ಪ್ರಮುಖ ಸುದ್ದಿ
Horoscope Today : ತುಲಾ ರಾಶಿಯವರಿಗೆ ಪ್ರಭಾವಿ ಜನರ ಬೆಂಬಲ; ನಿಮ್ಮ ರಾಶಿ ಭವಿಷ್ಯ ಹೇಗಿದೆ?
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ ಪಂಚಮಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಇಂದಿನ ಪಂಚಾಂಗ (26-03-2023)
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ.
ತಿಥಿ: ಪಂಚಮಿ 16:32 ವಾರ: ಭಾನುವಾರ
ನಕ್ಷತ್ರ: ಕೃತ್ತಿಕಾ 13:59 ಯೋಗ: ಪ್ರೀತಿ 23:30
ಕರಣ: ಬಾಲವ 16:32 ಇಂದಿನ ವಿಶೇಷ: ದೇವರ ದಾಸಿಮಯ್ಯ ಜಯಂತಿ
ಅಮೃತಕಾಲ: ಬೆಳಗ್ಗೆ 11 ಗಂಟೆ 33 ನಿಮಿಷದಿಂದ ಮಧ್ಯಾಹ್ನ 01 ಗಂಟೆ 12 ನಿಮಿಷದವರೆಗೆ.
ಸೂರ್ಯೋದಯ : 06:20 ಸೂರ್ಯಾಸ್ತ : 06:31
ರಾಹುಕಾಲ : ಸಂಜೆ 4.30 ರಿಂದ 6.00
ಗುಳಿಕಕಾಲ: ಮಧ್ಯಾಹ್ನ 3.00 ರಿಂದ 4.30
ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30
ದ್ವಾದಶ ರಾಶಿ ಭವಿಷ್ಯ (Horoscope Today)
ಮೇಷ: ಆಪ್ತರ ವರ್ತನೆಯಿಂದ ನಿಮ್ಮ ಮನಸ್ಸಿಗೆ ನೋವಾಗುವ ಸಾಧ್ಯತೆಗಳು ಹೆಚ್ಚು, ತಾಳ್ಮೆಯಿಂದ ಇರಿ. ದಿನದ ಮಟ್ಟಿಗೆ ಹಣಕಾಸಿನ ಹೂಡಿಕೆ ವ್ಯವಹಾರ ಮಾಡುವುದು ಬೇಡ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ತಲೆದೋರಬಹುದು, ಮಾತಿನಲ್ಲಿ ಹಿಡಿತವಿರಲಿ. ಆರೋಗ್ಯದ ಬಗೆಗೆ ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4
ವೃಷಭ: ಆಹಾರ ಕ್ರಮದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ, ಆರೋಗ್ಯದ ಕಡೆಗೆ ಗಮನ ಹರಿಸಿ. ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ ಪ್ರಗತಿಯೊಂದಿಗೆ ಲಾಭ ಪಡೆಯುವಿರಿ. ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ. ಹಿರಿಯರಿಂದ ಮಾರ್ಗದರ್ಶನ. ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4
ಮಿಥುನ: ಯಾರಾದರೂ ನಿಮ್ಮ ಸಹಾಯ ಬೇಡಿ ಬರುವರು, ಯೋಚಿಸಿ ಸಹಾಯ ಮಾಡಿ. ಆರ್ಥಿಕ ಪ್ರಗತಿ ದಿನದ ಮಟ್ಟಿಗೆ ಸಾಧಾರಣ. ಯಾರಾದರೂ ನಿಮ್ಮ ಭಾವನೆಗಳಿಗೆ ನಿರಾಸೆಯುಂಟುಮಾಡುವ ಸಾಧ್ಯತೆ, ಅವರ ಮಾತುಗಳನ್ನು ಲಕ್ಷಿಸದೇ ಕಾರ್ಯದಲ್ಲಿ ಮುನ್ನುಗ್ಗಿ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಹೊಸ ಭರವಸೆಯ ಆಶಾಭಾವನೆ ಮೂಡಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2
ಕಟಕ: ಕೆಲವು ಆಘಾತಗಳನ್ನು ಎದುರಿಸಬೇಕಾಗಿ ಬರಬಹುದು. ಧೈರ್ಯದಿಂದ ಇರಿ. ನಿಮ್ಮ ಆಸೆ-ಆಕಾಂಕ್ಷೆಗಳು ಯಶಸ್ಸನ್ನು ತಂದುಕೊಡಲಿವೆ. ಪ್ರಯಾಣ ಮಾಡುವ ಮತ್ತು ಹಣ ಖರ್ಚು ಮಾಡುವ ಸಾಧ್ಯತೆ. ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದೀತು. ಎಚ್ಚರಿಕೆ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5
ಸಿಂಹ: ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಹುಡುಕಲು ಸಾಧ್ಯವಾಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕವಾಗಿ ಲಾಭ ಕಡಿಮೆ. ಹೊಸ ಆಲೋಚನೆಗಳು ನಿಮ್ಮನ್ನು ಸೃಜನಾತ್ಮಕವಾಗಿ ಏನಾದರೂ ಮಾಡಲು ಪ್ರಯತ್ನಿಸುವಂತೆ ಪ್ರೇರೇಪಿಸುತ್ತದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3
ಕನ್ಯಾ: ಕುಟುಂಬದ ಆಪ್ತರೊಂದಿಗೆ ಸಂತಸ ಹಂಚಿಕೊಳ್ಳವಿರಿ. ಹಣಕಾಸು ಪರಿಸ್ಥಿತಿ ಸಾಧಾರಣ, ದಿನದ ಮಟ್ಟಿಗೆ ಖರ್ಚು. ದುಬಾರಿ ವಸ್ತುಗಳನ್ನು ಖರೀದಿಸುವ ಮುನ್ನ ನಿಮ್ಮ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು, ಹಾಸಿಗೆ ಇದ್ದಷ್ಟು ಕಾಲು ಚಾಚಿ. ಆರೋಗ್ಯ ಮಧ್ಯಮ, ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಪ್ರಭಾವಿ ಜನರ ಬೆಂಬಲ ಸಿಗಲಿದೆ. ಇದರಿಂದ ನೈತಿಕ ಸ್ಥೈರ್ಯ ಹೆಚ್ಚಾಗಲಿದೆ. ಒಡಹುಟ್ಟಿದವರ ಸಹಕಾರ ಸಿಗಲಿದೆ. ಆತುರದಲ್ಲಿ ಯಾರೊಂದಿಗೂ ಅತಿರೇಕದ ಮಾತುಗಳನ್ನು ಆಡಿ, ಅಪಾಯ ತಂದುಕೊಳ್ಳುವುದು ಬೇಡ. ದಿನದ ಮಟ್ಟಿಗೆ ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4
ವೃಶ್ಚಿಕ: ಸಕಾರಾತ್ಮಕ ಆಲೋಚನೆಗಳು ಪುಷ್ಟಿ ನೀಡಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು ತಂದುಕೊಡಲಿವೆ. ಇಂದು ಹಣಕಾಸಿನ ಹೂಡಿಕೆ ವ್ಯವಹಾರ ಮಾಡುವುದು ಬೇಡ. ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಪ್ರಯಾಣದಿಂದ ಲಾಭ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಇಂದು ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6
ಧನಸ್ಸು: ಭಾವನಾ ಜೀವಿಗಳಾದ ನೀವು ನಕಾರಾತ್ಮಕ ಆಲೋಚನೆಗಳಿಂದ ದೂರ ಇರಿ. ಅಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ, ಕ್ಷೇತ್ರ ದರ್ಶನ ಪಡೆದು ಮಾನಸಿಕ ನೆಮ್ಮದಿ ತಂದುಕೊಳ್ಳುವುದು ಅವಶ್ಯಕ. ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಿ. ಹಣಕಾಸು, ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3
ಮಕರ: ಭರವಸೆಯ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸ್ನೇಹಿತರೊಂದಿಗೆ ಸಮಯ ಕಳೆಯುವ ಸಾಧ್ಯತೆ. ನಿಮ್ಮ ಶಕ್ತಿ ಸಾಮರ್ಥ್ಯವನ್ನು ಕೆಲಸ ಕಾರ್ಯಗಳಲ್ಲಿ ಬಳಸಿಕೊಂಡರೆ ಇನ್ನೂ ಹೆಚ್ಚು ಆಕರ್ಷಕ ವ್ಯಕ್ತಿತ್ವ ನಿಮ್ಮದಾಗುತ್ತದೆ. ಆರೋಗ್ಯ ಉತ್ತಮ. ದಿನದ ಮಟ್ಟಿಗೆ ಖರ್ಚು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3
ಕುಂಭ: ಅತಿಥಿಗಳ ಆಗಮನ ಸಂತಸ ತರುವುದು. ಆತ್ಮವಿಶ್ವಾಸದ ಹೊಸ ಭರವಸೆ ಮೂಡಲಿದೆ. ಹೂಡಿಕೆಯ ಲಾಭ ಇಂದು ಉಪಯೋಗಕ್ಕೆ ಬರುವುದು. ದೀರ್ಘಕಾಲದ ಪ್ರಯತ್ನ ಇಂದು ಯಶಸ್ಸು ತಂದು ಕೊಡಲಿದೆ. ಆರೋಗ್ಯ ಮತ್ತು ಉದ್ಯೋಗದಲ್ಲಿ ಉತ್ತಮ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1
ಮೀನ: ಅತಿರೇಕದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಕೋಪಗೊಳ್ಳುವಂತೆ ಉದ್ರೇಕವಾಗುವ ವಿಷಯಗಳಿಂದ ದೂರ ಇರಿ. ತಾಳ್ಮೆಯಿಂದ ವರ್ತಿಸಿ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | [email protected]
ಇದನ್ನೂ ಓದಿ: Ugadi Horoscope 2023 : ಯುಗಾದಿ ಭವಿಷ್ಯ; ಹೊಸ ಸಂವತ್ಸರದಲ್ಲಿ ಯಾವೆಲ್ಲಾ ರಾಶಿಗಳಿಗೆ ಶುಭಾಶುಭ ಫಲಗಳಿವೆ?
ಪ್ರಮುಖ ಸುದ್ದಿ
Horoscope Today: ಈ ರಾಶಿಯವರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಎಚ್ಚರ ಇರಲಿ!
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಇಂದಿನ ಪಂಚಾಂಗ (11-06-2023)
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ.
ತಿಥಿ: ಅಷ್ಟಮಿ 12:05 ವಾರ: ಭಾನುವಾರ
ನಕ್ಷತ್ರ: ಪೂರ್ವಾಭಾದ್ರಪದ 14:30 ಯೋಗ: ಪ್ರೀತಿ 10:09
ಕರಣ: ಕೌಲವ 12:05
ಅಮೃತಕಾಲ: ಸಂಜೆ 5 ಗಂಟೆ 51 ನಿಮಿಷದಿಂದ 7ಗಂಟೆ 21 ನಿಮಿಷದವರೆಗೆ.
ಸೂರ್ಯೋದಯ : 05:53 ಸೂರ್ಯಾಸ್ತ : 06:46
ರಾಹುಕಾಲ : ಸಂಜೆ 4.30 ರಿಂದ 6.00
ಗುಳಿಕಕಾಲ: ಮಧ್ಯಾಹ್ನ 3.00 ರಿಂದ 4.30
ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30
ಮೇಷ: ಅತಿರೇಕದ ಮಾತುಗಳು ಜಗಳ ಉಂಟುಮಾಡಬಹುದು. ಯಾವುದಾದರೂ ಮೂಲದಿಂದ ಆರ್ಥಿಕ ಲಾಭ. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳವಾಗುವ ಸಾಧ್ಯತೆ. ಆರೋಗ್ಯದಲ್ಲಿ ಕೊಂಚ ಮಟ್ಟಿಗೆ ಏರುಪೇರು ಉಂಟಾಗುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1
ವೃಷಭ: ಭಾವನಾತ್ಮಕ ವಿಷಯಗಳಿಂದ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ. ದಿನದ ಮಟ್ಟಿಗೆ ಖರ್ಚು. ಕುಟುಂಬದ ಆಪ್ತರಿಂದ ಆಮಂತ್ರಣ. ಆರೋಗ್ಯದ ಕುರಿತು ವಿಶೇಷ ಕಾಳಜಿ ಅವಶ್ಯ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1
ಮಿಥುನ: ಏಕಪಕ್ಷೀಯ ವ್ಯಾಮೋಹದಿಂದ ಒತ್ತಡ ಸಾಧ್ಯತೆ ಕಡಿಮೆ ಮಾಡಿಕೊಳ್ಳಿ.ಆಹ್ಲಾದಕಾರಿ ಮನಸ್ಥಿತಿಯಲ್ಲಿರುತ್ತೀರಿ.ಭರವಸೆಯ ಹೊಸ ಅವಕಾಶಗಳು ಸಿಗುವ ಸಾಧ್ಯತೆ. ಆರ್ಥಿಕ ಪ್ರಗತಿ ಮಧ್ಯಮ.ಆರೋಗ್ಯ ಪರಿಪೂರ್ಣ.ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8
ಕಟಕ: ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಆರ್ಥಿಕ ಪ್ರಗತಿ ಸಾಧಾರಣ.ವ್ಯಾಪರ ವ್ಯವಹಾರದಲ್ಲಿ ಪ್ರಗತಿ.ಅತಿರೇಕದ ಲ್ಲಿ ಯಾವುದೇ ಮಾತುಗಳು ಅಪಾಯ ತರಬಹುದು.ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ.ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2
ಸಿಂಹ: ಶೀಘ್ರ ಕೋಪದಿಂದ ಕಾರ್ಯದಲ್ಲಿ ಹಾನಿ.ಆರ್ಥಿಕ ಪ್ರಗತಿ.ಸಂಬಂಧಿಗಳೊಂದಿಗೆ ಕಾಲ ಕಳೆಯುವ ಸಾಧ್ಯತೆ.ಹೇಳಿಕೆಯ ಮಾತುಗಳು ಕುಟುಂಬದ ವಾತಾವರಣ ಕೆಡಿಸುವುದು ಎಚ್ಚರಿಕೆ ಇರಲಿ.ಸಹದ್ಯೋಗಿಗಳಿಂದ ಕಿರಿಕಿರಿ.ಆರೋಗ್ಯದ ಕಾಳಜಿ ಇರಲಿ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1
ಕನ್ಯಾ: ಮನರಂಜನೆಗಾಗಿ ಸಮಯ ಕಳೆಯುವ ಸಾಧ್ಯತೆ. ಆಪ್ತರೊಂದಿಗೆ ಮಾತುಕತೆ.ಆರ್ಥಿಕ ಪ್ರಗತಿ ಸಾಧಾರಣ.ಪಾಲುದಾರಿಕೆ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ.ಉದ್ಯೋಗಿಗಳಿಗೆ ಕಿರಿಕಿರಿ.ನಂಬಿದ ವ್ಯಕ್ತಿಗಳು ನಿಮ್ಮನ್ನು ಮೋಸಗೊಳಿಸಬಹುದು.ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆ.ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಸಕಾರಾತ್ಮಕ ಆಲೋಚನೆಗಳಿಂದ ಕಾರ್ಯದಲ್ಲಿ ಯಶಸ್ಸು.ಆರ್ಥಿಕ ಪ್ರಗತಿ ಸಾಧಾರಣ.ಹಳೆಯ ವಿಚಾರ ಕೆದಕಿ ಮನಸ್ಸಿಗೆ ಘಾಸಿ ಮಾಡಿಕೊಳ್ಳುವುದು ಬೇಡ.ಆರೋಗ್ಯ ಮಧ್ಯಮ.ಉದ್ಯೋಗಿಗಳಿಗೆ ಮಿಶ್ರ ಫಲ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1
ವೃಶ್ಚಿಕ: ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗಲಿದೆ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕ ಪ್ರಗತಿ.ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಅಮೂಲ್ಯ ವಸ್ತುಗಳು ಕೈಗೆ ಸಿಗುವುದರಿಂದ ಸಂತಸ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 3
ಧನಸ್ಸು: ಭೂಮಿ ಸಂಬಂಧಿ ವ್ಯವಹಾರ, ಹಣಕಾಸು ವ್ಯವಹಾರದಲ್ಲಿ ಲಾಭ. ಪ್ರಯಾಣ ಸಾಧ್ಯತೆ. ಆರೋಗ್ಯ ಪರಿಪೂರ್ಣ.ಸಹದ್ಯೋಗಿಗಳಿಂದ ಸಹಕಾರ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣ ಬಲ.ಕುಟುಂಬದಲ್ಲಿ ಹೊಸ ಭರವಸೆ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9
ಮಕರ: ಭರವಸೆಯ ಹೊಸ ಜೀವನ ಶುರುವಾಗಲಿದೆ.ದೀರ್ಘಕಾಲದ ಹೊಡಿಕೆ ವ್ಯವಹಾರದಲ್ಲಿ,ಆರ್ಥಿಕ ಪ್ರಗತಿ.ನೀವು ಮಾಡಿದ ಕೆಲಸ ಕಾರ್ಯಗಳ ಫಲಿತಾಂಶ ಬೇರೆಯವರು ತೆಗೆದುಕೊಂಡು ಪ್ರಶಂಸೆ ಪಡುವ ಸಾಧ್ಯತೆ, ಎಚ್ಚರಿಕೆ ಇರಲಿ.ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9
ಕುಂಭ: ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣವಾಗುವವು.ಅವಶ್ಯಕ ವಸ್ತುಗಳ ಖರೀದಿ.ಅಷ್ಟೇ ಆರ್ಥಿಕ ಲಾಭ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ,ಮಾತು ಬೆಳೆಸುವುದು ಬೇಡ.ಸಾಮಜಿಕ ಕಾರ್ಯದಲ್ಲಿ ತೊಡಗುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ಮೀನ: ಹಳೆಯ ನೋವು ಉಲ್ಬಣಗೊಳ್ಳವ ಸಾಧ್ಯತೆ, ಆರೋಗ್ಯದ ಕಡೆಗೆ ಗಮನ ಇರಲಿ. ಆರ್ಥಿಕ ಪ್ರಗತಿ ಸಾಧಾರಣ.ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು. ಸಂಬಂಧಿಗಳೊಂದಿಗೆ ಮಾತುಕತೆ.ಉದ್ಯೋಗಿಗಳಿಗೆ ಒತ್ತಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | [email protected]
ಇದನ್ನೂ ಓದಿ : ಶುಕ್ರ ಗ್ರಹ ಲಗ್ನದಲ್ಲಿದ್ದರೆ ಉತ್ತಮ ಆರೋಗ್ಯ, ಉಳಿದ ಮನೆಯಲ್ಲಿದ್ದರೆ ಯಾವೆಲ್ಲಾ ಫಲ?
ಪ್ರಮುಖ ಸುದ್ದಿ
ವಿಸ್ತಾರ ಸಂಪಾದಕೀಯ: ಡಿಜಿಟಲ್ ಪಾವತಿಯಲ್ಲಿ ಭಾರತ ನಂ.1, ಭಾರತೀಯರ ಪ್ರೌಢಿಮೆಗೆ ಇದು ಸಾಕ್ಷಿ
ಭಾರತದಲ್ಲಿ ಬಡವರು, ಅನಕ್ಷರಸ್ಥರೇ ಹೆಚ್ಚಿದ್ದಾರೆ. ಅವರೆಲ್ಲ ನೋಟು ಬಳಸದೆ ಡಿಜಿಟಲ್ ವ್ಯವಹಾರ ನಡೆಸಲು ಹೇಗೆ ಸಾಧ್ಯ ಎಂಬ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ದೇಶದ ಸಾಮಾನ್ಯ ಜನರೇ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ವಹಿವಾಟಿಗೆ ಇಳಿದಿರುವುದು ಗಮನಾರ್ಹ.
ಜಗತ್ತಿನಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ಪಾವತಿಯಾಗುವ ದೇಶಗಳಲ್ಲಿ ಭಾರತ ನಂ.1 ಆಗಿ ಹೊರಹೊಮ್ಮಿದೆ. 2022ರ ಅಂಕಿ ಅಂಶಗಳ ಪ್ರಕಾರ, ಡಿಜಿಟಲ್ ಪೇಮೆಂಟ್ಸ್‌ನಲ್ಲಿ ಭಾರತವು ನಾಲ್ಕು ರಾಷ್ಟ್ರಗಳನ್ನು ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ್ದು, ಇಲ್ಲಿ 8.95 ಕೋಟಿ ಡಿಜಿಟಲ್ ಪಾವತಿಗಳಾಗಿವೆ ಎಂದು ಮೈಗೌವ್‌ಇಂಡಿಯಾ (MyGovIndia) ಅಂಕಿ ಅಂಶಗಳಿಂದ ಗೊತ್ತಾಗಿದೆ. ಜಾಗತಿಕವಾಗಿ ನಡೆಯುವ ರಿಯಲ್‌ಟೈಮ್ ಡಿಜಿಟಲ್ ಪೇಮೆಂಟ್‌ಗಳಿಗೆ ಭಾರತದ ಕೊಡುಗೆಯೇ ಶೇ.46ರಷ್ಟಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕಿನ ತಜ್ಞರ ಪ್ರಕಾರ, ಭಾರತದ ಡಿಜಿಟಲ್ ಪಾವತಿ ವಲಯವು ಮೌಲ್ಯ ಮತ್ತು ಪ್ರಮಾಣ ಎರಡರಲ್ಲೂ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ. ಅನೇಕ ಕಾರಣಗಳಿಂದಾಗಿ ಇದೊಂದು ಗಮನಾರ್ಹ ಸಾಧನೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಅದರ ಪರಿಣಾಮವೇ ಈಗಿನ ಈ ಸಾಧನೆ. ನೋಟ್ ಬ್ಯಾನ್ ಮಾಡಿದ ಬಳಿಕವಂತೂ ದೇಶದಲ್ಲಿ ಪರೋಕ್ಷವಾಗಿ ಡಿಜಿಟಲ್ ಕ್ರಾಂತಿಯೇ ಶುರುವಾಗಿತ್ತು. ದೊಡ್ಡ ಮೊತ್ತದ ಕರೆನ್ಸಿ ನೋಟುಗಳು ಮರೆಗೆ ಸರಿದಾಗ ಸಹಜವಾಗಿಯೇ ದೊಡ್ಡ ಮೊತ್ತದ ವ್ಯಾಪಾರ ವಹಿವಾಟುಗಳು ಡಿಜಿಟಲ್ ಮೂಲಕ ಆಗತೊಡಗಿದವು. ಇದರ ಜತೆಗೆ ಆದಾಯ ತೆರಿಗೆ ಇಲಾಖೆ ಮತ್ತು ಜಿಎಸ್‌ಟಿ ವ್ಯವಸ್ಥೆಯೂ ದೊಡ್ಡ ಮೊತ್ತದ ವಹಿವಾಟುಗಳ ಮೇಲೆ ಹೆಚ್ಚಿನ ನಿಗಾ ಇಟ್ಟಿತು. ಕರೆನ್ಸಿ ವಹಿವಾಟಿನ ಮೂಲಕ ಯಾವುದೆಲ್ಲ ತೆರಿಗೆ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿತ್ತೋ ಅದೆಲ್ಲವೂ ಡಿಜಿಟಲ್ ಪಾವತಿಯಿಂದಾಗಿ ತೆರಿಗೆ ವ್ಯಾಪ್ತಿಯೊಳಗೆ ಬಂದವು. ಇದು ದೇಶದ ತೆರಿಗೆ ಸಂಗ್ರಹಕ್ಕೂ ಗಣನೀಯ ಕೊಡುಗೆ ನೀಡಿದ್ದನ್ನು ಮರೆಯುವಂತಿಲ್ಲ.
ಇದೇನೂ ಸುಲಭದ ನಡಿಗೆಯಾಗಿರಲಿಲ್ಲ. ಭಾರತದಲ್ಲಿ ಬಡವರು, ಅನಕ್ಷರಸ್ಥರೇ ಹೆಚ್ಚಿದ್ದಾರೆ. ಅವರೆಲ್ಲ ನೋಟು ಬಳಸದೆ ಡಿಜಿಟಲ್ ವ್ಯವಹಾರ ನಡೆಸಲು ಹೇಗೆ ಸಾಧ್ಯ ಎಂಬ ಬಗ್ಗೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ದೇಶದ ಸಾಮಾನ್ಯ ಜನರೇ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ವಹಿವಾಟಿಗೆ ಇಳಿದರು. ಎಳನೀರು ಮಾರುವವರು, ಚಪ್ಪಲಿ ಹೊಲಿಯುವವರು, ರಸ್ತೆ ಬದಿ ತರಕಾರಿ ಮಾರುವವರೂ ಈಗ QR ಕೋಡ್ ಬಳಸಿ ಡಿಜಿಟಲ್ ಮೂಲಕವೇ ವ್ಯವಹರಿಸುತ್ತಿದ್ದಾರೆ. ಡಿಜಿಟಲ್ ಪಾವತಿಯಿಂದ ಅನುಕೂಲಗಳು ಸಾಕಷ್ಟಿವೆ. ಇದು ಸುಲಭ ಹಾಗೂ ಬಹುದೂರದಲ್ಲಿರುವವರ ಪಾವತಿಯನ್ನೂ ಇದರಿಂದ ಮಾಡಬಹುದು. ಇದರಲ್ಲಿ ಭದ್ರತೆ ಹೆಚ್ಚು. ಸರ್ಕಾರಿ ಯೋಜನೆಗಳು ಫಲಾನುಭವಿಗಳನ್ನು ನೇರವಾಗಿ ತಲುಪುತ್ತಿರುವುದು ಈ ಪಾವತಿ ಮೂಲಕವೇ ಆಗಿವೆ. ತೆರಿಗೆ ವಂಚನೆ ತಡೆಗಟ್ಟಲು ಸಾಧ್ಯವಾಗಿದೆ. ಭವಿಷ್ಯದಲ್ಲಿ ಎಲ್ಲ ಹಣದ ವಹಿವಾಟುಗಳೂ ಡಿಜಿಟಲ್ ಆಗಿಬಿಡುವ ಸಂಭವ ಇರುವುದರಿಂದ, ನಾವು ಆ ಹಾದಿಯಲ್ಲಿ ಶೀಘ್ರ ಹೆಜ್ಜೆ ಹಾಕುತ್ತಿದ್ದೇವೆ ಎಂದು ಹೆಮ್ಮೆ ಪಟ್ಟುಕೊಳ್ಳಬಹುದು.
ಆದರೆ ಇದರಲ್ಲಿರುವ ಕೆಲವು ಅನನುಕೂಲಗಳು ಮತ್ತು ವಂಚನೆಯ ಸಾಧ್ಯತೆಗಳೂ ಇದ್ದು, ಇವನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು. ಆನ್‌ಲೈನ್ ವ್ಯವಹಾರದಲ್ಲಿ ಪರಿಣತರಲ್ಲದವರನ್ನು ಇದರಲ್ಲಿ ಮೋಸಗೊಳಿಸಬಹುದಾಗಿದೆ. ಹಾಗೆಯೇ ಡಿಜಿಟಲ್ ಪಾವತಿಯ ಮೇಲೆ ಸೇವಾ ಶುಲ್ಕ ವಿಧಿಸುತ್ತಿರುವುದು ಕೂಡ ಸರಿಯಲ್ಲ. ಒಂದು ಕಡೆ ನಗದಿನ ಬದಲು ಡಿಜಿಟಲ್ ವಹಿವಾಟು ಉತ್ತೇಜಿಸುವ ಸರ್ಕಾರ, ಇನ್ನೊಂದು ಕಡೆ ಶುಲ್ಕದ ಬರೆ ಹಾಕುವುದು ಸರಿಯಲ್ಲ. ಡಿಜಿಟಲ್ ಪಾವತಿಯನ್ನು ಸರ್ಕಾರ ಶುಲ್ಕ ಮುಕ್ತಗೊಳಿಸಬೇಕು. ಡಿಜಿಟಲ್ ಪಾವತಿ ಒದಗಿಸುವ ಮಧ್ಯವರ್ತಿಗಳನ್ನು ಬೇಕಿದ್ದರೆ ನಿಯಂತ್ರಿಸುವ ಕಾಯಿದೆಗಳನ್ನು ರೂಪಿಸಲಿ, ಆದರೆ ಸಣ್ಣ ಪ್ರಮಾಣದ ಡಿಜಿಟಲ್ ಪಾವತಿಗೂ ಶುಲ್ಕ ತೆರುವಂತಾದರೆ ಅದು ಸಾಮಾನ್ಯನಿಗೆ ದುಬಾರಿಯಾಗುತ್ತದೆ.
ಕ್ರಿಕೆಟ್
WTC Final : ಭಾರತದ ಗೆಲುವಿಗೆ ಇನ್ನೂ ಬೇಕು 280 ರನ್, ಕೌತುಕದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್
ಭಾರತ ತಂಡದ ಬಳಿ ಏಳು ವಿಕೆಟ್ಗಳು ಉಳಿದಿದ್ದು, ಕೊನೇ ದಿನದ 90 ಓವರ್ಗಳಲ್ಲಿ ವಿಕೆಟ್ ಉಳಿಸಿಕೊಂಡು ಗೆಲುವು ಸಾಧಿಸಬೇಕಾಗಿದೆ.
ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಪಂದ್ಯದ ನಾಲ್ಕನೇ ದಿನದ ಅಂತ್ಯಕ್ಕೆ ಎರಡನೇ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡುತ್ತಿರುವ ಭಾರತ ತಂಡ 3 ವಿಕೆಟ್ ಕಳೆದಕೊಂಡು 164 ರನ್ ಬಾರಿಸಿದೆ. ಸ್ಪೆಷಲಿಸ್ಟ್ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ (44) ಹಾಗೂ ಅಜಿಂಕ್ಯ ರಹಾನೆ (20 ರನ್) ಕ್ರೀಸ್ನಲ್ಲಿ ಉಳಿದುಕೊಂಡಿದ್ದಾರೆ. ಭಾರತ ತಂಡದ ಗೆಲುವಿಗೆ 280 ರನ್ ಬೇಕಾಗಿದ್ದು ಕೊನೇ ದಿನ 90 ಓವರ್ಗಳು ಬಾಕಿ ಉಳಿದಿವೆ. ಅತ್ತ ಆಸ್ಟ್ರೇಲಿಯಾ ತಂಡವು ಭಾರತದ ಇನ್ನುಳಿದ ಏಳು ವಿಕೆಟ್ಗಳನ್ನು ಉರುಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಂಡಿದೆ.
Stumps called with Kohli, Rahane keeping India in the hunt! 👊
— ICC (@ICC) June 10, 2023
Follow the #WTC23 Final 👉 https://t.co/wJHUyVnX0r pic.twitter.com/Z9yMlvCLYA
ಇಲ್ಲಿನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎರಡನೇ ಇನಿಂಗ್ಸ್ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 8 ವಿಕೆಟ್ ನಷ್ಟಕ್ಕೆ 270 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. 444 ರನ್ಗಳ ಗುರಿಯೊಂದಿಗೆ ಬ್ಯಾಟ್ ಮಾಡಿದ ಭಾರತ ತಂಡ ಮೊದಲ ವಿಕೆಟ್ಗೆ 41 ರನ್ ಬಾರಿಸಿತು. ರೋಹಿತ್ ಶರ್ಮಾ (43) ಹಾಗೂ ಶುಭಮನ್ ಗಿಲ್ (18) ಭರವಸೆ ಮೂಡಿಸಿದರು. ಆದರೆ, ಮೂರನೇ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿನ ಬಳಿಕ ಶುಭ್ಮನ್ ಗಿಲ್ ನಿರಾಸೆಯಿಂದ ಪೆವಿಲಿಯನ್ಗೆ ಮರಳಬೇಕಾಯಿತು. ಬೋಲ್ಯಾಂಡ್ ಅವರ ಎಸೆತಕ್ಕೆ ಗ್ರೀನ್ಗೆ ಕ್ಯಾಚ್ ನೀಡಿದ ಅವರು ಬೇಸರದಿಂದ ಹೊರಕ್ಕೆ ನಡೆದರು.
That's Stumps on Day 4 of #WTC23 Final!
— BCCI (@BCCI) June 10, 2023
We have an action-packed Day 5 in store tomorrow! #TeamIndia reach 164/3 and need 280 more runs to win, with @imVkohli & @ajinkyarahane88 at the crease 👌🏻👌🏻
Scorecard ▶️ https://t.co/0nYl21oYkY pic.twitter.com/0frfkWrEp0
ನಂತರ ರೋಹಿತ್ ಮತ್ತು ಚೇತೇಶ್ವರ್ ಪೂಜಾರ (27) 77 ಎಸೆತಗಳಲ್ಲಿ 51 ರನ್ ಗಳಿಸಿದರು. ನಂತರ ಇಬ್ಬರೂ ಬ್ಯಾಟ್ಸಮನ್ಗಳು ಕೆಲವೇ ನಿಮಿಷಗಳಲ್ಲಿ ಔಟಾಗಿದ್ದಿಂದ ಭಾರತದ ಪ್ರಗತಿಗೆ ಅಡ್ಡಿಯಾಯಿತು. ರೋಹಿತ್ ಸ್ವೀಪ್ ಮಾಡಲು ಹೋಗಿ ನೇಥನ್ ಲಯಾನ್ ಎಸೆತಕ್ಕೆ ಎಲ್ಬಿಡಬ್ಲ್ಯು ಆಡದರೆ, ಕಮಿನ್ಸ್ ಎಸೆತಕ್ಕೆ ಅನಗತ್ಯ ರನ್ ಬಾರಿಸಲು ಮುಂದಾದ ಪೂಜಾರ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಾಲ್ಕನೇ ವಿಕೆಟ್ಗೆ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಆಗಿರುವ ಉಂಟಾದ ಹಾನಿಯನ್ನು ಸರಿಪಡಿಸಿದ್ದಾರೆ. ಜೊತೆಯಾಟವು 50 ರನ್ಗಳ ಗಡಿ ದಾಟಿದೆ. ಇದೀಗ ಡಬ್ಲ್ಯುಟಿಸಿ ಫೈನಲ್ ಪಂದ್ಯವನ್ನು ಗೆಲ್ಲಲು ಭಾರತವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ವಿ ರನ್ ಚೇಸ್ ಮಾಡಿದ ದಾಖಲೆಯನ್ನು ಮುರಿಯಬೇಕಾಗಿದೆ.
50-run partnership comes up between @imVkohli and @ajinkyarahane88.
— BCCI (@BCCI) June 10, 2023
Live – https://t.co/0nYl21oYkY… #WTC23 pic.twitter.com/ZWzhAsIeGj
ಇದನ್ನೂ ಓದಿ: WTC Final 2023 : ಲೆಜೆಂಡ್ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ
ಅಲೆಕ್ಸ್ ಕ್ಯೇರಿ ಅರ್ಧ ಶತಕ
ಮೂರನೇ ದಿನದಾಟದ ಅಂತ್ಯಕ್ಕೆ 123 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ, ನಾಲ್ಕನೇ ದಿನದ ಮೊದಲ ಸೆಶನ್ನಲ್ಲಿ ವಿಕೆಟ್ಗಳನ್ನು ಕಳೆದುಕೊಂಡಿತು. ಮರ್ನಸ್ ಲಾಬುಶೇನ್ ಆರಂಭದಲ್ಲಿಯೇ ವಿಕೆಟ್ ಒಪ್ಪಿಸಿದರು. ಆದರೆ ಏಳನೆ ವಿಕೆಟ್ಗೆ ಅಲೆಕ್ಸ್ ಕ್ಯೇರಿ (ಅಜೇಯ 66) ಹಾಗೂ ಮಿಚೆಲ್ ಸ್ಟಾರ್ಕ್ (41) 93 ರನ್ ಜತೆಯಾಟ ನೀಡುವ ಮೂಲಕ ಭಾರತ ತಂಡಕ್ಕೆ ದೊಡ್ಡ ಗುರಿಯನ್ನು ಒಡ್ಡಲು ನೆರವಾದರು. ಅದಕ್ಕಿಂತ ಮೊದಲು ಸ್ಮಿತ್ (34) ಹಾಗೂ ಟ್ರಾವಿಡ್ ಹೆಡ್ (18) ಆಸ್ಟ್ರೇಲಿಯಾ ತಂಡಕ್ಕೆ ಸಣ್ಣ ಕೊಡುಗೆ ಕೊಟ್ಟರು.
ದೇಶ
Narendra Modi: 14 ಪ್ರಧಾನಿಗಳು ಮಾಡಿದ್ದ ಸಾಲ 55 ಲಕ್ಷ ಕೋಟಿ ರೂ., ಮೋದಿ ಒಬ್ಬರೇ ಮಾಡಿದ ಸಾಲವೆಷ್ಟು?
Narendra Modi: ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಅವರು ಸುದ್ದಿಗೋಷ್ಠಿ ನಡೆಸಿ, ನರೇಂದ್ರ ಮೋದಿ ಅವರ ಅವಧಿಯಲ್ಲಿ ಮಾಡಲಾದ ಸಾಲದ ಮಾಹಿತಿಯನ್ನು ನೀಡಿದ್ದಾರೆ. ಹಾಗೆಯೇ, ಕಳೆದ ಒಂಬತ್ತು ವರ್ಷದಲ್ಲಿ ಮಾಡಿದ ಸಾಲವು ಎಷ್ಟುಪಟ್ಟು ಹೆಚ್ಚಾಗಿದೆ ಎಂಬುದನ್ನೂ ವಿವರಿಸಿದ್ದಾರೆ. ಅವರು ನೀಡಿದ ಮಾಹಿತಿಯ ಪ್ರಮುಖಾಂಶ ಹೀಗಿದೆ…
ನವದೆಹಲಿ: ಸ್ವಾತಂತ್ರ್ಯದ ಬಳಿಕ ದೇಶವನ್ನು ಮುನ್ನಡೆಸಿದ ಪ್ರಧಾನಿಗಳು ಮಾಡಿದ ಸಾಲ ಹಾಗೂ ನರೇಂದ್ರ ಮೋದಿ ಅವರ ಅವಧಿಯಲ್ಲಿ ಮಾಡಲಾದ ಸಾಲದ ಅಂಕಿ-ಅಂಶವನ್ನು ಇಟ್ಟುಕೊಂಡು ಮೋದಿ ಅವರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ನರೇಂದ್ರ ಮೋದಿ (Narendra Modi) ಅವರು ಆಡಳಿತ ನಡೆಸುತ್ತಿರುವ 9 ವರ್ಷದ ಅವಧಿಯಲ್ಲಿ ದೇಶದ ಸಾಲ ಮೂರು ಪಟ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಅವರು ಸುದ್ದಿಗೋಷ್ಠಿ ನಡೆಸಿ ಮೋದಿ ಅವಧಿಯಲ್ಲಾದ ಸಾಲದ ಕುರಿತು ಮಾಹಿತಿ ನೀಡಿದರು. “2014ರಲ್ಲಿ ದೇಶದ ಸಾಲ 55 ಲಕ್ಷ ಕೋಟಿ ರೂಪಾಯಿ ಇತ್ತು. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಸಾಲ ಮೂರು ಪಟ್ಟು ಹೆಚ್ಚಾಗಿದೆ. ಸದ್ಯ, ದೇಶದ ಸಾಲ 155 ಲಕ್ಷ ಕೋಟಿ ರೂಪಾಯಿ ಇದೆ. ಒಂಬತ್ತು ವರ್ಷದಲ್ಲಿಯೇ 100 ಲಕ್ಷ ಕೋಟಿ ರೂಪಾಯಿ ಸಾಲ ಮಾಡಲಾಗಿದೆ” ಎಂದು ಅಂಕಿ-ಅಂಶಗಳ ಸಮೇತ ಕುಟುಕಿದರು.
“ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರವನ್ನು ತೆಗಳುತ್ತಿದ್ದರು. ಭ್ರಷ್ಟ, ಅಸಮರ್ಥ ಎಂದೆಲ್ಲ ಟೀಕಿಸುತ್ತಿದ್ದರು. ಆದರೆ, ಒಂಬತ್ತು ವರ್ಷದಲ್ಲಿ ದೇಶದ ಸಾಲದ ಪ್ರಮಾಣ ಏರಿಕೆಯಾಗಿದ್ದು ನೋಡಿದರೆ, ಟೀಕೆಗಳು ಮೋದಿ ಅವರಿಗೇ ಹೆಚ್ಚು ಸಮಂಜಸ ಎನಿಸುತ್ತವೆ. ದೇಶದ ಆರ್ಥಿಕತೆ ಹಾಳು ಮಾಡಿದ್ದು, ನಿರುದ್ಯೋಗ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಹಣದುಬ್ಬರ ಹೆಚ್ಚಳ ಸೇರಿ ಹಲವು ದಿಸೆಯಲ್ಲಿ ದೇಶವನ್ನು ಮೋದಿ ಸರ್ಕಾರ ಹಾಳುಮಾಡಿದೆ. ಎಲ್ಲ ನಕಾರಾತ್ಮಕ ಏರಿಕೆಗಳು ಎಚ್ಚರಿಕೆಯ ಗಂಟೆಗಳಾಗಿವೆ” ಎಂದು ಹೇಳಿದರು.
ಇದನ್ನೂ ಓದಿ: Loksabha 2024: ಹೇ ಕೂತ್ಕೊಳಪ್ಪ, ಮೋದಿ ಸೋತಾಗ ಗೊಬ್ಬರದ ರೇಟ್ ಕಡಿಮೆ ಮಾಡ್ತೀವಿ: ಅಭಿಮಾನಿಗೆ ರೇಗಿದ ಸಿಎಂ ಸಿದ್ದರಾಮಯ್ಯ
“ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕದ 67 ವರ್ಷದಲ್ಲಿ 14 ಪ್ರಧಾನಿಗಳು 55 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದರು. ಆದರೆ, ಮೋದಿ ಅವರೊಬ್ಬರೇ 100 ಕೋಟಿ ರೂಪಾಯಿ ಸಾಲ ಮಾಡಿರುವುದು ಅಪಾಯಕಾರಿ ಸಂಗತಿಯಾಗಿದೆ. ಸದ್ಯದ ಆರ್ಥಿಕ ಬೆಳವಣಿಗೆಯ ಕುರಿತ ಮಾಹಿತಿಯು ಹೆಡ್‌ಲೈನ್ ಮ್ಯಾನೇಜ್‌ಮೆಂಟ್ ರೀತಿಯೇ ಆಗಿದೆ. ಇದರಿಂದ ದೇಶದ ವಿತ್ತೀಯ ಸ್ಥಿತಿ ಸುಧಾರಣೆಯಾಗುವುದಿಲ್ಲ” ಎಂದು ತಿಳಿಸಿದರು.
-
ಪ್ರಮುಖ ಸುದ್ದಿ2 hours ago
Horoscope Today: ಈ ರಾಶಿಯವರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಎಚ್ಚರ ಇರಲಿ!
-
ಆರೋಗ್ಯ48 mins ago
Health Tips: ಮೊಸರಿನ ಜೊತೆಗೆ ಈ ಆಹಾರಗಳನ್ನು ತಿಂದರೆ ಅಪಾಯ ಕಟ್ಟಿಟ್ಟಬುತ್ತಿ!
-
ಕ್ರಿಕೆಟ್22 hours ago
Viral News: ಲಬುಶೇನ್ರನ್ನು ನಿದ್ರೆಯಿಂದ ಬಡಿದೆಬ್ಬಿಸಿದ ಸಿರಾಜ್; ಸಖತ್ ಮಜವಾಗಿದೆ ವಿಡಿಯೊ
-
ಕ್ರಿಕೆಟ್21 hours ago
Viral News: ಶುಭಮನ್ ಗಿಲ್ಗೆ ಪ್ರಪೋಸ್ ಮಾಡಿದ ಯುವತಿ; ಸಾರಾ ತೆಂಡೂಲ್ಕರ್ ರಿಯ್ಯಾಕ್ಷನ್ ಹೇಗಿತ್ತು?
-
ದೇಶ18 hours ago
Tipu Sultan: ಬುಲ್ಡೋಜರ್ ಮೂಲಕ ಟಿಪ್ಪು ಸುಲ್ತಾನ್ ಸ್ಮಾರಕ ನೆಲಸಮ, ವ್ಯಾಪಕ ಬಂದೋಬಸ್ತ್
-
ಕ್ರಿಕೆಟ್19 hours ago
WTC Final 2023: ರದ್ದಾಗುವ ಭೀತಿಯಲ್ಲಿದೆ ವಿಶ್ವ ಟೆಸ್ಟ್ ಫೈನಲ್ ಪಂದ್ಯ!
-
ಕರ್ನಾಟಕ17 hours ago
BY Vijayendra: ಧರಣಿ ಕುಳಿತ ಶಾಸಕ ಬಿ.ವೈ. ವಿಜಯೇಂದ್ರ! ತಾರಕಕ್ಕೇರಿದ ಮರ ಸಾಗಾಟ ಗಲಾಟೆ
-
South Cinema19 hours ago
Adipurush Movie: ಮುಟ್ಟಾದವರು ಆದಿಪುರುಷ್ ಸಿನ್ಮಾ ನೋಡೋದು ಬೇಡ! ರಾಹುಕಾಲದಲ್ಲಿ ಶೋ ಬೇಡ್ವೇ ಬೇಡ