ತಾಯಿಗೆ ಆದ ವಂಚನೆಯೇ ಹತ್ಯೆಗೆ ಕಾರಣ, ಆದ್ರೆ ಟಾರ್ಗೆಟ್‌ ಶಿಂಜೊ ಅಬೆ ಆಗಿರಲಿಲ್ಲ: ಹಂತಕ ಬಿಚ್ಚಿಟ್ಟ ಸತ್ಯ! - Vistara News

ವಿದೇಶ

ತಾಯಿಗೆ ಆದ ವಂಚನೆಯೇ ಹತ್ಯೆಗೆ ಕಾರಣ, ಆದ್ರೆ ಟಾರ್ಗೆಟ್‌ ಶಿಂಜೊ ಅಬೆ ಆಗಿರಲಿಲ್ಲ: ಹಂತಕ ಬಿಚ್ಚಿಟ್ಟ ಸತ್ಯ!

ಯಮಗಾಮಿ ಟೆಟ್ಸುಯಾ ಈ ಹಿಂದೆ ಕೂಡ ಶಿಂಜೊ ಅಬೆಯನ್ನು ಹಿಂಬಾಲಿಸಿದ್ದ. ಅಷ್ಟಾದರೂ ಅವರನ್ನು ಕೊಲ್ಲುವ ಇಂಗಿತವೇನೂ ಇರಲಿಲ್ಲವಂತೆ.

VISTARANEWS.COM


on

Tetsuya Yamagami
ಅಬೆ ಹಂತಕನನ್ನು ಸೆರೆ ಹಿಡಿದ ಕ್ಷಣ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಟೋಕಿಯೋ: ಜಪಾನ್‌ ಮಾಜಿ ಪ್ರಧಾನಿ ಶಿಂಜೊ ಅಬೆಯನ್ನು ಕೊಂದ ಯಮಗಾಮಿ ಟೆಟ್ಸುಯಾ ಟಾರ್ಗೆಟ್‌ ವಾಸ್ತವದಲ್ಲಿ ಶಿಂಜೊ ಆಗಿರಲೇ ಇಲ್ಲವಂತೆ. ಈ ವಿಚಾರವನ್ನು ಜಪಾನ್‌ನ ಕ್ಯುಡೊ ನ್ಯೂಸ್‌ ವರದಿ ಮಾಡಿದೆ. ಯಮಗಾಮಿ ಟೆಟ್ಸುಯಾ ಜು.8ರಂದು ಅಬೆಯವರಿಗೆ ಗುಂಡು ಹಾರಿಸಿದ್ದಾನೆ. ಅಷ್ಟಾದ ಮೇಲೆ ಆತ ಓಡಿಹೋಗುವ ಪ್ರಯತ್ನವನ್ನೂ ಮಾಡಲಿಲ್ಲ. ಗನ್‌ ಹಿಡಿದು ಹಾಗೇ ನಿಂತಿದ್ದ. ಪೊಲೀಸರು ಆತನನ್ನು ಎಳೆದುಕೊಂಡು ಹೋಗಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ನನಗೆ ಜಪಾನ್‌ ಮಾಜಿ ಪ್ರಧಾನಮಂತ್ರಿಯನ್ನು ಕೊಲ್ಲುವ ಉದ್ದೇಶ ಮೊದಲು ಇರಲಿಲ್ಲ ಎಂದು ಹೇಳಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಂದಹಾಗೇ, ಈ ಹಂತಕನ ಟಾರ್ಗೆಟ್‌ ಆಗಿದ್ದಿದ್ದು ಧಾರ್ಮಿಕ ಗುಂಪೊಂದರ ನಾಯಕ. ʼಆ ಧಾರ್ಮಿಕ ಮುಖಂಡ ನನ್ನ ಅಮ್ಮನನ್ನು ವಂಚಿಸಿದ್ದ. ಹಾಗಾಗಿ ಅವನನ್ನು ಕೊಲ್ಲುವುದು ನನ್ನ ಪರಮೋದ್ದೇಶವಾಗಿತ್ತು. ಆದರೆ ಅದು ಸಾಧ್ಯವಾಗದೆ ಹತಾಶೆಗೆ ಒಳಗಾಗಿದ್ದೆ. ಅಷ್ಟೇ ಅಲ್ಲ, ಆ ನಾಯಕನ ಧಾರ್ಮಿಕ ಸಂಘಟನೆಯನ್ನು ಶಿಂಜೊ ಅಬೆ ತನ್ನ ಆಡಳಿತದ ಅವಧಿಯಲ್ಲಿ ತೀವ್ರವಾಗಿ ಬೆಂಬಲಿಸಿದ್ದರು. ಧಾರ್ಮಿಕ ಗುಂಪಿಗೆ ಸಿಕ್ಕಾಪಟೆ ಮಹತ್ವ ಕೊಟ್ಟಿದ್ದರು. ಆ ಸಿಟ್ಟು ಅಬೆ ಮೇಲೆ ಇತ್ತು. ಅಷ್ಟಾದರೂ ಅಬೆಯನ್ನು ಕೊಲ್ಲಲೇಬೇಕು ಎಂಬ ಮಹದಾಸೆಯೂ ನನಗೆ ಇರಲಿಲ್ಲ. ಈ ಹಿಂದೆ ಶಿಂಜೊ ಅಬೆ ಭಾಷಣ ಮಾಡಿದ ಒಂದೆರಡು ಜಾಗಕ್ಕೂ ಭೇಟಿ ನೀಡಿದ್ದೆ. ನನಗೆ ಆ ಧಾರ್ಮಿಕ ಮುಖಂಡನ ಮೇಲಿದ್ದ ಸಿಟ್ಟು ಶಿಂಜೊ ಮೇಲೆ ತಿರುಗಿತು. ಹಾಗಾಗಿ ದಾಳಿ ಮಾಡಿದ್ದೆʼ ಎಂದು ಯಮಗಾಮಿ ಪೊಲೀಸರಿಗೆ ಹೇಳಿದ್ದಾಗಿ ವರದಿಯಾಗಿದೆ.

ಶುಕ್ರವಾರ ಬೆಳಗ್ಗೆ ಶಿಂಜೊ ಅಬೆ ನಾರಾ ಎಂಬ ನಗರದಲ್ಲಿ ಚುನಾವಣೆ ಭಾಷಣ ಮಾಡುತ್ತಿದ್ದಾಗ, ಯಮಗಾಮಿ ಗುಂಡಿನ ದಾಳಿ ನಡೆಸಿದ್ದ. ಈತ ಕೂಡ ನಾರಾ ನಿವಾಸಿಯೇ ಆಗಿದ್ದಾನೆ. ಯಮಗಾಮಿಯನ್ನು ಬಂಧಿಸಿದ ಬಳಿಕ ಪೊಲೀಸರು ಆತನ ಮನೆಯಲ್ಲೂ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ಅದನ್ನೂ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶಿಂಜೊ ಅಬೆ ಸಾವು ಸಂಭ್ರಮಿಸಿದ ಚೀನಾ ಪ್ರಜೆಗಳು; ಈಗಿನ ಪ್ರಧಾನಿ ಸರದಿ ಯಾವಾಗ ಎಂಬ ಪ್ರಶ್ನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Rupert Murdoch: ಮಾಧ್ಯಮ ಲೋಕದ ದೊರೆಗೆ ಐದನೇ ಮದುವೆ; 93ನೇ ವಯಸ್ಸಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ರೂಪರ್ಟ್ ಮುರ್ಡೋಕ್

Rupert Murdoch:ಜೂನ್ 1 ರಂದು ರೂಪರ್ಟ್ ಮುರ್ಡೋಕ್ ತಮ್ಮ ಕ್ಯಾಲಿಫೋರ್ನಿಯಾದ ವೈನ್‌ಯಾರ್ಡ್ ಮತ್ತು ಎಸ್ಟೇಟ್ ಮೊರಾಗದಲ್ಲಿ 62 ವರ್ಷದ ಎಲೆನಾ ಝುಕೋವಾ ಅವರನ್ನು ವಿವಾಹವಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಎಲೆನಾ ನಿವೃತ್ತ ಜೀವಶಾಸ್ತ್ರಜ್ಞೆ ಎಂದು ಹೇಳಲಾಗಿದೆ. ಅಲ್ಲದೆ ರಷ್ಯಾ ಮೂಲದವರಾದ ಅವರು ಅಮೆರಿಕಾಗೆ ವಲಸೆ ಬಂದಿದ್ದಾರೆ.

VISTARANEWS.COM


on

Rupert Murdoch
Koo

ಅಮೆರಿಕ: ಮಾಧ್ಯಮ ಲೋಕದ ಅನಭಿಷಿಕ್ತ ದೊರೆ ರೂಪರ್ಟ್ ಮುರ್ಡೋಕ್(Rupert Murdoch) ತಮ್ಮ 93ನೇ ವಯಸ್ಸಿನಲ್ಲಿ ಐದನೇ ಮದುವೆ ಮಾಡಿಕೊಂಡಿದ್ದಾರೆ. ತಮ್ಮ ಇಳಿವಯಸ್ಸಿನಲ್ಲಿ ರಷ್ಯಾ(Russia) ಮೂಲದ 67 ವರ್ಷದ ಎಲೆನಾ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದು, ಅಮೆರಿಕಾದ ಕ್ಯಾಲಿಫೋರ್ನಿಯ(California)ದಲ್ಲಿರುವ ಅವರ ಫಾರ್ಮ್ ಹೌಸ್ ನಲ್ಲಿ ಈ ವಿವಾಹ ಸಮಾರಂಭ ನೆರವೇರಿದೆ. ಈ ಸಂದರ್ಭದಲ್ಲಿ ಆತ್ಮೀಯರು ಹಾಗೂ ಹತ್ತಿರದ ಸಂಬಂಧಿಗಳು ಉಪಸ್ಥಿತರಿದ್ದರು.

ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇಬ್ಬರ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಆದರೆ ಬಹುತೇಕರು ಇದು ಸುಳ್ಳು ಸುದ್ದಿ ಎಂದೇ ನಂಬಿದ್ದರು. ಆದರೆ ಇದೀಗ ಜೂನ್ 1ರಂದು ಈ ಜೋಡಿ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. ಜೂನ್ 1 ರಂದು ತಮ್ಮ ಕ್ಯಾಲಿಫೋರ್ನಿಯಾದ ವೈನ್‌ಯಾರ್ಡ್ ಮತ್ತು ಎಸ್ಟೇಟ್ ಮೊರಾಗದಲ್ಲಿ 62 ವರ್ಷದ ಎಲೆನಾ ಝುಕೋವಾ ಅವರನ್ನು ವಿವಾಹವಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಎಲೆನಾ ನಿವೃತ್ತ ಜೀವಶಾಸ್ತ್ರಜ್ಞೆ ಎಂದು ಹೇಳಲಾಗಿದೆ. ಅಲ್ಲದೆ ರಷ್ಯಾ ಮೂಲದವರಾದ ಅವರು ಅಮೆರಿಕಾಗೆ ವಲಸೆ ಬಂದಿದ್ದಾರೆ.

ಮುರ್ಡೋಕ್ ಅವರ ಮೂರನೇ ಪತ್ನಿ ವೆಂಡಿ ಡೆಂಗ್ ಮೂಲಕ ನೂತನ ದಂಪತಿಯ ಸಂಬಂಧವು ಪ್ರಾರಂಭವಾಯಿತು. 1991 ರಲ್ಲಿ ಮಾಸ್ಕೋದಿಂದ ಅಮೆರಿಕಗೆ ವಲಸೆ ಬಂದ ನಿವೃತ್ತ ಆಣ್ವಿಕ ಜೀವಶಾಸ್ತ್ರಜ್ಞ ಝುಕೋವಾ ಅವರು ಹಿಂದೆ ಬಿಲಿಯನೇರ್ ಇಂಧನ ಹೂಡಿಕೆದಾರ ಅಲೆಕ್ಸಾಂಡರ್ ಝುಕೋವ್ ಅವರನ್ನು ವಿವಾಹವಾಗಿದ್ದರು. ಆಗಾಗ ಇಬ್ಬರು ಕೆಲವು ಪ್ರಸಿದ್ಧ ಹೋಟೆಲ್‌ಗಳು, ಹಾಲಿಡೆ ಡೆಸ್ಟಿನೇಷನ್‌ಗಳಲ್ಲಿ ಕಂಡುಬಂದಿದ್ದರು.

ಆರು ಮಕ್ಕಳನ್ನು ಹೊಂದಿರುವ ರೂಪರ್ಟ್ ಮುರ್ಡೋಕ್ ಮೊದಲಿಗೆ ಆಸ್ಟ್ರೇಲಿಯನ್ ಫ್ಲೈಟ್ ನಲ್ಲಿ ಪರಿಚಾರಿಕೆಯಾಗಿದ್ದ ಪೆಟ್ರಿಷಿಯಾ ಜೊತೆ ಮದುವೆಯಾಗಿದ್ದು, 1960ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. ಆ ಬಳಿಕ ಅನ್ನಾ ಎಂಬ ವರದಿಗಾರ್ತಿಯನ್ನು ರೂಪರ್ಟ್ ಮುರ್ಡೂಕ್ ಮದುವೆ ಮಾಡಿಕೊಂಡಿದ್ದು ಅವರೊಂದಿಗೆ ಸುಧೀರ್ಘ 30 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿ 1999 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಮುರ್ಡೂಕ್ ಅವರ ಮೂರನೇ ಮದುವೆ 2013ರಲ್ಲಿ ಮುರಿದು ಬಿದ್ದಿತ್ತು. ಮಾಡೆಲ್ ಜೆರ್ರಿ ಜೊತೆ ನಾಲ್ಕನೇ ಬಾರಿಗೆ ಮದುವೆಯಾಗಿದ್ದ ರೂಪರ್ಟ್ ಮುರ್ಡೋಕ್ ಬಳಿಕ ವಿಚ್ಛೇದನ ಪಡೆದುಕೊಂಡಿದ್ದು, ವಾಲ್ ಸ್ಟ್ರೀಟ್ ಜರ್ನಲ್, ಫಾಕ್ಸ್ ನ್ಯೂಸ್ ನಂತಹ ಬಹುದೊಡ್ಡ ಮಾಧ್ಯಮ ಸಂಸ್ಥೆಗಳ ಒಡೆಯರಾಗಿರುವ ಮುರ್ಡೋಕ್ ಈಗ ಐದನೇ ಮದುವೆ ಮಾಡಿಕೊಂಡಿದ್ದಾರೆ.

ಯಾರು ಈ ರೂಪರ್ಟ್ ಮುರ್ಡೋಕ್?

ರೂಪರ್ಟ್ ಮುರ್ಡೋಕ್ ದಿ ವಿಲ್ ಸ್ಟ್ರೀಟ್ ಜರ್ನಲ್, ದಿ ಸನ್, ದಿ ಟೈಮ್ಸ್, ನ್ಯೂಯಾರ್ಕ್ ಪೋಸ್ಟ್, ಹೆರಾಲ್ಡ್ ಸನ್ ಮತ್ತು ದಿ ಡೈಲಿ ಟೆಲಿಗ್ರಾಫ್ ಇತರೆ ಪ್ರಸಿದ್ಧ ಸುದ್ದಿ ಮಾಧ್ಯಮಗಳ ಒಡೆಯರಾಗಿದ್ದರು. ಇವರು ಪೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 2022ರಲ್ಲಿ 31ನೇ ಸ್ಥಾನ ಪಡೆದಿದ್ದರು. ರೂಬರ್ಟ್ ಮುರ್ಡೋಕ್ ಅವರ ನಿವ್ವಳ ಆಸ್ತಿ ಮೌಲ್ಯವು 21.7 ಬಿಲಿಯನ್ ಡಾಲರ್ ಆಗಿದೆ. ಆಸ್ಟ್ರೇಲಿಯಾದಲ್ಲಿ 1952 ರಲ್ಲಿ ತನ್ನ ತಂದೆಯಿಂದ ವಾರ್ತಾಪತ್ರಿಕೆಯನ್ನು ಪಡೆದ ಮುರ್ಡೋಕ್ ತನ್ನ ಸಾಮ್ರಾಜ್ಯವನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್‌ಗೂ ವಿಸ್ತರಿಸಿದ್ದರು. ಮುರ್ಡೋಕ್ 1996ರಲ್ಲಿ ಫಾಕ್ಸ್ ನ್ಯೂಸ್ ಚಾನೆಲ್ ಅನ್ನು ಸ್ಥಾಪಿಸಿದರು. ಬಳಿಕ ಫಾಕ್ಸ್ ನ್ಯೂಸ್ ಸಂಸ್ಥೆ ದೊಡ್ಡ ಜಾಲವಾಗಿ ಹರಡಿತು. ಫಾಕ್ಸ್ ನ್ಯೂಸ್‌ನ ಪೋಷಕ ಕಂಪನಿ ಮತ್ತು ನ್ಯೂಸ್ ಕಾರ್ಪೊರೇಷನ್‌ನ ಹುದ್ದೆಗಳಿಂದ ಅವರು ನಿವೃತ್ತಿ ಪಡೆದರು. ಬಳಿಕ ಅವರ ಪುತ್ರ ಲಾಚ್ಲಾನ್ ಮುರ್ಡೋಕ್, ಆಧುನಿಕತೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದ ವ್ಯವಹಾರದ ನಿಯಂತ್ರಣವನ್ನು ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ:Lok Sabha Election 2024: ವಿಜಯೋತ್ಸವಕ್ಕೆ ಬಿಜೆಪಿ ಪ್ಲ್ಯಾನ್‌ ಹೇಗಿದೆ? ಈಗಿನಿಂದಲೇ ಶುರು ಭರ್ಜರಿ ತಯಾರಿ

Continue Reading

ವಿದೇಶ

Shootout: ಬರ್ತ್‌ ಡೇ ಪಾರ್ಟಿಯಲ್ಲಿ ಭಾರೀ ಶೂಟೌಟ್‌-27 ಮಂದಿಗೆ ಗುಂಡೇಟು

Shootout: ಓಹಿಯೋ ರಾಜ್ಯದ ಅಕ್ರಾನ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಇಲ್ಲಿನ ಕೆಲ್ಲಿ ರಸ್ತೆಯಲ್ಲಿರುವ ಮನೆಯೊಂದರಲ್ಲಿ ರಾತ್ರಿ 10 ಗಂಟೆಗೆ ಬರ್ತ್‌ ಡೇ ಪಾರ್ಟಿವೊಂದನ್ನು ಆಯೋಜಿಸಲಾಗಿತ್ತು. ಹೀಗಾಗಿ ಸುಮಾರು 200ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮನೆಯ ಎದುರುಗಡೆ ಇರುವ ರಸ್ತೆಯಲ್ಲಿ ಜನ ಕಿಕ್ಕಿರಿದಿದ್ದ ಹಿನ್ನೆಲೆ ಟ್ರಾಫಿಕ್‌ ಸಮಸ್ಯೆಯೂ ಉಂಟಾಗಿತ್ತು ಹೀಗಾಗಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಸ್ತೆ ಕ್ಲಿಯರ್‌ ಮಾಡುವಂತೆ ಸೂಚಿಸಿದ್ದರು. ಇದಾದ ಬಳಿಕ ಅವರು ಅಲ್ಲಿಂದ ತೆರಳಿದ್ದರು.

VISTARANEWS.COM


on

Shootout
Koo

ಅಕ್ರಾನ್‌ : ಕೆಲವೊಮ್ಮೆ ಸಣ್ಣ ಪುಟ್ಟ ಗಲಾಟೆ ಜಗಳ, ಕೋಪ, ಎಡವಟ್ಟಿನಿಂದಾಗಿ ಅದೆಂಥಾ ದೊಡ್ಡ ಸಂಭ್ರಮಾಚರಣೆ ಆಗಿದ್ದರೂ ಅದನ್ನು ಒಂದು ಕ್ಷಣದಲ್ಲಿ ಸ್ಮಶಾನವನ್ನಾಗಿಸಿ ಬಿಡುತ್ತದೆ. ಅಂತಹದ್ದೇ ಒಂದು ಘಟನೆ ಅಮೆರಿಕದ ಓಹಿಯೋ ರಾಜ್ಯದಲ್ಲಿ ನಡೆದಿದೆ. ಸಂಭ್ರಮದಿಂದ ನಡೆಯುತ್ತಿದ್ದ ಬರ್ತ್‌ ಡೇ ಪಾರ್ಟಿ(Birthday Party) ದುರಂತ ಅಂತ್ಯ ಕಂಡಿದೆ. ಏಕಾಏಕಿ ಶೂಟೌಟ್‌(Shootout) ನಡೆದಿದ್ದು, ಬರೋಬ್ಬರಿ 27 ಮಂದಿಗೆ ಗುಂಡೇಟು ಬಿದ್ದಿದೆ. ಇನ್ನು ಈ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಘಟನೆ ವಿವರ:

ಓಹಿಯೋ ರಾಜ್ಯದ ಅಕ್ರಾನ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಇಲ್ಲಿನ ಕೆಲ್ಲಿ ರಸ್ತೆಯಲ್ಲಿರುವ ಮನೆಯೊಂದರಲ್ಲಿ ರಾತ್ರಿ 10 ಗಂಟೆಗೆ ಬರ್ತ್‌ ಡೇ ಪಾರ್ಟಿವೊಂದನ್ನು ಆಯೋಜಿಸಲಾಗಿತ್ತು. ಹೀಗಾಗಿ ಸುಮಾರು 200ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮನೆಯ ಎದುರುಗಡೆ ಇರುವ ರಸ್ತೆಯಲ್ಲಿ ಜನ ಕಿಕ್ಕಿರಿದಿದ್ದ ಹಿನ್ನೆಲೆ ಟ್ರಾಫಿಕ್‌ ಸಮಸ್ಯೆಯೂ ಉಂಟಾಗಿತ್ತು ಹೀಗಾಗಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಸ್ತೆ ಕ್ಲಿಯರ್‌ ಮಾಡುವಂತೆ ಸೂಚಿಸಿದ್ದರು. ಇದಾದ ಬಳಿಕ ಅವರು ಅಲ್ಲಿಂದ ತೆರಳಿದ್ದರು. ಇದಾದ ಕೆಲವೇ ಹೊತ್ತಲ್ಲಿ ಸ್ಥಳದಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಪೊಲೀಸರಿಗೆ ಬ್ಯಾಕ್‌ ಟು ಬ್ಯಾಕ್‌ ಕರೆಗಳು ಹೋಗಿವೆ. ಸ್ಥಳಕ್ಕೆ ಬಂದು ನೋಡಿದಾಗ 25ಜನ ಗುಂಡೇಟು ತಗುಲಿ ಗಂಭಿರವಾಗಿ ಗಾಯಗೊಂಡು ಸ್ಥಳದಲ್ಲೇ ಜೀವನ್ಮರಣದ ನಡುವೆ ಹೋರಾಡುತ್ತಿದ್ದರು.

ಇನ್ನು ಘಟನೆಯಲ್ಲಿ 27ವರ್ಷದ ಒಬ್ಬ ಯುವಕ ಮೃತಪಟ್ಟಿದ್ದು, ನಾಲ್ವರ ಸ್ಥಿತಿ ಬಹಳ ಗಂಭೀರವಾಗಿದೆ. ಇನ್ನು ಎಲ್ಲಾ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ, ರೈಫಲ್‌ನಿಂದ ಕೇಸಿಂಗ್‌ಗಳು ಸೇರಿದಂತೆ ಎರಡು ಬಂದೂಕುಗಳು ಮತ್ತು ಅನೇಕ ರೀತಿಯ ಶೆಲ್ ಕೇಸಿಂಗ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Parvathi Menon: ಸದ್ದಿಲ್ಲದೇ ಮದುವೆಯಾದ್ರಾ ʻಮಿಲನʼ ನಾಯಕಿ ಪಾರ್ವತಿ ಮೆನನ್?

Continue Reading

ಲೈಫ್‌ಸ್ಟೈಲ್

Ways To Stay Young: ಸಮುದ್ರದಾಳದಲ್ಲಿ ದಿನ ಕಳೆದರೆ ಇಳಿ ವಯಸ್ಸಲ್ಲೂ ಯೌವನ ಮರಳಿ ಬರುತ್ತದೆ!

93 ದಿನಗಳ ಕಾಲ ಸಮುದ್ರದಾಳದಲ್ಲಿ ವಾಸಿಸಿದ್ದರಿಂದ ನೌಕಾಪಡೆ ನಿವೃತ್ತ ಅಧಿಕಾರಿ ವಯಸ್ಸಿನಲ್ಲಿ ಸುಮಾರು ಹತ್ತು ವರ್ಷಗಳಷ್ಟು ಹಿಂದೆ ಹೋಗಿದ್ದಾರಂತೆ. ಅಂದರೆ, ಹತ್ತು ವರ್ಷಗಳಷ್ಟು ಹಿಂದಿನ ದೈಹಿಕ ಆರೋಗ್ಯ ಇವರಿಗೆ ಮರುಕಳಿಸಿದ್ದು, ಇದರಿಂದ ಸಾಗರದಾಳದಲ್ಲಿ ವಾಸಿಸುವ ಮೂಲಕ ಯೌವನವನ್ನು ಮರಳಿ ಪಡೆಯಬಹುದು ಎಂದು ಇವರು (Ways To Stay Young) ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ.

VISTARANEWS.COM


on

Ways To Stay Young
Koo

56 ವರ್ಷದ ನಿವೃತ್ತ ನೌಕಾದಳದ ಅಧಿಕಾರಿ ಜೋಸೆಫ್‌ ಡಿಟೂರಿ ಇತ್ತೀಚೆಗೆ 93 ದಿನಗಳ ಕಾಲ ಅಟ್ಲಾಂಟಿಕ್‌ ಸಮುದ್ರದಾಳದಲ್ಲಿ ವಾಸಿಸುವ ಮೂಲಕ ಜಗತ್ತನ್ನು ನಿಬ್ಬೆರಗಾಗಿಸಿದ್ದಾರೆ. ಅಷ್ಟೇ ಅಲ್ಲ, ಸಾಗರದಾಳದಲ್ಲಿ ಜೀವಿಸುವುದರಿಂದ ತಮ್ಮ ವಯಸ್ಸನ್ನೂ ಕಡಿಮೆಗೊಳಿಸಿರುವುದು ಇಲ್ಲಿ ಅಚ್ಚರಿಯ ವಿಷಯ.
ಹೌದು. ಒತ್ತಡದ ಪಾಡ್‌ ಒಂದರೊಳಗೆ 93 ದಿನಗಳ ಕಾಲ ಸಮುದ್ರದಾಳದಲ್ಲಿ ವಾಸಿಸಿದ್ದರಿಂದ ಸುಮಾರು ಹತ್ತು ವರ್ಷಗಳಷ್ಟು ವಯಸ್ಸಿನಲ್ಲಿ ಇವರು ಹಿಂದೆ ಹೋಗಿದ್ದಾರಂತೆ. ಅಂದರೆ, ಹತ್ತು ವರ್ಷಗಳಷ್ಟು ಹಿಂದಿನ ದೈಹಿಕ ಆರೋಗ್ಯ ಇವರಿಗೆ ಮರುಕಳಿಸಿದ್ದು, ಇದರಿಂದ ಸಾಗರದಾಳದಲ್ಲಿ ವಾಸಿಸುವ ಮೂಲಕ ಯೌವನವನ್ನು ಮರಳಿ ಪಡೆಯಬಹುದು ಎಂದು (Ways To Stay Young) ಇವರು ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ.

man spends 93 days under atlantic sea becomes 10 years younger

ದಾಖಲೆ ಅಷ್ಟೇ ಅಲ್ಲ

ಸಮುದ್ರದಾಳದಲ್ಲಿ 93 ದಿನಗಳ ಕಾಲ ಜೀವಿಸುವ ಮೂಲಕ ದಾಖಲೆ ಬರೆಯುವುದಷ್ಟೇ ಅಲ್ಲ, ಮಾನಸಿಕವಾಗಿ, ದೈಹಿಕವಾಗಿ, ಮತ್ತಷ್ಟು ಆರೋಗ್ಯವಂತರಾಗಿ, ಉಲ್ಲಾಸದಾಯಕ ವ್ಯಕ್ತಿಯಾಗಿ ಹೊರ ಜಗತ್ತಿಗೆ ಮರಳಿದ್ದಾರೆ. ಒತ್ತಡದ ಪಾಡ್‌ ಒಂದರಲ್ಲಿ ಸಮುದ್ರದಾಳದಲ್ಲಿ ಜೀವಿಸಿದ ಕಾರಣ, ಮನುಷ್ಯನ ದೇಹದ ಮೇಲೆ ಇದು ಬೀರುವ ಪರಿಣಾಮ ಇತ್ಯಾದಿಗಳನ್ನು ಡಿಟೂರಿ ಅವರು ಜಗತ್ತಿಗೆ ಸಾಬೀತುಪಡಿಸಿ ತೋರಿಸಿದ್ದಾರೆ. ಹೊರ ಬಂದ ಮೇಲೆ ಅವರ ಮೇಲೆ ನಡೆದ ಸಾಕಷ್ಟು ವೈದ್ಯಕೀಯ ಪರೀಕ್ಷೆಗಳು, ಈತ ಸಾಬೀತುಪಡಿಸಿದ ವಿಚಾರಗಳನ್ನು ಅಧಿಕೃತಗೊಳಿಸಿದ್ದು, ಮಾನಸಿಕ ಹಾಗೂ ದೈಹಿಕ ಆರೋಗ್ಯದ ವಿಚಾರದಲ್ಲಿ 93 ದಿನಗಳಲ್ಲಿ ಡಿಟೂರಿ ಅವರು 10 ವರ್ಷಗಳಷ್ಟು ಯೌವನವನ್ನು ಮರಳಿ ಪಡೆದಿದ್ದಾರೆ ಎಂದು ದೃಢಪಡಿಸಿವೆ. ವೈದ್ಯಕೀಯ ಪರೀಕ್ಷೆಗಳ ಪ್ರಕಾರ, ಡಿಟೂರಿ ಅವರ ಸ್ಟೆಮ್‌ ಸೆಲ್‌ (ಕಾಂಡ ಕೋಶ)ಗಳು ಗಣನೀಯವಾಗಿ ಏರಿದ್ದು, ಕೊಲೆಸ್ಟೆರಾಲ್‌ ಮಟ್ಟವು 72 ಪಾಯಿಂಟ್‌ಗಳಷ್ಟು ಕೆಳಗಿಳಿದಿವೆ. ದೇಹದಲ್ಲಿದ್ದ ಇತರ ಯುರಿಯೂತದ ಲಕ್ಷಣಗಳೂ ಕಡಿಮೆಯಾಗಿವೆ. ನಿದ್ದೆಯ ಗುಣಮಟ್ಟದಲ್ಲಿ ಗಣನೀಯ ಸುಧಾರಣೆಯಾಗಿದ್ದು, ಮುಖ್ಯವಾಗಿ ರಾತ್ರಿಯ ಗಾಢ ನಿದ್ದೆಯ ಗುಣಮಟ್ಟ ಶೇ.೬೦ರಷ್ಟು ಏರಿಕೆಯಾಗಿದೆ. ಸಾಮಾನ್ಯವಾಗಿ ಪ್ರತಿ ವ್ಯಕ್ತಿಯ ವರ್ಣತಂತುಗಳು ವಯಸ್ಸಾದ ಹಾಗೆ ಚಿಕ್ಕದಾಗುತ್ತಾ ಬರುವುದರಿಂದ, ಇಲ್ಲಿ, ಡಿಟೂರಿ ಅವರ ವರ್ಣತಂತು ಶೇ.೨೦ರಷ್ಟು ಉದ್ದವಾಗಿದ್ದು, ಇದು ಯೌವನವನ್ನು 10 ವರ್ಷಗಳಷ್ಟು ಮರಳಿಸಿದೆ ಎಂದು ವೈದ್ಯಕೀಯ ಪರೀಕ್ಷೆಗಳಿಂದ ತಿಳಿದುಬಂದಿದೆ.

ಆರೋಗ್ಯ ಸುಧಾರಣೆ

ಡಿಟೂರಿ ಅವರ ಮಿದುಳಿನ ಆರೋಗ್ಯ ಕೂಡಾ ಸಾಕಷ್ಟು ಸುಧಾರಿಸಿದ್ದು, ಅವರು ಮತತೆ ಲವಲವಿಕೆಯಿಂದ ಜೀವನೋತ್ಸಾಹದಿಂದ ಮರಳಿ ಬಂದಿರುವುದು ವಿಶೇಷ. ಸಮುದ್ರದಾಳದಲ್ಲಿ ಹೈಪರ್‌ಬಾರಿಕ್‌ ಚೇಂಬರ್‌ ಒಳಗೆ ಅವರು 93 ದಿನಗಳ ಕಾಲ ಉಳಿದುಕೊಂಡಿದ್ದು, ಇದು ಅವರ ಒಟ್ಟಾರೆ ಆರೋಗ್ಯಕ್ಕೆ ಭಾರೀ ಸಕಾರಾತ್ಮಕ ಪರಿಣಾಮ ಬೀರಿದೆ. ಡಿಟೂರಿ ಅವರೇ ಹೇಳುವಂತೆ, 100 ಚದರ ಅಡಿಯ ಚೇಂಬರ್‌ ಒಳಗೆ ಸಮುದ್ರದಾಳದಲ್ಲಿ ಜೀವಿಸುವ ಸಂದರ್ಭದಲ್ಲಿ ವಾರಕ್ಕೆ ಐದು ದಿನಗಳ ಕಾಲ ಪ್ರತಿ ನಿತ್ಯವೂ ಒಂದು ಗಂಟೆಗಳ ಕಾಲ ವ್ಯಾಯಾಮ ಇತ್ಯಾದಿಗಳನ್ನು ಅವರು ಮಾಡಿದ್ದಾರೆ. ದೈಹಿಕ, ಮಾನಸಿಕ ಆರೋಗ್ಯ ಸದೃಢವಾಗಿರಲು ಹೊರಗೆ ನೆಲದ ಮೇಲಿದ್ದಾಗ ಮಾಡುವ ವ್ಯಾಯಾಮಗಳನ್ನು ಮಾಡಿದ್ದಾರೆ. ಈ ಶಿಸ್ತನ್ನು ಪಾಲಿಸಿದ್ದೂ ಕೂಡಾ ಈ ಆರೋಗ್ಯ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ICMR Guidelines: ಶಿಶು ಆಹಾರ ಹೇಗಿರಬೇಕು? ಐಸಿಎಂಆರ್‌ ಮಾರ್ಗಸೂಚಿ ಹೀಗಿದೆ

ಸಕಾರಾತ್ಮಕ ಪರಿಣಾಮ

ಜನರು ಪ್ರವಾಸಕ್ಕಾಗಿ ಆಗಾಗ ಹೊರಗೆ ತಿರುಗಾಡಿ ಬರುವ ಬದಲು ಹೀಗೆ ಎರಡು ವಾರಗಳ ಕಾಲ ಸಮುದ್ರದಾಳದಲ್ಲಿ ಕಳೆಯಬಹುದು. ಇದು ದೇಹಾರೋಗ್ಯಕ್ಕೆ, ಮಾನಸಿಕ ಆರೋಗ್ಯಕ್ಕೆ ಕೊಡುವ ಸಕಾರಾತ್ಮಕ ಪರಿಣಾಮವನ್ನು ಅನುಭವಿಸಿ ನೋಡಬಹುದು ಎಂದು ಅವರು ಹೇಳಿದ್ದಾರೆ. ಡಿಟೂರಿ ಅವರು ಈ ಹಿಂದೆಯೂ 2023ರಲ್ಲಿ ಸಮುದ್ರದಾಳದಲ್ಲಿ 74 ದಿನಗಳ ಕಾಲ ಕಳೆದಿದ್ದರು. ಇದೇ ಮೊದಲ ಬಾರಿಗೆ ಸಮುದ್ರದಾಳದಲ್ಲಿ 93 ದಿನಗಳನ್ನು ಕಳೆಯುವ ಮೂಲಕ ದಾಖಲೆ ಬರೆದಿದ್ದಾರೆ. ಈ ಹಿಂದೆಯೂ 100 ದಿನಗಳ ಕಾಲ ಸಮುದ್ರದಡಿಯಲ್ಲಿ 30 ಅಡಿ ಆಳದಲ್ಲಿ ಸ್ಟೀಲ್‌ ಹಾಗೂ ಗ್ಲಾಸ್‌ನಿಂದ ಮಾಡಿದ ಹೊಟೇಲ್‌ ಒಂದರಲ್ಲಿ ಇರುವ ಮೂಲಕವೂ ದಾಖಲೆ ಬರೆದಿದ್ದರು.

Continue Reading

ವಿದೇಶ

POK: ಪಿಒಕೆ ತನ್ನ ಭಾಗವಲ್ಲ ಎಂದು ಅಧಿಕೃತವಾಗಿಯೇ ಒಪ್ಪಿಕೊಂಡ ಪಾಕಿಸ್ತಾನ!

POK: ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ(POK) ತನ್ನ ಭಾಗವಲ್ಲ ಎಂದು ಪಾಕಿಸ್ತಾನ ಒಪ್ಪಿಕೊಂಡಿದೆ. ಪಿಒಕೆಯನ್ನು ಆಜಾದ್ ಕಾಶ್ಮೀರ ಅಥವಾ ಎಜೆಕೆ ಎಂದು ಉಲ್ಲೇಖಿಸಿರುವ ಪಾಕಿಸ್ತಾನ, ವಿವಾದಿತ ಭೂಮಿಗೆ ಸಂಬಂಧಿಸಿದಂತೆ ತನ್ನದೇ ಆದ ಸಂದಿಗ್ಧತೆ ಇದೆ ಎಂದು ಹೇಳಿದೆ. ಪಾಕ್ ಆಕ್ರಮಿತ ಕಾಶ್ಮೀರವು ವಿದೇಶಿ ಭೂ ಪ್ರದೇಶ ಎಂದು ಪಾಕಿಸ್ತಾನದ ಸರ್ಕಾರಿ ವಕೀಲರು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

VISTARANEWS.COM


on

POK
Koo

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ(POK) ತನ್ನ ಭಾಗವಲ್ಲ ಎಂದು ಪಾಕಿಸ್ತಾನ ಒಪ್ಪಿಕೊಂಡಿದೆ. ಪಿಒಕೆಯನ್ನು ಆಜಾದ್ ಕಾಶ್ಮೀರ ಅಥವಾ ಎಜೆಕೆ ಎಂದು ಉಲ್ಲೇಖಿಸಿರುವ ಪಾಕಿಸ್ತಾನ, ವಿವಾದಿತ ಭೂಮಿಗೆ ಸಂಬಂಧಿಸಿದಂತೆ ತನ್ನದೇ ಆದ ಸಂದಿಗ್ಧತೆ ಇದೆ ಎಂದು ಹೇಳಿದೆ. ಪಾಕ್ ಆಕ್ರಮಿತ ಕಾಶ್ಮೀರವು ವಿದೇಶಿ ಭೂ ಪ್ರದೇಶ ಎಂದು ಪಾಕಿಸ್ತಾನದ ಸರ್ಕಾರಿ ವಕೀಲರು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಪಿಒಕೆ ಭಾರತದ ಅವಿಭಾಜ್ಯ ಭೂ ಭಾಗ ಎನಿಸಿಕೊಂಡಿದೆ. ಆದರೆ ಪಾಕಿಸ್ತಾನ ಈ ಪ್ರದೇಶವನ್ನು ಅತಿಕ್ರಮಿಸಲು ಯತ್ನಿಸುತ್ತಿದ್ದು, ಅದನ್ನು ಆಜಾದ್ ಕಾಶ್ಮೀರ ಎಂದು ಹೇಳಿಕೊಂಡಿದೆ. ಇದೀಗ ಪಿಒಕೆ ವಿದೇಶಿ ಭೂ ಪ್ರದೇಶವಾಗಿದೆ ಮತ್ತು ಅದರ ಮೇಲೆ ಪಾಕಿಸ್ತಾನಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಪಾಕಿಸ್ತಾನ ಸರ್ಕಾರ ಇಸ್ಲಾಮಾಬಾದ್ ಹೈಕೋರ್ಟ್ ಮುಂದೆ ಒಪ್ಪಿಕೊಂಡಿದೆ.

ಪ್ರಕರಣದ ಹಿನ್ನೆಲೆ

ಸದ್ಯ ಕಾಶ್ಮೀರಿ ಕವಿ ಮತ್ತು ಪತ್ರಕರ್ತ ಅಹ್ಮದ್ ಫರ್ಹಾದ್ ಶಾ ಜೂನ್‌ 2ರ ತನಕ ಆಜಾದ್‌ ಕಾಶ್ಮೀರದಲ್ಲಿ ಬಂಧನದಲ್ಲಿದ್ದಾರೆ ಎಂದು ಫೆಡರಲ್‌ ಪ್ರಾಸಿಕ್ಯೂಟರ್‌ ಜನರಲ್‌ ಶುಕ್ರವಾರ ಇಸ್ಲಾಮಾಬಾದ್‌ ಹೈಕೋರ್ಟ್‌ಗೆ ಮಾಹಿತಿ ನೀಡಿದರು. ಈ ವೇಳೆ ಆಜಾದ್‌ ಕಾಶ್ಮೀರ ವಿದೇಶಿ ಪ್ರದೇಶವಾಗಿರುವುದರಿಂದ ಅಹ್ಮದ್ ಫರ್ಹಾದ್ ಶಾ ಅವರನ್ನು ಇಸ್ಲಾಮಾಬಾದ್‌ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಮೇ 15ರಂದು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ರಾವಲ್ಪಿಂಡಿಯಿಂದ ಅಹ್ಮದ್ ಫರ್ಹಾದ್ ಶಾ ಅವರನ್ನು ಅಪಹರಿಸಿತ್ತು. ಈ ಪ್ರಕರಣದ ವಿಚಾರಣೆಯನ್ನು ಇಸ್ಲಾಮಾಬಾದ್ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ವಕೀಲರ ವಾದವನ್ನು ಆಲಿಸಿದ ಇಸ್ಲಾಮಾಬಾದ್‌ ಹೈಕೋರ್ಟ್‌, ಆಜಾದ್‌ ಕಾಶ್ಮೀರವು ವಿದೇಶಿ ಭೂಪ್ರದೇಶವಾಗಿದ್ದರೆ ಮತ್ತು ಪಾಕಿಸ್ತಾನದ ಅವಿಭಾಜ್ಯ ಅಂಗವಲ್ಲದಿದ್ದರೆ, ಪಾಕಿಸ್ತಾನಿ ಮಿಲಿಟರಿ ಮತ್ತು ಪಾಕಿಸ್ತಾನಿ ರೇಂಜರ್‌ಗಳು ಪಾಕಿಸ್ತಾನದಿಂದ ಇಲ್ಲಿಗೆ ಹೇಗೆ ಪ್ರವೇಶಿಸಿದರು? ಎಂದು ಪ್ರಶ್ನಿಸಿತು. ವಿಚಾರಣೆಯ ವೇಳೆ ಕೋರ್ಟ್‌, ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಜನರನ್ನು ಬಲವಂತವಾಗಿ ಅಪಹರಿಸುವ ಅಭ್ಯಾಸವನ್ನು ಮುಂದುವರಿಸಿವೆ ಎಂದು ಚಾಟಿ ಬೀಸಿದೆ.

ಅಹ್ಮದ್ ಫರ್ಹಾದ್ ಶಾ ಅವರನ್ನು ಧೀರ್ಕೋಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ವಿಚಾರ ನ್ಯಾಯಾಲಯದ ವಾದದ ಸಮಯದಲ್ಲಿ ಬೆಳಕಿಗೆ ಬಂದಿತ್ತು. ಪಿಒಕೆಯಲ್ಲಿ ಅಹ್ಮದ್ ಫರ್ಹಾದ್ ಶಾ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ರಾವಲ್ಪಿಂಡಿಯಲ್ಲಿರುವ ತಮ್ಮ ನಿವಾಸದಿಂದ ಫರ್ಹಾದ್ ಶಾ ಅವರನ್ನು ಅಪಹರಿಸಿದ ಬಗ್ಗೆ ಅವರ ಪತ್ನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: Amit Shah: ಭಾರತದ ಜತೆ ಪಿಒಕೆ ವಿಲೀನ ಮಾಡುವುದೇ ನಮ್ಮ ಗುರಿ, ಬದ್ಧತೆ; ಅಮಿತ್‌ ಶಾ ಘೋಷಣೆ

Continue Reading
Advertisement
Rupert Murdoch
ವಿದೇಶ6 mins ago

Rupert Murdoch: ಮಾಧ್ಯಮ ಲೋಕದ ದೊರೆಗೆ ಐದನೇ ಮದುವೆ; 93ನೇ ವಯಸ್ಸಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ರೂಪರ್ಟ್ ಮುರ್ಡೋಕ್

pratap simha mlc election
ಕರ್ನಾಟಕ8 mins ago

MLC Election: “ಬುರ್ಖಾ ಸ್ಟೂಡೆಂಟ್‌ ಗೇಲಿ…” ರೊಚ್ಚಿಗೆದ್ದ ಪ್ರತಾಪ್‌ ಸಿಂಹರಿಂದ ರಘುಪತಿ ಭಟ್‌ ಪರ ಪೋಸ್ಟ್‌, ಡಿಲೀಟ್!

T20 World Cup 2024
ಕ್ರೀಡೆ17 mins ago

T20 World Cup 2024 : ಉಗ್ರರ ಬೆದರಿಕೆ ನಡುವೆಯೂ ನ್ಯೂಯಾರ್ಕ್​ನಲ್ಲಿ ಭಾರತ ತಂಡದ ಆಟಗಾರರ ಬಿಂದಾಸ್​ ತಿರುಗಾಟ!

Sanjeeda Shaikh Says a Woman Groped Her
ಬಾಲಿವುಡ್27 mins ago

Sanjeeda Shaikh: ಯುವತಿಯೊಬ್ಬಳು ನನ್ನ ಸ್ತನಗಳನ್ನು ಜೋರಾಗಿ ಮುಟ್ಟಿ ಓಡಿದಳು ಎಂದ ಖ್ಯಾತ ನಟಿ!

ದೇಶ36 mins ago

Lok Sabha Election 2024: ಬಿಜೆಪಿ ಫೈರ್‌ ಬ್ರ್ಯಾಂಡ್‌ಗಳ ಸೋಲು ಗೆಲುವಿನ ಲೆಕ್ಕಾಚಾರ ಹೇಗಿದೆ? ಎಕ್ಸಿಟ್‌ ಪೋಲ್‌ ಹೇಳೋದೇನು?

Dakshina Kannada Lok Sabha Constituency
ಪ್ರಮುಖ ಸುದ್ದಿ46 mins ago

Dakshina Kannada Lok Sabha Constituency : ದಕ್ಷಿಣ ಕನ್ನಡದಲ್ಲಿ ವಿಜಯ ಅಭಿಯಾನ ಮುಂದುವರಿಸಲು ಬಿಜೆಪಿ ಕಾತರ

2nd Puc Exam 3
ಶಿಕ್ಷಣ52 mins ago

2nd PUC Exam 3: ದ್ವಿತೀಯ ಪಿಯುಸಿ ಪರೀಕ್ಷೆ-3ರ ದಂಡಸಹಿತ ಶುಲ್ಕ ಪಾವತಿಗೆ ಇಂದೇ ಕೊನೇ ದಿನ

stock market news narendra modi
ಪ್ರಮುಖ ಸುದ್ದಿ1 hour ago

Stock Market News: ಮೋದಿ ಸರಕಾರ ಪುನರಾಗಮನಕ್ಕೆ ಷೇರು ಮಾರುಕಟ್ಟೆ ಹರ್ಷ, ಸೆನ್ಸೆಕ್ಸ್‌- ನಿಫ್ಟಿ ದಾಖಲೆ ಏರಿಕೆ

Shah Rukh Khan looks Like Johnny Depp
ಬಾಲಿವುಡ್1 hour ago

Shah Rukh Khan: ಖ್ಯಾತ ಹಾಲಿವುಡ್‌ ನಟನಂತೆ ಕಂಡ ಶಾರುಖ್ ಖಾನ್; ವಿಡಿಯೊ ವೈರಲ್‌!

1993 Mumbai Serial Blast
ದೇಶ1 hour ago

1993 Mumbai Serial Blast: ಜೈಲಿನಲ್ಲೇ ಹತ್ಯೆಯಾದ ಸರಣಿ ಬಾಂಬ್‌ ಬ್ಲಾಸ್ಟ್‌ ಅಪರಾಧಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌