ವಿಸ್ತಾರ Interview | ಅಪ್ರಸ್ತುತ ವ್ಯಕ್ತಿಗಳು ನೂರು ಫ್ರೀಡಂ ಮಾರ್ಚ್‌ ಮಾಡಿದರೂ ವೇಸ್ಟ್‌: ಡಾ. ಸಿ.ಎನ್‌. ಅಶ್ವತ್ಥನಾರಾಯಣ - Vistara News

ಕರ್ನಾಟಕ

ವಿಸ್ತಾರ Interview | ಅಪ್ರಸ್ತುತ ವ್ಯಕ್ತಿಗಳು ನೂರು ಫ್ರೀಡಂ ಮಾರ್ಚ್‌ ಮಾಡಿದರೂ ವೇಸ್ಟ್‌: ಡಾ. ಸಿ.ಎನ್‌. ಅಶ್ವತ್ಥನಾರಾಯಣ

ದೇಶಾದ್ಯಂತ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಡೆಯುತ್ತಿರುವ ಹರ್‌ ಘರ್‌ ತಿರಂಗಾ ಅಭಿಯಾನ, ಪ್ರತಿಪಕ್ಷಗಳ ಪೈಪೋಟಿ ಸೇರಿದಂತೆ ಅನೇಕ ವಿಚಾರಗಳ ಕುರಿತು ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ʼವಿಸ್ತಾರʼದ ಜತೆ ಮಾತನಾಡಿದ್ದಾರೆ.

VISTARANEWS.COM


on

Ashwath Narayan Interview
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ಡಾ. ಸಿ.ಎನ್‌. ಅಶ್ವತ್ಥನಾರಾಯಣ

ರಮೇಶ ದೊಡ್ಡಪುರ, ಬೆಂಗಳೂರು
ರಾಜ್ಯ ರಾಜಕಾರಣದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ರಾಜಕಾರಣಿಗಳಲ್ಲಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರೂ ಪ್ರಮುಖರು. ಬೆಂಗಳೂರಿನ ಮಲ್ಲೇಶ್ವರ ಶಾಸಕರಾಗಿ ಕೈಗೊಂಡಿದ್ದ ಕಾರ್ಯಗಳ ಅನುಭವವನ್ನು ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿಯಾಗಿ, ಉನ್ನತ ಶಿಕ್ಷಣ- ಐಟಿಬಿಟಿ ಸಚಿವರಾಗಿ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಗೆ ನೆಲೆಯೇ ಇಲ್ಲದ ರಾಮನಗರ ಭಾಗದಲ್ಲೂ ರಾಜಕೀಯ ಸಂಚಲನ ಮೂಡಿಸುತ್ತಿರುವ ಅಶ್ವತ್ಥನಾರಾಯಣ ಅವರು, ಸ್ವಾತಂತ್ರ್ಯದ 75ನೇ ವರ್ಷಾಚರಣೆ ಸಂಭ್ರಮದ ಸಂದರ್ಭದಲ್ಲಿ ಸ್ವಾತಂತ್ರ್ಯ, ಅಮೃತ ಕಾಲ, ರಾಜಕೀಯ ವಿಚಾರಗಳ ಕುರಿತು ʻವಿಸ್ತಾರ ನ್ಯೂಸ್‌ʼ ಜತೆ ಮುಕ್ತವಾಗಿ ಮಾತನಾಡಿದ್ದಾರೆ.

ಸ್ವಾತಂತ್ರ್ಯದ 75ನೇ ವರ್ಷಾಚರಣೆ ನಡೆಸುತ್ತಿದ್ದೇವೆ. ಈ ಹಿಂದೆಂದೂ ಸ್ವಾತಂತ್ರೋತ್ಸವದಲ್ಲಿ ಭಾಗವಹಿಸದಷ್ಟು ಸಂಭ್ರಮ ಜನಸಾಮಾನ್ಯರಲ್ಲಿದೆ. ಈ ಸಂಭ್ರಮಕ್ಕೆ ಏನು ಕಾರಣ?

-ಈ ವರ್ಷ ವಿಶೇಷವಾಗಿ ಅಮೃತಮಹೋತ್ಸವವಾಗಿರುವುದರಿಂದ, ದೇಶಭಕ್ತಿ ಹೆಚ್ಚಿಸುವ ಹಾಗೂ ದೇಶಕ್ಕೆ ಮರು ಸಮರ್ಪಣೆ ಮಾಡಿಕೊಳ್ಳಬೇಕಾದ ಸಮಯ ಇದು. ಜಾತಿ, ಧರ್ಮ, ಮೀರಿ ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸ್ವತಃ ಪ್ರಧಾನಿಯವರು ಸಂಪೂರ್ಣ ಮೇಲುಸ್ತುವಾರಿ ವಹಿಸಿ ತೊಡಗಿಸಿಕೊಂಡಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ಇಷ್ಟೊಂದು ಜನರು ಏಕೆ ಭಾಗವಹಿಸಿದರು? ಅವರಿಗೂ ಸ್ವಂತ ಜೀವನ ಇತ್ತಲ್ಲವೇ? ಅದೆಲ್ಲವನ್ನೂ ಇಂದು ನೆನೆಯಬೇಕು. ಇಂದು ಯಾವುದೇ ಸ್ವಾತಂತ್ರ್ಯ ಹೋರಾಟ ಇಲ್ಲ. ಆದರೆ ಹಿಂದಿನವರ ತ್ಯಾಗ, ಬಲಿದಾನಗಳನ್ನು ನೆನೆಯುವುದಕ್ಕಿಂತಲೂ ಹೆಚ್ಚಿನ ಮಹತ್ವವಾದ ಕೆಲಸ ಇನ್ನೇನಿದೆ? ಇದೆಲ್ಲ ವಿಚಾರಗಳನ್ನೂ ಹಿನ್ನೆಲೆಯಾಗಿಟ್ಟುಕೊಂಡು ರೂಪಿಸಿದ ಕಾರ್ಯಕ್ರಮವಾದ್ಧರಿಂದ ಈ ಜನಮನ್ನಣೆ ಲಭಿಸಿದೆ. ಅಮೃತ ಕಾಲವನ್ನು ನಾವೆಲ್ಲರೂ ಸಂಭ್ರಮಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವಕ್ಕೆ ಈ ಜನೋತ್ಸಾಹ ಲಭಿಸಿದೆ.

ಮುಂದಿನ 25 ವರ್ಷವನ್ನು ಅಮೃತ ಕಾಲ ಎಂದು ಪ್ರಧಾನಿ ಕರೆದಿದ್ದಾರೆ. ಈ ಅಮೃತ ಕಾಲಕ್ಕೆ ಜನರು ಸಿದ್ಧವಾಗಿದ್ದಾರೆ. ಆದರೆ ಸರ್ಕಾರಗಳು, ರಾಜಕಾರಣಿಗಳು ತಮ್ಮ ಎಂದಿನ ಭ್ರಷ್ಟಾಚಾರ, ಕುಟುಂಬ ರಾಜಕಾರಣದಿಂದ ಹೊರಬರಲು ತಯಾರಾಗಿದ್ದಾರೆಯೇ?

– ಸಮಾಜ ಹೊಸತನವನ್ನು ಬಯಸುತ್ತಿದೆ. ಈ ಕಾಲಕ್ಕೆ ಪ್ರಸ್ತುತವಾದ ವಿಚಾರಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಜನರು ಆಶಾದಾಯಕವಾಗಿದ್ದಾರೆ. ಇನ್ನೊಂದೆಡೆ ಅದೇ ಜನರು ತಮ್ಮ ಪ್ರೀತಿ, ನಂಬಿಕೆಯನ್ನು, ಅನೇಕ ಯೋಗ್ಯವಲ್ಲದ ವ್ಯಕ್ತಿಗಳ ಮೇಲೆಯೂ ತೋರಿದ್ದಾರೆ. ಅಂಥವರನ್ನೂ ಗೆಲ್ಲಿಸಿದ್ದಾರೆ.

ಆದರೆ ಪ್ರಧಾನಿ ನರೇಂದ್ರ ಮೋದಿಯವರು ಈ ಸನ್ನಿವೇಶವನ್ನು ಬದಲಾವಣೆ ಮಾಡುತ್ತಿದ್ದಾರೆ. ಡಿಜಿಟಲ್‌ ಎಕಾನಮಿ ಮೂಲಕ ಹಣವನ್ನು ಎಲ್ಲಿಂದ ಎಲ್ಲಿಯವರೆಗೆ ಬೇಕಾದರೂ ವರ್ಗಾವಣೆ ಮಾಡುವ ವಾತಾವರಣ ತಂದಿದ್ದಾರೆ. ಎಷ್ಟೇ ಭ್ರಷ್ಟಾಚಾರ ನಡೆಸಿದ್ದರೂ ಅದರ ಸಂಪೂರ್ಣ ಮೂಲವನ್ನು ಹುಡುಕಿ ಮಟ್ಟ ಹಾಕಬಹುದು ಎಂಬ ವಾತಾವರಣ ಇಂದು ಇದೆ. ಹಿಂದೆಲ್ಲ ಒಬ್ಬರೇ ಹತ್ತು ಪ್ಯಾನ್‌ ಕಾರ್ಡ್‌ ಹೊಂದಿದ್ದರು, ಇಂದು ಅದು ಸಾಧ್ಯವಿಲ್ಲ. ಡಿಜಿಟಲ್‌ ಪೇಮೆಂಟ್‌ ಮೂಲಕ ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಜನರಿಗೆ ತಲುಪಿಸಲಾಗುತ್ತಿದೆ.

ಆದರೆ ಇಷ್ಟೆಲ್ಲದರ ನಡುವೆಯೂ ಕೊಳಕು ಜನರು, ಕೊಳಕು ರಾಜಕಾರಣಿಗಳು, ಭ್ರಷ್ಟ ವ್ಯವಸ್ಥೆ ಇನ್ನೂ ಇದೆ. ಈ ಸಂಸ್ಕೃತಿಯನ್ನು ಕೆಲವರು ಬಯಸುತ್ತಿದ್ದಾರೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದರೆ ಜನರೂ ಜಾತಿ, ವ್ಯಕ್ತಿ, ಭಾಷೆಯನ್ನು ಮೀರಿ ಚುನಾವಣೆಯಲ್ಲಿ ಆಯ್ಕೆ ಮಾಡಬೇಕು. ಅದನ್ನು ಸರಿಪಡಿಸುವ ಪ್ರಯತ್ನಗಳು ದಿಟ್ಟವಾಗಿ ನಡೆಯುತ್ತಿವೆ. ಜಾತಿ, ಮತ ಮೀರಿ ಜನಮನ್ನಣೆ ಗಳಿಸಬಹುದು ಎನ್ನುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಉದಾಹರಣೆ. ಅಮೃತ ಕಾಲದ ಸನ್ನಿವೇಶದಲ್ಲಿ ನಾವೆಲ್ಲರೂ ಈ ನಿಟ್ಟಿನಲ್ಲಿ ನೋಡಲೇಬೇಕಿದೆ.

ಪ್ರಧಾನಿ ನರೇಂದ್ರ ಮೋದಿಯವರು ಚೆನ್ನಾಗಿ ಮಾರ್ಕೆಟಿಂಗ್‌ ಮಾಡುತ್ತಾರೆ ಎಂದು ಪ್ರತಿಪಕ್ಷಗಳು ಹೇಳುತ್ತವೆ. ಆಧಾರ್‌ ತಮ್ಮ ಯೋಜನೆ, ಅದರ ಕ್ರೆಡಿಟ್‌ ಬಿಜೆಪಿ ಪಡೆಯಿತು ಎಂದರು. ತ್ರಿವರ್ಣ ಧ್ವಜದ ಮೇಲೆ ಹಕ್ಕು ಕಾಂಗ್ರೆಸ್‌ಗೆ ಇದೆ, ಬಿಜೆಪಿಯವರು ಮಾರ್ಕೆಟಿಂಗ್‌ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆಯಲ್ಲ?

-ಆಧಾರ್‌ ಬಗ್ಗೆ ಜನರಿಗೆ ಏನು ತಿಳಿಸಲಾಗಿತ್ತು? ಅದನ್ನು ಸ್ಪಷ್ಟವಾಗಿ ಜನರಿಗೆ ತಿಳಿಸದೆ, ಜನರಲ್ಲಿ ನಂಬಿಕೆ ಮೂಡಿಸದೆ ನಾವೇ ಮಾಡಿದೆವು ಎನ್ನುತ್ತಾರೆ. ನರೇಂದ್ರ ಮೋದಿಯವರು ಅದನ್ನು ಕಡ್ಡಾಯ ಮಾಡಿದಾಗ ಇದೇ ಕಾಂಗ್ರೆಸ್‌ನವರು ಏಕೆ ವಿರೋಧಿಸಿದರು? ಇವರಲ್ಲಿ ಸ್ಪಷ್ಟತೆ ಇಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ನಮ್ಮ ಅಧಿಕಾರದ ಸಮಯದಲ್ಲಿ ಪರಿಣಾಮಕಾರಿಯಾಗಿ ವಿಚಾರಗಳನ್ನು ಜನರಿಗೆ ತಿಳಿಸುತ್ತಿದ್ದೇವೆ. ಈ ಬದ್ಧತೆ, ನಾಯಕತ್ವ, ಸ್ಥೈರ್ಯ, ಕಾಳಜಿ ಅವರಿಗೆ ಇರಲಿಲ್ಲ, ನಮಗೆ ಇದೆ.

ತ್ರಿವರ್ಣ ಧ್ವಜ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದು ಎನ್ನುವುದು ಎಷ್ಟು ಚೀಪ್‌ ಆಲೋಚನೆ ಅಲ್ವ? ಹೀಗೆ ಹೇಳುವವರಿಗೆ ಬುದ್ಧಿ ಇದೆಯ? ತ್ರಿವರ್ಣ ಧ್ವಜವನ್ನು ಹಾರಿಸಲು ನಿರ್ಬಂಧ ವಿಧಿಸಿಕೊಂಡಿದ್ದರು ಇವರು. ನಿರ್ಬಂಧವನ್ನು ತೆರವುಗೊಳಿಸಿದ್ದರಿಂದ ಇಂದು ಜನರು ತಮ್ಮ ಮನೆಗಳ ಮೇಲೆ ಹಾರಿಸುತ್ತಿದ್ದಾರೆ. ಇಂದು ಕರ್ನಾಟಕದಲ್ಲಿ ಒಂದೂಕಾಲು ಕೋಟಿ ಮನೆಗಳಲ್ಲಿ ಧ್ವಜ ಹಾರಿಸುತ್ತಿದೆ. ಸಮಾಜಕ್ಕೆ ಯಾರಿಂದ ಒಳ್ಳೆಯದಾದರೂ ಸಂತೋಷ, ನಾವು ಇವರಿಗಿಂತ ಉತ್ತಮವಾಗಿ ಕೆಲಸ ಮಾಡೋಣ ಎನ್ನಬೇಕೆ ಹೊರತು, ಕೇವಲ ದೂಷಾರೋಪಣೆ ರಾಜಕೀಯ ಮಾಡುತ್ತಿದ್ದಾರೆ. ಇಂಥವರು ನಿಧಾನವಾಗಿ ಸಮಾಜದಲ್ಲಿ ಅಪ್ರಸ್ತುತವಾಗುತ್ತಾರೆ.

ಪ್ರಧಾನಿ ಮೋದಿಯವರು ಖಾದಿಗೆ ರಾಯಭಾರಿಯಾಗಿದ್ದಾರೆ. ಆದರೆ ಇಂದು ಪಾಲಿಸ್ಟರ್‌ ಧ್ವಜ ಬಳಕೆಗೆ ಅನುಮತಿ ನೀಡಲಾಗಿದೆ. ಒಂದೆರಡು ವರ್ಷ ಮುಂಚೆ ಯೋಚಿಸಿದ್ದರೆ, ದೇಶದ ಎಲ್ಲ ಜನರಿಗೂ ಖಾದಿ ಧ್ವಜವೇ ಲಭಿಸುವಂತೆ ಮಾಡುವ ಸುವರ್ಣ ಅವಕಾಶ ತಪ್ಪಿಹೋಗುತ್ತಿರಲಿಲ್ಲ ಅಲ್ಲವೇ?

ಇಂದು ಎಲ್ಲ ವಸ್ತುಗಳನ್ನೂ ಬಳಸಿ ಧ್ವಜ ತಯಾರಿಸಲಾಗುತ್ತಿದೆ. ನನ್ನ ಇಲಾಖೆಯ ಸ್ವಸಹಾಯ ಸಂಘಗಳಿಂದಲೇ ಮೂವತ್ತು ಲಕ್ಷ ಧ್ವಜ ತಯಾರಿಸಲಾಗಿದೆ. ಯಾವುದರಿಂದ ತಯಾರಿಸಬೇಕು ಎಂಬುದು ಚರ್ಚೆಯಾಗುತ್ತದೆ. ಆದರೆ ಎಲ್ಲರೂ ಧ್ವಜ ಹಾರಿಸಬೇಕು ಎಂಬ ಉದ್ದೇಶದಲ್ಲಿ ನಾವು ಸ್ಪಷ್ಟವಾಗಿದ್ದೇವೆ.

ನೆಹರೂ ಭಾವಚಿತ್ರವನ್ನು ಜಾಹೀರಾತಿನಲ್ಲಿ ಬಳಸಿಲ್ಲ ಎಂಬುದು ಒಂದೆಡೆಯಾದರೆ, ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್‌ ಫೋಟೊ ಬೇಡ ಎಂದು ಕೆಲವರು ಹೇಳುತ್ತಾರೆ, ಕೆಲವರು ಟಿಪ್ಪು ಸುಲ್ತಾನ್‌ ಫ್ಲೆಕ್ಸ್‌ ಹರಿಯುತ್ತಾರೆ. ಸ್ವಾತಂತ್ರ್ಯ ಲಭಿಸಿ 75 ವರ್ಷವಾದರೂ, ಸ್ವಾತಂತ್ರ್ಯ ಹೋರಾಟಗಾರರು ಯಾರು ಎಂದು ಫೈನಲ್‌ ಮಾಡುವುದರಲ್ಲೇ ಇದ್ದೇವೆಯೇ?

-ವಿಚಾರದಲ್ಲಿ ವ್ಯತ್ಯಾಸಗಳು ಸಮಾಜದಲ್ಲಿ ಇದ್ದೇ ಇರುತ್ತವೆ. ವೀರ ಸಾವರ್ಕರ್‌ ಬಗ್ಗೆ ಕಾಂಗ್ರೆಸ್‌ನವರಿಗೆ ಅಂತಹ ಅಭಿಪ್ರಾಯಗಳಿವೆ. ಸಾವರ್ಕರ್‌ ಅವರನ್ನು ಕೆಟ್ಟದಾಗಿ ಚಿತ್ರಿಸುವುದು, ಕಡೆಗಣಿಸುವುದು, ಅವಹೇಳನಕಾರಿ ಹೇಳಿಕೆ ನೀಡುವುದು ನಡೆದೇ ಇದೆ.

ನಾವು ಅಖಂಡ ಭಾರತದ ಬಗ್ಗೆ ಮಾತನಾಡುತ್ತೇವೆ. ಅಖಂಡ ಭಾರತವನ್ನು ವಿಭಜನೆ ಮಾಡಿದ ವ್ಯಕ್ತಿ ನೆಹರೂ ಅವರನ್ನು ಕೊಂಡಾಡುವ ಪ್ರಶ್ನೆಯೇ ಇಲ್ಲ. ಇದರಲ್ಲಿ ನಾವು ಸ್ಪಷ್ಟವಾಗಿದ್ದೇವೆ. ಅಖಂಡ ಭಾರತ ವಿಭಜನೆ ಆದ ಸಂದರ್ಭದಲ್ಲಿ ಎಷ್ಟು ಜನ ಮಾನ, ಪ್ರಾಣ ಕಳೆದುಕೊಂಡರು, ಆ ಎಲ್ಲ ಸಾವು ನೋವುಗಳಿಗೆ ಯಾರು ಹೊಣೆ? ಅವರು ಸಾವರ್ಕರ್‌ ಕುರಿತು ಏನು ಬೇಕಾದರೂ ಹೇಳಬಹುದು, ನಾವು ನಿಜವಾದ ವಿಚಾರವನ್ನು ಜನರಿಗೆ ತಿಳಿಸಬಾರದೆ?

ಸಿದ್ದರಾಮೋತ್ಸವದ ಸಫಲತೆಯಿಂದ ಬಿಜೆಪಿಯಲ್ಲಿ ಆತಂಕ, ಎಚ್ಚರಿಕೆಯ ಲಕ್ಷಣಗಳೇನಾದರೂ ಇವೆಯೇ?

-ಸಿದ್ದರಾಮೋತ್ಸವದಿಂದ ಕಾಂಗ್ರೆಸ್‌ ಪಕ್ಷದ ಬಣ್ಣ ಸಂಪೂರ್ಣ ಬಯಲಾಯಿತು. ಕಾಂಗ್ರೆಸ್‌ ಪಕ್ಷಕ್ಕೆ ಇಷ್ಟು ಇತಿಹಾಸ ಇದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅಲ್ಲಿ ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾರೂ ನಾಯಕರಿಲ್ಲ ಎನ್ನುವುದು ಸಿದ್ದರಾಮೋತ್ಸವದಿಂದ ಸಾಬೀತಾಯಿತು. 75 ವರ್ಷ ತುಂಬಿದ್ದಕ್ಕೆ ಬೀಳ್ಕೊಡುಗೆ ಮಾಡಬೇಕಿತ್ತು. ನಿಮಗೆ 75 ವರ್ಷ ತುಂಬಿದೆ ಎಂದು ಹೇಳಬೇಕಿತ್ತು. 65 ವರ್ಷ ಆದಾಗಲೇ ಇನ್ನೈದು ವರ್ಷಕ್ಕೆ ನಿವೃತ್ತಿ ಆಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಅಲ್ಲಿಂದ ಇಲ್ಲಿಗೆ ಎಷ್ಟು ನಾಯಕರು ಆಗಿ ಹೋಗಿದ್ದಾರೆ, ಎಷ್ಟು ನೀರು ಹರಿದಿದೆ ಅಲ್ಲವೇ? ಈಗಿನ ಕಾಲಕ್ಕೆ ಇವರು ಎಷ್ಟು ಪ್ರಸ್ತುತವಾಗಿದ್ದಾರೆ ಎನ್ನುವುದನ್ನು ಅವರೇ ಯೋಚಿಸಬೇಕು.

ಕಾಂಗ್ರೆಸ್‌ನಿಂದ ಸಿದ್ದರಾಮೋತ್ಸವ, ಫ್ರೀಡಂ ಮಾರ್ಚ್‌. ಬಿಜೆಪಿಯಲ್ಲಿ ಕಾರ್ಯಕರ್ತರ ನಡುವೆ ಗೊಂದಲ, ನಾಯಕರುಗಳಿಂದ ಗೊಂದಲದ ಹೇಳಿಕೆಗಳು… 2023ರ ಚುನಾವಣೆಗೆ ಬಿಜೆಪಿ ಸಿದ್ಧವಾಗುತ್ತಿರುವ ರೀತಿ ಇದೇನಾ?

-ದೇಶಭಕ್ತಿ ಎಂದ ಕೂಡಲೆ ಒಬ್ಬ ವ್ಯಕ್ತಿ, ನಂಬಿಕೆ, ನಾಯಕತ್ವ ಗುಣಗಳು, ಪಾರದರ್ಶಕತೆ ಎಲ್ಲವೂ ಇರಬೇಕು. ಈ ಉತ್ಸವಗಳನ್ನು ಮಾಡುತ್ತಿರುವವರಲ್ಲಿ ಅರ್ಹತೆ ಇದೆಯೇ? ನಂಬಿಕೆ ಇದೆಯೇ? ಒಮ್ಮೆ ಜನರಲ್ಲಿ ನಂಬಿಕೆಯನ್ನು ಕಳೆದುಕೊಂಡವರಿಂದ ಏನನ್ನು ಬಯಸುವುದು? ಇಂಥವರು ಎಂತಹ ಮಾರ್ಚ್‌, ರ‍್ಯಾಲಿ ಮಾಡಿದರೂ, ಅವರು ಹರಸಾಹಸಪಟ್ಟರೂ, ಪಲ್ಟಿ ಹೊಡೆದರೂ ಏನೂ ಆಗುವುದಿಲ್ಲ. ನಮ್ಮ ಬಳಿ ಹಣ, ಶಕ್ತಿ, ಏನೇ ಇದೆ ಎಂದು ಇವರು ಹೇಳಬಹುದು, ಇಂತಹ ಅಪ್ರಸ್ತುತ ವ್ಯಕ್ತಿಗಳು ನೂರು ಫ್ರೀಡಂ ಮಾರ್ಚ್‌, ರ‍್ಯಾಲಿ ಮಾಡಿದರೂ ಯಾವ ವ್ಯತ್ಯಾಸವೂ ಆಗುವುದಿಲ್ಲ.

ಕಾರ್ಯಕರ್ತರ ಅಸಮಾಧಾನದ ಬಗ್ಗೆ ಹೇಳುವುದಾದರೆ, ಅವರ ಆಕ್ಷೇಪಣೆಯಲ್ಲಿ ಯಾವುದೇ ತಪ್ಪಿಲ್ಲ. ಎರಡೂ ಕಡೆ ನಮ್ಮದೇ ಸರ್ಕಾರ ಇದ್ದರೂ ಕಾರ್ಯಕರ್ತರು ಸಾವಿಗೀಡಾಗುತ್ತಾರೆ ಎನ್ನುವ ಪ್ರಶ್ನೆ ಕೇಳುವಂತದ್ದೇ. ಇಂತಹ ಪ್ರಶ್ನೆಯನ್ನು ಅವರು ನಮ್ಮ ಬಳಿ ಕೇಳದೆ ಸಿದ್ದರಾಮಯ್ಯ, ಶಿವಕುಮಾರ್‌ ಬಳಿ ಕೇಳುವುದಕ್ಕಾಗುತ್ತದೆಯೇ? ಮನೆಯಲ್ಲಿ ತಂದೆ ಮಗನನ್ನು, ಮಗ ತಂದೆಯನ್ನು ಪ್ರಶ್ನಿಸುವುದು ಇದ್ದೇ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಸರಿಪಡಿಸುವ ಪ್ರಯತ್ನಗಳು ನಡೆದಿವೆ.

ಪರೇಶ್‌ ಮೇಸ್ತಾ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದವರಿಗೆ ವಕ್ಫ್‌ ಬೋರ್ಡ್‌ ಉಪಾಧ್ಯಕ್ಷನಾಗಿ ನೇಮಕ ಮಾಡಲಾಗಿದೆ. ಸಂಘಟನೆ ಹಾಗೂ ಸರ್ಕಾರದ ನಡುವೆ ಸಮನ್ವಯತೆ ಎಲ್ಲಿದೆ ಹಾಗಾದರೆ?

ಇಂತಹ ಸೂಕ್ಷ್ಮ ವಿಚಾರಗಳನ್ನು ಪರಿಶೀಲನೆ ಮಾಡುತ್ತೇವೆ. ನಾವೆಲ್ಲರೂ ಕಾರ್ಯಕರ್ತರಾಗಿಯೇ ಬೆಳೆದಿರುವವರು. ಗೊತ್ತೋ ಗೊತ್ತಿಲ್ಲದೆಯೇ ಅಂತಹದ್ದು ಆಗಿದ್ದರೆ ಮುಂದೆ ಸರಿಯಾಗುತ್ತದೆ.

ಇಲ್ಲಿವರೆಗೆ ಅನೇಕ ಬಿಜೆಪಿ ನಾಯಕರು ರಾಮನಗರ, ಮಂಡ್ಯದಲ್ಲಿ ಬಿಜೆಪಿ ಪರವಾಗಿ ಚುನಾವಣೆಗಳನ್ನು ನಡೆಸಿದ್ದಾರೆ. ಆದರೆ ಈಗ ನಿಮ್ಮ ವಿರುದ್ಧ ಪ್ರತಿಪಕ್ಷಗಳು ನಡೆಸಿದಷ್ಟು ದಾಳಿಯನ್ನು ಈ ಹಿಂದೆ ನಡೆಸಿರಲಿಲ್ಲ. ಇದಕ್ಕೆ ಕಾರಣ ಏನು?

-ನಾವು ಯಾರನ್ನೂ ದ್ವೇಷಿಸಬೇಕು, ಅಸಡ್ಡೆಯಾಗಿ ನಡೆದುಕೊಳ್ಳಬೇಕು ಎಂಬ ಉದ್ದೇಶವಿಲ್ಲ. ನಮ್ಮ ಮುಖ್ಯಮಂತ್ರಿಯವರು ಮೂರು ವರ್ಷದ ನಂತರ ನಮ್ಮ ಜಿಲ್ಲೆಗೆ ಭೇಟಿ ನೀಡಿದಾಗ ಯಾವ ರೀತಿ ವರ್ತನೆ ಇರಬೇಕಿತ್ತೋ ಹಾಗೆ ಅವರ ವರ್ತನೆ ಇರಲಿಲ್ಲ. ಇವರು ಅಸಡ್ಡೆಯಾಗಿ ನಡೆದುಕೊಂಡರೂ ಮುಖ್ಯಮಂತ್ರಿಯವರು ಗೌರವಯುತವಾಗಿ ನಡೆದುಕೊಂಡರು. ನಾನು ಮಾತನಾಡಿದ ಮೇಲೆ ಎಂಪಿ ಮಾತನಾಡಿ, ನಂತರ ಮುಖ್ಯಮಂತ್ರಿ ಮಾತನಾಡಿದರು. ಇದಕ್ಕಿಂತ ಇನ್ನೇನು ಗೌರವ ಕೊಡಬೇಕು ಅವರಿಗೆ? ಪ್ರತಿಮೆಗೆ ಮಾಲಾರ್ಪಣೆ ಸಂದರ್ಭದಲ್ಲಿ ನಾನು ಕೆಳಗೆ ಇಳಿದು ಅವರನ್ನೇ ಮೇಲೆ ಹತ್ತಿಸಿದೆ. ಆದರೆ ವೇದಿಕೆಗೆ ಬಂದ ಮೇಲೆಯೂ ಹಿಂಬಾಲಕರನ್ನು ಕೂರಿಸಿಕೊಂಡು ಗಲಾಟೆ ಮಾಡಿದರು.

ಹೇಗೆ ಬೇಕಾದರೂ ವರ್ತನೆ ತೋರಲು ಇದು ಅವರ ಮನೆಯೇ? ಸರ್ಕಾರ ತನ್ನ ಶಕ್ತಿಯನ್ನು ಇಂತಹ ಸಂದರ್ಭದಲ್ಲಿ ಮುಲಾಜಿಲ್ಲದೆಯೇ ತೋರಿಸಲೇಬೇಕಾಗುತ್ತದೆ. ಈ ರೀತಿ ವರ್ತನೆಯನ್ನು ಸಹಿಸಲು ನಾನು ಸಿದ್ಧನಾಗಿಲ್ಲ. ಅಸಹಾಯಕನಾಗಿ ಬಾಳುವುದರಲ್ಲಿ ಏನೂ ಅರ್ಥ ಇಲ್ಲ. ಇದೆಲ್ಲವನ್ನೂ ಬಿಟ್ಟು ಕೆಲಸದ ಮೂಲಕ ಅವರೇನು ಮಾಡಿದ್ದಾರೆ ಎನ್ನುವ ಗಂಡಸ್ತನವನ್ನು ತೋರಿಸಲಿ. ಅದನ್ನು ಬಿಟ್ಟು ವೇದಿಕೆಯಲ್ಲೇ ಡ್ಯಾಷ್‌ ಹೊಡೀತೀವಿ ಎನ್ನುವುದನ್ನು ನೋಡಲು ನಾವಿದ್ದೇವೆಯೇ?

ಕುಮಾರಸ್ವಾಮಿ ಅವರ ಬಗ್ಗೆ ಹೇಳುವುದಾದರೆ, ಮಾತೆತ್ತಿದರೆ ಫೇಕ್‌ ಮಾರ್ಕ್ಸ್‌ ಕಾರ್ಡ್‌, ಬಿಬಿಎಂಪಿ ಫೈಲ್‌ ಸುಟ್ಟವರು ಎನ್ನುತ್ತಾರೆ. ಯಾವ ಆಧಾರ ಇಟ್ಟುಕೊಂಡು ಇವರು ಮಾತನಾಡುತ್ತಾರೆ? ಮುಖ್ಯಮಂತ್ರಿಯಾಗಿದ್ದವನು ಒಂದು ಹೇಳಿಕೆ ಕೊಡುವ ಮುನ್ನ ಆಧಾರ ಇರಬೇಕಲ್ವ? ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗ ಇದನ್ನು ಏಕೆ ತನಿಖೆ ನಡೆಸಿಲ್ಲ? ನಾನು ಇವರ ರೀತಿ ರಾಜಕೀಯಕ್ಕೆ ಜೀವನೋಪಾಯಕ್ಕೆ ಬಂದಿಲ್ಲ. ಇನ್ನೊಬ್ಬರ ರಕ್ತ, ಹೆಸರಿನ ಮೇಲೆ ಬದುಕಬೇಕು ಎಂದು ಬಂದಿಲ್ಲ. ಸುಳ್ಳು ಹೇಳಿಕೊಂಡು ಅತ್ತು ಕರೆದು ಬದುಕುವಂತಹ ನೀಚ ನಾನಲ್ಲ. ಇದೆಲ್ಲವನ್ನೂ ಮೌನವಾಗಿ ಸಹಿಸಿಕೊಂಡಿದ್ದೇನೆ. ತೀಕ್ಷ್ಣವಾಗಿಯೂ ಉತ್ತರ ನೀಡಿದ್ದೇನೆ. ಈಗಾಗಲೆ ಅವರಿಗೆ ಲೀಗಲ್‌ ನೋಟಿಸ್‌ ಕೊಟ್ಟಿದ್ದೇನೆ. ಇವರ ರೀತಿ ನಾವು ಆಕ್ಸಿಡೆಂಟ್‌ ಕೇಸ್‌ಗಳಲ್ಲ. ಸ್ಪಷ್ಟವಾದ ಉದ್ದೇಶವನ್ನು ಇಟ್ಟುಕೊಂಡು ಬಂದಿದ್ದೇವೆ.

ಡಿ.ಕೆ. ಶಿವಕುಮಾರ್‌ ಅವರನ್ನು ಮಣಿಸಲು ಕುಮಾರಸ್ವಾಮಿ ಅವರು ನಿಮಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಮಾತಿತ್ತಲ್ಲ, ಅದು ಈಗ ಬದಲಾಗಲು ಕಾರಣ?

-ಶತ್ರುವಿನ ಶತ್ರು ಮಿತ್ರ ಎಂಬ ಭಾವನೆಯನ್ನು ಅವರು ಇಟ್ಟುಕೊಂಡಿದ್ದರು. ಆದರೆ ಒಮ್ಮೆ ಕಾರ್ಯಕ್ರಮದಲ್ಲಿ, ವಿಶ್ವದ ಒಕ್ಕಲಿಗರೆಲ್ಲ ನನ್ನ ಬಂಧುಗಳೇ ಎಂದು ನಾನು ಹೇಳಿದ ಕೂಡಲೆ ಅವರಿಗೆ ಉರಿದುಹೋಯಿತು. ಆಗಲೇ ಪ್ಲೇಟ್‌ ಚೇಂಜ್‌ ಆಗಿ ಹೋಯಿತು. ನಾನು ಅವರಿಗಿಂತಲೂ(ಡಿ.ಕೆ. ಶಿವಕುಮಾರ್‌ ಬ್ರದರ್ಸ್‌) ಡೇಂಜರಸ್‌ ಎನ್ನುವುದು ಅವರಿಗೆ ತಿಳಿದು ಹೀಗೆ ಮಾತನಾಡಿದರು. ಇವರ ಸರ್ಟಿಫಿಕೇಟ್‌ ಯಾರಿಗೆ ಬೇಕು? ನನಗೆ ಪಕ್ಷ, ಜನರ ಬೆಂಬಲ ಸಾಕು.

ರಾಮನಗರದಲ್ಲಿ ಸಕ್ರಿಯವಾಗಿರುವುದನ್ನು ಕಂಡು, ಮಲ್ಲೇಶ್ವರದಿಂದ ರಾಮನಗರಕ್ಕೆ ತೆರಳುತ್ತೀರ ಎಂಬ ಚರ್ಚೆ ಇತ್ತಲ್ಲ?

-ಮಲ್ಲೇಶ್ವರದ ಜನರು ನನ್ನನ್ನು ಪ್ರೀತಿಸಿ ಗೆಲ್ಲಿಸಿದ್ದಾರೆ. ಅವರನ್ನು ಬಿಟ್ಟು ನಾನ್ಯಾಕೆ ಹೋಗಬೇಕು? ನಿಜ ಹೇಳಬೇಕೆಂದರೆ, ಜಿಲ್ಲಾ ಉಸ್ತುವಾರಿ ಸಚಿವನಾಗಿ ರಾಮನಗರದಲ್ಲಿ ಕೆಲಸ ಮಾಡುತ್ತಿದ್ದೇನೆ. ಜವಾಬ್ದಾರಿಯುತ ಸಚಿವನಾಗಿ ಆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕು. ಸ್ಥಳೀಯ ಜನಪ್ರತಿನಿಧಿಗಳ ಜತೆಗೆ ಕೆಲಸ ಮಾಡಬೇಕು ಎಂದು ಹೋಗಿದ್ದೇನೆ. ನನಗೆ ಯಾವುದೇ ವೈಮನಸ್ಯ, ಧ್ವೇಷ ಭಾವನೆ ಇಲ್ಲ. ಕೆಲವು ಸಂದರ್ಭದಲ್ಲಿ ನಡೆದ ಘಟನೆಗಳು ವ್ಯತಿರಿಕ್ತವಾಗಿದ್ದವು ಅಷ್ಟೆ. ಉಳಿದಂತೆ ನಮ್ಮ ಕೆಲಸಗಳನ್ನು ಪಕ್ಷಾತೀತವಾಗಿ ನಡೆಸುತ್ತಿದ್ದೇವೆ. ಅಲ್ಲಿ ಸ್ಪರ್ಧಿಸಬೇಕು ಎಂಬ ರಾಜಕೀಯ ಸ್ವಾರ್ಥದಿಂದ ನಾನು ರಾಮನಗರಕ್ಕೆ ಹೋಗಿಲ್ಲ.

ಬಿಬಿಎಂಪಿ ಅಭಿವೃದ್ಧಿಯಲ್ಲಿ, ಬಿಬಿಎಂಪಿ ಚುನಾವಣೆಯಲ್ಲಿ ನಿಮಗೆ ಅಗತ್ಯ ಅವಕಾಶಗಳನ್ನು ನೀಡುತ್ತಿಲ್ಲ ಎಂಬ ಮಾತುಗಳಿವೆಯಲ್ಲ?

-ಬೆಂಗಳೂರು ಉಸ್ತುವಾರಿ ಸಚಿವರಾಗಿ ಮುಖ್ಯಮಂತ್ರಿಯವರೇ ಇದ್ದಾರೆ. ಅದೇ ಜಿಲ್ಲೆಯ ಸಚಿವರು ಉಸ್ತುವಾರಿ ಆಗಿರಬಾರದು ಎನ್ನುವಂತಹ ನೀತಿಯಿಂದಾಗಿ ನಮಗೆ ಅವಕಾಶ ಸಿಕ್ಕಿಲ್ಲ. ಸಿಎಂ ಮಾರ್ಗದರ್ಶನದಲ್ಲಿ ಎಲ್ಲವೂ ನಡೆಯುತ್ತಿವೆ, ನಮ್ಮಿಂದ ಸಲಹೆಗಳನ್ನು ಪಡೆಯುತ್ತಾರೆ. ನಮ್ಮ ಪಾತ್ರ ಇಲ್ಲಿ ಸೀಮಿತವಾದದ್ದು.

ಬೆಂಗಳೂರಿನಲ್ಲಿ ಸಾರಿಗೆ, ಮೆಟ್ರೊ, ಸಬ್‌ಅರ್ಬನ್‌, ವೈಟ್‌ ಟಾಪಿಂಗ್‌, ನೀರು ಸರಬರಾಜು, ನೈರ್ಮಲ್ಯ, ವಿದ್ಯಾಸಂಸ್ಥೆಗಳು, 13 ಸಾವಿರ ಕಿಲೋಮೀಟರ್‌ ರಸ್ತೆ ಅಭಿವೃದ್ಧಿ ಆಗುತ್ತಿದೆ. ಈ ನಡುವೆ ಕೋವಿಡ್‌ ಸಮಸ್ಯೆ ಎದುರಾಯಿತು. ಜನರ ಜೀವ ಉಳಿಸಿದರೆ ಸಾಕು ಎನ್ನುವ ಸ್ಥಿತಿ ಇತ್ತು, ಹಾಗಾಗಿ ಕೆಲಸದಲ್ಲಿ ಸ್ವಲ್ಪ ನಿಧಾನವಾಗಿದೆ. ಕಸ ನಿರ್ವಹಣೆಗೆ ಇಂದೋರ್‌ಗಿಂತಲೂ ಉತ್ತಮ ಯೋಜನೆಯನ್ನು ಈಗಾಗಲೆ ಆರಂಭಿಸಲಾಗಿದೆ, ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ತಂದಿದ್ದೇವೆ, ಭೂಸುಧಾರಣೆ ತಂದಿದ್ದೇವೆ, ವಿಶೇಷ ಹೂಡಿಕೆ ಪ್ರದೇಶಗಳನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವೇಗ ಪಡೆಯುತ್ತವೆ.

ಆಗಸ್ಟ್‌ 28ರಂದು ಜನೋತ್ಸವ ಮತ್ತೆ ನಿಗದಿ ಆಗಿದೆ. ಇದರ ನಂತರವಾದರೂ ಬಿಜೆಪಿ ಚುನಾವಣೆ ಮೂಡ್‌ಗೆ ಬರುತ್ತದೆಯೇ ಅಥವಾ ಈಗಿನಂತೆಯೇ ಗೊಂದಲಗಳು ಮುಂದುವರಿಯುತ್ತವೆಯೇ?

-ಸ್ಥಿರತೆ ಇರುವ ಪಕ್ಷ ಎಂದರೆ ಬಿಜೆಪಿ. ಪಕ್ಷಕ್ಕೆ ಆ ರೀತಿ ಶಕ್ತಿ, ಬದ್ಧತೆ ಇದೆ. ಗೊಂದಲ, ಸಮಸ್ಯೆಗಳು ಯಾವುದೂ ಇಲ್ಲ. ಬಿ.ಎಸ್‌. ಯಡಿಯೂರಪ್ಪನವರು ನಮ್ಮ ಸರ್ವೋಚ್ಚ ನಾಯಕರು. ವಯಸ್ಸಿನ ಕಾರಣಕ್ಕೆ ಸ್ವಯಿಚ್ಛೆಯಿಂದ ಹಿಂದೆ ಸರಿದಿದ್ದಾರೆ. ಅವರ ಸ್ಥಾನಕ್ಕೆ ಜ್ಞಾನಿಗಳು, ತಿಳಿವಳಿಕೆ ಉಳ್ಳವರು, ಸುದೀರ್ಘ ರಾಜಕೀಯ ಅನುಭವ ಇರುವ ಬಸವರಾಜ ಬೊಮ್ಮಾಯಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಇದೆಲ್ಲದರ ನಡುವೆ ಕೆಲವೇ ವ್ಯಕ್ತಿಗಳು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಇವರ ಹೇಳಿಕೆ ಹಿಂದೆ ಅಜೆಂಡಾ ಇರುತ್ತವೆ. ಯಾರಾದರೂ ಪಕ್ಷದ ಶಿಸ್ತಿನ ಸಿಪಾಯಿಗಳು ಇಂತಹ ಹೇಳಿಕೆ ಕೊಡುತ್ತಾರ? ಗೊಂದಲ ನಿರ್ಮಾಣ ಮಾಡಬೇಕು ಎಂಬ ದುರುದ್ದೇಶ ಹೊಂದಿರುವವರನ್ನು ಖಂಡಿಸುತ್ತೇವೆ, ಪಕ್ಷ ಅದರ ಬಗ್ಗೆ ಕ್ರಮ ಕೈಗೊಳ್ಳುತ್ತದೆ. ಇದು ನಮ್ಮ ಪ್ರೈವೇಟ್‌ ಕಂಪನಿಯಲ್ಲ, ಪಕ್ಷದ ಜತೆಯಲ್ಲಿ ಜೋಡಿಸಿಕೊಳ್ಳಬೇಕು. ವ್ಯತ್ಯಾಸಗಳಿದ್ದವರು ಪಕ್ಷದಿಂದ ಹೊರಹೋಗುವುದು ಉತ್ತಮ.

ಸರ್ಕಾರ ಮೂರು ವರ್ಷ ಪೂರೈಸುತ್ತಿರುವುದನ್ನು ಜನರ ವಿಶ್ವಾಸದೊಂದಿಗೆ ಆಯೋಜನೆ ಮಾಡುತ್ತಿದ್ದೇವೆ, ಆಗಸ್ಟ್‌ 28ರ ನಂತರ ಇನ್ನಷ್ಟು ಒಗ್ಗಟ್ಟಿನಲ್ಲಿ, ಬಲಿಷ್ಠವಾಗಿ ಹೆಜ್ಜೆಗಳನ್ನು ಇಡುತ್ತೇವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Chetan Chandra: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಹಲ್ಲೆ; ರಕ್ತ ಬರುವಂತೆ ಥಳಿತ

Chetan Chandra: ಬೆಂಗಳೂರಿನ ಕಗ್ಗಲಿಪುರದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ನಟ ಚೇತನ್ ಚಂದ್ರ ಅವರನ್ನು ಅಡ್ಡಗಟ್ಟಿ ಕೆಲ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ.

VISTARANEWS.COM


on

Chetan Chandra
Koo

ಬೆಂಗಳೂರು: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಅವರ ಮೇಲೆ ಹಲ್ಲೆ ಮಾಡಿರುವ ಘಟನೆ (Chetan Chandra) ನಗರದ ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ ನಡೆದಿದೆ. ಪಿಯುಸಿ, ರಾಜಧಾನಿ, ಜರಾಸಂಧ, ಪ್ರಭುತ್ವ ಚಿತ್ರಗಳ ಮೂಲಕ ಖ್ಯಾತವಾಗಿರುವ ನಟನ ಮೇಲೆ ಭಾನುವಾರ ಹಲ್ಲೆ ನಡೆದಿದೆ.

ಕಾರಿನಲ್ಲಿದ್ದ ನಟ ಚೇತನ್ ಚಂದ್ರ ಅವರನ್ನು ರಕ್ತ ಬರುವಂತೆ ಥಳಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟ ಚೇತನ್ ಚಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ನಟನ ಮೇಲೆ 20ಕ್ಕೂ ಹೆಚ್ಚು ಮಂದಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಪೈಕಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಟ ಚೇತನ್‌ ಚಂದ್ರ ಅವರಿಗೆ ಕಗ್ಗಲಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ | Ram Charan: ಚುನಾವಣಾ ಪ್ರಚಾರದ ವೇಳೆ ರಾಮ್ ಚರಣ್ ಶರ್ಟ್‌ ಹರಿದ ಫ್ಯಾನ್ಸ್‌: ಅಲ್ಲು ಸುತ್ತ ಜನವೋ ಜನ!

ಭಾನುವಾರ ಅಮ್ಮಂದಿರ ದಿನವಾಗಿದ್ದರಿಂದ ನಟ ಚೇತನ್ ಚಂದ್ರ ಅವರು ದೇವಸ್ಥಾನಕ್ಕೆ ಹೋಗಿ ಬರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಬೈಕ್‌ನಲ್ಲಿ ಬಂದ ಕೆಲ ಕಿಡಿಗೇಡಿಗಳು ಕಾರಿಗೆ ಅಡ್ಡ ಹಾಕಿ, ದುಡ್ಡು ಕೀಳಲು ಮುಂದಾಗಿದ್ದಾರೆ. ಹಣ ಕೊಡೋದಿಲ್ಲ ಎಂದಿದ್ದಕ್ಕೆ ಗಲಾಟೆ ಮಾಡಿ, ನಟ ಚೇತನ್ ಚಂದ್ರ ಅವರ ಮುಖಕ್ಕೆ ರಕ್ತ ಬರುವ ಹಾಗೆ ಕಿಡಿಗೇಡಿಗಳು ಹೊಡೆದಿದ್ದಾರೆ.

ಅಮ್ಮನ ನೆನೆದಾಗ ಮಗುವಾಗುವೆ ಎಂದ ಜಗ್ಗೇಶ್‌: ದುನಿಯಾ ವಿಜಯ್‌ ಭಾವುಕ ಪೋಸ್ಟ್‌!

Mother's Day 2024 Duniya Vijay jaggesh Post Viral

ಬೆಂಗಳೂರು: ಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ..? ಭೂಮಿಗೆ ಬಂದ (Mother’s Day 2024) ಮೊದಲನೆ ಕಂದನ ಅಳುವ ದನಿಯಿಂದ ʼಈ ಸಾಲುಗಳು ಯಾವಾಗಲೂ ನಮ್ಮನ್ನ ಬಿಡದೇ ಕಾಡುತ್ತವೆ. ʼಅಮ್ಮʼ ಅನ್ನೋ ಶಬ್ದಕ್ಕೆ ಅರ್ಥ ನಿಡುವುದು ಕೂಸೇ ಆದ್ರೂ ಆ ಕೂಸಿಗೆ ರೆಕ್ಕೆ ಕಟ್ಟಿ ಹಾರೋ ಹಾಗೇ ಮಾಡೋಳು ತಾಯಿ. ಪ್ರತಿವರ್ಷ ಮೇ ತಿಂಗಳ 2ನೇ ಭಾನುವಾರ ಮದರ್ಸ್ ಡೇ. ತಾಯಂದಿರ ದಿನದ ಹಿನ್ನೆಲೆಯಲ್ಲಿ ಜಗ್ಗೇಶ್, ದುನಿಯಾ ವಿಜಯ್ ಸೇರಿದಂತೆ ಹಲವರು ತಮ್ಮ ತಾಯಿಯನ್ನು ಸ್ಮರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ನವರಸ ನಾಯಕ ಜಗ್ಗೇಶ್‌ ಅವರು ಇನ್‌ಸ್ಟಾದಲ್ಲಿ ಅಮ್ಮನ ತೊಡೆ ಮೇಲೆ ಮಲಗಿರುವ ಫೋಟೊ ಜತೆಗೆ ಹೀಗೆ ಬರೆದಿದ್ದಾರೆ. ಧನ್ಯವಾದ ಜೀ ಕನ್ನಡ. ನನ್ನ ಪ್ರೀತಿಯ ಅಮ್ಮನ ಈ ರೀತಿ ನೆನೆಯುವಂತ ಕಾಣಿಕೆಗಾಗಿ.
ನಾನು ಇಂದು 61 ವರ್ಷವಾದರು ಅಮ್ಮನ ನೆನೆದಾಗ ಮಗುವಾಗುವೆ. ಅಂತಹ ಶಕ್ತಿಯಿದೆ ಅಮ್ಮನ ಎರಡಕ್ಷರಕ್ಕೆ.
ಕಾರುಣ್ಯ ಸೆಲೆಯ ಓ ಅಮ್ಮಂದಿರೆ…ನೀವುಗಳು ಇರಬೇಕು ಶಾಶ್ವತ. ದೃವನಕ್ಷತ್ರದಂತೆ..! ಮರೆಯಾಗದೆ ಮಕ್ಕಳ ಮುಂದೆ..ʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral News: ಇಂತಹ ಅಮ್ಮಂದಿರೂ ಇರ್ತಾರಾ? ಈ ಶಾಕಿಂಗ್‌ ವಿಡಿಯೊ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ

ದುನಿಯಾ ವಿಜಯ್‌ ಅವರು ಅಮ್ಮನ ಜತೆ ಇರುವ ಫೋಟೊ ಶೇರ್‌ ಮಾಡಿ ʻʻಈ ಉಸಿರು ಕೊಟ್ಟ ನಿನಗೆ
ನನ್ನ ಉಸಿರಿರೊವರೆಗೂ. ಪ್ರತಿ ದಿನ ಆಚರಣೆಯೇ ಅಮ್ಮʼʼ ಎಂದು ಬರೆದುಕೊಂಡಿದ್ದಾರೆ.

ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದ ದುನಿಯಾ ವಿಜಯ್‌ ಅಮ್ಮ ನಾರಾಯಣಮ್ಮ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು. ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ ಹಾಗೂ ತಾಯಿ ನಾರಾಯಣಮ್ಮ ಅವರಿಗೆ ಕೋವಿಡ್ 19 ಪಾಸಿಟಿವ್ ಕಂಡುಬಂದಿತ್ತು. ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿ, ತಂದೆ-ತಾಯಿಯನ್ನು ದುನಿಯಾ ವಿಜಯ್ ಆರೈಕೆ ಮಾಡಿದ್ದರು. ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದ ನಾರಾಯಣಮ್ಮ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು. 3 ವರ್ಷಗಳ ಹಿಂದೆ ನಟ ದುನಿಯಾ ವಿಜಯ್ ನಾರಾಯಣಮ್ಮ ನಿಧನರಾದರು.

ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ (Manvita Kamath) ಅವರ ತಾಯಿ ಸುಜಾತಾ ಕಾಮತ್‌ ಕಿಡ್ನಿ ವೈಫಲ್ಯದಿಂದಾಗಿ ಕೊನೆಯುಸಿರೆಳೆದಿದ್ದರು. ಈ ದಿನ ನಟಿ ತಮ್ಮ ತಾಯಿಯನ್ನು ನೆನಪಿಸಿಕೊಂಡು, ಮಿಸ್‌ ಯೂ ಅಮ್ಮ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ (Duniya Vijay) ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ವಿಶೇಷ ಅಂದರೆ ಈ ಸಿನಿಮಾ ಮೂಲಕ ದುನಿಯಾ ವಿಜಯ್‌ ಅವರ ಮಗಳು ಮೋನಿಕಾ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ಕಾಟೇರ’ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮೋನಿಕಾ ಈಗ ಹೆಸರು ಬದಲಾಯಿಸಿಕೊಂಡಿದ್ದಾರೆ. ಸಿನಿಮಾಗಾಗಿ ರಿತಾನ್ಯಾ ಎಂದು ಹೆಸರು ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ | Kannada New Movie: ಮನರಂಜನೆಯ ರಸದೌತಣ ಬಡಿಸಲು ಬಂದ ʻಮೂರನೇ ಕೃಷ್ಣಪ್ಪʼ: ಟ್ರೈಲರ್‌ ಔಟ್‌!

ಸದ್ಯಕ್ಕೆ ಪ್ರೊಡಕ್ಷನ್ ನಂ 2. ಟೈಟಲ್ ಮೂಲಕ ಸಿನಿಮಾ ಚಿತ್ರೀಕರಣ ಚಾಲನೆ ದೊರೆತಿದೆ. ಸತ್ಯ ಪ್ರಕಾಶ್ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಸೂರಜ್ ಗೌಡ ಇದ್ದಾರೆ. ಕೋಲಾರ ಸುತ್ತಮುತ್ತ ಸಿನಿಮಾದ ಕಥೆ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನೈಜ್ಯ ಕಥೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಿಕೊಂಡಿದೆ. ಕೋಲಾರ ಭಾಷೆಯಲ್ಲಿ ಚಿತ್ರದ ಡೈಲಾಗ್ ಇರಲಿದೆ.

Continue Reading

ಸಿನಿಮಾ

Vijay Rao Herur: ‘ವಿಜಯದಾಸರು’ ಚಿತ್ರದ ಸಹ ನಟ ವಿಜಯ್‌ ರಾವ್ ಹೇರೂರು ವಿಧಿವಶ

Vijay Rao Herur: ಇತ್ತೀಚೆಗೆ ಬಿಡುಗಡೆಯಾದ ‘ವಿಜಯದಾಸರು’ ಚಿತ್ರದಲ್ಲಿ ಗಂಗಾವತಿಯ ವಿಜಯ್‌ರಾವ್ ಹೇರೂರು ಅವರು ಸಹ ನಟರಾಗಿ ನಟಿಸಿ ಜನಪ್ರಿಯರಾಗಿದ್ದರು.

VISTARANEWS.COM


on

vijay Rao herur
Koo

ಗಂಗಾವತಿ: ಪಟ್ಟಣದ ಬ್ರಾಹ್ಮಣ ಸಮಾಜದ ಮುಖಂಡ, ನಟ ವಿಜಯ್‌ರಾವ್ ಹೇರೂರು(51) (Vijay Rao Herur) ಅವರು ಭಾನುವಾರ ಬೆಳಗ್ಗೆ ಹೃದಯಘಾತದಿಂದ ನಿಧನರಾದರು. ಇತ್ತೀಚೆಗೆ ಬಿಡುಗಡೆಯಾದ ‘ವಿಜಯದಾಸರು’ ಚಿತ್ರದಲ್ಲಿ ಇವರು ಸಹ ನಟರಾಗಿ ನಟಿಸಿ ಜನಪ್ರಿಯರಾಗಿದ್ದರು.

ದಾಸ ಸಾಹಿತ್ಯದ ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದ ವಿಜಯ್‌ ರಾವ್ ಅವರು ಸಿನಿಮಾಗಳಲ್ಲಿ ನಟಿಸುವ ಆಸೆ ಹೊಂದಿದ್ದರು. ಆದರೆ ವಿಧಿಯಾಟದಿಂದ ಅವರು ಹೃದಯಘಾತಕ್ಕೆ ಒಳಗಾದ್ದಾರೆ. ಇವರು ತಾಯಿ, ಸಹೋದರ ಸೇರಿ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ವಿವಿಧ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Sangeeth Sivan dies: ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

ತೆಲುಗಿನ ‘ತ್ರಿನಯನಿ’ ಧಾರಾವಾಹಿ ನಟಿ, ಕನ್ನಡತಿ ಪವಿತ್ರ ಜಯರಾಂ ಅಪಘಾತದಲ್ಲಿ ನಿಧನ

Pavithra Jayaram Trinayani serial Fame No More

ಬೆಂಗಳೂರು: ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ (Trinayani serial) ಜನಪ್ರಿಯರಾಗಿರುವ ಕನ್ನಡತಿ ಪವಿತ್ರ ಜಯರಾಂ (Pavithra Jayaram) ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಕರ್ನೂಲು ಸಮೀಪದಲ್ಲಿ ಇಂದು (ಮೇ.12) ಮುಂಜಾನೆ ಅಪಘಾತವಾಗಿದೆ ಎಂದು ವರದಿಯಾಗಿದೆ. ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು. ಕನ್ನಡದ ʻರೋಬೊ ಫ್ಯಾಮಿಲಿʼ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಟಿ ರೋಬೊ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಮನೆಮಾತಾಗಿದ್ದರು.

ನಟಿ ಕರ್ನಾಟಕದಲ್ಲಿ ಹುಟ್ಟಿದ್ದರೂ ಕೂಡ ಹೆಚ್ಚು ಫೇಮಸ್‌ ಆದದ್ದು ತೆಲುಗಿನ ‘ತ್ರಿನಯನಿ’ ಧಾರಾವಾಹಿಯಿಂದ . ಈ ಬಗ್ಗೆ ನಟಿ ಈ ಹಿಂದೆ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದರು. ʻʻನಾನು ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಿ. ಆದರೆ ಕನ್ನಡಕ್ಕಿಂತ ನನಗೆ ಹೆಚ್ಚು ಹೆಸರು ಕೊಟ್ಟಿದ್ದು ತೆಲುಗು. ‘ತ್ರಿನಯನಿ’ ಧಾರಾವಾಹಿ ಮುಂಚೆ ಅನೇಕ ಕನ್ನಡ ಧಾರಾವಾಹಿಯಲ್ಲಿ ನಟಿಸಿದ್ದರು ಅಷ್ಟಾಗಿ ಫಾಲೋವರ್ಸ್‌ ಇರಲಿಲ್ಲ. ಆದರೆ ‘ತ್ರಿನಯನಿ’ ಧಾರಾವಾಹಿ ಕನ್ನಡದಲ್ಲಿಯೂ ಡಬ್‌ ಆಗುತ್ತಿತ್ತು. ಹೀಗಾಗಿ ಕನ್ನಡದಲ್ಲಿಯೂ ತುಂಬಾ ಫ್ಯಾನ್ ಪೇಜ್‌ಗಳು ಶುರುವಾದವುʼʼಎಂದಿದ್ದರು.

ಇದನ್ನೂ ಓದಿ: IPL 2024: ಬೆಂಗಳೂರಲ್ಲಿಂದು ಆರ್‌ಸಿಬಿ, ಡೆಲ್ಲಿ ನಿರ್ಣಾಯಕ ಪಂದ್ಯ; ಮಳೆ ಅಡ್ಡಿ ಆಗತ್ತಾ ? ಇಲ್ಲಿದೆ ರಿಪೋರ್ಟ್

“ಅಷ್ಟೇ ಅಲ್ಲ 16ನೇ ವಯಸ್ಸಿಗೆ ಮದುವೆ ಮಾಡಿದ್ದರು. ಮ್ಯಾರೇಜ್ ಲೈಫ್ ಕೂಡ ನನ್ನದು ಅಷ್ಟಾಗಿ ಸರಿಯಿರಲಿಲ್ಲ. ಓದು ಕೂಡ ಅರ್ಧಕ್ಕೆ ಮುಗಿದಿತ್ತು. ಚಿಕ್ಕ ಚಿಕ್ಕ ಮಕ್ಕಳು ಇರುವಾಗಲೇ ನನ್ನ ಮಗಳು ಮತ್ತು ಮಗನನ್ನು ಕರೆದುಕೊಂಡು ಬೆಂಗಳೂರಿಗೆ ಅವಕಾಶ ಅರಸಿಕೊಂಡು ಬಂದೆ. ಮಕ್ಕಳನ್ನು ಬೆಳೆಸಲು ಹೌಸ್ ಕೀಪಿಂಗ್ ಕೆಲಸ ಕೂಡ ಮಾಡಿದ್ದೆ. ನರ್ಸಿಂಗ್ ಕಾಲೇಜಿನ ಲೈಬ್ರರಿಯಲ್ಲಿ ಕೂಡ ಕೆಲಸ ಮಾಡಿದ್ದೆʼʼಎಂದು ಹೇಳಿಕೊಂಡಿದ್ದರು.

Continue Reading

ಕರ್ನಾಟಕ

Rain News: ಬಾಗಲಕೋಟೆಯಲ್ಲಿ ಸಿಡಿಲಿಗೆ ಬಾಲಕ ಬಲಿ; ಬೆಳಗಾವಿಯ ಮನೆಗಳಿಗೆ ನುಗ್ಗಿದ ಮಳೆ ನೀರು

Rain News: ಬಾಗಲಕೋಟೆ ತಾಲೂಕಿನಲ್ಲಿ ಸಿಡಿಲು ಬಡಿದು ಬಾಲಕ ಮೃತಪಟ್ಟಿದ್ದು, ಬೆಳಗಾವಿ ತಾಲೂಕಿನ ಮಜಗಾಂವ ಗ್ರಾಮದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಜನ ಪರದಾಡುವಂತಾಗಿದೆ.

VISTARANEWS.COM


on

Rain News
Koo

ಬಾಗಲಕೋಟೆ/ಬಾಗಲಕೋಟೆ: ರಾಜ್ಯದ ವಿವಿಧೆಡೆ ಭಾನುವಾರವೂ ಭರ್ಜರಿ ಮಳೆ ಸುರಿದಿದೆ. ಇದರಿಂದ ಸಿಡಿಲು ಬಡಿದು ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಬಾಗಲಕೋಟೆ ತಾಲೂಕಿನಲ್ಲಿ ನಡೆದಿದೆ. ಇನ್ನು ಬೆಳಗಾವಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಪರದಾಡುತ್ತಿದ್ದಾರೆ.

ಸಿಡಿಲು ಬಡಿದು ಬಾಲಕ ಸಾವು

ಬಾಗಲಕೋಟೆ: ಸಿಡಿಲು ಬಡಿದು ಯುವಕ ಮೃತಪಟ್ಟಿರುವ ಘಟನೆ ಬಾಗಲಕೋಟೆ ತಾಲೂಕಿನ ಹಳ್ಳೂರು ಸಮೀಪ ನಡೆದಿದೆ. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಗೊನ್ಯಾಳ ನಿವಾಸಿ ಪ್ರಕಾಶ್ ವಗ್ಗರ್ (17) ಮೃತ.

ನಾಲ್ಕೈದು ದಿನಗಳ ಹಿಂದೆ ಬೇವೂರಿನ ಸಂಬಂಧಿಕರ ಮನೆಗೆ ಬಾಲಕ ಬಂದಿದ್ದ. ಬಾಗಲಕೋಟೆಯಿಂದ ಬೇವೂರು ಗ್ರಾಮಕ್ಕೆ ಭಾನುವಾರ ಬೈಕ್ ಮೇಲೆ ಹೊರಟಿದ್ದಾಗ ಮಳೆ ಬಂತೆಂದು ಹಳ್ಳೂರು ಸಮೀಪ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದಿದೆ. ಈ ವೇಳೆ ಬಾಲಕ ಮೃತಪಟ್ಟಿದ್ದು, ಆತನ ಜೊತೆಗಿದ್ದ ಶ್ರೀಶೈಲ್ ಬನ್ನೆಪ್ಪನವರ್‌ಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿಯಲ್ಲಿ ಹಲವು ಮನೆಗಳಿಗೆ ನುಗ್ಗಿದ ನೀರು

ಬೆಳಗಾವಿ: ಧಾರಾಕಾರ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡಿದ ಘಟನೆ ಬೆಳಗಾವಿ ತಾಲೂಕಿನ ಮಜಗಾಂವ ಗ್ರಾಮದಲ್ಲಿ ನಡೆದಿದೆ. ಬೆಳಗಾವಿಯ ದಕ್ಷಿಣ ಮತಕ್ಷೇತ್ರದ ಗ್ರಾಮದಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜಿಲ್ಲಾಧಿಕಾರಿ ಮತ್ತು ಶಾಸಕ ಅಭಯ ಪಾಟೀಲ ವಿರುದ್ಧ ಸ್ಥಳೀಯ ಮಹಿಳೆಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಲ್ಕು ವರ್ಷಗಳಿಂದ ಚರಂಡಿ ಸರಿಪಡಿಸಿಲ್ಲ, ಹೀಗಾಗಿ ಅವ್ಯವಸ್ಥೆ ಉಂಟಾಗಿದೆ ಎಂದು ಮಹಿಳೆಯರು ಕಿಡಿಕಾರಿದ್ದಾರೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳಿಗೆ ನೀರು ನುಗ್ಗಿದೆ. ಸತತ ಗಂಟೆ ಕಾಲ ಸುರಿದ ಭಾರಿ ಮಳೆಗೆ ಜನರು ಕಂಗಾಲಾಗಿದ್ದಾರೆ.

ಇದನ್ನೂ ಓದಿ | Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

ಸಿಡಿಲಿನ ಹೊಡೆತಕ್ಕೆ ಧಗ ಧಗಿಸಿದ ತೆಂಗಿನಮರ

ಸಿಡಿಲಿನ ಹೊಡೆತಕ್ಕೆ ತೆಂಗಿನಮರ ಹೊತ್ತಿ ಉರಿದ ಘಟನೆ ಮುಧೋಳ ತಾಲೂಕಿನ ಲೋಕಾಪುರ ಪಟ್ಟಣದ ವೆಂಕಟೇಶ್ವರ್ ನಗರದಲ್ಲಿ ನಡೆದಿದೆ. ಮಂಜುನಾಥ್ ಪಾಟೀಲ್ ಎಂಬುವವರ ತೆಂಗಿನಮರಕ್ಕೆ ಸಿಡಿಲು ಬಡಿದಿದೆ. ತೆಂಗಿನಮರ ಧಗ ಧಗಿಸುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

Continue Reading

ಕ್ರೈಂ

Self Harming: ಎರಡು ಸಬ್ಜೆಕ್ಟ್‌ ಫೇಲ್ ಆಗಿದ್ದಕ್ಕೆ ಕೆರೆಗೆ ಹಾರಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

Self Harming: ಎಂಜಿನಿಯರಿಂಗ್‌ 3ನೇ ವರ್ಷದಲ್ಲಿ ಎರಡು ವಿಷಯಗಳಲ್ಲಿ ಅನುತ್ತೀರ್ಣವಾಗಿರುವುದು ತಂದೆಗೆ ತಿಳಿಯುತ್ತದೆ ಎಂದು ಹೆದರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಂಗಳೂರಿನ ಹೊರವಲಯದ ಜಿಗಣಿಯಲ್ಲಿ ನಡೆದಿದೆ.

VISTARANEWS.COM


on

Self Harming
Koo

ಆನೇಕಲ್: ಎರಡು ಸಬ್ಜೆಕ್ಟ್‌ ಫೇಲ್‌ ಆಗಿರುವುದು ಪೋಷಕರಿಗೆ ತಿಳಿಯುತ್ತದೆ ಎಂದು ಹೆದರಿ, ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Self Harming) ನಗರ ಹೊರವಲಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದಿದೆ.

ಬಿಹಾರ ಮೂಲದ ಹೇಮಲತಾ ಪಾಂಡೆ, ವಿಜಯ್ ಶಂಕರ್ ಪಾಂಡೆ ದಂಪತಿ ಪುತ್ರ ಅಮೃತೇಶ್ ಪಾಂಡೆ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ವಿದ್ಯಾರ್ಥಿಯ ಕುಟುಂಬ ಕೆಲ ವರ್ಷಗಳ ಹಿಂದೆ ಜಿಗಣಿಗೆ ಬಂದು ನೆಲೆಸಿತ್ತು. ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕೆಂದು ಕನಸು ಕಂಡಿದ್ದ ಪೋಷಕರು, ಮೈಸೂರು ರಸ್ತೆಯ ಆರ್.ವಿ. ಕಾಲೇಜಿಗೆ ಸೇರಿಸಿದ್ದರು.

ಆರ್.ವಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಅಮೃತೇಶ್, ಹಾಸ್ಟೆಲ್‌ನಿಂದ ಕಾಲೇಜಿಗೆ ಹೋಗಿ ಬರುತ್ತಿದ್ದ. ಆದರೆ, ಮೂರನೇ ವರ್ಷದಲ್ಲಿ ಎರಡು ವಿಷಯ ಫೇಲ್ ಆಗಿ, ಸರಿಯಾಗಿ ಕಾಲೇಜಿಗೂ ಹೋಗುತ್ತಿರಲಿಲ್ಲ. ಚುನಾವಣೆಗೆ ಮತ ಹಾಕಲು ಜಿಗಣಿಗೆ ಬಂದಿದ್ದ ಅಮೃತೇಶ್, ಫೇಲ್ ಆಗಿರುವ ವಿಚಾರ ತಂದೆಗೆ ತಿಳಿಯುತ್ತದೆ ಎಂದು ಹೆದರಿಕೊಂಡಿದ್ದ. ಕಾಲೇಜಿನವರು ಪೋನ್ ಮಾಡುತ್ತಾರೆ ಎಂದು ತಂದೆ ಫೋನ್‌ನಲ್ಲಿದ್ದ ನಂಬರ್‌ಗಳನ್ನು ಬ್ಲಾಕ್ ಮಾಡಿದ್ದ.

ಇದನ್ನೂ ಓದಿ | Murder Case : ಪತಿಯ ಡೆಡ್ಲಿ ಅಟ್ಯಾಕ್‌ಗೆ ಪತ್ನಿ ಸಾವು; ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

ಇತ್ತೀಚೆಗೆ ಆರನೇ ಸೆಮಿಸ್ಟರ್‌ಗೆ ಆಡ್ಮಿಷನ್ ಮಾಡಿ ಕಾಲೇಜಿಗೆ ಬಿಟ್ಟು ಬರುತ್ತೀನಿ ಎಂದು ತಂದೆ ಹೇಳಿದ್ದರು. ಆದರೆ, ತಂದೆ ಜತೆ ಕಾಲೇಜಿಗೆ ಹೋದರೆ ಫೇಲ್ ಆದ ವಿಚಾರ ತಿಳಿಯುತ್ತದೆ ಎಂದು ಹೆದರಿದ್ದ ವಿದ್ಯಾರ್ಥಿ, ಮೇ 10ರಂದು ಮನೆಯಿಂದ ಹೊರಗೆ ಹೋಗಿದ್ದ. ಇದರಿಂದ ಎಲ್ಲೆಡೆ ಆತನಿಗಾಗಿ ಪೋಷಕರು ಹುಡುಕಾಟ ನಡೆಸಿದ್ದರು. ಆದರೆ, ಶನಿವಾರ ಜಿಗಣಿ ಕೆರೆಯಲ್ಲಿ ವಿದ್ಯಾರ್ಥಿಯ ಮೃತದೇಹ ದೊರೆತಿದೆ. ಕೂಡಲೇ ಜಿಗಣಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಹೀಗಾಗಿ ಮೃತದೇಹವನ್ನು ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆರೆಯಲ್ಲಿ ಈಜುವ ಸವಾಲು; ಜೋಶ್‌ನಲ್ಲಿ ನೀರಿಗೆ ಇಳಿದ ಟೆಕ್ಕಿ ಮೃತ್ಯು

Drowned in water

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ವಾಟದಹೊಸಳ್ಳಿ ಕೆರೆಯಲ್ಲಿ ಈಜಲು ಹೋದ ಟೆಕ್ಕಿ ನೀರಲ್ಲಿ (Drowned in water) ಮುಳುಗಿ ಮೃತಪಟ್ಟಿದ್ದಾರೆ. ನಿನ್ನೆ ಶನಿವಾರ ಮಧ್ಯಾಹ್ನ ನೀರಿನಲ್ಲಿ ಮುಳುಗಿ ವಿನಯ್ ರಮೇಶ್ (42) ಎಂಬುವವರು ಮೃತಪಟ್ಟಿದ್ದರು. ಅಗ್ನಿಶಾಮಕ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಭಾನುವಾರ ಟೆಕ್ಕಿ ಮೃತದೇಹವು ಪತ್ತೆಯಾಗಿದೆ.

ಬೆಂಗಳೂರಿನ ಇಂದಿರಾನಗರ ನಿವಾಸಿಯಾದ ವಿನಯ್ ರಮೇಶ್, ಐದು ಜನ ಸ್ನೇಹಿತರೊಟ್ಟಿಗೆ ಕೆರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಕೆಲವರು ಈ ದಡದಿಂದ ಆ ದಡಕ್ಕೆ ಯಾರು ಮೊದಲು ಈಜಿಕೊಂಡು ಬರುತ್ತಾರೆ ನೋಡೋಣಾ ಎಂದು ಸವಾಲು ಹಾಕಿಕೊಂಡಿದ್ದಾರೆ. ಈ ಚಾಲೆಂಜ್‌ ಅನ್ನು ಸ್ವೀಕರಿಸಿದ ರಮೇಶ್‌ ಜೋಶ್‌ನಲ್ಲಿ ನೀರಿಗೆ ಇಳಿದಿದ್ದಾರೆ. ಆದರೆ ವಿನಯ್ ರಮೇಶ್ ವಾಪಸ್ ಬಂದಿರಲಿಲ್ಲ.

ಹೀಗಾಗಿ ಜತೆಗೆ ಇದ್ದ ಸ್ನೇಹಿತರು ಗಾಬರಿಯಾಗಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ವಿನಯ್‌ ರಮೇಶ್‌ ವಿಮಾನದಲ್ಲಿ ಚೆನ್ನೈ ನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ನೇರವಾಗಿ ಸ್ನೇಹಿತರೊಟ್ಟಿಗೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ನಿರಂತರ ಪ್ರಯಾಣದಿಂದ ಬಳಲಿದ್ದ ವಿನಯ್ ಈಜಲು ಕೆರೆಗೆ ಇಳಿದಾಗ ಸುಸ್ತಾಗಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ | Vijayapura News: ಮೀನುಗಳ ಮಾರಣ ಹೋಮ; ಬಿಸಿಲ ತಾಪಕ್ಕೆ 17 ಸಾವಿರ ಮತ್ಸ್ಯಗಳ ಸಾವು

ಈಜುವ ಚಾಲೆಂಜ್ ವಿನಯ್ ರಮೇಶ್‌ಗೆ ಮುಳುವಾಯ್ತಾ ಎಂಬ ಪ್ರಶ್ನೆ ಕಾಡುತ್ತಿದೆ. 24 ಗಂಟೆ ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಕೆರೆಯಿಂದ ಹೊರಗೆ ತಂದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Continue Reading
Advertisement
IPL 2024
ಪ್ರಮುಖ ಸುದ್ದಿ4 mins ago

IPL 2024 : ಡೆಲ್ಲಿ ವಿರುದ್ಧ ಆರ್​​ಸಿಬಿ 47 ರನ್ ಗೆಲುವು, ಪ್ಲೇಆಫ್​ಗೆ ಇನ್ನೊಂದು ಗೆಲುವು ಬೇಕು

Chetan Chandra
ಕರ್ನಾಟಕ52 mins ago

Chetan Chandra: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಹಲ್ಲೆ; ರಕ್ತ ಬರುವಂತೆ ಥಳಿತ

Virat kohli
Latest1 hour ago

Virat kohli: ಅಂಪೈರ್​ಗಳ ಜತೆ ಮತ್ತೆ ಜಗಳವಾಡಿದ ವಿರಾಟ್​ ಕೊಹ್ಲಿ; ಇಲ್ಲಿದೆ ವಿಡಿಯೊ

Sunil Narine
ಪ್ರಮುಖ ಸುದ್ದಿ1 hour ago

Sunil Narine : ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದು ಎಲೈಟ್​ ಪಟ್ಟಿ ಸೇರಿದ ಸುನೀಲ್ ನರೈನ್​

vijay Rao herur
ಸಿನಿಮಾ1 hour ago

Vijay Rao Herur: ‘ವಿಜಯದಾಸರು’ ಚಿತ್ರದ ಸಹ ನಟ ವಿಜಯ್‌ ರಾವ್ ಹೇರೂರು ವಿಧಿವಶ

Virat Kohli
ಪ್ರಮುಖ ಸುದ್ದಿ2 hours ago

Virat kohli: ಕೊಹ್ಲಿಯನ್ನುಔಟ್ ಮಾಡಿ ಕೆಣಕಿದ ಇಶಾಂತ್​ ಶರ್ಮಾ; ವಿಡಿಯೊ ನೋಡಿ

Ravindra Jadeja
ಕ್ರೀಡೆ2 hours ago

Ravindra Jadeja : ವಿಕೆಟ್​ಗೆ ಹೋಗುತ್ತಿದ್ದ ಚೆಂಡು ತಡೆದ ಜಡೇಜಾಗೆ ಔಟ್ ಕೊಟ್ಟ ಅಂಪೈರ್​; ಇಲ್ಲಿದೆ ವಿಡಿಯೊ

Rain News
ಕರ್ನಾಟಕ2 hours ago

Rain News: ಬಾಗಲಕೋಟೆಯಲ್ಲಿ ಸಿಡಿಲಿಗೆ ಬಾಲಕ ಬಲಿ; ಬೆಳಗಾವಿಯ ಮನೆಗಳಿಗೆ ನುಗ್ಗಿದ ಮಳೆ ನೀರು

IPL 2024
ಪ್ರಮುಖ ಸುದ್ದಿ2 hours ago

IPL 2024 : ಅತಿಯಾಗಿ ಸಂಭ್ರಮಿಸುತ್ತಿದ್ದ ಡೆಲ್ಲಿ ಬೌಲರ್​ ರಸಿಕ್ ಸಲಾಮ್​ನನ್ನು ತಳ್ಳಿದ ರಜತ್​ ಪಾಟೀದಾರ್​

IPL 2024
Latest2 hours ago

IPL 2024 : ಸಿಎಸ್​ಕೆ ವರ್ಸಸ್​ ಆರ್​ಆರ್​ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯಿತಾ? ಅಭಿಮಾನಿಗಳ ಅನುಮಾನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case I was never kidnapped and son has made a false complaint Video of victim goes viral
ಕ್ರೈಂ5 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ6 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ6 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ10 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ11 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ19 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

ಟ್ರೆಂಡಿಂಗ್‌