ಅಮೆಜಾನ್​ ದಟ್ಟಾರಣ್ಯದಲ್ಲಿ ವಿಮಾನ ಪತನ; 4 ಮಕ್ಕಳ 40 ದಿನಗಳ ಹೋರಾಟ, ಹಸುಳೆಯೂ ಜೀವಂತ - Vistara News

ವಿದೇಶ

ಅಮೆಜಾನ್​ ದಟ್ಟಾರಣ್ಯದಲ್ಲಿ ವಿಮಾನ ಪತನ; 4 ಮಕ್ಕಳ 40 ದಿನಗಳ ಹೋರಾಟ, ಹಸುಳೆಯೂ ಜೀವಂತ

ನಾಲ್ವರು ಮಕ್ಕಳು ಸುರಕ್ಷಿತವಾಗಿ ಸಿಕ್ಕಿದ್ದರ ಬಗ್ಗೆ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೋ ಪೆಡ್ರೋ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಅಮೆಜಾನ್​ ಕಾಡಿನಲ್ಲಿ 40 ದಿನಗಳ ಹಿಂದೆ ಕಳೆದು ಹೋಗಿದ್ದ 4 ಮಕ್ಕಳು ಇದೀಗ ಜೀವಂತವಾಗಿ ಸಿಕ್ಕಿದ್ದಾರೆ. ಇದರಿಂದ ನಮ್ಮ ಇಡೀ ದೇಶಕ್ಕೇ ಸಂತೋಷವಾಗಿದೆ ಎಂದಿದ್ದಾರೆ.

VISTARANEWS.COM


on

4 Children Found alive Amazon Forest
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಮೆಜಾನ್​ ಮಳೆಕಾಡು ಭಯಂಕರ ದಟ್ಟಾರಣ್ಯ (Amazon Rainforest). ವಾಯುವ್ಯ ಬ್ರೆಜಿಲ್​​ನ ಹೆಚ್ಚಿನ ಭಾಗವನ್ನು ಆವರಿಸಿರುವ ಈ ಕಾಡು, ಕೊಲಂಬಿಯಾ, ಪೆರು ಮತ್ತಿತರ ದೇಶಗಳಿಗೂ ಆವರಿಸಿದೆ. ಈ ಅಮೇಜಾನ್​ ದಟ್ಟಾರಣ್ಯದಲ್ಲಿ ಸುಮಾರು 40 ದಿನಗಳ ಹಿಂದೆ ಸಣ್ಣ ವಿಮಾನವೊಂದು ಪತನವಾಗಿತ್ತು (Plane Crash in Amazon Rainforest). ಅಂದು ಅಪಘಾತಕ್ಕೀಡಾದ ವಿಮಾನದಲ್ಲಿದ್ದ ನಾಲ್ವರು ಮಕ್ಕಳನ್ನು ಈಗ ರಕ್ಷಿಸಲಾಗಿದೆ. 40 ದಿನಗಳಿಂದಲೂ ಆ ಮಕ್ಕಳು ಅದೇ ದಟ್ಟಾರಣ್ಯದಲ್ಲಿ ಇದ್ದರು. ಆದರೆ ಅವರನ್ನು ಪತ್ತೆ ಮಾಡುವುದು ದೊಡ್ಡ ಸವಾಲಾಗಿತ್ತು. ಬದುಕಿಯೇ ಸಿಗುತ್ತಾರೆ ಎಂಬ ಭರವಸೆಯೂ ಇರಲಿಲ್ಲ. ಆದರೀಗ ನಾಲ್ವರೂ ಮಕ್ಕಳು ಜೀವಂತವಾಗಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ, ಅಸ್ವಸ್ಥರಾಗಿದ್ದಾರೆ. ರಕ್ಷಣಾ ಸಿಬ್ಬಂದಿಯೊಂದಿಗೆ ಆ ಮಕ್ಕಳು ಇರುವ ಫೋಟೋಗಳು ಕೂಡ ವೈರಲ್ ಆಗುತ್ತಿವೆ.

ಮೇ 1ರಂದು ಕೊಲಂಬಿಯಾದ ಅಮೆಜಾನ್​ ದಟ್ಟಾರಣ್ಯದಲ್ಲಿ ಸೆಸ್ನಾ ಎಂಬ ವಿಮಾನ ಪತನವಾಗಿತ್ತು. ಒಂದೇ ಎಂಜಿನ್​​ನ ಸಣ್ಣ ವಿಮಾನದಲ್ಲಿ ಮಹಿಳೆಯೊಬ್ಬರು ತಮ್ಮ ನಾಲ್ವರು ಮಕ್ಕಳೊಂದಿಗೆ ಪ್ರಯಾಣ ಮಾಡುತ್ತಿದ್ದರು. ಹಾಗೇ ಇನ್ನೊಬ್ಬ ಸ್ಥಳೀಯ ಮುಖಂಡ ಇದ್ದರು. ಪೈಲೆಟ್​ ಸೇರಿ ಒಟ್ಟು ಏಳುಮಂದಿ ವಿಮಾನದಲ್ಲಿದ್ದರು. ಆದರೆ ವಿಮಾನ ತಲುಪಬೇಕಾದ ಸ್ಥಳ ತಲುಪದೆ, ಅಮೇಜಾನ್​ ಮಳೆಕಾಡಿನಲ್ಲಿ ಅಪಘಾತಕ್ಕೀಡಾಗಿತ್ತು. ಅದೊಂದು ತೀರ ದುರ್ಗಮ ಪ್ರದೇಶವಾಗಿತ್ತು. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ರಕ್ಷಣಾ ಪಡೆಗಳು ಅಲ್ಲಿಗೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದವು. ನಾಲ್ಕು ಮಕ್ಕಳ ಅಮ್ಮ ಮ್ಯಾಗ್ಡಲೀನಾ ಮುಕುಟುಯ್ ವೇಲೆನ್ಸಿಯಾ, ಇನ್ನೊಬ್ಬ ಸ್ಥಳೀಯ ಮುಖಂಡ ಮತ್ತು ಪೈಲೆಟ್​ ಮೃತಪಟ್ಟಿದ್ದು, ಆ ಮೂವರ ಶವವೂ ಪತ್ತೆಯಾಯಿತು. ಆದರೆ ನಾಲ್ವರು ಮಕ್ಕಳ ಸುಳಿವೇ ಇರಲಿಲ್ಲ. ಹಾಗಂತ ರಕ್ಷಣಾ ಪಡೆಗಳು ಪ್ರಯತ್ನವನ್ನೂ ಬಿಟ್ಟಿರಲಿಲ್ಲ. ಇದೀಗ 40 ದಿನಗಳ ಬಳಿಕ ಮಕ್ಕಳು ಸಿಕ್ಕಿದ್ದಾರೆ.

ನಾಲ್ವರು ಮಕ್ಕಳು ಸುರಕ್ಷಿತವಾಗಿ ಸಿಕ್ಕಿದ್ದರ ಬಗ್ಗೆ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೋ ಪೆಡ್ರೋ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಕೊಲಂಬಿಯಾ ಕಾಡಿನಲ್ಲಿ 40 ದಿನಗಳ ಹಿಂದೆ ಕಳೆದು ಹೋಗಿದ್ದ 4 ಮಕ್ಕಳು ಇದೀಗ ಜೀವಂತವಾಗಿ ಸಿಕ್ಕಿದ್ದಾರೆ. ನಮ್ಮ ಇಡೀ ದೇಶಕ್ಕೇ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಹಾಗೇ, ಮಕ್ಕಳು ಮಿಲಿಟರಿ ಸಿಬ್ಬಂದಿಯೊಂದಿಗೆ ಇರುವ ಫೋಟೋವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಅಂದಹಾಗೇ, ಈ ಮಕ್ಕಳ ಹೆಸರು ಲೆಸ್ಲಿ ಜಾಕೊಬೊಂಬೈರ್ ಮುಕುಟುಯ್ (13), ಸೊಲೀನಿ ಜಾಕೊಬೊಂಬೈರ್ ಮುಕುಟುಯ್ (9), ಟಿಯೆನ್ ರಾನೋಕ್ ಮುಕುಟುಯ್ (4), ಮತ್ತು ಕ್ರಿಸ್ಟಿನ್ ರಾನೋಕ್ ಮುಕುಟುಯ್. ಇವರಲ್ಲಿ ಈ ಕ್ರಿಸ್ಟಿನ್​ ರಾನೋಕ್​ ಇನ್ನೂ 11 ತಿಂಗಳ ಶಿಶು ಎನ್ನಲಾಗಿದೆ. ಸದ್ಯ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ: ಹಾವು ಕಚ್ಚಿ ಕರ್ತವ್ಯನಿರತ ಅರಣ್ಯ ಅಧಿಕಾರಿ ಸಾವು; ಅಪ್ಪನಿಗೇನಾಯ್ತು ಎಂಬ 3 ವರ್ಷದ ಮಗಳ ಪ್ರಶ್ನೆಗೆ ಅಮ್ಮ ನಿರುತ್ತರ

ಮಕ್ಕಳ ಪತ್ತೆಗಾಗಿ ಕಾರ್ಯಾಚರಣೆ ಚುರುಕಾಗಿ ನಡೆದಿತ್ತು 150 ಯೋಧರು, ಇನ್ನಿತರ ರಕ್ಷಣಾ ದಳಗಳ ಸಿಬ್ಬಂದಿ, ಸ್ಥಳೀಯರು ಪಾಲ್ಗೊಂಡಿದ್ದರು. ಶ್ವಾನಗಳ ಸಹಾಯ ತೆಗೆದುಕೊಳ್ಳಲಾಗಿತ್ತು. ದಟ್ಟವಾದ ಮಂಜು, ಮುಸುಕಾದ ವಾತಾವರಣ, ದೊಡ್ಡದೊಡ್ಡ ಮರಗಳು, ಪೊದೆಗಳು ಕಾರ್ಯಾಚರಣೆಗೆ ಸವಾಲೊಡ್ಡಿದ್ದವು. ಏನೇ ಆದರೂ ಮಕ್ಕಳನ್ನು ಹೇಗಾದರೂ ಹುಡುಕಲೇಬೇಕು ಎಂದು ರಕ್ಷಣಾ ಸಿಬ್ಬಂದಿ ಪಣ ತೊಟ್ಟಿದ್ದರು. ಅದರಂತೆ ಹುಡುಕಿ, ಹೆಲಿಕಾಪ್ಟರ್​ ಮೂಲಕ ಕರೆದುಕೊಂಡು ಬಂದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Pesticide: ಎವರೆಸ್ಟ್‌ ಫಿಶ್‌ ಕರಿ ಮಸಾಲೆಯಲ್ಲಿ ಕೀಟನಾಶಕ; ಬ್ಯಾನ್‌ ಮಾಡಿದ ಸಿಂಗಾಪುರ

Pesticide: ಅನುಮತಿಸಲಾದ ಮಿತಿಯನ್ನು ಮೀರಿದ ಮಟ್ಟದಲ್ಲಿ ಫಿಶ್‌ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ ಎಂದು ಸಿಂಗಾಪುರ ಹೇಳಿದೆ,

VISTARANEWS.COM


on

pesticide everest fish curry masala
Koo

ಹೊಸದಿಲ್ಲಿ: ಭಾರತದ ಜನಪ್ರಿಯ ಉತ್ಪನ್ನವಾದ ಮಸಾಲೆ (Spices) ತಯಾರಕ ಎವರೆಸ್ಟ್‌ನ (Everest) ಫಿಶ್ ಕರಿ ಮಸಾಲಾ (Fish Curry Masala) ಅನ್ನು ಹಿಂಪಡೆಯಲು ಸಿಂಗಾಪುರ (Singapore) ಆದೇಶಿಸಿದೆ. ಇದರಲ್ಲಿ ಸುರಕ್ಷಿತ ಮಿತಿಯನ್ನು ಮೀರಿ ಕೀಟನಾಶಕ (Pesticide) ಎಥಿಲೀನ್ ಆಕ್ಸೈಡ್ (Ethylene oxide) ಇದೆ ಎಂದು ಅದು ಆರೋಪಿಸಿದೆ.

ಅನುಮತಿಸಲಾದ ಮಿತಿಯನ್ನು ಮೀರಿದ ಮಟ್ಟದಲ್ಲಿ ಫಿಶ್‌ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್‌ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು SFA ಹೇಳಿದೆ.

“ಸಿಂಗಾಪುರದ ಆಹಾರ ನಿಯಮಗಳ ಅಡಿಯಲ್ಲಿ, ಎಥಿಲೀನ್ ಆಕ್ಸೈಡ್ ಅನ್ನು ಮಸಾಲೆಗಳ ಸ್ಟೆರಿಲೈಸೇಶನ್‌ನಲ್ಲಿ ಮಾತ್ರ ಬಳಸಲು ಅನುಮತಿಸಲಾಗಿದೆ” ಎಂದು SFA ಹೇಳಿದೆ. ಕಡಿಮೆ ಮಟ್ಟದ ಎಥಿಲೀನ್ ಆಕ್ಸೈಡ್‌ ಸೇರಿರುವ ಆಹಾರವನ್ನು ಸೇವಿಸುವುದರಿಂದ ತಕ್ಷಣದ ಅಪಾಯವಿಲ್ಲ. ಆದರೆ ಇದರ ದೀರ್ಘಕಾಲಿಕ ಬಳಕೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆಹಾರ ಸಂಸ್ಥೆ ಹೇಳಿದೆ.

“ಈ ಆಹಾರ ಸೇವನೆಯಿಂದ ತಕ್ಷಣದ ಅಪಾಯವಿಲ್ಲ. ಆದರೆ ಈ ಮಸಾಲೆಗೆ ಒಡ್ಡಿಕೊಳ್ಳುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು” ಎಂದು ಅದು ಹೇಳಿದೆ. “ಸಂಬಂಧಿತ ಉತ್ಪನ್ನಗಳನ್ನು ಖರೀದಿಸಿದ ಗ್ರಾಹಕರು ಅದನ್ನು ಸೇವಿಸದಂತೆ ಸೂಚಿಸಲಾಗಿದೆ. ಈ ಉತ್ಪನ್ನಗಳನ್ನು ಸೇವಿಸಿದವರು, ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಗ್ರಾಹಕರು ವಿಚಾರಣೆಗಾಗಿ ತಮ್ಮ ಖರೀದಿ ಕೇಂದ್ರವನ್ನು ಸಂಪರ್ಕಿಸಬಹುದು” ಎಂದು SFA ತಿಳಿಸಿದೆ.

ಮಸಾಲೆ ಉತ್ಪಾದನೆ ಸಂಸ್ಥೆ ಎವರೆಸ್ಟ್ ಈ ಬೆಳವಣಿಗೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: Shubman Gill: ಗ್ಯಾಲರಿಯಲ್ಲಿ ಕುಳಿತಿದ್ದ ಸುಂದರ ಹುಡುಗಿಯನ್ನು ಕಂಡು ಕ್ಲೀನ್​ ಬೌಲ್ಡ್​ ಆದ ಗಿಲ್​; ವಿಡಿಯೊ ವೈರಲ್​

Continue Reading

ವಿದೇಶ

Suicide bomb Attack: ಪಾಕ್‌ನಲ್ಲಿ ಜಪಾನೀಯರಿದ್ದ ವಾಹನಕ್ಕೆ ಆತ್ಮಹತ್ಯಾ ಬಾಂಬ್‌ ದಾಳಿ: 2 ಬಲಿ

Suicide bomb Attack: ವಾಹನದಲ್ಲಿದ್ದ ಎಲ್ಲಾ ಐವರು ವಿದೇಶಿಗರು ದಾಳಿಯಲ್ಲಿ ಬದುಕುಳಿದಿದ್ದಾರೆ ಎಂದು ವರದಿ ತಿಳಿಸಿದೆ. ಪೊಲೀಸರು ನಡೆಸಿದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಆತ್ಮಹತ್ಯಾ ಬಾಂಬರ್ ಮತ್ತು ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ.

VISTARANEWS.COM


on

Suicide bomb Attack karachi
Koo

ಕರಾಚಿ: ಶುಕ್ರವಾರ ಪಾಕಿಸ್ತಾನದ (Pakistan) ಕರಾಚಿಯಲ್ಲಿ (Karachi) ಜಪಾನೀ ಪ್ರಜೆಗಳು (Japanese) ಪ್ರಯಾಣಿಸುತ್ತಿದ್ದ ವಾಹನಕ್ಕೆ ಆತ್ಮಹತ್ಯಾ ಬಾಂಬ್‌ (Suicide bomb Attack) ದಾಳಿ ನಡೆದಿದೆ. ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ.

ವಾಹನದಲ್ಲಿದ್ದ ಎಲ್ಲಾ ಐವರು ವಿದೇಶಿಗರು ದಾಳಿಯಲ್ಲಿ ಬದುಕುಳಿದಿದ್ದಾರೆ ಎಂದು ವರದಿ ತಿಳಿಸಿದೆ. ಪೊಲೀಸರು ನಡೆಸಿದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಆತ್ಮಹತ್ಯಾ ಬಾಂಬರ್ ಮತ್ತು ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ.

ಬದುಕುಳಿದಿರುವ ಹಾಗೂ ಗಾಯಗೊಂಡು ಜಪಾನೀಸ್‌ ಪ್ರಜೆಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ವಕ್ತಾರ ಅಬ್ರಾರ್ ಹುಸೇನ್ ಬಲೋಚ್ ಹೇಳಿದ್ದಾರೆ. ಯಾವುದೇ ಉಗ್ರಗಾಮಿ ಸಂಘಟನೆ ಈ ದಾಳಿಯ ಹೊಣೆಗಾರಿಕೆಯನ್ನು ತಕ್ಷಣವೇ ಹೇಳಿಕೊಂಡಿಲ್ಲ.

ಇದು ಆತ್ಮಾಹುತಿ ದಾಳಿ ಎಂದು ಕರಾಚಿ ಪೊಲೀಸರು ಖಚಿತಪಡಿಸಿದ್ದಾರೆ. ಸ್ಫೋಟದಲ್ಲಿ ಮತ್ತೊಂದು ವಾಹನಕ್ಕೂ ಹಾನಿಯಾಗಿದೆ. ಪೊಲೀಸರು ಹಂಚಿಕೊಂಡ ಆರಂಭಿಕ ವರದಿಗಳ ಪ್ರಕಾರ, ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಎರಡನೇ ಭಯೋತ್ಪಾದಕ ಸಹ ಆತ್ಮಹತ್ಯಾ ಬಾಂಬರ್ ಆಗಿದ್ದಾನೆ.

“ಭಯೋತ್ಪಾದಕರು ದೇಹಕ್ಕೆ ಆತ್ಮಹತ್ಯಾ ಜಾಕೆಟ್ ಮತ್ತು ಗ್ರೆನೇಡ್ ಅನ್ನು ಕಟ್ಟಿಕೊಂಡಿದ್ದರು” ಎಂದು ಪೊಲೀಸರು ಹೇಳಿದ್ದಾರೆ. ಬಾಂಬ್ ನಿಷ್ಕ್ರಿಯ ತಂಡವು ದಾಳಿಯ ಸ್ಥಳವನ್ನು ತಲುಪಿದೆ. ದಳಿಯ ವೇಳೆ ಭೇಟಿ ನೀಡಿದ್ದ ವಿದೇಶಿ ಪ್ರಜೆಗಳು, ರಫ್ತು ಸಂಸ್ಕರಣಾ ವಲಯದಲ್ಲಿ ಕೆಲಸ ಮಾಡುತ್ತಿದ್ದವರು.

ಮೂವರು ಗಾಯಾಳುಗಳನ್ನು ವೈದ್ಯಕೀಯ ಕೇಂದ್ರಕ್ಕೆ ಕರೆತರಲಾಗಿದ್ದು, ಅದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಜಿನ್ನಾ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಒಬ್ಬ ದಾರಿಹೋಕ ಸೇರಿದಂತೆ ಗಾಯಗೊಂಡವರನ್ನು ನೂರ್ ಮುಹಮ್ಮದ್, ಲಂಗರ್ ಖಾನ್ ಮತ್ತು ಸಲ್ಮಾನ್ ರಫೀಕ್ ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಯಾವುದೇ ವಿದೇಶಿ ಪ್ರಜೆ ಗಾಯಗೊಂಡಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ. “ಸ್ಫೋಟದ ನಂತರ ಒಬ್ಬ ಭಯೋತ್ಪಾದಕ ವಾಹನದ ಮೇಲೆ ಗುಂಡು ಹಾರಿಸಿದ” ಎಂದು ವಿದೇಶಿ ಪ್ರಜೆಗಳ ಜೊತೆಯಲ್ಲಿದ್ದ ಮತ್ತು ಘಟನೆಗೆ ಸಾಕ್ಷಿಯಾದ ಭದ್ರತಾ ಸಿಬ್ಬಂದಿ ಹೇಳಿದರು.

ಏತನ್ಮಧ್ಯೆ, ಸಿಂಧ್ ಗವರ್ನರ್ ಕಮ್ರಾನ್ ಟೆಸ್ಸೋರಿ ಅವರು ಲಾಂಧಿಯಲ್ಲಿ ನಡೆದ ಆತ್ಮಹತ್ಯಾ ದಾಳಿಯನ್ನು ಖಂಡಿಸಿದರು. ನಗರದಲ್ಲಿ ಯಾವುದೇ ಸಂದರ್ಭದಲ್ಲೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ.

ಭಯೋತ್ಪಾದನೆಯ ಮೂಲಕ ಪಾಕಿಸ್ತಾನದ ಸರ್ಕಾರವನ್ನು ಉರುಳಿಸುವುದು, ತಮ್ಮದೇ ಆದ ಕಟ್ಟುನಿಟ್ಟಾದ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವುದು ಭಯೋತ್ಪಾದಕರ ಗುರಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನದ ಹಲವು ಕಡೆ ಅನಾಹುತಕಾರಿ ದಾಳಿಗಳನ್ನು ಉಗ್ರರು ಮಾಡಿದ್ದಾರೆ. ಬಲೂಚಿಸ್ತಾನ ಪ್ರಾಂತ್ಯದಲ್ಲಿ ಚೀನಾಕ್ಕೆ ನೀಡಲಾಗುತ್ತಿರುವ ಪ್ರಾಶಸ್ತ್ಯದಿಂದ ಕೆರಳಿರುವ ಬಲೂಚ್‌ ಉಗ್ರರು, ಚೀನೀಯರು ಇರುವ ಸಂಸ್ಥೆಗಳು, ವಾಹನಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಬಹುಶಃ ಈ ದಾಳಿಯಲ್ಲಿ ಜಪಾನೀಯರನ್ನು ಚೀನೀಯರು ಎಂದು ಅಪಾರ್ಥ ಮಾಡಿಕೊಂಡಿರುವ ಸಾಧ್ಯತೆ ಇದೆ.

ಇದನ್ನೂ ಓದಿ: Balochistan blast: ಬಲೂಚಿಸ್ತಾನದ ಮಸೀದಿ ಬಳಿ ಆತ್ಮಹತ್ಯಾ ಸ್ಫೋಟ, ಕನಿಷ್ಠ 52 ಸಾವು

Continue Reading

ಪ್ರಮುಖ ಸುದ್ದಿ

Israel- Iran war: ಇರಾನ್‌ ವಾಯುನೆಲೆ ಮೇಲೆ ಇಸ್ರೇಲ್‌ ದಾಳಿ ಆರಂಭ; ಕಚ್ಚಾ ತೈಲ ಬೆಲೆ 4% ಏರಿಕೆ

Israel- Iran war: ಇಸ್ರೇಲ್ ಮೇಲೆ ಇರಾನ್‌ನ ಅಭೂತಪೂರ್ವ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ನಂತರ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇಸ್ರೇಲಿ ಮಿಲಿಟರಿ ಅಧಿಕಾರಿಗಳ ಪ್ರಕಾರ, ಕಳೆದ ಶನಿವಾರ ಇರಾನ್, ಇಸ್ರೇಲ್ ಸುತ್ತಲಿನ ಗುರಿಗಳ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದೆ.

VISTARANEWS.COM


on

India’s Russian oil imports hit record high in February
Koo

ಹೊಸದಿಲ್ಲಿ: ಇರಾನ್‌ ವಾಯುನೆಲೆ ಮೇಲೆ ಇಸ್ರೇಲ್‌ ವಾಯುದಾಳಿ (Israel- Iran war) ಆರಂಭಿಸಿದೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿರುವಂತೆ ಶುಕ್ರವಾರ ಕಚ್ಚಾ ತೈಲ ಬೆಲೆ (Crude Oil Price) 4%ರಷ್ಟು ಏರಿವೆ. ಬ್ರೆಂಟ್ (Brent) ತೈಲದ ಬೆಲೆ ಬ್ಯಾರೆಲ್‌ಗೆ $90ಕ್ಕಿಂತ ಹೆಚ್ಚಾಗಿದೆ. ಇಸ್ರೇಲಿನ ಕ್ಷಿಪಣಿಗಳು ಇರಾನ್‌ಗೆ ಅಪ್ಪಳಿಸಿದ ವರದಿಗಳು ಬಂದ ನಂತರ ತೈಲ ಬೆಲೆಗಳು ಹಠಾತ್‌ ಏರಿದವು.

ಜಾಗತಿಕ ಮಾನದಂಡವಾದ ಬ್ರೆಂಟ್ ತೈಲವು ಬ್ಯಾರೆಲ್‌ಗೆ $90.54ಕ್ಕೆ, 3.94%ರಷ್ಟು ಏರಿತು. ಆದರೆ US ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲವು 4.06%ರಷ್ಟು ಏರಿಕೆಯಾಗಿ $ 86.09ಕ್ಕೆ ತಲುಪಿದೆ.

ಇರಾನ್‌ನ ಫಾರ್ಸ್ ಸುದ್ದಿ ಸಂಸ್ಥೆ ಪ್ರಕಾರ, ಇರಾನಿನ ಇಸ್ಫಹಾನ್ ನಗರದ ವಿಮಾನ ನಿಲ್ದಾಣದಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ. ಇಸ್ಫಹಾನ್ ಇರಾನ್ ಮಿಲಿಟರಿಯ ಮುಖ್ಯ ವಾಯುನೆಲೆ ಮತ್ತು ಅದರ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಸ್ಥಳಗಳಿಗೆ ನೆಲೆಯಾಗಿದೆ. ಇಸ್ಫಹಾನ್ ನಗರದ ಪ್ರಮುಖ ವಾಯುನೆಲೆಯ ಬಳಿ ಸ್ಫೋಟಗಳ ವರದಿಗಳ ನಂತರ ಇರಾನ್ ಶುಕ್ರವಾರ ಮುಂಜಾನೆ ವಾಯು ರಕ್ಷಣಾ ಸೆಲ್‌ಗಳನ್ನು ಹಾರಿಸಿತು.

ಇಸ್ರೇಲ್ ಮೇಲೆ ಇರಾನ್‌ನ ಅಭೂತಪೂರ್ವ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ನಂತರ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇಸ್ರೇಲಿ ಮಿಲಿಟರಿ ಅಧಿಕಾರಿಗಳ ಪ್ರಕಾರ, ಕಳೆದ ಶನಿವಾರ ಇರಾನ್, ಇಸ್ರೇಲ್ ಸುತ್ತಲಿನ ಗುರಿಗಳ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದೆ. ಕ್ಷಿಪಣಿ ಉಡಾವಣೆಗಳು ಆಗಿವೆ. 300 ಮಾನವರಹಿತ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿಯನ್ನು ಇಸ್ರೇಲ್‌ ಎದುರಿಸಿದೆ.

ಕಚ್ಚಾ ತೈಲ ಬೆಲೆಗಳು ಮಧ್ಯಪ್ರಾಚ್ಯದಲ್ಲಿ ಹದಗೆಡುತ್ತಿರುವ ಬಾಂಧವ್ಯ ಮತ್ತು OPEC ಪೂರೈಕೆ ಕಡಿತ ಉಂಟಾಗಿರುವ ಪರಿಸ್ಥಿತಿಗಳಿಂದಾಗಿ ಈ ವರ್ಷ ತೈಲ ಬೆಲೆಗಳು ಇನ್ನಷ್ಟು ಏರಿವೆ.

ಇರಾನ್ ಇತ್ತೀಚೆಗೆ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ನಂತರ ಇಸ್ರೇಲಿ ಕ್ಷಿಪಣಿಗಳು ಇರಾನ್‌ ಅನ್ನು ಅಪ್ಪಳಿಸಿದವು. ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಹಲವಾರು ವಾಣಿಜ್ಯ ವಿಮಾನಗಳನ್ನು ಪಶ್ಚಿಮ ಇರಾನ್‌ನಿಂದ ಬೇರೆ ಕಡೆಗೆ ತಿರುಗಿಸಿ ಬಿಡಲಾಯಿತು. ಇಸ್ಫಹಾನ್ ನಗರದಲ್ಲಿ ಸ್ಫೋಟಗಳು ಉಂಟಾದವು.

ಈ ನಡುವೆ ಇಸ್ರೇಲ್‌ ಗಡಿಭಾಗದಲ್ಲಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿ ಮುಂದುವರಿದಿದ್ದು, ಇಸ್ರೇಲ್ ಅದನ್ನು ತಡೆಹಿಡಿಯುತ್ತಲೇ ಇದೆ. ಏಪ್ರಿಲ್ 13ರಂದು ನಡೆದ ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ತಾನು ಕಠಿಣವಾಗಿ ಪ್ರತಿಕ್ರಿಯಿಸುವುದಾಗಿ ಇಸ್ರೇಲ್ ಈ ಹಿಂದೆಯೇ ಘೋಷಿಸಿದೆ.

ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನ್‌ನ ಕಾನ್ಸುಲೇಟ್‌ ಕಟ್ಟಡದ ಮೇಲೆ ಎರಡು ವಾರಗಳ ಮೊದಲು ಇಸ್ರೇಲ್ ವೈಮಾನಿಕ ದಾಳಿ‌ ನಡೆಸಿ ಇಬ್ಬರು ಇರಾನಿನ ಜನರಲ್‌ಗಳನ್ನು ಕೊಂದಿತ್ತು. ಇದಕ್ಕೆ ಪ್ರತೀಕಾರವಾಗಿ ಏಪ್ರಿಲ್ 13ರಂದು ಇರಾನ್‌ ದಾಳಿ ನಡೆಸಿತ್ತು.

ಇದನ್ನೂ ಓದಿ: Israel Iran War : ಇಸ್ರೇಲ್​ ಮೇಲಿನ ದಾಳಿಗೆ ಪ್ರತಿಕಾರ; ಅಮೆರಿಕ, ಬ್ರಿಟನ್ ನಿಂದ ಇರಾನ್​​ಗೆ ಭಾರಿ ನಿರ್ಬಂಧ

Continue Reading

ವೈರಲ್ ನ್ಯೂಸ್

Viral Video: ಲ್ಯಾಂಬೋರ್ಗಿನಿ ಕಾರಿನ ಮೇಲೆ ಕುಣಿದು ಕುಪ್ಪಳಿಸಿದ ಮಹಿಳೆ; ಕಾರಿನ ಸ್ಥಿತಿ ನೋಡಿ ಮರುಗಿದ ನೆಟ್ಟಿಗರು!

Viral Video: ಮನೆಯಲ್ಲಿ ಒಂದು ಕಾರಿದ್ದರೆ ಮಕ್ಕಳು ಎಲ್ಲಿ ಹಾಳು ಮಾಡುತ್ತಾರೆ ಎಂದು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತೇವೆ. ಇಲ್ಲೊಬ್ಬಳು ಮಹಿಳೆ ಮಾತ್ರ ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರಿನ ಮೇಲೆ ಹತ್ತಿ ಕುಣಿದು ಕಾರನ್ನು ಯಾವ ಅವಸ್ಥೆಗೆ ತಂದಿದ್ದಾಳೆ ನೋಡಿ.

VISTARANEWS.COM


on

Viral Video
Koo

ಬೆಂಗಳೂರು: ಇತ್ತೀಚೆಗೆ ಏನೇ ಮಾಡಿದರೂ ಸೋಷಿಯಲ್ ಮೀಡಿಯಾದಲ್ಲಿ ಹಾಕಬೇಕು ಎನ್ನುವ ಹಪಹಪಿಯವರೇ ಹೆಚ್ಚು. ಊಟ ಮಾಡಿದ್ದು, ತಿರುಗಾಡಿದ್ದು ಕೊನೆಗೆ ಹೊಡೆದಾಡಿಕೊಂಡಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಅಲ್ಲಿ ಬರುವ ಲೈಕ್ಸ್, ಕಾಮೆಂಟ್ ಗಳನ್ನೇ ಚಾತಕಪಕ್ಷಿಯಂತೆ ಕಾಯುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ಮಾತ್ರ ತೀರಾ ಅತಿರೇಕಕ್ಕೆ ಹೋಗಿದ್ದಾಳೆ. ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರಿನ ಮೇಲೆ ಹಿಗ್ಗಾಮುಗ್ಗಾ ಕುಣಿದು ಅದರ ವಿಂಡ್ ಶೀಲ್ಡ್ ಅನ್ನೇ ಒಡೆದುಹಾಕಿದ್ದಾಳೆ. ಈ ವಿಡಿಯೊ ಈಗ ಸಖತ್ ವೈರಲ್ (Viral Video) ಆಗಿದೆ.

ಕಾರೆಂದರೆ ಜೀವಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ. ಅದರಲ್ಲೂ ದುಬಾರಿ ಬೆಲೆಯ ಕಾರನ್ನು ಮುಟ್ಟುವುದಕ್ಕೂ ಬಿಡುವುದಿಲ್ಲ ಕೆಲವರು. ಆದರೆ ಈ ಮಹಿಳೆ ಮಾತ್ರ ವೀವ್ಸ್ ಹಾಗೂ ಲೈಕ್ಸ್ ಪಡೆಯಲು ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರಿನ ಮೇಲೆ ಕುಣಿದು ಕುಪ್ಪಳಿಸಿ ಅದರ ವಿಂಡ್ ಶೀಲ್ಡ್ ಒಡೆದು ಹಾಕಿದ್ದಾಳೆ.ಈ ವಿಡಿಯೋ ಈಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಜನ ಹಿಗ್ಗಾಮುಗ್ಗಾ ಬೈದಿದ್ದಾರೆ.

ವಿಂಡ್ ಶಿಲ್ಡ್ ಒಡೆದರೂ ಡಾನ್ಸ್ ಬಿಡದ ಮಹಿಳೆ!

ಈ ವಿಡಿಯೊದಲ್ಲಿ ಗುಲಾಬಿ ಬಣ್ಣದ ಟ್ಯೂಬ್ ಟಾಪ್ ಮತ್ತು ಬಿಳಿ ಬಣ್ಣದ ಶಾರ್ಟ್ ಸ್ಕರ್ಟ್ ಧರಿಸಿದ ಮಹಿಳೆಯೊಬ್ಬಳು ನೀಲಿ ಬಣ್ಣದ ಲ್ಯಾಂಬೋರ್ಗಿನಿ ಕಾರ್ ನ ಮೇಲೆ ಡ್ಯಾನ್ಸ್ ಮಾಡುತ್ತಿದ್ದಳು. ಕುಣಿದ ಸ್ಪೀಡಿಗೆ ಕಾರಿನ ವಿಂಡ್ ಶಿಲ್ಡ್ ಒಡೆದು ಬಿರುಕು ಬಿಟ್ಟಿದೆ. ಕಾರಿನ ವಿಂಡ್ ಶಿಲ್ಡ್ ಒಡೆದಿದ್ದು ನೋಡಿಯೂ ಮಹಿಳೆ ಡ್ಯಾನ್ಸ್ ಮಾಡುವುದನ್ನು ಬಿಟ್ಟಿಲ್ಲ. ಈ ವಿಡಿಯೋವನ್ನು ರೆಡ್ಡಿಟ್ ಪೋಸ್ಟ್ ಮಾಡಿದ್ದು, ‘ಕೇವಲ ವೀವ್ಸ್ ಮತ್ತು ಲೈಕ್ಸ್ ಪಡೆಯಲು ಜನರು ಇದನ್ನೆಲ್ಲಾ ಯಾಕೆ ಮಾಡುತ್ತಾರೆ’? ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಿದೆ. ಇನ್ನು ಈ  ಘಟನೆ ನಡೆದ ಸ್ಥಳ ಮತ್ತು ದಿನ ತಿಳಿದುಬಂದಿಲ್ಲ.

ಸಿಕ್ಕಾಪಟ್ಟೆ ದುಬಾರಿಯಾಗಿರುವ ಲ್ಯಾಂಬೋರ್ಗಿನಿ ಕಾರು ಇರುವವರು ಅದನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಅಂತಹದರಲ್ಲಿ ಈ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವೀವ್ಸ್ ಪಡೆಯಲು ಅಂತಹ ದುಬಾರಿ ಕಾರನ್ನೇ ಹಾಳುಮಾಡಿಕೊಳ್ಳುತ್ತಿರುವುದು ಜನರಿಗೆ ಬಹಳ ಅಚ್ಚರಿಯನ್ನುಂಟು ಮಾಡಿದೆ.

MC dances on top of car and breaks the windshield 🤦‍♂️
byu/EthanthegamerGD inImTheMainCharacter

ಈ ಹಿಂದೆಯೂ ಟಿಕ್ ಟಾಕ್ ನಲ್ಲಿ ಮಹಿಳೆಯರು ಇಂತಹ ವಿಡಿಯೊಗಳನ್ನು ಮಾಡಿದ್ದರು. ಕಾರುಗಳ ಮೇಲೆ ಕೆಸರನ್ನು ಎರಚುವುದು, ಕಾರಿನ ಮೇಲೆ ಹತ್ತಿ ಅದರ ಗ್ಲಾಸ್ ಅನ್ನು ಒಡೆಯುವಂತಹ ಹಲವಾರು ವಿಡಿಯೋಗಳು ಟಿಕ್ ಟಾಕ್ ನಲ್ಲಿ ಕಂಡುಬಂದಿವೆ.

ಈ ವಿಡಿಯೊ ವೈರಲ್ ಆಗಿದ್ದು, ಇದಕ್ಕೆ ವೀಕ್ಷಕರಿಂದ ಹಲವಾರು ಪ್ರತಿಕ್ರಿಯೆ ಬಂದಿದೆ. ಕೆಲವರು ಈ ವಿಡಿಯೊ ನೋಡಿ ಕೋಪವನ್ನು ವ್ಯಕ್ತಪಡಿಸಿದ್ದರೆ, ಕೆಲವರು ದುಬಾರಿ ಕಾರನ್ನು ಹಾಳುಮಾಡುತ್ತಿರುವುದನ್ನು ಕಂಡು ನೊಂದುಕೊಂಡಿದ್ದಾರೆ. ಕೆಲವರು ಕಾರಿನ ಗ್ಲಾಸ್ ಬಿರುಕು ಬಿಟ್ಟಿರುವುದನ್ನು ನೋಡಿಯೂ ಮತ್ತೆ ಡ್ಯಾನ್ಸ್ ಮುಂದುವರಿಸಿದ ಮಹಿಳೆಯ ಮೇಲೆ ಕಿಡಿಕಾರಿದ್ದಾರೆ.

ಇದನ್ನೂ ಓದಿ: Honour Killing: ರಸ್ತೆ ಬದಿಯಲ್ಲೇ ಮಹಿಳೆಯನ್ನು ದರದರನೆ ಎಳೆದು, ತಲೆಗೆ ಹೊಡೆದು ಕೊಲೆ ಮಾಡಿದ್ರು; ಇದೇನು ಮರ್ಯಾದೆ ಹತ್ಯೆಯಾ?

ಒಟ್ಟಾರೆ ಯುವಕ, ಯುವತಿಯರು ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು,  ವೀವ್ಸ್ ಮತ್ತು ಲೈಕ್ಸ್ ಅನ್ನು ಪಡೆಯಲು ಮಾಡುತ್ತಿರುವ ಹುಚ್ಚಾಟಗಳನ್ನು ನೋಡಿದರೆ ಮುಂದೆ ಅವರ ಜೀವಕ್ಕೆ ಅಪಾಯ ತಂದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅನಿಸುತ್ತದೆ.

Continue Reading
Advertisement
Neha Murder Case
ಹುಬ್ಬಳ್ಳಿ27 mins ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Neha Murder case Niranjan urges Joshi to guarantee the lives of Hindu girls
ಕ್ರೈಂ35 mins ago

Neha Murder Case: ಹಿಂದೂ ಯುವತಿಯರ ಜೀವಕ್ಕೆ ಗ್ಯಾರಂಟಿ ಕೊಡಿಸಿ ಸರ್: ಜೋಶಿಗೆ ನೇಹಾ ತಂದೆ ನಿರಂಜನ್ ಮನವಿ

Kannada Serials TRP IPL Matches Effected On Kannada Serial
ಕಿರುತೆರೆ48 mins ago

Kannada Serials TRP: ಐಪಿಎಲ್​ ಎಫೆಕ್ಟ್‌: ಯಾವ ಧಾರಾವಾಹಿ ಈ ವಾರ ಟಾಪ್‌?

IPL 2024
ಕ್ರೀಡೆ53 mins ago

IPL 2024: ಡಿಆರ್​ಎಸ್​ ಚೀಟಿಂಗ್ ವೇಳೆ ಸಿಕ್ಕಿ ಬಿದ್ದ ಮುಂಬೈ ಇಂಡಿಯನ್ಸ್​; ವಿಡಿಯೊ ವೈರಲ್​

Job Alert
ಉದ್ಯೋಗ58 mins ago

Job Alert: 247 ಪಿಡಿಒ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ; ಇಲ್ಲಿದೆ ಡೈರಕ್ಟ್‌ ಲಿಂಕ್‌

lok sabha election 2024 1st phase voting
ಪ್ರಮುಖ ಸುದ್ದಿ1 hour ago

Lok Sabha Election 2024: ಮೊದಲ ಹಂತದ ಮತದಾನ; ಪಶ್ಚಿಮ ಬಂಗಾಲ, ಮಣಿಪುರ, ಛತ್ತೀಸ್‌ಗಢದಲ್ಲಿ ಹಿಂಸಾಚಾರ

pesticide everest fish curry masala
ವೈರಲ್ ನ್ಯೂಸ್2 hours ago

Pesticide: ಎವರೆಸ್ಟ್‌ ಫಿಶ್‌ ಕರಿ ಮಸಾಲೆಯಲ್ಲಿ ಕೀಟನಾಶಕ; ಬ್ಯಾನ್‌ ಮಾಡಿದ ಸಿಂಗಾಪುರ

Take strict action in Neha Murder Case CM instructs to DG
ಕ್ರೈಂ2 hours ago

Neha Murder Case: ನೇಹಾ ಕೇಸ್‌ನಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ; ಡಿಜಿಗೆ ಸಿಎಂ ಸೂಚನೆ

IPL 2024
ಕ್ರಿಕೆಟ್3 hours ago

IPL 2024: ಸಿಕ್ಸರ್​ ಮೂಲಕ ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​

Murder case In Raichur
ರಾಯಚೂರು3 hours ago

Murder Case : ಕಲ್ಲಿನಿಂದ ಜಜ್ಜಿ ಪತ್ನಿಯ ಕೊಂದು ನೇಣಿಗೆ ಶರಣಾದ ಅನುಮಾನ ಪಿಶಾಚಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ27 mins ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ11 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌