Weekly Horoscope | ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ ಫಲಗಳಿವೆ ನೋಡಿ - Vistara News

ಪ್ರಮುಖ ಸುದ್ದಿ

Weekly Horoscope | ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ ಫಲಗಳಿವೆ ನೋಡಿ

ಈ ವಾರ ಅಂದರೆ ನವೆಂಬರ್‌ 21 ರಿಂದ 27 ರವರೆಗೆ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ (Weekly Horoscope), ಯಾವ ರಾಶಿಯವರ ಅದೃಷ್ಟ ಸಂಖ್ಯೆ ಎಷ್ಟು, ಶುಭ ದಿಕ್ಕು ಯಾವುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೇಷ: ಈ ರಾಶಿವರಿಗೆ ಗುರುವಿನ ಬಲವೇ ಶ್ರೀರಕ್ಷೆ

Weekly Horoscope

ಭೂತ ಕಾಲದ ತಪ್ಪುಗಳನ್ನು ಈಗ ನೆನಪಿಸಿಕೊಂಡರೆ, ನೆನಪಿಸಿಕೊಳ್ಳುತ್ತಿದ್ದರೆ ಅದರಿಂದ ಪ್ರಯೋಜನಗಳಿಲ್ಲ ಎಂಬುದನ್ನು ತಿಳಿಯಿರಿ. ಆದರೆ ಅದೇ ತಪ್ಪುಗಳನ್ನು ಮಾಡದಿರಿ. ಇದರ ಅರ್ಥ ಹೊಸ ತಪ್ಪುಗಳನ್ನು ಮಾಡಬಹುದು ಎಂದಲ್ಲ. ಬುಧನ ದೋಷದಿಂದ ಈ ವಾರ ನಿಮಗೆ ನಿಮ್ಮ ಬಗ್ಗೆ ನಂಬಿಕೆ ದೂರವಾಗುವ ಭಯವಿರುತ್ತದೆ. ಆದರೆ ನೀವು ಗುರುವಿನ ಕೆಲವು ಮಹತ್ವದ ಶಕ್ತಿ ದೊರಕಿರುವುದರಿಂದ ಕೆಲಸ ಕಾರ್ಯಗಳಲ್ಲಿ ಗಟ್ಟಿಯಾದ ಆಶಾವಾದಗಳೊಂದಿಗೆ ಮುನ್ನುಗ್ಗಿ ಗೆಲ್ಲುವ ಬಲವನ್ನು ಪಡೆಯುತ್ತೀರಿ. ಅರಿವಿರದ ಮೂಲದಿಂದ ಒಂದು ಬೆಂಬಲ ಏಕಾಏಕಿ ನಿಮಗೆ ಸಿಗುವ ಸಾಧ್ಯತೆ ಇದೆ. ದತ್ತನನ್ನು ಸ್ತುತಿಸಿ.
ಶುಭ ಸಂಖ್ಯೆ: 6 ಶುಭ ದಿಕ್ಕು: ವಾಯವ್ಯ

ವೃಷಭ: ಈ ರಾಶಿವರು ದೇವರನ್ನು ನಂಬಿದರೆ ಒಳಿತು

Weekly Horoscope

ವಿಳಂಬವನ್ನು ಸಹಿಸಿಕೊಳ್ಳುವುದು ನಿಮಗೆ ಅನಿವಾರ್ಯ. ಆದರೆ ಆಶಾವಾದದಿಂದ ಮುನ್ನುಗ್ಗಿ ಕೆಲಸ ಮಾಡಿ. ಮಾತುಗಳು ಜಾಸ್ತಿಯಾಗ ಕೂಡದು. ಪ್ರಾಜ್ಞರು ಹೇಳುವ ಮಾತುಗಳಿಗೆ ಚೆನ್ನಾಗಿ ಉತ್ತರಿಸಿ. ವಿನಯ ಪೂರ್ವಕ, ತೂಕ ಬದ್ಧ ಮಾತುಗಳಿಂದ ನಂಬಿ ಕೆಟ್ಟವರಿಲ್ಲವೋ ಎಂಬ ವ್ಯವಹಾರಿಕ ಮಾತನ್ನು ನೀವು ಕೇಳಿರುತ್ತೀರಿ. ದೇವರನ್ನು ನಂಬಿ. ಜತೆಗೆ ನಿಮ್ಮದಾದ ಕರ್ತವ್ಯ ಮುಂದುವರಿಸಿಕೊಂಡು ಹೋಗುವುದು. ನೀವೇ ಸರಿ ಎಂಬ ಧೋರಣೆ ಬಿಡಿ. ಚಂಡಿಕಾ ಹಾಗೂ ಮಾರುತಿಯ ಆರಾಧನೆಯಿಂದ ಒಳಿತು.
ಶುಭ ಸಂಖ್ಯೆ : 3 ಶುಭ ದಿಕ್ಕು: ಪಶ್ಚಿಮ

ಮಿಥುನ: ನರಸಿಂಹನನ್ನು ಆರಾಧಿಸಿದರೆ ಒಳಿತು

Weekly Horoscope

ಕೆಲವು ರೀತಿಯ ಭಯದಿಂದ ಬಳಲಿಕೆ ಸಾಧ್ಯ. ಆದರೆ ನೆನಪಿಡಿ, ನಿಮಗಿರುವ ಉತ್ತಮ ಗುರು ಬಲವು ನಿಮ್ಮನ್ನು ನಿಶ್ಚಯವಾಗಿಯೂ ನಡು ನೀರಿನಲ್ಲಿ ಕೈ ಬಿಡಲಾರದು. ಮುಖ್ಯವಾಗಿ ನರಸಿಂಹನನ್ನು ಸ್ತುತಿಸುವುದು ಆತ್ಮ ವಿಶ್ವಾಸವನ್ನು ಸಂವರ್ಧಿಸುವಲ್ಲಿ ಬೆಂಬಲಕ್ಕೆ ಬರುತ್ತದೆ. ಅನಗತ್ಯವಾದ ಘರ್ಷಣೆಯು ದಾಂಪತ್ಯದಲ್ಲಿ ಒಳನುಸುಳದಿರಲಿ. ಹುಳಿ ಹಿಂಡುವ ಕೆಲಸ ನಡೆಸುವವರು ಅಧಿಕವಾಗಿರುತ್ತಾರೆ. ಪ್ರಶ್ನಾರ್ಹವಾದ ಕೆಲವು ತಪ್ಪು ಹೆಜ್ಜೆಗಳು ಒಡ ಮೂಡದಂತೆ ನಿಗಾ ಇರಿಸಿ. ವ್ಯಾಜ್ಯದ ವಿಚಾರದಲ್ಲಿ ನಿಮ್ಮ ಪರವಾದ ಬೆಳವಣಿಗೆಗಳಿಂದ ಹರ್ಷ ಹೊಂದುವುದಕ್ಕೆ ವರ್ತಮಾನದಲ್ಲಿ ಅವಕಾಶವಿದೆ.
ಶುಭ ಸಂಖ್ಯೆ : 5 ಶುಭ ದಿಕ್ಕು: ನೈಋತ್ಯ

ಕಟಕ: ಈ ವಾರ ನಿಮಗೆ ಸಹನೆ ಇರಲಿ

Weekly Horoscope

ನಿರಾಶರಾಗುವ ಅವಶ್ಯಕತೆ ಬಾರದಂತೆ ಕೆಲಸ ಮಾಡಿ. ಅನ್ಯರನ್ನು ಸಹಿಸಿಕೊಂಡು ಹೋಗಲೇ ಬೇಕಾದ ಸಹನೆ ಇರಲಿ. ವರ್ತಮಾನದ ವಾಸ್ತವ ಏಕಾಗ್ರತೆಗೆ ಕೆಲವು ಭಂಗಗಳನ್ನು ತರುತ್ತಲೇ ಇರುತ್ತದೆ. ಹಿತ್ತಾಳೆ ಕಿವಿಯ ಜನರನ್ನು ಪ್ರತಿಯೊಬ್ಬನೂ ಟೀಕಿಸುತ್ತಾನೆಯೇ ವಿನಃ ಹಿತ್ತಾಳೆ ಕಿವಿಯವರ ಸಾಲಿನಲ್ಲಿ ತಾನೂ ಬರುತ್ತೇನೆ ಎಂದು ಯೋಚಿಸುವುದಿಲ್ಲ. ಇಂಥ ಜನರಿಂದ ನಿಮ್ಮ ಮಾನಸಿಕ ಶಾಂತಿಗೆ ಧಕ್ಕೆ ಬರಬಹುದು. ಮಧುರತೆ ನಿಮ್ಮ ಭಾಷೆಯಲ್ಲಿದೆ. ಅದನ್ನು ಶಕ್ತಿಯುತವಾಗಿ ರೂಪಿಸಿಕೊಳ್ಳುವುದಕ್ಕೆ ಮುಂದಡಿ ಇಡಿ. ಕಾರಣವಿರದೇ ಸುತ್ತಿಕೊಳ್ಳುವ ಖರ್ಚುಗಳ ಬಗ್ಗೆ ಎಚ್ಚರ ಇರಲಿ. ಭವಾನಿ ಶಂಕರನನ್ನು ಸ್ತುತಿಸಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪೂರ್ವ

ಸಿಂಹ: ಬುದ್ಧಿ ಶಕ್ತಿಯ ಕಡೆಗೆ ಗಮನವಿರಲಿ

Weekly Horoscope

ಮದದಾನೆಗಳನ್ನೂ ಮೆಟ್ಟಿ ನಿಲ್ಲುವ ಕೇಸರಿಯ ಶಕ್ತಿ ನಿಮ್ಮದು. ಆದರೆ ಅದು ಯಾಕೆ ಸೂಕ್ತ ಸಮಯದಲ್ಲಿ ಚಿಮ್ಮಿ ಹೊರ ಬರಲಾರದು ಎಂಬ ಬೇಗುದಿ ನಿಮ್ಮಲ್ಲಿದೆ. ಕೆಲವು ಕೃತ್ತಿಮ ಶಕ್ತಿಗಳು ನಿಮ್ಮನ್ನು ಬಾಧಿಸುತ್ತಿವೆ. ಹಳೆಯ ಬಾವಿಯ ಸಮೀಪ, ಗಿಡ ಗುಂಟಿಗಳು ಬೆಳೆವ ಅಥವಾ ಹೆಮ್ಮರಗಳ ಸಾಲು ಸಾಲೇ ತುಂಬಿರುವ ಸಸ್ಯ, ಗಿಡ, ಮರಗಳ ಗುಂಪು ಪ್ರದೇಶಕ್ಕೆ ಒಂಟಿಯಾಗಿ ಹೋಗದಿರಿ. ಪಂಚಮ ಭಾವದಲ್ಲಿ ಕೇತುಯುಕ್ತ ಶನಿ ರವಿಗಳು ಬುದ್ಧಿ ಶಕ್ತಿಯನ್ನು ಒಂದು ಮಿತಿಗೆ ತಳ್ಳಿ ಸತಾಯಿಸುತ್ತವೆ. ಪ್ರಸ್ತುತ ಗೊಂದಲಗಳನ್ನು, ಇಬ್ಬದಿತನವನ್ನು ಶ್ರೀ ಲಲಿತಾಂಬಿಕಾಧ್ಯಾನ ಮತ್ತು ಪಂಚಮುಖಿ ಹನುಮಂತ ಕವಚ ಪಠಿಸುವ ಮೂಲಕ ನಿವಾರಿಸಿಕೊಳ್ಳಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ನೈಋತ್ಯ

ಕನ್ಯಾ: ಸುಬ್ರಹ್ಮಣ್ಯನ ಅನುಗ್ರಹ ಪಡೆಯಿರಿ

Weekly Horoscope

ಲಾಭದ ದಾರಿಯಲ್ಲಿ ಸಾಗಲು ಅತ್ಯಂತ ಮಹತ್ವದ ಧೈರ್ಯ, ಸಾಮರ್ಥ್ಯಗಳು ನಿಮ್ಮಲ್ಲಿವೆಯಾದರೂ, ಕೆಲಸದ ಸ್ಥಳದಲ್ಲಿನ ನೀರವ ಸ್ಥಿತಿಯಿಂದಾಗಿ ಶೀಘ್ರವಾಗಿ ಹುರುಪಿನಿಂದ ಎದ್ದು ಕ್ಷಿಪ್ರವಾಗಿ ಕೆಲಸ ಮಾಡಿ ಮುಗಿಸಲು ಸಾಧ್ಯವಾಗದು. ಆಹಾರದಲ್ಲಿ ಉಪ್ಪನ್ನು ಈ ವಾರ ಅತಿಯಾಗಿ ಬಳಸಲೇಬಾರದು. ಜಲೋತ್ಪನ್ನ ಸರಕುಗಳು ನಿಮ್ಮ ಪಾಲಿಗೆ ವರದಾನವಾಗಬಲ್ಲದು. ರಾಜಕೀಯದಲ್ಲಿ ಆಸಕ್ತರಾದವರಿಗೆ, ರಾಜಕಾರಣವನ್ನೇ ಕಾಯಕ ಮಾಡಿಕೊಂಡವರಿಗೆ ಶ್ರಮ ಭರಿತ ಒಡಾಟ, ಪರದಾಟಗಳಿಂದ ಅಂತಿಮವಾಗಿ ವಿಜಯದತ್ತ ಹೊರಳಿ ಕೊಳ್ಳುವ ಶಕ್ತಿ ಸುಬ್ರಹ್ಮಣ್ಯನ ಅನುಗ್ರಹದಿಂದಾಗಿ ಸಾಧ್ಯವಿದೆ. ಸುಬ್ರಹ್ಮಣ್ಯನನ್ನು ಸ್ತುತಿಸಿ, ಅನ್ಯ ಲಿಂಗಿಗಳೊಡನೆ ಸಲಿಗೆ ಬೇಡ.
ಶುಭ ಸಂಖ್ಯೆ : 4 ಶುಭ ದಿಕ್ಕು: ಆಗ್ನೇಯ

ತುಲಾ: ಪ್ರಮುಖ ಯೋಜನೆಯಲ್ಲಿ ಯಶಸ್ಸು

Weekly Horoscope

ಹಳದಿ ಅಥವಾ ಕೆಂಪು ಬಣ್ಣಗಳು ಅಪಾಯ ತರುತ್ತವೆ. ಗೋದಿಯನ್ನು ನೆನಸಿಟ್ಟು ನೀರನ್ನು ಗೋದಿಯ ಜತೆ ಹಸುವಿಗೆ ಆಹಾರವಾಗಿ ನೀಡಿ. ದುರ್ಗಾಳ ಅನುಗ್ರಹಕ್ಕೆ ಪಾತ್ರರಾಗುವ ಅಪೂರ್ವ ಅವಕಾಶ ಲಭ್ಯ. ಶ್ರಮದಿಂದಲೇ ಸುಖವಿದೆ. ನಿರ್ದಿಷ್ಟವಾದುದು ಇದೇ ಎಂಬುದನ್ನು ಗುರುತಿಸಿಕೊಳ್ಳಿ. ಎರಡು ದೋಣಿಯ ಪಯಣ ಬೇಡ. ದೈವ ಶಕ್ತಿಯ ಪ್ರಾಬಲ್ಯವನ್ನು ಬೆಳಗಿನ ಹೊತ್ತಿನ ಸ್ನಾನಾ ನಂತರ “ಶ್ರೀ ಖಡ್ಗ ಮಾಲಿನಿ ಸ್ತೋತ್ರಾವಳಿʼʼಯನ್ನು ಪಠಿಸಿ, ಅಂತರ್ಗತವಾದ ಶಕ್ತಿ ಮೂಲವನ್ನು ಅನಾಹತ ಚಕ್ರಸಿಂಧು ಮೂಲಕ್ಕೆ ಸಂವೇದಿಸಿಕೊಂಡಾಗ ಸಂಕಲ್ಪಿತ ಕಾರ್ಯ ಸಿದ್ಧಿಗೆ ಅವಕಾಶ ಹೇರಳ. ಮನಸ್ಸಿನ ಪ್ರಮುಖ ಯೋಜನೆಗೆ ವಿಜಯ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪಶ್ಚಿಮ

ವೃಶ್ಚಿಕ: ವ್ಯಾಪಾರ-ವಹಿವಾಟಿನಲ್ಲು ಯಶಸ್ಸು

Weekly Horoscope

ವ್ಯಕ್ತಿತ್ವದ ವಿಚಾರವಾಗಿ ಸುಹಾಸಕರ ಚೌಕಟ್ಟನ್ನು ನಿರ್ಮಿಸಲು ಅವಕಾಶ ಭದ್ರವಾಗಿದೆ. ನಿಮಗೆ ಸರ್‌ಅನೆ ಬರುವ ಕೋಪ, ಯೋಚಿಸಿದೆ ಸರ್‌ಅನೆ ಮಾತನಾಡುವ ಗುಣ, ವೈರಿಯನ್ನು ವಿನಯದಿಂದ ಮಾತನಾಡಿಸಲು ಸಾಧ್ಯವಾಗದ ಉದ್ವಿಗ್ನತೆಗಳನ್ನು ನಿಯಂತ್ರಿಸಲು ಸಾಧ್ಯವಾದರೆ ವ್ಯಾಪಾರ, ವಹಿವಾಟು, ಕುಶಲ ಕಲಾ ವಸ್ತುಗಳ ಮಾರಾಟ, ಎಲೆಕ್ಟ್ರಾನಿಕ್ಸ್‌ ಗೂಡ್ಸ್‌ ವಿತರಣಾ ಘಟಕ ಇತ್ಯಾದಿಗಳನ್ನು ಗರಿಷ್ಠ ಲಾಭ ಬರುವಂತೆ ನಿರ್ವಹಿಸಬಲ್ಲ ಚಾಕಚಕ್ಯತೆ ಪಡೆಯುತ್ತೀರಿ. ಸಿನಿಮಾ ತಯಾರಿಕೆ, ವಿತರಣೆ ಅಥವಾ ಅಭಿನಯ ದಿಗ್ದಶರ್ನಗಳಲ್ಲಿ ವ್ಯತ್ಯಯಗಳು ಬಂದು ಪರದಾಟವಾಗಬಹುದು. ಗರಿಕೆ ಮತ್ತು ಕೆಂಪು ಹೂಗಳಿಂದ ಗಣೇಶನನ್ನು ಆರಾಧಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಉತ್ತರ

ಧನಸ್ಸು: ಭೂ ವ್ಯವಹಾರ ಎಚ್ಚರಿಕೆ ಅಗತ್ಯ

Weekly Horoscope

ಫಟಾಫಟ್‌ ಎಲ್ಲವೂ ಆಗಬೇಕು ಎಂಬ ನಿಮ್ಮ ನಿರೀಕ್ಷೆಯನ್ನು ಗೆಲ್ಲಿಸುವುದು ಕಷ್ಟಕರವಾಗುವ ಸಮಯವಾಗಿದೆ ಇದು. ದುರ್ಗೆಯನ್ನು, ಶಕ್ತಿ ಮಾರುತಿಯನ್ನು ಆರಾಧಿಸಿ. ಭಾಷೆಯ ಬಗೆಗೆ, ಮಾತಿನ ಗಟ್ಟಿತನದ ಬಗೆಗೆ ಕಾಳಜಿ ಹೊಂದಿರುವಿರಾದರೂ ಮಾತನಾಡಿದಂತೆ ಕ್ಷಿಪ್ರವಾಗಿ ಆಡಿದ ಮಾತನ್ನು ಉಳಿಸಿಕೊಳ್ಳುವ ಚುರುಕುತನ ಪ್ರದರ್ಶಿಸಲೇಬೇಕು. ಮೇಧಾ ದಕ್ಷಿಣಾಮೂರ್ತಿಯನ್ನು ಅರಿಷಿಣ, ಅಕ್ಷತ, ಕುಂಕುಮ, ತ್ರಿದಳಗಳೊಂದಿಗೆ ಆರಾಧಿಸಿ. ವಿಷಮಯವಾಗಿರುವ ವರ್ತಮಾನವನ್ನು ಪರಿವರ್ತಿಸಿ, ಅಮೃತತ್ವಕ್ಕೆ ಹೊರಳಿಕೊಳ್ಳುವ ದಿಸೆಯತ್ತ ಸ್ವಾಮಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಭೂ ವ್ಯವಹಾರದಲ್ಲಿ ಬಿಸಿ ತಾಪಗಳಿವೆ ಎಚ್ಚರಿಕೆ.
ಶುಭ ಸಂಖ್ಯೆ: 3 ಶುಭ ದಿಕ್ಕು: ದಕ್ಷಿಣ

ಮಕರ: ಆಲಸ್ಯ ಬಿಟ್ಟರೆ ಧನ ಲಾಭ

Weekly Horoscope

ಯಾರ ಹಂಗಿನಲ್ಲೂ ಹೆಜ್ಜೆ ಇರಿಸಲಾರೆ ಎನ್ನುವ ಹಟಕ್ಕೆ ಬೀಳಬೇಡಿ. ಕಾಲದ ಪ್ರಕ್ಷುಬ್ಧತೆಯಲ್ಲಿ ತೇಜೋವಧೆ ಮಾಡುವ ದುರಹಂಕಾರಿಗಳನ್ನು ಬಿಟ್ಟು ಯಾರ ಜತೆ ಬೇಕಾದರೂ ಹೆಜ್ಜೆ ಇರಿಸಿ. ಸಾಮಾಜಿಕ ಜನ ಜೀವನದ ಶಾಂತಿ, ನೆಮ್ಮದಿಗಳನ್ನು ಹಾಳು ಮಾಡುವ ಜನರ ಜತೆ ಸ್ನೇಹ ಬೇಡ. ಮಹತ್ವದ ನಿಮ್ಮ ಯೋಜನೆಗಳನ್ನು ಕೈ ಬಿಡುವ ಸ್ಥಿತಿಗೆ ಈ ಸ್ನೇಹ ಮುಂದೆ ದಾರಿ ಮಾಡಬಹುದಾಗಿದೆ. ಇಚ್ಛಾ ಶಕ್ತಿಯ ಪ್ರದರ್ಶನದಿಂದ ಗೋಜಲುಗಳು ಬೇಡ ಎಂಬ ಕೆಲಸವೇ ನಿಮಗೆ ಸುಲಭವಾಗುತ್ತದೆ. ಆದರೆ ನಿಮ್ಮ ಆಲಸ್ಯದಿಂದ ಹೊರಬನ್ನಿ. ವಿಷ್ಣು ಸಹಸ್ರನಾಮಾವಳಿ, ಹನುಮಾನ್‌ ಚಾಲೀಸ್‌ ಓದಿ, ಇದು ಧನ ಲಾಭಕ್ಕೆ ದಾರಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಪೂರ್ವ

ಕುಂಭ: ಕಲಿಯುವ ಹಸಿವಿನಿಂದ ಲಾಭ

Weekly Horoscope

ಕಲಿತುಕೊಳ್ಳುವುದು ಅಗಾಧವಾದುದಿದೆ, ತಿಳಿದದ್ದು ಕಡಿಮೆಯಾಗಿದೆ ಎಂಬ ಜ್ಞಾನ ದಾಹದಿಂದಾಗಿ ಮಹತ್ವದ ಹೊಸದೇ ಕವಲುಗಳು ಬದುಕುವ ಮಾರ್ಗದಲ್ಲಿ ನಿಮಗೆ ವರವಾಗಿ ಒದಗಿ ಬರಲಿವೆ. ಧನ, ಧ್ಯಾನ, ಧಾನ್ಯ ಸಮೃದ್ಧಿಗೆ ಅವಕಾಶ ಹೇರಳ. ಆದರೆ ನಿಮ್ಮ ಉನ್ನತಿಯನ್ನು ಕ್ಷೀಣಗೊಳಿಸುವ ಅಪರ ಮಾರ್ಗಕ್ಕೆ ಇಳಿಯುವ ದುರ್ಬುದ್ಧಿಗಳು ನಿಮ್ಮನ್ನು ಬಸವಳಿಸಬಲ್ಲವು. ಯಾವಾಗಲೂ ಚೈತನ್ಯಮಯವಾದ, ಜಗದ ರಕ್ಷಕಿಯಾದ ಐಂದ್ರಿತಾಳನ್ನು ಆರಾಧಿಸಿ. ಕೆಂಪು ಬಟ್ಟೆಗಳು ಬೇಡ. ಕಪ್ಪು ಮತ್ತು ನೀಲಿ ಆವರಣಗಳಲ್ಲಿ ಗರುಡನ ರೂಪು ಮೂಡಿಸಿ ವಿನುತ ಪುತ್ರ ಗರುಡನನ್ನು ಆರಾಧಿಸಿ, ವರ್ಚಸ್ಸು ಸಂವರ್ಧಿಸಲಿದೆ.
ಶುಭ ಸಂಖ್ಯೆ : 2 ಶುಭ ದಿಕ್ಕು: ಈಶಾನ್ಯ

ಮೀನ: ಈ ವಾರ ಕಬ್ಬಿಣದ ಸಹವಾಸ ಬೇಡ

Weekly Horoscope

ಕಬ್ಬಿಣದ ವ್ಯಾಪಾರದ ವಿಷಯಗದಲ್ಲಿ ಅಥವಾ ಕಬ್ಬಿಣದ ಸರಕುಗಳ ಸಂಗ್ರಹದಲ್ಲಿ ಆಸಕ್ತಿ ತೋರಬೇಡಿ. ಪ್ರಖ್ಯಾತ ಉದ್ಯಮಿಯೊಬ್ಬರು ಹಳೆಯ ಕಬ್ಬಿಣದ ಸರಕನ್ನು ಹಣಕೊಟ್ಟು ಖರೀದಿಸಿ ತಂದು ತಮ್ಮನ್ನು ಬಿಕ್ಕಟ್ಟಿಗೆ ಸಿಕ್ಕಿಸಿಕೊಂಡು ದಿವಾಳಿಯಾಗಿದ್ದಾರೆ ಎಂಬ ವಿಷಯವನ್ನು ನೆನಪಿಡಿ. ಹೊಸದೇ ವಿನ್ಯಾಸದೊಂದಿಗೆ ಈಗಿರುವ ವಹಿವಾಟಿನ ಚೌಕಟ್ಟನ್ನು ಸಮೃದ್ಧಿಗೊಳಿಸಿಕೊಳ್ಳಿ. ನಿಮ್ಮ ಮಕ್ಕಳು ತುಸು ಕಿರಿಕಿರಿ ತೋರಿಸಬಹುದು. ಬಾಳ ಸಂಗಾತಿಯನ್ನು ಕ್ಲಿಷ್ಟ ಸಂದರ್ಭದಲ್ಲಿ ಸೂಕ್ತ ಸಲಹೆಗಳಿಗಾಗಿ ಅವಲಂಬಿಸುವುದು ಸೂಕ್ತ ವಿಷಯವೇ. ಲಿಂಬೆಯ ಹಣ್ಣಿನ ಬಳಿ ಇರಿಸಿದ ಅರಿಷಿನದ ಬೇರಿನ ತುಂಡಿಗೆ ಅಕ್ಷತೆ ಹಾಕಿ ಶ್ರೀ ಲಕ್ಷ್ಮೀಯನ್ನು ಸ್ತುತಿಸಿ, ಕ್ಷೇಮವಾಗಿರುವಿರಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ಆಗ್ನೇಯ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Darshan: ನಟ ದರ್ಶನ್‌ನನ್ನು ಬಂಧಿಸುವಾಗ ಪೊಲೀಸರಿಗೆ ದಾರಿ ತಪ್ಪಿಸಿದ್ದ ಹೋಟೆಲ್‌ ಸಿಬ್ಬಂದಿ!

Actor Darshan: ಪೊಲೀಸರು ಬಂಧಿಸಲು ಹೋದಾಗ ದರ್ಶನ್ ಇದ್ದ ರೂಮ್ ನಂಬರ್ ಹೇಳದೇ ಹೋಟೆಲ್‌ ಸಿಬ್ಬಂದಿ ಸತಾಯಿಸಿದ್ದರು ಎನ್ನಲಾಗಿದೆ. ಪೊಲೀಸರಿಗೆ ದಾರಿ ತಪ್ಪಿಸಿದ್ದರು.

VISTARANEWS.COM


on

By

Hotel staff misleads police while arresting actor Darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟ ದರ್ಶನ್ ಬಂಧಿಸುವಾಗ (Actor Darshan) ನಾನಾ ಸಮಸ್ಯೆಯನ್ನು ಎದುರಿಸಬೇಕಾಯಿತು. ಪೊಲೀಸರು ಬಂಧಿಸಲು ಹೋದಾಗ ದರ್ಶನ್ ಇದ್ದ ರೂಮ್ ನಂಬರ್ ಹೇಳದೇ ಹೋಟೆಲ್‌ ಸಿಬ್ಬಂದಿ ಸತಾಯಿಸಿದ್ದರು ಎನ್ನಲಾಗಿದೆ. ಹೋಟೆಲ್‌ನಲ್ಲಿ ಕೆಲಕಾಲ ಕಾದಿದ್ದ ಪೊಲೀಸರಿಗೆ, ದಿಢೀರನೆ ಮೂವರು ಬಾಡಿ ಗಾರ್ಡ್ಸ್ ಬಂದಿದ್ದರು. ಪೊಲೀಸರನ್ನು ಕಂಡು ತುರಾತುರಿಯಲ್ಲಿ ದರ್ಶನ್ ಕಾರಿನಲ್ಲಿ ಹೋಗುತ್ತಿದ್ದ ಬಾಡಿ ಗಾರ್ಡ್ಸ್‌ ಅಡ್ಡ ಹಾಕಿ ಮೊಬೈಲ್ ಪಡೆದಿದ್ದರು. ದರ್ಶನ್ ರೂಂ ತೋರಿಸುವಂತೆ ಬಾಡಿ ಗಾರ್ಡ್ಸ್‌ಗೆ ಪೊಲೀಸರು ಗದರಿಸಿದ್ದರು.

ಬಳಿಕ ರೂಮ್ ತೋರಿಸಲು ಕರೆದುಕೊಂಡು ಹೋಗಿದ್ದರು. ಮತ್ತೊಂದು ಕೀ ಬಳಸಿ ದರ್ಶನ್ ಇದ್ದ ರೂಮ್ ಓಪನ್ ಮಾಡಿದ್ದರು. ಈ ವೇಳೆ ರೂಮಿನಲ್ಲಿ ಸ್ನಾನ ಮಾಡುತ್ತಿದ್ದ ನಟ ದರ್ಶನ್ ಎರಡೇ ನಿಮಿಷದಲ್ಲಿ ಬಾತ್ ರೂಮ್‌ನಿಂದ ಹೊರ ಬಂದಿದ್ದರು. ಪೊಲೀಸರು ನಮ್ಮ ಜತೆಗೆ ಬರಬೇಕು ಎಂದಾಗ ಬಟ್ಟೆ ಹಾಕಿಕೊಂಡು ಬರುತ್ತೇನೆ ಸಾರ್ ಎಂದಿದ್ದರು. ಬಳಿಕ ದರ್ಶನ್‌ನನ್ನು ಎಸಿಪಿ ಚಂದನ್ ಹಾಗೂ ಇನ್‌ಸ್ಪೆಕ್ಟರ್‌ ಗಿರೀಶ್ ನಾಯ್ಕ್ ಪೊಲೀಸ್ ಜೀಪ್ ಹತ್ತಿಸಿಕೊಂಡು ಬೆಂಗಳೂರಿಗೆ ಕರೆತಂದಿದ್ದರು.

ಇದನ್ನೂ ಓದಿ:

ಏಳು ಸಂಪುಟಗಳಾಗಿ ವಿಂಗಡಿಸಿ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ
ಸಂಪುಟ -1
ಚಾರ್ಜ್ ಶೀಟ್ ಮತ್ತು ಪೂರಕವಾದ ದಾಖಲೆಗಳು
ಸಂಪುಟ-2
ತನಿಖಾ ಕಾಲದಲ್ಲಿ ಸಂಗ್ರಹಿಸಲಾದ ಸಿಡಿಆರ್ ಡೇಟಾ
ಸಂಪುಟ 3
ತನಿಖಾ ಕಾಲದಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡ ಮಾಲು ಪಟ್ಟಿ ಮತ್ತು ಮಹಜರು ದಾಖಲೆ
ಸಂಪುಟ 3ಎ
ಮಾಲುಪಟ್ಟಿ ಮತ್ತು ಪಂಚನಾಮೆ ರಿಟ್ರೀವ್ ಪಂಚನಾಮೆಗಳು
ಸಂಪುಟ 4
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಹೇಳಿಕೆ ಸಿಆರ್ ಪಿಸಿ 161 ಹಾಗೂ 164 ಹೇಳಿಕೆಗಳು
ಸಂಪುಟ 5
ತನಿಖಾ ಕಾಲದಲ್ಲಿ ಸಂಗ್ರಹಿಸಿದ ದಾಖಲೆಗಳು
ಸಂಪುಟ 5ಎ
ತನಿಖಾ ಕಾಲದಲ್ಲಿ ಸಂಗ್ರಹಿಸಿದ ಡಿಜಿಟಲ್ ಮತ್ತು ಟೆಕ್ನಿಕಲ್ ದಾಖಲೆಗಳು
ಸಂಪುಟ 6
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ, ವೈದ್ಯರ ಅಭಿಪ್ರಾಯ ಮತ್ತು ತಜ್ಞರ ವರದಿ
ಸಂಪುಟ 7
ಆರೋಪಿಗಳು ಬಳಸುತ್ತಿದ್ದ ಮೊಬೈಲ್ ರಿಟ್ರೀವ್ ವರದಿ, ಡೇಟಾ ವರದಿ, ಡೇಟಾ ಅನಾಲಿಸಿಸ್ ವರದಿ ಹಾಗೂ ಸ್ವಇಚ್ಚೆ ಹೇಳಿಕೆಗಳು

ವಿಚಾರಣೆ ವೇಳೆ ಕಣ್ಣೀರು ಹಾಕುತ್ತಿದ್ದ ಪವಿತ್ರಾಗೌಡ

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸಿಲುಕಿದ ಪವಿತ್ರ ಗೌಡ ಪೊಲೀಸ್ ಕಸ್ಟಡಿಯಲ್ಲಿದ್ದಾಗ ದಿನನಿತ್ಯ ಕಣ್ಣೀರು ಹಾಕುತ್ತಿದ್ದರು ಎನ್ನಲಾಗಿದೆ. ಪೊಲೀಸರ ಮುಂದೆ ಕೈ ಕಟ್ಟಿ ನಿಲುತ್ತಿದ್ದ ಪವಿತ್ರಾಗೌಡ ಅಳುತ್ತಲೇ ಘಟನೆ ಬಗ್ಗೆ ಹೇಳುತ್ತಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸ್ಯಾಂಡಲ್ ವುಡ್

Actor Darshan : ರೇಣುಕಾಸ್ವಾಮಿಯ ಪ್ಯಾಂಟ್‌ ಬಿಚ್ಚಿಸಿ ಮರ್ಮಾಂಗಕ್ಕೆ ‌ಒದ್ದಿದ್ದರಾ ದರ್ಶನ್! ಚಾರ್ಜ್‌ಶೀಟ್‌ನಲ್ಲಿ ಕ್ರೌರ್ಯದ ಅನಾವರಣ

Actor Darshan : ಚಾರ್ಜ್‌ಶೀಟ್‌ನಲ್ಲಿ ದರ್ಶನ್‌ ಕ್ರೌರ್ಯದ ಅನಾವರಣವಾಗಿದೆ. ರೇಣುಕಾಸ್ವಾಮಿಯ ಪ್ಯಾಂಟ್‌ ಬಿಚ್ಚಿಸಿ ಮರ್ಮಾಂಗಕ್ಕೆ ‌ಒದ್ದಿದ್ದರಿಂದಲೇ ಪ್ರಾಣಹಾರಿ ಹೋಯ್ತಾ? ಇಷ್ಟಕ್ಕೂ ದರ್ಶನ್‌ ಸಿಟ್ಟು ಏನೆಲ್ಲ ಮಾಡಿಬಿಡುತ್ತಾ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Darshan Brutality revealed in chargesheet
Koo

ಬೆಂಗಳೂರು: ಡಿ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ಮೇಲೆ ದರ್ಶನ್ (Actor darshan) ಕೆಂಡಾಮಂಡಲ ಆಗಲು ಕಾರಣವೇನು ಗೊತ್ತಾ? ಅಷ್ಟಕ್ಕೂ ರೇಣುಕಾಸ್ವಾಮಿ ಪವಿತ್ರಗೌಡಗೆ ಏನೇನ್ ಸಂದೇಶಗಳನ್ನು ಕಳುಹಿಸಿದ್ದ. ಆ ಚಾಟಿಂಗ್‌ ಡಿಟೈಲ್ಸ್‌ ಇಲ್ಲಿದೆ.

ದರ್ಶನ್ ಕೋಪಕ್ಕೆ ಕಾರಣವಾಗಿದ್ದು ಎರಡು ಅಶ್ಲೀಲ ವಿಡಿಯೊ, ಒಂದು ಫೋಟೊ. ರೇಣುಕಾಸ್ವಾಮಿ ಪವಿತ್ರಗೌಡ ಫೋಟೊ ಕಂಡು ನಾನು ನಿನ್ನನ್ನ ಅನುಭವಿಸಬೇಕೆಂದು ಮೆಸೇಜ್ ಮಾಡಿದ್ದ. ಮೆಸೇಜ್ ಹಿಂದೆಯೆ ಎರಡು ಅಶ್ಲೀಲ ವಿಡಿಯೊ ಕಳಿಸಿ, ಅಶ್ಲೀಲವಾದ ಸಂದೇಶಗಳ ರವಾನಿಸಿದ್ದ. ಇದಾದ ಬಳಿಕ ರೇಣುಕಾಸ್ವಾಮಿ ತನ್ನ ಮರ್ಮಾಂಗದ ಫೋಟೊವನ್ನು ಪವಿತ್ರಾಗೌಡಗೆ ಕಳಿಸಿದ್ದ.

ಇದೆಲ್ಲವನ್ನೂ ನೋಡಿದ ದರ್ಶನ್‌ಗೆ ತನ್ನೊಳಗೆ ಇದ್ದ ಮೃಗತ್ವ ಹೊರಬಂದಿತ್ತು. ಕೊಳಕು ಭಾಷೆಯಿಂದ ನಿಂದಿಸಿ ರೇಣುಕಾಸ್ವಾಮಿಗೆ ಹಲ್ಲೆ ಮಾಡಿ ಏನೋ ಸೂ.. ಮಗನೇ, ನನ್ನ ಹೆಂಡತಿಗೆ ಕೆಟ್ಟ ಮೆಸೇಜ್ ಮಾಡುತ್ತೀಯಾ? ಎಷ್ಟೋ ಧೈರ್ಯ ನಿಂಗೆ ಎಂದು ಕಾಲಿಂದ ಎದೆ ಭಾಗಕ್ಕೆ ಒದ್ದಿದ್ದ. ಬಳಿಕ ಏಯ್ ಪವನ್ ಇವನ ಪ್ಯಾಂಟ್ ಬಿಚ್ಚೋ ಎಂದ ದರ್ಶನ್‌, ಮರ್ಮಾಂಗಕ್ಕೆ ಒದ್ದಿದ್ದ. ಜಾರ್ಜ್‌ಶೀಟ್‌ನಲ್ಲಿ ದರ್ಶನ್ ಮಿತಿ ಮೀರಿದ ಕ್ರೌರ್ಯದ ಅನಾವರಣವಾಗಿದೆ.

ಪವಿತ್ರಾ ಮೊಬೈಲ್‌ನಲ್ಲಿ ಏನೆಲ್ಲ ಇತ್ತು?

ಐಫೋನ್‌ 15 ಪ್ರೋ ಮ್ಯಾಕ್ಸ್‌ ಬಳಸುತ್ತಿದ್ದ ಪವಿತ್ರಾ ಮನೋಜ್‌ ಹೆಸರಿನಲ್ಲಿ ಸಿಮ್‌ ಇತ್ತು. ದರ್ಶನ್ ಹೆಸರನ್ನು “D” ಎಂದು ಸೇವ್ ಮಾಡಿದ್ದರೆ, ಎ3 ಪವನ್ ಹೆಸರನ್ನು ಪವನ್ ನ್ಯೂ ಎಂದು ಸೇವ್ ಮಾಡಿದ್ದರು. ನಂದೀಶ್‌ ಹೆಸರನ್ನು ನಂದಿ ಪವನ್‌, ಧನರಾಜ್ ಹೆಸರನ್ನು ರಾಜು, ವಿನಯ್‌ ಹೆಸರನ್ನ ವಿನಯ್‌ ಹಾಗೂ ನಾಗರಾಜ್ ಹೆಸರನ್ನು ನಾಗು ಮೈಸೂರು, ಲಕ್ಷ್ಮಣ್‌ ಹೆಸರನ್ನು ಲಕ್ಷ್ಮಣ್‌ ಡಿ ಹಾಗೂ ಆಪ್ತ ಗೆಳತಿ ಸಮತಾಳನ್ನು ಸ್ಯಾಮ್‌ ಹೆಸರಲ್ಲಿ ಸೇವ್ ಮಾಡಿದ್ದಾರೆ. ಪವಿತ್ರಾ ಮೊಬೈಲ್‌ನಲ್ಲಿ ಪ್ರಕರಣ ಸಂಬಂಧ 65 ಫೋಟೊಗಳು ಪತ್ತೆಯಾಗಿವೆ. 17 ಸ್ಕೀನ್‌‌ ಶಾಟ್‌ಗಳು, ರೇಣುಕಾ ಕಳಿಸಿದ್ದ 20 ಅಶ್ಲೀಲ ಸಂದೇಶಗಳ ಸ್ಕ್ರೀನ್‌ಶಾಟ್‌ ಇವೆ.

ನಟ ದರ್ಶನ್‌ ಬಳಸುತ್ತಿದ್ದ ಐಫೋನ್‌ 15 ಪ್ರೋನಲ್ಲಿ ಗೆಳತಿ ಹೆಸರನ್ನು 3 ಹೆಸರಲ್ಲಿ ಸೇವ್ ಮಾಡಿದ್ದರು. PAVI, PAVIIII, PVITRA GOWDA ಹೆಸರಲ್ಲಿ ಸೇವ್‌ ಮಾಡಿ ಪವಿತ್ರ ಜತೆ ಚಾಟಿಂಗ್‌ ನಡೆಸಿದ್ದಾರೆ. ಡಿಲೀಟ್‌ ಆಗಿದ್ದ ವಾಟ್ಟಾಪ್‌ ಕಾಲ್ ರಿಟ್ರೀವ್‌ ವೇಳೆ ಪತ್ತೆಯಾಗಿದೆ. ವಿನಯ್ ಜತೆ ಚಾಟಿಂಗ್‌, ಮ್ಯಾನೇಜರ್‌ ನಾಗರಾಜ್ ಜತೆ ವಾಟ್ಸಾಪ್‌ ಕಾಲ್ ಸಂಭಾಷಣೆ ಇದೆ. ಜೂನ್‌ 8ರಿಂದ 11ರವೆರಗೂ 32 ಬಾರಿ ವಾಟ್ಸಾಪ್ ಕಾಲ್ ಮಾಡಲಾಗಿದ್ದು, ಪ್ರದೋಶ್‌ ಜತೆ 10 ಬಾರಿ ವಾಟ್ಸಾಪ್‌‌‌ ಕಾಲ್‌ನಲ್ಲಿ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: Actor Darshan:ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸರೆಂಡರ್‌ ಆಗು ಎಂದಾಗ ದರ್ಶನ್‌ ಅಭಿಮಾನಿ ರಾಘವೇಂದ್ರ ನಿರಾಕರಿಸಿದ್ದೇಕೆ?

ವಿನಯ್‌ ಮೊಬೈಲ್‌ನಲ್ಲಿ ಪವಿತ್ರಾಳ ಹೆಸರು ಡಿ ಬಾಸ್‌ ವೈಫ್‌ ಎಂದು ಸೇವ್‌

ಇನ್ನು ವಿನಯ್‌ ಮೊಬೈಲ್‌ನಲ್ಲಿ ಪವಿತ್ರಾ ಗೌಡ ಫೋನ್‌ ನಂಬರ್‌ ಅನ್ನು ಡಿ-ಬಾಸ್‌ ವೈಫ್‌ ಎಂದು ಸೇವ್‌ ಆಗಿದೆ. ಪ್ರದೂಷ್‌, ಪವನ್‌ ಜತೆ 42 ಬಾರಿ ವಾಟ್ಸಾಪ್‌ ಕಾಲ್‌ ಸಂಭಾಷಣೆ ನಡೆದಿದೆ. ಪ್ರಕರಣ ಸಂಬಂಧ 10 ಫೋಟೊಗಳು ರಿಟ್ರೀವ್‌ನಲ್ಲಿ ಪತ್ತೆಯಾಗಿದೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಲ್ಲಿ ಹಿಂಬಾಲಿಸಿ ತೆಗೆದ ಫೋಟೊ, ಪಟ್ಟಣಗೆರೆ ಶೆಡ್‌‌ಗೆ ಕರೆತಂದಾಗ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿರುವ ಫೋಟೊ ಸಿಕ್ಕಿದೆ. ಜತೆಗೆ ರೇಣುಕಾಸ್ವಾಮಿ ಶವವನ್ನು ಸುಮನಹಳ್ಳಿ ರಾಜಕಾಲುವೆ ಬಳಿ ಬಿಸಾಡಿರುವ ಫೋಟೊ ಲಭ್ಯವಾಗಿದೆ.

ದೀಪಕ್‌ ಮೊಬೈಲ್‌ನಲ್ಲಿ ಅಡಗಿದ್ದ ರಹಸ್ಯ

ದೀಪಕ್‌ ಮೊಬೈಲ್‌ನಲ್ಲಿ 30 ನಿಮಿಷದ ಆಡಿಯೊ ಸಂಭಾಷಣೆ ಪತ್ತೆಯಾಗಿದೆ. ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ನಡೆಸಿರುವ ಮಾತುಕತೆ ಇದಾಗಿದೆ. ಸ್ವಾಮಿ ಕೊಲೆಗೆ ಸಂಬಂಧಿಸಿದಂತೆ 5 ಆಡಿಯೋ ಸಂಭಾಷಣೆ ಪತ್ತೆಯಾಗಿದೆ. ಜತೆಗೆ ಮತ್ತೊಬ್ಬ ಆರೋಪಿ ಅನುಕುಮಾರ್‌ ಮೊಬೈಲ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ 2 ವಿಡಿಯೊ ಸಿಕ್ಕಿದೆ. ಆರೋಪಿ ಪ್ರದೂಷ್‌ ಜತೆ ನಡೆಸಿರುವ ಚಾಟಿಂಗ್‌ ಸಿಕ್ಕಿದೆ. ಅನುಕುಮಾರ್‌ ಹಾಗೂ ರಾಘವೇಂದ್ರ ಪತ್ನಿ ಸಹನಾ ಜತೆ ನಡೆಸಿರುವ ಸಂಭಾಷಣೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸ್ಯಾಂಡಲ್ ವುಡ್

Actor Darshan:ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸರೆಂಡರ್‌ ಆಗು ಎಂದಾಗ ದರ್ಶನ್‌ ಅಭಿಮಾನಿ ರಾಘವೇಂದ್ರ ನಿರಾಕರಿಸಿದ್ದೇಕೆ?

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸರೆಂಡರ್‌ ಆಗು ಎಂದಾಗ ದರ್ಶನ್‌ ಅಭಿಮಾನಿ ರಾಘವೇಂದ್ರ ನಿರಾಕರಿಸಿದ್ದೇಕೆ? 10 ದಿನಗಳ ಬಳಿಕ ದರ್ಶನ್‌ ಹೇಳಿದ್ದು ಅದೊಂದು ಮಾತು ಏನ್‌ ಆಗಿತ್ತು?

VISTARANEWS.COM


on

By

Why did Darshans fan Raghavendra refuse to surrender
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಬಳಿಕ ಸರೆಂಡರ್ ಆಗು ಎಂದಿದ್ದಕ್ಕೆ ದರ್ಶನ್ (Actor darshan) ಅಭಿಮಾನಿ ಸಂಘದ ಅಧ್ಯಕ್ಷನಾಗಿದ್ದ ರಾಘವೇಂದ್ರ ಅಲಿಯಾಸ್ ರಾಘು ನಿರಾಕರಿಸಿದ್ದ. ನಾನು ಯಾಕೆ ಜೈಲಿಗೆ ಹೋಗಲಿ? ನಾನು ಸರೆಂಡರ್ ಆಗಲ್ಲ ಎಂದು ಚಿತ್ರದುರ್ಗ ಕಡೆ ಹೊರಟಿದ್ದ. ಆದಾದ ಮೇಲೆ ವಿನಯ್, ಪ್ರದೂಶ್ ಮತ್ತು ದರ್ಶನ್ ಸೇರಿ ರಾಘವೇಂದ್ರನನ್ನು ಒಪ್ಪಿಸಿದ್ದರು. ರಾಘವೇಂದ್ರ ಸರೆಂಡರ್ ಆಗಿಲ್ಲ ಅಂದರೆ ಚಿತ್ರದುರ್ಗದ ಲಿಂಕ್ ಕೊಡಲು ಕಷ್ಟವಾಗುತ್ತೆ. ಹೀಗಾಗಿ ರಾಘವೇಂದ್ರ ಸರೆಂಡರ್ ಆಗಲೇ ಬೇಕು ಎಂದು ಡಿ ಗ್ಯಾಂಗ್‌ ಮಾಸ್ಟರ್‌ ಪ್ಲ್ಯಾನ್ ಮಾಡಿದ್ದರು.

ರಾಘವೇಂದ್ರ ಇಲ್ಲದೇ, ಕೇವಲ ಬೆಂಗಳೂರು ಹುಡುಗರು ಕಿ‌ಡ್ನ್ಯಾಪ್ ಮತ್ತು ಮರ್ಡರ್ ಕಥೆ ಹೇಳಿದರೆ ಸತ್ಯ ಕಥೆ ಅನ್ನಿಸುವುದಿಲ್ಲ. ಹೀಗಾಗಿ ರಾಘವೇಂದ್ರ ಬೇಕೆ ಬೇಕು ಎಂದು ಹಣದ ಆಮಿಷ ತೋರಿಸಿ ಮಾತುಕತೆ ನಡೆಸಿ ಒಪ್ಪಿಸಿದ್ದರು. ಆದಾದ ಬಳಿಕ ರಾಘವೇಂದ್ರ, ನಿಕಿಲ್, ಕೇಶವಮೂರ್ತಿ, ಕಾರ್ತಿಕ್ ಅಲಿಯಾಸ್ ಕಪ್ಪೆ ಪೊಲೀಸರ ಮುಂದೆ ಸರೆಂಡರ್‌ ಆಗಿದ್ದರು. ರೇಣುಕಾಸ್ವಾಮಿ ರಾಘವೇಂದ್ರಗೆ ಹಣ ಕೊಡಬೇಕಿತ್ತು. ಅದಕ್ಕೆ ಕರೆತಂದು ಹೊಡೆದು ಬಿಟ್ಟಿವಿ ಎಂದು ಪೊಲೀಸರ ಮುಂದೆ ಮೊದಲ ಸ್ಟೋರಿ ಹೇಳಿದ್ದರು.

ಇದ್ಯಾವುದನ್ನು ನಂಬಲು ತಯಾರು ಇಲ್ಲದ ಪೊಲೀಸರು ವಿಚಾರಣೆ ಮುಂದುವರಿಸಿದ್ದರು. ಬಳಿಕ ಪೊಲೀಸರ ಮುಂದೆ ದರ್ಶನ್ ಹೆಸರು ಬಾಯಿ ಬಿಟ್ಟಿದೇ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ. ಆದರೆ ರೇಣುಕಾಸ್ವಾಮಿ ಅಶ್ಲೀಲ ಮೆಜೇಸ್ ಮಾಡಿದ್ದು ದರ್ಶನ್‌ ಪತ್ನಿ ವಿಜಯಲಕ್ಷ್ಮಿಗೆ ಎಂದು ಹೇಳಿದ್ದ. ತಡರಾತ್ರಿ ಎರಡು ಗಂಟೆಗೆ ಕೇಶವಮೂರ್ತಿಯನ್ನು ಮತ್ತಷ್ಟು ವಿಚಾರಣೆಯನ್ನು ನಡೆಸಿದಾಗ, ದರ್ಶನ್ ಪತ್ನಿಗೆ ಅಲ್ಲಾ ಸಾರ್ ಅದು ಪವಿತ್ರ ಗೌಡ ಎಂದು ಪೊಲೀಸರ ಮುಂದೆ ಹೇಳಿದ್ದ.

ಇದನ್ನೂ ಓದಿ: Actor Darshan : ನಾವಿಬ್ಬರು ಮದುವೆ ಆಗಿಲ್ಲ.. ಜಸ್ಟ್‌ ಲಿವಿಂಗ್‌ ಟುಗೆದರ್‌ನಲ್ಲಿ ಇದ್ದೀವಿ- ವಿಚಾರಣೆಯಲ್ಲಿ ನಟ ದರ್ಶನ್‌ ಹೇಳಿಕೆ

10 ದಿನಗಳ ಬಳಿಕ ದರ್ಶನ್‌ ಹೇಳಿದ್ದು ಇದೊಂದೇ ಮಾತು

ರೇಣುಕಾಸ್ವಾಮಿ ಭೀಕರ ಕೊಲೆ ಕೇಸ್‌ನಲ್ಲಿ ಬಂಧಿತನಾಗಿದ್ದ ನಟ ದರ್ಶನ್‌, ಹತ್ತು ದಿನಗಳ ವಿಚಾರಣೆ ನಂತರ ಹೇಳಿದ್ದು ಒಂದೇ ಮಾತೆಂದರೆ ನನ್ನಿಂದ ತಪ್ಪಾಗೋಗಿದೆ ಸಾರ್ ಎಂದಿದ್ದರಂತೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಬಂಧಿಸಿ ವಿಚಾರಣೆ ನಡೆಸಿದಾಗ ಸುಮಾರು 20 ಪುಟಗಳ ಹೇಳಿಕೆ ದಾಖಲಿಸಿದ್ದರು. ಚಾರ್ಜ್ ಶೀಟ್‌ನಲ್ಲಿ ದರ್ಶನ್ ಸ್ಟೇಟ್ಮೆಂಟ್‌ನ 20 ಪುಟಕ್ಕೂ ಅಧಿಕವಾಗಿದೆ.

ಕೊಲೆ ಕುರಿತು ಇಂಚಿಂಚೂ ಮಾಹಿತಿ ಪಡೆದು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಏನೊ ಮಾಡಲು ಹೋಗಿ ಹೀಗೆ ಆಯ್ತು, ತಪ್ಪಾಗೋಗಿದೆ ಸಾರ್ ಎಂದು ನಟ ದರ್ಶನ್‌ ಹೇಳಿದ್ದರಂತೆ. ಆದರೆ ಹೇಳಿಕೆ ದಾಖಲು ಮಾಡುವಾಗ ಮಾತ್ರ ತನಗೂ ಕೊಲೆಗೂ ಸಂಬಂಧ ಇಲ್ಲ ಸಾರ್ ಎಂದು ಹೇಳಿಕೆ ನೀಡುತ್ತಿದ್ದರು. ಕೊನೆಗೆ ತಾನು ಮಾಡಿದ್ದು ತಪ್ಪು ಎಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸ್ಯಾಂಡಲ್ ವುಡ್

Actor Darshan : ದರ್ಶನ್‌ ಕೊಟ್ಟ ಮೂರೇ ಹೊಡೆತಕ್ಕೆ ಜೀವ ಬಿಟ್ಟಿದ್ದ ರೇಣುಕಾಸ್ವಾಮಿ!; ಆ 45 ನಿಮಿಷ ಶೆಡ್‌ನಲ್ಲಿ ನಡೆದಿದ್ದೇನು?

Actor Darshan : ನಟ ದರ್ಶನ್‌ ಕೊಟ್ಟ ಮೂರೇ ಹೊಡೆತಕ್ಕೆ ರೇಣುಕಾಸ್ವಾಮಿ ಜೀವ ಬಿಟ್ಟಿದ್ದ . ಆ 45 ನಿಮಿಷ ಶೆಡ್‌ನಲ್ಲಿ ನಡೆದಿದ್ದೇನು? ಚಾರ್ಜ್‌‌ಶೀಟ್‌ನಲ್ಲಿ ಆಡಿಯೋ ವಿಡಿಯೋ ವರದಿ ಉಲ್ಲೇಖವಾಗಿದೆ.

VISTARANEWS.COM


on

By

actor darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ಸಂಬಂಧ ಚಾರ್ಜ್‌ಶೀಟ್‌ ಸಲ್ಲಿಕೆ ಆಗಿದ್ದೇ ತಡ ದರ್ಶನ್‌ ಟೀಂನ (actor darshan) ಕೌರ್ಯ ಹೇಗಿತ್ತು ಎಂದು ಒಂದೊಂದೆ ಬಯಲಾಗುತ್ತಿದೆ. ಇಷ್ಟಕ್ಕೂ ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್ ಇದ್ದ ಆ 45 ನಿಮಿಷ ನಡೆದಿದ್ದು ಏನು ಗೊತ್ತಾ? ರೇಣುಕಾಸ್ವಾಮಿ ಸಾವಿಗೆ ಕಾರಣವಾಗಿದ್ದೇ ದರ್ಶನ್‌ ಕೊಟ್ಟ ಆ ಮೂರು ಹೊಡೆತಗಳು.

ಹೊಡೆತ 1

ನಟ ದರ್ಶನ್‌ ಸಿಟ್ಟಿನಲ್ಲಿ ರೇಣುಕಾಸ್ವಾಮಿ ಎದೆಗೆ ಒಂದೆ ಸಮನೆ ಒದ್ದಿದ್ದ. 110 ಕೆ.ಜಿಯ ಮನುಷ್ಯ ನರಪೇತಲನಂತಿದ್ದ ರೇಣುಕಾಸ್ವಾಮಿ ಎದೆಗೆ ಶೂ ಕಾಲಿನಿಂದ ಒದ್ದಿದ್ದ. ದರ್ಶನ್ ಹೊಡೆತಕ್ಕೆ ರೇಣುಕಾಸ್ವಾಮಿ ಎದೆ ಮೂಳೆ ಪುಡಿ ಪುಡಿಯಾಗಿತ್ತು.

ಹೊಡೆತ 2

ಸಿನಿಮಾ ಶೈಲಿಯಲ್ಲಿ ರೇಣುಕಾಸ್ವಾಮಿಯನ್ನು ಎತ್ತಿ ಲಾರಿಗೆ ಬಿಸಾಕಿದ್ದ ದರ್ಶನ್. ದರ್ಶನ್ ಬಿಸಾಕಿದ ರಭಸಕ್ಕೆ ರೇಣುಕಾಸ್ವಾಮಿ ತಲೆಗೆ ಗಂಭೀರ ಗಾಯವಾಗಿತ್ತು. ತಲೆ ಬುರುಡೆಗೆ ಏಟು ಬಿದ್ದು ರಕ್ತ ಹೆಪ್ಪುಗಟ್ಟಿತ್ತು.

ಹೊಡೆತ 3

ಇದೇ ಫೋಟೊ ಅಲ್ವೇನೋ ನೀನು ಕಳಿಸಿದ್ದು ನಿನ್ನ…..! ಎಂದು ರೇಣುಕಾಸ್ವಾಮಿ ಮರ್ಮಾಂಗಕ್ಕೆ ನಟ ದರ್ಶನ್‌ ಒದ್ದಿದ್ದ. ಮರ್ಮಾಂಗಕ್ಕೆ ಒದೆಯುತ್ತಿದ್ದಂತೆ ರೇಣುಕಾಸ್ವಾಮಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ಈ ಹೊಡೆತಗಳೆ ರೇಣುಕಾಸ್ವಾಮಿ ಸಾವಿಗೆ ಕಾರಣ ಎನ್ನಲಾಗಿದೆ. ಎಫ್‌ಎಸ್‌ಎಲ್‌ ರಿಪೋರ್ಟ್‌ನಲ್ಲೂ ಸಾವಿನ ರಹಸ್ಯ ಬಯಲಾಗಿದ್ದು, ಚಾರ್ಜ್ ಶೀಟ್‌ನಲ್ಲಿ ಇದೆಲ್ಲವನ್ನು ಪೊಲೀಸರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Dvija Film : ಅಕ್ಟೋಬರ್‌ಗೆ ‘ದ್ವಿಜ’ ಚಿತ್ರ ಬಿಡುಗಡೆಗೆ ಸಜ್ಜು; ಕ್ರೈಂ ಥ್ರಿಲ್ಲರ್‌ ಮೂವಿಯಲ್ಲಿ ಕ್ರಿಮಿನಲ್ ಜಗತ್ತು ಅನಾವರಣ

ಚಾರ್ಜ್‌‌ಶೀಟ್‌ನಲ್ಲಿ ಆಡಿಯೋ ವಿಡಿಯೋ ವರದಿ ಉಲ್ಲೇಖ

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಚಾರ್ಜ್‌‌ಶೀಟ್‌ನಲ್ಲಿ ಆಡಿಯೋ ವಿಡಿಯೋ ವರದಿ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಒಟ್ಟು 30 ಸ್ಯಾಂಪಲ್ಸ್‌ಗಳಿಗೆ ಸಂಬಂಧಿಸಿದ ಆಡಿಯೋ ವಿಡಿಯೋ ವರದಿ ಇದೆ. ಹಾಗಾದರೆ ಆ ಆಡಿಯೋ ವಿಡಿಯೋ ವರದಿಯಲ್ಲಿ ಏನೇನಿದೆ?

  • ಆರೋಪಿಗಳು ಟ್ರೆಂಡ್ಸ್‌‌ ಶೋನಲ್ಲಿ ಬಟ್ಟೆ ಖರೀದಿಸಿದ ಸಿಸಿಟಿವಿ ಫೂಟೇಜ್
  • ಶವ ಬಿಸಾಡಿದ ಸ್ಥಳದಲ್ಲಿ ಸತ್ವ ಅಪಾರ್ಟ್‌ಮೆಂಟ್‌ನ ಸಿಸಿಟಿವಿ
  • ತುಮಕೂರಿನ ದುರ್ಗಾ ಬಾರ್‌‌ನಲ್ಲಿ ಎಣ್ಣೆ ಖರೀದಿಸಿದ ಸಿಸಿಟಿವಿ
  • ಚಿತ್ರದುರ್ಗ ಟು ಬೆಂಗಳೂರು ಟೋಲ್‌ಗಳ ಸಿಸಿಟಿವಿ ಫೂಟೇಜ್
  • ಚಿತ್ರದುರ್ಗದ ಬಾಲಾಜಿ ಬಾರ್‌ನ ಸಿಸಿಟಿವಿ ವಿಡಿಯೋ
  • ಮೈಸೂರಿನ ರ‍್ಯಾಡಿಸನ್‌ ಬ್ಲೂ ಹೋಟೆಲ್‌ನ ಸಿಸಿಟಿವಿ
  • ಆರೋಪಿಗಳು ಶರಣಾಗತಿಗೆ ಬಂದ ವೇಳೆ ಸಿಸಿಟಿವಿ
  • ರೇಣುಕಾಸ್ವಾಮಿ ಫೋಟೋ ಇರುವ ಪೆನ್‌ಡ್ರೈವ್‌‌
  • ಎ1 ಪವಿತ್ರಾ ಗೌಡ & ದರ್ಶನ್‌‌ಗೆ ಸಂಬಂಧಿಸಿದ ಫೋಟೊ
  • ಇತರೆ 15 ಜನ ಆರೋಪಿಗಳಿಗೆ ಸಂಬಂಧಿಸಿದ ಫೋಟೋಗಳು
  • ಸಾಕ್ಷಿದಾರರ ಫೋಟೋಗಳು ಕೂಡ ರಿಟ್ರೀವ್‌ನಲ್ಲಿ ಪತ್ತೆ.
  • ದರ್ಶನ್‌ ಮನೆಯ ಡಿವಿಆರ್‌.
  • ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ & ಪಟ್ಟಣಗೆರೆ ಶೆಡ್‌ನ ಸಿಸಿಟಿವಿ.
  • ಆರೋಪಿಗಳ ವಾಹನಗಳು ಮಾತೇಶ್ವರಿ ಸ್ಟೋರ್‌‌ ಬಳಿಯ ಸಿಸಿಟಿವಿ.
  • ಮಾರಮ್ಮ ಟೆಂಪಲ್‌ ಬಳಿಯ ಸಿಸಿಟಿವಿ ವಿಡಿಯೋ.
  • ಪವಿತ್ರಾ ಗೌಡ ಮನೆಯ ಸಿಸಿಟಿವಿ ಫೂಟೇಜ್‌.
  • ಬಾಡಿ ಬಿಸಾಡಲು ಹೋದ ವೇಳೆ ಸೆರೆ ಸಿಕ್ಕ ಸಿಸಿಟಿವಿ ವಿಡಿಯೋ.
  • ದರ್ಶನ್ ಪತ್ನಿ ವಿಜಯಲಕ್ಷ್ಮಿ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ ಸಿಸಿಟಿವಿ.
  • ಈ ಎಲ್ಲಾ ಆಡಿಯೋ ವಿಡಿಯೋ ವರದಿಗೆ ಸಂಬಂಧಿಸಿದಂತೆ ತಜ್ಞರ ಅಭಿಪ್ರಾಯ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Hotel staff misleads police while arresting actor Darshan
ಸ್ಯಾಂಡಲ್ ವುಡ್9 hours ago

Actor Darshan: ನಟ ದರ್ಶನ್‌ನನ್ನು ಬಂಧಿಸುವಾಗ ಪೊಲೀಸರಿಗೆ ದಾರಿ ತಪ್ಪಿಸಿದ್ದ ಹೋಟೆಲ್‌ ಸಿಬ್ಬಂದಿ!

Darshan Brutality revealed in chargesheet
ಸ್ಯಾಂಡಲ್ ವುಡ್9 hours ago

Actor Darshan : ರೇಣುಕಾಸ್ವಾಮಿಯ ಪ್ಯಾಂಟ್‌ ಬಿಚ್ಚಿಸಿ ಮರ್ಮಾಂಗಕ್ಕೆ ‌ಒದ್ದಿದ್ದರಾ ದರ್ಶನ್! ಚಾರ್ಜ್‌ಶೀಟ್‌ನಲ್ಲಿ ಕ್ರೌರ್ಯದ ಅನಾವರಣ

Why did Darshans fan Raghavendra refuse to surrender
ಸ್ಯಾಂಡಲ್ ವುಡ್9 hours ago

Actor Darshan:ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸರೆಂಡರ್‌ ಆಗು ಎಂದಾಗ ದರ್ಶನ್‌ ಅಭಿಮಾನಿ ರಾಘವೇಂದ್ರ ನಿರಾಕರಿಸಿದ್ದೇಕೆ?

actor darshan
ಸ್ಯಾಂಡಲ್ ವುಡ್9 hours ago

Actor Darshan : ದರ್ಶನ್‌ ಕೊಟ್ಟ ಮೂರೇ ಹೊಡೆತಕ್ಕೆ ಜೀವ ಬಿಟ್ಟಿದ್ದ ರೇಣುಕಾಸ್ವಾಮಿ!; ಆ 45 ನಿಮಿಷ ಶೆಡ್‌ನಲ್ಲಿ ನಡೆದಿದ್ದೇನು?

Haryana Naxal caught by police after coming to see girlfriend in Bengaluru
ಬೆಂಗಳೂರು12 hours ago

Naxal arrested‌ : ಬೆಂಗಳೂರಿನಲ್ಲಿ ಗರ್ಲ್‌ ಫ್ರೆಂಡ್‌ ನೋಡಲು ಬಂದು ಸಿಕ್ಕಿಬಿದ್ದ ಹರಿಯಾಣದ ನಕ್ಸಲ್‌

Actor Darshan says he is not married to Pavithra Gowda
ಸ್ಯಾಂಡಲ್ ವುಡ್13 hours ago

Actor Darshan : ನಾವಿಬ್ಬರು ಮದುವೆ ಆಗಿಲ್ಲ.. ಜಸ್ಟ್‌ ಲಿವಿಂಗ್‌ ಟುಗೆದರ್‌ನಲ್ಲಿ ಇದ್ದೀವಿ- ವಿಚಾರಣೆಯಲ್ಲಿ ನಟ ದರ್ಶನ್‌ ಹೇಳಿಕೆ

Lightman dies after falling from 30 feet height FIR against film director Yogaraj Bhat
ಸ್ಯಾಂಡಲ್ ವುಡ್14 hours ago

Yogaraj Bhat :30 ಅಡಿ ಎತ್ತರದಿಂದ ಬಿದ್ದು ಲೈಟ್‌ ಮ್ಯಾನ್‌ ಸಾವು; ಚಿತ್ರ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್ಐಆರ್

ಸಿನಿಮಾ16 hours ago

Dvija Film : ಅಕ್ಟೋಬರ್‌ಗೆ ‘ದ್ವಿಜ’ ಚಿತ್ರ ಬಿಡುಗಡೆಗೆ ಸಜ್ಜು; ಕ್ರೈಂ ಥ್ರಿಲ್ಲರ್‌ ಮೂವಿಯಲ್ಲಿ ಕ್ರಿಮಿನಲ್ ಜಗತ್ತು ಅನಾವರಣ

Theft case
ಬೆಂಗಳೂರು ಗ್ರಾಮಾಂತರ17 hours ago

Theft Case : ಪ್ರೇಯಸಿಯ ಜತೆಗೆ ಹೈಫೈ ಲೈಫ್‌ ಎಂಜಾಯ್‌ ಮಾಡಲು ಮನೆಗಳ್ಳತನಕ್ಕೆ ಇಳಿದ ಪ್ರೇಮಖೈದಿ!

karnataka weather Forecast
ಮಳೆ19 hours ago

Karnataka Weather : ಉತ್ತರ ಕನ್ನಡ ಜಿಲ್ಲೆಗೆ ಭಾರಿ ಮಳೆ ಎಚ್ಚರಿಕೆ; ಬೆಂಗಳೂರಿನಲ್ಲಿ ಹೇಗೆ?

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್6 days ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 week ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌