ತೈವಾನ್​ ಕ್ಷಿಪಣಿ ಅಭಿವೃದ್ಧಿ ತಂಡದ ಮುಖ್ಯಸ್ಥನ ಶವ ಹೋಟೆಲ್​​ನಲ್ಲಿ ಪತ್ತೆ; ಚೀನಾ ಕೈವಾಡ? - Vistara News

ವಿದೇಶ

ತೈವಾನ್​ ಕ್ಷಿಪಣಿ ಅಭಿವೃದ್ಧಿ ತಂಡದ ಮುಖ್ಯಸ್ಥನ ಶವ ಹೋಟೆಲ್​​ನಲ್ಲಿ ಪತ್ತೆ; ಚೀನಾ ಕೈವಾಡ?

China- Taiwan: ಅಮೆರಿಕ ಜನಪ್ರತಿನಿಧಿಗಳ ಸಭೆಯ ಸ್ಪೀಕರ್​ ನ್ಯಾನ್ಸಿ ಪೆಲೋಸಿ ತೈವಾನ್​ಗೆ ಭೇಟಿ ಕೊಟ್ಟಿದ್ದು ಚೀನಾ ಕಣ್ಣುರಿಗೆ ಕಾರಣ. ಈ ಎರಡೂ ರಾಷ್ಟ್ರಗಳ ಜಗ್ಗಾಟದಲ್ಲಿ ತೈವಾನ್​ ಬಡವಾಗುತ್ತಿದೆ.

VISTARANEWS.COM


on

Taiwan China
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತೈಪೆ: ಚೀನಾ-ಅಮೆರಿಕ-ತೈವಾನ್ (China- Taiwan)​ ಸದ್ಯ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ದೇಶಗಳು. ಅಮೆರಿಕದ ಜನಪ್ರತಿನಿಧಿಗಳ ಸಭೆಯ ಸ್ಪೀಕರ್​ ನ್ಯಾನ್ಸಿ ಪೆಲೋಸಿ ತೈವಾನ್​​ಗೆ ಭೇಟಿ ನೀಡಿದಾಗಿನಿಂದ ಚೀನಾ ಕೆಂಡಾಮಂಡಲವಾಗಿದೆ. ಇತ್ತ ತೈವಾನ್​ ವಿರುದ್ಧ ಸಮರ ತಾಲೀಮು ನಡೆಸುತ್ತಿದ್ದರೆ, ಅತ್ತ ಅಮೆರಿಕದೊಂದಿಗೆ ಅಮೆರಿಕದೊಂದಿಗೆ ಹವಾಮಾನ, ರಕ್ಷಣಾ ಕ್ಷೇತ್ರ ಮತ್ತು ಹಲವು ಪ್ರಮುಖ ವಲಯಗಳಲ್ಲಿ ಸಹಕಾರ ಸಂಬಂಧವನ್ನು ಕೊನೆಗಾಣಿಸಿದೆ. ಅಂದರೆ ಹವಾಮಾನ ಬದಲಾವಣೆ, ರಕ್ಷಣಾ ಕ್ಷೇತ್ರದಲ್ಲಿ ಚೀನಾ ಮತ್ತು ಅಮೆರಿಕ ಮಾಡಿಕೊಂಡ ಒಪ್ಪಂದಗಳ ಬಗ್ಗೆ ಮಾತುಕತೆ, ಅಂತಾರಾಷ್ಟ್ರೀಯ ಅಪರಾಧಗಳ ತಡೆ ಕ್ರಮಗಳು, ತನಿಖೆಯಲ್ಲಿ ಇಷ್ಟು ದಿನ ಇದ್ದ ಪರಸ್ಪರ ಸಹಕಾರಗಳನ್ನೆಲ್ಲ ಚೀನಾ ನಿಲ್ಲಿಸುವುದಾಗಿ ತಿಳಿಸಿದೆ.

ನ್ಯಾನ್ಸಿ ಪೆಲೋಸಿ ಬರುತ್ತಾರೆ ಎಂಬ ವರದಿ ಹೊರಬಿದ್ದಾಗಿನಿಂದಲೂ ಚೀನಾ ತನ್ನ ನೆರೆಯಲ್ಲಿರುವ ಪುಟ್ಟ ದ್ವೀಪ ರಾಷ್ಟ್ರ ತೈವಾನ್​ನ್ನು ಹೆದರಿಸುವ ಪ್ರಯತ್ನ ಮಾಡುತ್ತಿದೆ. ಆಗಸ್ಟ್​ 3ರಂದು ನ್ಯಾನ್ಸಿ ಪೆಲೋಸಿ ತೈವಾನ್​ಗೆ ಕಾಲಿಟ್ಟ ದಿನ ಚೀನಾ 21 ಯುದ್ಧ ವಿಮಾನಗಳನ್ನು ಹಾರಾಡಿಸಿತ್ತು. ನ್ಯಾನ್ಸಿ ಅಲ್ಲಿಂದ ಹೊರಬೀಳುತ್ತಿದ್ದಂತೆ ತೈವಾನ್​ ರಕ್ಷಣಾ ವಲಯದಲ್ಲಿ ಚೀನಾ ಸಮರ ತಾಲೀಮು ತೀವ್ರಗೊಂಡಿದೆ. ಒಟ್ಟಾರೆ ಹೇಳಬೇಕೆಂದರೆ ಯುಎಸ್​​-ಚೀನಾ ಜಗಳದಲ್ಲಿ ತೈವಾನ್​​ ಬಡವಾಗುತ್ತಿದೆ.

ಈ ಮಧ್ಯೆ ತೈವಾನ್​​ನಲ್ಲಿ ಇನ್ನೊಂದು ಮಹತ್ವದ ಬೆಳವಣಿಗೆ ನಡೆದಿದೆ. ತೈವಾನ್​​ನ ಕ್ಷಿಪಣಿ ಅಭಿವೃದ್ಧಿ ತಂಡದ ಮುಖ್ಯಸ್ಥ ಮೃತಪಟ್ಟಿದ್ದಾರೆ. ಹೋಟೆಲ್​​ವೊಂದರ ಕೋಣೆಯಲ್ಲಿ ಶನಿವಾರ ಮುಂಜಾನೆ ಅವರ ಶವ ಪತ್ತೆಯಾಗಿದ್ದು, ಸಾವಿಗೆ ನಿಜವಾದ ಕಾರಣ ತಿಳಿದುಬಂದಿಲ್ಲ. ಇವರ ಸಾವಿನಲ್ಲಿ ಚೀನಾ ಕೈವಾಡ ಇದೆಯೋ-ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ತನಿಖೆ ಪ್ರಾರಂಭವಾಗಿದೆ. ಮೃತ ಅಧಿಕಾರಿಯ ಹೆಸರು ಒ ಯಾಂಗ್​ ಲಿ ಸಿಂಗ್​ ಎಂದಾಗಿದ್ದು, ತೈವಾನ್​ ಸೇನಾ ಮಾಲೀಕತ್ವದ ಚುಂಗ್​ ಶಾನ್​ ಇನ್​ಸ್ಟಿಟ್ಯೂಟ್​​ ಆಫ್​ ಸೈನ್ಸ್​​ ಆ್ಯಂಡ್ ಟೆಕ್ನಾಲಜಿಯ ಮುಖ್ಯಸ್ಥರು.

ನ್ಯಾನ್ಸಿ ಪೆಲೋಸಿ ಮತ್ತು ಆಕೆಯ ಕುಟುಂಬದವರಿಗೆ ನಿರ್ಬಂಧ ಹೇರಿರುವ ಚೀನಾ, ತೈವಾನ್​ ಆರು ಪ್ರಮುಖ ವಲಯಗಳಲ್ಲಿ ನಾಲ್ಕು ದಿನಗಳ ಸಮರ ತಾಲೀಮು ನಡೆಸುವುದಾಗಿ ಘೋಷಿಸಿತ್ತು. ಅದರಂತೆ ಇಂದು (ಶನಿವಾರ) ಕೊನೇ ದಿನ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ತೈವಾನ್​, ಚೀನಾದ ಯುದ್ಧ ತಾಲೀಮನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಚೀನಾ ನಮ್ಮ ಮುಖ್ಯ ದ್ವೀಪದ ಮೇಲೆ ಕೂಡ ಸಮರಾಭ್ಯಾಸ ಮಾಡುತ್ತಿದೆ ಎಂದಿದೆ ಹಾಗೇ, ಶುಕ್ರವಾರ ಚೀನಾದ 68 ಯುದ್ಧ ವಿಮಾನಗಳು ಮತ್ತು 13 ಸಮರ ನೌಕೆಗಳು ತೈವಾನ್​ ಗಡಿದಾಟಿ, ನಮ್ಮ ವಲಯವನ್ನು ಪ್ರವೇಶಿಸಿದ್ದಾಗಿ ತೈಪೆ ಮಿಲಿಟರಿ ಹೇಳಿಕೊಂಡಿದೆ.

ಇದನ್ನೂ ಓದಿ: ವಿಸ್ತಾರ Explainer | ತೈವಾನ್‌ ದ್ವೀಪದೇಶದಲ್ಲಿ ಚೀನಾ- ಅಮೆರಿಕ ತಿಕ್ಕಾಟದ ಹಕೀಕತ್ತು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ಸಮುದ್ರದಲ್ಲಿ ಮೂತ್ರ ವಿಸರ್ಜನೆ ಮಾಡಿದರೆ 67 ಸಾವಿರ ರೂ. ದಂಡ; ಕಂಡು ಹಿಡಿಯೋದು ಹೇಗೆ?

Viral News: ಮಾರ್ಬೆಲ್ಲಾ ನಗರದಲ್ಲಿ ಜಾರಿಗೆ ತರಲು ಚಿಂತನೆ ನಡೆದಿರುವ ಕುರಿತು ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಪರ-ವಿರೋಧ ಚರ್ಚೆಯಾಗುತ್ತಿದೆ. ಟ್ರೋಲ್‌ಗಳನ್ನು ಮಾಡಲಾಗುತ್ತಿದೆ. ಅದರಲ್ಲೂ, ಕೆಲ ಮಾಧ್ಯಮಗಳು ಬೀಚ್‌ಗಳಿಗೆ ತೆರಳಿ ಜನರ ಅಭಿಪ್ರಾಯಗಳು ಕೇಳಿವೆ. ಮೀಮ್‌ಗಳು, ಟ್ರೋಲ್‌ಗಳು ಕೂಡ ಹರಿದಾಡುತ್ತಿವೆ.

VISTARANEWS.COM


on

Viral News
Koo

ಮ್ಯಾಡ್ರಿಡ್: ಜಗತ್ತನಾದ್ಯಂತ ಹತ್ತಾರು ದೇಶಗಳಲ್ಲಿ ಹಲವು ರೀತಿಯ, ಕೆಲವೊಮ್ಮೆ ವಿಚಿತ್ರ ನಿಯಮ, ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಅದರಲ್ಲೂ, ಸಾರ್ವಜನಿಕ ಸ್ಥಳಗಳಲ್ಲಿ ಜನರ ವರ್ತನೆ ಕುರಿತು ಬಹುತೇಕ ದೇಶಗಳು ಹೆಚ್ಚಿನ ನಿಗಾ ವಹಿಸುತ್ತವೆ. ಕಠಿಣ ನಿಯಮಗಳ ಮೂಲಕ ಶಿಸ್ತು ಕಾಪಾಡುತ್ತವೆ. ಇದರ ಮಧ್ಯೆಯೇ, ಸ್ಪೇನ್‌ (Spain) ದೇಶದ ನಗರವೊಂದರಲ್ಲಿ ವಿಚಿತ್ರ ನಿಯಮವೊಂದನ್ನು ಜಾರಿಗೆ ತರಲಾಗಿದೆ. ಸಮುದ್ರದಲ್ಲಿ ಈಜಾಡುವವರು, ಮೋಜು-ಮಸ್ತಿ ಮಾಡುವವರು ನೀರಿನಲ್ಲೇ ಮೂತ್ರ ವಿಸರ್ಜನೆ ಮಾಡಿದರೆ 67 ಸಾವಿರ ರೂ.ನಿಂದ 1 ಲಕ್ಷ ರೂ. ದಂಡ ವಿಧಿಸುವುದಾಗಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಸುದ್ದಿ ಈಗ ಭಾರಿ (Viral News) ಚರ್ಚೆಗೆ ಗ್ರಾಸವಾಗಿದೆ.

ಹೌದು, ಸ್ಪೇನ್‌ನ ಮಾರ್ಬೆಲ್ಲಾ ಎಂಬ ನಗರದಲ್ಲಿರುವ ಸಮುದ್ರಗಳಲ್ಲಿ ನೀರಿನ ಸ್ವಚ್ಛತೆ, ಶಿಸ್ತು ಕಾಪಾಡುವ ದಿಸೆಯಲ್ಲಿ ಹೊಸ ನಿಯಮಗಳನ್ನು ರೂಪಿಸಲಾಗುತ್ತದೆ. ಸಾರ್ವಜನಿಕರ ಆರೋಗ್ಯ, ನೀರಿನ ಗುಣಮಟ್ಟ, ಸ್ವಚ್ಛತೆ ದೃಷ್ಟಿಯಿಂದ ನಿಯಮಗಳನ್ನು ರೂಪಿಸುತ್ತಿದೆ. ಅದರಲ್ಲೂ, ಮೊದಲ ಬಾರಿಗೆ ಮೂತ್ರ ವಿಸರ್ಜನೆ ಮಾಡಿ ಸಿಕ್ಕಿಬಿದ್ದರೆ 67 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ದಂಡ ಪಾವತಿಸಿದ ಒಂದು ವರ್ಷದಲ್ಲಿ ಮತ್ತೆ ಸಿಕ್ಕಿಬಿದ್ದರೆ ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ

ಮಾರ್ಬೆಲ್ಲಾ ನಗರದಲ್ಲಿ ಜಾರಿಗೆ ತರಲು ಚಿಂತನೆ ನಡೆದಿರುವ ಕುರಿತು ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಪರ-ವಿರೋಧ ಚರ್ಚೆಯಾಗುತ್ತಿದೆ. ಟ್ರೋಲ್‌ಗಳನ್ನು ಮಾಡಲಾಗುತ್ತಿದೆ. ಅದರಲ್ಲೂ, ಕೆಲ ಮಾಧ್ಯಮಗಳು ಬೀಚ್‌ಗಳಿಗೆ ತೆರಳಿ ಜನರ ಅಭಿಪ್ರಾಯಗಳು ಕೇಳಿವೆ. “ನಾವು ಸಮುದ್ರದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದೇವೆ ಎಂಬುದನ್ನು ಹೇಗೆ ಪತ್ತೆ ಹಚ್ಚುತ್ತಾರೆ? ಮೀನುಗಳನ್ನು ಕೇಳಿ, ಅವರು ನಮಗೆ ದಂಡ ವಿಧಿಸುತ್ತಾರೆಯೇ” ಎಂಬುದಾಗಿ ಪ್ರವಾಸಿಗರೊಬ್ಬರು ಖಾರವಾಗಿ ಪ್ರಶ್ನಿಸಿದ್ದಾರೆ.

ಒಂದಷ್ಟು ಜನರು ಈ ಚಿಂತನೆಯೇ ನಾನ್‌ಸೆನ್ಸ್‌ ಎಂದಿದ್ದಾರೆ. “ಸಮುದ್ರದ ನೀರನ್ನು ಸ್ವಚ್ಛವಾಗಿಡಬೇಕು, ಯಾರೂ ಮೂತ್ರ ವಿಸರ್ಜನೆ ಮಾಡಬಾರದು ಎಂಬುದು ಸರಿ. ಆದರೆ, ಅದನ್ನು ತಿಳಿಯುವ ವಿಧಾನ ಏನಿದೆ? ಅದನ್ನು ಹೇಗೆ ಪತ್ತೆಹಚ್ಚುತ್ತಾರೆ? ಸಾರ್ವಜನಿಕರ ಹಣವನ್ನು ಹೀಗೆ ಖರ್ಚು ಮಾಡುವ, ನಾನ್‌ಸೆನ್ಸ್‌ ಯೋಜನೆಗಳನ್ನು ರೂಪಿಸುವ ಬದಲು, ಸಮುದ್ರದಲ್ಲಿ ಮೂತ್ರ ವಿಸರ್ಜನೆ ಮಾಡದಿರುವ, ನೀರಿನ ಸ್ವಚ್ಛತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದರೆ ಒಳ್ಳೆಯದಿತ್ತು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Team India Fan: ಟಿ20 ವಿಶ್ವಕಪ್​ ವಿಜೇತ ಭಾರತ ತಂಡದ ಆಟಗಾರರ ಹೆಸರನ್ನು ಬೆನ್ನ ಮೇಲೆ ಟ್ಯಾಟು ಹಾಕಿಸಿಕೊಂಡ ಅಭಿಮಾನಿ; ವಿಡಿಯೊ ವೈರಲ್​

Continue Reading

ವೈರಲ್ ನ್ಯೂಸ್

Viral Video: ದುಬೈ ಮಾಲ್‌ನಲ್ಲಿ ಬೊಂಬೆಗಳೊಂದಿಗೆ ಬೊಂಬೆಯಾದ ಮಾಡೆಲ್‌! ಗ್ರಾಹಕರು ಕಕ್ಕಾಬಿಕ್ಕಿ

Viral Video: ದುಬೈ ಫೆಸ್ಟಿವಲ್ ಸಿಟಿ ಮಾಲ್‌ನಲ್ಲಿರುವ ಮಾಂಟೊ ಬ್ರೈಡ್ ಸ್ಟೋರ್‌ನಲ್ಲಿ ರೂಪದರ್ಶಿ ಬೊಂಬೆಗಳ ನಡುವೆ ನಿಂತು ಫೋಟೋ ತೆಗೆಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಮಂದಿಯ ಗಮನ ಸೆಳೆಯಿತು. ಇದು ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ.

VISTARANEWS.COM


on

By

Viral Video
Koo

ದುಬೈ: ಅಸಾಂಪ್ರದಾಯಿಕ ಮಾರ್ಕೆಟಿಂಗ್ ತಂತ್ರವನ್ನು ಮಾಡಿರುವ ದುಬೈ ಮಾಲ್ (dubai mall) ಕುರಿತು ವೈರಲ್ ಆದ ವಿಡಿಯೋ (Viral Video) ಸಾಮಾಜಿಕ ಜಾಲತಾಣ (social media) ಬಳಕೆದಾರರಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ದುಬೈ ಮಾಲ್‌ನಲ್ಲಿ ಬಟ್ಟೆ ಮಳಿಗೆಯಲ್ಲಿ ರೂಪದರ್ಶಿಯೊಬ್ಬರು (model) ಮನುಷ್ಯಾಕೃತಿ ಬೊಂಬೆಗಳ ನಡುವೆ ನಿಂತು ವಿವಿಧ ಭಂಗಿಯನ್ನು ಪ್ರದರ್ಶಿಸಿದ್ದು ಇದಕ್ಕೆ ಕಾರಣ.

ದುಬೈ ಫೆಸ್ಟಿವಲ್ ಸಿಟಿ ಮಾಲ್‌ನಲ್ಲಿರುವ ಮಾಂಟೊ ಬ್ರೈಡ್ ಸ್ಟೋರ್‌ನಲ್ಲಿ ರೂಪದರ್ಶಿ ಬೊಂಬೆಗಳ ನಡುವೆ ನಿಂತು ಫೋಟೋ ತೆಗೆಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಮಂದಿಯ ಗಮನ ಸೆಳೆಯಿತು. ಇದು ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ.

ಮಾಡೆಲ್ ಏಂಜಲೀನಾ ಅವರು ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅವರು ಸಾಮಾನ್ಯವಾಗಿ ಮನುಷ್ಯಾಕೃತಿ ಬೊಂಬೆಗಳಿಗಾಗಿ ಕಾಯ್ದಿರಿಸಿದ ಜಾಗದಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಬ್ರ್ಯಾಂಡ್‌ನ ಬಾಡಿಕಾನ್ ಶಾರ್ಟ್ ಡ್ರೆಸ್ ಮತ್ತು ಸ್ಟಿಲೆಟ್ಟೊ ಹೀಲ್ಸ್‌ನೊಂದಿಗೆ ಅವರು ತಮ್ಮ ಕೂದಲನ್ನು ಪೋನಿಟೇಲ್‌ನಲ್ಲಿ ಕಟ್ಟಿಕೊಂಡಿದ್ದರು. ಏಂಜಲೀನಾ ಅವರು ವಿವಿಧ ರೀತಿಯ ಭಂಗಿಗಳನ್ನು ಪ್ರದರ್ಶಿಸುತ್ತಿದ್ದರು. ಇದು ದಾರಿಹೋಕರ ಗಮನವನ್ನು ಸೆಳೆಯಿತು.

“ಪೋವ್: ದುಬೈನಲ್ಲಿ ಮಾರ್ಕೆಟಿಂಗ್” ಎನ್ನುವ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಯಿತು. ದುಬೈ ಮಾಲ್‌ನಲ್ಲಿ ಬಟ್ಟೆ ಬ್ರ್ಯಾಂಡ್ ಅವರ ಅಸಾಂಪ್ರದಾಯಿಕ ಮಾರ್ಕೆಟಿಂಗ್ ತಂತ್ರವು ಪಟ್ಟಣದಲ್ಲಿ ಚರ್ಚೆಗೆ ಕಾರಣವಾಗಿದ್ದು ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯನ್ನು ಹುಟ್ಟು ಹಾಕಿತು. ತ್ವರಿತವಾಗಿ ವೈರಲ್ ಆದ ಈ ವಿಡಿಯೋ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ.

ಒಬ್ಬ ಬಳಕೆದಾರನು ಆ ಅಂಗಡಿಯಿಂದ ಏನನ್ನೂ ಖರೀದಿಸಲು ಬಯಸುವುದಿಲ್ಲ ಎಂದು ನೇರವಾಗಿ ಹೇಳಿದ್ದರೆ ಇನ್ನೊಬ್ಬರು ಗುಲಾಮಗಿರಿಯು ಅತ್ಯುತ್ತಮವಾಗಿದೆ! ಬಹಳ ಗಂಟೆಗಳ ಕಾಲ ನೆರಳಿನಲ್ಲೇ ನಿಂತಿರುವುದು ಹುಚ್ಚುತನ ಎಂದಿದ್ದಾರೆ.


ಮತ್ತೊಬ್ಬರು, ನಾವು ಮಾನವರು ಭವಿಷ್ಯದಲ್ಲಿ ಹಣ ಪಡೆಯಲು ಇಂತಹ ಕೆಲಸಗಳನ್ನು ಮಾಡಬೇಕಾಗಬಹುದು ಎಂದು ಹೇಳಿದ್ದಾರೆ. ಇನ್ನೊಬ್ಬರು ರೋಬೋಟ್‌ಗಳು ಮನುಷ್ಯರ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿವೆ ಮತ್ತು ಈಗ ಮನುಷ್ಯಾಕೃತಿಗಳ ಸ್ಥಾನವನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಿಎಂ ಆವಾಸ್‌ ಯೋಜನೆಯ 40 ಸಾವಿರ ರೂ. ಪಡೆದು 11 ಸ್ತ್ರೀಯರು ಗೆಳೆಯರೊಂದಿಗೆ ಪರಾರಿ; ಕಂಗಾಲಾದ ಪತಿಯರು!

ಟೀಕೆಗಳ ಹೊರತಾಗಿಯೂ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಮಾದರಿಯ ಪ್ರಯತ್ನಗಳನ್ನು ಸಮರ್ಥಿಸಿಕೊಂಡಿದ್ದಾರೆ. ಒಬ್ಬ ವ್ಯಕ್ತಿ ಉದ್ಯೋಗ ಒಂದು ಕೆಲಸ! ಅವಳು ಮಾಡೆಲ್ ಆಗಿದ್ದಾಳೆ. ಕೆಂಡಾಲ್ ಜೆನ್ನರ್ ಮಾಡುವಂತೆ ಅವಳು ಜನರಿಗೆ ಬಟ್ಟೆಗಳನ್ನು ಮಾಡೆಲಿಂಗ್ ಮಾಡುತ್ತಿದ್ದಾಳೆ. ಸಮಸ್ಯೆ ಏನು? ಅಂಗಡಿಯು ಬಹುಶಃ ಗ್ರಾಹಕರನ್ನು ಸೆಳೆಯುತ್ತಿಲ್ಲ ಆದ್ದರಿಂದ ಬಹುಶಃ ನೌಕರರು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸಿದೆ ಎಂದು ಹೇಳಿದ್ದಾರೆ.

Continue Reading

Latest

Viral Video : ಹೀಗೆಲ್ಲಾ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಾರಾ…? ವಿಡಿಯೊ ನೋಡಿ

Viral Video : ಅಲಾಸ್ಕಾದ ಗ್ಲೇಸಿಯರ್ ವ್ಯೂನಲ್ಲಿ ಕಾರನ್ನು ಉರುಳಿಸುತ್ತಾ ಸ್ವಾತಂತ್ರ್ಯ ಸಂಭ್ರಮಾಚರಣೆ ಯುನೈಟೆಡ್ ಸ್ಟೇಟ್ಸ್‌ನ ಅಲಾಸ್ಕಾದ ಗ್ಲೇಸಿಯರ್ ವ್ಯೂನಲ್ಲಿ ಸ್ವಾಂತಂತ್ರ್ಯ ದಿನಾಚರಣೆಯನ್ನು ಬಹಳ ವಿಭಿನ್ನವಾಗಿ ಆಚರಿಸುತ್ತಾರೆ. ಘೋಷಣೆಗಳನ್ನು ಕೂಗುತ್ತಾ ಬಂಡೆಯಿಂದ ಕಾರುಗಳನ್ನು ಉರುಳಿಸುವ ಆಚರಣೆ ಮಾಡುತ್ತಾರಂತೆ. ಸುಮಾರು ಎರಡು ದಶಕಗಳಿಂದ ಅಲಾಸ್ಕಾದ ಗ್ಲೇಸಿಯರ್ ವ್ಯೂ ಜುಲೈ 4 ರಂದು ಈ ರೋಮಾಂಚನಕಾರಿ ಆಚರಣೆಯನ್ನು ಮಾಡುತ್ತಾ ಬಂದಿದೆ. ಈ ವರ್ಷ ಕೂಡ ಗ್ಲೇಸಿಯರ್ ವ್ಯೂ ಈ ವಿಶಿಷ್ಟ ಸಂಪ್ರದಾಯದೊಂದಿಗೆ ಆಚರಣೆ ಮಾಡಿದ್ದು ಜನರು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VISTARANEWS.COM


on

Viral Video
Koo

ಅಮೆರಿಕ : ಸ್ವಾತಂತ್ರ್ಯ ಸಿಕ್ಕ ದಿನವನ್ನು ಎಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಅಮೆರಿಕದ‌ (USA) ಅಲಾಸ್ಕಾದ ಗ್ಲೇಸಿಯರ್ ವ್ಯೂ ಎಂಬ ಸಣ್ಣ ಪಟ್ಟಣದಲ್ಲಿ ಘೋಷಣೆಗಳನ್ನು ಕೂಗುತ್ತಾ ಬಂಡೆಯಿಂದ ಕಾರುಗಳನ್ನು ಉರುಳಿಸುವ ಆಚರಣೆ ಮಾಡುತ್ತಾರಂತೆ. ಸುಮಾರು ಎರಡು ದಶಕಗಳಿಂದ ಅಲಾಸ್ಕಾದ ಗ್ಲೇಸಿಯರ್ ವ್ಯೂ ಜುಲೈ 4 ರಂದು ಈ ರೋಮಾಂಚನಕಾರಿ ಆಚರಣೆಯನ್ನು ಮಾಡುತ್ತಾ ಬಂದಿದೆ. ಈ ವರ್ಷ ಕೂಡ ಗ್ಲೇಸಿಯರ್ ವ್ಯೂ ಈ ವಿಶಿಷ್ಟ ಸಂಪ್ರದಾಯದೊಂದಿಗೆ ಆಚರಣೆ ಮಾಡಿದ್ದು ಜನರು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

Viral Video

ಈ ವರ್ಷ ಪೊಲೀಸ್ ಕ್ರೂಸರ್‌ಗಳು ಮತ್ತು ಬಸ್ಸುಗಳು ಸೇರಿದಂತೆ ಹೆಚ್ಚಿನ ಕಾರುಗಳನ್ನು ಉರುಳಿಸಲಾಗಿದೆ. ಬಂಡೆಗಳ ಮೇಲಿಂದ ಕಾರುಗಳನ್ನು ಉರುಳಿಸುವ ಮುನ್ನ ಕಾರುಗಳಿಗೆ ಅಲಂಕಾರ ಮಾಡಲಾಗುತ್ತದೆ. ಅದರಂತೆ ಈ ವರ್ಷ ಕೆಲವು ಕಾರುಗಳನ್ನು ಅಮೆರಿಕದ ಧ್ವಜಗಳಿಂದ ಚಿತ್ರಿಸಲಾಗಿದೆ. ಕಾರುಗಳನ್ನು ಉರುಳಿಸುವಾಗ ಸಂಗೀತಗಳು ಜೋರಾಗಿ ಮೊಳಗುತ್ತವೆ. ಇದು ಬೆಳಗ್ಗೆ 8:45ರ ಸುಮಾರಿಗೆ ಪ್ರಾರಂಭವಾಗಲಿದ್ದು, ಈ ಕ್ಷಣ ಆಚರಣೆಗೆ ಆಗಮಿಸಿದ ಸಾವಿರಾರು ಜನಸಮೂಹದ ಸಂತೋಷಕ್ಕೆ ಕಾರಣವಾಗಿದೆ.

ಕೆಲವರು ಇದನ್ನು ಅಮೆರಿಕದ ಒಂದು ಉತ್ತಮ ಆಚರಣೆ ಎಂದು ಬಣ್ಣಸಿದ್ದಾರೆ. ಮತ್ತು ಈ ಆಚರಣೆಯನ್ನು ನೋಡಲು ತುಂಬಾ ಖುಷಿಯಾಗುತ್ತದೆ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಆಚರಣೆ ಪ್ರಪಂಚದಾದ್ಯಂತ ರೋಮಾಂಚನಕಾರಿ ದೃಶ್ಯಗಳನ್ನು ನೋಡ ಬಯಸುವವರನ್ನು ಹೆಚ್ಚು ಆಕರ್ಷಿಸುತ್ತದೆ ಎನ್ನಲಾಗಿದೆ. ಈ ಆಚರಣೆಯಲ್ಲಿ ಭಾಗವಹಿಸುವವರು ಒಂದು ಟಿಕೆಟ್‌ಗೆ 20 ಡಾಲರ್ ನೀಡಬೇಕಾಗುತ್ತದೆ. ಈ ಆಚರಣೆಯ ವೇಳೆ ಪಿಜ್ಜಾ, ಐಸ್ ಕ್ರೀಮ್, ಬ್ರಿಸ್ಕೆಟ್, ಸ್ಯಾಂಡ್‍ವಿಚ್‍ಗಳಂತಹ ಆಹಾರಗಳನ್ನು ಮಾರಾಟ ಮಾಡಲಾಗುತ್ತದೆ.

ಇದನ್ನೂ ಓದಿ:  ಕೀರ್ತಿ ಚಕ್ರ ಸ್ವೀಕರಿಸಿದ ಹುತಾತ್ಮ ಯೋಧನ ಪತ್ನಿ; ಭಾವುಕರಾದ ದ್ರೌಪದಿ ಮುರ್ಮು‌,ರಾಜನಾಥ್ ಸಿಂಗ್!

ಇನ್ನು ಈ ಆಚರಣೆಯಲ್ಲಿ ಜನರಿಗೆ ಯಾವುದೇ ಹಾನಿಯಾಗುವುದಿಲ್ಲ. ಯಾಕೆಂದರೆ ಈ ವಾಹನಗಳ ಒಳಗೆ ಯಾರು ಇರುವುದಿಲ್ಲ. ಹಾಗಾಗಿ ಈ ಕಾರನ್ನು ಚಲಾಯಿಸಲು ಮೊನೊರೈಲ್‌ನಿಂದ ಸಹಾಯವನ್ನು ಪಡೆಯುತ್ತಾರೆ, ಅಥವಾ ಫ್ರೀ ವ್ಹೀಲಿಂಗ್ ಮಾಡುತ್ತಾರೆ, ಕೆಲವೊಮ್ಮೆ ವಾಹನವನ್ನು ಸ್ಟಾರ್ಟ್ ಮಾಡಿ ಅದರ ಲೋಹದ ಪೆಡಲ್‌ಗೆ ಮರದ ತುಂಡನ್ನು ಇಡುವ ಮೂಲಕ ಉಡಾಯಿಸುತ್ತಾರೆ. ಇದರಿಂದ ಬಂಡೆಗಳಿಂದ ಉರುಳುವ ಕಾರುಗಳು ತಮ್ಮ ಗಮ್ಯಸ್ಥಾನವನ್ನು ತಲುಪುವ ತನಕ ಗಾಳಿಯಲ್ಲಿ ಹಾರುವಂತೆ ಸ್ಟಂಟ್ ಮಾಡುವಂತೆ ಪ್ರದರ್ಶನ ನೀಡುತ್ತವೆ. ಒಟ್ಟಾರೆ ಇದು ಜುಲೈ ನಾಲ್ಕನೆಯ ತಾರೀಕಿನಂದು ಯುನೈಟೆಡ್ ಸ್ಟೇಟ್ಸ್ ನ ಅಲಾಸ್ಕಾದ ಗ್ಲೇಸಿಯರ್ ವ್ಯೂ ನಲ್ಲಿ ಆಚರಿಸುವ ಅತ್ಯಂತ ದೊಡ್ಡ ಹಬ್ಬವೆಂದೆ ಹೇಳಬಹುದು.

Continue Reading

ಪ್ರಮುಖ ಸುದ್ದಿ

Narendra Modi: ಬ್ರಿಟನ್‌ ನೂತನ ಪ್ರಧಾನಿ ಕೀರ್‌ ಸ್ಟಾರ್ಮರ್‌ಗೆ ಮೋದಿ ಕರೆ; ಭಾರತಕ್ಕೆ ಆಗಮಿಸುವಂತೆ ಮನವಿ!

Narendra Modi: ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ಲೇಬರ್ ಪಕ್ಷ ಜಯಭೇರಿ ಭಾರಿಸಿದೆ. ಲೇಬರ್‌ ಪಕ್ಷ 360 ಸ್ಥಾನಗಳನ್ನು ಗಳಿಸಿ ಮ್ಯಾಜಿಕ್‌ ನಂಬರ್‌ 320 ಅನ್ನು ದಾಟಿದೆ. ಹಾಗಾಗಿ, ಕೀರ್‌ ಸ್ಟಾರ್ಮರ್‌ ಅವರು ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: ಬ್ರಿಟನ್‌ ಸಂಸತ್‌ ಚುನಾವಣೆಯಲ್ಲಿ ಲೇಬರ್‌ ಪಕ್ಷವು (Labour Party) ಅಭೂತಪೂರ್ವ ಗೆಲುವು ಸಾಧಿಸಿದ್ದು, ಪಕ್ಷದ ವರಿಷ್ಠ ಕೀರ್‌ ಸ್ಟಾರ್ಮರ್‌ (Keir Starmer) ಅವರು ಬ್ರಿಟನ್‌ ಪ್ರಧಾನಿಯಾಗಿ (Britain PM) ಆಯ್ಕೆಯಾಗಿದ್ದಾರೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೀರ್‌ ಸ್ಟಾರ್ಮರ್‌ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಹಾಗೆಯೇ, ಭಾರತಕ್ಕೆ ಆಗಮಿಸುವಂತೆ ಮೋದಿ ಅವರು ಆಹ್ವಾನ ನೀಡಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.

“ನರೇಂದ್ರ ಮೋದಿ ಅವರು ಕೀರ್‌ ಸ್ಟಾರ್ಮರ್‌ ಅವರ ಜತೆ ಮಾತುಕತೆ ನಡೆಸುವಾಗ ಭಾರತ- ಬ್ರಿಟನ್‌ ದ್ವಿಪಕ್ಷೀಯ ಸಂಬಂಧ, ವ್ಯಾಪಾರ, ವ್ಯೂಹಾತ್ಮಕ ಸಹಭಾಗಿತ್ವ ಸೇರಿ ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿದರು. ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಗಟ್ಟಿಗೊಳಿಸುವ ಕುರಿತು ಕೂಡ ಉಲ್ಲೇಖಿಸಿದರು. ಇದಲ್ಲದೆ, ಎರಡೂ ದೇಶಗಳು ಹತ್ತಾರು ಕ್ಷೇತ್ರಗಳಲ್ಲಿ ಸಹಕಾರದಿಂದ ಕಾರ್ಯನಿರ್ವಹಿಸುವ ಕುರಿತು ಉಭಯ ನಾಯಕರು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದರು” ಎಂದು ಪಿಎಂಒ ಪ್ರಕಟಣೆ ತಿಳಿಸಿದೆ.

ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ಲೇಬರ್ ಪಕ್ಷ ಜಯಭೇರಿ ಭಾರಿಸಿದೆ. ಲೇಬರ್‌ ಪಕ್ಷ 360 ಸ್ಥಾನಗಳನ್ನು ಗಳಿಸಿ ಮ್ಯಾಜಿಕ್‌ ನಂಬರ್‌ 320 ಅನ್ನು ದಾಟಿದೆ. ಕನ್ಸರ್ವೇಟಿವ್‌ ಪಕ್ಷವು ಮುಖಭಂಗ ಅನುಭವಿಸಿದ್ದು, ಕೇವಲ 81 ಸ್ಥಾನಗಳನ್ನು ಪಡೆದಿದೆ. ಫಲಿತಾಂಶ ಪ್ರಕಟವಾಗುತ್ತಲೇ ರಿಷಿ ಸುನಕ್‌ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಭಾರತದ ಬಗ್ಗೆ ಸ್ಟಾರ್ಮರ್‌ ನಿಲುವೇನು?

ಜಾಗತಿಕ ಭದ್ರತೆ, ಹವಾಮಾನ ಭದ್ರತೆ ಮತ್ತು ಆರ್ಥಿಕ ಭದ್ರತೆಗೆ ಸಂಬಂಧಿಸಿದಂತೆ ಭಾರತದೊಂದಿಗೆ ಉತ್ತಮ ಬಾಂದವ್ಯ ಹೊಂದುವ ಬಗ್ಗೆ ಸ್ಟಾರ್ಮರ್‌ ತಮ್ಮ ಭಾಷಣದಲ್ಲಿ ಆಗಾಗ ಪ್ರಸ್ತಾಪಿಸುತ್ತಿರುತ್ತಾರೆ. ಚುನಾವಣಾ ಭಾಷಣದಲ್ಲಿ ಮಾತನಾಡುತ್ತಾ ಅವರು, ನಮ್ಮ ಲೇಬರ್‌ ಪಕ್ಷ ಅಧಿಕಾರಕ್ಕೆ ಬಂದರೆ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ. ಅಲ್ಲದೇ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ಬಯಸುತ್ತದೆ. ಜಾಗತಿಕ ಭದ್ರತೆ, ಹವಾಮಾನ ಭದ್ರತೆ, ಆರ್ಥಿಕ ಭದ್ರತೆಗಾಗಿ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಸಹ ಹಂಚಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: UK Election: ಬ್ರಿಟನ್‌ ಸಂಸತ್ತಿಗೆ 28 ಭಾರತೀಯ ಮೂಲದವರು ಆಯ್ಕೆ; ಈ ಪೈಕಿ 12 ಮಂದಿ ಸಿಖ್‌ ಸಮುದಾಯದವರು

Continue Reading
Advertisement
School Principal
ದೇಶ4 hours ago

School Principal: ಶಾಲೆಯಲ್ಲೇ ಮಹಿಳಾ ಟೀಚರ್‌ ಜತೆ ಪ್ರಿನ್ಸಿಪಾಲ್‌ ರೊಮ್ಯಾನ್ಸ್;‌ ವೈರಲ್‌ ಫೋಟೊ ಇಲ್ಲಿದೆ

WCPL 2024
ಪ್ರಮುಖ ಸುದ್ದಿ4 hours ago

WCPL 2024 : ಸಿಪಿಎಲ್​​ನ ಟ್ರಿನ್​ಬ್ಯಾಗೊ ರೈಡರ್ಸ್​ ತಂಡಕ್ಕೆ ಜೆಮಿಮಾ, ಶಿಖಾ ಸೇರ್ಪಡೆ

KRS Inflow
ದೇಶ5 hours ago

KRS Inflow: ಕೆಆರ್‌ಎಸ್‌ಗೆ ದಾಖಲೆಯ 11 ಸಾವಿರ ಕ್ಯುಸೆಕ್‌ ನೀರು ಒಳಹರಿವು; ಸೋಮವಾರದಿಂದ ನಾಲೆಗಳಿಗೆ ನೀರು

Abhishek Sharma
ಕ್ರೀಡೆ5 hours ago

Abhishek Sharma : 47 ಎಸೆತಕ್ಕೆ ಶತಕ ಬಾರಿಸಿ ಹಲವಾರು ದಾಖಲೆ ಮುರಿದಿ ಅಭಿಷೇಕ್​ ಶರ್ಮಾ

Dengue Scare
ಕರ್ನಾಟಕ5 hours ago

Dengue Scare: ಸರ್ಕಾರದಿಂದಲೇ ಉಚಿತವಾಗಿ ಡೆಂಗ್ಯೂ ಪರೀಕ್ಷೆ ಮಾಡಿಸಲಿ; ಆರ್.‌ ಅಶೋಕ್‌ ಆಗ್ರಹ

World Biryani Day:
ಪ್ರಮುಖ ಸುದ್ದಿ6 hours ago

World Biryani Day : ಕೋಲ್ಕತಾ, ಹೈದರಾಬಾದ್ ಬಿರಿಯಾನಿ ತಿಂದಿರಬಹುದು; ಇವುಗಳ ಹಿನ್ನೆಲೆ ಗೊತ್ತಾ?

Accident
Latest6 hours ago

Accident: ಟೆರೇಸ್ ಮೇಲೆ ನಿಂತು ಜಗಳ ನೋಡುತ್ತಿದ್ದ ಮಹಿಳೆಗೇ ಬಿತ್ತು ಗುಂಡೇಟು!

Puri Jagannath Rath Yatra
ಪ್ರಮುಖ ಸುದ್ದಿ6 hours ago

Puri Jagannath Rath Yatra: ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ, ಒಬ್ಬನ ಸಾವು, 400 ಭಕ್ತರಿಗೆ ಗಾಯ!

NIA Arrest
ದೇಶ7 hours ago

NIA Arrest: ಹಿಜ್ಬುಲ್‌, LeT ಉಗ್ರ ಸಂಘಟನೆಗಳ ಜೊತೆ ನಂಟು; ಪ್ರಮುಖ ಆರೋಪಿ ಅರೆಸ್ಟ್‌

Elephant attack car in Kodagu‌ four people escape
ಕೊಡಗು7 hours ago

Elephant attack :ಕಾರಿನ ಮೇಲೆ ಕಾಡಾನೆ ದಾಳಿ; ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ8 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ11 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ12 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ22 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ1 day ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ2 days ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ2 days ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

ಟ್ರೆಂಡಿಂಗ್‌