ಧಾರ್ಮಿಕ
Cancer | Gemini | 2023 ಮಿಥುನ, ಕರ್ಕಾಟಕ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ! ಆರೋಗ್ಯದಲ್ಲಿ ನಷ್ಟ!
ಕರ್ನಾಟಕ
Food Poisoning : ಗಣೇಶ ವಿಸರ್ಜನೆಯಲ್ಲಿ ಪ್ರಸಾದ ಸೇವಿಸಿದ 28ಕ್ಕೂ ಹೆಚ್ಚು ಮಂದಿ ಅಸ್ವಸ್ಥ
Tumkur News : ತುಮಕೂರಲ್ಲಿ ಗಣೇಶ ವಿಸರ್ಜನೆ (Ganesh Chaturthi) ವೇಳೆ ಪ್ರಸಾದ ಸೇವಿಸಿದ 20ಕ್ಕೂ ಹೆಚ್ಚು ಜನರು (Food Poisoning) ಅಸ್ವಸ್ಥಗೊಂಡಿದ್ದಾರೆ. ಹಲವರು ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ತುಮಕೂರು: ಇಲ್ಲಿನ ಶೆಟ್ಟಪ್ಪನಹಳ್ಳಿಯಲ್ಲಿ ಆಹಾರ ಸೇವಿಸಿದ 28ಕ್ಕೂ ಹೆಚ್ಚು ಮಂದಿ (Food Poisoning) ಅಸ್ವಸ್ಥಗೊಂಡಿದ್ದಾರೆ. ಭಾನುವಾರ (ಸೆ.24) ಗಣೇಶ ವಿಸರ್ಜನೆ ಸಮಯದಲ್ಲಿ ಪ್ರಸಾದ ಸೇವಿಸಿದ್ದರೂ ಜತೆಗೆ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿರುವ ಶಂಕೆ ವ್ಯಕ್ತವಾಗಿದೆ.
6 ಮಂದಿ ಆರೋಗ್ಯವು ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಯಲಕ್ಷ್ಮಿ (35), ಬೋರಮ್ಮ (68), ಬೈರಪ್ಪ(80), ಗಂಗಮ್ಮ (70), ನಂಜಮ್ಮ(85) ಎಂಬುವವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 20ಕ್ಕೂ ಹೆಚ್ಚು ಜನರಿಗೆ ಗೂಳೂರು ಪ್ರಾಥಮಿಕ ವೈದ್ಯರಿಂದ ಗ್ರಾಮದಲ್ಲೇ ಚಿಕಿತ್ಸೆ ಮುಂದುವರಿದಿದೆ.
ತುಮಕೂರು ತಾಲೂಕಿನ ಶೆಟ್ಟಪ್ಪನಹಳ್ಳಿ ಗ್ರಾಮದಲ್ಲಿ ಸುಮಾರು 54 ಮನೆಗಳಿದ್ದು, ಕಳೆದ ಭಾನುವಾರ ಗ್ರಾಮದ ಓರ್ವರಿಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ನಿನ್ನೆ ಬೆಳಗ್ಗೆ (ಸೆ.25) 10 ಗಂಟೆ ಸುಮಾರಿಗೆ 6 ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ಅಸ್ವಸ್ಥರು ಗೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ವೇಳೆ ಎಚ್ಚತ್ತ ಆರೋಗ್ಯ ಅಧಿಕಾರಿಗಳು ವೈದ್ಯರ ತಂಡ ಸಮೇತ ಶೆಟ್ಟಪ್ಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ಇದುವರೆಗೆ ಸುಮಾರು 28ಮಂದಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಗ್ರಾಮದಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಅಸ್ವಸ್ಥಗೊಂಡಿರುವವರ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಅಸ್ವಸ್ಥಗೊಂಡಿದ್ದ 28 ಜನರಲ್ಲಿ 24 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.
ಸದ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಕರಣ ಸಂಬಂಧ ಮಾಹಿತಿ ಕಲೆಹಾಕುತ್ತಿದ್ದಾರೆ. ಅಣಬೆ ಸೇವಿಸಿದ್ದ ಬಗ್ಗೆಯೂ ಶಂಕೆ ಇದೆ. ಮೇಲ್ನೋಟಕ್ಕೆ ಕುಡಿಯುವ ನೀರು ಕಲುಷಿತಗೊಂಡಿರಬಹುದು, ಆಹಾರದಲ್ಲಿ ವ್ಯತ್ಯಾಸಗೊಂಡಿರಬಹುದೆಂದು ಅಂದಾಜಿಸಲಾಗಿದೆ. ಕುಡಿಯುವ ನೀರನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ಬಳಿಕ ಪ್ರಕರಣದ ಸತ್ಯಸಂಗತಿ ಹೊರಬರಲಿದೆ. ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗದ ಆತಂಕವು ಹೆಚ್ಚಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಗಣೇಶ ಚತುರ್ಥಿ
Ganesh Chaturthi : ನಾಳೆ-ನಾಡಿದ್ದು ಈ ರೂಟ್‌ನಲ್ಲಿ ವಾಹನ ಸಂಚಾರ ಬಂದ್!
Ganesh Chaturthi : ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನಾ ಇರುವುದರಿಂದ ಬೆಂಗಳೂರಿನ ಕೆಲವು ಕಡೆ ವಾಹನ ಸಂಚಾರವನ್ನು (Traffic advisory) ನಿರ್ಬಂಧಿಸಲಾಗಿದೆ.
ಬೆಂಗಳೂರು: ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿರೆಡ್ಡಿಪಾಳ್ಯದಲ್ಲಿ ಸೆ. 23ರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ (Ganesh Chaturthi) ಮೆರವಣಿಗೆ ನಡೆಯಲಿದೆ. ಹೀಗಾಗಿ ಶನಿವಾರ ಸಂಜೆ 06 ಗಂಟೆಯಿಂದ ಮರುದಿನ ಬೆಳಗ್ಗೆ 08 ಗಂಟೆಯವರೆಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್ ಆಗಲಿದೆ.
ಈ ಮಾರ್ಗಗಳಲ್ಲಿ ತಾತ್ಕಾಲಿಕ ನಿರ್ಬಂಧ
ದೇವೇಗೌಡ ರಸ್ತೆ, ಜೆ.ಸಿ.ನಗರ ಮುಖ್ಯರಸ್ತೆ, ಮಠದಹಳ್ಳಿ ಮುಖ್ಯರಸ್ತೆ, ದೇಸ್‌ರಾಜ್ ಅರಸ್ ರಸ್ತೆಗಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: Ganesh Chaturthi : ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್
ದಿಣ್ಣೂರಿಗೆ ಹೋಗಲು ಈ ದಾರಿ ಬಳಸಿ
1) ಸುಲ್ತಾನ್ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗಗಳು ಹೀಗಿವೆ.
ದಿಣ್ಣೂರು ಮುಖ್ಯರಸ್ತೆಯಿಂದ ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್‌ನಲ್ಲಿ ಎಡತಿರುವು ಪಡೆಯಬೇಕು. ಆರ್.ಟಿ.ನಗರ ಮುಖ್ಯರಸ್ತೆ ಮೂಲಕ ಗುಂಡುರಾವ್ ಮನೆ ಜಂಕ್ಷನ್, ಬೆಂಗಳೂರ ಬಳ್ಳಾರಿ ರಸ್ತೆ, ಮೇಖ್ರಿ ಸರ್ಕಲ್ ಸರ್ವೀಸ್ ರಸ್ತೆಯಲ್ಲಿ ಎಡತಿರುವು ಪಡೆದು ಜಯಮಹಲ್ ರಸ್ತೆಯಲ್ಲಿ ನೇರವಾಗಿ ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.
- ಕಂಟೋನ್ಮೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ – ಸುಲ್ತಾನ್ ಪಾಳ್ಯ – ಕಾವಲ್‌ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಜಯಮಹಲ್ ರಸ್ತೆ ಮೂಲಕ ಮೇಖ್ರಿ ಸರ್ಕಲ್ ಬೆಂಗಳೂರು ಬಳ್ಳಾರಿ ರಸ್ತೆ, ಸಿಬಿಐ ಅಂಡರ್ ವಾಸ್ ಮೂಲಕ ಆರ್.ಟಿ.ನಗರ ಮುಖ್ಯರಸ್ತೆ- ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್ ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
- ಯಶವಂತಪುರ ಕಡೆಯಿ೦ದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಮೇಕ್ರಿ ಸರ್ಕಲ್‌ನಲ್ಲಿ ಎಡತಿರುವು ಪಡೆದು ಬೆಂಗಳೂರು ಬಳ್ಳಾರಿ ರಸ್ತೆ, ಸಿಬಿಐ ಅಂಡರ್ ಪಾಸ್ ಬಲತಿರುವು ಪಡೆದು ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
- ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಮೇಖ್ರಿಸರ್ಕಲ್ ಅಂಡರ್ ಪಾಸ್, ಬೆಂಗಳೂರು ಬಳ್ಳಾರಿ ರಸ್ತೆ, ಸಿ.ಬಿ.ಐ. ಜಂಕ್ಷನ್ ನಂತರ ಕರ್ನಾಟಕ ಸ್ಪೀರಿಟ್‌ನಲ್ಲಿ ಬಲ ತಿರುವು ತೆಗೆದುಕೊಂಡು ಬಿಬಿ ಸರ್ವೀಸ್ ರಸ್ತೆ, ಸಿ.ಬಿ.ಐ ರಸ್ತೆ ಡೆಡ್ ಎಂಡ್ ಬಲತಿರುವು ಮೂಲಕ ದಿಣ್ಣೂರು ರಸ್ತೆಯ ಮೂಲಕ ಹೋಗಬಹುದು.
ಸೆ.24ರಂದು ಈ ಮಾರ್ಗದಲ್ಲಿ ಸಂಚಾರ ಬಂದ್
ಸೆ.24ರಂದು ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚಾರ ನಿರ್ಬಂಧ ಮಾಡಲಾಗಿದೆ.
-ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.
-ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೂ ಸಂಚಾರ ಬಂದ್ ಆಗಲಿದೆ.
-ಕೆನ್ಸಿಂಗ್‌ಟನ್ ಕಡೆಯಿಂದ ಎಂ.ಇ.ಜಿ ಮೂಲಕ ಹಲಸೂರು ಲೇಕ್ ಕಡೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಆದರೆ ಎಂಇಜಿ ಕಡೆಯಿಂದ ಕೆನ್ಸಿಂಗ್‌ಟನ್ ಕಡೆಗೆ ಏಕಮುಖ ಸಂಚಾರ ಇರಲಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Mysore Dasara 2023: ಬರ ಹಿನ್ನೆಲೆ ಸರಳವಾಗಿ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ
Mysore Dasara 2023: ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬರ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅ.15ರಿಂದ ಮೈಸೂರಿನಲ್ಲಿ ದಸರಾ ಮಹೋತ್ಸವ ಆರಂಭವಾಗಲಿದೆ.
ಮೈಸೂರು: ಬರ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವ 2023 ಅನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬರ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ದಸರಾವನ್ನು (Mysore Dasara 2023) ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ರೈತಾಪಿ ವರ್ಗವು ಸಂಕಷ್ಟದಲ್ಲಿದೆ. ಈ ಬಾರಿ ಸರಳ ಮತ್ತು ಅರ್ಥಪೂರ್ಣ ದಸರಾ ಆಚರಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ರೈತರ ಸಂಕಷ್ಟದ ಸಂದರ್ಭಕ್ಕೆ ಪೂರಕವಾಗಿ ಸರ್ಕಾರವು ಈ ಬಾರಿ ಸರಳ ದಸರಾ ಆಚರಿಸಲಿದೆ ಎಂದು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | Mysore Dasara : ನಾದಬ್ರಹ್ಮ ಹಂಸಲೇಖ ಈ ಬಾರಿಯ ಮೈಸೂರು ದಸರಾ ಉದ್ಘಾಟಕ; ಸಿಎಂ ಸಿದ್ದರಾಮಯ್ಯ ಘೋಷಣೆ
ಅ.15ರಿಂದ ನವರಾತ್ರಿ
ಅ.15ರಿಂದ ಮೈಸೂರಿನಲ್ಲಿ ಶರನ್ನವರಾತ್ರಿ ಉತ್ಸವ ಪ್ರಾರಂಭವಾಗಲಿದೆ. ಅಂದು ಬೆಳಗ್ಗೆ 10.15 ರಿಂದ 10.36 ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದಸರಾಗೆ ಚಾಲನೆ ನೀಡಲಾಗುತ್ತದೆ.
- ಅರಮನೆ ಪೂಜೆಗಳು: ಅ.15ರಂದು ಸಾಯಂಕಾಲ 6.30 ರಿಂದ 7.15ಶುಭಮೇಷ ಲಗ್ನದಲ್ಲಿ ಆರಂಭ.
- ಅ.20ರಂದು ಶುಕ್ರವಾರ : ಕಾತ್ಯಾಯಿನೀ – ಸರಸ್ವತಿ ಪೂಜೆ.
(ಮೂಲ ನಕ್ಷತ್ರದಲ್ಲಿ ಸರಸ್ವತಿ ಪೂಜೆ ಪ್ರಾರಂಭ ಮಾಡಿ ಶ್ರವಣ ನಕ್ಷತ್ರದ ದಿನ ಅಂದರೆ ಅ.24ರಂದು ಮಂಗಳವಾರ ವಿಸರ್ಜನೆ) - ಅ.21ರಂದು ಶನಿವಾರ : ಕಾಳರಾತ್ರಿ, ಮಹಿಷಾಸುರ ಸಂಹಾರ.
- ಅ.23 ಸೋಮವಾರ : ಆಯುಧ ಪೂಜೆ.
- ಅ.24ರಂದು ಮಂಗಳವಾರ : ವಿಜಯದಶಮಿ.
ಮಧ್ಯಾಹ್ನ 1.46 ರಿಂದ 2:08 ಮಕರ ಲಗ್ನದಲ್ಲಿ ಮುಖ್ಯಮಂತ್ರಿಯವರಿಂದ ನಂದೀ ಧ್ವಜ ಪೂಜೆ.
ಮಧ್ಯಾಹ್ನ 4.40 ರಿಂದ 5.00ರ ಶುಭ ಮೀನ ಲಗ್ನದಲ್ಲಿ ಮಾನ್ಯ ಮುಖ್ಯಮಂತ್ರಿಯವರಿಂದ ಮತ್ತು ಗಣ್ಯಾತಿಗಣ್ಯರಿಂದ ಪುಷ್ಪಾರ್ಚನೆ ನಂತರ “ಜಂಬೂ ಸವಾರಿ” ಪ್ರಾರಂಭ. - ಅ.26ರಂದು ಭಾನುವಾರ : ಬೆಟ್ಟದ ಶ್ರೀಚಾಮುಂಡೇಶ್ವರಿ ರಥೋತ್ಸವ.
ಕರ್ನಾಟಕ
Communal Harmony : ದರ್ಗಾದಲ್ಲೇ ಗಣಪತಿ ಪ್ರತಿಷ್ಠಾಪನೆ; ಘಂಟೆ ಬಡಿದು ಜೈ ಗಣೇಶ ಎಂದ ಮುಸ್ಲಿಮರು, ಎಂಥಾ ಸೌಹಾರ್ದ!
Communal Harmony : ಬೆಳಗಾವಿಯ ಬೈಲಹೊಂಗಲದ ಕಂಠಿ ಗಲ್ಲಿಯ ದರ್ಗಾದಲ್ಲಿ ಮುಸ್ಲಿಮರೇ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ. ಹಿಂದುಗಳು ಜತೆಯಾಗಿ ನಿಂತು ಪ್ರಾರ್ಥಿಸುತ್ತಾರೆ. ಭಾರತದ ಸೌಹಾರ್ದ ಪರಂಪರೆ ಅತ್ಯುತ್ತಮ ನಿದರ್ಶನವೊಂದು ಈಗಲೂ ಜೀವಂತವಾಗಿದೆ.
ಬೆಳಗಾವಿ: ಜಾತಿ, ಧರ್ಮಗಳ ಸಂಘರ್ಷ, ಅಪನಂಬಿಕೆ, ದ್ವೇಷಗಳೇ ತುಂಬಿಕೊಳ್ಳುತ್ತಿರುವ ಕಾಲದಲ್ಲಿ ಮನುಷ್ಯ ನಿಜವಾಗಿಯೂ ಬದುಕಬೇಕಾದ ಬಗೆಗಳು ಆಗಾಗ, ಅಲ್ಲಲ್ಲಿ ತೆರೆದುಕೊಳ್ಳುತ್ತವೆ. ಹಿಂದು-ಮುಸ್ಲಿಮರ ಸ್ನೇಹ ಭಾವದ ಕಾಲವಳಿದು ದ್ವೇಷ ಭಾವವೇ ಉಕ್ಕೇರುತ್ತಿರುವ ಹಂತದಲ್ಲಿ ನಡೆಯುತ್ತಿರುವ ಈ ವಿದ್ಯಮಾನಗಳು (Communal Harmony) ನಿಜಾರ್ಥದಲ್ಲಿ ಕತ್ತಲ ಸುರಂಗದ ಕೊನೆಯಲ್ಲಿರುವ ಬೆಳಕಿನ ಹಣತೆಗಳು ಅನಿಸುತ್ತವೆ. ಇಷ್ಟೊಂದು ಖುಷಿಯಿಂದ ವಿಚಾರವನ್ನು ಹೇಳುವುದಕ್ಕೆ ನಿಜಕ್ಕೂ ಒಂದು ಕಾರಣವಿದೆ.
ಬೆಳಗಾವಿ ಜಿಲ್ಲೆಯ (Belagavi News) ಬೈಲಹೊಂಗಲ ಪಟ್ಟಣದ ಕಂಠಿ ಗಲ್ಲಿಯಲ್ಲಿ (Kanti galli in Bailahongala) ಮುಸ್ಲಿಮರೇ ಮುಂದೆ ನಿಂತು ತಮ್ಮದೇ ದರ್ಗಾದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ (Ganeshothsava at Dargah) ತಾವೇ ಪೂಜೆ ಮಾಡಿ, ತಾವೇ ಘಂಟಾಘೋಷ ಮೊಳಗಿಸಿ ಜೈಗಣೇಶ (Muslims Chanted Jai Ganesha) ಎಂದು ಭಕ್ತಿಯಿಂದ, ಹೃದಯಾಂತರಾಳದಿಂದ ಜಯೋಘೋಷ ಮಾಡಿದ್ದಾರೆ. ಇದಕ್ಕೆ ಅಲ್ಲಿನ ಎಲ್ಲ ಹಿಂದುಗಳು ಸಹವರ್ತಿಗಳಾಗಿ, ಸಾಕ್ಷಿಗಳಾಗಿ ಸಂಭ್ರಮಿಸಿದ್ದಾರೆ.
ಬೈಲಹೊಂಗಲ ಪಟ್ಟಣದ ಕಂಠಿ ಗಲ್ಲಿಯಲ್ಲಿರುವ ಫಕ್ಕೀರಸ್ವಾಮಿ ದರ್ಗಾದಲ್ಲಿ (Fakeeraswamy Dargah at Kantigalli) ನಡೆದಿರುವ ವಿದ್ಯಮಾನ ಇದು. ಹಾಗಂತ ಇದೇನು ಹೊಸ ಸಂಪ್ರದಾಯ ಹುಟ್ಟು ಹಾಕಿದ್ದಲ್ಲ. ಯಾವಾಗ ಬಾಲ ಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆ ಸೃಷ್ಟಿಸಿದರೋ ಅಥವಾ ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮ ಯಾವಾಗ ಶುರುವಾಯಿತೋ ಅಂಥ ಸ್ವಾತಂತ್ರ್ಯ ಪೂರ್ವ ಕಾಲದಿಂದಲೇ ಹಿಂದು ಮತ್ತು ಮುಸ್ಲಿಮರು ಸೇರಿ ಆಚರಿಸುವ ವಿಶೇಷ ಗಣೇಶೋತ್ಸವವಾಗಿ ಇದು ಗಮನ ಸೆಳೆದಿದೆ.
ಜಗತ್ತಿನಲ್ಲಿ, ಸುತ್ತಮುತ್ತ ಏನೇ ನಡೆದರೂ ಅದೆಷ್ಟು ತಲಾಂತರಗಳು ಕಳೆದರೂ, ಪೀಳಿಗೆಗಳು ಬದಲಾದದರೂ ಸೌಹಾರ್ದತೆಯ ಈ ಪರಂಪರೆ ಮಾತ್ರ ಯಾವ ಕಲ್ಮಶಕ್ಕೂ ಒಳಗಾಗದೆ, ಯಾವ ಮಾಲಿನ್ಯಕ್ಕೂ ಕಿವಿಗೊಡದೆ ವರ್ಷ ವರ್ಷವೂ ಇನ್ನಷ್ಟು ಸಮೃದ್ಧವಾಗುತ್ತಿದೆ ಎನ್ನುವುದು ಹಿತವಾದ ಸುದ್ದಿ.
ಇಲ್ಲಿ ಎಲ್ಲ ಜಾತಿ, ಜನಾಂಗದವರು ದರ್ಗಾದ ಆಚರಣೆ ಮತ್ತು ಪರಂಪರೆಗೆ ಹೊಂದಿಕೊಂಡು ಬದುಕುತ್ತಿದ್ದಾರೆ. ದರ್ಗಾದಲ್ಲಿ ನಡೆಯುವ ಪ್ರತಿ ಧಾರ್ಮಿಕ ಆಚರಣೆ, ವಿಧಿ, ವಿಧಾನಗಳಿಗೆ ತಲೆ ಬಾಗಿ ನಡೆದುಕೊಳ್ಳುವ ಸಂಸ್ಕೃತಿ, ಪರಂಪರೆ ಇಲ್ಲಿಯ ಜನರದ್ದಾಗಿದೆ.
ಕೋಮು ಸೌಹಾರ್ದತೆಗೆ ಸಾಕ್ಷಿ ಗಣಪನ ಪ್ರತಿಷ್ಠಾಪನೆ
ಕಂಠಿ ಗಲ್ಲಿಯಲ್ಲಿರುವ ನಿವಾಸಿಗಳು ಪ್ರತಿ ವರ್ಷ ಒಟ್ಟಿಗೆ ಸೇರಿ ಮೊಹರಂ ಆಚರಣೆ ಮಾಡುತ್ತಾರೆ. ಜೊತೆಗೆ ಗಣೇಶ ಚತುರ್ಥಿಯನ್ನು ಅಷ್ಟೇ ನಯ, ವಿನಯ, ಭಕ್ತಿಭಾವದಿಂದ ಬರ ಮಾಡಿಕೊಂಡು ಗಣೇಶನ ಹಬ್ಬ ಆಚರಣೆ ಮಾಡಿಕೊಂಡು ಬಂದಿದ್ದಾರೆ.
ಮುಸ್ಲಿಂ ಬಾಂಧವರಿಂದ ಗಣಪನಿಗೆ ಜೈಘೋಷ
ಹಿಂದೂ, ಮುಸ್ಲಿಂ ಬಾಂಧವರು ಗಣಪನಿಗೆ ಹೂವು ಮಾಲೆ ಹಾಕಿ, ಕಾಯಿ, ಕರ್ಪೂರ ಬೆಳಗಿ, ಗಂಟೆ ಬಾರಿಸಿ, ಆರತಿ ಮಾಡಿ, ನೈವೇದೆ ಸಲ್ಲಿಸಿ ಪ್ರಾರ್ಥಿಸಿದರು. ಅರ್ಚಕರು ಬೋಧಿಸಿದ ಮಂತ್ರ ಘೋಷವನ್ನು ಮುಸ್ಲಿಂ ಬಾಂಧವರು ಭಕ್ತಿಯಿಂದ ನುಡಿದು ಗಜಾನನ ಮಹರಾಜಕೀ ಜೈ ಎಂದು ಘೋಷಣೆ ಹಾಕಿದರು.
ಊರ ಹಿರಿಯರು, ಊರ ಹಿರಿಯರು, ಸಹೃದಯಿಗಳ ಶಕ್ತಿ ಇದು
ಊರಿನ ಹಿರಿಯರಾದ ಮಹಾಂತೇಶ ಹಂಚಿನಮನಿ, ಈರಪ್ಪ ಬೆಂಡಿಗೇರಿ, ಪ್ರಕಾಶ ಪಾಗಾದ, ಅಶೋಕ ಪಾಗಾದ, ವಿಶಾಲ ರೊಡಬಸನವರ, ಸಚಿನ ಹಣಮಶೇಟ, ಕಿರಣ ಪಾಗಾದ, ಉಳವೇಶ ಪಾಗಾದ, ಬಾಬು ಅಡಿಮನಿ, ಶಫೀಕ ಬಡಿಮನಿ, ಜರ್ ನದಾಫ, ಶಿವಲಿಂಗ ಹೂಗಾರ, ಕುಮಾರ ಹೂಗಾರ, ಪ್ರಜ್ವಲ ಹೂಗಾರ, ಅನೇಕರು ಗಣೇಶ ಪ್ರತಿಷ್ಠಾಪನೆ ಜವಾಬ್ದಾರಿ ಹೊತ್ತುಕೊಂಡು ಯಶಸ್ವಿಗೊಳಿಸಿದ್ದಾರೆ.
ಇದನ್ನೂ ಓದಿ : Communal Harmony : ಗಣೇಶ ಬಪ್ಪ ಮೋರಯಾ ಎಂದ ಮುಸ್ಲಿಮರು; ಗಣಪನ ಶೋಭಾಯಾತ್ರೆಗಾಗಿ ಈದ್ ಮೆರವಣಿಗೆಯೇ ಮುಂದಕ್ಕೆ!
ಬೆಳಗಾವಿಯ ಬೈಲಹೊಂಗಲದ ಈ ಪರಂಪರೆಯಂತೆಯೇ ಇನ್ನೂ ಹಲವು ಕಡೆ ಹಿಂದು ಮುಸ್ಲಿಂ ಸೌಹಾರ್ದತೆಯ ನೂರಾರು ಉದಾಹರಣೆಗಳು ದೊರೆಯುತ್ತವೆ. ಇದು ಇನ್ನಷ್ಟು ಬೆಳೆಯಬೇಕು ಮತ್ತು ಹೊಸ ಹೊಸ ಸೌಹಾರ್ದದ ನಿದರ್ಶನಗಳು ಹುಟ್ಟಿಕೊಳ್ಳಬೇಕು ಎನ್ನುವುದೇ ಅಲ್ಲಿನ ಜನ ಆಶಯ.
ಈದ್ ಮೆರವಣಿಗೆಯನ್ನೇ ಮುಂದಕ್ಕೆ ಹಾಕಿದ ಬೆಳಗಾವಿಯ ಮುಸ್ಲಿಮರು
ಬೆಳಗಾವಿಯ ಸೌಹಾರ್ದ ಪರಂಪರೆ ಅದೆಷ್ಟು ಶಕ್ತಿಶಾಲಿಯಾಗಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ. ಬೆಳಗಾವಿಯಲ್ಲಿ ಗಣೇಶೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ಈ ಬಾರಿ ಸೆ. 28ರಂದು ಸಾರ್ವಜನಿಕ ಗಣೇಶೋತ್ಸವವ ಬೃಹತ್ ಶೋಭಾಯಾತ್ರೆ ನಡೆಯುತ್ತದೆ. ಈ ಬಾರಿ ಅಂದೇ ಈದ್ ಮಿಲಾದ್ ಹಬ್ಬವೂ ಬಂದಿದೆ. ಮುಸ್ಲಿಮರು ಕೂಡಾ ನಗರ ಮೆರವಣಿಗೆ ಮೂಲಕ ಇದನ್ನು ಸಂಭ್ರಮಿಸುತ್ತಾರೆ. ಆದರೆ ಎರಡನ್ನೂ ಒಂದೇ ದಿನ ಆಚರಿಸಿದರೆ ವ್ಯವಸ್ಥೆ ಮಾಡುವುದು ಕಷ್ಟವಾಗುತ್ತದೆ, ಕಾನೂನು ಭಂಜಕರಿಗೆ ಅವಕಾಶವಾದೀತು ಎಂದು ಭಾವಿಸಿದ ಮುಸ್ಲಿಂ ಹಿರಿಯರು ತಮ್ಮ ಈದ್ ಮೆರವಣಿಗೆಯನ್ನು ಅಕ್ಟೋಬರ್ ಒಂದಕ್ಕೆ ಮುಂದೂಡಿದ್ದಾರೆ.
-
Live News19 hours ago
Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!
-
ವಿದೇಶ10 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ2 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
South Cinema13 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಕರ್ನಾಟಕ13 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ಆಟೋಮೊಬೈಲ್9 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ10 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್13 hours ago
ರಾಜ್ಕೋಟ್ನಲ್ಲಿ ಈಡೇರಲಿ ಭಾರತದ ಕ್ಲೀನ್ ಸ್ವೀಪ್ ಯೋಜನೆ; ನಾಳೆ ಅಂತಿಮ ಏಕದಿನ