Israel Hamas War: ಗಾಜಾ ಮೇಲೆ ಇಸ್ರೇಲ್‌ ದಾಳಿ; ಹಮಾಸ್‌ 'ಮಿಲಿಟರಿ ಚೀಫ್' ಸೇರಿ 71 ಮಂದಿಯ ಹತ್ಯೆ - Vistara News

ವಿದೇಶ

Israel Hamas War: ಗಾಜಾ ಮೇಲೆ ಇಸ್ರೇಲ್‌ ದಾಳಿ; ಹಮಾಸ್‌ ‘ಮಿಲಿಟರಿ ಚೀಫ್’ ಸೇರಿ 71 ಮಂದಿಯ ಹತ್ಯೆ

Israel Hamas War: ಇಸ್ರೇಲ್‌ ಮೇಲೆ ನಿರಂತರವಾಗಿ ದಾಳಿಗೆ ಪಿತೂರಿ ನಡೆಸುವ, 2023ರ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸುವ ಯೋಜನೆಯ ರೂವಾರಿ ಎನಿಸಿರುವ ಮೊಹಮ್ಮದ್‌ ಡೈಫ್‌ ಹತ್ಯೆಗಾಗಿ ಹಲವು ವರ್ಷಗಳಿಂದಲೂ ಇಸ್ರೇಲ್‌ ಗುಪ್ತಚರ ಇಲಾಖೆಯು ಪ್ಲಾನ್‌ ಮಾಡಿತ್ತು ಎಂದು ಹೇಳಲಾಗುತ್ತಿದೆ. ಕೊನೆಗೆ ಆತನನ್ನು ಹೊಡೆದುರುಳಿಸುವಲ್ಲಿ ಇಸ್ರೇಲ್‌ ಯಶಸ್ವಿಯಾಗಿದೆ.

VISTARANEWS.COM


on

Israel Hamas War
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೆರುಸಲೇಂ: 2023ರ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು (Israel Hamas War) ನಡೆಸಿದ ದಾಳಿಗೆ ನಿರಂತರವಾಗಿ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್‌, ಹಮಾಸ್‌ ಉಗ್ರರನ್ನು ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಗಾಜಾ ಪಟ್ಟಿಯ ಖಾನ್‌ ಯೌನಿಸ್‌ (Khan Younis) ಪ್ರದೇಶದ ಮೇಲೆ ಇಸ್ರೇಲ್‌ ಭೀಕರ ದಾಳಿ ನಡೆಸಿದ್ದು, ಅಕ್ಟೋಬರ್‌ 7ರ ದಾಳಿಯ ರೂವಾರಿ, ಹಮಾಸ್‌ ಮಿಲಿಟರಿ ವಿಭಾಗದ ಮುಖ್ಯಸ್ಥ ಮೊಹಮ್ಮದ್‌ ಡೈಫ್ (Mohammed Deif)‌ ಎಂಬಾತನನ್ನು ಹತ್ಯೆ ಮಾಡಲಾಗಿದೆ. ಆದರೆ, ಇಸ್ರೇಲ್‌ ದಾಳಿಯಲ್ಲಿ 71 ಮಂದಿ ಮೃತಪಟ್ಟಿದ್ದಾರೆ.

ಖಾನ್‌ ಯೌನಿಸ್‌ ಪ್ರದೇಶವು ಹಮಾಸ್‌ ಉಗ್ರರ ಸುರಕ್ಷಿತ ತಾಣ ಎಂದೇ ಖ್ಯಾತಿ ಪಡೆದಿದೆ. ಇದರ ಮೇಲೆ ಇಸ್ರೇಲ್‌ ಭೀಕರ ದಾಳಿ ನಡೆಸಿದ ಕಾರಣ 71 ಮಂದಿ ಮೃತಪಟ್ಟರೆ, 289 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ನಾಗರಿಕರು ಎಂದು ಗಾಜಾ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ. ಹಾಗೆಯೇ, ಗಾಜಾ ನಗರದ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.

ಇಸ್ರೇಲ್‌ ಮೇಲೆ ನಿರಂತರವಾಗಿ ದಾಳಿಗೆ ಪಿತೂರಿ ನಡೆಸುವ, 2023ರ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸುವ ಯೋಜನೆಯ ರೂವಾರಿ ಎನಿಸಿರುವ ಮೊಹಮ್ಮದ್‌ ಡೈಫ್‌ ಹತ್ಯೆಗಾಗಿ ಹಲವು ವರ್ಷಗಳಿಂದಲೂ ಇಸ್ರೇಲ್‌ ಗುಪ್ತಚರ ಇಲಾಖೆಯು ಪ್ಲಾನ್‌ ಮಾಡಿತ್ತು ಎಂದು ಹೇಳಲಾಗುತ್ತಿದೆ. ಖಾನ್‌ ಯೌನಿಸ್‌ ಪ್ರದೇಶದಲ್ಲಿ ಮೊಹಮ್ಮದ್‌ ಡೈಫ್‌ ಅಡಗಿರುವ ಕುರಿತು ನಿಖರ ಮಾಹಿತಿ ಪಡೆದ ಇಸ್ರೇಲ್‌ ಯೋಧರು ದಾಳಿಯ ಮೂಲಕ ಆತನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ 1,200 ನಾಗರಿಕರ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಸ್ರೇಲ್, ಗಾಜಾಪಟ್ಟಿಯಲ್ಲಿನ ಹಮಾಸ್ ಉಗ್ರರನ್ನು ನಾಶ ಮಾಡುವ ಪಣತೊಟ್ಟು, ಸೇನಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ. ಗಾಜಾ ನಗರದ ಮೇಲೆ ಇಸ್ರೇಲ್‌ ನಡೆಸುತ್ತಿರುವ ನಿರಂತರ ದಾಳಿಗಳಿಂದಾಗಿ ಸಾವಿರಾರು ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಸಾವಿರಾರು ಕಟ್ಟಡಗಳು ಧರೆಗುರುಳಿವೆ. ಇಷ್ಟಾದರೂ ಇಸ್ರೇಲ್‌ ಪ್ರತಿದಾಳಿ ನಿಲ್ಲಿಸುತ್ತಿಲ್ಲ.

ಇದನ್ನೂ ಓದಿ: Israel-Hamas Conflict: ಇಸ್ರೇಲ್‌ ಏರ್‌ಸ್ಟ್ರೈಕ್- ಹಮಾಸ್‌ ಕಮಾಂಡರ್‌ ಹತ್ಯೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Model Arrest: ತನ್ನ ಫಾಲೋವರ್ಸ್‌ಗಳನ್ನೇ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದ ಖ್ಯಾತ ಮಾಡೆಲ್‌ಗೆ ಜೈಲು ಶಿಕ್ಷೆ!

Model Arrest: ಬ್ರೆಜಿಲ್‌ನ ಮಾಜಿ ರೂಪದರ್ಶಿ ಕ್ಯಾಟ್ ಟೊರೆಸ್ ಅನ್ನು ಮಾನವ ಕಳ್ಳಸಾಗಣೆ ಮತ್ತು ಮಹಿಳೆಯರ ಗುಲಾಮಗಿರಿಗಾಗಿ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅವಳೊಂದಿಗೆ ವಾಸವಾಗಿದ್ದ ಇಬ್ಬರು ಮಹಿಳೆಯರು 2022ರಲ್ಲಿ ಕಾಣೆಯಾಗಿದ್ದರು. ಈ ಬಗ್ಗೆ ಎಫ್ಐಆರ್ ದಾಖಲಿಸಿದ ಪೊಲೀಸರು ತನಿಖೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆಕೆ ತನ್ನ ಫಾಲೋವರ್ಸ್‌ಗಳನ್ನು ಲೈಂಗಿಕ ಕೆಲಸದಲ್ಲಿ ತೊಡಗುವಂತೆ ಒತ್ತಾಯಿಸಿ ಅವರನ್ನು ತನ್ನ ಗುಲಾಮರಂತೆ ಇರಿಸಿಕೊಳ್ಳುತ್ತಿದ್ದಳು ಎಂಬುದಾಗಿ ತಿಳಿದು ಬಂದಿದೆ.

VISTARANEWS.COM


on

Model Arrest
Koo

ಬ್ರೆಜಿಲ್‌ನ ಮಾಜಿ ರೂಪದರ್ಶಿ ಮತ್ತು ಅಮೆರಿಕ ಮೂಲದ ವೆಲ್ನೆಸ್ ಇನ್ಫ್ಲುಯೆನ್ಸರ್ ಕ್ಯಾಟ್ ಟೊರೆಸ್‌ ಎಂಬುವಳನ್ನು ಮಾನವ ಕಳ್ಳಸಾಗಣೆ ಮತ್ತು ಮಹಿಳೆಯರ ಗುಲಾಮಗಿರಿಗಾಗಿ ಎಂಟು ವರ್ಷಗಳ ಜೈಲು ಶಿಕ್ಷೆ (Model Arrest) ವಿಧಿಸಲಾಗಿದೆ. ಅವಳೊಂದಿಗೆ ವಾಸವಾಗಿದ್ದ ಇಬ್ಬರು ಮಹಿಳೆಯರು 2022ರಲ್ಲಿ ಕಾಣೆಯಾಗಿದ್ದರು. ಈ ಬಗ್ಗೆ ಎಫ್‌ಐಆರ್ ದಾಖಲಿಸಿದ ಪೊಲೀಸರು ತನಿಖೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆಕೆ ತನ್ನ ಫಾಲೋವರ್ಸ್‌ಗಳನ್ನು ಲೈಂಗಿಕ ಕೆಲಸದಲ್ಲಿ ತೊಡಗುವಂತೆ ಒತ್ತಾಯಿಸಿ ಅವರನ್ನು ತನ್ನ ಗುಲಾಮರಂತೆ ಇರಿಸಿಕೊಳ್ಳುತ್ತಿದ್ದಳು ಎಂಬುದಾಗಿ ತಿಳಿದುಬಂದಿದೆ.

ಆಕೆಯಿಂದ ಗುಲಾಮಗಿರಿಗೆ ಒಳಗಾದ ಆ ಮಹಿಳೆಯರು ಆಕೆಯೊಂದಿಗೆ ವಾಸವಿದ್ದಾಗ ಅನುಭವಿಸಿದ ಭಯಾನಕ ಘಟನೆಗಳ ಬಗ್ಗೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಂತ್ರಸ್ತ ಮಹಿಳೆಯರು, ಆಕೆ ಮರುಳು ಮಾಡುವಂತೆ ಮಾತನಾಡುತ್ತಿದ್ದಳು. ಅವಳು ಹೇಳುವ ಮಾತನ್ನು ಕೇಳಿ ಆಕರ್ಷಿತರಾದೆವು. ನಟ ಲಿಯೊನಾರ್ಡೊ ಡಿಕಾಪ್ರಿಯೊ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಎಂದು ಒಂದು ಕಾಲದಲ್ಲಿ ವದಂತಿಗಳಿದ್ದ ಟೊರೆಸ್, ತನ್ನ ಆಧ್ಯಾತ್ಮಿಕ ಶಕ್ತಿಯನ್ನು ಬಳಸಿಕೊಂಡು ಭವಿಷ್ಯ ನುಡಿಯಬಹುದು ಎಂದು ಪ್ರಸಿದ್ಧ ಬ್ರೆಜಿಲಿಯನ್ ಟಿವಿ ಕಾರ್ಯಕ್ರಮಗಳಲ್ಲಿ ಹೇಳಿದ್ದಳು. ಅಲ್ಲದೇ ಅವಳು ಮ್ಯಾಗಜೀನ್‌ಗಳ ಮುಖಪುಟಗಳಲ್ಲಿ ಕಾಣಿಸಿಕೊಂಡಿದ್ದಳು. ಹಾಲಿವುಡ್‌ ನಟ ಲಿಯೊನಾರ್ಡೊ ಡಿಕಾಪ್ರಿಯೊ ಅವರಂತಹ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಕಾಣಿಸಿಕೊಂಡಳು. ಹಾಗಾಗಿ ಆಕೆ ಹೇಳುವುದನ್ನು ತಾವು ನಂಬಿರುವುದಾಗಿ ಮಹಿಳೆಯರು ತಿಳಿಸಿದ್ದಾರೆ.

Model Arrest

ಆಕೆ ವೆಲ್‍ನೆಸ್ ವೆಬ್‍ಸೈಟ್‍ ಮತ್ತು ಚಂದಾದಾರಿಕೆ ಸೇವೆಯನ್ನು ಅಭಿವೃದ್ಧಿಪಡಿಸಿ ಅದರಲ್ಲಿ ಸಂಬಂಧಗಳು, ಯೋಗಕ್ಷೇಮ, ಸಂಮೋಹನ, ಧ್ಯಾನ ಮತ್ತು ವ್ಯಾಯಾಮ ಕಾರ್ಯಕ್ರಮಗಳು ಸೇರಿದಂತೆ ವ್ಯವಹಾರ ಯಶಸ್ಸಿನ ಬಗ್ಗೆ ಸಲಹೆ ನೀಡುವ ಸ್ವ-ಸಹಾಯ ವೀಡಿಯೊಗಳನ್ನು ಸಹ ಮಾಡುತ್ತಿದ್ದಳು. ಹಾಗೇ ವಿಡಿಯೋ ಸಮಾಲೋಚನೆಗಳ ಮೂಲಕ ಮುಖಾಮುಖಿ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಳು.

ಹಾಗಾಗಿ ಆ ಮಹಿಳೆಯರು 2019ರಲ್ಲಿ ಟೊರೆಸ್ ಅವರ ಲೈವ್-ಇನ್ ಸಹಾಯಕರಾಗಿ ಕೆಲಸ ಮಾಡಲು ನ್ಯೂಯಾಕ್‌ಗೆ ತೆರಳಿದರು. ಅಲ್ಲಿ ಅವಳ ಮನೆಕೆಲಸ ಹಾಗೂ ಪ್ರಾಣಿಗಳನ್ನು ನೋಡಿಕೊಳ್ಳುವ ಕೆಲಸದಲ್ಲಿ ನಿರತಳಾಗಿದ್ದರು. ಆದರೆ ಆಕೆ ಸಂಬಳ ಸರಿಯಾಗಿ ನೀಡುತ್ತಿರಲಿಲ್ಲ. ನಂತರ ಸ್ಥಳೀಯ ಸ್ಟ್ರಿಪ್ ಕ್ಲಬ್‍ನಲ್ಲಿ ಕೆಲಸ ಮಾಡುವಂತೆ ಅವರ ಮೇಲೆ ಒತ್ತಡ ಹೇರಿದ್ದಳು. ಇದಕ್ಕೆ ಅವರು ಒಪ್ಪದಿದ್ದಾಗ ಅವರನ್ನು ಯಾಮಾರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಮಾಡಿದ್ದಳು.

ಇದನ್ನೂ ಓದಿ: ತರಕಾರಿ ಮಾರುವವಳ ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

ನಂತರ ಇಬ್ಬರು ಮಹಿಳೆಯರ ಸ್ನೇಹಿತರು ಮತ್ತು ಕುಟುಂಬವು ಅವರನ್ನು ಹುಡುಕಲು ಸಾಮಾಜಿಕ ಮಾಧ್ಯಮ ಅಭಿಯಾನಗಳನ್ನು ಪ್ರಾರಂಭಿಸಿತು. ಮಾಧ್ಯಮಗಳ ಗಮನದಿಂದ ತಪ್ಪಿಸಿಕೊಳ್ಳಲು, ಟೊರೆಸ್ ಆ ಮಹಿಳೆಯರಿಗೆ ತಾವು ಆರಾಮವಾಗಿ ಇದ್ದೀವಿ ಎಂದು ವಿಡಿಯೊ ಪೋಸ್ಟ್ ಮಾಡುವಂತೆ ಒತ್ತಾಯಿಸಿದ್ದಳು. ಈ ರೀತಿ ಆಕೆ ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದಳು ಎನ್ನಲಾಗಿದೆ. 20 ಕ್ಕೂ ಹೆಚ್ಚು ಮಹಿಳೆಯರು ಟೊರೆಸ್‌ನಿಂದ ವಂಚನೆಗೊಳಗಾದ ಅಥವಾ ಶೋಷಣೆಗೊಳಗಾದ ಬಗ್ಗೆ ತಿಳಿಸಿದ್ದಾರೆ. ಅವರು ಅನುಭವಿಸಿದ ಮತ್ತು ಅನುಭವದಿಂದ ಚೇತರಿಸಿಕೊಳ್ಳಲು ಅವರು ಇನ್ನೂ ಮನೋವೈದ್ಯಕೀಯ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.

Continue Reading

Latest

Viral News: ಬಾಸ್‌ ಜತೆ ಚಕ್ಕಂದವಾಡುತ್ತಿದ್ದ ಕಿಲಾಡಿ ಪತ್ನಿ; ಡ್ರೋನ್‌ ಬಳಸಿ ಪತ್ತೆ ಹಚ್ಚಿದ ಚಾಲಾಕಿ ಗಂಡ!

Viral News: ಗಂಡನಿಗೆ ಹೆಂಡತಿಯ ಮೇಲೆ ಅನುಮಾನ, ಹೆಂಡತಿಗೆ ಗಂಡನ ಮೇಲೆ ಅನುಮಾನ ಇದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಚೀನಾದಲ್ಲಿ ವಾಸಿಸುವ ವ್ಯಕ್ತಿಯೊಬ್ಬನಿಗೆ ತನ್ನ ಪತ್ನಿ ತನ್ನನ್ನು ನಿರ್ಲಕ್ಷಿಸುತ್ತಿರುವುದು ತಿಳಿದುಬಂದಿದೆ. ಇದರಿಂದ ಆತನಿಗೆ ತನ್ನ ಪತ್ನಿಯ ಮೇಲೆ ಅನುಮಾನ ಶುರುವಾಗಿದೆ. ಹಾಗಾಗಿ ಆತ ತನ್ನ ಹೆಂಡತಿಯ ಚಲನವಲನಗಳನ್ನು ಪತ್ತೆಹಚ್ಚಲು ಡ್ರೋನ್ ಅನ್ನು ಬಳಸಲು ಆತ ನಿರ್ಧರಿಸಿದ. ಕೊನೆಗೂ ಆತನ ಪತ್ನಿ ಬಾಸ್‌ ಜತೆ ಸರಸವಾಡುತ್ತಿರುವುದು ಡ್ರೋನ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ

VISTARANEWS.COM


on

Viral News
Koo

ಅಕ್ರಮ ಸಂಬಂಧದ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಕೇಳಿಬರುತ್ತಿದೆ. ಪತಿ ಪತ್ನಿಯರು ಒಬ್ಬರು, ಇನ್ನೊಬ್ಬರಿಗೆ ತಿಳಿಯದಂತೆ ತಮ್ಮ ಕಚೇರಿಗಳಲ್ಲಿ, ಅಥವಾ ಇನ್ನಿತರ ಸ್ಥಳಗಳಲ್ಲಿ ಬೇರೆಯವರೊಡನೆ ಅಕ್ರಮ ಸಂಬಂಧವನ್ನು ಹೊಂದುವ ಪ್ರಕರಣಗಳು ಬಯಲಾಗುತ್ತಿವೆ. ಇದು ಈಗ ಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ಆದರೆ ಇದೀಗ ಮಹಿಳೆಯೊಬ್ಬಳು ತಮ್ಮ ಬಾಸ್ ಜೊತೆ ಅಕ್ರಮ ಸಂಬಂಧವನ್ನು ಹೊಂದಿದ್ದು, ಇದರಿಂದ ಅನುಮಾನಗೊಂಡಿದ್ದ ಪತಿ ತನ್ನ ಹೆಂಡತಿಯ ರಹಸ್ಯ ಸಂಬಂಧವನ್ನು ಕಂಡುಹಿಡಿಯಲು ಡ್ರೋನ್ ಬಳಸಿ ಯಶಸ್ವಿಯಾಗಿದ್ದಾನೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News )ಆಗಿದೆ.

Viral News

ಮಧ್ಯ ಹುಬೈ ಪ್ರಾಂತ್ಯದ ಶಿಯಾನ್‍ನಲ್ಲಿ ವಾಸಿಸುವ 33 ವರ್ಷದ ವ್ಯಕ್ತಿಯೊಬ್ಬನಿಗೆ ತನ್ನ ಪತ್ನಿ ತನ್ನನ್ನು ನಿರ್ಲಕ್ಷಿಸುತ್ತಿರುವುದು ತಿಳಿದುಬಂದಿದೆ. ಇದರಿಂದ ಆತನಿಗೆ ತನ್ನ ಪತ್ನಿಯ ಮೇಲೆ ಅನುಮಾನ ಶುರುವಾಗಿದೆ. ಅಲ್ಲದೇ ಆತನ ಪತ್ನಿಗೆ ಕೆಲಸದಲ್ಲಿ ಪ್ರಮೋಷನ್ ಸಿಕ್ಕಿದ್ದು, ತನ್ನ ಹೆತ್ತವರನ್ನು ಆಗಾಗ ಭೇಟಿ ಮಾಡಲು ಹೋಗುವುದು ಆತನಲ್ಲಿ ಅನುಮಾನವನ್ನುಂಟುಮಾಡಿದೆ. ಹಾಗಾಗಿ ಆತ ತನ್ನ ಹೆಂಡತಿಯ ಚಲನವಲನಗಳನ್ನು ಪತ್ತೆಹಚ್ಚಲು ಡ್ರೋನ್ ಅನ್ನು ಬಳಸಲು ನಿರ್ಧರಿಸಿದನು. ಪತ್ನಿಯ ಹಿಂದೆ ಡ್ರೋನ್ ಅನ್ನು ಕಳುಹಿಸಿದ ಆತ ಆಕೆ ಕಾರೊಂದರಲ್ಲಿ ದೂರದ ಪರ್ವತ ಪ್ರದೇಶಕ್ಕೆ ಹೋಗುವುದು ಕಂಡುಬಂದಿದೆ. ನಂತರ ಅಲ್ಲಿ ಅವಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಕೈ ಕೈ ಹಿಡಿದು ನಡೆದು ಪಾಳುಬಿದ್ದ ಮಣ್ಣಿನ ಗೋಡೆಯ ಮನೆಯೊಳಗೆ ಹೋಗುತ್ತಿರುವುದು ಕಂಡಿದೆ. ಸುಮಾರು 20 ನಿಮಿಷಗಳ ನಂತರ, ಅವರು ಕಟ್ಟಡದಿಂದ ಹೊರಬಂದು ನಂತರ ಅವಳು ತನ್ನ ಕೆಲಸ ಮಾಡುವ ಕಾರ್ಖಾನೆಗೆ ಹಿಂತಿರುಗಿದ್ದಾಳೆ. ಆಗ ಪತಿಗೆ ಆಕೆಗೆ ಅಕ್ರಮ ಸಂಬಂಧವಿರುವುದು ತಿಳಿದು ಬಂದಿದೆ.

ಹಾಗಾಗಿ ಡ್ರೋನ್‍ನಿಂದ ಸಂಗ್ರಹಿಸಿದ ಪುರಾವೆಗಳಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾನೆ ಎನ್ನಲಾಗಿದೆ. ಹಾಗೇ ಅವಳಿಗೆ ತನ್ನ ಬಾಸ್ ಜೊತೆ ಅಕ್ರಮ ಸಂಬಂಧವಿದ್ದು, ಕಾರ್ಖಾನೆಯಲ್ಲಿ ಅವರಿಗೆ ಸಂಬಂಧ ಹೊಂದಲು ಸಮಸ್ಯೆಯಾಗುತ್ತದೆ ಎಂದು ದೂರದ ಕಾಡಿನಲ್ಲಿ ಈ ಕೆಲಸ ಮಾಡಲು ಮುಂದಾಗಿರುವುದಾಗಿ ಪತಿ ತಿಳಿಸಿದ್ದಾನೆ. ಈ ವಿಚಾರವನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದು, ಪತ್ನಿಯ ಮೋಸವನ್ನು ಡ್ರೋನ್ ಮೂಲಕ ಬಯಲು ಮಾಡಿರುವ ಬಗ್ಗೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಕೆಲವರು ಡ್ರೋನ್ ತಂತ್ರಜ್ಞಾನದಿಂದ ಆತನ ಪತ್ನಿಯ ಮೋಸ ಬಯಲಾಗಿದೆ ಎಂದು ಹೊಗಳಿದ್ದಾರೆ. ಹಾಗೇ ಡ್ರೋನ್‍ನಂತಹ ತಂತ್ರಜ್ಞಾನ ಇರುವ ಈ ಕಾಲದಲ್ಲಿ ಇಂತಹ ಮೋಸ ನಡೆಯುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  ಹೆಣ್ಣು ಮಕ್ಕಳಿಗೆ ಈಗ ಶಾಲೆ ಕೂಡ ಸುರಕ್ಷಿತವಲ್ಲ! ಶಾಲಾ ಶೌಚಾಲಯದಲ್ಲಿ ಬಾಲಕಿ ಮೇಲೆ ಬಾಲಕನಿಂದ ಅತ್ಯಾಚಾರ

ಡ್ರೋನ್ ತಂತ್ರಜ್ಞಾನ ಇತೀಚಿನ ದಿನಗಳಲ್ಲಿ ಹೆಚ್ಚಿನ ಕೆಲಸಕ್ಕೆ ಬಳಸಲಾಗುತ್ತಿದೆ. ಏಪ್ರಿಲ್ 2022ರಲ್ಲಿ ಶಾಂಘೈನಲ್ಲಿ ಕಟ್ಟುನಿಟ್ಟಾದ ಕೋವಿಡ್ -19 ಲಾಕ್‍ಡೌನ್ ಇದ್ದಾಗ, ವ್ಯಕ್ತಿಯೊಬ್ಬರು ಎತ್ತರದ ಕಟ್ಟಡದಲ್ಲಿ ವಾಸಿಸುತ್ತಿದ್ದ ನೆರೆಹೊರೆಯವರಿಗೆ ಮೀನು ಮತ್ತು ತರಕಾರಿಗಳಂತಹ ದೈನಂದಿನ ಅಗತ್ಯ ವಸ್ತುಗಳನ್ನು ಡ್ರೋನ್‍ನಲ್ಲಿ ವಿತರಿಸಿ ಗಮನ ಸೆಳೆದಿದ್ದರು.

Continue Reading

ವಿದೇಶ

Donald Trump: ಬೆದರಿಕೆಗೆ ಬಗ್ಗದ ಡೊನಾಲ್ಡ್‌ ಟ್ರಂಪ್;‌ ಕಿವಿಗೆ ಬ್ಯಾಂಡೇಜ್‌ ಕಟ್ಟಿಕೊಂಡು ಜನರೆದುರು ಪ್ರತ್ಯಕ್ಷ!

Donald Trump: ಡೊನಾಲ್ಡ್‌ ಟ್ರಂಪ್‌ ಅವರು ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಜುಲೈ 13ರ ಸಂಜೆ ಆಯೋಜಿಸಿದ್ದ ರ‍್ಯಾಲಿಯ ವೇಳೆ ನಡೆದ ಗುಂಡಿನ ದಾಳಿಯಿಂದ ಪಾರಾದ ಬಳಿಕ ಡೊನಾಲ್ಡ್ ಟ್ರಂಪ್ ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರು ಕಿವಿಗೆ ಬ್ಯಾಂಡೇಜ್‌ ಕಟ್ಟಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಬೆದರಿಕೆಗೆ ಜಗ್ಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

VISTARANEWS.COM


on

Donald Trump
Koo

ವಾಷಿಂಗ್ಟನ್:‌ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ (US Presidential Election 2024) ಕೆಲವೇ ತಿಂಗಳು ಬಾಕಿ ಉಳಿದಿವೆ. ರಿಪಬ್ಲಿಕನ್‌ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಕಣಕ್ಕಿಳಿದಿದ್ದಾರೆ. ಇನ್ನು ಜುಲೈ 23ರಂದು ಡೊನಾಲ್ಡ್‌ ಟ್ರಂಪ್‌ ಅವರ ಮೇಲೆ ಗುಂಡಿನ ದಾಳಿ ಮೂಲಕ ಹತ್ಯೆಗೆ ಯತ್ನಿಸಿದ ಬಳಿಕ ಮಾಜಿ ಅಧ್ಯಕ್ಷರು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಗುಂಡು ತಗುಲಿದ ಕಿವಿಗೆ ಬ್ಯಾಂಡೇಜ್‌ ಕಟ್ಟಿಕೊಂಡಿರುವ ಡೊನಾಲ್ಡ್‌ ಟ್ರಂಪ್‌, ಸಾರ್ವಜನಿಕವಾಗಿ ಪ್ರತ್ಯಕ್ಷರಾಗಿದ್ದಾರೆ.

ಜುಲೈ 15ರಂದು ಪಿಸರ್ವ್‌ ಫೋರಂ ಮಿಲ್ವೌಕಿಯಲ್ಲಿನಡೆದ ರಿಪಬ್ಲಿಕನ್‌ ನ್ಯಾಷನಲ್‌ ಕನ್ವೆನ್ಶನ್‌ನಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು ಕಾಣಿಸಿಕೊಂಡಿದ್ದು, ಸಾವಿರಾರು ಜನ ಟ್ರಂಪ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಸಮಾವೇಶದಲ್ಲಿ ನೆರೆದಿದ್ದ ಜನರನ್ನು ಕಂಡು, ಅವರು ಕೂಗುತ್ತಿದ್ದ ಘೋಷಣೆ ಕೇಳಿ ಡೊನಾಲ್ಡ್‌ ಟ್ರಂಪ್‌ ಅವರು ಭಾವುಕರಾಗಿದ್ದಾರೆ. ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಟ್ರಂಪ್‌ ಅವರು ಧನ್ಯವಾದ ತಿಳಿಸಿದ್ದಾರೆ. ಇದರೊಂದಿಗೆ, ಗುಂಡಿನ ದಾಳಿ ಬಳಿಕ ಡೊನಾಲ್ಡ್‌ ಟ್ರಂಪ್‌ ಅವರ ಮೇಲೆ ಅನುಕಂಪ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.

ಅಮೆರಿಕದ ಮಾಧ್ಯಮ ವರದಿಗಳು ಶೂಟರ್‌ನನ್ನು 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಿವೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್‌ನಿಂದ ಕ್ರೂಕ್ಸ್, ಬಟ್ಲರ್‌ನಲ್ಲಿ ಹೊರಾಂಗಣ ರ‍್ಯಾಲಿಯಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಿದ್ದಾನೆ. ಅದರಲ್ಲಿ ಒಂದು ಬುಲೆಟ್ ಟ್ರಂಪ್ ಕಿವಿಗೆ ತಾಗಿತು. ಬಟ್ಲರ್ ಫಾರ್ಮ್ ಶೋ ಮೈದಾನದಲ್ಲಿ ವೇದಿಕೆಯಿಂದ 130 ಗಜಗಳಷ್ಟು ದೂರದಲ್ಲಿರುವ ಉತ್ಪಾದನಾ ಘಟಕದ ಚಾವಣಿಯ ಮೇಲೆ ಕ್ರೂಕ್ಸ್ ಗನ್‌ ಸಮೇತ ಇದ್ದ ಎನ್ನಲಾಗಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಅಮೆರಿಕದ ಭದ್ರತಾ ಸಿಬ್ಬಂದಿಯು ಥಾಮಸ್ ಮ್ಯಾಥ್ಯೂ ಕ್ರೂಕ್ಸ್‌ನನ್ನು ಹೊಡೆದುರುಳಿಸಿದರು.

ಡೊನಾಲ್ಡ್‌ ಟ್ರಂಪ್‌ ಅವರು ಗುಂಡಿನ ದಾಳಿ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದರು. ಟ್ರಂಪ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಘಟನೆ ಬಗ್ಗೆ ಪೋಸ್ಟ್‌ವೊಂದನ್ನು ಮಾಡಿದ್ದು, ನಾನು ಗುಸುಗುಸು ಶಬ್ದ, ಗುಂಡೇಟಿನ ಶಬ್ದ ಕೇಳಿದಾಗ ಏನೋ ತಪ್ಪಾಗಿದೆ ಎಂದು ನನಗೆ ತಕ್ಷಣ ತಿಳಿದಿತ್ತು ಮತ್ತು ಗುಂಡು ಚರ್ಮವನ್ನು ಸೀಳುತ್ತಿರುವುದನ್ನು ತಕ್ಷಣವೇ ಅನುಭವಿಸಿದೆ, ನಮ್ಮ ದೇಶದಲ್ಲಿ ಇಂತಹ ಕೃತ್ಯ ನಡೆಯುವುದು ನಂಬಲಸಾಧ್ಯ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ: Trump Assassination Bid: ಟ್ರಂಪ್‌ ಮೇಲೆ ಗುಂಡಿನ ದಾಳಿ; ಶೂಟರ್‌ ಫೋಟೋ ರಿಲೀಸ್‌- ಆತನ ಸ್ನೇಹಿತರು ಹೇಳಿದ್ದೇನು?

Continue Reading

ದೇಶ

Made In Bihar: ರಷ್ಯಾ ಸೈನ್ಯಕ್ಕೆ ಬಿಹಾರದಿಂದ ಸೇಫ್ಟಿ ಶೂ ಪೂರೈಕೆ; ವಾರ್ಷಿಕ 100 ಕೋಟಿ ರೂ. ವ್ಯವಹಾರ

Made In Bihar: ರಷ್ಯಾ ಸೈನಿಕರು ಬಿಹಾರದ ಹಾಜಿಪುರದಲ್ಲಿ ತಯಾರಿಸುವ ‘ಮೇಡ್ ಇನ್ ಬಿಹಾರ್’ ಶೂಗಳನ್ನು ಬಳಸುತ್ತಿದ್ದಾರೆ. ಹೌದು, ಬಿಹಾರದ ಹಾಜಿಪುರ ನಗರವು ರಷ್ಯಾದ ಸೈನ್ಯಕ್ಕಾಗಿ ಸೇಫ್ಟಿ ಶೂ ತಯಾರಿಸುವ ಮೂಲಕ ಜಗತ್ತಿನ ಗಮನ ಸೆಳೆದಿದೆ. ಹಾಜಿಪುರ ಮೂಲದ ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್‌ ಕಂಪನಿ ರಷ್ಯಾಕ್ಕೆ ಸೇಫ್ಟಿ ಬೂಟ್‌ ಮತ್ತು ಯುರೋಪಿಯನ್ ಮಾರುಕಟ್ಟೆಗಳಿಗೆ ಡಿಸೈನರ್ ಶೂಗಳನ್ನು ಪೂರೈಸುತ್ತಿದೆ.

VISTARANEWS.COM


on

Made In Bihar
Koo

ಪಟನಾ: ರಷ್ಯಾ ಸೇನೆ (Russian soldiers)ಯು ಉಕ್ರೇನ್‌ ವಿರುದ್ಧ ಯುದ್ಧ ಮುಂದುವರಿಸಿದೆ. ವಿಶೇಷ ಎಂದರೆ ಈ ಕಾರ್ಯಾಚರಣೆಗೆ ರಷ್ಯಾ ಸೈನಿಕರು ಬಿಹಾರದ ಹಾಜಿಪುರ (Hajipur)ದಲ್ಲಿ ತಯಾರಿಸುವ ‘ಮೇಡ್ ಇನ್ ಬಿಹಾರ್’ (Made In Bihar) ಶೂಗಳನ್ನು ಬಳಸುತ್ತಿದ್ದಾರೆ.

ಕೃಷಿ ಉತ್ಪಾದನೆಗೆ ಹೆಸರುವಾಸಿಯಾದ ಬಿಹಾರದ ಹಾಜಿಪುರ ನಗರವು ರಷ್ಯಾದ ಸೈನ್ಯಕ್ಕಾಗಿ ಸೇಫ್ಟಿ ಶೂ ತಯಾರಿಸುವ ಮೂಲಕ ಜಗತ್ತಿನ ಗಮನ ಸೆಳೆದಿದೆ. ಹಾಜಿಪುರ ಮೂಲದ ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್‌ (Competence Exports) ಖಾಸಗಿ ಕಂಪನಿಯಾಗಿದ್ದು, ರಷ್ಯಾಕ್ಕೆ ಸೇಫ್ಟಿ ಬೂಟ್‌ ಮತ್ತು ಯುರೋಪಿಯನ್ ಮಾರುಕಟ್ಟೆಗಳಿಗೆ ಡಿಸೈನರ್ ಶೂಗಳನ್ನು ಪೂರೈಸುತ್ತಿದೆ.

ಈ ಬಗ್ಗೆ ಮಾತನಾಡಿದ ಜನರಲ್ ಮ್ಯಾನೇಜರ್ ಶಿಬ್ ಕುಮಾರ್ ರಾಯ್, “ನಾವು 2018ರಲ್ಲಿ ಹಾಜಿಪುರದಲ್ಲಿ ಈ ಕಂಪನಿ ಆರಂಭಿಸಿದೆವು. ಸ್ಥಳೀಯರಿಗೆ ಉದ್ಯೋಗವನ್ನು ಸೃಷ್ಟಿಸುವುದು ನಮ್ಮ ಮುಖ್ಯ ಗುರಿ. ಹಾಜಿಪುರದಲ್ಲಿ ನಾವು ರಷ್ಯಾಕ್ಕೆ ರಫ್ತು ಮಾಡಬಹುದಾದ ಸೇಫ್ಟಿ ಶೂಗಳನ್ನು ತಯಾರಿಸುತ್ತೇವೆ. ರಷ್ಯಾದ ಜತೆಗೆ ಯುರೋಪ್‌ಗೂ ರಫ್ತು ಮಾಡುತ್ತಿದ್ದೇವೆ. ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ವಹಿವಾಟು ಪ್ರಾರಂಭಿಸಲಿದ್ದೇವೆʼʼ ಎಂದು ತಿಳಿಸಿದ್ದಾರೆ.

ರಷ್ಯಾ ಸೈನ್ಯಕ್ಕೆ ಪೂರೈಸುವ ಸೇಫ್ಟಿ ಶೂ ವಿಶೇಷತೆಗಳ ಬಗ್ಗೆ ಮಾತನಾಡಿದ ಅವರು, “ಈ ಶೂಗಳು ಹಗುರವಾಗಿರಬೇಕು. ಜಾರದಂತಿರಬೇಕು. ಸೋಲ್‌ನಲ್ಲಿ ವೈಶಿಷ್ಟ್ಯ ಹೊಂದಿರಬೇಕು ಮತ್ತು -40 ಡಿಗ್ರಿ ಸೆಲ್ಸಿಯಸ್‌ನಂತಹ ವಾತಾವರಣಕ್ಕೂ ಹೊಂದಿಕೆಯಾಗುವಂತಿರಬೇಕು. ಈ ರೀತಿಯಲ್ಲಿ ನಾವು ಶೂ ತಯಾರಿಸುತ್ತಿದ್ದೇವೆʼʼ ಎಂದು ವಿವರಿಸಿದ್ದಾರೆ.

ಅಂತಾರಾಷ್ಟ್ರೀಯ ಗುಣಮಟ್ಟ

“ಬಿಹಾರದಲ್ಲಿ ವಿಶ್ವ ದರ್ಜೆಯ ಕಾರ್ಖಾನೆಯನ್ನು ಆರಂಭಿಸುವುದು ಮತ್ತು ರಾಜ್ಯದ ಯುವ ಜನತೆಗೆ ಉದ್ಯೋಗ ನೀಡುವುದು ಕಂಪನಿಯ ಎಂ.ಡಿ. ದಾನೇಶ್ ಪ್ರಸಾದ್ ಅವರ ಮಹತ್ವಾಕಾಂಕ್ಷೆ. ಸದ್ಯ ನಮ್ಮಲ್ಲಿರುವ 300 ಉದ್ಯೋಗಿಗಳಲ್ಲಿ ಶೇ. 70ರಷ್ಟು ಮಹಿಳೆಯರುʼʼ ಎಂದು ಶಿಬ್ ಕುಮಾರ್ ರಾಯ್ ತಿಳಿಸಿದ್ದಾರೆ.

ಕಂಪೆನಿಯುವ ಕಳೆದ ವರ್ಷ 15 ಲಕ್ಷ ಜೋಡಿ ಶೂಗಳನ್ನು ರಫ್ತು ಮಾಡಿದೆ. ಇದರ ಮೌಲ್ಯ ಸುಮಾರು 100 ಕೋಟಿ ರೂ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಕಂಪನಿ ಹೊಂದಿದೆ. ʼʼಬಿಹಾರ ಸರ್ಕಾರವು ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಜತೆಗೆ ರಸ್ತೆ ಮತ್ತು ಸಂವಹನದಂತಹ ಮೂಲಸೌಕರ್ಯಗಳಲ್ಲಿ ಸುಧಾರಣೆಯ ಅಗತ್ಯವಿದೆ. ಇದರಿಂದ ಗ್ರಾಹಕರಿಗೆ ಸುಲಭವಾಗಿ ನಮ್ಮನ್ನು ತಲುಪಲು ಸಾಧ್ಯವಾಗುತ್ತದೆʼʼ ಎಂದು ಶಿಬ್ ಕುಮಾರ್ ರಾಯ್ ಅಭಿಪ್ರಾಯಪಟ್ಟಿದ್ದಾರೆ. “ತರಬೇತಿ ಸಂಸ್ಥೆಯನ್ನು ಸ್ಥಾಪಿಸುವ ಗುರಿ ಹೊಂದಿದ್ದೇವೆ. ಇದರಿಂದ ಕೌಶಲ್ಯ ಹೊಂದಿದ ಯುವ ಜನತೆಯನ್ನು ಸಿದ್ಧ ಪಡಿಸುತ್ತೇವೆʼʼ ಎಂದಿದ್ದಾರೆ.

ಸದ್ಯ ಹಾಜಿಪುರ ಘಟಕವು ಸೇಫ್ಟಿ ಶೂಗಳಲ್ಲದೆ ಐಷಾರಾಮಿ ಡಿಸೈನರ್ ಶೂಗಳನ್ನು ಯುರೋಪಿಯನ್ ಮಾರುಕಟ್ಟೆಗಳಾದ ಇಟಲಿ, ಫ್ರಾನ್ಸ್, ಸ್ಪೇನ್ ಮತ್ತು ಇಂಗ್ಲೆಂಡ್‌ಗೆ ರಫ್ತು ಮಾಡುತ್ತಿದೆ. “ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಿಗಾಗಿ ಉನ್ನತ ಮಟ್ಟದ ಶೂಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿ. ನಾವು ಇತ್ತೀಚೆಗೆ ಬೆಲ್ಜಿಯಂ ಕಂಪನಿಯೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಿದ್ದೇವೆ ” ಎಂದು ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥ ಮಜರ್ ಪಲ್ಲುಮಿಯಾ ತಿಳಿಸಿದ್ದಾರೆ. ಮುಂದಿನ ತಿಂಗಳು ಕೆಲವು ವಿದೇಶಿ ಕಂಪನಿಗಳು ಕಾರ್ಖಾನೆಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: Israel Palestine War: ಇಸ್ರೇಲ್‌ ಪೊಲೀಸರಿಗೂ ಕೇರಳದ ಟೇಲರ್‌ಗಳಿಗೂ ಎಲ್ಲಿಂದೆಲ್ಲಿಯ ಸಂಬಂಧ!

Continue Reading
Advertisement
Sadananda Suvarna
ಕರ್ನಾಟಕ51 seconds ago

Sadananda Suvarna : ʼಗುಡ್ಡದ ಭೂತʼ ಖ್ಯಾತಿಯ ಹಿರಿಯ ರಂಗಕರ್ಮಿ, ನಿರ್ದೇಶಕ ಸದಾನಂದ ಸುವರ್ಣ ಇನ್ನಿಲ್ಲ

DS Veeraiah
ಕರ್ನಾಟಕ8 mins ago

D. S. Veeraiah: ಅರಸು ಟ್ರಕ್ ಟರ್ಮಿನಲ್ ಹಗರಣ;‌ ಡಿ.ಎಸ್‌.ವೀರಯ್ಯಗೆ ಜು.30ರವರೆಗೆ ನ್ಯಾಯಾಂಗ ಬಂಧನ

NEET-UG 2024
ದೇಶ20 mins ago

NEET UG 2024: ನೀಟ್‌ ಅಕ್ರಮ; ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಮತ್ತಿಬ್ಬರು ಆರೋಪಿಗಳು ಅರೆಸ್ಟ್‌

Olympics on television
ಕ್ರೀಡೆ32 mins ago

Olympics On Television: ಒಲಿಂಪಿಕ್ಸ್​ ಕ್ರೀಡಾಕೂಟ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರ ಕಂಡಿದ್ದು ಯಾವಾಗ?

Pennar River Dispute
ಪ್ರಮುಖ ಸುದ್ದಿ57 mins ago

Pennar River Dispute: ಪೆನ್ನಾರ್ ನದಿ ನೀರು ಹಂಚಿಕೆ ವಿವಾದ; 8 ವಾರದಲ್ಲಿ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

Rape Case
Latest1 hour ago

Sexual Abuse: ಮಧ್ಯವಯಸ್ಕ ಮಹಿಳೆಯ ಮೇಲೆ ಮಗನ ಸ್ನೇಹಿತನಿಂದಲೇ ಅತ್ಯಾಚಾರ!

ಕ್ರೀಡೆ1 hour ago

India at the Olympics: ಒಲಿಂಪಿಕ್ಸ್​ನಲ್ಲಿ ಭಾರತದ ಪದಕ ಸಾಧನೆಯ ಇಣುಕು ನೋಟ

Ambani Video
ಪ್ರಮುಖ ಸುದ್ದಿ1 hour ago

Ambani Video: 3 ವರ್ಷದ ಅಂಬಾನಿ ಮೊಮ್ಮಗ ವೇದಿಕೆ ಮೇಲೆ ಜಾರಿ ಬಿದ್ದ, ಆದರೆ ಜನರ ಹೃದಯ ಗೆದ್ದ!

Money Guide
ಮನಿ-ಗೈಡ್1 hour ago

Money Guide: ಹಿರಿಯರಿಗೆ ಆರೋಗ್ಯ ವಿಮೆ: ಯಾಕಾಗಿ? ಏನಿದರ ಉಪಯೋಗ?

Muharram 2024 Man dies in fire during
ರಾಯಚೂರು2 hours ago

Muharram 2024: ರಾಯಚೂರಿನಲ್ಲಿ ಮೊಹರಂನಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ ಸುಟ್ಟು ಭಸ್ಮ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ5 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ7 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 day ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌