Nag Panchami 2023: ನಾಗರ ಪಂಚಮಿ ದಿನ ಜೀವಂತ ಹಾವಿಗೆ ಹಾಲು ಕುಡಿಸಬಹುದೆ? - Vistara News

ಕರ್ನಾಟಕ

Nag Panchami 2023: ನಾಗರ ಪಂಚಮಿ ದಿನ ಜೀವಂತ ಹಾವಿಗೆ ಹಾಲು ಕುಡಿಸಬಹುದೆ?

Nag Panchami 2023: ಲೋಕಪಾಲಕನಾದ ಭಗವಂತ ವಿಷ್ಣುವಿನ ಶಯ್ಯೆ ಮತ್ತು ಭಗವಂತ ಶಂಕರನ ಕಂಠಾಭರಣವಾದ ಸರ್ಪವು ಭಾರತೀಯ ಪರಂಪರೆಯ ನಮಗೆಲ್ಲಾ ನಂಬಿಕೆ-ಪೂಜ್ಯಭಾವನೆಯಷ್ಟೇ ಅಲ್ಲ, ಪರಿಸರವನ್ನು ಸಮತೋಲನವಾಗಿಡುವ ಅವಿಭಾಜ್ಯ ಅಂಗವೂ ಆಗಿದೆ. ಅದಕ್ಕಾಗಿಯೇ ಶ್ರಾವಣ ಶುಕ್ಲಪಂಚಮಿಯಂದು ಹಬ್ಬವಾಗಿ ‘ನಾಗಪಂಚಮಿ’ಯಾಗಿ (Nag Panchami 2023) ಆಚರಿಸುತ್ತಾ ಬಂದಿದ್ದೇವೆ.

VISTARANEWS.COM


on

Feeding milk to the snake
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

| ಗಣೇಶ ಭಟ್ಟ, ಸಂಸ್ಕೃತ ಉಪನ್ಯಾಸಕರು, ಕುಮಟಾ
ಭಾರತಿಯರಾದ ನಾವು, ನಮಗೆ ಆಶ್ರಯ ನೀಡಿದ ಭೂಮಿಯನ್ನು ಪೂಜಿಸುವರಲ್ಲದೇ ಈ ಭೂಮಿಯಲ್ಲಿರುವ ಪ್ರಾಣಿ–ಪಕ್ಷಿ-ವೃಕ್ಷ ಮುಂತಾದವುಗಳಷ್ಟೇ ಅಲ್ಲ, ಅಣು-ರೇಣು-ತೃಣಕಾಷ್ಟಗಳಲ್ಲೂ ದೇವರನ್ನು ಕಂಡವರು ನಾವು. ಅಂತೆಯೇ ‘ಸರ್ಪ’ದ ಮಹಿಮೆಯನ್ನು ಅರಿತು ಪ್ರಾಚೀನ ಕಾಲದಿಂದ ಪೂಜಿಸಿಕೂಂಡು (Nag Panchami 2023) ಬಂದಿದ್ದೇವೆ.

ಪುರಾಣಗಳ ಪ್ರಕಾರ ದಕ್ಷ ಪ್ರಜಾಪತಿಯ ಮಗಳಾದ ಕದ್ರು ಹಾಗೂ ಕಶ್ಯಪ ಮಹರ್ಷಿಯಿಂದ ಹುಟ್ಟಿದವುಗಳೇ ‘ಸರ್ಪ’ಗಳು. ಅನಂತ- ವಾಸುಕಿ-ಶೇಷ-ತಕ್ಷಕ ಮುಂತಾದ ಹೆಸರಿನಿಂದ ಖ್ಯಾತರಾದ ಇವು, ಕದ್ರುವಿನ ಪುತ್ರರಾದ ಸರ್ಪರಾಜರು, ಅಮೃತಕ್ಕಾಗಿ ದೇವ-ದಾನವರು ಮಂದರಪರ್ವತವನ್ನೇ ಕಡೆಗೋಲನ್ನಾಗಿ ಮಾಡಿಕೂಂಡು, ಕ್ಷೀರಸಾಗರ ಕಡೆಯುವಾಗ, ವಾಸುಕಿ ಸರ್ಪವು ಕಡೆಗೋಲಿಗೆ ಹಗ್ಗವಾಗಿದ್ದು, ಅಮೃತದ ಉದ್ಭವಕ್ಕೆ ಕಾರಣವಾಯಿತು.

ಶೇಷ ಸರ್ಪವು ಮಲತಾಯಿಯಾದ ವಿನತೆಯ ವಿಷಯದಲ್ಲಿ ತನ್ನ ತಾಯಿ ಕದ್ರು ಮಾಡಿದ ಅಪರಾಧಕ್ಕೆ ಬಹಳ ನೊಂದು, ಬ್ರಹ್ಮನಿಂದ ಭೂಭಾರ ಹೊರುವ ಸಾಮರ್ಥ್ಯ ಪಡೆದು, ಭೂಮಿಯನ್ನು ಹೂತ್ತು, ಒಂದಂಶದಿಂದ ಪಾತಾಳದಲ್ಲಿಯೂ, ಇನ್ನೂಂದು ಅಂಶದಿಂದ ಮಹಾವಿಷ್ಣುವಿನ ಹಾಸಿಗೆಯಾಗಿಯೂ ಇರುವುದು. ಸರ್ಪವು ಶಿವನ ಕೊರಳ ಆಭರಣವಾಗಿ, ತ್ರಿಪುರ ಸಂಹಾರ ಕಾಲದಲ್ಲಿ ಶಿವನ ಧನಸ್ಸಿನ ಹಗ್ಗವಾಗಿ, ಗಣಪತಿಯ ಹೊಟ್ಟೆಯ ಪಟ್ಟಿಯಾಗಿ, ದುರ್ಯೋಧನನ ರಥದ ಧ್ವಜದ ಚಿಹ್ನೆಯಾಗಿ, ಪ್ರತಿಯೊಬ್ಬರಲ್ಲಿಯೂ ಇರುವ ಷಟ್ಚಕ್ರದ ಕುಂಡಲಿನೀ ಶಕ್ತಿ ಪ್ರತೀಕವಾಗಿ, ತ್ರೇತಾಯುಗದ ಲಕ್ಷ್ಮಣ-ದ್ವಾಪರಯುಗದ ಬಲರಾಮ, ಕೃತಯುಗದ ಸುಬ್ರಹ್ಮಣ್ಯನ ಅವತಾರ ಸ್ವರೂಪಿಯಾದ ‘ಸರ್ಪ’ವು ಭಾರತೀಯರಾದ ನಮಗಷ್ಟೇ ಅಲ್ಲ, ನೇಪಾಳ –ಇಂಡೋನೇಷ್ಯಾ ಮುಂತಾದ ರಾಷ್ಟ್ರದವರಿಗೂ ಪೂಜಾರ್ಹವಾಗಿದೆ.

ನಿರ್ಣಯ ಸಿಂಧುವಿನ ಪ್ರಕಾರ –
ಶ್ರಾವಣೇ ಪಂಚಮೀ ಶುಕ್ಲಾ ಸಂಪ್ರೋಕ್ತಾ ನಾಗಪಂಚಮೀ !
ತಾಂಪರಿತ್ಯಜ್ಯ ಪಂಚಮ್ಯಶ್ಚತುರ್ಥೀ ಸಹಿತಾಹಿತಾಃ!!
ಸರ್ಪಗಳ ಆರಾಧನೆಗೆ ಶ್ರಾವಣಮಾಸದ ಶುಕ್ಲಪಕ್ಷದ ‘ಪಂಚಮೀ’ ಪ್ರಶಸ್ತ ದಿನವಾಗಿದ್ದು, ಆಸ್ತಿಕರೆಲ್ಲರೂ ಇದನ್ನು ‘ನಾಗಪಂಚಮೀ’ಯಾಗಿ ಆಚರಿಸುವರು,

ಇದನ್ನೂ ಓದಿ | Shravana Masa 2023: ಶ್ರಾವಣ ಮಾಸಕ್ಕೂ ಶಿವನಿಗೂ ಏನು ನಂಟು ಎಂಬುದು ನಿಮಗೆ ಗೊತ್ತೇ?

ನಾಗರ ಪಂಚಮಿಯ ಪೌರಾಣಿಕ ಹಿನ್ನೆಲೆ ಹೀಗಿದೆ…

ಸರ್ಪಗಳ ಆರಾಧನೆ ವೇದಕಾಲದಿಂದಲೇ ಇದೆ. ಋಗ್ವೇದದಲ್ಲಿ ಸರ್ಪವನ್ನು ಸ್ತುತಿಸುವ ಸರ್ಪಸೂಕ್ತವಿದೆ.

ಕೃಷ್ಣ ಯಜುರ್ವೇದದಲ್ಲಿ:
ನಮೋಸ್ತು ಸಪೇ ರ್ಭ್ಯೋ ಯೇ ಕೇಚ ಪೃಥಿವೀಮನು!
ಯೇಂತರಕ್ಷೇ ಯೇ ದಿವಿ ತೇಭ್ಯಃ ಸರ್ಪಭ್ಯೋ ನಮಃ!!
ಅಂದರೆ, ಭುವಿ –ದಿವಿ-ಅಂತರಿಕ್ಷಗಳಲ್ಲಿರುವ ಅಶ್ವತ್ಥ-ವಟವೃಕ್ಷಗಳಲ್ಲಿರುವ, ನೀರಿನಲ್ಲಿರುವ ಎಲ್ಲಾ ಸರ್ಪಗಳಿಗೆ ನಮಸ್ಕಾರ ಎಂದು ಸ್ತುತಿ ಮಾಡಿ, ಅವು ನಮ್ಮ ಇಷ್ಟಾರ್ಥ ನೆರವೆರಿಸಲಿ ಎಂದು ಪ್ರಾರ್ಥಿಸಲಾಗಿದೆ. ಕಾಳಿಂಗ ಎನ್ನುವ ಸರ್ಪವು ನಂದಗೋಕುಲದ ಸಮೀಪ ಹರಿಯುವ ಯಮುನಾ ನದಿಯ ಒಂದು ಭಾಗದಲ್ಲಿ ವಾಸವಾಗಿತ್ತು. ಕಾಳಿಂಗನಿಂದಾಗಿ ಆ ಭಾಗದ ನದಿ ನೀರು ವಿಷದಿಂದ ಕುಲಷಿತವಾಗಿತ್ತು. ಗೋಕುಲ ನಿವಾಸಿಗಳಿಗೆ ಇದರಿಂದ ತೊಂದರೆ ಉಂಟಾದಾಗ, ಕೃಷ್ಣ ಸಮಸ್ಯೆ ನಿವಾರಣೆಗೆ ನದಿಗಿಳಿದು ಅಲ್ಲಿ ವಾಸವಾಗಿದ್ದ ಕಾಳಿಂಗನನ್ನು ಮರ್ದಿಸಿದ. ಆ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಕೃಷ್ಣ ಕಾಳಿಂಗನಿಗೆ ಅಭಯವಿತ್ತು ಅಲ್ಲಿಂದ ಕಳುಹಿಸಿ, ಯಾರು ಈ ದಿನ ನಾಗನನ್ನು ಆರಾಧಿಸುವರೋ ಅವರ ಕಷ್ಟಗಳು ನಿವಾರಣೆಯಾಗುವವು ಎಂದು ಸಾರಿದ. ಅಲ್ಲಿಂದ ಮೊದಲುಗೊಂಡು ನಾಗಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ.

ಮಹಾಭಾರತ ಮತ್ತು ಭಾಗವತದ ಪ್ರಕಾರ ಪರೀಕ್ಷಿತರಾಜನ ಮೃತ್ಯು ತಕ್ಷಕ ಸರ್ಪದಂಶನದಿಂದ ಆಯಿತು. ಈ ಸೇಡು ತೀರಿಸಿಕೊಳ್ಳಲು ಆತನ ಮಗನಾದ ಜನಮೇಜಯನು ಸರ್ಪಯಜ್ಞವನ್ನು ಮಾಡಿದ. ಇದರಿಂದ ಅಮಾಯಕ ಸರ್ಪಗಳು ಯಜ್ಞದಲ್ಲಿ ಆಹುತಿಯಾದವು. ತಕ್ಷಕ ಸರ್ಪವು ಯಜ್ಞಕ್ಕೆ ಆಹುತಿಯಾಗುವುದನ್ನು ಆಸ್ತಿಕ ಮುನಿಯು ಸರ್ಪಯಜ್ಞವನ್ನು ನಿಲ್ಲಿಸಿ ರಕ್ಷಿಸಿದ. ಮಾತ್ರವಲ್ಲ ಸರ್ಪಸಂತತಿ ಸಂಪೂರ್ಣ ನಾಶವಾಗುವುದನ್ನು ತಡೆದ. ಈ ಘಟನೆ ನಡೆದ ದಿನವೇ ಶ್ರಾವಣ ಶುಕ್ಲ ಪಂಚಮಿ. ಇದನ್ನೇ ‘ನಾಗಪಂಚಮಿ’ ಎಂದು ಆಚರಿಸಿಕೊಂಡು ಬಂದಿದ್ದೇವೆ. ಯಜ್ಞಾಗ್ನಿಯಲ್ಲಿ ಅಗ್ನಿಸ್ಪರ್ಶವಾದ ಸರ್ಪಗಳ ಅಗ್ನಿಯ ತಾಪದಿಂದ ತಾಪಶಮನಕ್ಕೆ, ಸರ್ಪಗಳ ಮೇಲೆ ಹಸಿಹಾಲನ್ನು ಎರೆಯುಲಾಯಿತು. ಆದ್ದರಿಂದಲೇ ಈ ದಿನದಂದು ಸರ್ಪಶಿಲೆಗಳಿಗೆ ಹಾಲಿನಿಂದ ಅಭಿಷೇಕ ಮಾಡಿ ಪೂಜಿಸುವರು.

ಸರ್ಪ ಮತ್ತು ವೈಜ್ಞಾನಿಕತೆ

ನಾಗಪಂಚಮಿಯಂದು ನಾಗವಿಗ್ರಹಕ್ಕೆ ಹಾಲಿನಿಂದ ಅಭಿಷೇಕ ಮಾಡುವ ಸಂಪ್ರದಾಯ ಇದೆಯೇ ಹೊರತು, ಜೀವಂತ ಸರ್ಪಕ್ಕೆ ಹಾಲನ್ನು ಕುಡಿಸಲು ಎಲ್ಲಿಯೂ ಹೇಳಿಲ್ಲ. ಸರ್ಪ ಹಾಲನ್ನು ಕುಡಿದರೆ ಅದಕ್ಕೆ ಅಜೀರ್ಣವಾಗಿ ಸಾಯಲೂಬಹುದು. ಇದರಿಂದ ಸರ್ಪಕ್ಕೆ ಹಾಲನ್ನು ಕುಡಿಸಿದ ಪುಣ್ಯಕ್ಕೆ ಬದಲಾಗಿ ಸರ್ಪವಧೆ ಮಾಡಿದ ದೋಷವೇ ಅಧಿಕವಾಗಿ ಮತ್ತೊಂದು ಅನರ್ಥಕ್ಕೆ ಕಾರಣವಾಗುವುದು. ಇನ್ನು ಸರ್ಪವನ್ನು ಹಿಂಸಿಸಬಾರದು, ಕೊಲ್ಲಬಾರದು, ಸರ್ಪವನ್ನು ವಧಿಸಿದರೆ, ವಧಿಸಿದವನ ಕುಟುಂಬದಲ್ಲಿ ಮುಂದೆ ಕ್ಷೀಣ ಸಂತಾನ ಅಥವಾ ಸಂತಾನವೇ ಆಗದು ಎಂಬುದು ಕೇವಲ ನಂಬಿಕೆ ಅಷ್ಟೇ ಅಲ್ಲ, ಸತ್ಯವೂ ಕೂಡ ಆಗಿದೆ.

ಇದನ್ನೂ ಓದಿ | Shravana Masa 2023: ಶ್ರಾವಣ ಬಂತು ನಾಡಿಗೆ; ಮನಸು ಹಬ್ಬಗಳ ಕಡೆಗೆ

ಸರ್ಪವನ್ನು ಕೊಲ್ಲುವಾಗ ಆ ಸರ್ಪವು ಕೊಂದವನನ್ನು ಉದ್ದೇಶಿಸಿ ನೋವಿನಿಂದ ಶಪಿಸುವುದು ಒಂದು ಕಡೆಯಾದರೆ, ಅದು ಸಾಯುವಾಗ ಸೂಸುವ ಅಥವಾ ಹೂರ ಹಾಕುವ ಪ್ರಭಾವವು ಕೊಂದವನ ವಂಶವಾಹಿನಿ ಮೇಲೆ ನೇರ ಪರಿಣಾಮ ಬೀರುವುದಲ್ಲದೇ, ಆತನ ಮುಂದಿನ ತಲೆಮಾರಿಗೂ ಮುಂದುವರಿಯುವುದು. ಅದಕ್ಕಾಗಿ ಯಾವುದೇ ಕಾರಣದಿಂದ ಸರ್ಪ ಮರಣ ಹೊಂದಿದರೂ, ಅದರ ಕೆಟ್ಟ ಪರಿಣಾಮ ಸಮೀಪ ಹೋದ ಎಲ್ಲರ ಮೇಲೆ ಆಗುವುದು ಎಂಬ ಕಾರಣಕ್ಕೆ, ಮೃತಪಟ್ಟ ಸರ್ಪವನ್ನು ದಹನ ಮಾಡಿದರೆ (ಸರ್ಪ ಸಂಸ್ಕಾರ) ಪುಣ್ಯ ಎಂದು ಧಾರ್ಮಿಕತೆಯ  ಒಟ್ಟಿಗೆ ಜೋಡಿಸಿದರು. ಈ ರೀತಿಯದಾದ ಸರ್ಪ ಸಂಬಂಧಿ ದೋಷ ಪರಿಹಾರಕ್ಕಾಗಿ ನಾಗಪ್ರತಿಷ್ಠೆ, ಸರ್ಪಸಂಸ್ಕಾರ , ಆಶ್ಲೇಷಬಲಿ ಇತ್ಯಾದಿ ವಿಧಾನಗಳನ್ನು ಶಾಸ್ತ್ರ ಸೂಚಿಸಿದ್ದು, ಇದರಿಂದ ಅನೇಕರು ಪರಿಹಾರ ಪಡೆದುಕೂಂಡಿದ್ದು ಕೂಡ ಅಷ್ಟೇ ಸತ್ಯವಾಗಿದೆ.

ನಾಗಪಂಚಮಿ ಆಚರಣೆಯ ವಿಧಾನ

ನಾಗ ಪಂಚಮಿಯಂದು ಪ್ರಾತಃಕಾಲದಲ್ಲಿ ಸ್ನಾನ –ನಿತ್ಯ ಕರ್ಮ ಪೂರೈಸಿ, ಶುಭ್ರವಸ್ತ್ರಗಳನ್ನುಟ್ಟು, ನಮ್ಮ ನಮ್ಮ ಕುಟುಂಬದವರು ಆಚರಿಸಿಕೊಂಡು –ನಂಬಿಕೊಂಡು ಬಂದ ನಾಗಬನದ ನಾಗಸನ್ನಿದಿಗೆ ತೆರಳಿ ಅಲ್ಲಿಯ ಹುತ್ತ-ನಾಗವಿಗ್ರಹಕ್ಕೆ ಕ್ಷೀರಾಭಿಷೇಕ ಮಾಡಿ, ಅರಿಶಿನ-ರಕ್ತಚಂದನ ಲೇಪಿಸಿ, ಹೂವಿನಿಂದ ಅಲಂಕರಿಸಿ, ಅಕ್ಕಿಹಿಟ್ಟಿನಿಂದ ಮಾಡಿದ ಅಕ್ಕರೊಟ್ಟಿ, ಸಿಹಿಕಜ್ಜಾಯ, ಅರಳು –ಹಾಲು-ಹಣ್ಣು-ಕಾಯಿಯನ್ನು ನೈವೈದ್ಯ  ಮಾಡುವುದಲ್ಲದೇ, ತೆಂಗಿನ ಗರಿಯಿಂದ ಮಾಡಿದ ಸರ್ಪಾಕೃತಿಯನ್ನು ಸಮರ್ಪಿಸಿ, ಭಕ್ತಿ-ಶ್ರದ್ಧೆಯಿಂದ ಪ್ರಾರ್ಥಿಸುವರು. 

ಹೀಗೆ ನಾಗವನ್ನು ಪೂಜಿಸಿದರೆ:
ಯೇ ತಸ್ಯಾಂ ಪೂಜಯಂತೀಹ ನಾಗನ್ ಭಕ್ತಿಪುರಃಸರಾಃ !
ನತೇಷಾಂ ಸರ್ಪತೋವೀರ ಭಯಂಭವತಿ ಕುತ್ರಚಿತ್ !! (ನಿರ್ಣಯ ಸಿಂಧು)
ನಾಗದೇವರು ನಮ್ಮೆಲ್ಲಾ ಇಷ್ಟಾರ್ಥಗಳನ್ನು ಈಡೇರಿಸುವುದಲ್ಲದೆ, ವಿಷಬಾಧೆ-ಚರ್ಮರೋಗವನ್ನು ಹೋಗಲಾಡಿಸುವುದು, ಸಂತಾನಪ್ರಾಪ್ತಿ-ಧನಪ್ರಾಪ್ತಿ ಉಂಟಾಗಿ, ನಾಗನ ಅನುಗ್ರಹದಿಂದ ವರ್ಷ ಪೂರ್ತಿ ಸುಖ –ಸಂತೋಷ ನೆಲೆಸುವದೆಂಬ ನಂಬಿಕೆ ಇದೆ.

ಇನ್ನು ‘ನಾಗಪಂಚಮಿ ವ್ರತ’ ಆಚರಿಸುವವರು, ಚತುರ್ಥಿ ದಿನ ವ್ರತ ಸಂಕಲ್ಪಿಸಿ, ಒಂದು ಹೊತ್ತು ಮಾತ್ರ ಆಹಾರ ಸ್ವೀಕರಿಸಿ, ನಾಗ ಪಂಚಮಿ ದಿನ ಪೂರ್ಣ ಉಪವಾಸವಿದ್ದು ನಾಗನನ್ನು ಪೂಜಿಸಿ, ರಾತ್ರಿ ಆಹಾರ ಸ್ವೀಕರಿಸುವರು.
ಭಾರತದ ವಿವಿಧ ಭಾಗದಲ್ಲಿ ಅಲ್ಲಿಯ ಸ್ಥಳೀಯ ಸಂಪ್ರದಾಯಕ್ಕನುಗುಣವಾಗಿ ಆಚರಣೆ ಭಿನ್ನ ಭಿನ್ನವಾಗಿದೆ. ಕೆಲ ಭಾಗದಲ್ಲಿ ಮನೆಯ ಮುಖ್ಯದ್ವಾರದ ಎರಡೂ ಪಾರ್ಶ್ವದಲ್ಲಿ ಗೋಮಯದಿಂದ ನಾಗನ ಚಿತ್ರ ಬರೆದು ಹಾಲು ದೂರ್ವೆ- ದರ್ಬೆ- ಚಂದನ ಹೂವುಗಳಿಂದ ಪೂಜಿಸುವರು. ಇನ್ನು ಕೆಲ ಕಡೆ ಬೆಳ್ಳಿ ಬಂಗಾರದ ಪ್ರತಿಮೆಯನ್ನು ಪೂಜಿಸಿ ಕೃತಾರ್ಥರಾಗುವರು. ಉತ್ತರ ಕರ್ನಾಟಕದ ಭಾಗದಲ್ಲಿ ಈ ದಿನ ಸಹೋದರರು, ತಮ್ಮ ವಿವಾಹಿತ ಸಹೋದರಿಯನ್ನು ತಮ್ಮ ಮನೆಗೆ ಕರೆದು ಸತ್ಕರಿಸುವ ಸಂಪ್ರದಾಯವಿದೆ. ‘ಪಂಚಮಿಹಬ್ಬ’ವೆಂದೇ ಅದು ಉತ್ತರ ಕರ್ನಾಟಕದವರಿಗೆ ದೊಡ್ಡಹಬ್ಬವಾಗಿದೆ.

ಇದನ್ನೂ ಓದಿ | Shravana Masa 2023: ಪವಿತ್ರ ಶ್ರಾವಣ ಮಾಸದಲ್ಲಿ ಬರುವ ಸಾಲು ಸಾಲು ಹಬ್ಬಗಳಿವು!

ಭಾರತಿಯ ಪರಂಪರೆಯ ಆಸ್ತಿಕರಾದ ನಮಗೆ ನಾಗ ಎಂದರೆ ಕೇವಲ ಕೋಬ್ರಾ ಅಥವಾ ಕಿಂಗ್ ಕೋಬ್ರಾ ಆಗಲಿ ಅಲ್ಲ ಅಥವಾ ಸಾಮಾನ್ಯ ಸರೀಸೃಪವೂ ಅಲ್ಲ. ಅದು ದೈವೀಗುಣವನ್ನು ಹೊಂದಿರುವ ಶಕ್ತಿಯಾಗಿದೆ. ಈ ದಿನ ನಮ್ಮ ನಮ್ಮ ಸಂಪ್ರದಾಯ ನಂಬಿಕೆಯಂತೆ ನಾಗನನ್ನು ಆರಾಧಿಸಿ ನಮ್ಮ ನಮ್ಮ ಕುಟುಂಬವನ್ನು ಸುರಕ್ಷಿತವಾಗಿಡು, ಸುಖ-ಸಮೃದ್ಧಿಯಿಂದ ಇರುವಂತೆ ಅನುಗ್ರಹಿಸು ಎಂದು ನಾಗಶಕ್ತಿಯಲ್ಲಿ ಪ್ರಾಥಿಸುವುದೇ ನಮಗಿರುವ ಶ್ರೇಷ್ಠ ಮಾರ್ಗವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Meta: ಮೆಟಾದಿಂದ ಯುವ ಜನರಿಗೆ ಡಿಜಿಟಲ್ ಸುರಕ್ಷಾ ಪಾಠ

Meta: ಮೆಟಾ ಸಂಸ್ಥೆಯಿಂದ ಮಂಗಳವಾರ ಬೆಂಗಳೂರು ನಗರದಲ್ಲಿ 1ಎಂ1ಬಿ ಸಹಯೋಗದಲ್ಲಿ ‘ಟಾಕಿಂಗ್ ಡಿಜಿಟಲ್ ಸುರಕ್ಷಾ ಫಾರ್ ಟೀನ್ಸ್’(ಹದಿಹರೆಯದವರಿಗೆ ಡಿಜಿಟಲ್ ಸುರಕ್ಷಾ) ಕಾರ್ಯಕ್ರಮ ಜರುಗಿತು. ಆನ್‌ಲೈನ್ ಸುರಕ್ಷತೆಗಾಗಿ ಮೆಟಾದ ವಿಧಾನಗಳ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸಲು ಮತ್ತು ಆನ್‌ಲೈನ್ ಜಗತ್ತಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹದಿಹರೆಯದವರ ಯೋಗಕ್ಷೇಮವನ್ನು ಕಾಪಾಡುವಂತಹ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಈ ಪೋಷಕ- ಶಿಕ್ಷಕರ ಜಾಗೃತಿ ಕಾರ್ಯಕ್ರಮ ಜರುಗಿತು.

VISTARANEWS.COM


on

Talking Digital Safety for Teens programme by Meta in Bengaluru
Koo

ಬೆಂಗಳೂರು: ಯುವಜನರ ಯೋಗಕ್ಷೇಮದ ಕುರಿತು ಮೆಟಾ (Meta) ಸಂಸ್ಥೆಯಿಂದ ಮಂಗಳವಾರ ನಗರದಲ್ಲಿ 1ಎಂ1ಬಿ ಸಹಯೋಗದಲ್ಲಿ ‘ಟಾಕಿಂಗ್ ಡಿಜಿಟಲ್ ಸುರಕ್ಷಾ ಫಾರ್ ಟೀನ್ಸ್’ (ಹದಿಹರೆಯದವರಿಗೆ ಡಿಜಿಟಲ್ ಸುರಕ್ಷಾ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಆನ್‌ಲೈನ್ ಸುರಕ್ಷತೆಗಾಗಿ ಮೆಟಾದ ವಿಧಾನಗಳ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸಲು ಮತ್ತು ಆನ್‌ಲೈನ್ ಜಗತ್ತಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹದಿಹರೆಯದವರ ಯೋಗಕ್ಷೇಮವನ್ನು ಕಾಪಾಡುವಂತಹ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಈ ಪೋಷಕ- ಶಿಕ್ಷಕರ ಜಾಗೃತಿ ಕಾರ್ಯಕ್ರಮ ಜರುಗಿತು. ಮೆಟಾದ ಪ್ಲಾಟ್ ಫಾರ್ಮ್‌ಗಳನ್ನು ಒಳಗೊಂಡಂತೆ ಹದಿಹರೆಯದ ಮಕ್ಕಳ ಸ್ಮಾರ್ಟ್‌ಫೋನ್‌ ಮತ್ತು ಸಾಧನಗಳ ಬಳಕೆಯನ್ನು ಆತ್ಮವಿಶ್ವಾಸದಿಂದ ನಿರ್ವಹಣೆ ಮಾಡಲು ಸಾಧ್ಯವಾಗುವಂತೆ ಪೋಷಕರನ್ನು ಸಜ್ಜುಗೊಳಿಸುವ ಅನೇಕ ವಿಧಾನಗಳನ್ನು ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು.

ಇದನ್ನೂ ಓದಿ: Cauvery Dispute: ತಮಿಳುನಾಡಿಗೆ 2.5 ಟಿಎಂಸಿ ಕಾವೇರಿ ನೀರು ಹರಿಸಲು CWMA ಸೂಚನೆ

ಕಾರ್ಯಕ್ರಮದಲ್ಲಿ ಹದಿಹರೆಯದ ಮಕ್ಕಳ ಸಾಮಾಜಿಕ ಮಾಧ್ಯಮಗಳ ಬಳಕೆ ಮತ್ತು ಇತರ ಆನ್‌ಲೈನ್ ಟ್ರೆಂಡ್‌ಗಳ ಬಳಕೆ ಕುರಿತು ಪೋಷಕರು ಮತ್ತು ಶಿಕ್ಷಕರ ಒಳನೋಟಗಳನ್ನು ಈ ವೇಳೆ ಸಂಗ್ರಹಿಸಲಾಯಿತು. ಡಿಜಿಟಲ್ ಸುರಕ್ಷತಾ ಉಪಕ್ರಮಗಳ ಕುರಿತು ಹೆಚ್ಚು ತಿಳಿದುಕೊಳ್ಳಲು ಮತ್ತು ಅವರ ಹದಿಹರೆಯದ ಮಕ್ಕಳ ಸಾಮಾಜಿಕ ಜಾಲತಾಣಗಳ ಪ್ರಯಾಣದ ಅನುಭವಗಳ ಕುರಿತು ಚರ್ಚಿಸಲು ನಗರದ ಆಯ್ದ 10-15 ಶಾಲೆಗಳ ಆಯ್ದ ಶಿಕ್ಷಕರು ಮತ್ತು ಪೋಷಕರು ಪಾಲ್ಗೊಂಡಿದ್ದರು.

ಈ ವೇಳೆ ಇನ್‌ಸ್ಟಾಗ್ರಾಮ್‌ನ ಭಾರತದ ಸಾರ್ವಜನಿಕ ನೀತಿಯ ನಿರ್ದೇಶಕಿ ನತಾಶಾ ಜೋಗ್ ಮಾತನಾಡಿ, ನಮ್ಮ ಯುವ ಬಳಕೆದಾರರು ಆನ್‌ಲೈನ್‌ನಲ್ಲಿ ಅರ್ಥಪೂರ್ಣವಾಗಿ ಸಮಯವನ್ನು ಕಳೆಯುವುದರ ಜತೆಗೆ ವಿಶೇಷವಾಗಿ ಅವರು ಇಷ್ಟಪಡುವ ಎಲ್ಲಾ ಕೆಲಸಗಳನ್ನು ಮಾಡುತ್ತಲೇ ಸುರಕ್ಷಿತವಾಗಿರುವ ಅಗತ್ಯವನ್ನು ನಾವು ಗಮನಿಸಿದ್ದೇವೆ.

ಭಾರತದಾದ್ಯಂತ ಈ ಚರ್ಚಾ ಸರಣಿಯ ಮೂಲಕ ನಾವು ಶಿಕ್ಷಕರೊಂದಿಗೆ ಸಂವಹನ ನಡೆಸುತ್ತಲೇ, ಕುಟುಂಬದ ಆನ್‌ಲೈನ್ ಅಭ್ಯಾಸಗಳನ್ನು ನಿರ್ವಹಿಸಲು ಪೋಷಕರನ್ನು ಸಜ್ಜುಗೊಳಿಸುವ ದಾರಿಗಳನ್ನು ಹುಡುಕುತ್ತಿದ್ದೇವೆ. ಆ ಮೂಲಕ ಅವರ ಪಾಲಿಗೆ ಉತ್ತಮ ಎನಿಸುವ ರಕ್ಷಣಾ ವಿಧಾನ ಒದಗಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

ಬಳಕೆದಾರರ ಸುರಕ್ಷತಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿ ಮೆಟಾ ಕಳೆದ ವರ್ಷ ‘ಡಿಜಿಟಲ್ ಸುರಕ್ಷಾ ಶೃಂಗಸಭೆ’ ಅನ್ನು ನಡೆಸಿತ್ತು. ಆ ಮೂಲಕ ಯುವಜನತೆ ಮತ್ತು ಮಹಿಳೆಯರಿಗೆ ಸುರಕ್ಷಿತ ಮತ್ತು ಸಮತೋಲಿತ ಆನ್‌ಲೈನ್ ಅನುಭವವನ್ನು ಒದಗಿಸುವ ಪ್ರಯತ್ನ ಮಾಡಲಾಗಿತ್ತು. ಇದರ ಜತೆಗೆ ಮೆಟಾ, ಆನ್‌ಲೈನ್ ಸುರಕ್ಷತೆ ಮತ್ತು ಡಿಜಿಟಲ್ ಪೌರತ್ವ ಕುರಿತು ಮಾಹಿತಿ, ಜ್ಞಾನ ಮತ್ತು ಶಿಕ್ಷಣದ ಬಗ್ಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸಬಲೀಕರಣಗೊಳಿಸಲು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ (ಐಟಿಬಿಟಿ) ಇಲಾಖೆಯೊಂದಿಗೆ ಎರಡು ವರ್ಷಗಳ ಪಾಲುದಾರಿಕೆಯನ್ನು ಪ್ರಕಟಿಸಿದೆ.

ಕಳೆದ ಮೂರು ವರ್ಷಗಳಲ್ಲಿ, ಆನ್‌ಲೈನ್ ಸುರಕ್ಷತೆಯನ್ನು ಉತ್ತೇಜಿಸಲು ಮೆಟಾ 50ಕ್ಕೂ ಹೆಚ್ಚು ಸುರಕ್ಷತಾ ಪರಿಕರಗಳು ಮತ್ತು ಫೀಚರ್‌ಗಳನ್ನು ಬಿಡುಗಡೆ ಮಾಡಿದೆ. ಹದಿಹರೆಯದವರ ಸುರಕ್ಷತೆಗಾಗಿ ‘ನೈಟ್ ನಡ್ಜಸ್’ ಎಂಬ ಫೀಚರನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು, ಇದು ತಡರಾತ್ರಿಯಲ್ಲಿ ಇನ್ ಸ್ಟಾಗ್ರಾಮ್ ಆಪ್ ಬಳಸುವಾಗ ಆ ಆಪ್ ಅನ್ನು ಷಟ್‌ಡೌನ್ ಮಾಡಲು ಬಳಕೆದಾರರಿಗೆ ಸೂಚಿಸುತ್ತದೆ. ಜತೆಗೆ ‘ಕ್ವೈಟ್ ಮೋಡ್’ ಫೀಚರ್ ಕೂಡ ಇದ್ದು, ಇದು ಹದಿಹರೆಯದ ಬಳಕೆದಾರರಿಗೆ ತಾವು ಆಪ್‌ನಲ್ಲಿ ಕಳೆಯುವ ಸಮಯದ ಮೇಲೆ ಮತ್ತು ಅವರು ಏನು ನೋಡುತ್ತಾರೆ ಎಂಬುದರ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Viral Video: ಇಂಗ್ಲೀಷ್‌ನಲ್ಲೂ ಮಾತಾಡುತ್ತೆ…ಮಿಮಿಕ್ರಿನೂ ಮಾಡುತ್ತೆ ಈ ಗಿಣಿ; ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ!

ಇದಲ್ಲದೆ, ಇನ್ಸ್ಟಾಗ್ರಾಮ್‌ನ ಪೇರೆಂಟಲ್ ಸೂಪರ್ ವಿಷನ್ ಫೀಚರ್ (ಪೋಷಕರ ಮೇಲ್ವಿಚಾರಣಾ ವೈಶಿಷ್ಟ್ಯ) ಮೂಲಕ ಪೋಷಕರು ತಮ್ಮ ಮಕ್ಕಳು ಫಾಲೋ ಮಾಡುವ ಖಾತೆಗಳು, ಅವರ ಮಕ್ಕಳನ್ನು ಫಾಲೋ ಮಾಡುವ ಖಾತೆಗಳನ್ನು ವೀಕ್ಷಿಸಬಹುದು ಮತ್ತು ಅವರ ಆನ್‌ಲೈನ್ ಬಳಕೆಯಲ್ಲಿ ತಮ್ಮನ್ನೂ ಹೆಚ್ಚು ತೊಡಗಿಸಿಕೊಳ್ಳಬಹುದು. ಮೆಟಾದ ‘ಫ್ಯಾಮಿಲಿ ಸೆಂಟರ್’ ಫೀಚರ್ ಪ್ಲಾಟ್‌ಫಾರ್ಮ್‌ಗಳನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ಎಂಬ ಮಾಹಿತಿಯನ್ನು ಹುಡುಕಲು ಪೋಷಕರು ಮತ್ತು ಹದಿಹರೆಯದವರಿಗೆ ಸಹ ಮಾಹಿತಿ ಒದಗಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Continue Reading

ವಿಜಯನಗರ

MLC Election: ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ: ವಿಜಯನಗರ ಜಿಲ್ಲೆಯಲ್ಲಿ ಜೂ.1ರಿಂದ ನಿಷೇಧಾಜ್ಞೆ ಜಾರಿ

MLC Election: ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಹಿನ್ನೆಲೆಯಲ್ಲಿ ಜೂನ್ 01ರ ಸಂಜೆ 06 ಗಂಟೆಯಿಂದ ಜೂ. 03ರ ಮಧ್ಯರಾತ್ರಿಯವರೆಗೆ ವಿಜಯನಗರ ಜಿಲ್ಲೆಯಾದ್ಯಂತ ಸಿಆರ್‌ಪಿಸಿ 1973ರ ಕಲಂ 144ರಡಿ ಹಾಗೂ ಇತರೆ ಜಾರಿಯಲ್ಲಿರುವ ಕಾನೂನು ಅನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ, ಕೆಲವು ಷರತ್ತುಗಳನ್ನು ವಿಧಿಸಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

VISTARANEWS.COM


on

MLC Election North East Graduates Constituency Election Prohibitory order imposed in Vijayanagar district from June 1
Koo

ಹೊಸಪೇಟೆ: ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರ ದ್ವೈವಾರ್ಷಿಕ ಚುನಾವಣೆಯನ್ನು (MLC Election) ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಹಿನ್ನೆಲೆಯಲ್ಲಿ ಜೂನ್ 01ರ ಸಂಜೆ 06 ಗಂಟೆಯಿಂದ ಜೂ. 03ರ ಮಧ್ಯರಾತ್ರಿಯವರೆಗೆ ವಿಜಯನಗರ ಜಿಲ್ಲೆಯಾದ್ಯಂತ ಸಿಆರ್‌ಪಿಸಿ 1973ರ ಕಲಂ 144ರಡಿ ಹಾಗೂ ಇತರೆ ಜಾರಿಯಲ್ಲಿರುವ ಕಾನೂನು ಅನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ, ಕೆಲವು ಷರತ್ತುಗಳನ್ನು ವಿಧಿಸಿ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ 05ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ-ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ. ಚುನಾವಣಾ ಅಭ್ಯರ್ಥಿ ಬೆಂಬಲಿಗರು ಸೇರಿ 05 ಜನರಿಗಿಂತ ಹೆಚ್ಚಿನ ಸಂಖ್ಯೆಯ ಜನರು ಸೇರತಕ್ಕದ್ದಲ್ಲ., ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನುಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ಅವುಗಳೊಂದಿಗೆ ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ. ಮತಗಟ್ಟೆ ಕೇಂದ್ರಗಳ 100 ಮೀಟರ್ ವ್ಯಾಪ್ತಿಯೊಳಗೆ ಚುನಾವಣೆ ಪ್ರಚಾರ ನಿಷೇಧಿಸಿದೆ.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಈ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜಿರಾಕ್ಸ್ ಅಂಗಡಿ, ಬುಕ್‌ಸ್ಟಾಲ್, ಸೈಬರ್‌ ಕೆಫೆಗಳನ್ನು ನಿರ್ಬಂಧಿಸಿದೆ. ಕಲ್ಲುಗಳನ್ನು, ಕಾರ ಪದಾರ್ಥ ಇಲ್ಲವೆ ಸ್ಫೋಟಕ ವಸ್ತುಗಳು ಹಾಗೂ ಯಾವುದೇ ದಾಹಕ ವಸ್ತುಗಳನ್ನು ಹಾಗೂ ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ. ಮನುಷ್ಯ ರೂಪದ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳ ಪ್ರದರ್ಶನ ದಹನ ಮಾಡುವುದನ್ನು ಪ್ರತಿಬಂಧಿಸಲಾಗಿದೆ. ಎಲ್ಲಾ ಮತಗಟ್ಟೆ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಸ್ಥಳ ನಿರ್ಬಂಧಿತ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಖಾಸಗಿ ವಾಹನಗಳ ನಿಲುಗಡೆ, ಧ್ವನಿವರ್ಧಕ ಬಳಕೆ ಮುಂತಾದವುಗಳನ್ನು ನಿಷೇಧಿಸಿದೆ ಹಾಗೂ ಮತಗಟ್ಟೆ ಕೇಂದ್ರಗಳ 100 ಮೀಟರ್ ವ್ಯಾಪ್ತಿಯಲ್ಲಿ ಪಕ್ಷದ ಪ್ರಚಾರ, ಮತದ ಓಲೈಕೆ ಮಾಡುವಂತಿಲ್ಲ.

ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕ ಗಾಂಭೀರ್ಯ ಹಾಗೂ ನೈತಿಕತೆಗೆ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

ಶವಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ. ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ಮಾರ್ಗಸೂಚಿಗಳನ್ನು ನಿಯಮಗಳನ್ನು ಪಾಲಿಸುವುದು., ಚುನಾವಣಾ ಕಾರ್ಯದಲ್ಲಿ ಚುನಾವಣಾಧಿಕಾರಿ ಅವರಿಂದ ಅನುಮತಿ ಪಡೆದ ಅಧಿಕಾರಿಗಳು ಸಿಬ್ಬಂದಿ ಹೊರತುಪಡಿಸಿ ಮತಗಟ್ಟೆ ಕೇಂದ್ರಗಳ ಸುತ್ತಲು 100 ಮೀಟರ್ ಅಂತರದಲ್ಲಿ ಮೊಬೈಲ್ ಫೋನ್, ಕಾರ್ಡ್ಲೆಸ್ ಪೋನ್, ಅಥವಾ ಇನ್ನಿತರ ಎಲೆಕ್ಟ್ರಾನಿಕ್ಸ್ ಉಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 126ರ ಷರತ್ತುಗಳನ್ನು ಪಾಲಿಸತಕ್ಕದ್ದು., ಮತಗಟ್ಟೆಗಳ ಸುತ್ತಲೂ 100 ಮೀಟರ್ ಪರಿಮಿತಿಯಲ್ಲಿ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟರ್ ಬ್ಯಾನರ್ ಅಥವಾ ಇನ್ನಾವುದೇ ವಸ್ತುಗಳನ್ನು ಬಳಸುವಂತಿಲ್ಲ.

ಇದನ್ನೂ ಓದಿ: Cauvery Dispute: ತಮಿಳುನಾಡಿಗೆ 2.5 ಟಿಎಂಸಿ ಕಾವೇರಿ ನೀರು ಹರಿಸಲು CWMA ಸೂಚನೆ

ಚುನಾವಣೆಯ ಮತದಾನವು ಅಂತ್ಯಗೊಳ್ಳುವ 48 ಗಂಟೆಗಳ ಪೂರ್ವದಲ್ಲಿ ಚುನಾವಣೆ ಪ್ರಚಾರ ಹಾಗೂ ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಈ ಸಮಯದಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಬಾಗಿಲಿನಿಂದ ಬಾಗಿಲಿಗೆ ಹೋಗಿ ಮತಯಾಚಿಸುವ ಸಲುವಾಗಿ ಮನೆಯಿಂದ ಮನೆಗೆ ಹೋಗುವುದು ನಿರ್ಬಂಧಿಸಿರುವುದಿಲ್ಲ. ಆದರೆ 5 ಜನರಿಗಿಂತ ಹೆಚ್ಚಿನ ಜನರು ಗುಂಪು ಕೂಡಿಕೊಂಡು ಮನೆಯಿಂದ ಮನೆಗೆ ಹೋಗಿ ಮತಯಾಚಿಸುವುದು ನಿರ್ಬಂಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ 188ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು. ಈ ಆದೇಶವು ಮತದಾನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಚುನಾವಣಾ ಕಾರ್ಯನಿರತ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹಾಗೂ ಒಬ್ಬೊಬ್ಬರಾಗಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮತದಾರರಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Continue Reading

ಕರ್ನಾಟಕ

Artificially Ripened Fruits: ಬಾಳೆ, ಮಾವಿನ ಹಣ್ಣಿನಿಂದ ಕ್ಯಾನ್ಸರ್: ದೂರು ಸಲ್ಲಿಕೆ

Artificially Ripened Fruits: ಬಾಳೆ, ಮಾವು ಮತ್ತಿತರ ಹಣ್ಣುಗಳನ್ನು ಕೃತಕವಾಗಿ ಮಾಗಿಸಲು ರಾಸಾಯನಿಕಗಳ ಬಳಕೆಗೆ ಕಡಿವಾಣ ಹಾಕಬೇಕು ಎಂದು ಬಿಜೆಪಿ ಯುವ ಮುಖಂಡರೊಬ್ಬರು, ಗಂಗಾವತಿ ನಗರಸಭೆಗೆ ಮನವಿ ಸಲ್ಲಿಸಿದ್ದಾರೆ.

VISTARANEWS.COM


on

Artificially ripened fruits
Koo

ಗಂಗಾವತಿ: ಹಣ್ಣುಗಳನ್ನು ತ್ವರಿತಗತಿಯಲ್ಲಿ ಮಾಗಿಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ದುಡ್ಡು ಮಾಡಬೇಕೆಂಬ ಕಾರಣಕ್ಕೆ ನಗರದಲ್ಲಿ ಬಹುತೇಕ ವರ್ತಕರು ಬಾಳೆ ಮತ್ತು ಮಾವಿನ ಹಣ್ಣುಗಳನ್ನು ಕೃತಕವಾಗಿ ಮಾಗಿಸಲು ರಾಸಾಯನಿಕಗಳನ್ನು (Artificially Ripened Fruits) ಬಳಸುತ್ತಿದ್ದು, ಇದರಿಂದ ಜನರಲ್ಲಿ ಕ್ಯಾನ್ಸರ್‌ನಂತ ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ ಎಂಬ ದೂರು ದಾಖಲಾಗಿದೆ.

ರಾಚಪ್ಪ ಸಿದ್ದಾಪುರ

ನಗರಸಭೆಯ ಮಾಜಿ ಸದಸ್ಯ ಹಾಗೂ ಬಿಜೆಪಿ ಯುವ ಮುಖಂಡ ರಾಚಪ್ಪ ಸಿದ್ದಾಪುರ ಅವರು ಈ ಬಗ್ಗೆ ನಗರಸಭೆಯ ಪೌರಾಯುಕ್ತರಿಗೆ ದೂರು ಸಲ್ಲಿಸಿದ್ದು, ಕೃತಕವಾಗಿ ರಾಸಾಯನಿಕಗಳನ್ನು ಬಳಸಿಕೊಂಡು ಹಣ್ಣುಗಳನ್ನು ಮಾಗಿಸುವ ಘಟಕಗಳ ಮೇಲೆ ದಾಳಿ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಬಾಳೆ ಮತ್ತು ಮಾವಿನ ಹಣ್ಣುಗಳನ್ನು ಬೇಗನೇ ಮಾಗಿಸುವ ಮತ್ತು ಆಕರ್ಷಕ ಬಣ್ಣಗಳ ಮೂಲಕ ಗ್ರಾಹಕರನ್ನು ಆಕರ್ಷಿಸಲು ವರ್ತಕರು ಕ್ಯಾಲ್ಷಿಯಂ ಕಾರ್ಬೈಡ್‌ನಂತಹ (calcium carbide) ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕ್ಯಾಲ್ಷಿಯಂ ಕಾರ್ಬೈಡ್‌ನಿಂದ ಆರ್ಸೆನಿಕ್ ಮತ್ತು ಫಾಸ್ಪರಸ್‌ನಂತಃ ಅಂಶಹೊಂದಿರುವ ಅಸಿಟಿಲಿನ್ ಎಂಬ ಅನಿಲ ಬಿಡುಗಡೆಯಾಗುತ್ತದೆ. ಇದು ಮಾನವನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇಂತಹ ರಾಸಾಯನಿಕಯುಕ್ತ ಹಣ್ಣುಗಳನ್ನು ದೀರ್ಘಕಾಲ ಬಳಕೆ ಮಾಡಿದರೆ ಕ್ಯಾನ್ಸರ್‌ನಂತಹ ಕಾಯಿಲೆ ಬರುತ್ತದೆ.
ಈ ಹಿಂದಿನ ಕಾಲದಲ್ಲಿ ಬಿಡಿ-ಸಿಗರೇಟ್, ಜರ್ದಾ, ಗುಟ್ಕಾದಂತ ದುಶ್ಚಟಗಳಿರುವ ವ್ಯಕ್ತಿಗಳಿಗೆ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ, ಈಗ ಯಾವುದೇ ಚಟವಿಲ್ಲದ ವ್ಯಕ್ತಿಗಳಲ್ಲೂ ಕ್ಯಾನ್ಸರ್‌ನಂತಹ ಕಾಯಿಲೆ ಕಾಣಿಸಿಕೊಳ್ಳಲು ಹಣ್ಣುಗಳಿಗೆ ಉಪಯೋಗಿಸುವ ರಾಸಾಯನಿಕಗಳು ಕಾರಣವಾಗಿದೆ.

ಇದನ್ನೂ ಓದಿ | FSSAI Warning: ನೀವು ತಿನ್ನುವ ಮಾವಿನ ಹಣ್ಣು ಸುರಕ್ಷಿತವಾಗಿದೆಯೇ?

ಕೂಡಲೇ ನಗರಸಭೆಯ ಅಧಿಕಾರಿಗಳು ಸೂಕ್ತಗಮನ ಹರಿಸಿ ರಾಸಾಯನಿಕಗಳಿಂದ ಹಣ್ಣುಗಳನ್ನು ಕೃತಕವಾಗಿ ಮಾಗಿಸುವ ಘಟಕಗಳ ಮೇಲೆ ದಾಳಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಚಪ್ಪ ಸಿದ್ದಾಪುರ ಒತ್ತಾಯಿಸಿದ್ದಾರೆ.

Continue Reading

ಯಾದಗಿರಿ

Yadgiri News: ಬರ ಪರಿಹಾರದ ಹಣ ರೈತರ ಸಾಲಕ್ಕೆ ಜಮಾ ಮಾಡಿಕೊಂಡರೆ ಕಾನೂನು ಕ್ರಮ: ಡಿಸಿ

Yadgiri News: ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಬರ ಪರಿಹಾರ, ವಿವಿಧ ಯೋಜನೆಗಳ ಸಹಾಯಧನ, ಸಾಮಾಜಿಕ ನೆರವು ಯೋಜನೆಯ ಸಹಾಯಧನವನ್ನು ರೈತರ ಒಪ್ಪಿಗೆ ಇಲ್ಲದೇ ಸಾಲದ ಖಾತೆಗೆ ಹೊಂದಾಣಿಕೆ ಮಾಡಿಕೊಂಡರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಖಡಕ್ ಸೂಚನೆ ನೀಡಿದ್ದಾರೆ.

VISTARANEWS.COM


on

Legal action if drought relief money is credited to farmers loans says Dr Sushila
Koo

ಯಾದಗಿರಿ: ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಬರ (Drought) ಪರಿಹಾರ, ವಿವಿಧ ಯೋಜನೆಗಳ ಸಹಾಯಧನ, ಸಾಮಾಜಿಕ ನೆರವು ಯೋಜನೆಯ ಸಹಾಯಧನವನ್ನು ರೈತರ ಒಪ್ಪಿಗೆ ಇಲ್ಲದೇ ಸಾಲದ ಖಾತೆಗೆ ಹೊಂದಾಣಿಕೆ ಮಾಡಿಕೊಂಡರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಸುಶೀಲ ಬಿ. ಖಡಕ್ ಸೂಚನೆ (Yadgiri News) ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ರೈತರು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಏನಾದರೂ ತಾಂತ್ರಿಕ ದೋಷಗಳಿದ್ದರೆ ತಿಳುವಳಿಕೆ ಮೂಡಿಸಿ ಇತ್ಯರ್ಥ ಪಡಿಸಬೇಕು. ಬ್ಯಾಂಕುಗಳ ವಿರುದ್ಧ ಸಾರ್ವಜನಿಕರಿಂದ ದೂರು ಬರದಂತೆ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.

ಇದನ್ನೂ ಓದಿ: India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

ಯಾದಗಿರಿ ಜಿಲ್ಲೆಯನ್ನು 2023-24 ನೇ ಸಾಲಿನಲ್ಲಿ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ಅದರಂತೆ ಸರ್ಕಾರದಿಂದ ಬರ ಪರಿಹಾರದ ಮೊತ್ತವನ್ನು ರೈತರಿಗೆ ಪರಿಹಾರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದ್ದು, ಆದರೆ ಕೆಲ ರೈತರು ಬ್ಯಾಂಕ್ ಅಧಿಕಾರಿಗಳು ಸದರಿ ಪರಿಹಾರದ ಮೊತ್ತವನ್ನು ಸಾಲ ರೂಪದಲ್ಲಿ ಕಡಿತಗೊಳಿಸುತ್ತಿರುವುದಾಗಿ ತಿಳಿಸಿರುತ್ತಾರೆ. ಇಂತಹ ಸಮಸ್ಯೆಗಳಿಗೆ ಅಧಿಕಾರಿಗಳು ಅವಕಾಶ ಕೊಡಬಾರದು.

ಈ ನಿಟ್ಟಿನಲ್ಲಿ ಪ್ರಕೃತಿ ವಿಕೋಪದಡಿ ಸಂದಾಯವಾಗುವ ಹಣವನ್ನು ರೈತರ ಸಾಲದ ಖಾತೆಗೆ ಜಮಾ ಮಾಡುವಂತಿಲ್ಲ ಎಂದು ಸ್ಪಷ್ಟವಾದ ಸರ್ಕಾರದ ನಿರ್ದೇಶನವಿರುತ್ತದೆ. ಈ ರೀತಿ ಮಾಡಿದಲ್ಲಿ ತಾವುಗಳು ಸರ್ಕಾರದ ನಿರ್ದೇಶನ ಉಲ್ಲಂಘಿಸಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ತಪ್ಪು ಮಾಡುವ ಬ್ಯಾಂಕ್‌ಗಳ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಡೇ-ನಲ್ಮ್‌ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳು ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ನೋಂದಣಿ ಪ್ರಮಾಣ ಪತ್ರ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಸ್ವ- ಸಹಾಯ ಸಂಘಗಳ ಖಾತೆ ತೆರೆಯಲು ಅವಕಾಶ ಕಲ್ಪಿಸಿ ಕೊಡುವಂತೆ ನಿರ್ದೇಶಿಸಿದರು.

ಪಿ.ಎಂ ಸ್ವನಿಧಿ ಯೋಜನೆಯಡಿಯಲ್ಲಿ ಸಾಲ ನೀಡುವಾಗ ಫಲಾನುಭವಿಗಳಿಗೆ ಯಾವುದೇ ಸ್ಟ್ಯಾಂಪ್ ಶುಲ್ಕ ವಿಧಿಸತಕ್ಕದ್ದಲ್ಲ ಎಂದು ಇದೇ ವೇಳೆ ಸೂಚಿಸಿದರು.

ಇದನ್ನೂ ಓದಿ: Turbulence: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ; ಒಬ್ಬ ಪ್ರಯಾಣಿಕ ಸಾವು, 30 ಮಂದಿಗೆ ಗಾಯ, ಇಲ್ಲಿದೆ ಭೀಕರ ವಿಡಿಯೊ

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ, ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಲೋಕೇಶ್, ಎಸ್‌ಬಿಐ ಪ್ರಾದೇಶಿಕ ಕಛೇರಿಯ ಮುಖ್ಯ ವ್ಯವಸ್ಥಾಪಕ ಲೋಯಿಸ್ ಸಿ.ಎಂ, ಕೆ.ಜಿ.ಬಿ ಕರ್ನಾಟಕ ಗ್ರಾಮೀಣ ಪ್ರಾದೇಶಿಕ ವ್ಯವಸ್ಥಾಪಕ ಗುರುಪ್ರಸಾದ್ ಸ್ವಾಮಿ, ಕೆ.ಜಿ.ಬಿ ಕರ್ನಾಟಕ ರಿಜಿನಲ್ ಆಫೀಸರ್ (ಸಿ.ಎಂ. ಕ್ರೆಡಿಟ್) ಸುಬೇದಾರ್, ಲೀಡ್ ಬ್ಯಾಂಕ್‌ನ ಸಿಬ್ಬಂದಿಗಳಾದ ಕುಮಾರಸ್ವಾಮಿ, ಅಮೀರ್ ಪಟೇಲ್ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರು ಹಾಗೂ ವಿವಿಧ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading
Advertisement
Talking Digital Safety for Teens programme by Meta in Bengaluru
ಕರ್ನಾಟಕ5 mins ago

Meta: ಮೆಟಾದಿಂದ ಯುವ ಜನರಿಗೆ ಡಿಜಿಟಲ್ ಸುರಕ್ಷಾ ಪಾಠ

MLC Election North East Graduates Constituency Election Prohibitory order imposed in Vijayanagar district from June 1
ವಿಜಯನಗರ8 mins ago

MLC Election: ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ: ವಿಜಯನಗರ ಜಿಲ್ಲೆಯಲ್ಲಿ ಜೂ.1ರಿಂದ ನಿಷೇಧಾಜ್ಞೆ ಜಾರಿ

Artificially ripened fruits
ಕರ್ನಾಟಕ9 mins ago

Artificially Ripened Fruits: ಬಾಳೆ, ಮಾವಿನ ಹಣ್ಣಿನಿಂದ ಕ್ಯಾನ್ಸರ್: ದೂರು ಸಲ್ಲಿಕೆ

Legal action if drought relief money is credited to farmers loans says Dr Sushila
ಯಾದಗಿರಿ10 mins ago

Yadgiri News: ಬರ ಪರಿಹಾರದ ಹಣ ರೈತರ ಸಾಲಕ್ಕೆ ಜಮಾ ಮಾಡಿಕೊಂಡರೆ ಕಾನೂನು ಕ್ರಮ: ಡಿಸಿ

Shree Bevinalamma Devi Jaladhi Mahotsav celebration in koratagere taluk
ತುಮಕೂರು12 mins ago

Tumkur News: ವಿಜೃಂಭಣೆಯಿಂದ ನಡೆದ ಶ್ರೀ ಬೇವಿನಳಮ್ಮ ದೇವಿ ಜಲಧಿ ಮಹೋತ್ಸವ

udupi Shree Bhandarakeri math annual award programme in bengaluru
ಕರ್ನಾಟಕ14 mins ago

Bengaluru News: ಸಮಾಜಕ್ಕೆ ಸಂತೋಷ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ: ಪೇಜಾವರ ಶ್ರೀ

5 foreign coins found in anjanadri temple hundi counting
ಕರ್ನಾಟಕ16 mins ago

Koppala News: ಅಂಜನಾದ್ರಿ ದೇಗುಲ ಹುಂಡಿ ಎಣಿಕೆ; 5‌ ವಿದೇಶಿ ನಾಣ್ಯಗಳು ಪತ್ತೆ

IPL 2024
ಪ್ರಮುಖ ಸುದ್ದಿ35 mins ago

IPL 2024 : ಮುಂಬೈ ಕಳಪೆ ಪ್ರದರ್ಶನಕ್ಕೆ ಪಾಂಡ್ಯ ಅಲ್ಲ ರೋಹಿತ್​ ಕಾರಣ ಎಂದ ಹರ್ಭಜನ್ ಸಿಂಗ್​

Narendra Modi
ದೇಶ42 mins ago

Narendra Modi: ಡ್ರಮ್‌, ಜಾಗಟೆ ಬಾರಿಸಿ, ಹಾಡು ಹಾಡಿ; ಮತದಾನ ಹೆಚ್ಚಿಸಲು ಸ್ತ್ರೀಯರಿಗೆ ಕರೆ ಕೊಟ್ಟ ಮೋದಿ

Janardhan Reddy
ರಾಜಕೀಯ45 mins ago

Janardhan Reddy: ಮಡದಿಗಾಗಿ ಮರವೇರಿ ಮಾವು ಕಿತ್ತುಕೊಟ್ಟ ರೆಡ್ಡಿ: ವಿಡಿಯೊ ವೈರಲ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು9 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು11 hours ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

ಟ್ರೆಂಡಿಂಗ್‌