Brazil Riots | ಬ್ರೆಜಿಲ್​​ನಲ್ಲಿ ದೊಡ್ಡ ಮಟ್ಟದ ದಂಗೆ; ಅಧ್ಯಕ್ಷರ ಭವನ, ಸುಪ್ರೀಂಕೋರ್ಟ್​ಗೆ ಪ್ರತಿಭಟನಾಕಾರರ ಲಗ್ಗೆ - Vistara News

ವಿದೇಶ

Brazil Riots | ಬ್ರೆಜಿಲ್​​ನಲ್ಲಿ ದೊಡ್ಡ ಮಟ್ಟದ ದಂಗೆ; ಅಧ್ಯಕ್ಷರ ಭವನ, ಸುಪ್ರೀಂಕೋರ್ಟ್​ಗೆ ಪ್ರತಿಭಟನಾಕಾರರ ಲಗ್ಗೆ

ಈಗಿನ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಸುದ್ದಿಗೋಷ್ಠಿ ನಡೆಸಿ, ಜೈರ್​ ಬೋಲ್ಸನಾರೋ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ

VISTARANEWS.COM


on

Bolsonaro Supporters protest in Brazil
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬ್ರೆಜಿಲ್​​ನಲ್ಲಿ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಬೆಂಬಲಿಗರು ದೊಡ್ಡಮಟ್ಟದಲ್ಲಿ ದಂಗೆ ನಡೆಸುತ್ತಿದ್ದಾರೆ. ಬಲಪಂಥೀಯರಾಗಿದ್ದ ಜೈರ್​ ಬೋಲ್ಸನಾರೋ ಅವರು 2019ರಿಂದ 2022ರವರೆಗೆ ಬ್ರೆಜಿಲ್​ ಅಧ್ಯಕ್ಷರಾಗಿದ್ದರು. ಈ ಸಲದ ಚುನಾವಣೆಯಲ್ಲಿ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ವಿರುದ್ಧ ಸೋತಿದ್ದಾರೆ. 2023ರ ಜನವರಿ 1ರಂದು ಲೂಯಿಜ್​ ಇನಾಸಿಯೊ ಅವರು ಬ್ರೆಜಿಲ್​ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನವನ್ನೂ ಸ್ವೀಕಾರ ಮಾಡಿದ್ದಾರೆ. ಆದರೆ ಎಡಪಂಥೀಯರಾಗಿರುವ ಲೂಯಿಜ್​ ಆಡಳಿತವನ್ನು ಮತ್ತು ಜೈರ್​ ಬೋಲ್ಸನಾರೋ ಅವರ ಸೋಲನ್ನು ಒಪ್ಪಿಕೊಳ್ಳಲು ಅವರ ಬೆಂಬಲಿಗರು ಸಿದ್ಧರಿಲ್ಲ. ತತ್ಪರಿಣಾಮ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಜೈರ್​ ಬೋಲ್ಸನಾರೋ ಅವರ ಸುಮಾರು 3000 ಬೆಂಬಲಿಗರು ಹಸಿರು-ಹಳದಿ ಬಣ್ಣದ ಉಡುಪು ಧರಿಸಿ, ಕೈಯಲ್ಲಿ ಲಿಬರಲ್​ ಪಾರ್ಟಿ ಬಾವುಟ ಹಿಡಿದು ಬ್ರೆಜಿಲ್​ ಸಂಸತ್​ ಭವನ, ಅಧ್ಯಕ್ಷರ ಭವನ ಮತ್ತು ಸುಪ್ರೀಂಕೋರ್ಟ್​​ಗೆ ನುಗ್ಗಿದ್ದಾರೆ. ಪೊಲೀಸರು ಹಾಕಿದ್ದ ಬ್ಯಾರಿಕೇಡ್​ಗಳನ್ನೆಲ್ಲ ಧ್ವಂಸ ಮಾಡಿದ್ದಾರೆ. ಸರ್ಕಾರಿ ಭವನಗಳನ್ನು ಹಾನಿಗೊಳಿಸುತ್ತಿದ್ದಾರೆ. ಈವರೆಗೆ ಪೊಲೀಸರು ಸುಮಾರು 300 ಪ್ರತಿಭಟನಾಕಾರರನ್ನು ಬಂಧಿಸಿದ್ದಾಗಿ ತಿಳಿಸಿದ್ದಾರೆ. ಪ್ರತಿಭಟನಾಕಾರರ ನಿಯಂತ್ರಣಕ್ಕೆ ಬ್ರೆಜಿಲ್​ ಸೇನಾ ಸಿಬ್ಬಂದಿ ಆಗಮಿಸಿದ್ದಾರೆ. ಅಶ್ರುವಾಯು ಪ್ರಯೋಗ ನಿರಂತರವಾಗಿ ನಡೆಯುತ್ತಿದೆ.

ಇನ್ನು ಈ ದಂಗೆಯನ್ನು ಮಾಜಿ ಅಧ್ಯಕ್ಷ ಜೈರ್​ ಬೋಲ್ಸನಾರೋ ಅವರೂ ಖಂಡಿಸಿದ್ದಾರೆ. ಹಾಗೇ, ಈಗಿನ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಸುದ್ದಿಗೋಷ್ಠಿ ನಡೆಸಿ, ಜೈರ್​ ಬೋಲ್ಸನಾರೋ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶದ ಪ್ರಮುಖ ಸರ್ಕಾರಿ ಭವನಗಳ ಭದ್ರತೆಗೇ ದಕ್ಕೆ ಎದುರಾಗಿದೆ ಎಂದು ಹೇಳಿದ್ದಾರೆ. ಹಾಗೇ, ನಿಯೋಜಿಸಲಾದ ಸೇನಾ ಸಿಬ್ಬಂದಿಯನ್ನು ಜನವರಿ 31ರವರೆಗೂ ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಬ್ರೆಜಿಲ್​ ದಂಗೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಖಂಡಿಸಿದ್ದಾರೆ. ಬ್ರೆಜಿಲ್​ನಲ್ಲಿ ಕಾನೂನುಬದ್ಧವಾಗಿಯೇ ಚುನಾವಣೆ ನಡೆದು, ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಆಗಿದೆ. ಇಷ್ಟಾದ ಮೇಲೆ ಹೀಗೆ ದಂಗೆ-ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವದ ಮೇಲೆ ಆಕ್ರಮಣ ಮಾಡಿದಂತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Lanka on fire: ಜು. 13ರಂದು ರಾಜಪಕ್ಸ ಪದತ್ಯಾಗ, ಉಗ್ರ ಪ್ರತಿಭಟನೆ ಬಳಿಕ ಈಗ ಸಂಭ್ರಮಾಚರಣೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Russia-Ukraine War: ಕೆಲಸ ಕೊಡಿಸ್ತೇವೆ ಅಂತಾ ಸೇನೆಗೆ ತಳ್ಳಿದ್ರು..ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಭಾರತೀಯ ಯುವಕ ಸಾವು

Russia-Ukraine War:ಉಕ್ರೇನ್‌ ವಿರುದ್ಧ ಹೋರಾಡಲು ರಷ್ಯಾದ ಸೇನೆಯಿಂದ ಕಳುಹಿಸಲ್ಪಟ್ಟ ರವಿ ಮೌನ್ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. ಇನ್ನು ಈ ವಿಚಾರವನ್ನು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ ಎಂದು ಅವರ ಸಹೋದರ ಅಜಯ್ ಮೌನ್ ಹೇಳಿದ್ದಾರೆ. ಹರಿಯಾಣದ ಕೈತಾಲ್ ಜಿಲ್ಲೆಯ ಮತ್ತೂರ್ ಗ್ರಾಮದವರಾದ ರವಿಮೌನ್ ಜನವರಿ 13 ರಂದು ಡ್ರೈವರ್‌ ಕೆಲಸಕ್ಕಾಗಿ ರಷ್ಯಾಕ್ಕೆ ಹೋಗಿದ್ದರು ಎನ್ನಲಾಗಿದೆ.

VISTARANEWS.COM


on

Russia Ukraine War
Koo

ನವದೆಹಲಿ: ಭಾರತೀಯ ಯುವಕರನ್ನು ಬಲವಂತವಾಗಿ ರಷ್ಯಾ ಸೇನೆ(Russia Army)ಗೆ ಸೇರಿಸಿಕೊಳ್ಳುತ್ತಿರುವ ಪ್ರಕರಣ ಬಹುದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಉಕ್ರೇನ್‌ ವಿರುದ್ಧದ ಯುದ್ಧ(Russia-Ukraine War)ದಲ್ಲಿ ಭಾರತೀಯ ಯುವಕನೋರ್ವ ಪ್ರಾಣ ಕಳೆದುಕೊಂಡಿದ್ದಾನೆ. ಇನ್ನು ಸಾವನ್ನಪ್ಪಿರುವ ಯುವಕನನ್ನು 22 ವರ್ಷದ ಹರಿಯಾಣ ಮೂಲದ ರವಿ ಮೌನ್‌ ಎಂದು ಗುರುತಿಸಲಾಗಿದೆ.

ಉಕ್ರೇನ್‌ ವಿರುದ್ಧ ಹೋರಾಡಲು ರಷ್ಯಾದ ಸೇನೆಯಿಂದ ಕಳುಹಿಸಲ್ಪಟ್ಟ ರವಿ ಮೌನ್ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. ಇನ್ನು ಈ ವಿಚಾರವನ್ನು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ ಎಂದು ಅವರ ಸಹೋದರ ಅಜಯ್ ಮೌನ್ ಹೇಳಿದ್ದಾರೆ. ಹರಿಯಾಣದ ಕೈತಾಲ್ ಜಿಲ್ಲೆಯ ಮತ್ತೂರ್ ಗ್ರಾಮದವರಾದ ರವಿಮೌನ್ ಜನವರಿ 13 ರಂದು ಡ್ರೈವರ್‌ ಕೆಲಸಕ್ಕಾಗಿ ರಷ್ಯಾಕ್ಕೆ ಹೋಗಿದ್ದರು ಎನ್ನಲಾಗಿದೆ.

ಕೆಲಸ ಕೊಡಿಸೋದಾಗಿ ಏಜೆಂಟ್‌ ಒಂದು ನಂಬಿಸಿ ರವಿ ಅವರನ್ನು ರಷ್ಯಾಗೆ ಕಳುಹಿಸಿತ್ತು. ಆದರೆ ಅಲ್ಲಿ ಅವರನ್ನು ಬಲವಂತವಾಗಿ ಮಿಲಿಟರಿ ಹಾಕಲಾಯಿತು ಎಂದು ಅವರ ಸಹೋದರ ಹೇಳಿದ್ದಾರೆ. ಅಜಯ್ ಮೌನ್ ಜುಲೈ 21 ರಂದು ತನ್ನ ಸಹೋದರನ ಇರುವಿಕೆಯ ಮಾಹಿತಿಯನ್ನು ಕೋರಿ ರಾಯಭಾರ ಕಚೇರಿಗೆ ಪತ್ರ ಬರೆದಿದ್ದರು. ಅದಕ್ಕೆ ಉತ್ತರವಾಗಿ ನಿಮ್ಮ ಸೋದರ ಸತ್ತಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ ಎಂದು ಅವರು ಹೇಳಿದರು. ಮೃತದೇಹವನ್ನು ಗುರುತಿಸಲು ಡಿಎನ್‌ಎ ಪರೀಕ್ಷೆಯ ವರದಿಯನ್ನು ಕಳುಹಿಸುವಂತೆ ರಾಯಭಾರ ಕಚೇರಿಯು ಕೇಳಿಕೊಂಡಿದೆ ಎಂದು ಕುಟುಂಬ ತಿಳಿಸಿದೆ.

ಕೆಲಸಕ್ಕೆಂದು ಹೋದವನು ಹೆಣವಾಗಿ ವಾಪಾಸ್‌

ರವಿ ಸಾವಿನಿಂದ ಅವರ ಕುಟುಂಬ ಸಂಪೂರ್ಣವಾಗಿ ಕಂಗಾಲಾಗಿದೆ. ಅಜಯ್‌ ಮೌನ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರವಿ ಜನವರಿ 13 ರಂದು ರಷ್ಯಾಕ್ಕೆ ಹೋಗಿದ್ದರು. ಒಬ್ಬ ಏಜೆಂಟ್ ಅವರನ್ನು ಸಾರಿಗೆ ಕೆಲಸಕ್ಕಾಗಿ ರಷ್ಯಾಕ್ಕೆ ಕಳುಹಿಸಿದರು. ಆದರೆ, ಅವರನ್ನು ರಷ್ಯಾದ ಸೈನ್ಯಕ್ಕೆ ಸೇರಿಸಲಾಯಿತು. ಉಕ್ರೇನಿಯನ್ ಪಡೆಗಳ ವಿರುದ್ಧ ಹೋರಾಡಲು ಮುಂಚೂಣಿಗೆ ಹೋಗುವಂತೆ ರಷ್ಯಾದ ಸೈನ್ಯವು ತನ್ನ ಸಹೋದರನನ್ನು ಕೇಳಿದೆ. ಇಲ್ಲವಾದರೆ 10 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಹೆದರಿಸಿದ್ದಾರೆ ಎಂದು ಅಜಯ್ ಮೌನ್ ಆರೋಪಿಸಿದರು. ನಾವು ಮಾರ್ಚ್ 12 ರವರೆಗೆ ಸೋದರನ ಜೊತೆ ಸಂಪರ್ಕದಲ್ಲಿದ್ದೆವು. ಆತ ಸಾಕಷ್ಟು ಬೇಸರದಲ್ಲಿದ್ದ ಎಂದು ಅಜಯ್ ಮೌನ್ ಹೇಳಿದ್ದಾರೆ.

ರಷ್ಯಾ ಮಿಲಿಟರಿಗೆ ಸೇರ್ಪಡೆಗೊಂಡ ಭಾರತೀಯ ಪ್ರಜೆಗಳನ್ನು ಶೀಘ್ರ ಬಿಡುಗಡೆ ಮತ್ತು ವಾಪಸಾತಿಯನ್ನು ಖಚಿತಪಡಿಸಿಕೊಳ್ಳುವ ಭಾರತದ ಬೇಡಿಕೆಯನ್ನು ರಷ್ಯಾ ಒಪ್ಪಿಕೊಂಡ ಕೆಲವು ದಿನಗಳ ನಂತರ ಈ ಸುದ್ದಿ ಬಂದಿದೆ ಎಂದಿದ್ದಾರೆ. ಇನ್ನು ರವಿ ಮೌನ್‌ ಅವರ ಪಾರ್ಥೀವ ಶರೀರವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಅವರ ಕುಟುಂಬಸ್ಥರು ಪ್ರಧಾನಿ ನರೇಂದ್ರ ಮೋದಿಯವರನ್ನು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Business Ideas: 20 ದೇಶಗಳಿಗೆ ಮಣ್ಣಿನ ಪಾತ್ರೆಗಳ ರಫ್ತು; ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಿದೆ ಈ ಕುಟುಂಬ!

Continue Reading

ವೈರಲ್ ನ್ಯೂಸ್

Viral News: ಮನೆಯೊಳಗೆ ವಿಚಿತ್ರ ವಾಸನೆ, ಇಡೀ ಕುಟುಂಬ ಅಸ್ವಸ್ಥ; ರಹಸ್ಯ ಕೆಮೆರಾದಲ್ಲಿತ್ತು ಶಾಕಿಂಗ್‌ ದೃಶ್ಯ!

ಮಗುವಿನೊಂದಿಗೆ ಗಂಡ, ಹೆಂಡತಿ ರಜೆ ಮುಗಿಸಿ ಮನೆಗೆ ಬಂದ ಮೇಲೆ ಅಸಾಮಾನ್ಯ ತೊಂದರೆಗಳನ್ನು ಎದುರಿಸಿದರು. ಎಲ್ಲರೂ ಅನಾರೋಗ್ಯಕ್ಕೆ ಒಳಗಾದರು. ಎಲ್ಲರ ತಲೆ ಕೂದಲು ಉದುರತೊಡಗಿತು. ಮನೆಯೊಳಗೆ ವಿಚಿತ್ರ ವಾಸನೆಯಿಂದ ಅವರು ಗಾಬರಿಗೊಂಡರು. ಇದಕ್ಕೆ ಕಾರಣ ಏನಿರಬಹುದು ಎಂದು ಹುಡುಕಲು ಹೊರಟವರು ಸಿಸಿಟಿವಿ ದೃಶ್ಯಗಳನ್ನು (cctv footage) ನೋಡಿ ದಂಗಾದರು.

VISTARANEWS.COM


on

By

Viral News
Koo

ರಜೆ ಮುಗಿಸಿ ಮನೆಗೆ ಹಿಂತಿರುಗಿದ ಕುಟುಂಬವೊಂದು ಅನಾರೋಗ್ಯಕ್ಕೆ ಈಡಾಗಿದ್ದು ಕೂದಲು ಉದುರುವ ವಿಚಿತ್ರ ಸಮಸ್ಯೆಯನ್ನು (Hair Loss problem) ಎದುರಿಸುತ್ತಿತ್ತು. ಗಂಡ, ಹೆಂಡತಿ ಮತ್ತು ಚಿಕ್ಕ ಮಗುವಿನ ಕೂದಲು ಕೂಡ ಉದುರಲಾರಂಭಿಸಿತ್ತು. ಇದಕ್ಕೆ ಕಾರಣ ಏನಿರಬಹುದು ಎಂದು ಹುಡುಕಲು ಹೊರಟವರು ಸಿಸಿಟಿವಿ ದೃಶ್ಯಗಳನ್ನು (cctv footage) ನೋಡಿ ದಂಗಾದರು. ಈ ಸುದ್ದಿ ಇದೀಗ ವೈರಲ್ (Viral News) ಆಗಿದೆ.

ಮಗುವಿನೊಂದಿಗೆ ಗಂಡ, ಹೆಂಡತಿ ರಜೆ ಮುಗಿಸಿ ಮನೆಗೆ ಬಂದ ಮೇಲೆ ವಿಚಿತ್ರ ತೊಂದರೆಗಳನ್ನು ಎದುರಿಸಿದರು. ಎಲ್ಲರೂ ಅನಾರೋಗ್ಯಕ್ಕೆ ಒಳಗಾದರು. ಇಷ್ಟು ಮಾತ್ರವಲ್ಲ ಮನೆಯೊಳಗೆ ವಿಚಿತ್ರ ವಾಸನೆಯಿಂದ ಅವರು ಗಾಬರಿಗೊಂಡರು. ಇದರೊಂದಿಗೆ ಮನೆಯವರೆಲ್ಲರ ಕೂದಲು ಉದುರುವಿಕೆ ಪ್ರಾರಂಭವಾಯಿತು. ಮನೆಯನ್ನು ಸಂಪೂರ್ಣ ಹುಡುಕಾಡಿದರೂ ಅವರಿಗೆ ಏನೂ ಸಿಗಲಿಲ್ಲ. ಅಂತಿಮವಾಗಿ ಬಾಗಿಲಿನ ಬಳಿ ಹಿಡನ್ ಕೆಮೆರಾವನ್ನು ಅಳವಡಿಸಿದರು. ಬಳಿಕ ಅದರಲ್ಲಿ ಅವರಿಗೆ ನೆರೆಯ ನಿವಾಸಿಗಳ ಅನುಮಾನಾಸ್ಪದ ಚಟುವಟಿಕೆ ಕಂಡು ಬಂತು.

Viral News
Viral News


ಅಮೆರಿಕದ ಫ್ಲೋರಿಡಾದ ಉಮರ್ ಮತ್ತು ಸಮೀರಾ ದಂಪತಿ ಮಗುವಿನೊಂದಿಗೆ ರಜೆಯಿಂದ ಹಿಂದಿರುಗಿದಾಗ ಈ ಸಸ್ಯೆ ಪ್ರಾರಂಭವಾಗಿತ್ತು. ಎಲ್ಲಿ, ಏನು ತಪ್ಪಾಗಿದೆ ಎಂದು ಅವರು ಹುಡುಕಲು ಪ್ರಾರಂಭಿಸಿದಾಗ ಭಿನ್ನವಾದ ವಿಚಿತ್ರ ಎನಿಸುವ ವಾಸನೆಯನ್ನು ಪತ್ತೆಹಚ್ಚಿದರು. ಈ ವಾಸನೆಯ ಮೂಲವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದರು.

ಗುಪ್ತ ಕೆಮೆರಾವನ್ನು ಅಳವಡಿಸಿ ವಾಸನೆಯನ್ನು ತೊಡೆದುಹಾಕಲು ಪ್ರಯತ್ನಿಸತೊಡಗಿದ ದಂಪತಿ ಮನೆಯ ಪ್ರತಿಯೊಂದು ಕಿಟಕಿಗಳನ್ನೂ ತೆರೆದರು. ಈ ಸಮಯದಲ್ಲಿ ಅವರ ಚಿಕ್ಕ ಮಗಳ ಆರೋಗ್ಯವು ಕ್ಷೀಣಿಸಿತು. ಅವಳು ನಿರಂತರವಾಗಿ ಅಳಲು ಶುರು ಮಾಡಿದಳು. ತಿನ್ನಲು ನಿರಾಕರಿಸಿದಳು.

ಉಮರ್ ಮತ್ತು ಸಮೀರಾ ಅವರಿಗೂ ತಲೆನೋವು ಕಾಣಿಸಿಕೊಂಡಿತು. ಮಗಳ ತಲೆಯಿಂದ ಗಮನಾರ್ಹ ಪ್ರಮಾಣದ ಕೂದಲನ್ನು ಕಳೆದುಕೊಂಡಿರುವುದನ್ನು ಉಮರ್ ಗಮನಿಸಿದರು. ಬಳಿಕ ಉಮರ್ ಅವರ ಕೂದಲು ಉದುರುವಿಕೆ ಪ್ರಾರಂಭವಾಯಿತು. ಮೂವರೂ ಹಾಸಿಗೆಯಲ್ಲೇ ಕಳೆಯುವಷ್ಟರ ಮಟ್ಟಿಗೆ ಅವರ ಪರಿಸ್ಥಿತಿ ಹದಗೆಟ್ಟಿತು. ಹೀಗಾಗಿ ಅವರು ವೈದ್ಯಕೀಯ ಸಹಾಯವನ್ನು ಕೋರಿದರು ಮತ್ತು ಮನೆ ಮಾಲೀಕರಿಗೆ ಮಾಹಿತಿ ನೀಡಿದರು. ಆದರೆ ಯಾವುದೇ ಪರಿಹಾರ ಸಿಗಲಿಲ್ಲ.

Viral News
Viral News


ಬಳಿಕ ಬಾಗಿಲ ಬಳಿ ಅಳವಡಿಸಿದ್ದ ಕೆಮೆರಾವನ್ನು ಪರೀಕ್ಷಿಸಿದಾಗ ನೆರೆಹೊರೆಯವರಾದ 36 ವರ್ಷದ ಚೀನೀ ಪ್ರಜೆ ಲಿ ಬಾಗಿಲಿನ ಮೂಲಕ ದ್ರವ ಪದಾರ್ಥವನ್ನು ಎಸೆಯುತ್ತಿರುವುದನ್ನು ಕಂಡು ಬಂತು.


ಈ ವಸ್ತುವು ಮೆಥಡೋನ್, ಹೈಡ್ರೊಕೊಡೋನ್ ಮತ್ತು ಮತ್ತೊಂದು ಗುರುತಿಸಲಾಗದ ವಿಷಕಾರಿ ಅಂಶವನ್ನು ಒಳಗೊಂಡಿತ್ತು. ಉಮರ್ ಮನೆಯಿಂದ ಬರುವ ಶಬ್ದಗಳ ಕಿರಿಕಿರಿಯಿಂದಾಗಿ ಅವರನ್ನು ಅಲ್ಲಿಂದ ಓಡಿಸಲು ಹೀಗೆ ಮಾಡಿರುವುದಾಗಿ ಲೀ ಹೇಳಿದ್ದಾನೆ.

Viral News
Viral News


ಇದನ್ನೂ ಓದಿ: Viral Video: ಬೀದಿ ನಾಯಿ ದಾಳಿಯಿಂದ ಮಗುವನ್ನು ರಕ್ಷಿಸಿದ ಸಾಕು ನಾಯಿ! ಅಪರೂಪದ ವಿಡಿಯೊ

ಬಳಿಕ ಲಿಯನ್ನು ಅಮೆರಿಕದಿಂದ ಚೀನಾಕ್ಕೆ ಗಡೀಪಾರು ಮಾಡಲಾಯಿತು. ಲಿ ಅಮೆರಿಕಕ್ಕೆ ಹಿಂತಿರುಗಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ನ್ಯಾಯಾಲಯ ನೀಡಿದೆ.

Continue Reading

ಪರಿಸರ

International Tiger Day 2024: 150 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಶೇ. 95ರಷ್ಟು ಕುಸಿತ!

ಜಗತ್ತಿನಲ್ಲಿ ಇಂದು ಶೇ. 97ಕ್ಕಿಂತ ಹೆಚ್ಚು ಸ್ಥಳೀಯ ಹುಲಿಗಳು ಕಣ್ಮರೆಯಾಗಿವೆ. ಇದು ಮೊದಲ ಬಾರಿಗೆ 2010 ರಲ್ಲಿ ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲು (International Tiger Day 2024) ಪ್ರೇರೇಪಿಸಿತ್ತು. ಇದರ ಮುಖ್ಯ ಉದ್ದೇಶ ಹುಲಿಗಳ ಸಂಖ್ಯೆಯಲ್ಲಿ ಇಳಿಮುಖವಾಗುವುದನ್ನು ತಡೆಯುವ ಗುರಿಯನ್ನು ಹೊಂದಿದೆ. ವಿಶೇಷವೆಂದರೆ ಹುಲಿಗಳು ಭಾರತದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿವೆ.

VISTARANEWS.COM


on

By

International Tiger Day 2024
Koo

ವಿನಾಶದ ಅಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗೆ (save tiger) ಜಾಗೃತಿ ಮೂಡಿಸುವ ಸಲುವಾಗಿ (public awareness) ಪ್ರತಿ ವರ್ಷ ಜುಲೈ 29ರಂದು ಅಂತಾರಾಷ್ಟ್ರೀಯ ಹುಲಿ ದಿನವನ್ನು (International Tiger Day 2024) ಆಚರಿಸಲಾಗುತ್ತದೆ. ಹುಲಿ ಸಂರಕ್ಷಣಾ ಪ್ರಯತ್ನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.

ಜಗತ್ತಿನಲ್ಲಿ ಇಂದು ಶೇ. 97ಕ್ಕಿಂತ ಹೆಚ್ಚು ಸ್ಥಳೀಯ ಹುಲಿಗಳು ಕಣ್ಮರೆಯಾಗಿವೆ. ಇದು ಮೊದಲ ಬಾರಿಗೆ 2010ರಲ್ಲಿ ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲು ಪ್ರೇರೇಪಿಸಿತ್ತು. ಇದರ ಮುಖ್ಯ ಉದ್ದೇಶ ಹುಲಿಗಳ ಸಂಖ್ಯೆಯಲ್ಲಿ ಇಳಿಮುಖವಾಗುವುದನ್ನು ತಡೆಯುವ ಗುರಿಯನ್ನು ಹೊಂದಿದೆ. ಅಂತಾರಾಷ್ಟ್ರೀಯ ಹುಲಿ ದಿನವು ಹುಲಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸುವ ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಾಗತಿಕವಾಗಿ ಜಾಗೃತಿ ಮೂಡಿಸುವ ದಿನವಾಗಿದೆ.

International Tiger Day 2024
International Tiger Day 2024


ಭಾರತದಲ್ಲಿ ಹುಲಿಗಳ ಸಂಖ್ಯೆ

2023ರ ಏಪ್ರಿಲ್ ನಲ್ಲಿ ಬಿಡುಗಡೆಯಾದ ಹುಲಿ ಗಣತಿಯ ಪ್ರಕಾರ ಭಾರತದಲ್ಲಿ ಕೇವಲ 3,167 ಹುಲಿಗಳಿವೆ. ಆಘಾತಕಾರಿ ಸಂಗತಿಯೆಂದರೆ ಈ ಸಂಖ್ಯೆಯು ಜಾಗತಿಕ ಹುಲಿ ಜನಸಂಖ್ಯೆಯ ಶೇ. 75ರಷ್ಟಾಗಿದೆ.

ಹುಲಿಯು ಭಾರತದ ರಾಷ್ಟ್ರೀಯ ಪ್ರಾಣಿಯಾಗಿದೆ. ಆದರೆ ಕ್ಷೀಣಿಸುತ್ತಿರುವ ಸಂಖ್ಯೆಯು ಆತಂಕವನ್ನು ಉಂಟು ಮಾಡಿದೆ. ಯಾಕೆಂದರೆ ಹುಲಿಗಳು ಭಾರತದ ಸಾಂಸ್ಕೃತಿಕ ಪರಂಪರೆಯ ಅತ್ಯಗತ್ಯ ಭಾಗವಾಗಿದ್ದು ಅದು ಪರಿಸರ ವ್ಯವಸ್ಥೆಗಳನ್ನು ಸಮತೋಲನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಹುಲಿಗಳ ಸಂಖ್ಯೆ ಕ್ಷೀಣಿಸಲು ಕಾರಣವೇನು?

ಹುಲಿಗಳು ಪ್ರಾಣಿ ಸಾಮ್ರಾಜ್ಯದ ಭವ್ಯ ಜೀವಿಗಳು. ಬಿಳಿ ಹುಲಿ, ರಾಯಲ್ ಬೆಂಗಾಲ್ ಹುಲಿ ಮತ್ತು ಸೈಬೀರಿಯನ್ ಹುಲಿಗಳಂತಹ ಜಾತಿಗಳನ್ನು ಇವು ಒಳಗೊಂಡಿವೆ. ಹವಾಮಾನ ಬದಲಾವಣೆ, ಅಕ್ರಮ ವನ್ಯಜೀವಿ ಮಾರಾಟ ಮತ್ತು ಆವಾಸಸ್ಥಾನದ ನಷ್ಟ ಸೇರಿದಂತೆ ಹಲವಾರು ತೊಂದರೆಗಳು ಅವುಗಳ ಸಂಖ್ಯೆಯಲ್ಲಿ ತ್ವರಿತ ಕುಸಿತಕ್ಕೆ ಕಾರಣವಾಗಿದೆ.

International Tiger Day 2024
International Tiger Day 2024


ಅಂತಾರಾಷ್ಟ್ರೀಯ ಹುಲಿ ದಿನದ ಸಂದೇಶವೇನು?

2024ರ ಜುಲೈ 29ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ. ಹುಲಿ ಸಂರಕ್ಷಣೆ ಮತ್ತು ಈ ಪ್ರಾಣಿಗಳು ಎದುರಿಸುತ್ತಿರುವ ತುರ್ತು ಬೆದರಿಕೆಗಳಾದ ಆವಾಸಸ್ಥಾನದ ನಷ್ಟ, ಬೇಟೆಯಾಡುವುದು ಮತ್ತು ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.

ಹುಲಿಗಳ ಸಂರಕ್ಷಿತ ಪ್ರದೇಶಗಳನ್ನು ವಿಸ್ತರಿಸುವುದು- ಹುಲಿಗಳು ಅಭಿವೃದ್ಧಿ ಹೊಂದಲು ಮತ್ತು ಮುಕ್ತವಾಗಿ ತಿರುಗಾಡಲು ಸುರಕ್ಷಿತ ಆವಾಸಸ್ಥಾನಗಳನ್ನು ಖಚಿತಪಡಿಸಿಕೊಳ್ಳುವುದು, ಸುಸ್ಥಿರ ಜೀವನೋಪಾಯವನ್ನು ಉತ್ತೇಜಿಸುವುದು- ವನ್ಯಜೀವಿಗಳನ್ನು ಸಂರಕ್ಷಿಸುವಾಗ ಆರ್ಥಿಕ ಪ್ರಯೋಜನಗಳನ್ನು ಖಾತರಿಪಡಿಸುವ ಹುಲಿ- ಸ್ನೇಹಿ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ಸ್ಥಳೀಯ ಸಮುದಾಯಗಳನ್ನು ಉತ್ತೇಜಿಸುವ ಥೀಮ್ ಅನ್ನು ಈ ವರ್ಷದ ಅಂತಾರಾಷ್ಟ್ರೀಯ ಹುಲಿ ದಿನ ಹೊಂದಿದೆ.

ಅಂತಾರಾಷ್ಟ್ರೀಯ ಹುಲಿ ದಿನದ ಇತಿಹಾಸ

2010ರಲ್ಲಿ ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ಶೃಂಗಸಭೆಯ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಇದಕ್ಕೆ ವಿಶ್ವದ ಬಹುತೇಕ ರಾಷ್ಟ್ರಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಹುಲಿ ಸಂರಕ್ಷಣೆಗೆ ಮೀಸಲಾಗಿರುವ ಸಂರಕ್ಷಣಾ ಗುಂಪುಗಳು ಬೆಂಬಲವನ್ನು ಸೂಚಿಸಿತ್ತು.

ಹುಲಿಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಲು ಸಂಘಟಿತ ಪ್ರಯತ್ನಗಳ ತುರ್ತು ಅಗತ್ಯವನ್ನು ಗುರುತಿಸಿ ಟೈಗರ್ ರೇಂಜ್ ದೇಶಗಳು ಹುಲಿ ಸಂರಕ್ಷಣೆ ಮತ್ತು ಅದು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಒಂದು ದಿನವನ್ನು ಮೀಸಲಿಡಲು ನಿರ್ಧರಿಸಿದೆ. ಅವರು ಜುಲೈ 29 ಅನ್ನು ಅಂತಾರಾಷ್ಟ್ರೀಯ ಹುಲಿ ದಿನಕ್ಕಾಗಿ ಆಯ್ಕೆ ಮಾಡಿದರು. ಇದು ಶೃಂಗಸಭೆಯ ಮೊದಲ ಮತ್ತು ಕೊನೆಯ ದಿನಗಳ ನಡುವಿನ ಮಧ್ಯಭಾಗವನ್ನು ಗುರುತಿಸುತ್ತದೆ. ಇದು ಹುಲಿಗಳನ್ನು ಉಳಿಸಲು ನಡೆಯುತ್ತಿರುವ ಜಾಗತಿಕ ಪ್ರಯತ್ನವನ್ನು ಸಂಕೇತಿಸುತ್ತದೆ.

International Tiger Day 2024
International Tiger Day 2024


ಅಂತಾರಾಷ್ಟ್ರೀಯ ಹುಲಿ ದಿನಾಚರಣೆ 2024ರ ಮಹತ್ವ

ಹುಲಿಗಳು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಸಾಂಪ್ರದಾಯಿಕ ಪ್ರಾಣಿಯಾಗಿದೆ. ಆದರೆ ಇವುಗಳು ಗಂಭೀರ ಬೆದರಿಕೆಗಳನ್ನು ಎದುರಿಸುತ್ತಿವೆ ಮತ್ತು ಅಂತಾರಾಷ್ಟ್ರೀಯ ಹುಲಿ ದಿನವು ಅವುಗಳ ದುರವಸ್ಥೆಯ ಬಗ್ಗೆ ಜಾಗೃತಿ ಮೂಡಿಸಲು ಮೀಸಲಾಗಿದೆ. ಈ ದಿನದಂದು ಹುಲಿ ಸಂರಕ್ಷಣೆಯ ತುರ್ತು ಅಗತ್ಯವನ್ನು ಒತ್ತಿಹೇಳಲು ಸಮಾಜದ ಎಲ್ಲಾ ವರ್ಗಗಳ ಜನರು ಒಟ್ಟಾಗಿ ಸೇರುತ್ತಾರೆ.

ಇದನ್ನೂ ಓದಿ: Shiradi Landslide: ಹಳಿ ಮೇಲೆ ಭೂಕುಸಿತ, ಬೆಂಗಳೂರು- ಮಂಗಳೂರು ರೈಲುಗಳು 15 ದಿನ ಬಂದ್, 400 ಕಾರ್ಮಿಕರಿಂದ ತೆರವು ಕಾರ್ಯಾಚರಣೆ

ಹುಲಿಗಳ ಬಗೆಗಿನ ಆಸಕ್ತಿದಾಯಕ ಸಂಗತಿಗಳು

  • – ಸುಮಾರು ಎರಡು ಮಿಲಿಯನ್ ವರ್ಷಗಳಿಂದ ಹುಲಿಗಳು ಭೂಮಿ ಮೇಲೆ ಇವೆ.
  • – ಕಳೆದ 150 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಸುಮಾರು ಶೇ. 95ರಷ್ಟು ಕಡಿಮೆಯಾಗಿದೆ.
  • – ಭಾರತವು 3000ಕ್ಕೂ ಹೆಚ್ಚು ಹುಲಿಗಳನ್ನು ಹೊಂದಿದ್ದು, ಇದು ವಿಶ್ವದಲ್ಲೇ ಅತಿ ಹೆಚ್ಚು.
  • – ಹುಲಿಗಳು ಹೆಚ್ಚಾಗಿ ನಿಧಾನವಾಗಿ ಹೆಚ್ಚು ದೂರದವರೆಗೆ ನಡೆಯುತ್ತವೆ.
  • – ಒಂದು ಹುಲಿ ಸಾಮಾನ್ಯವಾಗಿ ರಾತ್ರಿ ಬೇಟೆಯಾಡಲು ಸುಮಾರು 6ರಿಂದ 12 ಮೈಲುಗಳಷ್ಟು ದೂರದವರೆಗೆ ಪ್ರಯಾಣಿಸುತ್ತದೆ.
  • – ಹುಲಿಗಳು ಸಾಮಾನ್ಯವಾಗಿ ತಮ್ಮ ಬೇಟೆಯನ್ನು ಕೊಲ್ಲುವ ಸ್ಥಳದಲ್ಲಿ ತಿನ್ನುವುದಿಲ್ಲ. ಅದನ್ನು ದೂರದವರೆಗೆ ಕೊಂಡು ಹೋಗಿ ಗೌಪ್ಯವಾದ ಪ್ರದೇಶದಲ್ಲಿ ತಿನ್ನುತ್ತದೆ.
Continue Reading

ವಿದೇಶ

Donald Trump: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೂಗಲ್‌ ಹಸ್ತಕ್ಷೇಪ: ರಿಪಬ್ಲಿಕನ್‌ ಪಾರ್ಟಿಯ ಆರೋಪಕ್ಕೆ ಕಾರಣವೇನು?

Donald Trump: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ (US Presidential Election 2024) ದಿನಗಣನೆ ಆರಂಭವಾಗಿದೆ. ಜತೆಗೆ ಜುಲೈ 13ರಂದು ಪ್ರಚಾರದಲ್ಲಿ ಭಾಗಿಯಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇಲೆ ಗುಂಡಿನ ದಾಳಿಯೂ ನಡೆದಿದೆ. ಅವರು ಕೂದಲೆಳೆ ಅಂತರದಿಂದ ಪಾರಾಗಿದ್ದು, ಈ ಬಗ್ಗೆ ಜಗತ್ತಿನಾದ್ಯಂತ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನದ ಬಗೆಗಿನ ಮಾಹಿತಿಯನ್ನು ಸರ್ಚ್‌ ಎಂಜಿನ್‌ ದೈತ್ಯ ಗೂಗಲ್‌ ಮಾಡಿದೆ ಎನ್ನಲಾಗಿದೆ. ಈ ಬಗ್ಗೆ ವ್ಯಾಪಕ ಟೀಕೆ ಕೇಳಿ ಬಂದಿದೆ.

VISTARANEWS.COM


on

Donald Trump
Koo

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ (US Presidential Election)ಗೆ ಇನ್ನು ಕೆಲವೇ ದಿನಗಳಿದ್ದು, ಪ್ರಚಾರದ ಕಾವು ಏರತೊಡಗಿದೆ. ಜತೆಗೆ ಜುಲೈ 13ರಂದು ಪ್ರಚಾರದಲ್ಲಿ ಭಾಗಿಯಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮೇಲೆ ಗುಂಡಿನ ದಾಳಿಯೂ ನಡೆದಿದೆ. ಅವರು ಕೂದಲೆಳೆ ಅಂತರದಿಂದ ಪಾರಾಗಿದ್ದು, ಈ ಬಗ್ಗೆ ಜಗತ್ತಿನಾದ್ಯಂತ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನದ ಬಗೆಗಿನ ಮಾಹಿತಿಯನ್ನು ಸರ್ಚ್‌ ಎಂಜಿನ್‌ ದೈತ್ಯ ಗೂಗಲ್‌ (Google) ಮರೆ ಮಾಡಿದೆ ಎನ್ನಲಾಗಿದೆ. ಈ ಬಗ್ಗೆ ವ್ಯಾಪಕ ಟೀಕೆ ಕೇಳಿ ಬಂದಿದೆ.

ಗೂಗಲ್‌ನಲ್ಲಿ ʼಹತ್ಯೆ ಪ್ರಯತ್ನʼ (the assassination attempt of) ಎಂದು ಟೈಪ್ ಮಾಡಿದಾಗ ಅಮೆರಿಕ ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಜುಲೈ 13ರಂದು ಟ್ರಂಪ್‌ ವಿರುದ್ಧ ನಡೆದ ದಾಳಿಗೆ ಸಂಬಂಧಿಸಿದ ಯಾವುದೇ ಸಲಹೆಗಳನ್ನು ನೀಡುತ್ತಿಲ್ಲ ಎಂದು ಹಲವರು ದೂರಿದ್ದಾರೆ. ಸುಂದರ್ ಪಿಚೈ ನೇತೃತ್ವದ ಟೆಕ್ ಕಂಪನಿ ಉದ್ದೇಶಪೂರ್ವಕವಾಗಿ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಜೂನಿಯರ್ ಮತ್ತು ರಿಪಬ್ಲಿಕನ್‌ ಪಕ್ಷದವರು ಆರೋಪಿಸಿದ್ದಾರೆ.

ಬೃಹತ್‌ ಟೆಕ್ ಕಂಪನಿ ಗೂಗಲ್‌ ಕಮಲಾ ಹ್ಯಾರಿಸ್‌ಗೆ ಸಹಾಯ ಮಾಡಲು ಚುನಾವಣಾ ಹಸ್ತಕ್ಷೇಪ ಮಾಡುತ್ತಿದೆ ಎಂದು ಅನೇಕರು ಆರೋಪಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. “ಟೆಕ್ ಕಂಪನಿ ಕಮಲಾ ಹ್ಯಾರಿಸ್‌ ಅವರಿಗೆ ಸಹಾಯ ಮಾಡಲು ಮತ್ತೆ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿದೆ. ಇದು ಗೂಗಲ್‌ನ ಉದ್ದೇಶಪೂರ್ವಕ ಚುನಾವಣಾ ಹಸ್ತಕ್ಷೇಪ ಎಂದು ನಮಗೆಲ್ಲರಿಗೂ ತಿಳಿದಿದೆ. ನಿಜವಾಗಿಯೂ ಇದು ಖಂಡನೀಯʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫಾಕ್ಸ್ ನ್ಯೂಸ್ ಜಾಗತಿಕ ಬಳಕೆದಾರ ಅನೇಕ ಸ್ಕ್ರೀನ್‌ಶಾಟ್‌ಗಳನ್ನು ಪರಿಶೀಲಿಸಿದೆ. ಗೂಗಲ್‌ನ ಹುಡುಕಾಟದ ಸಲಹೆಗಳು (Google’s search suggestions) ಡೊನಾಲ್ಡ್ ಟ್ರಂಪ್ ಅವರ ಮೇಲೆ ನಡೆದ ಇತ್ತೀಚಿನ ದಾಳಿಯ ಬದಲು ರೊನಾಲ್ಡ್ ರೇಗನ್ ಅವರ ವಿಫಲ ಹತ್ಯೆ ಪ್ರಯತ್ನ, ಆರ್ಚ್ಡ್ಯೂಕ್ ಫರ್ಡಿನಾಂಡ್ ಹತ್ಯೆ, ಬಾಬ್ ಮಾರ್ಲಿಯ ಶೂಟಿಂಗ್‌ ಮತ್ತು ಮಾಜಿ ಅಧ್ಯಕ್ಷ ಜೆರಾಲ್ಡ್ ಫೋರ್ಡ್ ವಿರುದ್ಧದ ವಿಫಲ ಸಂಚಿನಂತಹ ವಿವಿಧ ಘಟನೆಗಳನ್ನು ತೋರಿಸುತ್ತದೆ. ಅಮೆರಿಕ ಉಪಾಧ್ಯಕ್ಷೆ, ಭಾರತ ಮೂಲದ ಕಮಲಾ ಹ್ಯಾರಿಸ್‌ (Kamala Harris) ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಟ್ರಂಪ್‌ ವಿರುದ್ದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಇದೇ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಜೂನಿಯರ್ ಗೂಗಲ್‌ ವಿರುದ್ಧ ಆರೋಪ ಹೊರಿಸಿದ್ದಾರೆ.

ಇದನ್ನೂ ಓದಿ: Kamala Harris: ಅಮೆರಿಕ ಅಧ್ಯಕ್ಷೀಯ ಚುನಾವಣೆ; ಕಮಲಾ ಹ್ಯಾರಿಸ್‌ ಪರ ನಿಂತ ಬರಾಕ್‌ ಒಬಾಮಾ

ಗೂಗಲ್‌ ಪ್ರತಿಕ್ರಿಯೆ

ತನ್ನ ವಿರುದ್ಧ ಕೇಳಿ ಬಂದ ಆರೋಪಕ್ಕೆ ಗೂಗಲ್‌ ಪ್ರತಿಕ್ರಿಯಸಿ, ಸರ್ಚ್‌ ವಿಚಾರರಕ್ಕೆ ಸಂಬಂಧಿಸಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ತಿಳಿಸಿದೆ. ರಾಜಕೀಯ ಹಿಂಸಾಚಾರಕ್ಕೆ ಸಂಬಂಧಿಸಿದ ಸಲಹೆಗಳನ್ನು ನಿಯಂತ್ರಿಸಲು ತಮ್ಮ ವ್ಯವಸ್ಥೆಗಳು ಸುರಕ್ಷತಾ ಕ್ರಮಗಳನ್ನು ಹೊಂದಿವೆ ಎಂದಿದೆ. ಆದಾಗ್ಯೂ, ಜಾನ್ ಎಫ್ ಕೆನಡಿ, ಅಬ್ರಹಾಂ ಲಿಂಕನ್, ರೊನಾಲ್ಡ್ ರೇಗನ್ ಮತ್ತು ಟೆಡ್ಡಿ ರೂಸ್ವೆಲ್ಟ್ ಅವರಂತಹ ಇತರ ರಾಜಕಾರಣಿಗಳ ಮೇಲೆ ಹತ್ಯೆ ಪ್ರಯತ್ನಗಳನ್ನು ಹುಡುಕುವಾಗ ಈ ನೀತಿ ಯಾಕೆ ಅನ್ವಯಿಸುವುದಿಲ್ಲ ಎಂದು ಬಳಕೆದಾರರು ಗಮನ ಸೆಳೆದಿದ್ದಾರೆ.

Continue Reading
Advertisement
WhatsApp Shut down
ದೇಶ15 mins ago

Whatsapp Shutdown: ಭಾರತದಲ್ಲಿ ಇನ್ಮುಂದೆ ಬಂದ್‌ ಆಗುತ್ತಾ ವಾಟ್ಸ್‌ಆಪ್‌? ಕೇಂದ್ರ ಸರ್ಕಾರ ಹೇಳೋದೇನು?

Karnataka Rain
ಮಳೆ16 mins ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

ಮಳೆ23 mins ago

Wayanad Landslide: ಎಲ್ಲೆಂದರಲ್ಲಿ ಮಣ್ಣಿನ ರಾಶಿ: ಕೊಚ್ಚಿ ಹೋದ ಸೇತುವೆ, ರಸ್ತೆ: ವಯನಾಡಿನಲ್ಲಿ ಮೃತರ ಸಂಖ್ಯೆ 70ಕ್ಕೆ ಏರಿಕೆ

Paris Olympics 2024
ಕ್ರೀಡೆ32 mins ago

Paris Olympics 2024: ಶೂಟಿಂಗ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ; ಕಂಚು ಗೆದ್ದ ಮನು ಭಾಕರ್-ಸರಬ್ಜೋತ್‌ ಜೋಡಿ

Mekedatu Project
ಕರ್ನಾಟಕ37 mins ago

Mekedatu Project: ಎಚ್‌ಡಿಕೆ ಅನುಮತಿ ಕೊಡಿಸಿದರೆ ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ಸಿದ್ಧ: ಸಿಎಂ ಸಿದ್ದರಾಮಯ್ಯ

HD Kumaraswamy
ಕರ್ನಾಟಕ1 hour ago

Wayanad Landslide: ಕೇರಳದ ಭೂಕುಸಿತ ದುರಂತಕ್ಕೆ ಶೋಕ ವ್ಯಕ್ತಪಡಿಸಿದ ಕೇಂದ್ರ ಸಚಿವ ಎಚ್‌ಡಿಕೆ

Bharachukki falls
ಚಾಮರಾಜನಗರ1 hour ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

Nawab Malik
ದೇಶ1 hour ago

Nawab Malik:‌ ದಾವೂದ್‌ ಇಬ್ರಾಹಿಂ ಜೊತೆ ನಂಟು ಆರೋಪ ಹೊಂದಿರುವ NCP ನಾಯಕ ನವಾಬ್‌ ಮಲಿಕ್‌ಗೆ ಜಾಮೀನು

SSC Recruitment 2024
ಉದ್ಯೋಗ1 hour ago

SSC Recruitment 2024: 2,006 ಸ್ಟೆನೋಗ್ರಾಫರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ದ್ವಿತೀಯ ಪಿಯುಸಿ ಪಾಸಾದವರು ಅಪ್ಲೈ ಮಾಡಿ

Paris Olympics 2024
ಕ್ರೀಡೆ1 hour ago

Paris Olympics 2024: ಭಾರತ-ಅರ್ಜೆಂಟೀನಾ ಹಾಕಿ ಪಂದ್ಯ ವೀಕ್ಷಿಸಿದ ರಾಹುಲ್​ ದ್ರಾವಿಡ್​

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ16 mins ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 hour ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ20 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ21 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ1 day ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ2 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ3 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಟ್ರೆಂಡಿಂಗ್‌