Britain PM Race | ಇನ್ಫಿ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್‌ ಸೋಲಿಗೆ 10 ಕಾರಣಗಳು - Vistara News

ಪ್ರಮುಖ ಸುದ್ದಿ

Britain PM Race | ಇನ್ಫಿ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್‌ ಸೋಲಿಗೆ 10 ಕಾರಣಗಳು

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿ ಹುದ್ದೆ ರೇಸಿನಲ್ಲಿ(Britain PM Race) ಸೋಲು ಅನುಭವಿಸಿದ್ದಾರೆ. ಮಾಜಿ ವಿದೇಶಾಂಗ ಸಚಿವೆ ಲಿಜ್ ಟ್ರಸ್ ಅವರು ಬ್ರಿಟನ್ ಪ್ರಧಾನಿಯಾಗಲಿದ್ದಾರೆ

VISTARANEWS.COM


on

Rishi Sunak
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
vistara-vishleshane-

ಜಗತ್ತಿನ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರ ಬ್ರಿಟನ್‌ಗೆ ಮಾಜಿ ವಿದೇಶಾಂಗ ಸಚಿವೆ ಲಿಜ್ ಟ್ರಸ್ ಅವರು ಪ್ರಧಾನಿಯಾಗಿ ನೇಮಕವಾಗಲಿದ್ದಾರೆ. ಕನ್ಸರ್ವೇಟಿವ್ ನಾಯಕತ್ವ ಆಯ್ಕೆಯ ಆರಂಭದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ, ಇನ್ಫೋಸಿಸ್ ನಾರಾಯಣಮೂರ್ತಿ ಅವರ ಅಳಿಯ ಹಾಗೂ ಭಾರತೀಯ ಮೂಲದ ರಿಷಿ ಸುನಕ್ ಸೋಲು ಅನುಭಸಿದ್ದಾರೆ! ಅದರೊಂದಿಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಬ್ರಿಟನ್ ಪ್ರಧಾನಿ(Britain PM Race)ಯಾಗುವ ಅವಕಾಶ ಕೈತಪ್ಪಿದೆ.

ಹಾಗಾದರೆ, ಮಾಜಿ ವಿತ್ತ ಸಚಿವ ರಿಷಿ ಸುನಕ್‌ ಅವರ ಸೋಲಿಗೆ ಕಾರಣಗಳೇನು? ಈ ಬಗ್ಗೆ ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳು ನಡೆಯುತ್ತಿವೆ. ಮೇಲ್ನೋಟಕ್ಕೆ ತೆರಿಗೆ ಕಡಿತ ನೀತಿಗೆ ಸಂಬಂಧಿಸಿದಂತೆ ಲಿಜ್ ಟ್ರಸ್ ಸೂಚಿಸಿದ ನೀತಿ ಅವರಿಗೆ ವರದಾನವಾದರೆ, ರಿಷಿ ಸುನಕ್ ಅವರು ನೀಡಿದ ಭರವಸೆ ವಿಶ್ವಾಸವನ್ನು ಮೂಡಿಸಲಿಲ್ಲ. ಪರಿಣಾಮವಾಗಿ ರಿಷಿ ಸೋತರು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಇದೊಂದೇ ಸತ್ಯವಲ್ಲ. ಸೋಲಿನ ಹಲವು ಕಾರಣಗಳ ಪೈಕಿ ಇದು ಒಂದು ಎಂದು ಹೇಳಬಹುದಷ್ಟೇ. ಹಾಗಿದ್ದರೆ, ರಿಷಿ ಸುನಕ್ ಸೋಲು ಕಂಡಿದ್ದೇಕೆ, ಇಲ್ಲಿವೆ 10 ಕಾರಣಗಳು.

  1. ಜನಪ್ರಿಯತೆ ಕುಸಿಯಿತೇ?
    ಇನ್ಫೋಸಿಸ್ ಎಂಬ ಬಹುರಾಷ್ಟ್ರೀಯ ಐಟಿ ಕಂಪನಿಯನ್ನು ಕಟ್ಟಿ ಬೆಳೆಸಿದ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್, ಬ್ರಿಟನ್‌ನ ಸಂಸತ್ತಿನಲ್ಲಿ ರಿಚ್ಮಂಡ್ (ಯಾರ್ಕ್ಸ್) ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಬೋರಿಸ್ ಜಾನ್ಸನ್ ಸಂಪುಟದಲ್ಲಿ ವಿತ್ತ ಖಾತೆಯನ್ನು ನಿಭಾಯಿಸಿ ಸಾಕಷ್ಟು ಅನುಭವ ಗಳಿಸಿಕೊಂಡಿದ್ದಾರೆ. ಕೋವಿಡ್ ಸಂಕಷ್ಟ ಕಾಲದಲ್ಲಿ ತೋರಿದ ಆರ್ಥಿಕ ಜಾಣ್ಮೆ ಅವರಿಗೆ ಹೆಚ್ಚು ಮನ್ನಣೆ ತಂದುಕೊಟ್ಟಿದೆ. ಪಿಎಂ ಆಯ್ಕೆ ಸಂಬಂಧ ಬ್ರಿಟನ್‌ನಲ್ಲಿ ಅವರು ಜನಪ್ರಿಯತೆಯಲ್ಲಿ ತೀರಾ ಹಿಂದೆ ಬಿದ್ದಿರಲಿಲ್ಲ. ಸಮೀಪದ ಎದುರಾಳಿಗಿಂತ 8ರಿಂದ 5 ಪಾಯಿಂಟುಗಳಷ್ಟೇ ಹಿಂದಿದ್ದಾರೆ. ಲಿಜ್ ಟ್ರಸ್ ಅವರ ಜನಪ್ರಿಯತೆ 92ರಿಂದ 95ರಷ್ಟಿದೆ. ಆದರೆ, ಕೆಲವು ವಾರಗಳ ಹಿಂದೆಯಷ್ಟೇ ರಿಷಿ ಸುನಕ್ ಅವರ ಹತ್ತಿರಕ್ಕೂ ಬರಲು ಲಿಜ್ ಅವರಿಗೆ ಸಾಧ್ಯವಾಗಿರಲಿಲ್ಲ ಎಂದರೆ ನಂಬಲೇಬೇಕು. ಅಂತಿಮ ಸುತ್ತು ಹತ್ತಿರವಾಗುತ್ತಿದ್ದಂತೆ ಎಲ್ಲವೂ ಬದಲಾಗಿ ಹೋಯಿತು.
  2. ಕಣ್ಣು ಕುಕ್ಕುವಷ್ಟು ಸುನಕ್ ದಂಪತಿ ಶ್ರೀಮಂತರು
    ಖಂಡಿತವಾಗಿಯೂ ರಿಷಿ ಸುನಕ್ ಮತ್ತು ಅಕ್ಷಿತಾ ಮೂರ್ತಿ ಬ್ರಿಟನ್‌ನ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿದ್ದಾರೆ. ಇನ್‌ಫ್ಯಾಕ್ಟ್, ಸುನಕ್ ಮತ್ತು ಅಕ್ಷಿತಾ ಮೂರ್ತಿ ಅವರು ಬ್ರಿಟನ್‌ನ ಕ್ವೀನ್ ಎಲಿಜಬೆತ್‌ಗಿಂತಲೂ ಶ್ರೀಮಂತರಂತೆ! ಸಾಮಾನ್ಯ ಜನರು ಎದುರಿಸುತ್ತಿರುವ ಆರ್ಥಿಕ ಸಂಕಟಗಳಿಗೆ ಆಗರ್ಭ ಶ್ರೀಮಂತ ಸುನಕ್ ಅವರು ಹೇಗೆ ಕಿವಿಯಾದಾರು ಎಂಬ ಅನುಮಾನಗಳು ಪ್ರಚಾರದ ವೇಳೆ ಮೂಡಿದವು. ಅಥವಾ ಮೂಡುವಂತೆ ಮಾಡಲಾಯಿತು! ಬ್ರಿಟನ್‌ನಲ್ಲಿ ಸದ್ಯಕ್ಕೆ ಜೀವನಮಟ್ಟ ಸಿಕ್ಕಾಪಟ್ಟೆ ದುಬಾರಿಯಾಗಿದೆ. ಇದು ಕೂಡ ಅಲ್ಲೀಗ ಆತಂಕದ ಸಂಗತಿಯಾಗಿದೆ. ಈ ಸಮಸ್ಯೆಯನ್ನು ರಿಷಿ ಸುನಕ್ ಅವರು ಬಗೆ ಹರಿಸುವ ಬಗ್ಗೆ ಟೋರಿ(ಕನ್ಸರ್ವೇಟಿವ್ ಸಂಸದರು)ಗಳಿಗೆ ವಿಶ್ವಾಸ ಮೂಡಲಿಲ್ಲ!
  3. ಬೇರೆಯವರ ಶ್ರೀಮಂತಿಕೆಗೆ ತಕರಾರು ಇಲ್ಲ
    ವಿಪರ್ಯಾಸ ನೋಡಿ, ಯಾರಿಗೆ ಸುನಕ್ ಅವರ ಸಂಪತ್ತು ಅಡ್ಡಿಯಾಗಿದೆಯೋ, ಅವರಿಗೆ ಲಿಜ್ ಟ್ರಸ್ ಅವರ ಶ್ರೀಮಂತಿಕೆ ಯಾವುದೇ ತೊಂದರೆ ಕೊಟ್ಟಿಲ್ಲ! ಟೋರಿ ಪಕ್ಷದ ಡೇವಿಡ್ ಕ್ಯಾಮೆರೂನ್ ಅವರಿಂದ ಹಿಡಿದು, ಲಿಜ್ ಟ್ರಸ್ ಮತ್ತು ಹೊರ ಹೋಗುತ್ತಿರುವ ಬೋರಿಸ್ ಜಾನ್ಸನ್ ಅವರ ವರೆಗೂ ಎಲ್ಲರೂ ಶ್ರೀಮಂತರೇ; ಎಲ್ಲರೂ ಕೋಟ್ಯಧೀಶರು. ಸಾರ್ವತ್ರಿಕ ಚುನಾವಣೆ ಬಳಿಕ ಮುಂದಿನ ಪ್ರಧಾನಿ ಎಂದೇ ಬಿಂಬಿತರಾಗಿರುವ ಹಾಗೂ ಹಾಲಿ ಪ್ರತಿಪಕ್ಷದ ನಾಯಕ ಕೀರ್ ಸ್ಟಾರ್ಮರ್ ಕೂಡ ಆಗರ್ಭ ಶ್ರೀಮಂತ! ಇಷ್ಟಾಗಿಯೂ, ಸುನಕ್ ಅವರ ಶ್ರೀಮಂತಿಕೆಯೇ ಸೋಲಿಗೆ ಕಾರಣವಾಯಿತು ಎಂದರೆ ನಂಬುವುದು ಹೇಗೆ?
  4. ಚಹಾ ಕಪ್‌ನಲ್ಲಿ ಬಿರುಗಾಳಿ!
    ಸುನಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಮನೆಗೆ ಆಗಮಿಸಿದ್ದ ಪತ್ರಕರ್ತರಿಗೆ, ಪತ್ನಿ ಅಕ್ಷಿತಾ ಮೂರ್ತಿ ಅವರು ದುಬಾರಿ ಬೆಲೆಯ ಕಪ್‌ಗಳಲ್ಲಿ ಚಹಾ ನೀಡಿದ್ದು ಆಗ ಭಾರಿ ಸುದ್ದಿಯಾಗಿತ್ತು. ಮತ್ತೊಂದೆಡೆ, ಈ ಹಿಂದೆ ಸುನಕ್, ತನಗೆ ಮಧ್ಯಮ ವರ್ಗದ ಫ್ರೆಂಡ್ಸ್ ಇಲ್ಲ ಎಂದು ಹೇಳಿದ ವಿಡಿಯೊ ಕೂಡ ಮತ್ತೆ ಮುನ್ನೆಲೆಗೆ ಬಂದಿದ್ದು, ಅವರ ಹಿನ್ನಡೆಗೆ ಕಾರಣವಾಯಿತಾ? ಈ ಬಗ್ಗೆ ಸ್ಪಷ್ಟವಾಗಿ ಉತ್ತರವಿಲ್ಲ.
  5. ರಾಜೀನಾಮೆ ನೀಡಿದ್ದೇ ತಪ್ಪಾಯಿತೇ?
    ಹಾಗೆ ನೋಡಿದರೆ, ಬೋರಿಸ್ ಜಾನ್ಸನ್ ಅವರ ನೇತೃತ್ವದ ಸರ್ಕಾರದ ಪತನಕ್ಕೆ ಅಂತಿಮ ಮೊಳೆ ಹೊಡೆದಿದ್ದು ರಿಷಿ ಸುನಕ್ ಹಾಗೂ ಪಾಕಿಸ್ತಾನ ಮೂಲದ ಸಾಜಿದ್ ಜಾವಿದ್ ಅವರು. ಜಾನ್ಸನ್ ಸಂಪುಟದಲ್ಲಿ ಈ ಇಬ್ಬರು ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದರು. ಪ್ರಧಾನಿ ಬೋರಿಸ್ ಜಾನ್ಸನ್ ಅವರು ಹಗರಣಗಳಲ್ಲಿ ಮುಳುಗುತ್ತಿದ್ದಂತೆ, ಗೊತ್ತಿದ್ದೂ ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದನ್ನು ವಿರೋಧಿಸಿ, ಇವರಿಬ್ಬರು ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ಇವರನ್ನು ಅನುಸರಿಸಿ ಸುಮಾರು 50 ಸಂಸದರು ರಾಜೀನಾಮೆಗೆ ಮುಂದಾದರು. ಇದರಿಂದಾಗಿ ಬೋರಿಸ್ ಜಾನ್ಸನ್ ಪಿಎಂ ಹುದ್ದೆಗೆ ರಾಜೀನಾಮೆ ನೀಡುವ ಒತ್ತಡ ಸೃಷ್ಟಿಯಾಯಿತು. ರಿಷಿ ಅವರು ಜಾನ್ಸನ್‌ ಬೆನ್ನಿಗಿರಿದರು ಎಂಬ ಭಾವನೆ ಸಾಮಾನ್ಯ ಜನರಲ್ಲೂ ದಟ್ಟವಾಗಿತ್ತು. ಇಂದಿನ ರಾಜಕೀಯ ಅಸ್ಥಿರತೆಗೆ ರಿಷಿ ನೇರವಾಗಿ ಕಾರಣವಾಗಿದ್ದಾರೆಂಬ ಅಸಮಾಧಾನವು ಕನ್ಸರ್ವೇಟಿವ್ ಪಕ್ಷದ ಸದಸ್ಯರಲ್ಲೂ ಇದೆ. ಈ ಅಸಮಾಧಾನವೇ ಸುನಕ್ ಅವರು ಪ್ರಧಾನಿ ಹುದ್ದೆಗೇರುವ ಕನಸಿಗೆ ಅಡ್ಡಿಯಾಯಿತು ಎಂಬ ವಿಶ್ಲೇಷಣೆಯಲ್ಲಿ ಹುರುಳಿಲ್ಲದಿಲ್ಲ.
  6. ಬೆಂಬಲಿಸಬೇಡಿ ಎಂದ ಬೋರಿಸ್
    ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ರಿಷಿ ಸುನಕ್ ಹಾಗೂ ಸಾಜಿದ್ ಜಾವಿದ್ ಅವರ ಪಾತ್ರವೇ ಹೆಚ್ಚು ಎಂದು ಬೋರಿಸ್ ಜಾನ್ಸನ್‌ ನಂಬಿದ್ದು ಸುಳ್ಳೇನೂ ಅಲ್ಲ. ಯಾಕೆಂದರೆ, ರಿಷಿ ಮಾಡಿದ ಸಂದೇಶಗಳಿಗ ಬೋರಿಸ್ ಜಾನ್ಸನ್ ಅವರು ಉತ್ತರಿಸಿಲ್ಲವಂತೆ! ರಿಷಿ ಅವರ ಮೇಲೆ ಬೋರಿಸ್ ಅವರಿಗೆ ಮುನಿಸು ಇರುವುದನ್ನು ಇದು ತೋರಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಬಾರದು ಎಂದು ಬೋರಿಸ್ ಅವರು ಬಹಿರಂಗವಾಗಿ ಹೇಳಿದ್ದು ಕೂಡ ಅವರ ಸೋಲಿಗೆ ಕಾರಣವಾಗಿರಬಹುದು.
  7. ಆರ್ಥಿಕ ಸುಧಾರಣೆಗಳು
    ಆರ್ಥಿಕ ಸುಧಾರಣೆಗೆ ಸಂಬಂಧಿಸಿದಂತೆ ರಿಷಿ ಸುನಕ್ ಅವರು ಮಂಡಿಸಿದ ಅಥವಾ ನೀಡಿದ ಭರವಸೆಗಳು ಪ್ರಾಮಾಣಿಕ ಮತ್ತು ನಿಷ್ಠುರವಾಗಿದ್ದವು. ಬಹುಶಃ ಅವರ ಹಿನ್ನಡೆಗೆ ಈ ಸಂಗತಿಯೂ ಪ್ರಭಾವ ಬೀರಿರುವ ಸಾಧ್ಯತೆಗಳಿವೆ. ಪ್ರಚಾರದ ವೇಳೆ, ಅವರು ತೆರಿಗೆ ಕಡಿತದ ಯಾವುದೇ ಭರವಸೆಗಳನ್ನು ನೀಡಲಿಲ್ಲ. ಬದಲಿಗೆ, ಮುಂಬರುವ ದಿನಗಳು ಇನ್ನಷ್ಟು ಕಠಿಣಗಳಾಗುವುದರಿಂದ, ಹಣದುಬ್ಬರ ನಿಯಂತ್ರಣಕ್ಕೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯ ಎಂಬ ಸಂಗತಿಯನ್ನು ಪ್ರಾಮಾಣಿಕವಾಗಿ ಮನದಟ್ಟು ಮಾಡಲು ಪ್ರಯತ್ನಿಸಿದರು. ಆದರೆ, ಎದುರಾಳಿ ಲಿಜ್ ಟ್ರಸ್ ಅವರು, ಹೆಚ್ಚಿನ ತೆರಿಗೆಗಳು ಅಭಿವೃದ್ಧಿಗೆ ಅಡ್ಡಿಯಾಗುತ್ತವೆ. ಇದರಿಂದ ಹೂಡಿಕೆ ಕೂಡ ಕುಸಿಯಲಿದೆ. ಅಂತಿಮವಾಗಿ ಅದು ಆರ್ಥಿಕ ಚಟುವಟಿಕೆಗೆ ಹಿನ್ನಡೆ ತರುತ್ತದೆ. ಹಾಗಾಗಿ, ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಣಕ್ಕೆ ತೆರಿಗೆ ಕಡಿತ ಮಾಡುವುದೇ ಪರಿಹಾರ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸಿದರು. ಬಹುಶಃ ಅವರ ಈ ವಾದ ಫಲ ನೀಡಿದಂತಿದೆ. ಕನ್ಸರ್ವೇಟಿವ್ ಪಕ್ಷದ ಸಾಂಪ್ರದಾಯಿಕ ಮತದಾರರು ಇದೇ ಮನಸ್ಥಿತಿಯನ್ನು ಹೊಂದಿದವರು. ಅವರು ಕಡಿಮೆ ತೆರಿಗೆ ಮತ್ತು ವೆಚ್ಚ ನೀತಿಯಲ್ಲಿ ವಿಶ್ವಾಸ ಇಟ್ಟವರು. ಈ ನಂಬಿಕೆಗೆ ಟ್ರಸ್ ಧಕ್ಕೆ ಮಾಡಲಿಲ್ಲ; ಸುನಕ್ ಅವರಿಗೆ ಈ ಸಂಗತಿ ಅರ್ಥವಾಗಲಿಲ್ಲ!
  8. ಪತ್ನಿಯ ತೆರಿಗೆ ಉಳಿಕೆ ಮಳುವಾಯಿತೇ?
    ರಿಷಿ ಸುನಕ್ ಅವರ ಪತ್ನಿ ಅಕ್ಷಿತಾ ಅವರು ಇಂಗ್ಲೆಂಡ್‌ನಲ್ಲಿ non-domiciled status ಹೊಂದಿದ್ದಾರೆ. ಅವರು ತಮ್ಮ ವಿದೇಶಿ ಗಳಿಕೆಯ ಮೇಲೆ ಬ್ರಿಟನ್‌ನಲ್ಲಿ ತೆರಿಗೆ ಕಟ್ಟಬೇಕಾದ ಅಗತ್ಯವಿಲ್ಲ. ಇನ್ಫೋಸಿಸ್‌ನಲ್ಲಿ ಅಕ್ಷತಾ ಅವರು ಶೇ.0.93 ಷೇರು ಹೊಂದಿದ್ದಾರೆ. ಈ ಷೇರುಗಳ ಮೌಲ್ಯವು ಅಂದಾಜು 6.90 ಕೋಟಿ ಪೌಂಡ್ ಆಗುತ್ತದೆ. ಅಕ್ಷಿತಾ ಅವರು non-domiciled status ಹೊಂದಿರುವುದರಿಂದ ತಮ್ಮ ಷೇರು ಲಾಭಾಂಶದ ಮೇಲೆ ತೆರಿಗೆ ಕಟ್ಟಬೇಕಿಲ್ಲ. ಇದರಿಂದ ಅವರಿಗೆ ವರ್ಷಕ್ಕೆ ಅಂದಾಜು 2 ಕೋಟಿ ಪೌಂಡ್ ಹಣ ಉಳಿತಾಯವಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಸಂಗತಿ ಕೂಡ ರಿಷಿ ಸುನಕ್ ಅವರ ವಿರುದ್ಧ ಕೆಲಸ ಮಾಡಿರುವಂತಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಈ ತೆರಿಗೆ ಉಳಿತಾಯದ ಬಗ್ಗೆ ಏಪ್ರಿಲ್‌ನಷ್ಟು ಸಾಕಷ್ಟು ಚರ್ಚೆಯಾಗಿತ್ತು
  9. ಅತಿವೇಗ ಅಪಾಯಕ್ಕೆ ಕಾರಣ
    ಬ್ರಿಟನ್ ರಾಜಕಾರಣದಲ್ಲಿ ರಿಷಿ ಸುನಕ್ ಅವರ ರಾಜಕೀಯ ಬೆಳಣಿಗೆಯನ್ನು ಗಮನಿಸಿದರೆ, ‘ಅತಿ ವೇಗ ಅಪಾಯಕ್ಕೆ ಕಾರಣ’ ಎಂಬ ಮಾತನ್ನು ನೆನಪಿಸುತ್ತದೆ. ಯಾಕೆಂದರೆ, ಪಿಎಂ ಹುದ್ದೆ ಸ್ಪರ್ಧೆ ತನಕದ ಅವರ ವೇಗವೇ ಅವರನ್ನು ಅಪಾಯಕ್ಕೆ ಸಿಲುಕಿಸಿದೆ. One who wields the crown never wears the crown ಎಂಬ ಮಾತು ಸುನಕ್ ಅವರಿಗೆ ಅಕ್ಷರಶಃ ಅನ್ವಯವಾಗುತ್ತಿದೆ. ವೇಗವಾಗಿ ದಕ್ಕಿದ ಜನಪ್ರಿಯತೆಯ ಲಾಭವನ್ನು ಮಾಡಿಕೊಳ್ಳಲು ಹೊರಟವರಿಗೆ, ಉದ್ದೇಶಿತ ಗುರಿಯನ್ನು ಸಾಧ್ಯವಾಗಲಿಲ್ಲ!
  10. ಇನ್ನೂ ಒಂದು ಕಾರಣವಿದೆ
    ಪಶ್ಚಿಮ ರಾಷ್ಟ್ರಗಳು ಎಷ್ಟೇ ಮುಂದುವರಿದಿದ್ದರೂ ಬಣ್ಣದ ಆಧಾರದ ಮೇಲೆ ತಾರತಮ್ಯ ಅನುಸರಿಸುವ ನೀತಿಯಿಂದ ಇನ್ನೂ ಪೂರ್ತಿಯಾಗಿ ಹೊರ ಬಂದಿಲ್ಲ. ವರ್ಣಭೇದ ಅವರ ಮನಸ್ಸಿನಾಳದಲ್ಲಿದೆ. ಹಾಗಂತ, ಬ್ರಿಟನ್ ಪಿಎಂ ಆಯ್ಕೆಯಲ್ಲಿ ವರ್ಣಭೇದವು ಪ್ರಭಾವ ಬೀರಿದೆ ಎಂದು ನೇರವಾಗಿ ಹೇಳುವುದು ಅಪಕ್ವ ಎನಿಸಿಕೊಳ್ಳುತ್ತದೆ. ಆದರೆ, ಕನ್ಸರ್ವೇಟಿವ್ ಪಕ್ಷದಲ್ಲಿ ನಾಯಕತ್ವವನ್ನು ಆಯ್ಕೆಯ ಮತದಾರ ಸಮೂಹವನ್ನು ವಿಶ್ಲೇಷಿಸಿದರೆ ಈ ಅನುಮಾನ ಕಾಡದೇ ಇರದು. ಪಕ್ಷದ ಹಳೆಯ ಸದಸ್ಯರನ್ನು ಪರಿಗಣಿಸಿದರೆ ವರ್ಣಭೇದ ಪ್ರಭಾವ ಬೀರಿರುವ ಸಾಧ್ಯತೆ ತಕ್ಕಮಟ್ಟಿಗಾದರೂ ಇದ್ದೇ ಇದೆ. ಬಿಳಿಯ ಅಲ್ಲದ ವ್ಯಕ್ತಿಯೊಬ್ಬ ಬ್ರಿಟನ್ ಪ್ರಧಾನಿಯಾಗುವುದನ್ನು ಅವರಿಗೆ ಊಹಿಸಿಕೊಳ್ಳುವುದು ಕಷ್ಟವಾಗಿರಬಹುದು! ಹಾಗಾಗಿ, ಅವರ ಒಲವು ಸುನಕ್‌ಗಿಂತಲೂ ಲಿಜ್ ಟ್ರಸ್ ಅವರ ಕಡೆಗೆ ಹೆಚ್ಚಾಗಿರಬಹುದು.

    ಇದನ್ನೂ ಓದಿ |Liz Truss | ಇನ್ಫಿ ಮೂರ್ತಿ ಅಳಿಯ ಸುನಕ್‌ಗೆ ಕೈತಪ್ಪಿದ ಬ್ರಿಟನ್‌ ಪ್ರಧಾನಿ ಹುದ್ದೆ, ಲಿಜ್‌ ಟ್ರಸ್‌ಗೆ ಗೆಲುವು
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಆರ್​ಸಿಬಿ, ಆರ್​ಆರ್​ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು

IPL 2024: ಜೋಸ್ ಬಟ್ಲರ್ ಈಗಾಗಲೇ ರಾಜಸ್ಥಾನ್​​ ತಂಡ ತೊರೆದಿದ್ದಾರೆ. ಈ ಬೆಳವಣಿಗೆಯ 2008 ರ ಚಾಂಪಿಯನ್ಸ್​ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ರಾಜಸ್ಥಾನ್ ರಾಯಲ್ಸ್ ಪರ ಆಡಿರುವ ಬಟ್ಲರ್ 39.88ರ ಸರಾಸರಿಯಲ್ಲಿ 359 ರನ್ ಗಳಿಸಿದ್ದಾರೆ. ಅವರ ಒಂದು ಶತಕವು ಐಪಿಎಲ್ ಇತಿಹಾಸದಲ್ಲಿ ಜಂಟಿಯಾಗಿ ಅತಿ ಹೆಚ್ಚು ಯಶಸ್ವಿ ರನ್ ಚೇಸ್ ದಾಖಲಿಸಲು ರಾಯಲ್ಸ್​ಗೆ ಸಹಾಯ ಮಾಡಿದೆ.

VISTARANEWS.COM


on

IPL 2024
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 ಕ್ಕೆ (IPL 2024) ಇಂಗ್ಲೆಂಡ್ ಕ್ರಿಕೆಟಿಗರು ವಿದಾಯ ಹೇಳಲು ಪ್ರಾರಂಭಿಸಿದ್ದಾರೆ. ಮೇ 22ರಿಂದ ಆರಂಭವಾಗಲಿರುವ 4 ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್​ ತಂಡ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಈ ವರ್ಷದ ಕೊನೆಯಲ್ಲಿ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ತಯಾರಿ ನಡೆಸಲು ಇಂಗ್ಲಿಷ್ ಕ್ರಿಕೆಟಿಗರು ಐಪಿಎಲ್ ಅನ್ನು ಬೇಗನೆ ತೊರೆಯುತ್ತಾರೆ ಎಂದು ಈ ಹಿಂದೆ ತಿಳಿದುಬಂದಿತ್ತು. ಇದೀಗ ಅವರೆಲ್ಲರೂ ಹೊರಟಿದ್ದಾರೆ.

ಜೋಸ್ ಬಟ್ಲರ್ ಈಗಾಗಲೇ ರಾಜಸ್ಥಾನ್​​ ತಂಡ ತೊರೆದಿದ್ದಾರೆ. ಈ ಬೆಳವಣಿಗೆಯ 2008 ರ ಚಾಂಪಿಯನ್ಸ್​ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ರಾಜಸ್ಥಾನ್ ರಾಯಲ್ಸ್ ಪರ ಆಡಿರುವ ಬಟ್ಲರ್ 39.88ರ ಸರಾಸರಿಯಲ್ಲಿ 359 ರನ್ ಗಳಿಸಿದ್ದಾರೆ. ಅವರ ಒಂದು ಶತಕವು ಐಪಿಎಲ್ ಇತಿಹಾಸದಲ್ಲಿ ಜಂಟಿಯಾಗಿ ಅತಿ ಹೆಚ್ಚು ಯಶಸ್ವಿ ರನ್ ಚೇಸ್ ದಾಖಲಿಸಲು ರಾಯಲ್ಸ್​ಗೆ ಸಹಾಯ ಮಾಡಿದೆ.

ರಾಯಲ್ಸ್ ‘ಎಕ್ಸ್’ ನಲ್ಲಿ ಒಂದು ಪೋಸ್ಟ್ ಮಾಡಿದ್ದು, ಅದರಲ್ಲಿ ಬಟ್ಲರ್ ತಂಡವನ್ನು ತೊರೆಯುತ್ತಿರುವುದು ಕಂಡುಬಂದಿದೆ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ, ಜೋಸ್ ಭಾಯ್!” ಎಂದು ಬರೆಯಲಾಗಿದೆ. ಬಟ್ಲರ್ ಅನುಪಸ್ಥಿತಿಯಲ್ಲಿ, ರಾಜಸ್ಥಾನ್ ತಂಡವು ​ 190 ಟಿ 20 ಪಂದ್ಯಗಳಲ್ಲಿ 1 ಶತಕ ಮತ್ತು 34 ಅರ್ಧಶತಕಗಳೊಂದಿಗೆ 4734 ರನ್ ಗಳಿಸಿರುವ ಟಾಮ್ ಕೊಹ್ಲರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ.

ರಾಯಲ್ಸ್ ಇನ್ನೂ ಪ್ಲೇಆಫ್​ನಲ್ಲಿ ತನ್ನ ಸ್ಥಾನ ಕಾಯ್ದಿರಿಸಿಲ್ಲ. ಸಂಜು ಸ್ಯಾಮ್ಸನ್ ಪಡೆ ಆಡಿರುವ ಮೊದಲ 9 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿದ್ದು, 3 ಪಂದ್ಯಗಳಲ್ಲಿ ಸೋತಿದೆ.

ಆರ್​ಸಿಬಿ ತೊರೆದ ಜಾಕ್ಸ್, ಟಾಪ್ಲೆ


ಆಟಗಾರರು ಬಿಟ್ಟು ಹೋಗುತ್ತಿರುವ ಮತ್ತೊಂದು ತಂಡ ಆರ್​ಸಿಬಿ. ಇಲ್ಲಿನ ಇಬ್ಬರು ಇಂಗ್ಲಿಷ್ ತಾರೆಯರು ಹೊರಗುಳಿದಿದ್ದಾರೆ. 12 ಅಂಕಗಳು ಮತ್ತು +0.387 ನೆಟ್ ರನ್ ರೇಟ್​ನೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಚಾಲೆಂಜರ್ಸ್ ಪ್ಲೇ ಆಫ್​ಗೆ ಪ್ರವೇಶಿಸಲು ಬಹಳ ದೂರವಿಲ್ಲ.

ಇದನ್ನೂ ಓದಿ: IPL 2024 : ಮಳೆಯಿಂದಾಗಿ ಪಂದ್ಯ ರದ್ದು, ಕೆಕೆಆರ್​ಗೆ ಮೊದಲೆರಡಲ್ಲೊಂದು ಸ್ಥಾನ ಫಿಕ್ಸ್​

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಋತುರಾಜ್ ಗಾಯಕ್ವಾಡ್ ಅವರ ಸಿಎಸ್​ಕೆ ವಿರುದ್ಧದ ಕೊನೆಯ ಲೀಗ್ ಪಂದ್ಯಕ್ಕೆ ವಿಲ್ ಜಾಕ್ಸ್ ಮತ್ತು ರೀಸ್ ಟಾಪ್ಲೆ ಅವರ ಸೇವೆ ಲಭ್ಯವಿರುವುದಿಲ್ಲ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆರ್​ಸಿಬಿ ಸತತ 5 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಆಸೆ ಜೀವಂತವಾಗಿರಿಸಿದೆ.

ಲಿಯಾಮ್ ಲಿವಿಂಗ್​ಸ್ಟನ್​ ಕೂಡ ನಿರ್ಗಮಿಸಿದ್ದಾರೆ. ಆದರೂ ಪಿಬಿಕೆಎಸ್ ಈಗಾಗಲೇ ಸ್ಪರ್ಧೆಯಿಂದ ಹೊರಗುಳಿದಿರುವುದರಿಂದ ಇದು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ.

Continue Reading

ಪ್ರಮುಖ ಸುದ್ದಿ

Sushil Kumar Modi : ಬಿಹಾರದ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ನಿಧನ

VISTARANEWS.COM


on

Sushil Kumar Modi
Koo

ನವದೆಹಲಿ: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ಮುಖಂಡ ಸುಶೀಲ್ ಕುಮಾರ್ ಮೋದಿ (72) ಸೋಮವಾರ ನಿಧನನ ಹೊಂದಿದ್ದಾರೆ. ಸುಶೀಲ್ ಕುಮಾರ್ ಮೋದಿ ಅವರು ಕ್ಯಾನ್ಸರ್​​ ಸಮಸ್ಯೆಯಿಂದ ಬಳಲುತ್ತಿದ್ದರು. ತಮ್ಮ ಆರೋಗ್ಯ ಸ್ಥಿತಿಯಿಂದಾಗಿ 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈ ವರ್ಷದ ಏಪ್ರಿಲ್​​ನಲ್ಲಿ ಘೋಷಿಸಿದ್ದರು. ಮಾಜಿ ರಾಜ್ಯಸಭಾ ಸಂಸದರಾಗಿದ್ದ ಅವರ ಪಾರ್ಥಿವ ಶರೀರವನ್ನು ನಾಳೆ (ಮೇ 14) ಪಾಟ್ನಾದ ರಾಜೇಂದ್ರ ನಗರ ಪ್ರದೇಶದಲ್ಲಿರುವ ಅವರ ನಿವಾಸಕ್ಕೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಹಾರದ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಸುಶೀಲ್ ಕುಮಾರ್ ಮೋದಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪಕ್ಷದಲ್ಲಿ ನನ್ನ ಮೌಲ್ಯಯುತ ಸಹೋದ್ಯೋಗಿ ಮತ್ತು ದಶಕಗಳಿಂದ ನನ್ನ ಸ್ನೇಹಿತ ಸುಶೀಲ್ ಮೋದಿ ಜಿ ಅವರ ಅಕಾಲಿಕ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಬಿಹಾರದಲ್ಲಿ ಬಿಜೆಪಿಯ ಏಳಿಗೆ ಮತ್ತು ಅದರ ಯಶಸ್ಸಿನ ಹಿಂದೆ ಅವರ ಕೊಡುಗೆ ಅಮೂಲ್ಯವಾಗಿದೆ. ತುರ್ತು ಪರಿಸ್ಥಿತಿಯನ್ನು ಬಲವಾಗಿ ವಿರೋಧಿಸಿದ ಅವರು ವಿದ್ಯಾರ್ಥಿ ರಾಜಕಾರಣದಿಂದ ತಮ್ಮನ್ನು ಪ್ರೇರಿತರಾಗಿದ್ದರು. ಅವರು ತುಂಬಾ ಶ್ರಮಜೀವಿ ಮತ್ತು ಸ್ನೇಹಪರ ಶಾಸಕ ಎಂದು ಹೆಸರುವಾಸಿಯಾಗಿದ್ದರು. ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅವರ ತಿಳುವಳಿಕೆ ಬಹಳ ಆಳವಾಗಿತ್ತು. ಅವರು ಆಡಳಿತಗಾರರಾಗಿ ಪ್ರಶಂಸನೀಯ ಕೆಲಸವನ್ನೂ ಮಾಡಿದರು. ಜಿಎಸ್ಟಿ ಅಂಗೀಕಾರದಲ್ಲಿ ಅವರ ಸಕ್ರಿಯ ಪಾತ್ರವನ್ನು ಯಾವಾಗಲೂ ನೆನಪಿಸಿಕೊಳ್ಳಲಾಗುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಬೆಂಬಲಿಗರೊಂದಿಗೆ ನನ್ನ ಸಂತಾಪವಿದೆ. ಓಂ ಶಾಂತಿ! ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Tejasvi Surya: ಈ ದಲಿತ ನಾಯಕನ ಜತೆ ಚರ್ಚೆಗೆ ಬನ್ನಿ ರಾಹುಲ್‌ ಗಾಂಧಿ; ತೇಜಸ್ವಿ ಸೂರ್ಯ ಪಂಥಾಹ್ವಾನ!

ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಮುಖಂಡ ತೇಜಸ್ವಿ ಯಾದವ್ ಕೂಡ ಎಕ್ಸ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಸುಶೀಲ್ ಕುಮಾರ್ ಮೋದಿ ಯಾರು?

ಜನವರಿ 5, 1952 ರಂದು ಜನಿಸಿದ ಸುಶೀಲ್ ಕುಮಾರ್ ಮೋದಿ ಅವರು ಪಾಟ್ನಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಕಾರ್ಯಕರ್ತನಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು, ಅಲ್ಲಿ ಅವರು 1973 ರಲ್ಲಿ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

ತಮ್ಮ ಮೂರು ದಶಕಗಳ ರಾಜಕೀಯ ಜೀವನದಲ್ಲಿ ಸುಶೀಲ್ ಮೋದಿ ಅವರು ಶಾಸಕ, ಎಂಎಲ್ಸಿ ಮತ್ತು ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯ ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು 2005 ರಿಂದ 2013 ರವರೆಗೆ ಮತ್ತು ಮತ್ತೆ 2017 ರಿಂದ 2020 ರವರೆಗೆ ಬಿಹಾರದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಹಿರಿಯ ರಾಜಕಾರಣಿ 1990 ರಲ್ಲಿ ಪಾಟ್ನಾ ಸೆಂಟ್ರಲ್ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 1996 ರಿಂದ 2004 ರವರೆಗೆ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದರು.

2004 ರಲ್ಲಿ ಸುಶೀಲ್ ಮೋದಿ ಭಾಗಲ್ಪುರದಿಂದ ಲೋಕಸಭೆಗೆ ಆಯ್ಕೆಯಾಗುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿದ್ದರು. ಆದಾಗ್ಯೂ, 2005 ರಲ್ಲಿ, ಅವರು ತಮ್ಮ ಲೋಕಸಭಾ ಹುದ್ದೆಗೆ ರಾಜೀನಾಮೆ ನೀಡಿ ವಿಧಾನ ಪರಿಷತ್ತಿಗೆ ಸೇರಿ ಬಿಹಾರದ ಉಪಮುಖ್ಯಮಂತ್ರಿಯ ಪಾತ್ರವನ್ನು ವಹಿಸಿಕೊಂಡಿದ್ದರು.

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಹೋರ್ಡಿಂಗ್ ಕುಸಿತ ಬೆಂಗಳೂರಿಗರಿಗೂ ಎಚ್ಚರಿಕೆಯ ಗಂಟೆ

ಬೆಂಗಳೂರಿನಲ್ಲೂ ಇಂಥ ಜಾಹೀರಾತು ಫಲಕಗಳ ಹಾವಳಿ ಸಾಕಷ್ಟಿದೆ. ಇವುಗಳಲ್ಲಿ ಅನಧಿಕೃತ ಎಷ್ಟು, ಅನಧಿಕೃತ ಎಷ್ಟು ಯಾರೂ ಹೇಳಲಾರರು. ಕಳೆದ ವರ್ಷ ಹೈಕೋರ್ಟ್, ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್‌ಗಳ ಬಗ್ಗೆ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಪರಿಣಾಮ ನಗರವನ್ನು ತರಾತುರಿಯಿಂದ ಕ್ಲೀನ್ ಮಾಡಲಾಗಿತ್ತು. ಇದೀಗ ಬಿಬಿಎಂಪಿ ನೂತನ ಬೈಲಾ ತಂದಿದೆ. ಅದರಂತೆ ದೊಡ್ಡ ಹೋರ್ಡಿಂಗ್‌ಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದರ ಅಪಾಯ ಇದ್ದೇ ಇದೆ.

VISTARANEWS.COM


on

Hoarding
Koo

ಮುಂಬಯಿಯ ಘಾಟ್‌ಕೋಪರ್‌ನಲ್ಲಿ ಅಪ್ಪಳಿಸಿದ ಭಾರಿ ಧೂಳು ಬಿರುಗಾಳಿ ಮತ್ತು ಮಳೆಯಿಂದಾಗಿ ಬೃಹತ್ ಜಾಹೀರಾತು ಫಲಕ ಕುಸಿದು ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. 59 ಜನರು ಗಾಯಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ವೇಗವಾಗಿ ಧೂಳಿನ ಸಮೇತ ಬಂದ ಬಿರುಗಾಳಿ, ಭಾರೀ ಮಳೆ ಹಿನ್ನೆಲೆ ಮುಂಬೈ ನಗರದಲ್ಲಿ ಅನಾಹುತಗಳು ಸಂಭವಿಸುತ್ತಿವೆ. ಜನಸಂದಣಿ ಇರುವ ಪ್ರದೇಶದಲ್ಲಿ ಬೃಹದಾಕಾರದ ಹೋರ್ಡಿಂಗ್ ಬಿರುಗಾಳಿಗೆ ಕುಸಿದು ಬಿದ್ದಿದೆ. ಬೃಹದಾಕಾರದ ಹೋರ್ಡಿಂಗ್ ನ ಕಬ್ಬಿಣದ ರಾಡ್ ಗಳು ಹಿಂದಕ್ಕೆ ವಾಲಿಕೊಂಡು ಸಂಪೂರ್ಣವಾಗಿ ನೆಲಕಚ್ಚಿದೆ. ದುರ್ಘಟನೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಹೋರ್ಡಿಂಗ್​ ಕೆಳಗೆ ಸಿಲುಕಿಕೊಂಡಿದ್ದಾರೆ. ಹೋರ್ಡಿಂಗ್ ಬಿದ್ದ ಪರಿಣಾಮ ಅಲ್ಲಿದ್ದ ಅಂಗಡಿಗಳು, ವಾಹನಗಳು ಸಹ ಜಖಂ ಆಗಿದೆ. ಇನ್ನೊಂದು ಇಂಥದೇ ಘಟನೆಯಲ್ಲಿ, ವಡಾಲಾದಲ್ಲಿ ಅಟ್ಟಣಿಗೆಯೊಂದು ಕುಸಿದಿದೆ. ಹಲವಾರು ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದು, ಹಲವರು ಕಾರಿನೊಳಗೆ ಸಿಲುಕಿಕೊಂಡಿದ್ದಾರೆ.

ಇದು ಅಪರೂಪದ ಪ್ರಕರಣವಲ್ಲ. ಈ ಹಿಂದೆಯೂ ಇಂಥ ಘಟನೆಗಳು ಆದದ್ದುಂಟು. ಈ ಬೃಹತ್ ಜಾಹೀರಾತು ಫಲಕಗಳು ನಾಲ್ಕು- ಐದು ಮಹಡಿ ಕಟ್ಟಡಗಳಷ್ಟು ಎತ್ತರವಾಗಿರುತ್ತವೆ. ವೈಜ್ಞಾನಿಕವಾಗಿ ಇದನ್ನು ನಿರ್ಮಿಸದೇ ಹೋದರೆ ಇವು ಬಿದ್ದಾಗ ಹಲವು ಜೀವಗಳಿಗೆ ಮಾರಣಾಂತಿಕ ಆಗುವ ಸಂಭವ ಇದ್ದೇ ಇರುತ್ತದೆ. ಜೊತೆಗೆ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್‌ಗಳ ಕಾಟವೂ ಇದೆ. ಇವು ನಗರಗಳ ಸೌಂದರ್ಯವನ್ನು ಊನಗೊಳಿಸುವಲ್ಲಿ ಕುಖ್ಯಾತವಾಗಿವೆ.

ಬೆಂಗಳೂರಿನಲ್ಲೂ ಇಂಥ ಜಾಹೀರಾತು ಫಲಕಗಳ ಹಾವಳಿ ಸಾಕಷ್ಟಿದೆ. ಇವುಗಳಲ್ಲಿ ಅನಧಿಕೃತ ಎಷ್ಟು, ಅನಧಿಕೃತ ಎಷ್ಟು ಯಾರೂ ಹೇಳಲಾರರು. ಕಳೆದ ವರ್ಷ ಹೈಕೋರ್ಟ್, ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್‌ಗಳ ಬಗ್ಗೆ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಪರಿಣಾಮ ನಗರವನ್ನು ತರಾತುರಿಯಿಂದ ಕ್ಲೀನ್ ಮಾಡಲಾಗಿತ್ತು. ಇದೀಗ ಬಿಬಿಎಂಪಿ ನೂತನ ಬೈಲಾ ತಂದಿದೆ. ಅದರಂತೆ ದೊಡ್ಡ ಹೋರ್ಡಿಂಗ್‌ಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಹೋರ್ಡಿಂಗ್‌ನ ಗಾತ್ರವು ರಸ್ತೆಯ ಅಗಲ, ವೃತ್ತ ಅಥವಾ ಜಂಕ್ಷನ್ ಮತ್ತು ಪ್ರದೇಶವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, 80 ರಿಂದ 100 ಅಡಿ ಅಗಲದ ರಸ್ತೆಯಲ್ಲಿ (ಒಳಗಿನ ವರ್ತುಲ ರಸ್ತೆ) 1,000 ಚದರ ಅಡಿ ಹೋರ್ಡಿಂಗ್ ಅನ್ನು ಪ್ರದರ್ಶಿಸಲು ಅನುಮತಿಸಲಾಗಿದೆ. ಜಾಹೀರಾತುದಾರರು ಪ್ರತಿ 100 ಮೀಟರ್‌ಗಳಿಗೆ ಅಂತಹ ಬೋರ್ಡ್‌ಗಳನ್ನು ಸ್ಥಾಪಿಸಬಹುದು. ಕನಿಷ್ಠ ಜಾಹೀರಾತು ಪ್ರದೇಶವು 800 ಚದರ ಅಡಿಗಳಾಗಿದ್ದರೆ, ಗರಿಷ್ಠ 3,000 ಚದರ ಅಡಿ. ಗರಿಷ್ಠ ಎತ್ತರ 75 ಅಡಿಗಳವರೆಗೂ ಹೋಗಬಹುದು. ಅಂದರೆ ಸುಮಾರು ಏಳು ಮಹಡಿ ಎತ್ತರ!

ಇಂಥ ಒಂದು ಬೃಹತ್ ಫಲಕ ಗಾಳಿಗೆ ಬಿದ್ದರೆ ಎಂಥ ಅನಾಹುತ ಆದೀತು ಎಂಬುದನ್ನು ಊಹಿಸಬಹುದು. ನೂತನ ಹೋರ್ಡಿಂಗ್ ನೀತಿಯಿಂದ ವಾರ್ಷಿಕ 500 ಕೋಟಿ ರೂಪಾಯಿ ಗಳಿಸುವ ಇರಾದೆ ಬಿಬಿಎಂಪಿಗೆ ಇದೆ. ಆದರೆ ಅದರಡಿ ಓಡಾಡುವ ಜನರ ಸುರಕ್ಷತೆಯ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಲಾಗುತ್ತದೆ? ಇಂಥ ಅಪಘಾತದ ಸಂತ್ರಸ್ತರಿಗೆ ಗರಿಷ್ಠ ವಿಮೆ ನೀಡುವ ಕಾಯಿದೆ ಇರಬೇಕಲ್ಲವೆ? ಇದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇಂಥ ಅಪಘಾತಗಳು ಸಂಭವಿಸಿದಾಗ, ನಮ್ಮ ಸುತ್ತಮುತ್ತಲೂ ಯಾವಾಗ ಬೇಕಾದರೂ ಸಂಭವನೀಯ ಅಪಾಯಗಳ ಕುರಿತು ಕೂಡ ನಾವು ಚಿಂತಿಸಿ ಕಾರ್ಯಪ್ರವೃತ್ತರಾಗಬೇಕಿದೆ.

ಇದನ್ನೂ ಓದಿ: ICC World Cup 2023 : ಜಸ್ಟ್​ ಮಿಸ್​; ಪ್ರೇಕ್ಷಕರ ಸೀಟ್​​ಗಳ ಮೇಲೆ ಬಿದ್ದ ಬೃಹತ್​ ಹೋರ್ಡಿಂಗ್​

Continue Reading

ದೇಶ

Tejasvi Surya: ಈ ದಲಿತ ನಾಯಕನ ಜತೆ ಚರ್ಚೆಗೆ ಬನ್ನಿ ರಾಹುಲ್‌ ಗಾಂಧಿ; ತೇಜಸ್ವಿ ಸೂರ್ಯ ಪಂಥಾಹ್ವಾನ!

Tejasvi Surya: ರಾಹುಲ್‌ ಗಾಂಧಿ ಅವರೇ, ನಮ್ಮ ಅಭಿನವ್‌ ಪ್ರಕಾಶ್‌ ಅವರು ನಿಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರಲಿದ್ದಾರೆ. ಇವರು ಪಾಸಿ (ಎಸ್‌ಸಿ-ದಲಿತ) ಸಮುದಾಯದ ಪ್ರಮುಖ ನಾಯಕರಾಗಿದ್ದು, ಉನ್ನತ ಶಿಕ್ಷಣ ಪಡೆದಿದ್ದಾರೆ. ನೀವು ಪ್ರತಿನಿಧಿಸುತ್ತಿರುವ ರಾಯ್‌ಬರೇಲಿಯಲ್ಲಿ ಈ ಸಮುದಾಯದ ಶೇ.30ರಷ್ಟು ಜನರಿದ್ದಾರೆ. ನೀವು ಇವರ ಜತೆ ಚರ್ಚೆಗೆ ಬನ್ನಿ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

VISTARANEWS.COM


on

Tejasvi Surya
Koo

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜತೆ ನಾನು ಬಹಿರಂಗ ಚರ್ಚೆಗೆ ಸಿದ್ಧ ಎಂದು ರಾಹುಲ್‌ ಗಾಂಧಿ (Rahul Gandhi) ಎಸೆದ ಸವಾಲಿಗೆ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ (Tejasvi Surya) ಪಾಟಿಸವಾಲು ಎಸೆದಿದ್ದಾರೆ. “ರಾಹುಲ್‌ ಗಾಂಧಿಯವರೇ, ನೀವು ಬಿಜೆಪಿಯು ಯುವ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಅಭಿನವ್‌ ಪ್ರಕಾಶ್‌ ಅವರೊಂದಿಗೆ ಚರ್ಚೆಗೆ ಬನ್ನಿ” ಎಂದು ಸವಾಲು ಎಸೆಯುವ ಜತೆಗೆ ರಾಹುಲ್‌ ಗಾಂಧಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.

“ರಾಹುಲ್‌ ಗಾಂಧಿ ಅವರೇ, ನಮ್ಮ ಅಭಿನವ್‌ ಪ್ರಕಾಶ್‌ ಅವರು ನಿಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರಲಿದ್ದಾರೆ. ಇವರು ಪಾಸಿ (ಎಸ್‌ಸಿ-ದಲಿತ) ಸಮುದಾಯದ ಪ್ರಮುಖ ನಾಯಕರಾಗಿದ್ದು, ಉನ್ನತ ಶಿಕ್ಷಣ ಪಡೆದಿದ್ದಾರೆ. ನೀವು ಪ್ರತಿನಿಧಿಸುತ್ತಿರುವ ರಾಯ್‌ಬರೇಲಿಯಲ್ಲಿ ಈ ಸಮುದಾಯದ ಶೇ.30ರಷ್ಟು ಜನರಿದ್ದಾರೆ. ರಾಜಕೀಯ ಕುಡಿ (ರಾಹುಲ್‌ ಗಾಂಧಿ) ಹಾಗೂ ಸಾಮಾನ್ಯ ಯುವಕನ (ಅಭಿನವ್‌ ಪ್ರಕಾಶ್)‌ ಮಧ್ಯೆ ಒಂದೊಳ್ಳೆ ಚರ್ಚೆ ನಡೆಯಲಿ. ನೀವು ಚರ್ಚೆಯ ಆಹ್ವಾನವನ್ನು ಸ್ವೀಕರಿಸುತ್ತೀರಿ ಎಂಬುದಾಗಿ ಭಾವಿಸಿದ್ದೇನೆ” ಎಂದು ತೇಜಸ್ವಿ ಸೂರ್ಯ ಪೋಸ್ಟ್‌ ಮಾಡಿದ್ದಾರೆ.

ನಾನು ರೆಡಿ ಎಂದ ಅಭಿನವ್‌ ಪ್ರಕಾಶ್‌

ತೇಜಸ್ವಿ ಸೂರ್ಯ ಅವರು ಪ್ರಸ್ತಾಪಿಸುತ್ತಲೇ ಅಭಿನವ್‌ ಪ್ರಕಾಶ್‌ ಅವರು ಚರ್ಚೆಗೆ ನಾನು ಸಿದ್ಧ ಎಂದಿದ್ದಾರೆ. “ರಾಹುಲ್‌ ಗಾಂಧಿ ವಿರುದ್ಧ ಚರ್ಚಿಸಲು ನನ್ನ ಹೆಸರು ಪ್ರಸ್ತಾಪಿಸಿದ್ದಕ್ಕೆ ಮೊದಲಿಗೆ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದಗಳು. ರಾಹುಲ್‌ ಗಾಂಧಿ ಹಾಗೂ ಅವರ ಕುಟುಂಬಸ್ಥರು ದೀರ್ಘಾವಧಿಗೆ ಪ್ರತಿನಿಧಿಸಿದ ಉತ್ತರ ಪ್ರದೇಶದ ನಾಗರಿಕ ನಾನು. ಅಮೇಥಿಯಿಂದ ದೂರ ಸರಿದಂತೆ ರಾಹುಲ್‌ ಗಾಂಧಿ ಅವರು ಈ ಚರ್ಚೆಯಿಂದಲೂ ಓಡಿ ಹೋಗುವುದಿಲ್ಲ ಎಂಬುದಾಗಿ ಭಾವಿಸಿದ್ದೇನೆ. ಇಲ್ಲದಿದ್ದರೆ ಅವರ ರಾಯ್‌ಬರೇಲಿಯಿಂದಲೂ ಓಡಿಹೋಗಬೇಕಾಗುತ್ತದೆ” ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಹೇಳಿದ್ದೇನು?

“ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಹಿರಂಗವಾಗಿ ಚರ್ಚಿಸಲು ನೂರಕ್ಕೆ ನೂರರಷ್ಟು ಸಿದ್ಧನಿದ್ದೇನೆ” ಎಂಬುದಾಗಿ ಕೆಲ ದಿನಗಳ ಹಿಂದೆ ರಾಹುಲ್‌ ಗಾಂಧಿ ಹೇಳಿದ್ದರು. ಇದಕ್ಕೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿರುಗೇಟು ನೀಡಿದ್ದಾರೆ. ಯಾವ ಸಾಮರ್ಥ್ಯ ಇದೆ ಎಂದು ನೀವು ಮೋದಿ ಅವರನ್ನು ಚರ್ಚೆಗೆ ಕರೆಯುತ್ತಿದ್ದೀರಿ ಎಂದಿದ್ದರು. ಬಿಜೆಪಿಯ ಹಲವು ನಾಯಕರು ಟೀಕಿಸುತ್ತ, ನೀವೇನು ಪ್ರಧಾನಿ ಅಭ್ಯರ್ಥಿಯೇ ಎಂದು ಕುಟುಕಿದ್ದರು. “ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಅವರ ಜತೆ ಒಮ್ಮೆಗೆ ಚರ್ಚೆಗೆ ಬನ್ನಿ” ಎಂದು ಸ್ಮೃತಿ ಇರಾನಿ ಸವಾಲು ಎಸೆದಿದ್ದರು.

ಇದನ್ನೂ ಓದಿ: Narendra Modi: ವಾರಾಣಸಿಯಲ್ಲಿ ಹೊಸ ಅಲೆ ಸೃಷ್ಟಿಸಿದ ಮೋದಿ, ಶಕ್ತಿ ಪ್ರದರ್ಶನ; ರೋಡ್‌ ಶೋ Photos ಇಲ್ಲಿವೆ

Continue Reading
Advertisement
IPL 2024
ಪ್ರಮುಖ ಸುದ್ದಿ5 hours ago

IPL 2024 : ಆರ್​ಸಿಬಿ, ಆರ್​ಆರ್​ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು

Prajwal Revanna Case
ಕರ್ನಾಟಕ5 hours ago

Prajwal Revanna Case: ರೇವಣ್ಣಗೆ ಜಾಮೀನು ಹಿನ್ನೆಲೆ ವಿದೇಶದಿಂದ ಪ್ರಜ್ವಲ್‌ ವಾಪಸ್?‌; ಕೋರ್ಟ್‌ಗೆ ಶರಣಾಗುವ ಸಾಧ್ಯತೆ

Hoarding
ಸಂಪಾದಕೀಯ5 hours ago

ವಿಸ್ತಾರ ಸಂಪಾದಕೀಯ: ಹೋರ್ಡಿಂಗ್ ಕುಸಿತ ಬೆಂಗಳೂರಿಗರಿಗೂ ಎಚ್ಚರಿಕೆಯ ಗಂಟೆ

Sushil Kumar Modi
ಪ್ರಮುಖ ಸುದ್ದಿ5 hours ago

Sushil Kumar Modi : ಬಿಹಾರದ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ನಿಧನ

Tejasvi Surya
ದೇಶ6 hours ago

Tejasvi Surya: ಈ ದಲಿತ ನಾಯಕನ ಜತೆ ಚರ್ಚೆಗೆ ಬನ್ನಿ ರಾಹುಲ್‌ ಗಾಂಧಿ; ತೇಜಸ್ವಿ ಸೂರ್ಯ ಪಂಥಾಹ್ವಾನ!

IPL 2024
ಪ್ರಮುಖ ಸುದ್ದಿ6 hours ago

IPL 2024 : ಮಳೆಯಿಂದಾಗಿ ಪಂದ್ಯ ರದ್ದು, ಕೆಕೆಆರ್​ಗೆ ಮೊದಲೆರಡಲ್ಲೊಂದು ಸ್ಥಾನ ಫಿಕ್ಸ್​

Vidyarthi Vidyarthiniyare Movie
ಕರ್ನಾಟಕ6 hours ago

Vidyarthi Vidyarthiniyare Movie: ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಟ್ರೈಲರ್ ಔಟ್; ಧುಮ್ಮಿಕ್ಕಿದ ಹರೆಯದ ತೊರೆ!

Road Accident Head on collision between bikes One person died on the spot
ಉತ್ತರ ಕನ್ನಡ6 hours ago

Road Accident: ಬೈಕ್‌ಗಳ ನಡುವೆ ಡಿಕ್ಕಿ; ಒಬ್ಬ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

Lok Sabha Election
ದೇಶ7 hours ago

Lok Sabha Election: 28 ವರ್ಷಗಳಲ್ಲೇ ಶ್ರೀನಗರದಲ್ಲಿ ಅಧಿಕ ಮತದಾನ; 370ನೇ ವಿಧಿ ರದ್ದು ಎಫೆಕ್ಟ್?

Award Ceremony
ಬೆಂಗಳೂರು7 hours ago

Award Ceremony: ಬೆಂಗಳೂರಿನಲ್ಲಿ ಮೇ 19ರಂದು ಕಾದಂಬರಿ ಸಾರ್ವಭೌಮ ಅ.ನ.ಕೃ. ಪ್ರಶಸ್ತಿ ಪ್ರದಾನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

HD Revanna Bail Revanna will not leave the country condition imposed by the court
ಕ್ರೈಂ10 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

Prajwal Revanna case HD Revanna finally gets bail What was the argument like
ಕ್ರೈಂ10 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ11 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ11 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ11 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ18 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ22 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ24 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ1 day ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

ಟ್ರೆಂಡಿಂಗ್‌