ಉತ್ತರ ಕನ್ನಡ
Gokarna News: ಭಗವಂತನ ಸನ್ನಿಧಿಯಿಂದ ಬಂದ ನಾವು ಮತ್ತೆ ಅವನನ್ನೇ ತಲುಪಬೇಕು: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ
Gokarna News: ಗೋಕರ್ಣದ ಅಶೋಕೆಯಲ್ಲಿ ನಿರ್ಮಿಸಲಾದ ಸೇವಾ ಸೌಧದ ಸಮರ್ಪಣಾ ಸಮಾರಂಭವು ಶನಿವಾರ (ಜ.28) ವಿಜೃಂಭಣೆಯಿಂದ ನಡೆಯಿತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭಾಗಿಯಾಗಿದ್ದರು.
ಗೋಕರ್ಣ: ಮರಳಿ ಮೂಲಕ್ಕೆ ಎನ್ನುವುದು ನಮ್ಮ ಸಂಸ್ಕೃತಿಯ ತಿರುಳು. ಜೀವನ ಎನ್ನುವುದು ಸತ್ ವೃತ್ತ ಇದ್ದಂತೆ; ಮತ್ತೆ ಮೂಲ ಬಿಂದುವನ್ನೇ ಮುಟ್ಟುತ್ತದೆ. ಭಗವಂತನ ಸನ್ನಿಧಿಯಿಂದ ಬಂದ ನಾವು ಮತ್ತೆ ಅವನನ್ನೇ ತಲುಪಬೇಕು ಎನ್ನುವ ಆಶಯದೊಂದಿಗೆ ನಮ್ಮ ಕರ್ತವ್ಯಗಳನ್ನು ನಿಭಾಯಿಸೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಗೋಕರ್ಣದ ಅಶೋಕೆಯಲ್ಲಿ ಶ್ರೀ ಮಠದ ಕಾರ್ಯಕರ್ತರ ದೇಣಿಗೆಯಿಂದಲೇ ವಿಶಿಷ್ಟವಾಗಿ ನಿರ್ಮಿಸಲಾದ ಸೇವಾ ಸೌಧದ ಸಮರ್ಪಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಮುಂದಿನ ಪೀಳಿಗೆಗಳು ನೆನಸಿಕೊಳ್ಳುವಂಥ ಘನ ರಾಷ್ಟ್ರ ಕಾರ್ಯವನ್ನು ಮಾಡುವ ಮೂಲಕ ಭಗವಂತನಿಗೆ ಹತ್ತಿರವಾಗೋಣ. ವಿವಿವಿ ಮುಂದಿನ ದಿನಗಳಲ್ಲಿ ರಾಷ್ಟ್ರದ ದೀಪ ಗೋಪುರ, ಜ್ಞಾನ ಗೋಪುರವಾಗಿ ತಲೆ ಎತ್ತಿ ನಿಲ್ಲಲಿದೆ ಎಂದರು.
“ಸೇವಾ ಸೌಧದ ಮೂಲಕ ನಾವು ಮರಳಿ ಮೂಲಕ್ಕೆ ಬಂದೆವು. ಸಾವಿರ ವರ್ಷಗಳ ಹಿಂದೆ ಶ್ರೀಶಂಕರರು ಮೂಲ ಮಠ ಸ್ಥಾಪಿಸಿದ ಪ್ರದೇಶ, ಪೋರ್ಚುಗೀಸ್ ದಾಳಿಯಿಂದಾಗಿ ಹಲವು ವರ್ಷಗಳ ಕಾಲ ಅದೃಶ್ಯವಾಗಿತ್ತು. ಪೋರ್ಚುಗೀಸರು ದಾಳಿ ಮಾಡಿ ನಾಶ ಮಾಡಿದ ಮಠದ ನೂರು ಪಟ್ಟು ಶಕ್ತಿಯೊಂದಿಗೆ ಮಠ ಮತ್ತೆ ಆವೀರ್ಭವಿಸುತ್ತಿದೆ ಎಂದು ಹೇಳಿದರು.
ಶ್ರೀ ಶಂಕರಾಚಾರ್ಯರು ಮೂಲ ಮಠ ಸ್ಥಾಪಿಸಿದ ಪುಣ್ಯ ಭೂಮಿಯಲ್ಲಿ ಮತ್ತೆ ಅಲ್ಲಿಯೇ ಮಠ, ಅಗ್ರಹಾರ, ವಿಶ್ವವಿದ್ಯಾ ಪೀಠವೊಂದು ಮರಳಿ ಮೂಡಿ ಬರುತ್ತಿರುವುದು ತ್ಯಾಗ- ಬಲಿದಾನ ಮಾಡಿದ ಜೀವಗಳಿಗೆ ನಾವು ಸಲ್ಲಿಸುವ ಶ್ರದ್ಧಾಂಜಲಿ. ಮಠದ ಹಿತ್ತಲು ಪ್ರದೇಶದಲ್ಲಿ ಮೂಲ ಮಠದ ಅವಶೇಷಗಳು ಮಾತ್ರ ಇಂದು ಉಳಿದುಕೊಂಡಿವೆ. ಅಂಥ ನಾಶಕಾಂಡದಿಂದ ಮತ್ತೆ ಸೃಷ್ಟಿಕಾಂಡ ಚಿಗುರೊಡೆಯುತ್ತಿದೆ ಎಂದು ವಿಶ್ಲೇಷಿಸಿದರು.
ಸೇವಾ ಸೌಧ ಶ್ರೀಗಳ ಸೌಧವಷ್ಟೇ ಅಲ್ಲದೇ, ವಿವಿವಿ ಕುಲಪತಿಗಳ ನಿವಾಸವೂ ಆಗಿರುತ್ತದೆ. ಸತ್ ಶಿಕ್ಷಣ ನೀಡುವುದು ಮಠಗಳ ಕರ್ತವ್ಯ. ಮಠಗಳನ್ನು ವಿದ್ಯಾ ಕೇಂದ್ರಗಳೆಂದು ಕೋಶಗಳಲ್ಲಿ ವಿವರಿಸಲಾಗಿದೆ. ಅಂಥ ನಿಜ ಅರ್ಥದ ಮಠ ಇಲ್ಲಿ ಸ್ಥಾಪನೆಯಾಗುತ್ತಿದೆ. ಇಲ್ಲಿ ಉದಯಿಸುತ್ತಿರುವ ವಿವಿವಿ ಅಂದಿನ ಪೋರ್ಚುಗೀಸರು ಹಾಗೂ ಇಂದಿನ ಪೋರ್ಚುಗೀಸರಿಗೆ ನಾವು ನೀಡುತ್ತಿರುವ ಉತ್ತರ ಎಂದು ಬಣ್ಣಿಸಿದರು.
ಮಠದ ಶಿಷ್ಯರ ಉದ್ಧಾರಕ್ಕಾಗಿ, ಸಮಾಜಕ್ಕಾಗಿ, ಸಂಸ್ಕಂತಿಗಾಗಿ, ವಿಸ್ತಂತವಾಗಿ ದೇಶಕ್ಕೆ ಕೊಡುಗೆ ನೀಡುವುದು ವಿವಿವಿ ಪರಿಕಲ್ಪನೆ, ಇದು ಕೇವಲ ಒಂದು ಸಮಾಜಕ್ಕೆ ಅಥವಾ ರಾಜ್ಯಕ್ಕೆ ಸೀಮಿತವಾದ ಕಾರ್ಯವಲ್ಲ; ಇದು ಬೃಹತ್ ರಾಷ್ಟ್ರ ಕಾರ್ಯ. ರಾಷ್ಟ್ರ ಕಟ್ಟುವಂಥವರು, ದೇಶ ಆಳುವಂಥವರು ಮತ್ತು ಬೆಳಗುವವರು ಇಲ್ಲಿ ರೂಪುಗೊಳ್ಳುತ್ತಾರೆ. ಹಲವು ಪೀಳಿಗೆಗಳು ಸೇರಿ ಅಭಿವೃದ್ಧಿಪಡಿಸಬೇಕಾದ ಮಹತ್ಕಾರ್ಯ ಇದು. ವಿವಿ ಮೂಲಕ ಮತ್ತೊಂದು ಕಾಶಿ, ತಕ್ಷಶಿಲೆ ಪುನರವತರಿಸುತ್ತಿದೆ ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತನಾಡಿ, “ಕೋಟಿ ವರ್ಷಕ್ಕೊಮ್ಮೆ ಮಹಾತ್ಮರು ಜನ್ಮ ತಳೆಯುತ್ತಾರೆ ಎಂಬ ಮಾತಿದೆ. ಶ್ರೀ ಶಂಕರಾಚಾರ್ಯರು ಅಂಥ ಮಹಾತ್ಮರು. ಅತ್ಯಂತ ಕಿರಿಯ ವಯಸ್ಸಿನಲ್ಲೇ ವಿಶಿಷ್ಟ ಕೊಡುಗೆ ನೀಡಿದ ಸಾಧಕ ಪರಂಪರೆಯಲ್ಲಿ ಅಗ್ರಗಣ್ಯರು. ಹತ್ತು ವಿವಿಗಳು, ನೂರಾರು ಸಂಸ್ಥೆಗಳು ಮಾಡುವ ಕಾರ್ಯವನ್ನು ಶಂಕರರೊಬ್ಬರೇ ಮಾಡಿದರು. ದೇಶದ ಸಂಸ್ಕೃತಿಗೆ, ವ್ಯಕ್ತಿಯ ವೈಯಕ್ತಿಕ ಉನ್ನತಿಗೆ ಅವರು ನೀಡಿದ ಕೊಡುಗೆ ಅಪಾರ. ರಾಜ ಗುರುವಾಗಿ ಆಡಳಿತಕ್ಕೆ ವ್ಯಾವಹಾರಿಕ ಚೌಕಟ್ಟನ್ನು ಹಾಕಿಕೊಟ್ಟವರು. ಆಧ್ಯಾತ್ಮದ ವಿವಿಧ ಮಜಲುಗಳನ್ನು ಸಮಾಜದ ಮುಂದೆ ತೆರೆದಿಟ್ಟರು. ಯತಿ ಪರಂಪರೆಯನ್ನು ಸ್ವತಃ ಆಚರಿಸಿ ತೋರಿಸಿಕೊಟ್ಟರು. ಹಿಂದಿರುಗಿ ಬಾರದ ಪ್ರಯಾಣದಲ್ಲಿ, ಅತ್ಯಂತ ಕಿರಿಯ ವಯಸ್ಸಿನಲ್ಲೇ ದೇಶಕ್ಕೆ ಬೆಳಕು ತೋರಿಸಿದರು. ಅಂಥ ಶಂಕರರ ಅವಿಚ್ಛಿನ್ನ ಪರಂಪರೆಯ ಪೀಠಾಧಿಪತಿಗಳಾಗಿ ರಾಘವೇಶ್ವರ ಶ್ರೀಗಳು ದೇಶವೇ ಬೆರಗುಗೊಳ್ಳುವ ಸಾಧನೆಯ ಪಥದಲ್ಲಿ ಮುನ್ನಡೆದಿದ್ದಾರೆ” ಎಂದು ಹೇಳಿದರು.
ಗೊಂದಲದ ಸನ್ನಿವೇಶದಲ್ಲಿ ದೇಶಕ್ಕೆ ಬೆಳಕಾದ ಶಂಕರರು ಮೂರು ಬಾರಿ ಪಾದ ಸ್ಪರ್ಶ ಮಾಡಿದ ಪುಣ್ಯ ಪ್ರದೇಶದಲ್ಲಿ ಹಿಂದೂ ಸಂಸ್ಕೃತಿ, ಸನಾತನ ಪರಂಪರೆ ಮತ್ತೆ ಪುನರುತ್ಥಾನವಾಗುತ್ತಿದೆ. ಮಂದಿರ, ಸ್ವಾಮೀಜಿ ಅವರ ವಸತಿ, ಮುಂದಿನ ಪೀಳಿಗೆಯನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಕಾರ್ಯ ನಡೆಯಲಿ ಎಂದು ಆಶಿಸಿದರು. ಮುಂದಿನ ಪೀಳಿಗೆ ದೇಶದ ನೈಜ ಆಸ್ತಿ. ಕೆಲ ಶತಮಾನಗಳ ಕಾಲ ದೇಶದ ಜ್ಞಾನ ಪರಂಪರೆಗೆ ಅಡ್ಡಿ ಆತಂಕಗಳು ಬಂದೊಡ್ಡಿದವು. ಆದರೆ ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ಮತ್ತೊಂದು ಸಾಮಾಜಿಕ ಕ್ರಾಂತಿ, ಜ್ಞಾನಕ್ರಾಂತಿ ಕುಡಿಯೊಡೆದಿದೆ ಎಂದು ಅಭಿಪ್ರಾಯಪಟ್ಟರು.
“ನಾವು ಸಮಾಜಕ್ಕೆ, ಜಗತ್ತಿಗೆ ನೀಡಬೇಕಾದ್ದು ಬಹಳಷ್ಟಿದೆ ಎಂಬ ಜ್ಞಾನೋದಯ ಪ್ರತಿಯೊಬ್ಬರಲ್ಲೂ ಆಗುತ್ತಿದೆ. ರಾಜ್ಯದಲ್ಲಿ ಸಮಾಜಕ್ಕೆ ಜ್ಞಾನ ಹಂಚುವ ಕಾರ್ಯವನ್ನು ಮಠ ಮಂದಿರಗಳು ಮಾಡುತ್ತಿದ್ದು, 80 ಸಾವಿರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಮಠಗಳು ನಡೆಸುತ್ತಿವೆ. ಜಗತ್ತಿನ ಒಳಿತಿಗಾಗಿ ನಾವು ಸುಶಿಕ್ಷಿತರಾಗಬೇಕು ಎಂಬ ಭಾವನೆಯಲ್ಲಿ ಯುವ ಸಮುದಾಯದಲ್ಲಿ ಬೆಳೆಸುವ ಮೂಲಕ ಅವರನ್ನು ದೇಶದ ಆಸ್ತಿಯಾಗಿ ರೂಪಿಸಬೇಕು” ಎಂದು ಹೇಳಿದರು.
“ವಿವಿವಿಯಲ್ಲಿ ರೂಪುಗೊಳ್ಳುವ ಮಕ್ಕಳು ಹೊರಗಿನ ಕಲ್ಮಶವನ್ನು ಅಂಟಿಸಿಕೊಳ್ಳದೇ ಪರಿಶುದ್ಧವಾಗಿರುತ್ತಾರೆ. ಇವರು ಸಮಾಜದ ಆಸ್ತಿಗಳಾದಾಗ ಇಂಥ ಸಂಸ್ಥೆ ಬೆಳಗುತ್ತವೆ. ಆಸ್ತಿ, ಸಂಪತ್ತಿಗಿಂತ ಹೆಚ್ಚಾಗಿ ನಾವು ವಾರಸಿಕೆಯನ್ನು ಬಿಟ್ಟುಹೋಗಬೇಕು. ಹತ್ತಾರು, ನೂರಾರು ಪೀಳಿಗೆಗಳು ನೆನಪು ಮಾಡಿಕೊಳ್ಳುವಂಥ ವಾರಸಿಕೆಯನ್ನು ಬಿಟ್ಟುಹೋಗಬೇಕು. ಇಡೀ ವಿಶ್ವದ ದೃಷ್ಟಿ ಇಂದು ಭಾರತದ ಮೇಲೆ ನೆಟ್ಟಿದೆ. 12 ಸಾವಿರ ಮಂದಿ ಭಾರತದಲ್ಲಿ ಯೋಗ ಕಲಿತು ವಿಶ್ವದಾದ್ಯಂತ ಶಿಕ್ಷಣ ನೀಡುತ್ತಿದ್ದಾರೆ. ಲಕ್ಷಕ್ಕಿಂತ ಹೆಚ್ಚು ಮಂದಿ ಸಂಸ್ಕೃತ ವಿದ್ವಾಂಸರು ವಿಶ್ವದಾದ್ಯಂತ ಸಂಸ್ಕೃತದ ಕಂಪು ಪಸರಿಸುತ್ತಿದ್ದಾರೆ. ವಿಶ್ವದ 27 ವಿವಿಗಳಲ್ಲಿ ಸಂಸ್ಕೃತ ಪೀಠಗಳಿವೆ. ಭಾರತದಲ್ಲಿ ಇಂಥ ವಿಶಿಷ್ಟ ಪ್ರಯೋಗಗಳು ನಡೆಯುತ್ತಿರುವುದರಿಂದ ಜಗತ್ತಿನಲ್ಲಿ ಭಾರತಕ್ಕೆ ಗೌರವ ದೊರಕುತ್ತಿದೆ. ಇದೆಲ್ಲ ಸಾಧ್ಯವಾಗಿರುವುದು ಈ ಬಗೆಯ ಚೈತನ್ಯ ಕೇಂದ್ರಗಳ ಮೂಲಕ ಎಂದು ವಿಶ್ಲೇಷಿಸಿದರು.
ಇದನ್ನೂ ಓದಿ | Anushka Shetty: ಅನುಷ್ಕಾ ಶೆಟ್ಟಿ ಹೆಸರಿನಲ್ಲಿ ನಿರ್ಮಾಪಕರಿಂದ 51 ಲಕ್ಷ ರೂ. ಪೀಕಿದ ಆಸಾಮಿ!
ಇಡೀ ದೇಶಕ್ಕೇ ಚೈತನ್ಯ ಮೂಡಿಸುವ ಕೇಂದ್ರವಾಗಿ ವಿವಿವಿ ಮುಂದಿನ ದಿನಗಳಲ್ಲಿ ಬೆಳಗಲಿದೆ. ಇಲ್ಲಿನ ಮಕ್ಕಳು ಕುಟುಂಬ, ಸಮಾಜ, ಭಾರತ, ವಿಶ್ವದಲ್ಲಿ ತಾವು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ತಿಳಿದುಕೊಂಡು ಕರ್ತವ್ಯಪರತೆಯಿಂದ ಕಾರ್ಯ ನಿರ್ವಹಿಸುವ ಪೀಳಿಗೆಯಾಗಿ ರೂಪುಗೊಳ್ಳಲಿ. ಕರ್ತವ್ಯವೇ ಜೀವನ ಎಂಬ ತತ್ತ್ವ ಬೋಧಿಸುವ ಇಂಥ ಕಾರ್ಯಕ್ಕೆ ಸಮಾಜ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಶಿಷ್ಯರ ಕೊಡುಗೆಯಿಂದಲೇ ನಿರ್ಮಾಣವಾದ ಸೇವಾ ಸೌಧ ನಮ್ಮೆಲ್ಲರ ಸೇವೆಯ ಜವಾಬ್ದಾರಿ ಬಗ್ಗೆ ಅರಿವು ಮೂಡಿಸುವ ಕರ್ತವ್ಯ ಸೌಧವಾಗಿ, ರಾಷ್ಟ್ರಸಂಸ್ಕಾರದ ಪ್ರೇರಣಾ ಕೇಂದ್ರವಾಗಿ ಬೆಳಗಲಿ ಎಂದು ರಾಜ್ಯ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಶಿಸಿದರು.
ಭಾರತ ಇಂದು ಇಡೀ ವಿಶ್ವಕ್ಕೆ ನೇತೃತ್ವ ನೀಡಬಲ್ಲ ಸಮರ್ಥ ರಾಷ್ಟ್ರವಾಗಿ ತಲೆ ಎತ್ತಿದ್ದು, ವಿಶ್ವಕ್ಕೇ ಮಾರ್ಗದರ್ಶನ ನೀಡುವ ಆ ಅರ್ಹತೆಯನ್ನು ನಾವು ಪಡೆಯಬೇಕು. ಇದಕ್ಕೆ ಪರಿಶ್ರಮ ಬೇಕು. ಹಣ ಗಳಿಕೆಯೇ ಜೀವನ ಎಂಬ ಭ್ರಮೆಯಿಂದ ಹೊರಬಂದು ನಮ್ಮನ್ನು ರಾಷ್ಟ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ವಿವಿವಿ ಇಂಥ ರಾಷ್ಟ್ರ ವೀರರನ್ನು ರೂಪಿಸುವ ಚೈತನ್ಯ ಕೇಂದ್ರ ಎಂದು ಬಣ್ಣಿಸಿದರು.
ತಕ್ಷಶಿಲೆ, ನಳಂದದ ಮಾದರಿಯಲ್ಲಿ ಗೋಕರ್ಣ ವಿವಿವಿ ಸಜ್ಜಾಗುತ್ತಿವೆ. ಇಲ್ಲಿ ಮಕ್ಕಳು ಭವಿಷ್ಯದ ಸವಾಲು ಎದುರಿಸಲು ಸಜ್ಜಾಗಬೇಕು. ಪರಿವರ್ತನೆಯ ಹರಿಕಾರರು ಇಲ್ಲಿ ಸಜ್ಜಾಗಬೇಕು. ನಂಬಿಕೆಯನ್ನೇ ಘಾಸಿಗೊಳಿಸುವಂಥ ಕೃತ್ಯಗಳು ನಡೆಯುತ್ತಿರುವ ನಡುವೆಯೇ ನಮ್ಮತನವನ್ನು ಕಾಪಾಡಿಕೊಂಡು ಮುನ್ನಡೆಯುವ ಮೂಲಕ ಅವರ ಬಾಯಿ ಮುಚ್ಚಿಸುವ ಕಾರ್ಯ ಆಗಬೇಕು ಎಂದು ಹೇಳಿದರು.
ಇದನ್ನೂ ಓದಿ | Navodaya School: ಕೈಕೊಟ್ಟ ನವೋದಯ ಶಾಲಾ ವೆಬ್‌ಸೈಟ್; ಅರ್ಜಿ ಸಲ್ಲಿಸಲು ಆಗದೆ ವಿದ್ಯಾರ್ಥಿಗಳು ಕಂಗಾಲು
ತಿರುವನಂತಪುರ ಅನಂತ ಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಪಟ್ಟೇರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕರಾದ ದಿನಕರ್ ಶೆಟ್ಟಿ, ಸುನೀಲ್ ನಾಯ್ಕ, ರೂಪಾಲಿ ನಾಯ್ಕ, ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಗುರುಮೂರ್ತಿ, ಗೋವಾ ಶಾಸಕ ಗೋವಿಂದ ನಾಯ್ಕ, ಪಶ್ಚಿಮಘಟ್ಟ ಕಾರ್ಯಪಡೆಯ ಗೋವಿಂದ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಮೋಹನ್ ಭಾಸ್ಕರ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಸಭಾಪೂಜೆ ನೆರವೇರಿಸಿದರು. ಕಾರ್ಯದರ್ಶಿ ನಾಗರಾಜ ಭಟ್ ಪಿದಮಲೆ, ವಿವಿವಿ ಕೇಂದ್ರ ಸಮಿತಿಯ ಅಧ್ಯಕ್ಷ ಡಿ.ಡಿ.ಶರ್ಮಾ, ಮಾತೃತ್ವಂ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ವೇಣು ವಿಘ್ನೇಶ್, ಶ್ರೀಮಠದ ಪ್ರಸಣಾಧಿಕಾರಿ ಸಂತೋಷ್ ಹೆಗಡೆ, ಲೋಕ ಸಂಪರ್ಕಾಧಿಕಾರಿ ಹರಿಕೃಷ್ಣ ಪೆರಿಯಾಪು, ವಿಶ್ರಾಂತ ಸಿಇಒ ಕೆ.ಜಿ.ಭಟ್, ಪ್ರಮೋದ್ ಹೆಗಡೆ, ಡಾ.ವೈ.ವಿ.ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಜನ್ನು, ಮಂಜುನಾಥ ಸುವರ್ಣ ಗದ್ದೆ, ಶ್ರೀಕಾಂತ್ ಪಂಡಿತ್ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ | Prajadhwani: ಮೋದಿ ಕೊಟ್ಟ ಭರವಸೆಗಳಲ್ಲಿ ಒಂದಾದರೂ ಈಡೇರಿಸಿದ್ದಾರಾ: ಡಿ.ಕೆ. ಶಿವಕುಮಾರ್
ಉತ್ತರ ಕನ್ನಡ
Mundagoda News: ಮುಂಡಗೋಡದ ಅಗಡಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ 3.39 ಲಕ್ಷ ರೂ. ವಶ
Mundagoda News: ಹಸನಸಾಬ ಎಂಬಾತ ತಮ್ಮ ಸ್ಕೂಟಿಯಲ್ಲಿ ದಾಖಲೆ ಇಲ್ಲದೆ 3.39 ಲಕ್ಷ ರೂ. ವನ್ನು ತೆಗೆದುಕೊಂಡು ಹುಬ್ಬಳ್ಳಿಯಿಂದ ಮುಂಡಗೋಡಕ್ಕೆ ಬರುತ್ತಿದ್ದ ವೇಳೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮುಂಡಗೋಡ: ದಾಖಲೆ ಇಲ್ಲದೆ 3.39 ಲಕ್ಷ ರೂಪಾಯಿಯನ್ನು ಸಾಗಿಸುತ್ತಿದ್ದ ವೇಳೆ ಅಧಿಕಾರಿಗಳ ತಂಡ ತಾಲೂಕಿನ ಅಗಡಿ ಚೆಕ್‌ಪೋಸ್ಟ್‌ನಲ್ಲಿ (Agadi Check Post) ಶುಕ್ರವಾರ (ಮಾ.31) ವಶಕ್ಕೆ ಪಡೆದಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕಿನ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿತ್ತು. ಪಟ್ಟಣದ ನಿವಾಸಿ ಹಸನಸಾಬ ಎಂಬುವವರು ತಮ್ಮ ಸ್ಕೂಟಿಯಲ್ಲಿ ದಾಖಲೆ ಇಲ್ಲದೆ 3.39 ಲಕ್ಷ ರೂ. ವನ್ನು ತೆಗೆದುಕೊಂಡು ಹುಬ್ಬಳ್ಳಿಯಿಂದ ಮುಂಡಗೋಡಕ್ಕೆ ಬರುತ್ತಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ತಂಡ ಅಗಡಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಹಣ ಪತ್ತೆಯಾಗಿದೆ. ಯಾವುದೇ ದಾಖಲೆ ಇಲ್ಲದ ಕಾರಣ 3.39 ಲಕ್ಷ ರೂ.ವನ್ನು ವಶಕ್ಕೆ ಪಡೆಯಲಾಗಿದೆ.
ಇಲ್ಲಿನ ಸಿಪಿಐ ಎಸ್.ಎಸ್. ಸಿಮಾನಿ ಹಾಗೂ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚುನಾವಣೆ ಆಯೋಗದ ನಿರ್ದೇಶನದಂತೆ ಅಧಿಕಾರಿಗಳ ತಂಡ ಕಟ್ಟುನಿಟ್ಟಾಗಿ ವಾಹನಗಳ ತಪಾಸಣೆ ನಡೆಸುತ್ತಿದೆ.
ಇದನ್ನೂ ಓದಿ: Viral Video: ಹುಡುಗನ ಕೈಯಲ್ಲಿದ್ದ ತಿಂಡಿ ತಿನ್ನಲು ಬಾಯಿ ಹಾಕಿದ ನಾಯಿ; ನಾಲಿಗೆಗೆ ಸಿಕ್ಕ ಟಿವಿ ಪರದೆ ನೆಕ್ಕಿ, ವಾಪಸ್ ಬಂತು!
ಪೊಲೀಸರ ಹುಂಡಿ ಸೇರಿದ ದೇವರ ಹುಂಡಿಗೆ ಹಾಕಲು ತಂದಿದ್ದ 2.5 ಲಕ್ಷ ರೂಪಾಯಿ!
ಚಿಕ್ಕಮಗಳೂರು: ಇದೇ ಮೇ 10ರಂದು ವಿಧಾನಸಭಾ ಚುನಾವಣೆ (Karnataka Election 2023) ನಡೆಯಲಿರುವುದರಿಂದ ರಾಜ್ಯಾದ್ಯಂತ ನೀತಿಸಂಹಿತೆ ಜಾರಿಯಾಗಿದ್ದು, ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್ ಬಳಿ ವಾಹನ ತಪಾಸಣೆ ಮಾಡುವಾಗ ದಾಖಲೆ ಇಲ್ಲದ ಹಣ ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಹೀಗೆ ದಾಖಲೆ ಇಲ್ಲದ ಕೋಟ್ಯಂತರ ರೂಪಾಯಿಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಇಷ್ಟಾದರೂ ಅಕ್ರಮಗಳು ನಡೆಯುತ್ತಲೇ ಇವೆ. ಈ ಮಧ್ಯೆ ದೇವಸ್ಥಾನದ ಹುಂಡಿಗೆ ಹಾಕಲು ಎಂದು ತೆಗೆದುಕೊಂಡು ಹೊರಟಿದ್ದ ವೈದ್ಯರೊಬ್ಬರ ಹಣವು ಪೊಲೀಸರ ಹುಂಡಿ ಸೇರುವಂತಾಗಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಹಣ ಪತ್ತೆಯಾಗಿದೆ. ಧರ್ಮಸ್ಥಳ-ಕಟೀಲ್ ದೇವಸ್ಥಾನದ ಹುಂಡಿಗೆ ಹಾಕಲು ತಂದಿದ್ದ 2.50 ಲಕ್ಷ ರೂಪಾಯಿಯು ಈಗ ಪೊಲೀಸರ ವಶದಲ್ಲಿದೆ. ಪಾವಗಡ ಮೂಲದ ವೈದ್ಯಾಧಿಕಾರಿಯೊಬ್ಬರು ದೇವರ ಹುಂಡಿಗಾಗಿ ಪ್ರತಿದಿನ ಸಂಗ್ರಹಿಸಿ ಇಡುತ್ತಿದ್ದ ಹಣವನ್ನು ತಮ್ಮ ಫಾರ್ಚುನರ್ ಕಾರಿನಲ್ಲಿ ಕೊಂಡೊಯ್ಯುತ್ತಿದ್ದರು.
ಈ ಹಣವನ್ನು ಧರ್ಮಸ್ಥಳ ಮತ್ತು ಕಟೀಲು ದೇವಸ್ಥಾನಕ್ಕೆ ತೆರಳಿ ದೇವರ ಹುಂಡಿಗೆ ಸಮರ್ಪಣೆ ಮಾಡುವವರಿದ್ದರು. ಆದರೆ, ಈ ವೇಳೆ ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಕಾರನ್ನು ತಡೆದಿದ್ದಾರೆ. ತಪಾಸಣೆ ನಡೆಸಿದಾಗ 2.50 ಲಕ್ಷ ರೂಪಾಯಿ ಇರುವುದು ಪತ್ತೆಯಾಗಿದೆ. ಇದಕ್ಕೆ ದಾಖಲೆಯನ್ನು ಪೊಲೀಸರು ಕೇಳಿದಾಗ, ಇದು ದೇವರಿಗೆ ಹಾಕಲೆಂದು ಎತ್ತಿಟ್ಟಿರುವ ಹಣವಾಗಿದ್ದು, ಇದಕ್ಕೆ ದಾಖಲೆ ಇಲ್ಲ ಎಂದು ಅವರು ಹೇಳಿದ್ದಾರೆ. ಹೀಗಾಗಿ ಸಂಪೂರ್ಣ ಹಣವನ್ನು ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಖಲೆ ಇಲ್ಲದೆ 50 ಸಾವಿರ ರೂಪಾಯಿವರೆಗೆ ಮಾತ್ರ ಹಣ ಸಾಗಾಟಕ್ಕೆ ಅವಕಾಶ ಇದೆ. ಆದರೆ, ಇವರ ಬಳಿ 2.50 ಲಕ್ಷ ರೂಪಾಯಿ ಇರುವುದರಿಂದ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಕಲಬುರಗಿಯಲ್ಲಿ 1 ಕೋಟಿ ರೂಪಾಯಿ ಜಪ್ತಿ
ಕಲಬುರಗಿ: ತಾಲೂಕಿನ ಅಫಜಲಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪರತಾಬಾದ್ ಚೆಕ್‌ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಾಟ ಮಾಡಲಾಗುತ್ತಿದ್ದ 1 ಕೋಟಿ ರೂಪಾಯಿ ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರದ ನಿವಾಸಿ ರವಿ ಮುಡಬೂಳ ಎಂಬುವವರು ಯಾವುದೇ ದಾಖಲೆ ಇಲ್ಲದೆ ಕಾರಿನಲ್ಲಿ ಹಣ ಕೊಂಡ್ಯೊಯುತ್ತಿದ್ದರು. ಸದ್ಯ ಒಂದು ಕೋಟಿ ರೂಪಾಯಿ ಜತೆಗೆ ರವಿ ಅವರನ್ನೂ ಚುನಾವಣಾಧಿಕಾರಿಗಳು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಇಷ್ಟು ಮೊತ್ತದ ಹಣವನ್ನು ಎಲ್ಲಿಂದ, ಎಲ್ಲಿಗೆ ಸಾಗಾಟ ಮಾಡಲಾಗುತ್ತಿದೆ. ಯಾವ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಪರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಉತ್ತರ ಕನ್ನಡ
Sirsi News: ಪಕ್ಷದಲ್ಲಿ ಅಭದ್ರತೆ ಇದ್ದವರು ಮಾತ್ರ ಬೇರೆ ಪಕ್ಷದವರನ್ನು ಕರೆಯುತ್ತಾರೆ: ಸಚಿವ ಸುನೀಲ್ ಕುಮಾರ್
Sirsi News: ಕಾಂಗ್ರೆಸ್‌ನಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಅಭದ್ರತೆ ಕಾಣುತ್ತಿದೆ. ಅದಕ್ಕೆ ಬೇರೆಯವರನ್ನು ಪಕ್ಷಕ್ಕೆ ಕರೆಯುತ್ತಿದ್ದಾರೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಶಿರಸಿ: ಪಕ್ಷದಲ್ಲಿ ಅಭದ್ರತೆ ಇದ್ದವರು ಬೇರೆ ಪಕ್ಷದಲಿದ್ದವರನ್ನು ಕರೆಯುತ್ತಾರೆ. ಭದ್ರತೆ ಇದ್ದವರು ಕರೆಯೋದಿಲ್ಲ ಎನ್ನುವ ಮೂಲಕ ಬಿಜೆಪಿ ಶಾಸಕರನ್ನು ಡಿ.ಕೆ. ಶಿವಕುಮಾರ್ ಅವರು ತಮ್ಮ ಪಕ್ಷದತ್ತ ಸೆಳೆಯುವ ತಂತ್ರಕ್ಕೆ ಇಂಧನ ಸಚಿವ ಸುನೀಲ್ ಕುಮಾರ್ ಟಾಂಗ್ ನೀಡಿದರು.
ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರು ಸ್ಪೀಕರ್ ಕಾಗೇರಿ ಅವರ ಕಚೇರಿಗೆ ಭೇಟಿ ನೀಡಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, “ಕಾಂಗ್ರೆಸ್‌ನಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಅಭದ್ರತೆ ಕಾಣುತ್ತಿದೆ. ಅದಕ್ಕೆ ಬೇರೆಯವರನ್ನು ಪಕ್ಷಕ್ಕೆ ಕರೆಯುತ್ತಿದ್ದಾರೆ. ಕಾಂಗ್ರೆಸ್ ನಾಯಕರು, ಶಾಸಕರು ಬೇರೆ ಬೇರೆ ಕಡೆ ಅಲೆದಾಡುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಅಭದ್ರತೆ, ಅಸ್ತಿತ್ವಕ್ಕಾಗಿ ಹೋರಾಟ ಎಲ್ಲವೂ ಅವರ ಪಾರ್ಟಿಯಲ್ಲೇ ನಡೆಯುತ್ತಿದೆ” ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.
ಇದನ್ನೂ ಓದಿ: Siddaramaiah: ಕೋಲಾರದಿಂದಲೂ ಸಿದ್ದರಾಮಯ್ಯ ಸ್ಪರ್ಧೆ: ರಾಹುಲ್ ಗಾಂಧಿಯಿಂದಲೇ ಘೋಷಣೆಗೆ ಮುಹೂರ್ತ?
“ನಾವು ಖುಷಿಯಿಂದ ರಾಜ್ಯಾದ್ಯಂತ ಸಂಕಲ್ಪ ಯಾತ್ರೆ ಮುಗಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಬಹುಮತದದೊಂದಿಗೆ ಸರ್ಕಾರ ರಚನೆಗೆ ಚಿಂತನೆ ನಡೆಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಜವಾಬ್ದಾರಿಯುತ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗಿದೆ. ಗ್ರಾಮೀಣ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಪದಾಧಿಕಾರಿಗಳ ಅಭಿಪ್ರಾಯವನ್ನು ಸಂಗ್ರಹ ಮಾಡಲಾಗಿದೆ. ಟಿಕೆಟ್ ನೀಡುವ ವೇಳೆಗೆ ಕಾರ್ಯಕರ್ತರ ಅಭಿಪ್ರಾಯ ಕೂಡ ಮಾನದಂಡವಾಗಲಿದೆ” ಎಂದರು.
ಇದನ್ನೂ ಓದಿ: Viral Video: ಹುಡುಗನ ಕೈಯಲ್ಲಿದ್ದ ತಿಂಡಿ ತಿನ್ನಲು ಬಾಯಿ ಹಾಕಿದ ನಾಯಿ; ನಾಲಿಗೆಗೆ ಸಿಕ್ಕ ಟಿವಿ ಪರದೆ ನೆಕ್ಕಿ, ವಾಪಸ್ ಬಂತು!
ಉತ್ತರ ಕನ್ನಡ
Karwar News: ವಿಜೃಂಭಣೆಯ ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮ ರಥೋತ್ಸವ
Karwar News: ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಧಾರ್ಮಿಕ ಪೂಜಾ ವಿಧಿವಿಧಾನಗಳು ಮಾ.23 ರಿಂದ ಆರಂಭಗೊಂಡಿದ್ದು, ಇಂದು ಕೊನೆಗೊಳ್ಳಲಿದೆ. ಶುಕ್ರವಾರ ಸೂರ್ಯೋದಯದಿಂದಲೇ ಸಾವಿರಾರು ಭಕ್ತರು ರಥ ಕಾಣಿಕೆಗಾಗಿ ಸರತಿ ಸಾಲಿನಲ್ಲಿ ನಿಂತು ಫಲಪುಷ್ಪವನ್ನು ಶ್ರೀದೇವರಿಗೆ ಅರ್ಪಿಸಿದರು.
ಕಾರವಾರ: ಭಟ್ಕಳ ಪಟ್ಟಣದ ಗ್ರಾಮ ದೇವರಾದ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮ ರಥೋತ್ಸವವು ಸಾವಿರಾರು ಭಕ್ತಾಧಿಗಳ ಜಯಘೋಷಗಳ ನಡುವೆ ವೈಭವಯುತವಾಗಿ ಗುರುವಾರ (ಮಾ.30) ರಾಮ ನವಮಿಯಂದು ಸಂಪನ್ನಗೊಂಡಿತು.
ಮಾ.23 ರಿಂದ ಆರಂಭಗೊಂಡ ಧಾರ್ಮಿಕ ಪೂಜಾ ವಿಧಿವಿಧಾನಗಳು ಮಾ.31 ರವರೆಗೆ ನಡೆಯಲಿದೆ. ಮಹಾರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಹೋಮ ಹವನಗಳನ್ನು ವಿಧಿವತ್ತಾಗಿ ನಡೆಸಲಾಯಿತು. ಸೂರ್ಯೋದಯದಿಂದಲೇ ಸಾವಿರಾರು ಭಕ್ತರು ರಥ ಕಾಣಿಕೆಗಾಗಿ ಸರತಿ ಸಾಲಿನಲ್ಲಿ ನಿಂತು ಫಲಪುಷ್ಪವನ್ನು ಶ್ರೀದೇವರಿಗೆ ಅರ್ಪಿಸಿದರು.
ಇದನ್ನೂ ಓದಿ: ಮೊಗಸಾಲೆ ಅಂಕಣ: ಮೋದಿ, ಖರ್ಗೆ ಹಣಾಹಣಿಗೆ ವೇದಿಕೆ ಸಜ್ಜು
ತಾಲೂಕಿನ ಗ್ರಾಮೀಣ ಭಾಗಗಳಿಂದ ಹಾಗೂ ಹೊರ ಊರುಗಳಿಂದ ಆಗಮಿಸಿದ ಸಹಸ್ರಾರು ಜನರು ಪೂಜೆ ಪುನಸ್ಕಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ ರಥೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಜೆ 5.35ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ವಾಡಿಕೆಯಂತೆ ಶಿರ್ಕಿನ ಅನ್ಸಾರಿ, ಶಾಬಂದ್ರಿ ಮನೆ ಮತ್ತು ಜೈನ ಮನೆತನಕ್ಕೆ ಆಮಂತ್ರಣ ನೀಡಲಾಯಿತು. ಮಹಾರಥವನ್ನು ದೇವಸ್ಥಾನದ ಎದುರಿನ ಹೂವಿನ ಪೇಟೆಯಿಂದ ಮಾರಿಗುಡಿಯ ಮೂಲಕ ಜನತಾ ಬ್ಯಾಂಕಿನ ಎದುರಿನಿಂದ ಸಾವಿರಾರು ಭಕ್ತಾದಿಗಳ ಜಯ ಘೋಷದೊಂದಿಗೆ ರಥವನ್ನು ಎಳೆಯಲಾಯಿತು.
ಇದನ್ನೂ ಓದಿ: New Virus: ಕೊರೊನಾ ಬೆನ್ನಲ್ಲೇ ಪತ್ತೆಯಾಯ್ತು ಮತ್ತೊಂಡು ಡೆಡ್ಲಿ ವೈರಸ್! ಭಾರತದಲ್ಲೇ ಮೊದಲ ಕೇಸ್!
ರಥೋತ್ಸವದ ಸಂದರ್ಭದಲ್ಲಿ 20 ಸಾವಿಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು. ಈ ಬಾರಿ ಡೊಳ್ಳು ಕುಣಿತ, ರೇಡಿಯೋ ಕಲಾವಿದ ಉದಯಪ್ರಭು ತಂಡದಿಂದ ಭಜನೆ, ವಾದ್ಯಗೋಷ್ಠಿ ಜನಮನ ಸೆಳೆದವು. ಆಡಳಿತಾಧಿಕಾರಿ ಮಮತಾ ದೇವಿ ಎಸ್, ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕರಾದ ಮಂಕಾಳು ವೈದ್ಯ, ಜೆ.ಡಿ ನಾಯ್ಕ, ಬೆಂಗಳೂರು ಕಾಸ್ಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಈಶ್ವರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಠ್ಠಲ್ ನಾಯ್ಕ ಮತ್ತಿತರ ಗಣ್ಯರು ದೇವರಿಗೆ ಪೂಜೆ ಸಲ್ಲಿಸಿದರು.
ದೇವಸ್ಥಾನದ ಶ್ರೀಧರ ಮೊಗೇರ ಹಾಗೂ ಸರ್ವ ಸದಸ್ಯರು ಹಾಜರಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯ ಕುಮಾರ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಉಪ ವಿಭಾಗದ ಡಿವೈಎಸ್‌ಪಿ ಶ್ರೀಕಾಂತ ನೇತೃತ್ವದಲ್ಲಿ ಸಿಪಿಐ, ಪಿಎಸ್‌ಐ ಸುರಕ್ಷತೆಯನ್ನು ಒದಗಿಸಿದ್ದು ಬ್ರಹ್ಮ ರಥೋತ್ಸವವು ಶಾಂತಿಯುತವಾಗಿ ಜರುಗಿತು.
ಇದನ್ನೂ ಓದಿ: Viral News : ನೂಡಲ್ಸ್‌ನಿಂದಲೇ ರಸ್ತೆ ಗುಂಡಿ ಮುಚ್ಚುವ ವ್ಯಕ್ತಿ! ವೈರಲ್ ಆಗ್ತಿದೆ ಈತನ ಕೆಲಸ
ಉತ್ತರ ಕನ್ನಡ
Sirsi News: ಏ.6 ರಂದು ಮಂಜುಗುಣಿಯ ಪುರಾಣ ಪ್ರಸಿದ್ಧ ವೆಂಕಟರಮಣ ದೇವರ ರಥೋತ್ಸವ
Sirsi News: ಮಂಜುಗುಣಿಯ ವೆಂಕಟರಮಣ ದೇವರ ರಥೋತ್ಸವ ಏ.6 ರಂದು ನಡೆಯಲಿದೆ. ಅಂದು ರಾತ್ರಿ ರಥಾವರೋಹಣ, ವಸಂತ ಪೂಜೆ ನಡೆಯಲಿದೆ.
ಶಿರಸಿ: ತಾಲೂಕಿನ ಮಂಜುಗುಣಿಯ (Manjuguni) ಪುರಾಣ ಪ್ರಸಿದ್ಧ ವೆಂಕಟರಮಣ ದೇವರ ರಥೋತ್ಸವ ಏ.6ರಂದು ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಏ.1 ರಂದು ಬೆಳಗ್ಗೆ ಧ್ವಜ ಪೂಜೆ, ಧ್ವಜಾರೋಹಣ, ಧ್ವಜ ಬಲಿ, ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಸಂಜೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ರತ್ನ ಮಂಟಪೋತ್ಸವ, ಏ.2 ರಂದು ಬೆಳಗ್ಗೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಮಧ್ಯಾಹ್ನ ಸೂರ್ಯಪ್ರಭಾ ಉತ್ಸವ, ಸಂಜೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಗಜ ಯಂತ್ರೋತ್ಸವ, ಏ.3 ರಂದು ಬೆಳಗ್ಗೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಮಧ್ಯಾಹ್ನ ಸೂರ್ಯಪ್ರಭಾ ಉತ್ಸವ, ಸಂಜೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಸಿಂಹ ಯಂತ್ರೋತ್ಸವ, ಏ.4 ರಂದು ಬೆಳಗ್ಗೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಮಧ್ಯಾಹ್ನ ಧನಲಕ್ಷ್ಮೀ ಪೂಜೆ, ಕಾಣಿಕೆ ಡಬ್ಬಿ ಪೂಜೆ, ಮುಸಲ ಪೂಜೆ ಚೂರ್ಣಿಕರಣ, ಸಂಜೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಶೇಷ ಯಂತ್ರೋತ್ಸವ ನಡೆಯಲಿದೆ.
ಇದನ್ನೂ ಓದಿ: K. Manju: ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಿಂದ ನಿರ್ಮಾಪಕ ಕೆ ಮಂಜು? ರಾಜಕೀಯ ಅಖಾಡಕ್ಕೆ ಎಂಟ್ರಿ?
ಏ.5 ರಂದು ಬೆಳಗ್ಗೆ ದೇವರ ವರ್ಧಂತಿ ಉತ್ಸವ, ಹಂಡೆ ಪೂಜೆ, ಪಾಕಸಿದ್ಧಿ, ಅನ್ನ ಸಂಗ್ರಹ, ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ವರ್ಧಂತಿ, ಮಹಾ ಸಂತರ್ಪಣೆ, ಮಧ್ಯಾಹ್ನ ಸೂರ್ಯಪ್ರಭಾ ಉತ್ಸವ, ರಾತ್ರಿ ಕ್ಷೇತ್ರ ಪ್ರಾಕಾರ ಬಲಿ, ಧ್ವಜ ಪ್ರಾಥನೆ, ಮಹಾ ದಂಡ ಬಲಿ, ವಿಶೇಷ ಭೂತರಾಜ ಬಲಿ, ಗರುಡ ಯಂತ್ರೋತ್ಸವ, ಏ.7 ರಂದು ಮಧ್ಯಾಹ್ನ ವಸಂತ ಪೂಜಾ ಸಂವಾದ, ಕಲಹ, ಅಂಕುರ ಸಮರ್ಪಣ ಪೂಜಾ ಪ್ರಸಾದ ವಿತರಣೆ, ಅವಭೃತ ತೀರ್ಥ ಸ್ನಾನ, ಪೂರ್ಣಾಹುತಿ, ಧ್ವಜಾರೋಹಣ, ಏ.19 ರಂದು ಅಮಾವಾಸ್ಯೆಯ ದಿನ ಸಂಪ್ರೋಕ್ಷಣ ಇರುತ್ತದೆ.
ಇದನ್ನೂ ಓದಿ: ಒಂದೇ ಕುಟುಂಬದ 6 ಮಂದಿಯ ಪ್ರಾಣ ತೆಗೆದ ಸೊಳ್ಳೆ ಬತ್ತಿ; ಹಾಸಿಗೆ ಮೇಲೆ ಬಿದ್ದು ಭುಗಿಲೆದ್ದ ಹೊಗೆ, ಬೆಂಕಿ
ರಥೋತ್ಸವ: ಏ.6 ರಂದು ಶ್ರೀ ದೇವರ ರಥೋತ್ಸವವಿದ್ದು, ಪ್ರಾತಃಕಾಲ ಮಹಾರಥ ಶುದ್ಧಿ, ರಥ ಬಲಿ, ರಥಾಗಮನ, ರಥಾರೋಹಣ, ಪೂಜಾ ಪ್ರಾರ್ಥನ ರಥನಯನ(ರಥ ಎಳೆಯುವುದು), ನಂತರ ಭಕ್ತರಿಗೆ ಶ್ರೀ ದೇವರ ದರ್ಶನವಿರುತ್ತದೆ. ಅಂದು ರಾತ್ರಿ 9 ಗಂಟೆಗೆ ಮರ್ಯಾದೆ ಕಾಯಿ ಹಂಚುವುದು, ರಥದ ಗಾಲಿಗೆ ಕಾಯಿ ಒಡೆಯುವುದು, ರಥಾವರೋಹಣ, ವಸಂತ ಪೂಜೆ ನಡೆಯಲಿದೆ.
ಇದನ್ನೂ ಓದಿ: Chenab Bridge | ಐಫೆಲ್ ಟವರ್‌ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ದೇಶ21 hours ago
Chenab Bridge | ಐಫೆಲ್ ಟವರ್‌ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ21 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್11 hours ago
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ22 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ22 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ12 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ13 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ15 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್