Gowri Habba 2022 | ಗಂಗೆ ಗೌರಿಯರು ಸವತಿಯರೇ? - Vistara News

ಗಣೇಶ ಚತುರ್ಥಿ

Gowri Habba 2022 | ಗಂಗೆ ಗೌರಿಯರು ಸವತಿಯರೇ?

ಗಂಗೆ ಮತ್ತು ಗೌರಿ ಪರಶಿವನ ಪತ್ನಿಯರು. ಸವತಿಯರಾದ ಇವರಿಬ್ಬರ ನಡುವೆ ಮಾತ್ಸರ್ಯ, ಸ್ಪರ್ಧೆ, ಜಗಳಗಳು ಇತ್ತೇ? ಇವರಿಬ್ಬರಲ್ಲಿ ಯಾರು ಶ್ರೇಷ್ಠ? ಗೌರಿ ಹಬ್ಬದ (Gowri Habba 2022) ಸಂದರ್ಭದಲ್ಲಿ ಈ ವಿಶೇಷ ಲೇಖನ ಓದಿ.

VISTARANEWS.COM


on

Gowri Habba 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸುಬ್ರಹ್ಮಣ್ಯ ಸೋಮಯಾಜಿ
ಪುರಾಣದ ಕಥೆಗಳಲ್ಲಿ ಗಂಗೆ ಗೌರಿ ಇಬ್ಬರು ಶಿವನ ಪತ್ನಿಯರು ಎಂಬ ಚಿತ್ರಣವಿದೆ. ಅದನ್ನೇ ಕಾವ್ಯಗಳಲ್ಲಿ, ಚಲನ ಚಿತ್ರಗಳಲ್ಲಿ ಸವತಿಯರಾಗಿ ತೋರಿಸುತ್ತಾರೆ. ನಾವು ಸಮಾಜದಲ್ಲಿ ಸವತಿಯರ ಮಾತ್ಸರ್ಯ, ಸ್ಪರ್ಧೆ, ಜಗಳಗಳು ಇವನ್ನೆಲ್ಲಾ ನೋಡಿದ್ದೇವೆ. ನಮ್ಮ ಈ ಅರಿವನ್ನು ಗಂಗೆ ಗೌರಿಯರ ವಿಷಯದಲ್ಲೂ ಭಾವಿಸುವುದಾಗಿದೆ. ಸಮಾಜದಲ್ಲಿ ಕಾಣುವ ಪತಿಗಳಂತೆ ಇವರಿಬ್ಬರನ್ನು ಸಂಭಾಳಿಸುವುದು ಶಿವನಿಗೆ ಕಷ್ಟವಾಗಿತ್ತು ಎಂದು ಭಾವಿಸುವಂತೆ ಚಿತ್ರಗಳಲ್ಲಿ, ನಾಟಕಗಳಲ್ಲಿ, ಕಾವ್ಯಗಳಲ್ಲಿ ಬಿಂಬಿಸಲಾಗಿದೆ. ಆದರೆ ದೇವತೆಗಳು ನಮ್ಮಂತೆ ರಸ್ತೆಗಳಲ್ಲಿ ಓಡಾಡುವ ಇಂದ್ರಿಯ ಕ್ಷೇತ್ರದ ಬದುಕುಗಳಲ್ಲ. ಎಲ್ಲ ಭೂತಗಳ ಅಂತರಂಗದಲ್ಲಿ ಪ್ರಕಾಶರೂಪವಾಗಿ ಕೆಲಸ ಮಾಡುವ, ಕೇವಲ ಜ್ಞಾನದ ಕಣ್ಣುಗಳಿಗೆ ಮಾತ್ರವೇ ಗೋಚರಿಸುವ ಶಕ್ತಿ ವಿಶೇಷಗಳು ಎಂಬುದನ್ನು ನಾವು ಮರೆಯ ಬಾರದು.

Gowri Habba 2022
ಸುಬ್ರಹ್ಮಣ್ಯ ಸೋಮಯಾಜಿ

ಗಂಗೆ ಗೌರಿಯರ ನೈಜ ಪರಿಚಯವಾದಾಗಲೇ ನಮ್ಮ ಭೌತಿಕ ಭಾವವು ದೈವಿಕ ಭಾವದಲ್ಲಿ ಪರ್ಯವಸಾನವಾದೀತು.
ಭಾದ್ರಪದಮಾಸದ ಶುಕ್ಲಪಕ್ಷದ ತದಿಗೆಯಂದು ಸಂಭ್ರಮದಿಂದ ಸ್ವರ್ಣಗೌರೀ ಪೂಜೆಯನ್ನು (Gowri Habba 2022) ಆಚರಿಸುತ್ತೇವೆ. ಜಗದಾದಿ ದಂಪತಿಗಳಾದ ಪಾರ್ವತೀಪರಮೇಶ್ವರರ ಮಕ್ಕಳೇ ನಾವೆಲ್ಲರೂ. ಅವರದಲ್ಲದ ಯಾವುದೂ ಸೃಷ್ಟಿಯಲ್ಲಿಲ್ಲ ಎಂಬುದು ಅವರನ್ನು ತಪಸ್ಸಿನ ಕಣ್ಣುಗಳಿಂದ ಕಂಡ ಜ್ಞಾನಿಗಳ ಅನುಭವದ ಮಾತು. ಹಾಗೆಂದೇ ತಾಯಿ ಪಾರ್ವತಿಯ ಪೂಜೆ ನಮ್ಮೆಲ್ಲರಿಗೂ ಪರಮ ಶ್ರೇಯಸ್ಕರ.

ಶಂಕರ ಭಗವತ್ಪಾದರು ಅವಳ ಸ್ವರೂಪವನ್ನು ಹೇಳುವಾಗ “ಚಾಂಪೇಯ ಗೌರಾರ್ಧ ಶರೀರಕಾಯೈʼʼ ಎಂದಿದ್ದಾರೆ. ಅವಳದು ಸಂಪಿಗೆ ಹೂವಿನ ಬಣ್ಣ. ಗೌರ ಎಂದರೆ ಸಂಪಿಗೆ ಅಥವಾ ಬಿಳಿಯ ಬಣ್ಣ. ಎಂದೇ ಅವಳಿಗೆ ಗೌರಿ ಎಂಬ ಹೆಸರು. ಆಕೆಯು ಸಂಹಾರಕಾರ್ಯ ಮಾಡುವಾಗ ಕಾಳಿ. ವಿದ್ಯಾಪ್ರದಾನ ಮಾಡುವಾಗ ಶ್ಯಾಮಲಾಮ್ಬಿಕಾ. ಹಾಗೆಯೇ ಸೌಮಾಂಗಲ್ಯ-ಸೌಭಾಗ್ಯ-ಸಂಪತ್ತನ್ನು ಅನುಗ್ರಹಿಸುವಾಗ ಸಂಪಿಗೆ ಹೂವಿನ ಬಣ್ಣದ, ಕೆಲವೊಮ್ಮೆ ಹಿಮ-ಶುಭ್ರವರ್ಣದ ಗೌರೀ. ತ್ರಿಲೋಕವ್ಯಾಪಿಯಾಗಿ ಜ್ಞಾನಪ್ರವಾಹವಾದಾಗ ಗಂಗೆ.

Gowri Habba 2022

ಹೇಗೆ ಒಬ್ಬನೇ ಪರಮಾತ್ಮನು ಸೃಷ್ಟಿ-ಸ್ಥಿತಿ-ಲಯ ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ಬ್ರಹ್ಮ-ವಿಷ್ಣು-ಮಹೇಶ್ವರ ರೂಪವನ್ನು ತಾಳುತ್ತಾನೆಯೋ ಹಾಗೆಯೇ ಒಬ್ಬಳೇ ಪರಾ ಪ್ರಕೃತಿ ರೂಪಿಣಿಯಾದ ತಾಯಿಯೇ ತಾನು ನಿರ್ವಹಿಸಬೇಕಾದ ಕೆಲಸಕ್ಕನುಗುಣವಾದ ನಾಮ-ರೂಪಗಳಿಂದ ಅಲಂಕೃತೆಯಾಗುತ್ತಾಳೆ. ಸರಸ್ವತೀ-ಲಕ್ಷ್ಮೀ-ಪಾರ್ವತೀ ಈ ರೂಪಗಳೆಲ್ಲ ಆ ಮಹಾ ತಾಯಿಯದೇ.

ಗೌರಿ ಪೂಜೆಯ ಪರ್ವದಲ್ಲಿ ಪೂಜಿಸಲ್ಪಡುವ ಗೌರಿಯ ವಿಗ್ರಹವನ್ನು ಮಾಡುವುದಕ್ಕೆ ಬೇಕಾದ ಮಣ್ಣನ್ನು ಗಂಗೆಯಿಂದ ತರುವ ವಾಡಿಕೆ ಇದೆ. ನಮ್ಮ ಪುರಾಣಗಳಲ್ಲಿ ಗಂಗೆ ಗೌರಿಯರು ಹಿಮವಂತನ ಪುತ್ರಿಯರು ಎಂದಿದೆ. ಗಂಗೆಯು ಹಿಮಾಲಯದಲ್ಲಿ ಹುಟ್ಟುವುದರಿಂದ ಹಾಗೆ ಕರೆಯಬಹುದು. ಹಾಗೆಯೇ ಗಂಗೆಯನ್ನು-ವಿಷ್ಣು ಪಾದದಿಂದ ಜನಿಸಿದವಳು, ಬ್ರಹ್ಮ ಕಮಂಡಲದ ತೀರ್ಥ, ಜಹ್ನು ಮಹರ್ಷಿಯ ಪುತ್ರಿ, ಭಗೀರಥನ ಪುತ್ರಿ-ಭಾಗೀರಥೀ ಎಂದೆಲ್ಲ ಆಯಾ ಕಥೆಗಳನ್ನು ಅನುಸರಿಸಿ ಕರೆಯುವುದನ್ನೂ ಕೇಳುತ್ತೇವೆ.

ಆದರೆ ತಾತ್ವಿಕವಾಗಿ ನೋಡಿದಾಗ ಗಂಗೆಯು ಬ್ರಹ್ಮವಿದ್ಯಾ ಪ್ರವಾಹವೇ ಆಗಿದೆ. ಆ ವಿದ್ಯಾ ಪ್ರವಾಹದ ಉಗಮ, ಭಗವಂತನ ಧಾಮವೇ. ಅಲ್ಲಿಂದಲೇ ಅದು ಲೋಕ ಕಲ್ಯಾಣಕ್ಕಾಗಿ ಹರಿದು ಬರುವುದು,ಪರಮೋನ್ನತವಾದ ಶಿಖರಗಳನ್ನು ಹೊಂದಿ ಯೋಗಿಗಳಿಗೆ ಧ್ಯಾನ ಭೂಮಿಯಾಗಿರುವ ಹಿಮವನ್ತನೂ ಪರಮಾತ್ಮನ ಪ್ರತಿನಿಧಿಯೇ ಆಗುತ್ತಾನೆ. ಹಾಗೆಯೇ ಬ್ರಹ್ಮಜ್ಞಾನಿಯ ಬಲಗಿವಿಯಿಂದ ವೇದವಿದ್ಯಾ ಮಾರ್ಗವಾಗಿ ಬಂದಾಗ ಆ ಮಹರ್ಷಿ ಪುತ್ರಿಯೂ ಹೌದು.

ಅಂತಹ ಜ್ಞಾನ ಪ್ರವಾಹವನ್ನು ಮಹಾ ತಪಸ್ಸಿನ ಸಾಧನೆಯಿಂದ ಪಡೆದು ಲೋಕಕ್ಕೆ ವಿನಿಯೋಗಿಸಿದ ಮಹಾಯೋಗಿ ಭಗೀರಥ. ಈ ಎಲ್ಲ ವಿಷಯಗಳೂ ಗಂಗೆಯು ಜ್ಞಾನದ ಪ್ರವಾಹಕ್ಕೆ ಮತ್ತೊಂದು ಹೆಸರು ಎಂದೇ ಸಾರುತ್ತಿವೆ. “ತ್ರಿಭುವನ ಜನನೀ ವ್ಯಾಪಿನೀ ಜ್ಞಾನಗಂಗಾ” ಎಂದು ಶ್ರೀ ಶಂಕರರೂ ಸಾರುತ್ತಾರೆ. ಹಾಗೆಯೇ ಗೌರಿಯೂ ಸಹ ಶಂಕರಾರ್ಧ ಶರೀರಿಣಿಯಾಗಿ ಬ್ರಹ್ಮವಿದ್ಯಾಸ್ವರೂಪಿಣಿಯೇ ಆಗಿದ್ದಾಳೆ. ಇಬ್ಬರೂ ಶಿವ ಸ್ವರೂಪಿಯಾದ ಭಗವಂತನ ಜ್ಞಾನವನ್ನು ವಿಸ್ತರಿಸುತ್ತಿರುವ ಅವನ ಮಡದಿಯರೇ.

ಹೀಗೆ ಗಂಗೆ ಗೌರಿ ಇಬ್ಬರೂ ಒಬ್ಬಳೇ ಪರಾ ಪ್ರಕೃತಿಯ ಎರಡು ಕವಲುಗಳು. ಇಬ್ಬರ ಸತ್ವ ಸಾರವೂ ಜ್ಞಾನವೇ. ಆದ್ದರಿಂದ ಅವರನ್ನು ಒಡಹುಟ್ಟಿದವರೆಂದು ಶಾಸ್ತ್ರಗಳು ಕರೆಯುತ್ತವೆ. ಅವರಲ್ಲಿ ಲೋಕದಲ್ಲಿ ಕಂಡಂತೆ ಸವತಿ ಮತ್ಸರಗಳು ಇತ್ಯಾದಿ ಭಾವಿಸುವುದು ಬಾಲಿಶ ಭಾವವಾಗುತ್ತದೆ. ಅದು ಸತ್ಯಕ್ಕೆ ಮಾಡುವ ಅಪಚಾರವೇ ಆಗುತ್ತದೆ. ಜ್ಞಾನಪ್ರವಾಹವಾಗಿ ಮೇಲಿಂದ ಕೆಳಗೆ ಇಳಿದುಬಂದಾಗ ಗಂಗೆ. ಜಗತ್ತಿನ ಇರುವಿಕೆಗೆ ಕಾರಣವಾಗಿ ಪರಶಿವನ ಆಶಯದಂತೆ ಸೃಷ್ಟಿವಿಸ್ತಾರ ಕಾರ್ಯದಲ್ಲಿ ಪ್ರವೃತ್ತಳಾದಾಗ ಗೌರಿ.

ಈ ಬಾರಿಯ ನಮ್ಮ ಭಗವತಿ ಗೌರೀಪೂಜೆಯ ಶುಭ ಸಂದರ್ಭದಲ್ಲಿ ಅವರಿಬ್ಬರನ್ನೂ ಈ ಪವಿತ್ರಭಾವದಿಂದ ಪೂಜಿಸೋಣ.

ಲೇಖಕರು: ಸಂಸ್ಕೃತಿ ಚಿಂತಕರು, ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನು ಓದಿ| Gowri Habba 2022 | ಗೌರಿ ಪೂಜೆಯಲ್ಲಿ ನೀಡುವ ಬಾಗಿನಕ್ಕಿರುವ ಮಹತ್ವವೇನು? ಬಾಗಿನದಲ್ಲಿ ಏನೆಲ್ಲಾ ಇಡಬೇಕು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

ಗಣಪತಿ ವಿಸರ್ಜನೆ ಮಾಡುವಾಗ ನೀರಲ್ಲಿ ಮುಳುಗಿ ಬಾಲಕ ಸಾವು

Drowned in River : ಸ್ನೇಹಿತರೊಂದಿಗೆ ಗಣೇಶ ವಿಸರ್ಜನೆ (Ganesha chaturthi) ಮಾಡುವಾಗ ಬಾಲಕನೊರ್ವ ಹಳ್ಳದಲ್ಲಿ ನೀರಿನ ಆಳ ಅರಿಯದೇ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.

VISTARANEWS.COM


on

By

nishal tej
ಮೃತ ಬಾಲಕ ನಿಶಾಲ್‌ ತೇಜ್
Koo

ಚಿಕ್ಕಬಳ್ಳಾಪುರ : ಇಲ್ಲಿನ ಚಿಕ್ಕಕಾಡಿಗೇನಹಳ್ಳಿ ಗ್ರಾಮದಲ್ಲಿರುವ ಶ್ರೀರಾಮಕುಂಟೆ ಹಳ್ಳದಲ್ಲಿ (Drowned) ಗಣಪತಿ ವಿಸರ್ಜನೆ (Ganesha chathurthi) ಮಾಡಲು ಹೋಗಿ ಬಾಲಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕಡಶೀಗೇನಹಳ್ಳಿ ಗ್ರಾಮದ ನಿಶಾಲ್ ತೇಜ್ (12) ಮೃತ ಬಾಲಕ.

ಸೆ.29ರಂದು ಸ್ನೇಹಿತರೊಂದಿಗೆ ನಿಶಾಲ್‌ ತೇಜ್‌ ಗಣಪತಿ ವಿಸರ್ಜನೆಗೆ ತೆರಳಿದ್ದ. ಈ ವೇಳೆ ಗಣೇಶ ವಿಸರ್ಜನೆ ಮಾಡುವ ಉತ್ಸಾಹದಲ್ಲಿ ಹಳ್ಳದ ಆಳ ಅರಿಯದೇ ನೀರಿಗೆ ಇಳಿದಿದ್ದಾನೆ. ಆದರೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ. ಆತನ ಮೃತದೇಹವು ಕೂಗಳತೆ ದೂರದಲ್ಲಿ ಪತ್ತೆಯಾಗಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Doctor death : ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯೆ ನಿಗೂಢ ಸಾವು; ಪಕ್ಕದಲ್ಲೇ ಸಿರಿಂಜ್‌ ಪತ್ತೆ!

ಆಟವಾಡುವಾಗ ಕಾಲು ಜಾರಿ ನಾಲೆಗೆ ಬಿದ್ದ ಬಾಲಕಿ ದಾರುಣ ಸಾವು

ಹಾಸನ: ಇಲ್ಲಿನ ಅರಕಲಗೂಡು ತಾಲ್ಲೂಕಿನ ಮಧುರನಹಳ್ಳಿ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಆಟವಾಡುವಾಗ ಬಾಲಕಿ ಕಾಲು ಜಾರಿ ನಾಲೆ ಬಿದ್ದು (Drowned In Canal) ಮೃತಪಟ್ಟಿರುವ ಘಟನೆ ನಡೆದಿದೆ. ಸುಪ್ರೀತಾ (5) ಮೃತ ದುರ್ದೈವಿ.

ಗ್ರಾಮದ ರೇವಣ್ಣ-ಭಾಗ್ಯ ದಂಪತಿ ಪುತ್ರಿ ಸುಪ್ರೀತಾ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇತ್ತು. ಹೀಗಾಗಿ ಗ್ರಾಮದ ಸಮೀಪವಿರುವ ನಾಲೆಯ ಬಳಿ ಸ್ನೇಹಿತರೊಂದಿಗೆ ಸುಪ್ರೀತಾ ಆಟವಾಡುತ್ತಿದ್ದಳು. ಈ ವೇಳೆ ಅಚಾನಕ್‌ ಆಗಿ ಕಾಲುಜಾರಿ ನಾಲೆಗೆ ಬಿದ್ದಿದ್ದಾಳೆ. ನಾಲೆಯಲ್ಲಿ ಹರಿಯುತ್ತಿದ್ದ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.

ಹಾರಂಗಿ ಬಲದಂಡೆ ನಾಲೆಯಲ್ಲಿ ಮುಳುಗಿರುವ ಬಾಲಕಿ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಈಗಾಗಲೇ ಅಗ್ನಿಶಾಮಕ ದಳದ ಸಿಬ್ಬಂದಿ 6 ಕಿ.ಮೀವರೆಗೂ ಶೋಧಕಾರ್ಯ ನಡೆಸಿದ್ದಾರೆ. ಆದರೆ ಮೃತದೇಹವು ಪತ್ತೆಯಾಗಿಲ್ಲ. ಹಳ್ಳಿ ಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

Food Poisoning : ಗಣೇಶ ವಿಸರ್ಜನೆಯಲ್ಲಿ ಪ್ರಸಾದ ಸೇವಿಸಿದ 28ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Tumkur News : ತುಮಕೂರಲ್ಲಿ ಗಣೇಶ ವಿಸರ್ಜನೆ (Ganesh Chaturthi) ವೇಳೆ ಪ್ರಸಾದ ಸೇವಿಸಿದ 20ಕ್ಕೂ ಹೆಚ್ಚು ಜನರು (Food Poisoning) ಅಸ್ವಸ್ಥಗೊಂಡಿದ್ದಾರೆ. ಹಲವರು ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

VISTARANEWS.COM


on

By

Food Poisoning
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರು
Koo

ತುಮಕೂರು: ಇಲ್ಲಿನ ಶೆಟ್ಟಪ್ಪನಹಳ್ಳಿಯಲ್ಲಿ ಆಹಾರ ಸೇವಿಸಿದ 28ಕ್ಕೂ ಹೆಚ್ಚು ಮಂದಿ (Food Poisoning) ಅಸ್ವಸ್ಥಗೊಂಡಿದ್ದಾರೆ. ಭಾನುವಾರ (ಸೆ.24) ಗಣೇಶ ವಿಸರ್ಜನೆ ಸಮಯದಲ್ಲಿ ಪ್ರಸಾದ ಸೇವಿಸಿದ್ದರೂ ಜತೆಗೆ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿರುವ ಶಂಕೆ ವ್ಯಕ್ತವಾಗಿದೆ.

6 ಮಂದಿ ಆರೋಗ್ಯವು ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಯಲಕ್ಷ್ಮಿ (35), ಬೋರಮ್ಮ (68), ಬೈರಪ್ಪ(80), ಗಂಗಮ್ಮ (70), ನಂಜಮ್ಮ(85) ಎಂಬುವವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 20ಕ್ಕೂ ಹೆಚ್ಚು ಜನರಿಗೆ ಗೂಳೂರು ಪ್ರಾಥಮಿಕ ವೈದ್ಯರಿಂದ ಗ್ರಾಮದಲ್ಲೇ ಚಿಕಿತ್ಸೆ ಮುಂದುವರಿದಿದೆ.

ತುಮಕೂರು ತಾಲೂಕಿನ ಶೆಟ್ಟಪ್ಪನಹಳ್ಳಿ ಗ್ರಾಮದಲ್ಲಿ ಸುಮಾರು 54 ಮನೆಗಳಿದ್ದು, ಕಳೆದ ಭಾನುವಾರ ಗ್ರಾಮದ ಓರ್ವರಿಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ನಿನ್ನೆ ಬೆಳಗ್ಗೆ (ಸೆ.25) 10 ಗಂಟೆ ಸುಮಾರಿಗೆ 6 ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ಅಸ್ವಸ್ಥರು ಗೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಈ ವೇಳೆ ಎಚ್ಚತ್ತ ಆರೋಗ್ಯ ಅಧಿಕಾರಿಗಳು ವೈದ್ಯರ ತಂಡ ಸಮೇತ ಶೆಟ್ಟಪ್ಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ಇದುವರೆಗೆ ಸುಮಾರು 28ಮಂದಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಗ್ರಾಮದಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಅಸ್ವಸ್ಥಗೊಂಡಿರುವವರ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಅಸ್ವಸ್ಥಗೊಂಡಿದ್ದ 28 ಜನರಲ್ಲಿ 24 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

ಸದ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಕರಣ ಸಂಬಂಧ ಮಾಹಿತಿ ಕಲೆಹಾಕುತ್ತಿದ್ದಾರೆ. ಅಣಬೆ ಸೇವಿಸಿದ್ದ ಬಗ್ಗೆಯೂ ಶಂಕೆ ಇದೆ. ಮೇಲ್ನೋಟಕ್ಕೆ ಕುಡಿಯುವ ನೀರು ಕಲುಷಿತಗೊಂಡಿರಬಹುದು, ಆಹಾರದಲ್ಲಿ ವ್ಯತ್ಯಾಸಗೊಂಡಿರಬಹುದೆಂದು ಅಂದಾಜಿಸಲಾಗಿದೆ. ಕುಡಿಯುವ ನೀರನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ಬಳಿಕ ಪ್ರಕರಣದ ಸತ್ಯಸಂಗತಿ ಹೊರಬರಲಿದೆ. ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗದ ಆತಂಕವು ಹೆಚ್ಚಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಗಣೇಶ ಚತುರ್ಥಿ

Ganesh Chaturthi : ನಾಳೆ-ನಾಡಿದ್ದು ಈ ರೂಟ್‌ನಲ್ಲಿ ವಾಹನ ಸಂಚಾರ ಬಂದ್‌!

Ganesh Chaturthi : ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನಾ ಇರುವುದರಿಂದ ಬೆಂಗಳೂರಿನ ಕೆಲವು ಕಡೆ ವಾಹನ ಸಂಚಾರವನ್ನು (Traffic advisory) ನಿರ್ಬಂಧಿಸಲಾಗಿದೆ.

VISTARANEWS.COM


on

By

Ganesh Chaturthi Vehicular traffic on this route to be restricted tomorrow
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿರೆಡ್ಡಿಪಾಳ್ಯದಲ್ಲಿ ಸೆ. 23ರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ (Ganesh Chaturthi) ಮೆರವಣಿಗೆ ನಡೆಯಲಿದೆ. ಹೀಗಾಗಿ ಶನಿವಾರ ಸಂಜೆ 06 ಗಂಟೆಯಿಂದ ಮರುದಿನ ಬೆಳಗ್ಗೆ 08 ಗಂಟೆಯವರೆಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್‌ ಆಗಲಿದೆ.

ಈ ಮಾರ್ಗಗಳಲ್ಲಿ ತಾತ್ಕಾಲಿಕ ನಿರ್ಬಂಧ

ದೇವೇಗೌಡ ರಸ್ತೆ, ಜೆ.ಸಿ.ನಗರ ಮುಖ್ಯರಸ್ತೆ, ಮಠದಹಳ್ಳಿ ಮುಖ್ಯರಸ್ತೆ, ದೇಸ್‌ರಾಜ್ ಅರಸ್ ರಸ್ತೆಗಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: Ganesh Chaturthi : ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್‌

ದಿಣ್ಣೂರಿಗೆ ಹೋಗಲು ಈ ದಾರಿ ಬಳಸಿ

1) ಸುಲ್ತಾನ್‌ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ಮೆಂಟ್‌ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗಗಳು ಹೀಗಿವೆ.
ದಿಣ್ಣೂರು ಮುಖ್ಯರಸ್ತೆಯಿಂದ ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್‌ನಲ್ಲಿ ಎಡತಿರುವು ಪಡೆಯಬೇಕು. ಆರ್.ಟಿ.ನಗರ ಮುಖ್ಯರಸ್ತೆ ಮೂಲಕ ಗುಂಡುರಾವ್‌ ಮನೆ ಜಂಕ್ಷನ್‌, ಬೆಂಗಳೂರ ಬಳ್ಳಾರಿ ರಸ್ತೆ, ಮೇಖ್ರಿ ಸರ್ಕಲ್ ಸರ್ವೀಸ್ ರಸ್ತೆಯಲ್ಲಿ ಎಡತಿರುವು ಪಡೆದು ಜಯಮಹಲ್ ರಸ್ತೆಯಲ್ಲಿ ನೇರವಾಗಿ ಕಂಟೋನ್ಮೆಂಟ್‌ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.

  1. ಕಂಟೋನ್ಮೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ – ಸುಲ್ತಾನ್ ಪಾಳ್ಯ – ಕಾವಲ್‌ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಜಯಮಹಲ್‌ ರಸ್ತೆ ಮೂಲಕ ಮೇಖ್ರಿ ಸರ್ಕಲ್ ಬೆಂಗಳೂರು ಬಳ್ಳಾರಿ ರಸ್ತೆ, ಸಿಬಿಐ ಅಂಡರ್ ವಾಸ್ ಮೂಲಕ ಆರ್.ಟಿ.ನಗರ ಮುಖ್ಯರಸ್ತೆ- ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್ ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
  2. ಯಶವಂತಪುರ ಕಡೆಯಿ೦ದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್‌ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಮೇಕ್ರಿ ಸರ್ಕಲ್‌ನಲ್ಲಿ ಎಡತಿರುವು ಪಡೆದು ಬೆಂಗಳೂರು ಬಳ್ಳಾರಿ ರಸ್ತೆ, ಸಿಬಿಐ ಅಂಡರ್ ಪಾಸ್ ಬಲತಿರುವು ಪಡೆದು ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
  3. ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಮೇಖ್ರಿಸರ್ಕಲ್ ಅಂಡರ್ ಪಾಸ್, ಬೆಂಗಳೂರು ಬಳ್ಳಾರಿ ರಸ್ತೆ, ಸಿ.ಬಿ.ಐ. ಜಂಕ್ಷನ್ ನಂತರ ಕರ್ನಾಟಕ ಸ್ಪೀರಿಟ್‌ನಲ್ಲಿ ಬಲ ತಿರುವು ತೆಗೆದುಕೊಂಡು ಬಿಬಿ ಸರ್ವೀಸ್‌ ರಸ್ತೆ, ಸಿ.ಬಿ.ಐ ರಸ್ತೆ ಡೆಡ್ ಎಂಡ್ ಬಲತಿರುವು ಮೂಲಕ ದಿಣ್ಣೂರು ರಸ್ತೆಯ ಮೂಲಕ ಹೋಗಬಹುದು.

ಸೆ.24ರಂದು ಈ ಮಾರ್ಗದಲ್ಲಿ ಸಂಚಾರ ಬಂದ್

‌ಸೆ.24ರಂದು ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚಾರ ನಿರ್ಬಂಧ ಮಾಡಲಾಗಿದೆ.
-ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.
-ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೂ ಸಂಚಾರ ಬಂದ್‌ ಆಗಲಿದೆ.
-ಕೆನ್ಸಿಂಗ್‌ಟನ್‌ ಕಡೆಯಿಂದ ಎಂ.ಇ.ಜಿ ಮೂಲಕ ಹಲಸೂರು ಲೇಕ್ ಕಡೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಆದರೆ ಎಂಇಜಿ ಕಡೆಯಿಂದ ಕೆನ್ಸಿಂಗ್‌ಟನ್ ಕಡೆಗೆ ಏಕಮುಖ ಸಂಚಾರ ಇರಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

Ganesh Chaturthi: ನಾಳೆ ಗಣೇಶ ಮೂರ್ತಿಗಳ ವಿಸರ್ಜನೆ; ‌ಬೆಂಗಳೂರಿನ ಹಲವೆಡೆ ರಸ್ತೆ ಮಾರ್ಗ ಬದಲಾವಣೆ

Ganesh Chaturthi: ಬೆಂಗಳೂರಿನ ಆರ್.ಟಿ. ನಗರ ಸಂಚಾರ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ಸೆ.21ರಂದು ಸಂಜೆ 6 ಗಂಟೆಯಿಂದ ಸೆ.22 ಬೆಳಗ್ಗೆ 7 ಗಂಟೆಯವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

VISTARANEWS.COM


on

Ganesh visarjan
Koo

ಬೆಂಗಳೂರು: ನಗರದಲ್ಲಿ ಸೆ.21ರಂದು ಗಣೇಶ ಮೂರ್ತಿಗಳ ವಿಸರ್ಜನೆ (Ganesh Chaturthi) ‌ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಆರ್.ಟಿ. ನಗರ ಸಂಚಾರ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ಸುಗಮ ಸಂಚಾರಕ್ಕಾಗಿ ಹಲವೆಡೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಸೆ.21ರಂದು ಗುರುವಾರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಹೀಗಾಗಿ ಗುರುವಾರ ಸಂಜೆ 6 ಗಂಟೆಯಿಂದ ಶುಕ್ರವಾರ ಬೆಳಗ್ಗೆ 7 ಗಂಟೆಯವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಅದ್ದರಿಂದ ವಾಹನ ಸವಾರರು ಬದಲಿ‌ ಮಾರ್ಗದಲ್ಲಿ ಸಾಗುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ | Ganesh Chaturthi : ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್‌

ಎಲ್ಲಾ ಮಾದರಿಯ ವಾಹನಗಳು ಪರ್ಯಾಯ ರಸ್ತೆಯಲ್ಲಿಯೇ ಸಂಚರಿಸಬೇಕಾಗಿದ್ದು, ಇದಕ್ಕಾಗಿ ಸಂಚಾರ ಪೋಲಿಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಸೂಕ್ತ ಸ್ಥಳಗಳಲ್ಲಿ ಅಧಿಕಾರಿಗಳ ನಿಯೋಜನೆ ಮತ್ತು ಬಂದೋಬಸ್ತ್ ಮಾಡಲಾಗಿದೆ.

ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾದ ರಸ್ತೆಗಳ ವಿವರ

  1. ದಿಣ್ಣೂರು ಮುಖ್ಯರಸ್ತೆ
  2. ಆರ್.ಟಿ ನಗರ ಮುಖ್ಯರಸ್ತೆ.
  3. ಸಿಬಿಐ ಮುಖ್ಯರಸ್ತೆ.

ಮಾರ್ಗ ಬದಲಾವಣೆ ವಿವರಗಳು

1.ಸುಲ್ತಾನ್ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್‌ಮೆಂಟ್ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:

ಸುಲ್ತಾನ್ ಪಾಳ್ಯ ಮುಖ್ಯರಸ್ತೆ – ದಿಣ್ಣೂರು ಜಂಕ್ಷನ್‌-ಎಡತಿರುವು – ದೇವೇಗೌಡ ಮುಖ್ಯರಸ್ತೆ – ಪಿ.ಆರ್.ಟಿ.ಸಿ ಜಂಕ್ಷನ್- ಬಲ ತಿರುವು – ವಾಟರ್ ಟ್ಯಾಂಕ್ ಜಂಕ್ಷನ್ – ಎಡ ತಿರುವು- ಟಿ.ವಿ ಟವರ್ – ಎಡ ತಿರುವು-ಜಯಮಹಲ್ ಮುಖ್ಯರಸ್ತೆ- ರಸ್ತೆಯಲ್ಲಿ ನೇರವಾಗಿ ಕಂಟೋನೆಂಟ್ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.

2.ಸುಲ್ತಾನ್ ಪಾಳ್ಯ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನ ಸವಾರರು ಸಂಚರಿಸಬೇಕಾದ ಮಾರ್ಗಗಳು:

ಸುಲ್ತಾನ್ ಪಾಳ್ಯ ಮುಖ್ಯರಸ್ತೆ – ದಿಣ್ಣೂರು ಜಂಕ್ಷನ್-ಎಡತಿರುವು – ದೇವೇಗೌಡ ಮುಖ್ಯರಸ್ತೆ – ಪಿ.ಆರ್.ಟಿ.ಸಿ ಜಂಕ್ಷನ್- ಬಲ -ತಿರುವು – ವಾಟರ್ ಟ್ಯಾಂಕ್ ಜಂಕ್ಷನ್ -ಬಲ ತಿರುವು- ಮಠದಹಳ್ಳಿ ಮುಖ್ಯರಸ್ತೆ- ಗುಂಡೂರಾವ್ ಸರ್ಕಲ್ – ಎಡ ತಿರುವು – ತರಳಬಾಳು ರಸ್ತೆ – ಎಡತಿರುವು- ಬೆಂಗಳೂರು ಬಳ್ಳಾರಿ ರಸ್ತೆ ಮೇಕ್ರಿ ಸರ್ಕಲ್ – ಬೆಂಗಳೂರು ನಗರದ ಕಡೆಗೆ ಸಂಚರಿಸಬಹುದಾಗಿದೆ.

    3.ಕಂಟೋನ್ಸೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು. – ಸುಲ್ತಾನ್ ಪಾಳ್ಯ – ಕಾವಲ್‌ ಭೈರಸಂದ್ರ ಕಡೆಗೆ:

    ಜಯಮಹಲ್ ರಸ್ತೆ- ಜೆ.ಸಿ ನಗರ ಪಿ.ಎಸ್ ಜಂಕ್ಷನ್ – ಟಿವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್ ಬಲ ತಿರುವು) – ವಾಟರ್ ಟ್ಯಾಂಕ್ ಜಂಕ್ಷನ್ – ಬಲ ತಿರುವು – ಪಿ.ಆರ್.ಟಿ.ಸಿ ಜಂಕ್ಷನ್ – ಎಡ ತಿರುವು- ದೇವೆಗೌಡ ರಸ್ತೆ – ದಿಣ್ಣೂರು ಜಂಕ್ಷನ್ ಬಲ ತಿರುವು -ಸುಲ್ತಾನ್ ಪಾಳ್ಯ – ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.

      4.ಯಶವಂತಪುರ ಕಡೆಯಿಂದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:

      ಮೇಕ್ರಿ ಸರ್ಕಲ್‌- ಜಯಮಹಲ್ ಮುಖ್ಯರಸ್ತೆ – ಟಿ.ವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್) ಎಡತಿರುವು ವಾಟರ್‌ ಟ್ಯಾಂಕ್ ಜಂಕ್ಷನ್ – ಪಿ.ಆರ್.ಟಿ.ಸಿ ಜಂಕ್ಷನ್ – ಎಡ ತಿರುವು- ದೇವೇಗೌಡ ರಸ್ತೆ – ದಿಣ್ಣೂರು ಜಂಕ್ಷನ್ ಬಲ- ತಿರುವು ಸುಲ್ತಾನ್ ಪಾಳ್ಯ – ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.

      5.ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಅನುಸರಿಸಬೇಕಾದ ಮಾರ್ಗಗಳು:

      ಮೇಕಿ ಸರ್ಕಲ್- ಬಲ ತಿರುವು – ಜಯಮಹಲ್‌ ಮುಖ್ಯರಸ್ತೆ ಟಿ.ವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್) ಎಡತಿರುವು ವಾಟರ್ ಟ್ಯಾಂಕ್ ಜಂಕ್ಷನ್‌ – ಎಡ ತಿರುವು ಮಠದಹಳ್ಳಿ ಮುಖ್ಯ ರಸ್ತೆ – ಸರ್ಕಲ್ – ಆರ್.ಟಿ.ನಗರ ಮುಖ್ಯರಸ್ತೆ ಮೂಲಕ ಸಂಚರಿಸಬಹುದು.

      6.ಹೆಬ್ಬಾಳ ಪಿ.ಎಸ್ ಜಂಕ್ಷನ್‌ನಿಂದ ಸುಲ್ತಾನ್ ಪಾಳ್ಯ ಕಾವಲ್ ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು – ಸಂಚರಿಸಬೇಕಾದ ಮಾರ್ಗಗಳು:

      ಹೆಬ್ಬಾಳ ಪಿ.ಎಸ್ ಜಂಕ್ಷನ್‌ನಿಂದ – ಬೆಂಗಳೂರು ಬಳ್ಳಾರಿ ರಸ್ತೆ- ಸಿಬಿಐ ಜಂಕ್ಷನ್‌ – ಸಂಜಯನಗರ ಕ್ರಾಸ್- ತರಳಬಾಳು ರಸ್ತೆ ಎಡತಿರುವು- ದೇಸ್ವರಾಜ್ ರಸ್ತೆ -ಗುಂಡೂರಾವ್ ಸರ್ಕಲ್ ಬಲತಿರುವು- 1 – ಮಠದಹಳ್ಳಿ ರಸ್ತೆ ವಾಟರ್ ಟ್ಯಾಂಕ್ ಜಂಕ್ಷನ್‌ ಎಡ ತಿರುವು -ಪಿ.ಆರ್.ಟಿ.ಸಿ ಜಂಕ್ಷನ್ – ದೇವೆಗೌಡ ರಸ್ತೆ – ದಿಣ್ಣೂರು ಸಂಚರಿಸಬಹುದು. – ಎಡ ತಿರುವು ದಿಣ್ಣೂರು ಜಂಕ್ಷನ್ ಬಲ ತಿರುವು ಸುಲ್ತಾನ್ ಪಾಳ್ಯ ಕಾವಲ್ ಭೈರಸಂದ್ರ ಕಡೆಗೆ.

        Continue Reading
        Advertisement
        ರಾಜಕೀಯ3 mins ago

        Lok Sabha election 2024: ದಿಲ್ಲಿಯಲ್ಲಿ ಆಪ್‌-ಕಾಂಗ್ರೆಸ್‌ ಮೈತ್ರಿಯಲ್ಲಿ ಒಡಕು; ರಾಜ್ಯಾಧ್ಯಕ್ಷ ರಾಜೀನಾಮೆ

        777 Charlie
        ಸ್ಯಾಂಡಲ್ ವುಡ್4 mins ago

        777 Charlie: ಜಪಾನಿನಲ್ಲಿ `777 ಚಾರ್ಲಿ ಹವಾ’: ವರ್ಲ್ಡ್​​ ಟೂರ್‌ಗೆ ಧರ್ಮ ಹಾಗೂ ಚಾರ್ಲಿ ರೆಡಿ!

        Food Poisoning
        ಪ್ರಮುಖ ಸುದ್ದಿ14 mins ago

        Food Poisoning : ಹೃದಯ ವಿದ್ರಾವಕ ಘಟನೆ; ವಿಷ ಆಹಾರ ಸೇವಿಸಿ ಇಬ್ಬರು ಮಕ್ಕಳ ಸಾವು, ಮೂವರು ಅಸ್ವಸ್ಥ

        Manjummel Boys
        ಮಾಲಿವುಡ್46 mins ago

        Manjummel Boys: ‘ಮಂಜುಮ್ಮೆಲ್ ಬಾಯ್ಸ್’ ಒಟಿಟಿ ಡೇಟ್ ಅನೌನ್ಸ್ ಮಾಡಿದ ಡಿಸ್ನಿ!

        girl Saved Mother
        ಪ್ರಮುಖ ಸುದ್ದಿ52 mins ago

        Girl Saved Mother : ಬುದ್ಧಿವಂತ ಬಾಲಕಿ; ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಯನ್ನು ಕಾಪಾಡಿದ 7 ವರ್ಷದ ಪುತ್ರಿ

        ವಿದೇಶ1 hour ago

        TikTok star: ಇರಾಕ್‌ನಲ್ಲಿ ಗುಂಡಿಕ್ಕಿ ಟಿಕ್‌ಟಾಕ್‌ ಸ್ಟಾರ್‌ನ ಭೀಕರ ಹತ್ಯೆ

        Sahil Khan Arrested in Mahadev Betting App Case
        ಬಾಲಿವುಡ್1 hour ago

        Sahil Khan: ಬೆಟ್ಟಿಂಗ್​ ಅಕ್ರಮದಲ್ಲಿ ಭಾಗಿ; ನಟ ಸಾಹಿಲ್ ಖಾನ್ ಅರೆಸ್ಟ್‌

        Modi in Karnataka stay in Belagavi tomorrow and Huge gatherings at five places
        ಪ್ರಮುಖ ಸುದ್ದಿ2 hours ago

        Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

        ದೇಶ2 hours ago

        Usman Ghani: ಪ್ರಧಾನಿ ಮೋದಿಯನ್ನು ಟೀಕಿಸಿದ್ದ ಬಿಜೆಪಿ ಉಚ್ಚಾಟಿತ ನಾಯಕ ಅರೆಸ್ಟ್‌

        Car Accident
        ಪ್ರಮುಖ ಸುದ್ದಿ2 hours ago

        Car Accident : ಯಮವೇಗದಲ್ಲಿ ಬಂದ ಇನೋವಾ ಕಾರು ಪಲ್ಟಿ, ಯುವತಿ ಸಾವು

        Sharmitha Gowda in bikini
        ಕಿರುತೆರೆ7 months ago

        Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

        Kannada Serials
        ಕಿರುತೆರೆ7 months ago

        Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

        Bigg Boss- Saregamapa 20 average TRP
        ಕಿರುತೆರೆ6 months ago

        Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

        galipata neetu
        ಕಿರುತೆರೆ5 months ago

        Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

        Kannada Serials
        ಕಿರುತೆರೆ7 months ago

        Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

        Kannada Serials
        ಕಿರುತೆರೆ7 months ago

        Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

        Bigg Boss' dominates TRP; Sita Rama fell to the sixth position
        ಕಿರುತೆರೆ6 months ago

        Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

        geetha serial Dhanush gowda engagement
        ಕಿರುತೆರೆ4 months ago

        Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

        varun
        ಕಿರುತೆರೆ5 months ago

        Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

        Kannada Serials
        ಕಿರುತೆರೆ8 months ago

        Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

        Modi in Karnataka stay in Belagavi tomorrow and Huge gatherings at five places
        ಪ್ರಮುಖ ಸುದ್ದಿ2 hours ago

        Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

        Dina Bhavishya
        ಭವಿಷ್ಯ6 hours ago

        Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

        Lok sabha election 2024
        Lok Sabha Election 202418 hours ago

        Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

        road Accident in kolar evm
        ಕೋಲಾರ23 hours ago

        Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

        Dina Bhavishya
        ಭವಿಷ್ಯ1 day ago

        Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

        Lok Sabha Election 2024 congress booth agent allegation for Fake voting in Hassan Lok Sabha constituency
        ಹಾಸನ2 days ago

        Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

        Lok Sabha Election 2024 Woman suffers cardiac arrest at polling booth Doctor who came to cast his vote saved life
        Lok Sabha Election 20242 days ago

        Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

        Lok Sabha Election 2024 Youth Congress protest
        Lok Sabha Election 20242 days ago

        Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

        Dina bhavishya
        ಭವಿಷ್ಯ2 days ago

        Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

        Neha Murder Case in hubblli
        ಹುಬ್ಬಳ್ಳಿ3 days ago

        Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

        ಟ್ರೆಂಡಿಂಗ್‌