ಇನ್ನು ವೀರ್ಯ ಕೊಟ್ಟರೆ ದಂಡ ವಿಧಿಸ್ತೇವೆ; 500ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾದವನಿಗೆ ಕೋರ್ಟ್​​ನಿಂದ ಖಡಕ್​ ಎಚ್ಚರಿಕೆ - Vistara News

ವಿದೇಶ

ಇನ್ನು ವೀರ್ಯ ಕೊಟ್ಟರೆ ದಂಡ ವಿಧಿಸ್ತೇವೆ; 500ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾದವನಿಗೆ ಕೋರ್ಟ್​​ನಿಂದ ಖಡಕ್​ ಎಚ್ಚರಿಕೆ

Sperm Donor: ಜೊನಾಥನ್ ಜಾಕೋಬ್ ಮೈಜರ್​ 2007ರಿಂದ ವೀರ್ಯದಾನದಲ್ಲಿ ತೊಡಗಿಸಿಕೊಂಡಿದ್ದಾನೆ. 2017ರ ಹೊತ್ತಿಗೆ ಆತ 100 ಮಕ್ಕಳಿಗೆ ತಂದೆಯಾಗಿದ್ದ. ಆಗಲೇ ಕೆಲವು ಕ್ಲಿನಿಕ್​ಗಳು ಅವನಿಗೆ ನಿಷೇಧ ಹೇರಿದ್ದವು.

VISTARANEWS.COM


on

Netherlands Banned a Sperm Donor from donating Sperm
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವೀರ್ಯ ದಾನ ಮಾಡುವದನ್ನೇ ಕಾಯಕ ಮಾಡಿಕೊಂಡಿದ್ದವನಿಗೆ (Sperm Donor) ಕೋರ್ಟ್​ ಖಡಕ್​ ಎಚ್ಚರಿಕೆ ನೀಡಿದೆ. ಇನ್ನು ಮುಂದೆ ವೀರ್ಯ ದಾನ ಮಾಡುವ ಹಾಗಿಲ್ಲ, ಹಾಗೊಮ್ಮೆ ಮಾಡಿದ್ದೇ ಆದರೆ 100,000 ಯುರೋ (90,41,657 ರೂಪಾಯಿ) ದಂಡ ವಿಧಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಇದು ನಮ್ಮ ದೇಶದಲ್ಲಿ ನಡೆದಿದ್ದಲ್ಲ, ನೆದರ್​​ಲ್ಯಾಂಡ್​​ನಲ್ಲಿ ಆಗಿದ್ದು. ಜೊನಾಥನ್ ಜಾಕೋಬ್ ಮೈಜರ್ ಎಂಬ 41 ವರ್ಷದ ವ್ಯಕ್ತಿ ಕಳೆದ ಕೆಲವು ವರ್ಷಗಳಿಂದಲೂ ವೀರ್ಯ ದಾನ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ. ಹೀಗೆ ಮಾಡಿ ಆತ ಸುಮಾರು 550 ಮಕ್ಕಳಿಗೆ ತಂದೆಯಾಗಿದ್ದಾನೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದ ಬಳಿಕ, ಮಹಿಳೆಯೊಬ್ಬರು ಕೋರ್ಟ್​ ಮೆಟ್ಟಿಲೇರಿದ್ದರು. ಆ ಮಹಿಳೆಯೂ ಕೂಡ ಜೊನಾಥನ್ ಜಾಕೋಬ್ ಮೈಜರ್​​ನಿಂದ ವೀರ್ಯ ಪಡೆದೇ ಮಗುವನ್ನು ಪಡೆದಿದ್ದರು. ಆದರೆ ಹೀಗೆ ನೂರಾರು ಮಕ್ಕಳಿಗೆ ತಂದೆಯಾಗುವುದು ಕಾನೂನು ಪ್ರಕಾರ ತಪ್ಪು ಎಂದು ಅರಿತಿದ್ದ ಆಕೆ, ದೂರು ದಾಖಲಿಸಿದ್ದರು. ಇಷ್ಟೇ ಅಲ್ಲ, ಇನ್ನೊಂದು ಸಂಸ್ಥೆ ಕೂಡ ಜೊನಾಥನ್ ಜಾಕೋಬ್ ಮೈಜರ್​ ವಿರುದ್ಧ ಕೋರ್ಟ್​ನಲ್ಲಿ ಮೊಕದ್ದಮೆ ಹೂಡಿತ್ತು.

ಜೊನಾಥನ್ ಜಾಕೋಬ್ ಮೈಜರ್​ 2007ರಿಂದ ವೀರ್ಯದಾನದಲ್ಲಿ ತೊಡಗಿಸಿಕೊಂಡಿದ್ದಾನೆ. 2017ರ ಹೊತ್ತಿಗೆ ಆತ 100 ಮಕ್ಕಳಿಗೆ ತಂದೆಯಾಗಿದ್ದ. ಆಗಲೇ ಕೆಲವು ಕ್ಲಿನಿಕ್​ಗಳು ಅವನಿಗೆ ನಿಷೇಧ ಹೇರಿದ್ದವು. ಆದರೆ ಅವನೇನೂ ಬಿಟ್ಟಿರಲಿಲ್ಲ. ನೆದರ್​ಲ್ಯಾಂಡ್​​ನಿಂದ ಬೇರೆ ದೇಶಗಳಿಗೆ ಹೋಗಿ ವೀರ್ಯದಾನ ಮಾಡಲು ಶುರು ಮಾಡಿದ್ದ. ಆತ ತನ್ನ ಬಗ್ಗೆ ತಾನು ಮಾಹಿತಿ ನೀಡುವಾಗ ಕೆಲವು ಸುಳ್ಳು ಮಾಹಿತಿಗಳನ್ನು ನೀಡಿದ್ದ. ಹೀಗೆ ನೂರಾರು ಜನರಿಗೆ ವೀರ್ಯದಾನ ಮಾಡಿದ್ದನ್ನು ಯಾರಿಗೂ ಹೇಳಿರಲಿಲ್ಲ. ಇದುವರೆಗೆ ಅವನು 13 ಕ್ಲಿನಿಕ್​ಗಳಲ್ಲಿ ವೀರ್ಯದಾನ ಮಾಡಿದ್ದು, ಅದರಲ್ಲಿ 11 ನೆದರ್​ಲ್ಯಾಂಡ್​ನಲ್ಲಿಯೇ ಇವೆ. ಅಂತಿಮವಾಗಿ ಅವನ ಕಳ್ಳಾಟಕ್ಕೆ ತೆರೆಬಿದ್ದಿದೆ.

ಇದನ್ನೂ ಓದಿ: ಅಜ್ಞಾತ ದಾನಿಗೆ ಬದಲಾಗಿ ತನ್ನದೇ ವೀರ್ಯ ಬಳಸಿ 12 ಮಕ್ಕಳಿಗೆ ತಂದೆಯಾದ ಡಾಕ್ಟರ್!

ವಿಚಾರಣೆ ನಡೆಸಿದ ಡಚ್​ ಕೋರ್ಟ್​ ನ್ಯಾಯಾಧೀಶರು ‘ಒಬ್ಬ ಪುರುಷ 12 ಮಹಿಳೆಯರು/ದಂಪತಿಗೆ ಮಾತ್ರ ವೀರ್ಯದಾನ ಮಾಡಬಹುದು. 25 ಮಕ್ಕಳಿಗೆ ಮಾತ್ರ ತಂದೆಯಾಗಬಹುದು. ಜೊನಾಥನ್ ಜಾಕೋಬ್ ಮೈಜರ್ ಈ ನಿಯಮವನ್ನು ಉಲ್ಲಂಘನೆ ಮಾಡಿದ್ದಾನೆ’ ಎಂದು ಹೇಳಿದ್ದಾರೆ. ‘ಈ ವ್ಯಕ್ತಿಯಿಂದ ವೀರ್ಯ ದಾನ ಪಡೆದು ಮಕ್ಕಳನ್ನು ಹೊಂದಿದವರೆಲ್ಲರೂ ಪರಿತಪಿಸುತ್ತಿದ್ದಾರೆ. ತಮ್ಮ ಮನೆಯಲ್ಲಿರುವ ಮಗುವಿಗೆ ನೂರಾರು ಅಣ್ಣ/ತಮ್ಮ/ಅಕ್ಕ/ತಂಗಿಯರಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿರುವ ಜಡ್ಜ್​ ‘ಒಂದೇ ವೀರ್ಯದಿಂದ ಹುಟ್ಟುವ ನೂರಾರು ಮಕ್ಕಳಿಗೆ ದೈಹಿಕ ತೊಂದರೆಗಳು ಬರಬಹುದು. ಸಾಮಾಜಿಕವಾಗಿಯೂ ಕೆಲವು ಸಮಸ್ಯೆಯಲ್ಲಿ ಸಿಲುಕಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

United Nations: ಗಾಜಾದಲ್ಲಿ ಸಂಪೂರ್ಣ ಕದನ ವಿರಾಮ ಘೋಷಿಸಿ; ವಿಶ್ವಸಂಸ್ಥೆಯಲ್ಲಿ ಪುನರುಚ್ಚರಿಸಿದ ಭಾರತ

United Nations: ಗಾಜಾ ಪಟ್ಟಿಯಲ್ಲಿ ತಕ್ಷಣದ ಮತ್ತು ಸಂಪೂರ್ಣ ಕದನ ವಿರಾಮ ಘೋಷಿಸಬೇಕು ಮತ್ತು ಯಾವುದೇ ಷರತ್ತುಗಳಿಲ್ಲದೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಪುನರುಚ್ಚರಿಸಿದೆ.

VISTARANEWS.COM


on

United Nations
Koo

ನ್ಯೂಯಾರ್ಕ್:‌ ಗಾಜಾ ಪಟ್ಟಿ (Gaza Strip)ಯಲ್ಲಿ ತಕ್ಷಣದ ಮತ್ತು ಸಂಪೂರ್ಣ ಕದನ ವಿರಾಮ ಘೋಷಿಸಬೇಕು ಮತ್ತು ಯಾವುದೇ ಷರತ್ತುಗಳಿಲ್ಲದೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ವಿಶ್ವಸಂಸ್ಥೆ (United Nations)ಯಲ್ಲಿ ಭಾರತ ಪುನರುಚ್ಚರಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಚರ್ಚೆಯಲ್ಲಿ ಬುಧವಾರ ಮಾತನಾಡಿದ ಭಾರತದ ಉಪ ಪ್ರತಿನಿಧಿ ಆರ್.ರವೀಂದ್ರ (R Ravindra) ಅವರು, ಪ್ಯಾಲೆಸ್ತೀನ್‌ಗೆ ಭಾರತದ ವಿವಿಧ ರೂಪಗಳಲ್ಲಿ ಸುಮಾರು 120 ಮಿಲಿಯನ್ ಡಾಲರ್‌ ನೆರವು ನೀಡುತ್ತಿದೆ ಎಂದು ತಿಳಿಸಿದ್ದಾರೆ. “2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದ ದೇಶಗಳಲ್ಲಿ ಭಾರತವೂ ಒಂದು. ಇಸ್ರೇಲ್-ಹಮಾಸ್ ಸಂಘರ್ಷ (Israel-Hamas conflict)ದಲ್ಲಿ ನಡೆಯುತ್ತಿರುವ ಪ್ರಾಣ ಹಾನಿಯನ್ನು ನಾವು ಶಕ್ತವಾಗಿ ಖಂಡಿಸಿದ್ದೇವೆ. ಜತೆಗೆ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಕರೆ ನೀಡಿದೆ. ಅಲ್ಲದೆ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸಲು ಆಗ್ರಹಿಸಿದೆ” ಎಂದು ಅವರು ಹೇಳಿದ್ದಾರೆ.

ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡಿ

ಎಲ್ಲರೂ ಎಲ್ಲ ಸಂದರ್ಭಗಳಲ್ಲಿಯೂ ಅಂತಾರಾಷ್ಟ್ರೀಯ ಕಾನೂನು ಮತ್ತು ಅಂತಾರಾಷ್ಟ್ರೀಯ ಮಾನವೀಯ ಕಾನೂನಿಗೆ ಬದ್ಧರಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. “ತಕ್ಷಣ, ಸಂಪೂರ್ಣ ಕದನ ವಿರಾಮ ಘೋಷಣೆಯನ್ನು ನಾವು ಪುನರುಚ್ಚರಿಸುತ್ತಿದ್ದೇವೆ. ಸುರಕ್ಷಿತ, ಸಮಯೋಚಿತ ಮತ್ತು ಸುಸ್ಥಿರ ಮಾನವೀಯ ನೆರವು ಮತ್ತು ಅಗತ್ಯ ಮಾನವೀಯ ಸೇವೆಗಳಿಗೆ ಗಾಜಾ ಪಟ್ಟಿಗೆ ಅನಿರ್ಬಂಧಿತ ಪ್ರವೇಶಕ್ಕಾಗಿ ನಾವು ಆಗ್ರಹಿಸುತ್ತಿದ್ದೇವೆ. ಇದಲ್ಲದೆ ಎಲ್ಲ ಒತ್ತೆಯಾಳುಗಳನ್ನು ತಕ್ಷಣ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡಬೇಕು” ಎಂದು ಭಾರತದ ರಾಯಭಾರಿ ಆರ್. ರವೀಂದ್ರ ಧ್ವನಿ ಎತ್ತಿದ್ದಾರೆ.

ಇಸ್ರೇಲ್ ಮತ್ತು ಪ್ಯಾಲಸ್ತೀನ್‌ ನಾಯಕರೊಂದಿಗೆ ನಿರಂತರ ಸಂಬಂಧ ಹೊಂದಿರುವ ಕತಾರ್ ಮತ್ತು ಈಜಿಪ್ಟ್‌ನಂತಹ ರಾಷ್ಟ್ರಗಳ ಪಾತ್ರವನ್ನೂ ಅವರು ಶ್ಲಾಘಿಸಿದ್ದಾರೆ. ʼʼಇಸ್ರೇಲ್‌ನ ಭದ್ರತಾ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಳೆದ ತಿಂಗಳು ಜೋರ್ಡಾನ್‌ನಲ್ಲಿ ನಡೆದ ಗಾಜಾಕ್ಕೆ ತುರ್ತು ಮಾನವೀಯ ನೆರವು ನೀಡುವ ಅಂತಾರಾಷ್ಟ್ರೀಯ ಉನ್ನತ ಮಟ್ಟದ ಸಮ್ಮೇಳನದಲ್ಲಿ ಭಾರತವೂ ಪಾಲ್ಗೊಂಡಿತ್ತುʼʼ ಎಂದು ತಿಳಿಸಿದ್ದಾರೆ.

ಸಹಾಯಹಸ್ತ

“ಯುಎನ್ಆರ್‌ಡಬ್ಲ್ಯುಎ (United Nations Relief and Works Agency)ಗೆ 35 ಮಿಲಿಯನ್ ಡಾಲರ್ ಸೇರಿದಂತೆ ಪ್ಯಾಲೆಸ್ತೀನ್‌ಗೆ ವಿವಿಧ ರೂಪಗಳಲ್ಲಿ ಸುಮಾರು 120 ಮಿಲಿಯನ್ ಡಾಲರ್‌ ನೆರವು ನೀಡಿದ್ದೇವೆ. ಭಾರತವು 2018 ರಿಂದ ಯುಎನ್ಆರ್‌ಡಬ್ಲ್ಯುಎಗೆ ವಾರ್ಷಿಕ 5 ಮಿಲಿಯನ್ ಡಾಲರ್ ಕೊಡುಗೆಯನ್ನು ನೀಡುತ್ತಿದೆ. ನಾವು ಈಗಾಗಲೇ 2.5 ಮಿಲಿಯನ್ ಡಾಲರ್ ನೆರವನ್ನು ಘೋಷಿಸಿದ್ದೇವೆ. ಯುಎನ್ಆರ್‌ಡಬ್ಲ್ಯುಎಗೆ ನಮ್ಮ ವಾರ್ಷಿಕ ಕೊಡುಗೆಯ ಮೊದಲ ಕಂತನ್ನು ಈ ವಾರದ ಆರಂಭದಲ್ಲಿ ವರ್ಗಾಯಿಸಲಾಗಿದೆ” ಎಂದು ಅವರು ವಿವರಿಸಿದ್ದಾರೆ.

ʼʼಪಶ್ಚಿಮ ಏಷ್ಯಾದಲ್ಲಿ ಸುಸ್ಥಿರ ಶಾಂತಿ ಮತ್ತು ಸ್ಥಿರತೆಯನ್ನು ಸಾಕಾರಗೊಳಿಸುವ ದೃಢ ನಂಬಿಕೆಯೊಂದಿಗೆ ಈ ಪ್ರದೇಶದೊಂದಿಗಿನ ಸಂಬಂಧವನ್ನು ಮುಂದುವರಿಸಲು ಭಾರತ ಸಿದ್ಧವಾಗಿದೆʼʼ ಎಂದು ಹೇಳಿ ಅವರು ತಮ್ಮ ಭಾಷಣ ಕೊನೆಗೊಳಿಸಿದ್ದಾರೆ.

ಇದನ್ನೂ ಓದಿ: United Nations: ಪಾಕಿಸ್ತಾನ ದುಷ್ಕೃತ್ಯಗಳ ಟ್ರ್ಯಾಕ್‌ ರೆಕಾರ್ಡ್‌ ಹೊಂದಿದೆ; ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ

Continue Reading

ಪ್ರಮುಖ ಸುದ್ದಿ

Viral Video: ಇನ್‌ಸ್ಟಾಗ್ರಾಂನಲ್ಲಿಯೇ ಗಂಡನಿಗೆ ಡಿವೋರ್ಸ್‌‌ ನೀಡಿದ ದುಬೈ ರಾಜಕುಮಾರಿ! ಏನು ಬರೆದಿದ್ದಾಳೆ ನೋಡಿ!

Viral Video: ಮದುವೆ ಅನ್ನುವ ಮೂರು ಅಕ್ಷರಕ್ಕೆ ಈಗ ಬೆಲೆಯೇ ಇಲ್ಲದ ಹಾಗೇ ಆಗಿದೆ. ಇನ್ಸ್ಟಾಗ್ರಾಂನಲ್ಲಿ ರೀಲ್ಸ್, ಫೋಟೊ ಅಪ್ಲೋಡ್ ಆಗುತ್ತಿತ್ತು. ಈಗ ಡಿವೋರ್ಸ್ ಕೂಡ ಇನ್ಸ್ಟಾಗ್ರಾಂನಲ್ಲಿಯೇ ನೀಡುವಂತಹ ಪರಿಸ್ಥಿತಿ ಬಂದಿದೆ. ದುಬೈ ರಾಜಕುಮಾರಿ ಶೇಖಾ ಮಹ್ರಾ ಕಳೆದ ವರ್ಷ ಮೇ ತಿಂಗಳಲ್ಲಿ ಶೇಖ್ ಮಾನಾ ಅವರನ್ನು ವಿವಾಹವಾದರು. ಇದೀಗ ರಾಜಕುಮಾರಿ ಶೇಖಾ ಮಹ್ರಾ ಇನ್ಸ್ಟಾಗ್ರಾಂನಲ್ಲಿ ಆಘಾತಕಾರಿ ಪೋಸ್ಟ್ ಹಾಕಿದ್ದು, ಅದರಲ್ಲಿ ತಮ್ಮ ಪತಿಗೆ ಡಿವೋರ್ಸ್ ನೀಡುವುದಾಗಿ ಘೋಷಿಸಿದ್ದಾರೆ. ಶೇಖಾ ಮಹ್ರಾ ಮತ್ತು ಅವರ ಪತಿ ಈ ವರ್ಷದ ಮೇ ತಿಂಗಳಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ ಎರಡು ತಿಂಗಳ ನಂತರ ಪತಿಯಿಂದ ಡಿವೋರ್ಸ್ ಕೇಳಿದ್ದು, ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

VISTARANEWS.COM


on

Viral Video
Koo

ದುಬೈ : ಸೋಶಿಯಲ್ ಮೀಡಿಯಾಗಳನ್ನು ನಾವು ಹೆಚ್ಚಾಗಿ ಮನೋರಂಜನೆಗಾಗಿ, ಪ್ರತಿದಿನ ನಡೆಯುವ ಸುದ್ದಿಗಳನ್ನು ತಿಳಿದುಕೊಳ್ಳಲು ಬಳಸುತ್ತೇವೆ. ಪ್ರಪಂಚದ ಹಲವೆಡೆ ನಡೆಯುವಂತಹ ಘಟನೆಗಳನ್ನು ನಾವು ಸೋಶಿಯಲ್ ಮೀಡಿಯಾಗಳ ಸಹಾಯದಿಂದ ಮನೆಯಲ್ಲೇ ಕುಳಿತು ತಿಳಿಯಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳನ್ನು ಪತಿ ಪತ್ನಿಯರು ಡಿವೋರ್ಸ್ ನೀಡಲು ಬಳಸುತ್ತಿದ್ದಾರೆ ಎಂದು ಕೇಳಿದರೆ ಎಲ್ಲರಿಗೂ ಆಶ್ವರ್ಯವಾಗುವುದಂತು ಖಂಡಿತ. ಅಂತಹದೊಂದು ಘಟನೆ ಇದೀಗ ದುಬೈನಲ್ಲಿ ನಡೆದಿದೆ. ದುಬೈ ರಾಜಕುಮಾರಿ ಶೇಖಾ ಮಹ್ರಾ ಅವರು ತಮ್ಮ ಪತಿಗೆ ಇನ್‍ಸ್ಟಾಗ್ರಾಂನಲ್ಲಿ ಡಿವೋರ್ಸ್ ನೀಡಿದ್ದು, ಇದು ಸಖತ್ ವೈರಲ್ (Viral Video) ಆಗಿದೆ.

ದುಬೈ ಆಡಳಿತಗಾರನ ಮಗಳಾದ ದುಬೈ ರಾಜಕುಮಾರಿ ಶೇಖಾ ಮಹ್ರಾ ಕಳೆದ ವರ್ಷ ಮೇ ತಿಂಗಳಲ್ಲಿ ಶೇಖ್ ಮಾನಾ ಅವರನ್ನು ವಿವಾಹವಾದರು. ಇದೀಗ ರಾಜಕುಮಾರಿ ಶೇಖಾ ಮಹ್ರಾ ಇನ್‍ಸ್ಟಾಗ್ರಾಂನಲ್ಲಿ ಆಘಾತಕಾರಿ ಪೋಸ್ಟ್ ಹಾಕಿದ್ದು, ಅದರಲ್ಲಿ ತಮ್ಮ ಪತಿಗೆ ಡಿವೋರ್ಸ್ ನೀಡುವುದಾಗಿ ಘೋಷಿಸಿದ್ದಾರೆ. ಶೇಖಾ ಮಹ್ರಾ ಮತ್ತು ಅವರ ಪತಿ ಈ ವರ್ಷದ ಮೇ ತಿಂಗಳಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ ಎರಡು ತಿಂಗಳ ನಂತರ ಪತಿಯಿಂದ ಡಿವೋರ್ಸ್ ಕೇಳಿದ್ದು, ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ, ತಮ್ಮ ಪತಿ ಬೇರೆ ಸಂಗಾತಿಯೊಂದಿಗೆ ಸಂಬಂಧ ಹೊಂದಿರುವ ಕಾರಣ ಪತಿಗೆ ಡಿವೋರ್ಸ್ ನೀಡುತ್ತಿರುವುದಾಗಿ ತಿಳಿಸಿ “ನಾನು ನಿಮಗೆ ವಿಚ್ಛೇದನ ನೀಡುತ್ತೇನೆ” ಎಂದು ಮೂರು ಬಾರಿ ಬರೆದು ಮಂಗಳವಾರ ಪೋಸ್ಟ್ ಮಾಡಿದ್ದಾರೆ. ಹಾಗೇ ಅವರು ತಮ್ಮ ಪತಿಯೊಂದಿಗಿನ ಫೋಟೋಗಳನ್ನು ಇನ್‍ಸ್ಟಾಗ್ರಾಂನಿಂದ ಡಿಲೀಟ್ ಮಾಡಿದ್ದಾರೆ.

ಶೇಖಾ ಮಹ್ರಾ ಕಳೆದ ವರ್ಷ ಮೇ ತಿಂಗಳಲ್ಲಿ ಎಮಿರೇಟ್ಸ್ ಉದ್ಯಮಿ ಶೇಖ್ ಮನ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮಾನಾ ಅಲ್ ಮಕ್ತೌಮ್ ಅವರನ್ನು ವಿವಾಹವಾದರು. ಒಂದು ವರ್ಷದ ನಂತರ, ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. 20ರ ಹರೆಯದ ಶೇಖ್ ಮಾನಾ ಅನೇಕ ಬ್ಯುಸಿನೆಸ್‍ಗಳನ್ನು ಹೊಂದಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ, ದುಬೈ ರಾಜಕುಮಾರಿ ಹೆರಿಗೆಯಾದ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಯಿಂದ ಫೋಟೋಗಳನ್ನು ಬಿಡುಗಡೆ ಮಾಡಿದ್ದರು. ತಮ್ಮ ಮಗಳನ್ನು ಜಗತ್ತಿಗೆ ಕರೆತಂದ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದರು.

ಹಾಗೇ ತನ್ನ ಪತಿ ಹಾಗೂ ಮಗಳ ಜೊತೆಗಿನ ಪೋಟೊವನ್ನು ಪೋಸ್ಟ್ ಮಾಡಿದ್ದರು. ಈ ಹಿಂದೆ ಅವರು ಗರ್ಭಿಣಿಯಾಗಿದ್ದಾಗ “ನಾವು ಮೂವರು” ಎಂದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಆದರೆ ಜೂನ್‍ನಲ್ಲಿ ಅವರು ಇನ್‍ಸ್ಟಾಗ್ರಾಂ ಪೋಸ್ಟ್‌ನಲ್ಲಿ ಪತಿಯಿಲ್ಲದೆ ತಮ್ಮ ಮಗುವಿನೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ “ನಾವಿಬ್ಬರೇ” ಎಂದು ಶೇಖಾ ಮಹ್ರಾ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಕಿಮೋಥೆರಪಿ ಅನುಭವ ಹಂಚಿಕೊಂಡಿದ್ದಾರೆ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಖ್ಯಾತ ಬಾಲಿವುಡ್‌ ನಟಿ

ಶೇಖಾ ಮಹ್ರಾ ಅವರ ತಂದೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಯುಎಇಯ ಉಪಾಧ್ಯಕ್ಷ, ಪ್ರಧಾನಿ ಮತ್ತು ರಕ್ಷಣಾ ಸಚಿವರಾಗಿದ್ದಾರೆ. ಇವರಿಗೆ 26 ಮಂದಿ ಮಕ್ಕಳಿದ್ದು, ಅವರಲ್ಲಿ ಶೇಖಾ ಮಹ್ರಾ ಕೂಡ ಒಬ್ಬರು. ಆಕೆಯ ತಾಯಿ ಜೊಯಿ ಗ್ರಿಗೊರಾಕೋಸ್ ಗ್ರೀಸ್ ಮೂಲದವರಾಗಿದ್ದಾರೆ. ಆದರೆ ಶೇಖಾ ಮಹ್ರಾ ತಂದೆ, ಆಕೆಯ ತಾಯಿಗೆ ವಿಚ್ಛೇದನ ನೀಡಿದ್ದರು..

Continue Reading

ವಿದೇಶ

Joe Biden: ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ಕೊರೊನಾ ಸೋಂಕು; ಪ್ರಚಾರಕ್ಕೆ ಬ್ರೇಕ್‌

Joe Biden: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿವೆ. ಹೀಗಾಗಿ ರಾಜಕೀಯ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಈ ಮಧ್ಯೆ ಮತ್ತೊಮ್ಮೆ ಕಣಕ್ಕಿಳಿದಿರುವ ಅಧ್ಯಕ್ಷ ಜೋ ಬೈಡನ್ ಅವರಿಗೆ ಕೋವಿಡ್‌ ಬಾಧಿಸಿದೆ. ಅವರಿಗೆ ಕೊರೊನಾದ ಸೌಮ್ಯ ಲಕ್ಷಣಗಳು ಕಂಡುಬಂದಿವೆ. ಸದ್ಯ ಪ್ರಚಾರ ಕಾರ್ಯಕ್ಕೆ ಸ್ವಲ್ಪ ವಿರಾಮ ನೀಡಿ ಅವರು ಪ್ರತ್ಯೇಕವಾಗಿರಲು ಅವರು ಡೆಲಾವೇರ್‌ಗೆ ಮರಳಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

VISTARANEWS.COM


on

Joe Biden
Koo

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ (US Presidential Election 2024) ಕೆಲವೇ ತಿಂಗಳು ಬಾಕಿ ಉಳಿದಿವೆ. ಹೀಗಾಗಿ ರಾಜಕೀಯ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಈ ಮಧ್ಯೆ ಮತ್ತೊಮ್ಮೆ ಕಣಕ್ಕಿಳಿದಿರುವ ಅಧ್ಯಕ್ಷ ಜೋ ಬೈಡನ್ (Joe Biden) ಅವರಿಗೆ ಕೋವಿಡ್‌ (Covid-19) ಬಾಧಿಸಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರಿನ್ ಜೀನ್-ಪಿಯರೆ ಬುಧವಾರ ತಿಳಿಸಿದ್ದಾರೆ.

ಲಾಸ್ ವೇಗಾಸ್‌ನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಜೋ ಬೈಡನ್ ಅವರಿಗೆ ಕೋವಿಡ್ ಬಾಧಿಸಿದೆ. ಅವರಿಗೆ ಕೊರೊನಾದ ಸೌಮ್ಯ ಲಕ್ಷಣಗಳು ಕಂಡುಬಂದಿವೆ. ಸದ್ಯ ಪ್ರಚಾರ ಕಾರ್ಯಕ್ಕೆ ಸ್ವಲ್ಪ ವಿರಾಮ ನೀಡಿ ಅವರು ಪ್ರತ್ಯೇಕವಾಗಿರಲು ಅವರು ಡೆಲಾವೇರ್‌ಗೆ ಮರಳಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ʼʼಸೌಮ್ಯ ರೋಗಲಕ್ಷಣಗಳ ಹೊರತಾಗಿಯೂ 81 ವರ್ಷದ ಜೋ ಬೈಡನ್ ಆರೋಗ್ಯವಂತರಾಗಿದ್ದಾರೆ. ಭಯ ಪಡುವ ಅಗತ್ಯವಿಲ್ಲʼʼ ಎಂದು ಜೀನ್-ಪಿಯರೆ ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ. ಜೋ ಬೈಡನ್‌ ಅವರಿಗೆ ಹಿಂದೆಯೂ ಕೋವಿಡ್‌ ಬಾಧಿಸಿತ್ತು. 2022ರ ಜುಲೈಯಲ್ಲಿ ಅವರು ಕೋವಿಡ್ ಸೋಂಕಿಗೆ ಒಳಗಾಗಿದ್ದರು.

ಜೋ ಬೈಡನ್ ಅವರುಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಕೆವಿನ್ ಒ’ಕಾನರ್ ಈ ಬಗ್ಗೆ ಮಾಹಿತಿ ನೀಡಿ, ʼʼಬೈಡನ್ ಅವರಲ್ಲಿ ಕೊರೊನಾದ ಸೌಮ್ಯ ಲಕ್ಷಣಗಳು ಕಂಡುಬಂದಿವೆ. ಮೂಗು ಸೋರುತ್ತಿದೆ ಮತ್ತು ಸ್ವಲ್ಪ ಪ್ರಮಾಣ ಕೆಮ್ಮು ಕಂಡು ಬಂದಿದೆʼʼ ಎಂದು ತಿಳಿಸಿದ್ದಾರೆ. ಬೈಡನ್ ಡೆಲಾವೇತ್‌ನ ರೆಹೋಬೋತ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸ್ವಯಂ ಪ್ರತ್ಯೇಕಗೊಳ್ಳಲಿದ್ದಾರೆ. ಪಿಸಿಆರ್ ದೃಢೀಕರಣ ಪರೀಕ್ಷೆ ಬಾಕಿ ಇದೆ.

ಕಪ್ಪು ವರ್ಣದ ಮಹಿಳೆಗೆ ಜೋ ಬೈಡನ್ ಅವಮಾನ?

ಕೆಲವು ದಿನಗಳ ಹಿಂದೆ ಸ್ವಾಗತಿಸಲು ಖುಷಿಯಿಂದ ಕಾಯುತ್ತಿದ್ದ ಕಪ್ಪು ವರ್ಣದ ಮಹಿಳೆಗೆ ಜೋ ಬೈಡನ್ ಅವಮಾನ ಮಾಡಿದ್ದಾರೆ ಎನ್ನುವ ವಿಚಾರ ಭಾರಿ ಸುದ್ದಿಯಾಗಿತ್ತು. ವಿಸ್ಕಾನ್ಸಿನ್‍ನ ಮ್ಯಾಡಿಸನ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಜೋ ಬೈಡನ್ ಜನರನ್ನು ಭೇಟಿ ಮಾಡಲು ಮುಂದಾಗಿದ್ದರು. ಆ ವೇಳೆ ಅಲ್ಲಿ ಇವರಿಗಾಗಿ ಕಾತುರದಿಂದ ಕಾಯುತ್ತಿದ್ದ ಕಪ್ಪು ವರ್ಣದ ಅಮೆರಿಕನ್ ಮಹಿಳೆಯನ್ನು ಅವರು ನಿರ್ಲಕ್ಷ್ಯ ಮಾಡಿದ್ದರು ಎನ್ನಲಾಗಿದೆ. ಈ ಘಟನೆಯ ವಿಡಯೊ ವೈರಲ್‌ ಅಗಿದೆ.

ಈ ವಿಡಿಯೊದಲ್ಲಿ, ಕಪ್ಪು ಅಮೆರಿಕನ್ ಮಹಿಳೆ ಕೈಯಲ್ಲಿ ಬೈಡನ್‌-ಹ್ಯಾರಿಸ್ ಬೋರ್ಡ್‌ ಹಿಡಿದು ಕಾಯುತ್ತಿದ್ದಳು. ಆದರೆ ಬೈಡನ್ ಆಕೆಯನ್ನು ಕಡೆಗಣಿಸಿದ್ದರು. ಆಕೆಯ ಮೊದಲು ನಿಂತಿದ್ದ ಬಿಳಿ ವರ್ಣದ ಮಹಿಳೆಯರನ್ನು ತಬ್ಬಿಕೊಂಡ ಅವರು ಆಕೆಯನ್ನು ಬಿಟ್ಟು ಆಕೆಯ ನಂತರ ನಿಂತ ಬಿಳಿ ವರ್ಣದ ಮತ್ತೊಬ್ಬ ಮಹಿಳೆಯನ್ನು ಹಗ್ ಮಾಡಿದ್ದರು. ಕಪ್ಪು ಅಮೆರಿಕನ್ ಮಹಿಳೆಯತ್ತ ಕಣ್ಣೆತ್ತಿ ನೋಡದ ಅಧ್ಯಕ್ಷರನ್ನು ಕಂಡು ಬೇಸರಗೊಂಡಿದ್ದು ಆಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಇದನ್ನೂ ಓದಿ: Trump Assassination Bid: ಟ್ರಂಪ್‌ ಮೇಲೆ ಗುಂಡಿನ ದಾಳಿ; ಶೂಟರ್‌ ಫೋಟೋ ರಿಲೀಸ್‌- ಆತನ ಸ್ನೇಹಿತರು ಹೇಳಿದ್ದೇನು?

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬೈಡನ್ ಪ್ರಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ. ಯಾಕೆಂದರೆ ಬೈಡನ್ ಅವರನ್ನು ಶ್ವೇತಭವನಕ್ಕೆ ಕರೆದೊಯ್ದ ಕಪ್ಪು ವರ್ಣದ ಮತದಾರ ಬೆಂಬಲ ಕಳೆದುಕೊಳ್ಳುತ್ತಿದ್ದಾರೆ ಎಂದು ಹಲವಾರು ಸಮೀಕ್ಷೆಗಳು ಈಗಾಗಲೇ ಭವಿಷ್ಯ ನುಡಿದಿವೆ. ಅಲ್ಲದೇ ಯುವಕರ ಆರ್ಥಿಕತೆ ಮತ್ತು ಮತದಾರರ ಹಕ್ಕುಗಳ ಆದ್ಯತೆಗಳನ್ನು ನಿಭಾಯಿಸುವಲ್ಲಿ ಬೈಡನ್ ವಿಫಲರಾಗಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

Continue Reading

ವಿದೇಶ

Oil Tanker Capsizes:ತೈಲ ತುಂಬಿದ್ದ ಹಡಗು ಮುಳುಗಡೆ; ಕಣ್ಮರೆಯಾಗಿದ್ದ 8 ಭಾರತೀಯರು ಸೇರಿ ಒಟ್ಟು 9 ನಾವಿಕರ ರಕ್ಷಣೆ

Oil Tanker Capsizes:ಕೊಮೊರೊಸ್-ಧ್ವಜದ ತೈಲ ಟ್ಯಾಂಕರ್ ರಾಸ್ ಮದ್ರಕಾದಿಂದ ಆಗ್ನೇಯಕ್ಕೆ 25 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ಡುಕ್ಮ್ ಬಂದರು ಪಟ್ಟಣಕ್ಕೆ ಸಮೀಪದಲ್ಲಿ ಮುಳುಗಡೆಯಾಗಿತ್ತು. ಈ ಬಗ್ಗೆ ಎಂದು ಸಾಗರ ಭದ್ರತಾ ಕೇಂದ್ರ(MSC) X ನಲ್ಲಿನ ಪೋಸ್ಟ್‌ ಮಾಡಿ ತಿಳಿಸಿತ್ತು

VISTARANEWS.COM


on

Oil Tanker Capsizes
Koo

ಒಮನ್‌: ಒಮನ್‌(Oman) ಸಮುದ್ರದಲ್ಲಿ ತೈಲ ತುಂಬಿದ್ದ ಹಡಗು ಮುಳುಗಿದ(Oil Tanker Capsizes) ಕಾರಣ ಕಣ್ಮರೆಯಾಗಿದ್ದ ನಾವಿಕರಲ್ಲಿ ಒಂಬತ್ತು ಮಂದಿಯನ್ನು ರಕ್ಷಿಸಲಾಗಿದೆ. ಕಣ್ಮರೆಯಾಗಿದ್ದ 13 ಜನರಲ್ಲಿ ಎಂಟು ಮಂದಿ ಭಾರತೀಯರು ಸೇರಿದಂತೆ ಒಟ್ಟು ಒಂಬತ್ತು ಮಂದಿ ನಾವಿಕರು ರಕ್ಷಿಸಲ್ಪಟ್ಟಿದ್ದಾರೆ.

ಕೊಮೊರೊಸ್-ಧ್ವಜದ ತೈಲ ಟ್ಯಾಂಕರ್ ರಾಸ್ ಮದ್ರಕಾದಿಂದ ಆಗ್ನೇಯಕ್ಕೆ 25 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ಡುಕ್ಮ್ ಬಂದರು ಪಟ್ಟಣಕ್ಕೆ ಸಮೀಪದಲ್ಲಿ ಮುಳುಗಡೆಯಾಗಿತ್ತು. ಈ ಬಗ್ಗೆ ಎಂದು ಸಾಗರ ಭದ್ರತಾ ಕೇಂದ್ರ(MSC) X ನಲ್ಲಿನ ಪೋಸ್ಟ್‌ ಮಾಡಿ ತಿಳಿಸಿತ್ತು. ಇನ್ನು ದುಕ್ಮ್‌ ಪಟ್ಟಣ ಒಮನ್‌ ಆಗ್ನೇಯ ಭಾಗದಲ್ಲಿದೆ. ಇನ್ನು ಮುಳುಗಡೆಯಾಗಿರುವ ಹಡಗನ್ನು ಪ್ರೆಸ್ಟೀಜ್ ಫಾಲ್ಕನ್ ಎಂದು ಗುರುತಿಸಲಾಗಿದ್ದು, ಅದರಲ್ಲಿದ್ದ 16ಜನ ನಾವಿಕರನ್ನು 13 ನಾವಿಕರು ಕಣ್ಮರೆಯಾಗಿದ್ದರು. ಅವರಿಗಾಗಿ ಹುಡುಕಾಟ ನಡೆದಿತ್ತು. ನೌಕೆಯಲ್ಲಿ ಒಟ್ಟು 13 ಭಾರತೀಯರು ಹಾಗೂ 3 ಶ್ರೀಲಂಕಾ ಮೂಲದ ನಾವಿಕರಿದ್ದರು ಎನ್ನಲಾಗಿದೆ.

ಇದೀಗ ರಕ್ಷಣಾ ಕಾರ್ಯಾಚರಣೆಯಲ್ಲಿ 9 ನಾವಿಕರನ್ನು ರಕ್ಷಿಸಲಾಗಿದೆ. ಈ ಬಗ್ಗೆ ಒಮನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್‌ ಮಾಡಿದೆ. ಜುಲೈ 15 ರಂದು ಒಮಾನ್ ಕರಾವಳಿಯಲ್ಲಿ ಮುಳುಗಿದ ಕೊಮೊರೊಸ್ ಫ್ಲ್ಯಾಗ್ಡ್ ಹಡಗಿನ ಎಂಟಿ ಪ್ರೆಸ್ಟೀಜ್ ಫಾಲ್ಕನ್‌ನಲ್ಲಿದ್ದ ನಾವಿಕರಿಗಾಗಿ ರಾಯಭಾರ ಕಚೇರಿಯು ಒಮಾನಿ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ಭಾರತೀಯ ನೌಕಾಪಡೆ ಮತ್ತು ಒಮನ್‌ SAR ಜಂಟೀ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದೆ. ಐಎನ್‌ಎಸ್ ಟೆಗ್ ಮೂಲಕ 8 ಭಾರತೀಯರು ಸೇರಿದಂತೆ 9 ಸಿಬ್ಬಂದಿಯನ್ನು ಇಂದು ರಕ್ಷಿಸಲಾಗಿದೆ. ಉಳಿದಿರುವವರಿಗಾಗಿ ಶೋಧ ಮುಂದುವರಿದಿದೆ” ಎಂದು ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಇದನ್ನೂ ಓದಿ: Oil Tanker Capsizes: ತೈಲ ತುಂಬಿದ್ದ ಹಡಗು ಮುಳುಗಡೆ; 13 ಭಾರತೀಯರು ಜಲಸಮಾಧಿ

Continue Reading
Advertisement
Kannada New Movie life of mradula song out
ಸ್ಯಾಂಡಲ್ ವುಡ್1 min ago

Kannada New Movie: ಹೊಸಬರ ತಂಡ ಸಿದ್ದಪಡಿಸಿರುವ ಹೊಸತನದ ಸಿನಿಮಾ; ಲೈಫ್ ಆಫ್ ಮೃದುಲ ಹಾಡು ಬಿಡುಗಡೆ!

road Accident
ರಾಯಚೂರು6 mins ago

Road Accident : ಪಾದಚಾರಿ ಬಲಿ ಪಡೆದು ಎಸ್ಕೇಪ್‌ ಆದ ಬಸ್‌ ಚಾಲಕ; ಬಾಲಕಿಗೆ ಗುದ್ದಿ ಪ್ರಾಣ ಕಸಿದ ಲಾರಿ

Paris Olympics 2024
ಕ್ರೀಡೆ7 mins ago

Paris Olympics 2024: ಈ ಬಾರಿ ಒಲಿಂಪಿಕ್ಸ್​ನಲ್ಲಿ ಕಣಕ್ಕಿಳಿಯಲಿದ್ದಾರೆ ಭಾರತದ 117 ಕ್ರೀಡಾಳುಗಳು; ಅಥ್ಲೆಟಿಕ್ಸ್​ ದೊಡ್ಡ ತಂಡ

Urvashi Rautela bathroom video leak on social media
ಸಿನಿಮಾ25 mins ago

Urvashi Rautela: ನಟಿ ಊರ್ವಶಿ ರೌಟೇಲಾ ಬಟ್ಟೆ ಬಿಚ್ಚಿ, ಸ್ನಾನ ಮಾಡುವ ವಿಡಿಯೊ ಲೀಕ್‌!

United Nations
ವಿದೇಶ33 mins ago

United Nations: ಗಾಜಾದಲ್ಲಿ ಸಂಪೂರ್ಣ ಕದನ ವಿರಾಮ ಘೋಷಿಸಿ; ವಿಶ್ವಸಂಸ್ಥೆಯಲ್ಲಿ ಪುನರುಚ್ಚರಿಸಿದ ಭಾರತ

Karnataka Jobs Reservation
ಪ್ರಮುಖ ಸುದ್ದಿ41 mins ago

Karnataka Jobs Reservation: ಉರಿವ ಮನೆಯಿಂದ ಗಳ ಹಿರಿದ ಆಂಧ್ರಪ್ರದೇಶ; ʼನಮ್ಮಲ್ಲಿಗೇ ಬನ್ನಿʼ ಎಂದು ಖಾಸಗಿ ಉದ್ಯಮಗಳಿಗೆ ಭಿಕ್ಷಾಪಾತ್ರೆ ಒಡ್ಡಿದ ಸಚಿವ

Maoists Attack
ದೇಶ52 mins ago

Maoists Attack: ಛತ್ತೀಸ್‌ಗಢದಲ್ಲಿ ಮತ್ತೆ ಮಾವೋವಾದಿಗಳ ಅಟ್ಟಹಾಸ; ಇಬ್ಬರು ಪೊಲೀಸರು ಹುತಾತ್ಮ

Viral Video
ಪ್ರಮುಖ ಸುದ್ದಿ57 mins ago

Viral Video: ಇನ್‌ಸ್ಟಾಗ್ರಾಂನಲ್ಲಿಯೇ ಗಂಡನಿಗೆ ಡಿವೋರ್ಸ್‌‌ ನೀಡಿದ ದುಬೈ ರಾಜಕುಮಾರಿ! ಏನು ಬರೆದಿದ್ದಾಳೆ ನೋಡಿ!

Hardik Pandya
ಕ್ರೀಡೆ1 hour ago

Hardik Pandya: ಫಿಟ್ನೆಸ್‌ ಬಗ್ಗೆ ಪ್ರಶ್ನೆ ಮಾಡಿದವರಿಗೆ ಸಿಕ್ಸ್​ ಪ್ಯಾಕ್​ ಮೂಲಕ ತಿರುಗೇಟು ಕೊಟ್ಟ ಹಾರ್ದಿಕ್​ ಪಾಂಡ್ಯ

vidhana sabha karnataka assembly live
ಪ್ರಮುಖ ಸುದ್ದಿ2 hours ago

Karnataka Assembly Live: ವಾಲ್ಮೀಕಿ ಹಗರಣದ ಆರೋಪಗಳಿಗೆ ಇಂದು ಸಿಎಂ ಉತ್ತರ; ವಿಧಾನಮಂಡಲ ಕಲಾಪ ಲೈವ್‌ ಇಲ್ಲಿದೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ5 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌