Navaratri: ಮೈಸೂರು ದಸರೆಯ ಹೆಜ್ಜೆ ಗುರುತುಗಳು - Vistara News

ಕರ್ನಾಟಕ

Navaratri: ಮೈಸೂರು ದಸರೆಯ ಹೆಜ್ಜೆ ಗುರುತುಗಳು

Navaratri: ವೈಭವದಿಂದ ಆಚರಿಸ್ಪಡುವ ಮೈಸೂರು ದಸರಾಕ್ಕೆ ಶತಮಾನಗಳ ಇತಿಹಾಸವಿದೆ. ವಿಜಯ ದಶಮಿಯ ವೈಭವದ ಮೆರವಣಿಗೆಯೊಂದಿಗೆ ದಸರಾ ಉತ್ಸವಕ್ಕೆ ತೆರೆ ಬೀಳುತ್ತದೆ. ಇದನ್ನು ನೋಡಲೆಂದೇ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.

VISTARANEWS.COM


on

mysure dasara
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: ದೇಶದೆಲ್ಲೆಡೆ ನವರಾತ್ರಿ ಹಬ್ಬದ ಸಡಗರ ಕಂಡುಬರುತ್ತದೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ನವರಾತ್ರಿಯ ವೈಭವ ತುಸು ಹೆಚ್ಚು. ದೇಶದ ಉಳಿದೆಲ್ಲಾ ಕಡೆಗಳಲ್ಲಿರುವ ಒಂಬತ್ತು ರಾತ್ರಿಗಳ ಅಂದರೆ, ನವರಾತ್ರಿಯ ಉತ್ಸವಕ್ಕಿಂತ ಕೊಂಚ ಭಿನ್ನವಾಗಿ, ಹತ್ತನೇ ದಿನದ ವಿಜಯದಶಮಿಯನ್ನು ಅದ್ಧೂರಿಯಾಗಿ ಆಚರಿಸುವ ಪರಂಪರೆ ಮೈಸೂರಿನದ್ದು. ಒಂಬತ್ತು ದಿನಗಳ ಆಚರಣೆಯ ತುದಿಗೆ ಜಂಬೂಸವಾರಿಯೊಂದಿಗೆ ದಸರೆಗೆ ರಾಜಗಾಂಭೀರ್ಯದಿಂದ ತೆರೆ ಬೀಳುತ್ತದೆ. ಇದಕ್ಕೂ ಮುನ್ನ ಮೈಸೂರು ದಸರೆಯ ಪರಂಪರೆ ಮತ್ತು ವೈಭವದ ಮೇಲೊಂದು ಪಕ್ಷಿನೋಟ.

ಧಾರ್ಮಿಕ ಉದ್ದೇಶಗಳಿಗಾಗಿ ಹಲವು ಶತಮಾನಗಳ ಪೂರ್ವದಲ್ಲಿ ಆರಂಭಗೊಂಡ ನವರಾತ್ರಿ ಕಲೆ, ಸಾಂಸ್ಕೃತಿಕ ಉತ್ಸವವಾಗಿ ಪರಿವರ್ತನೆಗೊಂಡಿದ್ದು ಈಗ ಇತಿಹಾಸ. ಕೇವಲ ರಾಜಮನೆತನಗಳ ಆಡಂಬರದ ಪ್ರದರ್ಶನವಾಗಿ ಉಳಿಯದೆ, ಮನೆಮನಗಳ ಸಂಸ್ಕೃತಿಯಾಗಿ, ವಿವಿಧ ಕಲೆಗಳ ವೇದಿಕೆಯಾಗಿ, ಕುಸ್ತಿಯೇ ಮತ್ತಿತರ ಬಲಾಬಲಗಳ ಅಖಾಡವಾಗಿ ಈ ಉತ್ಸವ ಪರಿವರ್ತನೆಗೊಂಡಿದ್ದರಿಂದಲೇ ಇಂದಿಗೂ ನಾಡಹಬ್ಬವೆಂಬ ಪಟ್ಟವನ್ನು ಉಳಿಸಿಕೊಂಡಿದೆ. ದಸರೆಯೆಂಬುದು ಒಂದು ಜಿಲ್ಲೆಯಲ್ಲಿ ನಡೆಯುವ ಸ್ಥಳೀಯ ಆಚರಣೆಗೆ ಸೀಮಿತವಾಗದೆ, ದೂರದೂರದ ಆಸಕ್ತರನ್ನು ಸೆಳೆಯುವಷ್ಟು ಬೆಳೆದಿದೆ.

ಮೈಸೂರು ದಸರೆಯ ಇತಿಹಾಸ

ವಿಜಯನಗರದ ಅರಸರ ಕಾಲದಲ್ಲೇ ಈ ಉತ್ಸವ ಆರಂಭವಾದದ್ದನ್ನು ಚರಿತ್ರೆಯ ಪುಟಗಳು ಹೇಳುತ್ತವೆ. ಈಗ ಮೈಸೂರಿನ ಭಾಗಗಳೂ ಅಂದಿನ ವಿಜಯನಗರದ ಆಡಳಿತದಡಿಯಲ್ಲಿ ಇತ್ತು. ಕ್ರಿ.ಶ. 1136ರಲ್ಲಿ ಆರಂಭವಾದ ನವರಾತ್ರಿಯ ಉತ್ಸವ 1565ರ ಹೊತ್ತಿಗೆ ಸಾಂಸ್ಕೃತಿಕವಾಗಿ ಸಾಕಷ್ಟು ಸಂಪದ್ಭರಿತವಾದ ಸ್ಥಿತಿಗೆ ತಲುಪಿತ್ತು. ಹಂಪೆಯಲ್ಲಿ ಎತ್ತರಕ್ಕೆ ನಿಂತಿರುವ ಮಹಾನವಮಿಯ ದಿಬ್ಬವೂ ಇದಕ್ಕೆ ಸಾಕ್ಷಿ ಹೇಳಿತು. ಆದರೆ ಅರಸೊತ್ತಿಗೆಯ ಪತನಾನಂತರ ತಾತ್ಕಾಲಿಕವಾಗಿ ಈ ಸಂಪ್ರದಾಯಕ್ಕೆ ತೆರೆ ಬಿತ್ತು.

ಒಡೆಯರ್‌ ಕಾಲ

ವಿಜಯನಗರದ ಪತನಾನಂತರ ಮೈಸೂರು ರಾಜ್ಯ ಸ್ವತಂತ್ರವಾಯಿತು. ಆಗ ರಾಜ ಒಡೆಯರ್‌ ಕಾಲದಲ್ಲಿ ಅಂದರೆ 1610ರಂದು ನವರಾತ್ರಿಯ ಉತ್ಸವಗಳು ಪುನರಾರಂಭಗೊಂಡವು. ರಾಜಕೀಯವಾಗಿ ಅರಸೊತ್ತಿಗೆ ಭಿನ್ನ ರೂಪವನ್ನು ತಾಳಿದ್ದರೂ, ನವರಾತ್ರಿಯ ಸಂಭ್ರಮ, ಸಡಗರಕ್ಕೆ ಬರ ಇರಲಿಲ್ಲ. ನಂತರದ ಶತಮಾನಗಳಲ್ಲಿ ಒಡೆಯರ ಆಳ್ವಿಕೆ ತಪ್ಪಿ, ಮೈಸೂರಿನಲ್ಲಿ ಹೈದರ್‌-ಟಿಪ್ಪು ಆಡಳಿತ ಇದ್ದಾಗಲೂ ದಸರೆಯ ರಂಗು ಕಡಿಮೆ ಆಗಿರಲಿಲ್ಲ. ಆಳರಸರಿಗೆ ಬೇಕಾದಂತೆ ಕೆಲವು ಬದಲಾವಣೆಗಳು ಉತ್ಸವದಲ್ಲಿ ಬಂದರೂ, ಈ ನೆಲದ ಸಾಂಸ್ಕೃತಿಕ ಸೊಗಡು ಗಾಢವಾಗಿಯೇ ಇತ್ತು. ಟಿಪ್ಪುವಿನ ಮರಣಾನಂತರ, ಒಡೆಯರ್‌ ಪರಂಪರೆ ಮುಂದುವರಿದ ಮೇಲೆ ದಸರೆಯ ವೈಭೋಗಕ್ಕೆ ಇನ್ನಷ್ಟು ಗರಿಗಳು ಮೂಡಿದವು.

ದರ್ಬಾರ್‌

ಮುಮ್ಮಡಿ ಕೃಷ್ಟರಾಜ ಒಡೆಯರ್‌ ಕಾಲದಲ್ಲಿ ದಸರೆಗಾಗಿ ವಿಶೇಷ ದರ್ಬಾರ್‌ ನಡೆಸುವ ಪದ್ಧತಿ ಚಾಲ್ತಿಗೆ ಬಂತೆಂದು ಹೇಳಲಾಗುತ್ತದೆ. ನಾಲ್ವಡಿ ಕೃಷ್ಟರಾಜ ಒಡೆಯರ್‌ ಕಾಲದಲ್ಲಿ ಅಲಂಕೃತ ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ಅರಸರು ಮೆರವಣಿಗೆಯಲ್ಲಿ ಸಾಗುವ ಕ್ರಮಕ್ಕೆ ಮೊದಲಾಯಿತು. ಮೆರವಣಿಗೆಯ ವೈಭವ ನೋಡುವುದಕ್ಕೆ ದೂರದೂರುಗಳಿಂದ ಜನ ಕಾಲ್ನಡಿಗೆಯಲ್ಲಾದರೂ ಬರುತ್ತಿದ್ದ ಬಗ್ಗೆ ಉಲ್ಲೇಖಗಳಿವೆ. ಅಂತೂ ಜನಮಾನಸದಲ್ಲಿ ದಸರೆಯ ಮಹೋತ್ಸವವೆಂದರೆ ವೈಭೋಗದ ಪರಾಕಾಷ್ಠೆ ಎಂಬ ಭಾವ ಮೂಡಿದ್ದು ಸುಳ್ಳಲ್ಲ.

ಮೈಸೂರಿನಲ್ಲಿ ವಿಜಯದಶಮಿಯ ಆಚರಣೆಗೆ ಸಾಕಷ್ಟು ದೊಡ್ಡ ಪೌರಾಣಿಕ ಹಿನ್ನೆಲೆಯೇ ಇದೆ. ಸತ್ಪುರುಷರ ನೆನಪಿಗಾಗಿ, ಅವರ ಹೆಸರಿನ ಊರು, ಕೇರಿ, ಕೋಟೆ-ಕೊತ್ತಲಗಳಿರುವುದು ಸಾಮಾನ್ಯ. ಆದರೆ ಮೈಸೂರಿಗೆ ಈ ಹೆಸರು ಬಂದಿದ್ದು ಮಹಿಷನೆಂಬ ರಕ್ಕಸನ ಊರಾಗಿತ್ತು ಎಂಬ ಕಾರಣಕ್ಕೆ. ಊರಿಗೆಲ್ಲ ಉಪದ್ರಕಾರಿಯಾಗಿದ್ದ ಆ ದುಷ್ಟ ಶಕ್ತಿಯನ್ನು ನಿರ್ಮೂಲಗೊಳಿಸಿ, ಊರು ಕಾಯುವುದಕ್ಕೆಂದು ಬೆಟ್ಟದ ಮೇಲೆ ನೆಲೆಸಿದ ಚಾಮುಂಡಿ ದೇವಿಯ ವಿಜಯೋತ್ಸವದ ಪ್ರತೀಕವಾಗಿ ವಿಜಯದಶಮಿಯ ಪರಂಪರೆ ಮೈಸೂರಿನಲ್ಲಿ ಆರಂಭವಾಗಿದ್ದು. ದೇಶದ ಉಳಿದೆಡೆಗೆ, ಗೋಗ್ರಹಣದಲ್ಲಿ ಕೌರವರ ಮೇಲೆ ಪಾಂಡವರು ಗಳಿಸಿದ ಜಯ ಮತ್ತು ರಾವಣನ ಮೇಲೆ ರಾಮ ಸಾಧಿಸಿದ ವಿಜಯದ ದ್ಯೋತಕವಾಗಿಯೂ ವಿಜಯದಶಮಿ ಆಚರಣೆಯಲ್ಲಿದೆ. ಕಾರಣ ಏನೇ ಇದ್ದರೂ ಉದ್ದೇಶ ಒಂದೇ- ಕೆಡುಕಿನ ಮೇಲೆ ಒಳಿತಿನ ಜಯ.

ಬದಲಾವಣೆಯ ಕಾಲಘಟ್ಟದಲ್ಲಿ…

ಸ್ವಾತಂತ್ರ್ಯಾನಂತರ ದಸರೆಯ ಆಚರಣೆ ಮತ್ತು ಮೆರವಣಿಗೆಯ ಸ್ವರೂಪ ಬದಲಾಯಿತು. ಚಿನ್ನದ ಅಂಬಾರಿಯಲ್ಲಿ ನಾಡಪ್ರಭುವಿನ ಬದಲಿಗೆ ನಾಡದೇವತೆ ಚಾಮುಂಡಿಯ ಮೆರವಣಿಗೆ ಪ್ರಾರಂಭವಾಯಿತು. ಅರಸೊತ್ತಿಗೆ ಖಾಸಗಿ ದರ್ಬಾರ್‌ ಈಗ ಸಹ ಚಾಲ್ತಿಯಲ್ಲಿದ್ದರೂ, ಅದಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅರಮನೆಯ ಸಂಪ್ರದಾಯ ಪಾಲನೆಗಾಗಿ ಅದೊಂದು ನಡೆಯುವುದು ಬಿಟ್ಟರೆ ಇದೀಗ ಸಂಪೂರ್ಣ ಸರ್ಕಾರಿ ಪ್ರಾಯೋಜಿತ ದಸರಾ. ಸಂಗೀತ, ನೃತ್ಯ, ನಾಟಕ, ಸಿನೆಮಾ, ನಾನಾ ಜಾನಪದ ಪ್ರಕಾರಗಳ ಪ್ರದರ್ಶನ, ರೈತರ ಆಸಕ್ತಿಗೆ, ಯುವಕರ ಮೋಜು-ಮಸ್ತಿಗೆ ಅಗತ್ಯವಾದ ಕಾರ್ಯಕ್ರಮಗಳು, ಹೂವುಗಳ ಅಲಂಕಾರ, ದೀಪಾಲಂಕಾರ, ಆಹಾರ, ವಿಹಾರ, ಖರೀದಿ… ಹೀಗೆ ಎಲ್ಲರಿಗೂ, ಎಲ್ಲದಕ್ಕೂ ಒದಗಿಬರುವಂಥ ಸ್ವರೂಪದಲ್ಲಿ ಇಂದು ದಸರಾ ಆಚರಣೆಗೊಳ್ಳುತ್ತಿದೆ.

ದೀಪಾಲಂಕಾರ

ಅರಮನೆ ಮತ್ತು ಅದರ ಆವರಣವನ್ನು ಲಕ್ಷಾಂತರ ದೀಪಗಳಿಂದ ಅಲಂಕರಿಸುವ ಕ್ರಮ ಇದೆ. ಸಂಜೆ 7 ಗಂಟೆಗೆ ಸರಿಯಾಗಿ ಝಗ್ಗನೆ ಬೆಳಗುವ ದೀಪಗಳನ್ನು ನೋಡಲೆಂದೇ ಸಾವಿರಾರು ಜನ ಆರಮನೆಯ ಆವರಣದಲ್ಲಿ ಜಮಾಯಿಸುತ್ತಿದ್ದರು. ಇವೆಲ್ಲವುಗಳ ಜತೆಗೆ ಇಡೀ ಊರನ್ನೇ ದೀಪಗಳಿಂದ ಅಲಂಕರಿಸುವ ಪರಿಪಾಠ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಹಿಂದೆಲ್ಲ ಹಾದಿ-ಬೀದಿಗಳನ್ನು ತಳಿರು-ತೋರಣ, ರಂಗವಲ್ಲಿಗಳಿಂದ ಅಲಂಕರಿಸುತ್ತಿದ್ದಂತೆ ಈಗ ದೀಪಗಳ ಸರಮಾಲೆಗಳು ರಾತ್ರಿಯನ್ನೂ ಬೆಳಕಾಗಿಸುತ್ತವೆ. ಇಡೀ ಊರಿಗೆ ಹಬ್ಬದ ಮೆರುಗು ನೀಡುತ್ತವೆ.

ವಿಜಯದಶಮಿ

ಹೌದು, ನವರಾತ್ರಿಗಳಿಗೆ ಮೈಸೂರಿನಲ್ಲಿ ದೇವಿಯ ಆರಾಧನೆ, ಉತ್ಸವ ಕೊನೆಯಾಗುವುದಿಲ್ಲ. ದಶಮಿಯಂದು ಮಹಿಷಮರ್ದಿನಿಯ ವಿಜಯಯಾತ್ರೆ ನಡೆಯಲೇಬೇಕು. ನಾಡದೇವತೆ ಚಾಮುಂಡಿಯ ವಿಗ್ರಹವನ್ನು ಚಿನ್ನದ ಅಂಬಾರಿಯಲ್ಲಿರಿಸಿಕೊಂಡು, ಆನೆಗಳ ದಂಡು, ಕಲಾವಿದರ ಉತ್ಸಾಹ ಸೇರಿದ ಸರ್ವಾಂಗ ಸುಂದರ ಮೆರವಣಿಗೆ ಹೊರಡಬೇಕು. ಇವೆಲ್ಲಕ್ಕೂ ಕಲಶವಿಟ್ಟಂತೆ, ಸಂಜೆ ನಡೆಯುವ ಪಂಜಿನ ಕವಾಯಿತಿನೊಂದಿಗೆ ಹತ್ತು ದಿನಗಳ ದಸರೆಗೆ ಮೈಸೂರಿನಲ್ಲಿ ತೆರೆ ಬೀಳುತ್ತದೆ.

ಇದನ್ನೂ ಓದಿ: Navaratri: ದಸರಾ ರಜೆಯಲ್ಲಿ ಇಲ್ಲೆಲ್ಲ ಸುತ್ತಾಡಿ; ಕೆಎಸ್‌ಆರ್‌ಟಿಸಿ ಟೂರ್‌ ಪ್ಯಾಕೇಜ್‌ ಘೋಷಣೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Koppala News: ಅಕ್ರಮ ಜಾನುವಾರು ಸಾಗಾಟ: 9 ಜನ ಆರೋಪಿಗಳ ಬಂಧನ

Koppala News: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಗಂಗಾವತಿ ಗ್ರಾಮೀಣ ಠಾಣಾ ಪೊಲೀಸರು ದಾಳಿ ನಡೆಸಿ, 16 ಜಾನುವಾರುಗಳನ್ನು ರಕ್ಷಣೆ ಮಾಡಿ, 9 ಜನ ಆರೋಪಿಗಳನ್ನು ಬಂಧಿಸಿರುವ ಘಟನೆ ಗಂಗಾವತಿ ತಾಲೂಕಿನ ಕಡೇಬಾಗಿಲು ಗ್ರಾಮದ ಬಳಿ ಜರುಗಿದೆ.

VISTARANEWS.COM


on

Illegal Cattle Trafficking 9 Accused Arrested in gangavathi
Koo

ಗಂಗಾವತಿ: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ (Illegal Cattle Trafficking) ಖಚಿತ ಮಾಹಿತಿ ಮೇಗೆ ಗಂಗಾವತಿ ಗ್ರಾಮೀಣ ಠಾಣಾ ಪೊಲೀಸರು ದಾಳಿ ನಡೆಸಿ, 16 ಜಾನುವಾರುಗಳನ್ನು ರಕ್ಷಣೆ ಮಾಡಿ, 9 ಆರೋಪಿಗಳನ್ನು ಬಂಧಿಸಿರುವ ಘಟನೆ (Koppala News) ಜರುಗಿದೆ.

ಇದನ್ನೂ ಓದಿ: Job Alert: 506 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಮೇ 14ರೊಳಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ

ಘಟನೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆಲೂರು ಮಂಡಲದ ಸೀನಹೊತೂರಿನ ಚಾಲಕ ರಘುವೀರ್, ತುಮಿಳುಬೀಡು ಗ್ರಾಮದ ಶೇಖಣ್ಣ ತಹಸೀಲ್ದಾರ್, ಚಂದ್ರಣ್ಣ ತಹಸೀಲ್ದಾರ್, ರಾಮಾಂಜನೇಯ, ಹಂಪಾ ಗ್ರಾಮದ ಆಂಜನೇಯ, ಪೆದ್ದಹೂತೂರಿನ ಹುಚ್ಚೀರಪ್ಪ, ಮೈನಾಪುರದ ವೈಕುಂಠ, ಟಿ. ಹುಚೀರಪ್ಪ ಹಾಗೂ ರಾಯಪ್ಪ ಕೊಡೇಕಲ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ವಿವರ

ಕೊಪ್ಪಳ ಜಿಲ್ಲೆಯ ಗಿಣಿಗೇರಾದಿಂದ 16 ಎತ್ತುಗಳನ್ನು ಖರೀದಿಸಿದ ಆರೋಪಿಗಳು, ಒಂದೇ ವಾಹನದಲ್ಲಿ ಇಕ್ಕಟ್ಟಾದ ಜಾಗದಲ್ಲಿ ಜಾನುವಾರುಗಳಿಗೆ ಕೂರಲು, ನಿಲ್ಲಲು ಅವಕಾಶವಿಲ್ಲದಂತೆ ಸಾಗಿಸಲಾಗುತ್ತಿತ್ತು. ಈ ಖಚಿತ ಮಾಹಿತಿಯ ಮೇರೆಗೆ ಗಂಗಾವತಿ ತಾಲೂಕಿನ ಕಡೇಬಾಗಿಲು ಗ್ರಾಮದ ಬಳಿ ದಾಳಿ ಮಾಡಿದ ಪೊಲೀಸರು, ವಾಹನದಲ್ಲಿ ಪರಿಶೀಲನೆ ಮಾಡಲಾಗಿ 16 ಜಾನುವಾರುಗಳನ್ನು ಅಕ್ರಮವಾಗಿ ಅಸುರಕ್ಷಿತವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: Road Accident: ಅಮೆರಿಕದಲ್ಲಿ ಭೀಕರ ಅಪಘಾತ, 20 ಅಡಿ ಎತ್ತರ ಜಿಗಿದ ಕಾರು; 3 ಭಾರತೀಯ ಮಹಿಳೆಯರ ಸಾವು

ಜಾನುವಾರುಗಳನ್ನು ಖರೀದಿ ಮಾಡಿದ್ದಕ್ಕೆ ಅಥವಾ ಸಾಗಾಣಿಕೆ ಮಾಡುತ್ತಿರುವುದಕ್ಕೆ ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ಅನುಮಾನಗೊಂಡ ಪೊಲೀಸರು, ಜಾನುವಾರುಗಳನ್ನು ರಕ್ಷಣೆ ಮಾಡಿ, ವಾಹನ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Continue Reading

ಕೊಪ್ಪಳ

Lok Sabha Election 2024: ಬಿಜೆಪಿಯವರು 10 ವರ್ಷದಲ್ಲಿ ಏನು ಮಾಡಿದ್ದೀರಿ ಹೇಳಿ ಎಂದ ಬಿ.ಕೆ. ಹರಿಪ್ರಸಾದ್

Lok Sabha Election 2024: ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷದ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬುವುದನ್ನು ಜನರ ಮುಂದಿಡಲಿ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

VISTARANEWS.COM


on

Congress leader B K Hariprasad latest statement In Gangavathi
Koo

ಗಂಗಾವತಿ: ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷದ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬುವುದನ್ನು ಜನರ ಮುಂದಿಡಲಿ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ (Lok Sabha Election 2024) ಹೇಳಿದ್ದಾರೆ. ನಗರದ ಆನೆಗೊಂದಿ ರಸ್ತೆಯಲ್ಲಿರುವ ಮಾಜಿ ಸಂಸದ ಎಚ್.ಜಿ. ರಾಮುಲು ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

60 ವರ್ಷದಲ್ಲಿ ಕಾಂಗ್ರೆಸ್‌ನವರು ಏನು ಮಾಡಿದ್ದಾರೆ ಎಂದು ಮೋದಿಯಾದಿಯಾಗಿ ಬಿಜೆಪಿಗರು ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುತ್ತಾರೆ. ಆಯ್ತು ನಮಗೆ ಗಣಿತದ ಲೆಕ್ಕಾಚಾರ ಬರಲ್ಲ ಎಂದೇ ಭಾವಿಸಿ. ಆದರೆ ಕಳೆದ ಹತ್ತು ವರ್ಷದಲ್ಲಿ ನೀವೇನು ಮಾಡಿದ್ದೀರಿ ಎಂಬುವುದನ್ನು ಜನರ ಮುಂದಿಡಬೇಕಲ್ಲ ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: Job Alert: 506 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಮೇ 14ರೊಳಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ

ಚುನಾವಣೆ ಸಂದರ್ಭದಲ್ಲಿ ತಾವು ನೀಡಿದ ಆಡಳಿತ, ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಮತ ಕೇಳಬೇಕು. ಆದರೆ ಬಿಜೆಪಿಗರಿಗೆ ಇದ್ಯಾವುದೂ ಬೇಡ. ಕೇವಲ ಧರ್ಮ, ಜಾತಿ ಆಧಾರದ ಮೇಲೆ ಸಮಾಜವನ್ನು ಇಬ್ಭಾಗವಾಗಿಸುವ ಹೇಳಿಕೆಗಳಿಂದ ಚುನಾವಣೆಗೆ ಹೋಗುತ್ತಾರೆ. ಜನರಲ್ಲಿ ಕೋಮು ಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಚುನಾವಣೆಯ ಸಂದರ್ಭದಲ್ಲಿ ಮಾಡಿದ ಕಾರ್ಯಸಾಧನೆ ಏನು, ಮುಂದಿನ ಅವಧಿಯಲ್ಲಿ ಏನು ಮಾಡುತ್ತೇವೆ ಎಂಬುವುದನ್ನು ಪ್ರಣಾಳಿಕೆ ಮೂಲಕ ಜನರಿಗೆ ಹೇಳಬೇಕು ಎಂದು ಅವರು ತಿಳಿಸಿದರು.

ಕಳೆದ ಹತ್ತು ವರ್ಷದಲ್ಲಿ ಈ ದೇಶಕ್ಕೆ ಉಪಯುಕ್ತವಾಗುವ ಒಂದೇ ಒಂದು ಸ್ಪಷ್ಟ ಯೋಜನೆ ಜಾರಿಗೆ ತರಲು ಸಾಧ್ಯವಾಗಿಲ್ಲ ಎಂದು ಟೀಕಿಸಿದ ಅವರು, ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೋ ಯಾತ್ರೆ ಮೂಲಕ ದೇಶದುದ್ದಗಲಕ್ಕೂ ಇರುವ ಸಮಸ್ಯೆಗಳನ್ನು ಅರಿತು ಅವುಗಳ ಪರಿಹಾರಕ್ಕಾಗಿ ಪ್ರಣಾಳಿಕೆಯನ್ನು ತಯಾರಿಸಿದ್ದಾರೆ. ಆದರೆ ಬಿಜೆಪಿಯ ಪ್ರಣಾಳಿಕೆಯಲ್ಲಿ ಏನೂ ಇಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ: Road Accident: ಅಮೆರಿಕದಲ್ಲಿ ಭೀಕರ ಅಪಘಾತ, 20 ಅಡಿ ಎತ್ತರ ಜಿಗಿದ ಕಾರು; 3 ಭಾರತೀಯ ಮಹಿಳೆಯರ ಸಾವು

ಈ ಸಂದರ್ಭದಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಎಚ್.ಆರ್. ಶ್ರೀನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

ಯಾದಗಿರಿ

Lok Sabha Election 2024: ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಗೆಲ್ಲಿಸಿ, ನಿಮ್ಮೆಲ್ಲರ ಧ್ವನಿಯಾಗಿ ಕೆಲಸ ಮಾಡುವೆ: ರಾಧಾಕೃಷ್ಣ ದೊಡ್ಡಮನಿ

Lok Sabha Election 2024: ಯಾದಗಿರಿ ಜಿಲ್ಲೆಯ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಯರಗೋಳ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ, ಮತಯಾಚನೆ ನಡೆಸಿದರು.

VISTARANEWS.COM


on

Kalaburagi Lok Sabha Constituency Congress candidate Radhakrishna Doddamani election campaign
Koo

ಯಾದಗಿರಿ: ಈ ಬಾರಿಯ ಚುನಾವಣೆಯಲ್ಲಿ (Lok Sabha Election 2024) ತಮಗೆ ಮತ ನೀಡಿ ಆಶೀರ್ವದಿಸಿ, ನಿಮ್ಮೆಲ್ಲರ ಧ್ವನಿಯಾಗಿ, ಅಭಿವೃದ್ದಿ ಪರ ಕೆಲಸ ಮಾಡುತ್ತೇನೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮನವಿ ಮಾಡಿದರು.

ಜಿಲ್ಲೆಯ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಯರಗೋಳ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: karnataka Weather : ದೂರ ಸರಿದ ಮಳೆ; ಬೆಂಗಳೂರಲ್ಲಿ 39ರ ಗಡಿದಾಟಲಿದೆ ಗರಿಷ್ಠ ಉಷ್ಣಾಂಶ! 15 ಜಿಲ್ಲೆಗಳಿಗೆ ಅಲರ್ಟ್‌

ಈ ಚುನಾವಣೆಯು ಸತ್ಯ ಮತ್ತು ಸುಳ್ಳಿನ ನಡುವೆ ನಡೆಯುತ್ತಿದೆ, ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ ಎಂದ ಅವರು, ಕಳೆದ ಐದು ವರ್ಷಗಳಲ್ಲಿ ಕಲಬುರಗಿ ಕ್ಷೇತ್ರದಲ್ಲಿ ಅಭಿವೃದ್ದಿ ಎಂಬುವುದು ಮರಿಚಿಕೆಯಾಗಿದೆ, ಕೇಂದ್ರ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ಮನೋಭಾವನೆ ತೋರಿದೆ, ಕ್ಷೇತ್ರದ ಅಭಿವೃದ್ದಿಗೆ ನಾನು ಹತ್ತಾರು ಹೊಸ ಯೋಜನೆಗಳ ಕಲ್ಪನೆಗಳನ್ನು ಇಟ್ಟುಕೊಂಡು ಚುನಾವಣೆ ಕಣಕ್ಕೀಳಿದಿದ್ದೇನೆ, ಕಲಬುರಗಿ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿದೆ, ನನಗೆ ಮತ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ಶಕ್ತಿ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷದ ಮುಖಂಡ ಶರಣಪ್ಪ ಮಾನೇಗಾರ ಮಾತನಾಡಿ, ರಾಜ್ಯದಲ್ಲಿ ಈ ಹಿಂದೆ 5 ವರ್ಷ ಅಧಿಕಾರ ನಡೆಸಿದ ಬಿ.ಜೆ.ಪಿ. ಸರ್ಕಾರದ ದುರಾಡಳಿತದಿಂದ ಬೇಸತ್ತು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ ಅಧಿಕಾರಕ್ಕೆ ತಂದರು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಚುನಾವಣೆ ಸಮಯದಲ್ಲಿ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಿದ್ದಾರೆ, ನಾವು ಅಭಿವೃದ್ದಿ ಹೆಸರಿನಲ್ಲಿ ಮತ ಕೇಳುತ್ತಿದ್ದೇವೆ ಆದರೆ ಬಿಜೆಪಿಯವರು ಧರ್ಮದ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ ಮತದಾರರು ಕೆಲಸ ಮಾಡುವ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Home Remedy For Cracked Heels: ಒಡೆದ ಹಿಮ್ಮಡಿಗಳಿಗೆ ಕರ್ಪೂರದ ಎಣ್ಣೆ ಪರಿಣಾಮಕಾರಿ

ಈ ಸಂದರ್ಭದಲ್ಲಿ ತೆಲಂಗಾಣ ಕಾಂಗ್ರೆಸ್ ಶಾಸಕ ಲಕ್ಷ್ಮಿಕಾಂತರಾವ್, ಗುರುಮಿಠಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಚಪೇಟ್ಲಾ, ಪಕ್ಷದ ಮುಖಂಡರಾದ ಸಿದ್ದಲಿಂಗರೆಡ್ಡಿ ಉಳ್ಳೆಸುಗೂರ, ಶ್ರೇಣಿಕ್‌ಕುಮಾರ ದೋಕಾ, ಚಂದ್ರಶೇಖರ ವಾರದ, ಸೂರ್ಯಕಾಂತ ಅಲ್ಲಿಪೂರ, ರಾಜುಗೌಡ ಅರಕೇರಾ (ಬಿ), ಬಸವರಾಜ ಬಾಚವಾರ, ದೇವಿಂದ್ರಪ್ಪ ಅರಕೇರಾ, ಅಯ್ಯಣ್ಣ ಠಾಣಗುಂದಿ, ಚಂದ್ರಕಾಂತ ಕವಲ್ದಾರ ಹತ್ತಿಕುಣಿ, ಭೀಮರಾಯ ಠಾಣಗುಂದಿ, ಕಿಷನ್ ರಾಠೋಡ್, ಬಸವರಾಜಪ್ಪ ಬಂಡಿ, ಸಾಹೇಬಗೌಡ ಗಾಂಪಲ್ಲಿ, ಶರಣಪ್ಪ ಕೋಲ್ಕರ್, ಯಂಕಾರಡ್ಡಿ ಮಾನೇಗಾರ, ಮಲ್ಲು ಕುಂಬಾರಳ್ಳಿ. ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಮತ್ತು ಇತರರು ಉಪಸ್ಥಿತರಿದ್ದರು.

Continue Reading

ಕರ್ನಾಟಕ

Narendra Modi: ಇಂದು ರಾತ್ರಿಯೇ ರಾಜ್ಯಕ್ಕೆ ಮೋದಿ ಆಗಮನ; ನಾಳೆಯಿಂದ ಅಬ್ಬರದ ಪ್ರಚಾರ, ವಿವರ ಇಲ್ಲಿದೆ

Narendra Modi: ಕರ್ನಾಟಕದಲ್ಲಿ ಎರಡನೇ ಹಂತದ ಮತದಾನದತ್ತ ಎಲ್ಲ ರಾಜಕೀಯ ಪಕ್ಷಗಳೂ ಗಮನ ಹರಿಸುತ್ತಿವೆ. ಇದರ ಭಾಗವಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ಕರ್ನಾಟಕಕ್ಕೆ ಆಗಮಿಸಲಿದ್ದು, ಭಾನುವಾರ ಹಾಗೂ ಸೋಮವಾರ ಅಬ್ಬರದ ಪ್ರಚಾರ ಕೈಗೊಳ್ಳಲಿದ್ದಾರೆ. ಮೋದಿ ಭೇಟಿಯ ಕಾರ್ಯಕರ್ಮಗಳ ವಿವರ ಇಂತಿದೆ.

VISTARANEWS.COM


on

Narendra Modi
Koo

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಎರಡನೇ ಹಂತದ ಮತದಾನವು ಮೇ 7ರಂದು ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳು ಉತ್ತರ ಕರ್ನಾಟಕ ಭಾಗದ ಕಡೆ ಹೆಚ್ಚು ಒತ್ತು ಕೊಡುತ್ತಿವೆ. ಪಕ್ಷಗಳ ಬಹುತೇಕ ನಾಯಕರು ಉತ್ತರ ಕರ್ನಾಟಕದಲ್ಲಿಯೇ ಬೀಡುಬಿಟ್ಟಿದ್ದಾರೆ. ಎರಡನೇ ಹಂತದ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಭಾನುವಾರ (ಏಪ್ರಿಲ್‌ 28) ಹಾಗೂ ಸೋಮವಾರ (ಏಪ್ರಿಲ್‌ 29) ರಾಜ್ಯದಲ್ಲಿ ನರೇಂದ್ರ ಮೋದಿ (Narendra Modi) ಅವರು ಅಬ್ಬರದ ಪ್ರಚಾರ ಕೈಗೊಳ್ಳಲಿದ್ದಾರೆ.

ನರೇಂದ್ರ ಮೋದಿ ಅವರು ಶನಿವಾರ (ಏಪ್ರಿಲ್‌ 27) ರಾತ್ರಿಯೇ ಬೆಳಗಾವಿಗೆ ಆಗಮಿಸಲಿದ್ದು, ಕುಂದಾ ನಗರಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಶನಿವಾರ ರಾತ್ರಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಲೋಕಸಭೆ ಕ್ಷೇತ್ರದ ವ್ಯಾಪ್ತಿಯ 15 ಮಂದಿಗೆ ಸ್ವಾಗತ ಕೋರಲು ಅವಕಾಶ ನೀಡಲಾಗಿದೆ. ಬಾಳೇಶ್ ಚವ್ವನ್ನವರ್, ರಾಜೇಶ್ವರಿ ಒಡೆಯರ್, ಸುಭಾಷ್ ಸಣ್ಣ ವೀರಪ್ಪನವರ್ ಸೇರಿ ಬೆಳಗಾವಿಯ 15 ಹಲವು ಸಮುದಾಯಗಳ ಮುಖಂಡರಿಗೆ ಮೋದಿ ಅವರನ್ನು ಸ್ವಾಗತಿಸಲು ಅವಕಾಶ ಮಾಡಿಕೊಡಲಾಗಿದೆ. ಅವಕಾಶ ಪಡೆದ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.

Karnataka Election: PM Modi Roadshow Ends In Bengaluru, Here are some photos

ಏಪ್ರಿಲ್‌ 28ರಂದು ಎಲ್ಲೆಲ್ಲಿ ರ‍್ಯಾಲಿ?

ಏಪ್ರಿಲ್‌ 28ರಂದು ಬೆಳಗಾವಿಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾವೇಶದಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಜಗದೀಶ್‌ ಶೆಟ್ಟರ್‌ ಪರ ಮತಯಾಚಿಸಲಿರುವ ಅವರು ಬಳಿಕ 12 ಗಂಟೆಗೆ ಉತ್ತರ ಕನ್ನಡದ ಶಿರಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಮತಯಾಚನೆ ಮಾಡಲಿದ್ದಾರೆ. ಇನ್ನು ಮಧ್ಯಾಹ್ನ 2 ಗಂಟೆಗೆ ದಾವಣಗೆರೆಯ ಹೈಸ್ಕೂಲ್‌ ಗ್ರೌಂಡ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇನ್ನು ಸಂಜೆ 4 ಗಂಟೆಗೆ ಬಳ್ಳಾರಿಯ ಸಮಾವೇಶದ ಮೂಲಕ ಇಡೀ ದಿನದ ಪ್ರಚಾರಕ್ಕೆ ತೆರೆ ಎಳೆಯಲಿದ್ದಾರೆ.

ಏಪ್ರಿಲ್‌ 29ರಂದು ಒಂದೇ ಸಮಾವೇಶ

ಬಳ್ಳಾರಿಯಲ್ಲಿ ಪ್ರಚಾರ ಮುಗಿಸುವ ನರೇಂದ್ರ ಮೋದಿ ಅವರು ಏಪ್ರಿಲ್‌ 29ರಂದು ಬಾಗಲಕೋಟೆಯಲ್ಲಿ ನಡೆಯುವ ಒಂದೇ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಅವರು ಮಹಾರಾಷ್ಟ್ರಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದಲ್ಲಿ 2ನೇ ಹಂತದ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಮೂಲಕ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಬಿಜೆಪಿ ಇಷ್ಟೆಲ್ಲ ಪ್ಲಾನ್‌ ಮಾಡಿದೆ. ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ಮೋದಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಯುವ ಸಮುದಾಯಕ್ಕೆ ಮೋದಿ ಅಚ್ಚುಮೆಚ್ಚು. ಇಂತಹ ಯುವ ವರ್ಗದ ಮತಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಸೆಳೆಯಲು ಪ್ಲ್ಯಾನ್‌ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಇವಿಎಂ ಧ್ವಂಸ; ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಏಪ್ರಿಲ್‌ 29ರಂದು ಮರು ಮತದಾನ!

Continue Reading
Advertisement
Gold Seized
ಕ್ರೈಂ5 mins ago

Gold Seized: ದುಬೈನಿಂದ ಬಂದ ಪ್ರಯಾಣಿಕನ ಗುದದ್ವಾರದಲ್ಲಿತ್ತು 70 ಲಕ್ಷ ಮೌಲ್ಯದ ಚಿನ್ನ!

Virat Kohli
ಪ್ರಮುಖ ಸುದ್ದಿ17 mins ago

IPL 2024 : ಅಹಮದಾಬಾದ್​ನಲ್ಲಿ ಕೊಹ್ಲಿಗೆ ಭರ್ಜರಿ ಸ್ವಾಗತ; ವಿಡಿಯೊ ಇದೆ

Illegal Cattle Trafficking 9 Accused Arrested in gangavathi
ಕರ್ನಾಟಕ18 mins ago

Koppala News: ಅಕ್ರಮ ಜಾನುವಾರು ಸಾಗಾಟ: 9 ಜನ ಆರೋಪಿಗಳ ಬಂಧನ

Congress leader B K Hariprasad latest statement In Gangavathi
ಕೊಪ್ಪಳ19 mins ago

Lok Sabha Election 2024: ಬಿಜೆಪಿಯವರು 10 ವರ್ಷದಲ್ಲಿ ಏನು ಮಾಡಿದ್ದೀರಿ ಹೇಳಿ ಎಂದ ಬಿ.ಕೆ. ಹರಿಪ್ರಸಾದ್

Kalaburagi Lok Sabha Constituency Congress candidate Radhakrishna Doddamani election campaign
ಯಾದಗಿರಿ23 mins ago

Lok Sabha Election 2024: ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಗೆಲ್ಲಿಸಿ, ನಿಮ್ಮೆಲ್ಲರ ಧ್ವನಿಯಾಗಿ ಕೆಲಸ ಮಾಡುವೆ: ರಾಧಾಕೃಷ್ಣ ದೊಡ್ಡಮನಿ

Narendra Modi
ಕರ್ನಾಟಕ36 mins ago

Narendra Modi: ಇಂದು ರಾತ್ರಿಯೇ ರಾಜ್ಯಕ್ಕೆ ಮೋದಿ ಆಗಮನ; ನಾಳೆಯಿಂದ ಅಬ್ಬರದ ಪ್ರಚಾರ, ವಿವರ ಇಲ್ಲಿದೆ

Namma Metro
ಬೆಂಗಳೂರು39 mins ago

Namma Metro: ಟಿಸಿಎಸ್‌ ಮ್ಯಾರಥಾನ್‌ ಹಿನ್ನೆಲೆ ಭಾನುವಾರ ಮುಂಜಾನೆ 3.35ರಿಂದಲೇ ಮೆಟ್ರೋ ರೈಲು ಸೇವೆ

ipl 2024
ಕ್ರೀಡೆ41 mins ago

IPL 2024 : ಪಂದ್ಯದ ನಡುವೆ ಮೈದಾನದಲ್ಲೇ ಗಾಳಿಪಟ ಹಾರಿಸಿದ ಪಂತ್​, ರೋಹಿತ್! ಇಲ್ಲಿದೆ ವಿಡಿಯೊ

Viral News
ವೈರಲ್ ನ್ಯೂಸ್58 mins ago

Viral News: ಸೈಕಲ್‌ ಸವಾರನಿಗೆ ಡಿಕ್ಕಿ ಹೊಡೆದು 2 ಕಿ.ಮೀ. ಎಳೆದೊಯ್ದ ಪಿಕ್‌ಅಪ್‌; ಶಾಕಿಂಗ್‌ ವಿಡಿಯೊ ಇಲ್ಲಿದೆ

WhatsApp color
ತಂತ್ರಜ್ಞಾನ1 hour ago

WhatsApp colour: ವಾಟ್ಸ್ಆ್ಯಪ್​ನ ಬಣ್ಣ ಬದಲಾಗಿದ್ದು ಯಾಕೆ? ಏನಿದರ ಗುಟ್ಟು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok sabha election 2024
Lok Sabha Election 20243 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ8 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ15 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ1 day ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20241 day ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20241 day ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

ಟ್ರೆಂಡಿಂಗ್‌