Virat Kohli | ಏಷ್ಯಾ ಕಪ್‌ಗೆ ಕಿಂಗ್‌ ಕೊಹ್ಲಿ ಸಜ್ಜು, ಜಿಮ್‌ನಲ್ಲಿ ಭರ್ಜರಿ ವರ್ಕೌಟ್! - Vistara News

ಕ್ರಿಕೆಟ್

Virat Kohli | ಏಷ್ಯಾ ಕಪ್‌ಗೆ ಕಿಂಗ್‌ ಕೊಹ್ಲಿ ಸಜ್ಜು, ಜಿಮ್‌ನಲ್ಲಿ ಭರ್ಜರಿ ವರ್ಕೌಟ್!

ಆಗಸ್ಟ್‌ 27ರಿಂದ ಆರಂಭವಾಗುವ ಏಷ್ಯಾಕಪ್‌ನಲ್ಲಿ ವಿರಾಟ್‌ ಕೊಹ್ಲಿ(Virat Kohli) ತಂಡಕ್ಕೆ ಮರಳಲಿದ್ದು, ಟೂರ್ನಿಯಲ್ಲಿ ಮಿಂಚುವ ದಿಸೆಯಲ್ಲಿ ಭರ್ಜರಿ ವರ್ಕೌಟ್‌ ನಡೆಸಿದ್ದಾರೆ.

VISTARANEWS.COM


on

Virat Kohli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ರನ್‌ ಮಷೀನ್‌ ವಿರಾಟ್‌ ಕೊಹ್ಲಿ (Virat Kohli) ಮೈದಾನದಲ್ಲಿ ಎಷ್ಟು ಅಗ್ರೆಸ್ಸಿವ್‌ ಆಗಿರುತ್ತಾರೋ, ಜಿಮ್‌ನಲ್ಲೂ ಅಷ್ಟೇ ಅಗ್ರೆಸ್ಸಿವ್‌ ಆಗಿ ಕಸರತ್ತು ನಡೆಸುತ್ತಾರೆ. ಹಾಗಾಗಿಯೇ ಅವರು ಜಗತ್ತಿನಲ್ಲೇ ಫಿಟ್ಟೆಸ್ಟ್‌ ಕ್ರೀಡಾಪಟುಗಳಲ್ಲಿ ಒಬ್ಬರು ಎನಿಸಿದ್ದಾರೆ. ಇನ್ನು ಯುಎಇಯಲ್ಲಿ ಆಗಸ್ಟ್‌ ೨೭ರಿಂದ ಆರಂಭವಾಗುವ ಏಷ್ಯಾ ಕಪ್‌ನಲ್ಲಿ ಆಡಲು ತಂಡಕ್ಕೆ ಮರಳಿರುವ ವಿರಾಟ್‌ ಕೊಹ್ಲಿ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಪ್ರ್ಯಾಕ್ಟೀಸ್‌ ಆರಂಭಿಸಿದ್ದ ವಿರಾಟ್, ಈಗ ಜಿಮ್‌ನಲ್ಲೂ ಭರ್ಜರಿಯಾಗಿ ಕಸರತ್ತು ನಡೆಸಿದ್ದು, ವರ್ಕೌಟ್‌ ಮಾಡಿದ ವಿಡಿಯೊ ವೈರಲ್‌ ಆಗಿದೆ.

ವಿರಾಟ್‌ ಕೊಹ್ಲಿ ತಂಡಕ್ಕೆ ಮರಳುತ್ತಿರುವುದು ಆನೆಬಲ ಬಂದಂತಾಗಿದ್ದರೂ, ಅವರು ಫಾರ್ಮ್‌ ಕೊರತೆಯಿಂದ ಬಳಲುತ್ತಿರುವ ಕಾರಣ ಕೊಹ್ಲಿ ಪ್ರದರ್ಶನದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಬಿಸಿಸಿಐ ಆಯ್ಕೆ ಸಮಿತಿಯ ಕಣ್ಣೂ ವಿರಾಟ್‌ ಮೇಲಿವೆ. ೨೦೧೯ರ ಬಳಿಕ ಕೊಹ್ಲಿ ಶತಕ ಸಿಡಿಸದಿರುವುದು ಹಾಗೂ ಅವರ ಅಭಿಮಾನಿಗಳು ಮತ್ತೆ ಬ್ಯಾಟಿಂಗ್‌ ವೈಭವ ನೋಡಲು ಕಾತುರರಾಗಿರುವುದೂ ಏಷ್ಯಾ ಕಪ್‌ ಪಂದ್ಯಗಳಿಗಾಗಿ ಕಾಯುವಂತೆ ಮಾಡಿದೆ. ಹಾಗಾಗಿ, ವಿರಾಟ್‌ ಭರ್ಜರಿ ವರ್ಕೌಟ್‌ ಮೂಲಕ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ.

ಕೊಹ್ಲಿಗೆ ಮಹತ್ವದ ಪಂದ್ಯ:

ಏಷ್ಯಾ ಕಪ್‌ನ ಮೊದಲ ಪಂದ್ಯವೇ ಆಗಸ್ಟ್‌ ೨೮ರಂದು ಪಾಕಿಸ್ತಾನ ವಿರುದ್ಧ ನಡೆಯಲಿದ್ದು, ಈ ಪಂದ್ಯ ಮಾಜಿ ನಾಯಕನ ಪಾಲಿಗೆ ಮಹತ್ವದ್ದಾಗಿದೆ. ಪಾಕ್‌ ವಿರುದ್ಧ ನಡೆಯುವ ಪಂದ್ಯವು ಕೊಹ್ಲಿಗೆ ೧೦೦ನೇ ಅಂತಾರಾಷ್ಟ್ರೀಯ ಟಿ-೨೦ ಪಂದ್ಯವಾಗಿದ್ದು, ಸಿಡಿದೇಳುವ ನಿರೀಕ್ಷೆ ಇದೆ.

ಇದನ್ನೂ ಓದಿ | Asia Cup Cricket | ಬ್ಯಾಟಿಂಗ್ ಸುಧಾರಣೆಗೆ ಆರ್‌ಸಿಬಿ ಕೋಚ್‌ ಮೊರೆ ಹೋದ ವಿರಾಟ್‌ ಕೊಹ್ಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

RR vs KKR: ಅಗ್ರಸ್ಥಾನಕ್ಕೆ ಇಂದು ಕೆಕೆಆರ್​-ರಾಜಸ್ಥಾನ್ ಮಧ್ಯೆ ಹೈವೋಲ್ಟೇಜ್ ಕದನ

RR vs KKR: ಉಭಯ ತಂಡಗಳು ಇದುವರೆಗೆ ಒಟ್ಟು 28 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ರಾಜಸ್ಥಾನ ರಾಯಲ್ಸ್​ 13 ಪಂದ್ಯ ಗೆದ್ದರೆ, ಕೋಲ್ಕತಾ ನೈಟ್​ ರೈಡರ್ಸ್​ 14 ಪಂದ್ಯ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಕಳೆದ ಆವೃತ್ತಿಯಲ್ಲಿ ಒಂದೇ ಪಂದ್ಯ ಆಡಿ, ಈ ಪಂದ್ಯವನ್ನು ರಾಜಸ್ಥಾನ್​ 9 ವಿಕೆಟ್​ ಅಂತರದಿಂದ ಗೆದ್ದು ಬೀಗಿತ್ತು.

VISTARANEWS.COM


on

RR vs KKR
Koo

ಕೋಲ್ಕತ್ತಾ: ಈ ಬಾರಿಯ ಐಪಿಎಲ್‌ನಲ್ಲಿ(IPL 2024) ಸದ್ಯ ಅಗ್ರ 2 ಸ್ಥಾನಗಳನ್ನು ಪಡೆದಿರುವ ರಾಜಸ್ಥಾನ್​ ರಾಯಲ್ಸ್(RR vs KKR)​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ತಂಡಗಳು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಯಾರೇ ಗೆದ್ದರು ಅಗ್ರಸ್ಥಾನ ಪಡೆಯಲಿದ್ದಾರೆ. ಉಭಯ ತಮಡಗಳು ಕೂಡ ಬಲಿಷ್ಠವಾಗಿರುವ ಕಾರಣ ಈ ಪಂದ್ಯವನ್ನು ಹೈವೋಲ್ಟೇಜ್​ ಪಂದ್ಯ ಎಂದು ನಿರೀಕ್ಷೆ ಮಾಡಲಾಗಿದೆ. ರಾಜಸ್ಥಾನ(Rajasthan Royals) ಸದ್ಯ 6 ಪಂದ್ಯಗಳಲ್ಲಿ 5 ಗೆದ್ದಿದ್ದು ಅಗ್ರಸ್ಥಾನದಲ್ಲಿದೆ. ಕೋಲ್ಕತಾ 5ರಲ್ಲಿ 4 ಪಂದ್ಯಗಳಲ್ಲಿ ಜಯಿಸಿ ದ್ವಿತೀಯ ಸ್ಥಾನದಲ್ಲಿದೆ.

ಕೆಕೆಆರ್​ ತಂಡಕ್ಕೆ ದೊಡ್ಡ ಲಾಭವೆಂದರೆ ಸುನೀಲ್​ ನರೈನ್​ ಅವರ ಪ್ರಚಂಡ ಬ್ಯಾಟಿಂಗ್​ ಫಾರ್ಮ್ ಪಂದ್ಯದಿಂದ ಪಂದ್ಯಕ್ಕೆ ಅವರು ಸಿಡಿಯುತ್ತಲೇ ಇದ್ದಾರೆ. ಬೌಲರ್​ ಆಗಿರುವ ಅವರು ಆರಂಭಿಕಾಗಿ ಕಣಕ್ಕಿಳಿದು ಕಡಿಮೆ ಎಸೆತಗಳಿಂದ ದೊಡ್ಡ ಮೊತ್ತ ಪೇರಿಸುತ್ತಾರೆ. ಇದು ತಂಡಕ್ಕೆ ಬೋನಸ್​ ಆಗಿದೆ. ತಂಡಕ್ಕೆ ಹೆಚ್ಚುವರಿ ಬ್ಯಾಟರ್​ ಆಯ್ಕೆಯೂ ಸಿಕ್ಕಂತಾಗುತ್ತದೆ. 18 ವರ್ಷದ ಆಂಗ್ಕ್ರಿಶ್ ರಘುವಂಶಿ ಕೂಡ ಬಿರುಸಿನ ಬ್ಯಾಟಿಂಗ್​ ಮೂಲಕ ಗಮನಸೆಳೆದಿದ್ದರು. ಈ ಪಂದ್ಯದಲ್ಲೂ ತಂಡ ಇವರ ಮೇಲೆ ಹೆಚ್ಚಿನ ಬರವಸೆ ಇರಿಸಿದೆ. ರಸೆಲ್ ಅವರಂತೂ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಉತ್ತಮ ಫಾರ್ಮ್​ನಲ್ಲಿದ್ದಾರೆ. ಫಿಲ್​ ಸಾಲ್ಟ್​​ ಫಾರ್ಮ್​ಗೆ ಮರಳಿರುವುದು ತಂಡಕ್ಕೆ ಇನ್ನೂ ಹೆಚ್ಚಿನ ಬಲ ಬಂದಂತಾಗಿದೆ. ಕಳೆದ ಲಕ್ನೋ ವಿರುದ್ಧ ಅರ್ಧಶತಕ ಬಾರಿಸಿ ಮಿಂಚಿದ್ದರು.

ಫಾರ್ಮ್​ ಕಳೆದುಕೊಂಡ ಜೈಸ್ವಾಲ್


ಟೀಮ್​ ಇಂಡಿಯಾದ ಭವಿಷ್ಯದ ಆಟಗಾರ ಎಂದೇ ಗುರುತಿಸಲ್ಪಟ್ಟಿದ್ದ ಯುವ ಬ್ಯಾಟರ್​ ಯಶಸ್ವಿ ಜೈಸ್ವಾಲ್​ ಈ ಬಾರಿ ಐಪಿಎಲ್​ನಲ್ಲಿ ಸಂಪೂರ್ಣ ಮಂಕಾಗಿದ್ದಾರೆ. ಆಡಿದ ಪ್ರತಿ ಪಂದ್ಯದಲ್ಲಿಯೂ ವೈಫಲ್ಯ ಕಂಡಿದ್ದಾರೆ. ಟಿ20 ವಿಶ್ವಕಪ್​ಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗ ಫಾರ್ಮ್​ ಕಳೆದುಕೊಂಡಿರುವುದು ಅವರಿಗೆ ಹಿನ್ನಡೆಯಾಗಿ ಪರಿಣಮಿಸಿದೆ. ಮುಂದಿನ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಮತ್ತೆ ವಿಫಲವಾದರೆ ಟಿ20 ವಿಶ್ವಕಪ್​ಗೆ ಆಯ್ಕೆಯಾವುದು ಅನುಮಾನವಾಗಿದೆ. ರಾಜಸ್ಥಾನ್(Rajasthan Royals) ತಂಡ ಕೂಡ ಬ್ಯಾಟಿಂಗ್​ ಮತ್ತು ಬೌಲಿಂಗ್​ ವಿಭಾಗದಲ್ಲಿ ಉತ್ತಮವಾಗಿದೆ. ಆದರೂ ಕೂಡ ಈ ತಂಡದ ಪ್ರದರ್ಶನದ ಮೇಲೆ ಹೆಚ್ಚು ನಂಬಿಕೆ ಇಡುವಂತಿಲ್ಲ. ಕಾರಣ ಪ್ರತಿ ಆವೃತ್ತಿಯಲ್ಲಿಯೂ ಆರಂಭಿಕ ಹಂತದಲ್ಲಿ ಸತತ ಗೆಲುವು ಸಾಧಿಸಿ ಆ ಬಳಿಕ ಸತತ ಸೋಲು ಕಂಡು ಪಾತಾಳಕ್ಕೆ ಕುಸಿದ ಹಲವು ನಿದರ್ಶನಗಳಿವೆ.

ಇದನ್ನೂ ಓದಿ IPL 2024: ಸ್ಟ್ರೈಕ್ ರೇಟ್​ ಮೂಲಕ ನೂತನ ದಾಖಲೆ ಬರೆದ ಅಬ್ದುಲ್​ ಸಮದ್

ಮುಖಾಮುಖಿ


ಉಭಯ ತಂಡಗಳು ಇದುವರೆಗೆ ಒಟ್ಟು 28 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ರಾಜಸ್ಥಾನ ರಾಯಲ್ಸ್​ 13 ಪಂದ್ಯ ಗೆದ್ದರೆ, ಕೋಲ್ಕತಾ ನೈಟ್​ ರೈಡರ್ಸ್​ 14 ಪಂದ್ಯ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಕಳೆದ ಆವೃತ್ತಿಯಲ್ಲಿ ಒಂದೇ ಪಂದ್ಯ ಆಡಿ, ಈ ಪಂದ್ಯವನ್ನು ರಾಜಸ್ಥಾನ್​ 9 ವಿಕೆಟ್​ ಅಂತರದಿಂದ ಗೆದ್ದು ಬೀಗಿತ್ತು. ಈ ಸೋಲಿಗೆ ಕೆಕೆಆರ್​ ಈ ಬಾರಿ ತವರಿನಲ್ಲಿ ಸೇಡು ತೀರಿಸುವ ತವಕದಲ್ಲಿದೆ.

ಸಂಭಾವ್ಯ ಆಟಗಾರರ ಪಟ್ಟಿ


ರಾಜಸ್ಥಾನ್​: ಯಶಸ್ವಿ ಜೈಸ್ವಾಲ್‌, ಜೋಸ್ ಬಟ್ಲರ್‌, ಸಂಜು ಸ್ಯಾಮ್ಸನ್‌(ನಾಯಕ), ರಿಯಾನ್‌ ಪರಾಗ್, ಧೃವ್ ಜುರೆಲ್‌, ಶಿಮ್ರೊನ್ ಹೆಟ್ಮೇಯರ್‌, ರವಿಚಂದ್ರನ್ ಅಶ್ವಿನ್‌, ಕೇಶವ್‌ ಮಹರಾಜ್, ಟ್ರೆಂಟ್ ಬೌಲ್ಟ್‌, ಆವೇಶ್‌ ಖಾನ್, ಯುಜುವೇಂದ್ರ ಚಹಲ್‌.

ಕೋಲ್ಕತಾ: ಫಿಲ್ ಸಾಲ್ಟ್‌, ಸುನಿಲ್ ನರೈನ್‌, ವೆಂಕಟೇಶ್‌ ಅಯ್ಯರ್, ಶ್ರೇಯಸ್‌ ಅಯ್ಯರ್(ನಾಯಕ),ಅಂಗಕೃಷ್ ರಘುವಂಶಿ, ಆಂಡ್ರೆ ರಸೆಲ್‌, ರಮನ್‌ದೀಪ್‌ ಸಿಂಗ್, ಮಿಚೆಲ್ ಸ್ಟಾರ್ಕ್‌, ಹರ್ಷಿತ್ ರಾಣಾ, ವೈಭವ್‌ ಅರೋರ, ವರುಣ್‌ ಚಕ್ರವರ್ತಿ.

ಪಂದ್ಯ: ಸಂಜೆ 7.30ಕ್ಕೆ. ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.

Continue Reading

ಕ್ರೀಡೆ

Dinesh Karthik: ಕಾರ್ತಿಕ್​ಗೆ ಟಿ20 ವಿಶ್ವಕಪ್​ನಲ್ಲಿ ಅವಕಾಶ ನೀಡಿ; ದಿಗ್ಗಜ ಕ್ರಿಕೆಟಿಗರ ಒತ್ತಾಯ

Dinesh Karthik: ಐಪಿಎಲ್​ ಟೂರ್ನಿಯಲ್ಲಿ 249* ಪಂದ್ಯಗಳನ್ನು ಆಡಿರುವ ದಿನೇಶ್​ ಕಾರ್ತಿಕ್​, ಅತ್ಯಧಿಕ ಐಪಿಎಲ್​ ಪಂದ್ಯಗಳ್ನಾಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್​ನಲ್ಲಿ 4742 ರನ್​ ಬಾರಿಸಿದ್ದಾರೆ. 2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ಕಾರ್ತಿಕ್​ ಭಾರತ ಪರ 26 ಟೆಸ್ಟ್‌ಗಳನ್ನು ಆಡಿ 1025 ರನ್ ಗಳಿಸಿದ್ದಾರೆ. 57 ಕ್ಯಾಚ್‌ಗಳು ಮತ್ತು 6 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ.

VISTARANEWS.COM


on

Dinesh Karthik
Koo

ಬೆಂಗಳೂರು: ಪಂದ್ಯದಿಂದ ಪಂದ್ಯಕ್ಕೆ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ಈ ಬಾರಿಯ ಐಪಿಎಲ್​ನಲ್ಲಿ(IPL 2024) ಸಂಚಲನ ಮೂಡಿಸುತ್ತಿರುವ ಆರ್​ಸಿಬಿ ತಂಡದ ಹಿರಿಯ ಆಟಗಾರ ದಿನೇಶ್​ ಕಾರ್ತಿಕ್(Dinesh Karthik) ಅವರನ್ನು ಟಿ20 ವಿಶ್ವಕಪ್​(T20 World Cup) ತಂಡಕ್ಕೆ ಪರಿಗಣಿಸುವಂತೆ ಹಲವರು ಒತ್ತಾಯಿಸಿದ್ದಾರೆ. ಟಿ20 ವಿಶ್ವಕಪ್​ ಟೂರ್ನಿ ಇದೇ ವರ್ಷದ ಜೂನ್​ 1 ರಿಂದ ಆರಂಭಗೊಳ್ಳಲಿದೆ. ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

ಕಳೆದ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ ದಿನೇಶ್​ ಕಾರ್ತಿಕ್​ಗೆ ಟೀಮ್​ ಇಂಡಿಯಾದ ನಾಯಕನಾಗಿರುವ ರೋಹಿತ್​ ಶರ್ಮ ಅವರು ಮೈದಾನದಲ್ಲೇ ಇದೇ ರೀತಿ ಆಡಿದರೆ ವಿಶ್ವಕಪ್​ನಲ್ಲಿ ಆಡಬಹುದು ಎಂದು ಬಿಗ್​ ಆಫರ್​ ನೀಡಿದ್ದರು. ಈ ಆಫರ್​ ಕೇಳಿದ ಕಾರ್ತಿಕ್​ ಹೈದರಾಬಾದ್​ ವಿರುದ್ಧ ನಿನ್ನ(ಸೋಮವಾರ) ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಕೇವಲ 35 ಎಸೆತಗಳಿಂದ 83 ರನ್​ ಚಚ್ಚಿದ್ದರು.

ಕಾರ್ತಿಕ್​ ಅವರ ಅಸಾಮಾನ್ಯ ಬ್ಯಾಟಿಂಗ್​ ಕಂಡ ಕ್ರಿಕೆಟ್​ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದ್ದು ನಿಂತು ಪ್ರಶಂಸೆ ವ್ಯಕ್ತಪಡಿಸಿದ್ದರು. ವರ್ಷವಿಡಿ ಕ್ರಿಕೆಟ್​ ಆಡುವ ಆಟಗಾರರು ಕೂಡ ಇವರಂತಹ ಪ್ರದರ್ಶನ ನೀಡುತ್ತಿಲ್ಲ. ಹೀಗಿರುವಾಗ ವರ್ಷಕ್ಕೊಮ್ಮೆ ಐಪಿಎಲ್​ ಮೂಲಕ ಕ್ರಿಕೆಟ್​ ಆಡುತ್ತಿರುವ ಇವರ ಈ ಸಾಹಸಕ್ಕೆ ಇಂದು ಅನೇಕ ಕ್ರಿಕೆಟ್​ ದಿಗ್ಗಜರು ಕೂಡ ಸಲಾಂ ಹೇಳಿದ್ದಾರೆ. ಜತೆಗೆ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಅವರಿಗೆ ಭಾರತ ತಂಡದ ಪರ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಾರಿಯ ಟೂರ್ನಿಯಲ್ಲಿ ಕಾರ್ತಿಕ್​ 7 ಪಂದ್ಯಗಳನ್ನಾಡಿ 226 ರನ್​ ಬಾರಿಸಿದ್ದಾರೆ. ಇದರಲ್ಲಿ 16 ಬೌಂಡರಿ ಮತ್ತು 18 ಸಿಕ್ಸರ್​ ದಾಖಲಾಗಿದೆ. 2022ರ ಹರಾಜಿನಲ್ಲಿ ಕಾರ್ತಿಕ್​ ಅವರು ಬರೋಬ್ಬರಿ 5.5 ಕೋಟಿ ರೂ. ಪಡೆದು ಆರ್​ಸಿಬಿ ಕ್ಯಾಂಪ್ ಸೇರಿದ್ದರು. ಆ ಆವೃತ್ತಿಯಲ್ಲಿ ಕಾರ್ತಿಕ್ 14 ಇನ್ನಿಂಗ್ಸ್ ಗಳಲ್ಲಿ 287 ರನ್ ಬಾರಿಸಿದ್ದರು. ಜತೆಗೆ ತಂಡದಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸಿದ್ದರು. ಇದೇ ಪ್ರದರ್ಶನ ಕಂಡು ಆಸ್ಟ್ರೇಲಿಯಾದಲ್ಲಿ ನಡೆದ ಕಂಡು ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ಆಡಿಸಲಾಗಿತ್ತು. ಆದರೆ ಇಲ್ಲಿ ಕಾರ್ತಿಕ್​ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಇದೀಗ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿರುವ ಅವರು ಈ ಬಾರಿಯ ಟಿ20 ವಿಶ್ವಕಪ್​ ತಂಡಕ್ಕೆ ಆಯ್ಕೆಯಾದರೂ ಕೂಡ ಅಚ್ಚರಿಯಿಲ್ಲ.

ಐಪಿಎಲ್​ ಟೂರ್ನಿಯಲ್ಲಿ 249* ಪಂದ್ಯಗಳನ್ನು ಆಡಿರುವ ದಿನೇಶ್​ ಕಾರ್ತಿಕ್​, ಅತ್ಯಧಿಕ ಐಪಿಎಲ್​ ಪಂದ್ಯಗಳ್ನಾಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್​ನಲ್ಲಿ 4742 ರನ್​ ಬಾರಿಸಿದ್ದಾರೆ. 2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ಕಾರ್ತಿಕ್​ ಭಾರತ ಪರ 26 ಟೆಸ್ಟ್‌ಗಳನ್ನು ಆಡಿ 1025 ರನ್ ಗಳಿಸಿದ್ದಾರೆ. 57 ಕ್ಯಾಚ್‌ಗಳು ಮತ್ತು 6 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಅವರು ತಮ್ಮ ಕೊನೆಯ ಟೆಸ್ಟ್ ಆಡಿದ್ದು 2018 ರಲ್ಲಿ. ಏಕದಿನದಲ್ಲಿ 94 ಪಂದ್ಯಗಳನ್ನು ಆಡಿ 1752 ರನ್ ಗಳಿಸಿದ್ದಾರೆ. 64 ಕ್ಯಾಚ್‌ಗಳು ಮತ್ತು 7 ಸ್ಟಂಪಿಂಗ್‌ಗಳನ್ನು ನಿರ್ವಹಿಸಿದ್ದಾರೆ. 60 ಟಿ20 ಪಂದ್ಯಗಳಿಂದ 686 ರನ್ ಗಳಿಸಿ, 30 ಕ್ಯಾಚ್‌ಗಳು ಮತ್ತು 8 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ.

Continue Reading

ಕ್ರೀಡೆ

IPL 2024: ಸ್ಟ್ರೈಕ್ ರೇಟ್​ ಮೂಲಕ ನೂತನ ದಾಖಲೆ ಬರೆದ ಅಬ್ದುಲ್​ ಸಮದ್

IPL 2024: ಆರ್​ಸಿಬಿ ವಿರುದ್ಧ 287 ರನ್ ಬಾರಿಸುವ ಮೂಲಕ ಇದೇ ಆವೃತ್ತಿಯಲ್ಲಿ ಮುಂಬೈ ವಿರುದ್ಧ 277 ರನ್​ ಬಾರಿಸಿ ದಾಖಲೆ ಬರೆದಿದ್ದ ಹೈದರಾಬಾದ್​ ತನ್ನ ಈ ದಾಖಲೆಯನ್ನು ಮತ್ತೆ ತಿದ್ದಿ ಬರೆಯಿತು. ಒಟ್ಟಾರೆಯಾಗಿ ಈ ಪಂದ್ಯದಲ್ಲಿ ಉಭಯ ತಂಡಗಳು ಸೇರಿ 549 ರನ್ ಬಾರಿಸಿತು.​

VISTARANEWS.COM


on

IPL 2024
Koo

ಬೆಂಗಳೂರು: ಆರ್​ಸಿಬಿ(Royal Challengers Bengaluru) ವಿರುದ್ಧ ಸೋಮವಾರ ನಡೆದ ಐಪಿಎಲ್(IPL 2024)​ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್​ ನಡೆಸಿದ ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ತಂಡದ ಆಟಗಾರ ಅಬ್ದುಲ್​ ಸಮದ್(Abdul Samad)​ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಈ ಮೂಲಕ ಸರ್ಫರಾಜ್​ ಖಾನ್​ ದಾಖಲೆಯನ್ನು ಮುರಿದಿದ್ದಾರೆ.

ಹೌದು, ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಕೇವಲ 10 ಎಸೆತಗಳಿಂದ ಅಜೇಯ 37 ರನ್​ ಬಾರಿಸಿದ ಅಬ್ದುಲ್​ ಸಮದ್(370 ಸ್ಟ್ರೈಕ್​ ರೇಟ್) ಅವರು ಐಪಿಎಲ್​ ಇತಿಹಾಸದಲ್ಲಿ ಅತ್ಯಧಿಕ ಸ್ಟ್ರೈಕ್​ ರೇಟ್​(10 ಎಸೆತಗಳಲ್ಲಿ) ಪಡೆದ ಆಟಗಾರ ಎನ್ನುವ ದಾಖಲೆ ಬರೆದರು. ಇದಕ್ಕೂ ಮುನ್ನ ಈ ದಾಖಲೆ ಸರ್ಫರಾಜ್​ ಖಾನ್​(350 ಸ್ಟ್ರೈಕ್​ ರೇಟ್) ಹೆಸರಿನಲ್ಲಿತ್ತು. ಸರ್ಫರಾಜ್ 2016ರಲ್ಲಿ ಆರ್​ಸಿಬಿ ಪರ ಈ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆ ಪತನಗೊಂಡಿದೆ. ಈ ಬಾರಿ ಐಪಿಎಲ್​ನಲ್ಲಿ ಸರ್ಫರಾಜ್​ ಬಿಡ್ಡಿಂಗ್​ ಆಗದೆ ಆಡುವ ಅವಕಾಶ ಕಳೆದುಕೊಂಡರು.

ಅತ್ಯಧಿಕ ಸ್ಟ್ರೈಕ್​ ರೇಟ್(10 ಎಸೆತಗಳಲ್ಲಿ) ಪಡೆದ ಬ್ಯಾಟರ್​ಗಳು


ಅಬ್ದುಲ್​ ಸಮದ್-370

ಸರ್ಫರಾಜ್​ ಖಾನ್​-350

ಸುರೇಶ್​ ರೈನಾ-348

ಯೂಸುಫ್​ ಪಠಾಣ್​-327

ಅಭಿಷೇಕ್​ ಪೋರೆಲ್​-320

ಇದನ್ನೂ ಓದಿ IPL 2024: ದಯವಿಟ್ಟು ಆರ್​ಸಿಬಿ ತಂಡವನ್ನು ಮಾರಿಬಿಡಿ; ಅಳಲು ತೋಡಿಕೊಂಡ ಟೆನಿಸ್​ ದಿಗ್ಗಜ


ಅಬ್ದುಲ್​ ಸಮದ್​ ಅವರು ಆರ್​ಸಿಬಿ ಬೌಲರ್​ ಟೋಪ್ಲಿ ಓವರ್​ನಲ್ಲಿ ಸತತ 2 ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ಮಿಂಚಿದರು. ಅವರ ಈ ವಿಸ್ಫೋಟಕ ಬ್ಯಾಟಿಂಗ್​ ನರೆವಿನಿಂದ ತಂಡ 280ರ ಗಡಿ ದಾಟುವಲ್ಲಿ ಪ್ರಮುಖ ಪಾತ್ರವಹಿಸಿತು. ಒಂದೊಮ್ಮೆ ಅವರು ಈ ಬಿರುಸಿನ ಆಟವಾಡದೇ ಹೋಗಿದ್ದರೆ ಆರ್​ಸಿಬಿಗೆ ಗೆಲ್ಲುವ ಅವಕಾಶವಿತ್ತು. ಏಕೆಂದರೆ ಸೋಲಿನ ಅಂತರದ ಕೇವಲ 25 ರನ್​.

ಆರ್​ಸಿಬಿ ವಿರುದ್ಧ 287 ರನ್ ಬಾರಿಸುವ ಮೂಲಕ ಇದೇ ಆವೃತ್ತಿಯಲ್ಲಿ ಮುಂಬೈ ವಿರುದ್ಧ 277 ರನ್​ ಬಾರಿಸಿ ದಾಖಲೆ ಬರೆದಿದ್ದ ಹೈದರಾಬಾದ್​ ತನ್ನ ಈ ದಾಖಲೆಯನ್ನು ಮತ್ತೆ ತಿದ್ದಿ ಬರೆಯಿತು. ಒಟ್ಟಾರೆಯಾಗಿ ಈ ಪಂದ್ಯದಲ್ಲಿ ಉಭಯ ತಂಡಗಳು ಸೇರಿ 549 ರನ್ ಬಾರಿಸಿತು.​ ಇದು ಕೂಡ ವಿಶ್ವ ದಾಖಲೆಯಾಗಿದೆ. ಟಿ20 ಕ್ರಿಕೆಟ್​ನಲ್ಲಿ ದಾಖಲಾದ ಅತ್ಯಧಿಕ ಗರಿಷ್ಠ ಮೊತ್ತವಾಗಿದೆ.

ಪಂದ್ಯ ಗೆದ್ದ ಹೈದರಾಬಾದ್​


ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆದ ಈ ಪಂದ್ಯದಲ್ಲಿ ಹೈದರಾಬಾದ್​ ತಂಡ 25 ರನ್​ಗಳ ಗೆಲುವು ಕಂಡಿತು. ಟಾಸ್​ ಗೆದ್ದ ಆತಿಥೇಯ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಎಸ್​ಆರ್​ಎಚ್​ ತಂಡ ವಿಶ್ವ ದಾಖಲೆಯ 287 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆರ್​ಸಿಬಿ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್​ಗೆ 262 ರನ್​ ಬಾರಿಸಿ ಸೋಲೊಪ್ಪಿಕೊಂಡಿತು. ಆರ್​ಸಿಬಿ ಪರ ಒನ್​ ಮ್ಯಾನ್ ಆರ್ಮಿ ರೀತಿ ಹೋರಾಟ ಸಂಘಟಿಸಿದ ವಿಕೆಟ್​ ಕೀಪರ್ ಬ್ಯಾಟರ್​ ದಿನೇಶ್ ಕಾರ್ತಿಕ್​ 35 ಎಸೆತಗಳಲ್ಲಿ 83 ರನ್ ಬಾರಿಸಿದರು.

Continue Reading

ಕ್ರಿಕೆಟ್

IPL 2024: ದಯವಿಟ್ಟು ಆರ್​ಸಿಬಿ ತಂಡವನ್ನು ಮಾರಿಬಿಡಿ; ಅಳಲು ತೋಡಿಕೊಂಡ ಟೆನಿಸ್​ ದಿಗ್ಗಜ

IPL 2024: 16 ಆವೃತ್ತಿಯ ಐಪಿಎಲ್​ನಲ್ಲಿ(IPL 2024) ಆರ್​ಸಿಬಿ(Royal Challengers Bengaluru) ತಂಡ ಕಪ್​ ಗೆಲ್ಲದಿದ್ದರೂ ಕೂಡ ಇಷ್ಟೊಂದು ಕಳಪೆ ಮಟ್ಟದ ಆಟವಾಡಿರಲಿಲ್ಲ. ಈ ಬಾರಿ ಆಡಿದ 7 ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಮಾತ್ರ ಗೆಲುವು ಕಂಡಿದೆ. ದುರಾದೃಷ್ಟವಶಾತ್‌ ಈ ಬಾರಿ ತವರಿನಲ್ಲೇ ಅತ್ಯಧಿಕ ಪಂದ್ಯ ಸೋತ ಅವಮಾನಕ್ಕೆ ಸಿಲುಕಿದೆ.

VISTARANEWS.COM


on

IPL 2024
Koo

ಬೆಂಗಳೂರು: ಕನ್ನಡಿಗರ ನೆಚ್ಚಿನ ತಂಡ ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು(RCB) ತಂಡದ ಶೋಚನೀಯ ಪ್ರದರ್ಶನ ಕಂಡು ಭಾರತದ ಟೆನಿಸ್​ ದಿಗ್ಗಜ ಮಹೇಶ್‌ ಭೂಪತಿ(Mahesh Bhupathi) ಬೇಸರ ವ್ಯಕ್ತಪಡಿಸಿದ್ದು, ದಯವಿಟ್ಟು ತಂಡವನ್ನು(IPL 2024) ಹೊಸ ಮಾಲಿಕರಿಗೆ ಮಾರಿ ಬಿಡಿ ಎಂದು ಹೇಳಿದ್ದಾರೆ.

“ಕ್ರೀಡೆ, ಐಪಿಎಲ್, ಅಭಿಮಾನಿಗಳು ಮತ್ತು ಆಟಗಾರರ ಸಲುವಾಗಿ ಬಿಸಿಸಿಐ ಇತರ ತಂಡಗಳು ಮಾಡಿದ ರೀತಿಯಲ್ಲಿ ಕ್ರೀಡಾ ಫ್ರಾಂಚೈಸಿಯನ್ನು ನಿರ್ಮಿಸಲು ಕಾಳಜಿವಹಿಸುವ ಹೊಸ ಮಾಲೀಕರಿಗೆ ಆರ್​ಸಿಬಿ ತಂಡವನ್ನು ಮಾರಾಟ ಮಾಡುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ” ಎಂದು ಮಹೇಶ್‌ ಭೂಪತಿ ಟ್ವಿಟರ್​ ಎಕ್ಸ್​ನಲ್ಲಿ ಪೋಸ್ಟ್​ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಕಳೆದ 16 ಆವೃತ್ತಿಯ ಐಪಿಎಲ್​ನಲ್ಲಿ(IPL 2024) ಆರ್​ಸಿಬಿ(Royal Challengers Bengaluru) ತಂಡ ಕಪ್​ ಗೆಲ್ಲದಿದ್ದರೂ ಕೂಡ ಇಷ್ಟೊಂದು ಕಳಪೆ ಮಟ್ಟದ ಆಟವಾಡಿರಲಿಲ್ಲ. ಈ ಬಾರಿ ಆಡಿದ 7 ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಮಾತ್ರ ಗೆಲುವು ಕಂಡಿದೆ. ದುರಾದೃಷ್ಟವಶಾತ್‌ ಈ ಬಾರಿ ತವರಿನಲ್ಲೇ ಅತ್ಯಧಿಕ ಪಂದ್ಯ ಸೋತ ಅವಮಾನಕ್ಕೆ ಸಿಲುಕಿದೆ.


ಟೂರ್ನಿ ಆರಂಭಕ್ಕೂ ಮುನ್ನ ವಿರಾಟ್​ ಕೊಹ್ಲಿ ಇದು ಆರ್​ಸಿಬಿಯ ಹೊಸ ಅಧ್ಯಾಯ ಎಂದು ಹೇಳುವು ಮೂಲಕ ಆರ್‌ಸಿಬಿ ಹವಾ ಸೃಷ್ಟಿಸಿತ್ತು. ಇದೀಗ ಸತತ ಸೋಲಿನಿಂದ ಸಾಮಾಜಿಕ ಜಾಲತಾಣದಲ್ಲಿ ಮುಗಿದು ಹೋದ ಅಧ್ಯಾಯ ಅಂತ ಅಭಿಮಾನಿಗಳು ವ್ಯಂಗ್ಯವಾಗಿ ಹೇಳತೊಡಗಿದ್ದಾರೆ. ಆರ್​ಸಿಬಿ ಮೇಲೆ ಸ್ವತಃ ಅಭಿಮಾನಿಗಳೇ ವಿಶ್ವಾಸ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ IPL 2024: ವಿಶ್ರಾಂತಿ ಬಯಸಿದ ಗ್ಲೆನ್ ಮ್ಯಾಕ್ಸ್​ವೆಲ್​; ಮುಂದಿನ ಪಂದ್ಯಗಳಿಗೆ ಅಲಭ್ಯ

ತಂಡದದಲ್ಲಿ ಸ್ಟಾರ್​ ಆಟಗಾರರಿದ್ದರೂ ಕೂಡ ಯಾರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ವಿರಾಟ್​ ಕೊಹ್ಲಿ, ದಿನೇಶ್​ ಕಾರ್ತಿಕ್​ ಮಾತ್ರ ತಂಡದ ನಂಬಿಕಸ್ಥ ಆಟಗಾರರಾಗಿದ್ದಾರೆ. ಆರ್​ಸಿಬಿ ಬ್ಯಾಟಿಂಗ್‌ನಲ್ಲಿ ಯಶಸ್ವಿಯಾದರೆ ಬೌಲಿಂಗ್‌ನಲ್ಲಿ ಎಡವುತ್ತಿದೆ. ಬೌಲಿಂಗ್‌ನಲ್ಲಿ ಯಶಸ್ವಿಯಾದರೆ, ಬ್ಯಾಟಿಂಗ್‌ನಲ್ಲಿ ಪಲ್ಟಿ ಹೊಡೆಯುತ್ತಿದೆ. ಬೌಲಿಂಗ್‌ ಪಡೆಯಂತೂ ಸಂಪೂರ್ಣ ಮೊನಚು ಕಳೆದುಕೊಂಡಿದೆ. ಇದು, ಸಹಜವಾಗಿ ಆರ್‌ಸಿಬಿಯನ್ನು ಸೋಲಿನ ಸುಳಿಗೆ ತಳ್ಳಿದೆ. ಒಟ್ಟಿನಲ್ಲಿ ಸಂಘಟನಾತ್ಮಕ ಹೋರಾಟವೇ ಬರುತ್ತಿಲ್ಲ. 

ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ತಂಡದ ಮೇಲಿದೆ. ಈಗಾಗಲೇ 7 ಪಂದ್ಯ ಆಡಿದ್ದು, 1 ಪಂದ್ಯ ಗೆದ್ದು, 6 ಪಂದ್ಯದಲ್ಲಿ ಸೋಲು ಕಂಡಿದೆ. 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಲೀಗ್‌ ಹಂತದಲ್ಲಿ ಇನ್ನೂ 7 ಪಂದ್ಯಗಳ ಬಾಕಿ ಇದೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇ ಆಫ್ ಅವಕಾಶ ಇದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಆರ್‌ಸಿಬಿ ಪ್ಲೇಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ

Continue Reading
Advertisement
RR vs KKR
ಕ್ರೀಡೆ7 mins ago

RR vs KKR: ಅಗ್ರಸ್ಥಾನಕ್ಕೆ ಇಂದು ಕೆಕೆಆರ್​-ರಾಜಸ್ಥಾನ್ ಮಧ್ಯೆ ಹೈವೋಲ್ಟೇಜ್ ಕದನ

Toyota Kirloskar Motor Launches New Innova Hicross Petrol GX (O) Grade
ದೇಶ10 mins ago

Innova Hycross: ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಬಿಡುಗಡೆ; ದರ ಎಷ್ಟು?

Lok Sabha Election 2024 IT companies to remain closed in Bengaluru on April 26 BBMP order
Lok Sabha Election 202421 mins ago

Lok Sabha Election 2024: ಏಪ್ರಿಲ್‌ 26ರಂದು ಬೆಂಗಳೂರಲ್ಲಿ ಐಟಿ ಕಂಪನಿಗಳಿಗೆ ಕಡ್ಡಾಯ ರಜೆ; ತುಷಾರ್ ಗಿರಿನಾಥ್ ಆದೇಶ

NEET PG-2024
ಶಿಕ್ಷಣ42 mins ago

NEET PG-2024: ನೀಟ್‌ ಪಿಜಿ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ; ಇಲ್ಲಿದೆ ನೋಂದಣಿ ಮಾಹಿತಿ

Auto Fare in Bengaluru
ಬೆಂಗಳೂರು44 mins ago

Auto Fare : ಮೆಜೆಸ್ಟಿಕ್‌ ಟು ಲಾಲ್‌ಬಾಗ್‌ಗೆ ಆಟೋ ಚಾರ್ಜ್‌ 400 ರೂ; ಸೆಕೆಂಡ್‌ಗೆ 5ರೂ ಏರಿಕೆಗೆ ಪ್ರಯಾಣಿಕ ಕಕ್ಕಾಬಿಕ್ಕಿ

Dinesh Karthik
ಕ್ರೀಡೆ50 mins ago

Dinesh Karthik: ಕಾರ್ತಿಕ್​ಗೆ ಟಿ20 ವಿಶ್ವಕಪ್​ನಲ್ಲಿ ಅವಕಾಶ ನೀಡಿ; ದಿಗ್ಗಜ ಕ್ರಿಕೆಟಿಗರ ಒತ್ತಾಯ

gold rate today tapasi
ಚಿನ್ನದ ದರ52 mins ago

Gold Rate Today: ಏರಿಕೆಯಲ್ಲಿ ದಾಖಲೆ ಬರೆಯುತ್ತಲೇ ಇದೆ ಚಿನ್ನದ ದರ! ಇಂದಿನ ಬೆಲೆ ₹74,130 !

Actor Dwarakish
ಪ್ರಮುಖ ಸುದ್ದಿ59 mins ago

Actor Dwarakish: ಕರುನಾಡ ಕುಳ್ಳ, ಹಿರಿಯ ನಟ ದ್ವಾರಕೀಶ್‌ ಇನ್ನಿಲ್ಲ

Theft Case in Bengaluru
ಬೆಂಗಳೂರು1 hour ago

Theft Case : ಹಗಲಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌; ರಾತ್ರಿಯಲ್ಲಿ ಬೈಕ್ ಕದಿಯುವ ಕಳ್ಳ

actor prakash Rai
ವೈರಲ್ ನ್ಯೂಸ್2 hours ago

Actor Prakash Rai: “ರಂಗಾಯಣಗಳಿಗೆ ಬಿಡಿಗಾಸೂ ಇಲ್ಲ; ನಿರ್ದಿಗಂತಕ್ಕೆ ಹಣದ ಹೊಳೆ!” ಸಿಡಿದೆದ್ದ ಜೆಡಿಎಸ್‌ನಿಂದ ನಟ ಪ್ರಕಾಶ್‌ ರೈಗೆ ಚಾಟಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ8 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20241 day ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ2 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ3 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ4 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌