horoscope today read your daily horoscope predictions for may 19, 2023Horoscope Today : ಶನೈಶ್ಚರ ಜಯಂತಿಯ ಈ ದಿನ ಯಾರಿಗೆಲ್ಲಾ ಶನಿ ಶುಭ ಫಲ ನೀಡಿದ್ದಾನೆ ನೋಡಿ - Vistara News

ಪ್ರಮುಖ ಸುದ್ದಿ

Horoscope Today : ಶನೈಶ್ಚರ ಜಯಂತಿಯ ಈ ದಿನ ಯಾರಿಗೆಲ್ಲಾ ಶನಿ ಶುಭ ಫಲ ನೀಡಿದ್ದಾನೆ ನೋಡಿ

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದಿನ ಪಂಚಾಂಗ (19-05-2023)

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ.

ತಿಥಿ: ಅಮಾವಾಸ್ಯೆ 21:22 ವಾರ: ಶುಕ್ರವಾರ
ನಕ್ಷತ್ರ: ಭರಣಿ 07:28 ಯೋಗ: ಶೋಭನ 18:14
ಕರಣ: ಚತುಷ್ಪಾದ 09:28 ಇಂದಿನ ವಿಶೇಷ: ಬಾದಾಮಿ ಅಮಾವಾಸ್ಯೆ, ಶನೈಶ್ಚರ ಜಯಂತಿ
ಅಮೃತಕಾಲ: ಶನಿವಾರ ಮುಂಜಾನೆ 05 ಗಂಟೆ 35 ನಿಮಿಷದಿಂದ 07 ಗಂಟೆ 13 ನಿಮಿಷದವರೆಗೆ.

ಸೂರ್ಯೋದಯ : 05:54 ಸೂರ್ಯಾಸ್ತ : 06:39

ರಾಹುಕಾಲ : ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Horoscope Today)

Horoscope Today

ಮೇಷ: ಶ್ರಮದ ಜೀವಕೆ ವಿಶ್ರಾಂತಿಯು ದೊರೆಯುವುದು. ಈ ಹಿಂದೆ ಮಾಡಿದ ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ ಲಾಭ. ಉದ್ಯೋಗದ ಸ್ಥಳದಲ್ಲಿ ಸಹಕಾರ ಸಿಗಲಿದೆ. ಸಭೆ- ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 6

Horoscope Today

ವೃಷಭ: ಒತ್ತಡದಿಂದ ಹೊರ ಬರಲು ವ್ಯಸನಗಳಿಗೆ ಬಲಿಯಾಗುವುದು ಬೇಡ. ಅಧ್ಯಾತ್ಮದ ಹಾದಿ ಸಮಾಧಾನ ನೀಡುವುದು. ಕುಟುಂಬದ ಆಪ್ತರು, ಸ್ನೇಹಿತರಿಂದ ಆರ್ಥಿಕ ಸಹಾಯ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಮಿಥುನ: ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದ ಇತರರನ್ನು ಆಕರ್ಷಿಸುತ್ತೀರಿ. ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಎಂದೂ ಇರದ ಉತ್ಸಾಹ, ನೆಮ್ಮದಿ, ಸಂತೋಷ ಇಂದು ನಿಮ್ಮದಾಗುವುದು. ಆರೋಗ್ಯ ಪರಿಪೂರ್ಣ. ಬದುಕಿನಲ್ಲಿ ಹೊಸ ಭರವಸೆ ಮೂಡಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಕಟಕ: ಅನೇಕ ಒತ್ತಡಗಳಿಂದ ಮುಕ್ತರಾಗುವಿರಿ. ಸಾಲದ ಮರುಪಾವತಿಯಾಗಿ ಆರ್ಥಿಕವಾಗಿ ಬಲಗೊಳ್ಳುವಿರಿ. ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಸಂಗಾತಿಯ ಮಧುರ ಮಾತುಗಳು ಕುಟುಂಬದಲ್ಲಿ ಭರವಸೆಯನ್ನು ಮೂಡಿಸಲಿದೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಸಿಂಹ: ಕುಟುಂಬದ ಆಪ್ತರಿಂದ ಸಹಾಯ ಸಹಕಾರ ಸಿಗಲಿದೆ. ವ್ಯಾಪಾರದಲ್ಲಿ ಪ್ರಗತಿ. ಭರವಸೆಯ ಹೊಸ ಅವಕಾಶಗಳು ಸಿಗಲಿದೆ. ನಿಮ್ಮನ್ನು ದ್ವೇಷಿಸುವ ಜನರೇ ನಿಮ್ಮ ಸ್ನೇಹಿತರಾಗಿ ಪರಿವರ್ತನೆ ಆಗುವರು. ಅಂದುಕೊಂಡ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಕನ್ಯಾ: ಉತ್ಸಾಹದಿಂದ ಇರುವಿರಿ. ವ್ಯಾಪಾರದಲ್ಲಿ ಪ್ರಗತಿ. ಹಣಕಾಸು ಪ್ರಗತಿ ಉತ್ತಮ. ಕುಟುಂಬದಲ್ಲಿ ಪರಸ್ಪರರ ಮಧ್ಯೆ ಸಾಮರಸ್ಯ ಮೂಡಲಿದೆ‌. ಆರೋಗ್ಯ ಉತ್ತಮ. ಉದ್ಯೋಗದಲ್ಲಿ ಯಶಸ್ಸು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಅತಿಯಾದ ಒತ್ತಡದಿಂದ ಮಾನಸಿಕ ಚಿಂತೆ ಕಾಡಲಿದೆ. ಆರ್ಥಿಕ ಪ್ರಗತಿ ಸಾಧಾರಣ. ವಿನಾಕಾರಣ ಅಪರಿಚಿತರೊಂದಿಗೆ ಕಲಹವಾಗುವ ಸಾಧ್ಯತೆ. ಮಾತಿನ ಮೇಲೆ ಹಿಡಿತವಿರಲಿ. ಉದ್ಯೋಗದಲ್ಲಿ ಪ್ರಗತಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವೃಶ್ಚಿಕ: ಒತ್ತಡದ ಮಧ್ಯೆಯೂ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ರಹಸ್ಯ ಕಾರ್ಯಗಳು ಸಹ ಯಶಸ್ಸನ್ನು ನೀಡಲಿವೆ. ಮಾತುಗಳು ಮಥಿಸಿ ಕಲಹ ಸಂಬಂಧಿಗಳ ಮಧ್ಯೆ ಬಿರುಕು ಮೂಡುವ ಸಾಧ್ಯತೆ. ಕೌಶಲ್ಯಕ್ಕ ತಕ್ಕ ಪ್ರತಿಫಲ ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಧನಸ್ಸು: ನಿಮ್ಮ ಮಾತಿಗೆ ಬೆಲೆ ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಕಾಣುವಿರಿ. ಆಪ್ತರ ಬೆಂಬಲ ಸಿಗಲಿದೆ. ಇತರರ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವಿರಿ. ದಿನದ ಕೊನೆಯಲ್ಲಿ ಯಾರೊಂದಿಗೂ ಮಾತಿಗಿಳಿದು ಮನಸ್ಸು ಕೆಡಿಸಿಕೊಳ್ಳುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮಕರ: ಹಿಂದೆ ಮಾಡಿರುವ ಧನ ಸಹಾಯ ಇಂದು ತಮಗೆ ಮರಳುವ ಸಾಧ್ಯತೆ. ಅಲ್ಪಸಮಯದ ಕೋಪ ನಿಮ್ಮ ಮನಸ್ಥಿತಿ ಹಾಳುಮಾಡುವ ಸಾಧ್ಯತೆ. ಇಂದು ಶಾಂತವಾಗಿರಿ. ಸೂಕ್ತ ವ್ಯಕ್ತಿಗಳ ಮಾರ್ಗದರ್ಶನ ಸಿಗಲಿದೆ. ಉದ್ಯೋಗದಲ್ಲಿ ಸ್ವಲ್ಪ ಮಟ್ಟಿಗೆ ಒತ್ತಡ ಉಂಟಾಗುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಕುಂಭ: ಮನರಂಜನೆಯಿಂದಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಸಹಕಾರ ಸಿಗಲಿದೆ. ಮನೆಯಲ್ಲಿ ಹಿರಿಯರೊಂದಿಗೆ ಮಾತಿಗೆ ಮಾತು ಬೆಳೆಸಬೇಡಿ. ಮೌನವಾಗಿರುವುದು ಉತ್ತಮ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಮೀನ: ಕೆಲಸದಲ್ಲಿ ಹಿರಿಯರಿಂದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ನಿಮ್ಮ ಏಕಾಗ್ರತೆಗೆ ತೊಂದರೆ ತರಬಹುದು. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯ ಉತ್ತಮ. ಸಂಗಾತಿಯಿಂದ ಶುಭ ಸುದ್ದಿ ಸಿಗುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಇದನ್ನೂ ಓದಿ : ಶುಕ್ರ ಗ್ರಹ ಲಗ್ನದಲ್ಲಿದ್ದರೆ ಉತ್ತಮ ಆರೋಗ್ಯ, ಉಳಿದ ಮನೆಯಲ್ಲಿದ್ದರೆ ಯಾವೆಲ್ಲಾ ಫಲ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Shani Louk Photo: ಹಮಾಸ್‌ ಒತ್ತೆಯಾಳು ಇಸ್ರೇಲಿ ಮಹಿಳೆಯ ನಗ್ನ ದೇಹದ ಫೋಟೋಗೆ ಪ್ರಶಸ್ತಿ; ಆಕ್ರೋಶ; ಉಗ್ರನೇ ತೆಗೆದ ಫೋಟೋನಾ?

Shani Louk Photo: ಬಹುತೇಕ ಪೂರ್ಣ ಬೆತ್ತಲೆಯಾಗಿರುವ ಇಸ್ರೇಲಿ ಮಹಿಳೆ ಶಾನಿ ಲೌಕ್ ಅವರ ದೇಹವನ್ನು ಜೀಪಿನಲ್ಲಿ ಹಾಕಿ ಮೆರವಣಿಗೆ ಮಾಡುತ್ತಿರುವ ಕರುಳು ಕಿವುಚುವಂಥ ಫೋಟೋವು ಪ್ರಶಸ್ತಿ ಪಡೆದ ಚಿತ್ರಗಳಲ್ಲಿ ಒಂದಾಗಿದೆ.

VISTARANEWS.COM


on

shani louk photo hamas terrorists
Koo

ನ್ಯೂಯಾರ್ಕ್‌: ಹಮಾಸ್‌ ಉಗ್ರರಿಂದ (Hamas Terrorists) ಹತ್ಯೆಗೀಡಾದ ಯಹೂದಿ ಮಹಿಳೆ ಶಾನಿ ಲೌಕ್‌ (Shani Louk) ಬೆತ್ತಲೆ ದೇಹವನ್ನು ಗಾಜಾದ (Gaza strip) ಬೀದಿಗಳಲ್ಲಿ ಹಮಾಸ್ ಭಯೋತ್ಪಾದಕರು ಮೆರವಣಿಗೆ ಮಾಡುತ್ತಿರುವ ಚಿತ್ರಕ್ಕೆ ಫೋಟೋ-ಆಫ್-ದಿ-ಇಯರ್ ಬಹುಮಾನ (Photo Award) ನೀಡಲಾಗಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿದೆ.

ಬಹುತೇಕ ಪೂರ್ಣ ಬೆತ್ತಲೆಯಾಗಿರುವ ಇಸ್ರೇಲಿ ಮಹಿಳೆ ಶಾನಿ ಲೌಕ್ ಅವರ ದೇಹವನ್ನು ಜೀಪಿನಲ್ಲಿ ಹಾಕಿ ಮೆರವಣಿಗೆ ಮಾಡುತ್ತಿರುವ ಕರುಳು ಕಿವುಚುವಂಥ ಫೋಟೋವು ಪ್ರಶಸ್ತಿ ಪಡೆದ ಚಿತ್ರಗಳಲ್ಲಿ ಒಂದಾಗಿದೆ. ಇದನ್ನು ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್‌ಗಾಗಿ ತೆಗೆಯಲಾಗಿತ್ತು. ಯುಎಸ್ ಮೂಲದ ಡೊನಾಲ್ಡ್ ಡಬ್ಲ್ಯೂ. ರೆನಾಲ್ಡ್ಸ್ ಜರ್ನಲಿಸಂ ಇನ್ಸ್ಟಿಟ್ಯೂಟ್ ಈ ಸ್ಪರ್ಧೆಯನ್ನು ನಡೆಸುತ್ತಿದ್ದು, ಪ್ರಶಸ್ತಿಯನ್ನು ನೀಡುತ್ತದೆ.

ʼಪಿಕ್ಚರ್ಸ್ ಆಫ್ ದಿ ಇಯರ್ ಇಂಟರ್ನ್ಯಾಷನಲ್ʼ ಪ್ರಶಸ್ತಿ ವಿಭಾಗದಲ್ಲಿ ಇದು ಮೊದಲ ಸ್ಥಾನವನ್ನು ಪಡೆದಿದೆ. ಆದರೆ ಈ ಪ್ರಶಸ್ತಿ ಘೋಷಣೆಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ಎದುರಾಗಿದೆ. ಜನ ಲೌಕ್ ಅವರ ಫೋಟೋವನ್ನು “ಯಹೂದಿ ಮಹಿಳೆಯ ಬದುಕಿನ ಘನತೆಗೆ ಮಾಡಿದ ಅವಮಾನ” ಎಂದು ದೂಷಿಸಿದ್ದಾರೆ.

ಶಾನಿ ಲೌಕ್‌ 22 ವರ್ಷ ವಯಸ್ಸಿನ ಜರ್ಮನ್-ಇಸ್ರೇಲಿ ಮಹಿಳೆಯಾಗಿದ್ದು, ಹಮಾಸ್‌ ನಡೆಸಿದ ಕಳೆದ ವರ್ಷದ ಅಕ್ಟೋಬರ್ 7ರ ದಾಳಿಯ ಸಂದರ್ಭದಲ್ಲಿ ಉಗ್ರರ ಕೈಗೆ ಸಿಕ್ಕಿಬಿದ್ದಿದ್ದರು. ಅವರನ್ನು ಅಪಹರಿಸಿ ಗಾಜಾ ಪಟ್ಟಿಗೆ ಕರೆದೊಯ್ಯಲಾಗಿತ್ತು. ಪ್ಯಾಲೇಸ್ಟಿನಿಯನ್ ಉಗ್ರರು ಈಕೆಯನ್ನು ಗಾಯಗೊಳಿಸಿ, ತೆರೆದ ಜೀಪಿನಲ್ಲಿ ಬೋರಲು ಮಲಗಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದರು. ಈಕೆಯ ಮೈಯ ಮೇಲಿದ್ದ ಉಡುಪು ಬಹುತೇಕ ಹರಿದು ಆಕೆ ವಿವಸ್ತ್ರಳಾಗಿದ್ದು, ಆಕೆಯ ಮೇಲೆ ಹಮಾಸ್‌ ಉಗ್ರನೊಬ್ಬ ಕುಳಿತಿದ್ದುದು ಕಂಡುಬಂದಿತ್ತು. ಈ ಫೋಟೋಗೆ ಪ್ರಶಸ್ತಿ ದೊರೆತಿದೆ.

“ಈ ಫೋಟೋವನ್ನು ತೆಗೆದ ವ್ಯಕ್ತಿಯು ನಾಗರಿಕರನ್ನು ಹತ್ಯೆ ಮಾಡುವ, ಚಿತ್ರಹಿಂಸೆ ನೀಡುವ ಮತ್ತು ಅತ್ಯಾಚಾರ ಮಾಡುವ ಜಿಹಾದಿ ಗ್ಯಾಂಗ್‌ನ ಭಾಗವಾಗಿದ್ದಾನೆ. ಅವಳನ್ನು ಹೀಗೆ ನೆನಪಿಸಿಕೊಳ್ಳುವುದು ಆಕೆಯ ಮನೆಯವರಿಗೆ ಖಂಡಿತಕ್ಕೂ ಇಷ್ಟವಿಲ್ಲ. ಈ ಪ್ರಶಸ್ತಿಯು ಅವಳ ಘನತೆಗೆ ನಿರಂತರ ಅಪಚಾರ ಎಸಗುತ್ತದೆ” ಎಂದು ಒಬ್ಬರು ಆಕ್ರೋಶಿಸಿದ್ದಾರೆ.

“ಶಾನಿ ಲೌಕ್ ಅವರ ದೇಹವನ್ನು ಭಯೋತ್ಪಾದಕರು ಪರೇಡ್ ಮಾಡುತ್ತಿರುವ ಚಿತ್ರವನ್ನು ತೆಗೆದ ಅಸೋಸಿಯೇಟೆಡ್ ಪ್ರೆಸ್ ಹಮಾಸ್ ಫೋಟೋಗ್ರಾಫರ್ ಪ್ರತಿಷ್ಠಿತ ಛಾಯಾಗ್ರಹಣ ಪ್ರಶಸ್ತಿಯನ್ನು ಗೆದ್ದಿದ್ದಾನೆ. ಈ ಛಾಯಾಗ್ರಾಹಕರು ಹಮಾಸ್ ಭಯೋತ್ಪಾದಕರೊಂದಿಗೆ 10/7ರಂದು ಇಸ್ರೇಲ್‌ಗೆ ಬಂದರು ಮತ್ತು ದಾಳಿಯ ಬಗ್ಗೆ ತಿಳಿದಿದ್ದರು” ಎಂದು ಇನ್ನೊಬ್ಬ ಬಳಕೆದಾರರು ಎಕ್ಸ್‌ನಲ್ಲಿ ಸಿಟ್ಟಿನಿಂದ ಟ್ವೀಟ್‌ ಮಾಡಿದ್ದಾರೆ.

ಈ ಫೋಟೋವನ್ನು ಆಲಿ ಮಹಮದ್‌ ಎಂಬ ಫೋಟೋಗ್ರಾಫರ್‌ ಕ್ಲಿಕ್ಕಿಸಿದ್ದಾನೆ. ಈತ ಎಪಿ ಸಂಸ್ಥೆಗೆ ಫೋಟೋ ಒದಗಿಸುವ ಏಜೆನ್ಸಿಗಳಲ್ಲಿ ಒಂದರಲ್ಲಿ ಕೆಲಸ ಮಾಡುತ್ತಾನೆ. “ಈ ಫೋಟೋಗ್ರಾಫರ್‌ ಹಮಾಸ್‌ ಉಗ್ರರ ಜೊತೆಗಿದ್ದ” ಎಂದು ಸೋಶಿಯಲ್‌ ಮೀಡಿಯಾದಲ್ಲಿ ಬಹಳ ಮಂದಿ ಆರೋಪಿಸಿದ್ದಾರೆ. ಆದರೆ ಈ ದಾಳಿಯ ಮಾಹಿತಿ ಮೊದಲೇ ಇತ್ತು ಎಂಬುದನ್ನು ಎಪಿ ಸಂಸ್ಥೆ ನಿರಾಕರಿಸಿದೆ.

ಇದನ್ನೂ ಓದಿ: ʼಅವನೇಕೆ ನನ್ನನ್ನು ರೇಪ್‌ ಮಾಡಲಿಲ್ಲ ಎಂದರೆ…ʼ ಹಾರರ್‌ ಸ್ಟೋರಿ ಬಿಚ್ಚಿಟ್ಟ ಹಮಾಸ್‌ ಒತ್ತೆಯಾಳು

Continue Reading

ದೇಶ

Congress: ಕಾಂಗ್ರೆಸ್‌ಗೆ ಐಟಿ ಮತ್ತೊಂದು ಶಾಕ್;‌ 1,700 ಕೋಟಿ ರೂ. ಟ್ಯಾಕ್ಸ್ ನೋಟಿಸ್‌ ಜಾರಿ‌

Congress: ಆದಾಯ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ಗೆ ಐಟಿ ಇಲಾಖೆಯು ಸುಮಾರು 1,700 ಕೋಟಿ ರೂ. ಡಿಮ್ಯಾಂಡ್‌ ನೋಟಿಸ್‌ ನೀಡಿದೆ. ಇದರಿಂದ ಪಕ್ಷವು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಲಾಗುತ್ತಿದೆ.

VISTARANEWS.COM


on

Rahul Gandhi And Sonia Gandhi
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹೊಸ್ತಿಲಿನಲ್ಲಿಯೇ ಕಾಂಗ್ರೆಸ್‌ಗೆ (Congress) ಸಾಲು ಸಾಲು ಪೆಟ್ಟುಗಳು ಬೀಳುತ್ತಿವೆ. ಕಾಂಗ್ರೆಸ್‌ ನಾಯಕರ ಬಿಜೆಪಿ ಸೇರ್ಪಡೆ, ಇಂಡಿಯಾ ಒಕ್ಕೂಟದಲ್ಲಿ (India Bloc) ಬಿರುಕಿನ ಮಧ್ಯೆಯೇ ಕಾಂಗ್ರೆಸ್‌ಗೆ ಆದಾಯ ತೆರಿಗೆ ಇಲಾಖೆಯು (Income Tax Department) ಹೊಸ ಶಾಕ್‌ ನೀಡಿದೆ. ಕೆಲ ವರ್ಷಗಳಿಂದ ತೆರಿಗೆ ರಿಟರ್ನ್ಸ್‌ನಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ 1,700 ಕೋಟಿ ರೂಪಾಯಿಯ ಟ್ಯಾಕ್ಸ್‌ ನೋಟಿಸ್‌ (Tax Notice) ಜಾರಿಗೊಳಿಸಿದೆ.

ಐಟಿ ಇಲಾಖೆ ನೋಟಿಸ್‌ ನೀಡಿರುವುದನ್ನು ಕಾಂಗ್ರೆಸ್‌ ನಾಯಕ ವಿವೇಕ್‌ ತಂಖಾ ದೃಢಪಡಿಸಿದ್ದಾರೆ. 2017-18ನೇ ಸಾಲಿನಿಂದ 2020-21ನೇ ಹಣಕಾಸು ಸಾಲಿನಲ್ಲಿ ಕಾಂಗ್ರೆಸ್‌ ತೆರಿಗೆ ರಿಟರ್ನ್ಸ್‌ ವೇಳೆ ವ್ಯತ್ಯಾಸವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆಯು ಕಾಂಗ್ರೆಸ್‌ಗೆ 1,700 ಕೋಟಿ ರೂ. ಡಿಮ್ಯಾಂಡ್‌ ನೋಟಿಸ್‌ ಜಾರಿಗೊಳಿಸಿದೆ. ಇದರಲ್ಲಿ ದಂಡ ಹಾಗೂ ಬಡ್ಡಿಯೂ ಸೇರಿದೆ ಎಂದು ವಿವೇಕ್‌ ತಂಖಾ ತಿಳಿಸಿದ್ದಾರೆ. ಅಲ್ಲದೆ, ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಆದಾಯ ತೆರಿಗೆ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ನ ಹಲವು ಖಾತೆಗಳಿಗೆ ತಡೆಹಿಡಿದಿದೆ. ಅಷ್ಟೇ ಅಲ್ಲ, ಕಾಂಗ್ರೆಸ್‌ ಪಕ್ಷದ ಹಲವು ಖಾತೆಗಳಿಂದ ಆದಾಯ ತೆರಿಗೆ ಇಲಾಖೆಯು 65 ಕೋಟಿ ರೂಪಾಯಿ ವಿತ್‌ಡ್ರಾ ಮಾಡಿದೆ. ನವದೆಹಲಿಯ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಐಟಿ ಇಲಾಖೆಯು ಹಣ ವಿತ್‌ಡ್ರಾ ಮಾಡಿದೆ. ಕಾಂಗ್ರೆಸ್‌ನ ಮೂರು ಬ್ಯಾಂಕ್ ಖಾತೆಗಳಿಂದ 60.25 ಕೋಟಿಯನ್ನು ಡಿಮ್ಯಾಂಡ್ ಡ್ರಾಫ್ಟ್‌ಗಳ ರೂಪದಲ್ಲಿ ತೆಗೆದುಕೊಳ್ಳಲಾಗಿದೆ. ಭಾರತೀಯ ಯುವ ಕಾಂಗ್ರೆಸ್‌ನ ಖಾತೆಯಿಂದ 5 ಕೋಟಿ ರೂ. ಪಡೆಯಲಾಗಿದೆ ಎಂದು ಕಾಂಗ್ರೆಸ್‌ ತಿಳಿಸಿದೆ.

ಇದನ್ನೂ ಓದಿ: Parliament Flashback: ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದು, ಬಿಜೆಪಿಯಿಂದ ಸ್ಪರ್ಧಿಸಿದಾಗ ಸೋತು ಹೋಗಿದ್ದ ಒಡೆಯರ್‌!

ಇದರಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳಲು ಕಾಂಗ್ರೆಸ್‌ಗೆ ಕಷ್ಟವಾಗುತ್ತಿದೆ. ಕಾಂಗ್ರೆಸ್‌ ನಾಯಕರಿಗೆ ರೈಲ್ವೆ ಟಿಕೆಟ್‌ ಬುಕ್‌ ಮಾಡಲು ಸಹ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಕಾಂಗ್ರೆಸ್‌ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು, ಆದಾಯ ತೆರಿಗೆ ಇಲಾಖೆಯ ಮರು ಮೌಲ್ಯಮಾಪನ ಪ್ರಕ್ರಿಯೆ ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದೆ. ಇದರ ಬೆನ್ನಲ್ಲೇ, ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ಗೆ ನೋಟಿಸ್‌ ಜಾರಿ ಮಾಡಿದೆ. ಇದರಿಂದ ಕಾಂಗ್ರೆಸ್‌ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಹೇಳಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

Sanjiv Bhatt: ಡ್ರಗ್ಸ್‌ ಕೇಸ್;‌ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ಗೆ 20 ವರ್ಷ ಜೈಲು!

Sanjiv Bhatt: ಮಾದಕವಸ್ತು ಪ್ರಕರಣದಲ್ಲಿ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಅವರಿಗೆ ಗುಜರಾತ್‌ ನ್ಯಾಯಾಲಯವೊಂದು 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಷ್ಟಕ್ಕೂ ಏನಿದು ಪ್ರಕರಣ?

VISTARANEWS.COM


on

Sanjiv Bhatt
Koo

ಗಾಂಧಿನಗರ: ನಕಲಿ ಮಾದಕವಸ್ತು ಪ್ರಕರಣ ದಾಖಲಿಸಿ, ವಕೀಲರೊಬ್ಬರ ವಿರುದ್ಧ ಪಿತೂರಿ ನಡೆಸಿದ ಆರೋಪದಲ್ಲಿ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ (Sanjiv Bhatt) ಅವರಿಗೆ ಗುಜರಾತ್‌ (Gujarat) ನ್ಯಾಯಾಲಯವೊಂದು 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. 1996ರ ನಕಲಿ ಡ್ರಗ್ಸ್‌ ಕೇಸ್‌ಗೆ ಸಂಬಂಧಿಸಿದಂತೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಪಾಲನ್‌ಪುರದಲ್ಲಿರುವ ನ್ಯಾಯಾಲಯವು (Palanpur Court) ಮಾಜಿ ಐಪಿಎಸ್‌ ಅಧಿಕಾರಿಗೆ ಜೈಲು ಶಿಕ್ಷೆ ವಿಧಿಸಿದೆ. ಹಾಗೆಯೇ, 2 ಲಕ್ಷ ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ಆಗದಿದ್ದರೆ ಒಂದು ವರ್ಷ ಹೆಚ್ಚುವರಿಯಾಗಿ ಜೈಲಿನಲ್ಲಿರಬೇಕು ಎಂದು ಸೂಚಿಸಿದೆ.

ಏನಿದು ಡ್ರಗ್ಸ್‌ ಕೇಸ್?‌

1996ರಲ್ಲಿ ರಾಜಸ್ಥಾನ ಮೂಲದ ವಕೀಲರೊಬ್ಬರು ಪಾಲನ್‌ಪುರ ಹೋಟೆಲ್‌ನಲ್ಲಿ ತಂಗಿದ್ದರು. ಅವರು ತಂಗಿರುವ ಹೋಟೆಲ್‌ ಕೋಣೆಯಲ್ಲಿ ಪೊಲೀಸರು ಡ್ರಗ್ಸ್‌ ವಶಪಡಿಸಿಕೊಂಡಿದ್ದರು. ಆದರೆ, ಇಡೀ ಪ್ರಕರಣವೇ ಸುಳ್ಳು ಎಂಬುದು ಬಳಿಕ ಸಾಬೀತಾಗಿದೆ. ಸಂಜೀವ್‌ ಭಟ್‌ ಅವರು ಆಗ ಬನಸ್ಕಾಂತದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದರು. ಈಗ ನ್ಯಾಯಾಲಯವು ನಕಲಿ ಮಾದಕವಸ್ತು ಪ್ರಕರಣದ ಪಿತೂರಿ ನಡೆಸಿದ ಹಿನ್ನೆಲೆಯಲ್ಲಿ ಸಂಜೀವ್‌ ಭಟ್‌ ಅವರಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.

2018ರಿಂದಲೂ ಜೈಲಿನಲ್ಲಿರುವ ಭಟ್‌

ಸಂಜೀವ್‌ ಭಟ್‌ ಅವರು ವಿವಾದಾತ್ಮಕ ಐಪಿಎಸ್‌ ಅಧಿಕಾರಿಯಾಗಿದ್ದು, ಇವರು ಮತ್ತೊಂದು ಪ್ರಕರಣದಲ್ಲಿ 2018ರಿಂದಲೂ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಜಾಮ್‌ನಗರದಲ್ಲಿ ಕಸ್ಟಡಿಯಲ್ಲಿರುವಾಗಲೇ ಆರೋಪಿಯೊಬ್ಬ ಮೃತಪಟ್ಟ ಪ್ರಕರಣದಲ್ಲಿ ನ್ಯಾಯಾಲಯವು ಸಂಜೀವ್‌ ಭಟ್‌ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇಂತಹ ಪ್ರಕರಣಗಳಿರುವ ಕಾರಣಗಳಿಂದಾಗಿಯೇ ಸಂಜೀವ್‌ ಭಟ್‌ ಅವರನ್ನು 2015ರಲ್ಲಿಯೇ ಕೆಲಸದಿಂದ ವಜಾಗೊಳಿಸಲಾಗಿದೆ.

ಇದನ್ನೂ ಓದಿ: Muhammad Yunus: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞಗೆ ಜೈಲು ಶಿಕ್ಷೆ! ಕಾರ್ಮಿಕ ಕಾನೂನು ಉಲ್ಲಂಘನೆ ಆರೋಪ

ಪಾಲನ್‌ಪುರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜೆ.ಎನ್‌.ಠಕ್ಕರ್‌ ಅವರು ಸಂಜೀವ್‌ ಭಟ್‌ ಅವರಿಗೆ ಶಿಕ್ಷೆ ವಿಧಿಸುವಾಗ ವಿಶೇಷ ಸೂಚನೆ ನೀಡಿದ್ದಾರೆ. ಸಂಜೀವ್‌ ಭಟ್‌ ಅವರು 20 ವರ್ಷ ಜೈಲು ಶಿಕ್ಷೆ ವಿಧಿಸಬೇಕು. ಈಗ ಸಂಜೀವ್‌ ಭಟ್‌ ಅವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದು, ಇದು ಮುಗಿದ ಬಳಿಕವೇ ಅವರಿಗೆ 20 ವರ್ಷ ಜೈಲು ಶಿಕ್ಷೆ ಆರಂಭವಾಗುತ್ತದೆ ಎಂದು ಸೂಚಿಸಿದ್ದಾರೆ. ಈಗ ಸಂಜೀವ್‌ ಭಟ್‌ ಅವರಿಗೆ 60 ವರ್ಷ ವಯಸ್ಸು. ಇವರ ವಿರುದ್ಧ ಎನ್‌ಡಿಪಿಎಸ್‌, ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Lok Sabha Election 2024

Lok Sabha Election 2024: ಅಮಿತ್‌ ಶಾ ರೌಡಿ, ಗೂಂಡಾ ಎಂದ ಯತೀಂದ್ರ ಸಿದ್ದರಾಮಯ್ಯ; ಮೆಚ್ಯುರಿಟಿ, ಬುದ್ಧಿ ಇಲ್ಲವೆಂದ ಬಿಜೆಪಿ

Lok Sabha Election 2024: ಕೇಂದ್ರ ಗೃಹ ಸಚಿವ ಅಮಿತ್ ಶಾ ಒಬ್ಬ ಗುಂಡಾ, ರೌಡಿಯಾಗಿದ್ದು, ಗುಜರಾತ್‌ನಲ್ಲಿ ನಡೆದಿದ್ದ ನರಮೇಧದ ರೂವಾರಿ ಎಂಬ ಆರೋಪವನ್ನು ಹೊತ್ತಿದ್ದಾರೆ. ಅವರು ಈಗ ದೇಶದ ಉನ್ನತ ಸ್ಥಾನದಲ್ಲಿದ್ದು, ಇಂತಹವರನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿಯಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಈಗಾಗಲೇ ರಾಹುಲ್ ಗಾಂಧಿ ಅವರು ಜೈಲು ಶಿಕ್ಷೆಯನ್ನು ಅನುಭವಿಸುವ ಹಂತಕ್ಕೆ ಬಂದಿದ್ದಾರೆ. ಇವರ ಡಿಎನ್ಎನಲ್ಲೇ ಇಂತಹ ವಿಚಾರಗಳು ಬಂದಿದೆ. ಇವರ ವಿರುದ್ಧ ದೂರು ನೀಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

VISTARANEWS.COM


on

Lok Sabha Election 2024 Yathindra Siddaramaiah calls Amit Shah a goonda BJP says No maturity
Koo

ಚಾಮರಾಜನಗರ/ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಾಕ್ಸಮರಗಳು ಹೆಚ್ಚುತ್ತಿವೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಪುತ್ರ, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಹನೂರಿನ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಒಬ್ಬ ಗೂಂಡಾ, ರೌಡಿ ಎಂದು ಕರೆದಿರುವುದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಈ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದು, ಯತೀಂದ್ರ ಅವರಿಗೆ ಇನ್ನೂ ಮೆಚ್ಯುರಿಟಿಯೇ ಇಲ್ಲ ಎಂದು ಕಿಡಿಕಾರಿದ್ದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಒಬ್ಬ ಗುಂಡಾ, ರೌಡಿಯಾಗಿದ್ದು, ಗುಜರಾತ್‌ನಲ್ಲಿ ನಡೆದಿದ್ದ ನರಮೇಧದ ರೂವಾರಿ ಎಂಬ ಆರೋಪವನ್ನು ಹೊತ್ತಿದ್ದಾರೆ. ಅವರು ಈಗ ದೇಶದ ಉನ್ನತ ಸ್ಥಾನದಲ್ಲಿದ್ದು, ಇಂತಹವರನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ ಎಂದು ಹನೂರಿನಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್‌ ಸಮಾವೇಶದಲ್ಲಿ ಯತೀಂದ್ರ ಸಿದ್ದರಾಮಯ್ಯ ಆರೋಪ ಮಾಡಿದ್ದರು. ಇದಕ್ಕೆ ಈಗ ರಾಜ್ಯ ಬಿಜೆಪಿ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಯತೀಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯತೀಂದ್ರ ವಿರುದ್ಧ ದೂರು ಕೊಡುತ್ತೇವೆ: ಅಶೋಕ್

ಯತೀಂದ್ರ ಸಿದ್ದರಾಮಯ್ಯ ಅವರಿಗೆ ಇನ್ನೂ ಮೆಚ್ಯುರಿಟಿ, ಬುದ್ಧಿ ಇಲ್ಲ. ಯಾರ ಬಗ್ಗೆ ಮಾತಾಡಬೇಕು ಎಂಬ ಬಗ್ಗೆ ಗೊತ್ತಿಲ್ಲ, ಸ್ಥಾನಮಾನ ಇಲ್ಲದ ವ್ಯಕ್ತಿ. ಅಮಿತ್ ಶಾ ಈ ದೇಶದ ಗೃಹ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ಕಾಂಗ್ರೆಸ್ ಹಿಂದಿನಿಂದಲೂ ಕೊಟ್ಟುಕೊಂಡು ಬರುತ್ತಿದೆ. ಸಿದ್ದರಾಮಯ್ಯ ಅವರ ಮಗ ಎಂಬ ಕಾರಣಕ್ಕೆ ಬಾಲಿಶ ಹೇಳಿಕೆ ನೀಡಿದ್ದಾರೆ. ಈಗಾಗಲೇ ರಾಹುಲ್ ಗಾಂಧಿ ಅವರು ಜೈಲು ಶಿಕ್ಷೆಯನ್ನು ಅನುಭವಿಸುವ ಹಂತಕ್ಕೆ ಬಂದಿದ್ದಾರೆ. ಇವರ ಡಿಎನ್ಎನಲ್ಲೇ ಇಂತಹ ವಿಚಾರಗಳು ಬಂದಿದೆ. ಇವರ ವಿರುದ್ಧ ದೂರು ನೀಡುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್‌ ಹೇಳಿದ್ದಾರೆ.

ಅಪ್ಪನ ಹೆಸರ ಮೇಲೆ ಅಧಿಕಾರಕ್ಕೆ ಬಂದವರು ಹೀಗೆ: ಸಿಟಿ ರವಿ

ಅಪ್ಪನ ಹೆಸರ ಮೇಲೆ ಅಧಿಕಾರಕ್ಕೆ ಬಂದವರು ಹೀಗೆಯೇ ಮಾತನಾಡುತ್ತಾರೆ. ಎಂದಾದರೂ ಪಕ್ಷದ ಕೆಲಸ ಮಾಡಿದ್ದಾರಾ? 1982ರಲ್ಲಿ ಅಮಿತ್ ಶಾ ಬೂತ್ ಅಧ್ಯಕ್ಷ ಆಗಿದ್ದರು. ಆಗ ಇವರಪ್ಪ ಎಂಎಲ್‌ಎ ಕೂಡ ಆಗಿರಲಿಲ್ಲ. ಅಪ್ಪನ ದುಡ್ಡಿನ ಮೇಲೆ ಶಾಸಕ ಆದವರು‌ ಇವರು. ನಾವು ವಿದ್ಯಾರ್ಥಿಗಳಾಗಿದ್ದಾಗ ವಿದ್ಯಾರ್ಥಿ ನಾಯಕರಾಗಿದ್ದೆವು. ಆಗ ನಮ್ಮ ಮೇಲೂ ಗೂಂಡಾ ಕೇಸ್‌ ಹಾಕಿದ್ದರು. ಹಾಗಾದರೆ ನಾನು ಗೂಂಡಾನಾ? ಅಪ್ಪನ ಹೆಸರು ಹೇಳಿಕೊಂಡು, ಅಧಿಕಾರ ಚಲಾಯಿಸುವವರಿಗೆ ಬಡವರ ಕಷ್ಟ ಕಾಣಿಸುತ್ತಾ? ಎಂದು ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Narendra Modi: ಮೋದಿ ಜತೆ ಚಾಟ್; ಭಾರತದ ಡಿಜಿಟಲ್ ಕ್ರಾಂತಿಗೆ ಬಿಲ್ ಗೇಟ್ಸ್ ಶ್ಲಾಘನೆ

ಕೂಡಲೇ ಯತೀಂದ್ರ ಕ್ಷಮೆ ಯಾಚಿಸಲಿ: ಅಶ್ವಥ್ ನಾರಾಯಣ್

ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ರಾಜಕೀಯದಲ್ಲಿ ಮಾತಿನ ಮೇಲೆ, ನಡವಳಿಕೆ ಮೇಲೆ ನಿಲ್ಲಬೇಕು. ಮಾತಿನಲ್ಲಿ ಲಕ್ಷ್ಮಣ ರೇಖೆ ಇರಬೇಕು. ಎಲ್ಲಿಯೂ ಎಲ್ಲೆ ಮೀರಿದ ಮಾತನಾಡಬಾರದು. ಯತೀಂದ್ರ ಅವರ ಇಂಥ ಕೀಳು ಮಟ್ಟದ ರಾಜಕೀಯ ಹೇಳಿಕೆಯನ್ನು ವಿರೋಧಿಸುತ್ತೇವೆ. ಅಲ್ಲದೆ, ನಮ್ಮ ಗೃಹ ಸಚಿವ ಅಮಿತ್ ಶಾ ಅವರನ್ನು ಗೂಂಡಾ ಎಂದು ಕರೆದಿದ್ದಕ್ಕೆ ಯತೀಂದ್ರ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.

ಗೌರವಯುತವಾಗಿ ಮಾತನಾಡುವುದನ್ನು ಕಲಿಯಲಿ: ಡಿವಿಎಸ್‌

ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಮಾತನಾಡಿ, ಬೈಗುಳದಿಂದ ರಾಜಕಾರಣ ಮಾಡುವುದಾದರೆ ಅನೇಕರು ರಾಜಕಾರಣವನ್ನು ಮಾಡಬಹುದಿತ್ತು. ಬೈಗುಳದಿಂದ ರಾಜಕಾರಣ ಮಾಡುವವರ ಸಾಲಿಗೆ ಯತೀಂದ್ರ ಸೇರಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಿ, ದೊಡ್ಡ ರಾಜಕಾರಣಿ ಆಗುತ್ತೇನೆ ಎಂದು ಭಾವಿಸಿದರೆ ಕೊನೇ ಮೊಳೆ ಆಗಲಿದೆ. ಅವರ ತಂದೆ ಮಂಡಿಸಿದ ಬಜೆಟ್ ಬಗ್ಗೆ ಮಾತಾಡಲಿ. ಅದು ಬಿಟ್ಟು ಬಿಜೆಪಿ, ಬಿಜೆಪಿ ನಾಯಕರ ಬಗ್ಗೆ ಮಾತನಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರ ಮಗನಾಗಿ, ಗೌರವಯುತವಾಗಿ ಮಾತನಾಡುವುದನ್ನು ಕಲಿಯಲಿ ಎಂದು ಕಿವಿಮಾತು ಹೇಳಿದ್ದಾರೆ.

Continue Reading
Advertisement
Sonarika Bhadoria
ಕಿರುತೆರೆ24 seconds ago

Sonarika Bhadoria: ಹನಿಮೂನ್‌ನ ಹಾಟ್‌ ಫೋಟೊ ಶೇರ್‌ ಮಾಡಿದ ಹಿಂದಿ ಸೀರಿಯಲ್‌ ನಟಿ!

Riyan Parag
ಕ್ರೀಡೆ12 mins ago

Riyan Parag: 3 ದಿನ ನೋವು ನಿವಾರಕ ಮಾತ್ರೆ ಸೇವಿಸಿ ಹಾಸಿಗೆಯಲ್ಲಿದ್ದೆ; ಪಂದ್ಯಶ್ರೇಷ್ಠ ಪ್ರಶಸ್ತಿ ವೇಳೆ ಭಾವುಕರಾದ ​ಪರಾಗ್

Accident Case
ತುಮಕೂರು25 mins ago

Accident Case : ಮರ ಕಡಿಯುವಾಗ ಕರೆಂಟ್‌ ಶಾಕ್‌ಗೆ ಬಲಿ; ಹುಣಸೆ ಹಣ್ಣು ಕೊಯ್ಯುವಾಗ ಬಿದ್ದು ಸಾವು

shani louk photo hamas terrorists
ವಿದೇಶ40 mins ago

Shani Louk Photo: ಹಮಾಸ್‌ ಒತ್ತೆಯಾಳು ಇಸ್ರೇಲಿ ಮಹಿಳೆಯ ನಗ್ನ ದೇಹದ ಫೋಟೋಗೆ ಪ್ರಶಸ್ತಿ; ಆಕ್ರೋಶ; ಉಗ್ರನೇ ತೆಗೆದ ಫೋಟೋನಾ?

Rahul Gandhi And Sonia Gandhi
ದೇಶ41 mins ago

Congress: ಕಾಂಗ್ರೆಸ್‌ಗೆ ಐಟಿ ಮತ್ತೊಂದು ಶಾಕ್;‌ 1,700 ಕೋಟಿ ರೂ. ಟ್ಯಾಕ್ಸ್ ನೋಟಿಸ್‌ ಜಾರಿ‌

Karimani Malika Ninalla play by violinist Aneesh Vidyashankar
ವೈರಲ್ ನ್ಯೂಸ್59 mins ago

Karimani Malika Ninalla: ʻಕರಿಮಣಿ ಮಾಲೀಕʼ ರೀಲ್ಸ್‌ಗೆ ಇನ್ನಷ್ಟು ಮೆರುಗು ನೀಡಿದ ವಯೋಲಿನ್‌ ವಾದಕ!

Karnataka Weather
ಮಳೆ1 hour ago

Karnataka Weather: 28 ವರ್ಷಗಳ ಬಳಿಕ ಬೆಂಗಳೂರಲ್ಲಿ ದಾಖಲೆಯ ತಾಪಮಾನ; ಇನ್ನೊಂದು ವಾರ ಕಾದ ಕೆಂಡ

Sanjiv Bhatt
ದೇಶ1 hour ago

Sanjiv Bhatt: ಡ್ರಗ್ಸ್‌ ಕೇಸ್;‌ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ಗೆ 20 ವರ್ಷ ಜೈಲು!

Kaptaan KL is keeping
ಕ್ರೀಡೆ1 hour ago

LSG vs PBKS: ಗೆಲುವಿನ ಖಾತೆ ತೆರೆದೀತೇ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ತಂಡ?

Lok Sabha Election 2024 Yathindra Siddaramaiah calls Amit Shah a goonda BJP says No maturity
Lok Sabha Election 20241 hour ago

Lok Sabha Election 2024: ಅಮಿತ್‌ ಶಾ ರೌಡಿ, ಗೂಂಡಾ ಎಂದ ಯತೀಂದ್ರ ಸಿದ್ದರಾಮಯ್ಯ; ಮೆಚ್ಯುರಿಟಿ, ಬುದ್ಧಿ ಇಲ್ಲವೆಂದ ಬಿಜೆಪಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ9 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202424 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌