Banavasi News: ಶತಾಯುಷಿ ಶ್ರೀ ಸಿದ್ಧವೀರ ಶಿವಯೋಗಿಗಳ ನೂತನ ಗದ್ದುಗೆ ಮಠ ಉದ್ಘಾಟನೆ Vistara News
Connect with us

ಉತ್ತರ ಕನ್ನಡ

Banavasi News: ಶತಾಯುಷಿ ಶ್ರೀ ಸಿದ್ಧವೀರ ಶಿವಯೋಗಿಗಳ ನೂತನ ಗದ್ದುಗೆ ಮಠ ಉದ್ಘಾಟನೆ

Banavasi News: ಹೊಳೆ ಮಠದ ಸಮೀಪದಲ್ಲಿ ಶತಾಯುಷಿ ಶ್ರೀ ಸಿದ್ಧವೀರ ಶಿವಯೋಗಿಗಳ ನೂತನ ಗದ್ದುಗೆ ಮಠವನ್ನು (Gadduge Mutt) ಉದ್ಘಾಟಿಸಲಾಯಿತು. ಈ ವೇಳೆ ಶಿರಸಿ ಹಾಗೂ ತೊಟ್ಟಲಕೇರಿ ಬಣ್ಣದ ಮಠದ ಶಿವಲಿಂಗ ಮಹಾಸ್ವಾಮೀಜಿ, ಧಾರವಾಡ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಸೇರಿದಂತೆ ಧಾರ್ಮಿಕ ಪ್ರಮುಖರು ಭಾಗಿಯಾಗಿದ್ದರು.

VISTARANEWS.COM


on

Gadduge Mutt Sri Siddaveera Shivayogi Banavasi
ಬಣ್ಣದ ಮಠದ ಶಿವಲಿಂಗ ಮಹಾಸ್ವಾಮೀಜಿ ಅವರು ಶ್ರೀ ಶಿವಯೋಗಿ ಸ್ವಾಮೀಜಿಯವರ ನೂತನ ಗದ್ದುಗೆ ಮಠವನ್ನು ಉದ್ಘಾಟಿಸಿದರು.
Koo

ಬನವಾಸಿ: ಇಲ್ಲಿಯ ಹೊಳೆ ಮಠದ ಸಮೀಪದಲ್ಲಿ ಶತಾಯುಷಿ ಶ್ರೀ ಸಿದ್ಧವೀರ ಶಿವಯೋಗಿಗಳ ನೂತನ ಗದ್ದುಗೆ ಮಠ (Gadduge Mutt) ಉದ್ಘಾಟನೆ ಹಾಗೂ ನಿರಂಜನ ಶರಣ ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪ ಅವರ 77ನೇ ಸಂಸ್ಮರಣೆ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು.

ಮುಂಜಾನೆ ಶ್ರೀ ಶಿವಯೋಗಿಗಳ ಕ್ರಿಯಾ ಸಮಾಧಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿಯನ್ನು ನೆರವೇರಿಸಲಾಯಿತು. ಇದೇ ವೇಳೆ ಹೊಸಪೇಟೆ ಕಂಪ್ಲಿ ಸಂಸ್ಥಾನ ಮಠದ ಪ್ರಭು ಚನ್ನಬಸವ ಮಹಾಸ್ವಾಮೀಜಿಗಳಿಂದ ಷಟಸ್ಥಲ ಧ್ವಜಾರೋಹಣ ನೆರವೇರಿತು.

ಶಿರಸಿ ಹಾಗೂ ತೊಟ್ಟಲಕೇರಿ ಬಣ್ಣದ ಮಠದ ಶಿವಲಿಂಗ ಮಹಾಸ್ವಾಮೀಜಿ ಅವರು ಶ್ರೀ ಶಿವಯೋಗಿ ಸ್ವಾಮೀಜಿಯವರ ನೂತನ ಗದ್ದುಗೆ ಮಠದ ಉದ್ಘಾಟನೆ ಹಾಗೂ ಶರಣ ಹರ್ಡೇಕರ ಮಂಜಪ್ಪನವರ ಸಂಸ್ಮರಣೆ ಕಾರ್ಯಕ್ರಮವನ್ನು ನೆರವೇರಿಸಿ ಆಶೀರ್ವಚನ ನೀಡುತ್ತಾ, “ನಿಮ್ಮನ್ನು ನೀವು ಗೌರವಿಸಿ. ಆಗ ಮಾತ್ರ ಜೀವನ ಆದರ್ಶವಾಗುತ್ತದೆ. ಉಳವಿಯ ಚನ್ನಬಸವೇಶ್ವರ ಈ ಭಾಗಕ್ಕೆ ಬರದೇ ಇದ್ದಿದ್ದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಶರಣ ಪರಂಪರೆಯನ್ನು ಕಾಣುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಶತಾಯುಷಿ ಸಿದ್ಧವೀರ ಶಿವಯೋಗಿಗಳು ಮಹಾನ್ ಶಿವ ಶರಣರಾಗಿದ್ದರು. ಈ ದಿನ ಬನವಾಸಿಯಲ್ಲಿ ಶತಾಯುಷಿ ಸಿದ್ಧವೀರ ಶಿವಯೋಗಿಗಳ ಜ್ಯೋತಿರ್ಲಿಂಗ ಉದಯವಾಗಿದೆ. ಇದರಿಂದಾಗಿ ಸಮಾಜ ಸುಭಿಕ್ಷವಾಗಲಿದೆ” ಎಂದರು.

ಧಾರವಾಡ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಆಶೀರ್ವಚನ ನೀಡಿ, “ಗುರುವಾದವನು ಸಮಾಜಕ್ಕಾಗಿ ಬದುಕಿರುತ್ತಾನೆ. ಭಕ್ತರಿಗೆ ಜಾಗೃತಿ ಮನೋಭಾವ ಮೂಡುವತನಕ ಸಮಾಜ ಉದ್ಧಾರವಾಗುವುದಿಲ್ಲ. ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪನವರು ಧರ್ಮ ಸೇವೆ, ದೇಶ ಸೇವೆಯನ್ನು ಮಾಡಿದ ಮಹಾನ್ ಚೇತನವಾಗಿದ್ದಾರೆ. ಸಿದ್ಧವೀರ ಶಿವಯೋಗಿಯವರು ನಾಡನ್ನು ಜಾಗೃತಗೊಳಿಸಿದ ಶರಣರಾಗಿದ್ದಾರೆ. ಇಬ್ಬರು ಮಹಾ ಶರಣರನ್ನು ನೆನಪಿಸಿಕೊಂಡರೆ ನಮ್ಮ ಜೀವನ ಪಾವನವಾಗುತ್ತದೆ” ಎಂದು ಹೇಳಿದರು.

ಇದನ್ನೂ ಓದಿ: Road Show : ಮಾ. 25ರಂದು ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ ಫಿಕ್ಸ್‌, 26ಕ್ಕೆ ನಿಗದಿಯಾದ ದೇವೇಗೌಡ್ರ ರೋಡ್‌ ಶೋ ರದ್ದು

ಟಿ. ನರಸೀಪುರ ಚಿದ್ರಳ್ಳಿ ಗವಿಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿ, “ವೀರಶೈವ ಧರ್ಮದ ಪರಿಪಾಲಕರು ಯಜ್ಞ ಯಾಗಾದಿಗಳನ್ನು ಮಾಡುವ ಪದ್ಧತಿಯನ್ನು ರೂಢಿಸಿಕೊಳ್ಳಬಾರದು” ಎಂದರು.

ಜಡೆ ಸಂಸ್ಥಾನ ಮಠದ ಡಾ. ಮಹಾಂತ ಮಹಾಸ್ವಾಮೀಜಿ, ಮೂಡಿ ವಿರಕ್ತ ಮಠದ ಸದಾಶಿವ ಸ್ವಾಮೀಜಿ, ಹಾವೇರಿ ಹೊಸ ಮಠದ ಶಾಂತಲಿಂಗ ಸ್ವಾಮೀಜಿ, ಹೊಳೆ ಮಠದ ಶ್ರೀ ನಾಗಭೂಷಣ ಮಹಾಸ್ವಾಮೀಜಿ, ಹಾರೂಗೇರಿಯ ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್.ಮಠಪತಿ, ಆಲಮಟ್ಟಿಯ ವಿ.ಎಮ್.ಪಟ್ಟಣಶೆಟ್ಟಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶ್ರೀ ಬಸವೇಶ್ವರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹಾಲಪ್ಪ ಕೆರೂಡಿ, ಅಕ್ಕನ ಬಳಗದ ಅಧ್ಯಕ್ಷೆ ಶೋಭಾ ಉಳ್ಳಾಗಡ್ಡಿ, ವೀರಶೈವ ಸಮಾಜ ಶಿರಸಿ ತಾಲೂಕು ಅಧ್ಯಕ್ಷ ಬಸವರಾಜ ಚಕ್ರಸಾಲಿ ವೇದಿಕೆಯಲ್ಲಿ ಇದ್ದರು.

ಇದನ್ನೂ ಓದಿ: WTC Final : ಕಿಶಾನ್​, ಭರತ್​ಗಿಂತ ವಿಕೆಟ್​ಕೀಪಿಂಗ್​ಗೆ ರಾಹುಲ್​ ಬೆಸ್ಟ್​ ಎಂದ ಮಾಜಿ ಕೋಚ್​​

ಈ ಸಂದರ್ಭದಲ್ಲಿ ದಾನಿಗಳಾದ ಗಿರಿಜಮ್ಮ ಹಾಲ್ಮಠ ಹಾಗೂ ನೂತನ ಗದ್ದುಗೆ ಕಟ್ಟಡ ಸಮಿತಿಯ ಅಧ್ಯಕ್ಷ ವಾಗೀಶ ಕೆರೂಡಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಬಸವೇಶ್ವರ ಸೇವಾ ಪ್ರತಿಷ್ಠಾನದ ಸದಸ್ಯರು, ಅಕ್ಕನ ಬಳಗದ ಸದಸ್ಯರು, ಬನವಾಸಿ ಹಾಗೂ ಸುತ್ತಮುತ್ತಲಿನ ಸಾವಿರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು. ಉಮೇಶ ಕೆರೂಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಬಸವೇಶ್ವರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹಾಲಪ್ಪ ಕೆರೂಡಿ ಸ್ವಾಗತಿಸಿದರು.

“ಬನವಾಸಿಯ ಕಂಪನ್ನು ನಾಡಿಗೆ ಪಸರಿಸಿದ ಆದಿಕವಿ ಪಂಪ ಹಾಗೂ ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪ ಅವರ ನೆನಪು ಉಳಿಯುವ ಯಾವ ಕಾರ್ಯವನ್ನು ಸರ್ಕಾರ ಇಲ್ಲಿ ಮಾಡಿಲ್ಲ. ಇಬ್ಬರು ಮಹಾನುಭಾವರ ಸ್ಮಾರಕ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ಕಾಗಿ ಎಲ್ಲರೂ ಒಂದಾಗಬೇಕಾಗಿದೆ” ಎಂದು ಬಸವನಬಾಗೇವಾಡಿ ಸಾಹಿತಿ ಮಹಾತೇಂಶ ಸಂಗಮ್ ಹೇಳಿದರು.

Continue Reading
Click to comment

Leave a Reply

Your email address will not be published. Required fields are marked *

ಉತ್ತರ ಕನ್ನಡ

Uttara Kannada News: ವಾಕ್ಪ್ರತಿಯೋಗಿತಾ ಸ್ಪರ್ಧೆ; ಉಮ್ಮಚಗಿಯ ಶ್ರೀ ಮಾತಾ ಸಂಸ್ಕೃತ ಮಹಾಪಾಠ ಶಾಲೆ ಉತ್ತಮ ಸಾಧನೆ

Uttara Kannada News: ಕಾಶಿಯ ಬನಾರಸ್‌ ಹಿಂದು ವಿಶ್ವವಿದ್ಯಾಲಯದಲ್ಲಿ ನಡೆದ 2022-23ನೇ ಸಾಲಿನ ರಾಷ್ಟ್ರಮಟ್ಟದ ವಾಕ್ಪ್ರತಿಯೋಗಿತಾ ಸ್ಪರ್ಧೆಯಲ್ಲಿ ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಶ್ರೀ ಶ್ರೀ ಮಾತಾ ಸಂಸ್ಕೃತ ಮಹಾಪಾಠ ಶಾಲೆಯ ಐವರು ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.

VISTARANEWS.COM


on

Edited by

Uttara Kannada News
Koo

ಉತ್ತರ ಕನ್ನಡ: ಕಾಶಿಯ ಬನಾರಸ್‌ ಹಿಂದು ವಿಶ್ವವಿದ್ಯಾಲಯದಲ್ಲಿ ಮಾ.22ರಿಂದ 25ರವರೆಗೆ ನಡೆದ 2022-23ನೇ ಸಾಲಿನ ರಾಷ್ಟ್ರಮಟ್ಟದ ವಾಕ್ಪ್ರತಿಯೋಗಿತಾ ಸ್ಪರ್ಧೆಯಲ್ಲಿ ಯಲ್ಲಾಪುರ ತಾಲೂಕಿನ (Uttara Kannada News) ಉಮ್ಮಚಗಿಯ ಶ್ರೀ ಶ್ರೀ ಮಾತಾ ಸಂಸ್ಕೃತ ಮಹಾಪಾಠ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವಿವಿಧ ವಿಭಾಗಗಳಲ್ಲಿ ಮೂವರು ಪ್ರಥಮ ಸ್ಥಾನ ಹಾಗೂ ಇಬ್ಬರು ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಾಕ್ಪ್ರತಿಯೋಗಿತಾ ಸ್ಪರ್ಧೆಯ ಸಾಹಿತ್ಯ ಭಾಷಣದಲ್ಲಿ ನಾಗರಾಜ ಭಟ್ಟ ಪ್ರಥಮ, ಜ್ಯೋತಿಷ್ಯ ಶಲಾಕಾ ಸ್ಪರ್ಧೆಯಲ್ಲಿ ಗಣೇಶ ಪ್ರಸಾದ ಭಟ್ಟ ಪ್ರಥಮ, ಜ್ಯೋತಿಷ್ಯ ಭಾಷಣ ಸ್ಪರ್ಧೆಯಲ್ಲಿ ವಿನಾಯಕ ಭಟ್ಟ ದ್ವಿತೀಯ, ಸುಭಾಷಿತ ಕಂಠಪಾಠ ಸ್ಪರ್ಧೆಯಲ್ಲಿ ಸುಮಂತ್ ಜೋಶಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಹಾಗೆಯೇ ಇದೇ ಶಾಲೆಯಲ್ಲಿ ಅಧ್ಯಯನ ಮಾಡಿದ ಪಿಎಚ್‌ಡಿ ವಿದ್ಯಾರ್ಥಿ ಕುಮಾರ ಹೆಗಡೆ ಅಕ್ಷರಶ್ಲೋಕಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಒಟ್ಟು 14 ಚಿನ್ನದ ಪದಕ ಪಡೆದು ಕರ್ನಾಟಕ ರಾಜ್ಯವು ಸತತ 41ನೇ ಬಾರಿ ವಿಜಯ ವೈಜಯಂತೀ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಇದನ್ನೂ ಓದಿ | ತಾತಯ್ಯ ತತ್ವಾಮೃತಂ : ಶಿಷ್ಯನು ಸಿಗುವುದು ಗುರುವಿನ ಪರಮಭಾಗ್ಯ!

ವೇದಭಾಷ್ಯ ಭಾಷಣದಲ್ಲಿ ಮಹೇಶ ಭಟ್ಟ ಹಿತ್ಲಕಾರಗದ್ದೆ ಪ್ರಥಮ

ಕಾಶಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ನಡೆದ 2022-23ನೇ ಸಾಲಿನ ರಾಷ್ಟ್ರಮಟ್ಟದ ವಾಕ್ಪ್ರತಿಯೋಗಿತಾ ಸ್ಪರ್ಧೆಯಲ್ಲಿ ಶ್ರೀ ರಾಜರಾಜೇಶ್ವರೀ ಸಂಸ್ಕೃತ ಮಹಾಪಾಠಶಾಲೆಯ ಕೃಷ್ಣ ಯಜುರ್ವೇದ ವಿದ್ಯಾರ್ಥಿಯಾದ ಮಹೇಶ ಭಟ್ಟ ಹಿತ್ಲಕಾರಗದ್ದೆ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಕ್ಕೆ ಮತ್ತು ಪಾಠಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಇವರು ವಿ.ಪ್ರಸಾದ ಜೋಶಿ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಯ ಸಾಧನೆಗೆ ಸ್ವರ್ಣವಲ್ಲೀ ಶ್ರೀಗಳು, ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯರು, ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಸಂತಸ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

Continue Reading

ಉತ್ತರ ಕನ್ನಡ

Karnataka Elections 2023 : ಚುನಾವಣೆ ನೀತಿ ಸಂಹಿತೆ ಜಾರಿಗೂ ಮೊದಲು ಬ್ಯಾನರ್, ಹೋರ್ಡಿಂಗ್ಸ್, ಬಂಟಿಂಗ್ಸ್ ತೆರವು

Karnataka Elections 2023; ಚುನಾವಣೆಯ ನೀತಿ ಸಂಹಿತೆ ಜಾರಿಗೂ ಮುನ್ನ ಬ್ಯಾನರ್, ಹೋರ್ಡಿಂಗ್ಸ್, ಬಂಟಿಂಗ್ಸ್‌ ಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

VISTARANEWS.COM


on

Edited by

Clearing buntings karwar Election code of conduct
ಹೋರ್ಡಿಂಗ್ಸ್ ತೆರವು ಮಾಡುತ್ತಿರುವ ಸಿಬ್ಬಂದಿ.
Koo

ಕಾರವಾರ: ಮುಂಬರುವ ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು ಈಗಾಗಲೇ ಉತ್ತರ ಕನ್ನಡ ಜಿಲ್ಲಾಡಳಿತ ಸಕಲ ತಯಾರಿಗಳೊಂದಿಗೆ ಚುನಾವಣೆ ಕಾರ್ಯದಲ್ಲಿ ನಿರತವಾಗಿದೆ.

ಜಿಲ್ಲಾದ್ಯಂತ ವಿವಿಧ ಭಾಗಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಕುರಿತು ಅಳವಡಿಸಲಾಗಿರುವ ಬ್ಯಾನರ್, ಹೋರ್ಡಿಂಗ್ಸ್ ಹಾಗೂ ಬಂಟಿಂಗ್ಸ್‌ ಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾಗಿದ್ದಾರೆ.

“ಈಗಾಗಲೇ ಶಿರಸಿ ತಾಲೂಕು, ಚಿಪಗಿ ಚೆಕ್ ಪೋಸ್ಟ್, ಹೊನ್ನಾವರ ತಾಲೂಕು ಹೀಗೆ ಅನೇಕ ಭಾಗಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಮೇಲೆ ಅಳವಡಿಸಿರುವ ಬ್ಯಾನರ್‌ಗಳನ್ನು ತೆರವುಗೊಳಿಸಲು ಕ್ರಮ ವಹಿಸಲಾಗಿದೆ” ಎಂದು ಚುನಾವಣೆ ಶಿರಸ್ತೇದಾರರು ತಿಳಿಸಿದ್ದಾರೆ.

ಇದನ್ನೂ ಓದಿ: Modi in Karnataka: ದಾವಣಗೆರೆ ಮಹಾ ಸಂಗಮದ ಆವರಣದಲ್ಲೇ ಮೋದಿ ರೋಡ್‌ ಶೋ ನಡೆಸಿದ್ದೇಕೆ?

Continue Reading

ಉತ್ತರ ಕನ್ನಡ

Sirsi News: ಮನಸ್ಸಿದ್ದರೆ ಮಾರ್ಗ ಅನ್ನುವುದಕ್ಕೆ ಶ್ರೀನಿವಾಸ್ ಹೆಬ್ಬಾರ್ ಅವರೇ ಉದಾಹರಣೆ: ಹರಿಪ್ರಕಾಶ್ ಕೋಣೆಮನೆ

Sirsi News: ಶಿರಸಿ ತಾಲೂಕಿನಲ್ಲಿರುವ ಕೆರೆಗಳು ಜೀವಂತವಾಗಿವೆ ಎಂದರೆ ಅದಕ್ಕೆ ಕಾರಣ ಶ್ರೀನಿವಾಸ ಹೆಬ್ಬಾರ್ ಎಂದು ಹರಿಪ್ರಕಾಶ್ ಕೋಣೆಮನೆ ಶ್ಲಾಘಿಸಿದರು.

VISTARANEWS.COM


on

Edited by

jeevajala sirsi Hariprakash Konemane
ಕರಸುಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ವಿಸ್ತಾರ ನ್ಯೂಸ್ ನ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ.
Koo

ಶಿರಸಿ: “ಮನುಷ್ಯನಿಗೆ ಹಣ-ಅಧಿಕಾರ ಪ್ರಧಾನವಾದಾಗ ಬೇರೇನೂ ಕಾಣುವುದಿಲ್ಲ. ಆದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಹಣ, ಅಧಿಕಾರ ಎಲ್ಲವೂ ಬರುತ್ತದೆ. ವಿಶ್ವಾಸ, ಒಡನಾಟ, ಪ್ರೀತಿ ಉದಾತ್ತವಾದ ಆಲೋಚನೆ ಬೇಕು. ಮನಸ್ಸಿದ್ದರೆ ಮಾರ್ಗ ಇದೆ ಅನ್ನುವುದಕ್ಕೆ ಉದ್ಯಮಿ ಶ್ರೀನಿವಾಸ್ ಹೆಬ್ಬಾರ್ (Srinivas Hebbar) ಅವರೇ ಒಂದು ಉದಾಹರಣೆ” ಎಂದು ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅಭಿಪ್ರಾಯಪಟ್ಟರು.

ಶಿರಸಿ ಜೀವಜಲ ಕಾರ್ಯಪಡೆ ವತಿಯಿಂದ ಶನಿವಾರ (ಮಾ.25) ಆಯೋಜಿಸಲಾಗಿದ್ದ ತಾಲೂಕಿನ ಕರಸುಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಭೂಮಿ ಪೂಜೆ ನೆರವೇರಿಸಿದ ಉದ್ಯಮಿ ಶ್ರೀನಿವಾಸ ಹೆಬ್ಬಾರ್

“ಶಿರಸಿ ತಾಲೂಕಿನಲ್ಲಿರುವ ಕೆರೆಗಳು ಜೀವಂತವಾಗಿವೆ ಎಂದರೆ ಅದಕ್ಕೆ ಕಾರಣ ಶ್ರೀನಿವಾಸ ಹೆಬ್ಬಾರ್ ಅವರೇ ಹೊರತು ಸರ್ಕಾರವಲ್ಲ. ಸರ್ಕಾರ ಅತೀ ಹೆಚ್ಚು ಹಣವನ್ನು ನೀರಾವರಿಗೆ ವ್ಯಯ ಮಾಡುತ್ತಿದೆ. ಎತ್ತಿನ ಹೊಳೆ ಯೋಜನೆಯಿಂದ ಹನಿ ನೀರು ಬಾರದಿದ್ದರೂ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಕಾಮಗಾರಿ ನಡೆಸುತ್ತಿದೆ. ಆದರೆ ಶ್ರೀನಿವಾಸ ಹೆಬ್ಬಾರ್ ಅವರು ಸ್ವತಃ ಸಾಕಷ್ಟು ಕೆರೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜಲಮೂಲಗಳ ಸಂರಕ್ಷಣೆ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗುತ್ತಿದೆ. ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲ ಮೂಲಗಳ ಸಂರಕ್ಷಣೆ ಮಾಡುವುದು ನಮಗೆ ಅನಿವಾರ್ಯವಾಗುತ್ತಿದೆ. ಜಲ ಮೂಲಗಳ ಸಂರಕ್ಷಣೆಗೆ ಶ್ರೀನಿವಾಸ್ ಹೆಬ್ಬಾರ್ ಕೊಡುಗೆ ಅಪಾರ” ಎಂದು ಶ್ಲಾಘಿಸಿದರು.

ಶಿರಸಿ ತಾಲೂಕಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಶ್ರೀನಿವಾಸ್ ಹೆಬ್ಬಾರ್ ಅವರ ಚುನಾವಣೆ ಸ್ಪರ್ಧೆಯ ವಿಚಾರ ಸ್ಪಷ್ಟಪಡಿಸಿದ ಹರಿಪ್ರಕಾಶ್ ಕೋಣೆಮನೆ, “ಹೆಬ್ಬಾರ್ ಅವರು ಚುನಾವಣೆಗೆ ಸ್ಪರ್ಧಿಸಲು ತಯಾರಿಲ್ಲ. ಬಹಳ ಒತ್ತಡ ಬಂದರೂ ಒಪ್ಪದೇ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೆರೆಯೆಂದರೆ ಒಂದು ಊರಿನ ಇತಿಹಾಸವಾಗಿರುತ್ತದೆ. ಅಧಿಕಾರವನ್ನು ಬೆನ್ನತ್ತಿ ಹೋಗುವವರ ಹಿಂದೆ ಹೋಗುವ ಬದಲು ಸಾಮಾಜಿಕ ಕೆಲಸ ಮಾಡುವವರ ಹಿಂದೆ ಹೋಗಬೇಕು” ಎಂದರು.

ಇದನ್ನೂ ಓದಿ: Swiss Open: ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌: ಸೆಮಿಫೈನಲ್​ಗೆ ಲಗ್ಗೆಯಿಟ್ಟ ಚಿರಾಗ್‌-ಸಾತ್ವಿಕ್‌ ಜೋಡಿ

ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮಾತನಾಡಿ “ಯುಗಾದಿಯಂದು ನಮ್ಮ ಜೀವಜಲ ಕಾರ್ಯಪಡೆಗೆ ಆರು ವರ್ಷಗಳು ತುಂಬಿವೆ. ಈ ಮೊದಲು ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡುತ್ತಿದ್ದೆವು. ಶಿರಸಿಯ ಸುತ್ತಮುತ್ತ ಇರುವ ಬಹುತೇಕ ಎಲ್ಲ ಕೆರೆಗಳನ್ನು ಜೀವಜಲ ಕಾರ್ಯಪಡೆ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಅತಿಕ್ರಮಣ ಮಾಡಿಕೊಂಡ ಕೆರೆಯ ಜಾಗವನ್ನು ಬಿಡಿಸಿ ಅಭಿವೃದ್ಧಿ ಮಾಡಿದ್ದೇವೆ. ಆಹಾರವಿಲ್ಲ ಎಂದರೂ ಬದುಕಬಹುದು, ಆದರೆ ನೀರು ಇಲ್ಲದೆ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲ. ಇದೀಗ ಎಂಟು ದಿಕ್ಕುಗಳಲ್ಲಿ 16 ಕೆರೆಗಳನ್ನು ಅಭಿವೃದ್ಧಿ ಮಾಡಿದ್ದೇವೆ. ಕೆರೆಗಳ ಅಭಿವೃದ್ಧಿ ಮಾಡುವುದರಿಂದ ಜಲಮೂಲಗಳ ಅಭಿವೃದ್ಧಿಯಾಗುತ್ತದೆ. ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತದೆ. ಇದುವರೆಗೂ ಯಾವ ಸರ್ಕಾರದಿಂದಲೂ ಒಂದೇ ಒಂದು ರೂಪಾಯಿಯನ್ನು ತೆಗೆದುಕೊಂಡಿಲ್ಲ. ಮುಂದೆಯೂ ತೆಗೆದುಕೊಳ್ಳುವುದಿಲ್ಲ. ನಮ್ಮ ಕೆಲಸಕ್ಕೆ ಸಹಕಾರ ನೀಡಿ” ಎಂದರು.

ಇದನ್ನೂ ಓದಿ: World Cup 2023 : ಟೀಕೆ ನಿಲ್ಲಿಸಿ, ವಿಶ್ವ ಕಪ್ ಗೆಲ್ಲಲಿದೆ ಭಾರತ ತಂಡ ಎಂದಿದ್ದಾರೆ ಮಾಜಿ ಹೆಡ್​​ ಕೋಚ್​

ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮಸ್ಥ ಗಿರೀಶ್ ಭಟ್, “ಹಾಳುಬಿದ್ದ ಕೆರೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಬಹಳ ವರ್ಷಗಳಿಂದ ಊರಿನವರು ತಿರ್ಮಾನಿಸಿದ್ದೆವು. ಈ ಕೆರೆ ಕುಡಿಯುವ ನೀರಿನ ಕೆರೆ ಎಂದು ನಮಗೆ ತಿಳಿದು ಬಂತು. ಸುಮಾರು 2.5 ಎಕರೆ ಪ್ರದೇಶದಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಲು ಶ್ರೀನಿವಾಸ ಹೆಬ್ಬಾರ್ ಅವರು ಮುಂದೆ ಬಂದಿರುವುದು ಸಂತಸದ ಸಂಗತಿ” ಎಂದರು.

ಈ ಸಂದರ್ಭದಲ್ಲಿ ಕಿರಣ್ ಚಿತ್ರಕಾರ, ಡಿ ಆರ್ ಭಟ್ , ಪಂಚಾಯತಿ ಉಪಾಧ್ಯಕ್ಷ, ರವೀಶ ಹೆಗಡೆ, ಸಾಮಾಜಿಕ ಕಾರ್ಯಕರ್ತ ವಿ ಪಿ ಹೆಗಡೆ ವೈಶಾಲಿ, ಪ್ರದೀಪ ಶೆಟ್ಟಿ, ಸಂತೋಷ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Documents Digitalization: ಶ್ರೀನಿವಾಸ್‌ ಹೆಬ್ಬಾರ್‌ ಮತ್ತೊಂದು ಸಾಹಸ; ಶಿರಸಿ ಉಪ ವಿಭಾಗದ ದಾಖಲೆ ಸಂಪೂರ್ಣ ಡಿಜಿಟಲೀಕರಣ

Continue Reading

ಉತ್ತರ ಕನ್ನಡ

Karwar News : 11 ಲಕ್ಷ ರೂ. ಮೌಲ್ಯದ 47 ಕೆಜಿಯಷ್ಟು ಮಾದಕ ದ್ರವ್ಯ ನಾಶ

Karwar News: ಮಾದಕ ವಸ್ತು ಪೂರೈಸುವವರ ವಿರುದ್ಧ ತೀವ್ರ ನಿಗಾ ಇರಿಸಲಾಗಿದ್ದು ಇನ್ನಷ್ಟು ಪ್ರಕರಣಗಳನ್ನು ಪತ್ತೆ ಹಚ್ಚುವ ವಿಶ್ವಾಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Edited by

Drugs destroyed karwar
ಮಾದಕ ವಸ್ತುಗಳನ್ನು ನಾಶಪಡಿಸುತ್ತಿರುವುದು.
Koo

ಕಾರವಾರ: ಜಿಲ್ಲೆಯ (Karwar News) ವಿವಿಧ ಠಾಣೆಗಳಲ್ಲಿ ಒಟ್ಟು 51 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು 11 ಲಕ್ಷ ರೂ. ಮೌಲ್ಯದ 47 ಕೆಜಿಯಷ್ಟು ಮಾದಕ ದ್ರವ್ಯಗಳನ್ನು ನ್ಯಾಯಾಲಯದ ಅನುಮತಿಯ ಮೇರೆಗೆ ನಾಶಪಡಿಸಲಾಯಿತು. ಅಂಕೋಲಾ ತಾಲೂಕಿನ ಬೊಗ್ರಿಬೈಲ್‌ನ ಕೆನರಾ ಐ.ಎಮ್.ಎ.(ಯು.ಕೆ) ಕಾನ್ ಗ್ರೀಟ್‌ಮೆಂಟ್ ಫೆಸಿಲಿಟಿಯ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಸಮ್ಮುಖದಲ್ಲಿ ಮಾದಕ ವಸ್ತುಗಳನ್ನು (Drugs Destroyed) ನಾಶಪಡಿಸಲಾಯಿತು.

ಮಾದಕ ವಸ್ತುಗಳ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆಯು ಕಾರ್ಯಾಚರಣೆಯನ್ನು ಕೈಗೊಳ್ಳುತ್ತಿದ್ದು, ಇದೇ ರೀತಿ ಮುಂದಿನ ದಿನಗಳಲ್ಲೂ ಮಾದಕ ವಸ್ತುಗಳ ಸಾಗಾಟ ಪ್ರಕರಣಗಳ ವಿರುದ್ಧ ಎಚ್ಚರಿಕೆ ವಹಿಸಲಾಗುವುದು. ಇನ್ನೂ ಹೆಚ್ಚಿನ ಪ್ರಕರಣಗಳನ್ನು ದಾಖಲಿಸುವ ಮೂಲಕ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ, ಸೇವನೆಯನ್ನು ಸಂಪೂರ್ಣ ಬುಡಸಮೇತ ಕಿತ್ತು ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಸನ್ನದ್ಧವಾಗಿದೆ. ಮಾದಕ ವಸ್ತುಗಳನ್ನು ಪೂರೈಸುವವರ ವಿರುದ್ಧ ತೀವ್ರ ನಿಗಾ ಇರಿಸಲಾಗಿದ್ದು ಇನ್ನಷ್ಟು ಪ್ರಕರಣಗಳನ್ನು ಪತ್ತೆ ಹಚ್ಚುವ ವಿಶ್ವಾಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Sanskrit Yuvajanotsavah: ಮಾ. 26ರಂದು ಮಲ್ಲೇಶ್ವರದಲ್ಲಿ ‘ಸಂಸ್ಕೃತ ಯುವಜನೋತ್ಸವಃ’ ಕಾರ್ಯಾಗಾರ

ಒಂದು ತಿಂಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 24 ಮಾದಕ ವಸ್ತು ಸೇವನೆ ಪ್ರಕರಣಗಳು ದಾಖಲಾಗಿದ್ದು, ಗಾಂಜಾ ಇರಿಸಿಕೊಂಡಿದ್ದಂತಹ ಹತ್ತರಿಂದ ಹನ್ನೆರಡು ಪ್ರಕರಣಗಳು ದಾಖಲಾಗಿದ್ದವು. ಈ ನಿಟ್ಟಿನಲ್ಲಿ ಎಸ್ಪಿ ವಿಷ್ಣುವರ್ಧನ್ ನೇತೃತ್ವದಲ್ಲಿ ಪೊಲೀಸರ ತಂಡವನ್ನು ರೂಪಿಸಿಕೊಂಡ ಗಾಂಜಾ ಸಾಗಾಟ, ಸೇವನೆ ಮಾಡುವವರ ಮಾಹಿತಿ ಕಲೆ ಹಾಕಿ ಅಂತಹವರನ್ನು ಮಟ್ಟ ಹಾಕುವ ಕೆಲಸವನ್ನು ಸಿಬ್ಬಂದಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲೂ ಇದೇ ರೀತಿ ಮಾದಕ ವಸ್ತು ಸಾಗಾಟದಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಎಸ್ಪಿ ವಿಷ್ಣುವರ್ಧನ್ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕಾರವಾರ ಡಿವೈಎಸ್ಪಿ ವ್ಯಾಲೆಂಟೈನ್ ಡಿಸೋಜಾ, ಭಟ್ಕಳ ಡಿವೈಎಸ್ಪಿ ಶ್ರೀಕಾಂತ, ಡಿಸಿಆರ್‌ಬಿ ಡಿವೈಎಸ್ಪಿ ವಿಜಯ ಪ್ರಸಾದ್ ಹಾಗೂ ಜಿಲ್ಲೆಯ ವಿವಿಧ ಠಾಣೆಗಳ ಸಿಪಿಐ ಹಾಗೂ ಪಿಎಸೈ ಸಿಬ್ಬಂದಿ ಹಾಜರಿದ್ದರು.

ಇದನ್ನೂ ಓದಿ: Wall collapse: ತಡೆಗೋಡೆ ನಿರ್ಮಾಣ ವೇಳೆ ಗುಡ್ಡ ಕುಸಿತ; ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ಮೃತ್ಯು

Continue Reading
Advertisement
Check astrological predictions for all signs here
ಪ್ರಮುಖ ಸುದ್ದಿ33 mins ago

Horoscope Today : ತುಲಾ ರಾಶಿಯವರಿಗೆ ಪ್ರಭಾವಿ ಜನರ ಬೆಂಬಲ; ನಿಮ್ಮ ರಾಶಿ ಭವಿಷ್ಯ ಹೇಗಿದೆ?

Sphoorti Salu
ಸುವಚನ33 mins ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Uttara Kannada News
ಉತ್ತರ ಕನ್ನಡ5 hours ago

Uttara Kannada News: ವಾಕ್ಪ್ರತಿಯೋಗಿತಾ ಸ್ಪರ್ಧೆ; ಉಮ್ಮಚಗಿಯ ಶ್ರೀ ಮಾತಾ ಸಂಸ್ಕೃತ ಮಹಾಪಾಠ ಶಾಲೆ ಉತ್ತಮ ಸಾಧನೆ

Modi in Karnataka
ಕರ್ನಾಟಕ6 hours ago

Modi in Karnataka: ಮೋದಿ ರೋಡ್ ಶೋ ವೇಳೆ ಭದ್ರತಾ ವೈಫಲ್ಯ; ನಿಷೇಧಿತ ಪ್ರದೇಶಕ್ಕೆ ನುಗ್ಗಿದ ಇಬ್ಬರು ವಶಕ್ಕೆ

rahul-gandhi-will-act-like-a-martyr-with-an-eye-on-karnataka-elections-bjp
ದೇಶ6 hours ago

ಕರ್ನಾಟಕ ಚುನಾವಣೆ ಮೇಲೆ ಕಣ್ಣಿಟ್ಟು ಹುತಾತ್ಮನಂತೆ ನಟಿಸ್ತಾ ಇರೋ ರಾಹುಲ್ ಗಾಂಧಿ: ಬಿಜೆಪಿ

Your rules don't apply to the Gandhi family; Spark of Congress MP!
ದೇಶ6 hours ago

Rahul Gandhi Disqualified : ನಿಮ್ಮ ರೂಲ್ಸ್​ ಗಾಂಧಿ ಫ್ಯಾಮಿಲಿಗೆ ಅನ್ವಯವಾಗಲ್ಲ; ಕಾಂಗ್ರೆಸ್​ ಸಂಸದನ ಕಿಡಿ!

Zaheer Khan: Team India is still sailing in an old boat; Why did Zaheer Khan say this?
ಕ್ರಿಕೆಟ್6 hours ago

Zaheer Khan: ಟೀಮ್​ ಇಂಡಿಯಾ ಇನ್ನೂ ಹಳೆಯ ಬೋಟ್​ನಲ್ಲೇ ಪ್ರಯಾಣಿಸುತ್ತಿದೆ; ಜಹೀರ್​ ಖಾನ್​ ಹೀಗೆ ಹೇಳಿದ್ದು ಏಕೆ?

Amit Shah to visit karnataka on march 26 and Participate in various programmes
ಕರ್ನಾಟಕ7 hours ago

Amit Shah Visit: ಭಾನುವಾರ ಅಮಿತ್‌ ಶಾ ರಾಜ್ಯ ಪ್ರವಾಸ; ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

heavy rainfall likely to occur at isolated places in the karnataka on March 26 and 27
ಕರ್ನಾಟಕ7 hours ago

Karnataka Rain: ಮಾ.26, 27 ರಂದು ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ

Tricolor flag flown in America; Patriots strike back at Khalistanis
ದೇಶ7 hours ago

ವಿಸ್ತಾರ ಸಂಪಾದಕೀಯ: ಅಮೆರಿಕದಲ್ಲಿ ಹಾರಾಡಿದ ತ್ರಿವರ್ಣ ಧ್ವಜ; ಖಲಿಸ್ತಾನಿಗಳಿಗೆ ದೇಶಪ್ರೇಮಿಗಳ ತಿರುಗೇಟು

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ1 month ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ33 mins ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Paid leave for govt employees involved in the strike
ನೌಕರರ ಕಾರ್ನರ್3 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ5 days ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ5 days ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ5 days ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ6 days ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ6 days ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ7 days ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ7 days ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ7 days ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

Due to heavy rains, motorists struggle on Bengaluru-Mysuru dashapatha
ಕರ್ನಾಟಕ1 week ago

Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಕರ್ನಾಟಕ1 week ago

Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ

ಟ್ರೆಂಡಿಂಗ್‌

error: Content is protected !!