ದಸರಾ ಸಂಭ್ರಮ
Navaratri 2022 | ನವರಾತ್ರಿ ನವವರ್ಣ: ನೀಲಿ ಬಣ್ಣದಲ್ಲಿ ಸಂಭ್ರಮಿಸಿದ ನೀರೆಯರು
ನವರಾತ್ರಿಯ (Navaratri 2022) ಮೂರನೇ ದಿನ ನೀಲಿ ವರ್ಣದ ವಸ್ತ್ರ ಧರಿಸಿ ಸಂಭ್ರಮಿಸಿದ ನಾಡಿನ ಮಹಿಳೆಯರು ಈ ಸಂಭ್ರಮದ ಕ್ಷಣವನ್ನು ವಿಡಿಯೊ ಮಾಡಿ ವಿಸ್ತಾರ ನ್ಯೂಸ್‌ನ ಡಿಜಿಟಲ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊಗಳನ್ನು ನೋಡಿ, ನೀವು ಅವರ ಸಂಭ್ರಮದಲ್ಲಿ ಭಾಗಿಯಾಗಿ.
ನಾಡ ಹಬ್ಬ ನವರಾತ್ರಿಯ (Navaratri 2022) ಸಂಭ್ರಮ ಹೆಚ್ಚಿಸಲು “ವಿಸ್ತಾರ ನ್ಯೂಸ್ʼʼ ಆರಂಭಿಸಿರುವ ನವರಾತ್ರಿ ನವವರ್ಣ ವಿಡಿಯೊ ಸಂಭ್ರಮ ಡಿಜಿಟಲ್ ವೇದಿಕೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನವರಾತ್ರಿಯ ಮೂರನೇ ದಿನದಂದು ನೀಲಿ ವರ್ಣದ ಉಡುಗೆ ತೊಟ್ಟ ಮಹಿಳೆಯರು ತಮ್ಮ ಸಂಭ್ರಮವನ್ನು ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ.
ಪಾಪ ರಹಿತವಾದ ಪರಿಶುದ್ಧವಾದ ವಿಶಾಲ ಆಕಾಶ ನೀಲಿ ಬಣ್ಣದಿಂದ ಕೂಡಿದೆ. ಹೀಗೆಯೇ ನಾವು ಪಾಪದಿಂದ ದೂರವಿದ್ದು ಮಾನಸಿಕ ಸಮತೋಲನೆಯನ್ನು ಕಾಪಾಡಿಕೊಳ್ಳುವಂತೆ ದೇವಿಯಲ್ಲಿ ಪ್ರಾರ್ಥಿಸಿ ಮೂರನೆಯ ದಿನದಂದು ನೀಲಿ ವಸ್ತ್ರಧಾರಣೆ ಮಾಡಿದ ಮಹಿಳೆಯರು, ತಮ್ಮವರೊಂದಿಗೆ ಸೇರಿಕೊಂಡು ವಿಡಿಯೊ ಮಾಡಿ ನಮಗೆ ಕಳುಹಿಸಿದ್ದಾರೆ. ಹೀಗೆ ಬಂದ ನೂರಾರು ವಿಡಿಯೊಗಳಲ್ಲಿ ಕೆಲವನ್ನಷ್ಟೇ #ವಿಸ್ತಾರನ್ಯೂಸ್ ನ ಡಿಜಿಟಲ್ ವೇದಿಕೆಯಲ್ಲಿ ಪ್ರದರ್ಶಿಸಲಾಗಿದೆ.
ನೀಲಿಯ ವಸ್ತ್ರವನ್ನು ಧರಿಸಿ, ನೃತ್ಯ ಮಾಡಿದ, ಭಜನೆ ಮಾಡಿದ, ಫ್ಯಾಷನ್ ಶೋನಂತೆ ಬೆಕ್ಕಿನ ಹೆಜ್ಜೆ ಇಟ್ಟ ಮಹಿಳೆಯರ ವಿಡಿಯೊಗಳನ್ನು ನೋಡುವುದೇ ಚೆಂದ. ಇಂತಹ ಕೆಲ ವಿಡಿಯೊಗಳು ಇಲ್ಲಿವೆ. ಇದನ್ನು ನೋಡಿ, ಹಾಗೆಯೇ ನೀವೂ ಈ ಸಂಭ್ರಮದಲ್ಲಿ ಭಾಗಿಯಾಗಿ.
ಕರ್ನಾಟಕ
Mysore Dasara 2023: ಬರ ಹಿನ್ನೆಲೆ ಸರಳವಾಗಿ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ
Mysore Dasara 2023: ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬರ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅ.15ರಿಂದ ಮೈಸೂರಿನಲ್ಲಿ ದಸರಾ ಮಹೋತ್ಸವ ಆರಂಭವಾಗಲಿದೆ.
ಮೈಸೂರು: ಬರ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವ 2023 ಅನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬರ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ದಸರಾವನ್ನು (Mysore Dasara 2023) ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ರೈತಾಪಿ ವರ್ಗವು ಸಂಕಷ್ಟದಲ್ಲಿದೆ. ಈ ಬಾರಿ ಸರಳ ಮತ್ತು ಅರ್ಥಪೂರ್ಣ ದಸರಾ ಆಚರಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ರೈತರ ಸಂಕಷ್ಟದ ಸಂದರ್ಭಕ್ಕೆ ಪೂರಕವಾಗಿ ಸರ್ಕಾರವು ಈ ಬಾರಿ ಸರಳ ದಸರಾ ಆಚರಿಸಲಿದೆ ಎಂದು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | Mysore Dasara : ನಾದಬ್ರಹ್ಮ ಹಂಸಲೇಖ ಈ ಬಾರಿಯ ಮೈಸೂರು ದಸರಾ ಉದ್ಘಾಟಕ; ಸಿಎಂ ಸಿದ್ದರಾಮಯ್ಯ ಘೋಷಣೆ
ಅ.15ರಿಂದ ನವರಾತ್ರಿ
ಅ.15ರಿಂದ ಮೈಸೂರಿನಲ್ಲಿ ಶರನ್ನವರಾತ್ರಿ ಉತ್ಸವ ಪ್ರಾರಂಭವಾಗಲಿದೆ. ಅಂದು ಬೆಳಗ್ಗೆ 10.15 ರಿಂದ 10.36 ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದಸರಾಗೆ ಚಾಲನೆ ನೀಡಲಾಗುತ್ತದೆ.
- ಅರಮನೆ ಪೂಜೆಗಳು: ಅ.15ರಂದು ಸಾಯಂಕಾಲ 6.30 ರಿಂದ 7.15ಶುಭಮೇಷ ಲಗ್ನದಲ್ಲಿ ಆರಂಭ.
- ಅ.20ರಂದು ಶುಕ್ರವಾರ : ಕಾತ್ಯಾಯಿನೀ – ಸರಸ್ವತಿ ಪೂಜೆ.
(ಮೂಲ ನಕ್ಷತ್ರದಲ್ಲಿ ಸರಸ್ವತಿ ಪೂಜೆ ಪ್ರಾರಂಭ ಮಾಡಿ ಶ್ರವಣ ನಕ್ಷತ್ರದ ದಿನ ಅಂದರೆ ಅ.24ರಂದು ಮಂಗಳವಾರ ವಿಸರ್ಜನೆ) - ಅ.21ರಂದು ಶನಿವಾರ : ಕಾಳರಾತ್ರಿ, ಮಹಿಷಾಸುರ ಸಂಹಾರ.
- ಅ.23 ಸೋಮವಾರ : ಆಯುಧ ಪೂಜೆ.
- ಅ.24ರಂದು ಮಂಗಳವಾರ : ವಿಜಯದಶಮಿ.
ಮಧ್ಯಾಹ್ನ 1.46 ರಿಂದ 2:08 ಮಕರ ಲಗ್ನದಲ್ಲಿ ಮುಖ್ಯಮಂತ್ರಿಯವರಿಂದ ನಂದೀ ಧ್ವಜ ಪೂಜೆ.
ಮಧ್ಯಾಹ್ನ 4.40 ರಿಂದ 5.00ರ ಶುಭ ಮೀನ ಲಗ್ನದಲ್ಲಿ ಮಾನ್ಯ ಮುಖ್ಯಮಂತ್ರಿಯವರಿಂದ ಮತ್ತು ಗಣ್ಯಾತಿಗಣ್ಯರಿಂದ ಪುಷ್ಪಾರ್ಚನೆ ನಂತರ “ಜಂಬೂ ಸವಾರಿ” ಪ್ರಾರಂಭ. - ಅ.26ರಂದು ಭಾನುವಾರ : ಬೆಟ್ಟದ ಶ್ರೀಚಾಮುಂಡೇಶ್ವರಿ ರಥೋತ್ಸವ.
ದಸರಾ ಸಂಭ್ರಮ
Navaratri 2022 | ತಾಯಿ ಶಾರದೆ ಲೋಕ ಪೂಜಿತೆ
ಭಾರತೀಯ ಸಂಸ್ಕೃತಿಗೆ ದೈವೀ ಶಕ್ತಿಯೇ ಮೂಲ, ಮುಖ್ಯವಾದ ಜೀವಾಳ. ಹೀಗಾಗಿ ಶಕ್ತಿ ಆರಾಧನೆಯ ನವರಾತ್ರಿಗೆ (Navaratri 2022 ) ಎಲ್ಲಿಲ್ಲದ ಮಹತ್ವ. ಸಾತ್ವಿಕ ,ರಾಜಸ, ತಾಮಸ ಮೂರು ರೂಪಗಳಿಂದ ಶಕ್ತಿಯ ಉಪಾಸನೆ ನಡೆಯುತ್ತದೆ. ಇದರಲ್ಲಿ ಸಾತ್ವಿಕ ಸತ್ವದ ಶಾರದಾಪೂಜೆ ಕೂಡ ಮಾಡಲಾಗುತ್ತದೆ. ಇಂದು ಸರಸ್ವತಿ ಪೂಜೆ. ತನ್ನಿಮಿತ್ತ ಲೇಖನ ಇಲ್ಲಿದೆ.
ರಮ್ಯ ಗುಹಾ ದ್ವಾರಕಾನಾಥ್ | ಡಾ. ಮೇಖಲ ದ್ವಾರಕನಾಥ್
ನಮ್ಮ ಭಾರತ ದೇಶವು ಪುಣ್ಯ ಭೂಮಿ. ಋಷಿ ಪರಂಪರೆಯ ಅತ್ರಿ ಮಹಾಮುನಿಗಳಿಂದ ಹಿಡಿದು ಎಲ್ಲಾ ಋಷಿಮುನಿಗಳು ರಾಷ್ಟ್ರದ ಉಳಿವಿಗಾಗಿ, ಧರ್ಮ, ಭಕ್ತಿಯನ್ನು, ಎಲ್ಲಕ್ಕಿಂತ ಮಿಗಿಲಾಗಿ ಜ್ಞಾನಕಾಂಡ, ಭಕ್ತಿಕಾಂಡ, ಮುಕ್ತಿಕಾಂಡದ ಜಾಗೃತಿಯ ಮೂಲಕ ಮಾನವ ಕುಲವನ್ನು ಉದ್ದರಿಸಿದ್ದಾರೆ.
ಇವರಲ್ಲಿಯೂ ನಾವು ನವರಾತ್ರಿಯ (Navaratri 2022) ಈ ಹೊತ್ತಿನಲ್ಲಿ ನೆನೆಯಬೇಕಾದವರೆಂದರೆ ಶ್ರೀ ಶಂಕರ ಭಗವತ್ಪಾದರು. ಶ್ರೀಚಕ್ರದ ಮೂಲಕ ಮಹಾಲಕ್ಷ್ಮೀ, ಮಹಾಸರಸ್ವತೀ, ಮಹಾಕಾಳಿ ಐಕ್ಯರೂಪವನ್ನು ಸ್ಥಾಪಿಸಿ, ಸ್ತ್ರೀಯ ಶಕ್ತಿಯನ್ನು ತೋರಿಸಿ ಕೊಟ್ಟವರು ಇವರು. ಶೃಂಗೇರಿಯಲ್ಲಿ ಶಾರದೆಯೇ ಶಂಕರರ ಕರೆಗೆ ಬಂದು ನೆಲೆಸಿದ್ದಾಳೆ. ಮನುಷ್ಯರು ಯಾವುದೇ ಜ್ಞಾನ ಸಂಪಾದನೆ ಮಾಡಬೇಕಾದರೂ ತಮ್ಮಲ್ಲಿರುವ ದುಷ್ಟಗುಣಗಳನ್ನು ತ್ಯಜಿಸಬೇಕು, ಇದಕ್ಕಾಗಿ ಮಹಾಕಾಳಿಯನ್ನು, ಮಹಾಲಕ್ಷ್ಮೀಯನ್ನು ಪೂಜಿಸಬೇಕು. ಮಹಾಜ್ಞಾನ ನೀಡುವ ಸರಸ್ವತಿಯನ್ನು ಜ್ಞಾನ ಪಡೆಯಲು ಅರ್ಚಿಸಬೇಕು.
‘ದಿಯೋ ಯೋನ ಪ್ರಚೋದಯಾತ್’ ಎಂದರೆ ಬುದ್ಧಿಯೇ ಪ್ರಚೋದನೆ ನೀಡುವಂಥದ್ದು. ಭಗವತಿಯ ಮೂರು ಅಂಶಗಳಲ್ಲಿ ಶಾರದೆ ಒಬ್ಬಳಾಗಿದ್ದು, ಬ್ರಹ್ಮನ ಸಂಗಾತಿಯಾಗಿ ಸೃಷ್ಟಿಕಾರ್ಯದಲ್ಲಿ ಸಹಾಯಕಳಾಗಿದ್ದರಿಂದ ಇವಳಿಗೆ ಬ್ರಾಹ್ಮೀ ಎನ್ನುವರು. ಶರನ್ನವರಾತ್ರಿಯಲ್ಲಿ ದುರ್ಗೆಯನ್ನು ಸರಸ್ವತಿ ರೂಪದಲ್ಲಿ ಪೂಜಿಸಿ ಎಂದು ಶಾಸ್ತ್ರಕಾರರು ಮಾನವಕುಲಕ್ಕೆ ಸಾರಿದ್ದಾರೆ. ಏನು ಮಾಡಬೇಕು, ಮಾಡಬಾರದು ಎಂದು ತಿಳಿಸುವ ಮೂಲರೂಪವೇ ದುರ್ಗೆಯಲ್ಲಿ ಐಕ್ಯರೂಪವಾಗಿರುವ ಸರಸ್ವತಿ ಎಂದು ಋಷಿಗಳು ತಿಳಿಸಿದ್ದಾರೆ. ಮಾನವನು ದುರ್ಗೆಯ ಆರಾಧನೆಯಿಂದ ರಾಕ್ಷಸತ್ವವನ್ನು, ದುರಿತಗಳನ್ನು- ಪಾಪಗಳನ್ನು ಕಳೆದುಕೊಳ್ಳುತ್ತಾನೆ ಹಾಗೂ ಸರಸ್ವತಿಯನ್ನು ಪೂಜಿಸುವ ಮೂಲಕ ಜ್ಞಾನ ಸಂಪಾದನೆ ಮಾಡುತ್ತಾನೆ. ಸರಸ್ವತಿಯ ಆರಾಧನೆಯ ಮೂಲ ಉದ್ದೇಶವೇ ಇದಾಗಿರುತ್ತದೆ.
ಮೋಕ್ಷ ಸಂಪಾದಿಸುವ ವ್ರತ
ಸಕಲ ಸೌಕರ್ಯಗಳೂ ಇದ್ದು, ದೇವಿಯನ್ನು ಪೂಜಿಸು ಮನಸ್ಸಿದ್ದರೆ ನವರಾತ್ರಿಯ ಮೊದಲ ದಿನದಂದು ಅಂದರೆ ಪಾಡ್ಯದಂದು ಕಲಶ ಸ್ಥಾಪಿಸಿ, ದೇವಿಯನ್ನು ಆವಾಹಿಸಿ, ಪೂಜಿಸಿ ಸಕಲ ಸೌಭಾಗ್ಯ, ಜ್ಞಾನ ಮೋಕ್ಷವನ್ನು ಸಂಪಾದಿಸುವ ವ್ರತವನ್ನು ಮಾಡುವುದು ಉಚಿತ. ಶಾಸ್ತ್ರದಲ್ಲಿ ತಿಳಿಸಿರುವಂತೆ ಮನುಷ್ಯರು ಜಾತಿ-ಮತ-ಭೇದವನ್ನು ಮರೆತು ದುರ್ಗೆ ಮತ್ತು ಸರಸ್ವತಿಯನ್ನು ಏಕಮುಖದಲ್ಲಿ ಆರಾಧಿಸಬೇಕು.
ಗಣಪತಿಯು ನೈವೇದ್ಯ ಪ್ರಿಯನಾದರೆ ಶಿವನು ಅಭಿಷೇಕಪ್ರಿಯನಾಗಿರುತ್ತಾನೆ. ವಿಷ್ಣು ಅಲಂಕಾರ ಪ್ರಿಯನಾದರೆ, ದೇವಿಯು ನಾಮಪ್ರಿಯೆ. ನಾನಾ ನಾಮಗಳಿಂದ ಅವಳನ್ನು ಕೊಂಡಾಡಿ ಧ್ಯಾನಿಸಿದರೆ ನಮ್ಮ ಹೃದಯ ಸಿಂಹಾಸನದಲ್ಲಿ ಆಕೆ ರಾರಾಜಿಸುವುದರಲ್ಲಿ ಸಂದೇಹವಿಲ್ಲ.
ರತ್ನೈಃ ಕಲ್ಪಿತಮಾನಸಂ ಹಿಮಜಲೈಃ | ಸ್ನಾನಂಚ ದಿವ್ಯಾಂಬರಂ ॥
ನಾನಾ ರತ್ನವಿಭೂಷಣಂ ಮೃಗಮದಾ | ಮೋದಾಂಕಿತಂ ಚಂದನಂ॥
ಜಾಜೀ ಚಂಪಕ ಮಲ್ಲಿಕಾಸುರಬಿಲಂ| ಪುಷ್ಪಂಚ ಧೂಪಂ ತಥಾ॥
ದೀಪಂ ದೇವಿ ದಯಾನಿದೇ॥
ಕೇವಲ ಪ್ರಾರ್ಥನಾ ಶ್ಲೋಕವನ್ನು ಹೇಳಿದರೆ ಸಾಕು ಮನಶುದ್ಧಿಯಾಗಿ, ಮನಸಂಕಲ್ಪ ಈಡೇರುವುದು ಖಂಡಿತ. ಒಂಬತ್ತು ದಿನವೂ ಪೂಜೆ ಮಾಡಲಾಗದವರು ಪಂಚಮಿಯಿಂದ ನವಮಿಯವರಗೆ ಆಗಲೀ, ಸಪ್ತಮಿಯಿಂದ- ನವಮಿಯರೆಗೆ ಪೂಜೆ ಮಾಡಿದರೂ ಯಥಾವತ್ಫ ಲವು ಸಿಗುವುದರಲ್ಲಿ ಸಂದೇಹವಿಲ್ಲ. ಈ ವ್ರತವನ್ನು ಮಾಡಿದರೆ ಮನುಷ್ಯನು ಅಂತ್ಯದಲ್ಲಿ ದುರ್ಗಾಲೋಕ ಸೇರುತ್ತಾರೆಂದು ಸೂತಪುರಾಣಿಕರು ಶೌನಕಾದಿ ಋಷಿಗಳಿಗೆ ಹೇಳಿರುತ್ತಾರೆ.
ವ್ರತದ ಹಿನ್ನೆಲೆ ಕತೆ
ಸುಕೇತ ಎಂಬ ರಾಜನಿಗೆ ಲಾವಣ್ಯದಿಂದ ಕೂಡಿದ ಸುಭೇದಿ ಭಾರ್ಯೆ (ಪತ್ನಿ)ಯಾಗಿದ್ದಳು. ಅವನ ರಾಜ್ಯದಲ್ಲಿ ದುರ್ಭಿಕ್ಷ, ಅಧರ್ಮ, ಅಸತ್ಯ, ಪ್ರಜಾದ್ರೋಹ, ಪ್ರಜೆಗಳ ತೇಜೋವಧೆ, ವೈರ- ದ್ವೇಷ ಯಾವುದೂ ಇರಲಿಲ್ಲ. ಹೀಗಿದ್ದಾಗಲೂ ಜ್ಞಾತಿಗಳ ಪಿತೂರಿಯಿಂದ ಯುದ್ಧದಲ್ಲಿ ರಾಜ ಸುಕೇತನು ಅಧಿಕಾರ ಐಶ್ವರ್ಯ ಕಳೆದುಕೊಂಡನು. ಜೀವ ಭಯದಿಂದ ಪತ್ನಿಯೊಡನೆ ವನವನ್ನು ಪ್ರವೇಶಿಸಿದನು.
ಯುದ್ಧದಲ್ಲಿ ಬಳಲಿ ರೋಗಗ್ರಸ್ತನಾದ ಪತಿಯನ್ನು ಕಂಡು ಸುಭೇದಿಯು ಆತನನ್ನು ಭುಜದ ಮೇಲೆ ಹೊತ್ತು
ಅರಣ್ಯದಲ್ಲಿ ಅಂಗೀರಸ ಮುನಿಯನ್ನು ಭೇಟಿ ಮಾಡುತ್ತಾಳೆ. ತಮ್ಮ ಶೋಕ ಶಮನ ಮಾಡಲು ಮತ್ತು ರಾಜ್ಯವನ್ನು ಮರಳಿ ಪಡೆಯಲು ದಾರಿ ತೋರಿಸುವಂಥೆ ಅಂಗೀರಸ ಮುನಿಗಳಿಗೆ ಬೇಡಿಕೊಳ್ಳುತ್ತಾಳೆ. ಮುನಿಯು ಆಕೆಯ ದುಃಖವನ್ನು ನೀಗಿಸಿ, ಸಕಲ ಸಂಪತ್ತನ್ನು ಮರಳಿ ಕೊಡುವೆನೆಂದು ಭರವಸೆ ನೀಡುತ್ತಾರೆ.
ಅಲ್ಲಿಂದ ಸುಭೇದಿಯನ್ನು ಪಂಚವಟಿ ಕ್ಷೇತ್ರಕ್ಕೆ ಕರೆದುಕೊಂಡು ಬರುತ್ತಾರೆ. ಅಲ್ಲಿ ದೇವಿಯನ್ನು ಪೂಜಿಸಿ ಎಲ್ಲವನ್ನೂ ಪಡೆದುಕೋ ಎಂದು ಸುಭೇದಿಗೆ ಸಾಂತ್ವಾನ ಹೇಳುತ್ತಾರೆ. ಅವರ ಮಾರ್ಗದರ್ಶನದಂತೆಯೇ ರಾಜಪತ್ನಿ ಸುಭೇದಿಯು ಪತಿಯನ್ನು ಭುಜದ ಮೇಲೆ ಹೊತ್ತು ಗೊಂಡಾರಣ್ಯದಲ್ಲಿ ನಡೆದು ಪಂಚವಟಿ ಕ್ಷೇತ್ರದಲ್ಲಿ ಸ್ನಾನಮಾಡಿ ಪತಿಯೊಡನೆ ಮುನಿಪುಂಗವರೊಡನೆ ದುರ್ಗಾ ಎಂಬ ಹೆಸರುಳ್ಳ ಸರಸ್ವತಿಯನ್ನು ಪೂಜಿಸುತ್ತಾಳೆ.
ಮಗನಿಂದ ಮರಳಿ ರಾಜ್ಯ
ಸುಭೇದಿಯು ಪೂಜೆ ಆರಂಭಿಸಿದಂದು ಅಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯ. ಅಂದಿನಿಂದ ಆರಂಭವಾಗಿ ನವಮಿ ಪರ್ಯಾಂತ ಉಪವಾಸವಿದ್ದು, ಹತ್ತನೇ ದಿನ ಪರಮಾನ್ನವನ್ನು ಮಾಡಿ ದೇವರ ಮುಂದೆ ನೈವೇದ್ಯ ಮಾಡುತ್ತಾಳೆ. ಬಳಿಕ ಅಂಗೀರಸ ಮಹರ್ಷಿ ದಂಪತಿಯನ್ನು ಪೂಜಿಸಿ, ಲಭ್ಯವಿದ್ದ ಧಾನ್ಯಗಳನ್ನು ದಕ್ಷಿಣೆಯಿತ್ತು, ಆ ಮುನಿಗಳ ಆಶ್ರಮದಲ್ಲಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಸುಂದರವಾದ ಮಗುವನ್ನು ಪಡೆದು ಆತನಿಗೆ ಸೂರ್ಯಪ್ರತಾಪನೆಂದು ನಾಮಕರಣ ಮಾಡುತ್ತಾಳೆ.
ಸರ್ವಮಾನ್ಯ ದೇವಿ ಸರಸ್ವತಿ
ಸರಸ್ವತಿ ವಾಗ್ದೇವತೆ, ವಿದ್ಯಾಧಿದೇವತೆ, ಜ್ಞಾನದೇವತೆ. “ಶಾರದಾಯೈ ನಮಸ್ತುಭ್ಯಂ ವರದೇಕಾಮರೂಪಿಣೇ| ವಿದ್ಯಾರಂಭೇ ಕರಿಷ್ಟಾಮಿ ಸಿದ್ಧರ್ಬವತು ಮೇ ಸದಾ॥ʼʼ ವಿದ್ಯಾರಂಭ ಮಾಡುವವರು ಶಾರದೆಯನ್ನು ಪ್ರಾರ್ಥಿಸಿ ಪ್ರಾರಂಭಿಸುತ್ತಾರೆ. ನಮ್ಮ ದೇಶದಲ್ಲಿ ಬೌದ್ಧ ಹಾಗೂ ಜೈನರೂ ಕೂಡಾ ಶಾರದೆಯನ್ನು ಪೂಜಿಸಿದ್ದು, ಸೋತ್ರಗಳನ್ನು ರಚಿಸಿದ್ದಾರೆ. ವೀಣಾಪಾಣಿ, ವಿದ್ಯಾದೇವಿ, ನೃತ್ಯ ಸರಸ್ವತಿ ಮುಂತಾದ ಅನೇಕ ಬಗೆಯ ವಿಗ್ರಹಗಳನ್ನು ಕಾಣಬಹುದಾಗಿದೆ. ಶಾರದೆ ಸರ್ವವಂದ್ಯಳು, ಸರ್ವಮಾನ್ಯಳೂ ಆಗಿದ್ದಾಳೆ.
ಪಾಂಡಿತ್ಯದಿಂದಲೂ, ಅಂಗೀರಸ ಮುನಿಗಳ ತಪೋಬಲದಿಂದಲೂ ಬೆಳೆದ ಪುತ್ರನು ಶತ್ರುಗಳ ಮೇಲೆ ಯುದ್ಧ ಘೋಷಿಸಿ ಹೆತ್ತವರ ಜೊತೆಗೆ ಸ್ವರಾಜ್ಯಕ್ಕೆ ಮರಳಿ ಬ್ರಹ್ಮಲೋಕವನ್ನು ಪಡೆಯುತ್ತಾನೆ. ರಾಜಪತ್ನಿಯು ಪ್ರತಿ ಸಂವತ್ಸರದಲ್ಲೂ ದುರ್ಗಾವ್ರತವನ್ನು ಮಾಡಿ ಅಖಂಡ ಸೌಭಾಗ್ಯವತಿಯಾಗಿ, ತನ್ನ ಪತಿ ಸಹಿತವಾಗಿ ದುರ್ಗಾಲೋಕ ಸೇರುತ್ತಾಳೆ. ನವರಾತ್ರಿಯಲ್ಲಿ ವ್ರತ ಮಾಡುವವರು ಈ ಕತೆಯನ್ನು ಕೇಳಬೇಕು.
ಧರ್ಮ ಸಮ್ಮತವಾಗಿ ಶ್ರದ್ಧೆಯಿಂದ ಭಾರತದ ಉದ್ದಗಲಕ್ಕೂ ಈ ವ್ರತ ಮಾಡಿ ದುರ್ಗೆಯನ್ನು ಪೂಜಿಸಬೇಕು. ಆಗ ದೇಶ ದಲ್ಲಿ ಶಾಂತಿ-ನೆಮ್ಮದಿ ನಿರಂತರವಾಗಿರುತ್ತದೆ.
ಇದನ್ನೂ ಓದಿ | Navaratri 2022 | ಭೂತ, ಪ್ರೇತ ಇತ್ಯಾದಿ ಭಯ ದೂರವಾಗಲು ನವರಾತ್ರಿಯ 7ನೇ ದಿನ ಈ ದೇವಿಯನ್ನು ಪೂಜಿಸಿ
ಕರ್ನಾಟಕ
Mysore dasara | ಯುವ ದಸರಾದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಭರ್ಜರಿ ಡ್ಯಾನ್ಸ್
ಯುವ ದಸರಾ ಕಾರ್ಯಕ್ರಮದಲ್ಲಿ ಸಚಿವ ಸೋಮಶೇಖರ್ ಜತೆಗೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕುಣಿಯುವ ಮೂಲಕ ಸಂಭ್ರಮಿಸಿದ್ದಾರೆ.
ಮೈಸೂರು: ನಾಡ ಹಬ್ಬ ದಸರಾ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರತಿ ನಿತ್ಯ ವಿವಿಧ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿದ್ದು, ವೀಕ್ಷಿಸಲು ಸಾವಿರಾರು ಜನ ಆಗಮಿಸುತ್ತಿದ್ದಾರೆ. ಈ ನಡುವೆ ಯುವ ದಸರಾದಲ್ಲಿ(Mysore dasara) ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿಂದಿ ಹಾಡಿಗೆ ಸಚಿವ ಸೋಮಶೇಖರ್ ಸಖತ್ ಸ್ಟೆಪ್ಸ್ ಹಾಕಿ ನೆರೆದಿರುವವರ ಗಮನ ಸೆಳೆದರು. ಈ ವೇಳೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಚಿವರ ಜತೆ ಹೆಜ್ಜೆ ಹಾಕಿದರು.
ಇದನ್ನೂ ಓದಿ | Mysore Dasara 2022 | ಮೈಸೂರು ದಸರಾದಲ್ಲಿ ವಿಂಟೇಜ್ ಕಾರು ಮೋಡಿ; 6ನೇ ದಿನದ ಸಂಭ್ರಮ ಹೀಗಿತ್ತು ನೋಡಿ
ಕರ್ನಾಟಕ
Mysore Dasara 2022 | ಮೈಸೂರು ದಸರಾದಲ್ಲಿ ವಿಂಟೇಜ್ ಕಾರು ಮೋಡಿ; 6ನೇ ದಿನದ ಸಂಭ್ರಮ ಹೀಗಿತ್ತು ನೋಡಿ
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ (Mysore Dasara 2022) ದಿನೇದಿನೆ ರಂಗೇರುತ್ತಿದೆ. ಶನಿವಾರ ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಎಲ್ಲರನ್ನೂ ಆಕರ್ಷಿಸಿದರೆ, 70-80 ವರ್ಷ ಹಳೆಯದಾದ ವಿಂಟೇಜ್ ಕಾರುಗಳು ನೋಡುಗರ ಕಣ್ಮನ ಸೆಳೆದವು.
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ (Mysore Dasara 2022) ಆರನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರವೂ ವೈವಿದ್ಯಮಯ ಕಾರ್ಯಕ್ರಮಕ್ಕೆ ಉತ್ಸವ ಸಾಕ್ಷಿಯಾಯಿತು. ಶಾಲಾ ಮಕ್ಕಳಿಗಾಗಿ ನಡೆದ ಚಿತ್ರ ಬಿಡಿಸುವ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು. ಭಾರಿ ಉತ್ಸಾಹದೊಂದಿಗೆ ಸ್ಪರ್ಧೆಯಲ್ಲಿ ನೂರಾರು ಪುಟಾಣಿಗಳು ಭಾಗವಹಿಸಿದ್ದರು.
ಮೈಸೂರು ಅರಮನೆ, ಮಹಿಷಾಸುರ, ದೊಡ್ಡ ಗಡಿಯಾರ, ಕೆಂಪುಕೋಟೆ, ಜಂಬೂ ಸವಾರಿ, ಭಗತ್ ಸಿಂಗ್, ಸರ್. ಎಂ.ವಿಶ್ವೇಶ್ವರಯ್ಯ, ಗಂಡಭೇರುಂಡ, ಅಂಬಾರಿ, ಪುನೀತ್ ರಾಜಕುಮಾರ್, ಡಾ.ಬಿ.ಆರ್.ಅಂಬೇಡ್ಕರ್, ಚಾಮುಂಡಿಬೆಟ್ಟ, ನಂದಿ ಹೀಗೆ ತರಹೇವಾರಿ ಚಿತ್ರಗಳ ರಚನೆ ಮಾಡಿದ ಪುಟಾಣಿಗಳು ಗಮನ ಸೆಳೆದರು.
ಇದೇ ಸಮಯದಲ್ಲಿ ಕಲಾ ಮಂದಿರದಲ್ಲೇ ನಡೆದ ನೇಯ್ಗೆ ಕಲೆಗೆ ಮೆಚ್ಚುಗೆ ಸೂಚಿಸಿದ ಸಚಿವ ಸೋಮಶೇಖರ್, 23 ಟವಲ್‌ಗಳ ಖರೀದಿ ಮಾಡಿದರು. ಈ ವೇಳೆ ಮಾತನಾಡಿದ ಅವರು ಮಕ್ಕಳ ಕಲೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ 23 ಟವಲ್ ಅಷ್ಟೆ ಇತ್ತು, ಇನ್ನೂ ಹೆಚ್ಚಾಗಿದ್ದರೆ ಅವುಗಳನ್ನೂ ತೆಗೆದುಕೊಳ್ಳುತ್ತಿದ್ದೆ ಎಂದು ಕಲಾವಿದರಿಗೆ ಪ್ರೋತ್ಸಾಹಿಸಿದರು.
ವಿಂಟೇಜ್ ಕಾರ್‌ನಲ್ಲಿ ಸಚಿವ ಸೋಮಶೇಖರ್ ರೈಡ್
ದಸರಾ ಮಹೋತ್ಸವದಲ್ಲಿಂದು ವಿಂಟೇಜ್ ಕಾರ್ ಶೋ ಕೂಡ ಕೇಂದ್ರ ಬಿಂದುವಾಗಿತ್ತು. ಸಚಿವ ಎಸ್.ಟಿ. ಸೋಮಶೇಖರ್ ವಿಂಟೇಂಜ್ ಕಾರ್‌ವೊಳಗೆ ಕುಳಿತು ಖುಷಿ, ಫೋಟೊಗೆ ಪೋಸ್ ಕೊಟ್ಟರು.ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಉದ್ಯಮಿ ಗೋಪಿನಾಥ್ ಶೆಣೈ ಎಂಬುವರು ವಿಂಟೇಜ್ ಕಾರ್ ಶೋ ಆಯೋಜಿಸಿದ್ದರು. ಐತಿಹಾಸಿಕ ಕಾರುಗಳು ನೋಡುಗರ ಕಣ್ಮನ ಸೆಳೆದ್ದವು. ವಿವಿಧ ಕಂಪನಿಗಳ ಹೆಚ್ಚು ಬೆಲೆಬಾಳುವ ಮತ್ತು ಅಷ್ಟೇ ಹಳೆಯದಾಗಿರುವ 30 ಕಾರು, 20 ಬೈಕ್‌ಗಳನ್ನು ಪ್ರದರ್ಶನ ಮಾಡಲಾಗಿದೆ.
ಕಾರ್‌ಗಳ ಕ್ರೇಜ್ ಹೊಂದಿರುವ ಗೋಪಿನಾಥ್ ಶೆಣೈ 1930ರಿಂದ ಕಲೆಕ್ಷನ್ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಿಸಿಕೊಳ್ಳುವುದರ ಜತೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸುವ ಚಿಂತನೆಯಲ್ಲಿ ಇರುವುದಾಗಿ ಉದ್ಯಮಿ ಗೋಪಿನಾಥ್ ಶೆಣೈ ತಿಳಿಸಿದ್ದಾರೆ.
ಪಾರಂಪರಿಕ ನಡಿಗೆ
ಬೆಳ್ಳಂ ಬೆಳ್ಳಗೆ ಪಾರಂಪರಿಕ ನಡಿಗೆ ಕಾರ್ಯಕ್ರಮವು ನಡೆಯಿತು. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ಆಯೋಜನೆ ಮಾಡಲಾಗಿದ್ದ ನಡಿಗೆ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮೈಸೂರಿನ ಇತಿಹಾಸ, ಪಾರಂಪರಿಕ ಕಟ್ಟಡಗಳ ಹಿನ್ನೆಲೆ, ಪ್ರಾಮುಖ್ಯತೆ ಹಾಗೂ ವಾಸ್ತುಶಿಲ್ಪ ಶೈಲಿಯ ಮಹತ್ವದ ಬಗ್ಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ದೊಡ್ಡ ಗಡಿಯಾರ, ಪ್ರಿಮೇಶನ್, ಕಬ್, ಚಾಮರಾಜ ಒಡೆಯರ್ ವೃತ್ತ, ಅರಮನೆ, ನಾಲ್ಕನೇ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ, ಕೃಷ್ಣರಾಜ ಆಸ್ಪತ್ರೆ, ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್‌ಟಿಟ್ಯೂಟ್, ಎಂಪೋರಿಯಮ್, ಮೈಸೂರು ಮೆಡಿಕಲ್ ಕಾಲೇಜು ಹಾಗೂ ಸರ್ಕಾರಿ ಆಯುರ್ವೇದ ಕಾಲೇಜು ಮಾರ್ಗದಲ್ಲಿ ಕೈಗೊಂಡಿದ್ದ ಪಾರಂಪರಿಕ ನಡಿಗೆಯಲ್ಲಿ ಕಟ್ಟಡಗಳ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಸಿಕೊಡಲಾಯಿತು.
ಇವೆಲ್ಲದರ ಜತೆಗೆ ರೈತ ದಸರಾದಲ್ಲಿ ನೂರಾರು ರೈತರು ಮೂಟೆ ಹೊತ್ತು ಓಡುವ ಸ್ಪರ್ಧೆ ಹಾಗೂ ಗೋಣಿ ಚೀಲ ಜಿಗಿತ, ಬಿಲ್ಲುಗಾರಿಕೆ ಸೇರಿದಂತೆ ಹಲವು ಸ್ಪರ್ಧೆಗಳು ನಡೆದವು. ಹಾಗೆ ರಾಘವೇಂದ್ರ ಸ್ವಾಮೀಜಿಯವರ ಜೀವನಚರಿತ್ರೆ ಕುರಿತ ಬೊಂಬೆಗಳ ಪ್ರದರ್ಶನ ಗಮನ ಸೆಳೆದವು.
ಇದನ್ನೂ ಓದಿ | Mysuru dasara | ದಸರಾ ಗೋಲ್ಡ್ ಕಾರ್ಡ್ ಕಾಳಸಂತೆ ದಂಧೆ, 5000 ರೂ. ಕಾರ್ಡ್ ಡಬಲ್ ರೇಟಿಗೆ ಮಾರಾಟ, ತನಿಖೆಗೆ ಆದೇಶ
-
ಸುವಚನ3 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ವೈರಲ್ ನ್ಯೂಸ್14 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಕರ್ನಾಟಕ19 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
South Cinema16 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ಪ್ರಮುಖ ಸುದ್ದಿ12 hours ago
Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ
-
ದೇಶ23 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ಬಾಲಿವುಡ್19 hours ago
Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್ ಸೀರೆಯುಟ್ಟು ಫಸ್ಟ್ ಲುಕ್ನಲ್ಲೇ ನಾಚಿ ನೀರಾದ ರಶ್ಮಿಕಾ!
-
ಕ್ರಿಕೆಟ್19 hours ago
Varanasi Stadium: ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ