Village For Sale | 2 ಕೋಟಿ ರೂ. ಕೊಟ್ಟರೆ ಸೈಟ್‌ ಅಲ್ಲ, ಇಡೀ ಗ್ರಾಮವೇ ನಿಮ್ಮದು, ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ - Vistara News

ವಿದೇಶ

Village For Sale | 2 ಕೋಟಿ ರೂ. ಕೊಟ್ಟರೆ ಸೈಟ್‌ ಅಲ್ಲ, ಇಡೀ ಗ್ರಾಮವೇ ನಿಮ್ಮದು, ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

ಸ್ಪೇನ್‌ನಲ್ಲಿ ಗ್ರಾಮವೊಂದು (Village For Sale) ಮಾರಾಟಕ್ಕಿದೆ. ಗ್ರಾಮಕ್ಕೆ ರಸ್ತೆ ಇದೆ, ಹೋಟೆಲ್‌, ಚರ್ಚ್‌, ಸ್ವಿಮ್ಮಿಂಗ್‌ ಪೂಲ್ ಸೇರಿ ಹತ್ತಾರು ಸೌಕರ್ಯಗಳಿವೆ.

VISTARANEWS.COM


on

Village For Sale
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಸುಂದರವಾದ ಮನೆ ಕಟ್ಟಿಸುವ ಅಥವಾ ಅಪಾರ್ಟ್‌ಮೆಂಟ್‌ ಖರೀದಿಸುವ ಕನಸು ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ, ಒಂದಿಡೀ ಗ್ರಾಮವನ್ನೇ ಕನಸು ಖರೀದಿಸಬೇಕು (Village For Sale) ಎಂಬ ಹಂಬಲ ನಿಮ್ಮದಾಗಿದ್ದರೆ, ಆ ಕನಸು ನನಸಾಗುವ ಕಾಲ ದೂರವಿಲ್ಲ. ಏಕೆಂದರೆ, ಸ್ಪೇನ್‌ನಲ್ಲಿ ಒಂದಿಡೀ ಗ್ರಾಮವೇ ಮಾರಾಟಕ್ಕಿದೆ.

ಹೌದು, ಸ್ಪೇನ್‌ನ ಮ್ಯಾಡ್ರಿಡ್‌ನಿಂದ ಕೇವಲ ಮೂರುವರೆ ಗಂಟೆಯಲ್ಲಿ ಪ್ರಯಾಣಿಸಬಹುದಾದ ಜಮೋರ ಪ್ರಾಂತ್ಯದಲ್ಲಿ ಸಾಲ್ಟೊ ಡೆ ಕ್ಯಾಸ್ಟ್ರೊ (Salto de Castro) ಎಂಬ ಗ್ರಾಮವಿದೆ. ಇಡೀ ಗ್ರಾಮದಲ್ಲಿ 30 ವರ್ಷದಿಂದ ಯಾರೂ ವಾಸಿಸುತ್ತಿಲ್ಲ. 2000ನೇ ಇಸವಿಯಲ್ಲಿ ಉದ್ಯಮಿಯೊಬ್ಬರು ಗ್ರಾಮವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡಲು ಖರೀದಿಸಿದ್ದರು. ಆದರೆ, ಆರ್ಥಿಕ ಬಿಕ್ಕಟ್ಟಿನಿಂದಾಗಿ ಗ್ರಾಮವನ್ನು ಅಭಿವೃದ್ಧಿ ಮಾಡಲು ಆಗಿರಲಿಲ್ಲ. ಆದರೆ ಈಗ ಗ್ರಾಮವನ್ನು ಮತ್ತೆ ಮಾರಾಟ ಮಾಡಲು ತೀರ್ಮಾನಿಸಿದ್ದು, 2.16 ಕೋಟಿ ರೂ. ನಿಗದಿಪಡಿಸಲಾಗಿದೆ. ಇಷ್ಟು ಮೊತ್ತ ಕೊಟ್ಟು ಯಾರು ಬೇಕಾದರೂ ಗ್ರಾಮವನ್ನು ಖರೀದಿಸಬಹುದಾಗಿದೆ.

ಗ್ರಾಮದಲ್ಲಿ ಏನೇನಿದೆ?

ಜನವಸತಿ ಇಲ್ಲದ ಗ್ರಾಮ ಎಂದಾಕ್ಷಣ ಇಲ್ಲಿ ಯಾವುದೇ ಸೌಕರ್ಯಗಳು ಇಲ್ಲ ಎಂದಲ್ಲ. ಗ್ರಾಮದಲ್ಲಿ 44 ಮನೆಗಳಿದ್ದು, ರಸ್ತೆ ಸಂಪರ್ಕವಿದೆ. ಹಾಗೆಯೇ, ಒಂದು ಹೋಟೆಲ್‌, ಚರ್ಚ್‌, ಸ್ವಿಮ್ಮಿಂಗ್‌ ಪೂಲ್‌ ಸೇರಿ ಹತ್ತಾರು ಸೌಲಭ್ಯಗಳಿವೆ. ಇಂತಹ ಇಡೀ ಗ್ರಾಮವನ್ನು ಖರೀದಿಸಲು ಹೆಚ್ಚಿನ ಮಾಹಿತಿಯನ್ನು ಐಡಿಯಾಲಿಸ್ಟಾ (Idealista) ಎಂಬ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ನಿಮಗೂ ಈ ಗ್ರಾಮವನ್ನು ಖರೀದಿಸುವ ಆಸೆಯಿದ್ದರೆ, ವೆಬ್‌ಸೈಟ್‌ಗೆ ಭೇಟಿ ಕೊಡಬಹುದು.

ಇದನ್ನೂ ಓದಿ | Black Magic | ಪತಿಯ ಮೇಲೆ ನಿಯಂತ್ರಣ ಸಾಧಿಸಲು ಜ್ಯೋತಿಷಿಗೆ 59 ಲಕ್ಷ ರೂ. ನೀಡಿದ ಮಹಿಳೆ, ಮುಂದೇನಾಯ್ತು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Train Tragedy: ರೈಲ್ವೆ ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ತಂದೆ!

Train Tragedy: ಅಪ್ಪನ ಪ್ರೀತಿ ಅಗಾಧವಾದದ್ದು. ತನ್ನ ಮಕ್ಕಳಿಗೆ ತುಸುವೇ ನೋವಾದರೂ ಅಪ್ಪನಿಗೆ ಸಹಿಸುವುದಕ್ಕೆ ಆಗುವುದಿಲ್ಲ. ಅದರಲ್ಲೂ ತನ್ನ ಕಣ್ಣೆದುರೇ ಕಂದಮ್ಮಗಳು ಸಾವಿನ ದವಡೆಯಲ್ಲಿದ್ದಾರೆ ಯಾವ ತಂದೆ ಕೈ ಕಟ್ಟಿ ಕುಳಿತುಕೊಳ್ಳುತ್ತಾನೆ? ಸಿಡ್ನಿಯಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ರನ್ವಾಲ್ ಎಂಬುವವರು ಪತ್ನಿ ಮತ್ತು ಅವಳಿ ಹೆಣ್ಣುಮಕ್ಕಳೊಂದಿಗೆ ರೈಲು ನಿಲ್ದಾಣದಲ್ಲಿದ್ದಾಗ ಅವರ ಫ್ಯಾಮಿಲಿ ಲಿಫ್ಟ್‌ನಿಂದ ಇಳಿದು ಬರುವಾಗ ಅವರ ಅವಳಿ ಹೆಣ್ಣು ಮಕ್ಕಳಿದ್ದ ಪ್ರ್ಯಾಮ್ ಆಕಸ್ಮಿಕವಾಗಿ ರೈಲ್ವೆ ಹಳಿಗೆ ಬಿದ್ದಿದೆ. ಆಗ ಮಕ್ಕಳನ್ನು ರಕ್ಷಿಸಲು ಹೋದ ಆನಂದ್‌ ಜೀವ ಕಳೆದುಕೊಂಡಿದ್ದಾರೆ.

VISTARANEWS.COM


on

Train Tragedy
Koo


ತಂದೆ ತನ್ನ ಮಕ್ಕಳಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಮಕ್ಕಳಿಗಾಗಿ ತಮ್ಮ ಜೀವವನ್ನೂ ಲೆಕ್ಕಿಸುವುದಿಲ್ಲ ಎಂಬುದಕ್ಕೆ ಆಸ್ಟ್ರೇಲಿಯಾದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಆಸ್ಟ್ರೇಲಿಯಾದಲ್ಲಿ ಇನ್ಫೋಸಿಸ್ ಟೆಕ್ಕಿಯೊಬ್ಬರು ರೈಲ್ವೆ ಹಳಿಯ (Train Tragedy) ಮೇಲೆ ಬಿದ್ದ ತನ್ನ ಅವಳಿ ಹೆಣ್ಣುಮಕ್ಕಳನ್ನು ರಕ್ಷಿಸಲು ಪ್ರಯತ್ನಿಸುವಾಗ ದುರಂತಮಯವಾಗಿ ಸಾವನ್ನಪ್ಪಿದ್ದಾರೆ.

Train Tragedy

40 ವರ್ಷದ ಆನಂದ್ ರನ್ವಾಲ್ ಸಾವನಪ್ಪಿದವರು. ಇವರು ಇನ್ಫೋಸಿಸ್ ಐಟಿ ಉದ್ಯೋಗಿಯಾಗಿದ್ದು, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕೆಲಸ ಮಾಡುತ್ತಿದ್ದರು. ಆನಂದ್ ತಮ್ಮ ಪತ್ನಿ ಮತ್ತು ಅವಳಿ ಹೆಣ್ಣುಮಕ್ಕಳೊಂದಿಗೆ ಕಾರ್ಲ್ಟನ್ ನಿಲ್ದಾಣದಲ್ಲಿ ಲಿಫ್ಟ್ ನಿಂದ ಇಳಿದು ಬರುವಾಗ ಅವರ ಅವಳಿ ಹೆಣ್ಣು ಮಕ್ಕಳಿದ್ದ ಪ್ರ್ಯಾಮ್ ಆಕಸ್ಮಿಕವಾಗಿ ರೈಲ್ವೆ ಹಳಿಗೆ ಬಿದ್ದಿದೆ. ಆಗ ಆನಂದ್ ಹೆಣ್ಣುಮಕ್ಕಳನ್ನು ಉಳಿಸಲು ಪ್ಲಾಟ್ ಫಾರ್ಮ್‌ನಿಂದ ರೈಲ್ವೆ ಹಳಿಯ ಮೇಲೆ ಹಾರಿದ್ದಾರೆ.

ಆ ವೇಳೆ ರೈಲು ಹಾದುಹೋಗುತ್ತಿದ್ದ ಆನಂದ್ ಮತ್ತು ಅವರ ಒಬ್ಬ ಮಗಳು ರೈಲಿಗೆ ಸಿಲುಕಿ ಸಾವನಪ್ಪಿದ್ದಾರೆ. ಆದರೆ ಅವರು ಈ ಹೋರಾಟದಲ್ಲಿ ತಮ್ಮ ಒಬ್ಬ ಮಗಳ ಜೀವ ರಕ್ಷಿಸಿದ್ದಾರೆ. ಆನಂದ್ ಅವರ ಪತ್ನಿ ಮತ್ತು ಮಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

Train Tragedy

ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರಲ್ಲಿ ಕುಟುಂಬವು ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ, ಅವರು ಲಿಫ್ಟ್ ಮೂಲಕ ಪ್ಲಾಟ್‌ಫಾರ್ಮ್‌ಗೆ ಬಂದಿದ್ದರು ಮತ್ತು ಕ್ಷಣಾರ್ಧದಲ್ಲಿ ಅವರು ಪ್ರ್ಯಾಮ್ ಅನ್ನು ಬಿಟ್ಟುಬಿಟ್ಟರು. ಇದರಿಂದ ಅದು ಉರುಳುತ್ತಾ ಹೋಗಿ ಹಳಿಗಳ ಮೇಲೆ ಬಿದ್ದಿದೆ. ಆಗ ಆನಂದ್ ಅವರ ಪತ್ನಿ ಕಿರುಚಿದಾಗ ಆನಂದ್ ರೈಲು ಹಳಿಗಳ ಮೇಲೆ ಮಕ್ಕಳನ್ನು ರಕ್ಷಿಸಲು ಹಾರಿದ್ದಾರೆ. ಆ ವೇಳೆ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: ರಿಮಾಂಡ್‌ ಹೋಮ್‌ನಿಂದಲೇ ಮಧ್ಯರಾತ್ರಿ 17 ವರ್ಷದ ಬಾಲಕಿಯ ಅಪಹರಣ! ವಿಡಿಯೊದಲ್ಲಿ ಕೃತ್ಯ ಸೆರೆ

ಆನಂದ್ ಮತ್ತು ಅವರ ಕುಟುಂಬವು 2023ರ ಕೊನೆಯಲ್ಲಿ ಸಿಡ್ನಿಗೆ ಸ್ಥಳಾಂತರಗೊಂಡಿತ್ತು. ಅವರು ಸಿಡ್ನಿಯ ಕೊಗರಾ ಉಪನಗರದಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ, ಆನಂದ್ ಅವರ ಪೋಷಕರು (ವಿಸ್ತಾರ ನ್ಯೂಸ್‌) ಸಿಡ್ನಿಯಲ್ಲಿದ್ದ ಅವರ ಮನೆಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ವರದಿಗಳ ಪ್ರಕಾರ, ತನ್ನ ತಾಯಿ ಮತ್ತು ತಂದೆಯನ್ನು ತಮ್ಮ ಜೊತೆ ಆಸ್ಟ್ರೇಲಿಯಾದಲ್ಲಿ ಇಟ್ಟುಕೊಳ್ಳುವ ಹಂಬಲ ಆನಂದವರಿಗಿತ್ತು ಎಂದು ಅವರ ಸ್ನೇಹಿತರೊಬ್ಬರು ತಿಳಿಸಿದ್ದಾರೆ.

ಆದರೆ ವಿಧಿ ಅದಕ್ಕೂ ಅವಕಾಶ ಮಾಡಿಕೊಡಲಿಲ್ಲ. ಅವರ ಹಠಾತ್ ನಿಧನದಿಂದ ಅವರ ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ. ಅವರು ಇನ್ನಿಲ್ಲ ಎಂಬ ವಿಚಾರ ಅವರ ಕುಟುಂಬಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.

Continue Reading

Latest

Viral News: ಮದುವೆಯಾದ ಮೂರೇ ಮೂರು ನಿಮಿಷದೊಳಗೆ ವಿಚ್ಛೇದನ! ಕಾರಣ ವಿಚಿತ್ರ!

Viral News: ಗಂಡ – ಹೆಂಡತಿಯ ಬಂಧ ಮಧುರವಾದದ್ದು. ಅದು ಪ್ರೀತಿ, ನಂಬಿಕೆ, ವಿಶ್ವಾಸದ ತಳಹದಿಯ ಮೇಲೆ ನಿಂತಿರುತ್ತದೆ. ಆದರೆ ಕೆಲವೊಂದು ಮದುವೆಗಳು ಶುರುವಾಗುತ್ತಿದ್ದಂತೆ ಮುರಿದು ಬೀಳುತ್ತದೆ. ಕುವೈತ್ನಲ್ಲಿ ಮದುವೆಯಾದ ಜೋಡಿಯೊಂದು ಮೂರೇ ಮೂರು ನಿಮಿಷಕ್ಕೆ ವಿಚ್ಛೇದನ ನೀಡಿದ್ದಾರೆ. ಮದುವೆಯ ಆಚರಣೆಗಳು ಮುಗಿದ ನಂತರ, ದಂಪತಿ ನ್ಯಾಯಾಲಯದಿಂದ ಹೊರಗೆ ಹೋಗುತ್ತಿರುವಾಗ ವಧು ಕಾಲು ಜಾರಿಬಿದ್ದಳು. ಆಗ ವರನು ಅವಳ ಕೈ ಹಿಡಿದು ಮೇಲೆತ್ತುವ ಬದಲು ಕೆಳಗೆ ಬಿದ್ದಿದ್ದಕ್ಕಾಗಿ ‘ಸ್ಟುಪಿಡ್’ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಮಹಿಳೆ ಕೋಪಗೊಂಡು ತಕ್ಷಣ ತಮ್ಮ ಮದುವೆಯನ್ನು ರದ್ದುಗೊಳಿಸುವಂತೆ ನ್ಯಾಯಾಧೀಶರನ್ನು ಕೇಳಿದ್ದಾಳೆ. ನ್ಯಾಯಾಧೀಶರು ಇದಕ್ಕೆ ಒಪ್ಪಿಗೆ ನೀಡಿ ಬಿಟ್ಟಿದ್ದಾರೆ!

VISTARANEWS.COM


on

Viral News
Koo


ಮದುವೆ ಎನ್ನುವುದು ಹೆಣ್ಣು ಗಂಡು ಇಬ್ಬರ ಜೀವನದಲ್ಲಿ ಬಹಳ ವಿಶೇಷವಾದುದು. ಹೆಣ್ಣು ಗಂಡು ಇಬ್ಬರೂ ದಂಪತಿಯಾಗಿ ಒಬ್ಬರನೊಬ್ಬರು ಅರಿತುಕೊಂಡು ಕಷ್ಟ ಸುಖ ಹಂಚಿಕೊಂಡು ದೀರ್ಘ ಕಾಲ ಜೀವನ ನಡೆಸಲೆಂದು ನಮ್ಮ ಹಿರಿಯರು ಮದುವೆ ಮಾಡಿಸುತ್ತಾರೆ. ಆದರೆ ಇಂದಿನ ಕಾಲದಲ್ಲಿ ನೂರು ದಿನ ಬಾಳುವುದನ್ನು ಬಿಡಿ, ಮೂರು ದಿನವೂ ಕೂಡ ಈ ಸಂಬಂಧ ಉಳಿಯುತ್ತಿಲ್ಲ. ಅಂತಹದೊಂದು ಘಟನೆ ಇದೀಗ ಕುವೈತ್‌ನಲ್ಲಿ ನಡೆದಿದೆ. ಮದುವೆ ಸಮಾರಂಭ ಮುಗಿಸಿ ಹೊರಹೋಗುವಾಗ ವರನು ವಧುವನ್ನು ಅವಮಾನಿಸಿದ ಕಾರಣ ಗಂಡ ಮತ್ತು ಹೆಂಡತಿ ಇಬ್ಬರು ಮದುವೆಯಾದ ಕೇವಲ ಮೂರು ನಿಮಿಷಗಳಲ್ಲೇ ವಿಚ್ಛೇದನ ಪಡೆದಿದ್ದಾರೆ. ಈ ಘಟನೆ 2019ರಲ್ಲಿ ನಡೆದಿದ್ದು ಎನ್ನಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈಗ ಮತ್ತೆ ವೈರಲ್(Viral News) ಆಗುತ್ತಿದೆ.

ಮದುವೆಯ ಆಚರಣೆಗಳು ಮುಗಿದ ನಂತರ, ದಂಪತಿ ನ್ಯಾಯಾಲಯದಿಂದ ಹೊರಗೆ ಹೋಗುತ್ತಿರುವಾಗ ವಧು ಕಾಲು ಜಾರಿಬಿದ್ದಳು. ಆಗ ವರನು ಅವಳ ಕೈ ಹಿಡಿದು ಮೇಲೆತ್ತುವ ಬದಲು ಕೆಳಗೆ ಬಿದ್ದಿದ್ದಕ್ಕಾಗಿ ‘ಸ್ಟುಪಿಡ್’ ಎಂದು ಹೇಳಿದ್ದಾನೆ. ಇದನ್ನು ಕೇಳಿದ ವಧು ಕೋಪಗೊಂಡು ತಕ್ಷಣ ತಮ್ಮ ಮದುವೆಯನ್ನು ರದ್ದುಗೊಳಿಸುವಂತೆ ನ್ಯಾಯಾಧೀಶರನ್ನು ಕೇಳಿದ್ದಾಳೆ. ನ್ಯಾಯಾಧೀಶರು ಇದಕ್ಕೆ ಒಪ್ಪಿಗೆ ನೀಡಿದ್ದು, ಅವರು ಮದುವೆಯಾದ ಕೇವಲ ಮೂರು ನಿಮಿಷಗಳ ನಂತರ ವಿಚ್ಛೇದನ ಪಡೆದಿದ್ದಾರೆ.

ಮೈಕ್ರೋಬ್ಲಾಗಿಂಗ್ ಪ್ಲಾಟ್‍ಫಾರ್ಮ್‍ನಲ್ಲಿ ಈ ಸುದ್ದಿಯನ್ನು ಹಂಚಿಕೊಳ್ಳಲಾಗಿದ್ದು. ಇದಕ್ಕೆ ಹಲವು ಕಾಮೆಂಟ್‌ಗಳು ಬಂದಿವೆ. ಅದರಲ್ಲಿ ಪತಿ ಪತ್ನಿ ಒಬ್ಬರಿಗೊಬ್ಬರು ಗೌರವ ನೀಡದಿದ್ದರೆ ಆ ಸಂಬಂಧ ದೀರ್ಘಕಾಲ ಇರುವುದಿಲ್ಲ ಎಂದು ನೆಟ್ಟಿಗರು ಬರೆದಿದ್ದಾರೆ. ಹಾಗೇ ಕೆಲವರು ಪತಿ ಆರಂಭದಲ್ಲಿ ತನ್ನ ಪತ್ನಿಯ ಜೊತೆ ಈ ರೀತಿ ವರ್ತಿಸಿದರೆ, ಅಂತವನನ್ನು ಬಿಡುವುದು ಉತ್ತಮ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಕ್ಕಳ ಹಸಿವು ನೀಗಿಸಲು ಸೈನಿಕರೆದುರು ಬೆತ್ತಲಾಗುತ್ತಿರುವ ಮಹಿಳೆಯರು!

ಇಂತಹ ಘಟನೆ ಇದೇ ಮೊದಲಲ್ಲ. ಈ ಹಿಂದೆ 2004ರಲ್ಲಿ ಯುನೈಟೆಡ್ ಕಿಂಗ್‌ಡಮ್‍ನಲ್ಲಿ ದಂಪತಿ ಮದುವೆಯಾದ ಕೇವಲ 90 ನಿಮಿಷಗಳ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಗ್ರೇಟರ್ ಮ್ಯಾಂಚೆಸ್ಟರ್‌ನ ಸ್ಟಾಕ್ಪೋರ್ಟ್ ರಿಜಿಸ್ಟರ್ ಕಚೇರಿಯಲ್ಲಿ ಸ್ಕಾಟ್ ಮೆಕಿ ಮತ್ತು ವಿಕ್ಟೋರಿಯಾ ಆಂಡರ್ಸನ್ ಮದುವೆ ಆಚರಣೆ ಮುಗಿದ 90ನಿಮಿಷಗಳ ನಂತರ, ಸಂಬಂಧವನ್ನು ಕೊನೆಗೊಳಿಸಿದ್ದಾರೆ. ವಧುವಿಗೆ ತಿನ್ನಲು ವರ ಟೋಸ್ಟ್ ನೀಡಿದ್ದರಿಂದ ಕೋಪಗೊಂಡ ಆಕೆ ಆರತಕ್ಷತೆಯಲ್ಲಿ ಅವನ ತಲೆಗೆ ಹೊಡೆದಿದ್ದಾಳೆ. ಇದರಿಂದ ಇಬ್ಬರ ನಡುಗೆ ಜಗಳವಾಗಿ ಅದು ವಿಚ್ಛೇದನಕ್ಕೆ ಕಾರಣವಾಯ್ತು ಎನ್ನಲಾಗಿದೆ.

Continue Reading

ವಿದೇಶ

Temple Vandalized: ಕೆನಡಾದಲ್ಲಿ ಹಿಂದೂ ದೇಗುಲ ವಿರೂಪ; ಪ್ರಧಾನಿ ಮೋದಿಗೆ ಬೆದರಿಕೆ

Temple Vandalized: ಈ ಬಗ್ಗೆ ಎಕ್ಸ್‌ನಲ್ಲಿ ಚಂದ್ರ ಆರ್ಯ ಪೋಸ್ಟ್‌ವೊಂದನ್ನು ಮಾಡಿದ್ದು, ಎಡ್ಮಂಟನ್‌ನಲ್ಲಿರುವ ಹಿಂದೂ ದೇವಾಲಯ BAPS ಸ್ವಾಮಿನಾರಾಯಣ ಮಂದಿರವನ್ನು ಮತ್ತೆ ಧ್ವಂಸಗೊಳಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಗ್ರೇಟರ್ ಟೊರೊಂಟೊ ಪ್ರದೇಶ, ಬ್ರಿಟಿಷ್ ಕೊಲಂಬಿಯಾ ಮತ್ತು ಕೆನಡಾದ ಇತರ ಸ್ಥಳಗಳಲ್ಲಿ ಹಿಂದೂ ದೇವಾಲಯಗಳನ್ನು ದ್ವೇಷಪೂರಿತ ಗೀಚುಬರಹದಿಂದ ಧ್ವಂಸಗೊಳಿಸಲಾಗುತ್ತಿದೆ

VISTARANEWS.COM


on

temple vandalized
Koo

ಕೆನಡಾ: ಕೆನಡಾದಲ್ಲಿ ಹಿಂದೂ ದೇಗುಲವನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವ ಘಟನೆ(Temple Vandalized) ವರದಿಯಾಗಿದೆ. ದೇಗುಲದ ಗೋಡೆ ಮೇಲೆ ಗ್ರಾಫಿಟಿ ಫೈಂಟಿಂಗ್‌ನಿಂದ ಪ್ರಧಾನಿ ನರೇಂದ್ರ ಮೋದಿ(PM Narendra Modi) ಮತ್ತು ಭಾರತೀಯ ಮೂಲದ ಕೆನಡಾ ಸಂಸದ ಚಂದ್ರ ಆರ್ಯ(Chandra Arya)ಗೆ ಬೆದರಿಕೆವೊಡ್ಡಿ ಬರೆದಿರುವ ಬರಹಗಳನ್ನು ಕಾಣಬಹುದಾಗಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗುತ್ತಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಚಂದ್ರ ಆರ್ಯ ಪೋಸ್ಟ್‌ವೊಂದನ್ನು ಮಾಡಿದ್ದು, ಎಡ್ಮಂಟನ್‌ನಲ್ಲಿರುವ ಹಿಂದೂ ದೇವಾಲಯ BAPS ಸ್ವಾಮಿನಾರಾಯಣ ಮಂದಿರವನ್ನು ಮತ್ತೆ ಧ್ವಂಸಗೊಳಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಗ್ರೇಟರ್ ಟೊರೊಂಟೊ ಪ್ರದೇಶ, ಬ್ರಿಟಿಷ್ ಕೊಲಂಬಿಯಾ ಮತ್ತು ಕೆನಡಾದ ಇತರ ಸ್ಥಳಗಳಲ್ಲಿ ಹಿಂದೂ ದೇವಾಲಯಗಳನ್ನು ದ್ವೇಷಪೂರಿತ ಗೀಚುಬರಹದಿಂದ ಧ್ವಂಸಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಮತ್ತು ಹಿಂದೂಗಳ ವಿರುದ್ಧದ ಹಿಂಸಾಚಾರವನ್ನು ಒಳಗೊಂಡ ಹಿಂದಿನ ಘಟನೆಗಳನ್ನು ಅವರು ನೆನಪಿಸಿಕೊಂಡರು “ಸಿಖ್ಖರ ನ್ಯಾಯಕ್ಕಾಗಿ ಗುರುಪತ್ವಂತ್ ಸಿಂಗ್ ಪನ್ನುನ್ ಕಳೆದ ವರ್ಷ ಹಿಂದೂಗಳು ಭಾರತಕ್ಕೆ ಹಿಂತಿರುಗುವಂತೆ ಸಾರ್ವಜನಿಕವಾಗಿ ಕರೆ ನೀಡಿದರು. ಖಲಿಸ್ತಾನ್ ಬೆಂಬಲಿಗರು ಬ್ರಾಂಪ್ಟನ್ ಮತ್ತು ವ್ಯಾಂಕೋವರ್‌ನಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಸಾರ್ವಜನಿಕವಾಗಿ ಆಚರಿಸಿದರು ಮತ್ತು ಮಾರಣಾಂತಿಕ ಶಸ್ತ್ರಾಸ್ತ್ರಗಳ ಚಿತ್ರಗಳನ್ನು ಝಳಪಿಸಿದ್ದರು” ಎಂದಿದ್ದಾರೆ.

ಹಿಂದೂ ವಿರೋಧಿ ಘಟನೆಗಗಳು ಹೆಚ್ಚುತ್ತಿರುವ ಬಗ್ಗೆ ಹಿಂದೂ ಸಂಸದ ಕಳವಳ ವ್ಯಕ್ತಪಡಿಸಿದರು. “ನಾನು ಯಾವಾಗಲೂ ಹೇಳುತ್ತಿರುವಂತೆ, ಖಲಿಸ್ತಾನಿ ಉಗ್ರಗಾಮಿಗಳು ದ್ವೇಷ ಮತ್ತು ಹಿಂಸೆಯ ಸಾರ್ವಜನಿಕ ವಾಕ್ಚಾತುರ್ಯದಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ. ಹಿಂದೂ-ಕೆನಡಿಯನ್ನರು ನ್ಯಾಯಸಮ್ಮತವಾಗಿ ಕಾಳಜಿ ಹೊಂದಿದ್ದಾರೆ ಎಂದು ಅವರು ಬರೆದಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಕಟ್ಟು ನಿಟ್ಟಾದ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಈ ಘಟನೆಗೆ ಕೆನಡಾ ಮತ್ತು ಇತರ ವಿದೇಶಗಳಲ್ಲಿ ಹಿಂದೂ ಸಂಘಟನೆಗಳಿಂದ ಖಂಡನೆ ವ್ಯಕ್ತವಾಗಿದೆ. ವಿಶ್ವ ಹಿಂದೂ ಪರಿಷತ್-ಕೆನಡಾ ಘಟನೆಯನ್ನು ಖಂಡಿಸಿದೆ ಮತ್ತು ಕೆನಡಾದ ಸರ್ಕಾರವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದೆ. “ವಿಎಚ್‌ಪಿ ಕೆನಡಾವು ಎಡ್ಮಂಟನ್‌ನಲ್ಲಿರುವ BAPS ಮಂದಿರದಲ್ಲಿ ಹಿಂದೂಫೋಬಿಕ್ ಗೀಚುಬರಹ ಮತ್ತು ವಿಧ್ವಂಸಕತೆಯನ್ನು ಬಲವಾಗಿ ಖಂಡಿಸುತ್ತದೆ. ನಮ್ಮ ದೇಶದಲ್ಲಿ ಶಾಂತಿಯನ್ನು ಪ್ರೀತಿಸುವ ಹಿಂದೂ ಸಮುದಾಯದ ವಿರುದ್ಧ ದ್ವೇಷವನ್ನು ಪ್ರಚೋದಿಸುವ ಬೆಳೆಯುತ್ತಿರುವ ಉಗ್ರಗಾಮಿ ಸಿದ್ಧಾಂತದ ವಿರುದ್ಧ ನಿರ್ಣಾಯಕವಾಗಿ ಕಾರ್ಯನಿರ್ವಹಿಸಲು ಕೆನಡಾದ ಎಲ್ಲಾ ಹಂತದ ಸರ್ಕಾರಗಳನ್ನು ನಾವು ಒತ್ತಾಯಿಸುತ್ತೇವೆ” ಎಂದು ಹಿಂದೂ ಸಂಸ್ಥೆ X ನಲ್ಲಿ ಬರೆದಿದೆ.

ಇದನ್ನೂ ಓದಿ: Teachers Transfer: 50 ವರ್ಷ ಮೇಲ್ಪಟ್ಟ ಶಿಕ್ಷಕರನ್ನು ವರ್ಗಾವಣೆ ಮಾಡುವಂತಿಲ್ಲ; ಹೈಕೋರ್ಟ್‌ ಖಡಕ್‌ ಆದೇಶ

Continue Reading

ವಿದೇಶ

Donkey Population In Pak: ಪಾಕಿಸ್ತಾನದ ಬಜೆಟ್‌ನಲ್ಲಿ ಕತ್ತೆಗಳಿಂದ ಬರುವ ಆದಾಯವೇ ಮುಖ್ಯ ಸಂಗತಿ!

ಪಾಕಿಸ್ತಾನದ ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್ ಅವರು ಪ್ರಸ್ತುತಪಡಿಸಿದ ವಾರ್ಷಿಕ ಸಮೀಕ್ಷೆಯು ವಿವಿಧ ಆರ್ಥಿಕ ಸಾಧನೆಗಳನ್ನು ವಿವರಿಸಿದೆ ಮತ್ತು ಕೃಷಿ ಆರ್ಥಿಕತೆಯಲ್ಲಿ ಜಾನುವಾರುಗಳ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸಿದೆ. ಅವರು ಮಂಡಿಸಿರುವ ಸಮೀಕ್ಷೆ ವರದಿಯಲ್ಲಿ ಕತ್ತೆಗಳ ಸಂಖ್ಯೆಯಲ್ಲಿ (Donkey Population In Pak) ಸ್ಥಿರವಾದ ಏರಿಕೆಯನ್ನು ತೋರಿಸಿದೆ. ಪಾಕ್‌ ಬಜೆಟ್‌ನಲ್ಲಿ ಕತ್ತೆಗಳೂ ಪ್ರಮಖ ಪಾತ್ರ ವಹಿಸುತ್ತವೆ ಎಂದಾಯಿತು.

VISTARANEWS.COM


on

By

Donkey Population In Pak
Koo

ಪಾಕಿಸ್ತಾನದಲ್ಲಿ (Pakistan Economy) 2023-24ರ ಆರ್ಥಿಕ ವರ್ಷದಲ್ಲಿ ಕತ್ತೆಗಳ ಸಂಖ್ಯೆಯು (Donkey Population In Pak) ಶೇ. 1.72ರಷ್ಟು ಹೆಚ್ಚಳವಾಗಿದೆ. ಇದು 5.9 ಮಿಲಿಯನ್‌ಗೆ ತಲುಪಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ಪಾಕಿಸ್ತಾನದ ಆರ್ಥಿಕ ಸಮೀಕ್ಷೆ (Pakistan Economic Survey) ತಿಳಿಸಿದೆ. ಪಾಕಿಸ್ತಾನದ ಬಜೆಟ್‌ ಮಂಡನೆಯಲ್ಲೂ ಕತ್ತೆಗಳ ಪ್ರಸ್ತಾಪ ಇರುತ್ತದೆ!

2019-2020ರಲ್ಲಿ 5.5 ಮಿಲಿಯನ್, 2020-21 ರಲ್ಲಿ 5.6 ಮಿಲಿಯನ್, 2021-22 ರಲ್ಲಿ 5.7 ಮಿಲಿಯನ್ ಮತ್ತು 2022-23 ರಲ್ಲಿ 5.8 ಮಿಲಿಯನ್ ಕತ್ತೆಗಳ ಸಂಖ್ಯೆ ದಾಖಲಾಗಿತ್ತು. ಪಾಕಿಸ್ತಾನದ ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್ ಅವರು ಪ್ರಸ್ತುತಪಡಿಸಿದ ವಾರ್ಷಿಕ ಸಮೀಕ್ಷೆಯು ವಿವಿಧ ಆರ್ಥಿಕ ಸಾಧನೆಗಳನ್ನು ವಿವರಿಸಿದೆ ಮತ್ತು ಕೃಷಿ ಆರ್ಥಿಕತೆಯಲ್ಲಿ ಜಾನುವಾರುಗಳ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸಿದೆ. ಅವರು ಮಂಡಿಸಿರುವ ಸಮೀಕ್ಷೆ ವರದಿಯಲ್ಲಿ ಕತ್ತೆಗಳ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆಯನ್ನು ತೋರಿಸಿದೆ.

ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆ ಹೆಚ್ಚಿದ್ದರೂ ಅವುಗಳ ನಿಕಟ ಸಂಬಂಧಿಗಳಾದ ಕುದುರೆ ಮತ್ತು ಹೇಸರಗತ್ತೆಗಳು ಕಳೆದ ಐದು ವರ್ಷಗಳಲ್ಲಿ ಯಾವುದೇ ಬೆಳವಣಿಗೆಯನ್ನು ತೋರಿಸಿಲ್ಲ. ಅವುಗಳು ಕ್ರಮವಾಗಿ 0.4 ಮಿಲಿಯನ್ ಮತ್ತು 0.2 ಮಿಲಿಯನ್ ಮಾತ್ರ ಏರಿಕೆಯಾಗಿದೆ.

ಪಾಕಿಸ್ತಾನಕ್ಕೆ ಕತ್ತೆಗಳು ಏಕೆ ಮುಖ್ಯ?

ಗ್ರಾಮೀಣ ಪಾಕಿಸ್ತಾನದಲ್ಲಿ ಕತ್ತೆಗಳು ಸ್ಥಳೀಯ ಆರ್ಥಿಕತೆಗೆ ಪ್ರಮುಖವಾಗಿವೆ. ಹೊರೆಯನ್ನು ಹೊರಲು ಅಗತ್ಯ ಪ್ರಾಣಿಗಳಾಗಿ ಕತ್ತೆಗಳನ್ನು ಬಳಸಲಾಗುತ್ತದೆ. ಹೆಚ್ಚುತ್ತಿರುವ ಕತ್ತೆ ಸಂಖ್ಯೆಗಳ ಈ ಪ್ರವೃತ್ತಿಯು ಇತರ ಕೆಲಸ ಮಾಡುವ ಪ್ರಾಣಿಗಳ ಸ್ಥಿರ ಸಂಖ್ಯೆಗೆ ವ್ಯತಿರಿಕ್ತವಾಗಿದೆ.

ಇತರ ಜಾನುವಾರುಗಳ ಸಂಖ್ಯೆ ಹೇಗಿದೆ?

ಪಾಕಿಸ್ತಾನದ ಆರ್ಥಿಕ ಸಮೀಕ್ಷೆಯು ಇತರ ಜಾನುವಾರು ಅಂಕಿಅಂಶಗಳ ನವೀಕರಣಗಳನ್ನು ಸಹ ಒದಗಿಸಿದೆ. ಜಾನುವಾರುಗಳ ಸಂಖ್ಯೆ 57.5 ಮಿಲಿಯನ್, ಎಮ್ಮೆ 46.3 ಮಿಲಿಯನ್, ಕುರಿಗಳು 32.7 ಮಿಲಿಯನ್ ಮತ್ತು ಮೇಕೆಗಳು 87 ಮಿಲಿಯನ್ ಗೆ ಏರಿದೆ. ಗಮನಾರ್ಹವಾಗಿ, ನಾಲ್ಕು ವರ್ಷಗಳ ಕಾಲ ಬದಲಾಗದೆ ಉಳಿದಿರುವ ಒಂಟೆಗಳ ಸಂಖ್ಯೆಯು ಕಳೆದ ಆರ್ಥಿಕ ವರ್ಷದಲ್ಲಿ 1.1 ಮಿಲಿಯನ್‌ನಿಂದ 1.2 ಮಿಲಿಯನ್‌ಗೆ ಏರಿದೆ.

Donkey Population In Pak


ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಿಗಳಿಗೆ ಕತ್ತೆಗಳು ಕೊನೆಯ ಭರವಸೆಯಾಗಿದೆ. ವಿಶೇಷವಾಗಿ ಗ್ರಾಮಾಂತರದಲ್ಲಿ ವಾಸಿಸುವವರಿಗೆ ಗ್ರಾಮೀಣ ಆರ್ಥಿಕತೆಯು ಪ್ರಾಣಿಗಳೊಂದಿಗೆ ನಿಕಟ ಸಂಬಂಧ ಹೊಂದಿದೆ.

ಜಾನುವಾರುಗಳು ಪಾಕಿಸ್ತಾನದ ಗ್ರಾಮೀಣ ಆರ್ಥಿಕತೆಯ ಮೂಲಾಧಾರವಾಗಿವೆ. ಸುಮಾರು 8 ಮಿಲಿಯನ್ ಕುಟುಂಬಗಳು ಪಶುಸಂಗೋಪನೆಯಲ್ಲಿ ತೊಡಗಿವೆ. ಈ ವಲಯವು ಕೃಷಿ ಮೌಲ್ಯವರ್ಧನೆಯ ಶೇ. 60.84 ಮತ್ತು ರಾಷ್ಟ್ರೀಯ ಜಿಡಿಪಿಯ ಶೇ. 14.63ರಷ್ಟನ್ನು ಪ್ರತಿನಿಧಿಸುತ್ತದೆ. ಆರ್ಥಿಕ ವರ್ಷ 2023-24 ರಲ್ಲಿ ಜಾನುವಾರು ವಲಯದ ಬೆಳವಣಿಗೆಯು ಶೇ. 3.89 ರಷ್ಟನ್ನು ದಾಖಲಿಸಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ಶೇ. 3.70 ರಷ್ಟಿತ್ತು. ಜಾನುವಾರು ವಲಯದ ಒಟ್ಟು ಮೌಲ್ಯವರ್ಧನೆಯು 5,587 ಶತಕೋಟಿ ರೂ. ನಿಂದ 5,804 ಶತಕೋಟಿ ರೂ. ಗೆ ಏರಿಕೆಯಾಗಿದೆ. ಇದು ಶೇಕಡಾ 3.9 ಬೆಳವಣಿಗೆಯ ದರವನ್ನು ಗುರುತಿಸುತ್ತದೆ.

ಒಟ್ಟಾರೆಯಾಗಿ, ಜಾನುವಾರು ವಲಯವು ಕೃಷಿ ಬೆಳವಣಿಗೆಯ ಪ್ರಮುಖ ಚಾಲಕನಾಗಿ ಮುಂದುವರೆದಿದೆ. ಪಾಕಿಸ್ತಾನದ ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿಯಲ್ಲಿ ಅದರ ಪ್ರಮುಖ ಪಾತ್ರವನ್ನು ಒತ್ತಿಹೇಳುತ್ತದೆ.

ಕತ್ತೆಗಳ ಸಂತತಿ ಹೆಚ್ಚಿದ್ದರೂ ಪಾಕಿಸ್ತಾನದ ಆರ್ಥಿಕ ಸಾಧನೆ ನಿರೀಕ್ಷೆಗೆ ತಕ್ಕಂತಿಲ್ಲ. ಇತ್ತೀಚಿನ ಆರ್ಥಿಕ ಸಮೀಕ್ಷೆಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಕೇವಲ 2.4 ಪ್ರತಿಶತದಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ, ಇದು ಸರ್ಕಾರದ ಗುರಿಯಾದ ಶೇಕಡಾ 3.5 ಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.

ಇದನ್ನೂ ಓದಿ: Kamala Harris: ಅಮೆರಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಹಿನ್ನೆಲೆ ಏನು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಪಾಕಿಸ್ತಾನದ ಆರ್ಥಿಕ ಸಮೀಕ್ಷೆಯಲ್ಲಿ ಕತ್ತೆಗಳ ಸಂಖ್ಯೆಯ ಹೆಚ್ಚಳವು ದೇಶದ ಆರ್ಥಿಕತೆಗೆ ಅದರ ಪ್ರಾಮುಖ್ಯತೆ ಮತ್ತು ಪ್ರಸ್ತುತತೆಯನ್ನು ಸೂಚಿಸುತ್ತದೆ. ಈಗಾಗಲೇ ಪಾಕಿಸ್ತಾನವು ತನ್ನ ಆರ್ಥಿಕ ಬೆಳವಣಿಗೆಯ ಗುರಿಗಳನ್ನು ಸಾಧಿಸುವಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಹೆಚ್ಚಿನ ಹಣದುಬ್ಬರ ದರಗಳು ಮತ್ತು ಸಮರ್ಥನೀಯ ವಿತ್ತೀಯ ಕೊರತೆಗಳು ಹೂಡಿಕೆದಾರರ ವಿಶ್ವಾಸವನ್ನು ದುರ್ಬಲಗೊಳಿಸಿದೆ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಅಡ್ಡಿಪಡಿಸಿದೆ.

Continue Reading
Advertisement
Train Tragedy
Latest3 mins ago

Train Tragedy: ರೈಲ್ವೆ ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ತಂದೆ!

Union Budget 2024
ದೇಶ3 mins ago

Union Budget 2024: ಬಜೆಟ್‌ನಲ್ಲಿ ಬಿಹಾರ, ಆಂಧ್ರಪ್ರದೇಶಕ್ಕೆ ಬಂಪರ್‌ ಕೊಡುಗೆ: ಇಲ್ಲಿದೆ ನಗೆಯುಕ್ಕಿಸುವ ಮೀಮ್ಸ್‌

Protest by Congress alleged that MLA Sunil Kumar has built a fake Parashurama statue
ಉಡುಪಿ4 mins ago

Lakshmi Hebbalkar: ನಕಲಿ ಪರಶುರಾಮ ಪ್ರತಿಮೆ ಸ್ಥಾಪನೆ; ಎಸ್ಐಟಿ ತನಿಖೆಗೆ ಹೆಬ್ಬಾಳಕರ್ ಒತ್ತಾಯ

Harshika Poonacha Bhuvann Ponnannaa shares opinion about marriage
ಸ್ಯಾಂಡಲ್ ವುಡ್12 mins ago

Harshika Poonacha: ಮದುವೆ ಆದ್ರೂ ಮಕ್ಕಳು ಬೇಡ ಅನ್ನೋರಿಗೆ ಮುಟ್ಟಿ ನೋಡ್ಕೊಳ್ಳೋ ಹಾಗೆ ಉತ್ತರ ಕೊಟ್ಟ ಹರ್ಷಿಕಾ ಪೂಣಚ್ಚ ದಂಪತಿ!

Team India
ಕ್ರೀಡೆ14 mins ago

Team India: ನೂತನ ಕೋಚ್​ ಗಂಭೀರ್​ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದ ಟೀಮ್​ ಇಂಡಿಯಾ ಆಟಗಾರರು

Viral Video
Latest21 mins ago

Viral Video: ಮೃಗಾಲಯದ ಸಿಬ್ಬಂದಿ ಮೇಲೆ ಸಿಂಹದ ದಾಳಿ; ತಡೆದು ನಿಲ್ಲಿಸಿದ ಸಿಂಹಿಣಿ!

CM Siddaramaiah
ಕರ್ನಾಟಕ22 mins ago

CM Siddaramaiah: ರೈತರು, ರಾಜ್ಯಕ್ಕೆ ಕೇಂದ್ರ ಪಂಗನಾಮ; ತಿಂಡಿ ತಿನ್ನುತ್ತಲೇ ಬಜೆಟ್‌ ಬಗ್ಗೆ ಸಿದ್ದರಾಮಯ್ಯ ಆಕ್ರೋಶ

assault case
ವಿಜಯನಗರ37 mins ago

Assault Case : ಹೋಮ್‌ ವರ್ಕ್‌ ಮಾಡದ್ದಕ್ಕೆ ಬಾಲಕಿಗೆ ಬಾಸುಂಡೆ ಬರುವಂತೆ ಬಾರಿಸಿದ ಮುಖ್ಯ ಶಿಕ್ಷಕಿ

Kannada New Movie Simha Roopini Character Introduction Teaser
ಸಿನಿಮಾ40 mins ago

Kannada New Movie: ಮಾರಮ್ಮ ದೇವಿ ಸಮ್ಮುಖದಲ್ಲಿ ʻಸಿಂಹರೂಪಿಣಿʼ ಟೀಸರ್ ಬಿಡುಗಡೆ

Union Budget 2024
ಪ್ರಮುಖ ಸುದ್ದಿ44 mins ago

Union Budget 2024 : ಕೇಂದ್ರ ಬಜೆಟ್​ನಲ್ಲಿ ಕರ್ನಾಟಕಕ್ಕೆ ‘ಚೊಂಬು’ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್​

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ3 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ4 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ4 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ5 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ5 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ1 week ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 week ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌