Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ? - Vistara News

ಪ್ರಮುಖ ಸುದ್ದಿ

Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

ಈ ವಾರ ಅಂದರೆ ಡಿಸೆಂಬರ್‌ 26 ರಿಂದ ಜನವರಿ 1ರವರೆಗೆ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ (Weekly Horoscope), ಯಾವ ರಾಶಿಯವರ ಅದೃಷ್ಟ ಸಂಖ್ಯೆ ಎಷ್ಟು, ಶುಭ ದಿಕ್ಕು ಯಾವುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೇಷ: ಜನರ ಮೆಚ್ಚುಗೆಗೆ ಪಾತ್ರರಾಗುವ ಸಮಯ

Weekly Horoscope

ರಾಹುವಿನ ತೊಂದರೆ ಇದೆ. ಹೀಗಾಗಿ ಆರೋಗ್ಯದ ಬಗೆಗೆ ಕಾಳಜಿ ಇರಲಿ. ಆರ್ಥಿಕ ವಿಚಾರಗಳ ಬಗೆಗೆ ನಿಮ್ಮ ಅದೃಷ್ಟ ಖುಲಾಯಿಸಲು ಗ್ರಹಗಳ ಚಲನೆ ಚೆನ್ನಾಗಿದೆ. ಕೆಲಸದ ಸ್ಥಳದಲ್ಲಿನ ವಿಷಯಗಳು ಸಮಸ್ಯೆ ತರಬಲ್ಲವು. ಪ್ರಣಯ ವ್ಯವಹಾರದಿಂದ ಹೆಸರು ಕೆಡಬಹುದು ಎಚ್ಚರ. ವಿಶೇಷವಾಗಿ ಆಫೀಸಿನಲ್ಲಿಯೇ ಅಪಾಯದ ಅವಕಾಶ ಜಾಸ್ತಿ. ಬುದ್ಧಿ ಬಲವು ನಿಮ್ಮ ಶಕ್ತಿಯಾಗಿದೆ. ನಿಮ್ಮ ಸಹಕಾರ, ಬೆಂಬಗಳಿಂದ ಜನರ ಮೆಚ್ಚುಗೆ ಸಿಗಲು ಸಾಧ್ಯವಿದೆ. ಸಿದ್ಧಿದಾಯಕ ವಿನಾಯಕನಿಗೆ ಗರಿಕೆಯನ್ನು ಅರ್ಪಿಸಿ, ಒಳಿತಾಗಲಿದೆ.
ಶುಭ ಸಂಖ್ಯೆ: 4 ಶುಭ ದಿಕ್ಕು: ವಾಯವ್ಯ

ವೃಷಭ: ನಿಮಗೆ ದೃಷ್ಟಿಯಾದೀತು ಎಚ್ಚರ!

Weekly Horoscope

ಸಿಟ್ಟು ನಿಮ್ಮನ್ನು ಜನರ ನಡುವೆ ಅಪ್ರಿಯ ವ್ಯಕ್ತಿಯನ್ನಾಗಿಸಬಹುದು. ಚುನಾವಣೆಯ ದಿನಗಳಲ್ಲಿ ರಾಜಕಾರಣಿಗಳು ಈ ವಿಷಯದಲ್ಲಿ ಎಚ್ಚರ ಹೊಂದಿರಿ. ವಿವಾಹದ ಬಗೆಗೆ ಒಳಿತಿನ ದಿನಗಳಿವು. ಹೆಣ್ಣು ಗಂಡಿನ ಜನ್ಮ ಕುಂಡಲಿಗಳ ಹೊಂದಾಣಿಕೆಯಾದರೆ ಕ್ಷೇಮ. ಕುಜ ಗ್ರಹವು ಬಾಧಕನಾಗಿ ನಿಮ್ಮ ರಾಶಿಯಲ್ಲೇ ಇದ್ದಿರುವುದರಿಂದ ಕುಂಡಲಿ ಹೊಂದಾಣಿಕೆಯನ್ನು ಮಾಡಿಸಿಕೊಂಡೇ ವಿವಾಹ ನಿರ್ಣಯ ಮಾಡಿಕೊಳ್ಳಿ. ನಿಮ್ಮ ಕೆಲಸದಲ್ಲಿ ಕೆಲವರ ದೃಷ್ಟಿ ದೋಷ ತಾಗಿ ಹಿನ್ನಡೆ ಆದೀತು. ಮಹಾಲಕ್ಷ್ಮಿಗೆ ಕುಂಕುಮಾರ್ಚನೆ ಮಾಡಿಸಿ, ಒಳಿತಾಗಲಿದೆ.
ಶುಭ ಸಂಖ್ಯೆ : 8 ಶುಭ ದಿಕ್ಕು: ಪೂರ್ವ

ಮಿಥುನ: ಶಾಂತಿಯೇ ನಿಮ್ಮ ಗೆಲುವಿನ ಮಂತ್ರ

Weekly Horoscope

ಜನರು ವಿನಾಕಾರಣ ನಿಮ್ಮನ್ನು ದ್ವೇಷಿಸಬಹುದು. ಆದರೆ ನೀವು ಎಲ್ಲವನ್ನೂ ಮೌನವಾಗಿಯೇ ನಿರ್ಲಕ್ಷಿಸಿ. ದ್ವೇಷಕ್ಕೆ ದ್ವೇಷ ಎಂಬ ಮಾತು ಬೇಡ. ಕೆಲವು ತೊಂದರೆ ಎದುರಿಸಲು ನಿಮ್ಮಿಂದ ಸಾಧ್ಯ. ಹೀಗಾಗಿ ಶಾಂತವಾಗಿರಿ. ಅನಿರೀಕ್ಷಿತವಾಗಿ ಲಾಭಕ್ಕೆ ದಾರಿ ಇದೆ. ಮೀನುಗಾರಿಕೆಯಿಂದ ಮೀನುಗಳ ವಹಿವಾಟು, ಐಸ್‌ಕ್ರೀಮ್‌ ಮಾರಾಟ, ಪಾರ್ಲರ್‌ ಹೊಂದಿರುವವರಿಗೆ ಲಾಭದ ದಾರಿ ಉತ್ತಮ. ಎಂಜಿನಿಯರುಗಳು ತುಸು ಎಚ್ಚರದಿಂದ ಖರ್ಚು ವೆಚ್ಚ ಮಾಡಿ. ತುಂಬಾ ಖರ್ಚು ದುಃಖಕ್ಕೆ ದಾರಿ. ಶಿವನನ್ನು ತ್ರಿದಳಗಳಿಂದ ಆರಾಧಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ದಕ್ಷಿಣ

ಕಟಕ: ಚಿಂತೆಗೆ ಕಾರಣವಾಗಲಿರುವ ಚಂದ್ರ

Weekly Horoscope

ಆಹಾರದ ವಿಷಯದಲ್ಲಿ ಎಚ್ಚರ ಬೇಕು. ಚಂದ್ರನ ಓಡಾಟಗಳು ನಿಮ್ಮ ಜಾತಕದ ಕುಂಡಲಿಯಲ್ಲಿ ಅನುಕೂಲಕರವಾಗಿ ಇಲ್ಲದಿರಬಹುದು. ಲೇವಾದೇವಿ ವ್ಯವಹಾರ ಮಾಡುವವರು ಎಚ್ಚರದಿಂದಿರಿ. ಸರಿಯಾದ ಕಾಗದ ಪತ್ರಗಳಿರದೆ ವ್ಯವಹಾರ ಮಾಡದಿರಿ. ಹೂವಿನ ವ್ಯಾಪಾರ, ತರಕಾರಿ ವ್ಯಾಪಾರ ಅನುಕೂಲಕರ. ವೈದ್ಯರ ಪಾಲಿಗೂ ಲಾಭದ ಪ್ರಮಾಣ ಚೆನ್ನಾಗಿಯೇ ಇರಲು ಸಾಧ್ಯ. ಪ್ರಾವಿಷನ್‌ ಸ್ಟೋರ್ಸ್‌ ಹೊಂದಿರುವವರು ಫುಡ್‌ ಡೀಲಿಂಗ್‌ನಲ್ಲಿ ವಹಿವಾಟು ಮಾಡುವ ಜನರಿಗೆ ಬಿಕ್ಕಟ್ಟು ಸಾಧ್ಯ. ವೆಂಕಟೇಶ್ವರನ ನಾಮ ಸ್ತುತಿ ಕ್ಷೇಮಕರ.
ಶುಭ ಸಂಖ್ಯೆ : 6 ಶುಭ ದಿಕ್ಕು: ಆಗ್ನೇಯ

ಸಿಂಹ: ಗಣಪತಿಯ ಶ್ರೀರಕ್ಷೆಯಿಂದ ನೆಮ್ಮದಿ

Weekly Horoscope

ನಿಮ್ಮ ಮಕ್ಕಳಿಂದ ಒಳ್ಳೆಯ ವಾರ್ತೆ ಕೇಳಲಿದ್ದೀರಿ. ಮಹಾಗಣಪತಿಯ ರಕ್ಷಾ ಕವಚ ನಿಮ್ಮ ಪಾಲಿಗಿದೆ. ಧೈರ್ಯದಿಂದ ಮುನ್ನುಗ್ಗುವ ಶಕ್ತಿ ಪಡೆಯುತ್ತೀರಿ. ಬುದ್ಧಿವಂತರೂ ಆಗಿದ್ದೀರಿ. ಆದರೂ ಅವಸರದ ನಿರ್ಣಯ ಬೇಡ. ಇದರಿಂದ ಹೆಚ್ಚಿನ ಮಾನಸಿಕ ಒತ್ತಡ ಎದುರಿಸುವ ಕಿರಿಕಿರಿ ಉಂಟಾಗಿ ತೊಂದರೆ ಆಗಬಹುದು. ಕೆಲಸದ ಸ್ಥಳದಲ್ಲಿ ಪ್ರಮೋಷನ್‌ ಸಾಧ್ಯ. ಆದರೂ ರಾಹು ಗ್ರಹದ ಕಿರಿಕ್‌ನಿಂದಾಗಿ ಸಂಬಳದ ವಿಚಾರ ನಿಗದಿಯಾಗಲು ತುಸು ವಿಳಂಬವಾಗಬಹುದು. ನಿರೀಕ್ಷೆಯ ರೀತ್ಯ ಸಂಬಳ ಏರಿಕೆ ಕಷ್ಟ. ಶ್ರೀ ಗುರು ದತ್ತಾತ್ರೇಯನನ್ನು ಆರಾಧಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಪಶ್ಚಿಮ

ಕನ್ಯಾ: ವ್ಯಕ್ತಿತ್ವದ ವರ್ಚಸ್ಸು ವೃದ್ಧಿಸುವ ಸಮಯ

Weekly Horoscope

ನಿಮ್ಮ ವಿಚಾರದಲ್ಲಿ ಶನೈಶ್ವರನೇ ಬಾಧೆಕಾರಕನಾದರೂ, ಕಷ್ಟ ಪಟ್ಟರೆ ನಿಮ್ಮ ವ್ಯಕ್ತಿತ್ವವನ್ನು, ವರ್ಚಸ್ಸನ್ನು ಸಂವರ್ಧಿಸಿಕೊಳ್ಳಲು ರಾಜಕಾರಣಿಗಳಿಗೆ, ಟೆಕ್ಕಿಗಳಿಗೆ, ಚಾರ್ಟರ್ಡ್‌ ಅಕೌಂಟೆಂಟ್‌ಗಳಿಗೆ, ಬ್ಯಾಕ್‌ನ ಕ್ಲರ್ಕ್‌ ಅಥವಾ ಕಿರಿಯ ದರ್ಜೆ ಆಫೀಸರ್‌ಗಳಿಗೆ ಇದು ಒಳ್ಳೆಯ ಕಾಲ ಘಟ್ಟವಾಗಿದೆ. ಸಿನಿಮಾ ನಿರ್ಮಾಪಕರ, ನಿರ್ದೇಶಕರು ಎಚ್ಚರಿಕೆಯ ಹೆಜ್ಜೆ ಇರಿಸಿದರೆ ಒಳ್ಳೆಯ ಚಿತ್ರ ನಿರ್ಮಾಣಕ್ಕೆ ಶುಕ್ರ ಗ್ರಹ ಬೆಂಬಲವಾಗಿ ನಿಲ್ಲಲಿದೆ. ನೀರಿನ ಬಳಕೆಯ ಬಗ್ಗೆ ಎಚ್ಚರ ಇರಲಿ. ಅಶುದ್ಧ ನೀರಿನಿಂದ ತೊಂದರೆಯಾಗಬಹುದು.
ಶ್ರೀ ರಾಮನನ್ನು ಆರಾಧಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಉತ್ತರ

ತುಲಾ: ಪ್ರಣಯದತ್ತ ಒಲವು, ಕೆಲಸದಲ್ಲಿ ಗೆಲುವು

Weekly Horoscope

ಪ್ರತಿಯೊಂದನ್ನೂ ತೂಗಿ ನೋಡುವ ಸ್ವಭಾವ ನಿಮ್ಮದು. ಆದರೆ ನಿಮ್ಮನ್ನೂ ತೂಗಿ ನೋಡುವ ಜನರು ನಿಮ್ಮ ಬಳಿ ಸುಳಿಯುತ್ತಿರುತ್ತಾರೆ. ಹೀಗಾಗಿ ಒಂದು ರೀತಿಯಲ್ಲಿ ಪ್ರತಿ ಕೆಲಸವೂ ಒಂದೊಂದು ಹಂತದಲ್ಲಿ ನಿಂತು ಹೋಗುವ ಭಯ ಎದುರಾಗಬಹುದು. ಹಿರಿಯರ ಆಸ್ತಿ ಸಂಬಂಧವಾದ, ಸಹೋದ್ಯೋಗಿಗಳ ಜತೆಗಿನ ಮನಸ್ತಾಪದ ವಿಷಯಗಳು ಶಾಂತಿ ಕದಡಬಹುದು. ತಲೆ ಗಟ್ಟಿ ಇದೆ ಎಂದು ಕಲ್ಲಿಗೆ ಬಡಿದುಕೊಳ್ಳಲು ಹೋಗಬೇಡಿ. ಪ್ರಣಯ ಸಂದರ್ಭದಲ್ಲಿ ಗೆಲುವಿದೆ. ಶುಭಕರವಾದ ಮಾರುತಿಯನ್ನು ಆರಾಧಿಸಿ, ಒಳ್ಳೆಯದಾಗುತ್ತದೆ.
ಶುಭ ಸಂಖ್ಯೆ : 5 ಶುಭ ದಿಕ್ಕು: ವಾಯವ್ಯ

ವೃಶ್ಚಿಕ: ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ

Weekly Horoscope

ಮನಸ್ಸು ಶಾಂತಿ ಸಮಾಧಾನದ ಗೂಡಾಗಿ ಇರಬೇಕೆಂದಷ್ಟೂ ನಿಮ್ಮನ್ನು ಉದ್ರೇಕಿಸುವ ಜನ ಸುತ್ತವರಿದಿರುತ್ತಾರೆ. ಆದರೆ ನೀವು ಕಿಲಾಡಿಗಳಾಗಿ ವರ್ತಮಾನವನ್ನು ತಡೆಯ ಲಾರದ ಕಾವಿನ ಕಾವಲಿಯನ್ನಾಗಿಸಬೇಡಿ. ಮಾತು ಬೆಳ್ಳಿ, ಮೌನ ಬಂಗಾರವೆಂಬುದನ್ನು ಅರಿತಿರಿ. ಸಹೋದರರ ನಡುವೆ ಕಲಹ ತರುವ ಹಿತ ಶತ್ರುಗಳ ಬಗೆಗೆ ಎಚ್ಚರ ಇರಲಿ. ಯಾವುದೇ ಸಂದರ್ಭದಲ್ಲೂ ಖಿನ್ನತೆ ಆವರಿಸಿದರೆ ಇರುವೆ ಬರುವ ಜಾಗೆಯಲ್ಲಿ ತುಸು ಸಕ್ಕರೆ ಚೆಲ್ಲಿ, ಮನಸ್ಸು ಸಡಿಲವಾಗಿ ಆರಾಮವಾಗಿರುತ್ತೀರಿ. ಕರುಣಾ ಮೂರ್ತಿಯಾದ ಶ್ರೀ ರಾಘವೇಂದ್ರರನ್ನು ಆರಾಧಿಸಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪಶ್ಚಿಮ

ಧನಸ್ಸು: ಸಂಯಮವೇ ಗೆಲುವಿನ ಗುಟ್ಟು

Weekly Horoscope

ಉರಿದೆದ್ದ ವರ್ತಮಾನದಲ್ಲಿ ಸೂರ್ಯನ ಉರಿ ಇದೆ. ಮನಸ್ಸು ಮತ್ತು ದೇಹದ ಹೊಂದಾಣಿಕೆಗೆ ತುಸು ಆತಂಕದ ವಿಷಯವಾಗಿ ವರ್ತಮಾನ ನಿಮಗೆ ಬೆವರಿಳಿಸಬಹುದು. ಬುದ್ಧಿವಂತರಂತೂ ಹೌದು ನೀವು. ಆದರೆ ಆತ್ಮಘಾತಕತನ ತೋರುವ ದುಷ್ಟರು ನಿಮ್ಮ ಬುದ್ಧಿವಂತಿಕೆಗೆ ಕೂಡ ದೊಡ್ಡ ಸವಾಲು ಹಾಕಬಲ್ಲರು. ಎಚ್ಚರ ಇರಲಿ. ಆರ್ಥಿಕತೆಯ ವಿಚಾರದಲ್ಲಿ ದುಡಿತ ಮಾಡಿದಷ್ಟು ಫಲಕಾರಿಯಾದ ರೀತಿಯಲ್ಲಿ ಸಂಪಾದನೆ ಬರುವುದು ಕಷ್ಟಕರವೇ ಆಗುತ್ತದೆ. ಆದರೂ ಸಂಯಮದಿಂದ ಗೆಲ್ಲಬಲ್ಲಿರಿ. ಸನ್ಮಂಗಳಕಾರಕಿಯಾದ ಶ್ರೀ ದುರ್ಗೆಯನ್ನು ಆರಾಧಿಸಿ.
ಶುಭ ಸಂಖ್ಯೆ: 1 ಶುಭ ದಿಕ್ಕು: ಆಗ್ನೇಯ

ಮಕರ: ಕಾರ್ಯಕ್ಕೆ ಹುಳಿ ಹಿಂಡುವವರ ದೂರವಿಡಿ

Weekly Horoscope

ಸ್ವಾಮಿ ನಿಮ್ಮ ರಾಶಿಯ ಯಜಮಾನನಾದರೂ ಚಂದ್ರನ ಜತೆಗಿನ ಯುದ್ಧದಲ್ಲಿ ಬಸವಳಿದಿದ್ದಾನೆ. ಹೀಗಾಗಿ ಬಾವಿಯಿಂದ ಎತ್ತಿ ಇದೀಗ ಮೇಲೆ ತೆಗೆದ ನೀರನ್ನೂ ಆರಿಸಿ ಕುಡಿಯುವ ಕಾರ್ಯಕ್ಕೆ ಮುಂದಾಗಿ. ವರ್ತಮಾನದ ರಗಳೆಗಳು ಸಾಡೇಸಾತಿ ಕಾಟದ ಕಾರಣದಿಂದ ಬಿಸಿ ಎಣ್ಣೆ ಕೊತಕೊತ ಕುದಿವಂತೆ ಕುದಿದೀತು. ದಾಂಪತ್ಯದಲ್ಲಿನ ಬಿರುಕು ದೊಡ್ಡದಾಗದಂತೆ ನೋಡಿಕೊಳ್ಳಿ. ನೀವು ಶಾಂತವಾಗಿದ್ದರೂ ಕಾರ್ಯಕ್ಕೆ ಹುಳಿ ಹಿಂಡುವ ಜನ ಪಕ್ಕದಲ್ಲೇ ಇದ್ದು ದುಷ್ಟತನವನ್ನು ತೋರುತ್ತಾರೆ, ಎಚ್ಚರ ಇರಲಿ. ಶುಭದಾಯಕನಾದ ಶ್ರೀ ಕೃಷ್ಣನನ್ನು ಸ್ತುತಿಸಿ, ಕ್ಷೇಮವಿದೆ.
ಶುಭ ಸಂಖ್ಯೆ : 3 ಶುಭ ದಿಕ್ಕು: ಉತ್ತರ

ಕುಂಭ: ಶ್ರೀ ರಾಮನ ಭಜನೆಯಿಂದ ಒಳಿತು

Weekly Horoscope

ತೀವ್ರತರವಾದ ಸಾಡೇಸಾತಿ ಉತ್ಸಾಹವನ್ನು ಬತ್ತಿಸಿದೆ. ಕಾರ್ಯಗಳಲ್ಲಿ ಯಶಸ್ಸು ಸಿಗದೆ ನಿತ್ಯವೂ ಒಂದು ರೀತಿಯ ಆತಂಕವನ್ನೇ ಸೃಷ್ಟಿಸುತ್ತಿದೆ. ಕಾಲದ ಓಟದಲ್ಲಿ ಹಿಂದೆ ಬಿದ್ದಿದ್ದೇನೆ ಎಂಬ ನೋವು ಸಹಜವೇ ಆಗಿದೆ. ಯೋಚಿಸಬೇಡಿ. ಬುದ್ಧಿ ಶಕ್ತಿಯನ್ನು ಬಂಡವಾಳವಾಗಿಸಿಕೊಂಡು ಮುನ್ನುಗ್ಗಲು ಮುಂದಾಗಿ. ಹಣವನ್ನು ತೊಡಗಿಸಲು ಇದು ಸಕಾಲವಲ್ಲ. ಲಾಭಕರವಾದುದು ಬುದ್ಧಿ ಶಕ್ತಿಯಿಂದಲೇ ಸಿಗಬೇಕು. ಕನ್ಸಲ್ಟೆಂಟ್‌ ಆಗಿ ನಿಮ್ಮ ಅನುಭವವನ್ನು ದುಡಿಸಿಕೊಳ್ಳಿ. ಧನ ಪ್ರಾಪ್ತಿ ಇದೆ. ಶ್ರೀ ರಾಮನ ಸ್ತುತಿ ಮಾಡಿ, ಒಳಿತಿದೆ.
ಶುಭ ಸಂಖ್ಯೆ : 9 ಶುಭ ದಿಕ್ಕು: ಈಶಾನ್ಯ

ಮೀನ: ಯಶಸ್ಸಿಗೆ ಉಂಟು ನೂರಾರು ದಾರಿ

Weekly Horoscope

ಹಲವು ಬಳಲಿಕೆಗಳನ್ನು ಶನೈಶ್ವರ ಒದಗಿಸುವ ಇಕ್ಕಟ್ಟಿನಲ್ಲಿ, ಬಿಕ್ಕಟ್ಟಿನಲ್ಲಿ ಇದ್ದೀರಿ. ಆದರೆ ಮಹತ್ತರವಾದ ಬಲದೊಂದಿಗೆ ಆರೂಢನಾದ ಕುಜನಿಂದ ನಿಮ್ಮ ಯೋಜನೆಗಳಿಗೆ ಗೆಲುವು ಮತ್ತು ಹಲವು ಯೋಗಗಳು ಇದ್ದಿರುವುದರಿಂದ ಯಶಸ್ಸಿಗೆ ದಾರಿ ಆಗಾಗ ಲಭ್ಯವಿದೆ. ಹಣಕಾಸಿನ ವಿಚಾರದಲ್ಲಿ ಮಾತಿನ ಧಾಟಿಯಲ್ಲಿ ಎಚ್ಚರವಿರಲಿ. ಶತ್ರುಗಳಾದರೂ ನಿಮಗೆ ಕೆಲವು ಒಳಿತುಗಳನ್ನು ತರುವ ಸಾಧ್ಯತೆಗಳು ಜಾಸ್ತಿಯೇ ಇದ್ದಿವೆ. ಆದರೆ ಶತ್ರುಗಳನ್ನು ನಂಬಿ ಸರ್ರನೆ ಕೆಡಬೇಡಿ. ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಆರಾಧಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಪೂರ್ವ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

ವಿಧಾನ ಪರಿಷತ್‌ ಚುನಾವಣೆ: ಖರ್ಗೆ, ಸಿದ್ದು, ಡಿಕೆಶಿ ಆಪ್ತರಿಗೆ ಸ್ಥಾನ ಕೊಡಿಸಲು 2+2+2+1=7 ಫಾರ್ಮುಲಾ; ಏನಿದು?

Karnataka Council Election: ಯಾರಿಗೆ ಸ್ಥಾನಗಳನ್ನು ನೀಡಬೇಕು ಎಂಬುದರ ಬಗ್ಗೆ ಗೊಂದಲ ಬಗೆಹರಿಸಿಕೊಳ್ಳುವ ದಿಸೆಯಲ್ಲಿ ಫಾರ್ಮುಲಾ ಕಂಡು ಹಿಡಿಯಲಾಗಿದೆ. ಎರಡು ಸ್ಥಾನ ಸಿದ್ದರಾಮಯ್ಯ ಬಣಕ್ಕೆ, ಎರಡು ಸ್ಥಾನ ಡಿಕೆಶಿ ಬಣಕ್ಕೆ, ಇನ್ನೆರಡು ಸ್ಥಾನ ಮಲ್ಲಿಕಾರ್ಜುನ ಖರ್ಗೆ ಹಾಗೂ ಒಂದು ಸ್ಥಾನವನ್ನು ಕಾಂಗ್ರೆಸ್‌ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ತಿಳಿದುಬಂದಿದೆ. ಇನ್ನು ಶಾರ್ಟ್‌ ಲಿಸ್ಟ್‌ ಹಿಡಿದುಕೊಂಡು ದೆಹಲಿಗೆ ತೆರಳಲು ಸಿದ್ದರಾಮಯ್ಯ ಹಾಗೂ ಡಿಕೆಶಿ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

VISTARANEWS.COM


on

Karnataka Council Election
Koo

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ 11 ಸದಸ್ಯರ ಆಯ್ಕೆಗಾಗಿ ನಡೆಯುವ ಚುನಾವಣೆಯು (Karnataka Legislative Council Election) ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಣಗಳ ಸೃಷ್ಟಿಗೆ ಕಾರಣವಾಗಿದೆ. ಕಾಂಗ್ರೆಸ್‌ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (D K Shivakumar) ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೇರಿ ಹಲವು ನಾಯಕರ ಆಪ್ತರು ಲಾಬಿ ನಡೆಸುತ್ತಿದ್ದು, ಇದಕ್ಕಾಗಿ ಕಾಂಗ್ರೆಸ್‌ ನಾಯಕರು ಭಿನ್ನಮತವೇ ಬೇಡ ಎಂದು 2+2+2+1=7 ಫಾರ್ಮುಲಾ ಕಂಡು ಹಿಡಿದಿದ್ದಾರೆ ಎಂದು ತಿಳಿದಬಂದಿದೆ.

ಯಾರಿಗೆ ಸ್ಥಾನಗಳನ್ನು ನೀಡಬೇಕು ಎಂಬುದರ ಬಗ್ಗೆ ಗೊಂದಲ ಬಗೆಹರಿಸಿಕೊಳ್ಳುವ ದಿಸೆಯಲ್ಲಿ ಫಾರ್ಮುಲಾ ಕಂಡು ಹಿಡಿಯಲಾಗಿದೆ. ಎರಡು ಸ್ಥಾನ ಸಿದ್ದರಾಮಯ್ಯ ಬಣಕ್ಕೆ, ಎರಡು ಸ್ಥಾನ ಡಿಕೆಶಿ ಬಣಕ್ಕೆ, ಇನ್ನೆರಡು ಸ್ಥಾನ ಮಲ್ಲಿಕಾರ್ಜುನ ಖರ್ಗೆ ಹಾಗೂ ಒಂದು ಸ್ಥಾನವನ್ನು ಕಾಂಗ್ರೆಸ್‌ ಹೈಕಮಾಂಡ್ ತೀರ್ಮಾನಿಸುತ್ತದೆ. ಇನ್ನು ಏಳು ಸ್ಥಾನಗಳಿಗಾಗಿ 50 ಆಕಾಂಕ್ಷಿಗಳು ಸಾಲುಗಟ್ಟಿ ನಿಂತಿದ್ದು, ಯಾರು ಯಾವ ಬಣದಲ್ಲಿದ್ದಾರೆ ಎಂಬುದರ ಮೇಲೆ ಮಣೆ ಹಾಕಲಾಗುತ್ತದೆ ಎಂದು ತಿಳಿದುಬಂದಿದೆ.

ಯಾವ ಸಮುದಾಯಕ್ಕೆ ಯಾವ ನಾಯಕ ಮಣೆ ಹಾಕುತ್ತಿದ್ದಾರೆ? ಯಾರ ಯಾರ ಪರ, ಯಾರು ಲಾಬಿ ಮಾಡುತ್ತಿದ್ದಾರೆ ಎಂಬುದರ ಮಾಹಿತಿ ಹೀಗಿದೆ.

ಸಿದ್ದರಾಮಯ್ಯ
ಯತೀಂದ್ರ ಸಿದ್ದರಾಮಯ್ಯ( ಕುರುಬ), ಕೆ.ಗೋವಿಂದ ರಾಜು ( ಒಕ್ಕಲಿಗ), ಎಚ್.ಎಂ. ರೇವಣ್ಣ ( ಕುರುಬ), ವಿ.ಆರ್. ಸುದರ್ಶನ್ (ಗಾಣಿಗ).

foolish to link Rakesh death to Prajwal case says CM Siddaramaiah

ಡಿ.ಕೆ ಶಿವಕುಮಾರ್
ಸಿಗುವ ಎರಡು ಸ್ಥಾನಕ್ಕೆ ವಿಜಯ್ ಮುಳಗುಂದ್ ( ಬ್ರಾಹ್ಮಣ), ವಿನಯ್ ಕಾರ್ತಿಕ್ (ಒಕ್ಕಲಿಗ), ಬಿ.ಎಲ್. ಶಂಕರ್ (ಒಕ್ಕಲಿಗ) ರಮೇಶ್ ಬಾಬು (ಬಲಿಜ), ಐಶ್ವರ್ಯ ಮಹದೇವ ( ಕುರುಬ), ನಟರಾಜ ಗೌಡ ( ಒಕ್ಕಲಿಗ), ನಲಪಾಡ್ ( ಮುಸ್ಲಿಂ) ಅವರು ಲಾಬಿ ನಡೆಸುತ್ತಿದ್ದಾರೆ.

Drinking Water in Bangalore DK Shivakumar warns of disciplinary action against officials if Water causes health problem

ಮಲ್ಲಿಕಾರ್ಜುನ ಖರ್ಗೆ
ಮುದ್ದುಗಂಗಾಧರ್ (ಖರ್ಗೆ ಆಪ್ತ), ಸೂರಜ್ ಹೆಗ್ಡೆ , ಪುಷ್ಪ ಅಮರನಾಥ (ದಲಿತ), ಮುಂಡರಗಿ ನಾಗರಾಜ್ (ದಲಿತ), ವಿ.ಆರ್. ಸುದರ್ಶನ್ (ಗಾಣಿಗ), ಕರಡಿ ಸಂಗಣ್ಣ (ಲಿಂಗಾಯತ), ಹುಸೇನ್ (ಮುಸ್ಲಿಂ)

ಹೈಕಮಾಂಡ್
ಬೋಸರಾಜು (ಹಾಲಿ ಸಚಿವ)

ದೆಹಲಿಗೆ ತೆರಳಲು ಸಿದ್ದು, ಡಿಕೆಶಿ ತೀರ್ಮಾನ

ಕಾಂಗ್ರೆಸ್‌ಗೆ ಲಭಿಸುವ ಏಳು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ಶಾರ್ಟ್‌ ಲಿಸ್ಟ್‌ ಹಿಡಿದುಕೊಂಡು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ದೆಹಲಿಗೆ ತೆರಳಲು ತೀರ್ಮಾನಿಸಿದ್ದಾರೆ. ಮೇ 28, 29ರಂದು ದೆಹಲಿಯಲ್ಲಿರಲಿರುವ ಇಬ್ಬರೂ ನಾಯಕರು, ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲಿದ್ದಾರೆ. ಇದಾದ ಬಳಿಕವೇ ಅಭ್ಯರ್ಥಿಗಳ ಆಯ್ಕೆಯನ್ನು ಘೋಷಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Legislative Council Election: ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ದಿನಾಂಕ ಫಿಕ್ಸ್;‌ ಜೂನ್‌ 13ಕ್ಕೆ ಮತದಾನ

Continue Reading

ಕರ್ನಾಟಕ

Krishna Water Dispute: ಕೃಷ್ಣಾ ನೀರಿನ ವಿಚಾರ ಮತ್ತೆ ಮಹಾ ಕ್ಯಾತೆ; ರಾಜ್ಯಕ್ಕೆ ಹರಿದು ಬರ್ತಿದ್ದ ನೀರು ತಡೆ ಹಿಡಿದ ಮಹಾರಾಷ್ಟ್ರ!

Krishna Water Dispute: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ರಾಜಾಪುರ ಬ್ಯಾರೇಜ್ ಮೂಲಕ ಕರ್ನಾಟಕಕ್ಕೆ ಹರಿದು ಬರುತ್ತಿದ್ದ ಕೃಷ್ಣಾ ನದಿ ನೀರನ್ನು ತಡೆ ಹಿಡಿಯಲಾಗಿದೆ.

VISTARANEWS.COM


on

Krishna Water Dispute
Koo

ಚಿಕ್ಕೋಡಿ: ಕೃಷ್ಣಾ ನದಿ ನೀರಿನ (Krishna Water Dispute) ವಿಚಾರವಾಗಿ ಮಹಾರಾಷ್ಟ್ರ ಮತ್ತೆ ಕ್ಯಾತೆ ತೆಗೆದಿದೆ. ಕರ್ನಾಟಕಕ್ಕೆ ಹರಿದು ಬರ್ತಿದ್ದ ನೀರನ್ನು ತಡೆ ಹಿಡಿದಿರುವ ಮಹಾರಾಷ್ಟ್ರ ಸರ್ಕಾರ, ನದಿ ನೀರಿನ ಹರಿವಿನ ಮೇಲೆ ನಿಗಾ ಇಡಲು ನಾಲ್ವರು ಸಿಬ್ಬಂದಿಯನ್ನು ನೇಮಿಸಿದೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ರಾಜಾಪುರ ಬ್ಯಾರೇಜ್ ಮೂಲಕ ಕರ್ನಾಟಕಕ್ಕೆ ಹರಿದು ಬರುತ್ತಿದ್ದ ಕೃಷ್ಣಾ ನದಿ ನೀರನ್ನು ತಡೆ ಹಿಡಿಯಲಾಗಿದೆ. ಇಬ್ಬರು ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಇಬ್ಬರು ನೀರಾವರಿ ಇಲಾಖೆ ಸಿಬ್ಬಂದಿ ಸೇರಿ ಎರಡು ಗಸ್ತು ತಂಡಗಳನ್ನು ನೇಮಿಸಲಾಗಿದೆ.

ಕೃಷ್ಣಾ ನದಿ ನೀರು ತಡೆದ ಹಿನ್ನೆಲೆಯಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ.

ಇದನ್ನೂ ಓದಿ | Congress Karnataka: ಬದಲಾಗ್ತಾರಾ ಕೆಪಿಸಿಸಿ ಅಧ್ಯಕ್ಷರು?; ಡಿಕೆಶಿ ಹೇಳಿಕೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆ ಶುರು!

ಮೇ 31 ರಿಂದ ಕರ್ನಾಟಕದಲ್ಲಿ ಶುರುವಾಗುತ್ತಾ ಮುಂಗಾರು ಮಳೆ ದರ್ಬಾರ್‌!

Monsoon 2024

ಬೆಂಗಳೂರು: ಮೇ 31ರಂದು ಪ್ರಸಕ್ತ ಸಾಲಿನ ಮುಂಗಾರು ಮಳೆಯು (Monsoon 2024) ಕೇರಳವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದೇಶದ ಕೃಷಿ ಚಟುವಟಿಕೆಗಳನ್ನು ನಿರ್ಧರಿಸುವ ಮಳೆಯಾಗಿದ್ದರಿಂದ ರೈತರಲ್ಲಿ ಸಹಜವಾಗಿಯೇ ಸಮಾಧಾನ ತಂದಿದೆ. ಇನ್ನೂ ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು, ಜೂನ್‌ ಮೊದಲ ವಾರ ನೈರುತ್ಯ ಮುಂಗಾರು ಮಳೆ ಕರ್ನಾಟಕವನ್ನು ಪ್ರವೇಶ (Karnataka Monsoon 2024) ಮಾಡಲಿದೆ. ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ಹೊಂದಿದೆ.

ಒಂದು ವೇಳೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಕಾಣಿಸಿಕೊಂಡರೆ ಮುಂಗಾರು ಆಗಮನವು ಮುಂದಕ್ಕೆ ಹೋಗಲಿದೆ. ನೈರುತ್ಯ ಮಾನ್ಸೂನ್ ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ವ್ಯಾಪಿಸಿದೆ. ಮೇ 31ಕ್ಕೆ ನೈರುತ್ಯ ಮುಂಗಾರು ಕೇರಳ ಕರಾವಳಿಗೆ ಆಗಮಿಸುವ ನಿರೀಕ್ಷೆ ಇದೆ. ಅಲ್ಲಿಂದ ಕರ್ನಾಟಕ ಕರಾವಳಿಗೆ ಜೂನ್ 1 ಅಥವಾ 2ರಂದು ಪ್ರವೇಶಿಸಬಹುದು. ಕರಾವಳಿಯಿಂದ ಕ್ರಮೇಣ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಪ್ರದೇಶಗಳಿಗೆ ವ್ಯಾಪಿಸಲಿದೆ ಎಂದು ಹವಾಮಾನ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ.

ಕೊಡಗಿನಲ್ಲಿ ವಿಪತ್ತು ನಿರ್ವಹಣಾ ತಂಡ ವಾಸ್ತವ್ಯ

ಮುಂಗಾರು ಪ್ರವೇಶಕ್ಕೆ ದಿನಗಣನೆ ಆರಂಭವಾಗಿದೆ. ಜೂನ್ ಮೊದಲ ವಾರಕ್ಕೆ ಕೊಡಗು ಜಿಲ್ಲೆಗೆ ಮುಂಗಾರು ಎಂಟ್ರಿಯಾಗಲಿದೆ. ಕಳೆದ ಬಾರಿಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಮಳೆಯಾಗಲಿದೆ ಎಂದು ಎಂದು ಹವಾಮಾನ ಇಲಾಖೆಯು ಕೊಡಗು ಜಿಲ್ಲಾಡಳಿತಕ್ಕೆ‌ ಮಾಹಿತಿ ರವಾನಿಸಿದೆ. ಈ ಬಾರಿಯ ಮಳೆಗಾಲಕ್ಕೆ ಕೊಡಗು ಜಿಲ್ಲಾಡಳಿತ ಕೂಡ ತಯಾರಿ ನಡೆಸಿಕೊಳ್ಳುತ್ತಿದೆ. ಮೇ ತಿಂಗಳ ಅಂತ್ಯಕ್ಕೆ ಜಿಲ್ಲೆಗೆ ಎನ್.ಡಿ.ಆರ್ ಎಫ್ ತಂಡ ಆಗಮಿಸಲಿದೆ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ತಿಳಿಸಿದ್ದಾರೆ. 26 ಮಂದಿಯನ್ನು ಒಳಗೊಂಡ ಎನ್.ಡಿ.ಆರ್ ಎಫ್ ಟೀಮ್ ಈ ಬಾರಿ ಆಗಮಿಸಲಿದೆ. ಕಳೆದ ಬಾರಿ ಜಿಲ್ಲೆಗೆ ಬಂದಿದ್ದ ಎನ್.ಡಿ.ಆರ್.ಎಫ್‌ಗೆ ಬೆಟಾಲಿಯನ್ ಕಳುಹಿಸುವಂತೆ ಜಿಲ್ಲಾಡಳಿತ ಮ‌ನವಿ‌ ಮಾಡಿದೆ. ಕಳೆದ ಬಾರಿ ಬಂದ ತಂಡವೆ ಈ ಸಲವು ಆಗಮಿಸಲಿದೆ. ಕೊಡಗಿನಲ್ಲಿ ಮಳೆಗಾಲ ಮುಗಿಯುವವರೆಗೂ ವಿಪತ್ತು ನಿರ್ವಹಣಾ ತಂಡ ಜಿಲ್ಲೆಯಲ್ಲೆ ವಾಸ್ತವ್ಯ ಹೂಡಲಿದೆ.

ಇದನ್ನೂ ಓದಿ: Monsoon 2024: ರೈತರಿಗೆ ಗುಡ್‌ ನ್ಯೂಸ್;‌ ಮುಂಗಾರು ಮಳೆ ಆಗಮನಕ್ಕೆ ಫಿಕ್ಸ್‌ ಆಯ್ತು ದಿನಾಂಕ!

ಭಾರಿ ಮಳೆ ಹಿನ್ನೆಲೆ ಯೆಲ್ಲೋ ಅಲರ್ಟ್‌ ಘೋಷಣೆ

ಮೇ 26ರಂದು ರಾಜ್ಯಾದ್ಯಂತ ಹಗುರವಾದ ಮಳೆಯಾಗುವ (Rain News) ಸಾಧ್ಯತೆ ಇದ್ದು, ವಿವಿಧೆಡೆ ಗುಡುಗು ಸಹಿತ 50-60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಈ ಕುರಿತು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ. ದಕ್ಷಿಣ ಒಳನಾಡಿನ ಕೋಲಾರ, ರಾಮನಗರ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.

ಉತ್ತರ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಪ್ರತ್ಯೇಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿಗೆ ಯಾವುದೇ ಮಳೆ ಮುನ್ಸೂಚನೆ ಇಲ್ಲ ಬದಲಿಗೆ ಒಣ ಹವೆ ಇರುವ ಸಾಧ್ಯತೆ ಇದೆ. ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

Porsche Crash: ಇಬ್ಬರ ಸಾವಿಗೆ ಕಾರಣವಾದ 17 ವರ್ಷದ ಬಾಲಕನಿಗೆ ಪೋರ್ಶೆ ಕಾರು ಸಿಕ್ಕಿದ್ದು ʼಬರ್ತ್‌ಡೇ ಗಿಫ್ಟ್‌ʼ!

Porsche Crash: ಮೇ 19ರಂದು ಪುಣೆಯಲ್ಲಿ ಅಪಘಾತ ಸಂಭವಿಸಿದೆ. ಕಲ್ಯಾಣಿ ನಗರದಲ್ಲಿ ಕುಡಿದು ವೇಗವಾಗಿ ಕಾರು ಚಲಾಯಿಸಿದ ಕಾರಣ ಮಧ್ಯಪ್ರದೇಶದ ಅಶ್ವಿನಿ ಕೋಷ್ಟ ಹಾಗೂ ಅನೀಶ್‌ ಅವಾಧಿಯಾ ಎಂಬ ಇಬ್ಬರು ಟೆಕ್ಕಿಗಳು ಮೃತಪಟ್ಟಿದ್ದಾರೆ. ವಿಶಾಲ್‌ ಅಗರ್ವಾಲ್‌ ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದು, ಅವರು ಪ್ರಭಾವ ಬೀರಲು ಯತ್ನಿಸಿದ್ದರು. ಈಗ ಬಾಲಕನ ತಂದೆ ಹಾಗೂ ತಾತನನ್ನು ಬಂಧಿಸಲಾಗಿದೆ.

VISTARANEWS.COM


on

Porsche Car Crash
Koo

ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ 17 ವರ್ಷದ ಬಾಲಕನು ಮದ್ಯಪಾನ ಮಾಡಿ ಪೋರ್ಶೆ ಕಾರು ಚಲಾಯಿಸಿ, ಅಪಘಾತದಲ್ಲಿ (Porsche Crash) ಇಬ್ಬರ ಸಾವಿಗೆ ಕಾರಣವಾದ ಪ್ರಕರಣವು (Pune Car Accident) ದೇಶಾದ್ಯಂತ ಸುದ್ದಿಯಾಗಿದೆ. ಅಪ್ರಾಪ್ತನ ಕೈಗೆ ಕಾರು ಕೊಟ್ಟ ಹಿನ್ನೆಲೆಯಲ್ಲಿ 17 ವರ್ಷದ ಬಾಲಕನ ತಂದೆ ವಿಶಾಲ್‌ ಅಗರ್ವಾಲ್‌ ಹಾಗೂ ಅವರ ತಾತ ಸುರೇಂದ್ರ ಅಗರ್ವಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ, ಬಾಲಕನು ಚಲಾಯಿಸಿದ ಪೋರ್ಶೆ ಕಾರನ್ನು (Porsche) ಆತನ ತಾತನು ಬರ್ತ್‌ಡೇ ಗಿಫ್ಟ್‌ ಆಗಿ ಕೊಟ್ಟಿದ್ದರು ಎಂದು ತಿಳಿದುಬಂದಿದೆ.

ಮೇ 19ರಂದು ಪುಣೆಯಲ್ಲಿ ಅಪಘಾತ ಸಂಭವಿಸಿದೆ. ಕಲ್ಯಾಣಿ ನಗರದಲ್ಲಿ ಕುಡಿದು ವೇಗವಾಗಿ ಕಾರು ಚಲಾಯಿಸಿದ ಕಾರಣ ಮಧ್ಯಪ್ರದೇಶದ ಅಶ್ವಿನಿ ಕೋಷ್ಟ ಹಾಗೂ ಅನೀಶ್‌ ಅವಾಧಿಯಾ ಎಂಬ ಇಬ್ಬರು ಟೆಕ್ಕಿಗಳು ಮೃತಪಟ್ಟಿದ್ದಾರೆ. ವಿಶಾಲ್‌ ಅಗರ್ವಾಲ್‌ ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದು, ಅವರು ಪ್ರಭಾವ ಬೀರಲು ಯತ್ನಿಸಿದ್ದರು. ಅಪಘಾತಕ್ಕೆ ಕಾರಣವಾದ 17 ವರ್ಷದ ಬಾಲಕನಿಗೆ ಪೊಲೀಸ್‌ ಠಾಣೆಯಲ್ಲಿ ಪಿಜ್ಜಾ ಕೂಡ ಪೂರೈಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ಶ್ರೀಮಂತ ಕುಟುಂಬದ 17 ವರ್ಷದ ಬಾಲಕನಿಗೆ ಆತನ ತಾತನು ಹುಟ್ಟುಹಬ್ಬದ ಉಡುಗೊರೆಯಾಗಿ ಪೋರ್ಶೆ ಟೇಕ್ಯಾನ್‌ (ಸುಮಾರು 2 ಕೋಟಿ ರೂ.) ಕಾರು ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ.

“ಬಾಲಕನ ಜನ್ಮದಿನದ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಆತನ ತಾತನು ಐಷಾರಾಮಿ ಕಾರಿನ ಫೊಟೊವನ್ನು ವಾಟ್ಸ್ಆ್ಯಪ್‌ನಲ್ಲಿ ಶೇರ್‌ ಮಾಡಿದ್ದರು” ಎಂಬುದಾಗಿ ಬಾಲಕನ ಸ್ನೇಹಿತನು ಹೇಳಿದ್ದಾನೆ ಎಂಬುದಾಗಿ ವರದಿಗಳು ತಿಳಿಸಿವೆ. ರೆಸ್ಟೋರೆಂಟ್‌ನಲ್ಲಿ ಮದ್ಯಪಾನ ಮಾಡಿ, ಅದಕ್ಕಾಗಿ 45 ಸಾವಿರ ರೂ. ಬಿಲ್‌ ಪಾವತಿಸಿ, ಅತಿಯಾದ ವೇಗದಲ್ಲಿ ಕಾರು ಚಲಾಯಿಸಿದ ಕಾರಣ ಅಪಘಾತ ಸಂಭವಿಸಿದೆ. ಕಾರು ಓಡಿಸಿದ ವೇಗ ನೋಡಿದರೆ ಭಯ ಹುಟ್ಟಿಸುವಂತಿದೆ. ಇದಾದ ಬಳಿಕ ಅಪಘಾತದ ಹೊಣೆಯನ್ನು ನೀನೇ ಹೊತ್ತುಕೊ ಎಂಬುದಾಗಿ ವಾಹನ ಚಾಲಕನಿಗೆ ಬಾಲಕನ ತಂದೆ ಒತ್ತಡ ಹೇರಿದ್ದರು ಎಂದು ತಿಳಿದುಬಂದಿದೆ.

ಪುಣೆಯಲ್ಲಿ ಮಗನು ಬೈಕ್‌ಗೆ ಕಾರು ಗುದ್ದಿಸಿ, ಇಬ್ಬರ ಸಾವಿಗೆ ಕಾರಣವಾದ ಪ್ರಕರಣ ಸುದ್ದಿಯಾಗುತ್ತಲೇ ಉದ್ಯಮಿ ವಿಶಾಲ್‌ ಅಗರ್ವಾಲ್‌ ತಲೆಮರೆಸಿಕೊಂಡಿದ್ದರು. ಮೊದಲು ಪುಣೆಯ ತಮ್ಮ ನಿವಾಸಕ್ಕೆ ತೆರಳಿದ್ದ ಅವರು, ಅಲ್ಲಿಂದ ಡೌಂಡ್‌ನಲ್ಲಿರುವ ಫಾರ್ಮ್‌ಹೌಸ್‌ಗೆ ಹೋದರು. ಅಲ್ಲಿಂದ, ಕೊಲ್ಹಾಪುರಕ್ಕೆ ಪರಾರಿಯಾದ ಅವರು ಅಲ್ಲಿ ಗೆಳೆಯನನ್ನು ಭೇಟಿಯಾದರು. ಅಲ್ಲಿ, ಪೊಲೀಸರಿಂದ ಪರಾರಿಯಾಗಲು ಮತ್ತೊಂದು ಯೋಜನೆ ರೂಪಿಸಿದರು ಎಂದು ತಿಳಿದುಬಂದಿದೆ.

ವಿಶಾಲ್‌ ಅಗರ್ವಾಲ್‌ ಇಷ್ಟೆಲ್ಲ ಯೋಜನೆ ರೂಪಿಸಿದರೂ ಪುಣೆ ಕ್ರೈಂ ಬ್ರ್ಯಾಂಚ್‌ ಪೊಲೀಸರು ಸಂಭಾಜಿನಗರದಲ್ಲಿ ವಿಶಾಲ್‌ ಅಗರ್ವಾಲ್‌ ಅವರನ್ನು ಬಂಧಿಸಿದರು. ಸಿಸಿಟಿವಿ ಕ್ಯಾಮೆರಾ ಹಾಗೂ ವಿಶಾಲ್‌ ಅಗರ್ವಾಲ್‌ ಗೆಳೆಯನ ಕಾರಿನ ಜಿಪಿಎಸ್‌ ಟ್ರ್ಯಾಕ್‌ ಮಾಡಿ, ಕೊನೆಗೂ ಅವರನ್ನು ಬಂಧಿಸಿದ್ದಾರೆ. ಸಂಭಾಜಿ ನಗರದ ಲಾಡ್ಜ್‌ನಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು. ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ವಿಶಾಲ್‌ ಅಗರ್ವಾಲ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ಕೂಡ ದಾಖಲಿಸಿದ್ದಾರೆ.

ಇದನ್ನೂ ಓದಿ: Porsche Crash: 2 ಕಾರು, 4 ನಗರ, 1 ಸಿಮ್‌ ಕಾರ್ಡ್;‌ ಮಗ ಕಾರು ಗುದ್ದಿದ ಬಳಿಕ ಅಪ್ಪನ ಪ್ಲಾನ್‌ ಏನು? ಇಲ್ಲಿದೆ ಭೀಕರ ಮಾಹಿತಿ

Continue Reading

ಪ್ರಮುಖ ಸುದ್ದಿ

Electric Scooters : ದೊಡ್ಡ ಬೂಟ್​ ಸ್ಪೇಸ್ ಇರುವಂಥ 5 ಎಲೆಕ್ಟ್ರಿಕ್​ ಸ್ಕೂಟರ್​ಗಳು ಇವು

Electric Scooters : ಭಾರತೀಯ ಮಾರುಕಟ್ಟೆಯಲ್ಲಿರುವ ಐದು ಎಲೆಕ್ಟ್ರಿಕ್ ಸ್ಕೂಟರ್​ಗಳ ಬೂಟ್ ಸ್ಪೇಸ್​​ಗಳ ಮಾಹಿತಿ ನೀಡಲಾಗಿದೆ. ನಿಮಗೆ ಯಾವುದು ಇಷ್ಟವಾಯಿತು ಎಂಬುದನ್ನು ತಿಳಿಸಿ. ಹೋಲಿಕೆಗೊಂದು ಮಾಹಿತಿ, ನಾವು ರಸ್ತೆಯಲ್ಲಿ ಹೆಚ್ಚಾಗಿ ನೋಡುವ ಹೋಂಡಾ ಆ್ಯಕ್ಟಿವಾ ಎಲೆಕ್ಟ್ರಿಕ್​ ಸ್ಕೂಟರ್​ 18 ಲೀಟರ್ ಬೂಟ್​ ಸ್ಪೇಸ್ ಹೊಂದಿದೆ.

VISTARANEWS.COM


on

Electric Scooters
Koo

ಬೆಂಗಳೂರು: ಸ್ಕೂಟರ್​​ಗಳು ಅತ್ಯಂತ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಅದು ಪ್ರಾಯೋಗಿಕ ಅದು ಹೆಚ್ಚು ಉಪಯೋಗಕಾರಿ. ಯಾಕೆಂದರೆ ಸ್ಕೂಟರ್​​ಗಳಲ್ಲಿ ಹೆಚ್ಚು ಬೂಟ್​ ಸ್ಪೇಸ್​ ಹೊಂದಿದೆ. ಅದರಲ್ಲೂ ಎಲೆಕ್ಟ್ರಿಕ್​ ಸ್ಕೂಟರ್​ಗಳು ಹೆಚ್ಚು ಉಪಯೋಗಕಾರಿ. ಜತೆಗೆ ಹೈಟೆಕ್​ ಫೀಚರ್​ಗಳೂ ಇವೆ. ಇಂದಿನ ಕೆಲವು ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿನ ಬೂಟ್​ ಸ್ಪೇಸ್​ ಎಷ್ಟು ದೊಡ್ಡದಾಗಿದೆ ಎಂದರೆ ನಿಮಗೆ ಒಂದು ಕಲ್ಪನೆ ಮಾಡಲೂ ಸಾಧ್ಯವಿಲ್ಲದಷ್ಟು ದೊಡ್ಡದಾಗಿದೆ. ಹೀಗಾಗಿ ಭಾರತೀಯ ಮಾರುಕಟ್ಟೆಯಲ್ಲಿರುವ ಐದು ಎಲೆಕ್ಟ್ರಿಕ್ ಸ್ಕೂಟರ್​ಗಳ ಬೂಟ್ ಸ್ಪೇಸ್​​ಗಳ ಮಾಹಿತಿ ನೀಡಲಾಗಿದೆ. ನಿಮಗೆ ಯಾವುದು ಇಷ್ಟವಾಯಿತು ಎಂಬುದನ್ನು ತಿಳಿಸಿ. ಹೋಲಿಕೆಗೊಂದು ಮಾಹಿತಿ, ನಾವು ರಸ್ತೆಯಲ್ಲಿ ಹೆಚ್ಚಾಗಿ ನೋಡುವ ಹೋಂಡಾ ಆ್ಯಕ್ಟಿವಾ ಎಲೆಕ್ಟ್ರಿಕ್​ ಸ್ಕೂಟರ್​ 18 ಲೀಟರ್ ಬೂಟ್​ ಸ್ಪೇಸ್ ಹೊಂದಿದೆ.

ರಿವರ್ ಇಂಡಿ -​ 43 ಲೀಟರ್

ರಿವರ್​ ಇಂ ಡಿ ಕಂಪನಿಯ ​ ಸ್ಕೂಟರ್ 43 ಲೀಟರ್ ಬೂಟ್​ ಸ್ಪೇಸ್​ ಹೊಂದಿದೆ. ಇದರ ಬೂಟ್​ ಸ್ಪೇಸ್​ ನೋಡಿದರೆ ಇದಕ್ಕೆ ಯಾವುದೇ ಪರ್ಯಾಯ ಇಲ್ಲ. ಇದು ಯಾವುದೇ ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಅತಿದೊಡ್ಡ ಶೇಖರಣಾ ಸ್ಥಳವಾಗಿದೆ. ಪ್ರಾಯೋಗಿವಾಗಿ ಇಂಡಿ ಸ್ಕೂಟರ್​ನಲ್ಲಿ ಒಂದು ಜೋಡಿ ಪ್ಯಾನಿಯರ್ ಗಳು ಮತ್ತು ಅಕ್ಸಸರಿ ಹಾಗೂ ಟಾಪ್ ಬಾಕ್ಸ್ ನೀಡಲಾಗುತ್ತದೆ. ಇದು ಅದರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಅಥೆರ್ ರಿಶ್ತಾ- 34 ಲೀಟರ್

ರಿಶ್ತಾ ಮತ್ತು ಜೆನ್ 2 ಓಲಾ ಮಾದರಿಗಳು ಒಂದೇ ರೀತಿಯ ಬೂಟ್​ ಸ್ಪೇಸ್​ ಹೊಂದಿದೆ. ಆದರೆ, ಓಲಾದಲ್ಲಿ ಅದರ ಬೂಟ್​ ಸ್ಪೇಸ್​ ಆಳವಿಲ್ಲದ ಕಾರಣ ಅಥೆರ್ ಒಂದು ಹೆಜ್ಜೆ ಮುಂದಕ್ಕೆ ನಿಲ್ಲುತ್ತದೆ. ಅಥೆರ್ ರಿಜ್ಟಾದ ಆಳವಾದ ಶೇಖರಣಾ ಸಾಮರ್ಥ್ಯ ಹೊಂದಿದೆ. ಅಥೆರ್ ಬೂಟ್ ನ ಸ್ವಲ್ಪ ದೂರದಲ್ಲಿ ಒಂದು ಸಣ್ಣ ಕ್ಯೂಬಿಯನ್ನು ನೀಡಿದೆ. ಅಲ್ಲಿ ನೀವು ನಿಮ್ಮ ಸ್ಮಾರ್ಟ್ ಫೋನ್, ವ್ಯಾಲೆಟ್ ಮುಂತಾದ ನಿಕ್-ನಾಕ್ ಗಳನ್ನು ಇಟ್ಟುಕೊಳ್ಳಬಹುದು.

ಇದನ್ನೂ ಓದಿ: Jawa Yezdi : ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ನ ಜಾವಾ 42 ಬಾಬರ್ ರೆಡ್ ಶೀನ್‌ ಬಿಡುಗಡೆ

ಜೆನ್ 2 ಓಲಾ ಎಸ್ 1 ವೇರಿಯೆಂಟ್​- 34 ಲೀಟರ್

ಜೆನ್ 2 ಪ್ಲಾಟ್ ಫಾರ್ಮ್ ಗೆ ಸ್ಥಳಾಂತರಗೊಳ್ಳುವುದರೊಂದಿಗೆ, ಓಲಾದ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 34 ಲೀಟರ್ ಬೂಟ್ ಸಾಮರ್ಥ್ಯ ನೀಡಲಾಗಿದೆ. ವಾಸ್ತವವಾಗಿ 36 ಲೀಟರ್ ಬೂಟ್ ಸಾಮರ್ಥ್ಯ ಹೊಂದಿದ್ದ ಜೆನ್ 1 ಓಲಾ ಮಾದರಿಗಳಿಗಿಂತ ಸ್ವಲ್ಪ ಕಡಿಮೆ ಎನಿಸಿದೆ. ಏನೇ ಇರಲಿ ಓಲಾ ಎಲೆಕ್ಟ್ರಿಕ್ ಗಳು ಮಾರುಕಟ್ಟೆಯಲ್ಲಿ ದೊಡ್ಡ ಬೂಟ್ ನೀಡಿದ ಮೊದಲ ಎಲೆಕ್ಟ್ರಿಕ್ ಸ್ಕೂಟರ್​​.

ಟಿವಿಎಸ್ ಐಕ್ಯೂಬ್ 32 ಲೀಟರ್

ಐಕ್ಯೂಬ್ ಮೊದಲ ಬಾರಿಗೆ ಬಿಡುಗಡೆಯಾದಾಗ ಮಾರಾಟದಲ್ಲಿದ್ದ ಎರಡು ರೂಪಾಂತರಗಳು ಕೇವಲ 17 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಸ್ಥಳ ಹೊಂದಿದ್ದವು. ಟಿವಿಎಸ್ ಈಗ ಜನಪ್ರಿಯ ಇ-ಸ್ಕೂಟರ್ ನ ಎಲ್ಲಾ ರೂಪಾಂತರಗಳ (ಬೇಸ್ ಐಕ್ಯೂಬ್ 2.2 ಕಿಲೋವ್ಯಾಟ್ ಹೊರತುಪಡಿಸಿ) ಬೂಟ್ 32 ಲೀಟರ್ ಗಳಿಗೆ ಹೆಚ್ಚಿಸಿದೆ. ಬೇಸ್ ಐಕ್ಯೂಬ್ 2.2 30 ಲೀಟರ್ ನಲ್ಲಿ ವೇರಿಯೆಂಟ್​ನಲ್ಲಿ 30 ಲೀಟರ್ ಬೂಟ್​ ಸ್ಪೇಸ್​ ನೀಡಲಾಗಿದೆ.

ಸಿಂಪಲ್ ಒನ್ 30 ಲೀಟರ್

ಸಿಂಪಲ್ ಒನ್ ಸ್ಕೂಟರ್​ 30 ಲೀಟರ್ ಬೂಟ್ ಸ್ಪೇಸ್​ ಐದು ಸ್ಕೂಟರ್​ಗಳ ಪಟ್ಟಿಯಲ್ಲಿ ಅತ್ಯಂತ ಚಿಕ್ಕದು. ಸಿಂಪಲ್ ಒನ್​ ಸ್ಕೂಟರ್ ಹೆಚ್ಚು ಜನಪ್ರಿಯವಾಗಿಲ್ಲ ಎಂಬುದು ಮೊದಲ ಮಾತು. ಅದರೆ, ಅದರ ಬೂಟ್​ ಸ್ಪೇಸ್​​ ಸ್ಪರ್ಧಾತ್ಮಕವಾಗಿದೆ. ಇಂಡಿ ಹೊರತುಪಡಿಸಿ ಟಿವಿಎಸ್​, ಅಥೆರ್ ಹಾಗೂ ಓಲಾ ಸ್ಕೂಟರ್​ಗಳು ನಾನಾ ರೀತಿಯಲ್ಲಿ ಜನಪ್ರಿಯವಾಗಿದೆ. ಆದಾಗ್ಯೂ ಸಿಂಪನ್​ ಒನ್​ ಸ್ಪರ್ಧಾತ್ಮಕ ರೀತಿಯಲ್ಲೇ ಬೂಟ್​ ಸ್ಪೇಸ್​ ನೀಡುತ್ತಿದೆ.

Continue Reading
Advertisement
Karnataka Rain
ಮಳೆ4 mins ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

MS Dhoni
ಕ್ರೀಡೆ8 mins ago

M S Dhoni: ಫ್ರಾನ್ಸ್ ಮೂಲದ ಕಾರು ಕಂಪನಿಯ ಬ್ರಾಂಡ್​ ಅಂಬಾಸಿಡರ್ ಆಗಿ ನೇಮಕಗೊಂಡ ಲೆಜೆಂಡ್​ ಧೋನಿ

Karnataka Council Election
ಕರ್ನಾಟಕ21 mins ago

ವಿಧಾನ ಪರಿಷತ್‌ ಚುನಾವಣೆ: ಖರ್ಗೆ, ಸಿದ್ದು, ಡಿಕೆಶಿ ಆಪ್ತರಿಗೆ ಸ್ಥಾನ ಕೊಡಿಸಲು 2+2+2+1=7 ಫಾರ್ಮುಲಾ; ಏನಿದು?

Krishna Water Dispute
ಕರ್ನಾಟಕ30 mins ago

Krishna Water Dispute: ಕೃಷ್ಣಾ ನೀರಿನ ವಿಚಾರ ಮತ್ತೆ ಮಹಾ ಕ್ಯಾತೆ; ರಾಜ್ಯಕ್ಕೆ ಹರಿದು ಬರ್ತಿದ್ದ ನೀರು ತಡೆ ಹಿಡಿದ ಮಹಾರಾಷ್ಟ್ರ!

Latest42 mins ago

Shilpa Shetty : 3.5 ಕೋಟಿ ರೂಪಾಯಿ ಬೆಲೆಯ ರೇಂಜ್​ ರೋವರ್​​ ಕಾರು ಖರೀದಿಸಿದ ಶಿಲ್ಪಾ ಶೆಟ್ಟಿ; ವಿಡಿಯೊ ನೋಡಿ

Actor Darshan fans against forest officials Construction of Arjuna tomb
ಸ್ಯಾಂಡಲ್ ವುಡ್43 mins ago

Actor Darshan: ಅರ್ಜುನನ ಸಮಾಧಿ ನಿರ್ಮಾಣ: ಅರಣ್ಯಾಧಿಕಾರಿಗಳ ವಿರುದ್ಧ ದರ್ಶನ್ ಅಭಿಮಾನಿಗಳಿಂದ ಆಕ್ರೋಶ!

Mango Nail Art
ಫ್ಯಾಷನ್45 mins ago

Mango Nail Art: ಸಮ್ಮರ್‌ ಸೀಸನ್‌ನಲ್ಲಿ ಬಂತು ಮ್ಯಾಂಗೋ ನೇಲ್‌ ಆರ್ಟ್!

Viral News
ವೈರಲ್ ನ್ಯೂಸ್46 mins ago

Viral News: ಕಂಪನಿಯಲ್ಲಿ 1 ವರ್ಷ ವೇತನ ಸಹಿತ ರಜೆ ಪಡೆದ ಉದ್ಯೋಗಿ; ಈ ಲಕ್‌ ನಿಮ್ಮದಾಗಬೇಕೆ? ಹೀಗೆ ಮಾಡಿ

Basavanagudi News
ಬೆಂಗಳೂರು59 mins ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Road Accident
ಕರ್ನಾಟಕ1 hour ago

Road Accident: ಕೆಎಸ್ಆರ್‌ಟಿಸಿ ಬಸ್-ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 mins ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು59 mins ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌