ಆಹಾರ ಪಡೆಯಲು ಬಂದ 31 ಜನರು ಮಸಣ ಸೇರಿದರು - Vistara News

ವಿದೇಶ

ಆಹಾರ ಪಡೆಯಲು ಬಂದ 31 ಜನರು ಮಸಣ ಸೇರಿದರು

ನೈಜಿರಿಯಾ ಪ್ರದೇಶದಲ್ಲಿ, ಆಹಾರ ಪಡೆಯುವ ನಿಟ್ಟಿನಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಆದರೆ, ವಿಧಿಲಿಖಿತ ಬೇರೆಯೇ ಇತ್ತು! ಇವರಲ್ಲಿ ಅನೇಕರು ಮೃತಪಟ್ಟಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನೈಜಿರಿಯಾ: ನೈಜಿರಿಯಾದಲ್ಲಿ ಚರ್ಚ್‌ನಲ್ಲಿ ಶನಿವಾರ ನಡೆದ ಗಲಾಟೆಯಲ್ಲಿ ಸುಮಾರು 31 ಜನ ಮೃತಪಟ್ಟಿದ್ದಾರೆ. ದಕ್ಷಿಣ ರಿವರ್ಸ್‌ ಸ್ಟೇಟ್‌ ಬಳಿ ಇದ್ದ ಚರ್ಚ್‌ ಒಂದರಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಚರ್ಚ್‌ನಲ್ಲಿ ನೀಡುತ್ತಿದ್ದ ಆಹಾರವನ್ನು ಪಡೆಯಲೆಂದು ನೀರಾರು ಜನ ಚರ್ಚ್‌ ಬಳಿ ಸೇರಿದ್ದರು. ಆದರೆ, ಜನರು ಆಹಾರವನ್ನು ನೀಡಲು ಕಾಯಬೇಕಿತ್ತು. ಕಾಯವ ತಾಳ್ಮೆ ಇಲ್ಲದವರು ಚರ್ಚ್‌ನ ಗೇಟ್‌ ಮುರಿದು ನೂಕುನುಗ್ಗಲು ಆರಂಭಿಸಿದರು. ಈ ನೂಕುನುಗ್ಗಲಿನಿಲ್ಲಿ ಸುಮಾರು 31 ಜನ ಮೃತಪಟ್ಟಿದ್ದಾರೆ.

ಈ ಬಗ್ಗೆ ಸ್ಥಳೀಯ ಪೊಲೀಸರು ಹಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: Drugs on cruise:‌ ಕ್ಲೀನ್‌ ಚೀಟ್‌ ಪಡೆದ ಆರ್ಯನ್‌ ಖಾನ್ ಅಮೆರಿಕಕ್ಕೆ ಹಾರಲು ರೆಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: “ನೀವು ಅಲ್ಲಿಂದ ದಾಳಿ ಮಾಡಿ..ನಾವು ಇಲ್ಲಿಂದ ಅಟ್ಯಾಕ್‌ ಮಾಡ್ತೇವೆ..ಪಾಕ್‌ ಧ್ವಂಸ ಆಗೋದು ಪಕ್ಕಾ”-ಆಫ್ಗನ್‌ ವೃದ್ಧನ ಈ ವಿಡಿಯೋ ಫುಲ್‌ ವೈರಲ್‌

Viral Video:ಅಫ್ಘಾನಿಸ್ತಾನ ಪ್ರವಾಸದಲ್ಲಿದ್ದ ಭಾರತೀಯ ಯೂಟ್ಯೂಬರ್‌ ಜೊತೆ ಮಾತನಾಡಿದ ಅಲ್ಲಿನ ವೃದ್ಧರೊಬ್ಬರು ಭಾರತ ಮತ್ತು ಅಫ್ಘಾನಿಸ್ತಾನ ಜೊತೆಗೂಡಿದರೆ ಪಾಕ್‌ ಅಂತ್ಯ ಖಂಡಿತ ಎಂಬ ಮಾತನ್ನು ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದುಮಾಡುತ್ತಿದೆ. “ಭಾರತ ಮತ್ತು ಅಫ್ಘಾನಿಸ್ತಾನ ಮಿತ್ರ ರಾಷ್ಟ್ರಗಳು. ನಾವು ಸಹೋದರರಿದ್ದಂತೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಬೆಸುಗೆ ಎರಡೂ ದೇಶಗಳನ್ನು ಒಗ್ಗೂಡಿಸುತ್ತದೆ. ಹೀಗಾಗಿ ಎರಡೂ ರಾಷ್ಟ್ರಗಳು ಜೊತೆಗೂಡಿದರೆ ನಮ್ಮ ಶತ್ರು ರಾಷ್ಟ್ರವನ್ನು ಬಹಳ ಸುಲಭವಾಗಿ ಸರ್ವನಾಶ ಮಾಡಬಹುದಾಗಿ ಎಂದು ಅವರು ಹೇಳಿದ್ದಾರೆ.

VISTARANEWS.COM


on

Viral Video
Koo

ನವದೆಹಲಿ: ಪಾಕಿಸ್ತಾನ(Pakistan) ಎಂದರೆ ಭಾರತ ಮಾತ್ರ ಅಲ್ಲ, ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರಗಳು ದ್ವೇಷಿಸುವ ರಾಷ್ಟ್ರ. ಇನ್ನು ನೆರೆಯ ಅಫ್ಘಾನಿಸ್ತಾನ(Afghanistan) ಅಂತೂ ಪಾಕಿಸ್ತಾನದ ಕುಕೃತ್ಯದಿಂದ ಬೇಸತ್ತಿರೋದಂತೂ ಅಕ್ಷರಶಃ ನಿಜ. ಹೀಗಾಗಿಯೇ ಅಲ್ಲಿನ ಜನ ಪಾಕಿಸ್ತಾನ ಅಂದ್ರೆ ಸಾಕು ಕೆಂಡ ಕಾರುತ್ತಾರೆ ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ(Viral Video)ವೊಂದು ಭಾರೀ ಸದ್ದು ಮಾಡುತ್ತಿದ್ದು, ಹೀಗೇ ಮುಂದುವರೆದರೆ ಪಾಕ್‌ ಸಂಪೂರ್ಣವಾಗಿ ನಿರ್ಣಾಮ ಆಗದಂತೂ ನಿಜ ಅಂತಿದ್ದಾರೆ ವಿಡಿಯೋ ನೋಡಿದ ನೆಟ್ಟಿಗರು.

ಏನಿದು ವಿಡಿಯೋ?

ಅಫ್ಘಾನಿಸ್ತಾನ ಪ್ರವಾಸದಲ್ಲಿದ್ದ ಭಾರತೀಯ ಯೂಟ್ಯೂಬರ್‌ ಜೊತೆ ಮಾತನಾಡಿದ ಅಲ್ಲಿನ ವೃದ್ಧರೊಬ್ಬರು ಭಾರತ ಮತ್ತು ಅಫ್ಘಾನಿಸ್ತಾನ ಜೊತೆಗೂಡಿದರೆ ಪಾಕ್‌ ಅಂತ್ಯ ಖಂಡಿತ ಎಂಬ ಮಾತನ್ನು ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದುಮಾಡುತ್ತಿದೆ. “ಭಾರತ ಮತ್ತು ಅಫ್ಘಾನಿಸ್ತಾನ ಮಿತ್ರ ರಾಷ್ಟ್ರಗಳು. ನಾವು ಸಹೋದರರಿದ್ದಂತೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಬೆಸುಗೆ ಎರಡೂ ದೇಶಗಳನ್ನು ಒಗ್ಗೂಡಿಸುತ್ತದೆ. ಹೀಗಾಗಿ ಎರಡೂ ರಾಷ್ಟ್ರಗಳು ಜೊತೆಗೂಡಿದರೆ ನಮ್ಮ ಶತ್ರು ರಾಷ್ಟ್ರವನ್ನು ಬಹಳ ಸುಲಭವಾಗಿ ಸರ್ವನಾಶ ಮಾಡಬಹುದಾಗಿ ಎಂದು ಅವರು ಹೇಳಿದ್ದಾರೆ.

“ನೀವು ಆಕಡೆಯಿಂದ ದಾಳಿ ನಡೆಸಿ.. ನಾವು ಈ ಕಡೆಯಿಂದ ದಾಳಿ ನಡೆಸುತ್ತೇವೆ. ಅಫ್ಘಾನಿಸ್ತಾನ ನಿಮ್ಮ ಜೊತೆ ಯಾವಾಗಲೂ ಇದೆ. ಆಫ್ಗನ್‌ ಜನ ನಿಮ್ಮ ಜೊತೆಗಿದ್ದಾರೆ. ಇಬ್ಬರು ಜೊತೆಗೂಡಿ ದಾಳಿ ನಡೆಸಿದರೆ ಪಾಕ್‌ ಅನ್ನು ಮಟ್ಟ ಹಾಕಬಹುದು. ಅಲ್ಲಿನ ಸಾಮಾನ್ಯ ಜನರೊಡನೆ ನಮಗೇನು ದ್ವೇಷವಿಲ್ಲ. ಬದಲಾಗಿ ಅಲ್ಲಿನ ಆಡಳಿತ ವ್ಯವಸ್ಥೆ ಬಗ್ಗೆ ನಮಗೆ ಅಸಮಾಧಾನ ಇದೆ” ಎಂದು ವೃದ್ಧ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ಪಿಒಕೆ ಶೀಘ್ರದಲ್ಲೇ ಮತ್ತೆ ನಮ್ಮದಾಗುತ್ತದೆ ಎಂದು ಒಬ್ಬರು ಕಮೆಂಟ್‌ ಮಾಡಿದರೆ, ಪಾಕಿಸ್ತಾನವನ್ನು ಯಾರೂ ಇಷ್ಟ ಪಡುವುದಿಲ್ಲ… ಅಫ್ಘಾನಿಸ್ತಾನ ಅತ್ಯಂತ ಹೆಚ್ಚಾಗಿ ದ್ವೇಷಿಸುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮೋದಿ ಇದ್ದಲ್ಲಿ ಎಲ್ಲವೂ ಸಾಧ್ಯ ಎಂದು ಮತ್ತೊಬ್ಬ ನೆಟ್ಟಿಗ ರಿಯಾಕ್ಟ್‌ ಮಾಡಿದ್ದಾರೆ.

ಇನ್ನು ಈದೇ ವಿಡಿಯೋವನ್ನು ಇಟ್ಟುಕೊಂಡು ಹಲವು ಮೀಮ್ಸ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ: Aditi Prabhudeva: ತಾಯಿಯಾದ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ!

Continue Reading

ವಿದೇಶ

Nawaz Sharif: “ಕಾರ್ಗಿಲ್‌ ಯುದ್ಧ ನಮ್ಮಿಂದಲೇ ಆಗಿರುವ ಅತಿದೊಡ್ಡ ಪ್ರಮಾದ”- 23 ವರ್ಷಗಳ ಬಳಿಕ ತಪ್ಪೊಪ್ಪಿಕೊಂಡ ಪಾಕ್‌

Nawaz Sharif: ತಮ್ಮ ಪಾಕಿಸ್ತಾನ ಮುಸ್ಲಿಂ ಲೀಗ್‌(N) ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ನವಾಜ್‌ ಷರೀಫ್‌, ಮೇ 28, 1998,ರಂದು ಪಾಕಿಸ್ತಾನ ಐದು ಅಣು ಬಾಂಬ್‌ ಪರೀಕ್ಷೆ ನಡೆಸಿತ್ತು. ಇದಾದ ಬಳಿಕ ಅಂದಿನ ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಇಲ್ಲಿಗೆ ಬಂದು ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಾವು ಮಾತ್ರ ಆ ಒಪ್ಪಂದವನ್ನು ಮುರಿದೆವು.ಅದು ನಮ್ಮ ಅತಿ ದೊಡ್ಡ ತಪ್ಪು ಎಂದರು.

VISTARANEWS.COM


on

Nawaz Sharif
Koo

ಇಸ್ಲಮಾಬಾದ್‌: ಭಾರತದ ಜೊತೆ ಮಾಡಿಕೊಂಡಿದ್ದ 1999 ಲಾಹೋರ್‌ ಒಪ್ಪಂದ(1999 Lahore Declaration)ವನ್ನು ಪಾಕಿಸ್ತಾನವೇ ಮುರಿದಿತ್ತು. ಅದು ನಮ್ಮ ಅತಿ ದೊಡ್ಡ ತಪ್ಪಾಗಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌(Nawaz Sharif) ಬಹಿರಂಗ ಹೇಳಿಕೆ ನೀಡಿದ್ದಾರೆ. ಆ ಮೂಲಕ ಕಾರ್ಗಿಲ್‌ ಯುದ್ಧ(Kargil War) ಜನರಲ್‌ ಫರ್ವೇಜ್‌ ಮುಷಾರಫ್‌(Pervez Musharraf) ಕುಕೃತ್ಯ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣ(Viral Video)ದಲ್ಲಿ ಬಹಳ ಸದ್ದು ಮಾಡುತ್ತಿದೆ.

ತಮ್ಮ ಪಾಕಿಸ್ತಾನ ಮುಸ್ಲಿಂ ಲೀಗ್‌(N) ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ನವಾಜ್‌ ಷರೀಫ್‌, ಮೇ 28, 1998,ರಂದು ಪಾಕಿಸ್ತಾನ ಐದು ಅಣು ಬಾಂಬ್‌ ಪರೀಕ್ಷೆ ನಡೆಸಿತ್ತು. ಇದಾದ ಬಳಿಕ ಅಂದಿನ ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಇಲ್ಲಿಗೆ ಬಂದು ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಾವು ಮಾತ್ರ ಆ ಒಪ್ಪಂದವನ್ನು ಮುರಿದೆವು.ಅದು ನಮ್ಮ ಅತಿ ದೊಡ್ಡ ತಪ್ಪು ಎಂದರು.

ಫೆಬ್ರವರಿ 21, 1999 ರಂದು ಎರಡು ಬದ್ಧ ವೈರಿ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಭಾರತ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ್ದವು. ನೆರೆಹೊರ ರಾಷ್ಟ್ರಗಳ ನಡುವಿನ ಶಾಂತಿ ಒಪ್ಪಂದವು ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಜನ ಸಂಪರ್ಕವನ್ನು ಉತ್ತೇಜಿಸಲು ಕರೆ ನೀಡಿತು. ಆದಾಗ್ಯೂ, ಕೆಲವು ತಿಂಗಳ ನಂತರ, ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಪಾಕಿಸ್ತಾನದ ಆಕ್ರಮಣವು ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು.

ಮಾರ್ಚ್ 1999 ರಿಂದ, ಪಾಕಿಸ್ತಾನ ಸೇನೆಯ ಜನರಲ್ ಆಗಿದ್ದ ಮುಷರಫ್, ಲಡಾಖ್‌ನ ಕಾರ್ಗಿಲ್ ಜಿಲ್ಲೆಯೊಳಗೆ ಪಾಕ್‌ ಸೇನೆಯ ರಹಸ್ಯ ಒಳನುಸುಳುವಿಕೆಗೆ ಆದೇಶಿಸಿದರು. ನವದೆಹಲಿ ಒಳನುಸುಳುವಿಕೆಯನ್ನು ಕಂಡುಹಿಡಿದ ನಂತರ ಪೂರ್ಣ ಪ್ರಮಾಣದ ಯುದ್ಧವು ಸ್ಫೋಟಗೊಂಡಿತು. ಈ ಯುದ್ಧವನ್ನು ಭಾರತ ಗೆದ್ದಿತ್ತು. ಈ ಸಂರ್ಭದಲ್ಲಿ ಷರೀಫ್‌ ಪಾಕಿಸ್ತಾನದ ಪ್ರಧಾನಿ ಆಗಿದ್ದರು.

ಇದನ್ನೂ ಓದಿ:Cab Service : ಆ್ಯಪ್​ ಆಧಾರಿತ ಕ್ಯಾಬ್​ಗಳು ಶೇ. 5ಕ್ಕಿಂತ ಹೆಚ್ಚು ಸೇವಾ ಶುಲ್ಕ ವಿಧಿಸುವಂತಿಲ್ಲ; ಸರ್ಕಾರದ ಆದೇಶಕ್ಕೆ ಕೋರ್ಟ್​ ಮನ್ನಣೆ

ಇದೀಗ ಇದೇ ವಿಚಾರ ಬಗ್ಗೆ ಪ್ರಸ್ತಾಪಿಸಿರುವ ಷರೀಫ್‌ ಅಂದು ತಮ್ಮ ಸರ್ಕಾರ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್ ಟೆಲಿವಿಷನ್ ಕಾರ್ಪೊರೇಷನ್ (ಪಿಟಿವಿ) ಪ್ರಸಾರ ಮಾಡಿದ ನವಾಜ್ ಷರೀಫ್ ಅವರ ಭಾಷಣದ ಒಂದು ಭಾಗವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Continue Reading

ವಿದೇಶ

Fraud Case: ಒಂದು ವರ್ಷ ಪ್ರೀತಿಸಿ ಮದುವೆಯಾದ; 12 ದಿನಗಳ ಬಳಿಕ ಬಯಲಾಯ್ತು ಆಕೆಯ ದೇಹ ರಹಸ್ಯ!

ಆಸ್ತಿ ಲಪಟಾಯಿಸಲು ಹೆಣ್ಣಿನಂತೆ ವೇಷಭೂಷಣ ತೊಟ್ಟು ಇಂಡೋನೇಷ್ಯಾದ ವ್ಯಕ್ತಿಯೊಬ್ಬನನ್ನು ಮದುವೆಯಾದ 12 ದಿನಗಳ ಬಳಿಕ ಆತನ ವಂಚನೆಯ (Fraud Case) ಜಾಲ ಬಯಲಾಗಿದೆ. ಈ ಕುರಿತ ಕುತೂಹಲಕಾರಿ ಕತೆ ಇಲ್ಲಿದೆ.

VISTARANEWS.COM


on

By

Fraud Case
Koo

ಒಂದು ವರ್ಷ ಪ್ರೀತಿಸಿ, ಬಳಿಕ ಮದುವೆಯಾಗಿ 12 ದಿನಗಳ ಬಳಿಕ ಇಂಡೋನೇಷ್ಯಾದ (Indonesia) 26 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಮಹಿಳೆಯಲ್ಲ (Fraud Case) ಎಂಬುದನ್ನು ತಿಳಿದು ಆಘಾತಗೊಂಡಿದ್ದಾನೆ. 2023ರಲ್ಲಿ ಅವರಿಬ್ಬರು ಸಾಮಾಜಿಕ ಜಾಲತಾಣದಲ್ಲಿ (social media) ಭೇಟಿಯಾಗಿದ್ದು, ಒಂದು ವರ್ಷದ ಬಳಿಕ ಇಬ್ಬರೂ ಮದುವೆಗೆ (wedding) ಸಮ್ಮತಿ ಸೂಚಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಭೇಟಿಯಾಗಿದ್ದ ಇಬ್ಬರೂ ಒಂದು ವರ್ಷದ ಬಳಿಕ ವೈಯಕ್ತಿಕವಾಗಿ ಭೇಟಿಯಾಗಲು ನಿರ್ಧರಿಸಿದ್ದರು. ಅದಿಂಡಾ ಹೆಸರಿನಲ್ಲಿ ಪರಿಚಯವಾದ ಹುಡುಗಿ ಸಂಪೂರ್ಣ ಮುಖವನ್ನು ಮುಚ್ಚುವ ಸಾಂಪ್ರದಾಯಿಕ ಮುಸ್ಲಿಂ ಉಡುಗೆಯನ್ನು ಯಾವಾಗಲೂ ಧರಿಸುತ್ತಿದ್ದ.ಳು. ಅದು ಯಾಕೆ ಎಂದು ಯುವಕ ಪ್ರಶ್ನೆ ಮಾಡಲಿಲ್ಲ. ಅದು ಆಕೆಯ ಇಸ್ಲಾಂ ಧರ್ಮದ ಮೇಲಿನ ಭಕ್ತಿಯ ಸಂಕೇತವೆಂದು ಎಕೆ ಭಾವಿಸಿದ್ದ.

ಕೊನೆಗೆ ಇಬ್ಬರೂ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದರು. ಮದುವೆಗೆ ಹಾಜರಾಗಲು ತನಗೆ ಯಾವುದೇ ಕುಟುಂಬವಿಲ್ಲ ಎಂದು ಅದಿಂಡಾ ಎಕೆಗೆ ತಿಳಿಸಿದ್ದಳು. ಆದ್ದರಿಂದ ಇವರಿಬ್ಬರು ಏಪ್ರಿಲ್ 12ರಂದು ಎಕೆ ಮನೆಯಲ್ಲಿ ಸಾಧಾರಣ ಸಮಾರಂಭದ ಮೂಲಕ ಪತಿಪತ್ನಿಯರಾದರು.

ಮದುವೆಯ ಅನಂತರವೂ ಅದಿಂಡಾ ತನ್ನ ಪತಿಯಿಂದ ತನ್ನ ಮುಖವನ್ನು ನಿರಂತರವಾಗಿ ಮರೆಮಾಡಿದಳು ಮತ್ತು ಅವನ ಹಳ್ಳಿಯಲ್ಲಿ ಅವನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಬೆರೆಯಲು ನಿರಾಕರಿಸಿದಳು. ಇದಲ್ಲದೆ, ಅವಳು ಮದುವೆಯ ಅನಂತರದ ಶಾಸ್ತ್ರಗಳನ್ನು ಮಾಡಲು ನಿರಾಕರಿಸಿದಳು. ಋತುಚಕ್ರ, ಆರೋಗ್ಯ ಸಮಸ್ಯೆ ಎಂದು ಹೇಳಿ ಗಂಡನೊಂದಿಗೆ ಸೇರಲು ನಿರಾಕರಿಸಿದಳು.

12 ದಿನಗಳ ಬಳಿಕ ಮಾಹಿತಿ ಬಹಿರಂಗ

ಹನ್ನೆರಡು ದಿನಗಳ ಅನುಮಾನಾಸ್ಪದ ವರ್ತನೆಯ ಅನಂತರ ಎಕೆ ತನ್ನ ಹೆಂಡತಿಯನ್ನು ತನಿಖೆ ಮಾಡಲು ನಿರ್ಧರಿಸಿದ. ಅದಿಂಡಾ ಅವರ ಪೋಷಕರು ಇನ್ನೂ ಜೀವಂತವಾಗಿದ್ದಾರೆ ಎಂಬುದನ್ನು ಆತ ಕಂಡುಕೊಂಡ. ಮಗನ ಈ ಹೊಸ ಸಂಬಂಧದ ಬಗ್ಗೆ ಅವರಿಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ. ಆಘಾತಕಾರಿ ವಿಷಯವೆಂದರೆ ಅದಿಂಡಾ ವಾಸ್ತವವಾಗಿ 2020ರಲ್ಲಿ ಕ್ರಾಸ್ ಡ್ರೆಸ್ಸಿಂಗ್ ಮಾಡುತ್ತಿರುವ ಇಎಸ್ ಹೆಚ್ ಎಂದು ಗುರುತಿಸಲ್ಪಟ್ಟಿದ್ದಾನೆ.

ಯಾಕಾಗಿ ವಂಚನೆ?

ಪೊಲೀಸ್ ತನಿಖೆಯ ಸಮಯದಲ್ಲಿ ಆಸ್ತಿ ಕದಿಯಲು ಎಕೆಯನ್ನು ಇಎಸ್ ಹೆಚ್ ವಿವಾಹವಾದ ಎಂದು ತಿಳಿದು ಬಂದಿದೆ. ಆತನನ್ನು ಬಂಧಿಸಿರುವ ಪೊಲೀಸರು ಆತನ ಧ್ವನಿ ಮಹಿಳೆಯಂತೆ ಇದೆ. ಆತ ನಿಜವಾಗಿಯೂ ತನ್ನ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾನೆ ಎಂದು ತಿಳಿಸಿದ್ದಾರೆ!

ಎಕೆ ಮತ್ತು ಇಎಸ್ ಹೆಚ್ ಮದುವೆಯ ಫೋಟೋಗಳನ್ನು ನೋಡಿದರೆ ಅದಿಂಡ ನಿಜವಾದ ಮಹಿಳೆಯಂತೆ ಕಾಣುತ್ತಾನೆ. ಸೌಮ್ಯವಾದ ಧ್ವನಿ ಮತ್ತು ಸ್ವರವೂ ಅವನಿಗಿದೆ. ಆದ್ದರಿಂದ ಅವನು ಮಹಿಳೆ ಎಂಬುದರ ಬಗ್ಗೆ ಯಾವುದೇ ಅನುಮಾನವಿರಲಿಲ್ಲ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ: Viral Video: ವಿಮಾನದ ರೆಕ್ಕೆ ಮೇಲೆ ನಡೆದುಕೊಂಡು ಹೊರ ಬಂದ ಪ್ರಯಾಣಿಕರು; ವೈರಲಾಯ್ತು ವಿಡಿಯೋ

ಏನು ಶಿಕ್ಷೆ ?

ಸ್ಥಳೀಯ ಕಾನೂನುಗಳ ಅಡಿಯಲ್ಲಿ ವಂಚನೆ ಆರೋಪಗಳನ್ನು ಎದುರಿಸುತ್ತಿರುವ ಆತನಿಗೆ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುವುದು.

ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರನ್ನು ಬೆಚ್ಚಿ ಬೀಳಿಸಿದೆ. ಒಬ್ಬ ವ್ಯಕ್ತಿ ಪಾಪ ಎಕೆ, ಒಂದು ವರ್ಷಕ್ಕೂ ಹೆಚ್ಚು ಕಾಲ ಅಡ್ಡ ಡ್ರೆಸ್ಸರ್‌ನೊಂದಿಗಿನ ಸಂಬಂಧದಲ್ಲಿದ್ದು ಮೋಸ ಹೋಗಿರುವುದು ಸಂಕಟ ಉಂಟು ಮಾಡುತ್ತದೆ. ಮದುವೆ ಮತ್ತು ಹಣ ಎರಡನ್ನೂ ಕಳೆದುಕೊಂಡಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ.

Continue Reading

ದೇಶ

Cyclone Remal: ರೆಮಲ್‌ ಚಂಡಮಾರುತದ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ; 16 ಮಂದಿಯನ್ನು ಬಲಿ ಪಡೆದ ಭೀಕರ ಮಳೆ

Cyclone Remal: ಪ್ರಬಲ ಚಂಡಮಾರುತ ರೆಮಲ್‌ ಅಬ್ಬರಕ್ಕೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಅಕ್ಷರಶಃ ನಲುಗಿ ಹೋಗಿವೆ. ರೆಮಲ್ ಚಂಡಮಾರುತದ ಕಾರಣದಿಂದ ಬಂಗಾಳ ಕೊಲ್ಲಿಯ ಕರಾವಳಿಯಲ್ಲಿ ಭೂಕುಸಿತ ಉಂಟಾಗಿದ್ದು, ಬಾಂಗ್ಲಾದೇಶ ಮತ್ತು ಭಾರತದಾದ್ಯಂತ 16 ಮಂದಿಯನ್ನು ಬಲಿ ಪಡೆದುಕೊಂಡಿದೆ. ಬಾಂಗ್ಲಾದೇಶದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, ಉಳಿದ ಸಾವು ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ. ಈ ಪೈಕಿ ಕೆಲವರು ಸಂತ್ರಸ್ತ ಶಿಬಿರಕ್ಕೆ ಸ್ಥಳಾಂತರಿಸುವ ವೇಳೆ ಮೃತಪಟ್ಟರೆ, ಇನ್ನು ಹಲವರು ಭೀಕರ ಮಳೆಯಿಂದ ಮನೆ ಕುಸಿದು, ವಿದ್ಯುತ್‌ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

VISTARANEWS.COM


on

Cyclone Remal
Koo

ಕೋಲ್ಕತ್ತಾ: ಈ ವರ್ಷದ ಮೊದಲ ಪ್ರಬಲ ಚಂಡಮಾರುತ ರೆಮಲ್‌ (Cyclone Remal) ಅಬ್ಬರಕ್ಕೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಅಕ್ಷರಶಃ ನಲುಗಿ ಹೋಗಿವೆ. ರೆಮಲ್ ಚಂಡಮಾರುತದ ಕಾರಣದಿಂದ ಬಂಗಾಳ ಕೊಲ್ಲಿಯ ಕರಾವಳಿಯಲ್ಲಿ ಭೂಕುಸಿತ ಉಂಟಾಗಿದ್ದು, ಬಾಂಗ್ಲಾದೇಶ ಮತ್ತು ಭಾರತದಾದ್ಯಂತ 16 ಮಂದಿಯನ್ನು ಬಲಿ ಪಡೆದುಕೊಂಡಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಮಳೆಯಿಂದಾಗಿ ಹಲವು ಮಂದಿ ಗಾಯಗೊಂಡಿದ್ದು, ಅನೇಕ ಮನೆಗಳು, ಮರಗಳು ಧರೆಗುರುಳಿವೆ. ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ವಿದ್ಯುತ್ ಮಾರ್ಗಗಳಿಗೆ ತೀವ್ರ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಗಂಟೆಗೆ 135 ಕಿ.ಮೀ ವೇಗದಲ್ಲಿ ಬೀಸಿದ ಚಂಡಮಾರುತವು ಭಾನುವಾರ ತಡರಾತ್ರಿ ಬಾಂಗ್ಲಾದೇಶದ ದಕ್ಷಿಣ ಬಂದರು ಮೊಂಗ್ಲಾ ಮತ್ತು ಪಶ್ಚಿಮ ಬಂಗಾಳದ ಪಕ್ಕದ ಸಾಗರ್ ದ್ವೀಪಗಳ ಸುತ್ತಮುತ್ತಲಿನ ಪ್ರದೇಶವನ್ನು ದಾಟಿದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, ಉಳಿದ ಸಾವು ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ. ಈ ಪೈಕಿ ಕೆಲವರು ಸಂತ್ರಸ್ತ ಶಿಬಿರಕ್ಕೆ ಸ್ಥಳಾಂತರಿಸುವ ವೇಳೆ ಮೃತಪಟ್ಟರೆ, ಇನ್ನು ಹಲವರು ಭೀಕರ ಮಳೆಯಿಂದ ಮನೆ ಕುಸಿದು, ವಿದ್ಯುತ್‌ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ವಿದ್ಯುತ್ ಸ್ಪರ್ಶದಿಂದ ನಾಲ್ವರು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂಡಮಾರುತದ ಪ್ರಭಾವ ವಿದ್ಯುತ್ ಮಾರ್ಗಗಳ ಮೇಲೂ ಬೀರಿದ್ದು, ಹಲವು ಕರಾವಳಿ ಪ್ರದೇಶಗಳಿಗೆ ಸಂಪರ್ಕ ಕಡಿತಗೊಂಡಿದೆ. ಪರಿಣಾಮ ಬಾಂಗ್ಲಾದೇಶದ ಲಕ್ಷಾಂತರ ಮಂದಿ ಮತ್ತು ಪಶ್ಚಿಮ ಬಂಗಾಳದ ಸಾವಿರಾರು ಮಂದಿ ವಿದ್ಯುತ್‌ ಇಲ್ಲದೆ ಪರದಾಡುವಂತಾಗಿದೆ. ಪಶ್ಚಿಮ ಬಂಗಾಳದಲ್ಲಿ ಕನಿಷ್ಠ 1,200 ವಿದ್ಯುತ್‌ ಕಂಬಗಳು ಧರೆಗುರುಳಿವೆ ಮತ್ತು 300 ಮಣ್ಣಿನ ಗುಡಿಸಲುಗಳು ನೆಲಸಮವಾಗಿದೆ ಎಂದು ಅಂದಾಜಿಸಲಾಗಿದೆ.

ʼʼಅಪಘಾತಗಳನ್ನು ತಪ್ಪಿಸಲು ಕೆಲವು ಪ್ರದೇಶಗಳಿಗೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಇತ್ತ ಮರಗಳು ಬಿದ್ದು ಅನೇಕ ಕರಾವಳಿ ಪಟ್ಟಣಗಳ ವಿದ್ಯುತ್‌ ಪೂರೈಕೆಗೆ ಅಡ್ಡಿಯಾಗಿದೆʼʼ ಎಂದು ಬಾಂಗ್ಲಾದೇಶದ ವಿದ್ಯುತ್ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಬೀದಿಗಳಿಗೆ ನುಗ್ಗಿದ ನೆರೆ

ಚಂಡಮಾರುತ ಕಾರಣದಿಂದ ಮೇ 27ರಂದು ಭೀಕರ ಮಳೆಯಾಗಿದ್ದು, ಕೋಲ್ಕತ್ತಾದ ಹಲವು ಬೀದಿಗಳಿಗೆ ನೆರೆ ನೀರು ನುಗ್ಗಿದೆ. ಅನೇಕ ಕಡೆ ಗೋಡೆಗಳು ಕುಸಿದು ಬಿದ್ದಿದ್ದು, ಕನಿಷ್ಠ 52 ಮರಗಳು ಧರೆಗುರುಳಿವೆ. ಭಾನುವಾರ ಸುಮಾರು 50 ವಿಮಾನಗಳ ಹಾರಾಟವನ್ನು ನಿರ್ಬಂಧಿಸಲಾಗಿದ್ದು, ಸದ್ಯ ಸಂಚಾರ ಆರಂಭಿಸಿವೆ. ರೈಲು ಸಂಚಾರವನ್ನು ಪುನರಾರಂಭಿಸಲಾಗಿದೆ.

ಇದನ್ನೂ ಓದಿ: Cyclone Remal: ರೆಮಲ್‌ ಚಂಡ ಮಾರುತದ ಅಬ್ಬರ ಶುರು; ಬಾಂಗ್ಲಾದೇಶ, ಪ.ಬಂಗಾಳ ಸೇರಿದಂತೆ ಹಲವಡೆ ಭಾರೀ ಮಳೆ, ಭೂಕುಸಿತ ಸಾಧ್ಯತೆ

10 ಲಕ್ಷ ಮಂದಿಯ ಸ್ಥಳಾಂತರ

ಭಾರತ ಮತ್ತು ಬಾಂಗ್ಲಾದೇಶದ ಕನಿಷ್ಠ 10 ಲಕ್ಷ ಮಂದಿಯನ್ನು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ʼʼನದಿ ನೀರಿನ ಮಟ್ಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳ ಜನರನ್ನು ನಿರಾಶ್ರಿತ ಶಿಬಿರಗಳಿಗೆ ಕರೆದೊಯ್ಯಲಾಗಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Continue Reading
Advertisement
Shakhahaari Movie 1 cr minutes of streaming amazon prime
ಸ್ಯಾಂಡಲ್ ವುಡ್6 mins ago

Shakhahaari Movie: ಪ್ರೇಕ್ಷಕರನ್ನು ಆವರಿಸಿದ ‘ಶಾಖಾಹಾರಿ’: ಪರಭಾಷಿಕರಿಂದಲೂ ಚಿತ್ರಕ್ಕೆ ಮೆಚ್ಚುಗೆ!

Arvind Kejriwal
ದೇಶ6 mins ago

Arvind Kejriwal: ಜಾಮೀನು ಅವಧಿ ವಿಸ್ತರಣೆಗೆ ಕೋರಿ ಅರ್ಜಿ; ಸುಪ್ರೀಂನಲ್ಲಿ ಕೇಜ್ರಿವಾಲ್‌ಗೆ ಭಾರೀ ಹಿನ್ನಡೆ-ಮತ್ತೆ ಜೈಲು ಫಿಕ್ಸ್‌!

Crime News
ಕ್ರೈಂ28 mins ago

Crime News: ಶಾಕಿಂಗ್‌: ಕುಟುಂಬದ 7 ಮಂದಿಯನ್ನು ಕೊಚ್ಚಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ; ಕಾರಣ ನಿಗೂಢ

belluru assault case
ಕ್ರೈಂ30 mins ago

Assault Case: ಬೆಳ್ಳೂರು ಹಿಂದೂ ಯುವಕನ ಮೇಲೆ ಹಲ್ಲೆ; ದೂರು ಸ್ವೀಕರಿಸದ ಪಿಎಸ್‌ಐ ಸಸ್ಪೆಂಡ್‌

Shilpa Shetty Visiting Nanjundeshwara Temple
ಸಿನಿಮಾ31 mins ago

Shilpa Shetty: ಮೈಸೂರಿನ ನಂಜುಂಡೇಶ್ವರನ ಸನ್ನಿಧಿಯಲ್ಲಿ ನಟಿ ಶಿಲ್ಪಾ ಶೆಟ್ಟಿ ಧ್ಯಾನ

Viral Video
ವೈರಲ್ ನ್ಯೂಸ್46 mins ago

Viral Video: “ನೀವು ಅಲ್ಲಿಂದ ದಾಳಿ ಮಾಡಿ..ನಾವು ಇಲ್ಲಿಂದ ಅಟ್ಯಾಕ್‌ ಮಾಡ್ತೇವೆ..ಪಾಕ್‌ ಧ್ವಂಸ ಆಗೋದು ಪಕ್ಕಾ”-ಆಫ್ಗನ್‌ ವೃದ್ಧನ ಈ ವಿಡಿಯೋ ಫುಲ್‌ ವೈರಲ್‌

India Highest Paid Item Girl not Malaika Nora, Katrina, Sunny
ಸಿನಿಮಾ51 mins ago

India Highest Paid Item Girl : ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಂ ಗರ್ಲ್ ಯಾರು? ಮಲೈಕಾ, ಸನ್ನಿ, ನೋರಾ ಅಲ್ವೇ ಅಲ್ಲ!

Job Alert
ಉದ್ಯೋಗ1 hour ago

Job Alert: ಯುಪಿಎಸ್‌ಸಿಯಿಂದ 312 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

love jihad kasaragod 2
ಕ್ರೈಂ1 hour ago

Love Jihad: ನಾಪತ್ತೆಯಾದ ಹಿಂದೂ ಯುವತಿ ಮುಸ್ಲಿಂ ಯುವಕನ ಮದುವೆಯಾಗಿ ಪತ್ತೆ; ಮುಸ್ಲಿಂ ಲೀಗ್‌ ನಾಯಕನ ಕುಮ್ಮಕ್ಕು?

Kannada New Movie Aditya Shashikumar Kaadaadi Movie Lyrical song out
ಸ್ಯಾಂಡಲ್ ವುಡ್2 hours ago

Kannada New Movie: ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ಔಟ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ16 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌