Abu Bakr al-Baghdadi: ಇಸ್ಲಾಮಿಕ್ ಸ್ಟೇಟ್ ನಾಯಕ ಅಬು ಬಕರ್ ಅಲ್-ಬಾಗ್ದಾದಿಯ ಪತ್ನಿಗೆ ಮರಣ ದಂಡನೆ ವಿಧಿಸಿದ ಇರಾಕ್‌ - Vistara News

ವಿದೇಶ

Abu Bakr al-Baghdadi: ಇಸ್ಲಾಮಿಕ್ ಸ್ಟೇಟ್ ನಾಯಕ ಅಬು ಬಕರ್ ಅಲ್-ಬಾಗ್ದಾದಿಯ ಪತ್ನಿಗೆ ಮರಣ ದಂಡನೆ ವಿಧಿಸಿದ ಇರಾಕ್‌

Abu Bakr al-Baghdadi: ಇರಾಕ್ ಕ್ರಿಮಿನಲ್ ನ್ಯಾಯಾಲಯವು ಹತ್ಯೆಗೀಡಾದ ಇಸ್ಲಾಮಿಕ್ ಸ್ಟೇಟ್ ನಾಯಕ ಅಬು ಬಕರ್ ಅಲ್-ಬಾಗ್ದಾದಿಯ ಪತ್ನಿಗೆ ಮರಣ ದಂಡನೆ ವಿಧಿಸಿದೆ. ಐಸಿಸ್ ಗುಂಪಿನೊಂದಿಗೆ ಕೆಲಸ ಮಾಡಿದ ಮತ್ತು ಯಜಿದಿ ಮಹಿಳೆಯರನ್ನು ವಶಕ್ಕೆ ಪಡೆದ ಆರೋಪ ಆಕೆಯ ಮೇಲಿದೆ. ಆಕೆಯನ್ನು ಬಾಗ್ದಾದಿಯ ಮೊದಲ ಪತ್ನಿ ಅಸ್ಮಾ ಮೊಹಮ್ಮದ್ ಎಂದು ಮಾಧ್ಯಮಗಳು ಗುರುತಿಸಿವೆ.

VISTARANEWS.COM


on

Abu Bakr al-Baghdadi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಾಗ್ದಾದ್‌: ಬುಧವಾರ (ಜುಲೈ 10) ಇರಾಕ್ ಕ್ರಿಮಿನಲ್ ನ್ಯಾಯಾಲಯವು ಹತ್ಯೆಗೀಡಾದ ಇಸ್ಲಾಮಿಕ್ ಸ್ಟೇಟ್ ನಾಯಕ ಅಬು ಬಕರ್ ಅಲ್-ಬಾಗ್ದಾದಿ (Abu Bakr al-Baghdadi)ಯ ಪತ್ನಿಗೆ ಮರಣ ದಂಡನೆ ವಿಧಿಸಿದೆ. ಐಸಿಸ್ (ISIS) ಗುಂಪಿನೊಂದಿಗೆ ಕೆಲಸ ಮಾಡಿದ ಮತ್ತು ಯಜಿದಿ ಮಹಿಳೆಯರನ್ನು ವಶಕ್ಕೆ ಪಡೆದ ಆರೋಪ ಆಕೆಯ ಮೇಲಿದೆ ಎಂದು ಮಹಿಳೆಯ ಹೆಸರನ್ನು ಉಲ್ಲೇಖಿಸದೆ ಕೋರ್ಟ್‌ ತೀರ್ಪು ನೀಡಿದೆ.

ಆಕೆಯನ್ನು ಬಾಗ್ದಾದಿಯ ಮೊದಲ ಪತ್ನಿ ಅಸ್ಮಾ ಮೊಹಮ್ಮದ್ (Asma Mohammed) ಅಲಿಯಾಸ್ ಅಸ್ಮಾ ಫೌಜಿ ಮೊಹಮ್ಮದ್ ಅಲ್-ಕುಬೈಸಿ ಎಂದು ಮಾಧ್ಯಮಗಳು ಗುರುತಿಸಿವೆ. ಅಮಾನವೀಯ ಕೃತ್ಯ ಮತ್ತು ಯಜಿದಿ ಜನರ ವಿರುದ್ಧದ ನರಮೇಧ, ಭಯೋತ್ಪಾದಕ ಕೃತ್ಯಗಳಿಗೆ ಕೊಡುಗೆ ನೀಡಿದ್ದಕ್ಕಾಗಿ ಬಾಗ್ದಾದಿ ಪತ್ನಿಗೆ ಮರಣ ದಂಡನೆ ವಿಧಿಸಲಾಗಿದೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಕೋರ್ಟ್‌ ತೀರ್ಪಿನಲ್ಲಿ ಏನಿದೆ?

“ಕಾರ್ಖ್ (ಪಶ್ಚಿಮ ಬಾಗ್ದಾದ್) ಕ್ರಿಮಿನಲ್ ನ್ಯಾಯಾಲಯವು ಭಯೋತ್ಪಾದಕ ಅಬು ಬಕರ್ ಅಲ್-ಬಾಗ್ದಾದಿಯ ಪತ್ನಿಗೆ ಮರಣ ದಂಡನೆ ವಿಧಿಸಿದೆ. ಈಕೆಯ ವಿರುದ್ಧ ದಾಯೆಶ್ (ಐಎಸ್) ಭಯೋತ್ಪಾದಕ ಗುಂಪಿನೊಂದಿಗೆ ಕೆಲಸ ಮಾಡಿದ ಆರೋಪವಿದೆ. ಮಾತ್ರವಲ್ಲ ಯಾಜಿದಿ ಮಹಿಳೆಯರನ್ನು ತನ್ನ ಮನೆಯಲ್ಲಿ ಬಂಧಿಸಿದ ಅಪರಾಧಕ್ಕಾಗಿ ಮರಣ ದಂಡನೆ ವಿಧಿಸಲಾಗಿದೆ” ಎಂದು ಇರಾಕ್‌ನ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಉತ್ತರ ಇರಾಕ್‌ನ ಸಿಂಜಾರ್ ಜಿಲ್ಲೆಯಲ್ಲಿ ಐಸಿಸ್ ಉಗ್ರರು ಅಪಹರಿಸಿದ್ದ ಯಾಜಿದಿಗಳನ್ನು ಅಬು ಬಕರ್ ಅಲ್-ಬಾಗ್ದಾದಿ ಪತ್ನಿ ವಶಕ್ಕೆ ಪಡೆದಿದ್ದಳು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಟರ್ಕಿಯಲ್ಲಿ ಬಂಧನಕ್ಕೊಳಗಾದ ನಂತರ ಆಕೆಯನ್ನು ಮತ್ತೆ ಇರಾಕ್‌ಗೆ ಕರೆತರಲಾಗಿತ್ತು. ಟರ್ಕಿ 2019ರ ನವೆಂಬರ್‌ನಲ್ಲಿ ಬಾಗ್ದಾದಿಯ ಪತ್ನಿಯನ್ನು ಬಂಧಿಸುವುದಾಗಿ ಘೋಷಿಸಿತ್ತು.

ಯಾರು ಈ ಅಬು ಬಕರ್ ಅಲ್-ಬಾಗ್ದಾದಿ?

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದಾಗ 2019ರ ನವೆಂಬರ್‌ನಲ್ಲಿ ಉತ್ತರ ಸಿರಿಯಾದಲ್ಲಿ ಅಮೆರಿಕ ವಿಶೇಷ ಪಡೆಗಳು ನಡೆಸಿದ ದಾಳಿಯಲ್ಲಿ ಅಬು ಬಕರ್ ಅಲ್-ಬಾಗ್ದಾದಿ ಅಸುನೀಗಿದ್ದ. ಆತ ತೀವ್ರವಾದಿ ದಾಯೆಶ್ ಗುಂಪನ್ನು ಮುನ್ನಡೆಸಿದ್ದ ಮತ್ತು ತಮ್ಮನ್ನು ಎಲ್ಲ ಮುಸ್ಲಿಮರಿಗಿಂತ ಖಲೀಫಾ ಎಂದು ಘೋಷಿಸಿಕೊಂಡಿದ್ದ. ಅಮೆರಿಕ ನೇತೃತ್ವದಲ್ಲಿ ನಡೆದ ದಾಳಿಗಳ ಬಳಿಕ ಇಸ್ಲಾಮಿಕ್ ಸ್ಟೇಟ್ ನಿಯಂತ್ರಣವು ಛಿದ್ರಗೊಳ್ಳುವ ಮೊದಲು ಅಂದರೆ 2014ರಿಂದ 2017ರವರೆಗೆ ಆತ ಇರಾಕ್ ಮತ್ತು ಸಿರಿಯಾದ ವಿಶಾಲ ಪ್ರದೇಶಗಳ ಮೇಲೆ ಹಿಡಿತ ಹೊಂದಿದ್ದ.

ಇದನ್ನೂ ಓದಿ: Sudan crisis : ಸೇನಾಪಡೆ ಮತ್ತು ಅರೆ ಸೇನಾಪಡೆ ನಡುವಿನ ಕಾಳಗಕ್ಕೆ ತತ್ತರಿಸಿದ ಬಡ ಸುಡಾನ್, ಏನಿದರ ಹಿನ್ನೆಲೆ?

ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಮುಖ್ಯಸ್ಥನ ಹತ್ಯೆ

ಟರ್ಕಿ: ಜಾಗತಿಕ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ನ ನಾಯಕ ಅಬು ಹುಸೇನ್ ಅಲ್-ಖುರಾಶಿಯನ್ನು ಟರ್ಕಿಯ ಗುಪ್ತಚರ ಪಡೆಗಳು ಸಿರಿಯಾದಲ್ಲಿ ಕೊಂದಿವೆ ಎಂದು ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಕಳೆದ ವರ್ಷ ಮಾಹಿತಿ ನೀಡಿದ್ದರು.

ಈತನನ್ನು 2023ರ ಏಪ್ರಿಲ್‌ 30ರಂದು ಸಿರಿಯಾದಲ್ಲಿ ಟರ್ಕಿಯ ರಾಷ್ಟ್ರೀಯ ಗುಪ್ತಚರ ಸಂಸ್ಥೆಯು ಮುಗಿಸಿದೆ. ಸಂಸ್ಥೆಯು ಖುರಾಶಿಯನ್ನು ಬಹಳ ಸಮಯದಿಂದ ಹಿಂಬಾಲಿಸಿತ್ತು ಎಂದು ಟರ್ಕ್ ಬ್ರಾಡ್‌ಕಾಸ್ಟರ್‌ಗೆ ನೀಡಿದ ಸಂದರ್ಶನದಲ್ಲಿ ಎರ್ಡೊಗನ್‌ ಹೇಳಿದ್ದರು. ಬಂಡುಕೋರ ಗುಂಪುಗಳಿಂದ ನಿಯಂತ್ರಿಸಲ್ಪಡುತ್ತಿರುವ ಉತ್ತರ ಸಿರಿಯನ್ ಪಟ್ಟಣವಾದ ಜಂಡರಿಸ್‌ನಲ್ಲಿ ಈ ದಾಳಿ ನಡೆದಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: ರಷ್ಯಾ ಬಳಿಕ ಮುಂದಿನ ತಿಂಗಳು ಯುದ್ಧ ಪೀಡಿತ ಉಕ್ರೇನ್‌ಗೆ ಪ್ರಧಾನಿ ಮೋದಿ ಭೇಟಿ

Narendra Modi: ರಷ್ಯಾ 2022ರಲ್ಲಿ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ (Russia-Ukraine War) ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್‌ನಲ್ಲಿ ಉಕ್ರೇನ್ ರಾಜಧಾನಿ ಕೀವ್​ಗೆ ಪ್ರಯಾಣಿಸಲಿದ್ದಾರೆ. ಮೋದಿ ಅವರು ಇತ್ತೀಚೆಗೆ ರಷ್ಯಾಕ್ಕೆ ಭೇಟಿ ನೀಡಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾತಿಕತೆ ನಡೆಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಉಕ್ರೇನ್‌ ಪ್ರವಾಸ ಕೈಗೊಂಡಿರುವುದು ಕುತೂಹಲ ಮೂಡಿಸಿದೆ.

VISTARANEWS.COM


on

Narendra Modi
Koo

ನವದೆಹಲಿ: ರಷ್ಯಾ 2022ರಲ್ಲಿ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ (Russia-Ukraine War) ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಸ್ಟ್‌ನಲ್ಲಿ ಉಕ್ರೇನ್ ರಾಜಧಾನಿ ಕೀವ್​ಗೆ ಪ್ರಯಾಣಿಸಲಿದ್ದಾರೆ. ಇಟಲಿಯಲ್ಲಿ ಜೂನ್‌ನಲ್ಲಿ ನಡೆದ ಜಿ 7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ (Volodymyr Zelensky) ಭೇಟಿಯಾಗಿದ್ದರು. ಇದೀಗ ಎರಡು ತಿಂಗಳ ಅಂತರದಲ್ಲಿ ಈ ನಾಯಕರು ಮತ್ತೊಮ್ಮೆ ಭೇಟಿಯಾಗಲಿದ್ದಾರೆ.

ಮೋದಿ ಅವರು ಆಗಸ್ಟ್ 23ರಂದು ಉಕ್ರೇನ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಮೋದಿ ಅವರು ಇತ್ತೀಚೆಗೆ ರಷ್ಯಾಕ್ಕೆ ಭೇಟಿ ನೀಡಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾತಿಕತೆ ನಡೆಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಉಕ್ರೇನ್‌ ಪ್ರವಾಸ ಕೈಗೊಂಡಿರುವುದು ಕುತೂಹಲ ಮೂಡಿಸಿದೆ.

ಲೋಕಸಭಾ ಚುನಾವಣೆಯ ನಂತರ ಮೋದಿ ಮೂರನೇ ಅವಧಿಗೆ ಪ್ರದಾನಿಯಾಗಿ ಆಯ್ಕೆಯಾದ ದಿನದಂದು ಝೆಲೆನ್ಸ್ಕಿ ಕರೆ ಮಾಡಿ ಅಭಿನಂದಿಸಿದ್ದರು ಮತ್ತು ಯುದ್ಧ ಪೀಡಿತ ದೇಶಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು. ಅದಕ್ಕೂ ಮೊದಲು ಮಾರ್ಚ್‌ನಲ್ಲಿ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗಿನ ದೂರವಾಣಿ ಮೂಲಕ ಮಾತನಾಡಿದ್ದ ಮೋದಿ ಅವರು ಭಾರತ-ಉಕ್ರೇನ್ ಸಂಬಂಧಬನ್ನು ಇನ್ನಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚೆ ನಡೆಸಿದ್ದರು. ರಷ್ಯಾ-ಉಕ್ರೇನ್‌ ಸಂಘರ್ಷದ ಪರಿಹಾರಕ್ಕಾಗಿ ಮಾತುಕತೆ ನಡೆಸುವಂತೆ ಕರೆ ನೀಡಿದ್ದರು.

ಎರಡು ಯುದ್ಧ ನಿಲ್ಲಿಸಲು ಭಾರತವು ತನ್ನ ಶಕ್ತಿಮೀರಿ ಕೆಲಸ ಮಾಡುವುದನ್ನು ಮುಂದುವರಿಸಲಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಅದಕ್ಕೆ ಪೂರಕವಾಗಿ ಯುದ್ಧ ಪ್ರಾರಂಭವಾದಾಗಿನಿಂದ ಭಾರತವು ಇದನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಮಾತ್ರ ಪರಿಹರಿಸಬಹುದು ಎಂದು ತಿಳಿಸಿದೆ.

ರಷ್ಯಾ ಭೇಟಿ

ಈ ತಿಂಗಳ ಆರಂಭದಲ್ಲಿ ರಷ್ಯಾಕ್ಕೆ ಎರಡು ದಿನಗಳ ಭೇಟಿ ನೀಡಿದ್ದ ಮೋದಿ ಪರಮಾಣು ಶಕ್ತಿ ಮತ್ತು ಹಡಗು ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಮಾತುಕತೆ ನಡೆಸಿದ್ದರು. ರಷ್ಯಾ ಮತ್ತು ಭಾರತದ ನಡುವಿನ ಸಹಕಾರಕ್ಕಾಗಿ ಸ್ಪಷ್ಟ ಚೌಕಟ್ಟನ್ನು ನಿರ್ಮಿಸುವಲ್ಲಿ ಮೋದಿಯವರ ಕೊಡುಗೆಯನ್ನು ರಷ್ಯಾ ಅಧ್ಯಕ್ಷ ಪುಟಿನ್ ಶ್ಲಾಘಿಸಿದ್ದರು.

ಇದೇ ವೇಳೆ ಮೋದಿ ಅವರಿಗೆ 2019ರಲ್ಲಿ ಘೋಷಿಸಲಾಗಿದ್ದ ರಷ್ಯಾದ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ಟಲ್ ದಿ ಫಸ್ಟ್ ಕಾಲ್’ ಪ್ರಶಸ್ತಿಯನ್ನು ಮಾಸ್ಕೋ ಕ್ರೆಮ್ಲಿನ್‌ನ ಸೇಂಟ್ ಕ್ಯಾಥರೀನ್ ಹಾಲ್ ನಲ್ಲಿ ಸಾಂಪ್ರದಾಯಿಕವಾಗಿ ಪ್ರದಾನ ಮಾಡಲಾಗಿತ್ತು. ವಿಶೇಷ ಕಾರ್ಯಕ್ರಮದಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಅತಿದೊಡ್ಡ ನಾಗರಿಕ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು. ರಷ್ಯಾ ಮತ್ತು ಭಾರತದ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಉಭಯ ದೇಶಗಳ ನಡುವಿನ ಸ್ನೇಹಪರ ಸಂಬಂಧಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಈ ಗೌರವವನ್ನು ಭಾರತದ ಪ್ರಧಾನಿಗೆ ನೀಡಲಾಯಿತು ಎಂದು ರಷ್ಯಾ ಹೇಳಿತ್ತು.

ಇದನ್ನೂ ಓದಿ: PM Modi Russia Visit : ಭಾರತ-ರಷ್ಯಾ ಇಂಧನ ಪಾಲುದಾರಿಕೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ

Continue Reading

ದೇಶ

Vijay Mallya: ವಿಜಯ್‌ ಮಲ್ಯಗೆ ಸೆಬಿ ಶಾಕ್;‌ 3 ವರ್ಷ ಸೆಕ್ಯುರಿಟೀಸ್‌ ಟ್ರೇಡಿಂಗ್‌ನಿಂದ ನಿಷೇಧ

Vijay Mallya: ಸೆಬಿಗೆ ನೋಂದಣಿ ಮಾಡಿದ ಕಂಪನಿಗಳು ವಿಜಯ್‌ ಮಲ್ಯ ಜತೆ ವಹಿವಾಟು ಮಾಡದಂತೆ ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲ, ಮುಂದಿನ ಮೂರು ವರ್ಷಗಳವರೆಗೆ ವಿಜಯ್‌ ಮಲ್ಯ ಅವರ ಎಲ್ಲ ಸೆಕ್ಯುರಿಟಿ ಹೋಲ್ಡಿಂಗ್‌ಗಳು, ಮ್ಯುಚುವಲ್‌ ಫಂಡ್‌ ಯುನಿಟ್‌ಗಳನ್ನು ತಡೆಹಿಡಿಯುವಂತೆಯೂ ಸೆಬಿ ಸೂಚನೆ ನೀಡಿದೆ.

VISTARANEWS.COM


on

Vijay Mallya
Koo

ನವದೆಹಲಿ: ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ವಿಜಯ್‌ ಮಲ್ಯ (Vijay Mallya) ಅವರಿಗೆ ಭಾರತದ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿಯು (SEBI) ಶಾಕ್‌ ನೀಡಿದೆ. ಭಾರತದ ಸೆಕ್ಯುರಿಟೀಸ್‌ ಮಾರುಕಟ್ಟೆಯಿಂದ ವಿಜಯ್‌ ಮಲ್ಯ ಅವರನ್ನು ಸೆಬಿ ನಿರ್ಬಂಧಿಸಿದೆ. ಇದರಿಂದಾಗಿ ಭಾರತದ ಸೆಕ್ಯುರಿಟೀಸ್‌ ಮಾರುಕಟ್ಟೆಯಲ್ಲಿ ವಿಜಯ್‌ ಮಲ್ಯ ಯಾವುದೇ ವಹಿವಾಟು ಮಾಡದಂತೆ ತಡೆಹಿಡಿಯಲಾಗಿದೆ.

ಸೆಬಿಗೆ ನೋಂದಣಿ ಮಾಡಿದ ಕಂಪನಿಗಳು ವಿಜಯ್‌ ಮಲ್ಯ ಜತೆ ವಹಿವಾಟು ಮಾಡದಂತೆ ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲ, ಮುಂದಿನ ಮೂರು ವರ್ಷಗಳವರೆಗೆ ವಿಜಯ್‌ ಮಲ್ಯ ಅವರ ಎಲ್ಲ ಸೆಕ್ಯುರಿಟಿ ಹೋಲ್ಡಿಂಗ್‌ಗಳು, ಮ್ಯುಚುವಲ್‌ ಫಂಡ್‌ ಯುನಿಟ್‌ಗಳನ್ನು ತಡೆಹಿಡಿಯುವಂತೆಯೂ ಸೆಬಿ ಸೂಚನೆ ನೀಡಿದೆ. ವಿಜಯ್‌ ಮಲ್ಯ ಅವರು ಇದುವರೆಗೆ ಫಾರಿನ್‌ ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್‌ (FII) ವ್ಯವಸ್ಥೆ ಮೂಲಕ ಭಾರತದ ಸೆಕ್ಯುರಿಟೀಸ್‌ ಮಾರುಕಟ್ಟೆಯಲ್ಲಿ ಹಣ ಹೂಡಿಕೆ, ಸ್ಟಾಕ್‌ಗಳ ಮಾರಾಟ ಸೇರಿ ಹಲವು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು.

ಏನಿದು ಸೆಕ್ಯುರಿಟೀಸ್‌ ಮಾರುಕಟ್ಟೆ?

ಸೆಕ್ಯುರಿಟೀಸ್‌ ಮಾರುಕಟ್ಟೆಯು ವ್ಯಕ್ತಿಗಳು ಅಥವಾ ಕಂಪನಿಗಳು ಷೇರುಗಳು, ಬಾಂಡ್‌ಗಳು ಮತ್ತು ಉತ್ಪನ್ನಗಳಂತಹ ಸೆಕ್ಯುರಿಟೀಸ್‌ಅನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಹಣಕಾಸು ಮಾರುಕಟ್ಟೆಯಾಗಿದೆ. ಸ್ಟಾಕ್‌ಗಳು, ಬಾಂಡ್‌ಗಳು, ಮ್ಯೂಚುವಲ್‌ ಫಂಡ್‌ಗಳು, ಎಕ್ಸ್‌ಚೇಂಜ್‌-ಟ್ರೇಡೆಡ್‌ ಫಂಡ್‌ಗಳ ಖರೀದಿ ಹಾಗೂ ಮಾರಾಟ ಮಾಡುವ ಮಾರುಕಟ್ಟೆಯಾಗಿದೆ.

ಭಾರತದ ಬ್ಯಾಂಕ್‌ಗಳಿಗೆ ಸುಮಾರು 9 ಸಾವಿರ ಕೋಟಿ ರೂ. ವಂಚನೆ ಪ್ರಕರಣದಲ್ಲಿ ವಿಜಯ್‌ ಮಲ್ಯ ಲಂಡನ್‌ಗೆ ಹಾರಿದ್ದಾರೆ. ಇವರನ್ನು 2019ರಲ್ಲಿ ದೇಶ ಭ್ರಷ್ಟ ಆರ್ಥಿಕ ಅರಪಾಧಿ ಎಂದು ಘೋಷಿಸಲಾಗಿದೆ. 2016ರ ಮಾರ್ಚ್‌ನಲ್ಲಿ ವಿಜಯ್‌ ಮಲ್ಯ ಭಾರತದಿಂದ ಪರಾರಿಯಾಗಿದ್ದು, ಈಗ ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ, ವಿಜಯ್‌ ಮಲ್ಯ ಪುತ್ರ ಸಿದ್ಧಾರ್ಥ್‌ ಮಲ್ಯ ಅವರ ಮದುವೆಯು ಅದ್ಧೂರಿಯಾಗಿ ನೆರವೇರಿತ್ತು. ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದ್ದು, ಪ್ರಕರಣವು ಕೋರ್ಟ್‌ನಲ್ಲಿದೆ.

ವಿಜಯ್‌ ಮಲ್ಯ ಈಗಲೂ ಕಿಂಗ್‌ಫಿಶರ್‌ ಬಿಯರ್‌ ಉತ್ಪಾದನೆ ಮಾಡುವ ಯುನೈಟ್‌ ಬ್ರೆವರೀಸ್‌ನಲ್ಲಿ ಶೇ.8.1ರಷ್ಟು ಷೇರುಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ಸ್ಮಿರ್ನಾಫ್‌ ವೋಡ್ಕಾ ತಯಾರಿಯಾ ಸಂಸ್ಥೆಯಾದ ಯುನೈಟೆಡ್‌ ಸ್ಪರಿಟ್ಸ್‌ನಲ್ಲಿ 0.01ರಷ್ಟು ಷೇರುಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: RCB: ಆರ್​ಸಿಬಿಯ ನಂಟು ಬಿಡದ ವಿಜಯ್​ ಮಲ್ಯ; ಟ್ವೀಟ್​ ಮೂಲಕ ಅಭಿನಂದನೆ

Continue Reading

ದೇಶ

Narendra Modi: ಮೋದಿ ಎಚ್ಚರಿಕೆಗೆ ಪಾಕಿಸ್ತಾನ ಥಂಡಾ; ಗಡಿಯಲ್ಲಿ ಹೆಚ್ಚುವರಿ ಸೈನಿಕರ ನಿಯೋಜನೆ!

Narendra Modi: ಮೋದಿ ಎಚ್ಚರಿಕೆ ಬೆನ್ನಲ್ಲೇ ಪಾಕಿಸ್ತಾನವು ಗಡಿಯಲ್ಲಿ ಎರಡು ಹೆಚ್ಚುವರಿ ಬ್ರಿಗೇಡ್‌ಗಳು, 3 ಪಿಒಕೆ ಬ್ರಿಗೇಡ್‌ ಹಾಗೂ 2 ಹೆಚ್ಚುವರಿ ಪಿಒಕೆ ಬ್ರಿಗೇಡ್‌ಗಳನ್ನು ಹೆಚ್ಚುವರಿಯಾಗಿ ನಿಯೋಜಿಸಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಪಾಕಿಸ್ತಾನ ಸೈನಿಕರು ಭಾರತದೊಳಗೆ ಉಗ್ರರನ್ನು ನುಸುಳಿಸಲು ಮಾರ್ಗದರ್ಶನ, ನೆರವು ನೀಡುತ್ತಿದೆ ಎಂಬ ಚಿತ್ರಗಳು ಲಭ್ಯವಾದ ಬೆನ್ನಲ್ಲೇ ಮೋದಿ ಎಚ್ಚರಿಕೆ ನೀಡಿದ್ದರು.

VISTARANEWS.COM


on

Narendra Modi
Koo

ನವದೆಹಲಿ: ಭಯೋತ್ಪಾದನೆಯನ್ನು ನಿಗ್ರಹಿಸುವ ಬದಲು, ಉಗ್ರರಿಗೆ ಆಶ್ರಯ ನೀಡದ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಗಿಲ್‌ ವಿಜಯ ದಿವಸದಂದೇ (Kargil Vijay Diwas 2024) ಎಚ್ಚರಿಕೆ ನೀಡಿದ ಬೆನ್ನಲ್ಲೇ ನೆರೆ ರಾಷ್ಟ್ರವು ಥಂಡಾ ಹೊಡೆದಿದೆ. ನರೇಂದ್ರ ಮೋದಿ ಅವರು ಎಚ್ಚರಿಕೆ ನೀಡಿದ ಬಳಿಕ ಪಾಕಿಸ್ತಾನ ಸೇನೆಯು ಗಲಿಬಿಲಿಗೊಂಡಿದ್ದು, ಗಡಿಯಲ್ಲಿ ಹೆಚ್ಚುವರಿಯಾಗಿ ಸೈನಿಕರನ್ನು ನಿಯೋಜಿಸಿದೆ.

ಹೌದು, ಮೋದಿ ಎಚ್ಚರಿಕೆ ಬೆನ್ನಲ್ಲೇ ಪಾಕಿಸ್ತಾನವು ಗಡಿಯಲ್ಲಿ ಎರಡು ಹೆಚ್ಚುವರಿ ಬ್ರಿಗೇಡ್‌ಗಳು, 3 ಪಿಒಕೆ ಬ್ರಿಗೇಡ್‌ ಹಾಗೂ 2 ಹೆಚ್ಚುವರಿ ಪಿಒಕೆ ಬ್ರಿಗೇಡ್‌ಗಳನ್ನು ಹೆಚ್ಚುವರಿಯಾಗಿ ನಿಯೋಜಿಸಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಪಾಕಿಸ್ತಾನ ಸೈನಿಕರು ಭಾರತದೊಳಗೆ ಉಗ್ರರನ್ನು ನುಸುಳಿಸಲು ಮಾರ್ಗದರ್ಶನ, ನೆರವು ನೀಡುತ್ತಿದೆ ಎಂಬ ಚಿತ್ರಗಳು ಲಭ್ಯವಾದ ಬೆನ್ನಲ್ಲೇ ಮೋದಿ ಎಚ್ಚರಿಕೆ ನೀಡಿದ್ದರು. ಇದಾದ ಕೆಲ ಹೊತ್ತಿನಲ್ಲೇ ಪಾಕಿಸ್ತಾನ ಸೈನಿಕರು ಗಡಿಯಲ್ಲಿ ನಿಯೋಜನೆಗೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೋದಿ ಎಚ್ಚರಿಕೆ ಏನಾಗಿತ್ತು?

ಕಾರ್ಗಿಲ್‌ ವಿಜಯ ದಿವಸ(Kargil Vijay Diwas 2024)ಕ್ಕೆ ಜುಲೈ 26ಕ್ಕೆ 25ವರ್ಷ ಸಂದಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಡ್ರಾಸ್‌ನಲ್ಲಿರುವ ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಕಳೆದ ಯುದ್ಧಗಳಲ್ಲಿ ಸೋಲುಂಡಿದ್ದರೂ ಬುದ್ದಿ ಬಾರದ ಪಾಕಿಸ್ತಾನ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಇದುವರೆಗೆ ಪಾಕಿಸ್ತಾನ ತನ್ನ ತಪ್ಪಿನ ಪಾಠ ಕಲಿತಿಲ್ಲ ಎಂದು ಗುಡುಗಿದ್ದರು.

ಭಯೋತ್ಪಾದನೆ ಮೂಲಕ ಭಾರತವನ್ನು ಗೆಲ್ಲುವ ಪಾಕಿಸ್ತಾನದ ಉದ್ದೇಶ ಎಂದಿಗೂ ಯಶಸ್ವಿ ಆಗುವುದಿಲ್ಲ ಎಂದು ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಇನ್ನು ಇದೇ ವೇಳ ಅಗ್ನಿಪಥ್‌ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಸೇನೆಯ ಈ ಸುಧಾರಣೆಯಲ್ಲೂ ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಭಾರತದ ವಿರುದ್ಧ ಪಾಕಿಸ್ತಾನವು ಇದುವರೆಗೆ ನಾಲ್ಕು ಯುದ್ಧಗಳಲ್ಲಿ ಹೀನಾಯವಾಗಿ ಸೋಲನುಭವಿಸಿದೆ. ಅದರಲ್ಲೂ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಉರಿ ದಾಳಿಗೆ ಪ್ರತಿಯಾಗಿ ಸರ್ಜಿಕಲ್‌ ಸ್ಟ್ರೈಕ್‌, ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಯಾಗಿ ಬಾಲಾಕೋಟ್‌ ದಾಳಿ ನಡೆಸಿದೆ. ಹಾಗೆಯೇ, ಪಾಕಿಸ್ತಾನವು ಉಗ್ರ ಪೋಷಣೆಯ ರಾಷ್ಟ್ರವಾಗಿದೆ ಎಂಬುದಾಗಿ ಜಾಗತಿಕ ವೇದಿಕೆಯಲ್ಲಿ ಭಾರತವು ಪ್ರತಿಪಾದಿಸಿದೆ.

ಇದನ್ನೂ ಓದಿ: Kargil Vijay Diwas 2024: ಕಾರ್ಗಿಲ್‌ ಯುದ್ಧಭೂಮಿಗೆ ಅಂದೇ ಕಾಲಿಟ್ಟಿದ್ರು ಮೋದಿ- ಹಳೆಯ ಫೊಟೋ ವೈರಲ್‌

Continue Reading

ಪ್ರಮುಖ ಸುದ್ದಿ

Paris Olympics 2024 : ಒಲಿಂಪಿಕ್ಸ್​ಗೆ ಕೆಲವೇ ಗಂಟೆಗಳ ಮೊದಲು ಫ್ರಾನ್ಸ್​ನ ರೈಲ್ವೆ ವ್ಯವಸ್ಥೆ ಮೇಲೆ ವಿಧ್ವಂಸಕ ದಾಳಿ

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ 2024 ರ (Paris Olympics 2024) ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಫ್ರಾನ್ಸ್​​ನ ಹೈಸ್ಪೀಡ್ ಟಿಜಿವಿ ರೈಲು ಜಾಲದ ಮೇಲೆ ದುಷ್ಕರ್ಮಿಗಳ ದಾಳಿ ನಡೆದಿದೆ. ಶುಕ್ರವಾರ ರೈಲಿನ ತಾಂತ್ರಿಕ ನಿರ್ವಹಣಾ ಕೇಂದ್ರಗಳಿಗೆ ಬೆಂಕಿ ಹಚ್ಚವಲಾಗಿದೆ. ದುರುದ್ದೇಶದ ಕೃತ್ಯಗಳಿಂದಾಗಿ ರೈಲು ಸಂಪರ್ಕ ಜಾಲಕ್ಕೆ ಹಾನಿಯಾಗಿದೆ. ಇದು ದೇಶದ ಜನನಿಬಿಡ ರೈಲು ಮಾರ್ಗಗಳಿಗೆ ಅಡ್ಡಿಯಾಗಿದ್ದು, ಪ್ರಯಾಣಿಕರು ಅರ್ಧ ದಾರಿಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಕ್ರೀಡಾಕೂಟಕ್ಕೆ ಮುಂಚಿತವಾಗಿ ಪ್ರಯಾಣಕ್ಕೆ ಅಡ್ಡಿಪಡಿಸಲು ಈ ದಾಳಿ ನಡೆಸಲಾಗಿದ್ದು ಇದು ಸಂಘಟಿತ ವಿಧ್ವಂಸಕ ಕೃತ್ಯ ಎಂದು ಹೇಳಲಾಗಿದೆ.

ಪ್ಯಾರಿಸ್ ಅನ್ನು ಪಶ್ಚಿಮ, ಉತ್ತರ ಮತ್ತು ಪೂರ್ವ ಪ್ರದೇಶಗಳೊಂದಿಗೆ ಸಂಪರ್ಕಿಸುವ ಮಾರ್ಗಗಳಲ್ಲಿನ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಎಸ್ಎನ್​ಸಿಎಫ್ ತಿಳಿಸಿದೆ. ಇಂಗ್ಲಿಷ್ ಕಾಲುವೆಯ ಕೆಳಗಿರುವ ಲಂಡನ್ ಮತ್ತು ನೆರೆಯ ಬೆಲ್ಜಿಯಂಗೆ ಪ್ರಯಾಣದ ಮೇಲೂ ಇದು ಪರಿಣಾಮ ಬೀರಿದೆ ಎಂದು ವರದಿಗಳು ತಿಳಿಸಿವೆ.

ಅಲ್ಲಿ ರೈಲು ವಿಭಾಗ ಹಲವಾರು ರೈಲುಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಯಿತು ಮತ್ತು ರದ್ದುಗೊಳಿಸಬೇಕಾಯಿತು ಎಂದು ಹೇಳಲಾಗಿದೆ. ದುರಸ್ತಿಯ ಮೇಲ್ವಿಚಾರಣೆಗಾಗಿ ಸುರಕ್ಷತಾ ತಂಡ ಸ್ಥಳದಲ್ಲಿದೆ ಎಂದು ಹೇಳಿದ್ದಾರೆ. ವಾರಾಂತ್ಯದಲ್ಲಿ ಸಂಚಾರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ.

“ಅಟ್ಲಾಂಟಿಕ್, ಉತ್ತರ ಮತ್ತು ಪೂರ್ವ ಹೈಸ್ಪೀಡ್ ಮಾರ್ಗಗಳಲ್ಲಿ ಹಲವೆಡೆ ಬೆಂಕಿ ಹಚ್ಚಲಾಗಿದೆ. ನಮ್ಮ ರೈಲ್ವೆ ವ್ಯವಸ್ಥೆಗಳನ್ನು ಹಾನಿಗೊಳಿಸಲು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ ಎಂದು ಸ್ಥಳೀಯ ಆಡಳಿತ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Nissan SUV X-TRAIL : ನಿಸ್ಸಾನ್ ನ ಹೊಚ್ಚ ಹೊಸ 4 ಜನರೇಷನ್ ಪ್ರೀಮಿಯಂ ಅರ್ಬನ್ ಎಸ್‌ಯುವಿ ಎಕ್ಸ್-ಟ್ರಯಲ್ ಬಿಡುಗಡೆ

ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ನಡೆದ ದಾಳಿಗಳನ್ನು ಸರ್ಕಾರಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಆದರೆ, ಈ ಘಟನೆಗಳಿಂದ ಕ್ರೀಡಾಕೂಟಗಳ ತಾಣಕ್ಕೆ ಯಾವುದೇ ಸಂಪರ್ಕ ಕಡಿತಗೊಂಡಿಲ್ಲ.

ಸಾರಿಗೆ ಸಚಿವ ಪ್ಯಾಟ್ರಿಸ್ ವೆರ್ಗ್ರೀಟ್ ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ “ಕ್ರಿಮಿನಲ್ ಘಟನೆಗಳನ್ನು ಖಂಡಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ರೈಲ್ವೆ ಸಂಚಾರವನ್ನು ಪುನಃಸ್ಥಾಪಿಸಲು ಎಸ್ ಎನ್ ಸಿಎಫ್ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.ದುರಸ್ತಿ ಕಾರ್ಯಗಳು ನಡೆಯುತ್ತಿದೆ. ರೈಲುಗಳನ್ನು ತಮ್ಮ ನಿರ್ಗಮನ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಆದಾಗ್ಯೂ ತಮ್ಮ ಪ್ರಯಾಣವನ್ನು ಮುಂದೂಡುವಂತೆ ಪ್ರಯಾಣಿಕರಿಗೆ ಕೋಲಾಗಿದೆ.

ಇಷ್ಟು ದೊಡ್ಡ ಪ್ರಮಾಣದ ದಾಳಿಯು “ಟಿಜಿವಿ ನೆಟ್ವರ್ಕ್ ಅನ್ನು ನಿಷ್ಕ್ರಿಯಗೊಳಿಸುವ” ಗುರಿ ಹೊಂದಿತ್ತು ರೈಲ್ವೆ ಕಂಪನಿ ಹೇಳಿದೆ. ಸುಮಾರು 800,000 ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ ಎಂದು ಅದು ಹೇಳಿದೆ.

ವಿಧ್ವಂಸಕ ಕೃತ್ಯದಿಂದ ಲಂಡನ್ ಮತ್ತು ಪ್ಯಾರಿಸ್ ನಡುವಿನ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿವೆ.

Continue Reading
Advertisement
Paris Olympics 2024
ಫ್ಯಾಷನ್2 mins ago

Paris Olympics 2024: ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ ಕೋಡ್‌ ವಿನ್ಯಾಸಕ್ಕೆ ಜನರ ಮಿಶ್ರ ಪ್ರತಿಕ್ರಿಯೆ

Vaccin for Hiv
ಆರೋಗ್ಯ35 mins ago

Vaccine for HIV: ವರ್ಷಕ್ಕೆರಡು ಬಾರಿ ಈ ಇಂಜೆಕ್ಷನ್‌ ತೆಗೆದುಕೊಂಡರೆ ಎಚ್‌ಐವಿ ಭಯವೇ ಬೇಡ!

Physical Assault
ದೇಶ43 mins ago

Physical Assault : ಅಶ್ಲೀಲ ವಿಡಿಯೊಗಳನ್ನು ನೋಡಿ 9 ವರ್ಷದ ತಂಗಿಯನ್ನು ಅತ್ಯಾಚಾರ ಮಾಡಿ ಕೊಂದ 13 ವರ್ಷದ ಬಾಲಕ!

Paris Olympics
ಕ್ರೀಡೆ58 mins ago

Paris Olympics: ಕ್ರೀಡಾ ಗ್ರಾಮದಲ್ಲಿ ಭಾರತದ ಅಥ್ಲೀಟ್ಸ್‌ಗೆ ಆಹಾರ ಕೊರತೆ; ರೆಸ್ಟೋರೆಂಟ್​ನಿಂದ ರೋಟಿ, ದಾಲ್‌ ತರಿಸಿದ ಬಾಕ್ಸರ್​

karnataka Rain
ಮಳೆ1 hour ago

Karnataka Rain : ಮಳೆಗೆ ಮನೆ ಮುಳುಗಡೆಯಾದ ಸುದ್ದಿ ಕೇಳಿ ಮನೆ ಯಜಮಾನ ಹೃದಯಾಘಾತದಿಂದ ಸಾವು

Rahul Gandhi
ದೇಶ1 hour ago

Rahul Gandhi: ನೀಟ್‌ನಲ್ಲಿ ‘ಎಷ್ಟು ವೋಟ್‌’ ಪಡೆದಿರಿ ಎಂದು ವಿದ್ಯಾರ್ಥಿಗಳಿಗೆ ಕೇಳಿದ ರಾಹುಲ್‌ ಗಾಂಧಿ; Video ವೈರಲ್

Gautam Gambhir
ಕ್ರೀಡೆ1 hour ago

Gautam Gambhir : ಗೌತಮ್​ ಗಂಭೀರ್​ಗೆ ವಿಶೇಷ ಸಂದೇಶ ಕಳುಹಿಸಿದ ದ್ರಾವಿಡ್​; ಭಾವುಕರಾದ ನೂತನ ಕೋಚ್​!

Kannada New Movie Nava Digantha latest news
ಸಿನಿಮಾ1 hour ago

Kannada New Movie: ನೆರವೇರಿತು ’ನವ ದಿಗಂತ’ ಚಿತ್ರದ ಮುಹೂರ್ತ

DK Shivakumar
ಕರ್ನಾಟಕ2 hours ago

Brand Bengaluru: ‘ಬ್ರ್ಯಾಂಡ್‌ ಬೆಂಗಳೂರು’ ನಿರ್ಮಾಣಕ್ಕೆ ಡಿಕೆಶಿ ಮಾಸ್ಟರ್‌ಪ್ಲಾನ್;‌ ಇಲ್ಲಿದೆ ಸಭೆಯ ವಿವರ

Drone Prathap Eye surgery for an old woman with her own money
ಬಿಗ್ ಬಾಸ್2 hours ago

Drone Prathap: ನುಡಿದಂತೆ ನಡೆದ ‘ಬಿಗ್ ಬಾಸ್’ ಡ್ರೋನ್ ಪ್ರತಾಪ್; ಸ್ವಂತ ಹಣದಿಂದ ವೃದ್ಧೆಗೆ ಕಣ್ಣು ಆಪರೇಷನ್ !

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

ramanagara news
ರಾಮನಗರ4 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ5 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ23 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

ಟ್ರೆಂಡಿಂಗ್‌