ರಕ್ಷುಬ್ಧ ಸಮಯದಲ್ಲಿ ಪಿಎಂ ಮೋದಿಯವರ ಆಡಳಿತದ ಚಾತುರ್ಯವನ್ನು ಸಮೀಕ್ಷೆಯಲ್ಲಿ ಪಾಲ್ಗೊಂಡವರು ಶಹಬ್ಬಾಸ್ ಎಂದಿದ್ದಾರೆ.

ಸರ್ಕಾರದ ಕಲ್ಯಾಣ ಯೋಜನೆಗಳಿಗೆ ಆಭಾರಿ

ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಅರ್ಧಕ್ಕಿಂತ ಹೆಚ್ಚು, ಅಂದರೆ 53.9% ಕ್ಕಿಂತ ಹೆಚ್ಚು, ಸರ್ಕಾರ ಕೈಗೊಂಡ ಕಲ್ಯಾಣ ಯೋಜನೆಗಳು ಮತ್ತು ಜನಪರ ಚಟುವಟಿಕೆಗಳಿಂದ ಸಂತೋಷವಾಗಿದ್ದಾರೆ. ನಿವೃತ್ತ ವ್ಯಕ್ತಿಗಳು ಮತ್ತು ವಿದ್ಯಾರ್ಥಿಗಳು ನೀಡಿರುವ ಬೆಂಬಲ ಗಮನಾರ್ಹವಾಗಿ ಹೆಚ್ಚಾಗಿದೆ, ಎರಡೂ ಗುಂಪುಗಳು ಸುಮಾರು 59% ತೃಪ್ತಿ ಮಟ್ಟವನ್ನು ತೋರಿಸಿವೆ. ಈ ಗುಂಪುಗಳಿಗೆ ನೇರವಾಗಿ ಪ್ರಯೋಜನವಾಗುವ ನಿರ್ದಿಷ್ಟ ಕಾರ್ಯಕ್ರಮಗಳ ಪರಿಣಾಮ ಇದು. ಉದಾಹರಣೆಗೆ; ವಯಸ್ಸಾದವರಿಗೆ ಪಿಂಚಣಿ ಯೋಜನೆಗಳು ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಬ್ಸಿಡಿಗಳು.

ಮೋದಿಯ ಭ್ರಷ್ಟಾಚಾರ ವಿರೋಧಿ ಕ್ರಮ

ಮೋದಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸರ್ಕಾರದ ಕ್ರಮಕ್ಕೆ ಶೇ.63.5ರಷ್ಟು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಜನಸಂಖ್ಯಾ ದೃಷ್ಟಿಕೋನದಿಂದ, ವಿದ್ಯಾರ್ಥಿಗಳು (59%) ಮತ್ತು ನಿವೃತ್ತ (59%) ವ್ಯಕ್ತಿಗಳು ಉದ್ಯಮಿಗಳು ಹೆಚ್ಚು ಸಂತೋಷ ವ್ಯಕ್ತಪಡಿಸಿದ್ದಾರೆ.

ಕಠಿಣ ಪರಿಶ್ರಮಿ ಮತ್ತು ಪ್ರಾಮಾಣಿಕ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರ ಗುಣ ಲಕ್ಷಣಗಳ ಬಗ್ಗೆಯೂ ಪ್ರಶ್ನೆ ಕೇಳಲಾಗಿತ್ತು. ಪ್ರಮುಖವಾಗಿ ಅವರ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮಕ್ಕೆ ಬೆಂಬಲ ದೊರಕಿದೆ. ಶೇ.41ರಷ್ಟು ಮಂದಿ ಅವರ ಈ ಗುಣವನ್ನು ಮೆಚ್ಚಿದ್ದಾರೆ. ನಿವೃತ್ತರು ಮತ್ತು ವಿದ್ಯಾರ್ಥಿಗಳಲ್ಲಿ ಈ ಮೆಚ್ಚುಗೆ ವಿಶೇಷವಾಗಿ ವ್ಯಕ್ತಗೊಂಡಿದೆ. ಕ್ರಮವಾಗಿ 47% ಮತ್ತು 43% ಜನರು ಪ್ರಧಾನಿ ಮೋದಿಯವರ ಸಮಗ್ರತೆ ಮತ್ತು ಶ್ರದ್ಧೆಯನ್ನು ಶ್ಲಾಘಿಸಿದ್ದಾರೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಮತದಾರರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರು ಪ್ರಧಾನಿಯ ಈ ವ್ಯಕ್ತಿತ್ವದ ಬಗ್ಗೆ ಹೆಚ್ಚಿನ ಮೆಚ್ಚುಗೆ ತೋರಿದ್ದಾರೆ. ಅವರ ಪಾರದರ್ಶಕ ಮನಸ್ಸು ಮತ್ತು ಶ್ರಮದ ನೀತಿಯನ್ನು ಎತ್ತಿಹಿಡಿದಿದ್ದಾರೆ.

ಸಮೀಕ್ಷೆಯ ಅಂತಿಮ ಹೇಳಿಕೆ ಹೀಗಿದೆ

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ, ವಿಶೇಷವಾಗಿ ಆರ್ಥಿಕ ನಿರ್ವಹಣೆ, ವಿದೇಶಾಂಗ ನೀತಿ ಮತ್ತು ಬಿಕ್ಕಟ್ಟು ನಿರ್ವಹಣೆ ಬಗ್ಗೆ ಅತಿ ಹೆಚ್ಚು ಮೆಚ್ಚುಗೆ ಶುರುವಾಗಿದೆ. ಮೋದಿಯ ಆಡಳಿತದ ಬಗ್ಗೆ ತುಂಬಾ ಆಶಾವಾದಿಯಾಗಿರುವವರ ಪ್ರಮಾಣವೇ ಹೆಚ್ಚಿದೆ. ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮಿ ಎಂದು ಪರಿಗಣಿಸಲ್ಪಟ್ಟ ನಾಯಕನಾಗಿ ಪ್ರಧಾನಿ ಮೋದಿಯವರು ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೋದಿ ನೇತೃತ್ವದಲ್ಲಿ ಭಾರತವು ಸಂಕೀರ್ಣ ದೇಶೀಯ ಮತ್ತು ಅಂತಾರರಾಷ್ಟ್ರೀಯ ಸಮಸ್ಯೆಗಳನ್ನು ನಿರ್ವಹಣೆ ಮಾಡಿರುವುದು ಕೂಡ ಜನ ಮೆಚ್ಚುಗೆ ಗಳಿಸಿದೆ.

Continue Reading
Advertisement
Apricot Benefits
ಆರೋಗ್ಯ6 mins ago

Apricot Benefits: ನಿಮಗೆ ಇಂತಹ ಸಮಸ್ಯೆಗಳಿವೆಯೇ?: ಹಾಗಾದರೆ ನಿತ್ಯವೂ ಆಪ್ರಿಕಾಟ್‌ ತಿನ್ನಿ!

Family health insurance
ಮನಿ ಗೈಡ್7 mins ago

Money Guide: ಕುಟುಂಬಕ್ಕಾಗಿ ಆರೋಗ್ಯ ವಿಮೆ; ಖರೀದಿ ಮುನ್ನ ತಿಳಿದಿರಲಿ ಕೆಲವು ವಿಚಾರ

Modi in Karnataka
ಪ್ರಮುಖ ಸುದ್ದಿ12 mins ago

Modi in Karnataka: ಪ್ರಧಾನಿ ಮೋದಿ ತೆರಳುವಾಗ ಚೆಂಬು ಪ್ರದರ್ಶನ; ನಲಪಾಡ್‌ ಸೇರಿ ಹಲವರು ವಶಕ್ಕೆ

Modi in Karnataka Govt turns tax city Bengaluru into tanker city and attacks girls too PM Narendra Modi
ಕರ್ನಾಟಕ46 mins ago

Modi in Karnataka: ಟ್ಯಾಕ್ಸ್ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿ ಮಾಡಿದ ಸರ್ಕಾರ, ಹೆಣ್ಣು ಮಕ್ಕಳ ಮೇಲೂ ಹಲ್ಲೆ: ಮೋದಿ ವಾಗ್ದಾಳಿ

Kalki 2898 AD
ಸಿನಿಮಾ48 mins ago

Kalki 2898 AD: ನಾಳೆ ಮಹತ್ವದ  ಅಪ್‌ಡೇಟ್‌ ನೀಡಲಿದೆ ಪ್ರಭಾಸ್‌ ಅಭಿನಯದ ʼಕಲ್ಕಿ 2898 ಎಡಿʼ ಚಿತ್ರತಂಡ; ಹೊಸ ರಿಲೀಸ್‌ ದಿನಾಂಕ ಘೋಷಣೆ?

Lok Sabha Election
ದೇಶ56 mins ago

Lok Sabha Election: ನಿನ್ನೆ ಈ ಗ್ರಾಮದ ಒಬ್ಬರೂ ಮತ ಹಾಕಲಿಲ್ಲ; ಇದ್ದಿದ್ದು ಯಾರ ಭಯ?

Ashutosh Sharma
ಕ್ರೀಡೆ57 mins ago

Ashutosh Sharma: ಖಿನ್ನತೆಗೆ ಒಳಗಾಗಿದ್ದ ಬಿಗ್​ ಹಿಟ್ಟರ್​ ಅಶುತೋಷ್‌ ಶರ್ಮ; ಕ್ರಿಕೆಟ್​ ಜರ್ನಿಯೇ ರೋಚಕ

DK Shivakumar
ಕರ್ನಾಟಕ57 mins ago

DK Shivakumar: ಮತಯಾಚನೆ ವೇಳೆ ಬೆದರಿಕೆ ಆರೋಪ; ಡಿಕೆಶಿ ವಿರುದ್ಧ ಎಫ್‌ಐಆರ್‌

Karnataka Weather Forecast
ಮಳೆ1 hour ago

Karnataka Weather : ಎತ್ತಿನ ಬಂಡಿಯಲ್ಲಿ ಬರುವಾಗ ಸಿಡಿಲು ಬಡಿದು ಬಾಲಕ ಸಾವು; ಭಾರಿ ಮಳೆಗೆ ನಲುಗಿದ ಜನರು

Trust Of The Nation 2024
ಪ್ರಮುಖ ಸುದ್ದಿ2 hours ago

Trust Of The Nation 2024 : ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವುದು ಖಚಿತ; ಡೈಲಿಹಂಟ್ ಸಮೀಕ್ಷೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ2 hours ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 hours ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20245 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ6 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ7 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ14 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ2 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ4 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ5 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

ಟ್ರೆಂಡಿಂಗ್‌