Bangladesh election: ಬಾಂಗ್ಲಾದೇಶದಲ್ಲಿ 5ನೇ ಅವಧಿಗೆ ಚುನಾವಣೆ ಗೆದ್ದ ಶೇಖ್ ಹಸೀನಾ! - Vistara News

ಪ್ರಮುಖ ಸುದ್ದಿ

Bangladesh election: ಬಾಂಗ್ಲಾದೇಶದಲ್ಲಿ 5ನೇ ಅವಧಿಗೆ ಚುನಾವಣೆ ಗೆದ್ದ ಶೇಖ್ ಹಸೀನಾ!

Bangladesh election: ಪ್ರತಿಪಕ್ಷಗಳ ಚುನಾವಣಾ ಬಹಿಷ್ಕಾರದ ಮಧ್ಯೆಯೇ ಬಾಂಗ್ಲಾದೇಶದಲ್ಲಿ ಮತದಾನ ನಡೆದಿತ್ತು. ಈಗ ಫಲಿತಾಂಶ ಪ್ರಕಟವಾಗುತ್ತಿದ್ದು, ಶೇಖ್ ಹಸೀನಾ ಅವರ ಅವಾಮಿ ಲೀಗ್, ಒಟ್ಟು ಸ್ಥಾನಗಳ ಪೈಕಿ ಶೇ.50ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ.

VISTARANEWS.COM


on

Sheikh Hasina
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಢಾಕಾ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ (Bangladesh election Result) ಹೊರ ಬಿದ್ದಿದ್ದು, ಹಾಲಿ ಪ್ರಧಾನಿ ಶೇಖ್ ಹಸೀನಾ (PM Sheikh Hasina) ಅವರ ಅವಾಮಿ ಲೀಗ್ (Awami League) ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದರೊಂದಿಗೆ ಹಸೀನಾ ಅವರು ಐದನೇ ಬಾರಿಗೆ ಬಾಂಗ್ಲಾದೇಶದ ಪ್ರಧಾನಿಯಾಗುತ್ತಿದ್ದಾರೆ. ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ಎಲೆಕ್ಷನ್ ಬಹಿಷ್ಕಾರದ ಮಧ್ಯೆಯೇ ಮತದಾನ ನಡೆದಿತ್ತು. ಶೇಖ್ ಹಸೀನಾ ಅವರು ಬಿಎನ್‌ಪಿಯನ್ನು ಉಗ್ರ ಸಂಘಟನೆ ಎಂದೇ ಕರೆಯುತ್ತಾರೆ. ಹಸೀನಾ ಅವರು ಮತ್ತೆ ಅಧಿಕಾರಕ್ಕೇರಿರುವುದು ಭಾರತದ ಹಿತಾಸಕ್ತಿಯಿಂದಲೂ ಒಳ್ಳೆಯ ಬೆಳವಣಿಗೆಯಾಗಿದೆ.

ಒಟ್ಟು 300 ಸ್ಥಾನಗಳ ಪೈಕಿ 264 ಸ್ಥಾನಗಳ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಈಪೈಕಿ 204 ಸ್ಥಾನಗಳಲ್ಲಿ ಅವಾಮಿ ಲೀಗ್ ಅಭ್ಯ್ರರ್ಥಿಗಳು ಗೆಲುವು ಸಾಧಿಸಿದ್ದಾರೆ. ಹಾಗೆಯೇ, ಅವಾಮಿ ಲೀಗ್ ಮಿತ್ರ ಪಕ್ಷವಾಗಿರುವ ಜಾತಿಯ ಪಾರ್ಟಿ ಕೂಡ 9 ಸ್ಥಾನಗಳನ್ನು ಗೆದ್ದುಕೊಂಡಿದೆ ಎಂದು ಬಾಂಗ್ಲಾದೇಶದ ಪ್ರಮುಖ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಮತ ಎಣಿಕೆಯ ಕಾರ್ಯವು ಮುಂದಿವರಿದಿದ್ದು, ಹಸೀನಾ ಅವರ ಆಡಳಿತಾರೂಢ ಅವಾಮಿ ಲೀಗ್ 50 ಪ್ರತಿಶತಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ ಎಂದು ಚುನಾವಣಾ ಆಯೋಗದ ವಕ್ತಾರರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದಿದ್ದ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಶೇಖರ್ ಹಸೀನಾ ಆಡಳಿತವು ಯಶಸ್ವಿಯಾಗಿದೆ. ಹಾಗೆಯೇ, ಮಾನವ ಹಕ್ಕುಗಳ ದಮನ ಮತ್ತು ಪ್ರತಿಪಕ್ಷಗಳ ಮೇಲೆ ನಿರ್ದಯ ಕ್ರಮಗಳ ಮೂಲಕ ಕುಖ್ಯಾತಿಯನ್ನೂ ಗಳಿಸಿದೆ.

ಅವಾಮಿ ಲೀಗ್ ಪಕ್ಷವು ಸ್ಪರ್ಧಿಸಿದ ಸ್ಥಾನಗಳಲ್ಲಿ ಯಾವುದೇ ಪರಿಣಾಮಕಾರಿ ಪ್ರತಿಸ್ಪರ್ಧಿಗಳು ಇರಲಿಲ್ಲ. ಆದರೂ, ಅವಾಮಿ ಲೀಗ್ ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಿಲ್ಲ. ಇದರಿಂದ ಬೇರೆ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಅವಕಾಶ ಕಲ್ಪಿಸುವ ಮೂಲಕ, ಸಂಸತ್ತು ಏಕಪಕ್ಷೀಯ ಸಂಸ್ಥೆಯಾಗಿದೆ ಎಂಬ ಅಪವಾದವನ್ನು ತಪ್ಪಿಸುವ ಪ್ರಯತ್ನ ಮಾಡಲಾಗಿದೆ.

ಪ್ರಮುಖ ಪ್ರತಿಪಕ್ಷವಾಗಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‌ಪಿ)ಯ ಶಕ್ತಿಯನ್ನು ಕುಂದಿಸಲಾಗಿದೆ. ಈ ಪಕ್ಷದ ನಾಯಕರನ್ನು ಸಾಮೂಹಿಕವಾಗಿ ಅರೆಸ್ಟ್ ಮಾಡಲಾಗಿದೆ. ಹಾಗೆಯೇ ಬಿಎನ್‌ಪಿಯ ಅನೇಕ ನಾಯಕರು ಈ ಚುನಾವಣೆಯನ್ನು ಬಹಿಷ್ಕರಿಸಿದ್ದರಿಂದ, ಎಲೆಕ್ಷನ್ ಆಲ್ಮೋಸ್ಟ್ ಏಕ ಪಕ್ಷೀಯವಾಗಿಯೇ ನಡೆದಿದೆ. ಹಾಗಾಗಿ, ಭಾನುವಾರ ಕೇವಲ ಶೇ.40ರಷ್ಟು ಮತದಾನ ನಡೆದಿದೆ.

ಈ ಸುದ್ದಿಯನ್ನೂ ಓದಿ: Bangladesh Election: ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 : ಗೆಲ್ಲಬೇಕಾಗಿರುವುದು ಐಪಿಎಲ್​ ಟ್ರೋಫಿ, ಆರೆಂಜ್ ಕ್ಯಾಪ್ ಅಲ್ಲ; ಅನಗತ್ಯವಾಗಿ ಕೊಹ್ಲಿಯ ಕಾಲೆಳೆದ ಅಂಬಾಟಿ ರಾಯುಡು

IPL 2024 : ಭಾರತೀಯ ಕ್ರಿಕೆಟ್​ ಕ್ಷೇತ್ರ ಕಂಡ ಅತ್ಯಂತ ತರ್ಲೆ ಹಾಗೂ ಅಧಿಕಪ್ರಸಂಗಿ ಕ್ರಿಕೆಟಿಗ ಅಂಬಾಟಿ ರಾಯುಡು ಮಾತ್ರ ಅನಗತ್ಯವಾಗಿ ಕೊಹ್ಲಿ ಹಾಗೂ ಆರ್​ಸಿಬಿ ವಿಚಾರಕ್ಕೆ ಮೂಗು ತೂರಿಸಿದರು. ಅವರು ಪ್ರಶಸ್ತಿ ಗೆಲುವಿನ ಅಭಿಯಾನದಲ್ಲಿ ಕೆಕೆಆರ್​ ಆಟಗಾರರ ಕೊಡುಗೆಯ ಬಗ್ಗೆ ಮಾತನಾಡುವ ಬದಲು ಕೊಹ್ಲಿಯ ಕಾಲೆಳೆಯಲು ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟರು. ಇದು ಕೊಹ್ಲಿಯ ಅಭಿಮಾನಿಗಳನ್ನು ಕೆರಳಿಸದೇ ಇರದು.

VISTARANEWS.COM


on

IPL 2024
Koo

ಬೆಂಗಳೂರು: ಐಪಿಎಲ್ 17ನೇ ಆವೃತ್ತಿಯ ಫೈನಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡದ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಎಂಟು ವಿಕೆಟ್​ಗಳ ಜಯ ಸಾಧಿಸಿ ಟ್ರೋಫಿ ಗೆದ್ದುಕೊಂಡಿತು. ಕೆಕೆಆರ್​ ಬಳಗಕ್ಕೆ ಇದು ಒಟ್ಟು ಮೂರನೇ ಟ್ರೋಫಿ. ಹೀಗಾಗಿ ಎಲ್ಲರ ಗಮನ ಕೆಕೆಆರ್ ತಂಡದ ಮೇಲೆ ನೆಟ್ಟಿತ್ತು. ಎಲ್ಲರೂ ಆ ತಂಡದ ಅಟಗಾರರ ಮತ್ತು ಒಟ್ಟು ಪ್ರದರ್ಶನದ ಮೇಲೆ ಬೆಳಕು ಚೆಲ್ಲುತ್ತಿದ್ದರು. ಆದರೆ, ಭಾರತೀಯ ಕ್ರಿಕೆಟ್​ ಕ್ಷೇತ್ರ ಕಂಡ ಅತ್ಯಂತ ತರ್ಲೆ ಹಾಗೂ ಅಧಿಕಪ್ರಸಂಗಿ ಕ್ರಿಕೆಟಿಗ ಅಂಬಾಟಿ ರಾಯುಡು ಮಾತ್ರ ಅನಗತ್ಯವಾಗಿ ಕೊಹ್ಲಿ ಹಾಗೂ ಆರ್​ಸಿಬಿ ವಿಚಾರಕ್ಕೆ ಮೂಗು ತೂರಿಸಿದರು. ಅವರು ಪ್ರಶಸ್ತಿ ಗೆಲುವಿನ ಅಭಿಯಾನದಲ್ಲಿ ಕೆಕೆಆರ್​ ಆಟಗಾರರ ಕೊಡುಗೆಯ ಬಗ್ಗೆ ಮಾತನಾಡುವ ಬದಲು ಕೊಹ್ಲಿಯ ಕಾಲೆಳೆಯಲು ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟರು. ಇದು ಕೊಹ್ಲಿಯ ಅಭಿಮಾನಿಗಳನ್ನು ಕೆರಳಿಸದೇ ಇರದು.

ಟೂರ್ನಿಯಲ್ಲಿ ಸುನಿಲ್ ನರೈನ್ ಕೆಕೆಆರ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರ ಹೆಸರಿನಲ್ಲಿ 15 ಪಂದ್ಯಗಳಲ್ಲಿ 488 ರನ್ ಗಳಿವೆ. ಫಿಲ್ ಸಾಲ್ಟ್ 435 ರನ್ ಗಳಿಸಿದರೆ, ವೆಂಕಟೇಶ್ ಅಯ್ಯರ್ ಮತ್ತು ಶ್ರೇಯಸ್ ಅಯ್ಯರ್ ಕ್ರಮವಾಗಿ 370 ಮತ್ತು 354 ರನ್ ಗಳಿಸಿದರು. ಪಂದ್ಯಾವಳಿಯನ್ನು ಗೆಲ್ಲಲು, ತಂಡವು ಒಬ್ಬ ವ್ಯಕ್ತಿಯನ್ನು ಅವಲಂಬಿಸಲು ಸಾಧ್ಯವಿಲ್ಲ ಎಂದು ರಾಯುಡು ಹೇಳಿದರು. ಇದನ್ನು ವಿವರಿಸುವಾಗ, ರಾಯುಡು ಅಂತಿಮವಾಗಿ ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಯನ್ನು ತರಾಟೆಗೆ ತೆಗೆದುಕೊಂಡರು. ಆರೆಂಜ್ ಕ್ಯಾಪ್ ಗೆದ್ದರೆ ಸಾಲದು. ಫ್ರಾಂಚೈಸಿಗೆ ಐಪಿಎಲ್ ಟ್ರೋಫಿ ಗೆಲ್ಲಬೇಕು ಎಂದು ಹೇಳಿದರು. ಕೊಹ್ಲಿ ಈ ವಿಚಾರದಲ್ಲಿ 17 ವರ್ಷಗಳಿಂದ ಸತತವಾಗಿ ಪ್ರಯತ್ನ ಮಾಡುತ್ತಿದ್ದರೂ ಉಳಿದ ಆಟಗಾರರಿಂದ ಅವರಿಗೆ ಹೆಚ್ಚಿನ ಬೆಂಬಲ ದೊರೆಯದ ಕಾರಣ ಟ್ರೋಫಿ ಸಿಕ್ಕಿಲ್ಲ ಎಂಬುದೇ ಬೇಸರ.

“ನರೈನ್, ರಸೆಲ್ ಮತ್ತು ಸ್ಟಾರ್ಕ್ ಅವರಂತಹ ದಿಗ್ಗಜರ ಪರವಾಗಿ ನಿಂತಿದ್ದಕ್ಕಾಗಿ ಮತ್ತು ತಂಡದ ಗೆಲುವಿನಲ್ಲಿ ತಮ್ಮ ಕೊಡುಗೆ ನೀಡಿದ ಕೆಕೆಆರ್ ತಂಡಕ್ಕೆ ಅಭಿನಂದನೆಗಳು. ಒಂದು ತಂಡವು ಐಪಿಎಲ್ ಅನ್ನು ಗೆಲ್ಲುವುದು ಹೀಗೆ. ನಾವು ಇದನ್ನು ಹಲವು ವರ್ಷಗಳಿಂದ ನೋಡಿದ್ದೇವೆ. ಆಟಗಾರ ಗೆಲ್ಲಬೇಕಾಗಿರುವುದು ಐಪಿಎಲ್ ಟ್ರೋಫಿ. ಆರೆಂಜ್ ಕ್ಯಾಪ್ ಅಲ್ಲ. ತಲಾ 300 ರನ್​ಗಳ ಕೊಡುಗೆಗಳು (ಅನೇಕ ಆಟಗಾರರ) ಟ್ರೋಫಿ ತಂದುಕೊಡುತ್ತದೆ “ಎಂದು ರಾಯುಡು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತಾ ಹೇಳಿದರು.

ಐಪಿಎಲ್​ 2024ಲ್ಲಿ ವಿರಾಟ್ ಕೊಹ್ಲಿ 741 ರನ್ ಗಳಿಸಿದ್ದರಿಂದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2024 ರ ಪ್ಲೇಆಫ್ಗೆ ಅರ್ಹತೆ ಪಡೆಯಿತು ಎಂಬುದನ್ನು ಬಹುತೇಕ ಕ್ರಿಕೆಟ್ ವಿಮರ್ಶಕರು ಮರೆಯುತ್ತಾರೆ. ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ತನ್ನ ಅಂತಿಮ ಲೀಗ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತ್ತು. ಸತತವಾಗಿ ಆರು ಪಂದ್ಯಗಳನ್ನು ಗೆದ್ದಿತ್ತು. ಒಂದು ಹಂತದಲ್ಲಿ 10ನೇ ಸ್ಥಾನದಲ್ಲಿದ್ದ ತಂಡ ನಾಲ್ಕನೇ ಸ್ಥಾನಕ್ಕೇರಿತು. ಎಲ್ಲ ಆಟಗಾರರು ವಿಫಲವಾದಾಗ ತಂಡದ ಪರವಾಗಿದ್ದ ಭರವಸೆ ಕೊಹ್ಲಿಮಾತ್ರ. ಆದರೆ ಅಂಬಾಡಿ ಸೇರಿದಂತೆ ಎಲ್ಲರೂ ಕೊಹ್ಲಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಅಂಬಾಟಿಯ ಹೊಟ್ಟೆ ಉರಿಗೆ ಕಾರಣ, ಲೀಗ್ ಹಂತದ ಕೊನೇ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಆರ್​ಸಿಬಿ ಸೋಲಿಸಿದ್ದು ಎಂಬುದು ವಾಸ್ತವ.

ಇದನ್ನೂ ಓದಿ: IPL 2024 : ಕೆಕೆಆರ್​ ಗೆದ್ದ ಸಂಭ್ರಮದಲ್ಲಿ ಕೋಚ್ ಗಂಭೀರ್​ ಹಣೆಗೆ ಮುತ್ತಿಟ್ಟ ಶಾರುಖ್​ ಖಾನ್​

ಮ್ಯಾನೇಜ್​ಮೆಂಟ್​ನಲ್ಲಿ ಕುಳಿತಿರುವ ವ್ಯಕ್ತಿಗಳು ಮತ್ತು ಆಟಗಾರರು ಫ್ರಾಂಚೈಸಿಗಿಂತ ತಮ್ಮನ್ನು ತಾವು ಮೊದಲ ಸ್ಥಾನದಲ್ಲಿರಿಸುತ್ತಾರೆ. ಆರ್​ಸಿಬಿ ಟ್ರೋಫಿ ಗೆಲ್ಲದೇ ಇರಲು ಅದುವೇ ಕಾರಣ ಎಂದು ಅಂಬಾಟಿ ಹೇಳಿದ್ದಾರೆ.

“ಹಲವು ವರ್ಷಗಳಿಂದ ತಂಡವನ್ನು ಉತ್ಸಾಹದಿಂದ ಬೆಂಬಲಿಸಿದ ಎಲ್ಲಾ ಆರ್​ಸಿಬಿ ಬೆಂಬಲಿಗರಿಗೆ ನನ್ನ ಹೃದಯ ನಿಜವಾಗಿಯೂ ಮಿಡಿಯುತ್ತದೆ. ಮ್ಯಾನೇಜ್ಮೆಂಟ್ ಮತ್ತು ನಾಯಕರು ವೈಯಕ್ತಿಕ ಮೈಲಿಗಲ್ಲುಗಳಷ್ಟು ತಂಡ ಹಿತಾಸಕ್ತಿಗಳನ್ನು ಹೊಂದಿಲ್ಲ. ಹಾಗಿದ್ದೆರ ಆರ್ಸಿಬಿ ಅನೇಕ ಪ್ರಶಸ್ತಿಗಳನ್ನು ಗೆಲ್ಲುತ್ತಿತ್ತು. ಎಷ್ಟು ಅದ್ಭುತ ಆಟಗಾರರನ್ನು ಕೈಬಿಡಲಾಗಿದೆ ಎಂಬುದನ್ನು ನೆನಪಿಡಿ. ತಂಡಗಳ ಹಿತಾಸಕ್ತಿಗಳಿಗೆ ಮೊದಲ ಸ್ಥಾನ ನೀಡುವ ಆಟಗಾರರನ್ನು ಕರೆತರುವಂತೆ ನಿಮ್ಮ ಮ್ಯಾನೇಜ್ ಮೆಂಟ್ ಅನ್ನು ಒತ್ತಾಯಿಸಿ. ಮೆಗಾ ಹರಾಜಿನಿಂದ ದೊಡ್ಡ ಹೊಸ ಅಧ್ಯಾಯ ಪ್ರಾರಂಭವಾಗಬಹುದು, “ಎಂದು ರಾಯುಡು ಒಂದು ವಾರದ ಹಿಂದೆ ಟ್ವೀಟ್ ಮಾಡಿದ್ದರು.

Continue Reading

ಕ್ರೀಡೆ

IPL 2024 : ಕೆಕೆಆರ್​ ಗೆದ್ದ ಸಂಭ್ರಮದಲ್ಲಿ ಕೋಚ್ ಗಂಭೀರ್​ ಹಣೆಗೆ ಮುತ್ತಿಟ್ಟ ಶಾರುಖ್​ ಖಾನ್​, ಇಲ್ಲಿದೆ ವಿಡಿಯೊ

IPL 2024: ಐಪಿಎಲ್ ಹರಾಜಿನ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರೊಂದಿಗೆ ಶಾರುಖ್ ಖಾನ್ ಆತ್ಮೀಯ ಅಪ್ಪುಗೆಯನ್ನು ಹಂಚಿಕೊಂಡರು. ಸ್ಟಾರ್ಕ್ ಮಾಲೀಕ ಶಾರುಖ್ ಅವರೊಂದಿಗೆ ಸುದೀರ್ಘ ಮಾತುಕಗೆ ಮಾಡುತ್ತಿರುವುದು ಕಂಡುಬಂತು. ಅವರು ಋತುವಿನಲ್ಲಿ, ಪ್ಲೇಆಫ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವರ ಕೊಡುಗೆಯನ್ನು ಶಾರುಖ್ ಖಾನ್ ಇದೇ ವೇಳೆ ಶ್ಲಾಘಿಸಿದರು.

VISTARANEWS.COM


on

IPL 2024
Koo

ಚೆನ್ನೈ: ಇಲ್ಲಿನ ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಭಾನುವಾರ ಕೋಲ್ಕೊತಾ ನೈಟ್ ರೈಡರ್ಸ್ (KKR) ತನ್ನ ಮೂರನೇ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024 ) ಕಿರೀಟ ಗೆದ್ದುಕೊಂಡಿದೆ. ಈ ಬಳಿಕ ಸಂಭ್ರಮದಲ್ಲಿದ್ದ ಮಾಲೀಕ ಶಾರುಖ್​ ಖಾನ್ (Sha Rukh Khan)​ ಮಗಳು ಸುಹಾನಾ ಮತ್ತು ಪುತ್ರರಾದ ಅಬ್ರಾಮ್ ಮತ್ತು ಆರ್ಯನ್ ಅವರೊಂದಿಗೆ ವಿಜಯೋತ್ಸವವನ್ನು ಆಚರಿಸಿದರು. ದೊಡ್ಡ ಫೈನಲ್​​ನಲ್ಲಿ ಸ್ಮರಣೀಯ ಗೆಲುವಿನ ನಂತರ ಗ್ಯಾಲರಿಯಿಂದ ಕೆಳಗಿಳಿದ ಅವರು ತಂಡದ ಜತೆ ಸಂಭ್ರಮವನ್ನು ಆಚರಿಸಿದರು. ಈ ವೇಳೆ ನೈಟ್ ರೈಡರ್ಸ್ ತಂಡದ ಮಾರ್ಗದರ್ಶಕರಾಗಿ ನೇಮಕಕೊಂಡ ತಮ್ಮ ಮೊದಲ ಋತುವಿನಲ್ಲೇ ಪ್ರಶ್ತಿಯ ಕೊಡುಗೆಯನ್ನು ನೀಡಿದ ಗಂಭೀರ್ ಅವರಿಗೆ ಹಣೆಗೆ ಮುತ್ತಿಟ್ಟರು. ವಿಶೇಷವೆಂದರೆ, ಶ್ರೇಯಸ್ ಅಯ್ಯರ್ ಗಂಭೀರ್ ನಂತರ ಐಪಿಎಲ್ ಟ್ರೋಫಿಯನ್ನು ಗೆದ್ದ ಎರಡನೇ ಕೆಕೆಆರ್ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಏತನ್ಮಧ್ಯೆ ಗೌತಮ್ ಗಂಭೀರ್ ಮತ್ತು ಸುನಿಲ್ ನರೈನ್ ಪರಸ್ಪರ ಎತ್ತಿಕೊಂಡು ಸಂಭ್ರಮಿಸಿದಾಗ ಕೆಕೆಆರ್ ಶಿಬಿರವು ಸಂತೋಷದಿಂದ ಕುಣಿಯಿತು. ಇಬ್ಬರು ಚಾಂಪಿಯನ್ ಕ್ರಿಕೆಟಿಗರು ಟಿವಿ ಕ್ಯಾಮೆರಾಗಳಿಗೆ ಅಪರೂಪದ ನಗು ತೋರಿದರು. 2012 ಮತ್ತು 2014 ರಲ್ಲಿ ನರೈನ್ ಅವರನ್ನು ಮುನ್ನಡೆಸಿದ ಗಂಭೀರ್ ಅವರ ಪ್ರಭಾವವು 2024 ರ ಋತುವಿನಲ್ಲಿ ಸ್ಪಷ್ಟವಾಯಿತು, ವೆಸ್ಟ್ ಇಂಡೀಸ್​ನ ಮಾಜಿ ಕ್ರಿಕೆಟಿಗ ಹಾಲಿ ಋತುವಿನ ಅತ್ಯಂತ ಮೌಲ್ಯಯುತ ಆಟಗಾರ (15 ಪಂದ್ಯಗಳಲ್ಲಿ 488 ರನ್ ಮತ್ತು 17 ವಿಕೆಟ್​ಗಳು) ಪ್ರಶಸ್ತಿ ಪಡೆದರು.

ಇದನ್ನೂ ಓದಿ: IPL 2024 : ‘ಪ್ಲೇಯರ್​​ ಆಫ್​ ದಿ ಟೂರ್ನಮೆಂಟ್​’ ಸೇರಿ ನಾನಾ ಪ್ರಶಸ್ತಿ ವಿಜೇತ ಪಟ್ಟಿ ಇಲ್ಲಿದೆ

ಐಪಿಎಲ್ ಹರಾಜಿನ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರೊಂದಿಗೆ ಶಾರುಖ್ ಖಾನ್ ಆತ್ಮೀಯ ಅಪ್ಪುಗೆಯನ್ನು ಹಂಚಿಕೊಂಡರು. ಸ್ಟಾರ್ಕ್ ಮಾಲೀಕ ಶಾರುಖ್ ಅವರೊಂದಿಗೆ ಸುದೀರ್ಘ ಮಾತುಕಗೆ ಮಾಡುತ್ತಿರುವುದು ಕಂಡುಬಂತು. ಅವರು ಋತುವಿನಲ್ಲಿ, ಪ್ಲೇಆಫ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವರ ಕೊಡುಗೆಯನ್ನು ಶಾರುಖ್ ಖಾನ್ ಇದೇ ವೇಳೆ ಶ್ಲಾಘಿಸಿದರು.

ಎಂ.ಎ.ಚಿದಂಬರಂ ಸ್ಟೇಡಿಯಂನ ಸುತ್ತಲೂ ವಿಜಯೋತ್ಸವ ಆಚರಿಸಿದ ಶಾರುಖ್ ಖಾನ್, ತಮ್ಮ ಟ್ರೇಡ್​ಮಾರ್ಕ್​ ಪೋಸ್ ನೀಡಿದರು ಮತ್ತು ಸ್ಟ್ಯಾಂಡ್​ಗಳಲ್ಲಿರುವ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್​ ನೀಡಿದರು. ಅಹಮದಾಬಾದ್ದ್ನ​ನಲ್ಲಿ ಉಂಟಾದ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡ ಕೆಲವು ದಿನಗಳ ನಂತರ ಶಾರುಖ್ ಅಭಿಮಾನಿಗಳಿಗೆ ಕಾಣಿಸಿಕೊಂಡರು.

ಕೆಕೆಆರ್​ ಉತ್ತಮ ಪ್ರದರ್ಶನ

ಲೀಗ್ ಹಂತದ ಬಳಿಕ ಕೋಲ್ಕತಾ ನೈಟ್ ರೈಡರ್ಸ್ (KKR) ಆಡಿರುವ 14 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು . ಸನ್ರೈಸರ್ಸ್ ಹೈದರಾಬಾದ್ 8 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ರಾಜಸ್ಥಾನ್ ರಾಯಲ್ಸ್ (ಆರ್ಆರ್) ಅದೇ ಸಂಖ್ಯೆಯ ಗೆಲುವುಗಳನ್ನು ಹೊಂದಿತ್ತು. ನೆಟ್​ರನ್​ರೇಟ್​ ಅವರನ್ನು 3 ನೇ ಸ್ಥಾನಕ್ಕೆ ತಳ್ಳಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ ) ಸತತ 6 ಗೆಲುವುಗಳೊಂದಿಗೆ 4 ನೇ ಸ್ಥಾನದಲ್ಲಿತ್ತು.

ಕ್ವಾಲಿಫೈಯರ್ 1 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸಿ ಫೈನಲ್​ಗೆ ಪ್ರವೇಶಿಸಿತ್ತು. ಎಲಿಮಿನೇಟರ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್​ಗಳ ನಿರಾಶಾದಾಯಕ ಸೋಲು ಅನುಭವಿಸಿತು. ಕ್ವಾಲಿಫೈಯರ್ 2 ರಲ್ಲಿ ಸನ್​ರೈಸರ್ಸ್​​ ಹೈದರಾಬಾದ್ ವಿರುದ್ಧ 36 ರನ್​ಗಳಿಂದ ಆರ್​ಆರ್​ ಸೋತಿತು.

Continue Reading

ಕ್ರೀಡೆ

IPL 2024 : ‘ಪ್ಲೇಯರ್​​ ಆಫ್​ ದಿ ಟೂರ್ನಮೆಂಟ್​’ ಸೇರಿ ನಾನಾ ಪ್ರಶಸ್ತಿ ವಿಜೇತ ಪಟ್ಟಿ ಇಲ್ಲಿದೆ

IPL 2024: ಫೈನಲ್​​ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಬ್ಯಾಟ್ ಮತ್ತು ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನವನ್ನು ಪ್ರದರ್ಶಿಸಿತು. ಎಸ್​ಆರ್​ಎಚ್​ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸಿತು. ಹೀಗೆ ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಕೆಲವು ಆಟಗಾರರು ಐಪಿಎಲ್​ನಲ್ಲಿ ಗಮನ ಸೆಳೆದರು. ಅವರಿಗೆ ಫೈನಲ್ ಬಳಿಕ ಆಯಾಯ ವಿಭಾಗದಲ್ಲಿ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು. ಅವರ ವಿವರ ಈ ಕೆಳಗಿನಂತಿವೆ.

VISTARANEWS.COM


on

IPL 2024
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ನ 17ನೇ ಆವೃತ್ತಿ (IPL 2024) ಭಾನುವಾರ ಕೊನೆಗೊಂಡಿತು. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಫೈನಲ್​ನಲ್ಲಿ (IPL FInal) ಎಸ್ಆರ್​ಎಚ್ (SRH)​ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಏಕಮುಖ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​ ನೇತೃತ್ವದ ಕೆಕೆಆರ್​ ಪ್ರಾಬಲ್ಯ ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಈ ಬಾರಿಯ ಟೂರ್ನಿ ಅತ್ಯಂತ ರೋಚಕವಾಗಿತ್ತು. ಬ್ಯಾಟ್ ಹಾಗೂ ಬಾಲ್​ನಲ್ಲಿ ಎಲ್ಲ ತಂಡಗಳು ಅಸಾಮಾನ್ಯ ಸಾಧನೆಗಳನ್ನು ತೋರಿದವು. ಇದರ ಜತೆಗೆ ಹಲವಾರು ದಾಖಲೆಗಳು (IPL Recrords) ಕೂಡ ಸೃಷ್ಟಿಯಾದವು. ಐಪಿಎಲ್​ನಲ್ಲಿ ಅತ್ಯಧಿಕ ಸ್ಕೋರ್ ದಾಖಲಾಗಿದ್ದು ಮತ್ತು ಟಿ 20 ಯಲ್ಲಿ ಅತಿ ಹೆಚ್ಚು ಸ್ಕೋರ್ ಚೇಸ್ ಮಾಡಿದ ದಾಖಲೆಯೂ ಸೃಷ್ಟಿಯಾಯಿತು.

ಐಪಿಎಲ್ 2024 ಪಂದ್ಯಾವಳಿಯುದ್ದಕ್ಕೂ 74 ಪಂದ್ಯಗಳನ್ನು (70 ಲೀಗ್​ ಪಂದ್ಯಗಳು) ನಡೆಯಿತು. ಇಂಪ್ಯಾಕ್ಟ್​ ಪ್ಲೇಯರ್ ನಿಯಮದ ಮೂಲಕ ಆಟದ ಗತ್ತು ಬದಲಾಗಿತ್ತು. ಪಂದ್ಯವೊಂದರಲ್ಲಿ 200 ರನ್ ಸಾಮಾನ್ಯವಾಗಿತ್ತು. ಹಾಗೆಂದು ಅದು ಗೆಲುವಿನ ಮೊತ್ತವಾಗಿರಲಿಲ್ಲ ಅದನ್ನೂ ಚೇಸ್​ ಮಾಡಲಾಗುತ್ತಿತ್ತು.

ಕೆಕೆಆರ್​ ಉತ್ತಮ ಪ್ರದರ್ಶನ

ಲೀಗ್ ಹಂತದ ಬಳಿಕ ಕೋಲ್ಕತಾ ನೈಟ್ ರೈಡರ್ಸ್ (KKR) ಆಡಿರುವ 14 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು . ಸನ್ರೈಸರ್ಸ್ ಹೈದರಾಬಾದ್ 8 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ರಾಜಸ್ಥಾನ್ ರಾಯಲ್ಸ್ (ಆರ್ಆರ್) ಅದೇ ಸಂಖ್ಯೆಯ ಗೆಲುವುಗಳನ್ನು ಹೊಂದಿತ್ತು. ನೆಟ್​ರನ್​ರೇಟ್​ ಅವರನ್ನು 3 ನೇ ಸ್ಥಾನಕ್ಕೆ ತಳ್ಳಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ ) ಸತತ 6 ಗೆಲುವುಗಳೊಂದಿಗೆ 4 ನೇ ಸ್ಥಾನದಲ್ಲಿತ್ತು.

ಕ್ವಾಲಿಫೈಯರ್ 1 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸಿ ಫೈನಲ್​ಗೆ ಪ್ರವೇಶಿಸಿತ್ತು. ಎಲಿಮಿನೇಟರ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್​ಗಳ ನಿರಾಶಾದಾಯಕ ಸೋಲು ಅನುಭವಿಸಿತು. ಕ್ವಾಲಿಫೈಯರ್ 2 ರಲ್ಲಿ ಸನ್​ರೈಸರ್ಸ್​​ ಹೈದರಾಬಾದ್ ವಿರುದ್ಧ 36 ರನ್​ಗಳಿಂದ ಆರ್​ಆರ್​ ಸೋತಿತು.

ಇದನ್ನೂ ಓದಿ: IPL 2024 : ಕ್ಯಾಚ್ ಬಿಟ್ಟಿದ್ದು ಮಿಚೆಲ್​ ಸ್ಟಾರ್ಕ್​, ಬೆಚ್ಚಿ ಬಿದ್ದಿದ್ದು ಜಾಹ್ನವಿ ಕಪೂರ್​; ಇಲ್ಲಿದೆ ವಿಡಿಯೊ

ಫೈನಲ್​​ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಬ್ಯಾಟ್ ಮತ್ತು ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನವನ್ನು ಪ್ರದರ್ಶಿಸಿತು. ಎಸ್​ಆರ್​ಎಚ್​ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸಿತು. ಹೀಗೆ ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಕೆಲವು ಆಟಗಾರರು ಐಪಿಎಲ್​ನಲ್ಲಿ ಗಮನ ಸೆಳೆದರು. ಅವರಿಗೆ ಫೈನಲ್ ಬಳಿಕ ಆಯಾಯ ವಿಭಾಗದಲ್ಲಿ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು. ಅವರ ವಿವರ ಈ ಕೆಳಗಿನಂತಿವೆ.

ವಿಶೇಷ ಪ್ರಶಸ್ತಿಗಳ ವಿಜೇತರ ಪಟ್ಟಿ ಇಲ್ಲಿದೆ

ಪಂಚ್ ಇವಿ ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಮ್ಯಾಚ್ (ಫೈನಲ್) – ವೆಂಕಟೇಶ್ ಅಯ್ಯರ್

  • ಮೈ 11 ಸರ್ಕಲ್ ಅಲ್ಟಿಮೇಟ್ ಫ್ಯಾಂಟಸಿ ಪ್ಲೇಯರ್ ಆಫ್ ದಿ ಮ್ಯಾಚ್ (ಫೈನಲ್) – ಮಿಚೆಲ್ ಸ್ಟಾರ್ಕ್
  • ಏಂಜೆಲ್ ಒಂದು ಅತಿ ದೊಡ್ವಡ ಸಿಕ್ಸರ್ (ಫೈನಲ್) – ವೆಂಕಟೇಶ್ ಅಯ್ಯರ್
  • ರುಪೇ ಆನ್ ದಿ ಗೋ ಫೋರ್ಸ್ ಆಫ್ ಮ್ಯಾಚ್ (ಫೈನಲ್) – ರಹಮಾನುಲ್ಲಾ ಗುರ್ಬಾಜ್
  • ಗ್ರೀನ್ ಡಾಟ್ ಬಾಲ್ಸ್ ಆಫ್ ದಿ ಮ್ಯಾಚ್ (ಫೈನಲ್) – ಹರ್ಷಿತ್ ರಾಣಾ
  • ಪಂದ್ಯಶ್ರೇಷ್ಠ (ಫೈನಲ್) – ಮಿಚೆಲ್ ಸ್ಟಾರ್ಕ್
  • ಪಂಚ್ ಇವಿ ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಸೀಸನ್ – ಜೇಕ್ ಫ್ರೇಸರ್-ಮೆಕ್ಗುರ್ಕ್
  • ಮೈ 11 ಸರ್ಕಲ್ ಅಲ್ಟಿಮೇಟ್ ಫ್ಯಾಂಟಸಿ ಪ್ಲೇಯರ್ ಆಫ್ ದಿ ಸೀಸನ್ – ಸುನಿಲ್ ನರೈನ್
  • ಏಂಜೆಲ್ ಒನ್ ಸೂಪರ್ ಸಿಕ್ಸರ್ಸ್ ಆಫ್ ದಿ ಸೀಸನ್ – ಅಭಿಷೇಕ್ ಶರ್ಮಾ
  • ರುಪೇ ಆನ್ ದಿ ಗೋ ಫೋರ್ಸ್ ಆಫ್ ದಿ ಸೀಸನ್ – ಟ್ರಾವಿಸ್ ಹೆಡ್
  • ಎಮರ್ಜಿಂಗ್​ ಪ್ಲೇಯರ್​ – ನಿತೀಶ್ ರೆಡ್ಡಿ
  • ಫೇರ್ ಪ್ಲೇ ಅವಾರ್ಡ್ ಆಫ್ ದಿ ಸೀಸನ್ – ಸನ್​ ರೈಸರ್ಸ್​​ ಹೈದರಾಬಾದ್
  • ಕ್ಯಾಚ್ ಆಫ್ ದಿ ಸೀಸನ್ – ರಮಣ್ದೀಪ್ ಸಿಂಗ್
  • ಆರೆಂಜ್ ಕ್ಯಾಪ್ – ವಿರಾಟ್ ಕೊಹ್ಲಿ
  • ಪರ್ಪಲ್ ಕ್ಯಾಪ್ – ಹರ್ಷಲ್ ಪಟೇಲ್
  • ಅತ್ಯಂತ ಮೌಲ್ಯಯುತ ಆಟಗಾರ – ಸುನಿಲ್ ನರೈನ್

Continue Reading

ವಿದೇಶ

Israel Palestine War: ಇಸ್ರೇಲ್‌ ಪ್ರತೀಕಾರದ ದಾಳಿ, 35 ಪ್ಯಾಲೆಸ್ತೀನೀಯರ ಸಾವು

ಇಸ್ರೇಲಿ ಸೈನ್ಯವು ತನ್ನ ದಾಳಿ ವಿಮಾನವು ರಫಾದಲ್ಲಿ ಹಮಾಸ್ ಆವರಣವನ್ನು ಘಾತಿಸಿದೆ ಎಂದು ವರದಿ ಮಾಡಿದೆ, ಇದರ ಪರಿಣಾಮವಾಗಿ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪಿನ ಹಿರಿಯ ಅಧಿಕಾರಿಗಳಾದ ಯಾಸಿನ್ ರಬಿಯಾ ಮತ್ತು ಖಲೀದ್ ನಗರ್ ಸಾವನ್ನಪ್ಪಿದರು.

VISTARANEWS.COM


on

israel palestine war12
Koo

ಟೆಲ್‌ ಅವಿವ್:‌ ಇಸ್ರೇಲ್‌ನ (Israel) ವಾಣಿಜ್ಯ ಕೇಂದ್ರವಾದ ಟೆಲ್ ಅವೀವ್‌ನಲ್ಲಿ (Tel Aviv) “ದೊಡ್ಡ ರಾಕೆಟ್ ದಾಳಿ” ನಡೆಸಿರುವುದಾಗಿ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ (hamas) ಹೇಳಿಕೊಂಡ ಗಂಟೆಗಳ ನಂತರ, ಇಸ್ರೇಲ್ ಮಿಲಿಟರಿ ದಕ್ಷಿಣ ಗಾಜಾ ಪಟ್ಟಿಯ (Gaza Strip) ರಫಾದಲ್ಲಿ ಸ್ಥಳಾಂತರಗೊಂಡ ಜನರ ಶಿಬಿರದ ಮೇಲೆ ವೈಮಾನಿಕ ದಾಳಿ (Israel Palestine War) ನಡೆಸಿತು. ಭಾನುವಾರ ತಡರಾತ್ರಿ ನಡೆಸಿದ ದಾಳಿಯಲ್ಲಿ ಕನಿಷ್ಠ 35 ಪ್ಯಾಲೆಸ್ಟೀನಿಯನ್ನರನ್ನು ಕೊಂದಿತು.

ತಿಂಗಳುಗಳಲ್ಲಿ ಮೊದಲ ಬಾರಿಗೆ ಇಂಥ ಭಾರಿ ದಾಳಿ ನಡೆಯುತ್ತಿದೆ. ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ನೀಡಿದ ಹೇಳಿಕೆಯಲ್ಲಿ, “ಇಸ್ರೇಲ್‌ ದಾಳಿ 35 ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ಡಜನ್‌ಗಟ್ಟಲೆ ಜನ ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು” ಎಂದು ಹೇಳಿದೆ. ರಫಾಹ್ ಬಳಿ ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆ ಏಜೆನ್ಸಿ ನಿರ್ವಹಿಸುತ್ತಿದ್ದ ಕೇಂದ್ರವನ್ನು ಗುರಿಯಾಗಿಟ್ಟುಕೊಂಡು ದಾಳಿಯನ್ನು “ಭಯಾನಕ ಹತ್ಯಾಕಾಂಡ” ಎಂದು ಹಮಾಸ್ ಮೀಡಿಯಾ ಕರೆದಿದೆ.

“ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ಕಾನೂನುಬದ್ಧ ಗುರಿಗಳ ವಿರುದ್ಧ ನಿಖರವಾದ ಗುಪ್ತಚರ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದೆ. ಮತ್ತು ಪಶ್ಚಿಮ ದಂಡೆಯಲ್ಲಿ ಉಗ್ರ ಕಾರ್ಯಾಚರಣೆ ನಡೆಸುತ್ತಿದ್ದ ಇಬ್ಬರು ಹಿರಿಯ ಹಮಾಸ್ ಅಧಿಕಾರಿಗಳನ್ನು ಕೊಂದಿದ್ದೇವೆ” ಎಂದು ಇಸ್ರೇಲಿ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.

ಇಸ್ರೇಲಿ ಸೈನ್ಯವು ತನ್ನ ದಾಳಿ ವಿಮಾನವು ರಫಾದಲ್ಲಿ ಹಮಾಸ್ ಆವರಣವನ್ನು ಘಾತಿಸಿದೆ ಎಂದು ವರದಿ ಮಾಡಿದೆ, ಇದರ ಪರಿಣಾಮವಾಗಿ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪಿನ ಹಿರಿಯ ಅಧಿಕಾರಿಗಳಾದ ಯಾಸಿನ್ ರಬಿಯಾ ಮತ್ತು ಖಲೀದ್ ನಗರ್ ಸಾವನ್ನಪ್ಪಿದರು. ಇಸ್ರೇಲಿ ಸೈನ್ಯವು ದಾಳಿಯ ಪರಿಣಾಮವಾಗಿ, ಆ ಪ್ರದೇಶದಲ್ಲಿ ಹಲವಾರು ನಾಗರಿಕರಿಗೆ ಹಾನಿಯಾಗಿದೆ ಎಂದು ಸೂಚಿಸುವ ವರದಿಗಳ ಬಗ್ಗೆ ನಮಗೆ ತಿಳಿದಿದೆ ಎಂದು ಒಪ್ಪಿಕೊಂಡಿದೆ.

ಇಸ್ರೇಲಿ ಮಿಲಿಟರಿ ಮತ್ತು ಹಮಾಸ್ ನಡುವಿನ ಯುದ್ಧದ ತೀವ್ರತೆಯು ಇತ್ತೀಚೆಗೆ ರಫಾದಲ್ಲಿ ಕೇಂದ್ರೀಕೃತವಾಗಿದೆ. ಅಲ್ಲಿ ಸೇನಾಪಡೆಗಳು ಮೇ ಆರಂಭದಲ್ಲಿ ವ್ಯಾಪಕ ವಿರೋಧದ ಹೊರತಾಗಿಯೂ ಭೂಸೇನಾ ಕಾರ್ಯಾಚರಣೆಯನ್ನು ನಡೆಸಿವೆ.

ಇದನ್ನೂ ಓದಿ: Iran-Israel Conflict: “ಅಚ್ಚರಿಯ ದಾಳಿ ನಿರೀಕ್ಷಿಸಿ”- ಇಸ್ರೇಲ್‌ಗೆ ಇರಾನ್‌ನಿಂದ ವಾರ್ನಿಂಗ್‌

Continue Reading
Advertisement
EPF Death Claim
ಮನಿ ಗೈಡ್16 mins ago

EPF Death Claim: ಆಧಾರ್ ದೃಢೀಕರಣ ಇಲ್ಲದೇ ಇದ್ದರೂ ಇಪಿಎಫ್‌ಒ ಡೆತ್ ಕ್ಲೈಮ್ ಸಾಧ್ಯವೆ? ಇಲ್ಲಿದೆ ಮಾಹಿತಿ

IPL 2024
ಕ್ರೀಡೆ24 mins ago

IPL 2024 : ಗೆಲ್ಲಬೇಕಾಗಿರುವುದು ಐಪಿಎಲ್​ ಟ್ರೋಫಿ, ಆರೆಂಜ್ ಕ್ಯಾಪ್ ಅಲ್ಲ; ಅನಗತ್ಯವಾಗಿ ಕೊಹ್ಲಿಯ ಕಾಲೆಳೆದ ಅಂಬಾಟಿ ರಾಯುಡು

Dhruva Sarja Entry to Bollywood in brother Role
ಸ್ಯಾಂಡಲ್ ವುಡ್32 mins ago

Dhruva Sarja: ಬಾಲಿವುಡ್‌ ಸಿನಿಮಾಗೆ ಎಂಟ್ರಿ ಕೊಡ್ತಾರಾ ಧ್ರುವ ಸರ್ಜಾ? ಬಿಗ್‌ ಬಜೆಟ್‌ ಚಿತ್ರದಲ್ಲಿ ಸಹೋದರನ ಪಾತ್ರ?

Toothpaste For Cleaning
ಲೈಫ್‌ಸ್ಟೈಲ್33 mins ago

Toothpaste For Cleaning: ಅಡುಗೆ ಮನೆ ಕೊಳೆಯಾಗಿದೆಯೇ? ಸ್ವಚ್ಛತೆಗೆ ಟೂತ್‌ಪೇಸ್ಟ್‌ ಬಳಸಿ!

Cyclone Remal
ದೇಶ40 mins ago

Cyclone Remal: ʼರೆಮಾಲ್‌ʼ ಅಬ್ಬರಕ್ಕೆ ಬಂಗಾಳ, ಬಾಂಗ್ಲಾ ತತ್ತರ-ಭೂಕುಸಿತ, ಪ್ರವಾಹ ಸ್ಥಿತಿ ನಿರ್ಮಾಣ

child death belagavi
ಕ್ರೈಂ50 mins ago

Child Death: ಆಟವಾಡುತ್ತ ಸಂಪ್‌ಗೆ ಬಿದ್ದು 2 ವರ್ಷದ ಕಂದಮ್ಮ ದುರ್ಮರಣ, ಮಳೆಗೆ ಮರ ಬಿದ್ದು ಮಹಿಳೆ ಸಾವು

IPL 2024
ಕ್ರೀಡೆ52 mins ago

IPL 2024 : ಕೆಕೆಆರ್​ ಗೆದ್ದ ಸಂಭ್ರಮದಲ್ಲಿ ಕೋಚ್ ಗಂಭೀರ್​ ಹಣೆಗೆ ಮುತ್ತಿಟ್ಟ ಶಾರುಖ್​ ಖಾನ್​, ಇಲ್ಲಿದೆ ವಿಡಿಯೊ

IPL 2024
ಕ್ರೀಡೆ1 hour ago

IPL 2024 : ‘ಪ್ಲೇಯರ್​​ ಆಫ್​ ದಿ ಟೂರ್ನಮೆಂಟ್​’ ಸೇರಿ ನಾನಾ ಪ್ರಶಸ್ತಿ ವಿಜೇತ ಪಟ್ಟಿ ಇಲ್ಲಿದೆ

Color In Food
ಆರೋಗ್ಯ1 hour ago

Colour In Food: ನಾವು ಸೇವಿಸುವ ಕಲ್ಲಂಗಡಿ ಸುರಕ್ಷಿತವೇ?; ಆಹಾರ ತಜ್ಞರು ಏನು ಹೇಳಿದ್ದಾರೆ?

israel palestine war12
ವಿದೇಶ2 hours ago

Israel Palestine War: ಇಸ್ರೇಲ್‌ ಪ್ರತೀಕಾರದ ದಾಳಿ, 35 ಪ್ಯಾಲೆಸ್ತೀನೀಯರ ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ15 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು16 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ7 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌