Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ? - Vistara News

ಪ್ರಮುಖ ಸುದ್ದಿ

Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

ಈ ವಾರ ಅಂದರೆ ಜನವರಿ 29 ರಿಂದ ಫೆಬ್ರವರಿ 4 ರವರೆಗೆ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ (Weekly Horoscope), ಯಾವ ರಾಶಿಯವರ ಅದೃಷ್ಟ ಸಂಖ್ಯೆ ಎಷ್ಟು, ಶುಭ ದಿಕ್ಕು ಯಾವುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಮೇಷ: ನಿಮ್ಮ ಕುಶಾಗ್ರತೆಗೆ ಮನ್ನಣೆ

Weekly Horoscope

ದುಡಿಯುತ್ತೀರಿ, ಹಣಗಳಿಸುತ್ತೀರಿ. ಏನೋ ಒಂದು ಉತ್ತಮ ಮೊತ್ತ ದೊರಕಿದ ಸಮಾಧಾನವನ್ನೂ ಪಡೆಯುತ್ತೀರಿ. ಆದರೆ ಹಣ ನಿಲ್ಲಲಾರದು ಎಂಬ ಹಳ ಹಳಿಕೆ ದೂರವಾಗದು. ಕೃಷಿ ಹೈನೋದ್ಯಮ, ಕುರಿ ಸಾಕಣಿಕೆ, ಕೋಳಿ ಸಾಕಣಿಕೆ, ವಾಣಿಜ್ಯ ಕೃಷಿ ಉತ್ಪನ್ನಗಳು ಇತ್ಯಾದಿ ಕೈ ಹಿಡಿಯಬಲ್ಲವು. ತಾಂತ್ರಿಕ ಪರಿಣಿತರು, ವಿದ್ಯುನ್ಮಾನ ತಂತ್ರಜ್ಞರು ಬಳಲಿಕೆ ಇದ್ದರೂ ನಿಮ್ಮ ಕುಶಾಗ್ರತೆಗೆ ಮನ್ನಣೆ ಸಿಗುವ ವರ್ತಮಾನ ನಿಮಗೆ ಅನುಕೂಲಕರವಾಗಿ ಒದಗಿ ಬರಬಲ್ಲದು. ಮಹಾಗಣಪತಿಯ್ನು ಸ್ತುತಿಸಿ, ಲಾಭ ಇದೆ.
ಶುಭ ಸಂಖ್ಯೆ: 6 ಶುಭ ದಿಕ್ಕು: ಪಶ್ಚಿಮ

ವೃಷಭ: ಮಾನಸಿಕ ಶಾಂತಿಯೇ ನಿಮಗೆ ವಜ್ರಾಯುಧ!

Weekly Horoscope

ಮೂಗಿನ ತುದಿಗೇ ಕೋಪ ಎಂಬುದನ್ನು ಕೈ ಬಿಡಿ. ಹಲವು ಉನ್ನತ ಸ್ಥಾನಮಾನ, ಪ್ರಮೋಷನ್‌ ಇತ್ಯಾದಿ ಸಂಪಾದಿಸಲು ಕಾಲ ಸರಳವಾಗುತ್ತದೆ. ಮಾತಿನ ಮೇಲೆ ನಿಯಂತ್ರಣ ಇರಲಿ. ವಿನಯ ಪೂರ್ಣವಾದ ನಡೆ ನುಡಿಗಾಗಿ ಪ್ರಯತ್ನಿಸುವಿರಾದರೂ ಅನಾವಶ್ಯಕವಾಗಿ ನಿಮ್ಮನ್ನು ಕೆರಳಿಸುವವರ ಮಾತಿಗೆ ಕಿವಿಕೊಡದಿರಿ. ಹಲವು ವಿರೋಧಿಗಳಿಂದಲೇ ನಿಮಗೆ ಸಹಾಯ ಒದಗಿ ಬರಬಲ್ಲದು. ಮಾನಸಿಕ ಶಾಂತಿಯೇ ನಿಮ್ಮ ವಜ್ರಾಯುಧವಾಗಿದ್ದು ಕಾವೇರಿದ ವಾತಾವರಣ ನಿಗ್ರಹಿಸಿ. ಮಹಾಗಣಪತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಆಗ್ನೇಯ

ಮಿಥುನ: ನಿಮ್ಮ ವರ್ಚಸ್ಸು ಹೆಚ್ಚುವ ಸಮಯ

Weekly Horoscope

ವರ್ಚಸ್ವೀ ವ್ಯಕ್ತಿಯಾಗಿ ಎದ್ದು ನಿಲ್ಲುವಲ್ಲಿ ವರ್ತಮಾನ ನಿಮ್ಮ ಸಹಾಯಕ್ಕೆ ಒದಗಿ ಬರಲಿದೆ. ಹಾಗೆಯೇ ಕೌಟುಂಬಿಕ ವಿಚಾರದಲ್ಲಿ ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುವ ವ್ಯವಧಾನ ಕಳಕೊಳ್ಳದಿರಿ. ನಿಮ್ಮ ಪಾಲಿನ ಕೆಲವು ಪ್ರಾಪ್ತಿಯನ್ನು ಪಡೆಯುವಲ್ಲಿ ಕೆಲ ಹಿರಿಯರಿಂದ ನಿಮಗೆ ಉತ್ತಮ ಬೆಂಬಲ ಲಭ್ಯ. ಮಕ್ಕಳ ಬಗೆಗೆ ಗಮನ ಇರಲಿ. ಅನಾವಶ್ಯಕ ಮೊಂಡಾಟಗಳಿಗೆ ಮಕ್ಕಳು ಹೆಜ್ಜೆ ಇರಿಸಲು ಸಾಧ್ಯ. ಮಕ್ಕಳನ್ನು ನಿಯಂತ್ರಿಸಿ. ಆದರೆ ಒತ್ತಡದಿಂದ ನಿಯಂತ್ರಿಸದಿರಿ, ಮಮತೆ ಇರಲಿ. ಶಿವನ ಸ್ತುತಿ ಕ್ಷೇಮ.
ಶುಭ ಸಂಖ್ಯೆ : 1 ಶುಭ ದಿಕ್ಕು: ಈಶಾನ್ಯ

ಕಟಕ: ಅತಿಯಾದ ಆತ್ಮವಿಶ್ವಾಸದಿಂದ ಕೇಡು

Weekly Horoscope

ಬಿರುಗಾಳಿಯ ಹೊಡೆತಕ್ಕೆ ಸಿಕ್ಕುಬಿದ್ದ ಅನುಭವ ಎದುರಾಗಬಹುದು. ಎದೆಗುಂದದೆಯೇ ಮುಂದೆ ಸಾಗುವ ಧೈರ್ಯ ಹೊಂದಿರಿ. ಅನಾವಶ್ಯಕವಾದ ವಿವಾದವನ್ನು ಯಾರ ಜತೆಗೂ ಮಾಡದಿರಿ. ಹಾಗೆಯೇ ಬಾಳ ಸಂಗಾತಿಯ ಜತೆಗೂ ಸಮಾಧಾನ ಮತ್ತು ಹೊಂದಾಣಿಕೆಯ ನಿಲುವಿರಲಿ. ಮನಸ್ಸಿನ ಶಾಂತಿಯ ಮೂಲಕವೇ ಕೆಲವು ಸಕಾರಾತ್ಮಕ ಬೆಳವಣಿಗೆಯ ಬಗೆಗಾಗಿನ ದಾರಿ ಲಭ್ಯವಾಗಲು ಸರಳವಾಗುತ್ತದೆ. ಧ್ಯೋಯೋದ್ದೇಶ ಗಳನ್ನು ನೆನಪಿನಲ್ಲಿಡಿ, ಹೊರತೂ ಅವಮಾನಕ್ಕಾಗಿ ಕುಗ್ಗದಿರಿ. ಭವಾನಿ ಶಂಕರನನ್ನು ಸ್ತುತಿಸಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಉತ್ತರ

ಸಿಂಹ: ಧೈರ್ಯದಿಂದ ಮುನ್ನುಗ್ಗಲು ಸೂಕ್ತ ಕಾಲ

Weekly Horoscope

ಉತ್ತಮವಾದ ಕಾಲಘಟ್ಟವಾದರೂ ಕೆಲವು ಕೀಳು ಮನೋಭಾವದ ಜನರ ಒರಟುತನವನ್ನು ನೀವು ಸಹಿಸಿಕೊಳ್ಳಲೇಬೇಕಾಗುತ್ತದೆ. ಮಕ್ಕಳ ವಿಚಾರದಲ್ಲಿ ಶುಭ ವಾರ್ತೆ ಇದೆ. ವಿವಾಹಾಪೇಕ್ಷಿಗಳಿಗೆ ಇದು ಸೂಕ್ತ ಕಾಲ. ಕಾಲದ ಕತ್ತಲು ಕತ್ತುಹಿಸುಕದಂತೆ ರಾಹು ಕವಚ ಓದಿ. ನರಸಿಂಹನನ್ನೂ ಸ್ತುತಿಸಿ, ಒಳತಿದೆ. ಧೈರ್ಯದಿಂದ ಮುನ್ನುಗ್ಗಲು ಕೂಡ ಈಗ ಕಾಲ ನಿಮಗೆ ಸ್ನೇಹಶೀಲವಾಗಿದೆ. ಹಣಕಾಸಿನ ಸ್ಥಿತಿಯ ಬಗೆಗೂ ನಿಮಗೆ ಪ್ರತಿಕೂಲ ಸನ್ನಿವೇಶ ಬರಲಾರದು. ವೈದ್ಯರುಗಳಿಗೆ ಸಂತಸದ ವಾರ್ತೆ. ಒಟ್ಟಿನಲ್ಲಿ ಒಳಿತಿನ ಕಾಲ.
ಶುಭ ಸಂಖ್ಯೆ : 8 ಶುಭ ದಿಕ್ಕು: ಪಶ್ಚಿಮ

ಕನ್ಯಾ: ಕೆಲಸದ ಸ್ಥಳದಲ್ಲಿ ಎಲ್ಲರಿಂದ ಪ್ರಶಂಸೆ

Weekly Horoscope

ನಿರಾಳವಾಗಿರಲು ಬೇಕಾದ ಉತ್ತಮ ಕಾಲಘಟ್ಟವಾಗಿದೆ ಇದು. ಆದರೂ ಮಹತ್ವದ ಸಂದರ್ಭದಲ್ಲಿ ಕುಹಕಿಗಳ ಅಪಸ್ವರ ನಿಮ್ಮ ಮನಃಶಾಂತಿಯನ್ನು ಕದಡಲು ಸಾಧ್ಯವಿದೆ. ಆದರೆ ನಿಮ್ಮಲ್ಲಿನ ಬೌದ್ಧಿಕ ಸೂಕ್ಷ್ಮ ಹಾಗೂ ಕೆಡುಕು, ಒಳಿತುಗಳ ಬಗೆಗಿನ ಸೂಕ್ತ ವಿವೇಚನೆ, ಕುಹಕಿಗಳನ್ನು ಕಟ್ಟಿ ಹಾಕಲು ಯುಕ್ತಿಯನ್ನು ಒದಗಿಸಲು ಅನುಕೂಲಕರವೇ ಆಗಿರುತ್ತದೆ. ಶನಿ ಕಾಟದಿಂದ ಬೇಸತ್ತು ಖಿನ್ನತೆಗೆ ದೂಡಲ್ಪಟ್ಟ ನೀವೀಗ ವಿರೋಧಿಗಳನ್ನು ಎದುರಿಸಲು ಅವಕಾಶಗಳು ಲಭ್ಯ. ಎದುರಾಳಿಗಳೇ ಲಾಭ ತರಬಲ್ಲರು. ಮಹಾವಿಷ್ಣುವನ್ನು ಆರಾಧಿಸಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಉತ್ತರ

ತುಲಾ: ಒತ್ತಡಗಳಿರುವ ವಾರ

Weekly Horoscope

ನಿಮ್ಮ ನೆಮ್ಮದಿಯ ಕ್ಷಣಗಳು ತಕ್ಕಡಿಯಂತೆ ಮೇಲೆ ಕೆಳಗೆ ಹೊಯ್ದಾಡುತ್ತ ಕಿರಿಕಿರಿ ಸೃಷ್ಟಿಸುತ್ತ ಹೋಗುವ ದಿನಗಳಾಗಿವೆ. ನಿಮ್ಮನ್ನು ಬಿಡಲಾರದ ಒತ್ತಡಗಳ ಬಗ್ಗೆ ತೀರಾ ಆಪ್ತರ ಬಳಿ ಮಾತ್ರ ಚರ್ಚಿಸಿ. ಇಲ್ಲದೇ ಹೋದರೆ ಕುಕೃತ್ಯಗಳಲ್ಲಿ ತೊಡಗಿಕೊಳ್ಳುವ, ತೊಡಗಿ ಕೊಂಡಿರುವ ಜನರು ಬ್ಯುಸಿನೆಸ್‌ ವಿಚಾರದಲ್ಲಿ ಅನೇಕ ಸಮಸ್ಯೆಗಳಿಗೆ ನಿಮ್ಮನ್ನು ದೂಡಿಯಾರು. ಪಾರ್ಟ್‌ನರ್‌ಶಿಪ್‌ ವಹಿವಾಟಿನಲ್ಲಿ ಎಚ್ಚರವಿರಲಿ. ಹಣವನ್ನು ಸಾಲವಾಗಿ ಕೊಡಲೇ ಬೇಡಿ. ಕೊಟ್ಟಿದ್ದು ವಾಪಾಸಾಗಲೂ ಪರದಾಡುವಿರಿ. ಎಚ್ಚರ, ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಈಶಾನ್ಯ

ವೃಶ್ಚಿಕ: ಯಶಸ್ಸಿನ ಮೆಟ್ಟಿಲೇರುವ ಸಮಯ

Weekly Horoscope

ರಾಜಕಾರಣ, ಸ್ಪರ್ಧಾತ್ಮಕ ಪರೀಕ್ಷೆಗಳು ಹೆಚ್ಚಿನ ಅಧಿಕಾರಯುತ ಸ್ಥಾನಕ್ಕಾಗಿನ ಅವಕಾಶಗಳು, ತೀರಾ ಮಹತ್ವದ ಪ್ರಮೋಷನ್‌ ಇತ್ಯಾದಿಗಳಿಗೆ ಕಾಲಘಟ್ಟ ಬಹಳ ಮಟ್ಟಿಗೆ ಸೂಕ್ತವಾಗಿದೆ. ಚುನಾವಣೆಯ ದಿನಗಳಾಗಿರುವ ಸಂದರ್ಭದಲ್ಲಿ ಸ್ಪರ್ಧೆಯ ಕುರಿತಾದ ವಿಚಾರವನ್ನು ನಿಯೋಜಿಸಬಹುದಾಗಿದೆ. ಬಾಸ್‌ಬಳಿ ಹಾರ್ದಿಕವಾದ ಸಂಬಂಧ ಹೊಂದಲು ಕಾಲದ ನೆರವು ನಿಮಗೀಗ ಲಭ್ಯ. ಬೌದ್ಧಿಕವಾಗಿ ಚುರುಕಾಗಿರುವ ಮಂದಿಗೆ ಅವಕಾಶಗಳು ವಾಣಿಜ್ಯ ರಂಗದಲ್ಲಿ ಒದಗಿ ಬರುವುದು ಸುಸ್ಪಷ್ಟ. ಶ್ರೀ ಗುರು ದತ್ತಾತ್ರೇಯನ್ನನು ಆರಾಧಿಸಿ.
ಶುಭ ಸಂಖ್ಯೆ : 9ಶುಭ ದಿಕ್ಕು: ದಕ್ಷಿಣ

ಧನಸ್ಸು: ಧೈರ್ಯವೇ ನಿಮ್ಮ ಗೆಲುವಿನ ಗುಟ್ಟು

Weekly Horoscope

ಧೈರ್ಯವೇ ಇದೀಗ ನಿಮ್ಮ ಬಂಡವಾಳ. ಅಷ್ಟೇ ಅಲ್ಲ ಗೆಲುವಿನ ಗುರಿ ತಲುಪಲು ಇದು ಸಂಜೀವಿನಿ ಕೂಡಾ. ಅಧೈರ್ಯದಿಂದ ಉಂಟಾಗುವ ಹೊಯ್ದಾಟ ಬೇಡ. ಸೂಕ್ತವಾದ ನಿರ್ಣಯಕ್ಕೆ ಬನ್ನಿ. ಚುರುಕಿನ ವಾಕ್‌ ಚಾತುರ್ಯದಿಂದ ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ. ವ್ಯವಹಾರಿಕ ವಿಚಾರದಲ್ಲಿ ಉದ್ಯಮಿಗಳು, ಆಡಳಿತಗಾರರು, ಷೇರು ಮಾರ್ಕೆಟ್‌ನ ಧನಪತಿಗಳು ನಿಮ್ಮ ಸಲಹೆ ಸೂಚನೆಗಳಿಗಾಗಿ ನಿಮ್ಮ ಬೆನ್ನು ಹಿಡಿಯುತ್ತಾರೆ. ಸೂಕ್ತವಾದ ಸಂಭಾವನೆ ಸರಿ, ಜಾಸ್ತಿ ಸಂಭಾವನೆಗೂ ಅವಕಾಶ ಜಾಸ್ತಿ. ಮಹಾಲಕ್ಷ್ಮೀಯನ್ನು ಸ್ತುತಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ನೈಋತ್ಯ

ಮಕರ: ತಪ್ಪು ನಿರ್ಧಾರ ಬೇಡವೇ ಬೇಡ

Weekly Horoscope

ಎದುರೇ ಎದ್ದೆದ್ದು ಬರುವ ಶರಧಿಯ ಹುಚ್ಚೆದ್ದ ತೆರೆಗಳು ಜೀವನದ ಸಂದರ್ಭದ ಚಟುವಟಿಕೆಗಳಲ್ಲಿ ರಭಸದಿಂದ ನಿಮ್ಮ ವಿರುದ್ಧ ದಾಳಿ ಎಬ್ಬಿಸಬಹುದಾಗಿದೆ. ನೆಲಕಚ್ಚಿ ನಿಲ್ಲಿ. ಸುಳಿಯ ವಿರುದ್ಧ ಹುಚ್ಚು ಆವೇಶದ ಕಡಲ ಅಲೆಗಳ ಸ್ವರೂಪದ ಸಮಸ್ಯೆಗಳಿರುವಾಗ ಹಗುರಾಗಿ ನಿರ್ಲಕ್ಷದಿಂದ ಈಜಾಡಲು ಹೋಗಬೇಡಿ. ಒಂದೇ ಒಂದು ತಪ್ಪು ನಿರ್ಧಾರ ದೊಡ್ಡದೇ ಬೆಲೆ ತೆರುವ ಪ್ರಮಾದ ಸೃಷ್ಟಿಸಬಹುದು. ಮನೆಯ, ಕುಟುಂಬದ ಜಗಳ ಹೊರ ಜನರ ದೃಷ್ಟಿಗೆ ಬಾರದಂತೆ ನೋಡಿ. ನಗೆಪಾಟಲು ಆಗದಿರಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ನೈಋತ್ಯ

ಕುಂಭ: ಎಚ್ಚರಿಕೆಯಿಂದಿರಬೇಕಾದ ಸಮಯ

Weekly Horoscope

ನಿಮ್ಮ ವಿಶ್ವಾಸದ ವಿಚಾರ ನಿಮಗೆ ಹಲವಾರು ಸಮಸ್ಯೆಗಳನ್ನು ಗೆಲ್ಲಿಸಿಕೊಟ್ಟಿರಬಹುದಾದರೂ ಈಗ “ಅರೆ ಭಾಯ್‌ , ಚಲೇಗಾ ಸಬ್‌ʼʼ ಎಂಬ ಧೋರಣೆ ಹೊಂದದಿರಿ. ಹಿಮಾಲಯವನ್ನು ಹತ್ತಿರಬಹುದು ನೀವು ಆದರೆ ಈಗ ಹುಲ್ಲ ಕಡ್ಡಿ ಎತ್ತುವುದೂ ದುಸ್ತರದ ವಿಷಯವಾಗಿದೆ. ಎಚ್ಚರ ಇರಲಿ. ಕಾಡಲ್ಲಿ ನೀವು ಇರದಿದ್ದರೂ ನಾಡಲ್ಲಿ ಹುಲಿಗಳು, ಚಿರತೆಗಳು ನಡೆದಾಡುವ ಕಾಲ ಘಟ್ಟ ಇದು, ಹುಶಾರಾಗಿರಿ. ಮತಿ ಹೀನರ ದುಡುಕು ನಿರ್ಧಾರ, ಮಾತುಗಳಿಗೆ ನೀವು ಬೆಲೆ ತೆರುವ ಸಮಯ. ಸದಾ ಶಿವ ಸ್ತುತಿ ಮಾಡಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ವಾಯವ್ಯ

ಮೀನ: ಒತ್ತಡ, ಗೊಂದಲಗಳಿರುವ ವಾರ

Weekly Horoscope

ಹೊಯ್ದಾಟ, ಒತ್ತಡ, ಹಾಗೊಂದು ರೀತಿಯ ಸಾಹಸಕ್ಕೆ ಮುನ್ನುಗ್ಗಲು ಏನೋ ಅಧೈರ್ಯ ಇತ್ಯಾದಿ ನಿಮ್ಮನ್ನು ಮುತ್ತಿಕೊಳ್ಳಲಿವೆ. ಲಾಭಕಾರಕನಾಗಿದ್ದ ಶನೈಶ್ವರ ಚಂದ್ರನನ್ನು ಕೈವಶ ಪಡಿಸಿಕೊಂಡು ನಿಮ್ಮ ಮನೋಮಂಡಲವನ್ನು ಸಂದಿಗ್ಧದಲ್ಲಿ ತೂಗುಯ್ಯಾಲೆಯಂತೆ ಗರಗರ ತಿರುಗಿಸಿ ಬಸವಳಿಸಲು ಸರ್ವ ಸನ್ನದ್ಧನಾಗಿದ್ದಾನೆ. ಅವಸರಿಸದೆ ನಿರ್ಣಯಕ್ಕೆ ಬನ್ನಿ. ಬಾಳ ಸಂಗಾತಿಯ ಸಹಾಯದಿಂದ ನಿಮ್ಮ ಮನಸ್ಸಿನ ಮಂಕುತನಕ್ಕೆ ಆಸ್ಪದವಾಗದ ಬಹಳ ತೂಕದ ಗುರುತರ ಬೆಂಬಲ, ಸಲಹೆಗಳು ಸಿಗಬಹುದು. ಶ್ರೀರಾಮ ರಕ್ಷಾ ಸ್ತೋತ್ರ ಓದಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಆಗ್ನೇಯ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಎಂಜಿಆರ್‌ ಆಗ್ತಾರಾ ವಿಜಯ್‌?

VISTARANEWS.COM


on

ದ್ರಾವಿಡ ದಂಗಲ್‌ನಲ್ಲಿ ಅಚ್ಚರಿಯ ಫಲಿತಾಂಶದ ಸಾಧ್ಯತೆಯೊಂದನ್ನು ಎಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಟಿಸಿದೆ. ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಟಿವಿಕೆ ನಾಯಕ ವಿಜಯ್‌ ಮೊದಲ ಪ್ರಯತ್ನದಲ್ಲೇ ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ. ತಮಿಳುನಾಡಿನ ಎಲ್ಲಾ ಸಮೀಕ್ಷೆಗಳು ಡಿಎಂಕೆ ಅಧಿಕಾರಕ್ಕೇರಲಿದೆ ಎಂದು ಹೇಳುತ್ತಿರುವಾಗಲೇ, ಆಕ್ಸಿಸ್‌ ಮೈ ಇಂಡಿಯಾ ಮಾತ್ರ ಈ ಸಲ ವಿಜಯ್‌ ನಿಜವಾದ ಜನನಾಯಗನ್‌ ಎಂದಿದೆ.
ತಮಿಳುನಾಡಿನ ಸಾರಥ್ಯ ವಿಜಯ್‌ಗೆ?
ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಟಿವಿಕೆಗೆ 98 ರಿಂದ 120 ಸೀಟುಗಳು ಸಿಗಲಿವೆ. ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟಕ್ಕೆ 92ರಿಂದ 110 ಹಾಗೂ 22ರಿಂದ 32 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲುವ ಸಾಧ್ಯತೆಗಳಿವೆ. 234 ಸದಸ್ಯಬಲದ ತಮಿಳುನಾಡು ಅಸೆಂಬ್ಲಿಯಲ್ಲಿ 117 ಸೀಟು ಗೆಲ್ಲುವ ಪಕ್ಷದ ನಾಯಕ ಮುಖ್ಯಮಂತ್ರಿ ಆಗ್ತಾರೆ. ಸಮೀಕ್ಷೆ ಪ್ರಕಾರ ಟಿವಿಕೆ ಗರಿಷ್ಠ 120 ಸೀಟು ಗೆಲ್ಲುವ ಸಾಧ್ಯತೆಗಳಿವೆ.̇̇̇
ವೋಟ್‌ ಶೇರ್‌ನಲ್ಲೂ ಟಿವಿಕೆ ದಿಗ್ವಿಜಯ?
ಆಕ್ಸಿಸ್‌ ಮೈ ಇಂಡಿಯಾ ವೋಟ್‌ ಶೇರ್‌ ಸಮೀಕ್ಷೆಯನ್ನೂ ಪ್ರಕಟಿಸಿದೆ. ಅದರ ಪ್ರಕಾರ ಟಿವಿಕೆಗೆ ಶೇಕಡಾ 35ರಷ್ಟು ಮತ ಸಿಗಲಿದೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟಕ್ಕೂ ಶೇ. 35ರಷ್ಟು ವೋಟ್‌ ಶೇರ್‌ ಸಿಗಲಿದೆ. ಎನ್‌ಡಿಎಗೆ 23 ಶೇಕಡಾ ಮತ ಸಿಗುವ ಸಾಧ್ಯತೆಗಳಿವೆ.
ಸಿಎಂ ಸ್ಥಾನಕ್ಕೆ ವಿಜಯ್‌ ಬೆಸ್ಟ್‌?
ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಉತ್ತಮ ಅಭ್ಯರ್ಥಿ ಎಂಬ ಪ್ರಶ್ನೆಯನ್ನೂ ಆಕ್ಸಿಸ್‌ ಮೈ ಇಂಡಿಯಾ ಜನರ ಮುಂದಿಟ್ಟಿದೆ. ಅದರ ಪ್ರಕಾರ ಶೇ. 37ರಷ್ಟು ಮತದಾರರು ವಿಜಯ್‌ ಪರ ಒಲವು ತೋರಿದ್ದಾರೆ. ಶೇ. 35ರಷ್ಟು ಮಂದಿ ಮಾತ್ರ ಸ್ಟಾಲಿನ್‌ ಬೆಸ್ಟ್‌ ಅಂದಿದ್ದಾರೆ.
ವಿಜಯ್‌ಗೆ ಯುವ ಸಮೂಹದ ಬೆಂಬಲ
ಸರ್ವೇ ಪ್ರಕಾರ ಶೇ. 68ರಷ್ಟು ಹೊಸ ವೋಟರ್ಸ್‌ ವಿಜಯ್‌ಗೆ ಬೆಂಬಲ ನೀಡಿದ್ದಾರೆ. 20ರಿಂದ 29 ವಯೋಮಾನದ ಶೇ. 59ರಷ್ಟು ಯುವಕರು ಟಿವಿಕೆಗೆ ಜೈ ಎಂದಿದ್ದಾರೆ. 30-39 ವಯೋಮಾನದ ಶೇ. 45 ಮಂದಿ ದಳಪತಿಯನ್ನು ದಡಮುಟ್ಟಿಸಿದ್ದಾರೆ ಎನ್ನುತ್ತಿದೆ ಸಮೀಕ್ಷೆ.

Continue Reading

Latest

ರಾಜ್ಯದಲ್ಲಿ ನಾಯಕತ್ವ ಗೊಂದಲ: “ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ” – ಖರ್ಗೆ ಸ್ಪಷ್ಟನೆ

VISTARANEWS.COM


on

ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳುವ ಮೂಲಕ ನಾಯಕತ್ವ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಕಲಬುರಗಿಯಲ್ಲಿ ಇಂದು ಮಾತನಾಡಿದ ಅವರು ಈಗಾಗಲೇ ರಾಜ್ಯದಲ್ಲಿ ಸಿಎಂ ಇದ್ದಾರೆ. ಹೀಗಾಗಿ ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಭವಿಷ್ಯದಲ್ಲಿ ಅಂಥ ಪರಿಸ್ಥಿತಿ ಬಂದರೆ ನಾವು ಎಲ್ಲರೂ ಕೂಡಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ಏನು ಹೇಳುತ್ತಾರೆ ಎನ್ನುವುದಕ್ಕಿಂತ ಪಕ್ಷದ ಐಡಿಯಾಲಜಿ ಮತ್ತು ಹಲವು ವರ್ಷಗಳ ಪರಿಶ್ರಮ ಮುಖ್ಯ ಎಂದು ಹೇಳಿಕೆ ನೀಡಿದ್ದಾರೆ. ಪಕ್ಷದ ಮಹತ್ವದ ನಿರ್ಧಾರಗಳನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

Continue Reading

Latest

ಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಮಂದಿ ಬಲಿ

VISTARANEWS.COM


on

ಬೆಂಗಳೂರು: ಇಂದು ಸಂಜೆ ನಗರದಲ್ಲಿ ಸುರಿದ ಭಾರಿ ಮಳೆಗೆ ಶಿವಾಜಿನಗರ ಬಸ್‌ ನಿಲ್ದಾಣದ ಸಮೀಪವಿರುವ ಬೌರಿಂಗ್‌ ಆಸ್ಪತ್ರೆಯ ಕಾಂಪೌಂಡ್‌ ಗೋಡೆ ಕುಸಿದು 7 ಜನ ಸಾವನ್ನಪ್ಪಿದ್ದಾರೆ. ಮೃತರು ಬೀದಿಬದಿ ವ್ಯಾಪಾರಿಗಳು ಎಂದು ತಿಳಿದುಬಂದಿದೆ. 11 ಜನ ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಅವಶೇಷಗಳಡಿ ಮತ್ತಷ್ಟು ಜನ ಸಿಲುಕಿರುವ ಶಂಕೆಯಿದ್ದು, ರಕ್ಷಣಾಕಾರ್ಯ ಮುಂದುವರೆಸಲಾಗಿದೆ. ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Continue Reading

ಕರ್ನಾಟಕ

ಶಾಲೆಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ಬ್ರೇಕ್: ಶಿಕ್ಷಣ ಇಲಾಖೆ ಮಹತ್ವದ ಆದೇಶ

VISTARANEWS.COM


on

ಶಾಲೆಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ಬ್ರೇಕ್: ಶಿಕ್ಷಣ ಇಲಾಖೆ ಮಹತ್ವದ ಆದೇಶ

ಬೆಂಗಳೂರು: ಶಾಲೆಗಳಲ್ಲಿ ಇನ್ನು ಮುಂದೆ ಅಶ್ಲೀಲ ಹಾಡು ಮತ್ತು ಅಸಭ್ಯ ನೃತ್ಯಗಳಿಗೆ ಅವಕಾಶ ನೀಡದಂತೆ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ದ್ವಂದ್ವಾರ್ಥದ ಸಿನಿಮಾ ಹಾಡು ಹಾಗೂ ನೃತ್ಯಗಳನ್ನು ಪ್ರದರ್ಶಿಸುವುದರಿಂದ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅಧಿಕೃತ ಆದೇಶ ಹೊರಡಿಸಲಾಗಿದೆ.
ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯ ಪ್ರಕಾರ, ಶಾಲಾ ಕಾರ್ಯಕ್ರಮಗಳಲ್ಲಿ ಕೇವಲ ಜಾನಪದ, ದೇಶಭಕ್ತಿ ಗೀತೆಗಳು, ಪರಿಸರ ಕಾಳಜಿಯ ಹಾಡುಗಳು ಮತ್ತು ಸಮಾಜಮುಖಿ ಚಿಂತನೆಯುಳ್ಳ ಸಂಗೀತಕ್ಕೆ ಮಾತ್ರ ಆದ್ಯತೆ ನೀಡಬೇಕು. ನೃತ್ಯದ ಸಮಯದಲ್ಲಿ ವಿದ್ಯಾರ್ಥಿಗಳು ಧರಿಸುವ ಉಡುಪುಗಳು ಕೂಡ ಸಭ್ಯವಾಗಿರಬೇಕು ಹಾಗೂ ಅರೆಬರೆ ವಸ್ತ್ರಗಳನ್ನು ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮನರಂಜನೆಯ ಹೆಸರಿನಲ್ಲಿ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಅಥವಾ ಮಕ್ಕಳ ನೈತಿಕ ಹಾಗೂ ಮಾನಸಿಕ ಆರೋಗ್ಯ ಕೆಡಿಸುವ ಯಾವುದೇ ಹಾಡುಗಳನ್ನು ಬಳಸದಂತೆ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ನಿಯಮಗಳನ್ನು ಜಾರಿಗೆ ತರುವ ಸಂಪೂರ್ಣ ಜವಾಬ್ದಾರಿಯನ್ನು ಶಾಲಾ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಗೆ ವಹಿಸಲಾಗಿದೆ.

Continue Reading
Advertisement
Latest5 minutes ago

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಎಂಜಿಆರ್‌ ಆಗ್ತಾರಾ ವಿಜಯ್‌?

Latest2 hours ago

ಪಂಚರಾಜ್ಯ ಚುನಾವಣಾ ಫಲಿತಾಂಶ: “ಎಕ್ಸಿಟ್ ಪೋಲ್‌ಗಿಂತ ಉತ್ತಮ ಪ್ರದರ್ಶನ ನಿರೀಕ್ಷೆ” – ಖರ್ಗೆ

Latest2 hours ago

ರಾಜ್ಯದಲ್ಲಿ ನಾಯಕತ್ವ ಗೊಂದಲ: “ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ” – ಖರ್ಗೆ ಸ್ಪಷ್ಟನೆ

Latest3 hours ago

ಬೆಂಗಳೂರು ಸೇರಿದಂತೆ 18 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್: ಇಂದು ಮತ್ತು ನಾಳೆ ಆಲಿಕಲ್ಲು ಮಳೆ ಸಾಧ್ಯತೆ

Latest20 hours ago

ಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಮಂದಿ ಬಲಿ

Latest21 hours ago

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ

Latest21 hours ago

ಜಪಾನ್‌ಗೆ ಲಗ್ಗೆ ಇಡಲು ಸಜ್ಜಾದ ʼಧುರಂಧರ್’

bigbreaking21 hours ago

ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಾ ಮೇ ಕ್ಲೈಮ್ಯಾಕ್ಸ್‌?

Latest23 hours ago

ಡಾಲಿ ಧನಂಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ದಂಪತಿ!

Latest1 day ago

ಶಿಸ್ತು ಮರೆತರಾ ರಿಯಾನ್ ಪರಾಗ್? ಕಾನೂನು ಸಂಕಷ್ಟಕ್ಕೆ ಸಿಲುಕುತ್ತಾರಾ ರಾಜಸ್ಥಾನ ರಾಯಲ್ಸ್ ಆಟಗಾರ?

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌