Akshaya Tritiya Story in Hindu Scriptures and PuranasAkshaya Tritiya 2023 : ಪುಣ್ಯ ಸಂಗ್ರಹಣೆಯ ವಿಶೇಷ ದಿನ ಅಕ್ಷಯ ತೃತೀಯಾ - Vistara News

ಧಾರ್ಮಿಕ

Akshaya Tritiya 2023 : ಪುಣ್ಯ ಸಂಗ್ರಹಣೆಯ ವಿಶೇಷ ದಿನ ಅಕ್ಷಯ ತೃತೀಯಾ

ಇಂದು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗುವ ಅಕ್ಷಯ ತೃತೀಯ (Akshaya Tritiya 2023). ಈ ದಿನದಂದು ಅಗತ್ಯ ವಸ್ತುಗಳನ್ನು ಸತ್ಪಾತ್ರರಿಗೆ ದಾನ ಮಾಡಿದರೆ, ಇಷ್ಟದೇವತೆಯ ಜಪ-ತಪಗಳನ್ನು ಮಾಡಿದರೆ ಅನಂತಫಲ ದೊರಕುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.

VISTARANEWS.COM


on

Akshaya Tritiya 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Prerane

Akshaya Tritiya Story in Hindu Scriptures and Puranas

ಗಣೇಶ ಭಟ್ಟ
ಬೇಸಿಗೆಯ ಪ್ರಖರವಾದ ಬೇಗೆ ಎಲ್ಲೇಲ್ಲೂ ವ್ಯಾಪಿಸಿರುವ ಸಮಯವಾದ ವೈಶಾಖಮಾಸದಲ್ಲಿ ಪರಶುರಾಮ ಜಯಂತಿ, ಶಂಕರ ಜಯಂತಿ, ನೃಸಿಂಹ ಜಯಂತಿ, ಕೂರ್ಮಜಯಂತಿ, ಶನೈಶ್ಚರ ಜಯಂತಿ ಮೊದಲಾದ ಧಾರ್ಮಿಕವಾಗಿ ಮಹತ್ವ ಪಡೆದ ಹಬ್ಬಗಳಲ್ಲಿ ಬಹು ಮುಖ್ಯವಾಗಿ ವೈಶಾಖಮಾಸದ ಶುಕ್ಲ ಪಕ್ಷದ ತೃತೀಯಾದಂದು ಆಚರಿಸಲ್ಪಡುವ ಹಬ್ಬವೇ ಅಕ್ಷಯ ತೃತೀಯಾ (Akshaya Tritiya 2023) ಅಥವಾ ಅಕ್ಷಯ ತದಿಗೆ.

ಅಕ್ಷಯ ತೃತೀಯಾ ಕೃತ ಯುಗದ ಆರಂಭದ ದಿನ. ವಿಷ್ಣುವಿನ ದಶಾವತಾರಗಳಲ್ಲಿ ಆರನೇ ಅವತಾರವಾದ ಜನ್ಮತಃ ಬ್ರಾಹ್ಮಣ ಹಾಗೂ ಕರ್ಮದಿಂದ ಕ್ಷತ್ರಿಯನಾದ ಪರಶುರಾಮರ ಅವತಾರವಾದ ದಿನ, ಅಂದರೆ ಪರಶುರಾಮ ಜಯಂತಿ. ಭಗೀರಥನ ಪ್ರಯತ್ನದಿಂದ ಗಂಗೆ ಭೂಮಿಗೆ ಬಂದ ದಿನ. ಸೂರ್ಯದೇವನು ಯುಧಿಷ್ಠಿರನಿಗೆ ಅಕ್ಷಯ ಪಾತ್ರೆ ನೀಡಿದ ದಿನ. ಹಿಂದೂ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಛತ್ರಪತಿ ಶಿವಾಜಿ ಜನಿಸಿದ ದಿನವೂ ಹೌದು. ಕಲ್ಯಾಣಕ್ರಾಂತಿಯ ರುವಾರಿ ಬಸವೇಶ್ವರರ ಜನ್ಮದಿನವೂ ಹೌದು.

ಧಾರ್ಮಿಕ-ಸಾಮಾಜಿಕವಾಗಿ ಮಹತ್ವ ಪಡೆದ ಅಕ್ಷಯ ತೃತೀಯೆಯು ವರ್ಷದ ಮೂರುವರೇ ಶುಭದಿನಗಳಾದ ಅಕ್ಷಯ್ಯತೃತೀಯೆ, ವಿಜಯದಶಮಿ, ದೀಪಾವಳಿ ಹಾಗೂ ಬಲಿಪಾಡ್ಯದ ಅರ್ಧದಿನಗಳಲ್ಲಿ ಒಂದಾಗಿದೆ. ಆ ಕಾರಣಕ್ಕಾಗಿ ಈ ದಿನದಂದು ಯಾವುದೇ ಶುಭಕಾರ್ಯವನ್ನು ಮಾಡಬಹುದು.

ಈ ದಿನದ ಮಹತ್ವವೇನು?

ನಿರ್ಣಯ ಸಿಂಧುವಿನ ಪ್ರಕಾರ ‘ವೈಶಾಖ ಶುಕ್ಲ ತೃತೀಯಾ ಅಕ್ಷಯ ತೃತೀಯೋಚ್ಯತೇ ||’ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ದಿನವೇ ಅಕ್ಷಯ ತೃತೀಯಾ. ಈ ದಿನ ಸಂಗ್ರಹಿಸಿದ ಪುಣ್ಯಗಳಿಗೆ ಕ್ಷಯ(ನಾಶ)ವೇ ಇಲ್ಲ ಎಂಬ ಕಾರಣಕ್ಕೆ ಈ ದಿನವನ್ನು ‘ಅಕ್ಷಯ ತೃತೀಯಾ’ಎಂದು ಕರೆಯಲಾಗಿದೆ. ಭವಿಷ್ಯ ಪುರಾಣದಲ್ಲಿ;
ಯತ್ಕಿಂಚಿತ್ ದೀಯತೇದಾನಂ ಸ್ವಲ್ಪಂ ವಾ ಯದಿ ವಾ ಬಹು |
ತತ್ಸರ್ವಂ ಅಕ್ಷಯಂ ಯಸ್ಮಾತ್‌ತೇನೇಯಂ ಅಕ್ಷಯಾ ಸ್ಮೃತಾ ||

ಈ ದಿನದಂದು ಸ್ವಲ್ಪವಾಗಲಿ, ಬಹಳವಾಗಲಿ ಅಥವಾ ಎಷ್ಟೇ ದಾನ ಮಾಡಿದರೂ ಅದರ ಫಲ ಅಕ್ಷಯವಾಗುವುದು.
ಯಾ ಮನ್ವಾದ್ಯಾಯುಗಾದ್ಯಾಶ್ಚ ತಿಥಿಯಸ್ತಾಸು ಮಾನವಃ |
ಸ್ನಾತ್ವಾ ಹುತ್ವಾ ಚ ದತ್ವಾ ಚ ಜಪ್ತ್ವಾ ನಂತ ಫಲಂ ಲಭೇತ್ ||
ಉದಕುಂಭಾನ್ಸಕನಕಾನ್ ಸಾನ್ನಾನ್ ಸರ್ವರಸೈಃ ಸಹ |
ಯವಗೋಧೂಮಚಣಕಾನ್ ಸಕ್ತುದಧ್ಯೋದನಂತಥಾ |
ಗ್ರೈಷ್ಮಿಕಂ ಸರ್ವಮೇವಾತ್ರ ಸಸ್ಯಂದಾನೇ ಪ್ರಶಸ್ಯತೇ ||

ಅಕ್ಷಯ ಫಲದಾಯಿನಿಯಾದ ಈ ದಿನ ದೇವ-ಪಿತೃಪೂಜೆಗೆ ಪ್ರಶಸ್ತವಾಗಿದ್ದು, ಗಂಗಾದಿ ಪುಣ್ಯ ನದಿಗಳಲ್ಲಿ, ಸಮುದ್ರದಲ್ಲಿ ಸ್ನಾನ, ಭಗವಂತನ್ನು ಉದ್ದೇಶಿಸಿ ಹೋಮ, ಬೇಸಿಗೆ ಕಾಲದಲ್ಲಿ ಹೇಚ್ಚಾಗಿ ಬಳಸಲ್ಪಡುವ ನೀರಿನ ಪಾತ್ರೆ, ಬಂಗಾರ, ಹಸಿವು ಹೋಗಲಾಡಿಸುವ ವಿವಿಧ ಬಗೆಯ ಆಹಾರಗಳು, ಬಾಯಾರಿಕೆ ನೀಗಿಸುವ ಕಬ್ಬಿನರಸ ಮುಂತಾದ ಪಾನೀಯಗಳು,ಅಕ್ಕಿ,ಗೋದಿ, ಕಡಲೆ ಮುಂತಾದ ಧಾನ್ಯಗಳು, ಹಿಟ್ಟು, ಮೊಸರು, ಅನ್ನ, ಸಸ್ಯ ಒಟ್ಟಿನಲ್ಲಿ ಗ್ರೀಷ್ಮಕಾಲದಲ್ಲಿ ಉಪಯೋಗಿಸುವ ಆಹಾರ, ವಸ್ತು ಮೊದಲಾದವುಗಳನ್ನು ಸತ್ಪಾತ್ರರಿಗೆದಾನ, ಇಷ್ಟದೇವತೆಯ ಜಪ-ತಪಗಳನ್ನು ಮಾಡಿದರೆ, ಅನಂತಫಲ ದೊರಕುವುದು ಎಂದು ಮಹಾಭಾರತ-ಭವಿಷ್ಯಪುರಾಣವೇ ಮೊದಲಾದ ಪುರಾಣಗಳಲ್ಲಿ ಹೇಳಿದೆ.

ಬೃಹತ್ಪರಾಶರ ಸಂಹಿತೆಯಲ್ಲಿ ; ದಾನಮೇಕಂಕಲೌಯುಗೇ’ ಎಂದು ಹೇಳಿದಂತೆ, ಯಾರಿಗೆ ಆಹಾರ, ಬಟ್ಟೆ, ಔಷಧಿ ಮುಂತಾದವುಗಳ ಸಹಾಯದ ಅವಶ್ಯಕತೆಯಿದೆಯೋ ಅವರಿಗೆ ತನು-ಮನ-ಧನಗಳ ಸಹಾಯ-ಸಹಕಾರ-ಸೇವೆ ಮಾಡಿದರೇ ಸರ್ವಪುಣ್ಯಗಳೂ ಲಭಿಸುವವು. ಅದೇ ನಿಜವಾದ ಭಗವಂತನ ಪೂಜೆಯಾಗಿದೆ. ದಾನದಿಂದಲೇ ಮನಸ್ಸಂತೋಷ, ಚಿತ್ತಶ್ಶುದ್ಧಿದೊರಕುವುದು, ‘ಅಕ್ಷಯ ಮೋಕ್ಷಸ್ಯಕಾರಣಮ್’ ಎನ್ನುವಂತೆ ಈ ದಿನ ಇವೆಲ್ಲವನ್ನು ಮಾಡುವುದರಿಂದ ಮೋಕ್ಷಕ್ಕೂ ಕಾರಣವಾಗುವುದು ಎಂದು ಪುರಾಣಗಳೂ ಸಾರಿವೆ.

ಪುರಾಣ ಕತೆಗಳಲ್ಲೇನಿದೆ?

ಅಕ್ಷಯ ತೃತೀಯಾ ವ್ರತದ ಕುರಿತಾಗಿ ಪ್ರಸಿದ್ಧ ಪುರಾಣ ಕಥೆಯೊಂದು ಹೀಗೆದೆ. ಹಿಂದೆ ಧರ್ಮದಾಸನೆಂಬ ವೈಶ್ಯನಿದ್ದ. ಅತ್ಯಂತ ಸದಾಚಾರಿಯಾದ ಆತ ದೇವತೆಗಳನ್ನು, ವಿಪ್ರರನ್ನು ಸದಾ ಶ್ರದ್ಧೆಯಿಂದ ಪೂಜಿಸುತ್ತಿದ್ದ. ಅಕ್ಯಯ ತೃತೀಯಾ ವ್ರತದ ಮಹತ್ವ ಅರಿತ ಆತ,ಅಕ್ಷಯ ತೃತೀಯಾ ಹಬ್ಬದ ದಿನದಂದು ಗಂಗಾ ನದಿಯಲ್ಲಿ ಸ್ನಾನ ಮಾಡಿ, ವಿಧಿ ಪೂರ್ವಕ ಭಗವಂತನ್ನು ಪೂಜಿಸಿ, ಸತ್ಪಾತ್ರರಿಗೆ ಬಂಗಾರ,ವಸ್ತ್ರ, ಆಹಾರ ಧಾನ್ಯಗಳನ್ನು ದಾನ ಮಾಡಿದ.

ವರ್ಷ ಕಳೆದಂತೆ ಅಶಕ್ತನಾಗಿಯೂ, ವೃದ್ಧನಾಗಿಯೂ ಈ ದಿನ ಉಪವಾಸ-ದಾನ-ಧರ್ಮಗಳನ್ನು ಕೈಗೊಂಡನು. ಅದೇ ವೈಶ್ಯನು ಮುಂದಿನ ಜನ್ಮದಲ್ಲಿ ಕುಶಾವತಿ ರಾಜ್ಯದ ರಾಜನಾದನು. ರಾಜನಾದಾಗಲೂ ಹಿಂದಿನ ಜನ್ಮಸಂಸ್ಕಾರ ವಿಶೇಷದಿಂದ ಅಕ್ಷಯ್ಯ ತೃತೀಯಾ ವ್ರತವನ್ನು ಆಚರಿಸಿದ. ಅಂದು ಸತ್ಪಾತ್ರರಿಗೆ ಗ್ರೀಷ್ಮಕಾಲದಲ್ಲಿ ಉಪಯೋಗಿಸುವ ವಸ್ತುಗಳನ್ನು ಯಥೇಚ್ಛವಾಗಿ ದಾನ ಮಾಡಿದ. ಸಾಕ್ಷಾತ್‌ ದೇವೆಂದ್ರನೇ ವೇಷ ಮರೆಸಿ ವಿಪ್ರ ವೇಷತೊಟ್ಟು ಅಕ್ಷಯ ತೃತೀಯಾ ದಂದು ರಾಜನ ದಾನಯಜ್ಞದಲ್ಲಿ ಪಾಲ್ಗೊಳ್ಳುತ್ತಿದ್ದ.

ರಾಜನಿಗೆ ತನ್ನ ಶ್ರದ್ಧೆ ಮತ್ತು ಭಕ್ತಿಯಕುರಿತಾಗಿ ಸ್ವಲ್ಪವೂ ಅಹಂಕಾರ ವಿರಲಿಲ್ಲ. ಈ ವ್ರತದ ಪ್ರಭಾವದಿಂದ ರಾಜ ಅತ್ಯಂತ ವೈಭವಶಾಲಿ ಯಾಗಿ ರಾಜ್ಯವಾಳಿದರೂ ಧರ್ಮಮಾರ್ಗದಿಂದ ವಿಚಲಿತನಾಗಿರಲಿಲ್ಲ. ಅಕ್ಷಯ ತೃತೀಯಾ ದಿನದಂದು ರಾಜ ನೆಡೆಸಿದ ದೇವಪೂಜನ ಹಾಗೂ ಸತ್ಪಾತ್ರರಿಗೆ ಸುವಸ್ತುಗಳನ್ನು ನೀಡಿದ ಫಲವಾಗಿ ಧನವಂತ-ಪ್ರತಾಪಿ ರಾಜನೆನಿಸಿಕೊಂಡು ಸದ್ಗತಿ ಹೊಂದಿದ.

ಆಚರಣೆ ಹೇಗೆ ಮಾಡಬೇಕು?

ಎಲ್ಲಾ ಹಬ್ಬಗಳಂತೆ ಈ ದಿನ ಪ್ರಾತಃಕಾಲದಲ್ಲಿ ನಿತ್ಯಕರ್ಮ ಮಂಗಲಸ್ನಾನ, ನವವಸ್ತ್ರ ಧಾರಣೆ ಮಾಡಿ, ಲಕ್ಷ್ಮೀನಾರಾಯಣನನ್ನು ಸಂದರ್ಶಿಸಿ, ಪೂಜಿಸಿ ಸತ್ಪಾತ್ರರಿಗೆ ಗ್ರೀಷ್ಮಕಾಲದಲ್ಲಿ ಉಪಯೋಗಿಸುವ ವಸ್ತುಗಳನ್ನು ದಾನಮಾಡಿ, ಅಥವಾ ದಾನ ಮಾಡುವೆಎಂದು ಸಂಕಲ್ಪಿಸಬೇಕು. ಫಲಾಹಾರ ಸೇವಿಸಿ, ಅಕ್ಷಯ ತೃತೀಯಾದ ಮಹತ್ವಸಾರುವ ಪುರಾಣಕಥೆ ಶ್ರವಣ ಮಾಡಬೇಕು.
ಪುರಾಣಗಳಲ್ಲಿ ಅಕ್ಷಯ ತೃತೀಯಾದಂದು ಬಂಗಾರ ಖರೀದಿಸಿ ಎಂದು ಹೇಳಿದ್ದಾರೆಯೇ?. ಇದು ಬಹಳ ಮುಖ್ಯವಾದ ಪ್ರಶ್ನೆ. ಪದ್ಮಪುರಾಣದ 64ನೇ ಅಧ್ಯಾಯದಲ್ಲಿ;
ವೈಶಾಖ ಶುಕ್ಲಪಕ್ಷೇತು ತೃತೀಯಾಯೈರು ಪೋಷಿತಾ |
ಅಕ್ಷಯಂ ಫಲಮಾಪ್ನೋತಿ ಸರ್ವಸ್ಯ ಸುಕೃತಸ್ಯ ಚ ||
ಸಾ ತಥಾಕೃತ್ತಿಕೋಪೇತಾ ವಿಶೇಷೇಣ ಸುಪೂಜಿತಾ |
ತತ್ರದತ್ತಂ ಹುತಂಜಪ್ತಂ ಸರ್ವಮಕ್ಷಯಮುಚ್ಯತೇ ||

ಎಂದು ಹೇಳಲಾಗಿದೆ. ಯಾರು ವೈಶಾಖಮಾಸದ ಶುಕ್ಲ ಪಕ್ಷದ ತೃತೀಯಾ ದಿನ ವ್ರತೋಪವಾಸಾದಿಗಳನ್ನು ಮಾಡುವರೋ ಅವರು ತಮ್ಮ ಸಮಸ್ತ ಸತ್ಕರ್ಮಗಳಿಗೆ ಅಕ್ಷಯವಾದ (ಎಂದಿಗೂ ನಾಶವಾಗದ, ಬರಿದಾಗದ) ಪುಣ್ಯಫಲವನ್ನು ಪಡೆಯುವರು. ಈ ದಿನ ಕೃತ್ತಿಕಾ ನಕ್ಷತ್ರದಿಂದ ಕೂಡಿದರೆ ಇನ್ನೂ ವಿಶೇಷ ಪೂಣ್ಯದಿನ. ಈ ದಿನ ಮಾಡುವದಾನ, ಹವನ ಹಾಗೂ ಜಪ ಇವೆಲ್ಲವೂ ಉಳಿದ ದಿನಗಳಿಗಿಂತ ವಿಶೇಷ ಪುಣ್ಯಫಲ ನೀಡುವುದಾಗಿದೆ ಎಂದು, ಈ ದಿನ ದಾನಾದಿಗಳನ್ನು ಮಾಡಲು ಪುರಾಣಗಳಲ್ಲಿ ಹೇಳಿದ್ದಾರೆಯೇ ಹೊರತೂ ಬಂಗಾರ ಇತ್ಯಾದಿ ಸಂಗ್ರಹಿಸಲು ಎಲ್ಲಿಯೂ ಹೇಳಿಲ್ಲ.

ಬಂಗಾರ ಅಥವಾ ಯಾವುದೇ ಅಮೂಲ್ಯವಾದ ವಸ್ತುಗಳನ್ನು ಅವಶ್ಯಕತೆ ಇದ್ದಾಗ ಯಾವಾಗ ಬೇಕಾದರೂ ಖರೀದಿಸಬಹುದು. ನಮ್ಮ ಸನಾತನ ಗ್ರಂಥಗಳಲ್ಲಿ ಈ ದಿನದಂದು ಬಂಗಾರ ಇತ್ಯಾದಿ ಸುವಸ್ತುಗಳನ್ನು ದಾನ ಮಾಡಲು ಹೇಳಿದ್ದಾರೆಯೇ ಹೊರತೂ, ಎಲ್ಲಿಯೂ ಬಂಗಾರ, ಭೂಮಿ, ಮನೆ ಮುಂತಾದ ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಕುರಿತಾಗಲಿ, ಸಂಗ್ರಹಿಸುವುದರ ಕುರಿತಾಗಿ ಹೇಳಿಲ್ಲ.

ಈ ದಿನ, ಸುವಸ್ತುಗಳನ್ನು ಸತ್ಪಾತ್ರರಿಗೆ ದಾನ ಮಾಡಿ ಪುಣ್ಯಸಂಗ್ರಹಣೆ ಮಾಡುವ ದಿನವಾಗಿದ್ದು, ಚಿನ್ನ ಮುಂತಾದವುಗಳ ಖರೀದಿಸುವ ಅಥವಾ ಸಂಗ್ರಂಹಣೆಯ ದಿನವಲ್ಲ. ಕೊಟ್ಟರೆಕೊಟ್ಟ ಪುಣ್ಯ ಅಕ್ಷಯವಾಗುವುದು ಎಂದು ಹೇಳಲಾಗಿದೆಯೇ ಹೊರತೂ ಖರೀದಿಸಿದ, ಸಂಗ್ರಹಿಸಿದ ವಸ್ತು ಅಕ್ಷಯ್ಯವಾಗುವುದು ಎಂಬುದಕ್ಕೆ ಯಾವುದೇ ಪ್ರಾಚೀನ ಗ್ರಂಥಗಳ ಆಧಾರವಿಲ್ಲ. ಚಿನ್ನ ಖರೀದಿಸುವ ಪರಿಪಾಠ ಬಂದ್ದದ್ದು ತೀರಾಇತ್ತೀಚಿಗೆ. ಮೌಲ್ಯ ವರ್ಧನೆ ವಸ್ತುಗಳನ್ನು ಖರೀದಿಸುವುದು, ಸಂಗ್ರಹಿಸುವುದು ಕಾಲಾಂತರದಲ್ಲಿ ಆರ್ಥಿಕವಾಗಿ ಲಾಭದದೃಷ್ಟಿಯಿಂದ, ಆ ದೃಷ್ಟಿಯಿಂದ ಬೇಕಾದರೆ ಖರೀದಿಸಬಹುದು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಎಲ್ಲಾ ಹಬ್ಬಗಳೂ ನಮ್ಮಜೀವನಕ್ಕೆ ಅಮೂಲ್ಯ ಸಂದೇಶ-ಪಾಠಗಳನ್ನು ಸಾರುತ್ತವೆ. ಅಕ್ಷಯ ತೃತೀಯಾ ಕೂಡ ಸಂಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡಿ ಎನ್ನುವ ಬಹುದೊಡ್ಡ ಸಂದೇಶವನ್ನು ಹೇಳಿದೆ. ಈ ಹಿನ್ನಲೆಯಲ್ಲಿ ಹಬ್ಬವನ್ನು ಅರಿತು ಆಚರಿಸಿದಲ್ಲಿ ಇಹ-ಪರಕ್ಕೆ ಕ್ಷೇಮವಾಗುವುದು.

– ಲೇಖಕರು ಸಂಸ್ಕೃತ ಉಪನ್ಯಾಸಕರು, ನೆಲ್ಲಿಕೇರಿ, ಕುಮಟಾ(ಉ.ಕ)

ಇದನ್ನೂ ಓದಿ: Akshaya Tritiya 2023 : ಅಕ್ಷಯ ತೃತೀಯಕ್ಕೆ ಉಂಟು ಪುರಾಣದ ನಂಟು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Chikkalluru Siddappaji Temple : ಚಿಕ್ಕಲ್ಲೂರಲ್ಲಿ ಪೂಜೆ ವಿಚಾರಕ್ಕೆ ತ್ರಿಶೂಲದಲ್ಲಿ ಹೊಡೆದಾಟ; ಮೂವರು ಅರ್ಚಕರಿಗೆ ಗಾಯ

Chikkalluru Siddappaji Temple: ಚಿಕ್ಕಲ್ಲೂರಿನಲ್ಲಿ ಸಿದ್ದಪ್ಪಾಜಿ ದೇವರ ಗುಡ್ಡ ದೀಕ್ಷೆ ನೀಡುವ ವಿಚಾರಕ್ಕೆ ಅರ್ಚಕರ ಗುಂಪಿನ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ದೇವರ ತ್ರಿಶೂಲ, ಬೆತ್ತ ಹಿಡಿದು ಹೊಡೆದಾಡಿಕೊಂಡಿದ್ದಾರೆ.

VISTARANEWS.COM


on

By

Chikkalluru Siddappaji temple
Koo

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಯಾತ್ರಸ್ಥಳ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಸ್ಥಾನದಲ್ಲಿ (Chikkalluru Siddappaji Temple) ಪೂಜೆ ವಿಚಾರಕ್ಕೆ ತ್ರಿಶೂಲಗಳಲ್ಲಿ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಮೂವರು ಅರ್ಚಕರಿಗೆ ಗಂಭೀರ ಗಾಯವಾಗಿದೆ. ಚಿಕ್ಕಲೂರು ದೇವಸ್ಥಾನದ ಅರ್ಚಕ ಶಂಕರಪ್ಪ (65), ಶಿವಕುಮಾರಸ್ವಾಮಿ (40) ಹಾಗೂ ನಂಜುಂಡಸ್ವಾಮಿ (32) ಗಂಭೀರ ಗಾಯಗೊಂಡವರು.

ಪೂಜೆ ಹಾಗೂ ದೀಕ್ಷೆ ಕೊಡುವ ವಿಚಾರಕ್ಕೆ ಅರ್ಚಕರ ಗುಂಪಿನಲ್ಲಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಗಲಾಟೆ ವಿಕೋಪಕ್ಕೆ ಹೋಗಿ, ಸಿದ್ದಪ್ಪಾಜಿ ದೇವಸ್ಥಾನದ ಬೆತ್ತ ಮತ್ತು ತ್ರಿಶೂಲಗಳನ್ನು ಹಿಡಿದುಕೊಂಡು ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ.

ಸದ್ಯ ಕೊಳ್ಳೆಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ದಪ್ಪಾಜಿ ದೇವರ ಗುಡ್ಡ ದೀಕ್ಷೆ ನೀಡುವ ವಿಚಾರಕ್ಕೆ ಅರ್ಚಕರ ಗುಂಪಿನ ನಡುವೆ ಗಲಾಟೆ ನಡೆದಿದೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Physical Abuse : ವೈದ್ಯಾಧಿಕಾರಿ ಅಶ್ಲೀಲ ವರ್ತನೆ; ರಾತ್ರಿಯಾದರೆ ವಿಡಿಯೊ ಕಾಲ್‌ನಲ್ಲಿ ವೈದ್ಯೆಗೆ ಟಾರ್ಚರ್‌‌

ದೇವಸ್ಥಾನಕ್ಕೆ ನುಗ್ಗಿ ಆಂಜನೇಯ ಮೂರ್ತಿಯನ್ನು ವಿರೂಪಗೊಳಿಸಿದ ದುಷ್ಕರ್ಮಿಗಳು

ವಿಜಯನಗರ: ಆಂಜನೇಯ ಮೂರ್ತಿಯನ್ನು ವಿರೂಪಗೊಳಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ದುಷ್ಕರ್ಮಿಗಳ ಕೃತ್ಯಕ್ಕೆ ಆಂಜನೇಯ ಪ್ರತಿಮೆ ತುಂಡಾಗಿದೆ. ವಿಜಯನಗರ (Vijayanagara News) ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸ ಹಂಪಿ ಗ್ರಾಮದಲ್ಲಿ ಘಟನೆ ನಡೆದಿದೆ.

ತಡರಾತ್ರಿ ಕಾರ್ಯಸಿದ್ಧಿ ಶ್ರೀ ಆಂಜನೇಯ ಸ್ವಾಮಿ ದೇಗುಲದ ಬೀಗ ಮುರಿದು, ಒಳ ನುಗ್ಗಿರುವ ದುಷ್ಟರು ಮೂರ್ತಿಯನ್ನು ಒಡೆದು ಹಾಕಿದ್ದಾರೆ. ಮುಂಜಾನೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಬೆರಳಚ್ಚು ವಿಭಾಗ ತಜ್ಞರು, ಶ್ವಾನದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ.

ಹೊಸಪೇಟೆ ಡಿವೈಎಸ್‌ಪಿ ಶರಣಬಸವೇಶ್ವರ, ಹಂಪಿ ಪ್ರವಾಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೇವರ ಹರಕೆ ಕುರಿಯನ್ನೇ ಕದ್ಯೊಯ್ದ ಕಳ್ಳರು

ದಾವಣಗೆರೆ ದೇವರ ಹರಕೆಗಾಗಿ ತಂದಿದ್ದ ಕುರಿಯನ್ನೇ ಕಳ್ಳರು (Theft Case) ಹೊತ್ತೊಯ್ದಿದ್ದಾರೆ. ದಾವಣಗೆರೆ (Davanagere news) ತಾಲೂಕಿನ ಮಾಯಾಕೊಂಡದಲ್ಲಿ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ‌ ಕಿರಾತಕರು ರಾತ್ರೋ ರಾತ್ರಿ ಕುರಿಯನ್ನು ಕದ್ದಿದ್ದಾರೆ.

ಸುಮಾರು 8 ಮಂದಿ ಖದೀಮರ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಯಾಕೊಂಡದ ನಿವಾಸಿ ಪ್ರಭು ಎಂಬುವರಿಗೆ ಸೇರಿದ ಕುರಿಯನ್ನು ಬೆಳಗಿನ‌ ಜಾವ 3ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದು ಎಗರಿಸಿದ್ದಾರೆ. ಸದ್ಯ ಪ್ರಭು ಅವರು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಖದೀಮರನ್ನು ಹಿಡಿಲು ಮುಂದಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಧಾರ್ಮಿಕ

Vastu Tips: ಮನೆಯ ಯಾವ ಕೋಣೆಗೆ ಯಾವ ಬಣ್ಣ ಇದ್ದರೆ ನೆಮ್ಮದಿ ಸಿಗುತ್ತದೆ? ವಾಸ್ತು ಸಲಹೆ ಹೀಗಿದೆ

ಮನೆಯ ಕೋಣೆಗಳು, ದಿಕ್ಕುಗಳಿಗೆ ಪೂರಕವಾಗಿ ಬಣ್ಣ ಬಳಿಯುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಯಾಗುವಂತೆ ಮಾಡಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ (Vastu Tips). ಯಾವ ಕೋಣೆಗೆ ಯಾವ ಬಣ್ಣ ಸೂಕ್ತ? ಯಾವ ಬಣ್ಣದಿಂದ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ? ಈ ಕುರಿತ ವಾಸ್ತು ಪರಿಣಿತರ ಸಲಹೆ ಇಲ್ಲಿದೆ.

VISTARANEWS.COM


on

By

Vastu Tips
Koo

ಬಣ್ಣಗಳು (Colours) ನಮ್ಮ ಬದುಕಿನಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ನಮ್ಮ ಮನಸ್ಥಿತಿ, ಭಾವನೆ ಮತ್ತು ಸಂತೋಷದ ಮೇಲೆ ಇದರ ಪರಿಣಾಮವಿರುತ್ತದೆ. ವಾಸ್ತು ಶಾಸ್ತ್ರದಲ್ಲಿ (Vastu Tips) ಬಣ್ಣಗಳು ಮನೆಯಲ್ಲಿ ಶಕ್ತಿಯ ಹರಿವಿನ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ. ವಾಸ್ತುತತ್ತ್ವಗಳ ಆಧಾರದ ಮೇಲೆ ಪ್ರತಿ ಕೋಣೆಗೆ ಸರಿಯಾದ ಬಣ್ಣಗಳನ್ನು ಆಯ್ಕೆ ಮಾಡುವುದರಿಂದ ಮನೆಯಲ್ಲಿ ಶಾಂತಿ (peaceful) ಮತ್ತು ಸಕಾರಾತ್ಮಕತೆ (Positive Energy) ತುಂಬುತ್ತದೆ.

ವಾಸ್ತು ಪ್ರಕಾರ ಮನೆಯ ಪ್ರತಿಯೊಂದು ಕೋಣೆಗೂ ಬಣ್ಣಗಳಿವೆ. ವಾಸ್ತು ನಿರ್ದೇಶನಗಳ ಪ್ರಕಾರ ಗೋಡೆಯ ಬಣ್ಣಗಳನ್ನು ಹೇಗೆ ಆರಿಸುವುದು ಮತ್ತು ಧನಾತ್ಮಕ, ಉತ್ಸಾಹಭರಿತ ವಾತಾವರಣವನ್ನು ರಚಿಸಲು ಯಾವ ಬಣ್ಣಗಳನ್ನು ಬಳಸಬೇಕು ಎನ್ನುವ ಮಾಹಿತಿ ಇಲ್ಲಿದೆ.

ವಾಸ್ತುತತ್ತ್ವಗಳ ಆಧಾರದ ಮೇಲೆ ಮನೆಯ ಪ್ರತಿಯೊಂದು ಪ್ರದೇಶಕ್ಕೂ ಸರಿಯಾದ ಬಣ್ಣಗಳನ್ನು ಆಯ್ಕೆ ಮಾಡುವುದರಿಂದ ಜಾಗದ ಶಕ್ತಿ ಮತ್ತು ಭಾವನೆಯನ್ನು ಸುಧಾರಿಸಬಹುದು.


ಅಡುಗೆ ಕೋಣೆ

ಕಿತ್ತಳೆ, ಕೆಂಪು, ಹಳದಿ ಮತ್ತು ಗುಲಾಬಿ ಬಣ್ಣಗಳು ಅಡುಗೆ ಮನೆಗೆ ಸೂಕ್ತವಾಗಿದೆ. ಈ ಗಾಢ ಬಣ್ಣಗಳು ಹಸಿವನ್ನು ಹೆಚ್ಚಿಸುತ್ತವೆ ಮತ್ತು ಉತ್ಸಾಹಭರಿತ ವಾತಾವರಣವನ್ನು ಸೃಷ್ಟಿಸುತ್ತವೆ. ಅಡುಗೆ ಮತ್ತು ಊಟವನ್ನು ಹೆಚ್ಚು ಆನಂದದಾಯಕವಾಗಿಸುತ್ತದೆ. ಅಡುಗೆಮನೆಯಲ್ಲಿ ಶಕ್ತಿ, ಚೈತನ್ಯ ಮತ್ತು ಉತ್ಸಾಹವನ್ನು ಈ ಬಣ್ಣಗಳು ಹೆಚ್ಚಿಸುತ್ತದೆ. ಕಪ್ಪು ಮತ್ತು ಬೂದು ಬಣ್ಣವನ್ನು ಅಡುಗೆ ಕೋಣೆಗೆ ಬಳಸಬೇಡಿ. ಏಕೆಂದರೆ ಅವುಗಳು ಜಾಗವನ್ನು ಕತ್ತಲೆಯಾದ ಮತ್ತು ಭಾರವಾದ ಭಾವನೆಯನ್ನು ಉಂಟುಮಾಡಬಹುದು. ಅದರ ಧನಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.

ಮಲಗುವ ಕೋಣೆ

ನೀಲಿ, ಹಸಿರು ಮತ್ತು ಗುಲಾಬಿ ಬಣ್ಣದ ತಿಳಿ ಛಾಯೆಗಳು ಹಿತವಾದವು ಮತ್ತು ಶಾಂತ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಈ ಶಾಂತಿಯುತ ಬಣ್ಣಗಳು ದೀರ್ಘ ದಿನದ ಅನಂತರ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಶಾಂತಿ, ಸಾಮರಸ್ಯ ಮತ್ತು ಭಾವನಾತ್ಮಕ ಯೋಗಕ್ಷೇಮದೊಂದಿಗೆ ಇದು ಸಂಬಂಧವನ್ನು ಹೊಂದಿದೆ. ಮಲಗುವ ಕೋಣೆಯಲ್ಲಿ ಗಾಢವಾದ ಮತ್ತು ದಪ್ಪ ಬಣ್ಣಗಳನ್ನು ತಪ್ಪಿಸಿ. ಏಕೆಂದರೆ ಅವು ತುಂಬಾ ಉತ್ತೇಜಕವಾಗಬಹುದು. ವಿಶ್ರಾಂತಿ ಮತ್ತು ಚೆನ್ನಾಗಿ ನಿದ್ರೆ ಮಾಡಲು ತೊಂದರೆ ಉಂಟು ಮಾಡಬಹುದು.

ಲಿವಿಂಗ್ ರೂಮ್

ಲೀವಿಂಗ್ ರೂಮ್ ಗೆ ಸ್ನೇಹಶೀಲ ಮತ್ತು ಸ್ನೇಹಪರ ಭಾವನೆಯನ್ನು ಉಂಟುಮಾಡುವ ಬಣ್ಣಗಳನ್ನು ಆಯ್ಕೆ ಮಾಡುವುದು ಮುಖ್ಯ. ಹಳದಿ, ಹಸಿರು ಮತ್ತು ನೀಲಿ ಬಣ್ಣಗಳಂತಹ ಗಾಢವಾದ ಬಣ್ಣಗಳು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಅವು ಕೋಣೆಯಲ್ಲಿ ಉತ್ಸಾಹಭರಿತ ಮತ್ತು ಸಂತೋಷದ ಭಾವನೆಯನ್ನು ನೀಡುತ್ತವೆ. ಗಾಢವಾದ ಬಣ್ಣಗಳು ಸಂತೋಷ, ಬೆಳವಣಿಗೆ ಮತ್ತು ಶಾಂತತೆಯನ್ನು ಪ್ರತಿನಿಧಿಸುತ್ತವೆ. ಇದು ಮೋಜಿನ ವಾತಾವರಣಕ್ಕೆ ಸೂಕ್ತವಾಗಿದೆ.


ಪೂಜಾ ಕೊಠಡಿ

ಈ ಸ್ಥಳಕ್ಕಾಗಿ ಆಯ್ಕೆ ಮಾಡಲಾದ ಬಣ್ಣಗಳು ಶುದ್ಧತೆ, ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕತೆಯನ್ನು ಪ್ರತಿನಿಧಿಸುತ್ತವೆ. ಬಿಳಿ ಬಣ್ಣವು ಅತ್ಯುತ್ತಮ ಬಣ್ಣವಾಗಿದೆ. ಏಕೆಂದರೆ ಇದು ಶುದ್ಧತೆ ಮತ್ತು ಶಾಂತಿಯನ್ನು ಸಂಕೇತಿಸುತ್ತದೆ. ಪೂಜಾ ಕೋಣೆಯಲ್ಲಿ ಬಿಳಿಯ ಸುತ್ತಲಿದ್ದರೆ ಅದು ಶಾಂತ ಮತ್ತು ಪವಿತ್ರ ಭಾವನೆಯನ್ನು ನೀಡುತ್ತದೆ. ನೀವು ಅದನ್ನು ಇನ್ನಷ್ಟು ಶಾಂತಿಯುತವಾಗಿಸಲು ಹಳದಿ, ತಿಳಿ ನೀಲಿ ಅಥವಾ ತಿಳಿ ಗುಲಾಬಿ ಬಣ್ಣದ ಬೆಳಕಿನ ಸ್ಪರ್ಶಗಳನ್ನು ಕೂಡ ಸೇರಿಸಬಹುದು. ಗಾಢ ಬಣ್ಣಗಳನ್ನು ಬಳಸದಿರುವುದು ಮುಖ್ಯವಾಗಿದೆ. ಯಾಕೆಂದರೆ ಪ್ರಾರ್ಥನೆ ಮತ್ತು ಧ್ಯಾನಕ್ಕೆ ಅಗತ್ಯವಿರುವ ಶಾಂತ ಮತ್ತು ಶಾಂತಿಯುತ ವಾತಾವರಣವನ್ನು ಅದು ಹಾಳು ಮಾಡಬಹುದು.

ಗೋಡೆಯ ಬಣ್ಣಗಳು

ವಾಸ್ತು ಪ್ರಕಾರ ಮನೆಗೆ ಸರಿಯಾದ ಬಣ್ಣಗಳನ್ನು ಯಾವುದು, ಯಾವ ದಿಕ್ಕಿನಲ್ಲಿ ಇರಬೇಕು ಎಂದು ತಿಳಿದುಕೊಳ್ಳುವುದು ಮುಖ್ಯ. ವಿಭಿನ್ನ ದಿಕ್ಕುಗಳು ವಿಭಿನ್ನ ಬಣ್ಣಗಳೊಂದಿಗೆ ಹೊಂದಿಕೆಯಾಗುತ್ತವೆ. ಅದು ಮನೆಯನ್ನು ಹೆಚ್ಚು ಸಮತೋಲಿತ ಮತ್ತು ಧನಾತ್ಮಕವಾಗಿ ಮಾಡುತ್ತದೆ.

ಉತ್ತರ

ಉತ್ತರಕ್ಕೆ ಎದುರಾಗಿರುವ ಗೋಡೆಗಳಿಗೆ ಹಸಿರು ಪರಿಪೂರ್ಣವಾಗಿದೆ. ಇದು ಸಮೃದ್ಧಿ ಮತ್ತು ಬೆಳವಣಿಗೆಯನ್ನು ಸೂಚಿಸುತ್ತದೆ. ಇದು ಉತ್ತಮ ಶಕ್ತಿಯನ್ನು ತರುತ್ತದೆ. ಈ ಗೋಡೆಗಳ ಹಸಿರು ಬಣ್ಣವು ಸಂಪತ್ತು ಮತ್ತು ಯಶಸ್ಸನ್ನು ಆಹ್ವಾನಿಸುತ್ತದೆ. ಮನೆಯಲ್ಲಿ ಸಾಮರಸ್ಯದ ವೈಬ್ ಅನ್ನು ಉಂಟು ಮಾಡುತ್ತದೆ. ಇದು ನೀರಿನ ಅಂಶದೊಂದಿಗೆ ಸಂಬಂಧಿಸಿದೆ. ಜೀವನ ಮತ್ತು ಪುನರ್ಯೌವನಗೊಳಿಸುವಿಕೆಯನ್ನು ಸೂಚಿಸುತ್ತದೆ.

ದಕ್ಷಿಣ

ದಕ್ಷಿಣಕ್ಕೆ ಎದುರಾಗಿರುವ ಗೋಡೆಗಳಿಗೆ, ಉಷ್ಣತೆ ಮತ್ತು ಶಕ್ತಿಯನ್ನು ಸೇರಿಸಲು ಕೆಂಪು ಮತ್ತು ಹಳದಿ ಬಳಸಿ. ದಕ್ಷಿಣವು ಬೆಂಕಿಯನ್ನು ಪ್ರತಿನಿಧಿಸುತ್ತದೆ. ಉತ್ಸಾಹ ಮತ್ತು ಬದಲಾವಣೆಯನ್ನು ಸಂಕೇತಿಸುತ್ತದೆ. ಕೆಂಪು, ಹಳದಿ ಸಂತೋಷವನ್ನು ತರುತ್ತದೆ. ದಕ್ಷಿಣಾಭಿಮುಖ ಗೋಡೆಗಳ ಮೇಲೆ ಈ ಬಣ್ಣಗಳನ್ನು ಬಳಸುವುದರಿಂದ ಮನೆಯು ಉತ್ಸಾಹಭರಿತ ಮತ್ತು ಶಕ್ತಿಯಿಂದ ತುಂಬಿರುತ್ತದೆ.

ಪೂರ್ವ

ಪೂರ್ವಕ್ಕೆ ಎದುರಾಗಿರುವ ಗೋಡೆಗಳಿಗೆ ಬಿಳಿ ಉತ್ತಮ ಆಯ್ಕೆಯಾಗಿದೆ. ಇದು ಶುದ್ಧತೆ ಮತ್ತು ಹೊಸ ಆರಂಭವನ್ನು ಪ್ರತಿನಿಧಿಸುತ್ತದೆ. ಪೂರ್ವವು ಗಾಳಿಗೆ ಸಂಬಂಧಿಸಿದೆ. ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಸಂಕೇತಿಸುತ್ತದೆ. ಈ ಗೋಡೆಗಳನ್ನು ಬಿಳಿ ಬಣ್ಣದಿಂದ ಚಿತ್ರಿಸುವುದರಿಂದ ಕೊಠಡಿಯು ಸ್ಪಷ್ಟ ಮತ್ತು ತೆರೆದಿರುವಂತೆ ಮಾಡುತ್ತದೆ. ಧನಾತ್ಮಕ ಚಿಂತನೆ ಮತ್ತು ಕಲಿಕೆಯನ್ನು ಉತ್ತೇಜಿಸುತ್ತದೆ.

ಪಶ್ಚಿಮ

ಪಶ್ಚಿಮಕ್ಕೆ ಎದುರಾಗಿರುವ ಗೋಡೆಗಳಿಗೆ ನೀಲಿ ಬಣ್ಣವು ಸೂಕ್ತವಾಗಿದೆ. ಇದು ಶಾಂತಿ ಮತ್ತು ಭಾವನಾತ್ಮಕ ಸಮತೋಲನವನ್ನು ಪ್ರತಿನಿಧಿಸುತ್ತದೆ. ಪಶ್ಚಿಮವು ಭೂಮಿಯನ್ನು ಪ್ರತಿನಿಧಿಸುತ್ತದೆ. ಇದು ಸ್ಥಿರತೆಯನ್ನು ಸಂಕೇತಿಸುತ್ತದೆ. ಈ ಗೋಡೆಗಳಿಗೆ ನೀಲಿ ಬಣ್ಣವನ್ನು ಚಿತ್ರಿಸುವುದರಿಂದ ಕೊಠಡಿಯು ಶಾಂತಿಯುತವಾಗಿರುವಂತೆ ಮಾಡುತ್ತದೆ. ವಿಶ್ರಾಂತಿ ಪಡೆಯಲು ಮತ್ತು ಭಾವನಾತ್ಮಕವಾಗಿ ಉತ್ತಮವಾಗಲು ಸಹಾಯ ಮಾಡುತ್ತದೆ.

ಈಶಾನ್ಯ

ಈಶಾನ್ಯಕ್ಕೆ ಎದುರಾಗಿರುವ ಗೋಡೆಗಳಿಗೆ ಬಿಳಿ ಮತ್ತು ತಿಳಿ ನೀಲಿ ಬಣ್ಣವು ಉತ್ತಮವಾಗಿದೆ. ಅದು ಆಧ್ಯಾತ್ಮಿಕತೆ ಮತ್ತು ಶಾಂತಿಯನ್ನು ತರುತ್ತದೆ. ಈಶಾನ್ಯವು ವಾಸ್ತುವಿನಲ್ಲಿ ವಿಶೇಷವಾಗಿದೆ, ಆಧ್ಯಾತ್ಮಿಕ ಬೆಳವಣಿಗೆಗೆ ಸಂಬಂಧಿಸಿದೆ. ಈ ಬಣ್ಣಗಳನ್ನು ಬಳಸುವುದರಿಂದ ಕೊಠಡಿಯನ್ನು ಶಾಂತವಾಗಿ ಮತ್ತು ಧ್ಯಾನಕ್ಕೆ ಪರಿಪೂರ್ಣವಾಗಿಸಬಹುದು.

ಆಗ್ನೇಯ

ಆಗ್ನೇಯಕ್ಕೆ ಎದುರಾಗಿರುವ ಗೋಡೆಗಳಿಗೆ ಬೆಳ್ಳಿ ಮತ್ತು ತಿಳಿ ಬೂದು ಚೆನ್ನಾಗಿ ಕೆಲಸ ಮಾಡುತ್ತದೆ. ಆಗ್ನೇಯವು ಬೆಂಕಿಗೆ ಸಂಬಂಧಿಸಿದೆ. ಇದು ಸೃಜನಶೀಲತೆಯನ್ನು ಸಂಕೇತಿಸುತ್ತದೆ. ಈ ಗೋಡೆಗಳನ್ನು ಬೆಳ್ಳಿ ಅಥವಾ ತಿಳಿ ಬೂದು ಬಣ್ಣದಲ್ಲಿ ಚಿತ್ರಿಸುವುದು ಸೃಜನಶೀಲತೆಯನ್ನು ಪ್ರೇರೇಪಿಸುತ್ತದೆ ಮತ್ತು ಮನೆಯನ್ನು ಕ್ಲಾಸಿಯಾಗಿ ಕಾಣುವಂತೆ ಮಾಡುತ್ತದೆ.

ಇದನ್ನೂ ಓದಿ: Vastu Tips: ನೆಲ ಒರೆಸುವಾಗಲೂ ವಾಸ್ತು ನಿಯಮ ಪಾಲಿಸಲೇಬೇಕು!


ನೈಋತ್ಯ

ನೈಋತ್ಯಕ್ಕೆ ಎದುರಾಗಿರುವ ಗೋಡೆಗಳಿಗೆ ಪೀಚ್ ಮತ್ತು ತಿಳಿ ಕಂದು ಬಣ್ಣವನ್ನು ಬಳಸಿ. ಇದು ಕೊಠಡಿಯನ್ನು ಬೆಚ್ಚಗಿರಿಸುತ್ತದೆ ಮತ್ತು ಆರಾಮದಾಯಕವಾಗಿಸುತ್ತದೆ. ನೈಋತ್ಯವು ಭೂಮಿಗೆ ಸಂಪರ್ಕ ಹೊಂದಿದೆ, ಇದು ಸ್ಥಿರತೆಯನ್ನು ಸಂಕೇತಿಸುತ್ತದೆ. ಈ ಬಣ್ಣಗಳನ್ನು ಬಳಸುವುದರಿಂದ ಕೊಠಡಿಯು ಹಿತಕರವಾಗಿ ಮತ್ತು ಸುರಕ್ಷಿತವಾಗಿರುವಂತೆ ಮಾಡುತ್ತದೆ. ಭಾವನಾತ್ಮಕವಾಗಿ ಉತ್ತಮವಾಗಲು ಸಹಾಯ ಮಾಡುತ್ತದೆ.

ವಾಯವ್ಯ

ವಾಯುವ್ಯಕ್ಕೆ ಎದುರಾಗಿರುವ ಗೋಡೆಗಳಿಗೆ ಬಿಳಿ ಮತ್ತು ತಿಳಿ ಬೂದು ಬಣ್ಣ ಬಳಸಿ. ಇದು ಶುದ್ಧತೆ ಮತ್ತು ಸ್ಪಷ್ಟ ಚಿಂತನೆಯನ್ನು ಪ್ರತಿನಿಧಿಸುತ್ತದೆ. ವಾಯುವ್ಯವು ಗಾಳಿಯೊಂದಿಗೆ ಸಂಪರ್ಕ ಹೊಂದಿದೆ. ಇದು ಸಂವಹನವನ್ನು ಸಂಕೇತಿಸುತ್ತದೆ. ಗೋಡೆಗಳನ್ನು ಬಿಳಿ ಅಥವಾ ತಿಳಿ ಬೂದು ಬಣ್ಣದಲ್ಲಿ ಚಿತ್ರಿಸುವುದರಿಂದ ಜನರು ಮುಕ್ತವಾಗಿ ಮಾತನಾಡಲು ಮತ್ತು ಸ್ಪಷ್ಟವಾಗಿ ಯೋಚಿಸಲು ಸಹಾಯ ಮಾಡುತ್ತದೆ. ಇದು ಸಂಬಂಧಗಳು ಮತ್ತು ವೈಯಕ್ತಿಕ ಬೆಳವಣಿಗೆಗೆ ಒಳ್ಳೆಯದು.

Continue Reading

ಧಾರ್ಮಿಕ

Koppala News: ವಿಜೃಂಭಣೆಯಿಂದ ಜರುಗಿದ ಹುಲಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

Koppala News: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ಮಹಾರಥೋತ್ಸವವು ಶುಕ್ರವಾರ ಅಪಾರ ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ಜರುಗಿತು.

VISTARANEWS.COM


on

Sri Huligemma Devi Maharathotsava in Hulagi
Koo

ಕೊಪ್ಪಳ: ತಾಲೂಕಿನ ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಅಪಾರ ಭಕ್ತಸಾಗರದ ನಡುವೆ ಮಹಾರಥೋತ್ಸವವು ವಿಜೃಂಭಣೆಯಿಂದ (Koppala News) ಜರುಗಿತು.

ಇದನ್ನೂ ಓದಿ: Old Students Association: ಸರ್ಕಾರಿ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘ, ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಲು ಆದೇಶ

ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಹುಲಗಿಯ ಶ್ರೀ ಹುಲಿಗೆಮ್ಮ ದೇವಿಯ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರದಿಂದ ಜೂನ್ 3 ರ ಸೋಮವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಶುಕ್ರವಾರ ಸಂಜೆ ಮಹಾರಥೋತ್ಸವವು ಲಕ್ಷಾಂತರ ಭಕ್ತಾಧಿಗಳ ಸಮೂಹದ ನಡುವೆ ಅದ್ದೂರಿಯಾಗಿ ನಡೆಯಿತು.

ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಭಾಗಿ

ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವದಲ್ಲಿ ಭಕ್ತರ ಉಧೋ ಉಧೋ ಘೋಷಣೆ ಮುಗಿಲು ಮುಟ್ಟಿತ್ತು. ಭಕ್ತವೃಂದ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ, ಭಕ್ತಿ ಭಾವ ಮೆರೆದರು. ಕರ್ನಾಟಕದ ವಿವಿಧ ಜಿಲ್ಲೆಗಳ ಮತ್ತು ಆಂಧ್ರಪ್ರದೇಶದ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳ ಸುಮಾರು ಐದು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಜಾತ್ರೆಗೆ ಆಗಮಿಸಿ, ಮಹಾರಥೋತ್ಸವವನ್ನು ಕಣ್ತುಂಬಿಕೊಂಡರು.

ರಥೋತ್ಸವ ಸಂದರ್ಭದಲ್ಲಿ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ್ ಸುತಗುಂಡಿ ಹಾಗೂ ಕೊಪ್ಪಳ ಮತ್ತು ಗಂಗಾವತಿ ಡಿವೈಎಸ್ಪಿಗಳು ಹಾಗೂ ಇತರರು ಉಪಸ್ಥಿತರಿದ್ದರು

Continue Reading

ಧಾರ್ಮಿಕ

Vastu Tips: ನೆಲ ಒರೆಸುವಾಗಲೂ ವಾಸ್ತು ನಿಯಮ ಪಾಲಿಸಲೇಬೇಕು!

ಮನೆಯನ್ನು ಸ್ವಚ್ಛ ಮಾಡುವಾಗಲೂ ಪಾಲಿಸಬೇಕಾದ ವಾಸ್ತು ನಿಯಮಗಳಿವೆ. ಅದರಲ್ಲೂ ಮನೆ ಒರೆಸುವ ಕುರಿತು ವಾಸ್ತು ಶಾಸ್ತ್ರದಲ್ಲಿ (Vastu Tips) ಏನು ಹೇಳಿದೆ ಗೊತ್ತೇ? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ಮನೆಯ (home) ಒಳಾಂಗಣ, ಹೊರಾಂಗಣ ಸ್ವಚ್ಛತೆ (cleaning) ಬಗ್ಗೆ ನಾವೆಲ್ಲ ಅತೀ ಹೆಚ್ಚು ಕಾಳಜಿ ವಹಿಸುತ್ತೇವೆ. ಆದರೆ ಇದರಲ್ಲೂ ವಾಸ್ತು ನಿಯಮ (Vastu Tips) ಪಾಲಿಸುವುದು ಬಹು ಮುಖ್ಯ ಎಂಬುದನ್ನು ಮರೆಯಬಾರದು. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ಮನೆಯಿಂದ ಕಸ (garbage) ಹೊರಗೆ ಹಾಕುವ, ಕೊಳಕು ನೀರು ಹೊರ ಚೆಲ್ಲುವ ಬಗ್ಗೆಯೂ ವಾಸ್ತು ಶಾಸ್ತ್ರದಲ್ಲಿ ನಿಯಮಗಳಿವೆ. ಇದನ್ನು ಪಾಲಿಸಿದರೆ ಮನೆಯ ವಾಸ್ತುವಿಗೆ ಬಹಳ ಒಳ್ಳೆಯದು.

ಲಕ್ಷ್ಮಿ ದೇವಿಯು ಯಾವಾಗಲೂ ಸ್ವಚ್ಛವಾಗಿರುವ ಮನೆಗಳಲ್ಲಿ ನೆಲೆಸುತ್ತಾಳೆ. ಮನೆಯನ್ನು ಸ್ವಚ್ಛಗೊಳಿಸುವುದು ಮತ್ತು ಒರೆಸುವುದು ನಿತ್ಯ ಮಾಡಲೇಬೇಕಾದ ಸಾಮಾನ್ಯ ವಿಷಯ. ಮನೆಯ ಕೊಳೆಯನ್ನು ನಿತ್ಯ ಶುಚಿಗೊಳಿಸುವುದರಿಂದ ಮನೆಯಿಂದ ರೋಗಗಳನ್ನು ದೂರ ಮಾಡಬಹುದು ಮತ್ತು ಲಕ್ಷ್ಮಿ ದೇವಿಯು ಮನೆಯಲ್ಲಿ ಸಂತೋಷವಾಗಿ ನೆಲೆಯಾಗುವಂತೆ ಮಾಡಬಹುದು. ವಾಸ್ತು ಶಾಸ್ತ್ರದಲ್ಲಿ ನೆಲ ಒರೆಸುವ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಮನೆಯ ಸ್ವಚ್ಛತೆ ಮಾಡುವ ನೆಲ ಒರೆಸುವಾಗ ಕೆಲವು ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಬಾರದು.


ಮಾಪ್ ಅನ್ನು ಬಾಲ್ಕನಿಯಲ್ಲಿ ಇಡಬೇಡಿ

ಮನೆಯ ಬಾಲ್ಕನಿಯಲ್ಲಿ ಮಾಪ್ ಅನ್ನು ಎಂದಿಗೂ ನಿಲ್ಲಿಸಬಾರದು. ಮಾಪ್ ಮಾಡುವಾಗ ಬಟ್ಟೆಯನ್ನು ಹಿಸುಕಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿ. ಇದನ್ನು ಮಾಡದಿದ್ದರೆ, ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.

ತಕ್ಷಣ ಮಾಪ್ ಮಾಡಬಾರದು

ಮನೆಯಿಂದ ಯಾರಾದರೂ ಹೊರಗೆ ಹೋಗುತ್ತಿದ್ದರೆ ಅವರು ಹೋದ ತಕ್ಷಣ ನೆಲವನ್ನು ಒರೆಸಬಾರದು. ಹೀಗೆ ಮಾಡುವುದರಿಂದ ಹೊರಗೆ ಹೋದವರ ಆರೋಗ್ಯ ಕೆಡುತ್ತದೆ. ಅವರು ತಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು.

ಮುರಿದ ಬಕೆಟ್ ಬಳಸದಿರಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ನೆಲವನ್ನು ಒರೆಸುವಾಗ ತಪ್ಪಾಗಿಯೂ ಮುರಿದ ಬಕೆಟ್‌ನಲ್ಲಿ ನೆಲವನ್ನು ಒರೆಸದಂತೆ ವಿಶೇಷ ಕಾಳಜಿ ವಹಿಸಿ. ಮುರಿದ ಬಕೆಟ್ ಕೆಂಪು ಬಣ್ಣದಲ್ಲಿರಬಾರದು. ಅಪ್ಪಿತಪ್ಪಿಯೂ ಮಧ್ಯಾಹ್ನ ನೆಲವನ್ನು ಒರೆಸಬಾರದು. ಬೆಳಗ್ಗೆ ನೆಲವನ್ನು ಒರೆಸುವುದು ಸರಿಯಾದ ಸಮಯ ಎಂದು ಪರಿಗಣಿಸಲಾಗಿದೆ.

ಇದನ್ನು ಓದಿ Vastu Tips: ಮನೆಯಲ್ಲಿ ಚಪ್ಪಲಿ, ಶೂ ಎಲ್ಲೆಂದರಲ್ಲಿ ಇಟ್ಟು ಸಂಕಷ್ಟ ಮೈಮೇಲೆ ಎಳೆದುಕೊಳ್ಳಬೇಡಿ!

ಹೊಸ್ತಿಲಲ್ಲಿ ನೀರು ಸುರಿಯಬಾರದು

ಹೆಚ್ಚಿನ ಜನರು ಇದನ್ನು ಮಾಡುತ್ತಾರೆ. ನೆಲವನ್ನು ಒರೆಸಿದ ಅನಂತರ ಅವರು ಹೊಸ್ತಿಲಲ್ಲಿ ಕೊಳಕು ನೀರನ್ನು ಸುರಿಯುತ್ತಾರೆ. ಆದರೆ ಇದನ್ನು ಮಾಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಮನೆಯ ಹೊಸ್ತಿಲನ್ನು ಲಕ್ಷ್ಮಿ ದೇವಿಯ ಪ್ರವೇಶ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ಕೊಳಕು ನೀರನ್ನು ಸುರಿದರೆ ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತೆ. ಇದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಗೊಳ್ಳಬಹುದು.

Continue Reading
Advertisement
Karnataka Weather Forecast
ಮಳೆ40 mins ago

Karnataka Weather : ಕೋಲಾರದಲ್ಲಿ ಅಬ್ಬರಿಸಿದ ವರುಣ; ಒಳನಾಡಿನಲ್ಲಿ ತಾಪಮಾನ ಇಳಿಕೆ

Exit Polls
ವಾಣಿಜ್ಯ42 mins ago

Exit Polls: ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಗಿತ ಸಾಧ್ಯತೆ

Raichur Lok Sabha Constituency
ರಾಯಚೂರು57 mins ago

Raichur Lok Sabha Constituency: ರಾಯಚೂರಿನಲ್ಲಿ ನಾಯಕರ ನಡುವಿನ ಕಾಳಗದಲ್ಲಿ ಯಾರು ರಾಜ?

Accident Case
ಕ್ರೈಂ1 hour ago

Accident Case : ಕರೆಂಟ್‌ ಶಾಕ್‌ಗೆ ಕಂಬದಲ್ಲೇ ಕಾರ್ಮಿಕನ ನರಳಾಟ; ಭೀಕರ ಅಪಘಾತಕ್ಕೆ ಇಬ್ಬರು ಬಲಿ

Lok Sabha Election 2024
ಕರ್ನಾಟಕ1 hour ago

Lok Sabha Election 2024: ಮೈಸೂರು ಕ್ಷೇತ್ರದಲ್ಲಿ ಗೆಲುವು ಯಾರಿಗೆ? ಶ್ವಾನದಿಂದ ಅಚ್ಚರಿಯ ಭವಿಷ್ಯ!

Aam Panna Recipe
ಆಹಾರ/ಅಡುಗೆ1 hour ago

Aam Panna Recipe: ಆಮ್‌ ಪನ್ನಾ! ಮಾವಿನಕಾಯಿಯ ಅದ್ಭುತ ಪೇಯ ಇದು; ನೀವೂ ಮಾಡಿ ನೋಡಿ

Arvind Kejriwal
ದೇಶ2 hours ago

Arvind Kejriwal: ತಿಹಾರ್‌ ಜೈಲಿಗೆ ಮರಳಿದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌; ಜೂ. 5ರಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ

GST Collection
ವಾಣಿಜ್ಯ2 hours ago

GST Collection: ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ನಂ. 2; ಇಲ್ಲಿ ಸಂಗ್ರಹವಾಗಿದ್ದು ಎಷ್ಟು?

Kamal Haasan gives a fiery speech at Indian 2 event
ಕಾಲಿವುಡ್2 hours ago

Kamal Haasan: ತಮಿಳಿಗನೊಬ್ಬ ದೇಶ ಆಳುವ ದಿನ ಏಕೆ ಬರಬಾರದು? ಕಮಲ್‌ ಹಾಸನ್‌ ಪ್ರಶ್ನೆ!

CET Ranking
ಬೆಂಗಳೂರು2 hours ago

CET Ranking : ಸಿಇಟಿ ರ‍್ಯಾಂಕಿಂಗ್‌ನಲ್ಲಿ ಎಂಜಿನಿಯರಿಂಗ್‌ನ 10 ಟಾಪರ್ಸ್‌ಗಳು ಬೆಂಗಳೂರಿನ ವಿದ್ಯಾರ್ಥಿಗಳು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ8 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 day ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌